Tag: congress mekedatu padayatre

  • ನೋಟಿಸ್‍ಗೆ ಹೆದರಲ್ಲ, ಜನರ ಹಿತದೃಷ್ಟಿಯಿಂದ ಪಾದಯಾತ್ರೆ ರದ್ದು: ಸಿದ್ದರಾಮಯ್ಯ

    ನೋಟಿಸ್‍ಗೆ ಹೆದರಲ್ಲ, ಜನರ ಹಿತದೃಷ್ಟಿಯಿಂದ ಪಾದಯಾತ್ರೆ ರದ್ದು: ಸಿದ್ದರಾಮಯ್ಯ

    ರಾಮನಗರ: ಕೊರೊನಾ ಹೆಚ್ಚಳದಿಂದಾಗಿ ಜನರ ಹಿತದೃಷ್ಟಿಯಿಂದಾಗಿ ಮೇಕೆದಾಟು ಪಾದಯಾತ್ರೆಯನ್ನು ರದ್ದು ಮಾಡಿದ್ದೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದರು.

    ಪಕ್ಷದ ನಾಯಕರ ಜೊತೆ ಸಭೆ ನಡೆಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ತೀರ್ಮಾನದಂತೆ ಜ.9ರಂದು ಸಂಗಮದಿಂದ ಪ್ರಾರಂಭ ಆಯ್ತು. ನಮ್ಮ ಮುಖಂಡರು ಕಾರ್ಯಕರ್ತರು ಪಾದಯಾತ್ರೆ ಯಶಸ್ವಿಯಾಗಿ ಮಾಡಿದ್ದೇವೆ. ಇಂದಿನಿಂದ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಬೇಕಿತ್ತು. ಕೋವಿಡ್ ವೇಗವಾಗಿ ಹರಡುತ್ತಿದೆ. ಇದರಿಂದ ಮೊಟಕುಗೊಳಿಸಿದ್ದೇವೆ. ಕೊರೊನಾ ಸೋಂಕು ಕಡಿಮೆ ಆದಮೇಲೆ ಮತ್ತೇ ರಾಮನಗರದಿಂದಲೇ ಪಾದಯಾತ್ರೆ ಪ್ರಾರಂಭಿಸುತ್ತೇವೆ ಎಂದು ತಿಳಿಸಿದರು.

    ಮೇಕೆದಾಟು ಕುಡಿಯುವ ನೀರಿನ ಯೋಜನೆಗೆ ಒತ್ತಾಯ ಮಾಡಿ 4 ದಿನದಿಂದ ಪಾದಯಾತ್ರೆ ಹಮ್ಮಿಕೊಂಡಿದ್ದೆವು. ಎಲ್ಲರೂ ಉತ್ಸಾಹದಿಂದ ಭಾಗವಹಿಸಿ ಅಭೂತಪೂರ್ವ ಯಶಸ್ಸುಗಳಿಸಿದ್ದೇವೆ. ಬಹಳ ಉತ್ಸಾಹದಿಂದ ಭಾಗವಹಿಸಿ ಅಭೂತಪೂರ್ವ ಯಶಸ್ಸು ತಂದುಕೊಟ್ಟಿದ್ದಾರೆ. ಪಾದಯಾತ್ರೆ ಮಾಡಲು ತೀರ್ಮಾನ ಮಾಡಿದಾಗ ಮೂರನೇ ಅಲೆ ಪ್ರಾರಂಭ ಆಗಿರಲಿಲ್ಲ. ನಾವು ಇದನ್ನ ಎರಡು ತಿಂಗಳ ಮುಂಚೆಯೇ ತೀರ್ಮಾನ ಮಾಡಿದ್ದೇವು ಎಂದರು. ಇದನ್ನೂ ಓದಿ:  5 ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಆರೋಪಿ ಸಿದ್ದು ಪಕ್ಕ ಪ್ರತ್ಯಕ್ಷ

    ಬಿಜಪಿಯವರು ಜನರ ಬಗ್ಗೆ ಮೊಸಳೆ ಕಣ್ಣಿರು ಸುರಿಸಿ ಪಾದಯಾತ್ರೆಯನ್ನು ಕೊನೆಗೊಳಿಸಿದ್ದಾರೆ. ಸುಭಾಷ್ ಹುದ್ದೆದಾರ್, ರೇಣುಕಾಚರ್ಯಾ ಜಾತ್ರೆ ಮಾಡಿ ಮೆರವಣಿಗೆ ಮಾಡಿದ್ದರು. ಕೇಂದ್ರ ಸಚಿವರು ಎರಡನೇ ಅಲೆಯಲ್ಲಿ ಜನಶೀರ್ವಾದ ಮಾಡಿ ನಿಯಮ ಉಲ್ಲಂಘನೆ ಮಾಡಿದ್ದರು. ಆರಗ ಜ್ಞಾನೆಂದ್ರ ಕ್ಷೇತ್ರದಲ್ಲಿ ಜಾತ್ರೆಗೆ ಅವಕಾಶ ನೀಡಿದ್ದಾರೆ. ಇಷ್ಟೇಲ್ಲಾ ಆದರೂ ಸರ್ಕಾರ ಕೊರೊನಾ ಉಲ್ಲಂಘಿಸಿದ ಯಾರ ಮೇಲೂ ಕೇಸ್ ಹಾಕಲಿಲ್ಲ ಎಂದು ಕಿಡಿಕಾರಿದರು.

    ನಮ್ಮ ಮೇಲೆ ಕೇಸ್ ಹಾಕಿ ಕೋರ್ಟ್‍ಗೂ ಕಳುಹಿಸಿದ್ದಾರೆ. ಈ ಪಕ್ಷ ರೋಗ ತಡೆಯುವಲ್ಲಿ ನಿಷ್ಪಕ್ಷಪಾತವಾಗಿಲ್ಲ. ಇವರದ್ದು ದುರುದ್ದೇಶವಾಗಿದೆ. ನಮ್ಮ ಪಾದಯಾತ್ರೆ ನಿರ್ಬಂಧಗೊಳಿಸುವುದೇ ಅವರ ಉದ್ದೇಶವಾಗಿದೆ. ಅದಕ್ಕಾಗಿ ದಿನಕ್ಕೊಂದು ಆದೇಶವನ್ನ ಎಸ್‍ಪಿ, ಡಿಸಿ ಕಡೆಯಿಂದ ನೀಡಿದ್ದಾರೆ. ನಾವು ನೋಟಿಸ್‍ಗೆಲ್ಲ ಹೆದುರುವುದಿಲ್ಲ. ನಮಗೆ ಜನರ ಆರೋಗ್ಯ ಮುಖ್ಯ ಎಂದು ಹೇಳಿದರು. ಇದನ್ನೂ ಓದಿ: ಕಾಂಗ್ರೆಸ್‌ ಮೇಕೆದಾಟು ಪಾದಯಾತ್ರೆ ರದ್ದು

    15 ಸಾವಿರ ಸೋಂಕು ಪಾದಯಾತ್ರೆಯಿಂದ ಪತ್ತೆಯಾಗಿಲ್ಲ. ದೇಶದ್ಯಾಂತ ಸ್ವಾಭಾವಿಕವಾಗಿ ಮೂರನೇ ಅಲೆ ಏರಿಕೆ ಆಗುತ್ತಿದೆ. ನಮಗೆ ರಾಜ್ಯದ ಜನರ ಆರೋಗ್ಯ ಕಾಳಜಿ ಇದೆ. ಯಾವುದೇ ಕಾರಣಕ್ಕೂ ನಮ್ಮ ಪಾದಯಾತ್ರೆಯಿಂದ ಸೋಂಕು ಉಲ್ಬಣ ಆಗದಂತೆ ನೋಡಿಕೊಳ್ಳುವುದು ನಮ್ಮ ಜವಬ್ದಾರಿಯಾಗಿದೆ ಎಂದು ತಿಳಿಸಿದರು.

  • ಪಾದಯಾತ್ರೆ ಮೂಲಕ ಕಾಂಗ್ರೆಸ್ ಪಕ್ಷದಿಂದ ಭಂಡ ರಾಜಕಾರಣ: ಜಗದೀಶ್ ಶೆಟ್ಟರ್

    ಪಾದಯಾತ್ರೆ ಮೂಲಕ ಕಾಂಗ್ರೆಸ್ ಪಕ್ಷದಿಂದ ಭಂಡ ರಾಜಕಾರಣ: ಜಗದೀಶ್ ಶೆಟ್ಟರ್

    ಧಾರವಾಡ: ಮೇಕೆದಾಟು ಪಾದಯಾತ್ರೆ ಮೂಲಕ ಕಾಂಗ್ರೆಸ್ ಪಕ್ಷದಿಂದ ಭಂಡ ರಾಜಕಾರಣ ಮಾಡುತ್ತಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

    ಕಾಂಗ್ರೆಸ್ ಮೇಕೆದಾಟು ಯೋಜನೆ ಪಾದಯಾತ್ರೆ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಾದಯಾತ್ರೆ ಮೂಲಕ ಕಾಂಗ್ರೆಸ್ ಭಂಡ ರಾಜಕಾರಣ ಮಾಡುತ್ತಿದೆ. ಮುಂಬರುವ ವಿಧಾನಸಭೆ ಚುನಾವಣೆ ದೃಷ್ಟಿ ಇಟ್ಟುಕೊಂಡು ಈ ಪಾದಯಾತ್ರೆ ಮಾಡುತ್ತಿದ್ದಾರೆ. ಅಂತಾರಾಜ್ಯ ಜಲ ವಿವಾದಗಳನ್ನು ಸೂಕ್ಷ್ಮವಾಗಿ ಬಗೆಹರಿಸಬೇಕಾಗುತ್ತದೆ. ಹೋರಾಟದ ಮೂಲಕ ಇದನ್ನು ಪರಿಹರಿಸೋಕೆ ಆಗಲ್ಲ. ವಿಧಾನಸಭೆ ಚುನಾವಣೆ ಇನ್ನೂ ಒಂದೂವರೆ ವರ್ಷವಿದ್ದು, ಅದನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್ ಈಗಿನಿಂದಲೇ ರಾಜಕಾರಣ ಆರಂಭಿಸಿದೆ ಎಂದರು.

    ನೀರಾವರಿ ಮತ್ತು ಕುಡಿಯುವ ನೀರಿನ ಯೋಜನೆಯನ್ನು ಚುನಾವಣಾ ಅಸ್ತ್ರವಾಗಿ ಬಳಸುತ್ತಿದೆ. ಪಾದಯಾತ್ರೆ ಮಾಡುವ ಮೂಲಕ ಪರಿಸ್ಥಿತಿಯನ್ನು ಮತ್ತಷ್ಟು ಜಟಿಲಗೊಳ್ಳುವಂತೆ ಕಾಂಗ್ರೆಸ್ ಮಾಡುತ್ತಿದೆ. ನೀರಾವರಿ ಇರಲಿ ಯಾವುದೇ ಯೋಜನೆ ಇರಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಅದರ ಬಗ್ಗೆ ಚಕಾರ ಎತ್ತಲ್ಲ. ಬಿಜೆಪಿ ಅಧಿಕಾರಕ್ಕೆ ಬಂದಾಗಲೇ ಇದಕ್ಕೊಂದು ಪರಿಹಾರ ಕೊಡುವ ಪ್ರಯತ್ನ ನಡೆದಿದೆ. ಇಷ್ಟು ವರ್ಷ ಸುಮ್ಮನೆ ಕುಳಿತು ಈಗ ಏಕೆ? ಕಾಂಗ್ರೆಸ್ ನವರು ಹೋರಾಟ ಮಾಡುತ್ತಿದ್ದಾರೆ. ವಿಪಕ್ಷ ನಾಯಕರಾದ ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗಲೇ ಮೇಕೆದಾಟು ಯೋಜನೆ ಆರಂಭಿಸ ಬಹುದಿತ್ತಲ್ಲವೇ. ಅಧಿವೇಶನದ ಸಂದರ್ಭದಲ್ಲಿ ಮೇಕೆದಾಟು ಯೋಜನೆ ಬಗ್ಗೆ ಕಾಂಗ್ರೆಸ್‍ನವರು ಗಂಭೀರ ಚರ್ಚೆ ಮಾಡುವ ಪ್ರಯತ್ನ ಮಾಡಲಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಬಿಜೆಪಿ, ಕಾಂಗ್ರೆಸ್, ಹೆಣ್ಣು-ಗಂಡೆಂಬ ಭೇದ ಕೊರೊನಾಗೆ ಇಲ್ಲ: ಆನಂದ್ ಸಿಂಗ್

    ಚುನಾವಣೆ ಮತಬ್ಯಾಂಕ್ ರಾಜಕಾರಣಕ್ಕಾಗಿ ಈ ಪಾದಯಾತ್ರೆ ಮಾಡುತ್ತಿದ್ದಾರೆ. ಕೋವಿಡ್ ನಿಯಮಗಳಿದ್ದರೂ ಅದನ್ನು ಉಲ್ಲಂಘಿಸಿ ಹೋಗುತ್ತಿದ್ದಾರೆ ಎಂದರೆ ನಾಚಿಕೆಗೇಡಿನ ವಿಷಯ ಇದು, ಇಡೀ ದೇಶದಲ್ಲಿ ಕೋವಿಡ್ ಮೂರನೇ ಅಲೆ ಏಳುತ್ತಿದೆ. ಕಫ್ರ್ಯೂ ವಿಧಿಸಿದ ಸಂದರ್ಭದಲ್ಲಿಯೂ ಇವರು ಪಾದಯಾತ್ರೆ ಮಾಡುತ್ತಿದ್ದಾರೆ. ಇವರಿಗೆ ರಾಜಕೀಯ ಹಿತಾಸಕ್ತಿಯೇ ಮುಖ್ಯ ಹೊರತು ರಾಜ್ಯದ ಹಿತಾಸಕ್ತಿ ಅಲ್ಲ ಎಂದು ಸಿಡಿದರು.ಇದನ್ನೂ ಓದಿ: ವಾಮಾಚಾರ ನಡೆಸಿ ಮನೆಯ ಬೆಡ್ ರೂಂನ ಮಣ್ಣಿನಡಿಯಲ್ಲಿ ನಿಧಿಗಾಗಿ ಶೋಧ – ಇಬ್ಬರ ಬಂಧ

    ಕೈ ಪಕ್ಷವು ಇಲ್ಲಿಯವರೆಗೂ ಬರೀ ರಾಜಕಾರಣ, ದೇಶ ಮತ್ತು ರಾಜ್ಯವನ್ನು ಲೂಟಿ ಮಾಡಿಕೊಂಡು ಬಂದಿದ್ದಾರೆ. ಮೇಕೆದಾಟು ಪಾದಯಾತ್ರೆ ಕೇವಲ ರಾಜಕೀಯ ಪ್ರಹಸನ ಕಾನೂನು ಉಲ್ಲಂಘಿಸಿದರೆ ನಮಗೆ ಹೆಚ್ಚು ಮತ ಸಿಗುತ್ತೆ ಅಂತ ಕಾಂಗ್ರೆಸ್‍ನವರು ಅಂದುಕೊಂಡಿದ್ದಾರೆ. ಆದರೆ ಇದಕ್ಕೆ ಜನತೆಯೇ ತಕ್ಕ ಪಾಠ ಕಲಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

  • ಯಾರನ್ನಾದರೂ ಮುಟ್ಟಲಿ ನೋಡೋಣ, ನಾವು ಪಾದಯಾತ್ರೆ ಮಾಡಿಯೇ ಮಾಡುತ್ತೇವೆ: ಡಿಕೆಶಿ

    ಯಾರನ್ನಾದರೂ ಮುಟ್ಟಲಿ ನೋಡೋಣ, ನಾವು ಪಾದಯಾತ್ರೆ ಮಾಡಿಯೇ ಮಾಡುತ್ತೇವೆ: ಡಿಕೆಶಿ

    ಬೆಂಗಳೂರು: ಯಾರನ್ನು ಬೇಕಾದರೂ ಅರೆಸ್ಟ್ ಮಾಡಿಕೊಳ್ಳಿ, ನಾವು ಮೇಕೆದಾಟು ಪಾದಯಾತ್ರೆ ಮಾಡಿಯೇ ಮಾಡುತ್ತೇವೆ ಎಂದು ಗೃಹ ಸಚಿವರ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.

    ಹೊಸ ಎಮ್‍ಎಲ್‍ಸಿಗಳ ಪ್ರಮಾಣವಚನ ಸಮಾರಂಭ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾರನ್ನ ಬೇಕಾದರೂ ಅರೆಸ್ಟ್ ಮಾಡಕೊಳ್ಳಲಿ. ಬೇಕಾದರೆ ನನ್ನ ಹಾಗೂ ಸಿದ್ದರಾಮಯ್ಯನವರನ್ನ ಇಬ್ಬರನ್ನು ಅರೆಸ್ಟ್ ಮಾಡಲಿ. ಪಕ್ಷದ ಶಾಸಕರನ್ನು ಕೂಡಾ ಅರೆಸ್ಟ್ ಮಾಡಲಿ. ನಾವು ಸರ್ಕಾರದ ನಿಯಮಗಳಿಗೆ ಗೌರವ ಕೊಡುತ್ತೇವೆ. ಈ ಸಭೆಯಲ್ಲಿ ಇಷ್ಟೊಂದು ಜನ ನನ್ನ ಹಿಂದೆ ನಿಂತಿದ್ದಾರೆ. ಯಾರನ್ನಾದರೂ ಮುಟ್ಟಲಿ ನೋಡೋಣ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಮೋದಿ ಭದ್ರತಾ ಲೋಪಕ್ಕೆ ಪಂಜಾಬ್ ಪೊಲೀಸ್ ಇಲಾಖೆ ಕಾರಣ – ಕೇಂದ್ರ ಗೃಹ ಸಚಿವಾಲಯ

    araga jnanendra

    ವರ್ಚುವಲ್ ಮಾಡಿಕೊಂಡು ಬರೀ ಶಾಸಕರು, ಎಮ್‍ಎಲ್‍ಸಿಗಳನ್ನು ಕರೆದು ಪ್ರಮಾಣವಚನ ಕಾರ್ಯಕ್ರಮವನ್ನು ಅಸೆಂಬ್ಲಿ ಒಳಗಡೆ ಮಾಡಬೇಕಾಗಿತ್ತು. ಯಾವುದು ಇದು ಆಟ ಗೃಹ ಮಂತ್ರಿಗಳೇ ಏನ ಹೆದರಿಸತ್ತಿದ್ದೀರಾ? ಇಂತಹ ಕೊಡ್ಡು ಬೆದರಿಕೆಗಳಿಗೆಲ್ಲಾ ಕಾಂಗ್ರೆಸ್ ಪಾರ್ಟಿಯವರು ಹೆದರುವವರು ಅಲ್ಲ. ನಾನು ಜೈಲಿಗೆ ಹೋಗಲು ಕೂಡಾ ಸಿದ್ಧನಿದ್ದೇನೆ. ರಾಜ್ಯದ ಜನತೆಗೊಸ್ಕರ ನಾವು ಈ ಹೋರಾಟ ಮಾಡುತ್ತಿದ್ದೇವೆ. ಎಲ್ಲ ಕಾರ್ಯಕರ್ತರು ಪಾದಯಾತ್ರೆಗೆ ಬರುತ್ತಿದ್ದು ಜನರು ಕೂಡಾ ಪಕ್ಷಾತೀತವಾಗಿ ಬರುತ್ತಾರೆ ಎಂದರು.

    ಈ ಹೆದರಿಕೆಗಳನ್ನೆಲ್ಲ ಅವರು ತಮ್ಮ ಸ್ವಂತ ಊರಲ್ಲಿ ಇಟ್ಟುಕೊಳ್ಳಲಿ ನಮ್ಮ ಹತ್ತಿರ ಅಲ್ಲ. ಸರ್ಕಾರ ಸಭೆ ಸಮಾರಂಭಕ್ಕೆ ಅನುಮತಿ ಇಲ್ಲ ಅಂತ ಅಂದವರು ಅಸೆಂಬ್ಲಿ ಒಳಗಡೆ ಸಭೆ ನಡೆಸಬೇಕಿತ್ತು. ಯಾಕೆ ಇಲ್ಲಿ ಎಮ್‍ಎಲ್‍ಸಿಗಳಿಗೆ ಪ್ರಮಾಣವಚನಕ್ಕೆ ಅವಕಾಶ ಮಾಡಿಕೊಟ್ಟರು. ಸಭೆಗೆ ಇಷ್ಟೊಂದು ಜನರು ಬಂದಿದ್ದು, ಬಿಜೆಪಿಯವರಿಗೆ ಈಗ ಕೊರೊನಾ ಬರುವದಿಲ್ಲವೇ? ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇ ಇದು ಸಭೆಯಲ್ಲವೆ ಎಂದು ಪ್ರಶ್ನಿಸಿದರು.

    ಯಾರಿಗೆ ಹೆದರಿಸುತ್ತಿದ್ದಾರೆ ಅವರು ನಾನು 40 ವರ್ಷದಿಂದ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ನಾವು ಪಾದಯಾತ್ರೆ ಮಾಡುತ್ತಿರುವುದು ನೀರಿಗೊಸ್ಕರ ರಾಜ್ಯದ ಜನತೆಗೊಸ್ಕರವಾಗಿ. ಬಿಜೆಪಿಯವರು ಈ ಯೋಜನೆ ಕುರಿತು ಜನರಿಗೇನು ನ್ಯಾಯ ಒದಗಿಸಿಕೊಡಲಿಲ್ಲ ಅದನ್ನು ನಾವು ಮಾಡುತ್ತಿದ್ದೇವೆ. ಇದನ್ನ ಯಾರ ಕೈಇಂದಲೂ ತಡೆಯೋಕೆ ಆಗೋಲ್ಲ ಯಾರ ಏನು ಬೇಕಾದರೂ ಮಾಡಿಕೊಳ್ಳಲಿ ಎಂದು ಕಿಡಿಕಾರಿದರು. ಇದನ್ನೂ ಓದಿ: ನಾನು ಜೀವಂತವಾಗಿ ಬಂದಿದ್ದೇನೆ, ನಿಮ್ಮ ಸಿಎಂಗೆ ಧನ್ಯವಾದ ಹೇಳಿ ಎಂದ ಮೋದಿ

  • ಬಿಜೆಪಿಯವರಿಗೆ ಮೆದುಳಿಗೆ ನಾಲಿಗೆಗೆ ಕನೆಕ್ಷನ್ ಇಲ್ಲ: ಶಿವರಾಜ್ ತಂಗಡಗಿ

    ಬಿಜೆಪಿಯವರಿಗೆ ಮೆದುಳಿಗೆ ನಾಲಿಗೆಗೆ ಕನೆಕ್ಷನ್ ಇಲ್ಲ: ಶಿವರಾಜ್ ತಂಗಡಗಿ

    ಕೊಪ್ಪಳ: ಬಿಜೆಪಿಯವರಿಗೆ ಮೆದುಳಿಗೆ ನಾಲಿಗೆಗೆ ಕನೆಕ್ಷನ್ ಇಲ್ಲ ಎಂದು ಕಾಂಗ್ರೆಸ್ ಮಾಜಿ ಸಚಿವ ಶಿವರಾಜ್ ತಂಗಡಗಿ ಕಿಡಿಕಾರಿದ್ದಾರೆ.

    ಮಹಿಳಾ ಅಧಿಕಾರಿ ಮತ್ತು ಕನಕಗಿರಿ ಶಾಸಕರ ಆಡಿಯೋ ವಿಚಾರವಾಗಿ ಮಾಧ್ಯಗಳೊಂದಿಗೆ ಮಾತನಾಡಿದ ಅವರು, ನಾನು ಈ ಪ್ರಕರಣದ ಬಗ್ಗೆ ಏನೂ ಮಾತನಾಡುವುದಿಲ್ಲ. ಯಾರಿಗೆ ಅನ್ಯಾಯವಾಗಿದೆ ಅವರು ನಮ್ಮ ಸಹಾಯ ಕೇಳಿದರೆ ಅದರ ಬಗ್ಗೆ ನಾನು ಮಾತನಾಡುತ್ತೇನೆ. ಶಾಸಕರ ಬಗ್ಗೆ ನಾನು ಮಾತನಾಡುವ ಅವಶ್ಯಕತೆ ಇಲ್ಲ. ಅದು ಹಿಟ್ ವಿಕೆಟ್, ತನ್ನಷ್ಟಕ್ಕೆ ತಾನೇ ಔಟ್ ಆಗುವ ಕ್ಯಾಂಡಿಡೇಟ್. ಅನ್ಯಾಯವಾದವರು ನಮ್ಮನ್ನು ಸಂಪರ್ಕ ಮಾಡಿದರೆ, ಕಾಂಗ್ರೆಸ್ ಪಕ್ಷ, ವೈಯ್ಯಕ್ತಿಕವಾಗಿ ನಿಂತು ನ್ಯಾಯ ಕೊಡಿಸುವ ಕೆಲಸ ಮಾಡುತ್ತೇವೆ ಎಂದರು. ಇದನ್ನೂ ಓದಿ: ದಿನದಲ್ಲಿ 50 ಸಾವಿರಕ್ಕೂ ಹೆಚ್ಚು ಕೋವಿಡ್-19 ಕೇಸ್!

    ಬಿಜೆಪಿಯವರಿಗೆ ಮೆದುಳಿಗೆ ನಾಲಿಗೆಗೆ ಕನೆಕ್ಷನ್ ಇಲ್ಲ. ಈ ವಿಷಯದ ಬಗ್ಗೆ ರಾಜ್ಯಾಧ್ಯಕ್ಷರು ಸ್ಪಷ್ಟನೆ ಕೇಳಬೇಕಿತ್ತು. ಈ ಪ್ರಕರಣ ಕನಕಗಿರಿ ಕ್ಷೇತ್ರಕ್ಕೆ ಒಂದು ಕಪ್ಪುಚುಕ್ಕೆ ಇದ್ದಂತೆ. ಈ ಪ್ರಕರಣದ ಬಗ್ಗೆ ಬಿಜೆಪಿ ಶಾಸಕ ಬಸವರಾಜ ದಡೇಸೂಗುರ್ ಅವರನ್ನು ಕೇಳಬೇಕು. ಪೊಲೀಸ್ ಸ್ಟೇಶನ್‍ಗಳು ಬಿಜೆಪಿಯ ಸೆಟ್ಲ್‍ಮೆಂಟ್ ಸ್ಟೇಶನ್‍ಗಳಾಗಿವೆ ಎಂದು ಟಾಂಗ್ ನೀಡಿದರು.

    ಅಯೋಧ್ಯೆ ಮಾದರಿ ಅಂಜನಾದ್ರಿ ಬೆಟ್ಟದ ಅಭಿವೃದ್ಧಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಅಂಜನಾದ್ರಿ ಅಂತರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ ಮಾಡಲಿ. ನಾವು ಅದನ್ನು ಸ್ವಾಗತ ಮಾಡುತ್ತೇವೆ. ಅದರ ಹೆಸರಿನಲ್ಲಿ ರಾಜಕಾರಣ ಮಾಡಲು ಹೋದರೆ ನಮ್ಮಲ್ಲಿ ನಡೆಯುವದಿಲ್ಲ. ಕರ್ನಾಟಕದ ಜನರು ಜಾಣರಿದ್ದಾರೆ. ಬಿಜೆಪಿಗೆ ಸಹಾಯ ಮಾಡುವರನ್ನು ಕೊಲ್ಲುವುದೇ ಬಿಜೆಪಿ ಅವರ ಕೆಲಸ ಎಂದರು. ಇದನ್ನೂ ಓದಿ: ಭಾರೀ ಭದ್ರತಾ ಲೋಪ – ಪಂಜಾಬ್ ಫ್ಲೈ ಓವರ್‌ನಲ್ಲಿ 20 ನಿಮಿಷ ಸಿಲುಕಿದ ಮೋದಿ

    ಮೇಕೆದಾಟು ಯೋಜನೆ ಕಾಂಗ್ರೆಸ್ ಪಾದಯಾತ್ರೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ಪಾದಯಾತ್ರೆಯಿಂದ ಬಿಜೆಪಿ ಯವರಿಗೆ ಒಂದು ನಡುಕ ಆರಂಭವಾಗಿದೆ. ರಾಜ್ಯದ ಜನತೆ ಕಾಂಗ್ರೆಸ್ ಪಕ್ಷದೆಡೆಗೆ ವಾಲಿದ್ದಾರೆ ಎನ್ನುವ ನಡುಕ ಆರಂಭವಾಗಿದೆ. ಕೊರೊನಾ ಬಂದಾಗ ಚುನಾವಣೆ, ಜನಾಶೀರ್ವಾದ ಯಾತ್ರೆ ಮಾಡುತ್ತಾರೆ. ಬಿಜೆಪಿ ಅವರು ಯಾತ್ರೆ ಮಾಡಿದರೆ ಕೊರೊನಾ ಬರೋಲ್ಲ. ಕಾಂಗ್ರೆಸ್‍ನವರು ಪಾದಯಾತ್ರೆ ಮಾಡಿದರೆ ಕೊರೊನಾ ಬರುತ್ತದೆ. ಕೊವೀಡ್ ನಿಯಮಗಳನ್ನು ಪಾಲನೆ ಮಾಡಿ ಪಾದಯಾತ್ರೆ ಮಾಡುತ್ತೇವೆ. ಯಾರು ಏನೇ ಹೇಳಿದರೂ ಪಾದಯಾತ್ರೆ ನಿಲ್ಲುವುದಿಲ್ಲ. ನಾನೂ ಸಹ ಪಾದಯಾತ್ರೆಯಲ್ಲಿ ಪಾಲ್ಗೋಳ್ಳುತ್ತೇನೆ ಎಂದು ನುಡಿದರು.