Tag: Congress President Polls

  • ರಾಹುಲ್‌, ಸೋನಿಯಾ ಗಾಂಧಿ ಅವರ ತ್ಯಾಗ ಬಹಳಷ್ಟಿದೆ: ಮಲ್ಲಿಕಾರ್ಜುನ ಖರ್ಗೆ

    ರಾಹುಲ್‌, ಸೋನಿಯಾ ಗಾಂಧಿ ಅವರ ತ್ಯಾಗ ಬಹಳಷ್ಟಿದೆ: ಮಲ್ಲಿಕಾರ್ಜುನ ಖರ್ಗೆ

    ನವದೆಹಲಿ: 10 ವರ್ಷ ನಡೆಸಿದ್ದರೂ ಸೋನಿಯಾ ಗಾಂಧಿ (Sonia Gandhi), ರಾಹುಲ್‌ ಗಾಂಧಿ (Rahul Gandhi) ಅವರು ಅಧಿಕಾರಕ್ಕಾಗಿ ಹಪಹಪಿಸಲಿಲ್ಲ. ಅವರ ತ್ಯಾಗ ಬಹಳಷ್ಟಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷೀಯ ಚುನಾವಣೆ (Congress President Polls) ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಕೊಂಡಾಡಿದರು.

    ಚುನಾವಣೆಗೆ ನಾಮಪತ್ರ ಸಲ್ಲಿಕೆ ಬಳಿಕ ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ (Priyanka Gandhi) ಅವರು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದರು. ಇಂತಹ ಸಂದರ್ಭದಲ್ಲಿ ನನಗೆ ಸ್ಪರ್ಧಿಸುವಂತೆ ಅನೇಕರು ಒತ್ತಾಯಿಸಿದರು. ಹೀಗಾಗಿ ಚುನಾವಣೆಗೆ ಸ್ಪರ್ಧಿಸಿದ್ದೇನೆ. ನಾನು ಯಾರ ವಿರುದ್ಧವೂ ಸ್ಪರ್ಧೆ ಮಾಡುತ್ತಿಲ್ಲ. ಪಕ್ಷದ ಸಿದ್ಧಾಂತ, ವಿಚಾರಧಾರೆ ಮುಂದಿಟ್ಟುಕೊಂಡು ಸ್ಪರ್ಧೆ ಮಾಡುತ್ತಿದ್ದೇನೆ. ನನ್ನ ಪಕ್ಷದ ಎಲ್ಲರೂ ಸಹಕಾರ ಕೂಡ ಬೇಕು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಸಮಾವೇಶಕ್ಕೂ ಮುನ್ನವೇ ದೇವರ ಮೊರೆ ಹೋದ ಕಾಂಗ್ರೆಸ್‌ ನಾಯಕರು- ಬಳ್ಳಾರಿಯಲ್ಲಿ ಹೋಮ

    ಕೆಪಿಸಿಸಿಗೂ ಕೂಡ ನಾನು ಅಧ್ಯಕ್ಷ ಆಗಿದ್ದೆ. ಬಾಲ್ಯದಿಂದ ಈತನಕ ನಾನು ಹೋರಾಟ ಮಾಡಿಕೊಂಡು ಬಂದಿದ್ದೇನೆ. ಈಗಲೂ ನಾನು ಹೋರಾಟ ಮಾಡುತ್ತೇನೆ. ಕರ್ನಾಟಕದಲ್ಲಿ ವಿಪಕ್ಷ ನಾಯಕ, ಬಹುತೇಕ ಎಲ್ಲಾ ಸಚಿವ ಸ್ಥಾನಗಳನ್ನು ಕೂಡ ಅಲಂಕರಿಸಿದ್ದೇನೆ. ಕೇಂದ್ರದಲ್ಲೂ ಕೂಡ ಸಚಿವನಾಗಿ, ವಿಪಕ್ಷ ನಾಯಕನಾಗಿ ಕೆಲಸ ಮಾಡಿದ್ದೇನೆ. ಇದು ಪಾರ್ಟ್ ಟೈಮ್ ಜಾಬ್ ಅಲ್ಲ, ಫುಲ್ ಟೈಮ್ಸ್ ಜಾಬ್. ನಾನು ಯಾವಾಗಲೂ ಫುಲ್ ಟೈಮ್ ಕೆಲಸ ಮಾಡಿದ್ದೇನೆ. ಯಾವಾಗಲೂ ಹೃದಯದಿಂದ ಕೆಲಸ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

    ನಿರುದ್ಯೋಗ, ಡೀಸೆಲ್-ಪೆಟ್ರೋಲ್ ಬೆಲೆ, ಹಣದುಬ್ಬರ ಹೆಚ್ಚುತ್ತಿದೆ. ಶ್ರೀಮಂತರು ಶ್ರೀಮಂತರಾಗುತ್ತಿದ್ದಾರೆ, ಬಡವರು ಬಡವರಾಗುತ್ತಿದ್ದಾರೆ. ಬಿಜೆಪಿ (BJP) ಎಂಟು ವರ್ಷಗಳಲ್ಲಿ ಅವರು ಹೇಳಿದ ಯಾವುದಕ್ಕೂ ಪರಿಹಾರ ನೀಡಿಲ್ಲ. ಬಿಜೆಪಿ ಯಾವಾಗಲೂ ಕಾಂಗ್ರೆಸ್ ಬಗ್ಗೆ ಕೆಳಮಟ್ಟದಲ್ಲಿಟ್ಟು ಮಾತಾಡುತ್ತೆ. ಬಿಜೆಪಿ ಯಾವಾಗ ಚುನಾವಣೆ ಮಾಡಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಗಾಂಧಿ ಕೊಂದ ಗೋಡ್ಸೆ ಉತ್ಸವ ಮಾಡುವವರಿಂದ ಗಾಂಧೀಜಿ ಬಗ್ಗೆ ತಿಳಿದುಕೊಳ್ಳಬೇಕಾ – ಬೊಮ್ಮಾಯಿಗೆ ಸಿದ್ದು ತಿರುಗೇಟು

    9,300 ಮತದಾರರ ಮುಂದೆ ನನ್ನ ವಿಚಾರ ಮುಂದಿಡುತ್ತೇನೆ. ಸಿದ್ಧಾಂತ, ವಿಚಾರ ಪ್ರಸ್ತಾಪ ಮಾಡುತ್ತೇನೆ. ಹೈಕಮಾಂಡ್ ರಿಮೋಟ್ ಕಂಟ್ರೋಲ್ ಇಲ್ಲ, ಏನು ಇಲ್ಲ ಎಂದು ಟೀಕೆಗಳಿಗೆ ಉತ್ತರ ಕೊಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಿಲ್ಲ: ಅಶೋಕ್‌ ಗೆಹ್ಲೋಟ್‌ ಸ್ಪಷ್ಟನೆ

    ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಿಲ್ಲ: ಅಶೋಕ್‌ ಗೆಹ್ಲೋಟ್‌ ಸ್ಪಷ್ಟನೆ

    ನವದೆಹಲಿ: ಕಾಂಗ್ರೆಸ್‌ ಅಧ್ಯಕ್ಷ (Congress president polls) ಸ್ಥಾನಕ್ಕೆ ಸ್ಪರ್ಧಿಸುವುದಿಲ್ಲ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ (Ashok Gehlot) ತಿಳಿಸಿದ್ದಾರೆ.

    ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ದೆಹಲಿಯ ನಿವಾಸದಲ್ಲಿ ಭೇಟಿಯಾದ ನಂತರ ಗೆಹ್ಲೋಟ್‌ ಈ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: AICC ಅಧ್ಯಕ್ಷ ಸ್ಥಾನಕ್ಕೆ ದಿಗ್ವಿಜಯ್‌ ಸಿಂಗ್ ಸ್ಪರ್ಧೆ

    ನಾನು ಕೊಚ್ಚಿಯಲ್ಲಿ ರಾಹುಲ್ ಗಾಂಧಿ (Rahul Gandhi) ಅವರನ್ನು ಭೇಟಿ ಮಾಡಿ (ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ) ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಮನವಿ ಮಾಡಿದ್ದೇನೆ. ಅವರು ಒಪ್ಪಿಕೊಳ್ಳದಿದ್ದಾಗ ನಾನು ಸ್ಪರ್ಧಿಸುತ್ತೇನೆ ಎಂದು ಹೇಳಿದ್ದೆ. ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟು ಎದುರಾಗಿದ್ದರಿಂದ ನಾನು ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ.

    ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಅವರೊಂದಿಗೆ ಮಾತುಕತೆ ನಡೆಸಿದ್ದೇನೆ. ಎರಡು ದಿನಗಳ ಹಿಂದೆ ರಾಜಸ್ಥಾನದಲ್ಲಿ ನಡೆದ ಘಟನೆ ನಮ್ಮನ್ನು ಬೆಚ್ಚಿ ಬೀಳಿಸಿತ್ತು. ನಾನು ಸಿಎಂ ಆಗಬೇಕು ಎಂದುಕೊಂಡೇ ಇದೆಲ್ಲಾ ನಡೆದಿದೆ. ಘಟನೆ ಬಗ್ಗೆ ಸೋನಿಯಾ ಅವರಲ್ಲಿ ಕ್ಷಮೆಯಾಚಿಸಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ರೇಸ್‌ನಿಂದ ಗೆಹ್ಲೋಟ್ ಹೊರಕ್ಕೆ?

    ರಾಜಸ್ಥಾನದಲ್ಲಿ (Rajasthan) ನಡೆದ ಘಟನೆಯ ನೈತಿಕ ಹೊಣೆ ಹೊತ್ತು, ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸದಿರಲು ನಿರ್ಧರಿಸಿದ್ದೇನೆ. ಈ ಬಗ್ಗೆ ಸೋನಿಯಾ ಗಾಂಧಿ ಅವರು ನಿರ್ಧರಿಸಲಿದ್ದಾರೆ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ರೇಸ್‌ನಿಂದ ಗೆಹ್ಲೋಟ್ ಹೊರಕ್ಕೆ?

    ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ರೇಸ್‌ನಿಂದ ಗೆಹ್ಲೋಟ್ ಹೊರಕ್ಕೆ?

    ಜೈಪುರ: ತೀವ್ರ ರಾಜಕೀಯ ಬಿಕ್ಕಟ್ಟು (Rajasthan Political Crisis) ಹಾಗೂ ಕಾಂಗ್ರೆಸ್‌ನ (Congress) ಆಂತರಿಕ ಕಲಹಗಳ ಕಾರಣದಿಂದಾಗಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ರಾಷ್ಟ್ರೀಯ ಕಾಂಗ್ರೆಸ್ (AICC) ಅಧ್ಯಕ್ಷೀಯ ಚುನಾವಣೆ (Election) ರೇಸ್‌ನಿಂದ ಹೊರಗುಳಿಯಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

    ಪ್ರಸ್ತುತ ಅಶೋಕ್ ಗೆಹ್ಲೋಟ್ ಅವರು ಹಿಂದೆ ಸರಿಯುತ್ತಿದ್ದಂತೆ ಉನ್ನತ ನಾಯಕತ್ವಕ್ಕಾಗಿ ಪಕ್ಷದ ಹಿರಿಯ ನಾಯಕರಾದ ಕೆ.ಸಿ ವೇಣುಗೋಪಾಲ್ (KC Venugopal), ದಿಗ್ವಿಜಯ ಸಿಂಗ್ ಹಾಗೂ ಮಲ್ಲಿಕಾರ್ಜುನ ಖರ್ಗೆ ರೇಸ್‌ನಲ್ಲಿದ್ದು, ಸೆಪ್ಟೆಂಬರ್ 30 ರಂದು ನಾಮಪತ್ರ ಸಲ್ಲಿಸಲಿದ್ದಾರೆ ಎಂಬುದಾಗಿ ಹೆಸರು ಹೇಳಲಿಚ್ಚಿಸದ ಕಾಂಗ್ರೆಸ್ ಮುಖಂಡರು (Congress Leader) ತಿಳಿಸಿದ್ದಾರೆ. ಇದನ್ನೂ ಓದಿ: 10 YouTube ಚಾನೆಲ್‌ನ ವೀಡಿಯೋಗಳಿಗೆ ಕೇಂದ್ರ ಸರ್ಕಾರ ನಿರ್ಬಂಧ

    ಸದ್ಯ ರಾಜಸ್ಥಾನದಲ್ಲಿ ಉಂಟಾದ ಬಿಕ್ಕಟ್ಟಿನಿಂದ ರಾಹುಲ್ ಗಾಂಧಿ (Rahul Gandhi) ಅಸಮಾಧಾನಗೊಂಡಿದ್ದು, ಅಶೋಕ್ ಗೆಹ್ಲೋಟ್ ಸಹ ಇದಕ್ಕೆ ಕ್ಷಮೆಯಾಚಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

    ನಿನ್ನೆ ರಾತ್ರಿಯಿಂದ ಶುರುವಾದ ಹೈಡ್ರಾಮಾ ಈವರೆಗೂ ನಿಂತಿಲ್ಲ. ಅಶೋಕ್ ಗೆಹ್ಲೋಟ್‌ರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿ.. ಅವರ ಸ್ಥಾನದಲ್ಲಿ ಸಚಿನ್ ಪೈಲಟ್ (SachinPilot) ತರಲು ಪ್ಲಾನ್ ಮಾಡಿದ್ದ ಹೈಕಮಾಂಡ್, ನಿನ್ನೆ ರಾತ್ರಿ ಸಿಎಲ್‌ಪಿ ಸಭೆ ಕರೆದಿತ್ತು. ಆದ್ರೆ, ಪೈಲಟ್ ಸಿಎಂ ಆಗಬಾರದು ಎಂದು ಪಟ್ಟು ಹಿಡಿದಿರುವ ಅಶೋಕ್ ಗೆಹ್ಲೋಟ್, ತಮ್ಮ ಬೆಂಬಲಿಗರನ್ನು ಮುಂದೆ ಬಿಟ್ಟು ಹೈಕಮಾಂಡ್‌ಗೆ ಸೆಡ್ಡು ಹೊಡೆದ್ರು. ಗೆಹ್ಲೋಟ್ ಬೆಂಬಲಿಸಿ 92 ಶಾಸಕರು ರಾಜೀನಾಮೆಗೆ ರೆಡಿ ಆಗಿದ್ದರು. ಇದನ್ನೂ ಓದಿ: ಮಗು ಏಕೆ ಕಪ್ಪಾಗಿದೆ ಎಂದು ಪತ್ನಿಯನ್ನೇ ಕೊಂದ ಪತಿ- ಎರಡೂವರೆ ವರ್ಷದ ಮಗುವಿನಿಂದ ಬಯಲಾಯ್ತು ರಹಸ್ಯ

    ಸಚಿನ್ ಪೈಲಟ್ ಸಿಎಂ ಆದ್ರೆ ಪಕ್ಷಕ್ಕೆ ಪಂಜಾಬ್ ಸ್ಥಿತಿ ಬರುತ್ತೆ ಎಂದು ನೇರ ಎಚ್ಚರಿಕೆ ಕೊಟ್ರು. ಕಾಂಗ್ರೆಸ್ ವೀಕ್ಷಕರಾದ ಮಲ್ಲಿಕಾರ್ಜುನ ಖರ್ಗೆ, ಅಜಯ್ ಮಕೇನ್ ಮಾಡಿದ ಪ್ರಯತ್ನಗಳೆಲ್ಲ ವ್ಯರ್ಥ ಆಗಿವೆ. ಶಾಸಕರನ್ನು ಪ್ರತ್ಯೇಕವಾಗಿ ಕರೆದು ಮಾತನಾಡಿಸೋ ಪ್ರಯತ್ನವೂ ಫೇಲ್ ಆಗಿದೆ. ಸದ್ಯ ಅಶೋಕ್ ಗೆಹ್ಲೋಟ್ ಅವರು ಎಐಸಿಸಿ ಅಧ್ಯಕ್ಷೀಯ ಚುನಾವಣೆ ರೇಸ್‌ನಿಂದ ಹಿಂದೆ ಸರಿದರೆ ರಾಜಾಸ್ಥಾನ ಮುಖ್ಯಮಂತ್ರಿಯಾಗಿಯೇ ಮುಂದುವರಿಯಲಿದ್ದಾರೆ. ಆದರೆ ಚುನಾವಣೆಯಿಂದ ಹಿಂದೆ ಸರಿಯುವ ಬಗ್ಗೆ ಯಾವುದೇ ಅಧಿಕೃತ ಗೇಳಿಕೆಗಳು ಕೇಳಿಬಂದಿಲ್ಲ.

    ಬಂಡಾಯ ಶಾಸಕರ ಬೇಡಿಕೆ ಏನು?
    ಅಶೋಕ್ ಗೆಹ್ಲೋಟ್ ರಾಜೀನಾಮೆ ನೀಡಬಾರದು. ಏಕವ್ಯಕ್ತಿ ಏಕ ಹುದ್ದೆ ಎನ್ನುವುದಾದ್ರೆ ಈ 92 ಶಾಸಕರಲ್ಲಿ ಹಿರಿಯರನ್ನು ಅರ್ಹರನ್ನು ಸಿಎಂ ಮಾಡಬೇಕು. ಒಂದು ವೇಳೆ ಸಚಿನ್ ಪೈಲಟ್‌ಗೆ ಸಿಎಂ ಸ್ಥಾನ ನೀಡಿದ್ದಲ್ಲಿ ಸಾಮೂಹಿಕ ರಾಜೀನಾಮೆ ನೀಡುವುದಾಗಿ ಶಾಸಕರು ಬೇಡಿಕೆ ಇಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]