Tag: Congress Guarantee

  • ಎಸ್ಸಿ, ಎಸ್ಟಿಗೆ ಮೀಸಲಿಟ್ಟಿದ್ದ 14,000 ಕೋಟಿ ಹಣ ರಾಜ್ಯ ಸರ್ಕಾರದಿಂದ ದುರ್ಬಳಕೆ – ಬೊಮ್ಮಾಯಿ ಆರೋಪ

    ಎಸ್ಸಿ, ಎಸ್ಟಿಗೆ ಮೀಸಲಿಟ್ಟಿದ್ದ 14,000 ಕೋಟಿ ಹಣ ರಾಜ್ಯ ಸರ್ಕಾರದಿಂದ ದುರ್ಬಳಕೆ – ಬೊಮ್ಮಾಯಿ ಆರೋಪ

    – ಡೆಂಗ್ಯೂ ರೋಗಿಗಳ ಸಾವಿನ ಸಂಖ್ಯೆ ಮುಚ್ಚಿಡ್ತಿದ್ದಾರೆ ಎಂದ ಸಂಸದ

    ಹಾವೇರಿ: ರಾಜ್ಯ ಸರ್ಕಾರ ಎಸ್ಸಿ, ಎಸ್ಟಿ ಸಮುದಾಯಗಳಿಗೆ (SC ST Community) ಮೀಸಲಿಟ್ಟಿರುವ ಹಣವನ್ನು ಚುನಾವಣೆಗಾಗಿ ಜಾರಿಗೆ ತಂದ ಯೋಜನೆಗಳಿಗೆ ದುರ್ಬಳಕೆ ಮಾಡಿಕೊಂಡಿದೆ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ಆರೋಪಿಸಿದ್ದಾರೆ.

    ಶಿಗ್ಗಾಂವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಎಸ್ಸಿ, ಎಸ್ಟಿಗೆ ಮೀಸಲಿಟ್ಟಿರುವ ಹಣವನ್ನು ಚುನಾವಣೆಗಾಗಿ ಜಾರಿಗೆ ತಂದ ಯೋಜನೆಗಳಿಗೆ ದುರ್ಬಳಕೆ ಮಾಡಿಕೊಂಡು ಆ ಸಮುದಾಯಗಳಿಗೆ ಮೋಸ ಮಾಡುತ್ತಿದೆ. ರಾಜ್ಯ ಸರ್ಕಾರ ದಿವಾಳಿ ಆಗಿರೋದನ್ನು ಪ್ರತಿ ಹೆಜ್ಜೆಯಲ್ಲೂ ಪ್ರದರ್ಶನ ಮಾಡುತ್ತಿದೆ. ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ಮಾಡುವುದರಿಂದ ಹಿಡಿದು ಎಲ್ಲಾ ದರ ಹೆಚ್ಚಳ ಮಾಡಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ (Congress Guarantee Scheme) ಅನುದಾನವನ್ನು ವರ್ಗಾಯಿಸುತ್ತಿದ್ದಾರೆ. ಎಸ್ಸಿ, ಎಸ್ಟಿ ಸಮುದಾಯಗಳಿಗೆ ಬಳಕೆ ಆಗಬೇಕಿದ್ದ 14,000 ಕೋಟಿ ರೂ. ಅನುದಾನ, ಗ್ಯಾರಂಟಿಗಳಿಗೆ ಹೋಗುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.

    ಎಸ್ಟಿ, ಎಸ್ಟಿ ಸಮುದಾಯದ ಜನರಿಗೆ ಗ್ಯಾರಂಟಿ ಮೂಲಕ ಅನುಕೂಲ ಮಾಡುತ್ತಿದ್ದೇವೆ ಎಂದು ಕಾಂಗ್ರೆಸ್‌‌ನವರು ಹೇಳುತ್ತಾರೆ. ಆದ್ರೆ ವೋಟಿಗಾಗಿ ಮಾಡಿದ ಯೋಜನೆಗಳಿಗೆ ಆ ಸಮುದಾಯಕ್ಕೆ ಸೇರಬೇಕಿರುವ ಹಣವನ್ನ ದುರ್ಬಳಕೆ ಮಾಡಿಕೊಂಡಿದ್ದಾರೆ. ಇದು ಕಾನೂನು ಉಲ್ಲಂಘನೆಯೂ ಆಗಿದೆ. ಸರ್ಕಾರ ಸುಭದ್ರವಾಗಿದ್ದಿದ್ದರೇ ಅವರ ಹಣಕ್ಕೆ ಯಾಕೆ ಕೈ ಹಾಕಿದ್ದಾರೆ? ವಾಲ್ಮೀಕಿ ನಿಗಮದ ಹಣ ಸಹ ಲೂಟಿ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: SCSP – TSP ಯೋಜನೆಯ 14 ಸಾವಿರ ಕೋಟಿ ಹಣ ಕಾಂಗ್ರೆಸ್‌ ಗ್ಯಾರಂಟಿಗೆ ಬಳಕೆ

    ಡೆಂಗ್ಯೂ ರೋಗಿಗಳ ಸಾವಿನ ಸಂಖ್ಯೆ ಮುಚ್ಚಿಡುತ್ತಿದ್ದಾರೆ:
    ಅಲ್ಲದೇ ರಾಜ್ಯ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಡೆಂಗ್ಯೂ ಸಾವಿನ ಸಂಖ್ಯೆಯನ್ನು ಕಡಿಮೆ ತೋರಿಸುತ್ತಿದೆ. ಡೆಂಗ್ಯೂ ರೋಗಿಗಳ ಸಾವಿನ ಸಂಖ್ಯೆ ಮುಚ್ಚಿಡುತ್ತಿದ್ದಾರೆ. ಹಾವೇರಿಯಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ಜನರು ದಾವಣಗೆರೆ, ಹುಬ್ಬಳ್ಳಿಗೆ ಹೋಗುತ್ತಿದ್ದಾರೆ, ಕೆಲವರು ಚಿಕಿತ್ಸೆ ಸಿಗದೇ ಸಾವನ್ನಪ್ಪಿದ್ದಾರೆ. ಆದ್ರೆ ಇದೆಲ್ಲವನ್ನು ಸರ್ಕಾರ ಮುಚ್ಚಿಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಡೆಂಗ್ಯೂನಿಂದ ಜನ ಸಾಯ್ತಿದ್ರೆ, ಸಚಿವರು ಸ್ವಿಮ್ಮಿಂಗ್ ಪೂಲ್‍ನಲ್ಲಿದ್ದಾರೆ: ಛಲವಾದಿ ನಾರಾಯಣಸ್ವಾಮಿ ಕಿಡಿ

    ಡೆಂಗ್ಯೂಗೆ ಹಾವೇರಿಯಲ್ಲೇ ಅತಿಹೆಚ್ಚು ಸಾವು:
    ಡೆಂಗ್ಯೂ ಹೆಚ್ಚಾಗುತ್ತಿದೆ ಅಂತ ನಾನು ಮೊದಲೇ ಹೇಳಿದ್ದೆ. ಸರ್ಕಾರ ಯಾವ್ದೇ ವ್ಯವಸ್ಥೆ ಮಾಡಿಕೊಳ್ಳದೇ ಇದ್ದುದರಿಂದ ರೋಗಿಗಳು ಪರದಾಡುತ್ತಿದ್ದಾರೆ. ಸಾವು ನೋವು ಹೆಚ್ಚಾಗುತ್ತಿವೆ. ಇಡೀ ರಾಜ್ಯದಲ್ಲಿ ಹಾವೇರಿಯಲ್ಲೇ ಡೆಂಗ್ಯೂಗೆ ಅತಿಹೆಚ್ಚು ಸಾವು ಸಂಭವಿಸಿದೆ. ಕೂಡಲೇ ಡಿಹೆಚ್‌ಒ ವರ್ಗಾವಣೆ ಮಾಡಬೇಕು. ಸಮರ್ಥ ಆರೋಗ್ಯಾಧಿಕಾರಿಯನ್ನ ನಿಯೋಜಿಸಬೇಕು. ಆಶಾ ಕಾರ್ಯಕರ್ತೆಯರ ಸಹಾಯ ತೆಗೆದುಕೊಂಡು ಜಾಗೃತಿ ಮೂಡಿಸಬೇಕು, ಪ್ರತಿಯೊಬ್ಬರಿಗೂ ಚಿಕಿತ್ಸೆ ಸಿಗುವಂತಾಗಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಕಾಶ್ಮೀರದಲ್ಲಿ ಭಯೋತ್ಪಾದಕರು-ಭದ್ರತಾಪಡೆಗಳ ನಡುವೆ ಎನ್‌ಕೌಂಟರ್ – ಓರ್ವ ಯೋಧ ಹುತಾತ್ಮ

    ಮುಂದಿನ ವಾರದಲ್ಲೇ NH ಕಾಮಗಾರಿ ಕುರಿತು ಚರ್ಚೆ:
    ನಾನು ಸಂಸತ್ ಅಧಿವೇಶನಕ್ಕೆ ತೆರಳಿದ್ದಾಗ ಹಾವೇರಿ ವಿಭಾಗದಲ್ಲಿ ಬರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಕುರಿತು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ಬಳಿ ಮಾತನಾಡಿದ್ದೇನೆ. ಈ ಬಗ್ಗೆ ಚರ್ಚಿಸಲು ಅವರು ಮುಂದಿನ ವಾರ ವಿಶೇಷ ಸಮಯ ನೀಡಿದ್ದಾರೆ. ಆಮೆಗತಿಯಲ್ಲಿ ನಡೆಯುತ್ತಿರುವ NH-4 ಕಾಮಗಾರಿ ಹಾಗೂ ಹಾನಗಲ್, ಶಿಗ್ಗಾಂವಿ, ಸವಣೂರು, ಲಕ್ಷ್ಮೇಶ್ವರ, ಗದಗ ಮಾರ್ಗವಾಗಿ ಹಾಯ್ದು ಹೋಗುವ ಇಳಕಲ್-ಕಾರವಾರ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮಾಡುವ ಯೋಜನೆ, ರಿಂಗ್ ರಸ್ತೆಗಳ ನಿರ್ಮಾಣ, ಆರ್‌ಒಬಿ ನಿರ್ಮಾಣ ಮಾಡುವ ಕುರಿತು ಪ್ರಾಥಮಿಕ ಹಂತದ ಚರ್ಚೆ ನಡೆಸಿದ್ದೇನೆ. ಈ ಎಲ್ಲ ವಿಷಯಗಳ ಕುರಿತು ಅಧಿಕಾರಿಗಳ ಸಭೆ ಕರೆದು ಚರ್ಚಿಸಿ ಅಗತ್ಯ ಸಹಕಾರ ನೀಡುವುದಾಗಿ ನಿತಿನ್ ಗಡ್ಕರಿ ತಿಳಿಸಿದ್ದಾರೆ ಎಂದು ವಿವರಿಸಿದ್ದಾರೆ.

    ಭೂಸ್ವಾಧೀನಕ್ಕೆ ರಾಜ್ಯ ಸರ್ಕಾರದ ಸಹಕಾರ ಅಗತ್ಯ:
    ಇನ್ನು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ಜೊತೆಗೆ ಶಿವಮೊಗ್ಗ ಶಿಕಾರಿಪುರ ಮಾರ್ಗವಾಗಿ ರಾಣೆಬೆನ್ನೂರು ಹೊಸ ರೈಲು ಮಾರ್ಗದ ಕುರಿತು ಚರ್ಚೆ ನಡೆಸಲಾಗಿದೆ. ಇದರ ಭೂ ಸ್ವಾಧೀನಕ್ಕೆ ರಾಜ್ಯ ಸರ್ಕಾರದ ಸಹಕಾರ ಅಗತ್ಯವಿದೆ. ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿಗಳ ಗಮನಕ್ಕೂ ತರಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಚನ್ನಪಟ್ಟಣ ಉಪಚುನಾವಣೆಗೆ ಪತ್ನಿ ಸ್ಪರ್ಧೆ ವದಂತಿಗೆ ಡಾ. ಮಂಜುನಾಥ್ ಸ್ಪಷ್ಟನೆ

    ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ಧನ್ಯವಾದ ಹೇಳ್ತೀನಿ:
    ಶಿಗ್ಗಾಂವಿ ಉಪ ಚುನಾವಣೆಗೆ ಸಂಬಂಧಿಸಿದಂತೆ ಇತ್ತೀಚೆಗೆ ನಡೆದ ಕೋರ್ ಕಮಿಟಿ ಸಭೆಯಲ್ಲಿ ಪ್ರತಿಪಕ್ಷದ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ‌ಸಮಿತಿ ಮಾಡಿದ್ದೇವೆ. ಪಕ್ಷವು ಸಮೀಕ್ಷೆ ಮಾಡಿಸಿದ ನಂತರ ಅಭ್ಯರ್ಥಿಯನ್ನ ಆಯ್ಕೆ ಮಾಡುತ್ತದೆ. ನನ್ನ ಮೇಲೆ ಶಿಗ್ಗಾವಿ ಜನರ ಋಣ ಇದೆ. ರಾಜಕೀಯವಾಗಿ ಬೆಳೆಯಲು ಮಹಾ ಜನತೆಯ ಆಶೀರ್ವಾದ ಇದೆ. ಇದಕ್ಕೆ ಚುನಾವಣೆ ಪ್ರಕ್ರಿಯೆ ನಡೆಯುತ್ತದೆ. ಜನತೆಗೆ ಕೃತಜ್ಞತೆ ಹೇಳಬೇಕು ಅಂತ ಇದೆ. ರಾಜಕೀಯ ಮೀರಿ ಈ ಕ್ಷೇತ್ರದ ಜನರ ಜೊತೆಗೆ ಅನೋನ್ಯತೆ ಇದೆ. ಬರುವ ಜುಲೈ 12ರಿಂದ ಹಂತ ಹಂತವಾಗಿ ಧನ್ಯವಾದ ಯಾತ್ರೆ ಮಾಡುತ್ತೇನೆ. ಪ್ರತಿ‌ ಗ್ರಾಮದ ಜನರನ್ನು ಭೇಟಿಯಾಗಿ‌ ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ.

  • ಗ್ಯಾರಂಟಿ ಯೋಜನೆಯ ಫಲವನ್ನು ಆರ್ಥಿಕ ಸ್ಥಿತಿವಂತರು ಬಿಡಬೇಕು :ಸಚಿವ ಮಂಕಾಳು ವೈದ್ಯ

    ಗ್ಯಾರಂಟಿ ಯೋಜನೆಯ ಫಲವನ್ನು ಆರ್ಥಿಕ ಸ್ಥಿತಿವಂತರು ಬಿಡಬೇಕು :ಸಚಿವ ಮಂಕಾಳು ವೈದ್ಯ

    ಕಾರವಾರ: ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಗ್ಯಾರಂಟಿ ಯೋಜನೆಗಳು (Congress Guarantee) ರಾಜ್ಯದ ಎಲ್ಲರಿಗೂ ಉಚಿತ ಎಂದು ಪ್ರಚಾರ ಮಾಡಿದ್ದ ಕಾಂಗ್ರೆಸ್‌ ನಾಯಕರು ಈಗ ನಿಧಾನವಾಗಿ ತಮ್ಮ ವರಸೆಯನ್ನು ಬದಲಾಯಿಸುತ್ತಿದ್ದು ಇದಕ್ಕೆ ಹೊಸದಾಗಿ ಮಂಕಾಳು ವೈದ್ಯ (Mankala Vaidya) ಸೇರ್ಪಡೆಯಾಗಿದ್ದಾರೆ.

    ಆರ್ಥಿಕ ಸ್ಥಿತಿವಂತರು ಗ್ಯಾರಂಟಿ ಯೋಜನೆಯ (Guarantee scheme) ಲಾಭ ಪಡೆಯದೇ ಬಡವರಿಗೆ ಅವಕಾಶ ಮಾಡಿಕೊಡಬೇಕು ಎಂದು ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹೇಳಿದರು.

    ಇಂದು ಸಂಜೆ ಮಾಧ್ಯಮಗಳ ಜೊತೆ ಮಾತನಾಡಿದ ಮಂಕಾಳು ವೈದ್ಯ, ಗ್ಯಾರಂಟಿ ಯೋಜನೆಯಿಂದ ಸರ್ಕಾರಕ್ಕೆ ಹೆಚ್ಚು ಹೊರೆಯಾಗುತ್ತಿದೆ. ಹೀಗಾಗಿ ಆರ್ಥಿಕವಾಗಿ ಸ್ಥಿತಿವಂತರಿರುವ ಜನ ಇದರ ಲಾಭ ಪಡೆಯದೇ ಬಿಡಬೇಕು. ಬಡವರಿಗೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ‘ಗ್ಯಾರಂಟಿ’ಗಾಗಿ ಭೂಮಿ ಮಾರಲು ಮುಂದಾಯ್ತಾ ಸರ್ಕಾರ?

    ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಗ್ಯಾರಂಟಿ ಕೆಲಸ ಮಾಡಿಲ್ಲ. ಜನ ತಮಗೆ ಬೇಕಾದವರನ್ನು ಆಯ್ಕೆ ಮಾಡಿದ್ದಾರೆ. ಗ್ಯಾರಂಟಿ ಕಾರ್ಡ್‌ ನೀಡಿದಂತೆ ಜನರ ಬಳಿಯೂ ಕಾಂಗ್ರೆಸ್‌ಗೆ ಮತ ಹಾಕುವಂತೆ ಬರೆಸಿಕೊಂಡಿದ್ದರೆ ಪಕ್ಷ ಗೆಲ್ಲುತಿತ್ತೇನೋ ಎಂದು ಹೇಳಿದರು.

    ನಮಗೆ ಮತ ಹಾಕಬೇಕು ಎಂಬ ಕಾರಣಕ್ಕೆ ಗ್ಯಾರಂಟಿ ಯೋಜನೆ ತಂದಿಲ್ಲ. ಎಷ್ಟೋ ಜನ ಬಡವರು ವಿದ್ಯುತ್ ಬಿಲ್ ಸಹ ಕಟ್ಟಲಾಗದಿದ್ದನ್ನು ನಾವು ಕಂಡಿದ್ದೇವೆ. ಅಂತವರಿಗೆ ಸಹಾಯ ಆಗಬೇಕು, ಬಡವರಿಗೆ ಇದರಿಂದ ಸಹಾಯವಾಗಬೇಕು ಎಂದು ತಂದಿದ್ದೇವೆ ಎಂದರು‌. ಇದನ್ನೂ ಓದಿ: ಅನುದಾನ ಸಿಗುತ್ತಿಲ್ಲ – ಸರ್ಕಾರದ ವಿರುದ್ಧವೇ ಕೈ ಶಾಸಕ ನಾಡಗೌಡ ಅಸಮಾಧಾನ

  • ಅನುದಾನ ಸಿಗುತ್ತಿಲ್ಲ – ಸರ್ಕಾರದ ವಿರುದ್ಧವೇ ಕೈ ಶಾಸಕ ನಾಡಗೌಡ ಅಸಮಾಧಾನ

    ಅನುದಾನ ಸಿಗುತ್ತಿಲ್ಲ – ಸರ್ಕಾರದ ವಿರುದ್ಧವೇ ಕೈ ಶಾಸಕ ನಾಡಗೌಡ ಅಸಮಾಧಾನ

    – ರಾಜಕೀಯ ತ್ಯಾಗಕ್ಕೂ ನಾನು ಸಿದ್ಧನಿದ್ದೇನೆ

    ವಿಜಯಪುರ: ಗ್ಯಾರಂಟಿ ಯೋಜನೆಗಳಿಂದಾಗಿ (Congress Guarantee) ಅಭಿವೃದ್ಧಿ ಕೆಲಸಗಳಿಗೆ ಅನುದಾನ ಸಿಗುತ್ತಿಲ್ಲ ಎಂದು ಕೆಲ ಕಾಂಗ್ರೆಸ್‌ ನಾಯಕರು ನೇರವಾಗಿ ಅಸಮಾಧಾನ ಹೊರಹಾಕುತ್ತಿರುವ ಸಂದರ್ಭದಲ್ಲೇ ಈಗ ಅನುದಾನ ವಿಚಾರವನ್ನೇ ಪ್ರಸ್ತಾಪ ಮಾಡಿ ನಾನು ರಾಜಕೀಯ ತ್ಯಾಗಕ್ಕೂ ಸಿದ್ಧ ಎಂದು ಮುದ್ದೇಬಿಹಾಳ ಕ್ಷೇತ್ರದ ಕಾಂಗ್ರೆಸ್ ಶಾಸಕ ಸಿ‌ ಎಸ್ ನಾಡಗೌಡ (CS Nadagouda) ನೇರವಾಗಿಯೇ ಹೇಳಿಕೆ ನೀಡಿದ್ದಾರೆ.

    ರಾಜ್ಯದ ಹಿಂದುಳಿದ ಕ್ಷೇತ್ರಗಳ ಅಭಿವೃದ್ಧಿ ಮಾಡಬೇಕು. ಇಲ್ಲವಾದರೆ ನಾನು ರಾಜಕೀಯ ತ್ಯಾಗಕ್ಕೂ ಸಿದ್ದ ಎಂದು ಸಿ‌ ಎಸ್ ನಾಡಗೌಡ ಕಾಂಗ್ರೆಸ್ (Congress) ಸರಕಾರದ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಮುದ್ದೇಬಿಹಾಳ ಪಟ್ಟಣದಲ್ಲಿ ಕರ್ನಾಟಕ ಸಾಬೂನು ಮಾರ್ಜಕ ನಿಗಮದ ಅಧ್ಯಕ್ಷರೂ ಆಗಿರುವ ನಾಡಗೌಡ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಸರ್ಕಾರ ಅಭಿವೃದ್ಧಿಗೆ ಅನುದಾನ ನೀಡುತ್ತಿಲ್ಲ. ಕೆಲ ಕ್ಷೇತ್ರಗಳಿಗೆ ಮಾತ್ರ ಹಣ ಬಿಡುಗಡೆಯಾಗಿದೆ. ಅಭಿವೃದ್ಧಿ ಮಾಡಲು ಸರಿಯಾಗಿ ಅನುದಾನ ಸಿಗದೇ ಇದ್ದರೆ ರಾಜಕೀಯ ತ್ಯಾಗಕ್ಕೂ ನಾನು ಸಿದ್ದನಾಗಿದ್ದೇನೆ. ಇದನ್ನು ಬಹಳ ಬಿಚ್ಚು ಮನಸ್ಸಿನಿಂದ ಹೇಳುತ್ತೇನೆ ಎನ್ನುವ ಮೂಲಕ ಸರ್ಕಾರಕ್ಕೆ ನೇರವಾಗಿ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಸವಾಲು ಸ್ವೀಕರಿಸದ್ದಕ್ಕೆ ನಾನು ರಾಜೀನಾಮೆ ನೀಡಲ್ಲ: ಪ್ರದೀಪ್‌ ಈಶ್ವರ್‌

     

     ನಾನು ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಭದ್ದನಾಗಿದ್ದೇನೆ. ಸರ್ಕಾರ ನಿರೀಕ್ಷೆ ಮಾಡಿದ ಮಟ್ಟದಲ್ಲಿ ಸಮರ್ಪಕ ಕರ್ನಾಟಕ ಅಭಿವೃದ್ಧಿ ಮಾಡಬೇಕು. ಮುದ್ದೇಬಿಹಾಳ ಕ್ಷೇತ್ರ ಮಾತ್ರವಲ್ಲ. ಹಿಂದುಳಿದ ಯಾವುದೇ ಕ್ಷೇತ್ರಗಳಿರಲಿ ಸಮರ್ಪಕವಾಗಿ ಸಮತೋಲನ ಮಾಡಿ ಅಭಿವೃದ್ಧಿ ಮಾಡಬೇಕು. ಅಭಿವೃದ್ಧಿ ಮಾಡದಿದ್ದರೆ ನನಗೆ ಮುಂದೆ ರಾಜಕಾರಣ ಮಾಡುವ ಇಚ್ಛೆ ಇಲ್ಲವೆಂದ ಸಿ ಎಸ್ ನಾಡಗೌಡ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಸಿನಿಮಾ ಸ್ಟೈಲ್‌ನಲ್ಲಿ ಕಿಡ್ನಾಪ್‌ಗೈದ ದರ್ಶನ್‌ ಟೀಂ – ರೇಣುಕಾಸ್ವಾಮಿ ಕೊನೆ ಕ್ಷಣ ಹೇಗಿತ್ತು?

    ಹಿಂದುಳಿದ ಪ್ರದೇಶಕ್ಕೆ ಆಗಿರುವಂತಹ ತಾರತಮ್ಯ ಸರಿಪಡಿಸಿ ಅಭಿವೃದ್ಧಿಗೊಳಿಸಬೇಕು. ಹಿಂದುಳಿದ ಎಲ್ಲಾ ಕ್ಷೇತ್ರಗಳು ಅಭಿವೃದ್ಧಿಯಾಗಬೇಕು. ಒಂದು ಕ್ಷೇತ್ರಕ್ಕೆ ಅತೀ ಹೆಚ್ಚು ಹಣ ನೀಡಿ ಭಾರೀ ಕೆಲಸ‌ ಮಾಡಲಾಗಿದೆ ಎನ್ನುವುದು. ಬೇರೆಯವರು ಕೇಳಿದಾಗ ಹಣ ಕೊಡದೇ ಇರುವುದು. ಅಭಿವೃದ್ಧಿಯಿಂದ ಕ್ಷೇತ್ರದ ಜನರನ್ನು ವಂಚಿತ ಮಾಡುವಂತಹ ರಾಜಕೀಯ ಮಾಡುವ ಇಚ್ಛೆ ನನಗಿಲ್ಲ ಎಂದು ಹೇಳುವ ಮೂಲಕ ಸಿದ್ದರಾಮಯ್ಯ (CM Siddaramaiah) ಸರ್ಕಾರ ಹಿಂದುಳಿದ ಕ್ಷೇತ್ರಗಳ ಅಭಿವೃದ್ಧಿಗೆ ಹಣ ನೀಡಿಲ್ಲ ಎಂದು ಪರೋಕ್ಷವಾಗಿ ಆರೋಪ ಮಾಡಿದರು.

     

  • Exclusive: ಮುಂದಿನ ತಿಂಗಳಿಂದ ತೃತೀಯ ಲಿಂಗಿಗಳಿಗೆ ಗೃಹಲಕ್ಷ್ಮಿ ಹಣ – ಅರ್ಜಿ ಸಲ್ಲಿಕೆ ಯಾವಾಗಾ, ಹೇಗೆ?

    Exclusive: ಮುಂದಿನ ತಿಂಗಳಿಂದ ತೃತೀಯ ಲಿಂಗಿಗಳಿಗೆ ಗೃಹಲಕ್ಷ್ಮಿ ಹಣ – ಅರ್ಜಿ ಸಲ್ಲಿಕೆ ಯಾವಾಗಾ, ಹೇಗೆ?

    ಬೆಂಗಳೂರು: ಮುಂದಿನ ತಿಂಗಳಿನಿಂದಲೇ ರಾಜ್ಯದ ತೃತೀಯ ಲಿಂಗಿಗಳಿಗೆ (Third Gender) ಗೃಹಲಕ್ಷ್ಮೀ ಹಣ ನೀಡಲಾಗುತ್ತದೆ. ಈಗಾಗಲೇ ಅರ್ಜಿ ಸಹ ಸಿದ್ಧವಾಗುತ್ತಿದ್ದು, ಜಿಲ್ಲಾಧಿಕಾರಿಗಳು ನೀಡಿರುವ ಗುರುತಿನ ಚೀಟಿ ನೀಡಿ ಗೃಹಲಕ್ಷ್ಮಿ (Gruhalakshmi Scheme) ಹಣಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಇದಕ್ಕೆ ಏನೆಲ್ಲಾ ದಾಖಲೆಗಳ ಅಗತ್ಯವಿದೆ? ಅರ್ಜಿ ಸಲಿಸುವುದು ಹೇಗೆ ಅನ್ನೋ ಮಾಹಿತಿ ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ..

    ರಾಜ್ಯ ಸರ್ಕಾರದ (Karnataka Govt) ಮಹತ್ವಕಾಂಕ್ಷೆ ಯೋಜನೆ ಗೃಹಲಕ್ಷ್ಮಿಯಿಂದ ಬಡ ಮಹಿಳೆಯರ ಖಾತೆಗೆ ಪ್ರತಿ ತಿಂಗಳು 2,000 ರೂ. ಸಂದಾಯವಾಗುತ್ತಿದೆ. ಈ ಮಧ್ಯೆ ರಾಜ್ಯ ಸರ್ಕಾರ ಗೃಹಲಕ್ಷಿ ಯೋಜನೆಯ ಬಗ್ಗೆ ಬಿಗ್ ಅಪ್ಡೇಟ್ ನೀಡಿದೆ. ತೃತೀಯ ಲಿಂಗಿಗಳಿಗೂ ಕೂಡ ಗೃಹಲಕ್ಷ್ಮಿ ಹಣ ನೀಡೋದಕ್ಕೆ ಮುಂದಾಗಿದೆ. ಇದನ್ನೂ ಓದಿ: ಮೋದಿ ಪ್ರಮಾಣವಚನಕ್ಕೆ ವಿದೇಶಿ ಗಣ್ಯರು, ಪೌರಕಾರ್ಮಿಕರು- ಕಾರ್ಯಕ್ರಮಕ್ಕೆ ಯಾರಿಗೆಲ್ಲ ಆಹ್ವಾನ?

    ಈಗಾಗಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ತೃತೀಯ ಲಿಂಗಿಗಳಿಗೆ ಹಣನೀಡಲು ಆದೇಶ ಆಗಿದೆ. ಅರ್ಜಿ ಸಲ್ಲಿಕೆಯ ಪ್ರಕ್ರಿಯೆಯನ್ನ ಅಭಿವೃದ್ಧಿಪಡಿಸುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಇದೇ ತಿಂಗಳ ಕೊನೆಯಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಜಿಲ್ಲಾಧಿಕಾರಿಗಳಿಂದ ತೃತೀಯ ಲಿಂಗಿ ಅಂತ ಪಡೆದ ಗುರುತಿನ ಚೀಟಿ, ಇದ್ದರೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಈ ತಿಂಗಳ ಒಳಗಡೆ ಅರ್ಜಿ ಸಲ್ಲಿಕೆಯಾದ್ರೆ ಮುಂದಿನ ತಿಂಗಳಿನಿಂದಲೇ ತೃತೀಯ ಲಿಂಗಿಗಳ ಖಾತೆಗೆ ನೇರವಾಗಿ ಹಣ ಜಮೆಯಾಗಲಿದೆ.

    ರಾಜ್ಯದಲ್ಲಿ 40 ಸಾವಿರಕ್ಕೂ ಹೆಚ್ಚು ತೃತೀಯ ಲಿಂಗಿಗಳಿದ್ದು, ಅವರ ಅಭಿವೃದ್ಧಿಗೆ ಅಥವಾ ಜೀವನೋಪಾಯಕ್ಕೆ ಗೃಹಲಕ್ಷ್ಮಿ ಹಣ ಸಹಕಾರಿಯಾಗಲಿದೆ. ಬೆಂಗಳೂರು ಒನ್, ಗ್ರಾಮ ಒನ್ ಮತ್ತು ಸೈಬರ್ ಸೆಂಟರ್‌ಗಳಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದಾಗಿ0ದೆ. ಈಗಾಗಲೇ 1.20 ಕೋಟಿಗೂ ಅಧಿಕ ಮಂದಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಬಹುತೇಕರು ಹಣ ಪಡೆಯುತ್ತಿದ್ದಾರೆ. ಈ ಪೈಕಿ ಒಂದೂವರೆ ಲಕ್ಷ ಮಂದಿ ಜಿಎಸ್‌ಟಿ ಮತ್ತು ಆದಾಯ ತೆರಿಗೆ ಪಾವತಿದಾರರಾಗಿದ್ದು, ಅವರಿಗೆ ಹಣ ಸಂದಾಯ ಸ್ಥಗಿತ ಮಾಡಲಾಗಿದೆ. ಜೊತೆಗೆ ಮೇ ತಿಂಗಳವರೆಗೂ ಹಣ ಸಂದಾಯ ಆಗಿದ್ದು ಜೂನ್ ತಿಂಗಳ ಹಾಕಬೇಕಿದೆ.

    ಒಟ್ಟಾರೆ ಗೃಹಲಕ್ಷ್ಮಿ ಯೋಜನೆಗೆ ತೃತೀಯ ಲಿಂಗಿಗಳು ಕೂಡ ಅರ್ಜಿ ಸಲ್ಲಿಕೆ ಮಾಡಿ ಎರಡು ಸಾವಿರ ಹಣ ಪಡೆಯೋ ವ್ಯವಸ್ಥೆಯನ್ನ ಸರ್ಕಾರ ಮಾಡ್ತಾ ಇದೆ. ಇದನ್ನೂ ಓದಿ: NCP ನಾಯಕ ಪ್ರಫುಲ್‌ ಪಟೇಲ್‌ಗೆ ಬಿಗ್‌ ರಿಲೀಫ್‌ – 180 ಕೋಟಿ ರೂ. ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಇಡಿ ಆದೇಶ ರದ್ದು!

  • ಗ್ಯಾರಂಟಿ ಪರ ಜನ ನಿಂತಿಲ್ಲ ಅನ್ನಿಸುತ್ತೆ.. ಗ್ಯಾರಂಟಿಗಳಿಗೆ ಹಿನ್ನಡೆಯಾಗಿದೆ: ಸಚಿವ ಚಲುವರಾಯಸ್ವಾಮಿ

    ಗ್ಯಾರಂಟಿ ಪರ ಜನ ನಿಂತಿಲ್ಲ ಅನ್ನಿಸುತ್ತೆ.. ಗ್ಯಾರಂಟಿಗಳಿಗೆ ಹಿನ್ನಡೆಯಾಗಿದೆ: ಸಚಿವ ಚಲುವರಾಯಸ್ವಾಮಿ

    ಬೆಂಗಳೂರು: ಗ್ಯಾರಂಟಿ (Congress Guarantee) ಪರ ಜನ ನಿಂತಿಲ್ಲ ಅನಿಸುತ್ತೆ. ಜೆಡಿಎಸ್-ಬಿಜೆಪಿಗೆ (BJP-JDS) ಗ್ಯಾರಂಟಿ ಬೇಕಿರಲಿಲ್ಲ. ಒಟ್ಟಾರೆ ಗ್ಯಾರಂಟಿಗಳಿಗೆ ಹಿನ್ನಡೆಯಾಗಿದೆ ಎಂದು ಸಚಿವ ಚಲುವರಾಯಸ್ವಾಮಿ (Chaluvarayaswamy) ಅಭಿಪ್ರಾಯಪಟ್ಟರು.

    ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಫಲಿತಾಂಶದ ಕುರಿತು ಮಾತನಾಡಿದ ಅವರು, ಸ್ಟಾರ್ ಚಂದ್ರು ಭೇಟಿಗೆ ನಾವು ಹೋಗಿದ್ದೆವು. ಅವರ ಜೊತೆ ಡಿ.ಕೆ.ಸುರೇಶ್ ಅವರನ್ನೂ ಭೇಟಿಯಾಗಿದ್ದೆವು. ನಂತರ ಡಿಕೆಶಿಯನ್ನೂ ಭೇಟಿ ಮಾಡಿ ಮಾತನಾಡಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಮಂಡ್ಯದಲ್ಲಿ ಕುಮಾರಸ್ವಾಮಿ ಗೆಲುವು, ಕಾಂಗ್ರೆಸ್ ಸೋಲಿಗೆ ಕಾರಣಗಳೇನು?

    ಮಂಡ್ಯ ಸೋಲು ನಾವು ನಿರೀಕ್ಷಿಸಿರಲಿಲ್ಲ. ಬಹಳ ದೊಡ್ಡ ಪ್ರಮಾಣದಲ್ಲಿ ಪೋಲಾಗಿದೆ. ಜನರ ತೀರ್ಪಿಗೆ ನಾವು ತಲೆ ಬಾಗಬೇಕಿದೆ. ಯಾಕೆ ಸೋಲಿಸಿದ್ರು ಎಂದು ವಿಮರ್ಶಿಸಬೇಕಿದೆ. ಜನರ ತೀರ್ಪನ್ನ ನಾವು ಸ್ವಾಗತ ಮಾಡ್ತೇವೆ. ಅವರ ಮೈತ್ರಿಗೆ ಮತ ಹಾಕಿದರೋ, ಸಮುದಾಯ ನೋಡಿ ಜನ ವೋಟ್ ಹಾಕಿದರೋ, ಯಾವ್ಯಾವ ಕಾರಣಕ್ಕೆ ವೋಟು ಹಾಕಿದ್ರು ಗೊತ್ತಿಲ್ಲ ಎಂದರು.

    ಗ್ಯಾರೆಂಟಿ ಪರ ಜನ ನಿಂತಿಲ್ಲ ಅನ್ನಿಸುತ್ತೆ. ಜೆಡಿಎಸ್, ಬಿಜೆಪಿಗೆ ಗ್ಯಾರಂಟಿ ಬೇಕಿರಲಿಲ್ಲ. ಟೋಟಲಿ ಗ್ಯಾರಂಟಿಗಳಿಗೆ ಹಿನ್ನಡೆಯಾಗಿದೆ. ಸೋಲು ಗೆಲುವಿನ ಮೇಲೆ ಡಿಸೈಡ್ ಮಾಡಲಾಗಲ್ಲ. ನಮಗೆ ಜನ ಅಸೆಂಬ್ಲಿಯಲ್ಲಿ ಮ್ಯಾಂಡೇಟ್‌ ಕೊಟ್ಟಿದ್ದಾರೆ. ನಾವು ಒಂದರಿಂದ ಒಂಬತ್ತಕ್ಕೆ ಬಂದಿದ್ದೇವೆ. ನಮಗೆ ಹಳೆ ಮೈಸೂರು ಭಾಗದಲ್ಲಿ ಹಿನ್ನಡೆಯಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಕೃಷಿ ಕ್ಷೇತ್ರದಲ್ಲಿ ನನಗೆ ಆಸಕ್ತಿ ಇದೆ: ಹೆಚ್‍ಡಿಕೆ

    2019ರಲ್ಲಿ ಅವರು ಓವರ್ ಕಾನ್ಫಿಡೆಂಟ್ ಇದ್ರು. ನಾವು ಏಳು ಜನ ಇದ್ರೂ ಆ ರೀತಿ ಇರಲಿಲ್ಲ. ಡೌನ್ ಟು ಅರ್ಥ್ ನಾವು ಕೆಲಸ ಮಾಡಿದ್ದೆವು. ಆದರೂ ನಮಗೆ ಸೋಲಾಗಿದೆ. ಸೋಲಿನ ಹೊಣೆಯನ್ನ ಸಾಮೂಹಿಕವಾಗಿ ಒಪ್ಪಿಕೊಳ್ತೇವೆ. ರಿಸಲ್ಟ್ ಮೇಲೆ ಹೊಣೆ ಹೊರೋಕೆ ಆಗಲ್ಲ. ಎಲ್ಲರೂ‌ ಪಕ್ಷಕ್ಕಾಗಿ ಕೆಲಸ ಮಾಡಿದ್ದೆವು. ಸಿಎಂ, ಡಿಸಿಎಂ ಇಬ್ಬರೂ ಕೆಲಸ ಮಾಡಿದ್ರು. ಡಿಸಿಎಂ ಬಗ್ಗೆ ನಾನು ಮಾತನಾಡಲ್ಲ. ಪಕ್ಷ ಹೈಕಮಾಂಡ್ ಇದೆ ತೀರ್ಮಾನಿಸ್ತಾರೆ ಎಂದರು.

  • ಗ್ಯಾರಂಟಿ ಹಣಕ್ಕಾಗಿ ಲಕ್ನೋ ಕಾಂಗ್ರೆಸ್‌ ಕಚೇರಿ ಮುಂದೆ ಸಾಲುಗಟ್ಟಿ ನಿಂತ ಮುಸ್ಲಿಂ ಮಹಿಳೆಯರು!

    ಗ್ಯಾರಂಟಿ ಹಣಕ್ಕಾಗಿ ಲಕ್ನೋ ಕಾಂಗ್ರೆಸ್‌ ಕಚೇರಿ ಮುಂದೆ ಸಾಲುಗಟ್ಟಿ ನಿಂತ ಮುಸ್ಲಿಂ ಮಹಿಳೆಯರು!

    ಲಕ್ನೋ: ಚುನಾವಣಾ (Lok Sabha Election) ಪ್ರಚಾರದ ಸಂದರ್ಭದಲ್ಲಿ ನಾವು ಗೆದ್ದರೆ ಮರುದಿನವೇ ನಿಮ್ಮ ಖಾತೆಗೆ ಹಣ ಹಾಕುವುದಾಗಿ ಕಾಂಗ್ರೆಸ್‌ ನಾಯಕರು (Congress Leaders)  ಪ್ರಚಾರ ಮಾಡಿದ ಹಿನ್ನೆಲೆಯಲ್ಲಿ ಇಂದು ಲಕ್ನೋ (Lucknow) ಕಾಂಗ್ರೆಸ್‌ ಕಚೇರಿಗೆ (Congress Office) ಭಾರೀ ಸಂಖ್ಯೆಯಲ್ಲಿ ಮುಸ್ಲಿಂ ಮಹಿಳೆಯರು (Muslim Women) ಆಗಮಿಸಿದ್ದರು.

    ಕೈಯಲ್ಲಿ ಗ್ಯಾರಂಟಿ ಕಾರ್ಡ್‌ (Guarantee Card) ಹಿಡಿದ ಬಂದ ಅವರು ಕಾಂಗ್ರೆಸ್‌ ಗೆದ್ದರೆ ಹಣ ಹಾಕುವುದಾಗಿ ತಿಳಿಸಿದ್ದರು. ಹೀಗಾಗಿ ಗ್ಯಾರಂಟಿ ಕಾರ್ಡ್‌ ಹಿಡಿದುಕೊಂಡು ಬಂದಿದ್ದೇವೆ ಎಂದು ತಿಳಿಸಿದರು.

    ಕೆಲವರು ಈ ಹಿಂದೆಯೇ ನಾವು ಖಾತೆ ವಿವರ ನೀಡಿ ಫಾರಂ ಭರ್ತಿ ಮಾಡಿದ್ದೇವೆ. ಕಾಂಗ್ರೆಸ್‌ ಕಚೇರಿಯಿಂದ ನಮಗೆ ಸ್ವೀಕೃತಿ ರಸೀದಿ ಸಿಕ್ಕಿದೆ. ಗೆದ್ದ ನಂತರ ಕಚೇರಿಗೆ ಬಂದರೆ ದುಡ್ಡು ನೀಡುವುದಾಗಿ ತಿಳಿಸಿದ್ದರು. ಹೀಗಾಗಿ ನಾವು ಬಂದಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಮಂಡ್ಯದಲ್ಲಿ ಕುಮಾರಸ್ವಾಮಿ ಗೆಲುವು, ಕಾಂಗ್ರೆಸ್ ಸೋಲಿಗೆ ಕಾರಣಗಳೇನು?

    ಕರ್ನಾಟಕದಲ್ಲಿ ಹೇಗೆ ಕಾಂಗ್ರೆಸ್‌ ಮನೆ ಮನೆಗೆ ಗ್ಯಾರಂಟಿ ಕಾರ್ಡ್‌ಗಳನ್ನು ಹೇಗೆ ಹಂಚಿಕೆ ಮಾಡಿತ್ತೋ ಅದೇ ರೀತಿಯಾಗಿ ಉತ್ತರ ಪ್ರದೇಶದಲ್ಲೂ ಕಾಂಗ್ರೆಸ್‌, ಎಸ್‌ಪಿ ಕಾರ್ಯಕರ್ತರು ಪ್ರತಿ ಮನೆ ಮನೆಗೆ ಗ್ಯಾರಂಟಿ ಕಾರ್ಡ್‌ ಹಂಚಿಕೆ ಮಾಡಿದ್ದರು. ಮಹಾಲಕ್ಷ್ಮಿ ಯೋಜನೆಯ ಅಡಿಯಲ್ಲಿ ಪ್ರತಿ ಕುಟುಂಬಕ್ಕೆ 1 ಲಕ್ಷ ರೂ. ತಿಂಗಳಿಗೆ 8,500 ರೂ. ನೀಡುವುದಾಗಿ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿತ್ತು.

    ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ಹಂಚಿಕೆ ಮಾಡಿದ ಗ್ಯಾರಂಟಿ ಕಾರ್ಡ್‌
    ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ಹಂಚಿಕೆ ಮಾಡಿದ ಗ್ಯಾರಂಟಿ ಕಾರ್ಡ್‌

    ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ, ಅಖಿಲೇಶ್‌ ಯಾದವ್‌ ಅವರು ತಮ್ಮ ಭಾಷಣದಲ್ಲಿ ಕಟಾ ಕಟ್‌ ಕಟಾ ಕಟ್‌ ಅಂತ ಹೇಳಿ ಮಹಿಳೆಯರ ಖಾತೆಗೆ ವರ್ಷಕ್ಕೆ 1 ಲಕ್ಷ ರೂ. ಹಾಕುವುದಾಗಿ ಹೇಳುತ್ತಿದ್ದರು. ಉತ್ತರ ಪ್ರದೇಶದಲ್ಲಿ ಭಾರೀ ಸಂಖ್ಯೆಯಲ್ಲಿ ಈ ಬಾರಿ ಮಹಿಳೆಯರು ಮತದಾನ ಮಾಡಿದ್ದಾರೆ. ಕಾಂಗ್ರೆಸ್‌ ಮತ್ತು ಎಸ್‌ಪಿ ಹೆಚ್ಚಿನ ಸ್ಥಾನ ಗೆಲ್ಲಲು 1 ಲಕ್ಷ ರೂ. ನೀಡುವ ಗ್ಯಾರಂಟಿ ಭಾರೀ ಪರಿಣಾಮ ಬಿದ್ದಿದೆ ಎಂಬ ವಿಶ್ಲೇಷಣೆ ಈಗ ಕೇಳಿ ಬರುತ್ತಿದೆ.

    ಒಟ್ಟು 80 ಲೋಕಸಭಾ ಕ್ಷೇತ್ರಗಳ ಪೈಕಿ ಎಸ್‌ಪಿ 37, ಬಿಜೆಪಿ 33, ಕಾಂಗ್ರೆಸ್‌ 6, ಆರ್‌ಎಲ್‌ಡಿ 2 ಸ್ಥಾನಗಳನ್ನು ಗೆದ್ದುಕೊಂಡಿದೆ.

     

  • ವರುಷ ಒಂದು ಸಮಸ್ಯೆಗಳು ನೂರೊಂದು – ರಾಜ್ಯಪಾಲರು ಕಾಂಗ್ರೆಸ್‌ ಸರ್ಕಾರವನ್ನ ವಜಾಗೊಳಿಸಲಿ: ಆರ್.ಅಶೋಕ್

    ವರುಷ ಒಂದು ಸಮಸ್ಯೆಗಳು ನೂರೊಂದು – ರಾಜ್ಯಪಾಲರು ಕಾಂಗ್ರೆಸ್‌ ಸರ್ಕಾರವನ್ನ ವಜಾಗೊಳಿಸಲಿ: ಆರ್.ಅಶೋಕ್

    – ಕಾಂಗ್ರೆಸ್‌ ಸರ್ಕಾರದ 1 ವರ್ಷ, ಕೊಲೆಗಡುಕರಿಗೆ ಹರ್ಷ ಎಂದು ಲೇವಡಿ

    ಬೆಂಗಳೂರು: ಕಾಂಗ್ರೆಸ್‌ ಸರ್ಕಾರದ (Congress Government) ಖಜಾನೆ ಸಂಪೂರ್ಣ ಖಾಲಿಯಾಗಿದೆ. ಒಂದು ವರ್ಷ ಅಧಿಕಾರ ಪೂರೈಸುವ ಹೊತ್ತಿಗೆ ನೂರೊಂದು ಸಮಸ್ಯೆಗಳನ್ನು ತಂದುಕೊಂಡಿದೆ ಎಂದು ಪ್ರತಿಪಕ್ಷ ನಾಯಕ ಆರ್.‌ ಅಶೋಕ್‌ (R Ashoka) ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

    ಮಲ್ಲೇಶ್ವರದ ಬಿಜೆಪಿ (BJP) ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಒಂದು ವರ್ಷ, ಕೊಲೆಗಡುಕರಿಗೆ ಹರ್ಷ. ಒನ್ ಇಯರ್ ಖಜಾನೆ ಫುಲ್ ಕ್ಲಿಯರ್, ವರುಷ ಒಂದು ಸಮಸ್ಯೆಗಳು ನೂರೊಂದು. ಕಾಂಗ್ರೆಸ್ ಸರ್ಕಾರ ಬಂತು – ಜನರ ಮುಖದಲ್ಲಿ ಹರ್ಷ ಹೋಯಿತು ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ದೇವೇಗೌಡ್ರ ಮೇಲೆ ಗೌರವ ಇದ್ರೆ ಕೂಡ್ಲೇ ಬಂದು ತನಿಖೆ ಎದುರಿಸು- ಪ್ರಜ್ವಲ್‌ಗೆ ಹೆಚ್‌ಡಿಕೆ ಮನವಿ

    ಒಂದು ವರ್ಷ ಪೂರೈಸಿದ ಹಿನ್ನೆಲೆ ಮುಖ್ಯಮಂತ್ರಿಗಳು ಕೊಲೆಗಡುಕರಿಗೆ ಧನ್ಯವಾದ ಹೇಳಿದ್ದಾರಾ? ಅಥವಾ ತಮ್ಮ ಸರ್ಕಾರದ ಅವಧಿ ಮುಗಿದುದ್ದಕ್ಕೆ ಬೈಬೈ-ಗುಡ್ ಬೈ ಎಂದು ಧನ್ಯವಾದ ಹೇಳಿದ್ದಾರೋ ಅರ್ಥ ಆಗಿಲ್ಲ. ಸಿದ್ದರಾಮಯ್ಯ ಅವರ ಮುಖದ ಕಳೆ ನೋಡಿದ್ರೆ, ಕಾಂಗ್ರೆಸ್‌ ಸರ್ಕಾರದ ಅವರಿ ಮುಗಿದಂತೆ ಕಾಣ್ತಿತ್ತು ಎಂದು ಕುಟಕಿದ್ದಾರೆ.

    ಕಾಂಗ್ರೆಸ್ ಲೂಟಿ – ಎಷ್ಟು ಕೋಟಿ? ಎಂದು ಜನರು ಲೆಕ್ಕ ಹಾಕುತ್ತಿದ್ದಾರೆ. ನೇಹಾ, ಮೀನಾ, ಅಂಜಲಿ ಎಂಬ ಮಹಾಲಕ್ಷ್ಮಿಯರು, ನಮ್ಮ ಮನೆಯ ಮಹಾಲಕ್ಷಿಯರಿಗಿಲ್ಲ ಬದುಕುವ ಭಾಗ್ಯ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ರಾಜ್ಯವನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿ ಉಳಿಸಿಕೊಳ್ಳಲು ಸಹಕರಿಸಬೇಕು: ಸಿಎಂ ಮನವಿ

    ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ ವಿಜಯೇಂದ್ರ, ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವಥ್‌ ನಾರಾಯಣ್‌ ಅವರು ಉಪಸ್ಥಿತರಿದ್ದರು.

  • ಅಭಿವೃದ್ಧಿಯೂ ನಿಂತಿಲ್ಲ – ಗ್ಯಾರಂಟಿಗಳೂ ನಿಲ್ಲೋದಿಲ್ಲ – ವರ್ಷ ಪೂರೈಸಿ ವಾರಂಟಿ ಕೊಟ್ಟ ಸಿಎಂ!

    ಅಭಿವೃದ್ಧಿಯೂ ನಿಂತಿಲ್ಲ – ಗ್ಯಾರಂಟಿಗಳೂ ನಿಲ್ಲೋದಿಲ್ಲ – ವರ್ಷ ಪೂರೈಸಿ ವಾರಂಟಿ ಕೊಟ್ಟ ಸಿಎಂ!

    – ಶಕ್ತಿ ಯೋಜನೆಗೆ 4,857.95 ಕೋಟಿ ರೂ., ಗೃಹ ಜ್ಯೋತಿಗೆ 7,436 ಕೋಟಿ ರೂ. ವೆಚ್ಚ ತಗುಲಿದೆ

    ಬೆಂಗಳೂರು: ಕಾಂಗ್ರೆಸ್‌ ಸರ್ಕಾರ (Congress Government) ಜಾರಿಗೊಳಿಸಿದ ಪಂಚ ಗ್ಯಾರಂಟಿಗಳನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಗ್ಯಾರಂಟಿಗಳ ಜೊತೆಗೆ ಅಭಿವೃದ್ಧಿ ಕೆಲಸಗಳೂ ನಿಂತಿಲ್ಲ. ಮುಂದೆಯೂ ನಿಲ್ಲುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದರು.

    ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರಕ್ಕೆ ಒಂದು ವರ್ಷ ತುಂಬಿದ ಹಿನ್ನೆಲೆ ಬೆಂಗಳೂರು ಪತ್ರಕರ್ತರ ಭವನದಲ್ಲಿ ಮಾಧ್ಯಮ ಸಂವಾದದಲ್ಲಿ ಅಂಶಿ-ಅಂಶಗಳನ್ನು ಬಿಡುಗಡೆಗೊಳಿಸಿ ವಿಪಕ್ಷಗಳ ಟೀಕೆಗೆ ಉತ್ತರ ಕೊಟ್ಟರು. ಇದನ್ನೂ ಓದಿ: ಮೋದಿ ಅಖಾಡಕ್ಕಿಳಿದಿರುವ ವಾರಣಾಸಿಯ ಇತಿಹಾಸ ಮಾತ್ರವಲ್ಲದೆ ರಾಜಕೀಯವೂ ಕುತೂಹಲಕಾರಿ!

    ಪಂಚ ಗ್ಯಾರಂಟಿಗಳನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಗ್ಯಾರಂಟಿಗಳ (Guarantee) ಜೊತೆಗೆ ಅಭಿವೃದ್ಧಿ ಕೆಲಸಗಳೂ ನಿಂತಿಲ್ಲ. ಮುಂದೆಯೂ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದರು. ನಾವು ಅಧಿಕಾರಕ್ಕೆ ಬಂದ 9 ತಿಂಗಳ ಒಳಗೆ 5 ಗ್ಯಾರಂಟಿಗಳನ್ನ ಜಾರಿ ಮಾಡಿದ್ದೇವೆ. ಮಧ್ಯವರ್ತಿಗಳ ಹಾವಳಿ ಇಲ್ಲದೇ ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡಲಾಗಿದೆ ಎಂದು ಹೇಳಿದರು.

    ಶಕ್ತಿ ಯೋಜನೆ (Shakti Scheme) ಅಡಿ 2023ರ ಜೂನ್‌ ತಿಂಗಳಿನಿಂದ 2024ರ ಏಪ್ರಿಲ್‌ ವರೆಗೆ 201 ಕೋಟಿ ಪ್ರಯಾಣಿಕರು ಪ್ರಯಾಣಿಸಿದ್ದು, 4,857.95 ಕೋಟಿ ರೂ. ವೆಚ್ಚವಾಗಿದೆ. ಅನ್ನಭಾಗ್ಯ ಯೋಜನೆಯಲ್ಲಿ (AnnaBhagya Scheme) 4.10 ಕೋಟಿ ಫಲಾನುಭವಿಗಳು ಉಪಯೋಗ ಪಡೆದುಕೊಂಡಿದ್ದು, 5,754.06 ಕೋಟಿ ರೂ. ವೆಚ್ಚ, ಗೃಹ ಜ್ಯೋತಿ ಯೋಜನೆಯಡಿ 200 ಯೂನಿಟ್ ವರೆಗೆ ವಿದ್ಯುತ್ ನೀಡಲಾಗುತ್ತಿದ್ದು, 1.60 ಕೋಟಿ ಫಲಾನುಭವಿಗಳು ಇದರ ಉಪಯೋಗ ಪಡೆದುಕೊಂಡಿದ್ದಾರೆ. ಇದಕ್ಕೆ 7,436 ಕೋಟಿ ರೂ. ವೆಚ್ಚ ತಗುಲಿದೆ. ಗೃಹಲಕ್ಷ್ಮೀ ಯೋಜನೆ 1.20 ಕೋಟಿ ಫಲಾನುಭವಿಗಳಿಗೆ ತಲುಪಿದ್ದು, 23,290.40 ಕೋಟಿ ರೂ. ವೆಚ್ಚ ಆಗಿದೆ. ಇನ್ನೂ ಯುವನಿಧಿ ಯೋಜನೆಯಿಂದ 1.57 ಲಕ್ಷ ಫಲಾನುಭವಿಗಳು ಪ್ರಯೋಜನ ಪಡೆದುಕೊಂಡಿದ್ದಾರೆ. 5 ಗ್ಯಾರಂಟಿಗಳಿಗೆ 36 ಸಾವಿರ ಕೋಟಿ ರೂ. ಖರ್ಚು ಮಾಡಿದ್ದೇವೆ ಎಂದು ಲೆಕ್ಕ ಕೊಟ್ಟರು.

    ಬಂಡವಾಳ ವೆಚ್ಚ ಬಜೆಟ್‌ನಲ್ಲಿ (Budget) ಇಟ್ಟಿದ್ದಕ್ಕಿಂತ ಹೆಚ್ಚು ಹಣ ಖರ್ಚು ಮಾಡಿದ್ದೇವೆ. ಬಂಡವಾಳ ವೆಚ್ಚ ಅಭಿವೃದ್ಧಿಗೆ ಖರ್ಚು ಮಾಡಲು ಇಡುವ ಹಣ. ಕಳೆದ ಬಜೆಟ್‌ನಲ್ಲಿ ಒಟ್ಟು 54,374 ಕೋಟಿ ಹಣ ಇಟ್ಟಿದ್ವಿ, ಈ ಪೈಕಿ 56,274 ಕೋಟಿ ಖರ್ಚು ಮಾಡಿದ್ದೇವೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಲೋಕಸಭಾ ಚುನಾವಣೆ 2024: 5ನೇ ಹಂತದಲ್ಲಿರುವ ಪ್ರಮುಖ ಅಭ್ಯರ್ಥಿಗಳು

    ಗ್ಯಾರಂಟಿಗಳ ಹೊರತಾಗಿಯೂ ನೀರಾವರಿಗೆ 16,388 ಕೋಟಿ ರೂ. ಇಟ್ಟಿದ್ವಿ, 18,195 ಕೋಟಿ ರೂ. ಖರ್ಚು ಮಾಡಿದ್ದೇವೆ. ಲೋಕೋಪಯೋಗಿ ಇಲಾಖೆಗೆ 9,727 ಕೋಟಿ ರೂ. ಇಟ್ಟಿದ್ವಿ, 9,641 ಕೋಟಿ ರೂ. ಖರ್ಚು ಮಾಡಿದ್ದೀವಿ. ಹೀಗಿದ್ದರೂ ಸರ್ಕಾರ ಪಾಪರ್ ಆಗ್ಬಿಟ್ಟಿದೆ, ಅಭಿವೃದ್ಧಿ ಆಗ್ತಿಲ್ಲ ಅಂತಾರೆ ಯಡಿಯೂರಪ್ಪ ಎಂದು ತಿರುಗೇಟು ನೀಡಿದರು.

    ಸುಳ್ಳು ಹೇಳಿದರೂ ಸತ್ಯಕ್ಕೆ ಹತ್ತಿರವಾಗಿರಬೇಕು. ಆದ್ರೆ ಬಿಜೆಪಿ ಅವರದ್ದು ಸುಳಿನ ಪರಮಾವಧಿ. ಆರ್‌. ಅಶೋಕ್‌ಗೆ, ವಿಜಯೇಂದ್ರನಿಗೆ ಅರ್ಥ ಆಗುತ್ತೋ, ಇಲ್ಲವೋ ಗೊತ್ತಿಲ್ಲ. ಬಂಡವಾಳ ವೆಚ್ಚ ಅಂದ್ರೇನು? ಅಭಿವೃದ್ಧಿಗೆ ಖರ್ಚು ಮಾಡಲು ಇಡುವ ಹಣ ಅಲ್ವಾ? ಅಂತ ಕುಟುಕಿದರು. ಇದನ್ನೂ ಓದಿ: ನಾನು, ರಾಹುಲ್‌ ಒಟ್ಟಿಗೆ ಸ್ಪರ್ಧಿಸಿದ್ದರೆ ಬಿಜೆಪಿಗೆ ಲಾಭವಾಗ್ತಿತ್ತು – ಲೋಕಸಭೆಗೆ ಸ್ಪರ್ಧಿಸದಿರಲು ಕಾರಣ ತಿಳಿಸಿದ ಪ್ರಿಯಾಂಕಾ

    ಗ್ಯಾರಂಟಿಗಳಿಂದ ಟಿವಿ, ಫ್ರಿಡ್ಜ್ ತಗೊಂಡಿದ್ದಾರೆ: ಗ್ಯಾರಂಟಿ ಯೋಜನೆಗಳಿಂದ ಜನರು ಟಿವಿ, ಫ್ರಿಡ್ಜ್, ಫ್ಯಾನ್ ಗಳನ್ನೆಲ್ಲಾ ತೆಗೆದುಕೊಂಡಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರು ಪತ್ರ ಬರೆದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸಾಲ ಮಾಡಿರುವುದು ನಿಜ, ವಿತ್ತೀಯ ಹೊಣೆಗಾರಿಕೆ ಕಾಯ್ದೆ ಪ್ರಕಾರ 25% ಒಳಗೆ ಮಾಡಿದ್ದೇವೆ. ಹೆಚ್ಚಿನ ಸಾಲ ಮಾಡಿಲ್ಲ ಎಂದು ವಿವರಿಸಿದರು.

  • ಕಾಂಗ್ರೆಸ್ ಗ್ಯಾರಂಟಿಯಿಂದ ಜನ ಬದುಕ್ತಿದ್ದಾರೆ: ಡಿಕೆಶಿ

    ಕಾಂಗ್ರೆಸ್ ಗ್ಯಾರಂಟಿಯಿಂದ ಜನ ಬದುಕ್ತಿದ್ದಾರೆ: ಡಿಕೆಶಿ

    ಬೆಂಗಳೂರು: ರಾಜ್ಯದಲ್ಲಿ ಜನ ಕಾಂಗ್ರೆಸ್‍ನ ಗ್ಯಾರಂಟಿ ಯೋಜನೆಯಿಂದ (Congress Guarantee) ಜೀವನ ಮಾಡುತ್ತಿದ್ದಾರೆ. ನಮ್ಮ ಗ್ಯಾರಂಟಿ ಜನರನ್ನು ರಕ್ಷಿಸುತ್ತಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar) ಹೇಳಿದ್ದಾರೆ.

    ವಿಧಾನಸೌಧದ ಗಾಂಧಿ ಪ್ರತಿಮೆ ಮುಂಭಾಗ ಕೇಂದ್ರ ಸರ್ಕಾರ ನೀಡಿದ 3,454 ಕೋಟಿ ರೂ. ಬರ ಪರಿಹಾರ (Drought Relief Funds) ಅಲ್ಪ ಪ್ರಮಾಣದ್ದು ಎಂದು ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ. ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಡಿಸಿಎಂ ಡಿ.ಕೆ ಶಿವಕುಮಾರ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಈ ವೇಳೆ ರಾಜ್ಯ ಸರ್ಕಾರ ನೀಡುತ್ತಿರುವ ಗ್ಯಾರಂಟಿಯಿಂದ ಜನಕ್ಕೆ ಅನುಕೂಲವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ನಾವು ಗ್ಯಾರಂಟಿಗೆ ಹಣ ಕೇಳಿಲ್ಲ, ಕೇಳೋದು ಇಲ್ಲ – ರೈತರಿಗಾಗಿ ಹಣ ಕೇಳಿದ್ವಿ: ಬಿಜೆಪಿ ವಿರುದ್ಧ ಸಿಎಂ ಕಿಡಿ

    ಕರ್ನಾಟಕ ಸೆಪ್ಟೆಂಬರ್‌ನಲ್ಲಿ ಬರ ಪರಿಹಾರಕ್ಕೆ ಅರ್ಜಿ ಕೊಟ್ವಿತ್ತು. ಸೆಪ್ಟೆಂಬರ್‍ನಿಂದ ಇಲ್ಲಿವರೆಗೂ 50 ಸಾವಿರ ಕೋಟಿ ರೂ. ಮತ್ತೆ ನಷ್ಟ ಆಗಿದೆ. ನಾವೇನು ಭಿಕ್ಷೆ ಅಥವಾ ಅವರ ಮನೆಯ ದುಡ್ಡನ್ನು ಕೇಳಿದ್ದಾ? ನಾವು ರಾಜ್ಯದ ಜನರಿಗಾಗಿ ಪರಿಹಾರ ಕೇಳಿದ್ದೇವೆ. ಇಲ್ಲಿಯವರೆಗೆ ನಮ್ಮ ಕೈಲಾದ ಅನುದಾನ ನಾವು ಕೊಟ್ಟಿದ್ದೇವೆ. ಕರ್ನಾಟಕದ ಜನರಿಗೆ ನಿಮ್ಮ ಭಿಕ್ಷೆ ಬೇಡ. ನಮ್ಮ ಹಕ್ಕನ್ನು ನಮಗೆ ಕೊಡಿ ಎಂದು ಅವರು ವಾಗ್ದಾಳಿ ನಡೆಸಿದರು.

    ಸೆಪ್ಟೆಂಬರ್‍ನಿಂದ ಇಲ್ಲಿವರೆಗೂ ಆಗಿರುವ ನಷ್ಟವನ್ನು ಸೇರಿ ಪರಿಹಾರ ಕೊಡಬೇಕು. ಕೋರ್ಟ್‍ನಲ್ಲಿ ಉಗಿದ ಮೇಲೆ ಹಣ ಕೊಡುತ್ತಿದ್ದಾರೆ. ನಾವು ಯಾವಾಗ ಹಂಚೋದು? ಕೇಂದ್ರದ ಅನ್ಯಾಯದ ವಿರುದ್ಧ ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ. ಬಿಜೆಪಿ ಹಾಗೂ ಜೆಡಿಎಸ್ ರಾಜ್ಯ ದ್ರೋಹಿಗಳಾಗಿದ್ದು, ರಾಜ್ಯಕ್ಕಾಗಿ ಅವರು ಧ್ವನಿ ಎತ್ತಿಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: Prajwal Revanna Case: ಸರ್ಕಾರ ಗಂಭೀರವಾಗಿ ಪರಿಗಣಿಸಿದೆ, ಕೆಲವೇ ಹೊತ್ತಲ್ಲಿ ಎಸ್‌ಐಟಿ ರಚನೆ: ಪರಮೇಶ್ವರ್‌

  • ಮಿಸ್ಟರ್ ಕುಮಾರಸ್ವಾಮಿ ನೀನು ಚುನಾವಣೆಯಲ್ಲಿ ಗೆಲ್ಲಲ್ಲ – ಏಕವಚನದಲ್ಲೇ ಹರಿಹಾಯ್ದ ಡಿಕೆಶಿ

    ಮಿಸ್ಟರ್ ಕುಮಾರಸ್ವಾಮಿ ನೀನು ಚುನಾವಣೆಯಲ್ಲಿ ಗೆಲ್ಲಲ್ಲ – ಏಕವಚನದಲ್ಲೇ ಹರಿಹಾಯ್ದ ಡಿಕೆಶಿ

    – ರಾಜ್ಯಾದ್ಯಂತ ಮಹಿಳಾ ಹೋರಾಟಕ್ಕೆ ಡಿಸಿಎಂ ಕರೆ

    ಬೆಳಗಾವಿ: ಮಿಸ್ಟರ್ ಕುಮಾರಸ್ವಾಮಿ ನೀನು ಈ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಗೆಲ್ಲಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

    ಬೆಳಗಾವಿ ಕಾಂಗ್ರೆಸ್ (Belagavi Congress) ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದಿದ್ದಾರೆ. ಮಿಸ್ಟರ್ ಕುಮಾರಸ್ವಾಮಿ (HD Kumaraswamy) ನೀನು ಚುನಾವಣೆಯಲ್ಲಿ ಗೆಲ್ಲಲ್ಲ, ಹೆದರಿ ಪಕ್ಕದ ಕ್ಷೇತ್ರಕ್ಕೆ ಹೋಗಿದ್ರಿ ಎಂದು ಕೆಂಡಾಮಂಡಲ ಆಗಿದ್ದಾರೆ. ಇದನ್ನೂ ಓದಿ: ಮಹಿಳೆಯರನ್ನ ಅವಮಾನಿಸಿಲ್ಲ – ಹೆಣ್ಣುಮಕ್ಕಳ ಹೇಳಿಕೆ ಬಗ್ಗೆ ವಿಷಾದ ವ್ಯಕ್ತಪಡಿಸಿದ ಕುಮಾರಸ್ವಾಮಿ

    `ಹೆಣ್ಣು ಕುಟುಂಬದ ಕಣ್ಣು’ ಕುಟುಂಬಕ್ಕೆ ಒಳ್ಳೆಯದಾಗಿಲಿ ಎಂದು ಕಾಂಗ್ರೆಸ್ ಸರ್ಕಾರ 2,000 ಹಣ ಕೊಡ್ತಿದೆ. ಹೆಣ್ಣುಮಕ್ಕಳು ಏನ್ ದಡ್ಡರಾ? ಮಹಿಳೆಯರಿಗೆ ಸ್ವಾಭಿಮಾನದ ಪ್ರಶ್ನೆ ಇದು, ಬದುಕಿನಲ್ಲಿ ಶಕ್ತಿ ಕೊಡಲು ಕೊಟ್ಟ ಕಾರ್ಯಕ್ರಮ (Congress Guarantee) ಇದು. ಕುಮಾರಸ್ವಾಮಿ ಹೇಳಿಕೆ ಖಂಡಿಸಿ ಹೋರಾಟ ಮಾಡಲೇಬೇಕು. ನಾನು ಈಗಲೇ ಕರೆ ಕೊಡುತ್ತೇನೆ. ಪ್ರತಿಯೊಂದು ಮಹಿಳಾ ಸಂಘಟನೆಗಳು, ರಾಜ್ಯಾದ್ಯಂತ ಮಹಿಳೆಯರು ಕುಮಾರಸ್ವಾಮಿ ಹೇಳಿಕೆ ಖಂಡಿಸಿ ಹೋರಾಟ ಮಾಡಬೇಕು, ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಬೇಕು ಎಂದು ಕರೆ ಕೊಟ್ಟಿದ್ದಾರೆ. ಇದನ್ನೂ ಓದಿ: ಗಡಿ ದಾಟುವ ಮೊದಲೇ ಇರಾನ್‌ ಕ್ಷಿಪಣಿಗಳನ್ನಹೊಡೆದುರುಳಿಸಿದ ಇಸ್ರೇಲ್‌ – ಅರಬ್‌ ರಾಷ್ಟ್ರಗಳಿಂದಲೂ ತಡೆ

    ರಾಜ್ಯಾದ್ಯಂತ ಒಂದು ಕೋಟಿಗೂ ಅಧಿಕ ಮಹಿಳೆಯರು ಗೃಹಲಕ್ಷ್ಮಿ ಯೋಜನೆ ಪಡೆಯುತ್ತಿದ್ದಾರೆ. ಅವರೆಲ್ಲರೂ ಪ್ರತಿಭಟನೆ ಮಾಡಿ, ತಕ್ಕ ಪಾಠ ಕಲಿಸುತ್ತಾರೆ. ಅವನ (ಕುಮಾರಸ್ವಾಮಿ) ಕ್ಷಮೆ ಬೇಕಿಲ್ಲ, ವಿಷಾದ ಅನ್ನೋ ಡ್ರಾಮಾ ಬೇಡ, ಕುಮಾರಸ್ವಾಮಿ ಮಾತು ಕೇಳಿ ಜನರು ಗ್ಯಾರಂಟಿ ಬಿಡಲ್ಲ. ಅವನಿಗೆ ಪಿಕ್ ಪಾಕೆಟ್ ಮಾಡಿ ರೂಢಿ ಅಲ್ವಾ? ಅದಕ್ಕೆ ಏಕವಚನದಲ್ಲಿ ಹೆಚ್‌ಡಿಕೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಇದೇ ವೇಳೆ ಮಂಡ್ಯದಲ್ಲಿ ಹೆಚ್‌ಡಿಕೆ ಸ್ಪರ್ಧೆ ಬಗ್ಗೆ ಮಾತನಾಡಿ, ನೀನು ಮೋಸಗಾರ, ಸುಳ್ಳುಗಾರ, ಎಲ್ಲದರ ಬಗ್ಗೆಯೂ ವಿಧಾನಸಭೆಯಲ್ಲಿ ಚರ್ಚೆ ಮಾಡೋಣ, ನಿಮ್ಮ ಜಮೀನು 48 ಎಕರೆ ಇದೆಯೋ, 1,000 ಎಕರೆ ಇದೆಯೋ ಚರ್ಚೆ ಮಾಡೋಣ ಎಂದು ಸವಾಲ್ ಹಾಕಿದ್ದರೆ.