Tag: Constables

  • ಹೈವೇಯಲ್ಲಿ ಹಾಕಿದ್ದ ಅಂಗಡಿ ತೆಗೆಯಿರಿ ಎಂದಿದ್ದಕ್ಕೆ ಕಾನ್‍ಸ್ಟೇಬಲ್‍ಗಳ ಮೇಲೆ ಹಲ್ಲೆ

    ಹೈವೇಯಲ್ಲಿ ಹಾಕಿದ್ದ ಅಂಗಡಿ ತೆಗೆಯಿರಿ ಎಂದಿದ್ದಕ್ಕೆ ಕಾನ್‍ಸ್ಟೇಬಲ್‍ಗಳ ಮೇಲೆ ಹಲ್ಲೆ

    ಹಾವೇರಿ: ಜನರ ಓಡಾಟಕ್ಕೆ ಅಡೆತಡೆ ಮಾಡದಂತೆ ಹೇಳಿದ್ದಕ್ಕೆ ಕರ್ತವ್ಯನಿರತ ಇಬ್ಬರು ಕಾನ್‍ಸ್ಟೇಬಲ್‍ಗಳ ಮೇಲೆ ಹಲ್ಲೆ ಮಾಡಿದ ಘಟನೆ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಂಕಾಪುರ ಟೋಲ್ ಗೇಟ್ ಬಳಿ ನಡೆದಿದೆ.

    ಬಂಕಾಪುರ ಪೊಲೀಸ್ ಠಾಣೆಯ ಗಂಗಾಧರ್ ಹರಿಜನ ಮತ್ತು ದುಂಡಪ್ಪ ಸಿಬ್ಬಂದಿ ಹಲ್ಲೆ ನಡೆದಿದೆ. ಗಂಭೀರವಾಗಿ ಗಾಯಗೊಂಡ ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ. ಹಲ್ಲೆ ಮಾಡಿದ ಆರೋಪಿಗಳನ್ನು ಹಾನಗಲ್ ತಾಲೂಕಿನ ಹರವಿ ಗ್ರಾಮದ ಅರ್ಜುನ್ ಮತ್ತು ಶಿವಕುಮಾರ್ ಎಂದು ಗುರುತಿಸಲಾಗಿದೆ.

    ಟೋಲ್ ಗೇಟ್ ಬಳಿ ಇರುವ ಚಹಾ ಅಂಗಡಿಯಲ್ಲಿ ಇಬ್ಬರು ಕೆಲಸ ಮಾಡುತ್ತಿದ್ದರು. ಅಂಗಡಿ ಮುಂದಿನ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇಟ್ಟಿಗೆ ಇಟ್ಟು ಹಗ್ಗ ಕಟ್ಟಿ ತಿಂಡಿ-ತಿನ್ನಿಸುಗಳ ಪ್ಯಾಕೇಟ್ ಹಾಕಿ ವಾಹನಗಳ ಓಡಾಟಕ್ಕೆ ತೊಂದರೆ ಮಾಡುತ್ತಿದ್ದರು.

    ರಸ್ತೆಯಲ್ಲಿ ಇಟ್ಟಿಗೆ ಇಟ್ಟು ಹಗ್ಗ ಕಟ್ಟಿದ್ದನ್ನು ತೆಗೆಯುವಂತೆ ಹೇಳಿದ್ದಕ್ಕೆ ಕಾನ್‍ಸ್ಟೇಬಲ್‍ಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಕಟ್ಟಿಗೆಯಿಂದ ಹೊಡೆದು ಆರೋಪಿಗಳು ಹಲ್ಲೆ ನಡೆಸಿದ್ದಾರೆ. ಈ ವೇಳೆ ಮತ್ತಿಬ್ಬರು ಪೊಲೀಸರು ಅಂಗಡಿ ಹತ್ತಿರ ಬರುವುದನ್ನು ನೊಡಿ ಆರೋಪಿಯೊಬ್ಬ ಓಡಿ ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

  • ಇಬ್ಬರು ಮಹಿಳಾ ಪೇದೆಯನ್ನು ಅಮಾನತುಗೊಳಿಸಿದ್ದ ಎಸಿಪಿ ಟಿಕ್‍ಟಾಕ್ ವಿಡಿಯೋ ವೈರಲ್

    ಇಬ್ಬರು ಮಹಿಳಾ ಪೇದೆಯನ್ನು ಅಮಾನತುಗೊಳಿಸಿದ್ದ ಎಸಿಪಿ ಟಿಕ್‍ಟಾಕ್ ವಿಡಿಯೋ ವೈರಲ್

    ಗಾಂಧಿನಗರ: ಟಿಕ್‍ಟಾಕ್ ವಿಡಿಯೋ ಮಾಡಿದ್ದಕ್ಕೆ ಇಬ್ಬರು ಮಹಿಳಾ ಪೇದೆಯನ್ನು ಅಮಾನತುಗೊಳಿಸಿದ್ದ ಗುಜರಾತ್ ಎಸಿಪಿ ಈಗ ಖುದ್ದು ಟಿಕ್‍ಟಾಕ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದು, ಈ ಬಗ್ಗೆ ಎಸಿಪಿ ಮಂಜಿತ ವಂಜಾರ ಸ್ಪಷ್ಟನೆ ನೀಡಿದ್ದಾರೆ.

    ಕೆಲವು ದಿನಗಳ ಹಿಂದೆ ಪೊಲೀಸ್ ಠಾಣೆಯಲ್ಲಿ ಇಬ್ಬರು ಮಹಿಳಾ ಪೇದೆ ಟಿಕ್‍ಟಾಕ್ ವಿಡಿಯೋ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಇದು ವಿವಾದ ಆಗುತ್ತಿದ್ದಂತೆ ಎಸಿಪಿ ಮಂಜಿತ ವಂಜಾರ ಅವರನ್ನು ಸಸ್ಪೆಂಡ್ ಮಾಡಿದ್ದರು. ಈಗ ಎಸಿಪಿ ಮಂಜಿತ ವಂಜಾರ ಅವರ ಟಿಕ್‍ಟಾಕ್ ವಿಡಿಯೋ ವೈರಲ್ ಆಗುತ್ತಿದೆ.

    ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಈ ವಿಡಿಯೋ ನನ್ನ ಸ್ನೇಹಿತರ ಖಾತೆಯಿಂದ ಒಂದು ವರ್ಷದ ಹಿಂದೆ ಅಪ್ಲೋಡ್ ಆಗಿದೆ. ಇಬ್ಬರು ಮಹಿಳಾ ಪೇದೆ ಪೊಲೀಸ್ ಠಾಣೆಯೊಳಗೆ ಟಿಕ್‍ಟಾಕ್ ವಿಡಿಯೋ ಮಾಡಿದ್ದರು. ಅಲ್ಲದೆ ಆ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಅಲ್ಲದೆ ಟಿಕ್‍ಟಾಕ್ ವಿಡಿಯೋ ಮಾಡಿದ್ದಕ್ಕೆ ಇಬ್ಬರನ್ನು ಅಮಾನತುಗೊಳಿಸಿಲ್ಲ. ಬದಲಾಗಿ ಕೆಲಸದ ಸಮಯದಲ್ಲಿ ಅವರು ಯೂನಿಫಾರಂ ಧರಿಸದ್ದಕ್ಕೆ ಅವರನ್ನು ಸಸ್ಪೆಂಡ್ ಮಾಡಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

    ವಿಡಿಯೋ ವೈರಲ್ ಆಗಿದ್ದಕ್ಕೆ ಎಸಿಪಿ ಮಂಜಿತ ವಂಜಾರ ಅವರು, ನಾನು ಒಬ್ಬ ಯುವ ಮಹಿಳಾ ಪೊಲೀಸ್ ಅಧಿಕಾರಿಯಾಗಿ ನನಗೆ ಸಾಮಾಜಿಕ ಜಾಲತಾಣ ಉಪಯೋಗಿಸಲು ನನಗೆ ಹಕ್ಕಿದೆ. ಅಲ್ಲದೆ ನಾನು ಫೇಸ್‍ಬುಕ್, ಟ್ವಿಟ್ಟರ್, ಇನ್‍ಸ್ಟಾಗ್ರಾಂ, ಸ್ನ್ಯಾಪ್‍ಚಾಟ್ ಹಾಗೂ ಟಿಕ್‍ಟಾಕ್ ಬಳಸುತ್ತೇನೆ. ಸಾಮಾಜಿಕ ಜಾಲತಾಣದಿಂದ ನನಗೆ ಅಪರಾಧಗಳನ್ನು ಕಂಡು ಹಿಡಿಯಲು ಸಹಾಯವಾಗುತ್ತದೆ ಎಂದು ಪ್ರತಿಕ್ರಿಯಿಸಿದರು.

  • ಕುಡಿದ ಮತ್ತಿನಲ್ಲಿ ನಡುರಸ್ತೆಯಲ್ಲೇ ಕಿತ್ತಾಡಿಕೊಂಡ ಪೊಲೀಸ್ ಪೇದೆಗಳು

    ಕುಡಿದ ಮತ್ತಿನಲ್ಲಿ ನಡುರಸ್ತೆಯಲ್ಲೇ ಕಿತ್ತಾಡಿಕೊಂಡ ಪೊಲೀಸ್ ಪೇದೆಗಳು

    ಗದಗ: ಕುಡಿದ ಮತ್ತಿನಲ್ಲಿ ಪೊಲೀಸ್ ಪೇದೆಗಳು ನಡುರಸ್ತೆಯಲ್ಲೇ ಕಿತ್ತಾಡಿಕೊಂಡ ಘಟನೆ ನಗರದ ಬೆಟಗೇರಿ ಬಳಿಯ ಸಹಸ್ರಾರ್ಜುನ ವೃತ್ತದ ಬಳಿ ನಡೆದಿದೆ.

    ನಗರದ ಸಹಸ್ರಾರ್ಜುನ ವೃತ್ತದ ಬಳಿ ಇಬ್ಬರು ಪೊಲೀಸ್ ಪೇದೆಗಳು ಕುಡಿದ ಮತ್ತಿನಲ್ಲೇ ಕಿತ್ತಾಡಿಕೊಂಡು ಸಾರ್ವಜನಿಕರಿಗೆ ಉಚಿತ ಮನರಂಜನೆ ನೀಡಿದ್ದಾರೆ. ಮಹಿಳಾ ಠಾಣೆಯ ಪೇದೆ ಶರಣಪ್ಪ ಬಸಾಪುರ ಹಾಗೂ ಗ್ರಾಮೀಣ ಠಾಣೆಯ ಪೇದೆ ಮಂಜುನಾಥ ಬಾರಕೇರ್ ಕಿತ್ತಾಡಿಕೊಂಡ ಪೊಲೀಸ್ ಪೇದೆಗಳಾಗಿದ್ದಾರೆ.

    ಪೇದೆಗಳು ಕುಡಿದ ಮತ್ತಿನಲ್ಲಿ ನಡುರಸ್ತೆಯಲ್ಲೇ ಕಿತ್ತಾಡಿಕೊಂಡಿರುವುದನ್ನು ಸ್ಥಳೀಯರು ವಿಡಿಯೋ ಮಾಡಿದ್ದಾರೆ. ಬಳಿದ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರಿಂದ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಜಾಲತಾಣಿಗರು ಹಾಗೂ ಸಾರ್ವಜನಿಕರು ಪೇದೆಗಳ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

    ವಿಡಿಯೋ ವೈರಲ್ ಆದ ಬೆನ್ನಲ್ಲೇ ಕೂಡಲೇ ಎಚ್ಚೆತ್ತ ಜಿಲ್ಲಾವರಿಷ್ಠಾಧಿಕಾರಿ ಸಂತೋಷ ಬಾಬುರವರು, ಪೊಲೀಸ್ ಪೇದೆಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews