Tag: Congress President Election

  • 137 ವರ್ಷಗಳ ಇತಿಹಾಸದಲ್ಲಿ 6 ಚುನಾವಣೆ – ಒಮ್ಮೆ ಮಾತ್ರ ಗಾಂಧಿ ಪರಿವಾರ ಸ್ಪರ್ಧೆ!

    137 ವರ್ಷಗಳ ಇತಿಹಾಸದಲ್ಲಿ 6 ಚುನಾವಣೆ – ಒಮ್ಮೆ ಮಾತ್ರ ಗಾಂಧಿ ಪರಿವಾರ ಸ್ಪರ್ಧೆ!

    ನವದೆಹಲಿ: ಎಐಸಿಸಿ (AICC) ಅಧ್ಯಕ್ಷ ಸ್ಥಾನಕ್ಕೆ ಮತದಾನ (President Election) ನಡೆದಿದ್ದು, ಇಂದು ಮತ ಎಣಿಕೆ ಕಾರ್ಯ ನಡೆಯುತ್ತಿದೆ ಸಂಜೆ ವೇಳೆಗೆ ದೇಶದ ಅತಿ ಹಳೆಯ ಪಕ್ಷಕ್ಕೆ ಹೊಸ ನಾಯಕನ ಘೋಷಣೆಯಾಗಲಿದೆ.

    137 ವರ್ಷಗಳಲ್ಲಿ ಕಾಂಗ್ರೆಸ್ (Congress) ಪಕ್ಷದಲ್ಲಿ ಈವರೆಗೂ ಕೇವಲ ಆರು ಬಾರಿ ಚುನಾವಣೆ ನಡೆದಿದ್ದು, ಇದರಲ್ಲಿ ಒಮ್ಮೆ ಮಾತ್ರ ಗಾಂಧಿ ಪರಿವಾರ (Gandhi Family) ಸದಸ್ಯರು ನೇರವಾಗಿ ಚುನಾವಣೆ ಸ್ಪರ್ಧಿಸಿದ್ದಾರೆ. 1939ರಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮೊದಲ ಬಾರಿ ಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ಪಿ ಸೀತರಾಮಯ್ಯ ಮತ್ತು ಸುಭಾಷ್ ಚಂದ್ರ ಬೋಸ್ (Subhas Chandra Bose) ಸ್ಪರ್ಧಿಸಿದ್ದರು. ಸುಭಾಷ್ ಚಂದ್ರ ಬೋಸ್ ಸೋಲು ಕಂಡಿದ್ದರು. ಸ್ವಾತಂತ್ರ್ಯ ಭಾರತದ ಬಳಿಕ ಮೊದಲ ಬಾರಿಗೆ 1950 ರಲ್ಲಿ ಚುನಾವಣೆ ನಡೆದಿತ್ತು, ಪುರುಷೋತ್ತಮ್ ದಾಸ್ ಮತ್ತು ಆಚಾರ್ಯ ಕೃಪಲಾನಿ ನಡುವೆ ನಡೆದ ಹಣಾಹಣಿಯಲ್ಲಿ ಪುರುಷೋತ್ತಮ್ ದಾಸ್ ಜಯಗಳಿಸಿದ್ದರು. ಇದನ್ನೂ ಓದಿ: ಸಿದ್ದು ಸೋಲಿಸಲು BJP ರಣತಂತ್ರ – ವರುಣಾದಲ್ಲಿ ವಿಜಯೇಂದ್ರ ಕಣಕ್ಕಿಳಿಸಲು ಪ್ಲ್ಯಾನ್‌

    1977 ರಲ್ಲಿ ಮೂರನೇ ಬಾರಿಗೆ ನಡೆದ ಚುನಾವಣೆಯಲ್ಲಿ ಕೆ.ಬ್ರಹ್ಮಾನಂದ ರೆಡ್ಡಿ, ಸಿದ್ದಾರ್ಥ ಶಂಕರ್ ರೈ ಮತ್ತು ಕರಣ್ ಸಿಂಗ್ ಸ್ಪರ್ಧಿಸಿದ್ದರು. ಈ ಸ್ಪರ್ಧೆಯಲ್ಲಿ ಕೆ.ಬ್ರಹ್ಮಾನಂದ ರೆಡ್ಡಿ ಗೆಲುವು ಸಾಧಿಸಿದ್ದರು. ಇದಾದ ಬಳಿಕ ಇಪ್ಪತ್ತು ವರ್ಷಗಳ ಕಾಲ ಚುನಾವಣೆ ನಡೆದಿರಲಿಲ್ಲ. 1997 ನಾಲ್ಕನೇ ಅಧ್ಯಕ್ಷೀಯ ಚುನಾವಣೆ ನಡೆದಿತ್ತು. ಶರದ್ ಪವಾರ್, ಸೀತರಾಮ್ ಕೇಸರಿ ಮತ್ತು ರಾಜೇಶ್ ಪೈಲಟ್ ನಡುವೆ ಸ್ಪರ್ಧೆ ಏರ್ಪಟ್ಟಿತ್ತು, ಸೀತರಾಮ್ ಕೇಸರಿ ಈ ಚುನಾವಣೆಯಲ್ಲಿ ಗೆಲವು ಸಾಧಿಸಿದ್ದರು. ಇದನ್ನೂ ಓದಿ: ಮಳವಳ್ಳಿ ಬಾಲಕಿ ಕುಟುಂಬಕ್ಕೆ 5 ಲಕ್ಷ ಪರಿಹಾರ ವಿತರಿಸಿದ ಜಮೀರ್

    ಐದನೇ ಅಧ್ಯಕ್ಷೀಯ ಚುನಾವಣೆ 2000 ರಲ್ಲಿ ನೆಡೆಯಿತು. ಈ ಚುನಾವಣೆಯಲ್ಲಿ ಸೋನಿಯಾ ಗಾಂಧಿ (Sonia Gandhi)  ಮತ್ತು ಜಿತೇಂದ್ರ ಪ್ರಸಾದ್ ಸ್ಪರ್ಧೆ ಮಾಡಿದ್ದರು. ಗಾಂಧಿ ಪರಿವಾರದ ಸದಸ್ಯರೊಬ್ಬರು ಮೊದಲ ಬಾರಿಗೆ ಚುನಾವಣೆ ಸ್ಪರ್ಧೆ ಮಾಡಿದ್ದು ಈ ಚುನಾವಣೆಯ ವಿಶೇಷವಾಗಿತ್ತು, ಜಿತೇಂದ್ರ ಪ್ರಸಾದ್ ವಿರುದ್ಧ 7,400 ಮತಗಳು ಪಡೆಯುವ ಮೂಲಕ ಸೋನಿಯಾ ಗಾಂಧಿ ಗೆಲುವು ಸಾಧಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ರೇಸ್‍ನಲ್ಲಿ ಖರ್ಗೆ – ಕಡೆಯ ಹಂತದಲ್ಲಿ ಕಣಕ್ಕಿಳಿಯುವ ಸಾಧ್ಯತೆ

    ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ರೇಸ್‍ನಲ್ಲಿ ಖರ್ಗೆ – ಕಡೆಯ ಹಂತದಲ್ಲಿ ಕಣಕ್ಕಿಳಿಯುವ ಸಾಧ್ಯತೆ

    ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ (Congress President Election) ದಿನದಿಂದ ದಿನಕ್ಕೆ ರಂಗೇರುತ್ತಿದೆ. ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನವಾಗಿದ್ದು, ಕಡೆಯ ಹಂತದಲ್ಲಿ ಗಾಂಧೀ ಕುಟುಂಬದ ಆಪ್ತರಾಗಿರುವ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಕಣಕ್ಕಿಳಿಯುವ ಸಾಧ್ಯತೆ ಕಂಡುಬಂದಿದೆ.

    ಈಗಾಗಲೇ ಶಶಿ ತರೂರ್ (Shashi Tharoo) ನಾಮಪತ್ರಸಲ್ಲಿಸಿದ್ದಾರೆ. ಇಂದು 3 ಗಂಟೆವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದ್ದು, ಮಲ್ಲಿಕಾರ್ಜುನ ಖರ್ಗೆ ಕಡೆಯ ಹಂತದಲ್ಲಿ ರೇಸ್‍ನಲ್ಲಿ ಕಾನಿಸಿಕೊಳ್ಳುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಇತ್ತ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಅಧ್ಯಕ್ಷ ಸ್ಥಾನದ ಸ್ಪರ್ಧೆಯಿಂದ ಹಿಂದೆ ಸರಿದ ಬೆನ್ನಲ್ಲೇ ಇನ್ನೋರ್ವ ಗಾಂಧೀ ಕುಟುಂಬದ ಆಪ್ತರಾಗಿರುವ ಖರ್ಗೆ ಹೆಸರು ಮುಂಚೂಣಿಯಲ್ಲಿದೆ. ಇದನ್ನೂ ಓದಿ: ಪ್ರಯಾಣಿಕರಿಂದ ಸುಲಿಗೆ ಮಾಡುವ ಖಾಸಗಿ ವಾಹನಗಳಿಗೆ ಬ್ರೇಕ್ ಹಾಕಲು ಮುಂದಾದ ಸಾರಿಗೆ ಇಲಾಖೆ

    ಈಗಾಗಲೇ ಖರ್ಗೆ ರಾಜ್ಯಸಭಾ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಹೆಚ್ಚಿದೆ. ಕಾಂಗ್ರೆಸ್‍ನಲ್ಲಿರುವ ಒಬ್ಬರಿಗೆ ಒಂದು ಹುದ್ದೆ ಎಂಬ ನಿಯಮಾನುಸಾರ ಖರ್ಗೆ ಈ ನಿರ್ಧಾರಕ್ಕೆ ಮುಂದಾಗಿದ್ದಾರೆ ಎಂದು ಆಪ್ತ ಮೂಲಗಳಿಂದ ವರದಿಯಾಗಿದೆ. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ರಾಜ್ಯದ 9 ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ- ಕಡತಗಳ ಪರಿಶೀಲನೆ

    ಮಲ್ಲಿಕಾರ್ಜುನ ಖರ್ಗೆ, ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್, ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರಂತಹ ವಿರೋಧ ಪಕ್ಷಗಳ ನಾಯಕರ ಜೊತೆ ಉತ್ತಮ ಸಂಪರ್ಕ ಹಾಗೂ ಸಂಬಂಧ ಇರಿಸಿಕೊಂಡಿದ್ದಾರೆ. ಖರ್ಗೆ ಅವರ ಬದ್ಧತೆ ಮತ್ತು ಕಾರ್ಯವೈಖರಿಯನ್ನು ಪಕ್ಷ ಮೆಚ್ಚಿಕೊಂಡಿದೆ. ಅಲ್ಲದೇ ಗಾಂಧೀ ಕುಟುಂಬದ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವುದರಿಂದಾಗಿ ಖರ್ಗೆಗೆ ಇದು ಪ್ಲಸ್ ಪಾಯಿಂಟ್ ಆಗಿದೆ. ಜೊತೆಗೆ ಖರ್ಗೆ ಅವರು ಹಿಂದಿಯಲ್ಲಿ ಉತ್ತಮ ಹಿಡಿತ ಹೊಂದಿದ್ದಾರೆ. ಹೀಗಾಗಿ ಹಿಂದಿ ಮಾತನಾಡುವ ಪ್ರದೇಶಗಳಲ್ಲಿ ಕೂಡ ಅವರು ಅಭಿಮಾನಿ ವರ್ಗವನ್ನು ಹೊಂದಿದ್ದಾರೆ. ಹಾಗಾಗಿ ಖರ್ಗೆ ಕಾಂಗ್ರೆಸ್ ಅಧ್ಯಕ್ಷ ಚುಕ್ಕಾಣಿ ಹಿಡಿದರೂ ಅಚ್ಚರಿ ಇಲ್ಲ.

    ಖರ್ಗೆ ಜೊತೆ ಜಿ23 (G23) ಗುಂಪಿನಲ್ಲಿ ಕಾಣಿಸಿಕೊಂಡಿದ್ದ ಆ್ಯಂಟೋನಿ, ಕಮಲ್‍ನಾಥ್, ಅಂಬಿಕಾ ಸೋನಿ, ಪವನ್ ಕುಮಾರ್ ಬನ್ಸಲ್ ಹೆಸರು ಕೇಳಿ ಬರುತ್ತಿದೆ. ಜಾರ್ಖಂಡ್‍ನ ಮಾಜಿ ಶಾಸಕ ಕೆ.ಎನ್ ತ್ರಿಪಾಠಿ ಮತ್ತು ದಿಗ್ವಿಜಯ್ ಸಿಂಗ್ ಕೂಡ ನಾಮಪತ್ರ ಸಲ್ಲಿಸಲು ಮುಂದಾಗಿದ್ದಾರೆ. ನಾಮಪತ್ರ ಹಿಂಪಡೆಯಲು ಅ.8 ಕೊನೆಯ ದಿನವಾಗಿದ್ದು, ಅ.17 ರಂದು ಎಲ್ಲ ಪ್ರದೇಶ ಕಾಂಗ್ರೆಸ್ ಸಮಿತಿಯ ಮುಖ್ಯ ಕಚೇರಿಯಲ್ಲಿ ಬೆಳಗ್ಗೆ 10 ಗಂಟೆಯಿಂದ 4ರವರೆಗೆ ಚುನಾವಣೆ ನಡೆಯಲಿದೆ. ಅ.19ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

    Live Tv
    [brid partner=56869869 player=32851 video=960834 autoplay=true]