Tag: Congress Presidential Polls

  • ಕಾಂಗ್ರೆಸ್‍ನ ಭವಿಷ್ಯ ಕಾರ್ಯಕರ್ತರ ಕೈಯಲ್ಲಿದೆ, ನನಗೆ ಗೆಲ್ಲುವ ಭರವಸೆ ಇದೆ: ಶಶಿ ತರೂರ್

    ಕಾಂಗ್ರೆಸ್‍ನ ಭವಿಷ್ಯ ಕಾರ್ಯಕರ್ತರ ಕೈಯಲ್ಲಿದೆ, ನನಗೆ ಗೆಲ್ಲುವ ಭರವಸೆ ಇದೆ: ಶಶಿ ತರೂರ್

    ನವದೆಹಲಿ: ರಾಷ್ಟ್ರೀಯ ಕಾಂಗ್ರೆಸ್‍ನ (Congress) ಭವಿಷ್ಯವು ಪಕ್ಷದ ಕಾರ್ಯಕರ್ತರ ಕೈಯಲ್ಲಿದೆ. ಫಲಿತಾಂಶ ಏನೇ ಇರಲಿ, ಹಳೆಯ ಪಕ್ಷದ ಪುನರುಜ್ಜೀವನವು ಪ್ರಾರಂಭವಾಗಿದೆ ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೀಯ ಚುನಾವಣೆ ಅಭ್ಯರ್ಥಿ ಶಶಿ ತರೂರ್ (Shashi Tharoor) ಹೇಳಿದ್ದಾರೆ.

    ಕೇರಳದ ತಿರುವನಂತಪುರಂನಲ್ಲಿ ಮತದಾನದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮಗೆ ಪ್ರಬಲ ಪೈಪೋಟಿ ಇದೆ ಅದಾಗ್ಯೂ ನನಗೆ ಗೆಲ್ಲುವ ವಿಶ್ವಾಸ ಇದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಖರ್ಗೆ ಜೊತೆಗೆ ನಾನು ಮಾತನಾಡಿದ್ದೇನೆ. ನಾವು ಸಹೋದ್ಯೋಗಿಗಳು ಮತ್ತು ಸ್ನೇಹಿತರು ಎಂದು ಹೇಳಿದರು. ಇದನ್ನೂ ಓದಿ: ಈ ಕ್ಷಣಕ್ಕೆ ನಾನು ಬಹಳ ದಿನದಿಂದ ಕಾಯುತ್ತಿದ್ದೆ: ಸೋನಿಯಾ ಗಾಂಧಿ

     

    ಇತ್ತ ಶಶಿ ತರೂರ್ ಬಗ್ಗೆ ಮಾತನಾಡಿದ ಮತ್ತೋರ್ವ ಚುನಾವಣಾ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ (Mallikarjun Kharge), ಇದು ನಮ್ಮ ಆಂತರಿಕ ಚುನಾವಣೆಯ ಭಾಗವಾಗಿದೆ. ನಾವು ಪರಸ್ಪರ ಸ್ನೇಹದಿಂದ ಮಾತನಾಡುತ್ತೇವೆ. ನಾವೆಲ್ಲರೂ ಒಟ್ಟಾಗಿ ಪಕ್ಷವನ್ನು ಕಟ್ಟಬೇಕು. ಶಶಿ ತರೂರ್ ನನಗೆ ದೂರವಾಣಿ ಕರೆ ಮಾಡಿ ನನಗೆ ಶುಭ ಹಾರೈಸಿದರು ಮತ್ತು ನಾನು ಕೂಡ ಶುಭ ಹಾರೈಸಿದ್ದೇನೆ ಎಂದರು. ಇದನ್ನೂ ಓದಿ: ಬಿಜೆಪಿ ಹವಾ ಕುಗ್ಗಿಸಲು ಕಾಂಗ್ರೆಸ್ ಯಾತ್ರೆ ಅಸ್ತ್ರ – ಮುಂದಿನ ಟಾರ್ಗೆಟ್ ಕರಾವಳಿ, ಮುಂಬೈ ಕರ್ನಾಟಕ

    ಕಳೆದ ಎರಡು ದಿನಗಳ ಹಿಂದೆ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಪ್ರಮುಖ ನಾಯಕರ ವಿರುದ್ಧ ಶಶಿ ತರೂರ್ ಅಸಮಾಧಾನ ಹೊರ ಹಾಕಿದ್ದರು. ಎಲ್ಲ ನಾಯಕರು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬೆಂಬಲ ನೀಡುತ್ತಿದ್ದಾರೆ, ಸೇಫ್ ಗೇಮ್ ಆಡುತ್ತಿದ್ದಾರೆ. ನನ್ನನ್ನು ಪ್ರತ್ಯೇಕವಾಗಿ ನೋಡಲಾಗುತ್ತಿದೆ ಎಂದು ಗುಡುಗಿದ್ದರು.

    Live Tv
    [brid partner=56869869 player=32851 video=960834 autoplay=true]

  • ಈ ಕ್ಷಣಕ್ಕೆ ನಾನು ಬಹಳ ದಿನದಿಂದ ಕಾಯುತ್ತಿದ್ದೆ: ಸೋನಿಯಾ ಗಾಂಧಿ

    ಈ ಕ್ಷಣಕ್ಕೆ ನಾನು ಬಹಳ ದಿನದಿಂದ ಕಾಯುತ್ತಿದ್ದೆ: ಸೋನಿಯಾ ಗಾಂಧಿ

    ನವದೆಹಲಿ: ಎಐಸಿಸಿ (AICC) ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ (Congress Presidential Polls) ಹಿನ್ನೆಲೆ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಮತದಾನ ಮಾಡಿದ್ದಾರೆ. ನವದೆಹಲಿ ಕೇಂದ್ರ ಕಚೇರಿಗೆ ಆಗಮಿಸಿದ ಅವರು ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಿ ಮತ ಚಲಾಯಿಸಿದರು.

    ಮತದಾನಕ್ಕೂ ಮುನ್ನ ಮಾತನಾಡಿದ ಅವರು, ನಾನು ಬಹಳ ದಿನಗಳಿಂದ ಕಾಯುತ್ತಿದ್ದ ದಿನ ಇದು. ಇದೊಂದು ಐತಿಹಾಸಿಕ ದಿನ ಎಂದು ಬಣ್ಣಿಸಿದರು. ಸೋನಿಯಾಗಾಂಧಿ ಮತದಾನದ ವೇಳೆ ಪುತ್ರಿ ಹಾಗೂ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಸಾಥ್ ನೀಡಿದರು. ಜೊತೆಗೆ ತಮ್ಮ ಮತವನ್ನು ಚಲಾಯಿಸಿದರು. ಇದನ್ನೂ ಓದಿ: ಮಳಲಿಯಲ್ಲಿರುವುದು ಮಂದಿರವೋ? ಮಸೀದಿಯೋ – ಇಂದು ತೀರ್ಪು ಪ್ರಕಟ ಸಾಧ್ಯತೆ

    ಸೋನಿಯಾಗಾಂಧಿ ಬಳಿಕ ಎಐಸಿಸಿ ಕಚೇರಿಗೆ ಆಗಮಿಸಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ (Manmohan Singh) ಮತದಾನ ಮಾಡಿದರು. ಇದಕ್ಕೂ ಮುನ್ನ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ, ಎಐಸಿಸಿ ಮಾಧ್ಯಮ ಮುಖ್ಯಸ್ಥ ಜೈರಾಮ್ ರಮೇಶ್ ಸೇರಿ ಹಲವು ನಾಯಕರು ಮತದಾನ ಮಾಡಿದರು. ಇದನ್ನೂ ಓದಿ: ಬಿಜೆಪಿ ಹವಾ ಕುಗ್ಗಿಸಲು ಕಾಂಗ್ರೆಸ್ ಯಾತ್ರೆ ಅಸ್ತ್ರ – ಮುಂದಿನ ಟಾರ್ಗೆಟ್ ಕರಾವಳಿ, ಮುಂಬೈ ಕರ್ನಾಟಕ

    ದೆಹಲಿಯಲ್ಲಿ 280ಕ್ಕೂ ಅಧಿಕ ನಾಯಕರು ಮತ ಚಲಾಯಿಸುತ್ತಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಸೇರಿ ಸುಮಾರು 75 ಮಂದಿ ಪ್ರಮುಖ ಗಣ್ಯರು ಎಐಸಿಸಿ ಕಚೇರಿಯಲ್ಲಿ ಮತ ಚಲಾಯಿಸುತ್ತಿದ್ದು, ಬಾಕಿ ನಾಯಕರು ದೆಹಲಿಯ ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ ಮತ ಚಲಾಯಿಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]