Tag: Congress leaders

  • ಬಿಜೆಪಿಗರ ಜೊತೆ ಊಟ – ದೇಶಪಾಂಡೆ ಉಚ್ಚಾಟನೆಗೆ ಕೈ ಮುಖಂಡರ ಪಟ್ಟು

    ಬಿಜೆಪಿಗರ ಜೊತೆ ಊಟ – ದೇಶಪಾಂಡೆ ಉಚ್ಚಾಟನೆಗೆ ಕೈ ಮುಖಂಡರ ಪಟ್ಟು

    ಬಾಗಲಕೋಟೆ: ಕಂದಾಯ ಸಚಿವ ಆರ್.ವಿ ದೇಶಪಾಂಡೆ ಅವರು ಕಾಂಗ್ರೆಸ್ ನಾಯಕರಾಗಿ ಬಿಜೆಪಿಯವರ ಜೊತೆ ಊಟ ಮಾಡಿ ಪಕ್ಷದ ಮರ್ಯಾದೆ ಹಾಳು ಮಾಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಆಕ್ರೋಶ ಹೊರ ಹಾಕಿದ್ದಾರೆ.

    ಬರ ಅಧ್ಯಯನ ಮಾಡಲು ಕಂದಾಯ ಸಚಿವ ಆರ್.ವಿ ದೇಶಪಾಂಡೆ ನೇತೃತ್ವದಲ್ಲಿ ತಂಡವೊಂದು ಜಿಲ್ಲೆಗೆ ಬಂದಿತ್ತು. ಈ ವೇಳೆ ಸಚಿವರು ಮತ್ತು ಬರ ಅಧ್ಯಯನ ತಂಡ ಬಿಜೆಪಿ ಪಕ್ಷದ ನಾಯಕರ ಜೊತೆ ಊಟ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದವರಿದ್ದರೂ ಎಲ್ಲರನ್ನು ಕಡೆಗಣಿಸಿ ಬಿಜೆಪಿ ಸದಸ್ಯರ ಜೊತೆ ಊಟ ಮಾಡಿದ್ದಾರೆ. ಇದು ಪಕ್ಷಕ್ಕೆ ಮಾಡಿದ ಅವಮಾನ. ಪಕ್ಷದ ಹಿರಿಯ ನಾಯಕನಾಗಿ ಬಿಜೆಪಿ ಜೊತೆ ಹೋಗಿದ್ದು ತಪ್ಪು. ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಅವರಿಗೆ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಮನವಿ ಮಾಡಿಕೊಂಡಿದ್ದಾರೆ.

    ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತು ಸಚಿವರು ಬರ ಅಧ್ಯಯನವನ್ನು ವೀಕ್ಷಿಸಿದ್ದಾರೆ. ಇದು ಕಾಟಾಚಾರದ ಬರ ಅಧ್ಯಯನ ಎಂದು ಜಿ.ಪಂ ಕಾಂಗ್ರೆಸ್ ಸದಸ್ಯ ಹಾಗೂ ಬೀಳಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತ ಕಾಖಂಡಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಆರ್ ವಿ ದೇಶಪಾಂಡೆ ಸ್ಥಳೀಯ ಕಾಂಗ್ರೆಸ್ ಮುಖಂಡರನ್ನು ಗಣನೆಗೆ ತೆಗೆದುಕೊಂಡಿಲ್ಲ. ಜೊತೆಗೆ ಪ್ರತಿಪಕ್ಷ ಬಿಜೆಪಿ ಕಚೇರಿಯಲ್ಲಿ ಊಟ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೈಸೂರಿನಲ್ಲಿ ಕಾನೂನು ಉಲ್ಲಂಘಿಸಿದ ಕಾಂಗ್ರೆಸ್..!

    ಮೈಸೂರಿನಲ್ಲಿ ಕಾನೂನು ಉಲ್ಲಂಘಿಸಿದ ಕಾಂಗ್ರೆಸ್..!

    ಮೈಸೂರು: ಫ್ಲೆಕ್ಸ್ ಮುಕ್ತ ನಗರಿ ಎಂದು ಕರೆಯಲ್ಪಡುವ ಮೈಸೂರಿನಲ್ಲಿ ಕಾಂಗ್ರೆಸ್ ಕಚೇರಿಯ ಸುತ್ತಮುತ್ತ ನಾಯಕರ ಫ್ಲೆಕ್ಸ್ ಗಳು ರಾರಾಜಿಸುತ್ತಿವೆ. ಈ ಮೂಲಕ ರಸ್ತೆ ಬದಿಗಳಲ್ಲಿ ಫ್ಲೆಕ್ಸ್ ಹಾಕಬಾರದು ಎಂಬ ಕಾನೂನನ್ನು ಕಾಂಗ್ರೆಸ್ ಉಲ್ಲಂಘಿಸಿದೆ.

    ಇದರಿಂದ ಕಾನೂನು ಸಾಮಾನ್ಯ ಪ್ರಜೆಗಳಿಗೆ ಮಾತ್ರ ಅನ್ವಯ ಆಗುತ್ತಾ, ರಾಜಕೀಯ ನಾಯಕರಿಗೆ ಅದು ಅನ್ವಯವಾಗಲ್ವ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಏಕೆಂದರೆ ಮೈತ್ರಿ ಸರಕಾರದ ಭಾಗವಾಗಿರೋ ಕಾಂಗ್ರೆಸ್ ಫ್ಲೆಕ್ಸ್ ಮುಕ್ತ ನಗರಿಯೆಂಬ ಕಾನೂನು ತನಗೆ ಅನ್ವಯವಾಗಲ್ಲ ಅನ್ನೋ ರೀತಿ ನಡೆದುಕೊಂಡಿದೆ.

    ಜಿಲ್ಲೆಯ ರೈಲ್ವೆ ನಿಲ್ದಾಣದ ಬಳಿ ಇರುವ ಕಾಂಗ್ರೆಸ್ ಕಚೇರಿಯ ಸುತ್ತಮುತ್ತ ಕಾಂಗ್ರೆಸ್ ನಾಯಕರ ಫ್ಲೆಕ್ಸ್ ಗಳು ರಾರಾಜಿಸುತ್ತಿವೆ. ಈ ಮೂಲಕ ಫ್ಲೆಕ್ಸ್ ಮುಕ್ತ ನಗರ ಎಂಬ ಕಾನೂನಿಗೆ ಕಾಂಗ್ರೆಸ್ ಕಿಂಚಿತ್ತು ಕಿಮ್ಮತ್ತು ಕೊಟ್ಟಿಲ್ಲ ಎಂದಂತೆ ಕಾಣಿಸುತ್ತಿದೆ. ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಅವರ ಸನ್ಮಾನ ಕಾರ್ಯಕ್ರಮದ ನಿಮಿತ್ತ ರಾಶಿ ರಾಶಿ ಫ್ಲೆಕ್ಸ್ ಗಳನ್ನು ಮೈಸೂರಿನ ದಾಸಪ್ಪ ವೃತ್ತದಿಂದ ರೈಲ್ವೆ ನಿಲ್ದಾಣ ವೃತ್ತದವರೆಗೂ ಅಳವಡಿಸಲಾಗಿದೆ. ಇದರಿಂದ ರಸ್ತೆ ಬದಿಗಳಲ್ಲಿ ಫ್ಲೆಕ್ಸ್ ಹಾಕಬಾರದು ಎಂಬ ಕಾನೂನನ್ನು ಕಾಂಗ್ರೆಸ್ ಮರೆತಿದೆಯಾ ಅಂತ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಇಷ್ಟೆಲ್ಲ ಆದರೂ ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ಮಾತ್ರ ಫ್ಲೆಕ್ಸ್ ಗಳನ್ನು ಕಂಡು ಕಾಣದಂತೆ ವರ್ತಿಸುತ್ತಿದ್ದಾರೆ. ಈ ಮೂಲಕ ಆಳುವವರಿಗೊಂದು ನೀತಿ, ಜನ ಸಾಮಾನ್ಯರಿಗೊಂದು ನೀತಿಯನ್ನು ಪಾಲಿಕೆ ಅಧಿಕಾರಿಗಳು ಅನುಸರಿಸುತ್ತಿದ್ದಾರೆ ಅಂತ ಸ್ಥಳೀಯರು ಕಿಡಿಕಾರಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಎಚ್‍ಡಿಕೆಯನ್ನ ಅಧಿಕಾರದಿಂದ ಕೆಳಗಿಳಿಸಲು ‘ಕೈ’ ನಾಯಕರಿಂದ್ಲೇ ಹೊಂಚು- ಬಿ.ವೈ ವಿಜಯೇಂದ್ರ

    ಎಚ್‍ಡಿಕೆಯನ್ನ ಅಧಿಕಾರದಿಂದ ಕೆಳಗಿಳಿಸಲು ‘ಕೈ’ ನಾಯಕರಿಂದ್ಲೇ ಹೊಂಚು- ಬಿ.ವೈ ವಿಜಯೇಂದ್ರ

    – ಕಾಂಗ್ರೆಸ್‍ನ ಮೂವರಿಂದ ಈ ಕುತಂತ್ರ
    – ಆಪರೇಷನ್ ಕಮಲದ ನೆಪ ಹೇಳಿ ಜೆಡಿಎಸ್‍ಗೆ ಬೆದರಿಕೆ

    ತುಮಕೂರು: ಆಪರೇಷನ್ ಕಮಲ ಎಂಬ ಬೆದರುಬೊಂಬೆ ಇಟ್ಕೊಂಡು ಕಾಂಗ್ರೆಸ್ ನಾಯಕರು ಕುಮಾರಸ್ವಾಮಿ ಅವರನ್ನ ಅಧಿಕಾರದಿಂದ ಕೆಳಗಿಳಿಸಲು ಹೊಂಚು ಹಾಕಿದ್ದಾರೆ ಎಂದು ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.

    ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸ್ಥಾನದಿಂದ ಎಚ್.ಡಿ ಕುಮಾರಸ್ವಾಮಿಯನ್ನು ಕೆಳಗಿಳಿಸಲು ಕೆಲ ಕಾಂಗ್ರೆಸ್ ನಾಯಕರು ಕುತಂತ್ರ ಮಾಡುತ್ತಿದ್ದಾರೆ. ಅದಕ್ಕೆ ಆಪರೇಷನ್ ಕಮಲ ಎಂಬ ಬೆದರು ಬೊಂಬೆ ಇಟ್ಕೊಂಡು ಕಾಂಗ್ರೆಸ್‍ನ ಮೂವರು ಹಿರಿಯ ಮುಖಂಡರು ಸಿಎಂ ಕುಮಾರಸ್ವಾಮಿ ವಿರುದ್ಧ ಹೊಂಚು ಹಾಕುತ್ತಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಸ್ಥಾನಮಾನ ಪಡೆಯಲು ಕೈ ಪಡೆಯವರೇ ತೆರೆಮರೆಯ ಕಸರತ್ತು ನಡೆಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

    ಒಬ್ಬರು ಸಚಿವರಾದರೆ ಇನ್ನಿಬ್ಬರು ಸಚಿವ ಸ್ಥಾನ ಸಿಗದೇ ಇದ್ದವರು ಈ ರೀತಿ ಹೊಂಚು ಹಾಕಿ ಬಿಜೆಪಿ ಹೆಸರನ್ನು ಹಾಳು ಮಾಡುತ್ತಿದ್ದಾರೆ. ಕುಮಾರಸ್ವಾಮಿ ಅವರು ಅಧಿಕಾರದಿಂದ ಕೆಳಗಿಳಿಯುವುದನ್ನೇ ಕಾಯ್ತಾ ಇದ್ದಾರೆ. ಆದರೆ ಬಿಜೆಪಿ ಪಕ್ಷ ಸರ್ಕಾರವನ್ನ ಅಸ್ಥಿರಗೊಳಿಸುವ ಯಾವ ಪ್ರಯತ್ನವೂ ಮಾಡುತ್ತಿಲ್ಲ. ತಮ್ಮ ಬೇಳೆ ಬೇಯಿಸಿಕೊಳ್ಳಲು ಆಪರೇಷನ್ ಕಮಲ ಎಂಬ ಭೂತ ಇಟ್ಟುಕೊಂಡು ಜೆಡಿಎಸ್ ನಾಯಕರನ್ನು ಬೆದರಿಸುತ್ತಿದ್ದಾರೆ. ಹೀಗೆ ಕುತಂತ್ರ ಮಾಡುತ್ತಿರುವ ಆ ಮೂವರು ಯಾರು ಅಂತಾ ಮುಂದಿನ ದಿನದಲ್ಲಿ ಗೊತ್ತಾಗಲಿದೆ ಎಂದು ಗುಡುಗಿದ್ದಾರೆ.

    ಅಷ್ಟೇ ಅಲ್ಲದೆ ಸರ್ಕಾರದ ಆಡಳಿತ ಕೇವಲ ರಾಮನಗರ, ಹಾಸನ ಹಾಗೂ ಮಂಡ್ಯ ಕ್ಷೇತ್ರಕ್ಕೆ ಮಾತ್ರ ಸೀಮಿತವಾದಂತಿದೆ. ಕರ್ನಾಟಕದಲ್ಲಿ ತುಘಲಕ್ ದರ್ಬಾರ್ ನಡೀತಿದೆ. ರಾಜ್ಯದ ಆಡಳಿತ ಕುಮಾರಸ್ವಾಮಿ ಹಾಗೂ ರೇವಣ್ಣ ಕುಟುಂಬಕ್ಕೆ ಸೀಮಿತವಾಗಿಬಿಟ್ಟಿದೆ. ಬೆಳಗಾವಿ ಅಧಿವೇಶನದಲ್ಲಿ ಸರ್ಕಾರದ ವೈಫಲ್ಯದ ವಿರುದ್ಧ ಹೋರಾಟ ಮಾಡ್ತೀವಿ ಎಂದು ವಿಜಯೇಂದ್ರ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶಾಸಕ ಸುರೇಶ್‍ಗೌಡ ತಲೆ ಹಿಡಿಯೋದರಲ್ಲಿ ಎತ್ತಿದ ಕೈ: ಕಾಂಗ್ರೆಸ್ ಮುಖಂಡ ರಾಜೇಶ್

    ಶಾಸಕ ಸುರೇಶ್‍ಗೌಡ ತಲೆ ಹಿಡಿಯೋದರಲ್ಲಿ ಎತ್ತಿದ ಕೈ: ಕಾಂಗ್ರೆಸ್ ಮುಖಂಡ ರಾಜೇಶ್

    ಮಂಡ್ಯ: ಮಂಡ್ಯ ಲೋಕಸಭೆ ಉಪಚುನಾವಣೆ ಘೋಷಣೆಯಾದ ನಂತರ ಮಂಡ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ನಾಯಕರ ನಡುವೆ ಮಾತಿನ ಸಮರ ತಾರಕಕ್ಕೇರಿದ್ದು, ಶಾಸಕ ಸುರೇಶ್‍ಗೌಡ ತಲೆ ಹಿಡಿಯೋದರಲ್ಲಿ ಎತ್ತಿದ ಕೈ ಎಂದು ನಾಗಮಂಗಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ವಾಗ್ದಾಳಿ ನಡೆಸಿದ್ದಾರೆ.

    ಶಾಸಕ ಸುರೇಶ್‍ಗೌಡ, ಮಾಜಿ ಶಾಸಕ ಚೆಲುವರಾಯಸ್ವಾಮಿಯವರನ್ನು ರಾಜಕೀಯ ವ್ಯಭಿಚಾರಿ ಎಂದು ಜರಿದಿದ್ದರು. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಮುಖಂಡರು, ಶಾಸಕ ಸುರೇಶ್‍ಗೌಡ ತಲೆ ಹಿಡಿಯೋದರಲ್ಲಿ ಎತ್ತಿದ ಕೈ. ತಾಲೂಕಿನ ನಾವು ಇದನ್ನು ಹತ್ತಿರದಿಂದ ನೋಡಿದ್ದೇವೆ. ಸುರೇಶ್‍ಗೌಡ ಗೆಲ್ಲಲು ಮಾಜಿ ಶಾಸಕ ಶಿವರಾಮೇಗೌಡ, ಎಂಎಲ್‍ಸಿ ಅಪ್ಪಾಜಿಗೌಡ ಸೇರಿದಂತೆ ಹಲವರು ಕಾರಣರಾಗಿದ್ದಾರೆ.

    ಸುರೇಶ್‍ಗೌಡ ಈಗಾಗಲೇ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷೇತರರಾಗಿ ನಿಲ್ಲುವ ಮೂಲಕ ಅವರ ಗಂಡಸ್ತನ ತೋರಿಸಲಿ. ಸುರೇಶ್‍ಗೌಡ ಎಣ್ಣೆ ಕುಡಿದು ನಾಲೆ ಮೇಲೆ ಓಡಾಡುತ್ತಾರೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಸುರೇಶ್‍ಗೌಡ ಇನ್ನು ಮುಂದಾದರೂ ಚಿಕ್ಕ ಚಿಕ್ಕ ಮಾತುಗಳನ್ನಾಡುವುದು ಬಿಟ್ಟು ಅಭಿವೃದ್ಧಿ ಕೆಲಸ ಮಾಡಲಿ ಎಂದು ಆಕ್ರೋಶ ಹೊರಹಾಕಿದ್ದಾರೆ.

    ಇದೇ ವೇಳೆ ಮಾಡನಾಡಿದ ಕಾಂಗ್ರೆಸ್ ಮುಖಂಡ ತುರುಬನಹಳ್ಳಿ ರಾಜೇಗೌಡ ಅವರು ಶಾಸಕ ಸುರೇಶ್‍ಗೌಡ ಅವರನ್ನು ಅಪ್ಪ ಇಲ್ಲದೆ ಹುಟ್ಟಿದ ಮಗು ತರಹ ಎಂದು ಜರಿದು, ಇನ್ನು ಮುಂದೆ ಮಾತನಾಡುವಾಗ ಎಚ್ಚರಿಕೆಯಿಂದ ಇರುವಂತೆ ಆಗ್ರಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv