Tag: congress office

  • ಯಾದಗಿರಿ | ಪತ್ನಿಗೆ ಅಧ್ಯಕ್ಷ ಸ್ಥಾನ `ಕೈ’ ತಪ್ಪಿದಕ್ಕೆ ಕಚೇರಿಗೆ ಬೆಂಕಿಯಿಟ್ಟ ಪತಿ – ರೌಡಿಶೀಟರ್ ಸೇರಿ ಇಬ್ಬರು ಅರೆಸ್ಟ್

    ಯಾದಗಿರಿ | ಪತ್ನಿಗೆ ಅಧ್ಯಕ್ಷ ಸ್ಥಾನ `ಕೈ’ ತಪ್ಪಿದಕ್ಕೆ ಕಚೇರಿಗೆ ಬೆಂಕಿಯಿಟ್ಟ ಪತಿ – ರೌಡಿಶೀಟರ್ ಸೇರಿ ಇಬ್ಬರು ಅರೆಸ್ಟ್

    ಯಾದಗಿರಿ: ಜಿಲ್ಲಾ ಕಾಂಗ್ರೆಸ್ ಕಚೇರಿಗೆ (Congress Office) ಬೆಂಕಿಯಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಯಾದಗಿರಿ ನಗರ (Yadagiri) ಪೊಲೀಸರು ರೌಡಿಶೀಟರ್ ಸೇರಿ ಇಬ್ಬರನ್ನು ಬಂಧಿಸಿದ್ದಾರೆ.

    ಬಂಧಿತ ಆರೋಪಿಯನ್ನು ರೌಡಿಶೀಟರ್ ಬಾಬುಗೌಡ ಅಗತೀರ್ಥ ಹಾಗೂ ಜಿಲ್ಲಾ ಮಹಿಳಾ ಘಟಕದ ಮಾಜಿ ಅಧ್ಯಕ್ಷೆಯ ಪತಿ ಶಂಕರ್ ಗೂಳಿ ಎಂದು ಗುರುತಿಸಲಾಗಿದ್ದು, ಆಂಧ್ರಪ್ರದೇಶದ ವಿಜಯವಾಡನಲ್ಲಿ ಬಂಧಿಸಲಾಗಿದೆ.ಇದನ್ನೂ ಓದಿ: ಪುಟಿನ್ ಹೆಲಿಕಾಪ್ಟರ್ ಗುರಿಯಾಗಿಸಿ ಉಕ್ರೇನ್ ಡ್ರೋನ್ ದಾಳಿ – ರಷ್ಯಾದ ಕಮಾಂಡರ್‌ಗೆ ಗಾಯ

    ಆರೋಪಿ ರೌಡಿಶೀಟರ್ ಬಾಬುಗೌಡ ಅಗತೀರ್ಥ ಯಾದಗಿರಿ ಜಿಲ್ಲಾ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಮಂಜುಳಾ ಗೂಳಿಯ ಬೆಂಬಲಿಗನಾಗಿದ್ದ. ಮಂಜುಳಾ ಗೂಳಿ ಅವರಿಗೆ ಈ ಬಾರಿ ಅಧ್ಯಕ್ಷ ಸ್ಥಾನ ಕೈ ತಪ್ಪಿ ಹೋಗಿತ್ತು. ಹೀಗಾಗಿ ಇದೇ ಸಿಟ್ಟಿನಲ್ಲಿ ಮಂಜುಳಾ ಗೂಳಿ ಪತಿ ಶಂಕರ್ ಗೂಳಿ ಹಾಗೂ ರೌಡಿಶೀಟರ್ ಸೇರಿಕೊಂಡು ಮೇ 24ರಂದು ರಾತ್ರಿ 1 ಗಂಟೆ ಸುಮಾರಿಗೆ ಸ್ಕೂಟಿಯಲ್ಲಿ ಬಂದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು.

    ಬೆಂಕಿಯಿಟ್ಟ ಬಳಿಕ ತಲೆಮರೆಸಿಕೊಂಡು, ಆಂಧ್ರಪ್ರದೇಶದ ವಿಜಯವಾಡದಲ್ಲಿ ತನ್ನ ಗೆಳೆಯನ ಮನೆಯಲ್ಲಿ ಅಡಗಿ ಕುಳಿತಿದ್ದ ಆರೋಪಿ ರೌಡಿಶೀಟರ್‌ನನ್ನು ಯಾದಗಿರಿ ನಗರ ಪೊಲೀಸರು ಬಂಧಿಸಿದ್ದಾರೆ. ಇನ್ನೂ ಈಗಾಗಲೇ ಇನ್ನೋರ್ವ ಆರೋಪಿ ಶಂಕರ್‌ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

    ಘಟನೆ ಏನು?
    ಯಾದಗಿರಿ ನಗರದ ಕನಕ ವೃತ್ತದ ಬಳಿಯಿರುವ ಕಾಂಗ್ರೆಸ್ ಕಚೇರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ಪರಿಣಾಮ ಕಚೇರಿಯಲ್ಲಿದ್ದ ಸೋಪಾ, ಎಸಿ ಎಲ್ಲವೂ ಸುಟ್ಟು ಭಸ್ಮವಾಗಿದ್ದವು. ಕಚೇರಿಗೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ, ಡಾಗ್ ಸ್ಕ್ವಾಡ್, ಬೆರಳಚ್ಚು ತಜ್ಞರು ಸೇರಿ ಪರಿಶೀಲನೆ ನಡೆಸಿದ್ದರು.ಇದನ್ನೂ ಓದಿ: ಸರ್ಕಾರದ ಮೇಲೆ ಸುಳ್ಳು ಆರೋಪ – ಅದಕ್ಕೆ ಬಿಜೆಪಿ ವಿರುದ್ಧ ಮಾನನಷ್ಟ ಮೊಕದ್ದಮೆ ಕೇಸ್: ಹೆಚ್.ಕೆ ಪಾಟೀಲ್

  • ಯಾದಗಿರಿ ಕಾಂಗ್ರೆಸ್ ಕಚೇರಿಗೆ ಬೆಂಕಿಯಿಟ್ಟ ಕಿಡಿಗೇಡಿಗಳು – ಸೋಫಾ, ಎಸಿ ಎಲ್ಲವೂ ಭಸ್ಮ

    ಯಾದಗಿರಿ ಕಾಂಗ್ರೆಸ್ ಕಚೇರಿಗೆ ಬೆಂಕಿಯಿಟ್ಟ ಕಿಡಿಗೇಡಿಗಳು – ಸೋಫಾ, ಎಸಿ ಎಲ್ಲವೂ ಭಸ್ಮ

    ಯಾದಗಿರಿ: ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಕಿಡಿಗೇಡಿಗಳು ಬೆಂಕಿಯಿಟ್ಟಿದ್ದು, ಕಚೇರಿಯಲ್ಲಿದ್ದ ಸೋಫಾ, ಎಸಿ ಎಲ್ಲವೂ ಸುಟ್ಟು ಭಸ್ಮವಾಗಿದೆ.ಇದನ್ನೂ ಓದಿ: ಚಾ.ನಗರ| ಈ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ, ಜೂಜಾಟವಾಡಿದ್ರೆ 50,000 ದಂಡ – ಮಾಹಿತಿ ಕೊಟ್ಟವರಿಗೆ 10,000 ಬಹುಮಾನ

    ಯಾದಗಿರಿ ನಗರದ ಕನಕ ವೃತ್ತದ ಬಳಿಯಿರುವ ಕಾಂಗ್ರೆಸ್ ಕಚೇರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಪರಿಣಾಮ ಕಚೇರಿಯಲ್ಲಿದ್ದ ಸೋಫಾ, ಎಸಿ ಎಲ್ಲವೂ ಸುಟ್ಟು ಭಸ್ಮವಾಗಿದೆ.

    ಕಚೇರಿಗೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ, ಡಾಗ್ ಸ್ಕ್ವಾಡ್, ಬೆರಳಚ್ಚು ತಜ್ಞರು ಸೇರಿ ಪರಿಶೀಲನೆ ನಡೆಸಿದ್ದಾರೆ. ಇನ್ನೂ ಬೆಂಕಿ ಹಚ್ಚಲು ಬಳಿಸಿದ್ದ ಪೆಟ್ರೋಲ್ ಕ್ಯಾನ್ ಅಲ್ಲೇ ಬಿಸಾಕಿ ಹೋಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.ಇದನ್ನೂ ಓದಿ: ಆಲಿಯಾ ಭಟ್‌ ಮತ್ತೆ ಪ್ರೆಗ್ನೆಂಟ್..? ವೈರಲ್‌ ಆಯ್ತು ವಿಡಿಯೋ..!

  • ವಿ ಆರ್ ನಾಟ್ ಎ ಸೆಕೆಂಡ್ ಕ್ಲಾಸ್ ಸಿಟಿಜನ್ಸ್: ಎಂ.ಬಿ.ಪಾಟೀಲ್

    ವಿ ಆರ್ ನಾಟ್ ಎ ಸೆಕೆಂಡ್ ಕ್ಲಾಸ್ ಸಿಟಿಜನ್ಸ್: ಎಂ.ಬಿ.ಪಾಟೀಲ್

    ಬೆಳಗಾವಿ: ಇಬ್ಬರ ಕದನದಲ್ಲಿ ನಾನು ಯಾಕೆ ಬರಲಿ. ನಮಗೂ ಸಾಮರ್ಥ್ಯ ಇದೆ. ನಾವು ಬರಬೇಕು ಅಂದರೆ ನೇರವಾಗಿಯೇ ಬರುತ್ತೇವೆ. ವಿ ಆರ್ ನಾಟ್ ಎ ಸೆಕೆಂಡ್ ಕ್ಲಾಸ್ ಸಿಟಿಜನ್ಸ್ ಎಂದು ತಾನು ಸಿಎಂ ಹುದ್ದೆಗೆ ಸಮರ್ಥ ಅಭ್ಯರ್ಥಿ ಎಂದು ಪರೋಕ್ಷವಾಗಿ ಎಂ.ಬಿ.ಪಾಟೀಲ್ ಟಾಂಗ್ ನೀಡಿದ್ದಾರೆ.

    ನಗರದ ಕಾಂಗ್ರೆಸ್ ಕಚೇರಿಯಲ್ಲಿ ಎಂ.ಬಿ. ಪಾಟೀಲ್ ಅವರು ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಸಿದ್ದರಾಮಯ್ಯ, ಡಿಕೆಶಿ ಇಬ್ಬರ ಕದನದಲ್ಲಿ ಎಂ.ಬಿ.ಪಾಟೀಲ್‍ಗೆ ಚಾನ್ಸ್ ಬರಬಹುದಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇಬ್ಬರ ಕದನ ನನಗೆ ಯಾಕಪ್ಪಾ? ನಮಗೂ ಸಾಮರ್ಥ್ಯ ಇದೆ. ಯಾವಾಗ ಬೇಕು. ಆವಾಗ ನೇರವಾಗಿಯೇ ಬರುತ್ತೇನೆ. ಎಂ.ಬಿ.ಪಾಟೀಲ್ ಇಬ್ಬರ ಕದನದಾಗ ಬರುವಂತದ್ದು ಬೇಕಾಗಿಲ್ಲ. ನಾವು ಬರಬೇಕು ಅಂದರೆ ನೇರವಾಗಿಯೇ ಬರುತ್ತೇವೆ. ವಿ ಆರ್ ನಾಟ್ ಎ ಸೆಕೆಂಡ್ ಕ್ಲಾಸ್ ಸಿಟಿಜನ್ಸ್ ಎಂದು ಹೇಳಿದ್ದಾರೆ.

    ಸಿಎಂ ಅಭ್ಯರ್ಥಿ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿರುವ ಗೊಂದಲ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಸರ್ವೇ ಸಾಮಾನ್ಯ ಪದ್ಧತಿ ಇದೆ. ಚುನಾವಣೆ ಬಳಿಕ ಶಾಸಕರ ಅಭಿಪ್ರಾಯ ಪಡೆದು ಹೈಕಮಾಂಡ್ ನಿರ್ಣಯ ಮಾಡುತ್ತದೆ. ಕಾಂಗ್ರೆಸ್ ಪಕ್ಷ ಒಂದು ವೇಳೆ ಬಯಸಿದರೆ, ಪಂಜಾಬ್ ರೀತಿ ಯಾರನ್ನು ಪ್ರಾಜೆಕ್ಟ್ ಮಾಡಿದರೆ, ಅವರೂ ಅದನ್ನು ಡಿಕ್ಲೇರ್ ಮಾಡುತ್ತಾರೆ. ಹೈಕಮಾಂಡ್‍ಗೆ ಕೇಳುವ ಪ್ರಶ್ನೆಯನ್ನು ನನ್ನನ್ನು ಕೇಳಿದರೆ ಹೇಗೆ? ಹೈಕಮಾಂಡ್ ಆ ನಿರ್ಣಯ ತೆಗೆದುಕೊಳ್ಳಬಹುದು. ತಗೆದುಕೊಳ್ಳದೇ ಇರಬಹುದು ಎಂದಿದ್ದಾರೆ. ಇದನ್ನೂ ಓದಿ: 100 ದಿನ ಪೂರೈಸಿದ ‘ಕೆಜಿಎಫ್ 2’ ಸಿನಿಮಾ: ಯಶ್ ಹೊಸ ಸಿನಿಮಾ ಅನೌನ್ಸ್ ಆಗಲೇ ಇಲ್ಲ

    ಉತ್ತರ ಕರ್ನಾಟಕದಲ್ಲಿ ಎಂ.ಬಿ.ಪಾಟೀಲ್, ವಿನಯ್ ಕುಲಕರ್ಣಿ ಮನಸ್ಸು ಮಾಡಿದರೆ, ಲಿಂಗಾಯತ ಸಿಎಂ ಆಗಬಹುದು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾರೂ ಕೂಡ ಮೂಕ ಪ್ರೇಕ್ಷಕರಲ್ಲ. ಒಕ್ಕಲಿಗ ಇರಬಹುದು, ಲಿಂಗಾಯತ ಸಮುದಾಯ ಇರಬಹುದು. ಮುಸಲ್ಮಾನರು ಏಕೆ ಸಿಎಂ ಆಗಬಾರದು, ದಲಿತರು ಏಕೆ ಆಗಬಾರದು ಎಂದು ಮರು ಪ್ರಶ್ನಿಸಿದರು. ಇದನ್ನೂ ಓದಿ: ಈಶ್ವರಪ್ಪಗೆ B-ರಿಪೋರ್ಟ್ ಹಾಕ್ತಾರೆ ಅಂತಾ ನನಗೆ ಗೊತ್ತಿತ್ತು: ಸಿದ್ದರಾಮಯ್ಯ

    ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿಯಿಂದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿಚಾರಣೆ ಖಂಡಿಸಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ ನಡೆಸಲಾಯಿತು. ಬೆಳಗಾವಿ ಕಾಂಗ್ರೆಸ್ ಭವನದಿಂದ ಡಿಸಿ ಕಚೇರಿವರೆಗೆ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್ ನೇತೃತ್ವದಲ್ಲಿ ಕಾಂಗ್ರೆಸ್ ಪ್ರತಿಭಟನಾ ರ್‍ಯಾಲಿ ನಡೆಸಲಾಯಿತು. ಪ್ರತಿಭಟನೆಯಲ್ಲಿ ಮಾಜಿ ಸಚಿವರಾದ ವಿನಯ್ ಕುಲಕರ್ಣಿ, ಆರ್.ಬಿ ತಿಮ್ಮಾಪುರ, ಶಾಸಕಿ ಅಂಜಲಿ ನಿಂಬಾಳ್ಕರ್, ಮಾಜಿ ಶಾಸಕ ಫಿರೋಜ್ ಸೇಠ್ ಸೇರಿದಂತೆ ಕೈನಾಯಕರು ಭಾಗಿಯಾಗಿದ್ದರು. ಈ ವೇಳೆ ಬಿಜೆಪಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಬೀಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • ಮೈಸೂರಿನಲ್ಲಿ ಕಾನೂನು ಉಲ್ಲಂಘಿಸಿದ ಕಾಂಗ್ರೆಸ್..!

    ಮೈಸೂರಿನಲ್ಲಿ ಕಾನೂನು ಉಲ್ಲಂಘಿಸಿದ ಕಾಂಗ್ರೆಸ್..!

    ಮೈಸೂರು: ಫ್ಲೆಕ್ಸ್ ಮುಕ್ತ ನಗರಿ ಎಂದು ಕರೆಯಲ್ಪಡುವ ಮೈಸೂರಿನಲ್ಲಿ ಕಾಂಗ್ರೆಸ್ ಕಚೇರಿಯ ಸುತ್ತಮುತ್ತ ನಾಯಕರ ಫ್ಲೆಕ್ಸ್ ಗಳು ರಾರಾಜಿಸುತ್ತಿವೆ. ಈ ಮೂಲಕ ರಸ್ತೆ ಬದಿಗಳಲ್ಲಿ ಫ್ಲೆಕ್ಸ್ ಹಾಕಬಾರದು ಎಂಬ ಕಾನೂನನ್ನು ಕಾಂಗ್ರೆಸ್ ಉಲ್ಲಂಘಿಸಿದೆ.

    ಇದರಿಂದ ಕಾನೂನು ಸಾಮಾನ್ಯ ಪ್ರಜೆಗಳಿಗೆ ಮಾತ್ರ ಅನ್ವಯ ಆಗುತ್ತಾ, ರಾಜಕೀಯ ನಾಯಕರಿಗೆ ಅದು ಅನ್ವಯವಾಗಲ್ವ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಏಕೆಂದರೆ ಮೈತ್ರಿ ಸರಕಾರದ ಭಾಗವಾಗಿರೋ ಕಾಂಗ್ರೆಸ್ ಫ್ಲೆಕ್ಸ್ ಮುಕ್ತ ನಗರಿಯೆಂಬ ಕಾನೂನು ತನಗೆ ಅನ್ವಯವಾಗಲ್ಲ ಅನ್ನೋ ರೀತಿ ನಡೆದುಕೊಂಡಿದೆ.

    ಜಿಲ್ಲೆಯ ರೈಲ್ವೆ ನಿಲ್ದಾಣದ ಬಳಿ ಇರುವ ಕಾಂಗ್ರೆಸ್ ಕಚೇರಿಯ ಸುತ್ತಮುತ್ತ ಕಾಂಗ್ರೆಸ್ ನಾಯಕರ ಫ್ಲೆಕ್ಸ್ ಗಳು ರಾರಾಜಿಸುತ್ತಿವೆ. ಈ ಮೂಲಕ ಫ್ಲೆಕ್ಸ್ ಮುಕ್ತ ನಗರ ಎಂಬ ಕಾನೂನಿಗೆ ಕಾಂಗ್ರೆಸ್ ಕಿಂಚಿತ್ತು ಕಿಮ್ಮತ್ತು ಕೊಟ್ಟಿಲ್ಲ ಎಂದಂತೆ ಕಾಣಿಸುತ್ತಿದೆ. ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಅವರ ಸನ್ಮಾನ ಕಾರ್ಯಕ್ರಮದ ನಿಮಿತ್ತ ರಾಶಿ ರಾಶಿ ಫ್ಲೆಕ್ಸ್ ಗಳನ್ನು ಮೈಸೂರಿನ ದಾಸಪ್ಪ ವೃತ್ತದಿಂದ ರೈಲ್ವೆ ನಿಲ್ದಾಣ ವೃತ್ತದವರೆಗೂ ಅಳವಡಿಸಲಾಗಿದೆ. ಇದರಿಂದ ರಸ್ತೆ ಬದಿಗಳಲ್ಲಿ ಫ್ಲೆಕ್ಸ್ ಹಾಕಬಾರದು ಎಂಬ ಕಾನೂನನ್ನು ಕಾಂಗ್ರೆಸ್ ಮರೆತಿದೆಯಾ ಅಂತ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಇಷ್ಟೆಲ್ಲ ಆದರೂ ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ಮಾತ್ರ ಫ್ಲೆಕ್ಸ್ ಗಳನ್ನು ಕಂಡು ಕಾಣದಂತೆ ವರ್ತಿಸುತ್ತಿದ್ದಾರೆ. ಈ ಮೂಲಕ ಆಳುವವರಿಗೊಂದು ನೀತಿ, ಜನ ಸಾಮಾನ್ಯರಿಗೊಂದು ನೀತಿಯನ್ನು ಪಾಲಿಕೆ ಅಧಿಕಾರಿಗಳು ಅನುಸರಿಸುತ್ತಿದ್ದಾರೆ ಅಂತ ಸ್ಥಳೀಯರು ಕಿಡಿಕಾರಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • `ಕೈ’ ಹಿಡಿದ ಆನಂದ್ ಸಿಂಗ್ ಮತ್ತು ಟೀಂ- ಮತ್ತಷ್ಟು ಬಿಜೆಪಿ ಶಾಸಕರು ಕಾಂಗ್ರೆಸ್ಸಿಗಂತೆ!

    `ಕೈ’ ಹಿಡಿದ ಆನಂದ್ ಸಿಂಗ್ ಮತ್ತು ಟೀಂ- ಮತ್ತಷ್ಟು ಬಿಜೆಪಿ ಶಾಸಕರು ಕಾಂಗ್ರೆಸ್ಸಿಗಂತೆ!

    ಬೆಂಗಳೂರು: ಬಿಜೆಪಿ ತೊರೆದಿದ್ದ ಮಾಜಿ ಶಾಸಕ ಆನಂದ್ ಸಿಂಗ್ ಅವರು ಇಂದು ನಗರದ ಕೆಪಿಸಿಸಿ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ, ಅಧ್ಯಕ್ಷ ಪರಮೇಶ್ವರ್ ಸಮ್ಮುಖದಲ್ಲಿ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ.

    ಕಾಂಗ್ರೆಸ್ ಬಾವುಟವನ್ನು ಆನಂದ್ ಸಿಂಗ್ ಅವರಿಗೆ ನೀಡುವ ಮೂಲಕ ಪರಮೇಶ್ವರ್ ಅವರು ತಮ್ಮ ಪಕ್ಷಕ್ಕೆ ಬರಮಾಡಿಕೊಂಡರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಂಗ್, ನಾನು ಎರಡು ಬಾರಿ ಬಿಜೆಪಿಯಿಂದ ಶಾಸಕನಾಗಿ ಆಯ್ಕೆಯಾಗಿದ್ದೆ. ನಾನು ಸೆಕ್ಯೂಲರ್ ಮೆಂಟಾಲಿಟಿಯವನು. ನನ್ನದು ಸರ್ವರಿಗೂ ಸಮಪಾಲು ಸಮಬಾಳು ತತ್ವ. ಬಳ್ಳಾರಿಯಲ್ಲಿ ನಾವು 9ಕ್ಕೆ 9 ಸ್ಥಾನಗಳನ್ನು ಗೆಲ್ಲುತ್ತೇವೆ. ಮತ್ತೊಮ್ಮೆ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತೆ ಅಂತ ಹೇಳಿದ್ರು.

    ರಾಹುಲ್ ಗಾಂಧಿ 10 ರಂದು ಹೊಸಪೇಟೆಗೆ ಬರುತ್ತಾರೆ. ಯಾರೂ ಕಂಡರಿಯದಂತೆ ಆ ಕಾರ್ಯಕ್ರಮ ಮಾಡುತ್ತೇವೆ. ಮುಂದೆ ಕೂಡ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ. ಮತ್ತಷ್ಟು ಬಿಜೆಪಿ ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ ಅಂದ್ರು.

    ಆನಂದ್ ಸಿಂಗ್ ಸೇರ್ಪಡೆಗೆ ರಾಹುಲ್ ಗಾಂಧಿ ಸಮ್ಮತಿ ನೀಡಿದ್ದಾರೆ. ಹೊಸಪೇಟೆ ಕ್ಷೇತ್ರದ ಆನಂದ್ ಸಿಂಗ್ ಕ್ರಿಯಾಶೀಲ ಶಾಸಕರಾಗಿದ್ದಾರೆ. ಅನೇಕ ಜನಪರ ಕೆಲಸ ಮಾಡಿದ್ದಾರೆ. ಅವರೊಬ್ಬ ಪ್ರಭಾವಿ ನಾಯಕರಾಗಿ ಹೊರಹೊಮ್ಮಿದ್ದಾರೆ. ಅವರನ್ನು ಸಂತೋಷದಿಂದ ಕಾಂಗ್ರೆಸ್ ಪಕ್ಷಕ್ಕೆ ಬರ ಮಾಡಿಕೊಳ್ಳುತ್ತಿದ್ದೇವೆ ಅಂತ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಹೇಳಿದ್ದಾರೆ.

    ಈಗಾಗಲೇ ಹಲವು ಬಿಜೆಪಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ಆನಂದ್ ಸಿಂಗ್ ರಂತೆ ಅವರೂ ಪಕ್ಷಕ್ಕೆ ಬರಲಿದ್ದಾರೆ. ವಿಜಯನಗರದ ಹೊಸ ಪೀಳಿಗೆ ಕಾಂಗ್ರೆಸ್‍ಗೆ ಕಾಲಿಟ್ಟಿದೆ. ವಿಜಯನಗರದ ಸೈನ್ಯ ಈಗ ಕಾಂಗ್ರೆಸ್ ಪರ ಪ್ರಚಾರ ಮಾಡಲಿದೆ. ನೀವು ಒಗ್ಗಟ್ಟಿನ ಪ್ರದರ್ಶನ ಮಾಡಬೇಕು. ನಿಮ್ಮ ಶಕ್ತಿ ಪ್ರದರ್ಶನವನ್ನ ರಾಹುಲ್ ಕಾರ್ಯಕ್ರಮದಲ್ಲಿ ತೋರಿಸಿ ಅಂತ ಸಚಿವ ಡಿ ಕೆ ಶಿವಕುಮಾರ್ ಹೇಳಿದರು.

    ಆನಂದ್ ಸಿಂಗ್ ಜೊತೆ ಅವರ ಅನೇಕ ಬೆಂಬಲಿಗರು ಕೂಡ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿ.ಪರಮೇಶ್ವರ್, ಡಿ.ಕೆ.ಶಿವಕುಮಾರ್, ದಿನೇಶ್ ಗುಂಡೂರಾವ್, ಎಸ್.ಆರ್.ಪಾಟೀಲ್ ಸಂತೋಷ್ ಲಾಡ್, ಕೆ.ಸಿ.ಕೊಂಡಯ್ಯ ಉಪಸ್ಥಿತರಿದ್ದರು.

    ಬಿಜೆಪಿ ತೊರೆಯಲು ಕಾರಣವೇನು?: ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ಹೊಸಪೇಟೆಯಲ್ಲಿ ನಡೆದ ಸರ್ಕಾರದ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಆನಂದ್ ಸಿಂಗ್ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಮಾತ್ರವಲ್ಲದೇ ಅದನ್ನು ಬಹಿರಂಗವಾಗಿ ಸಮರ್ಥನೆ ಕೂಡ ಮಾಡಿಕೊಂಡಿದ್ದರು. ಇದು ಬಿಜೆಪಿಯವರನ್ನು ಮುಜುಗರಕ್ಕೀಡು ಮಾಡಿತ್ತು. ಹೀಗಾಗಿ ಈ ಕುರಿತು 7 ದಿನಗಳಲ್ಲಿ ವಿವರಣೆ ನೀಡುವಂತೆ ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಶಂಕರಪ್ಪ ಅವರು ಶೋಕಾಸ್ ನೊಟೀಸ್ ಜಾರಿ ಮಾಡಿದ್ದರು. ಇದರಿಂದ ಬೇಸರಗೊಂಡ ಆನಂದ್ ಸಿಂಗ್ ಬಿಜೆಪಿ ತೊರೆಯಲು ನಿರ್ಧರಿಸಿದ್ದು, ಇಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

    https://www.youtube.com/watch?v=UM7pzm4jbzU

    https://www.youtube.com/watch?v=oYObRLHynu4