Tag: Congress-JDS

  • ಬಿಜೆಪಿ ಸರ್ಕಾರ ಬಂದ್ರೆ ಮಾತ್ರ ಎಲ್ಲದಕ್ಕೂ ಅಂತ್ಯ ಬೀಳುತ್ತೆ – ಡಿವಿಎಸ್

    ಬಿಜೆಪಿ ಸರ್ಕಾರ ಬಂದ್ರೆ ಮಾತ್ರ ಎಲ್ಲದಕ್ಕೂ ಅಂತ್ಯ ಬೀಳುತ್ತೆ – ಡಿವಿಎಸ್

    ಬೆಂಗಳೂರು: ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಬಂದರೂ ಕುದುರೆ ವ್ಯಾಪಾರ ನಿಲ್ಲಲ್ಲ. ಹೀಗಾಗಿ ಬಿಜೆಪಿ ಸರ್ಕಾರ ಬಂದರೆ ಮಾತ್ರ ಎಲ್ಲದಕ್ಕೂ ಅಂತ್ಯ ಬೀಳುತ್ತದೆ ಎಂದು ಕೇಂದ್ರ ಸಚಿವ ಡಿವಿ ಸದಾನಂದ ಗೌಡರು ತಿಳಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ರಚನೆ ಆಗಲೇ ಬೇಕು. ಬರ, ರೈತರ ಸಮಸ್ಯೆ ಪರಿಹಾರಕ್ಕೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕು. ಸಿಎಂ ವಿಶ್ವಾಸ ಮತ ಮಾಡದಿದ್ದರೆ ಬಿಜೆಪಿ ಮುಂದೆ ಹಲವು ಮಾರ್ಗಗಳಿವೆ. ಸಂವಿಧಾನಾತ್ಮಕವಾಗಿ ಹೋರಾಟ ಮಾಡುತ್ತೇವೆ. ನಾಳೆ ರಾಜ್ಯಪಾಲರು, ರಾಷ್ಟ್ರಪತಿ, ಸುಪ್ರೀಂಕೋರ್ಟ್ ಕಡೆ ಗಮನ ಕೊಡುತ್ತೇವೆ ಎಂದರು.

    ಇಲ್ಲಿಯವರೆಗೆ ಲೋಕಸಭಾ ಚುನಾವಣೆ ಎಂದು ಅಭಿವೃದ್ಧಿ ನಿಂತಿತ್ತು. ಇನ್ನೂ 3 ತಿಂಗಳು ಅಭಿವೃದ್ಧಿ ನಿಂತುಬಿಟ್ಟರೆ ಕರ್ನಾಟಕವನ್ನು ಮತ್ತೆ ಮೇಲಕ್ಕೆತ್ತಲು ಸಾಧ್ಯವಿಲ್ಲ. ಮಧ್ಯಂತರ ಚುನಾವಣೆ ಮಾಡಿದರೆ ರಾಜ್ಯದ ಹಿತಾಸಕ್ತಿಗೆ ಧಕ್ಕೆ ಬರುತ್ತದೆ ಎಂದು ಹೇಳುವ ಮೂಲಕ ಮಧ್ಯಂತರ ಚುನಾವಣೆಗೆ ಡಿವಿಎಸ್ ವಿರೋಧ ವ್ಯಕ್ತಪಡಿಸಿದರು.

    ಮೈತ್ರಿ ಸರ್ಕಾರಕ್ಕೆ ಬಹುಮತ ಇಲ್ಲ. ಅವರ ಅಂಕಿ 100ಕ್ಕಿಂತಲೂ ಕೆಳಕ್ಕೆ ಕುಸಿದಿದೆ. ಪಕ್ಷಾಂತರ ಮಾಡುವವರನ್ನು ಬಿಟ್ಟು ನಮ್ಮಲ್ಲಿ 107 ಮಂದಿ ಇದ್ದು, ಬಹುಮತವಿದೆ. ಇದು ಇಡೀ ಜಗತ್ತಿಗೆ ಗೊತ್ತಿರುವಾಗ ಈ ರೀತಿಯಲ್ಲಿ ಪ್ರಜಾತಂತ್ರಕ್ಕೆ ಅಗೌರವ ಕೊಡುವುದು ನಾಚಿಕೇಡಿನ ಸಂಗತಿಯಾಗಿದೆ ಎಂದರು.

    ಕಾಂಗ್ರೆಸ್ ಹಾಗೂ ಜೆಡಿಎಸ್ ಇವರು ಅಧಿಕಾರಕ್ಕೋಸ್ಕರ ಏನು ಮಾಡುತ್ತಾರೆ ಎಂಬುದು ಇಡೀ ಜಗಜ್ಜಾಹೀರಾಗಿದೆ. ನನಗೆ ವಿಶ್ವಾಸವಿದೆ. ಸುಪ್ರೀಂ ಕೋರ್ಟ್ ಕೂಡ ಯಾವುದೇ ಅರ್ಜಿ ಹಾಕಿದರೂ ತಿರಸ್ಕರಿಸುತ್ತದೆ ಎಂಬ ವಿಶ್ವಾಸವಿದೆ. ಭಾರತೀಯ ಜನತಾ ಪಾರ್ಟಿ ನ್ಯಾಯಯುತವಾಗಿ ಹಾಗೂ ಸಂವಿಧಾನ ಬದ್ಧವಾಗಿ ನಡೆದುಕೊಂಡಿದೆ ಎಂದು ತಿಳಿಸಿದರು.

    ಕಾಂಗ್ರೆಸ್- ಜೆಡಿಎಸ್ ನಲ್ಲಿ ತುಂಬಾ ಜನ ಅತೃಪ್ತರಾಗಿದ್ದಾರೆ. ಅಯ್ಯೋ ರೀತಿಯೂ ನಮ್ಮ ನಾಯಕರು ನಡೆದುಕೊಳ್ಳುತ್ತಾರಲ್ವ ಎಂಬ ಭಾವನೆ ಅವರಲ್ಲಿ ಈಗಾಗಲೇ ಬಂದಿದೆ. ನಾವು ಶಾಂತಯುತವಾಗಿ, ಗೌರವಯುತವಾಗಿ ಸದನದ ಕಲಾಪಕ್ಕೆ ಗೌರವ ಕೊಟ್ಟು, ಸ್ಪೀಕರ್, ರಾಜ್ಯಪಾಲರು ಹಾಗೂ ಸುಪ್ರೀಂ ಕೋರ್ಟಿನ ಆದೇಶಕ್ಕೆ ಗೌರವ ಕೊಟ್ಟು ನಮ್ಮ ಕೆಲಸವನ್ನು ಮಾಡಿದ್ದೇವೆ ಎಂದು ಅವರು ಹೇಳಿದರು.

  • ಯಾವುದೇ ಕಾರಣಕ್ಕೂ ರಾಜೀನಾಮೆ ವಾಪಸ್ ಪಡೆಯಲ್ಲ- ಅತೃಪ್ತರು

    ಯಾವುದೇ ಕಾರಣಕ್ಕೂ ರಾಜೀನಾಮೆ ವಾಪಸ್ ಪಡೆಯಲ್ಲ- ಅತೃಪ್ತರು

    – ಸಿದ್ದರಾಮಯ್ಯರ ಬೆದರಿಕೆಗಳಿಗೆ ಜಗ್ಗಲ್ಲ

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ನಡೆಸಿ ಅತೃಪ್ತರಿಗೆ ಸೂಚನೆ ಕೊಟ್ಟ ಬೆನ್ನಲ್ಲೇ ನಾವು ಯಾವುದೇ ಕಾರಣಕ್ಕೂ ರಾಜೀನಾಮೆಯನ್ನು ಹಿಂದಕ್ಕೆ ಪಡೆಯಲ್ಲ ಎಂಬ ಖಡಕ್ ಮೆಸೇಜ್ ಪಾಸ್ ಮಾಡಿದ್ದಾರೆ.

    ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ನಾವು ರಾಜೀನಾಮೆ ಹಿಂಪಡೆಯಲ್ಲ. ನಾವು ಈಗಲೂ ಪಕ್ಷದ ಜೊತೆಗಿದ್ದೇವೆ ಎಂದು ಯಶವಂತಪುರ ಶಾಸಕ ಎಸ್.ಟಿ ಸೋಮಶೇಖರ್ ಸ್ಪಷ್ಟಪಡಿಸಿದ್ದಾರೆ.

    ನಾವು ವೈಯಕ್ತಿಕವಾಗಿಯೇ ರಾಜೀನಾಮೆ ನೀಡಿದ್ದೇವೆ. ನಾವು ಸಿಎಲ್‍ಪಿ ಸಭೆಯನ್ನು ಟಿವಿ ಮುಖಾಂತರ ನೋಡಿದ್ದೇವೆ. ಸಭೆಯಲ್ಲಿ ನಮ್ಮ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಏನೇ ಆದರೂ ನಾವು ವಾಪಸ್ ಪಡೆಯಲ್ಲ. ಅಲ್ಲದೆ ಇನ್ನೂ ಇಬ್ಬರು ಸಚಿವರು ರಾಜೀನಾಮೆ ನೀಡುವ ಸಾಧ್ಯತೆಗಳಿವೆ ಎಂದು ಅತೃಪ್ತ ಶಾಸಕ ಎಸ್ ಟಿ ಸೋಮಶೇಖರ್ ಖಡಕ್ಕಾಗಿ ನುಡಿದಿದ್ದಾರೆ.

    ಕರ್ನಾಟಕ ಜನ ಮೈತ್ರಿ ಸರ್ಕಾರವನ್ನು ಒಪ್ಪುವುದಿಲ್ಲ ಎನ್ನುವುದು ಗೊತ್ತಾಗಿದೆ. ಇಲ್ಲಿ ಯಾವುದೇ ಕುದುರೆ ವ್ಯಾಪಾರ ನಡೆದಿಲ್ಲ. ಎಲ್ಲರೂ ಸ್ವ ಇಚ್ಚೆಯಿಂದಲೇ ರಾಜೀನಾಮೆ ನೀಡಿದ್ದಾರೆ ಎಂದು ತಿಳಿಸಿದರು.

    ಸಿದ್ದರಾಮಯ್ಯ ಅವರ ಬೆದರಿಕೆಗಳಿಗೆ ನಾವು ಬಗ್ಗಲ್ಲ. ನಾವು ಈಗಲೂ ಪಕ್ಷದಲ್ಲೇ ಇದ್ದೇವೆ. ಶಾಸಕ ಸ್ಥಾನಕ್ಕಷ್ಟೇ ರಾಜೀನಾಮೆ ನೀಡಿದ್ದೇವೆ. ನಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿಯಾಗುತ್ತಿಲ್ಲ. ನಾವು ಬಿಜೆಪಿಗೆ ಹೋಗಲ್ಲ. ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಸಿದ್ದರಾಮಯ್ಯ ಹೇಳಿದ್ದೆಲ್ಲ ಸುಳ್ಳು ಎಂದು ಅತೃಪ್ತ ಶಾಸಕ ನಾರಾಯಣ ಗೌಡ ಕಿಡಿಕಾರಿದ್ದಾರೆ.

  • ರಾಜ್ಯದಿಂದ ಧೂಳೀಪಟ ಮಾಡಿ, ದಕ್ಷಿಣ ಭಾರತದಿಂದಲೇ ಬಿಜೆಪಿಯನ್ನು ಹೊರಹಾಕ್ತೀವಿ: ದಿನೇಶ್ ಗುಂಡೂರಾವ್

    ರಾಜ್ಯದಿಂದ ಧೂಳೀಪಟ ಮಾಡಿ, ದಕ್ಷಿಣ ಭಾರತದಿಂದಲೇ ಬಿಜೆಪಿಯನ್ನು ಹೊರಹಾಕ್ತೀವಿ: ದಿನೇಶ್ ಗುಂಡೂರಾವ್

    ಬೆಂಗಳೂರು: ಮುಂದಿನ ಲೋಕಸಭೆ ಚುನಾವಣೆಯಲ್ಲಿ ದೇಶದ ರಾಜಕಾರಣವನ್ನು ಬದಲಾಯಿಸುತ್ತೇವೆ. ರಾಜ್ಯದಿಂದ ಧೂಳೀಪಟ ಮಾಡಿ, ದಕ್ಷಿಣ ಭಾರತದಿಂದಲೇ ಬಿಜೆಪಿಯನ್ನು ಹೊರಹಾಕುತ್ತೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

    ಉಪಚುನಾವಣೆಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಗಳು ಜಯಗಳಿಸಿದ ಹಿನ್ನೆಲೆಯಲ್ಲಿ, ಈ ಬಾರಿ ರಾಜ್ಯದಲ್ಲಿ ಸ್ಪಷ್ಟ ಬಹುಮತದಿಂದ ಮೈತ್ರಿ ಸರ್ಕಾರ ಉಪಚುನಾವಣೆಯ 4 ಕ್ಷೇತ್ರದಲ್ಲಿ ಗೆಲವು ಸಾಧಿಸಿದೆ. ಈಗಾದರೂ ಬಿಜೆಪಿ ತನ್ನ ಉದ್ಧಟತನವನ್ನು ಬಿಡಬೇಕು ಎಂದರು.  ಇದನ್ನು ಓದಿ: ದಿನೇಶ್ ಅವರೇ 4:1 ಅಲ್ಲ, 1:1 ಗೆಲುವು: ಇದು ಪ್ರತಾಪ್ ಸಿಂಹ ವಿಶ್ಲೇಷಣೆ

    ನಾಯಕರ ನಕಾರಾತ್ಮಕ ರಾಜಕೀಯ ಹಾಗೂ ಕೇಂದ್ರದಲ್ಲಿ ಮೋದಿ ಸರ್ಕಾರದ ವೈಫಲ್ಯದಿಂದ ಈ ಬಾರಿ ಉಪಚುನಾವಣೆಯಲ್ಲಿ ಬಿಜೆಪಿಯನ್ನು ಜನ ತಿರಸ್ಕರಿಸಿದ್ದಾರೆ. ಮೋದಿ ಸರ್ಕಾರ ಯಾವುದೇ ಜನಪರ ಕೆಲಸ ಮಾಡಿಲ್ಲ, ಕೇವಲ ಭಾವನಾತ್ಮಕ ಭಾಷಣ ಬಿಟ್ಟರೇ ಜನರಿಗಾಗಿ ಕೆಲಸ ಮಾಡಿಲ್ಲ. ರಾಜ್ಯದಲ್ಲೂ ಅಷ್ಟೇ ಬಿಜೆಪಿ ಜನಪರ ಕೆಲಸ ಮಾಡಿಲ್ಲ. ಮೈತ್ರಿ ಸರ್ಕಾರ ಬಂದಾಗ ವಿರೋಧ ಪಕ್ಷವಾಗಿ ಹೇಗೆ ಅಧಿಕಾರ ಪಡೆಯಬೇಕು ಅಂತ ಬಿಜೆಪಿ ತಲೆ ಕೆಡಿಸಿಕೊಂಡಿತ್ತೆ ಹೊರತು ಜನರಿಗಾಗಿ ಏನೂ ಮಾಡಿಲ್ಲ. ಯಾವುದೇ ಹೋರಾಟ ಮಾಡಿಲ್ಲ, ಜನಪರ ವಿಚಾರವನ್ನು ಮಾತಾಡಿಲ್ಲ ಎಂದು ಕಿಡಿಕಾರಿದರು.

    ಮೈತ್ರಿ ಸರ್ಕಾರ ಎಷ್ಟು ಗಟ್ಟಿಯಾಗಿದೆ ಎಂದು ಈ ಉಪಚುನಾವಣೆಯಿಂದ ತಿಳಿದಿದೆ. ಬಳ್ಳಾರಿಯಲ್ಲಿ ಯಾವ ಅಭ್ಯರ್ಥಿಯನ್ನು ನಿಲ್ಲಿಸಬೇಕು ಅಂತಾ ತುಂಬಾ ಯೋಚನೆಮಾಡಿ ನಂತರ ಉಗ್ರಪ್ಪ ಅವರನ್ನು ಆಯ್ಕೆಮಾಡಲಾಗಿತ್ತು. ಈಗ ಬಿಜೆಪಿಯನ್ನು ಬಳ್ಳಾರಿಯಲ್ಲಿ ಛಿದ್ರ ಛಿದ್ರ ಮಾಡಿ ಜಯ ಗಳಿಸಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು.

    ಬಳ್ಲಾರಿಯಲ್ಲಿ ಧಣಿಗಣಿಗಳ ದಬ್ಬಾಳಿಕೆಗೆ, ಅಹಂಕಾರಕ್ಕೆ ಜನರೇ ಉತ್ತರ ಕೊಟ್ಟಿದ್ದಾರೆ. ಒಳ್ಳೆಯ ರೀತಿಯಲ್ಲಿ ನಾವು ಸರ್ಕಾರವನ್ನು ನಡೆಸಿಕೊಂಡು ಬರುತ್ತಿದ್ದೇವೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ದೇಶದ ರಾಜಕಾರಣವನ್ನು ಬದಲಾಯಿಸುತ್ತೇವೆ. ಮೋದಿಯವರ ಯಾವುದೇ ಭಾಷಣ ನಡೆಯುವುದಿಲ್ಲ. ನಮಗೆ ಸುಳ್ಳು ಹೇಳೋ ಪ್ರಧಾನಿ ಬೇಡ, ಕೆಲಸ ಮಾಡೋ ಪ್ರಧಾನಿ ಬೇಕು ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

     

     

     

     

     

     

     

     

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv