Tag: Congress president

  • ಕಾಂಗ್ರೆಸ್ ಅಧ್ಯಕ್ಷೀಯ ರೇಸ್‍ನಲ್ಲಿ ಶಶಿ ತರೂರ್ Vs ಅಶೋಕ್ ಗೆಹ್ಲೋಟ್

    ಕಾಂಗ್ರೆಸ್ ಅಧ್ಯಕ್ಷೀಯ ರೇಸ್‍ನಲ್ಲಿ ಶಶಿ ತರೂರ್ Vs ಅಶೋಕ್ ಗೆಹ್ಲೋಟ್

    ನವದೆಹಲಿ: ಇಪ್ಪತ್ತು ವರ್ಷಗಳ ಬಳಿಕ ಗಾಂಧಿಯೇತರ ನಾಯಕ ಕಾಂಗ್ರೆಸ್ ಅಧ್ಯಕ್ಷ (Congress President) ಗಾದಿಗೆ ಏರುವ ಗಳಿಗೆ ಹತ್ತಿರ ಬರುತ್ತಿದೆ. ಇದೀಗ ಕಾಂಗ್ರೆಸ್ ಅಧ್ಯಕ್ಷಿಯ ರೇಸ್‍ನಲ್ಲಿ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಮತ್ತು ಸಂಸದ ಶಶಿ ತರೂರ್ (Shashi Tharoor) ಹೆಸರು ಕೇಳಿ ಬರುತ್ತಿದೆ.

     

    2019ರ ಸಾರ್ವತ್ರಿಕ ಚುನಾವಣೆಯ ಸೋಲಿನ ನಂತರ ರಾಹುಲ್ ಗಾಂಧಿ (Rahul Gandhi) ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದಾದ ಬಳಿಕ ಪಕ್ಷದ ಸದಸ್ಯರು ಮತ್ತೆ ಅಧ್ಯಕ್ಷರಾಗುವಂತೆ ಒಪ್ಪಿಸಲು ಎಷ್ಟೇ ಪ್ರಯತ್ನಿಸಿದರೂ, ಆ ಎಲ್ಲಾ ಮನವಿಗಳನ್ನು ತಿರಸ್ಕರಿಸಿದ್ದರು. ಇದೀಗ ಅಧ್ಯಕ್ಷರ ರೇಸ್‍ನಲ್ಲಿ ಶಶಿ ತರೂರ್ ಮತ್ತು ಗೆಹ್ಲೋಟ್ ಹೆಸರು ಮುಂಚೂಣಿಯಲ್ಲಿದೆ. ಕೆಲದಿನಗಳ ಹಿಂದೆ ಶಶಿ ತರೂರ್, ಸೋನಿಯಾ ಗಾಂಧಿ (Sonia Gandhi) ಅವರನ್ನು ಭೇಟಿಯಾಗಿ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸುವ ಕುರಿತು ಮಾತುಕತೆ ನಡೆಸಿದ್ದರು. ಇದನ್ನೂ ಓದಿ: ಮೋದಿ ತನಿಖಾ ಸಂಸ್ಥೆಗಳನ್ನು ಛೂ ಬಿಡುವ ಕೆಲಸ ಮಾಡಲ್ಲ: ಮಮತಾ ಮೃದು ಮಾತು

    ಪಕ್ಷದೊಳಗೆ ಸಾಂಸ್ಥಿಕ ಸುಧಾರಣೆಗಳನ್ನು ಕೋರಿ 2020ರಲ್ಲಿ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದ 23 ನಾಯಕರ ಗುಂಪಿನಲ್ಲಿ ಶಶಿ ತರೂರ್ ಕೂಡ ಒಬ್ಬರಾಗಿದ್ದರು. ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನವನ್ನು ರಾಹುಲ್ ಗಾಂಧಿ ಅವರೇ ವಹಿಸಿಕೊಳ್ಳಬೇಕು ಎಂದು ರಾಜಸ್ಥಾನ, ಗುಜರಾತ್ ಸೇರಿದಂತೆ ಹಲವು ರಾಜ್ಯಗಳು ನಿರ್ಣಯ ಅಂಗೀಕರಿಸಿರುವ ನಡುವೇಯೇ, ಶಶಿ ತರೂರ್ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಪಂಜಾಬ್ ಸಿಎಂ ತೂರಾಟ – ವಿಮಾನದಿಂದ ಕೆಳಗಿಳಿಸಿದ Lufthansa?

    ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಗೆ ಅಧಿಸೂಚನೆ ಇದೇ 22 ರಂದು ಹೊರಡಿಸಲಾಗಿದ್ದು, ಅ.25 ರಂದು ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಅಕ್ಟೋಬರ್ 17 ರಂದು ಚುನಾವಣೆ ನಡೆದು, 19 ರಂದು ಫಲಿತಾಂಶ ಹೊರಬೀಳಿದೆ.

    Live Tv
    [brid partner=56869869 player=32851 video=960834 autoplay=true]

  • ರಾಹುಲ್‌ ಗಾಂಧಿಯನ್ನು ಬಲವಂತವಾಗಿ ಕಾಂಗ್ರೆಸ್‌ ಅಧ್ಯಕ್ಷರನ್ನಾಗಿ ಮಾಡಲು ಸಾಧ್ಯವಿಲ್ಲ: ದಿಗ್ವಿಜಯ ಸಿಂಗ್‌

    ರಾಹುಲ್‌ ಗಾಂಧಿಯನ್ನು ಬಲವಂತವಾಗಿ ಕಾಂಗ್ರೆಸ್‌ ಅಧ್ಯಕ್ಷರನ್ನಾಗಿ ಮಾಡಲು ಸಾಧ್ಯವಿಲ್ಲ: ದಿಗ್ವಿಜಯ ಸಿಂಗ್‌

    ನವದೆಹಲಿ: ರಾಹುಲ್‌ ಗಾಂಧಿ ಅವರನ್ನು ಬಲವಂತವಾಗಿ ಕಾಂಗ್ರೆಸ್‌ ಅಧ್ಯಕ್ಷರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಪಕ್ಷದ ನಾಯಕ ದಿಗ್ವಿಜಯ ಸಿಂಗ್‌ ತಿಳಿಸಿದ್ದಾರೆ.

    ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಮನಸ್ಸನ್ನು ಬದಲಾಯಿಸುವಂತೆ ರಾಹುಲ್‌ ಗಾಂಧಿ ಅವರಿಗೆ ಮನವಿ ಮಾಡಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ನಾಯಕರು, ರಾಹುಲ್ ಗಾಂಧಿ ಇನ್ನು ಮುಂದೆ ಪಕ್ಷವನ್ನು ಮುನ್ನಡೆಸಲು ಬಯಸುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪ್ರವಾದಿ ಅವಹೇಳನ – BJPಯಿಂದ ಶಾಸಕ ರಾಜಾ ಸಿಂಗ್‌ ಅಮಾನತು

    ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿನಿಂದಾಗಿ 2019ರಲ್ಲಿ ತ್ಯಜಿಸಿದ ಹುದ್ದೆಗೆ ಮರಳಲು ರಾಹುಲ್ ಗಾಂಧಿ ನಿರಾಕರಿಸಿದ್ದಾರೆ. ಸೆಪ್ಟೆಂಬರ್ 20 ರೊಳಗೆ ಕಾಂಗ್ರೆಸ್ ಹೊಸ ಮುಖ್ಯಸ್ಥರನ್ನು ಆಯ್ಕೆ ಮಾಡಬೇಕಾಗಿದೆ. ಈ ವಾರದ ನಂತರ ವೇಳಾಪಟ್ಟಿಯನ್ನು ಪ್ರಕಟಿಸಬಹುದು.

    ಗೆಹ್ಲೋಟ್‌ ಅವರು ಮಾಡಿದ ಮನವಿ ಎಲ್ಲರಿಗೂ ತಿಳಿದಿದೆ. ಅದು ರಾಹುಲ್ ಗಾಂಧಿಯ ಮೇಲೆ ಅವಲಂಬಿತವಾಗಿದೆ. ಅವರನ್ನು ಹೇಗೆ ಬಲವಂತ ಮಾಡುತ್ತೀರಿ? ನಾವು ಎಲ್ಲರನ್ನೂ ಮಂಡಳಿಗೆ ಸೇರಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ದಿಗ್ವಿಜಯ್‌ ಸಿಂಗ್‌ ತಿಳಿಸಿದ್ದಾರೆ. ಇದನ್ನೂ ಓದಿ: ಚಿಕ್ಕಪೇಟೆಯಲ್ಲಿ ಆರ್.ವಿ ದೇವರಾಜ್ ಕುಟುಂಬ ಮಾತ್ರ ಸ್ಪರ್ಧಿಸಬೇಕಾ..?- ಕೆಜಿಎಫ್ ಬಾಬು

    ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಕಾರ್ಯಕರ್ತರ ಭಾವನೆಗಳನ್ನು ಗೌರವಿಸಬೇಕು. ಜವಾಬ್ದಾರಿ ವಹಿಸಿಕೊಳ್ಳಲು ಒಪ್ಪಬೇಕು ಎಂದು ಗೆಹ್ಲೋಟ್‌ ಮನವಿ ಮಾಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಪಿಎಸ್‍ಐ ಹಗರಣ: ಸಿಐಡಿ ವಶಕ್ಕೆ ಕಾಂಗ್ರೆಸ್ ಮುಖಂಡ

    ಪಿಎಸ್‍ಐ ಹಗರಣ: ಸಿಐಡಿ ವಶಕ್ಕೆ ಕಾಂಗ್ರೆಸ್ ಮುಖಂಡ

    ಮಂಡ್ಯ: ಪಿಎಸ್‍ಐ ಪರೀಕ್ಷೆಗೆ ಹಗರಣ ವಿಚಾರವಾಗಿ ಸಿಐಡಿ ನಿರತರ ತನಿಖೆ ನಡೆಸುತ್ತಿದೆ. ಈ ಹಿನ್ನೆಲೆ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡನನ್ನು ಮಂಡ್ಯದಲ್ಲಿ ಸಿಐಡಿ ವಶಕ್ಕೆ ಪಡೆದುಕೊಂಡಿದೆ.

    ಮಂಡ್ಯದ ನಾಗಮಂಗಲ ಯೂತ್ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಶರತ್ ರಾಮಣ್ಣ ವಶ. ಶ್ರವಣಬೆಳಗೊಳ ಪಿಎಸ್‍ಐ ಪರವಾಗಿ ಅಕ್ರಮವೆಸಗಿರುವ ಆರೋಪ ಶರತ್ ರಾಮಣ್ಣ ಅವರ ಮೇಲೆ ಇದೆ. ಅಲ್ಲದೇ ಇವರು ಪಿಎಸ್‍ಐ ಕೆಲಸದ ವಿಚಾರದಲ್ಲಿ ಮಧ್ಯವರ್ತಿಯಾಗಿದ್ದರು ಎಂಬ ಆರೋಪ ಸಹ ಇದೆ. ಈ ಆರೋಪಗಳ ಮೇಲೆ ಶರತ್ ರಾಮಯ್ಯ ಅವರನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಸ್ತುತ ವಿಚಾರಣೆ ಮಾಡುತ್ತಿದ್ದಾರೆ. ಇದನ್ನೂ ಓದಿ:  ಪೊಲೀಸರನ್ನ ಯಾಮಾರಿಸಿ ವಿದೇಶಕ್ಕೆ ಹಾರಿದ ಅಲ್ಲಾಹು ಅಕ್ಬರ್ ಕೂಗಿದ ವಿದ್ಯಾರ್ಥಿನಿ 

    ಮಾಜಿ ಸಚಿವ ಚೆಲುವರಾಯಸ್ವಾಮಿ ಆಪ್ತ ವಲಯದಲ್ಲಿ ಶರತ್ ಗುರುತಿಸಿಕೊಂಡಿದ್ದರು. ಇವರು ಹಲವು ಕಾಂಗ್ರೆಸ್ ನಾಯಕರೊಂದಿಗೆ ಫೋಟೋ ತೆಗೆಸಿಕೊಂಡಿದ್ದು, ಇದರಿಂದ ಕಾಂಗ್ರೆಸ್ ನಾಯಕರು ಮತ್ತಷ್ಟು ಮುಚುಗರಕ್ಕೆ ಒಳಗಾಗಿದ್ದಾರೆ.

  • ಇದು ನನ್ನ ರಾಜಕೀಯ ಜೀವನಕ್ಕೆ ಅನಿವಾರ್ಯ : ಬಿಜೆಪಿ ಸೇರ್ಪಡೆ ಖಚಿತ ಪಡಿಸಿದ ಹೊರಟ್ಟಿ

    ಇದು ನನ್ನ ರಾಜಕೀಯ ಜೀವನಕ್ಕೆ ಅನಿವಾರ್ಯ : ಬಿಜೆಪಿ ಸೇರ್ಪಡೆ ಖಚಿತ ಪಡಿಸಿದ ಹೊರಟ್ಟಿ

    ಹುಬ್ಬಳ್ಳಿ; ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ. ಈ ಹಿನ್ನೆಲೆ ಪಬ್ಲಿಕ್ ಟಿವಿ ಜೊತೆ ಬಸವರಾಜ ಅವರು ಮುಕ್ತವಾಗಿ ಮಾತನಾಡಿದ್ದಾರೆ.

    ಬಿಜೆಪಿ ಸೇರ್ಪಡೆ ಹಿನ್ನೆಲೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಬಸವರಾಜ ಹೊರಟ್ಟಿ ಅವರು, ನಾನು ಯಾರ ಮನಸ್ಸು ನೋವಿಸಿ ಜೆಡಿಎಸ್ ಬಿಡುತ್ತಿಲ್ಲ. ನಾನು ಈಗಾಗಲೇ ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ನನ್ನ ನಿರ್ಧಾರ ತಿಳಿಸಿದ್ದೇನೆ. ಈಗಾಗಲೇ ಬಿಜೆಪಿ ನಾಯಕರು ಎಲ್ಲ ಹಂತದ ನಾಯಕರ ಜೊತೆಗೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ:  ಹಿಂದೂ ಧರ್ಮದ ವಿರುದ್ಧ ಒಂದು ಧರ್ಮ ಪ್ರಾರಂಭವಾಗಿದ್ದು, ಅದಕ್ಕೆ ಸಿದ್ದು, ಡಿಕೆಶಿ, ಹೆಚ್‍ಡಿಕೆ ನಾಯಕರು: ಪ್ರಶಾಂತ್ ಸಂಬರಗಿ

    ಇದು ನನ್ನ ರಾಜಕೀಯ ಜೀವನಕ್ಕೆ ಅನಿವಾರ್ಯತೆ ಮತ್ತು ಅವಶ್ಯಕತೆಯಾಗಿತ್ತು. ಬಿಜೆಪಿ ಸೇರುತ್ತಿರುವುದು ಒಂದು ದಿಢೀರ್ ಬೆಳವಣಿಗೆ. ಇದನ್ನು ಜಾಸ್ತಿ ದಿನ ಮುಚ್ಚಿಟ್ಟಿಕೊಳ್ಳುವ ಅವಶ್ಯಕತೆ ಇಲ್ಲ. ನನ್ನ ಜೊತೆಗೆ ಬಿಜೆಪಿಗೆ ಬನ್ನಿ ಅಂತ ಯಾರಿಗೂ ಬಲವಂತ ಮಾಡುವುದಿಲ್ಲ. ನಾನು ಬಿಜೆಪಿ ಸೇರುವುದಕ್ಕೆ ಕೆಲ ಸ್ಥಳೀಯ ಕಾರ್ಯಕರ್ತರ ವಿರೋಧವಿದೆ. ಅದನ್ನು ಬಿಜೆಪಿ ನಾಯಕರು ಸರಿ ಮಾಡುತ್ತಾರೆ ಎಂದು ಹೇಳಿದರು.

  • ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲು

    ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲು

    ನವದೆಹಲಿ: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಇಂದು ಸಂಜೆ 7 ಗಂಟೆ ಸುಮಾರಿಗೆ ರೊಟೀನ್ ಚೆಕ್-ಅಪ್‍ಗಾಗಿ ಸೋನಿಯಾ ಅವರು ಸರ್ ಗಂಗಾ ರಾಮ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯ ಡಾ. ಡಿಎಸ್ ರಾಣಾ ತಿಳಿಸಿದ್ದಾರೆ.

    ಇಂದು ಬೆಳಗ್ಗೆಯಷ್ಟೇ ಪಕ್ಷದ ರಾಜ್ಯಸಭಾ ಸದಸ್ಯರೊಂದಿಗೆ ಪ್ರಸ್ತುತ ರಾಜಕೀಯ ವಿದ್ಯಾಮಾನಗಳ ಬಗ್ಗೆ ಚರ್ಚೆ ನಡೆಸಿದ್ದರು. ಈ ಸಭೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ನಡೆದಿದ್ದು, ಸಭೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ಮತ್ತಿತರ ಪ್ರಮುಖ ನಾಯಕರು ಕೂಡ ಭಾಗಿಯಾಗಿದ್ದರು.

    ಕಳೆದ ವರ್ಷ ಸೋನಿಯಾ ಗಾಂಧಿ ಅವರು ಅಮೆರಿಕದಲ್ಲಿ ಚಿಕಿತ್ಸೆ ಪಡೆದು ವಾಪಸ್ಸಾಗಿದ್ದರು. ನಂತರ ಫೆಬ್ರವರಿಯಲ್ಲಿ ಕೂಡ ಅವರು ಗಂಗಾರಾಮ್ ಆಸ್ಪತ್ರೆಗೆ ದಾಖಲಾಗಿದ್ದರು. 2018ರಲ್ಲಿ ಉಸಿರಾಟದ ಸಮಸ್ಯೆ ಕಾರಣಕ್ಕೆ ಸೋನಿಯಾ ಗಾಂಧಿ ಅವರನ್ನು ಇದೇ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ಅನಾರೋಗ್ಯದ ಹಿನ್ನೆಲೆಯಲ್ಲಿ 2017ರಲ್ಲಿ ತಮ್ಮ ಅಧ್ಯಕ್ಷ ಸ್ಥಾನಕ್ಕೆ ಸೋನಿಯಾ ಗಾಂಧಿ ರಾಜೀನಾಮೆ ನಿಡಿದ್ದರು. ಆದರೆ 2019ರ ಮೇ ತಿಂಗಳಲ್ಲಿ ನಡೆದ ಲೋಕಸಭಾ ಚುನಾವಣೆಯ ನಂತರ ಪುತ್ರ ರಾಹುಲ್ ಗಾಂಧಿ ಹುದ್ದೆಯಿಂದ ಹಿಂದೆ ಸರಿಯಬೇಕಾಯಿತು. ಹೀಗಾಗಿ ಸೋನಿಯಾ ಗಾಂಧಿ ಮತ್ತೆ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದಾರೆ.

  • ಸೋನಿಯಾ ಗಾಂಧಿ ಕಾಂಗ್ರೆಸ್‍ನ ಹಂಗಾಮಿ ಅಧ್ಯಕ್ಷೆ

    ಸೋನಿಯಾ ಗಾಂಧಿ ಕಾಂಗ್ರೆಸ್‍ನ ಹಂಗಾಮಿ ಅಧ್ಯಕ್ಷೆ

    ನವದೆಹಲಿ: ಕಾಂಗ್ರೆಸ್‍ನ ಹಂಗಾಮಿ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿ ಅವರು ಆಯ್ಕೆಯಾಗಿದ್ದಾರೆ.

    ದೆಹಲಿ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಶನಿವಾರ ರಾತ್ರಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.  ಈ ಮೂಲಕ ರಾಹುಲ್ ಗಾಂಧಿ ಅವರ ರಾಜೀನಾಮೆಯಿಂದ ಖಾಲಿ ಉಳಿದಿದ್ದ ಅಧ್ಯಕ್ಷ ಸ್ಥಾನವನ್ನು ತಾಯಿ ಸೋನಿಯಾ ಗಾಂಧಿ ಅವರು ತುಂಬಿದ್ದಾರೆ.

    ಸಭೆಯ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರು, ಸೋನಿಯಾ ಗಾಂಧಿ ಅವರನ್ನು ಕಾಂಗ್ರೆಸ್‍ನ ಹಂಗಾಮಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಅವರ ನೇತೃತ್ವದಲ್ಲಿ ಪಕ್ಷ ಸಂಘಟನೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

    ಕಾಂಗ್ರೆಸ್ ಕಾರ್ಯಕಾರಿ ಸಭೆಯಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ, ಗುಲಾಂ ನಬಿ ಆಜಾದ್, ಎ.ಕೆ.ಆ್ಯಂಟನಿ, ಅಹ್ಮದ್ ಪಟೇಲ್, ಕೆ.ಸಿ.ವೇಣುಗೋಪಾಲ್ ಸೇರಿದಂತೆ ಅನೇಕ ನಾಯಕರು ಭಾಗವಹಿಸಿದ್ದರು. ಸಭೆಯ ಅಧ್ಯಕ್ಷತೆಯನ್ನು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ವಹಿಸಿಕೊಂಡಿದ್ದರು ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ಕಾಂಗ್ರೆಸ್ ಅಧ್ಯಕ್ಷರ ಪಟ್ಟಿಯ ರೇಸ್‍ನಲ್ಲಿ ಮುಕುಲ್ ವಾಸ್ನಿಕ್, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಸುಶೀಲ್ ಕುಮಾರ್ ಶಿಂಧೆ, ಜ್ಯೋತಿರಾದಿತ್ಯ ಸಿಂಧಿಯಾ, ಮಲ್ಲಿಕಾರ್ಜುನ್ ಖರ್ಗೆ ಸೇರಿದಂತೆ ಕೆಲವು ನಾಯಕರಿದ್ದರು. ಈ ಮೂಲಕ 20 ದಶಕಗಳ ಬಳಿಕ ಗಾಂಧಿಯೇತರ ನಾಯಕರೊಬ್ಬರು ಕಾಂಗ್ರೆಸ್ ಅಧ್ಯಕ್ಷರಾಗುತ್ತಾರೆ ಎಂಬ ಮಾತು ಕೇಳಿ ಬಂದಿತ್ತು. ಆದರೆ ಅಂತಿಮವಾಗಿ ಕಾಂಗ್ರೆಸ್ ಅಧ್ಯಕ್ಷ ಪಟ್ಟ ಗಾಂಧಿ ಕುಟುಂಬ ಕೈ ಸೇರಿದೆ.

  • ‘ಕೈ’ ಅಧ್ಯಕ್ಷರ ಪಟ್ಟಿ ನಾಳೆ ನಿರ್ಧಾರ- ಮುಂಚೂಣಿಯಲ್ಲಿದೆ ಮುಕುಲ್ ವಾಸ್ನಿಕ್ ಹೆಸರು

    ‘ಕೈ’ ಅಧ್ಯಕ್ಷರ ಪಟ್ಟಿ ನಾಳೆ ನಿರ್ಧಾರ- ಮುಂಚೂಣಿಯಲ್ಲಿದೆ ಮುಕುಲ್ ವಾಸ್ನಿಕ್ ಹೆಸರು

    – ಎರಡು ದಶಕಗಳ ಬಳಿಕ ಕಾಂಗ್ರೆಸ್‍ಗೆ ಗಾಂಧಿಯೇತರ ಅಧ್ಯಕ್ಷ

    ನವದೆಹಲಿ: ರಾಹುಲ್ ಗಾಂಧಿ ರಾಜೀನಾಮೆಯಿಂದ ತೆರವಾಗಿರುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಶನಿವಾರ ಆಯ್ಕೆ ನಡೆಯಲಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ದೆಹಲಿಯ ಸೋನಿಯಾ ಗಾಂಧಿ ಅವರ ಮನೆಯಲ್ಲಿ ಇಂದು ಕೆಲ ನಾಯಕರು ಮಾತುಕತೆ ನಡೆಸಿದ್ದು, ಗುರುವಾರ ಕಾಂಗ್ರೆಸ್ ಕಾರ್ಯಕಾರಿ ಸಭೆ ಕರೆಯಲು ನಿರ್ಧರಿಸಿದ್ದಾರೆ. ನಾಳೆ ನಡೆಯಲಿರುವ ಮಹತ್ವದ ಸಭೆಯಲ್ಲಿ ಪಕ್ಷದ ಅಧ್ಯಕ್ಷರ ಆಯ್ಕೆಯೂ ಆಗಲಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ನಾಯಕರು ಸಿದ್ಧಪಡಿಸಿದ ಪಟ್ಟಿಯಲ್ಲಿ ಕೇಂದ್ರ ಮಾಜಿ ಸಚಿವ ಮುಕುಲ್ ವಾಸ್ನಿಕ್ ಅವರ ಹೆಸರು ಮುಂಚೂಣಿಯಲ್ಲಿದ್ದು, ಅವರನ್ನೇ ಆಯ್ಕೆ ಮಾಡಲು ಸಿದ್ಧತೆ ನಡೆದಿದೆ ಎಂದು ವರದಿಯಾಗಿದೆ.

    ಕಾಂಗ್ರೆಸ್ ಹಿರಿಯ ನಾಯಕರಾದ ಎ.ಕೆ.ಆ್ಯಂಟನಿ, ಅಹ್ಮದ್ ಪಟೇಲ್ ಹಾಗೂ ವೇಣುಗೋಪಾಲ್ ಅವರು ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಅಧ್ಯಕ್ಷರ ಆಯ್ಕೆಯ ಕುರಿತು ಪ್ರಸ್ತಾಪಿಸಿರುವ ನಾಯಕರು, ಮುಂದಿನ ಅಧ್ಯಕ್ಷರ ಆಯ್ಕೆಯನ್ನು ವಿಳಂಬ ಮಾಡುವುದು ಸೂಕ್ತವಲ್ಲ ಎಂದು ತಿಳಿಸಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ.

    ಈ ಮೂಲಕ ಎರಡು ದಶಕ ಬಳಿಕ ಗಾಂಧಿಯೇತರ ನಾಯಕರೊಬ್ಬರು ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಪಡೆಯುತ್ತಿದ್ದಾರೆ. 59 ವರ್ಷದ ಮುಕುಲ್ ವಾಸ್ನಿಕ್ ಅವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿದ್ದರು. ಅಷ್ಟೇ ಅಲ್ಲದೆ ಮುಕುಲ್ ಅವರು ತಮ್ಮ 25ನೇ ವಯಸ್ಸಿಗೆ ಸಂಸತ್ ಪ್ರವೇಶ ಮಾಡಿದ್ದರು. ಈ ಮೂಲಕ 1984ರಲ್ಲಿ ಸಂಸತ್ ಪ್ರವೇಶ ಮಾಡಿದ ಅತ್ಯಂತ ಕಿರಿಯ ಸಂಸದರು ಎಂಬ ಹೆಮ್ಮೆಗೆ ಮುಕುಲ್ ಪಾತ್ರರಾಗಿದ್ದರು.

    ಮುಕುಲ್ ವಾಸ್ನಿಕ್ ಅವರಿಗೆ 40 ವರ್ಷಗಳ ರಾಜಕೀಯ ಅನುಭವವಿದ್ದು, ಪಕ್ಷದ ಎಲ್ಲಾ ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಜೊತೆಗೆ ಅವರು ಪ್ರಾಮಾಣಿಕ ವ್ಯಕ್ತಿತ್ವ ಹೊಂದಿರುವ ದಲಿತ ನಾಯಕನಾಗಿದ್ದಾರೆ. ಮುಕುಲ್ ಅವರ ಮೇಲೆ ಯಾವುದೇ ಗುಂಪುಗಾರಿಗೆ ಅಥವಾ ಭ್ರಷ್ಟಾಚಾರದ ಆರೋಪಗಳಿಲ್ಲ. 2019ರ ಲೋಕಸಭಾ ಚುನಾವಣೆಯಲ್ಲಿ ಮುಕುಲ್ ವಾಸ್ನಿಕ್ ಅವರು ಉಸ್ತುವಾರಿ ವಹಿಸಿದ್ದ ತಮಿಳುನಾಡು, ಪುದುಚೇರಿ ಮತ್ತು ಕೇರಳದಂತಹ ರಾಜ್ಯಗಳಲ್ಲಿ ಪಕ್ಷ ಉತ್ತಮ ಪ್ರದರ್ಶನ ನೀಡಿದೆ. ಈ ಎಲ್ಲ ವಿಚಾರಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ನಾಯಕರು ಮುಕುಲ್ ವಾಸ್ನಿಕ್ ಅವರಿಗೆ ಮಣೆ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.

    ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮನಮೋಹನ್ ಸಿಂಗ್(86) ಅವರ ಹೆಸರನ್ನು ಪಕ್ಷದ ಕೆಲವು ಹಿರಿಯ ನಾಯಕರು ಬೆಂಬಲಿಸಿದ್ದರು. ಅವರನ್ನು ಅಧ್ಯಕ್ಷರನ್ನಾಗಿ ಮಾಡಿ, ನಾಲ್ಕು ವಿಭಿನ್ನ ಪ್ರದೇಶಗಳನ್ನು ಪ್ರತಿನಿಧಿಸುವ ನಾಲ್ವರನ್ನು ಕಾರ್ಯನಿರತ ಅಧ್ಯಕ್ಷರನ್ನಾಗಿ ನೇಮಕ ಮಾಡಲು ನಿರ್ಧರಿಸಿದ್ದರು. ಆದರೆ ಮನಮೋಹನ್ ಸಿಂಗ್ ಅವರ ವಯಸ್ಸು ಮತ್ತು ಆರೋಗ್ಯ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕೆಲವು ನಾಯಕರು ಬೇಡ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು ಎಂದು ವರದಿಯಾಗಿದೆ.

    ಮುಕುಲ್ ವಾಸ್ನಿಕ್ ಹಾಗೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಹೊರತುಪಡಿಸಿ, ಸುಶೀಲ್ ಕುಮಾರ್ ಶಿಂಧೆ, ಜ್ಯೋತಿರಾದಿತ್ಯ ಸಿಂಧಿಯಾ, ಮಲ್ಲಿಕಾರ್ಜುನ್ ಖರ್ಗೆ ಸೇರಿದಂತೆ ಕೆಲವು ನಾಯಕರ ಹೆಸರುಗಳೂ ಕಾಂಗ್ರೆಸ್ ಅಧ್ಯಕ್ಷರ ಪಟ್ಟಿಯಲ್ಲಿ ಕೇಳಿ ಬಂದಿದ್ದವು.

  • ಅಶೋಕ್ ಗೆಹ್ಲೋಟ್‍ಗೆ ಎಐಸಿಸಿ ಅಧ್ಯಕ್ಷ ಪಟ್ಟ?

    ಅಶೋಕ್ ಗೆಹ್ಲೋಟ್‍ಗೆ ಎಐಸಿಸಿ ಅಧ್ಯಕ್ಷ ಪಟ್ಟ?

    ನವದೆಹಲಿ: ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಎಐಸಿಸಿ ಅಧ್ಯಕ್ಷರಾಗಿ ನೇಮಕವಾಗುವ ಸಾಧ್ಯತೆಯಿದೆ.

    ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಬದ್ಧರಾಗಿದ್ದಾರೆ. ಈ ಹಿನ್ನಲೆಯಲ್ಲಿ ಅಶೋಕ್ ಗೆಹ್ಲೋಟ್ ಅವರಿಗೆ ಪಕ್ಷ ನಾಯಕತ್ವದ ಜವಾಬ್ದಾರಿ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.

    ಈ ಮೂಲಕ ಅಶೋಕ್ ಗೆಹ್ಲೋಟ್ ಅವರು ಎಐಸಿಸಿ ಅಧ್ಯಕ್ಷ ಸ್ಥಾನದ ಜೊತೆಗೆ ರಾಜಸ್ಥಾನದ ಮುಖ್ಯಮಂತ್ರಿ ಜವಾಬ್ದಾರಿಯ್ನು ನಿಭಾಯಿಸಿಕೊಂಡು ಹೋಗಲಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಒಡಿಶಾ ಸಿಎಂ ನವೀನ್ ಪಟ್ನಾಯಕ್, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿಗಳಾದ ಅಖಿಲೇಶ್ ಯಾದವ್ ಮತ್ತು ಮಾಯಾವತಿ ಅವರು ಪಕ್ಷದ ಅಧ್ಯಕ್ಷ ಸ್ಥಾನ ಹಾಗೂ ಮುಖ್ಯಮಂತ್ರಿ ಜವಾಬ್ದಾರಿಯನ್ನು ಒಟ್ಟಿಗೆ ನಿರ್ವಹಿಸಿದ್ದಾರೆ. ಹೀಗಾಗಿ ಅಶೋಕ್ ಗೆಹ್ಲೋಟ್ ಅವರು ಮುಖ್ಯಮಂತ್ರಿ ಜವಾಬ್ದಾರಿಯ ಜೊತೆಗೆ ಕಾಂಗ್ರೆಸ್ ನಾಯಕ ಸ್ಥಾನವನ್ನು ನಿರ್ವಹಿಸಬಹುದು ಎಂಬ ವಿಚಾರವಾಗಿ ಭಾರೀ ಚರ್ಚೆ ನಡೆದಿದೆ ಎನ್ನಲಾಗುತ್ತಿದೆ.

    ರಾಹುಲ್ ಗಾಂಧಿ ಅವರು ಲೋಕಸಭಾ ಚುನಾವಣಾ ಫಲಿತಾಂಶದ ನಂತರ ಸೋಲಿನ ಜವಾಬ್ದಾರಿ ಹೊತ್ತು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು. ಆದರೆ ಪಕ್ಷದ ಹಿರಿಯ ನಾಯಕರು ರಾಜೀನಾಮೆಯನ್ನು ತಿರಸ್ಕರಿಸಿದ್ದರು. ಆದರೂ ರಾಹುಲ್ ಗಾಂಧಿ ಅವರು ರಾಜೀನಾಮೆ ನೀಡುವ ವಿಚಾರದಿಂದ ಹಿಂದೆ ಸರಿಯುತ್ತಿಲ್ಲ. ಇದರಿಂದಾಗಿ ಪಕ್ಷದ ಹಿರಿಯ ನಾಯಕರು ಸೂಕ್ತ ವ್ಯಕ್ತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ವೀರ ಸಾವರ್ಕರ್ ಹೇಡಿ: ರಾಹುಲ್ ಗಾಂಧಿ ವಿರುದ್ಧ ದೂರು

    ವೀರ ಸಾವರ್ಕರ್ ಹೇಡಿ: ರಾಹುಲ್ ಗಾಂಧಿ ವಿರುದ್ಧ ದೂರು

    ನವದೆಹಲಿ: ವೀರ ಸಾವರ್ಕರ್ ಅವರನ್ನು ಹೇಡಿ ಎಂದು ಕರೆದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಮಹಾರಾಷ್ಟ್ರದ ಪುಣೆಯಲ್ಲಿ ದೂರು ದಾಖಲಾಗಿದೆ.

    ನವದೆಹಲಿಯಲ್ಲಿ ಇತ್ತೀಚೆಗೆ ನಡೆದಿದ್ದ ರ‍್ಯಾಲಿಯಲ್ಲಿ ರಾಹುಲ್ ಗಾಂಧಿ ಅವರು, ವೀರ ಸಾವರ್ಕರ್ ಅವರನ್ನು ಹೇಡಿ ಅಂತ ಅವಮಾನಿಸಿದ್ದಾರೆ. ಅಷ್ಟೇ ಅಲ್ಲದೆ ಅವಿಧೇಯ ಭಾಷೆ ಬಳಸಿ ಸಾರ್ವಜನಿಕರ ಭಾವನೆಗೆ ಧಕ್ಕೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

    ಇಂತಹ ಹೇಳಿಕೆ ವಿಚಾರವಾಗಿ ರಾಹುಲ್ ಗಾಂಧಿ ಅವರ ವಿರುದ್ಧ ದೂರು ದಾಖಲಾಗುತ್ತಿರುವುದು ಇದು ಮೊದಲೇನಲ್ಲ. ಕಳೆದ ವರ್ಷ ನವೆಂಬರ್ ನಲ್ಲಿ ಛತ್ತೀಸ್‍ಗಢ ಚುನಾವಣಾ ರ‍್ಯಾಲಿ ಭಾಷಣದಲ್ಲಿ, ವೀರ ಸಾವರ್ಕರ್ ಅವರು 1911ರಲ್ಲಿ ಅಂಡಮಾನ್‍ನ ಸೆಲ್ಯುಲಾರ್ ಜೈಲಿನಿಂದ ಹೊರಬರಲು ಬ್ರಿಟಿಷರ ಮುಂದೆ ಅಂಗಲಾಚಿದ್ದರು ಎಂದು ಹೇಳಿಕೆ ನೀಡಿದ್ದರು.

    ರಾಹುಲ್ ಗಾಂಧಿ ಹೇಳಿಕೆ ವಿರುದ್ಧ ವೀರ ಸಾವರ್ಕರ್‍ರ ಮೊಮ್ಮಗ ರಂಜಿತ್ ಸಾವರ್ಕರ್ ಎಐಸಿಸಿ ದೂರು ದಾಖಲಿಸಿದ್ದರು. ನಮ್ಮ ಅಜ್ಜ ವೀರ ಸಾರ್ವಕರ್ ಅವರು 27 ವರ್ಷಗಳ ಕಾಲ ಜೈಲಿನಲ್ಲಿದ್ದರು. ಆದರೆ ರಾಹುಲ್ ಗಾಂಧಿ ಹೇಳಿಕೆಯಿಂದ ಸುಳ್ಳಾಗಿದ್ದು, ಅವರ ಮಾನನಷ್ಟ ಮೊಕದ್ದಮೆ ಕೇಸ್ ದಾಖಲಿಸಿದ್ದೇನೆ ಎಂದು ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನ ಮನೆ ಮೇಲೆ ಬಿಜೆಪಿಯವ್ರೇ ದಾಳಿ ಮಾಡಿದ್ದಾರೆ- ಡಿಕೆಶಿ ಆರೋಪ

    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನ ಮನೆ ಮೇಲೆ ಬಿಜೆಪಿಯವ್ರೇ ದಾಳಿ ಮಾಡಿದ್ದಾರೆ- ಡಿಕೆಶಿ ಆರೋಪ

    ಬಳ್ಳಾರಿ: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರ್ಷದ್ ಮನೆ ಮೇಲೆ ಬಿಜೆಪಿಯವರೇ ದಾಳಿ ಮಾಡಿದ್ದಾರೆ. ಈ ಬಗ್ಗೆ ಎಲ್ಲಾ ಆಯಾಮದಲ್ಲಿ ತನಿಖೆ ನಡೆಸಲು ಪೊಲೀಸರಿಗೆ ಸೂಚಿಸಿದ್ದೇನೆ ಅಂತ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.

    ಹರ್ಷದ್ ಮನೆಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಸಚಿವರು, ನಮ್ಮ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನ ಮನೆ ಮೇಲೆ ಬಿಜೆಪಿಯವರು ದಾಳಿ ಮಾಡಿದ್ದಾರೆ. ಈ ಬಗ್ಗೆ ಪೊಲೀಸರಿಗೆ ನಿಷ್ಪಕ್ಷಪಾತ ತನಿಖೆಗೆ ಆದೇಶ ನೀಡಿದ್ದೆನೆ. ಈ ಬಾರಿ ಶಾಂತಿಯುತ ಚುನಾವಣೆ ಮಾಡುತ್ತಿದ್ದೇವೆ. ನಾವು ಶಾಂತಿ ಪ್ರಿಯರು. ಕಾರ್ಯಕರ್ತರಿಗೆ ಶಾಂತಿಯಿಂದ ಇರಲು ಸೂಚಿಸಿದ್ದೇವೆ ಅಂದ್ರು. ಇದನ್ನೂ ಓದಿ: Exclusive: ಬೈ ಎಲೆಕ್ಷನ್ ವೇಳೆಯಲ್ಲೇ ಕಾಂಗ್ರೆಸ್ ಅಧ್ಯಕ್ಷನ ಮನೆ ಮೇಲೆ ಅಟ್ಯಾಕ್

    ಬಿಜೆಪಿಯವರಿಗೆ ಸೋಲ್ತೀವಿ ಅನ್ನೋ ಭಯ ಇದೆ. ಆ ಕಾರಣಕ್ಕೆ ಗಲಾಟೆ ಮಾಡಿದ್ದಾರೆ. ಈಗಾಗಲೇ ಹರ್ಷದ್ ಅವರ ಮನೆ ಮೇಲೆ ಬಿಜೆಪಿಯವರು ದಾಳಿ ಮಾಡಿದ್ದಾರೆ. ಬ್ಯುಸಿನೆಸ್ ಏನೇ ಇದ್ರೂ ಚುನಾವಣೆ ಸಮಯದಲ್ಲಿ ಇದು ಸರಿಯಲ್ಲ. ಎಲ್ಲಾ ಆಯಾಮದಲ್ಲಿ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚಿಸಿದ್ದೇನೆ. ಬಿಜೆಪಿಯವರು ಹತಾಶರಾಗಿ ಈ ದಾಳಿ ಮಾಡಿದ್ದಾರೆ ಅಂತ ಕಿಡಿಕಾರಿದ್ರು.

    ಬಳ್ಳಾರಿಯಲ್ಲಿ ಈ ಹಿಂದೆ ಶಾಂತವಾಗಿ ಚುನಾವಣೆ ನಡೆದಿದೆ. ಯಾವುದೇ ಅಹಿತಕರ ಘಟನೆಗಳು ನಡೆಯೋಕೆ ಅವಕಾಶ ಕೊಟ್ಟಿಲ್ಲ. ಈ ಸರಕಾರ, ಹಿಂದಿನ ಸರಕಾರ ಬೀಗಿ ಬಂದೋಬಸ್ತ್ ಮಾಡಿದೆ. ಮೈನಾರಿಟಿ ಸೀಟ್ ಹೆಚ್ಚು ಬಂದಿದೆ ಅಂತ ಅವರು ಹೇಳಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv