Tag: congress MLA

  • ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ್ ಪಾಟೀಲ್ ವಿರುದ್ಧ ದೂರು ದಾಖಲು

    ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ್ ಪಾಟೀಲ್ ವಿರುದ್ಧ ದೂರು ದಾಖಲು

    ಬೀದರ್: ಹುಮನಾಬಾದ್‍ನ ಹಾಲಿ ಶಾಸಕ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ್ ಪಾಟೀಲ್ ವಿರುದ್ಧ ದೂರು ದಾಖಲಾಗಿದೆ.

    ಜೀವ ಬೆದರಿಕೆ ಹಾಗೂ ಅವಾಚ್ಯ ಶಬ್ಧಗಳಿಂದ ನಿಂದನೆ ಆರೋಪದಡಿ ಎಫ್‍ಐಆರ್ ದಾಖಲಾಗಿದ್ದು, ಬಿಜೆಪಿ ಕಾರ್ಯಕರ್ತ ಶ್ರೀನಿವಾಸರೆಡ್ಡಿ, ಪಾಟೀಲ್ ವಿರುದ್ಧ ದೂರು ನೀಡಿದ್ದಾರೆ.

    ಇದೇ ತಿಂಗಳು 12 ರಂದು ಮತದಾನ ವೇಳೆ ಮತಗಟ್ಟೆ-94 ರಲ್ಲಿ ಶ್ರೀನಿವಾಸರೆಡ್ಡಿ ಬಿಜೆಪಿ ಏಜೆಂಟಾಗಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಅಲ್ಲಿಗೆ ಬಂದ ಪಾಟೀಲ್, ಶ್ರೀನಿವಾಸ ರೆಡ್ಡಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

    ಈ ಘಟನೆ ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಹನುಮಂತವಾಡಿಯಲ್ಲಿ ನಡೆದಿದ್ದು, ಸದ್ಯ ಪ್ರಕರಣ ಸಂಬಂಧ ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ನಲಪಾಡ್ ಬಳಿಕ ಮತ್ತೊಬ್ಬ ಕೈ ಶಾಸಕರ ಪುತ್ರನ ದರ್ಪ

    ನಲಪಾಡ್ ಬಳಿಕ ಮತ್ತೊಬ್ಬ ಕೈ ಶಾಸಕರ ಪುತ್ರನ ದರ್ಪ

    ರಾಯಚೂರು: ನಲಪಾಡ್ ಪ್ರಕರಣ ಆಯ್ತು, ಇದೀಗ ರಾಯಚೂರಿನಲ್ಲಿ ಮತ್ತೊಬ್ಬ ಕಾಂಗ್ರೆಸ್ ಶಾಸಕರ ಪುತ್ರ ಯುವಕನೊಬ್ಬನ ಮೇಲೆ ಮನಬಂದಂತೆ ಹಲ್ಲೆ ಮಾಡಿ ದರ್ಪ ಮೆರೆದಿದ್ದಾನೆ.

    ಮಸ್ಕಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರತಾಪ್ ಗೌಡ ಪಾಟೀಲ್ ಎದುರಲ್ಲೆ ಅವರ ಪುತ್ರ ಪ್ರಸನ್ನ ಪಾಟೀಲ್ ಹಾಗೂ ಶಾಸಕರ ಪಿಎ ವೀರೇಶ್ ಯುವಕನೊಬ್ಬನನ್ನ ಥಳಿಸಿದ್ದಾರೆ.

    ವೃದ್ಧರೊಬ್ಬರು ಶಾಸಕರಿಗೆ ಬೈದಿರುವ ವಿಡಿಯೋವನ್ನ ಆನಂದ್ ಎಂಬವನು ತನ್ನ ಸ್ನೇಹಿತರಿಗೆ ಹಾಗೂ ಇತರರಿಗೆ ಫಾರ್ವರ್ಡ್ ಮಾಡಿದ್ದ. ಇದರಿಂದ ಶಾಸಕರ ಸೂಚನೆ ಮೇರೆಗೆ ಕವಿತಾಳ ಠಾಣೆ ಪೊಲೀಸರು ಆನಂದನನ್ನ ವಶಕ್ಕೆ ಪಡೆದು ಲಾಠಿ ರುಚಿ ತೋರಿಸಿದ್ದಾರೆ. ಬಳಿಕ ಪೊಲೀಸರೇ ತಡರಾತ್ರಿಯಲ್ಲಿ ಶಾಸಕರ ಮನೆಗೆ ಆನಂದನನ್ನ ಕರೆದ್ಯೊಯ್ದಿದ್ದಾರೆ.

    ವಿಡಿಯೋ ಫಾರ್ವರ್ಡ್ ಮಾಡಿದ್ದಕ್ಕೆ ಅವಾಚ್ಯವಾಗಿ ಬೈದು ಪ್ರಸನ್ನ ಪಾಟೀಲ್ ಹಾಗೂ ವೀರೇಶ್ ಮನಬಂದಂತೆ ಥಳಿಸಿದ್ದಾರೆ. ಒಂದು ಕಿವಿ ಕೇಳಿಸದಂತಾಗಿರುವ ಯುವಕ ಈಗ ಚೇತರಿಸಿಕೊಂಡಿದ್ದಾನೆ.

  • ತಾಕತ್ತಿದ್ದರೆ ಚುನಾವಣೆಗೆ ನಿಲ್ಲಲಿ- ಕರಿಂಜೆ ಸ್ವಾಮೀಜಿಗೆ ಏಕವಚನದಲ್ಲೇ ಸವಾಲೆಸೆದ ಶಾಸಕ ಅಭಯಚಂದ್ರ ಜೈನ್

    ತಾಕತ್ತಿದ್ದರೆ ಚುನಾವಣೆಗೆ ನಿಲ್ಲಲಿ- ಕರಿಂಜೆ ಸ್ವಾಮೀಜಿಗೆ ಏಕವಚನದಲ್ಲೇ ಸವಾಲೆಸೆದ ಶಾಸಕ ಅಭಯಚಂದ್ರ ಜೈನ್

    ಮಂಗಳೂರು: ಕಾಂಗ್ರೆಸ್ ಶಾಸಕ ಅಭಯಚಂದ್ರ ಜೈನ್ ಅವರು ಮೂಡಬಿದಿರೆಯ ಕರಿಂಜೆ ಮುಕ್ತಾನಂದ ಸ್ವಾಮೀಜಿ ಕುರಿತು ಪಕ್ಷದ ಕಾರ್ಯಕ್ರಮದಲ್ಲಿ ಏಕವಚನದಲ್ಲಿಯೇ ವಾಗ್ದಾಳಿ ಮಾಡಿದ್ದಾರೆ.

    ತುಳುವಿನಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಜೈನ್, ಅವಾ ಯಾರೋ ಒಬ್ಬ ಕರಿಂಜೆ ಸ್ವಾಮೀಜಿ ಭಾಷಣದಲ್ಲಿ ಹೇಳಿದನಂತೆ. ಒಬ್ಬ ರಾಕ್ಷಸ ಮುಖ್ಯಮಂತ್ರಿ ಇದ್ದಾನೆ. ಒಬ್ಬ ರಾಕ್ಷಸ ಎಂಎಲ್‍ಎ ಇದ್ದಾನೆ ಅಂತ. ನನಗೆ ಬೈಯಲಿ, ಅದು ಬಿಟ್ಟು ಮುಖ್ಯಮಂತ್ರಿಗೆ ಇನ್ನೊಮ್ಮೆ ಬೈದರೆ ಅವನು ಎಷ್ಟು ದೊಡ್ಡ ಸ್ವಾಮೀಜಿ ಆದರೂ ಬಿಡುವುದಿಲ್ಲ. ಅವನಿಗೆ ಕಪ್ಪು ಬಾವುಟ ಹಿಡಿಯುವಂತೆ ನಾನು ಮಾಡ್ತೇನೆ ಅಂತ ಹೇಳಿದ್ರು.

    ತಾಕತ್ತಿದ್ದರೆ ಕರಿಂಜೆ ಸ್ವಾಮೀಜಿ ಚುನಾವಣೆಗೆ ನಿಲ್ಲಲಿ. ಅವನು ಸರ್ಕಾರಿ ಜಾಗ ಕಬಳಿಸಿದ್ದಾನೆ. ಅದನ್ನು ತನಿಖೆ ಮಾಡಬೇಕು ಅಂತ ಮುಂದಿನ ದಿನಗಳಲ್ಲಿ ಹೋರಾಟ ಮಾಡುತ್ತೇವೆ ಅಂತ ಏಕವಚನದಲ್ಲಿ ನಿಂದಿಸಿ ಸವಾಲೆಸೆದಿದ್ದಾರೆ.

    ಕಾಂಗ್ರೆಸ್ ಹಾಗೂ ಮುಖ್ಯಮಂತ್ರಿಗೆ ಬೈದ್ರೆ ನಾವು ಬಿಡಲ್ಲ. ದೊಡ್ಡ ಮಟ್ಟದ ಹೋರಾಟವೇ ಮಾಡುತ್ತೇವೆ. ಕಾಂಗ್ರೆಸ್ ಪಕ್ಷ ಯಾರಿಗೂ ಅನ್ಯಾಯ ಮಾಡಿಲ್ಲ. ಬದಲಾಗಿ ಬಡವರ ಧ್ವನಿಯಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಕಾಂಗ್ರೆಸ್ ಪಕ್ಷದ ಒಗ್ಗಟ್ಟು ಬಹಳ ಮುಖ್ಯವಾಗಿದೆ. ಈಗಾಗಲೇ ಕಾಂಗ್ರೆಸ್ ವಿರುದ್ಧ ಹಲವಾರು ಪಿತೂರಿಗಳು ನಡೆದಿದ್ದು, ಇದ್ಯಾವುದನ್ನೂ ನಾವು ಕೇರ್ ಮಾಡಲ್ಲ. ಅವುಗಳನ್ನೆಲ್ಲಾ ಎದುರಿಸುವ ಕೆಲಸ ಮಾಡುತ್ತೇವೆ ಅಂದ್ರು.

    ಪ್ರತಾಪ್ ಚಂದ್ರ ಶೆಟ್ಟಿ ಅವರು ಹಿರಿಯ ಕಾಂಗ್ರೆಸ್ ಎಂಎಲ್‍ಎ ಹಾಗೂ ಎಂಎಲ್ ಸಿ ಆಗಿದ್ದರು. ಪ್ರಾಮಾಣಿಕ ವ್ಯಕ್ತಿಯಾಗಿರೋ ಅವರು ಇಂದಿಗೂ ಕುಂದಾಪುರದಲ್ಲಿ ಹೋರಾಟ ಮಾಡುತ್ತಿದ್ದಾರೆ. ಹೀಗಾಗಿ ಅವರೇ ವಿಧಾನಪರಿಷತ್ ಸದಸ್ಯರಾಗಬೇಕು ಅಂತ ಅವರು ಒತ್ತಾಯಿಸಿದರು.

    ಕರಿಂಜೆ ಶ್ರೀ ಇತ್ತೀಚೆಗಷ್ಟೆ ಕಾರ್ಯಕ್ರಮವೊಂದರಲ್ಲಿ ರಾಕ್ಷಸ ಸಿಎಂ ಮತ್ತು ರಾಕ್ಷಸ ಎಂಎಲ್‍ಎ ಎಂಬ ಹೇಳಿಕೆ ನೀಡಿದ್ದರು. ಒಟ್ಟಿನಲ್ಲಿ ಇದೀಗ ಹಿಂದೂ ಸ್ವಾಮೀಜಿ ಬಗ್ಗೆ ಶಾಸಕ ಅಭಯಚಂದ್ರ ಹೇಳಿಕೆ ನೀಡಿರುವುದರ ವಿರುದ್ಧ ಹಿಂದೂಪರ ಸಂಘಟನೆಗಳು ತೀವ್ರ ಅಕ್ಷೇಪ ವ್ಯಕ್ತಪಡಿಸಿದ್ದು, ಬೃಹತ್ ಪ್ರತಿಭಟನೆಗೆ ನಿರ್ಧಾರ ನಡೆಸಿವೆ.

  • ಈಗಲ್ ಟನ್ ನಲ್ಲಿದ್ದ ಕಾಂಗ್ರೆಸ್ ಶಾಸಕರು ಇಂದು ಶಿಫ್ಟ್?

    ಈಗಲ್ ಟನ್ ನಲ್ಲಿದ್ದ ಕಾಂಗ್ರೆಸ್ ಶಾಸಕರು ಇಂದು ಶಿಫ್ಟ್?

    ರಾಮನಗರ: ಇಲ್ಲಿನ ಬಿಡದಿ ಸಮೀಪದ ಈಗಲ್ ಟನ್ ನಲ್ಲಿ ವಾಸ್ತವ್ಯ ಹೂಡಿರುವ ಗುಜರಾತ್ ಕಾಂಗ್ರೆಸ್ ಶಾಸಕರು ಇಂದು ಪ್ರವಾಸಕ್ಕೆ ಹೊರಡುವ ಇಲ್ಲವೇ ಈಗಲ್ ಟನ್ ನಿಂದ ಬೇರೆಡೆ ಶಿಫ್ಟ್ ಆಗುವ ಲಕ್ಷಣಗಳು ದಟ್ಟವಾಗಿವೆ.

    ಬೆಳ್ಳಂಬೆಳಗ್ಗೆಯೇ ರೆಸಾರ್ಟ್ ಒಳಗೆ ಎರಡು ಐರಾವತ ಬಸ್‍ಗಳು ಪ್ರವೇಶಿಸಿವೆ. ಇದ್ರಿಂದ ಗುಜರಾತ್ ಶಾಸಕರು ರೆಸಾರ್ಟ್ ನಿಂದ ಹೊರ ಹೋಗಲಿದ್ದಾರೆ ಎನ್ನಲಾಗ್ತಿದೆ. ಶಾಸಕರೆಲ್ಲರೂ ಕೂಡಾ ಪ್ರವಾಸಕ್ಕೆ ಬೆಂಗಳೂರು ಅಥವಾ ಮಡಿಕೇರಿ ಕಡೆಗೆ ಹೋಗಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

    ಆದ್ರೆ ಬಸ್ ಗಳು ರೆಸಾರ್ಟ್ ಒಳಪ್ರವೇಶ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಈಗಲ್ ಟನ್ ರೆಸಾರ್ಟ್ ಭದ್ರತಾ ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸರು ಸಿನಿಮಾ ಚಿತ್ರಿಕರಣಕ್ಕೆ ಬಸ್ ಗಳು ಬಂದಿವೆ ಅಂತ ತಿಳಿಸುತ್ತಿದ್ದಾರೆ.

  • ಬೆಂಗ್ಳೂರಲ್ಲಿ ಹೈಟೆಕ್ ವೇಶ್ಯಾವಾಟಿಕೆ – ದಂಧೆಗೆ ಎಂಎಲ್‍ಎ ಮನೆಯೇ ಲ್ಯಾಂಡ್‍ಮಾರ್ಕ್

    ಬೆಂಗ್ಳೂರಲ್ಲಿ ಹೈಟೆಕ್ ವೇಶ್ಯಾವಾಟಿಕೆ – ದಂಧೆಗೆ ಎಂಎಲ್‍ಎ ಮನೆಯೇ ಲ್ಯಾಂಡ್‍ಮಾರ್ಕ್

    – ದಾಳಿ ವೇಳೆ ಇಬ್ಬರು ಯುವತಿಯರ ರಕ್ಷಣೆ

    ಬೆಂಗಳೂರು: ನಗರದಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆಗೆ ಎಂಎಲ್‍ಎ ಮನೆಯೇ ಲ್ಯಾಂಡ್ ಮಾರ್ಕ್ ಆಗಿರೋ ಪ್ರಕರಣವೊಂದು ಬೆಳಕಿಗೆ ಬಂದಿದೆ.

    ಹೌದು. ಆರೋಪಿಗಳು ಕಾಂಗ್ರೆಸ್ ಶಾಸಕ ಹ್ಯಾರಿಸ್ ಅವರ ಮನೆಯನ್ನೇ ದಂಧೆಗೆ ಲ್ಯಾಂಡ್ ಮಾರ್ಕ್ ಮಾಡಿಕೊಂಡಿದ್ದಾರೆ. ಗಿರಾಕಿಗಳನ್ನು ಎಂಎಲ್‍ಎ ಮನೆ ಬಳಿ ಬನ್ನಿ ಅಂತಾನೇ ದಂಧೆಗೆ ಕರೆಯುತ್ತಾರೆ. ಬಾಂಬೆ, ದೆಹಲಿ, ಫಾರಿನ್‍ನಿಂದಲೂ ಹುಡುಗಿಯರನ್ನು ಈ ದಂಧೆಗೆ ಕರೆತರುತ್ತಾರೆ.

    ಆರೋಪಿಗಳು ಆನ್‍ಲೈನ್ ಮೂಲಕ ಗಿರಾಕಿಗಳನ್ನು ಕ್ಯಾಚ್ ಹಾಕಿಕೊಂಡು ಮೊದಲು ಎಂಎಲ್‍ಎ ಮನೆ ಬಳಿ ಬರಲು ಹೇಳಿ ನಂತರ ಫೈವ್‍ಸ್ಟಾರ್ ಹೋಟೆಲ್‍ಗೆ ಕರೆದೊಯ್ಯುತ್ತಾರೆ. ಇತ್ತ ಎಂಎಲ್‍ಎ ಮನೆ ಅಡ್ರೆಸ್ ಕೊಡ್ತಿದ್ದ ಹಾಗೆ ಪಿಂಪ್‍ಗಳು ಆನ್‍ಲೈನ್‍ನಲ್ಲೇ ಹಣ ಪೀಕುತ್ತಾರೆ. ಹಣ ಹಾಕಿದ ನಂತರವಷ್ಟೇ ದಂಧೆಕೋರರು ಹೋಟೆಲ್‍ಗೆ ದಾರಿ ಹೇಳುತ್ತಾರೆ.

    ಸದ್ಯ ಅಶೋಕನಗರ ಪೊಲೀಸರು ಹೋಟೆಲ್ ಮೇಲೆ ದಾಳಿ ನಡೆಸಿದ್ದು, ಇಬ್ಬರು ಯುವತಿಯರನ್ನು ರಕ್ಷಣೆ ಮಾಡಿದ್ದಾರೆ. ಯುವತಿಯೊಬ್ಬಳ ಮೊಬೈಲ್‍ನಲ್ಲಿ ಚಿತ್ರರಂಗದ ತಾರೆಯರ ಫೋಟೋಗಳು ಪತ್ತೆಯಾಗಿದೆ. ಹೀಗಾಗಿ ಅವರೂ ಸೆಕ್ಸ್ ರಾಕೆಟ್‍ನಲ್ಲಿ ತೊಡಗಿದ್ದಾರಾ ಅಂತಾ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಮೊನೀಷ್ ಎಂಬ ಪಿಂಪ್‍ನಿಂದ ಈ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದೆ.

    ಸದ್ಯ ಈ ಸಂಬಂಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.