Tag: Conservative Party

  • UK Elections 2024: ಕ್ಷಮೆ ಕೇಳಿ ಸೋಲಿನ ಹೊಣೆ ಹೊತ್ತುಕೊಂಡ ರಿಷಿ ಸುನಾಕ್‌

    UK Elections 2024: ಕ್ಷಮೆ ಕೇಳಿ ಸೋಲಿನ ಹೊಣೆ ಹೊತ್ತುಕೊಂಡ ರಿಷಿ ಸುನಾಕ್‌

    ಲಂಡನ್‌: ಬ್ರಿಟನ್‌ ಸಂಸತ್‌ ಚುನಾವಣೆಯಲ್ಲಿ (UK Elections 2024) ಕನ್ಸರ್ವೇಟಿವ್‌ ಪಕ್ಷಕ್ಕೆ (Conservative Party) ಹೀನಾಯ ಸೋಲಾದ ಬೆನ್ನಲ್ಲೇ ಪ್ರಧಾನಿ ರಿಷಿ ಸುನಾಕ್‌ (Rishi Sunak) ಕ್ಷಮೆ ಕೇಳಿದ್ದಾರೆ.

    ಸಾರ್ವತ್ರಿಕ ಚುನಾವಣೆಯಲ್ಲಿ ಕೀರ್ ಸ್ಟಾರ್ಮರ್ (Keir Starmer) ನೇತೃತ್ವದ ಲೇಬರ್ ಪಕ್ಷವು (Labour Party) ಒಟ್ಟು 650 ಸ್ಥಾನಗಳಲ್ಲಿ 400 ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದ ನಂತರ ಕ್ಷಮೆಯಾಚಿಸಿದ ರಿಷಿ ಸುನಕ್ ಸೋಲನ್ನು ಒಪ್ಪಿಕೊಂಡರು. ಪಕ್ಷದ ಸೋಲಿಗೆ ಕ್ಷಮೆ ಕೇಳಿದ ಅವರು ಈ ಸೋಲಿನ ಸಂಪೂರ್ಣ ಹೊಣೆಯನ್ನು ನಾನು ಹೊತ್ತುಕೊಳ್ಳುತ್ತೇನೆ ಎಂದು ಹೇಳಿದರು.

    ಲೇಬರ್ ಪಕ್ಷವು ಈ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದಿದೆ ಮತ್ತು ಅವರ ವಿಜಯಕ್ಕಾಗಿ ಅಭಿನಂದಿಸಲು ನಾನು ಸರ್ ಕೀರ್ ಸ್ಟಾರ್ಮರ್ ಅವರನ್ನು ಕರೆದಿದ್ದೇನೆ ಎಂದರು. ಕನ್ಸರ್ವೇಟಿವ್‌ ಪಕ್ಷ ಸೋತರೂ ರಿಚ್ಮಂಡ್ ನಾರ್ತಲರ್ಟನ್ (Richmond Northallerton) ಕ್ಷೇತ್ರದಿಂದ ರಿಷಿ ಸುನಕ್‌ ಮತ್ತೊಮ್ಮೆ ಆಯ್ಕೆಯಾಗಿದ್ದಾರೆ. ಇದನ್ನೂ ಓದಿ: ಸಿಎಂ ಸರ್ಕಾರಕ್ಕೆ ಸೈಟ್ ವಾಪಸ್ ಕೊಡದಿದ್ದರೆ‌ ಭ್ರಷ್ಟಾಚಾರ ಚಿರಸ್ಥಾಯಿಯಾಗಿ ಉಳಿಯುತ್ತೆ: ಹೆಚ್. ವಿಶ್ವನಾಥ್

    ಲೇಬರ್‌ ಪಾರ್ಟಿ ಗೆದ್ದ ಬಳಿಕ ಭಾಷಣ ಮಾಡಿದ ಪ್ರಧಾನಿ ಅಭ್ಯರ್ಥಿ ಕೀರ್ ಸ್ಟಾರ್ಮರ್, ಅವ್ಯವಸ್ಥೆಯನ್ನು ಕೊನೆಗೊಳಿಸುತ್ತೇವೆ ಎಂದು ನಾವು ಭರವಸೆ ನೀಡಿದ್ದೇವೆ ಮತ್ತು ಅದನ್ನೇ ನಾವು ಮಾಡುತ್ತೇವೆ. ಇನ್ನು ಮುಂದೆ ಬದಲಾವಣೆ ಪ್ರಾರಂಭವಾಗಲಿದೆ. ನಮ್ಮ ದೇಶವನ್ನು ಮತ್ತೆ ನಿರ್ಮಾಣ ಮಾಡುತ್ತೇವೆ ಎಂದು ಹೇಳಿದರು.


    ಸಂಸತ್ತಿನ 650 ಸ್ಥಾನಗಳಿಗೆ ಗುರುವಾರ ಮತಪತ್ರಗಳ ಮೂಲಕ ಚುನಾವಣೆ ನಡೆದಿದ್ದು ಇಂದು ಮತ ಎಣಿಕೆ ನಡೆಯುತ್ತಿದೆ. ಚುನಾವಣಾ ಸಮೀಕ್ಷೆಗಳು 13 ವರ್ಷಗಳಿಂದ ಅಧಿಕಾರದಲ್ಲಿರುವ ಕನ್ಸರ್ವೇಟಿವ್‌ ಪಕ್ಷಕ್ಕೆ ಹೀನಾಯ ಸೋಲಾಗಬಹುದು ಎಂದು ಭವಿಷ್ಯ ನುಡಿದಿದ್ದವು.

    650 ಸದಸ್ಯರ ಹೌಸ್ ಆಫ್ ಕಾಮನ್ಸ್‌ನಲ್ಲಿ ಬಹುಮತಕ್ಕೆ 326 ಸ್ಥಾನಗಳನ್ನು ಗೆಲ್ಲುವ ಅಗತ್ಯವಿದೆ. ಚುನಾವಣೋತ್ತರ ಸಮೀಕ್ಷೆಗಳು ಲೇಬರ್‌ ಪಕ್ಷ 410 ಸ್ಥಾನಗಳನ್ನು ಗೆಲ್ಲಬಹುದು ಎಂದು ಭವಿಷ್ಯ ನುಡಿದಿದ್ದವು. ಇನ್ನೂ ಆರು ತಿಂಗಳು ಅಧಿಕಾರವಧಿ ಇದ್ದರೂ ಅವಧಿಪೂರ್ವ ಚುನಾವಣೆಗೆ ಹೋಗುವ ಮೂಲಕ ರಿಷಿ ಸುನಕ್ ಅಚ್ಚರಿ ನಿರ್ಧಾರ ಕೈಗೊಂಡಿದ್ದರು.

     

  • ಸಂಬಂಧವನ್ನು ಮರುಸ್ಥಾಪಿಸುತ್ತೇವೆ – NRIಗಳಿಗೆ ಕೆನಡಾ ವಿರೋಧ ಪಕ್ಷ ಭರವಸೆ

    ಸಂಬಂಧವನ್ನು ಮರುಸ್ಥಾಪಿಸುತ್ತೇವೆ – NRIಗಳಿಗೆ ಕೆನಡಾ ವಿರೋಧ ಪಕ್ಷ ಭರವಸೆ

    ಒಟ್ಟಾವಾ: ನಾನು ಕೆನಡಾದ (Canada) ಮುಂದಿನ ಪ್ರಧಾನಿಯಾದ್ರೆ, ಭಾರತದ ಜೊತೆಗಿನ ವೃತ್ತಿಪರ ಸಂಬಂಧವನ್ನು (Professional Relationship) ಸ್ಥಾಪಿಸುವುದಾಗಿ ಕೆನಡಾದ ವಿರೋಧ ಪಕ್ಷದ ನಾಯಕ ಪಿಯರೆ ಪೊಯ್ಲಿವ್ರೆ (Pierre Poilievre) ಅವರು ಕೆನಡಾದಲ್ಲಿರುವ ಭಾರತೀಯ ಸಮುದಾಯಕ್ಕೆ ಭರವಸೆ ನೀಡಿದ್ದಾರೆ.

    ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ (Hardeep Singh Nijjar) ಹತ್ಯೆ ವಿಚಾರದಲ್ಲಿ ಉಭಯ ದೇಶಗಳ ನಡುವೆ ರಾಜತಾಂತಿಕ ಬಿಕ್ಕಟ್ಟು ಮತ್ತಷ್ಟು ತೀವ್ರಗೊಳ್ಳುತ್ತಿದೆ. ಭಾರತದಿಂದ ತನ್ನ 41 ರಾಜತಾಂತ್ರಿಕರನ್ನು ಹಿಂದಕ್ಕೆ ಕರೆಸಿಕೊಂಡಿರುವ ಕೆನಡಾ, ಅದರ ಬೆನ್ನಲ್ಲೇ ಭಾರತಕ್ಕೆ ಪ್ರಯಾಣಿಸುವ ತನ್ನ ಪ್ರಜೆಗಳಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದೆ. ಭಾರತದಲ್ಲಿನ ತನ್ನ ಬಹುತೇಕ ಎಂಬೆಸ್ಸಿ ಹಾಗೂ ಕಾನ್ಸುಲೇಟ್‌ಗಳನ್ನು ಮುಚ್ಚಿರುವ ಕೆನಡಾ, ಅಧಿಕ ಮಟ್ಟದಲ್ಲಿ ಜಾಗರೂಕತೆ ವಹಿಸುವಂತೆ ತನ್ನ ನಾಗರಿಕರಿಗೆ ಸಲಹೆ ಕೊಟ್ಟಿದೆ.

    ಈ ಹಿನ್ನೆಲೆಯಲ್ಲಿ ಕನ್ಸರ್ವೇಟಿವ್ ಪಕ್ಷದ ನಾಯಕ ಪೊಯ್ಲಿವ್ರೆ, ಕೆನಡಾದಲ್ಲಿ ನೆಲೆಸಿರುವ ಭಾರತೀಯ ರಾಜತಾಂತ್ರಿಕರಿಗೆ ತೋರುತ್ತಿರುವ ಆಕ್ರಮಣಶೀಲತೆಯ ನಡೆಯನ್ನ ಖಂಡಿಸಿದ್ದಾರೆ. ಇದನ್ನೂ ಓದಿ: ನಿಜ್ಜರ್‌ನಿಂದ ಕೆನಡಾದಲ್ಲಿ ಶಸ್ತ್ರಾಸ್ತ್ರ ತರಬೇತಿ, ಭಾರತದಲ್ಲಿ ದಾಳಿಗೆ ಧನ ಸಹಾಯ: ಗುಪ್ತಚರ ದಾಖಲೆ

    ಈ ಕುರಿತು ರೇಡಿಯೋ ಸಂದರ್ಶನವೊಂದರಲ್ಲಿ ಮಾತನಾಡಿದ ಪೊಯ್ಲಿವ್ರೆ, ಕೆನಡಾದ ಮುಂದಿನ ಪ್ರಧಾನಿಯಾದ್ರೆ, ಭಾರತದ ಜೊತೆಗಿನ ವೃತ್ತಿಪರ ಹಾಗೂ ರಾಜತಾಂತ್ರಿಕ ಸಂಬಂಧವನ್ನು ಮರುಸ್ಥಾಪಿಸುತ್ತೇನೆ. ನಮಗೆ ಭಾರತ ಸರ್ಕಾರದ ಜೊತೆಗಿನ ವೃತ್ತಿಪರ ಸಂಬಂಧದ ಅಗತ್ಯವಿದೆ. ಏಕೆಂದರೆ ವಿಶ್ವದಲ್ಲೇ ಅತಿದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ದೇಶ ಭಾರತವಾಗಿದೆ. ಇದು ನಮ್ಮ ಅಭಿಪ್ರಾಯ-ಭಿನ್ನಾಭಿಪ್ರಾಯಗಳನ್ನ ಹೊಂದಲು ಸಹಕಾರಿಯಾಗಿದೆ. ಆದ್ರೆ ನಾವು ವೃತ್ತಿಪರ ಸಂಬಂಧವನ್ನು ಹೊಂದಿರಲೇಬೇಕು. ನಾನು ಪ್ರಧಾನಿಯಾದ್ರೆ ಖಂಡಿತವಾಗಿಯೂ ಅದನ್ನು ಪುನರ್‌ಸ್ಥಾಪಿಸುತ್ತೇನೆ ಎಂದು ಹೇಳಿದ್ದಾರೆ.

    ಇನ್ನೂ ಭಾರತದಿಂದ ಕೆನಡಾದ 41 ರಾಜತಾಂತ್ರಿಕರನ್ನು ಹಿಂದಕ್ಕೆ ಕರೆಸಿಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿ, ಪ್ರಶಾನಿ ಜಸ್ಟಿನ್ ಟ್ರುಡೊ ಕೆನಡಿಯರೇ ಪರಸ್ಪರ ವಿರುದ್ಧ ತಿರುಗಿಬೀಳುವಂತೆ ಮಾಡುತ್ತಿದ್ದಾರೆ. ಅಸಮರ್ಥರಾಗಿದ್ದು, ವಿದೇಶದಲ್ಲಿಯೂ ನಮ್ಮ ಸಂಬಂಧಗಳ ಬಗ್ಗೆ ಭಿನ್ನಾಭಿಪ್ರಾಯ ಉಂಟಾಗುವಂತೆ ಮಾಡಿದ್ದಾರೆ. ಇದನ್ನೂ ಓದಿ: ಯಾವುದೇ ಕಾರಣಕ್ಕೂ ಭಾರತವನ್ನ ಪ್ರಚೋದಿಸುವುದಿಲ್ಲ; ತಣ್ಣಗಾದ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ

    ಜೊತೆಗೆ ನಿನ್ನೆಯಷ್ಟೇ ಒಟ್ಟಾವಾ, ಟೊರೆಂಟೊ ಮತ್ತು ವ್ಯಾಂಕೋವರ್‌ನಲ್ಲಿ, ಭಾರತದ ಚಾರಿಟಿಗಳಿಗೆ ವಿರುದ್ಧವಾಗಿ ನಡೆಸಿದ ಖಲಿಸ್ತಾನ್‌ ರ‍್ಯಾಲಿಯನ್ನ ಖಂಡಿಸಿದ್ದಾರೆ. ಬ್ರಿಟಿಷ್ ಕೊಲಂಬಿಯಾದ ಅಬಾಟ್ಸ್‌ ಫೋರ್ಡ್ ಪಟ್ಟಣದಲ್ಲಿರುವ ವೈಷ್ಣೋದೇವಿ ಹಿಂದೂ ದೇವಾಲಯದ ವೇಲೆ ಹಿಂದೂ ಹಾಗೂ ಭಾರತ ವಿರೋಧಿ ಪೋಸ್ಟರ್‌ಗಳಿಂದ ಅಪವಿತ್ರಗೊಳಿಸಿರುವುದಕ್ಕೂ ವಿರೋಧ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅ. 10ರೊಳಗೆ 40 ರಾಜತಾಂತ್ರಿಕರನ್ನು ವಾಪಸ್ ಕರೆಸಿಕೊಳ್ಳಿ- ಕೆನಡಾಗೆ ಭಾರತ ಗಡುವು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿಶ್ವಾಸ ಮತದಲ್ಲಿ ಭರ್ಜರಿ ಗೆಲುವು ಸಾಧಿಸಿದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್

    ವಿಶ್ವಾಸ ಮತದಲ್ಲಿ ಭರ್ಜರಿ ಗೆಲುವು ಸಾಧಿಸಿದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್

    ಲಂಡನ್: ಬ್ರಿಟನ್ ಸಂಸತ್‍ನಲ್ಲಿ ಸೋಮವಾರ ಸಂಜೆ ನಡೆದ ಗೌಪ್ಯ ಮತದಾನದಲ್ಲಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ವಿಶ್ವಾಸ ಮತ ಗೆಲ್ಲುವ ಮೂಲಕ ತಮ್ಮ ಅಧಿಕಾರವನ್ನು ಉಳಿಸಿಕೊಂಡಿದ್ದಾರೆ.

    ಸಂಸತ್‍ನಲ್ಲಿ ನಡೆದ ರಹಸ್ಯ ಮತದಾನದಲ್ಲಿ ಬೋರಿಸ್ ಜಾನ್ಸನ್ ಅವರ ಪರ 211 ಮತಗಳು ಚಲಾವಣೆಯಾದರೆ, ವಿರುದ್ಧ 148 ಮತಗಳನ್ನು ಅವರದ್ದೇ ಪಕ್ಷದ (ಕನ್ಸರ್‌ವೇಟಿವ್) ಸಂಸದರು ಹಾಕಿದ್ದಾರೆ. ಇದನ್ನೂ ಓದಿ:  ಭ್ರಷ್ಟಾಚಾರ ಆರೋಪ – ಕಾಂಗ್ರೆಸ್ ನಾಯಕ ಸಾಧು ಸಿಂಗ್ ಧರಂಸೋತ್ ಬಂಧನ

    ಅವಿಶ್ವಾಸ ಮತದಾನ ಪ್ರಕ್ರಿಯೆಲ್ಲಿ ಬೋರಿಸ್ ಜಾನ್ಸನ್ ಅವರು ಗೆಲುವು ಸಾಧಿಸುವ ಮೂಲಕ ಒಂದು ವರ್ಷದ ಮಟ್ಟಿಗೆ ತಮ್ಮ ಪಟ್ಟವನ್ನು ಭದ್ರಪಡಿಸಿಕೊಂಡಿದ್ದು, ಹೀಗಿದ್ದರೂ ಪ್ರಧಾನಿ ಪಟ್ಟ ಉಳಿಸಲು ಇನ್ನೂ ತೂಗುಗತ್ತಿಯಲ್ಲಿ ನಡೆಯಬೇಕಾಗಬಹುದು, ಯಾವ ಕ್ಷಣದಲ್ಲಿ ಬೇಕಾದರೂ ತಮ್ಮ ವಿರುದ್ಧ ಅಸಮಾಧಾನ ಭುಗಿಲೇಳುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.

    ಕೋವಿಡ್ ಸಾಂಕ್ರಾಮಿಕ ಲಾಕ್‍ಡೌನ್ ಇದ್ದರೂ ಬೋರಿಸ್ ಜಾನ್ಸನ್ ಮಾತ್ರ ಡೌನಿಂಗ್ ಸ್ಟ್ರೀಟ್‍ನಲ್ಲಿ ಪಾರ್ಟಿ ಮಾಡುವ ಮೂಲಕ ವಿವಾದಕ್ಕೆ ಕಾರಣವಾಗಿದ್ದರು. ಔತಣಕೂಟದಲ್ಲಿ ಮದ್ಯ ಸೇವಿಸುತ್ತಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ವಿಚಾರವಾಗಿ ಸ್ವಪಕ್ಷದ ಸದಸ್ಯರೇ ಬೋರಿಸ್ ಜಾನ್ಸನ್ ವಿರುದ್ಧ ವಿರೋಧ ವ್ಯಕ್ತಪಡಿಸಿ ರಾಜೀನಾಮೆಗೆ ಆಗ್ರಹಿಸಿದ್ದರು. ವಿವಾದದ ಕುರಿತು ತಾನು ಎರಡೆರಡು ಬಾರಿ ಕ್ಷಮೆಯಾಚಿಸಿದ್ದರೂ ವಿವಾದ ಕಾವು ಹಾಗೇ ಇತ್ತು. ಇದನ್ನೂ ಓದಿ:  ಕಾಂಗ್ರೆಸ್‍ನಲ್ಲಿ ನಲಪಾಡ್ ರೌಡಿಸಂ ಆರೋಪ – ಡಿಕೆಶಿಗೆ ದೂರು

    ಸದ್ಯ ಮತ್ತೊಮ್ಮೆ ಪ್ರಧಾನಿಯಾಗಿ ಅಧಿಕಾರ ಏರುತ್ತಿರುವ ಬೋರಿಸ್ ಜಾನ್ಸನ್, ಈ ಫಲಿತಾಂಶವನ್ನು ಗುಡ್ ನ್ಯೂಸ್ ಮತ್ತು ನಿರ್ಣಾಯಕ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಒಗ್ಗಟ್ಟಿನಿಂದ ಮುನ್ನಡೆಯಲು ಫಲಿತಾಂಶ ಅವಕಾಶ ಕಲ್ಪಿಸಿದೆ  ಎಂದು ಸಂತಸ ವ್ಯಕ್ತಪಡಿಸಿದ್ದಾರೆ.