Tag: Congress New Candidates

  • ಕಾಂಗ್ರೆಸ್‌ ಮೊದಲ ಪಟ್ಟಿಯಲ್ಲಿ ಹೊಸ ಮುಖಗಳು

    ಕಾಂಗ್ರೆಸ್‌ ಮೊದಲ ಪಟ್ಟಿಯಲ್ಲಿ ಹೊಸ ಮುಖಗಳು

    ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಮೊದಲ ಅಭ್ಯರ್ಥಿಗಳ ಪಟ್ಟಿಯನ್ನು ಶನಿವಾರ ಪ್ರಕಟಿಸಿದೆ. ಮೊದಲ ಪಟ್ಟಿಯಲ್ಲೇ 12 ಹೊಸ ಅಭ್ಯರ್ಥಿಗಳಿಗೆ ಟಿಕೆಟ್‌ ಘೋಷಿಸಿದೆ.

    ಈ ಬಾರಿ ಹೊಸ ಮುಖಗಳಿಗೆ ಪ್ರಾಮುಖ್ಯತೆಯನ್ನು ಕಾಂಗ್ರೆಸ್‌ ನೀಡಿದೆ. ಪಾವಗಡ ಕ್ಷೇತ್ರದಲ್ಲಿ ಹಾಲಿ ಶಾಸಕರಿಗೆ ಟಿಕೆಟ್‌ ನೀಡಿಲ್ಲ. ಬದಲಿಗೆ ಪಾವಗಡ ಶಾಸಕ ವೆಂಕಟರಮಣಪ್ಪ ಬದಲಾಗಿ ಅವರ ಪುತ್ರ ಹೆಚ್‌.ವಿ.ವೆಂಕಟೇಶ್‌ಗೆ ಟಿಕೆಟ್‌ ನೀಡಲಾಗಿದೆ. ಇದನ್ನೂ ಓದಿ: Congress Candidate List- ಯಾವ್ಯಾವ ಸಮುದಾಯಕ್ಕೆ ಎಷ್ಟು ಟಿಕೆಟ್?

    ಯಾರ‍್ಯಾರು ಹೊಸ ಅಭ್ಯರ್ಥಿಗಳು?
    ಕುಡಚಿ – ಮಹೇಂದ್ರ ತಮ್ಮಣ್ಣನವರ್
    ಗುಂಡ್ಲುಪೇಟೆ – ಗಣೇಶ್ ಪ್ರಸಾದ್
    ಬೆಳ್ತಂಗಡಿ – ರಕ್ಷಿತ್ ಶಿವರಾಂ
    ಹೊಳೆನರಸೀಪುರ – ಶ್ರೇಯಸ್ ಪಟೇಲ್
    ಸುಳ್ಯ – ಕೃಷ್ಣಪ್ಪ
    ಕುಂದಾಪುರ – ದಿನೇಶ್ ಹೆಗ್ಡೆ
    ಪಾವಗಡ – ಹೆಚ್‌ವಿ ವೆಂಕಟೇಶ್
    ಮಲ್ಲೇಶ್ವರಂ – ಅನೂಪ್ ಅಯ್ಯಂಗಾರ್
    ನಂಜನಗೂಡು – ದರ್ಶನ್ ಧ್ರುವನಾರಾಯಣ್
    ಸಕಲೇಶಪುರ – ಮುರಳಿ ಮೋಹನ್
    ವಿರಾಜಪೇಟೆ – ಎ.ಎಸ್.ಪೊನ್ನಣ್ಣ
    ನೆಲಮಂಗಲ – ಶ್ರೀನಿವಾಸಯ್ಯ
    ರಾಣೆಬೆನ್ನೂರು – ಪ್ರಕಾಶ್ ಕೋಳಿವಾಡ