Tag: Congress Guarantee

  • ಶಕ್ತಿ-ನಿಶ್ಯಕ್ತಿ, ಅನ್ನಭಾಗ್ಯ-ಕನ್ನಭಾಗ್ಯ, ಗೃಹ ಜ್ಯೋತಿ-ಪ್ರತಿ ಮನೆಗಳಲ್ಲೂ ಕಗ್ಗತ್ತಲು – ಕಾಂಗ್ರೆಸ್‌ ಗ್ಯಾರಂಟಿಗಳ ಕುರಿತು ಬಿಜೆಪಿ ಲೇವಡಿ

    ಶಕ್ತಿ-ನಿಶ್ಯಕ್ತಿ, ಅನ್ನಭಾಗ್ಯ-ಕನ್ನಭಾಗ್ಯ, ಗೃಹ ಜ್ಯೋತಿ-ಪ್ರತಿ ಮನೆಗಳಲ್ಲೂ ಕಗ್ಗತ್ತಲು – ಕಾಂಗ್ರೆಸ್‌ ಗ್ಯಾರಂಟಿಗಳ ಕುರಿತು ಬಿಜೆಪಿ ಲೇವಡಿ

    ಬೆಂಗಳೂರು: ಕಾಂಗ್ರೆಸ್‌ ನೇತೃತ್ವದ ಸರ್ಕಾರ ಕರ್ನಾಟಕದಲ್ಲಿ (Government Of Karnataka) ಅನುಷ್ಠಾನಗೊಳಿಸಿರುವ ಮಹತ್ವಾಕಾಂಕ್ಷಿ 5 ಗ್ಯಾರಂಟಿ ಯೋಜನೆಗಳ (Congress Guarantee Schemes) ಬಗ್ಗೆ ಬಿಜೆಪಿ ಲೇವಡಿ ಮಾಡಿದೆ.

    ಈ ಕುರಿತು ಎಕ್ಸ್‌ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿ ಘಟಕ, ಕರ್ನಾಟಕ ಸರ್ಕಾರದ 6 ತಿಂಗಳ ಸಾಧನೆಯನ್ನು ಟೀಕಿಸಿದೆ. ಇದನ್ನೂ ಓದಿ: PUBLiC TV Impact ನೂರಾರು ಟನ್‌ ಕಲ್ಲಿದ್ದಲು ಕಳ್ಳತನ – ಸ್ಥಳಕ್ಕೆ ಬಂದ ಅಧಿಕಾರಿಗಳಿಗೆ ಶಾಕ್‌, ತನಿಖೆಗೆ ಆದೇಶ

    ಟ್ವೀಟ್‌ನಲ್ಲಿ ಏನಿದೆ?
    6 ತಿಂಗಳಲ್ಲಿ ಸಿದ್ದರಾಮಯ್ಯ ಅವರ ಸರ್ಕಾರದ ಅವೈಜ್ಞಾನಿಕ ಗ್ಯಾರಂಟಿಗಳ ಅನುಷ್ಠಾನ,
    ಶಕ್ತಿ-ನಿಶ್ಯಕ್ತಿ, ನಿಗಮಗಳ ಬಳಿ ಇಲ್ಲ ಸಂಪನ್ಮೂಲ ಸರ್ಕಾರ ಕೊಡುತ್ತಿಲ್ಲ ಅನುದಾನ
    ಗೃಹ ಜ್ಯೋತಿ ಪ್ರತಿ ಮನೆಗಳಲ್ಲೂ ತುಂಬಿತು ಕಗ್ಗತ್ತಲು ಕೈಗಾರಿಕೆಗಳಿಗೂ ವಿದ್ಯುತ್ ಇಲ್ಲ ರೈತರಿಗೂ ಇಲ್ಲ
    ಯುವ ನಿಧಿ – ಜಾರಿಗೆ ಬರಲೇ ಇಲ್ಲ ಬರುವುದೂ ಇಲ್ಲ, ಉದ್ಯೋಗವೂ ಇಲ್ಲ, ನಿಧಿಯೂ ಇಲ್ಲ
    ಅನ್ನಭಾಗ್ಯ – ಕನ್ನಭಾಗ್ಯ, ಮೋದಿ ಸರ್ಕಾರದ ಅಕ್ಕಿಗೂ ಕನ್ನ ಜನರ ಖಾತಗೆ ಹಾಕುವ ಹಣಕ್ಕೂ ಕನ್ನ
    ಗೃಹ ಲಕ್ಷ್ಮಿ – ಬೀದಿಗೆ ಬಂದು ನಿಂತ ಸ್ವಾಭಿಮಾನಿ ಮಹಿಳೆಯರು, ಎಟಿಎಂ ಸರ್ಕಾರ ಹಾಕಲೇ ಇಲ್ಲ 2ನೇ ತಿಂಗಳ ಹಣ, ಕಾಂಗ್ರೆಸ್‌ ಕನ್ನಡಿಗರ ಕಿವಿ ಮೇಲೆ ಹೂವಿಟ್ಟಿದೆ ಎಂದು ಲೇವಡಿ ಮಾಡಿದೆ. ಇದನ್ನೂ ಓದಿ: ಡಿಕೆಶಿ ವಿರುದ್ಧ ಹೆಚ್‌ಡಿಕೆ ಆರೋಪ ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ: ಕಾಂಗ್ರೆಸ್‌ ವಕ್ತಾರ 

  • ಯಾವ ಸರ್ಕಾರ ಬಂದರೂ ಗ್ಯಾರಂಟಿ ಯೋಜನೆ ಮುಂದುವರಿಯುತ್ತದೆ: ಶ್ರೀರಾಮುಲು

    ಯಾವ ಸರ್ಕಾರ ಬಂದರೂ ಗ್ಯಾರಂಟಿ ಯೋಜನೆ ಮುಂದುವರಿಯುತ್ತದೆ: ಶ್ರೀರಾಮುಲು

    ಬೆಂಗಳೂರು: ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ, ಜಾರಿಗೆ ಬಂದ ಕಾರ್ಯಕ್ರಮಗಳನ್ನ ಎಲ್ಲಾ ಸರ್ಕಾರಗಳು ಉಳಿಸಿಕೊಂಡು ಬರುತ್ತಿವೆ. ಬಿಜೆಪಿ ಸರ್ಕಾರ ಕೂಡಾ ಹಿಂದಿನ ಸರ್ಕಾರಗಳು ಮಾಡಿದ ಯೋಜನೆ ಮುಂದುವರೆಸಿದೆ. ಈ ಗ್ಯಾರಂಟಿ (Congress Guarantee) ಯೋಜನೆಗಳು ಕೂಡಾ ಹಾಗೆ ಯಥಾಸ್ಥಿತಿಯಲ್ಲಿ ಮುಂದುವರಿದುಕೊಂಡು ಹೋಗುತ್ತದೆ ಎಂದು ಮಾಜಿ ಸಚಿವ ಶ್ರೀರಾಮುಲು (Sriamulu) ಹೇಳಿದ್ದಾರೆ.

    ಮಾಜಿ ಸಚಿವರಾದ ಶ್ರೀರಾಮುಲು ಅವರು ಸೋಮವಾರ ಬೆಂಗಳೂರಿನಲ್ಲಿರುವ ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಅವರ ನಿವಾಸಕ್ಕೆ ಭೇಟಿ ನೀಡಿ ತಮ್ಮ ಮಗಳ ಮದುವೆಯ ಆಮಂತ್ರಣ ನೀಡಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅರಮನೆ ಮೈದಾನದಲ್ಲಿ ನನ್ನ ಮಗಳ ಮದುವೆ ಕಾರ್ಯಕ್ರಮ ಇದೆ. ಹೀಗಾಗಿ ಸಿಎಂ ಮತ್ತು ಡಿಸಿಎಂಗೆ ಆಹ್ವಾನ ನೀಡಲು ಬಂದಿದ್ದೆ. ಇದು ನನ್ನ ಖಾಸಗಿ ಕಾರ್ಯಕ್ರಮ. ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ ಎಂದು ಸಪಷ್ಟಪಡಿಸಿದರು. ಇದನ್ನೂ ಓದಿ: ರೋಹಿತ್‌ ಶರ್ಮಾ ವಿಶ್ವದಲ್ಲೇ ಅತ್ಯಂತ ನತದೃಷ್ಟ ವ್ಯಕ್ತಿ – ಶತಕ ಸಿಡಿಸಿದ ಟ್ರಾವಿಸ್‌ ಹೆಡ್‌ ಮಾತು

    ರಾಜ್ಯಾಧ್ಯಕ್ಷ ಸ್ಥಾನ ಮತ್ತು ವಿಪಕ್ಷ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಯತ್ನಾಳ್ ಬಹಿರಂಗ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯಿಸಿ, ನಮ್ಮ ಪಕ್ಷದಲ್ಲಿ ಒಂದುಬಾರಿ ರಾಜ್ಯಾಧ್ಯಕ್ಷರಾಗಿ ಘೋಷಣೆ ಮಾಡಿದ ನಂತರ ಮುಗೀತು. ಯತ್ನಾಳ್ ಅವರು ಹಿರಿಯ ನಾಯಕರು. ಒಂದು ಬಾರಿ ಪಾರ್ಟಿ ನಿರ್ಧಾರ ಮಾಡಿದ ಮೇಲೆ ಎಲ್ಲವನ್ನೂ ಸರಿ ಮಾಡಿಕೊಂಡು ಹೋಗ್ತೀವಿ. ಪಕ್ಷ ಮುನ್ನಡೆಸಬೇಕು ಹೀಗಾಗಿ ಎಲ್ಲ ಸರಿ ಮಾಡಿಕೊಂಡು ಹೋಗ್ತೀವಿ. ಅಶೋಕ್ ವಿಪಕ್ಷ ನಾಯಕ ಆಗಿ ನೇಮಕ ಆದ್ರು. ವಿಜಯೇಂದ್ರ ಕಿರಿಯರೇ ಇರಬಹುದು, ಆದ್ರೆ ಹೈಕಮಾಂಡ್ ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ ಎಲ್ಲರೂ ಸಹಕಾರ ನೀಡಿದ್ರೆ ಪಕ್ಷ ಕಟ್ಟಲು ಅನುಕೂಲವಾಗುತ್ತೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಗಾಜಾದ ಆಸ್ಪತ್ರೆಯನ್ನೇ ಉಗ್ರ ಚಟುವಟಿಕೆಗಳ ತಾಣವಾಗಿಸಿದ ಹಮಾಸ್- ಇಸ್ರೇಲ್ ವೀಡಿಯೋ ಸಾಕ್ಷಿ

    ಬಿಜೆಪಿ ಅಧಿಕಾರಕ್ಕೆ ಬಂದ್ರೆ ಗ್ಯಾರಂಟಿ ಯೋಜನೆ ರದ್ದು ಮಾಡುತ್ತೆ ಎಂದು ಪ್ರಚಾರ ಮಾಡಿ ಎಂಬ ಡಿಕೆಶಿವಕುಮಾರ್ ಹೇಳಿಕೆ ವಿಚಾರ ಕುರಿತು ಮಾತನಾಡಿ, ದೇಶಕ್ಕೆ ಸ್ವಾತಂತ್ರ‍್ಯ ಬಂದಾಗಿನಿಂದ ಇಲ್ಲಿವರೆಗೂ ಅನೇಕ ಯೋಜನೆಗಳು ಜಾರಿಗೆ ಬಂದಿವೆ. ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ. ಜಾರಿಗೆ ಬಂದ ಕಾರ್ಯಕ್ರಮಗಳನ್ನ ಎಲ್ಲಾ ಸರ್ಕಾರಗಳು ಉಳಿಸಿಕೊಂಡು ಬರುತ್ತಿವೆ. ಬಿಜೆಪಿ ಸರ್ಕಾರ ಕೂಡಾ ಹಿಂದಿನ ಸರ್ಕಾರಗಳು ಮಾಡಿದ ಯೋಜನೆ ಮುಂದುವರೆಸಿದೆ. ಈ ಗ್ಯಾರಂಟಿ ಯೋಜನೆಗಳು ಕೂಡಾ ಹಾಗೆ ಯಥಾಸ್ಥಿತಿಯಲ್ಲಿ ಮುಂದುವರೆದುಕೊಂಡು ಹೋಗುತ್ತದೆ. ಕಾಂಗ್ರೆಸ್ ಕೊಟ್ಟಿರೋ ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಶಕ್ತಿ ಗ್ಯಾರಂಟಿ ಯೋಜನೆಗಳು ಜನರಿಗೆ ತೃಪ್ತಿ ಆಗಿದ್ದರೆ, ಜನರೇ ಅರ್ಥ ಮಾಡಿಕೊಂಡು ಸಪೋರ್ಟ್ ಮಾಡ್ತಾರೆ. ಯೋಜನೆಗಳು ಸರಿಯಾಗಿ ಸಿಗದೇ ಹೋದರೆ ಜನ ವಿರೋಧ ಮಾಡೇ ಮಾಡ್ತಾರೆ ಎಂದು ಹೇಳಿದ್ದಾರೆ.

  • ಶಕ್ತಿ ಯೋಜನೆ ಇಕ್ಕಟ್ಟಿನಲ್ಲಿ ಸಾರಿಗೆ ಇಲಾಖೆ – ಮೀಸಲಿಟ್ಟ ಹಣ ಹೈಸ್ಪೀಡ್‌ನಲ್ಲಿ ಖರ್ಚು

    ಶಕ್ತಿ ಯೋಜನೆ ಇಕ್ಕಟ್ಟಿನಲ್ಲಿ ಸಾರಿಗೆ ಇಲಾಖೆ – ಮೀಸಲಿಟ್ಟ ಹಣ ಹೈಸ್ಪೀಡ್‌ನಲ್ಲಿ ಖರ್ಚು

    ಬೆಂಗಳೂರು: ಸರ್ಕಾರದ ಶಕ್ತಿ ಯೋಜನೆಗೆ (Shakti Scheme) ಮಹಿಳಾ ಮಣಿಗಳು ಬಹುಪರಾಕ್ ಎಂದಿದ್ದು, ಭರ್ಜರಿಯಾಗಿ ಯಶಸ್ವಿಯಾಗಿದೆ. ಶಕ್ತಿ ಯೋಜನೆ ಈಗ ಸಾರಿಗೆ ಇಲಾಖೆಗೆ (Transport Department) ಕೈಸುಡುತ್ತಿದ್ದು ಮೀಸಲಿಟ್ಟ ದುಡ್ಡು ಸಿಕ್ಕಾಪಟ್ಟೆ ಹೈಸ್ಪೀಡ್‌ನಲ್ಲಿ ಖರ್ಚಾಗುತ್ತಿದೆ.

    ಕಾಂಗ್ರೆಸ್‌ನ ಗ್ಯಾರಂಟಿಗಳಲ್ಲಿ (Congress Guarantee) ಒಂದಾದ ಶಕ್ತಿ ಯೋಜನೆ ಜಾರಿಯಾಗಿ ಇಂದಿಗೆ ಈಗಾಗಲೇ ಐದು ತಿಂಗಳು ಕಳೆದಿವೆ. ಜೂನ್ 11ರಿಂದ ಈ ಯೋಜನೆ ಜಾರಿಯಾಗಿದ್ದು, ಸುಮಾರು 90 ಕೋಟಿಗೂ ಹೆಚ್ಚು ನಾರಿಯರು ಉಚಿತವಾಗಿ ರಾಜ್ಯದಲ್ಲಿ ಪ್ರಯಾಣಿಸಿದ್ದಾರೆ.  ಇದನ್ನೂ ಓದಿ: ಮೋಸ್ಟ್‌ ವಾಂಟೆಡ್‌ ಜೈಶ್ ಉಗ್ರ ಪಾಕ್‌ನಲ್ಲಿ ನಿಗೂಢ ಹತ್ಯೆ

    ಸಿಎಂ ಸಿದ್ದರಾಮಯ್ಯನವರು (CM Siddaramaiah) ಶಕ್ತಿ ಯೋಜನೆಗೆ ಎಂದು ತಮ್ಮ ಬಜೆಟ್‌ನಲ್ಲಿ 9 ತಿಂಗಳಿಗೆ 2,800 ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದರು. ಆದರೆ ಈ ಯೋಜನೆ ಜಾರಿಯಾಗಿ ಐದೇ ತಿಂಗಳಿಗೆ ಈ ಹಣ ಖಾಲಿಯಾಗುತ್ತಾ ಬಂದಿದೆ.

    ಸರ್ಕಾರದ ಅಂದಾಜು ಎಷ್ಟಿತ್ತು?
    1 ತಿಂಗಳಿಗೆ ಸರ್ಕಾರದ 311 ಕೋಟಿ ರೂ. ಬೇಕಾಗಬಹುದು ಎಂದು ಅಂದಾಜಿಸಿತ್ತು. ಆದರೆ 5 ತಿಂಗಳಿಗೆ (ನವೆಂಬರ್ 12ರವರೆಗೆ) 2,246 ಕೋಟಿ ರೂ. ಖರ್ಚಾಗಿದೆ.

    ಉಳಿದ 4 ತಿಂಗಳಿಗೆ ಸರ್ಕಾರದ ಈ ಹಿಂದೆ ನಿಗದಿ ಮಾಡಿದ ಲೆಕ್ಕಾಚಾರದಂತೆ 1,244 ಕೋಟಿ ರೂ. ಹಣ ಬೇಕಾಗುತ್ತದೆ. ಈ ಲೆಕ್ಕ ಪರಿಗಣಿಸಿದರೆ ಒಟ್ಟು 690 ಕೋಟಿ ರೂ. ಹಣ ಕೊರತೆಯಾಗುವ ಸಾಧ್ಯತೆಯಿದೆ. ಪ್ರತಿನಿತ್ಯ 40 ಲಕ್ಷದಿಂದ 60 ಲಕ್ಷ ಮಹಿಳೆಯರು ಉಚಿತವಾಗಿ ಸಂಚರಿಸುತ್ತಿದ್ದಾರೆ. ಈ ಹಣಕಾಸು ವರ್ಷ ಮುಗಿಯಲು ಇನ್ನೂ ಐದು ತಿಂಗಳು ಇರುವುದರಿಂದ ಶಕ್ತಿ ಯೋಜನೆಗೆ ಎಷ್ಟು ಖರ್ಚಾಗಬಹುದು ಎಂಬ ಕುತೂಹಲ ಈಗ ಹೆಚ್ಚಾಗಿದೆ.

     

    ಶಕ್ತಿ ಯೋಜನೆಯ ಮೀಸಲಿಟ್ಟ ಹಣ ಖರ್ಚಾಗುತ್ತಿರುವುದಕ್ಕೆ ಪಬ್ಲಿಕ್ ಟಿವಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿ ಡಿಸೆಂಬರ್‌ನಲ್ಲಿ ಉಳಿದ ಹಣವನ್ನು ಸರ್ಕಾರ ಕೊಡಲಿದೆ. ಇನ್ನೂ 1 ಸಾವಿರ ಕೋಟಿ ರೂ. ಬೇಕಾಗಬಹುದು ಎಂದು ಅಂದಾಜಿಸಿದ್ದಾರೆ.

    ಶಕ್ತಿ ಯೋಜನೆ ಜಾರಿಯಾದ ಕೆಲ ತಿಂಗಳುಗಳ ನಂತರ ಪ್ರಯಾಣಿಕರ ಸಂಖ್ಯೆಯಲ್ಲಿ ಕಡಿಮೆಯಾಗಬಹುದೆಂಬ ನಿರೀಕ್ಷೆಯಿತ್ತು. ಆದರೆ ಅದು ಹುಸಿಯಾಗಿದ್ದು, ದಿನದಿಂದ ದಿನಕ್ಕೆ ಶಕ್ತಿ ಯೋಜನೆಗೆ ಭರ್ಜರಿ ಯಶಸ್ಸು ಕಂಡುಬರುತ್ತಿದೆ. ಹೀಗಾಗಿ ಸರ್ಕಾರದ ಲೆಕ್ಕಾಚಾರ ಮೀರಿ ಹಣ ಖರ್ಚಾಗುತ್ತಿದೆ.

     

  • ಕೊಡಗಿನ 19,000ಕ್ಕೂ ಅಧಿಕ ಮಹಿಳೆಯರಿಗೆ ʻಗೃಹಲಕ್ಷ್ಮಿʼ ಸಿಕ್ಕಿಲ್ಲ

    ಕೊಡಗಿನ 19,000ಕ್ಕೂ ಅಧಿಕ ಮಹಿಳೆಯರಿಗೆ ʻಗೃಹಲಕ್ಷ್ಮಿʼ ಸಿಕ್ಕಿಲ್ಲ

    ಮಡಿಕೇರಿ: ರಾಜ್ಯ ಸರ್ಕಾರದ ಬಹುನಿರೀಕ್ಷಿತ ಗೃಹಲಕ್ಷ್ಮಿ ಯೋಜನೆಯ (Gruhalakshmi Scheme) ಹಣ ಸಾಕಷ್ಟು ಮಹಿಳೆರಿಗೆ ತಲುಪಿಲ್ಲ. ಅದರಲ್ಲೂ ಕೊಡಗು (Kodagu) ಜಿಲ್ಲೆಯಲ್ಲಿ ಸುಮಾರು 19 ಸಾವಿರಕ್ಕೂ ಅಧಿಕ ಮಹಿಳೆಯರಿಗೆ ಯೋಜನೆಯ ಹಣ ತಲುಪಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ.

    ಆಧಾರ್‌ ಮತ್ತು ಬ್ಯಾಂಕ್‌ ಖಾತೆ ಜೋಡಣೆಯಲ್ಲಿ ವ್ಯತ್ಯಾಸ ಮತ್ತಿತರ ಕಾರಣಗಳಿಂದಾಗಿ ಕಾಂಗ್ರೆಸ್‌ ಗ್ಯಾರಂಟಿಗಳಲ್ಲಿ (Congress Guarantee) ಒಂದಾದ ಗೃಹಲಕ್ಷ್ಮಿ ಯೋಜನೆಯಡಿ ಈವರೆಗೆ ಕೊಡಗು ಜಿಲ್ಲೆಯ 19,606 ಮಹಿಳೆಯರಿಗೆ ಹಣ ತಲುಪಿಲ್ಲ. ಇದನ್ನೂ ಓದಿ: Breaking: ಲಂಚ ಪಡೆಯುವಾಗಲೇ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದ ED ಅಧಿಕಾರಿಗಳು ಅರೆಸ್ಟ್‌

    ಜಿಲ್ಲೆಯಲ್ಲಿ ಒಟ್ಟು 1,31,863 ಫಲಾನುಭವಿಗಳಿದ್ದು, ಅವರಲ್ಲಿ 1,12,257 ಗೃಹಲಕ್ಷ್ಮಿ ಯೋಜನೆ ಹಣ ತಲುಪಿದೆ. ಮೊದಲ ಹಂತದಲ್ಲಿ 91,840 ಮಹಿಳೆಯರಿಗೆ ಒಟ್ಟು 18.36 ಕೋಟಿ ರೂ.ನಷ್ಟು ಹಣ ಜಮೆಯಾಗಿದೆ. 2ನೇ ಹಂತದಲ್ಲಿ 1,01,466 ಮಹಿಳೆಯರಿಗೆ ಒಟ್ಟು 20.29 ಕೋಟಿ ರೂ. ಹಣ ಜಮೆಯಾಗಿದೆ.

    ಇನ್ನೂ 19,606 ಮಹಿಳೆಯರಲ್ಲಿ ಸರಿಸುಮಾರು 9 ಸಾವಿರ ಮಹಿಳೆಯರು ಜಿಲ್ಲೆಯಿಂದ ಹೊರಗಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದಲೇ ಅಂತಹ ಮಹಿಳೆಯರನ್ನು ಗುರುತು ಮಾಡಲಾಗಿದ್ದು, ಅಂಗನವಾಡಿ ಕಾರ್ಯಕರ್ತರಿಗೆ ಮಾಹಿತಿ ನೀಡಿದೆ. ಅವರನ್ನು ಪತ್ತೆ ಮಾಡಿ ಯೋಜನೆ ತಲುಪಿಸುವ ಪ್ರಾಮಾಣಿಕ ಪ್ರಯತ್ನಕ್ಕೆ ಮುಂದಾಗಿದೆ. ಇದನ್ನೂ ಓದಿ: ಇಂಡಿಯಾ ಮೈತ್ರಿಕೂಟದಲ್ಲಿ ಯಾವುದೇ ಪ್ರಗತಿ ಕಾಣುತ್ತಿಲ್ಲ: ನಿತೀಶ್‌ ಕುಮಾರ್‌ ಬೇಸರ

    ಇದರ ಹೊರತಾಗಿಯೂ ಅನೇಕ ಕಾಡಂಚಿನ ಮಹಿಳೆಯರು, ತೋಟದ ಕೂಲಿ ಕಾರ್ಮಿಕ ಮಹಿಳೆಯರು ಯೋಜನೆ ಪಡೆಯಲು ಬರುತ್ತಿಲ್ಲ ಎಂದು ಇಲಾಖೆ ನಿರ್ದೇಶಕರು ತಿಳಿಸಿದ್ದಾರೆ.

    ಸೆಪ್ಟೆಂಬರ್ ತಿಂಗಳ ಹಣದಲ್ಲಿ ಕೆಲವರಿಗೆ ಹಣ ಜಮಾವಣೆ ಆಗುತ್ತಿಲ್ಲ. ಕೆಲವೊಂದು ತಾಂತ್ರಿಕ ದೋಷ, ಸರ್ವರ್‌ ಸಮಸ್ಯೆ ಮೊದಲಾದ ಕಾರಣದಿಂದ ಯೋಜನೆಯ ಹಣ ಜನೆ ಮಾಡುವುದರಲ್ಲಿ ಸಮಸ್ಯೆಯಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ʻರೈತರ ಆತ್ಮಹತ್ಯೆʼ ಕಾಂಗ್ರೆಸ್ ಸರ್ಕಾರದ 6ನೇ ಗ್ಯಾರಂಟಿ – ಜಿ.ಟಿ ದೇವೇಗೌಡ ಕಿಡಿ

    ʻರೈತರ ಆತ್ಮಹತ್ಯೆʼ ಕಾಂಗ್ರೆಸ್ ಸರ್ಕಾರದ 6ನೇ ಗ್ಯಾರಂಟಿ – ಜಿ.ಟಿ ದೇವೇಗೌಡ ಕಿಡಿ

    ಧಾರವಾಡ: ಈ ಹಿಂದಿನ ಸರ್ಕಾರಗಳೆಲ್ಲ ರಾಜ್ಯದ ರೈತರಿಗೆ (Farmers) ಅನೇಕ ಯೋಜನೆಗಳ ಕೊಡುಗೆ ನೀಡಿದ್ದವು. ಆದ್ರೆ ಹಿಂದಿನ ಸರ್ಕಾರಗಳ ಆದ್ಯತೆಗಳನ್ನು ಕಾಂಗ್ರೆಸ್ ಸರ್ಕಾರ ಬಂದ್ ಮಾಡಿದ್ದು, ಆತ್ಮಹತ್ಯೆಯೊಂದೇ ದಾರಿಯಾಗಿದೆ. ಬಹಳಷ್ಟು ಸರ್ಕಾರಗಳು ರೈತರ ಆತ್ಮಹತ್ಯೆ ತಡೆಯಲು ಪ್ರಯತ್ನ ಮಾಡಿವೆ. ಆದ್ರೆ ಕಾಂಗ್ರೆಸ್ (Congress) ಬಂದಮೇಲೆ ಮತ್ತೆ ರೈತ ಆತ್ಮಹತ್ಯೆ ಶುರುವಾಗಿದ್ದು, ಇದು ಕಾಂಗ್ರೆಸ್ ಸರ್ಕಾರದ 6ನೇ ಗ್ಯಾರಂಟಿಯಾಗಿದೆ ಎಂದು ಮಾಜಿ ಸಚಿವ ಹಾಗೂ ಜೆಡಿಎಸ್ ಹಾಲಿ ಶಾಸಕ ಜಿ.ಟಿ ದೇವೇಗೌಡ (GT Devegowda) ವಾಗ್ದಾಳಿ ನಡೆಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಕೇಂದ್ರ (BJP Union Government) ಹಾಗೂ ಹಿಂದಿನ ರಾಜ್ಯ ಸರ್ಕಾರದ ಪರ ಬ್ಯಾಟಿಂಗ್ ಮಾಡಿದ್ದಾರೆ. ಇದನ್ನೂ ಓದಿ: Operation Ajay: ಇಸ್ರೇಲ್‌ನಿಂದ 230 ಮಂದಿ ಭಾರತೀಯರ ಆಗಮನ – ಕನ್ನಡಿಗರಿಗೆ ಟಿ.ಬಿ ಜಯಚಂದ್ರ ಆತ್ಮೀಯ ಸ್ವಾಗತ

    ವಿದ್ಯುತ್ ಇಲ್ಲದೇ ರೈತರು ಪರದಾಡುವಂತಾಗಿದೆ, ಮಕ್ಕಳ ವಿದ್ಯಾಭ್ಯಾಸಕ್ಕೂ ಕರೆಂಟ್ ಇಲ್ಲ, ಬರ ಪರಹಾರ ಇಲ್ಲ, ಬೆಳೆ ನಷ್ಟಕ್ಕೆ ಪರಿಹಾರ ಇಲ್ಲ. ರಾಜ್ಯ ಕತ್ತಲೆಯಲ್ಲಿ ಕಳೆಯುತ್ತಿದೆ. 135 ಜನ ಗೆದ್ದು ಬಹುಮತದ ಸರ್ಕಾರ ಬಂದಿದೆ. ಆದರೂ ಏನೂ ಆಗುತ್ತಿಲ್ಲ. ಕಾಂಗ್ರೆಸ್ ಶಾಸಕರೇ 5 ಗ್ಯಾರಂಟಿ ಬಗ್ಗೆ ಅಪಸ್ವರ ಎತ್ತಿದ್ದಾರೆ. ಜನರ ಅಭಿವೃದ್ಧಿಗೆ ಹಣ ಇಲ್ಲ ಅಂತಾ ಆರೋಪ ಮಾಡಿದ್ದಾರೆ. ರಾಜು ಕಾಗೆ ಸಹ ಆರೋಪ ಮಾಡಿದ್ದಾರೆ. ಎಂದೂ ನೋಡಿರದ ಕೆಟ್ಟ ಸರ್ಕಾರ ಇದು. ಯಾವುದಕ್ಕೂ ಜವಾಬ್ದಾರಿಯ ಉತ್ತರವಿಲ್ಲ. ಕಾವೇರಿ ನೀರು ಕೇಳಿದ ತಕ್ಷಣ ತಮಿಳುನಾಡಿಗೆ ಹರಿಸಿಬಿಟ್ಟರು. ತಾವು ನೀರು ಕೊಟ್ಟು, ಮೋದಿಯನ್ನ ಕೇಳಿ ಅಂತಾರೆ. ಈಗ 5 ಗ್ಯಾರಂಟಿ ಕೊಟ್ಟು ಎಂಪಿ ಚುನಾವಣೆ 20 ಸ್ಥಾನ ಗೆಲ್ಲಲು ಹೊರಟಿದ್ದಾರೆ ಎಂದು ಅಸದಮಾಧಾನ ಹೊರಹಾಕಿದ್ದಾರೆ.

    ರಾಜ್ಯದಲ್ಲಿ ಬರಗಾಲ ಬಂದಾಗಿದೆ, ವಿದ್ಯುತ್ ಕೊಡಿ ಅಂದ್ರೆ, ಉಪಮುಖ್ಯಮಂತ್ರಿಗಳು ಕೇಂದ್ರದ ಕಡೆ ಕೈ ತೋರಿಸ್ತಾರೆ. ಸಿಎಂ ಕೂಡಾ ಕೇಂದ್ರದ ಕಡೆ ಕೈ ತೋರಿಸ್ತಾರೆ. ವಿದ್ಯುತ್ ಬೇಕಾದಷ್ಟಿದೆ, ಕೇಂದ್ರದ ಗ್ರಿಡ್‌ಗೆ ಇವರು ದುಡ್ಡು ಕೊಡಬೇಕಲ್ವಾ? ರಾಜ್ಯ ಸರ್ಕಾರ ದುಡ್ಡು ಕೊಟ್ಟರೆ ಅವರು ವಿದ್ಯುತ್ ಕೊಡ್ತಾರೆ. ಹಿಂದೆ ನಮ್ಮಲ್ಲಿ ರೈತರಿಗೆ ಸೋಲಾರ್ ಸೇರಿ 7 ಗಂಟೆ 3 ಫೇಸ್ ವಿದ್ಯುತ್ ಕೊಡ್ತಾ ಇದ್ವಿ. ಆಗ ರೈತರು 2 ಫೆಸ್ ಎರಡು ಗಂಟೆ ತಡವಾದರೆ ಬಾಯಿ ಬಡಿತಿದ್ರು, ನಂತರ 7 ಗಂಟೆಗಳ ಕಾಲ 3 ಫೆಸ್ ವಿದ್ಯುತ್ ಅನ್ನು ರೈತರ ಪಂಪ್ ಸೆಟ್‌ಗಳಿಗೆ ಕೊಡಲಾಗುತ್ತಿತ್ತು. ಆದ್ರೆ ಇವತ್ತು ಅವರೇ ಸ್ಥಗಿತ ಮಾಡಿದ್ದೇವೆ ಎಂದು ಹೇಳ್ತಾರೆ ವಿದ್ಯುತ್ ಇಲ್ಲ ಅಂದ್ರೆ, ರೈತರ ಪರಿಸ್ಥಿತಿ ಏನು? ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: Operation Ajay: ಭಾರತ ಸರ್ಕಾರಕ್ಕೆ ಸಲಾಂ – ಇಸ್ರೇಲ್‌ ಯುದ್ಧ ಭೂಮಿಯ ಅನುಭವ ಬಿಚ್ಚಿಟ್ಟ ಕನ್ನಡಿಗರು

    ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಜೆಡಿಎಸ್ ಪಕ್ಷ ಬಿಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಇಬ್ರಾಹಿಂ ಅವರು ಪಕ್ಷ ಬಿಡುವುದಿಲ್ಲ. ಬಿಜೆಪಿ ಜೊತೆ ಸೀಟ್ ಹಂಚಿಕೆ ವಿಚಾರವಾಗಿ ತೀರ್ಮಾನ ಆಗಿಲ್ಲ ಅಷ್ಟೇ. ಎನ್‌ಡಿಎ ಜೊತೆಗೆ ಎಲ್ಲರೂ ಹೋಗಬೇಕು ಎಂದ ಅವರು ಮುಖ್ಯಮಂತ್ರಿಗಳ ಮೇಲೆ ಪ್ರೀತಿ ಹಿಂದೆಯು ಇತ್ತು, ಈಗಲೂ ಇದೆ, ಮುಂದೆಯೂ ಇರುತ್ತದೆ. ಆದ್ರೆ ಅಭಿವೃದ್ಧಿ ವಿಚಾರದಲ್ಲಿ ಕಾಂಗ್ರೆಸ್ ಬಗ್ಗೆ ಅಸಮಾಧಾನವಿದೆ ಎಂದು ಹೇಳಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನವರಾತ್ರಿಗೂ ಮುನ್ನ ರಾಜ್ಯಕ್ಕೆ `ಕತ್ತಲೆಭಾಗ್ಯ’ ಗ್ಯಾರಂಟಿ – ಸರ್ಕಾರದ ಸದಾರಮೆ ಆಟ ಈಗಷ್ಟೇ ಗೊತ್ತಾಗುತ್ತಿದೆ: HDK ಸುದೀರ್ಘ ಟ್ವೀಟ್‌

    ನವರಾತ್ರಿಗೂ ಮುನ್ನ ರಾಜ್ಯಕ್ಕೆ `ಕತ್ತಲೆಭಾಗ್ಯ’ ಗ್ಯಾರಂಟಿ – ಸರ್ಕಾರದ ಸದಾರಮೆ ಆಟ ಈಗಷ್ಟೇ ಗೊತ್ತಾಗುತ್ತಿದೆ: HDK ಸುದೀರ್ಘ ಟ್ವೀಟ್‌

    ಬೆಂಗಳೂರು: ಈಗಾಗಲೇ 5 ಅರೆಬರೆ ಗ್ಯಾರಂಟಿಗಳನ್ನು (Congress Guarantee) ಕೊಟ್ಟು ಕೈ ತೊಳೆದುಕೊಂಡಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರ ಈಗ ʻಕತ್ತಲೆಭಾಗ್ಯʼ ಹೆಸರಿನಲ್ಲಿ 6ನೇ ಗ್ಯಾರಂಟಿ ಕೊಡಲು ಸಿದ್ಧವಾಗಿದೆ. ಡಿಸೆಂಬರ್ ತಿಂಗಳ ಹೊತ್ತಿಗೆ ಕರ್ನಾಟಕ ಈ ಕತ್ತಲೆಭಾಗ್ಯದ ಕೂಪಕ್ಕೆ ಬೀಳುವುದು ಖಚಿತ, ಸರ್ಕಾರದ ಸದಾರಮೆ ಆಟ ಈಗಷ್ಟೇ ಗೊತ್ತಾಗುತ್ತಿದೆ ಎಂದು ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ (HD Kumaraswamy) ಕಿಡಿ ಕಾರಿದ್ದಾರೆ.

    ರಾಜ್ಯದಲ್ಲಿ ಉಂಟಾಗುತ್ತಿರುವ ಲೋಡ್‌ ಶೆಡ್ಡಿಂಗ್‌ (Load Shedding) ಸಮಸ್ಯೆ ಬಗ್ಗೆ ಎಕ್ಸ್‌ ಖಾತೆಯಲ್ಲಿ ಸುದೀರ್ಘ ಟ್ವೀಟ್‌ ಮಾಡಿರುವ ಅವರು, ಕಾಂಗ್ರೆಸ್‌ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಹೋಗಿದ್ದರಲ್ಲಿ ತಪ್ಪೇನಿದೆ?: ಪ್ರದೀಪ್ ಈಶ್ವರ್ ಪ್ರಶ್ನೆ 

    HDK ಟ್ವೀಟ್‌ನಲ್ಲಿ ಏನಿದೆ?
    ರಾಜ್ಯ ಕಾಂಗ್ರೆಸ್‌ ಸರ್ಕಾರ (Congress Government) ಈಗಾಗಲೇ 5 ಅರೆಬರೆ ಗ್ಯಾರಂಟಿಗಳನ್ನು ಕೊಟ್ಟು ಕೈ ತೊಳೆದುಕೊಂಡಿದೆ. ಸರಿ. ಶೀಘ್ರವೇ ಅರೆಬರೆ ಅಲ್ಲದ ಪರಿಪೂರ್ಣವಾದ 6ನೇ ಗ್ಯಾರಂಟಿ ಕೊಡಲು ಸನ್ನಾಹವನ್ನೂ (ಸಿದ್ಧತೆ) ನಡೆಸಿದೆ. ಅದರ ಹೆಸರು ಕತ್ತಲೆಭಾಗ್ಯ. ಡಿಸೆಂಬರ್ ತಿಂಗಳ ಹೊತ್ತಿಗೆ ಕರ್ನಾಟಕ ಈ ಕತ್ತಲೆಭಾಗ್ಯದ ಕೂಪಕ್ಕೆ ಬೀಳುವುದು ಖಚಿತ. ಜನವರಿ ಅಂದರೆ 2024ರ ಹೊಸ ವರ್ಷಕ್ಕೆ ತಾನು ಕೊಟ್ಟ ಗೃಹಜ್ಯೋತಿಗೆ (Gruha Jyoti Scheme) ಎಳ್ಳುನೀರು ಬಿಟ್ಟು ಕಗ್ಗತ್ತಲ ಕರ್ನಾಟಕದ ಉದಯ ಮಾಡಿಸುವುದು ಗ್ಯಾರಂಟಿ.. ಗ್ಯಾರಂಟಿ. ಇದು ಸತ್ಯ.

    ಕಾವೇರಿ ಬಗ್ಗೆ ಸರ್ಕಾರ ಕಳ್ಳಾಟ ಆಡಿದೆ. ತಮಿಳುನಾಡು ವಿಧಾನಸಭೆಯಲ್ಲಿ ರಾಜ್ಯದ ವಿರುದ್ಧ ನಿಲುವಳಿ ಸೂಚನೆ ಅಂಗೀಕಾರವಾಗಿದೆ. ಎಮ್ಮೆ ಚರ್ಮದ ಸರ್ಕಾರಕ್ಕೆ ಕಾವೇರಿ ಒಡಲಾಳದ ಬೇಗುದಿ ಬಗ್ಗೆ ಜಾಣ ಕುರುಡು. ಸರ್ಕಾರ ರಾಜ್ಯದ ಉದ್ದಗಲಕ್ಕೂ ಅನಧಿಕೃತ ಲೋಡ್ ಶೆಡ್ಡಿಂಗ್ ಹೇರಿ ದಿನಕ್ಕೆ 2 ಗಂಟೆ ವಿದ್ಯುತ್ತಿಗೂ ದಿಕ್ಕಿಲ್ಲದ ದುಸ್ಥಿತಿ ನಿರ್ಮಾಣ ಮಾಡಿದೆ. ನಮ್ಮ ರೈತರಿಗೆ ಲೋಡ್ ಶೆಡ್ಡಿಂಗ್, ತಮಿಳುನಾಡಿಗೆ ಸಮೃದ್ಧ ನೀರು. ಇದನ್ನೂ ಓದಿ: ದೀಪಾವಳಿ ಹಬ್ಬಕ್ಕೆ ಬೆಂಗಳೂರಿನಲ್ಲಿ ಪಟಾಕಿ ಬ್ಯಾನ್ ಆಗುತ್ತಾ?

    ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ವಿದ್ಯುತ್ ಅಭಾವದಿಂದ ಬೆಳೆಗಳು ಒಣಗುತ್ತಿವೆ. ನಾಲೆಗಳಲ್ಲೂ ನೀರಿಲ್ಲ, ಬೋರ್‌ವೆಲ್‌ಗಳಿಂದ ಪಂಪ್ ಮಾಡಲು ವಿದ್ಯುತ್ತೂ ಇಲ್ಲ. ಮೊದಲೇ ಕಷ್ಟದಲ್ಲಿರುವ ರೈತನ ಬೆನ್ನಿನ ಮೇಲೆ ಬರೆ ಎಳೆಯುತ್ತಿದೆ ಕಾಂಗ್ರೆಸ್‌ ಸರ್ಕಾರ. ವಿದ್ಯುತ್ ಕ್ಷಾಮಕ್ಕೆ ಮೊದಲೇ ಕರ್ನಾಟಕ ವಿದ್ಯುತ್ ಉತ್ಪಾದನೆಯಲ್ಲಿ ಬಂಜರು ಬಿದ್ದಿದೆ. ಉತ್ಪಾದನೆಗೆ ಅಗತ್ಯವಾದ ಮೂಲಗಳ ಕ್ಷಾಮಕ್ಕೆ ತುತ್ತಾಗಿ, ಪರರಾಜ್ಯಗಳ ಮುಂದೆ ದೈನೇಸಿಯಾಗಿ ನಿಂತು ವಿದ್ಯುತ್ ಸಾಲಕ್ಕೆ ಅರ್ಜಿ ಹಾಕಿಕೊಳ್ಳುತ್ತಿದೆ. ಜಲ, ಪವನ, ಸೌರ ವಿದ್ಯುತ್ ಉತ್ಪಾದನೆ ಕುಸಿತವಾಗಿದೆ. ಇದು ದೂರದೃಷ್ಟಿಯ ಕೊರತೆ ಹಾಗೂ ನಿರ್ವಹಣೆಯ ವೈಫಲ್ಯ.

    ಜಲಾಶಯಗಳು ಖಾಲಿಯಾಗಿದ್ದು, ವಿದ್ಯುತ್ ಉತ್ಪಾದನೆ ಮಿತವಾಗಿ ಮಾಡುವಂತೆ ಸರ್ಕಾರವೇ ಆದೇಶಿಸಿದೆ. ಇನ್ನೊಂದೆಡೆ ಉಷ್ಣ ವಿದ್ಯುತ್ ಸ್ಥಾವರಗಳು ಕಲ್ಲಿದ್ದಲು ಬವಣೆಯಿಂದ ಅಲ್ಪಸ್ವಲ್ಪ ಉತ್ಪಾದಿಸುತ್ತಿವೆ. ರಾಜ್ಯದ ಒಟ್ಟಾರೆ ಬೇಡಿಕೆಯಲ್ಲಿ 20%ರಷ್ಟು ವಿದ್ಯುತ್ತನ್ನು ಸರ್ಕಾರ ಹೊರಗಿನಿಂದಲೇ ಪಡೆಯುತ್ತಿದೆ. ರಾಜ್ಯವನ್ನು ವಿದ್ಯುತ್ ಸಾಲಕ್ಕೆ ತಳ್ಳಿ, ಕರುನಾಡನ್ನು ಬರ್ಬಾದ್ ಮಾಡಲಿದೆ ಕಾಂಗ್ರೆಸ್ ಸರ್ಕಾರ. ಆದರೆ, ವಿದ್ಯುತ್ ಸಾಲ ನೀಡುವ ಸ್ಥಿತಿಯಲ್ಲಿ ಇತರೆ ರಾಜ್ಯಗಳೂ ಇಲ್ಲ. ಹಾಗಾದರೆ ಮುಂದೇನು? ಸಂಬಂಧಪಟ್ಟ ಸಚಿವರು ಮೌನವ್ರತ ಮಾಡುತ್ತಿದ್ದಾರೆಯೇ?

    ಅಡ್ಡದಾರಿಯಲ್ಲಿ ಅಧಿಕಾರ ಪಡೆಯಲು 5 ಗ್ಯಾರಂಟಿ ಕೊಟ್ಟ ಕಾಂಗ್ರೆಸ್, 6ನೇ ಗ್ಯಾರಂಟಿ ಕತ್ತಲೆಭಾಗ್ಯವನ್ನು ನವರಾತ್ರಿಗೆ ಮೊದಲೇ ಖಾತರಿಪಡಿಸಿದೆ. ಈ ಹೊಸ ಭಾಗ್ಯ ಡಿಸೆಂಬರಿಗೋ, ಜನವರಿಗೋ ಎಂದಷ್ಟೇ ತೀರ್ಮಾನ ಆಗಬೇಕಿದೆ. ನಿರ್ವಹಣೆ, ರಿಪೇರಿ ನೆಪದಲ್ಲಿ ಇಡೀ ದಿನ ವಿದ್ಯುತ್ ಕಡಿತ ಮಾಡುತ್ತಿರುವ ಸರ್ಕಾರದ ಸದಾರಮೆ ಆಟ ಈಗಷ್ಟೇ ಗೊತ್ತಾಗುತ್ತಿದೆ. ಹಿಂದೆ ಬರದಂತಹ ಕ್ಲಿಷ್ಟ ಸ್ಥಿತಿ ಇದ್ದರೂ ವಿದ್ಯುತ್ ಖರೀದಿಗೆ ಹಣ ಇರುತ್ತಿತ್ತು. ಈಗ ಖಜಾನೆ ಖಾಲಿಯಂತೆ.

    ಲೋಕಸಭೆ ಚುನಾವಣೆವರೆಗೂ ಜನರನ್ನು ಗ್ಯಾರಂಟಿಗಳ ಅಮಲಿನಲ್ಲಿ ತೇಲಿಸಿ ತೇಲಿಸಿ.. ಆಮೇಲೆ ಕೈ ಎತ್ತಿಬಿಡುವ ದುಷ್ಟ ಹುನ್ನಾರ ಸರ್ಕಾರದ್ದು. ಆ ಕಾರಣಕ್ಕಾಗಿಯೇ ಸರ್ಕಾರ ಸತ್ಯ ಮರೆಮಾಚಿ ಮೊಸಳೆ ಕಣ್ಣೀರು ಹಾಕುತ್ತಿದೆ. ಆದರೆ ಕತ್ತಲೆಭಾಗ್ಯ ಕರುಣಿಸುವ ಮುನ್ನ ಜನತೆಗೆ ಸತ್ಯವನ್ನೇ ಹೇಳಲಿ. ಬೇಡ ಎಂದವರು ಯಾರು? ಕೂಡಲೇ ವಿದ್ಯುತ್ ದುಸ್ಥಿತಿಯ ಬಗ್ಗೆ ಸರ್ಕಾರ ಶ್ವೇತಪತ್ರ ಹೊರಡಿಸಬೇಕು. ಇದು ನನ್ನ ಆಗ್ರಹ. ಇದನ್ನೂ ಓದಿ: ಬೆಂಗಳೂರು ಸೇರಿ ದಕ್ಷಿಣ ಒಳನಾಡಿನಲ್ಲಿ 2 ದಿನ ವರುಣಾರ್ಭಟ – ಯೆಲ್ಲೋ ಅಲರ್ಟ್ ಘೋಷಣೆ

    ವಿದ್ಯುತ್ ಸಾಲಕ್ಕೂ ದಿಕ್ಕಿಲ್ಲದ ಸರ್ಕಾರವು, ಖಾಸಗಿ ವಿದ್ಯುತ್ ಪೂರೈಕೆದಾರರಿಗೆ ಕಳೆದ ಆರೇಳು ತಿಂಗಳಿಂದ ಬಾಕಿ ಹಣ ನೀಡಿಲ್ಲ ಎನ್ನುವ ಮಾಹಿತಿ ಇದೆ. ಕೆಲ ಕಂಪನಿಗಳಿಗೆ 11 ತಿಂಗಳಿಂದ ಬಿಡಿಗಾಸು ಕೊಟ್ಟಿಲ್ಲವಂತೆ. ಇದು ಹೌದಾ? ಹೌದು ಎಂದಾದರೆ, ರಾಜ್ಯದ ಭವಿಷ್ಯದ ಗತಿ ಏನು? ಕೃಷಿ, ಕೈಗಾರಿಕೆಗಳ ಪಾಡೇನು? ಬೇಕಾಬಿಟ್ಟಿ ಬೆಲೆ ಏರಿಕೆ ಬರೆ ಎಳೆಸಿಕೊಂಡು ಏದುಸಿರು ಬಿಡುತ್ತಿರುವ ಜನರಿಗೆ ಸರ್ಕಾರದ ಉತ್ತರವೇನು? ಕೃತಕ ಕತ್ತಲು ಸೃಷ್ಟಿಸಿ ಕಬ್ಬೆಕ್ಕಿನಂತೆ ಕದ್ದು ಹಾಲು ಕುಡಿಯುತ್ತೇವೆ ಎಂದರೆ ಆಗುವುದಿಲ್ಲ. ಜನರಿಗೂ ಕಳ್ಳಬೆಕ್ಕಿನ ಕಣ್ಣಾಮುಚ್ಚಾಲೆ ಈಗೀಗ ಚೆನ್ನಾಗಿ ಅರ್ಥವಾಗುತ್ತಿದೆ ಎಂದು ಕಿಡಿ ಕಾರಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಾಜ್ಯದ ಬಹಳಷ್ಟು ಮಹಿಳೆಯರಿಗೆ ಗೃಹಲಕ್ಷ್ಮಿ ಸಿಕ್ಕೇ ಇಲ್ಲ – ಶಶಿಕಲಾ ಜೊಲ್ಲೆ ವಾಗ್ದಾಳಿ

    ರಾಜ್ಯದ ಬಹಳಷ್ಟು ಮಹಿಳೆಯರಿಗೆ ಗೃಹಲಕ್ಷ್ಮಿ ಸಿಕ್ಕೇ ಇಲ್ಲ – ಶಶಿಕಲಾ ಜೊಲ್ಲೆ ವಾಗ್ದಾಳಿ

    ಚಿಕ್ಕೋಡಿ: ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆ (Congress Guarantee Scheme) ಸಂಪೂರ್ಣ ವಿಫಲವಾಗಿದ್ದು, ಬಹಳಷ್ಟು ಮಹಿಳೆಯರಿಗೆ ಇನ್ನೂ ಗೃಹಲಕ್ಷ್ಮಿಯ 2,000 ರೂ. ಹಣ ಸಿಕ್ಕೇ ಇಲ್ಲ ಎಂದು ಮಾಜಿ ಸಚಿವೆ ಶಶಿಕಲಾ ಜೊಲ್ಲೆ (Shashikala Jolle) ವಾಗ್ದಾಳಿ ನಡೆಸಿದ್ದಾರೆ.

    ಚಿಕ್ಕೋಡಿ ಪಟ್ಟಣದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಬಹಳಷ್ಟು ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರ ನನಗೂ ಫ್ರೀ ನಿನಗೂ ಫ್ರೀ ಅಂತ ಹೇಳಿ 5 ಗ್ಯಾರಂಟಿ ಜಾರಿ ಮಾಡಿದೆ. ಆದ್ರೆ ಇನ್ನೂ ಸಂಪೂರ್ಣವಾಗಿ ಕಾರ್ಯರೂಪಕ್ಕೆ ಬಂದಿಲ್ಲ. ಸರ್ಕಾರ ಹೇಳಿದ ರೀತಿಯಲ್ಲಿ ನಡೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

    ಕಾಂಗ್ರೆಸ್‌ ಸರ್ಕಾರ ನೀಡಿದ ಭರವಸೆಯಂತೆ 100% ಯೋಜನೆಯನ್ನು ಅನುಷ್ಠಾನಗೊಳಿಸಿದಾಗ ಮಾತ್ರ ಜನರಿಗೆ ನ್ಯಾಯ ಕೊಟ್ಟಂತೆ ಆಗುತ್ತೆ ಎಂದು ಹೇಳಿದ್ದಾರೆ. ಇದನ್ನೂ ಓದಿ: Bigg Boss Kannada : ಸ್ನೇಕ್ ಶ್ಯಾಮ್, ನಮ್ರತಾ ಗೌಡ, ಇಶಾನಿ ಕನ್ಫರ್ಮ್

    ಇದೇ ವೇಳೆ ಶಾಸಕರಿಗೆ ಅನುದಾನ ಬರ್ತಿಲ್ಲ ಎಂಬ ಕಾಂಗ್ರೆಸ್‌ ಶಾಸಕ ರಾಜು ಕಾಗೆ ಹೇಳಿಕೆಗೆ ಪ್ರತಿಕ್ರಿಯಿಸಿ, ಗ್ಯಾರಂಟಿಯಿಂದ ಆಗಿರುವ ಅನಾನುಕೂಲದ ಬಗ್ಗೆ ಅವರ ಪಕ್ಷದ ಶಾಸಕರೇ ಹೇಳಿದ್ದಾರೆ. ಇದರಿಂದ ಪಕ್ಷದ ಶಾಸಕರಲ್ಲೇ ಅಸಮಾಧಾನ ಇರುವುದು ಬೆಳಕಿಗೆ ಬಂದಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿ ಹತ್ಯೆ, ಮೋದಿ ಸ್ಟೇಡಿಯಂ ಸ್ಫೋಟ ಬೆದರಿಕೆ – ಮುಂಬೈ ಪೊಲೀಸರಿಗೆ ಸಂದೇಶ

    ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯ ಆಗುತ್ತಿದೆ ಎಂಬ ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಶಶಿಕಲಾ ಜೊಲ್ಲೆ, ಅನುಭವಿ ನಾಯಕರು ಸತ್ಯ ಸಂಗತಿಗಳ ಬಗ್ಗೆ ಹೇಳಿದ್ದಾರೆ. ಕಾಂಗ್ರೆಸ್‌ ಯಾವ ರೀತಿ ರಾಜಕಾರಣ ಮಾಡುತ್ತಿದೆ ಅನ್ನೋದು ಇಡೀ ರಾಜ್ಯದ ಜನತೆಗೆ ಗೊತ್ತಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗೃಹಲಕ್ಷ್ಮಿ ಹಣವನ್ನು ನಿಮ್ಮ ಗಂಡಂದಿರಿಗೆ ಕೊಡಬೇಡಿ – ಮಹಿಳೆಯರಿಗೆ ಡಿಕೆಶಿ ಕರೆ

    ಗೃಹಲಕ್ಷ್ಮಿ ಹಣವನ್ನು ನಿಮ್ಮ ಗಂಡಂದಿರಿಗೆ ಕೊಡಬೇಡಿ – ಮಹಿಳೆಯರಿಗೆ ಡಿಕೆಶಿ ಕರೆ

    ರಾಮನಗರ: ಮಹಿಳೆಯರೇ ಗೃಹಲಕ್ಷ್ಮಿ ಯೋಜನೆಯ (Gruhalakshmi Yojana) ಹಣ 2,000 ರೂ.ಗಳನ್ನು ನಿಮ್ಮ ಗಂಡಂದಿರಿಗೆ ಕೊಡಬೇಡಿ ಎಂದು ಡಿಸಿಎಂ ಡಿ.ಕೆ ಶಿವಕುಮಾರ್‌ (DK Shivakumar) ಕರೆ ನೀಡಿದ್ದಾರೆ.

    ರಾಜ್ಯದಲ್ಲಿ 2,000 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು (Karnataka Public School) ನಿರ್ಮಾಣ ಮಾಡುವ ಶಿಕ್ಷಣ ಕ್ರಾಂತಿಗೆ ಕೆಂಪೇಗೌಡರ ತವರು ಮಾಗಡಿಯಲ್ಲಿ ಚಾಲನೆ ದೊರೆತಿದೆ. ಮಾಗಡಿಯ ಕುದೂರಿನಲ್ಲಿ ನೂತನ ಕರ್ನಾಟಕ ಪಬ್ಲಿಕ್ ಶಾಲಾ ಕಟ್ಟಡಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್‌ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ್ದಾರೆ. ಮಹಿಳೆಯರೇ ಗೃಹಲಕ್ಷ್ಮಿ ಯೋಜನೆಯ ಹಣವನ್ನು ನಿಮ್ಮ ಗಂಡಂದಿರಿಗೆ ನೀಡಬೇಡಿ, ಉಳಿತಾಯ ಮಾಡಿ, ಮಕ್ಕಳ ಭವಿಷ್ಯಕ್ಕೆ ಬಳಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ವೀಲಿಂಗ್‌ ಮಾಡಿದ ಬೈಕ್‌ ಸುಟ್ಟು ಹಾಕಿ, 45 ಲಕ್ಷ ಸಬ್‌ಸ್ಕ್ರೈಬ್‌ ಇರೋ ಯೂಟ್ಯೂಬ್‌ ಚಾನೆಲನ್ನು ಕಿತ್ತಾಕಿ: ಹೈಕೋರ್ಟ್‌ ಚಾಟಿ

    ಇದಕ್ಕೂ ಮುನ್ನ ಮಕ್ಕಳ ಶಿಕ್ಷಣದ ಬಗ್ಗೆ ಮಾತನಾಡಿದ ಡಿಕೆಶಿ, ಗ್ರಾಮೀಣ ಪ್ರದೇಶದ ಮಕ್ಕಳು ನಗರ ಪ್ರದೇಶಗಳಿಗೆ ಶಿಕ್ಷಣಕ್ಕೆ ವಲಸೆ ಹೋಗುವುದು ತಪ್ಪಬೇಕು. ಅದಕ್ಕಾಗಿ ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ಕಲ್ಪಿಸುವ ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನ ನಿರ್ಮಾಣ ಮಾಡಬೇಕೆಂಬುದು ಸರ್ಕಾರದ ಕನಸಾಗಿದೆ. ಆದಷ್ಟು ಬೇಗ ಇದನ್ನು ಕಾರ್ಯಗತ ಮಾಡಲಿದ್ದೇವೆ. ಗ್ರಾಮೀಣ ಭಾಗದಲ್ಲಿ ಸುಮಾರು 16 ಕೋಟಿ ರೂ. ವೆಚ್ಚದಲ್ಲಿ ಸರ್ಕಾರಿ ಶಾಲೆ ನಿರ್ಮಾಣ ಮಾಡಲು ಹೊರಟಿರುವುದು ಕ್ರಾಂತಿಕಾರಿ ಆಲೋಚನೆ. ಇಂತಹ ಸುಸಜ್ಜಿತ ಶಾಲೆ ನಿರ್ಮಾಣ ಮಾಡಲು ಹೊರಟಿರುವ ಟೊಯೋಟೊ ಕಿರ್ಲೋಸ್ಕರ್ ಸಂಸ್ಥೆಗೆ ನಾವೆಲ್ಲಾ ಅಭಾರಿಯಾಗಿರುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕ್ಲಾಸ್‍ಮೇಟ್ ಜೊತೆ ಪ್ರೀತಿ – ಕುಟುಂಬಸ್ಥರಿಗೆ ಮಾಹಿತಿ ನೀಡಿದ ಶಿಕ್ಷಕನಿಗೆ ಗುಂಡೇಟು ನೀಡಿದ ವಿದ್ಯಾರ್ಥಿ

    ಟೊಯೋಟೊ ಕಿರ್ಲೋಸ್ಕರ್ ಸಂಸ್ಥೆಯವರು ರಾಮನಗರ ಜಿಲ್ಲೆಯ 4 ತಾಲ್ಲೂಕುಗಳಲ್ಲಿ ಒಂದೊಂದು ಶಾಲೆ ನಿರ್ಮಾಣ ಮಾಡುವುದಾಗಿ ಮಾತುಕೊಟ್ಟಿದ್ದಾರೆ. ರಾಮನಗರ ಜಿಲ್ಲೆಯಲ್ಲಿ ಇರುವ ಎಲ್ಲಾ ಕೈಗಾರಿಕೆಗಳ ಸಿಎಸ್ಆರ್ ಹಣವನ್ನು ಶಿಕ್ಷಣಕ್ಕೆ ಮಾತ್ರ ಬಳಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: P-8I Poseidon: ಹಿಂದೂ ಮಹಾಸಾಗರದ ಕಾವಲುಗಾರ – ಬೋಯಿಂಗ್ P-8I ವಿಮಾನ

    ಇದೇ ವೇಳೆ ಗೃಹಲಕ್ಷ್ಮಿ ಯೋಜನೆಯ ಗ್ಯಾರಂಟಿ ಬಗ್ಗೆ ಮಾತನಾಡಿ, ಜಿಲ್ಲೆಯಲ್ಲಿ 88% ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ತಲುಪಿದೆ. ಮಿಕ್ಕ ಅರ್ಜಿದಾರರಿಗೆ ಬ್ಯಾಂಕ್ ಖಾತೆ ಸಮಸ್ಯೆಯಿಂದ ಹಣ ತಲುಪಿಲ್ಲ ಈ ಸಮಸ್ಯೆಯನ್ನು ಬೇಗ ಬಗೆಹರಿಸಲಾಗುವುದು. ಬೆಲೆ ಏರಿಕೆಯಿಂದ ನಮ್ಮ ಗ್ರಾಮೀಣ ಪ್ರದೇಶದ ಜನರು ತತ್ತರಿಸಿ ಹೋಗಿದ್ದರು. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಸ್ವಲ್ಪ ಉಸಿರಾಡುವಂತೆ ಮಾಡಿವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 2,58,000 ಕುಟುಂಬಗಳಿಗೆ ಅನ್ನಭಾಗ್ಯ ಯೋಜನೆಯ ಹಣ ತಲುಪಿಸಿದ್ದೇವೆ ಎಂದು ಹೇಳಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಫ್ರೀ ಕರೆಂಟ್, ಮಹಿಳೆಯರಿಗೆ ತಿಂಗಳಿಗೆ 2,500 ರೂ., ಉಚಿತ ಬಸ್ ಪ್ರಯಾಣ: ತೆಲಂಗಾಣದಲ್ಲೂ ಕಾಂಗ್ರೆಸ್ ಗ್ಯಾರಂಟಿ ಘೋಷಣೆ

    ಫ್ರೀ ಕರೆಂಟ್, ಮಹಿಳೆಯರಿಗೆ ತಿಂಗಳಿಗೆ 2,500 ರೂ., ಉಚಿತ ಬಸ್ ಪ್ರಯಾಣ: ತೆಲಂಗಾಣದಲ್ಲೂ ಕಾಂಗ್ರೆಸ್ ಗ್ಯಾರಂಟಿ ಘೋಷಣೆ

    ಹೈದರಾಬಾದ್: ತೆಲಂಗಾಣದಲ್ಲಿ (Telangana) ಈ ಬಾರಿ ಅಧಿಕಾರಕ್ಕೆ ಬರಲೇಬೇಕು ಅಂತ ಶಪಥ ತೊಟ್ಟಿರುವ ಕಾಂಗ್ರೆಸ್, ಕರ್ನಾಟಕ ಮಾದರಿ ಗ್ಯಾರಂಟಿ (Congress Guarantee) ಬ್ರಹ್ಮಾಸ್ತ್ರ ಪ್ರಯೋಗಿಸಿದೆ.

    ತೆಲಂಗಾಣದಲ್ಲೂ ಕಾಂಗ್ರೆಸ್ ಸರ್ಕಾರ ನೋಡುವುದು ನನ್ನ ಕನಸು ಎಂದಿರುವ ಸೋನಿಯಾ ಗಾಂಧಿ (Sonia Gandhi), 6 ಗ್ಯಾರಂಟಿಗಳನ್ನು ಘೋಷಿಸಿದ್ದಾರೆ. ಮಹಾಲಕ್ಷ್ಮಿ ಹೆಸರಿನಲ್ಲಿ ಮಹಿಳೆಯರಿಗೆ 2,500 ಹಾಗೂ 500 ರೂಪಾಯಿಗೆ ಗ್ಯಾಸ್ ಸಿಲಿಂಡರ್, ಮಹಿಳೆಯರಿಗೆ ಫ್ರೀ ಬಸ್, ಕ್ವಿಂಟಾಲ್ ಭತಕ್ಕೆ 500 ಬೋನಸ್, 200 ಯೂನಿಟ್ ಫ್ರೀ ಕರೆಂಟ್, ಮನೆ ಇಲ್ಲದವರಿಗೆ ಇಂದಿರಮ್ಮ ಗೃಹ ಯೋಜನೆ ಸೇರಿದಂತೆ ಹಲವು ಭರವಸೆ ನೀಡಿದ್ದಾರೆ. ಇದನ್ನೂ ಓದಿ: ರಜೆಯಲ್ಲಿದ್ದ ಯೋಧನ ಮನೆಗೆ ನುಗ್ಗಿ ಕಿಡ್ನ್ಯಾಪ್‌ ಮಾಡಿ ಹತ್ಯೆ

    ತುಕ್ಕುಗೂಡದ ‘ವಿಜಯಭೇರಿ’ ಸಾರ್ವಜನಿಕ ಸಭೆಯಲ್ಲಿ ಭಾನುವಾರ ತೆಲಂಗಾಣಕ್ಕೆ ಆರು ಗ್ಯಾರಂಟಿಗಳನ್ನು ಸೋನಿಯಾ ಗಾಂಧಿ ಘೋಷಿಸಿದ್ದಾರೆ. ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ, ತಕ್ಷಣ ಯೋಜನೆಗಳು ಜಾರಿಯಾಗಲಿವೆ ಎಂದು ಭರವಸೆ ನೀಡಿದ್ದಾರೆ.

    ತೆಲಂಗಾಣ ವಿಧಾನಸಭೆಯ 119 ಸ್ಥಾನಗಳಿಗೆ ಡಿಸೆಂಬರ್‌ನಲ್ಲಿ ಚುನಾವಣೆ ನಡೆಯಲಿದೆ. ಕರ್ನಾಟಕ ಚುನಾವಣೆ ಸಂದರ್ಭದಲ್ಲೂ ಕಾಂಗ್ರೆಸ್ 5 ಗ್ಯಾರಂಟಿಗಳನ್ನು ಘೋಷಿಸಿತ್ತು. ರಾಜ್ಯದಲ್ಲಿ ಗೆಲುವಿಗೆ ಕಾರಣವಾಗಿದ್ದ ಗ್ಯಾರಂಟಿಗಳ ಸೂತ್ರವನ್ನು ತೆಲಂಗಾಣದಲ್ಲೂ ಜಾರಿಗೊಳಿಸಲು ಕಾಂಗ್ರೆಸ್ ಮುಂದಾಗಿದೆ. ಇದನ್ನೂ ಓದಿ: ಜನ್ಮದಿನದಂದು ದೆಹಲಿಯಲ್ಲಿ ಮೋದಿ ಮೆಟ್ರೋ ರೈಡ್ – ಪ್ರಯಾಣಿಕರೊಂದಿಗೆ ಸೆಲ್ಫಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಿಜೆಪಿ-ಜೆಡಿಎಸ್‌ ಮೈತ್ರಿ ಬಗ್ಗೆ ಕಾಂಗ್ರೆಸ್‌ನವರಿಂದ ಸರ್ಟಿಫಿಕೇಟ್ ಬೇಕಾಗಿಲ್ಲː ಪ್ರತಾಪ್‌ ಸಿಂಹ

    ಬಿಜೆಪಿ-ಜೆಡಿಎಸ್‌ ಮೈತ್ರಿ ಬಗ್ಗೆ ಕಾಂಗ್ರೆಸ್‌ನವರಿಂದ ಸರ್ಟಿಫಿಕೇಟ್ ಬೇಕಾಗಿಲ್ಲː ಪ್ರತಾಪ್‌ ಸಿಂಹ

    ಮೈಸೂರು: ಬಿಜೆಪಿ-ಜೆಡಿಎಸ್‌ ಮೈತ್ರಿ (BJP-JDS Alliance) ಬಗ್ಗೆ ಕಾಂಗ್ರೆಸ್‌ನವರಿಂದ ಸರ್ಟಿಫಿಕೇಟ್ ಬೇಕಾಗಿಲ್ಲ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್‌ ಸಿಂಹ (Pratap Simha) ತಿರುಗೇಟು ನೀಡಿದ್ದಾರೆ.

    ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ-ಜೆಡಿಎಸ್‌ ಮೈತ್ರಿ ಬಗ್ಗೆ ಕಾಂಗ್ರೆಸ್‌ನವರಿಂದ ಸರ್ಟಿಫಿಕೇಟ್ ಬೇಕಾಗಿಲ್ಲ. ಯಡಿಯೂರಪ್ಪ ಅವರು ರಾಜ್ಯ ಬಿಜೆಪಿಯ ಸರ್ವೋಚ್ಚ ನಾಯಕರು. ಪಕ್ಷದ ಹಿತದೃಷ್ಟಿಯಿಂದ ಅವರು ಸರಿಯಾದ ತೀರ್ಮಾನ ಕೈಗೊಂಡಿರುತ್ತಾರೆ. ಯಡಿಯೂರಪ್ಪ (BS Yediyurappa) ಅವರು ಎರಡು ಬಾರಿ ಪಕ್ಷವನ್ನ ಅಧಿಕಾರಕ್ಕೆ ತಂದಿದ್ದಾರೆ, ಅವರಿಗೆ ಪಕ್ಷದ ಒಳಿತು ಗೊತ್ತಿದೆ. ಮೋದಿ ಅವರು ಹೆಚ್‌.ಡಿ ದೇವೇಗೌಡರಿಗೆ ಅತಿ ಹೆಚ್ಚಿನ ಗೌರವ ಕೊಡುತ್ತಾರೆ. ಒಳ್ಳೆ ವಿಚಾರ, ಒಳ್ಳೆ ಕೆಲಸದ ಬಗ್ಗೆ ದೇವೇಗೌಡರು ಮೋದಿ ಅವರ ಬಗ್ಗೆ ಮೊದಲಿಂದಲೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮೈತ್ರಿ ಮಾತು ನಡೆದಿದೆ ಎಂದು ಹೇಳಿದ್ದಾರೆ.

    ಕಾಂಗ್ರೆಸ್‌ ಕಾಲಿಟ್ಟ ಕೂಡಲೇ ರಾಜ್ಯಕ್ಕೆ ಬರ:
    ಇದೇ ವೇಳೆ ಕಾಂಗ್ರೆಸ್‌ ವಿರುದ್ಧ ಕಿಡಿ ಕಾರಿದ ಪ್ರತಾಪ್‌ ಸಿಂಹ, ಕಾಂಗ್ರೆಸ್ ಕಾಲಿಟ್ಟ ಕೂಡಲೇ ರಾಜ್ಯಕ್ಕೆ ಬರ ಬರುತ್ತದೆ. ಅದೇ ನಮ್ಮ ಯಡಿಯೂರಪ್ಪ ಅವರು ಕಾಲಿಟ್ಟರೆ ರಾಜ್ಯದಲ್ಲಿ ಧಾರಾಕಾರ ಮಳೆಯಾಗುತ್ತೆ, ಎಲ್ಲೆಲ್ಲೂ ಹಸಿರು ತುಂಬಿರುತ್ತೆ. ಕಾಂಗ್ರೆಸ್‌ನವರದ್ದು ಸುಳ್ಳು ಭರವಸೆಗಳು ಅಂತ ಜನರಿಗೆ ಗೊತ್ತಾಗಿದೆ. ಇದೆಲ್ಲದರ ನಡುವೆಯೂ ಜನ ಕಾಂಗ್ರೆಸ್‌ಗೆ 135 ಸ್ಥಾನ ಕೊಟ್ಟಿದ್ದಾರೆ ಮೊದಲು ಅವರ ಋಣ ತೀರಿಸಿ. ಲೋಕಸಭಾ ಚುನಾವಣೆಯ ಬಗ್ಗೆ ಯೋಜನೆ ಮಾಡಬೇಡಿ. ಸಿದ್ದರಾಮಯ್ಯ (Siddaramaiah) ಅವರು ಈ ಹಿಂದೆ ಸಿಎಂ ಆಗಿದ್ದಾಗಲೂ ಮೈಸೂರು-ಕೊಡಗಿನ ಜನ ನನ್ನನ್ನ ಗೆಲ್ಲಿಸಿದ್ದಾರೆ. ಈ ಚುನಾವಣೆಯಲ್ಲೂ ಗೆಲ್ಲಿಸುತ್ತಾರೆ. ಸ್ವಲ್ಪ ಕಾದು ನೋಡಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕತ್ತು ಸೀಳಿ ಗಗನಸಖಿ ಹತ್ಯೆಗೈದಿದ್ದ ಆರೋಪಿ – ಲಾಕಪ್‌ನಲ್ಲೇ ಪ್ಯಾಂಟ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ

    ಯಾವುದರಲ್ಲಿ ನುಡಿದಂತೆ ನಡೆದಿದ್ದೀರಿ?
    ಕಾಂಗ್ರೆಸ್‌ನವರು ನುಡಿದಂತೆ ನಡೆದಿದ್ದೀವಿ ಅಂತಾರೆ? ನಾನು ಸಿದ್ದರಾಮಯ್ಯ ಅವರಿಗೆ ಕೇಳಲು ಬಯಸುತ್ತೇನೆ ಯಾವುದರಲ್ಲಿ ನುಡಿದಂತೆ ನಡೆದಿದ್ದೀರಿ? 200 ಯೂನಿಟ್‌ ಕರೆಂಟ್‌ ಕೊಡ್ತೀವಿ ಅಂತಾ ಹೇಳಿದ್ರಿ, ಕೊಟ್ಟಿದ್ದೀರಾ? ವರ್ಷದ ಸರಾಸರಿ ತೆಗೆದುಕೊಳ್ಳುತ್ತೇವೆ ಅಂತ ಮೋಸ ಮಾಡಿದ್ರಿ. ಯುವನಿಧಿಯನ್ನೂ ಕೊಟ್ಟಿಲ್ಲ, ಗೃಹಲಕ್ಷ್ಮಿ ಯೋಜನೆ ಎಲ್ಲರಿಗೂ ಕೊಡ್ತೀವಿ ಅಂದ್ರಲ್ಲ, ಕೊಟ್ಟಿದ್ದೀರಾ? ಊರು ತುಂಬಾ ಪೋಸ್ಟರ್‌ ಹಾಕಿಸಿಕೊಂಡು ಓಡಾಡುತ್ತಿದ್ದೀರಿ ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ನಿನ್ನನ್ನು ಚಂದ್ರಯಾನ-4ರಲ್ಲಿ ಕಳುಹಿಸುತ್ತೇನೆ: ಮಹಿಳೆ ಮನವಿಗೆ ಖಟ್ಟರ್ ಹಾಸ್ಯ

    ಕರ್ನಾಟಕದ ಜನ ಪ್ರಜ್ಞಾವಂತರಿದ್ದಾರೆ, ಎಲ್ಲವನ್ನೂ ನೋಡ್ತಿದ್ದಾರೆ. ಯಾವ ಚುನಾವಣೆಯಲ್ಲಿ ಯಾವ ರೀತಿ ವೋಟ್‌ ಮಾಡ್ಬೇಕು ಅಂತಾ ಗೊತ್ತಿದೆ. 2024ರ ಲೋಕಸಭಾ ಚುನಾವಣೆಯಲ್ಲೂ ಕರ್ನಾಟಕದ ಮತದಾರರು ಮೋದಿ ಅವರ ಕೈ ಹಿಡಿಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]