Tag: congrss

  • ವಿದೇಶಾಂಗ ಸಚಿವ ಜೈಶಂಕರ್ ಪುತ್ರನಿಗೆ ಚೀನಾ ಫಂಡಿಂಗ್ ಲಿಂಕ್ – ಕಾಂಗ್ರೆಸ್ ಗಂಭೀರ ಆರೋಪ

    ವಿದೇಶಾಂಗ ಸಚಿವ ಜೈಶಂಕರ್ ಪುತ್ರನಿಗೆ ಚೀನಾ ಫಂಡಿಂಗ್ ಲಿಂಕ್ – ಕಾಂಗ್ರೆಸ್ ಗಂಭೀರ ಆರೋಪ

    ನವದೆಹಲಿ: ದಿ. ರಾಜೀವ್ ಗಾಂಧಿ ಫೌಂಡೇಶನ್ (RGF) ಚೀನಾದಿಂದ ಹಣ ಪಡೆದಿದೆ ಎಂಬ ಬಿಜೆಪಿ (BJP) ಆರೋಪಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್ (Congress), ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ (S Jaishankar) ಅವರ ಪುತ್ರನಿಗೆ ಚೀನಾ ಫಂಡಿಂಗ್ (China Fund) ಲಿಂಕ್ ಇರುವುದಾಗಿ ಆರೋಪಿಸಿದೆ.

    ಇಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಕಾಂಗ್ರೆಸ್ ನಾಯಕ ಪವನ್ ಖೇರಾ (Pawan Khera), ಆರ್‌ಜಿಎಫ್ ಚೀನಾದಿಂದ ಹಣವನ್ನು ತೆಗೆದುಕೊಳ್ಳುವ ಮಾಹಿತಿಯು ಸಾರ್ವಜನಿಕ ಡೊಮೇನ್‌ಲ್ಲಿ ಲಭ್ಯವಿದೆ. ಅಲ್ಲದೇ ವಿವಿಧ ಸಂಸ್ಥೆಗಳಿಂದಲೂ ಅನುದಾನ ಪಡೆಯುತ್ತಿದೆ. ಎಸ್.ಜೈಶಂಕರ್ ಅವರ ಪುತ್ರ ಕೆಲಸ ಮಾಡುತ್ತಿರುವ ಸಂಸ್ಥೆಗೆ ಚೀನಾ ರಾಯಭಾರ ಕಚೇರಿಯಿಂದ ಮೂರು ಬಾರಿ ಅನುದಾನ ಬಂದಿದೆ ಎಂದು ದೂರಿದ್ದಾರೆ. ಇದನ್ನೂ ಓದಿ: PM ಕೇರ್ ನಿಧಿಗೆ ಕೊಡುಗೆ ನೀಡಲು ಚೀನಾ ಕಂಪನಿಗಳಿಗೆ ಅನುಮತಿಸಿದ್ದೇಕೆ?- ಕಾಂಗ್ರೆಸ್

    ಅಲ್ಲಿ ಅನುದಾನ ಹೇಗೆ ಏರಿಕೆ ಆಯ್ತು ಅನ್ನೋ ಬಗ್ಗೆ ನಾವು ಯಾವುದೇ ಆರೋಪಗಳನ್ನು ಮಾಡಲಿಲ್ಲ. ಆದ್ರೆ ರಾಜೀವ್ ಗಾಂಧಿ ಫೌಂಡೇಶನ್ (ಆರ್‌ಜಿಎಫ್) ಚೀನಾ ರಾಯಭಾರ ಕಚೇರಿಯಿಂದ 1.35 ಕೋಟಿ ರೂ. ಪಡೆದಿದ್ದರಿಂದ ವಿದೇಶಿ ಕೊಡುಗೆ (ನಿಯಂತ್ರಣ) ಕಾಯ್ದೆ (FCRA) ನೋಂದಣಿಯನ್ನು ರದ್ದುಗೊಳಿಸಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೋದಿ ಸರ್ಕಾರದಲ್ಲಿ ಚೀನಾ ವಿರುದ್ಧ ಮಾತನಾಡಲು ಅವಕಾಶವೇ ಇಲ್ಲ – ಖರ್ಗೆ ಕಿಡಿ

    ಇದೇ ವೇಳೆ ನರೇಂದ್ರ ಮೋದಿ ಅವರ ವಿರುದ್ಧ ಕಿಡಿಕಾರಿದ ಖೇರಾ, ಗಡಿಯಲ್ಲಿನ ಚಟುವಟಿಕೆಗಳ ಬಗ್ಗೆ ಚೀನಾಕ್ಕೆ ಕ್ಲೀನ್ ಚಿಟ್ ನೀಡುವ ಮೂಲಕ ನಮ್ಮ ಸೈನಿಕರ ತ್ಯಾಗವನ್ನು ಏಕೆ ನಿರಾಕರಿಸುತ್ತಿದ್ದಾರೆ? ಎಂಬುದೇ ತಿಳಿಯುತ್ತಿಲ್ಲ. ಮೋದಿಗೆ ಚೀನಾ ಅಂದ್ರೆ ಏಕೆ ಭಯ? ಚೀನಾದ ಮುಂದೆ ಏಕೆ ಬಾಯಿ ತೆರೆಯುತ್ತಿಲ್ಲ? ಏಕೆ ಚೀನಾಕ್ಕೆ ಕ್ಲೀನ್ ಚಿಟ್ ನೀಡಿ ನಮ್ಮ ಸೈನಿಕರ ತ್ಯಾಗವನ್ನು ನಿರಾಕರಿಸುತ್ತಿದ್ದಾರೆ? ಸೈನಿಕರನ್ನೇಕೆ ಅವಮಾನಿಸುತ್ತಿದ್ದಾರೆ ಎಂದು ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅನ್ಯಾಯ ಮಾಡುವುದರಲ್ಲಿ ಬಿಜೆಪಿಯವ್ರು ನಿಸ್ಸೀಮರು : ಪಕ್ಷ ಬಿಡ್ತೇನೆ ಎಂದ ಸಂದೇಶ್ ನಾಗರಾಜ್

    ಅನ್ಯಾಯ ಮಾಡುವುದರಲ್ಲಿ ಬಿಜೆಪಿಯವ್ರು ನಿಸ್ಸೀಮರು : ಪಕ್ಷ ಬಿಡ್ತೇನೆ ಎಂದ ಸಂದೇಶ್ ನಾಗರಾಜ್

    ಮೈಸೂರು: ಬಿಜೆಪಿಯಲ್ಲಿ ಸಕ್ರಿಯನಾಗಿಲ್ಲ. ಅಕ್ರಮವಾಗಿದ್ದೇನೆ. ಬಿಜೆಪಿ (BJP) ಅವರು ನನ್ನನ್ನು ಪಕ್ಷಕ್ಕೆ ಸೇರಿಸಿಕೊಂಡು ಅನ್ಯಾಯ ಮಾಡಿದರು ಎಂದು ಸ್ವಪಕ್ಷದ ವಿರುದ್ಧವೇ ಮಾಜಿ ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ (Sandesh Nagaraj) ಕಿಡಿಕಾರಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಪಕ್ಷದ ವಿರುದ್ಧವೇ ಕಿಡಿಕಾರಿದರು. ಅನ್ಯಾಯ ಮಾಡುವುದರಲ್ಲಿ ಬಿಜೆಪಿ ಅವರು ನಿಸ್ಸೀಮರು. ಬಿಜೆಪಿಯವರು ಹೆಚ್. ವಿಶ್ವನಾಥ್‌ಗೆ ಅನ್ಯಾಯ ಮಾಡಿದರು. ನನಗೂ ಅನ್ಯಾಯ ಮಾಡಿದರು. ಮೋಸ ಮಾಡುವುದರಲ್ಲಿ ಬಿಜೆಪಿ ಅವರು ನಂಬರ್ ಓನ್ ಆಗಿದ್ದು, ಬಿಜೆಪಿ ಸಹವಾಸ ನನಗೆ ಇನ್ನೂ ಸಾಕು. ಈ ಹಿನ್ನೆಲೆಯಲ್ಲಿ ಬಿಜೆಪಿ ಬಿಟ್ಟು ಕಾಂಗ್ರೆಸ್ (Congress) ಸೇರಲು ನಿರ್ಧರಿಸಿದ್ದೇನೆ. ಈ ಕುರಿತಾಗಿ ಸಿದ್ದರಾಮಯ್ಯ ಅವರ ಜೊತೆ ಮಾತಾಡಿದ್ದೇನೆ. ಡಿ.ಕೆ. ಶಿವಕುಮಾರ್ ಅವರ ಜೊತೆಯೂ ಮಾತಾಡುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಮಾಲ್‌ ಬಳಿ ಸಿಗರೇಟ್‌ ಸೇದುತ್ತಿದ್ದವರಿಂದ ಹಣ ವಸೂಲಿ – ಮತ್ತಿಬ್ಬರು ಪೇದೆಗಳು ಸಸ್ಪೆಂಡ್‌

    ಬಿಜೆಪಿ ಅವರು ಯಡಿಯೂರಪ್ಪರನ್ನು ಒಳ್ಳೆತನದಲ್ಲಿ ಮುಗಿಸಿದರು. ಯಡಿಯೂರಪ್ಪರನ್ನು ಒಳ್ಳೆತನದಲ್ಲಿ ಮುಗಿಸಿದ ವೇಳೆಯೇ ಬಿಜೆಪಿಗೆ 40 ಸ್ಥಾನ ನಷ್ಟವಾಯಿತು. ಈಗ ವಿಜಯೇಂದ್ರರನ್ನು ವರುಣಕ್ಕೆ ತರುವ ಮೂಲಕ ಅವರನ್ನು ಮುಗಿಸಲು ಹೊರಟ್ಟಿದ್ದಾರೆ. ಒಟ್ಟಿನಲ್ಲಿ ಬಿಜೆಪಿಯವರದ್ದು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ಪ್ಲಾನ್ ಆಗಿದೆ ಎಂದು ಕಿಡಿಕಾರಿದರು.

    ವಿಜಯೇಂದ್ರರನ್ನು ಬಲಿ ಕೊಡಲು ವರುಣ ಕ್ಷೇತ್ರಕ್ಕೆ ಕರೆ ತರುತ್ತಿದ್ದಾರೆ. ವಿಜಯೇಂದ್ರಗೆ ರಾಜಕೀಯ ಭವಿಷ್ಯ ಚೆನ್ನಾಗಿ ಇರಬೇಕಾದರೆ ಶಿಕಾರಿಪುರದಲ್ಲೇ ಸ್ಪರ್ಧೆ ಮಾಡಲಿ ಎಂದ ಅವರು, ಬಿಜೆಪಿಯಿಂದ 10ಕ್ಕಿಂತ ಹೆಚ್ಚು ಶಾಸಕರು ಕಾಂಗ್ರೆಸ್‌ಗೆ ಬರುತ್ತಾರೆ ಎಂದು ಭವಿಷ್ಯ ನುಡಿದರು. ಇದನ್ನೂ ಓದಿ: ಸಂವಿಧಾನ ಉಳಿಸಲು ಮೋದಿ ಹತ್ಯೆ ಮಾಡಿ – ಕಾಂಗ್ರೆಸ್ ಮಾಜಿ ಸಚಿವ ವಿವಾದಾತ್ಮಕ ಹೇಳಿಕೆಗೆ ಆಕ್ರೋಶ

    ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಜೊತೆ ಮುನಿಸಿಕೊಂಡಿರುವ ಜೆಡಿಎಸ್‌ನಲ್ಲಿದ್ದ ಸಂದೇಶ್ ನಾಗರಾಜ್ ಕಳೆದ ವರ್ಷ ಬಿಜೆಪಿಗೆ ಸೇರಿದ್ದರು. ಆ ಸಂದರ್ಭದಲ್ಲಿ ಅವರು ಮೈಸೂರು- ಚಾಮರಾಜನಗರ ಸ್ಥಳೀಯ ಸಂಸ್ಥೆ ಕ್ಷೇತ್ರದಿಂದ ಜೆಡಿಎಸ್‌ನಿಂದ (JDS) ಗೆದ್ದು ಪರಿಷತ್ ಸದಸ್ಯರಾಗಿದ್ದರು.

    Live Tv
    [brid partner=56869869 player=32851 video=960834 autoplay=true]

  • ಕೇಸರಿ ಶಲ್ಯ ಹಾಕಿಕೊಂಡು ಸಿ.ಟಿ ರವಿ ಮನೆಗೆ ಮುತ್ತಿಗೆಗೆ ಯತ್ನಿಸಿದ ಕಾಂಗ್ರೆಸ್ ಕಾರ್ಯಕರ್ತರು

    ಕೇಸರಿ ಶಲ್ಯ ಹಾಕಿಕೊಂಡು ಸಿ.ಟಿ ರವಿ ಮನೆಗೆ ಮುತ್ತಿಗೆಗೆ ಯತ್ನಿಸಿದ ಕಾಂಗ್ರೆಸ್ ಕಾರ್ಯಕರ್ತರು

    ಚಿಕ್ಕಮಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ನೀಡಿದ್ದ ಅವಹೇಳನಕಾರಿ ಹೇಳಿಕೆಯನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಕೇಸರಿ ಶಲ್ಯ ಧರಿಸಿ ಚಿಕ್ಕಮಗಳೂರು (Chikkamagaluru) ನಗರದ ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿರುವ ಬಿಜೆಪಿ ಶಾಸಕ ಸಿ.ಟಿ.ರವಿ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದರು.

    ಮೊನ್ನೆ ಕಾಫಿನಾಡಲ್ಲಿ ನಡೆದ ಬಿಜೆಪಿ ಜನ ಸಂಕಲ್ಪ ಯಾತ್ರೆಯಲ್ಲಿ ಸಿ.ಟಿ.ರವಿ (CT Ravi) ಅವರು, ವಿಪಕ್ಷ ನಾಯಕ ಸಿದ್ದರಾಮಯ್ಯಗೆ (Congress) ಸಿದ್ದರಾಮುಲ್ಲಾ ಖಾನ್ ಎಂದಿದ್ದರು. ಆ ಹೇಳಿಕೆ ಖಂಡಿಸಿ ಕಾಂಗ್ರೆಸ್ ಸಿ.ಟಿ.ರವಿ ವಿರುದ್ಧ ಕೆಂಡವಾಗಿತ್ತು. ಹಾಗಾಗಿ, ಇಂದು ಕಾಂಗ್ರೆಸ್ ಜಿಲ್ಲೆಯ ಎಲ್ಲಾ ತಾಲೂಕಿನಿಂದ ಬಂದ ಕಾಂಗ್ರೆಸ್ ಕಾರ್ಯಕರ್ತರು ಸಿ.ಟಿ.ರವಿ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪೊಲೀಸರು ಅವರನ್ನು ಮಾರ್ಗ ಮಧ್ಯೆಯೇ ತಡೆದರೂ ಕೂಡ ಸ್ಥಳದಲ್ಲಿದ್ದ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ವಿರುದ್ಧ ರೆಬಲ್ ಆಗಿದ್ದು, ಬನ್ರೋ, ಬನ್ನಿ ಎಂದು ರಸ್ತೆ ಮಧ್ಯೆಯೇ ನಿಂತಿದ್ದರು. ಇಬ್ಬರನ್ನೂ ನಿಯಂತ್ರಿಸೋದಕ್ಕೆ ಪೊಲೀಸರು ಹರಸಾಹಸಪಟ್ಟರು.

    ಯಾವಾಗ ಕಾಂಗ್ರೆಸ್ ಕಾರ್ಯಕರ್ತರು ಮನೆಗೆ ಹಾಕ್ತೀವಿ ಅಂದ್ರೋ ಬಿಜೆಪಿ ಕಾರ್ಯಕರ್ತರು ಕೂಡ ಎಲ್ಲದ್ಧಕ್ಕೂ ಸನ್ನದ್ದರಾಗಿದ್ದರು. ಸಿ.ಟಿ.ರವಿ ಮನೆಯ ಮುಂಭಾಗ 50ಕ್ಕೂ ಹೆಚ್ಚು ಕಾರ್ಯಕರ್ತರು ಕಾವಲಿಗೆ ನಿಂತರೆ, ಮತ್ತೊಂದಿಷ್ಟು ಜನ ಸಿ.ಟಿ.ರವಿ ಮನೆಯಿಂದ 200 ಮೀ. ದೂರದಲ್ಲಿ ಜಮಾಯಿಸಿದರು. ಇದನ್ನೂ ಓದಿ: ಚಿರತೆ ದಾಳಿಯಿಂದ ಮೃತಪಟ್ಟವರಿಗೆ 15 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ

    ಕಾಂಗ್ರೆಸ್ ಕಾರ್ಯಕರ್ತರು ತಾಲೂಕು ಕಚೇರಿಯಿಂದ 50 ಮೀಟರ್ ಹೋಗುತ್ತಿದ್ದಂತೆ ಪೊಲೀಸರೇ ತಡೆದರು. ಆಗ ಕಾಂಗ್ರೆಸ್ ಕಾರ್ಯಕರ್ತರು ಬ್ಯಾರಿಕೇಡ್ ತಳ್ಳಿ ಹೊಗೋದಕ್ಕೆ ಯತ್ನಿಸಿದಾಗ ಬಿಜೆಪಿಗರು ಬ್ಯಾರಿಕೇಡ್ ತಳ್ಳಿ ನುಗ್ಗೋದಕ್ಕೆ ಯತ್ನಿಸಿದರು. ಇಷ್ಟೆಲ್ಲಾ ಹೈಡ್ರಾಮದ ಮಧ್ಯೆ ನಾಲ್ಕೈದು ಕಾಂಗ್ರೆಸ್ ಕಾರ್ಯಕರ್ತರು ಮತ್ತೊಂದು ಮಾರ್ಗದಲ್ಲಿ ಕೇಸರಿ ಶಲ್ಯ ಹಾಕಿಕೊಂಡು ಸಿ.ಟಿ.ರವಿ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಬಿಜೆಪಿ ಮಾಜಿ ನಗರಸಭೆ ಸದಸ್ಯ ಪುಷ್ಪರಾಜ್ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಕೂಡಲೇ ಪೊಲೀಸರು ಎಲ್ಲರನ್ನೂ ವಾಪಸ್ ಕಳಿಸಿದ್ದಾರೆ. ಬಳಿಕ ಪೊಲೀಸರ ಪರಿಸ್ಥಿತಿಯನ್ನು ನಿಯಂತ್ರಿಸಲು ಕಾಂಗ್ರೆಸ್ ಕಾರ್ಯಕರ್ತನ್ನ ಬಂಧಿಸಿದ ಬಳಿಕ ಪರಿಸ್ಥಿತಿ ಶಾಂತತಗೊಂಡಿದೆ. ಇದನ್ನೂ ಓದಿ: ಯಾವುದೇ ವ್ಯಕ್ತಿಯನ್ನು ವೈಯಕ್ತಿಕವಾಗಿ ಟಾರ್ಗೆಟ್ ಮಾಡಲ್ಲ – ರಾವಣ ಹೇಳಿಕೆಗೆ ಖರ್ಗೆ ಸ್ಪಷ್ಟನೆ

    Live Tv
    [brid partner=56869869 player=32851 video=960834 autoplay=true]

  • ಕಾಂಗ್ರೆಸ್‌ನ ಹೋರಾಟಕ್ಕೆ ನಾನು ಜಗ್ಗಲ್ಲ, ಬಗ್ಗಲ್ಲ: ಈಶ್ವರಪ್ಪ

    ಕಾಂಗ್ರೆಸ್‌ನ ಹೋರಾಟಕ್ಕೆ ನಾನು ಜಗ್ಗಲ್ಲ, ಬಗ್ಗಲ್ಲ: ಈಶ್ವರಪ್ಪ

    ಶಿವಮೊಗ್ಗ: ಕಾಂಗ್ರೆಸ್ ನಾಯಕರ ಹೋರಾಟಕ್ಕೆಲ್ಲಾ ನಾನು ಜಗ್ಗಲ್ಲ, ಬಗ್ಗಲ್ಲ, ಹಿಗ್ಗಲ್ಲ ಎಂದು ಕಾಂಗ್ರೆಸ್ ನಾಯಕರಿಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ತಿರುಗೇಟು ನೀಡಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಹಿತದೃಷ್ಟಿಯಿಂದ ಹೇಳಿಕೆ ನೀಡಿದ್ದೆ. ರಾಷ್ಟ್ರಧ್ವಜ ನನ್ನ ತಾಯಿ ಸಮಾನ. ಇದಕ್ಕೆ ಯಾರದರೂ ಅವಮಾನ ಮಾಡಿದರೇ ಅವರು ರಾಷ್ಟ್ರದ್ರೋಹಿ ಎನಿಸಿಕೊಳ್ಳುತ್ತಾನೆ. ಇದನ್ನು ಈ ಮೊದಲೆ ಸ್ಪಷ್ಟಪಡಿಸಿದ್ದೇನೆ ಎಂದರು.

    ಅಭಿವೃದ್ಧಿ ಬಗ್ಗೆ ಸದನದಲ್ಲಿ ಚರ್ಚೆಯಾಗಬೇಕೆಂಬ ಅಭಿಲಾಷೆ ರಾಜ್ಯದ ಜನರದ್ದಿದೆ. ಇಲ್ಲಿಯವರೆಗೆ ನಿಮ್ಮ ಅಭಿಪ್ರಾಯಗಳನ್ನು ಹೇಳಿಕೊಂಡು ಒಂದು ವಾರ ಕಳೆದಿದ್ದೀರಿ. ಇನ್ನೂ ಒಂದು ವಾರ ಉಳಿಯುತ್ತದೆ. ಇದರಿಂದಾಗಿ ಈಗಲಾದರೂ ಜನರ ಅಭಿಪ್ರಾಯವನ್ನು ಚರ್ಚಿಸೋಣ. ವಿಧಾನಸಭೆಯಲ್ಲಿ ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚೆಯಾಗಬೇಕಿದೆ. ಜನಸಾಮಾನ್ಯರ ಕಷ್ಟಕ್ಕೆ, ಜ್ವಲಂತ ಸಮಸ್ಯೆ ಇವೆ ಎಂದು ಮನವಿ ಮಾಡಿದರು. ಇದನ್ನೂ ಓದಿ:  ಸಿಎಂಗೆ ಸ್ವಾಭಿಮಾನ ಇದ್ದರೆ ಬಚ್ಚಲು ಬಾಯಿ ಈಶ್ವರಪ್ಪರನ್ನು ವಜಾ ಮಾಡಲಿ: ಡಿಕೆಶಿ

    ಭಗವಾಧ್ವಜದ ವಿವಾದವನ್ನು ಇಲ್ಲಿಗೆ ಬಿಡಿ ಎಂದು ನಾನು ಹೇಳಲ್ಲ. ಎರಡು ಪಕ್ಷದವರು ಜನರ ಮಧ್ಯೆ ಹೋಗೋಣ ಬನ್ನಿ. ರಾಷ್ಟ್ರಧ್ವಜದ ಬಗ್ಗೆ ಜನರೇ ತೀರ್ಮಾನ ಮಾಡಲಿ. ಅವರು ಬರಲಿ, ನಾವು ಹೋಗೋಣ ಬನ್ನಿ. ಮತ್ತೊಮ್ಮೆ ಈ ಬಗ್ಗೆ ನಾನು ಮಾತನಾಡೊಲ್ಲ. ವಿಧಾನಸಭೆ ಕಲಾಪದಲ್ಲಿ ಈ ವಿಷಯವನ್ನು ಕೈ ಬಿಡಿ ಎಂದು ಮನವಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಈಶ್ವರಪ್ಪ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದನ್ನು ಖಂಡಿಸಿ ಧರಣಿ ಮಾಡ್ತಿದ್ದೇವೆ: ಯು.ಟಿ. ಖಾದರ್

  • ನಿನ್ನೆ 45 ನಿಮಿಷ, ಮುಂದೆ 5 ನಿಮಿಷ ಮೋದಿ ಭಾಷಣವಿರುತ್ತೆ ಅಂತ ತಾಯಿ ಅಂದ್ರು: ಮೋದಿ ವಿರುದ್ಧ ರಾಹುಲ್ ವಾಗ್ದಾಳಿ

    ನಿನ್ನೆ 45 ನಿಮಿಷ, ಮುಂದೆ 5 ನಿಮಿಷ ಮೋದಿ ಭಾಷಣವಿರುತ್ತೆ ಅಂತ ತಾಯಿ ಅಂದ್ರು: ಮೋದಿ ವಿರುದ್ಧ ರಾಹುಲ್ ವಾಗ್ದಾಳಿ

    ಬೆಂಗಳೂರು: ಪ್ರಧಾನಿ ಮೋದಿಯವರು ಮುಂದಿನ ವರ್ಷ 15 ನಿಮಿಷ, ಅದರ ಮುಂದಿನ ವರ್ಷ 5 ನಿಮಿಷ ಸ್ವಾತಂತ್ರ್ಯ ಭಾಷಣ ಮಾಡಲಿದ್ದಾರೆ ಎಂದು ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

    ಅವರು ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ಕಾಂಗ್ರೆಸ್ ಸಾರ್ಥಕ ಸಮಾವೇಶದಲ್ಲಿ ಮಾತನಾಡಿದ ಅವರು, ಮೋದಿ ಕಳೆದ ವರ್ಷ ದೇಶದ ಜನರನ್ನು ಉದ್ದೇಶಿಸಿ ಸುದೀರ್ಘವಾಗಿ ಅಂದ್ರೆ ಸುಮಾರು 90 ನಿಮಿಷ ಭಾಷಣ ಮಾಡಿದ್ದರು. ಈ ವರ್ಷ 45 ನಿಮಿಷವಷ್ಟೇ ಮಾತನಾಡಿದ್ದಾರೆ. ಇದನ್ನು ನೋಡಿ ನನ್ನ ತಾಯಿ ಸೋನಿಯಾ ಗಾಂಧಿ ಅವರು ಮುಂದಿನ ವರ್ಷ 15 ವರ್ಷ, ಅದರ ಮುಂದಿನ ವರ್ಷ 5 ನಿಮಿಷಕ್ಕೆ ಇಳಿಯಲಿದೆ ಎಂದಿದ್ದಾರೆ ಎಂದು ತಿಳಿಸಿದ್ರು.

    ಮೋದಿ ಸ್ವಚ್ಛ ಭಾರತ ಅಂತಾರೆ. ಆದ್ರೆ ನಾವು ಸಚ್ ಭಾರತ್ ಅಂತೀವಿ. ಮೋದಿಗೆ ಸತ್ಯದ ಮೇಲೆ ನಂಬಿಕೆ ಇಲ್ಲ. ಸತ್ಯ ಹೇಳಿ ಗೊತ್ತಿಲ್ಲ. ಜನರಿಗೆ ಹೇಳೋದಕ್ಕೆ ಏನು ಉಳಿದಿಲ್ಲ. ಮೋದಿ ಅತ್ಯಂತ ಹೆಚ್ಚು ನಿರುದ್ಯೋಗದ ಬಗ್ಗೆ ಮಾತಾಡಿಲ್ಲ. ಹೆಚ್ಚು ಉದ್ಯೋಗ ಸೃಷ್ಟಿ ಮಾಡುವ ಕೆಲಸ ಅವರಿಂದ ಆಗಲಿಲ್ಲ. ಆದ್ರೆ 30 ಸಾವಿರ ಉದ್ಯೋಗ ಗಳನ್ನ ನಮ್ಮ ಸಿದ್ದರಾಮಯ್ಯ ಸರ್ಕಾರ ಸೃಷ್ಟಿ ಮಾಡಿದೆ. ಇದನ್ನ ಅವರು ಹೇಳಲಿಲ್ಲ ಏಕೆ? ಚುನಾವಣೆಗೂ ಮೊದಲು ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀವಿ ಅಂತ ಹೇಳಿದ್ರು. ಏನಾಯಿತು ನಿಮ್ಮ ಗುರಿ ಅಂತ ಪ್ರಧಾನಿಯನ್ನು ಪ್ರಶ್ನಿಸಿದ್ರು.

    ಈ ದೇಶದ ಪ್ರಧಾನಿಗಳು ನಿಜವಾದ ಪ್ರಧಾನಿಯಾಗಿ ಕೆಲಸ ಮಾಡಬೇಕಾದ ಕಾಲ ಈಗ ಬಂದಿದೆ. ಈಗಲಾದ್ರೂ ದೇಶದ ಜನರ ಪ್ರಶ್ನೆಗಳಿಗೆ ಉತ್ತರ ಕೊಡಿ. ಪ್ರಧಾನಿ ಸ್ಥಾನ ದೇಶದ ಜನರ ಚೈತನ್ಯ. ಅದಕ್ಕಾದ್ರೂ ಉತ್ತರ ಕೊಡಿ ಮಿಸ್ಟರ್ ಮೋದಿ ಅಂತ ರಾಹುಲ್ ಹೇಳಿದ್ರು.

    ಇದನ್ನೂ ಓದಿ: ಕಿರು ಭಾಷಣ ಮಾಡಿ ಕೊಟ್ಟ ಮಾತನ್ನು ಉಳಿಸಿದ ಪ್ರಧಾನಿ ಮೋದಿ

    ಗೋರಖ್‍ಪುರದ ಆಸ್ಪತ್ರೆಯಲ್ಲಿ ಮಕ್ಕಳು ಸತ್ತ ಬಗ್ಗೆ ಏಕೆ ಮಾತಾಡಿಲ್ಲ. ಇವರು ಕೆಟ್ಟ ವ್ಯವಸ್ಥೆ, ನಿಯಮಗಳೇ ಮಕ್ಕಳ ಸಾವಿಗೆ ಕಾರಣ. ಇದೇನಾ ನಿಮ್ಮ ಅಭಿವೃದ್ಧಿ? ಮಿಸ್ಟರ್ ಮೋದಿ ನೀತಿ ಏನು? ಬಡವರು ಸರ್ಕಾರಿ ಆಸ್ಪತ್ರೆಗೆ ಹೋಗಿ ಸಾಯೋದಾ? ಶ್ರೀಮಂತರು ಖಾಸಗಿ ಆಸ್ಪತ್ರೆಗೆ ಹೋಗ್ತಾರೆ. ಇದು ಮಿಸ್ಟರ್ ಮೋದಿ ನೀತಿ ಅಂತ ಕಿಡಿಕಾರಿದ್ರು.

    ಚೀನಾದ ಜೊತೆ ಜೋಕಾಲಿ: ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರೇ, ನಿಮ್ಮ ಮನೆಗೆ ಅತಿಥಿಗಳ ಜೊತೆ ಕಳ್ಳರು ಬಂದ್ರೆ ಜೋಕಾಲಿ ಆಡ್ತೀರಾ ಅಂತಾ ರಾಹುಲ್ ಪ್ರಶ್ನಿಸಿದ್ರು. ಅದಕ್ಕೆ ಸಿಎಂ ನೋ ನೋ ಅಂದ್ರು. ಹೌದು. ಆದ್ರೆ ಇಲ್ಲಿ ಪ್ರಧಾನಿ ಮೋದಿ ಹಾಗೇ ಮಾಡಿದ್ದಾರೆ. ಚೀನಾದ ಅಧ್ಯಕ್ಷರನ್ನು ತಬ್ಬಿಕೊಂಡು ಜೋಕಾಲಿ ಆಡ್ತಾರೆ. ಅಧ್ಯಕ್ಷರ ಜತೆಯಲ್ಲೇ ಚೀನಾ ಸೈನಿಕರು ನಮ್ಮ ಗಡಿಯೊಳಗೆ ನುಗ್ಗುತ್ತಾರೆ. ಇದು ಮೋದಿ ಅವರ ಪ್ರೀತಿನಾ ಎಂದು ಪ್ರಶ್ನಿಸಿದ್ರು.

    ಮೋದಿ ನೀತಿ ಕಾರಣ: ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಸುವ್ಯವಸ್ಥೆ ಇದ್ರೆ ಪಾಕಿಸ್ತಾನ ನಮ್ಮ ಮೇಲೆ ಕಾಲು ಕೆರೆದುಕೊಂಡು ಬರುವುದಿಲ್ಲ. ಪರ ರಾಷ್ಟ್ರಗಳು ಸಹ ನಮ್ಮ ಮೇಲೆ ತಿರುಗಿ ಬೀಳ್ತಿರಲಿಲ್ಲ. ಹತ್ತು ವರ್ಷಗಳ ಕಾಲ ಶಾಂತಿ ಸುವ್ಯವಸ್ಥೆ ಕಾಪಾಡಿದ್ದು ಒಂದೇ ತಿಂಗಳಲ್ಲಿ ಶಾಂತಿ ಕದಡುವ ಕೆಲಸವನ್ನು ಮೋದಿ ಮಾಡಿದ್ರು. ಮೋದಿ ನೀತಿಯಿಂದಲೇ ಎಲ್ಲ ರಾಷ್ಟ್ರಗಳು ನಮಗೆ ಶತ್ರು ರಾಷ್ಟ್ರಗಳಾಗ್ತಿವೆ ಅಂತ ಗುಡುಗಿದ್ರು.

    ಕೇಂದ್ರಕ್ಕೆ ಸ್ಪಷ್ಟವಾದ ವಿದೇಶಾಂಗ ನೀತಿ ಇಲ್ಲ. ಇತಿಹಾಸದಲ್ಲಿ ಮೊದಲ ಬಾರಿಗೆ ರಷ್ಯಾ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಪೂರೈಕೆ ಮಾಡಿದೆ. ಕಳೆದ ಮೂರು ವರ್ಷ ದಲ್ಲಿ ಸ್ನೇಹ ಸಂಪಾದನೆಯಲ್ಲಿ ವಿಫಲರಾಗಿದ್ದಾರೆ. ಪಕ್ಕದ ರಾಷ್ಟ್ರಗಳಲ್ಲಿ ಅಸಹನೆ ಸೃಷ್ಟಿ ಮಾಡಿದ್ದಾರೆ ಅಂತ ರಾಹುಲ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ್ರು.

    ರಾಹುಲ್ ಎಡವಟ್ಟು: ಕಾರ್ಯಕ್ರಮದ ಆರಂಭದಲ್ಲಿ ಮಾಜಿ ಸಚಿವ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಕನ್ನಡದಲ್ಲಿ ಸ್ವಾಗತ ಭಾಷಣ ಮಾಡುತ್ತಿದ್ದರು. ರಾಹುಲ್ ಗಾಂಧಿಯವರಿಗೆ ಸ್ವಾಗತಿಸಿದಾಗ ಅವರು ಸುಮ್ಮನೆ ಕುಳಿತಿದ್ದರು. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿಮ್ಮ ಹೆಸರು ಹೇಳುತ್ತಿದ್ದಾರೆ ಅಂದ ತಕ್ಷಣ ರಾಹುಲ್ ಎದ್ದು ನಿಂತು ಸಭೆಗೆ ಕೈ ಮುಗಿದರು.

    ನಾಯಕರು ತಬ್ಬಿಬ್ಬು: ಸಾರ್ಥಕ ಸಮಾವೇಶವನ್ನು ತಮ್ಮ ಎಡಗೈಯಿಂದ ದೀಪ ಬೆಳಗಿಸಿ ಉದ್ಘಾಟಿಸಿದ ರಾಹುಲ್ ಗಾಂಧಿ ನೇರವಾಗಿ ಡಯಾಸ್ ಏರಿ ಮಾತು ಆರಂಭಿಸಿದರು. ಭಾಷಣಕ್ಕೆ ಕರೆಯುವ ಮೊದಲೇ ರಾಹುಲ್ ಗಾಂಧಿ ಮಾತನ್ನು ಆರಂಭಿಸಿದ್ದನ್ನು ಕಂಡು ನಾಯಕರು ಒಮ್ಮೆ ತಬ್ಬಿಬ್ಬಾದರು.

    ರಾಹುಲ್ ಗಾಂಧಿ ಭಾಷಣ ಮಾಡುತ್ತಿದ್ದಂತೆಯೇ ಸಮಾವೇಶಕ್ಕೆ ಸೇರಿದ್ದ ಮಂದಿ ಅರ್ಧಕ್ಕೆ ಎದ್ದು ಹೋಗುತ್ತಿದ್ದರು. ಇದು ಕಾಂಗ್ರೆಸ್ ನಾಯಕರಿಗೆ ಅಸಮಾಧಾನವನ್ನುಂಟು ಮಾಡಿತ್ತು.

    ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಕಾಂಗ್ರೆಸ್ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸಿ.ವೇಣುಗೋಪಾಲ್, ಬಿ.ಕೆ.ಹರಿಪ್ರಸಾದ್, ಕೆ.ಎಚ್.ಮುನಿಯಪ್ಪ, ಕೆ.ರಹಮಾನ್ ಖಾನ್, ಮಾರ್ಗರೇಟ್ ಅಳ್ವಾ, ಕಾರ್ಯಾಧ್ಯಕ್ಷರುಗಳಾದ ಎಸ್.ಆರ್.ಪಾಟೀಲ್, ಡಿ.ಕೆ.ಶಿವಕುಮಾರ್, ರಾಮಲಿಂಗಾರೆಡ್ಡಿ, ಜಾರ್ಜ್ ಸೇರಿದಂತೆ ಸಚಿವರು, ನಾಯಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.