Tag: Congress leader

  • ಕಾಂಗ್ರೆಸ್ ಮುಖಂಡ ಚನ್ನಬಸಪ್ಪ ಹುಲ್ಲತ್ತಿ ಮನೆ ಮೇಲೆ IT ರೇಡ್ – ಕೋಟಿ ಕೋಟಿ ಹಣ ಸೀಜ್

    ಕಾಂಗ್ರೆಸ್ ಮುಖಂಡ ಚನ್ನಬಸಪ್ಪ ಹುಲ್ಲತ್ತಿ ಮನೆ ಮೇಲೆ IT ರೇಡ್ – ಕೋಟಿ ಕೋಟಿ ಹಣ ಸೀಜ್

    ಹಾವೇರಿ: ಚುನಾವಣೆಗೆ (Election) ಇನ್ನೂ ಮೂರು ದಿನಗಳು ಬಾಕಿಯಿದ್ದು, ಸತತವಾಗಿ ಐಟಿ ಅಧಿಕಾರಿಗಳು ದಾಳಿ (IT Raid) ಮುಂದುವರಿಸಿದ್ದಾರೆ. ಜಿಲ್ಲೆಯ ಕಾಂಗ್ರೆಸ್ ಮುಖಂಡ ಚನ್ನಬಸಪ್ಪ ಹುಲ್ಲತ್ತಿ (Channabasappa Hullatti) ಮನೆ ಮೇಲೆ ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, 2.85 ಕೋಟಿ ಹಣ ವಶಪಡಿಸಿಕೊಂಡಿದ್ದಾರೆ.

    ಬ್ಯಾಡಗಿ ಪಟ್ಟಣದ ವಿದ್ಯಾನಗರದಲ್ಲಿರುವ ಚನ್ನಬಸಪ್ಪ ಮನೆ ಮೇಲೆ ಭಾನುವಾರ ಬೆಳಗ್ಗೆ ದಾಳಿ ನಡೆಸಿದ ಐಟಿ ಅಧಿಕಾರಿಗಳು ದಾಖಲೆಯಿಲ್ಲದ ಕೋಟ್ಯಂತರ ರೂಪಾಯಿ ಹಣವನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಬ್ಯಾಡಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಐಟಿ ಅಧಿಕಾರಿಗಳು ದಾಖಲೆ ಪರಿಶೀಲಿಸುತ್ತಿದ್ದಾರೆ. ಇದನ್ನೂ ಓದಿ: ಬೆಂಗ್ಳೂರು, ಮೈಸೂರಿನ ಫೈನಾನ್ಸಿಯರ್ ಮನೆಗಳ ಮೇಲೆ IT ರೇಡ್ – 20 ಕೋಟಿ ಹಣ ವಶ

    ಎಪಿಎಂಸಿ ಮಾಜಿ ಅಧ್ಯಕ್ಷನಾಗಿರುವ ಚನ್ನಬಸಪ್ಪ ಹುಲ್ಲತ್ತಿ, CKLE ಅಂಡ್‌ ಸನ್ಸ್ ಮೇಣಸಿನಕಾಯಿ ದಲಾಲ ಅಂಗಡಿಯಲ್ಲಿ ಕೇಲಸ ಮಾಡುತ್ತಿದ್ದರು. ಜೊತೆಗೆ ಬ್ಯಾಡಗಿ ಕಾಂಗ್ರೆಸ್ ಅಭ್ಯರ್ಥಿಯ ಜೊತೆ ನಿಕಟ ಸಂಬಂಧ ಹೊಂದಿದ್ದರು. ಬ್ಯಾಡಗಿಯಲ್ಲಿ ನಡೆಯುವ ಕಾಂಗ್ರೆಸ್ ಕಾರ್ಯಕ್ರಮಗಳ ಉಸ್ತುವಾರಿಯನ್ನು ತಾವೇ ನೋಡಿಕೊಳ್ತಾ ಇದ್ರು. ಇದೀಗ ಚನ್ನಬಸಪ್ಪ ಮನೆ ಮೇಲೆ ದಾಳಿ ನಡೆದಿರುವುದು ಉದ್ದೇಶಪೂರ್ವಕವಾಗಿ ಮಾಡಲಾಗಿದೆ ಎಂದು ಕೈ ಕಾರ್ಯಕರ್ತರು ಆರೋಪಿಸಿದ್ದಾರೆ.

    ಸದ್ಯ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿರುವ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಲೈಂಗಿಕ ಕಿರುಕುಳ ಆರೋಪ ಸಾಬೀತಾದ್ರೆ ನಾನೇ ನೇಣು ಹಾಕ್ಕೋತೀನಿ: ಬ್ರಿಜ್ ಭೂಷಣ್

  • ಅತಿಕ್ ಸಮಾಧಿಗೆ ತ್ರಿವರ್ಣ ಧ್ವಜ ಹಾಕಿದ ಕಾಂಗ್ರೆಸ್ ನಾಯಕ ಅರೆಸ್ಟ್

    ಅತಿಕ್ ಸಮಾಧಿಗೆ ತ್ರಿವರ್ಣ ಧ್ವಜ ಹಾಕಿದ ಕಾಂಗ್ರೆಸ್ ನಾಯಕ ಅರೆಸ್ಟ್

    ಲಕ್ನೋ: ಹತ್ಯೆಯಾದ ಗ್ಯಾಂಗ್‌ಸ್ಟರ್ ಹಾಗೂ ರಾಜಕಾರಣಿ ಅತಿಕ್ ಅಹ್ಮದ್ (Atiq Ahmed) ಸಮಾಧಿ (Grave) ಮೇಲೆ ರಾಷ್ಟ್ರ ಧ್ವಜವನ್ನು (Tricolor) ಇರಿಸುವ ಮೂಲಕ ವಿವಾದವನ್ನು ಹುಟ್ಟುಹಾಕಿದ ಕಾಂಗ್ರೆಸ್‌ನ ನಾಯಕನನ್ನು (Congress Leader) ಅಧಿಕಾರಿಗಳು ಬಂಧಿಸಿದ್ದಾರೆ.

    ಓಲ್ಡ್ ಸಿಟಿ ಪ್ರದೇಶದ ಕಸರಿ ಮಸಾರಿ ಸ್ಮಶಾನದಲ್ಲಿ ಅತಿಕ್ ಸಮಾಧಿಯಿದೆ. ಅಲ್ಲಿನ ಸ್ಥಳೀಯ ಕಾಂಗ್ರೆಸ್ ನಾಯಕ ರಾಜ್‌ಕುಮಾರ್ ಸಿಂಗ್ ರಜ್ಜು (Rajkumar Singh Rajju) ಅತಿಕ್ ಸಮಾಧಿ ಮೇಲೆ ರಾಷ್ಟ್ರಧ್ವಜವನ್ನು ಇರಿಸುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಬಳಿಕ ಧೂಮಗಂಜ್ ಪೊಲೀಸರು ಆತನನ್ನು ಬಂಧಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

    ಅತಿಕ್ ಮತ್ತು ಆತನ ಕಿರಿಯ ಸಹೋದರ ಅಶ್ರಫ್ ಏಪ್ರಿಲ್ 15 ರಂದು ರಾತ್ರಿ ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ಮೂವರು ಬಂದೂಕುಧಾರಿಗಳು ಗುಂಡಿಕ್ಕಿ ಅವರಿಬ್ಬರನ್ನೂ ಕೊಂದಿದ್ದರು. ಬಳಿಕ ಏಪ್ರಿಲ್ 16ರ ಸಂಜೆ ತಡವಾಗಿ ಅತಿಕ್ ಮತ್ತು ಅಶ್ರಫ್‌ನ ಸಮಾಧಿ ಮಾಡಲಾಯಿತು. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿರುವ ವೀಡಿಯೊದಲ್ಲಿ ರಾಜ್‌ಕುಮಾರ್ ಸಿಂಗ್ ಅತಿಕ್‌ನನ್ನು ಹುತಾತ್ಮ ಎಂದು ಕರೆದಿದ್ದಾನೆ. ಅತಿಕ್‌ಗೆ ಭಾರತ ರತ್ನ ನೀಡಬೇಕೆಂದು ಎಂದು ಹೇಳಿ ಸಮಾಧಿಯ ಮೇಲೆ ತ್ರಿವರ್ಣ ಧ್ವಜವನ್ನು ಹರಡಿರುವುದು ಕಂಡುಬಂದಿದೆ. ಆದರೆ ಈ ವೀಡಿಯೋ ಕ್ಲಿಪ್‌ನ ಸತ್ಯಾಸತ್ಯತೆ ಇನ್ನೂ ದೃಢಪಟ್ಟಿಲ್ಲ. ಇದನ್ನೂ ಓದಿ: ಗ್ಯಾಂಗ್‍ಸ್ಟಾರ್ ಅತೀಕ್ ಅಹ್ಮದ್ ಬೆಂಬಲಿಗ ಕಾಂಗ್ರೆಸ್ ಸ್ಟಾರ್ ಪ್ರಚಾರಕ – ಕರಂದ್ಲಾಂಜೆ ಖಂಡನೆ

    ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದ ವೀಡಿಯೋದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಬುಧವಾರ ಆರೋಪಿ ಕಾಂಗ್ರೆಸ್ ನಾಯಕನನ್ನು ಬಂಧಿಸಿದ್ದಾರೆ. ಈ ನಡುವೆ ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪ್ರದೀಪ್ ಮಿಶ್ರಾ ಅಂಶುಮಾನ್ ಮಾತನಾಡಿ, ರಾಜ್‌ಕುಮಾರ್‌ನನ್ನು 6 ವರ್ಷಗಳ ಕಾಲ ಪಕ್ಷದಿಂದ ಹೊರಹಾಕಲಾಗಿದೆ. ಅತಿಕ್ ಬಗೆಗಿನ ರಜ್ಜು ಹೇಳಿಕೆಗಳು ಹಾಗೂ ಕೃತ್ಯಗಳು ಆತನ ವೈಯಕ್ತಿಕ ದೃಷ್ಟಿಕೋನದ್ದಾಗಿದೆ. ಇದಕ್ಕೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅತೀಕ್ ಅಹ್ಮದ್ ಪ್ರಕರಣ – ಐವರು ಪೊಲೀಸರ ಅಮಾನತು

  • ಬರ್ತ್‌ಡೇ ಪಾರ್ಟಿಯಲ್ಲಿ ಅರೆಬೆತ್ತಲೆ ನೃತ್ಯ – ಕಾಂಗ್ರೆಸ್ ಸದಸ್ಯರ ನಂಗಾನಾಚ್

    ಬರ್ತ್‌ಡೇ ಪಾರ್ಟಿಯಲ್ಲಿ ಅರೆಬೆತ್ತಲೆ ನೃತ್ಯ – ಕಾಂಗ್ರೆಸ್ ಸದಸ್ಯರ ನಂಗಾನಾಚ್

    ರಾಮನಗರ: ರಾಜಕೀಯ ಪಕ್ಷಗಳ (Political Party) ನಾಯಕರಿಗೆ ತಮ್ಮ ಹುಟ್ಟುಹಬ್ಬಗಳನ್ನು ವೈಭವವಾಗಿ ಆಚರಿಸಿಕೊಳ್ಳುವುದು ಪ್ರತಿಷ್ಠೆಯ ಸಂಕೇತವಾಗಿದೆ.

    ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ ಶಿವಕುಮಾರ್ (Dk Shivakumar) ಅವರ ತವರು ಜಿಲ್ಲೆ ರಾಮನಗರ (Ramanagar) ನಗರಸಭೆಯ 19ನೇ ವಾರ್ಡ್ ಸದಸ್ಯ ದೌಲತ್ ಷರೀಫ್ ತಮ್ಮ ಬರ್ತ್‌ಡೇ ಆಚರಣೆಗೆ ಬೆಂಗಳೂರಿನಿಂದ ಡ್ಯಾನ್ಸರ್‌ಗಳನ್ನು ಕರೆಸಿ ಅವರು ಅರೆಬೆತ್ತಲೆಯಾಗಿ ಕುಣಿಯುವಾಗ (Hot Dance) ನೋಟುಗಳ ಸುರಿಮಳೆ ಸುರಿಸಿದ್ದಾರೆ. ಇದನ್ನೂ ಓದಿ: ದೇಶದಲ್ಲೇ ಅಪಖ್ಯಾತಿ ಹೊಂದಿದ್ದ ನಿಮ್ಮಿಂದ ಪಾಠ ಕಲಿಯಬೇಕಿಲ್ಲ – ಅಮಿತ್ ಶಾ ವಿರುದ್ಧ ಓವೈಸಿ ಕಿಡಿ

    ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಯಾರಬ್ ನಗರದಲ್ಲಿರುವ ಕಲ್ಯಾಣ ಮಂಟಪದಲ್ಲಿ ಹುಚ್ಚೆದ್ದು ಕುಣಿದಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಕಾಂಗ್ರೆಸ್ ನಗರಸಭೆ ಸದಸ್ಯರ ವರ್ತನೆಗೆ ಆಕ್ಷೇಪ ವ್ಯಕ್ತವಾಗಿದೆ. ಇದನ್ನೂ ಓದಿ: ಪ್ರತಿದಿನ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳೋದು ನಮ್ಮ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಾ?

    Live Tv
    [brid partner=56869869 player=32851 video=960834 autoplay=true]

  • ಹುಬ್ಬಳ್ಳಿಯಲ್ಲೀಗ `PAY MAYOR’ ಅಭಿಯಾನ

    ಹುಬ್ಬಳ್ಳಿಯಲ್ಲೀಗ `PAY MAYOR’ ಅಭಿಯಾನ

    ಹುಬ್ಬಳ್ಳಿ: ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿಗಳಿಗೆ (President of India) ಪೌರ ಸನ್ಮಾನ ಮಾಡುವ ಮೂಲಕ ರಾಜ್ಯಕ್ಕೆ ಹೆಮ್ಮೆ ತಂದಿದ್ದ ಹುಬ್ಬಳ್ಳಿ (Hubballi) ಧಾರವಾಡ ಮಹಾನಗರ ಪಾಲಿಕೆ (City Corporation) ಮೇಲಿಗ ಗಂಭೀರ ಆರೋಪ ಕೇಳಿ ಬಂದಿದೆ.

    ರಾಷ್ಟ್ರಪತಿಗಳ (President Of India) ಕಾರ್ಯಕ್ರಮಕ್ಕೆ ಹಾಕಿದ್ದ ವೇದಿಕೆ ನಿರ್ಮಾಣದಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿರುವ ಕೆಲ ಕಾಂಗ್ರೆಸ್ ಕಾರ್ಯಕರ್ತರು, ಪೇ ಸಿಎಂ (PayCM) ಅಭಿಯಾನದ ಮಾದರಿಯಲ್ಲಿ ಪೇ ಮೆಯರ್ (Pay Mayor) ಅಭಿಯಾನ ಆರಂಭಿಸಿದ್ದಾರೆ. ಈ ಪರಿಣಾಮ ಹುಬ್ಬಳ್ಳಿ ಪ್ರಮುಖ ವೃತ್ತಗಳಲ್ಲಿ ಪೇ ಮೇಯರ್ ಅಂತ ಈರೇಶ್ ಅಂಚಟಗೇರಿ ಅವರ ಪೋಸ್ಟರ್ ಹಾಕಲಾಗಿದೆ. ಇದನ್ನೂ ಓದಿ: ದಸರಾ ಸಂಭ್ರಮ – ಲಾರ್ಡ್ಸ್ ಪೆವಿಲಿಯನ್‌ನಲ್ಲಿ ನಿಂತು ತ್ರಿವರ್ಣ ಧ್ವಜ ಹಾರಿಸಿದ ಗಂಗೂಲಿ

    ಇದೇ ಸೆಪ್ಟೆಂಬರ್ 26ರಂದು ನಡೆದ ರಾಷ್ಟ್ರಪತಿಗಳ ಪೌರ ಸನ್ಮಾನ ಕಾರ್ಯಕ್ರಮಕ್ಕಾಗಿ ದೇಶಪಾಂಡೆ ನಗರದ ಜೀಮ್ ಖಾನ್ ಮೈದಾನದಲ್ಲಿ 5 ಸಾವಿರ ಜನಕ್ಕೆ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿತ್ತು. ಈ ವೇದಿಕೆ ಮತ್ತು ರಾಷ್ಟ್ರಪತಿಗಳ ಪೌರಸನ್ಮಾನಕ್ಕೆ ಬರೊಬ್ಬರಿ 1.5 ಕೋಟಿ ಖರ್ಚಾಗಿದೆ. ಈ ಖರ್ಚು ಮಾಡುವುದರಲ್ಲಿ ಪಾಲಿಕೆ ನಿಯಮ ಪಾಲನೆ ಮಾಡಿಲ್ಲ ಹಾಗೂ ಪೆಂಡಾಲ್ ಹಾಕಿಸಿದ ಬಳಿಕ ಕೊಟೇಶನ್ ಆಹ್ವಾನ ಮಾಡಲಾಗಿದೆ. ಇದರಿಂದಾಗಿ ಕಾರ್ಯಕ್ರಮದ ನಿರ್ವಹಣೆ ಖರ್ಚಿನಲ್ಲಿ ಬ್ರಹ್ಮಾಂಡದ ಭ್ರಷ್ಟಾಚಾರ ನಡೆದಿದ್ದು, ಇದರಲ್ಲಿ ಮೇಯರ್ ಕೈವಾಡಯಿದೆ ಎಂಬುದು ಕಾಂಗ್ರೆಸ್ ಕಾರ್ಯಕರ್ತರ ಆರೋಪವಾಗಿದೆ. ಆದ್ದರಿಂದ ಹುಬ್ಬಳ್ಳಿ ನಗರದ ಕೆಲವಡೆ ಪೇ ಮೇಯರ್ ಪೋಸ್ಟರ್ ಅಂಟಿಸಿ ಕಾಂಗ್ರೆಸ್ (Congress) ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಪಿಎಫ್‌ಐ ನಂತೆಯೇ RSSನ್ನೂ ಬ್ಯಾನ್‌ ಮಾಡಿ: ಕೇರಳ ವಿಪಕ್ಷಗಳ ಒತ್ತಾಯ

    ಕಾಂಗ್ರೆಸ್ ಕಾರ್ಯಕರ್ತರ ಈ ಅಭಿಯಾನಕ್ಕೆ ಮೇಯರ್ ಈರೇಶ್ ಅಂಚಟಗೇರಿ ಕೆಂಡಾಮಂಡಲರಾಗಿದ್ದಾರೆ. ರಾಷ್ಟ್ರಪತಿಗಳ ಕಾರ್ಯಕ್ರಮದ ಖರ್ಚಿನಲ್ಲಿ ಒಂದು ರೂಪಾಯಿ ಸಹ ಭ್ರಷ್ಟಾಚಾರವಾಗಿಲ್ಲ. ಇನ್ನೂ ಕಾರ್ಯಕ್ರಮದ ನಿರ್ವಹಣೆಯಲ್ಲಿ ಮೇಯರ್ ಪಾತ್ರವೇ ಬರುವುದಿಲ್ಲ. ಕಾಂಗ್ರೆಸ್ ಕಾರ್ಯಕರ್ತರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಇದರಿಂದ ಒಂದು ಕಡೆ ರಾಷ್ಟ್ರಪತಿಗಳಿಗೆ ಅಪಮಾನ ಮಾಡಿದಂತಾದ್ರೆ ಮತ್ತೊಂದು ಕಡೆ ಮೇಯರ್ ಸ್ಥಾನ ಘನತೆಯನ್ನು ಹಾಳು ಮಾಡುವ ಹುನ್ನಾರ ಇದಾಗಿದೆ. ಹೀಗಾಗಿ ಪೋಸ್ಟರ್ ಅನ್ನು ಸಾಮಾಜಿಕ ತಾಣದಲ್ಲಿ ಶೇರ್ ಮಾಡಿದವರ ಮತ್ತು ಪೊಸ್ಟ್ ಅಂಟಿಸಿದವರ ವಿರುದ್ಧ ಪೊಲೀಸ್ ಕಮಿಷನರ್‌ (Police Commissioner Hubballi) ಗೆ ದೂರು ನೀಡಿರುವುದಾಗಿ ಮೇಯರ್ ಮಾಧ್ಯಮಗಳ ಮುಂದೆ ಅಸಮಾಧಾನ ಹೊರಹಾಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹಿರಿಯ ಕಾಂಗ್ರೆಸ್ ಮುಖಂಡ ಬಿ.ಕೆ.ಪುಟ್ಟಸ್ವಾಮಿ ನಿಧನಕ್ಕೆ ಡಿಕೆಶಿ ಸಂತಾಪ

    ಹಿರಿಯ ಕಾಂಗ್ರೆಸ್ ಮುಖಂಡ ಬಿ.ಕೆ.ಪುಟ್ಟಸ್ವಾಮಿ ನಿಧನಕ್ಕೆ ಡಿಕೆಶಿ ಸಂತಾಪ

    ಬೆಂಗಳೂರು: ರಾಜ್ಯ ಸಹಕಾರಿ ರತ್ನ ಪ್ರಶಸ್ತಿ ವಿಜೇತ ಹಿರಿಯ ಕಾಂಗ್ರೆಸ್ ಮುಖಂಡ, ಮಂಡ್ಯ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಿ.ಕೆ.ಪುಟ್ಟಸ್ವಾಮಿ (B.K.Puttaswamy Gowda) ಆವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K.Shivakumar) ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

    ಮಳವಳ್ಳಿ (Malavalli) ಪಿಎಲ್‌ಡಿ ಬ್ಯಾಂಕ್ ಮಾಜಿ ನಿರ್ದೇಶಕರು, ತಾಲೂಕು ಬೋರ್ಡ್ ಮಾಜಿ ಸದಸ್ಯರು, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷರು ಆಗಿದ್ದ ಪುಟ್ಟಸ್ವಾಮಿ ಅವರು ನೇರ ನಡೆ, ನುಡಿಯ ವ್ಯಕ್ತಿತ್ವ ಹೊಂದಿದ್ದರು. ಕಾಂಗ್ರೆಸ್ (Congress) ಪಕ್ಷದ ನಿಷ್ಠಾವಂತ ಮುಖಂಡರಾಗಿದ್ದರು. ಹಿರಿಯ ಮಾರ್ಗದರ್ಶಕರೂ ಆಗಿದ್ದರು. ಅವರ ನಿಧನ ಅತೀವ ನೋವು ತಂದಿದೆ. ಪಕ್ಷಕ್ಕೆ ನಷ್ಟವಾಗಿದೆ ಎಂದು ಶಿವಕುಮಾರ್ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಗಾಂಜಾ ದಂಧೆಕೋರರಿಂದಲೇ ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ – ICUನಲ್ಲಿ ಸಿಪಿಐ

    ಪುಟ್ಟಸ್ವಾಮಿ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಅವರ ಅಗಲಿಕೆ ನೋವು ಭರಿಸುವ ಶಕ್ತಿಯನ್ನು ಅವರ ಕುಟುಂಬ ಸದಸ್ಯರು, ಬಂಧುಗಳು, ಅಭಿಮಾನಿಗಳಿಗೆ ಆ ಭಗವಂತ ನೀಡಲಿ ಎಂದು ಶಿವಕುಮಾರ್ ಅವರು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸ್ಪಾದಲ್ಲಿ ಕೆಲಸ ಮಾಡುತ್ತಿದ್ದ ಯುವತಿಗೆ ಲೈಂಗಿಕ ಕಿರುಕುಳ – ಕಾಂಗ್ರೆಸ್ ಮುಖಂಡನ ಬಂಧನ

    ಸ್ಪಾದಲ್ಲಿ ಕೆಲಸ ಮಾಡುತ್ತಿದ್ದ ಯುವತಿಗೆ ಲೈಂಗಿಕ ಕಿರುಕುಳ – ಕಾಂಗ್ರೆಸ್ ಮುಖಂಡನ ಬಂಧನ

    ಧಾರವಾಡ: ತನ್ನದೇ ಸ್ಪಾದಲ್ಲಿ (Spa) ಬ್ಯೂಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಯುವತಿಯ ಜೊತೆ ಅನುಚಿತವಾಗಿ ವರ್ತಿಸಿದ ಆರೋಪದಡಿ ಕಾಂಗ್ರೆಸ್ ಮುಖಂಡನಿಗೆ(Congress leader) ಯುವತಿ(Young Women) ಸ್ನೇಹಿತರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

    ಹೌದು, ಧಾರವಾಡದ ಕಾಂಗ್ರೆಸ್ ಮುಖಂಡ ಮನೋಜ್‍ ಕರ್ಜಗಿ(Manoj Karjagi) ಎಂಬಾತ ಸಿದ್ದರಾಮಯ್ಯ (Siddaramaiah) ಸರ್ಕಾರದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಿರ್ದೇಶಕ ಆಗಿದ್ದ. ಈತ ಮಾಜಿ ಸಚಿವ ವಿನಯ್ ಕುಲಕರ್ಣಿ (Vinay Kulkarni) ಅವರ ಪರಮ ಆಪ್ತ. ಕರ್ಜಗಿ ವೃತ್ತಿಯಿಂದ ಧಾರವಾಡದ (Darwad) ವಿದ್ಯಾಗಿರಿ ಬಡಾವಣೆಯಲ್ಲಿ ಲೇಮೋಸ್ ಯುನಿಸೆಕ್ಸ್ ಸಲೂನ್ ಆ್ಯಂಡ್ ಸ್ಪಾ ನಡೆಸುತ್ತಿದ್ದಾನೆ. ಇದನ್ನೂ ಓದಿ: ನನ್ನ ನೋಡಿ ಬೊಗಳುತ್ತೆ – ನಾಯಿಯನ್ನು ಅಟ್ಟಾಡಿಸಿಕೊಂಡು ಗುಂಡಿಕ್ಕಿ ಕೊಂದ

    ಭಾನುವಾರ (Sunday) ಮಧ್ಯಾಹ್ನ ಸ್ಪಾದಲ್ಲಿ ಕೆಲಸ ಮಾಡುತ್ತಿದ್ದ 19 ವರ್ಷದ ಬ್ಯೂಟಿಷಿಯನ್ (Beautician) ಜೊತೆ ಸ್ಪಾ ಕ್ಲೀನ್ ಆಗಿ ಇಟ್ಟಿಲ್ಲ ಎಂಬ ವಿಚಾರವಾಗಿ ಕಿರಿಕ್ ಮಾಡಿದ್ದಾನೆ. ಬಳಿಕ ಆಕೆಯನ್ನು ತಬ್ಬಿಕೊಂಡು ಮುತ್ತು ಕೊಡಲು ಯತ್ನಿಸಿದ್ದಾನೆ. ಈ ವೇಳೆ ಅಲ್ಲಿಂದ ಕೂಗಾಡುತ್ತಾ ಹೊರ ಬಂದ ಯುವತಿ, ತನ್ನ ಸ್ನೇಹಿತರನ್ನು (Friends) ಅಲ್ಲಿಗೆ ಕರೆಯಿಸಿಕೊಂಡಿದ್ದಾಳೆ. ಆಗ ಸ್ಪಾಗೆ ಬಂದ ಯುವತಿಯ ಸ್ನೇಹಿತರ ಗುಂಪು ಮನೋಜ್‍ಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ವೇಳೆ ಯುವತಿಗೆ ಕ್ಷಮೆ ಕೇಳಿ ಎಲ್ಲವೂ ಮುಗಿದಿತ್ತು.

    ಹೀಗಿದ್ದರೂ ತಾನು ಸಾಚಾ ಎಂದು ತೋರಿಸಿಕೊಳ್ಳಲು ಹೋಗಿ ಕಾಂಗ್ರೆಸ್ ಮುಖಂಡ ತಾನೇ ತೋಡಿದ ಖೆಡ್ಡಾದಲ್ಲಿ ತಾನೇ ಬಿದ್ದಿದ್ದಾನೆ. ಗಲಾಟೆ ವೇಳೆ ಆಯನ್ ನದಾಫ್(Ayan Nadaf) ಎಂಬಾತನಿಗೆ ಗಾಯವಾಗಿದ್ದು, ಈತನೊಂದಿಗೆ ಮನೋಜ್‍ ಕರ್ಜಗಿ ನಮ್ಮ ಮೇಲೆ ಗುಂಪೊಂದು ಹಲ್ಲೆ ಮಾಡಿ ಪರಾರಿಯಾಗಿದೆ ಅಂತಾ ಎಂಎಲ್‍ಸಿ(MLC) ಮಾಡಿಸಿ ಚಿಕಿತ್ಸೆ ಪಡೆದುಕೊಂಡಿದ್ದರು. ಘಟನೆಯಲ್ಲಿ ಕರ್ಜಗಿ ಕೈಗೆ ಏಟಾಗಿದ್ದರೆ, ಆಯನ್ ಬೆನ್ನಿಗೆ ಇರಿತ ಆಗಿದೆ. ಕರ್ಜಗಿ ಇತ್ತ ಎಂಎಲ್‍ಸಿ ಮಾಡಿಸುತ್ತಿದ್ದಂತೆಯೇ ವಿದ್ಯಾಗಿರಿ ಠಾಣೆಗೆ ಬಂದ ಯುವತಿ, ಮನೋಜ್‍ ಕರ್ಜಗಿ ವಿರುದ್ಧ ಲೈಂಗಿಕ ದೌರ್ಜನ್ಯದ ಕೇಸ್ ದಾಖಲಿಸಿದ್ದು, ಸದ್ಯ ಕರ್ಜಗಿಯನ್ನು ವಿದ್ಯಾಗಿರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

    ಮತ್ತೊಂದು ಕಡೆ ಅಯಾನ್ ಹಾಗೂ ಕರ್ಜಗಿ ಮೇಲೆ ಹಲ್ಲೆ ಮಾಡಿದವರ ಮೇಲೂ ವಿದ್ಯಾಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಮತ್ತು ಈ ಸಂಬಂಧ ಮೂವರು ಯುವಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಸ್ಮಾರ್ಟ್ ಫೋನ್ ಬಳಕೆದಾರರೇ ಎಚ್ಚರ! – ಎಂಟ್ರಿಕೊಟ್ಟಿದೆ ರಷ್ಯಾದ ಸೋವಾ-5.0 ವೈರಸ್

    Live Tv
    [brid partner=56869869 player=32851 video=960834 autoplay=true]

  • ಮದುವೆಯಾಗೋ ನೆಪದಲ್ಲಿ ಕಾರ್ಯಕರ್ತೆ ಮೇಲೆ ತೆಲಂಗಾಣದ ಕಾಂಗ್ರೆಸ್ ಮುಖಂಡನಿಂದ ಅತ್ಯಾಚಾರ

    ಮದುವೆಯಾಗೋ ನೆಪದಲ್ಲಿ ಕಾರ್ಯಕರ್ತೆ ಮೇಲೆ ತೆಲಂಗಾಣದ ಕಾಂಗ್ರೆಸ್ ಮುಖಂಡನಿಂದ ಅತ್ಯಾಚಾರ

    ಹೈದರಾಬಾದ್: ಮದುವೆಯಾಗುವ ನೆಪದಲ್ಲಿ ಪಕ್ಷದ ಕಾರ್ಯಕರ್ತೆ ಮೇಲೆ ಅತ್ಯಾಚಾರವೆಸಗಿದ ಆರೋಪದಡಿ ತೆಲಂಗಾಣದ ನಾರಾಯಣಪೇಟೆ ಜಿಲ್ಲಾ ಕಾಂಗ್ರೆಸ್ ಮುಖಂಡ ಕುಂಬಂ ಶಿವಕುಮಾರ್ ರೆಡ್ಡಿ ವಿರುದ್ಧ ಹೈದರಾಬಾದ್‍ನ ಪುಂಜಗುಟ್ಟ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

    ಮದ್ಯದ ಅಮಲಿನಲ್ಲಿದ್ದ ಶಿವಕುಮಾರ್ ರೆಡ್ಡಿ ನನ್ನ ಮೇಲೆ ನಗರದ ಹೊಟೇಲ್‍ನಲ್ಲಿ ಅತ್ಯಾಚಾರವೆಸಗಿದ್ದಾರೆ ಮತ್ತು ನನ್ನ ಖಾಸಗಿ ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಇದನ್ನೂ ಓದಿ: ಪಂದ್ಯ ಸೋತ್ರೂ ರೋಮ್ಯಾಂಟಿಕ್ ಮೂಡ್- ಗೆಳತಿಗೆ ಪ್ರಪೋಸ್ ಮಾಡಿದ ಕ್ರಿಕೆಟಿಗ

    ಈ ಕುರಿತಂತೆ ದೂರು ನೀಡಿರುವ ಮಹಿಳೆ ತಾನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸದಸ್ಯೆಯಾಗಿದ್ದು, 2020ರಲ್ಲಿ ಮುನ್ಸಿಪಲ್ ಚುನಾವಣೆಗಳನ್ನು ಪ್ರಚಾರ ಮಾಡಲು ಸಂಘಟಿಸಲು ನಿಯೋಜನೆಗೊಂಡಿದ್ದೆ. ಈ ವೇಳೆ ನನಗೆ ನಾರಾಯಣಪೇಟೆ ಕ್ಷೇತ್ರ ಮಂಜೂರಾಗಿತ್ತು. ಹೀಗಾಗಿ ನಾರಾಯಣಪೇಟೆಗೆ ತೆರಳಿದ್ದೆ. ಆಗ ನಾರಾಯಣಪೇಟೆಗೆ ಆಗಮಿಸಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕುಂಬಂ ಶಿವಕುಮಾರ್ ರೆಡ್ಡಿ ಅವರನ್ನು ಭೇಟಿಯಾದೆ. ಅಂದಿನಿಂದ ಅವರು ನನಗೆ ಹತ್ತಿರ ಆಗಲು ಯತ್ನಿಸಿದರು. ಮೊಬೈಲ್‍ನಲ್ಲಿ ಸಂದೇಶ ಕಳುಹಿಸಲು ಆರಂಭಿಸಿದರು. ಒಂದು ದಿನ ನನ್ನನ್ನು ಮದುವೆಯಾಗುವ ಇಚ್ಛೆಯನ್ನು ವ್ಯಕ್ತಪಸಿದ್ದರು ಎಂದು ಹೇಳಿದ್ದಾರೆ.

    ಈ ಬಗ್ಗೆ ಶಿವಕುಮಾರ್ ರೆಡ್ಡಿ ಅವರನ್ನು ಪ್ರಶ್ನಿಸಿದಾಗ, ನನ್ನ ಪತ್ನಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರು ಮೂರು ವರ್ಷಕ್ಕಿಂತಲೂ ಹೆಚ್ಚು ದಿನ ಬದುಕುಳಿಯುವುದಿಲ್ಲ. ಹಾಗಾಗಿ ಅವರನ್ನು ನೋಡಿಕೊಳ್ಳಲು ಮಹಿಳೆಯ ಅಗತ್ಯವಿದೆ ಎನ್ನುತ್ತಿದ್ದರು ಅಂತ ತಿಳಿಸಿದ್ದಾರೆ. ಇದನ್ನೂ ಓದಿ: ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಾಕಿದ್ದಕ್ಕೆ ಸೌದಿ ಮಹಿಳೆಗೆ 45 ವರ್ಷ ಜೈಲು ಶಿಕ್ಷೆ

    POLICE JEEP

    ಮಹಿಳೆ ದುಬ್ಬಾಕ ಜಿಲ್ಲೆಯಲ್ಲಿ ತಂಗಿದ್ದರು. ಒಮ್ಮೆ ಮದ್ಯದ ಅಮಲಿನಲ್ಲಿ ಮಹಿಳೆಯ ರೂಮ್‍ಗೆ ನುಗ್ಗಿದ ಶಿವಕುಮಾರ್ ರೆಡ್ಡಿ, ತನ್ನೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಒತ್ತಾಯಿಸಿದ್ದರು. ಇದಕ್ಕೆ ನಿರಾಕರಿಸಿದಾಗ ತನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೇ ನನ್ನನ್ನು ನಂಬಿಸಲು ಹಿಂದೂ ಸಂಪ್ರದಾಯದಂತೆ ಹಳದಿ ದಾರವನ್ನು ಕಟ್ಟಿ ನನ್ನನ್ನು ಮದುವೆಯಾಗಿದ್ದರು. ನಂತರ ಮಾತನಾಡಬೇಕೆಂದು ಹೋಟೆಲ್‍ಗೆ ಕರೆಸಿಕೊಂಡು ನನಗೆ ಕೆಲವು ಮಾತ್ರೆಗಳನ್ನು ತಿನ್ನಿಸಿ ಅತ್ಯಾಚಾರ ಎಸಗಿದ್ದಾರೆ. ನನಗೆ ಪ್ರಜ್ಞೆ ಬಂದ ಬಳಿಕ ನನ್ನ ಫೋಟೋಗಳನ್ನು ಕ್ಲಿಕ್ಕಿಸಿಕೊಂಡು, ನಾನು ಹೇಳಿದಂತೆ ಕೇಳಲಿಲ್ಲ ಎಂದರೆ, ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಪೋಸ್ಟ್ ಮಾಡುತ್ತೇನೆ ಅಂತ ಬೆದರಿಕೆಯೊಡ್ಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಇದೀಗ ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 420 (ವಂಚನೆ), 476 ಐಪಿಸಿ (ಅತ್ಯಾಚಾರ) ಮತ್ತು 506 ಐಪಿಸಿ (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ತನಿಖೆ ನಡೆಯುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ರಾಷ್ಟ್ರಪತ್ನಿ ಹೇಳಿಕೆ ವಿವಾದ – ದ್ರೌಪದಿ ಮುರ್ಮುಗೆ ಪತ್ರ ಬರೆದು ಕ್ಷಮೆಯಾಚಿಸಿದ ಅಧೀರ್

    ರಾಷ್ಟ್ರಪತ್ನಿ ಹೇಳಿಕೆ ವಿವಾದ – ದ್ರೌಪದಿ ಮುರ್ಮುಗೆ ಪತ್ರ ಬರೆದು ಕ್ಷಮೆಯಾಚಿಸಿದ ಅಧೀರ್

    ನವದೆಹಲಿ: ಸಂದರ್ಶನವೊಂದರಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ʼರಾಷ್ಟ್ರಪತ್ನಿʼ ಎಂದು ಹೇಳುವ ಮೂಲಕ ಭಾರೀ ಟೀಕೆಗೆ ಗುರಿಯಾಗಿದ್ದ ಕಾಂಗ್ರೆಸ್‌ ಸಂಸದ ಅಧೀರ್‌ ರಂಜನ್‌ ಚೌಧರಿ ಅವರು ಕ್ಷಮೆಯಾಚಿಸಿದ್ದಾರೆ. ಈ ಸಂಬಂಧ ರಾಷ್ಟ್ರಪತಿ ಮುರ್ಮು ಅವರಿಗೆ ಪತ್ರ ಬರೆದು ಚೌಧರಿ ಕ್ಷಮೆ ಕೋರಿದ್ದಾರೆ.

    ನೀವು ಹೊಂದಿರುವ ಸ್ಥಾನದ ಬಗ್ಗೆ ತಪ್ಪಾಗಿ ಪದ ಬಳಸಿ ಮಾತನಾಡಿದ್ದಕ್ಕೆ ವಿಷಾದಿಸುತ್ತೇನೆ. ಬಾಯಿತಪ್ಪಿ ಈ ಹೇಳಿಕೆ ಬಂದಿದೆಯಷ್ಟೆ. ನನ್ನ ಹೇಳಿಕೆಗೆ ಕ್ಷಮೆಯಾಚಿಸುತ್ತೇನೆ. ನೀವು ಕ್ಷಮೆಯನ್ನು ಸ್ವೀಕರಿಸುವಂತೆ ವಿನಂತಿಸುತ್ತೇನೆ ಎಂದು ಚೌಧರಿ ಅವರು ಬುಡಕಟ್ಟು ಸಮುದಾಯದಿಂದ ದೇಶದ ಮೊದಲ ರಾಷ್ಟ್ರಪತಿಯಾಗಿರುವ ಮುರ್ಮು ಅವರಿಗೆ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಸಿಂಗಾಪುರ ಭೇಟಿ ರದ್ದು – ನಾನು ಯಾರನ್ನೂ ದೂಷಿಸಲ್ಲ: ಕೇಜ್ರಿವಾಲ್

    ತಮ್ಮ ಪಕ್ಷದ ನಾಯಕಿ ಬಗ್ಗೆ ಚೌಧರಿ ನೀಡಿದ್ದ ಹೇಳಿಕೆಗೆ ಬಿಜೆಪಿ ಭಾರೀ ಟೀಕೆ ವ್ಯಕ್ತಪಡಿಸಿತ್ತು. ಅಲ್ಲದೇ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರು ಸಹ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಒತ್ತಾಯಿಸಿತ್ತು.

    ಇದು ಬಾಯಿ ತಪ್ಪಿ ಹೇಳಿದ ಮಾತಲ್ಲ. ಸಂದರ್ಶನದ ದೃಶ್ಯಾವಳಿಗಳನ್ನು ನೋಡಿದರೆ, ಅಧೀರ್ ರಂಜನ್ ಚೌಧರಿ ಅವರು ರಾಷ್ಟ್ರಪತಿಯನ್ನು ಎರಡು ಬಾರಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ನಂತರ ಅವರನ್ನು ರಾಷ್ಟ್ರಪತ್ನಿ ಎಂದು ಕರೆದಿದ್ದಾರೆ. ಇಂತಹ ವಿಷಯಗಳನ್ನು ಲಘುವಾಗಿ ಸ್ವೀಕರಿಸಬಾರದು ಎಂದು ಕಾನೂನು ಸಚಿವ ಕಿರಣ್ ರಿಜಿಜು ಹೇಳಿಕೆ ನೀಡಿದ್ದರು. ಅಲ್ಲದೇ ಚೌಧರಿ ವಿರುದ್ಧ ಸಂಸತ್‌ನಲ್ಲಿ ಗುರುವಾರ ಬಿಜೆಪಿ ನಾಯಕರು ಗದ್ದಲ ಎಬ್ಬಿಸಿದ್ದರು.‌ ಇದನ್ನೂ ಓದಿ: ಭಾರೀ ಬೆಂಕಿಗೆ ಹೊತ್ತಿ ಉರಿದ ಮುಂಬೈ ಶಾಪ್ – ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ

    Live Tv
    [brid partner=56869869 player=32851 video=960834 autoplay=true]

  • ಕೊಲೆಗೆ ಯತ್ನ – ಕಾಂಗ್ರೆಸ್ ಮುಖಂಡ ಅರೆಸ್ಟ್

    ಕೊಲೆಗೆ ಯತ್ನ – ಕಾಂಗ್ರೆಸ್ ಮುಖಂಡ ಅರೆಸ್ಟ್

    ಬಳ್ಳಾರಿ: ಖಾಲಿ ನಿವೇಶನ ತೆರವು ಮಾಡುವ ವಿಚಾರದಲ್ಲಿ ಕೊಲೆಗೆ ಯತ್ನ ಮಾಡಿದ್ದಾನೆ ಎಂಬ ಆರೋಪದ ಹಿನ್ನೆಲೆ ಕಾಂಗ್ರೆಸ್ ಮುಖಂಡನನ್ನು ಪೊಲೀಸರು ಬಂಧನ ಮಾಡಿದ್ದಾರೆ.

    ಬಳ್ಳಾರಿ ಮಹಾನಗರ ಪಾಲಿಕೆ 14ನೇ ವಾರ್ಡ್‍ನ ಸದಸ್ಯೆಯ ಪತಿ ಬಿ.ಆರ್.ಎಲ್.ಸೀನಾ ಅವರನ್ನು ಬಳ್ಳಾರಿ ಬ್ರೂಸ್ ಪೇಟ್ ಪೊಲೀಸರು ಬಂಧನ ಮಾಡಿದ್ದಾರೆ. ಬಳ್ಳಾರಿ ಗುಗ್ಗರಹಟ್ಟಿ ನಿವಾಸಿ ಕೆ.ವೆಂಕಟೇಶ್ ದೂರು ನೀಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡ ಸೀನಾ ಅವರನ್ನು ಬಂಧಿಸಲಾಗಿದೆ.

    ಖಾಲಿ ನೀವೇಶನ ತೆರವು ವಿಚಾರಕ್ಕೆ, ಕಿಡ್ನ್ಯಾಪ್ ಮಾಡಿ ಕೊಲೆಗೆ ಯತ್ನ ಮಾಡಿದ್ದಾರೆ ಎಂದು ಆರೋಪಿಸಿ ವೆಂಕಟೇಶ್ ಅವರು ಬಳ್ಳಾರಿ ಬ್ರೂಸ್ ಪೇಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪ್ರಕರಣ ವಿಚಾರಣೆ ನಡೆಸಿ, ಬಿ.ಆರ್.ಎಲ್.ಸೀನಾ ಅವರನ್ನು ಬಂಧನ ಮಾಡಿದ್ದಾರೆ. ಇದನ್ನೂ ಓದಿ: ಟ್ವೀಟ್ ಬಯೋದಿಂದ ‘ಕೈ’ ಚಿಹ್ನೆ ಬಿಟ್ಟ ಹಾರ್ದಿಕ್ ಪಟೇಲ್ 

    ನಡೆದಿದ್ದೇನು?
    ಸೀನಾ ಅವರು ವೆಂಕಟೇಶ್ ಅವರಿಗೆ ನಿವೇಶನ ಖಾಲಿ ಮಾಡುವಂತೆ ಒತ್ತಾಯ ಮಾಡಿ, ಖಾಲಿ ಬಾಂಡ್ ಮೇಲೆ ಸಹಿ ಮಾಡಿಸಿಕೊಂಡಿದ್ದರು. ಅಲ್ಲದೇ ಕಾರ್‌ನಲ್ಲಿ ಕಿಡ್ನ್ಯಾಪ್ ಮಾಡಿ ಕೊಲೆಗೆ ಯತ್ನ ಮಾಡಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

  • ಘರ್ಷಣೆ ಹಿಂದಿದ್ದಾರಾ ಸ್ಥಳೀಯ ಕಾಂಗ್ರೆಸ್ಸಿಗ?- ಅಲ್ತಾಫ್ ಹಳ್ಳೂರ ಪಾತ್ರದ ಬಗ್ಗೆ ಬಿಎಸ್‍ವೈ ಶಂಕೆ

    ಘರ್ಷಣೆ ಹಿಂದಿದ್ದಾರಾ ಸ್ಥಳೀಯ ಕಾಂಗ್ರೆಸ್ಸಿಗ?- ಅಲ್ತಾಫ್ ಹಳ್ಳೂರ ಪಾತ್ರದ ಬಗ್ಗೆ ಬಿಎಸ್‍ವೈ ಶಂಕೆ

    ಹುಬ್ಬಳ್ಳಿ: ಗಲಭೆ ಸ್ಥಳದಲ್ಲಿ ಹುಬ್ಬಳ್ಳಿ ಕಾಂಗ್ರೆಸ್ ಮುಖಂಡ ಅಲ್ತಾಫ್ ಹಳ್ಳೂರ ಇದ್ದ ವಿಚಾರ ಬಯಲಾಗುತ್ತಲೇ ಬಿಜೆಪಿ ಸಿಡಿದೆದ್ದಿದೆ. ಇಡೀ ಪ್ರಕರಣಕ್ಕೆ ಪೊಲಿಟಿಕಲ್ ಟಚ್ ನೀಡಿದೆ. ಇದು ಕಾಂಗ್ರೆಸ್ ಕೃತ್ಯ ಎಂದೇ ಆರೋಪಿಸಿದೆ.

    ಹಿಜಬ್ ವಿವಾದ ಕಾವೇರಿದ್ದ ಸಂದರ್ಭದಲ್ಲಿ ಫೆಬ್ರವರಿ 12ರಂದು ಅಲ್ತಾಫ್ ಹಳ್ಳೂರ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಓರ್ವ ಶಿಕ್ಷಕಿ ರಕ್ತಪಾತದ ಬೆದರಿಕೆ ಹಾಕಿದ್ದರು. ಅವತ್ತಿನ ಹೇಳಿಕೆಗೂ ಹುಬ್ಬಳ್ಳಿ ಗಲಭೆಗೂ ಸಾಮ್ಯತೆ ಇದೆ. ಪ್ರತಿಭಟನೆ ವೇಳೆ ಹೇಳಿದ್ದನ್ನೇ ಈಗ ಮಾಡಿದ್ದಾರೆ. ಇದು ವ್ಯವಸ್ಥಿತ ಪಿತೂರಿ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ. ಇದನ್ನೂ ಓದಿ: ಹುಬ್ಬಳ್ಳಿ ಗಲಭೆ- ಸಮಾಜ ಘಾತುಕ ಕೆಲಸ ಮಾಡಿಲ್ಲ: ಅಲ್ತಾಫ್

    ಅಲ್ಲದೇ ಮೀರ್‍ಸಾದಿಕ್ ಸಿಎಂ ಆಗಿದ್ದ ಅವಧಿಯಲ್ಲಿ ತರಬೇತಿ ಕೊಟ್ಟು ಹೊರಬಿಟ್ಟ ಪಿಎಫ್‍ಐ ಕಾರ್ಯಕರ್ತರೇ ಹುಬ್ಬಳ್ಳಿ ಗಲಭೆಗೆ ಕಾರಣ ಅಂತಾ ಆಪಾದಿಸಿದೆ. ಇನ್ನು, ಹುಬ್ಬಳ್ಳಿ ಗಲಭೆಗೆ ಅಲ್ತಾಫ್ ಹಳ್ಳೂರು ನೇರ ಕಾರಣ ಎಂದು ಮಾಜಿ ಸಿಎಂ ಯಡಿಯೂರಪ್ಪ ಆರೋಪಿಸಿದ್ದಾರೆ. ಸಿದ್ದರಾಮಯ್ಯ ಗಲಭೆ ಮಾಡಿದವರನ್ನು ಪ್ರೋತ್ಸಾಹಿಸ್ತಿದ್ದಾರೆ. ಇದು ಅವರಿಗೆ ಶೋಭೆ ತರಲ್ಲ ಎಂದಿದ್ದಾರೆ. ಬಿಎಸ್‍ವೈ ಮಾತಿಗೆ ಅಲ್ತಾಫ್ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ನಾನವನಲ್ಲ ಎಂದಿದ್ದಾರೆ. ಮೀರ್ ಸಾದಿಕ್ ಎಂಬ ಬಿಜೆಪಿ ಟ್ವೀಟ್‍ಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಗಲಭೆ ಹಿಂದೆ ವ್ಯವಸ್ಥಿತ ಪಿತೂರಿ- ಶಿರಚ್ಛೇದದ ಮಾತು, RSS ವಿರುದ್ಧ ಘೋಷಣೆ