Tag: congress gurantee

  • ಕುರ್ಚಿ ಕದನ, ಅಭಿವೃದ್ಧಿ ಪತನ – 6 ತಿಂಗಳಲ್ಲಿ ಕೇವಲ ಶೇ.30ರಷ್ಟು ಮಾತ್ರ ಪ್ರಗತಿ

    ಕುರ್ಚಿ ಕದನ, ಅಭಿವೃದ್ಧಿ ಪತನ – 6 ತಿಂಗಳಲ್ಲಿ ಕೇವಲ ಶೇ.30ರಷ್ಟು ಮಾತ್ರ ಪ್ರಗತಿ

    – `ಸೌಂಡ್’ ಸಚಿವರ ಇಲಾಖೆಯಲ್ಲೇ ಕುಂಠಿತ
    – ಗ್ಯಾರಂಟಿ ಸರ್ಕಾರದ ಬಳಿ ಅಭಿವೃದ್ಧಿಗೆ ಹಣ ಇಲ್ಲ?

    ಬೆಂಗಳೂರು: ನಾಯಕತ್ವ ಬದಲಾವಣೆಯ ತಿಕ್ಕಾಟದಿಂದ ಕರ್ನಾಟಕ (Karnataka) ಅಭಿವೃದ್ಧಿಗೆ ತೊಡಕಾಯ್ತಾ? ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ಗಣನೀಯ ಕುಸಿತ ಆಯ್ತಾ ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ. ಕಳೆದ 6 ತಿಂಗಳ ಅವಧಿಯಲ್ಲಿ ಶೇ.30 ರಷ್ಟು ಮಾತ್ರ ಸರಾಸರಿ ಪ್ರಗತಿಯಾಗಿದೆ. ಅಬ್ಬರಿಸಿ ಮಾತನಾಡುವ ಸಚಿವರ ಇಲಾಖೆಯಲ್ಲಿ ಅಭಿವೃದ್ಧಿ ಕುಂಠಿತ ಆಗಿದ್ದು, ಕಂದಾಯ ಇಲಾಖೆ ಹೊರತುಪಡಿಸಿ ಉಳಿದ ಇಲಾಖೆಗಳಲ್ಲಿ ಅಭಿವೃದ್ಧಿಗೆ ಹಿನ್ನಡೆಯಾಗಿದೆ.

    ಸದಾ ಹೇಳಿಕೆ ನೀಡಿ ಸುದ್ದಿಯಾಗುತ್ತಿರುವ ಸಚಿವ ಪ್ರಿಯಾಂಕ್‌ ಖರ್ಗೆ (Priyank Kharge) ನಿಭಾಯಿಸುತ್ತಿರುವ ಇಲಾಖೆಗಳು ಅಭಿವೃದ್ಧಿಯಲ್ಲಿ ಹಿನ್ನಡೆ ಅನುಭವಿಸಿದೆ. ಗ್ರಾಮೀಣಾಭಿವೃದ್ಧಿ, ಇಲಾಖೆಯಲ್ಲಿ ಶೇ.11.02 ರಷ್ಟು ಮಾತ್ರ ಪ್ರಗತಿ ಆಗಿದ್ದರೆ ಐಟಿ-ಬಿಟಿ, ವಿಜ್ಞಾನ ತಂತ್ರಜ್ಞಾನ ಇಲಾಖೆಯಲ್ಲಿ ಶೇ. 10.86ರಷ್ಟು ಮಾತ್ರ ಆಗಿದೆ.

    ವಸತಿ ಸಚಿವ ಜಮೀರ್, ಡಿಸಿಎಂ ಡಿಕೆಶಿ ಇಲಾಖೆಗಳು ಹಿನ್ನಡೆ ಸಾಧಿಸಿವೆ. ಇದರಿಂದಾಗಿ ನಾಯಕತ್ವದ ಕುರಿತು ಚರ್ಚಿಸುವ ಸಚಿವರಿಂದ ಅಭಿವೃದ್ಧಿಯತ್ತ ಹೆಚ್ಚು ಗಮನವಿಲ್ಲವೋ? ಸರ್ಕಾರದ ಬಳಿ ಹಣವೇ ಇಲ್ಲವೋ? ಪವರ್‌ಶೇರ್ ಬಗ್ಗೆ ಹೈಕಮಾಂಡ್ ಮಂತ್ರ ಪಠಣ ಮಾಡುತ್ತಿರುವ ಸಚಿವರಿಂದ ಅಭಿವೃದ್ಧಿ ಹಿನ್ನಡೆ ಆಗುತ್ತಿದೆಯೋ ಎಂಬ ಪ್ರಶ್ನೆಗೆ ಅವರೇ ಉತ್ತರ ನೀಡಬೇಕಿದೆ.  ಇದನ್ನೂ ಓದಿ:  5 ವರ್ಷವೂ ನಾನೇ ಸಿಎಂ ಎನ್ನುತ್ತಿದ್ದ ಸಿದ್ದರಾಮಯ್ಯ ಮಾತು ಮೊದಲ ಬಾರಿಗೆ ಬದಲಾಯ್ತು!

    ಕುರ್ಚಿ ಕದನ; ಅಭಿವೃದ್ಧಿ ಪತನ
    > ಪ್ರಸಕ್ತ ಬಜೆಟ್‌ನಲ್ಲಿ ಇಲಾಖಾವಾರು ಹಂಚಿಕೆ – 3,53,492 ಕೋಟಿ ರೂ.
    > ಸೆಪ್ಟೆಂಬರ್ ತ್ರೈಮಾಸಿಕ ಅಂತ್ಯದಲ್ಲಿ ಬಿಡುಗಡೆಯಾದ ಮೊತ್ತ – 1,48,576 ಕೋಟಿ ರೂ.
    > ಸೆಪ್ಟೆಂಬರ್ ಅಂತ್ಯದಲ್ಲಿ ಬಳಕೆಯಾದ ಅನುದಾನ – 1,06,611 ಕೋಟಿ ರೂ.

     

    ಯಾವ ಇಲಾಖೆ ಎಷ್ಟು ಖರ್ಚು ಮಾಡಿದೆ?
    > ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) -5,780 ಕೋಟಿ ರೂ. (ಶೇ.46.74)
    (ಸಚಿವರು: ಕೃಷ್ಣ ಬೈರೇಗೌಡ)

    > ಜಲಸಂಪನ್ಮೂಲ ಇಲಾಖೆ -4,496 ಕೋಟಿ ರೂ. (ಶೇ.23.9)
    (ಸಚಿವರು: ಡಿ.ಕೆ. ಶಿವಕುಮಾರ್)

    > ವಸತಿ ಇಲಾಖೆ – 807 ಕೋಟಿ ರೂ. (ಶೇ.18.38)
    (ಸಚಿವರು: ಜಮೀರ್ ಅಹ್ಮದ್)

    > ಗ್ರಾಮೀಣಾಭಿವೃದ್ಧಿ- ಪಂಚಾಯತ್‌ರಾಜ್ -2,964 ಕೋಟಿ ರೂ. (ಶೇ.11.02)
    (ಸಚಿವರು: ಪ್ರಿಯಾಂಕ್ ಖರ್ಗೆ)

    > ಐಟಿ-ಬಿಟಿ, ವಿಜ್ಞಾನ- ತಂತ್ರಜ್ಞಾನ -117 ಕೋಟಿ ರೂ. (ಶೇ.10.86)
    (ಸಚಿವರು: ಪ್ರಿಯಾಂಕ್ ಖರ್ಗೆ)  ಇದನ್ನೂ ಓದಿ:  ಧರ್ಮಸ್ಥಳ ಕೇಸ್ – ಸುಜಾತ ಭಟ್ ಹೊರತುಪಡಿಸಿ ವಿಚಾರಣೆಗೆ ಗೈರಾದ ಬುರುಡೆ ಗ್ಯಾಂಗ್

    ಯಾವ ಗ್ಯಾರಂಟಿ ಯೋಜನೆಗೆ ಎಷ್ಟು ಖರ್ಚು?
    ಗೃಹಜ್ಯೋತಿ ಯೋಜನೆ
    > ಹಂಚಿಕೆ ಮೊತ್ತ – 26,896 ಕೋಟಿ ರೂ. (ಶೇ.50.29)
    ಇಂಧನ ಸಚಿವ : ಕೆಜೆ ಜಾರ್ಜ್)

    * ಗೃಹಲಕ್ಷ್ಮೀ ಯೋಜನೆ
    > ಹಂಚಿಕೆ ಮೊತ್ತ – 34,954 ಕೋಟಿ ರೂ. (ಶೇ.17.43)
    ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆ : ಲಕ್ಷ್ಮಿ ಹೆಬ್ಬಾಳ್ಕರ್

    * ಶಕ್ತಿ ಯೋಜನೆ
    > ಹಂಚಿಕೆ ಮೊತ್ತ – 7,169 ಕೋಟಿ ರೂ. ( ಶೇ.34.88)
    ಸಾರಿಗೆ : ರಾಮಲಿಂಗಾರೆಡ್ಡಿ)

    * ಅನ್ನಭಾಗ್ಯ ಯೋಜನೆ
    > ಹಂಚಿಕೆ ಮೊತ್ತ – 8,274 ಕೋಟಿ ರೂ. (ಶೇ.28.23)
    ಆಹಾರ ಕೆ.ಹೆಚ್. ಮುನಿಯಪ್ಪ

  • ಸರ್ಕಾರ ಕೆಡವಲು 1,000 ಕೋಟಿ ರೆಡಿ ಮಾಡಿಕೊಂಡಿದ್ದಾರೆಂದು ಬಿಜೆಪಿ ನಾಯಕರೇ ಹೇಳಿದ್ದಾರೆ: ಶರಣ ಪ್ರಕಾಶ್ ಪಾಟೀಲ್

    ಸರ್ಕಾರ ಕೆಡವಲು 1,000 ಕೋಟಿ ರೆಡಿ ಮಾಡಿಕೊಂಡಿದ್ದಾರೆಂದು ಬಿಜೆಪಿ ನಾಯಕರೇ ಹೇಳಿದ್ದಾರೆ: ಶರಣ ಪ್ರಕಾಶ್ ಪಾಟೀಲ್

    ವಿಜಯಪುರ: ಸರ್ಕಾರ ಕೆಡವಲು 1,000 ಕೋಟಿ ರೆಡಿ ಮಾಡಿಕೊಂಡಿದ್ದಾರೆಂದು ಬಿಜೆಪಿ (BJP) ನಾಯಕರೇ ಹೇಳಿದ್ದಾರೆ ಎಂದು ಸಚಿವ ಶರಣ ಪ್ರಕಾಶ ಪಾಟೀಲ್  (Sharan Prakash Patil), ವಿಜಯಪುರ ಶಾಸಕ ಬಸನಗೌಡ ಪಾಟೀಲ್ (Basanagouda Patil Yatnal) ಅವರ ಹೇಳಿಕೆಯನ್ನ ಪುನರುಚ್ಛರಿಸಿದರು.

    ನಗರದಲ್ಲಿ ಮಾಧ್ಯಮದವರೊಂದಿಗೆ ಯತ್ನಾಳ್ ಹೇಳಿಕೆ ವಿಚಾರವಾಗಿ ಮಾತನಾಡಿ, ಸರ್ಕಾರ ಕೆಡವಲು 1000 ಕೋಟಿ ರೂ. ತಯಾರಿ ಮಾಡಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಬಿಜೆಪಿಯಲ್ಲಿ ಅವರೊಬ್ಬ ಪ್ರಮುಖ ನಾಯಕರಿದ್ದಾರೆ. ಅವರಿಗೆ ಏನು ಮಾಹಿತಿ ಇದೆ, ನನಗೆ ಗೊತ್ತಿಲ್ಲ. ಆದ್ರೆ ಸರ್ಕಾರ ಬೀಳಿಸಲು ಬಹಳ ದೊಡ್ಡ ಹಣ ಉಪಯೋಗ ಆಗಿದೆ ಎಂದು ಎಲ್ಲರಿಗೂ ಗೊತ್ತಿದೆ. ಈ ಹಿಂದೆಯೂ 17 ಶಾಸಕರು ರಾಜೀನಾಮೆ ನೀಡಿದ್ದರು. ಇದೆಲ್ಲ ಹಣಬಲದ ಮೇಲೆ ಆಗಿದೆ. ಈಗಲೂ ಅದೇ ರೀತಿ ಪಿತೂರಿ ನಡೆಯುತ್ತಿರಬಹುದು ಎಂದು ಆಗ್ರಹಿಸಿದರು.ಇದನ್ನೂ ಓದಿ: ಭೋಪಾಲ್‌ನಲ್ಲಿ 1,814 ಕೋಟಿ ಮೌಲ್ಯದ ಮಾದಕ ವಸ್ತು ಸೀಜ್‌ – ಇಬ್ಬರು ಅರೆಸ್ಟ್‌

    ಬಿಜೆಪಿಯವರು 4 ವರ್ಷ 2019 ರಿಂದ 2023ರ ವರೆಗೆ ರಾಜ್ಯವನ್ನ ವ್ಯವಸ್ಥಿತವಾಗಿ ಲೂಟಿ ಹೊಡೆದಿದ್ದಾರೆ. ಅವರು ಮಾಡಿದ ಕೆಲಸ ಕಾರ್ಯಗಳು, ನಡೆದುಕೊಂಡಂತಹ ರೀತಿ ಇದೆಲ್ಲವನ್ನು ನೋಡಿಯೇ ರಾಜ್ಯದ ಜನರು ನಮಗೆ ಬೆಂಬಲ ನೀಡಿದ್ದಾರೆ. 135 ಶಾಸಕರನ್ನ ಆಯ್ಕೆ ಮಾಡುವ ಮುಖಾಂತರ ಸ್ಥಿರ ಸರ್ಕಾರವನ್ನ ರಾಜ್ಯದ ಜನರು ನೀಡಿದ್ದಾರೆ. ಇದನ್ನ ಅಸ್ಥಿರಗೊಳಿಸುವ ಕೆಲಸ ಬಿಜೆಪಿ ಮಾಡುತ್ತಿದೆ. ಇದು ಸಂವಿಧಾನ ವಿರೋಧಿ ನೀತಿಯಾಗಿದೆ. ಇದರಿಂದ ರಾಜ್ಯದ ಜನರಿಗೆ ಹಾನಿಯಾಗುತ್ತಿದೆ. ರಾಜ್ಯದ ಜನರು ಇದನ್ನು ನೋಡುತ್ತಿದ್ದಾರೆ ಎಂದು ಕಿಡಿಕಾರಿದರು.

    ವಿಪಕ್ಷದ ನಾಯಕ ಸ್ಥಾನಕ್ಕೆ ಆರ್.ಅಶೋಕ್ (R.Ashok) ರಾಜೀನಾಮೆ ವಿಚಾರವಾಗಿ ಮಾತನಾಡಿ, ನೋಡಿ ಅಧಿಕಾರದಲ್ಲಿದ್ದಾಗ ನೀವು ರಾಜೀನಾಮೆ ಕೊಟ್ಟು, ನಮಗೂ ಕೊಡಿ ಎಂದರೆ ಅದಕ್ಕೆ ಅರ್ಥ? ಆಗ ಅವರು ಕೊಟ್ಟಿಲ್ಲ. ಒಂದು ವೇಳೆ ಕೊಟ್ಟಿದ್ದರೆ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳಬಹುದಿತ್ತು. ಸಿದ್ದರಾಮಯ್ಯ (CM Siddaramaiah) ಓರ್ವ ನಿಷ್ಕಳಂಕ, ಜನಪರ ನಾಯಕ. ಒಳ್ಳೆಯ ಆಡಳಿತ ನೀಡಿರುವಂತಹ ಸಿಎಂ ಇವರು ಎಂದರು.

    ಗ್ಯಾರಂಟಿಗಳ ಬಗ್ಗೆ ಬಿಜೆಪಿ ಸುಳ್ಳು ಪ್ರಚಾರ:
    ಇವತ್ತು ಬಿಜೆಪಿ ಅವರಿಗೆ ತಕರಾರು ಏನು ಎಂದರೆ, ನಮ್ಮ ಸರಕಾರ ರಾಜ್ಯದ ಜನರಿಗೆ 5 ಗ್ಯಾರಂಟಿಗಳನ್ನ (Gurantee) ನೀಡಿದೆ. ಇದರಿಂದ ರಾಜ್ಯದ ಜನರ ಮನಸ್ಥಿತಿ ಬದಲಾಗುತ್ತಿದೆ ಎಂಬ ಭಯ ಬಿಜೆಪಿಯವರಿಗೆ ಕಾಡುತ್ತಿದೆ. ಅದಕ್ಕಾಗಿ ಗ್ಯಾರಂಟಿಗಳನ್ನು ನೀಡಲು ಆಗುವುದಿಲ್ಲ ಎಂದು ಬಿಜೆಪಿಯವರು ಸುಳ್ಳು ಪ್ರಚಾರ ಮಾಡಿದ್ದಾರೆ. ಆದರೆ ನಾವು ಯಶಸ್ವಿಯಾಗಿ ಗ್ಯಾರಂಟಿಗಳನ್ನ ಈಡೇರಿಸಿದ್ದೇವೆ. ಈ ಗ್ಯಾರಂಟಿಗಳು ಈಡೇರಲ್ಲ ಎಂದು ಮೋದಿಯವರು (PM Modi) ಕೂಡ ಹೇಳಿದ್ದರು. ಅವರಿಗೆ ಭಯ ಶುರುವಾಗಿದೆ. ಅದಕ್ಕೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.

    ಇದೇ ವೇಳೆ ಎಐಸಿಸಿ ಅಧ್ಯಕ್ಷ ಹಾಗೂ ಸಚಿವ ಸತೀಶ ಜಾರಕಿಹೋಳಿ ಭೇಟಿ ವಿಚಾರವಾಗಿ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಸಿಎಂ ಆಗುವ ಬಗ್ಗೆ ಚರ್ಚೆ ವದಂತಿಯಷ್ಟೇ. ಈ ಭೇಟಿ ಕುರಿತು ಈಗಾಗಲೇ ಸಿಎಂ ಸ್ಪಷ್ಟನೆ ನೀಡಿದ್ದಾರೆ. ದೆಹಲಿಗೆ ಹೋದ ಸಚಿವರು ಎಐಸಿಸಿ (AICC) ಆಧ್ಯಕ್ಷರನ್ನ ಭೇಟಿಯಾಗುತ್ತಾರೆ, ಇದು ಸಹಜ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಹೇಳಿದರು.

    ದಲಿತ ಸಿಎಂ ಆಗುವ ಕುರಿತು ಚರ್ಚೆ ವಿಚಾರವಾಗಿ ಮಾತನಾಡಿ, ಆ ರೀತಿ ಯಾವುದೇ ಮಾಹಿತಿ ಇಲ್ಲ. ಆ ರೀತಿಯ ಚಲನ ವಲನ ನಮ್ಮ ಗಮನಕ್ಕೆ ಬಂದಿಲ್ಲ. ಇದೆಲ್ಲ ಮಾಧ್ಯಮಗಳ ಸೃಷ್ಟಿ ಅಷ್ಟೇ. ದಲಿತ ಸಿಎಂ ಆಗುವ ವಿಚಾರದ ಕುರಿತು ನನಗೆ ಗೊತ್ತಿಲ್ಲ ಎಂದು ತಿಳಿಸಿದರು.ಇದನ್ನೂ ಓದಿ: ಜಾತಿ ಗಣತಿ ಜಾರಿಯಿಂದ ಸರ್ಕಾರ ಹೋಗುತ್ತೆ ಅನ್ನೋದಾದ್ರೆ ಹೋಗಲಿ: ಹರಿಪ್ರಸಾದ್‌ ಸ್ಫೋಟಕ ಹೇಳಿಕೆ

  • ಸರ್ಕಾರದಿಂದ ಕರ್ನಾಟಕ ಯುವ ನಿಧಿ ಯೋಜನೆ ಜಾರಿ- ಷರತ್ತುಗಳೇನು?

    ಸರ್ಕಾರದಿಂದ ಕರ್ನಾಟಕ ಯುವ ನಿಧಿ ಯೋಜನೆ ಜಾರಿ- ಷರತ್ತುಗಳೇನು?

    ಬೆಂಗಳೂರು: ನಿರುದ್ಯೋಗ ಭತ್ಯೆ ಪಾವತಿಸಲು “ಕರ್ನಾಟಕ ಯುವ ನಿಧಿ (Yuvanidhi) ಯೋಜನೆ” ಜಾರಿಗೊಳಿಸಿ ಸರ್ಕಾರ ಆದೇಶ ಹೊರಡಿಸಿ, ಮಾರ್ಗಸೂಚಿ ಪ್ರಕಟಿಸಿದೆ.

    ರಾಜ್ಯದಲ್ಲಿ 2022-23 ರಲ್ಲಿ ತೇರ್ಗಡೆಯಾದ ಪದವೀಧರ, ನಿರುದ್ಯೋಗಿ (UnEmployers) ಗಳಿಗೆ ಪ್ರತಿ ತಿಂಗಳು 3,000 ರೂ.ಗಳು ಹಾಗೂ ಡಿಪ್ಲೋಮಾ (Diploma) ಹೊಂದಿದ ನಿರುದ್ಯೋಗಳಿಗೆ ಪ್ರತಿ ತಿಂಗಳು 1,500 ರೂ. ಗಳನ್ನು ನೀಡಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

    2003ರ ವರ್ಷದಲ್ಲಿ ತೇರ್ಗಡೆಯಾದ ದಿನಾಂಕದಿಂದ 180 ದಿನಗಳು ಕಳೆದರೂ ಉದ್ಯೋಗ ಲಭಿಸದ ಪದವೀಧರ, ನಿರುದ್ಯೋಗಿಗಳಿಗೆ ಈ ಯೋಜನೆ ಅನ್ವಯವಾಗಲಿದೆ. ಉದ್ಯೋಗ ಸಿಗುವವರೆಗೆ ಅಥವಾ ಗರಿಷ್ಠ ಎರಡು ವರ್ಷಗಳ ಅವಧಿಗೆ ನಿರುದ್ಯೋಗ ಭತ್ಯೆಯ ಫಲಾನುಭವಿಗಳಾಗಿರುತ್ತಾರೆ. ಇದನ್ನೂ ಓದಿ: 5 ಗ್ಯಾರಂಟಿ ಘೋಷಣೆ – ಯಾವ ಯೋಜನೆಗೆ ಎಷ್ಟು ಹಣ ಬೇಕು?

    ಪರತ್ತು ಮತ್ತು ನಿಬಂಧನೆಗಳು:
    1. ಪದವಿ (Degree) / ಡಿಪ್ಲೋಮಾ ಮುಗಿಸಿ 6 ತಿಂಗಳಾದರೂ ಉದ್ಯೋಗ ಲಭಿಸದೇ ಇರುವ ಕನ್ನಡಿಗರಿಗೆ ಮಾತ್ರ ಈ ಯೋಜನೆಯು ಅನ್ವಯವಾಗುತ್ತದೆ.
    2. ಈ ಸೌಲಭ್ಯವು ಎರಡು ವರ್ಷಗಳ ಅವಧಿಗೆ ಮಾತ್ರ ಅನ್ವಯಿಸುತ್ತದೆ. ಎರಡು ವರ್ಷಗಳ ಅವಧಿಯೊಳಗೆ ಉದ್ಯೋಗ ದೊರೆತಲ್ಲಿ ಫಲಾನುಭವಿಗೆ ಈ ಯೋಜನೆಯ ಸೌಲಭ್ಯವನ್ನು ಸ್ವಗತಗೊಳಿಸಲಾಗುವುದು.
    3. ಭತ್ಯೆಯನ್ನು CBT ಮೂಲಕ ಒದಗಿಸಲು ಉದ್ದೇಶಿಸಲಾಗಿದ್ದು, ಫಲಾನುಭವಿಗಳು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸುವುದು.
    4. ನಿರುದ್ಯೋಗ ಸ್ಥಿತಿಯ ಬಗ್ಗೆ ಸ್ವತಂತ್ರ ಪರಿಶೀಲನೆ ಇರಬೇಕು. ಉದ್ಯೋಗ ಪಡೆದ ನಂತರ ತಪ್ಪು ಘೋಷಣೆ ಅಥವಾ ಘೋಷಿಸಲು ವಿಫಲವಾದರೆ ದಂಡ ವಿಧಿಸಲಾಗುವುದು

    ಯೋಜನೆಗೆ ಅರ್ಹರಾಗದೇ ಇರುವವರು ಯಾರು..?
    1. ಉನ್ನತ ವ್ಯಾಸಂಗಕ್ಕೆ ದಾಖಲಾತಿ ಹೊಂದಿ ವಿದ್ಯಾಭ್ಯಾಸ ಮುಂದುವರಿಸುವವರು.
    2. ಶಿಶಿಕ್ಷು (Apprentice) ವೇತನವನ್ನು ಪಡೆಯುತ್ತಿರುವವರು.
    3. ಸರ್ಕಾರಿ ಅಥವಾ ಖಾಸಗಿ ವಲಯದಲ್ಲಿ ಉದ್ಯೋಗ ಪಡೆದಿರುವವರು.
    4. ರಾಜ್ಯ ಮತ್ತು ಕೇಂದ್ರದ ವಿವಿಧ ಯೋಜನೆಯಡಿ ಹಾಗೂ ಬ್ಯಾಂಕ್‍ಗಳಲ್ಲಿ ಸಾಲ ಪಡೆದು ಸ್ವಯಂ ಉದ್ಯೋಗ ಹೊಂದಿದವರು. ಇದನ್ನೂ ಓದಿ: 180 ದಿನಗಳಾದರೂ ಕೆಲಸ ಸಿಗದ ನಿರುದ್ಯೋಗಿಗಳಿಗೆ ಯುವ ನಿಧಿ

  • 200 ಯೂನಿಟ್ ಅಂತ ಹೇಳಿ ಕಾಂಗ್ರೆಸ್‍ನವರು ಯಾಮಾರಿಸಿದ್ದಾರೆ: ಬೊಮ್ಮಾಯಿ

    200 ಯೂನಿಟ್ ಅಂತ ಹೇಳಿ ಕಾಂಗ್ರೆಸ್‍ನವರು ಯಾಮಾರಿಸಿದ್ದಾರೆ: ಬೊಮ್ಮಾಯಿ

    ಬೆಂಗಳೂರು: 200 ಯೂನಿಟ್ (200 Unit Electricity) ಅಂತ ಹೇಳಿ ಕಾಂಗ್ರೆಸ್‍ನವರು ಯಾಮಾರಿಸಿದ್ದಾರೆ. 200 ಯೂನಿಟ್ ಅನ್ನೋಕ್ಕೂ; 10% ಅನ್ನೋಕ್ಕೂ ವ್ಯತ್ಯಾಸವಿದೆ. ಇದು ಫ್ರೀ ಹೇಗಾಯ್ತು ಅಂತ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (Basavaraj Bommai) ಪ್ರಶ್ನಿಸಿದ್ದಾರೆ.

    ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಜಾರಿ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 200 ಯೂನಿಟ್ ಫ್ರೀಂ ಸ್ಕೀಂನಲ್ಲಿ ದೋಖಾ ಆಗಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಅನ್ನಭಾಗ್ಯದಲ್ಲೂ ಗೊಂದಲವಿದೆ. 10 ಕೆಜಿಯಲ್ಲಿ ರಾಗಿ, ಜೋಳ ಸೇರಿದ್ಯಾ?, 10 ಕೆಜಿ ಉಚಿತ ಅಕ್ಕಿ ಮಾತ್ರ ಕೊಡ್ತಾರಾ ಎಂದು ಬೊಮ್ಮಾಯಿ ಪ್ರಶ್ನಿಸಿದ್ದಾರೆ.

    ಮುಖ್ಯಮಂತ್ರಿಗಳು ಸಚಿವ ಸಂಪುಟ ಮುಗಿಸಿ ಸಚಿವ ಸಂಪುಟ (Congress Cabinet) ದಲ್ಲಿ ನಿರ್ಣಯ ಆದ ಅಂಶಗಳನ್ನ ಪತ್ರಿಕಾ ಗೋಷ್ಠಿ ನಡೆಸಿದ್ದನ್ನ ನಾನು ನೋಡಿದ್ದೇನೆ. ಚುನಾವಣೆಯ ಪೂರ್ವದ ಮಾತುಗಳಿಗೂ ಚುನಾವಣೆಯ ನಂತರದ ಮಾತುಗಳಿಗೂ ವ್ಯತ್ಯಾಸ ಇದೆ. ಎಲ್ಲರಿಗೂ 200 ಯೂನಿಟ್ ಫ್ರೀ ಅಂತಾ ಘಂಟಾ ಘೋಷವಾಗಿ ಹೇಳಿದ್ರು. 200 ಯೂನಿಟ್ ಉಚಿತ ವಿದ್ಯುತ್ ಅಂತ ಕಾರ್ಡ್ ಅಲ್ಲೂ ಬರೆದಿದ್ದಾರೆ ಎಂದರು. ಇದನ್ನೂ ಓದಿ: 200 ಯೂನಿಟ್‌ ವಿದ್ಯುತ್‌ ಫ್ರೀ – ಷರತ್ತುಗಳು ಅನ್ವಯ

    ಆದರೆ ಈಗ ಇವರು ಹೇಳಿದ ಪ್ರಕಾರ, ತಮ್ಮ ವಿದ್ಯುತ್ ಶಕ್ತಿ ಬಳಕೆ 70 ಇರೋದು 80 ಮಾಡಬಹುದು ಅಂದಿದ್ದಾರೆ. 200 ಯೂನಿಟ್ ಫ್ರೀ ಅಂದಿದ್ದಾರೆ. 200 ಯೂನಿಟ್ ಫ್ರೀ ಅನ್ನೋದಕ್ಕೂ ವಾರ್ಷಿಕ ಸರಾಸರಿ 10% ಹಾಕಿ ಕೊಡುತ್ತೇವೆ ಅನ್ನೋದಕ್ಕೂ ವ್ಯತ್ಯಾಸ ಇದೆ. ಇದು 200 ಯೂನಿಟ್ ಫ್ರೀ ಇಲ್ಲ ಯಾಮಾರಿಸಿದ್ದಾರೆ ಎಂದು ಬೊಮ್ಮಾಯಿ ವಾಗ್ದಾಳಿ ನಡೆಸಿದರು.

    ಅವರ ನಿಜ ಬಣ್ಣ ಬಯಲಾಗಿದೆ. 200 ಯೂನಿಟ್ ಫ್ರೀ ಗೂ 10% ಹಾಕಿಕೊಂಡದಕ್ಕೂ ವ್ಯತ್ಯಾಸ ಇದೆ ಇದು ಫ್ರೀ ಹೇಗಾಯ್ತು. ಅವರು ಸ್ಪಷ್ಟವಾಗಿ ಹೇಳಬೇಕಾಗಿತ್ತು 200 ಯೂನಿಟ್ ಕೊಡಲ್ಲ ಅಂತಾ ಸುಮ್ನೆ ಯಾಮಾರಿಸಿದ್ದಾರೆ. ಸರಾಸರಿ ಮೇಲೆ 10% ಕೊಡ್ತೆವೆ ಅಂದಿದ್ದಾರೆ ಅದಕ್ಕೆ ಸ್ಪಷ್ಟತೆ ಇಲ್ಲ. ಪತ್ರ ಕರ್ತರು ಪ್ರಶ್ನೆ ಕೇಳಿದ್ರು ಸರಾಸರಿ ಅಂತಾರೆ. ಹಾಗಾಗಿ ಇದು ದೋಖಾ ಎಂದು ಬೊಮ್ಮಾಯಿ ಕಿಡಿಕಾರಿದ್ದಾರೆ. ಇದನ್ನೂ ಓದಿ: ಗ್ಯಾರಂಟಿ ಘೋಷಿಸಿದ್ದು ಸಂತೋಷ, ಇದರಿಂದ ಕರ್ನಾಟಕ ದಿವಾಳಿಯಾಗದಿರಲಿ – ಸಿ.ಟಿ ರವಿ