Tag: Congress Guarantee

  • ತಿಂಗಳಿಗೆ 2.28 ಲಕ್ಷ ಮೆಟ್ರಿಕ್‌ ಟನ್‌ ಅಕ್ಕಿ ಬೇಕು, ಕೇಂದ್ರ ಕೊಡಲ್ಲ ಅಂತಾ ಹೇಳ್ತಿದೆ – ಸಿಎಂ ಕಿಡಿ

    ತಿಂಗಳಿಗೆ 2.28 ಲಕ್ಷ ಮೆಟ್ರಿಕ್‌ ಟನ್‌ ಅಕ್ಕಿ ಬೇಕು, ಕೇಂದ್ರ ಕೊಡಲ್ಲ ಅಂತಾ ಹೇಳ್ತಿದೆ – ಸಿಎಂ ಕಿಡಿ

    – ಎಫ್‌ಸಿಐ ಅಕ್ಕಿ ಕೊಡಲು ಕೇಂದ್ರ ಅಡ್ಡಗಾಲು
    – ಕೇಂದ್ರ ಬಿಜೆಪಿ ಬಡವರ ವಿರೋಧಿ ಸರ್ಕಾರ
    – ಛತ್ತಿಸ್‌ಗಡ, ತೆಲಂಗಾಣ ವಿವಿಧ ರಾಜ್ಯಗಳೊಂದಿಗೆ ಮಾತುಕತೆ

    ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಅಡ್ಡಗಾಲು ಹಾಕಿದೆ. ಪ್ರತಿ ತಿಂಗಳು 2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಪೂರೈಸುತ್ತೇವೆ ಅಂತಾ ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಫ್‌ಸಿಐ) ಒಪ್ಪಿಕೊಂಡು, ಈಗ ಕೇಂದ್ರ ಸರ್ಕಾರದ ಕೊಡದಂತೆ ತಡೆಹಿಡಿದಿದೆ. ಕೇಂದ್ರ ಸರ್ಕಾರ ಬಡವರ ವಿರೋಧಿ ಸರ್ಕಾರವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರ ಹಾಗೂ ಎಫ್‌ಸಿಐ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

    ರೇಸ್ ಕೋರ್ಸ್ ರಸ್ತೆಯಲ್ಲಿರುವ ಶಕ್ತಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅನ್ನಭಾಗ್ಯ ಯೋಜನೆ ಜಾರಿ ಮಾಡೋದಕ್ಕೆ ನಮ್ಮ ಎಫ್‌ಸಿಎ ಜತೆ ನಮ್ಮ ಅಧಿಕಾರಿಗಳು ಮಾತಾಡಿದ್ದರು. ನಾನೂ ಕೂಡ ನೇರವಾಗಿ ಮಾತನಾಡಿದ್ದೆ. 10 ಕೆಜಿ ಅಕ್ಕಿ ಕೊಡಲು ನಮಗೆ ಪ್ರತಿ ತಿಂಗಳು 2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಬೇಕು ಅಂತಾ ಹೇಳಿದ್ದೆ. ಪ್ರತಿ ಕೆಜಿಗೆ 34 ರೂ. + 2 ರೂ. 60 ಪೈಸೆ ಟ್ರಾನ್ಸ್‌ಪೋರ್ಟ್‌ ಶುಲ್ಕ ಸೇರಿ ಒಂದು ಕೆಜಿ ಅಕ್ಕಿಗೆ 36.60 ರೂ.ಗೆ ಖರೀದಿ ಮಾಡಲು ತೀರ್ಮಾನ ಮಾಡಿದ್ದೆವು. ಎಫ್‌ಸಿಐ ಸಹ ಒಪ್ಪಿಕೊಂಡಿತ್ತು. ಇದರಿಂದ ರಾಜ್ಯ ಸರ್ಕಾರಕ್ಕೆ ತಿಂಗಳಿಗೆ 840 ಕೋಟಿ ರೂ.ನಂತೆ ವರ್ಷಕ್ಕೆ 10,092 ಕೋಟಿ ರೂ. ನಮಗೆ ಬೇಕಾಗುತ್ತದೆ. ನಮ್ಮ ಕ್ಯಾಬಿನೆಟ್‌ನಲ್ಲೂ ಕೊಡೋದಕ್ಕೆ ತೀರ್ಮಾನ ಮಾಡಿದ್ದೇವೆ ಎಂದು ನುಡಿದರು.

    ನಾವು ಜೂನ್ 9 ರಂದು ಅಕ್ಕಿ ಕೋರಿ ಪತ್ರ ಬರೆದಿದ್ದೆವು. ಅಕ್ಕಿ ಕೊಡುತ್ತೇವೆ ಅಂತಾ ಒಪ್ಪಿ ಜೂನ್ 12 ರಂದು ಎಫ್‌ಸಿಐ ನಮಗೆ ಪತ್ರ ಬರೆದಿದ್ದರು. 2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಕೊಡೋದಕ್ಕೆ ಒಪ್ಪಿ ಪತ್ರ ಕಳಿಸಿದ್ರು. 13,819.485 ಮೆಟ್ರಿಕ್ ಟನ್ ಅಕ್ಕಿ ಕಳಿಸುವ ಬಗ್ಗೆ ಮತ್ತೊಂದು ಪತ್ರವನ್ನೂ ಬರೆದಿದ್ರು. ಒಟ್ಟು ಎರಡು ಒಪ್ಪಿಗೆ ಪತ್ರ ಬರೆದಿದ್ದರು. ಅದಾದ ಮೇಲೆ ಕೇಂದ್ರ ಸರ್ಕಾರ ಜೂನ್ 13 ರಂದು ಎಫ್‌ಸಿಐ ನವರಿಗೆ ಕೇಂದ್ರ ಸರ್ಕಾರದ ಗ್ರಾಹಕರ ಸರಬರಾಜು ಇಲಾಖೆ ಪತ್ರ ಬರೆದಿದೆ. ಓಪನ್ ಮಾರ್ಕೆಟ್ ನಲ್ಲಿ ಅಕ್ಕಿ, ಗೋದಿ ಮಾರಾಟ ನಿಲ್ಲಿಸುವ ಬಗ್ಗೆ ಕೇಂದ್ರ ಪತ್ರ ಬರೆದಿದೆ. ಗ್ರಾಹಕರ ಸರಬರಾಜು ಇಲಾಖೆಯಿಂದ ಎಫ್‌ಸಿಐಗೆ ಬರೆದ ಪತ್ರದಲ್ಲಿ ಅಕ್ಕಿ, ಗೋಧಿ ಮಾರಾಟ ಸ್ಥಗಿತ ಬಗ್ಗೆ ಪತ್ರ ಬರೆಯಲಾಗಿದೆ ಎಂದು ಪ್ರಸ್ತಾಪಿಸಿದರು.

    ಎಫ್‌ಸಿಐ ನಮ್ಮ ರಾಜ್ಯಕ್ಕೆ ಅಕ್ಕಿ ಕೊಡೋದಾಗಿ ಒಪ್ಪಿದ್ದರಿಂದ ನಾವು ಅಕ್ಕಿ ಜುಲೈ 1 ರಿಂದ ಕೊಡೋದಾಗಿ ಘೋಷಣೆ ಮಾಡಿದ್ವಿ. ಇವರ ಮೇಲೆ ನಂಬಿಕೆಯಿಟ್ಟು ಅಕ್ಕಿ ಕೊಡೋದಾಗಿ ಘೋಷಣೆ ಮಾಡಿದ್ದವು. ಈ ಕೇಂದ್ರ ಸರ್ಕಾರ ಈ ರೀತಿ ತೀರ್ಮಾನ ಮಾಡ್ತಿರೋದು ರಾಜಕೀಯ. ಈ ವಿಚಾರದಲ್ಲಿ ರಾಜಕೀಯ ಮಾಡಬಾರದಿತ್ತು. ಅಕ್ಕಿ ಇಟ್ಟುಕೊಂಡು ಕೊಡೋದಿಲ್ಲ ಅಂತಾ ಹೇಳ್ತಿರೋದು ಜನವಿರೋಧಿ ನೀತಿಯಾಗಿದೆ. ಈ ಯೋಜನೆಯಿಂದ ಕಾಂಗ್ರೆಸ್ ಸರ್ಕಾರದಕ್ಕೆ ಒಳ್ಳೆಯ ಹೆಸರು ಬರುತ್ತದೆ. ಅವರು ಜನಕಲ್ಯಾಣ ಕಾರ್ಯಕ್ರಮ ಮಾಡುತ್ತಿದ್ದಾರೆ ಎಂಬ ಅಸೂಯೆಯಿಂದ ಮಹಾತ್ವಾಕಾಂಶಿ ಯೋಜನೆಗೆ ಕೇಂದ್ರ ಸರ್ಕಾರ ಅಡ್ಡಗಾಲು ಹಾಕುವ ಪ್ರಯತ್ನ ಮಾಡ್ತಿದೆ ಎಂದು ಆಕ್ರೋಶ ಹೊರಹಾಕಿದರು.

    ಬೇರೆ ರಾಜ್ಯಗಳೊಂದಿಗೆ ಮಾತುಕತೆ: ನಮ್ಮ ಅನ್ನಭಾಗ್ಯ ಯೋಜನೆಯನ್ನ ನಿಲ್ಲಿಸೋದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ. ನಮಗೆ ಅಕ್ಕಿ ಸಿಗದಂತೆ ಮಾಡ್ತಿದೆ. ನಾವು ಈಗ ತೆಲಂಗಾಣ, ಛತ್ತೀಸ್‌ಗಡ, ತೆಲಂಗಾಣ ಸರ್ಕಾರದವರ ಜತೆ ಅಕ್ಕಿ ಕೊಡುವಂತೆ ಮಾತುಕತೆ ಮಾಡ್ತಿದೀವಿ. ಪಂಜಾಬ್‌ನಲ್ಲಿ ಅಕ್ಕಿ ಇಲ್ಲ ಅಂದಿದ್ದಾರೆ. ನಮ್ಮ ಸರ್ಕಾರ ಬಡವರ ಕಲ್ಯಾಣ ಮಾಡಲು ಹೊರಟರೇ ಕೇಂದ್ರದವರು ಅದಕ್ಕೆ ಅಡ್ಡಗಾಲು ಹಾಕ್ತಿದ್ದಾರೆ. ಕೇಂದ್ರ ಬಿಜೆಪಿ ಸರ್ಕಾರ ಬಡವರ ವಿರೋಧಿಗಳು. ಅಕ್ಕಿ ಇಟ್ಟುಕೊಂಡು ಇಲ್ಲಾ ಅಂತಿದ್ದಾರೆ. ಅವರೇನು ಪುಕ್ಕಟ್ಟೆ ಕೊಡಲ್ಲ. ದುಡ್ಡು ಕೊಡ್ತೀವಿ ಅಂದರೂ ಅಕ್ಕಿ ಇಲ್ಲ ಅಂತಿದ್ದಾರೆ ಎಂದಿ ಕಿಡಿ ಕಾರಿದರು.

  • ಹೊಸ ಮನೆ, ಹೊಸ ಬಾಡಿಗೆ ಮನೆಗಳಿಗೂ ಫ್ರೀ ಕರೆಂಟ್ – ಕೆ.ಜೆ.ಜಾರ್ಜ್ ಸ್ಪಷ್ಟನೆ

    ಹೊಸ ಮನೆ, ಹೊಸ ಬಾಡಿಗೆ ಮನೆಗಳಿಗೂ ಫ್ರೀ ಕರೆಂಟ್ – ಕೆ.ಜೆ.ಜಾರ್ಜ್ ಸ್ಪಷ್ಟನೆ

    ಬೆಂಗಳೂರು: ಹೊಸ ಮನೆಯವರು ಹಾಗೂ ಹೊಸ ಮನೆ ಬಾಡಿಗೆದಾರರಿಗೂ ಉಚಿತ ವಿದ್ಯುತ್ ನೀಡಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ (K.J.George) ತಿಳಿಸಿದರು.

    ಗೃಹಜ್ಯೋತಿ ಕಾರ್ಯಕ್ರಮ ಅನುಷ್ಠಾನ ವಿಚಾರವಾಗಿ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಉನ್ನತ ಮಟ್ಟದ ಸಭೆ ನಡೆಸಿದರು. ಬಳಿಕ ಮಾತನಾಡಿದ ಅವರು, ಹೊಸ ಮನೆಗಳಿಗೆ ದಾಖಲೆ ಇರಲ್ಲ. ಹಾಗಾಗಿ ಹೊಸ ಮನೆಗಳಿಗೂ ಫ್ರೀ ಕರೆಂಟ್ ನೀಡಲಾಗುವುದು. ಹೊಸದಾಗಿ ಸಂಪರ್ಕದ ಮನೆಗಳಿಗೆ, ಹೊಸ ಮನೆ ಬಾಡಿಗೆದಾರರಿಗೂ ಇದು ಅನ್ವಯವಾಗಲಿದೆ. ಒಂದು ವರ್ಷದ ತನಕ ಈ ನಿಯಮ ಇರುತ್ತದೆ. ಆ ಬಳಿಕ ಅವರು ಬಳಸಿದ ವಾರ್ಷಿಕ ಸರಾಸರಿ ಆಧಾರದ ಮೇಲೆ ಯೂನಿಟ್ ಮರು ಪರಿಷ್ಕರಣೆ ಮಾಡಲಾಗುವುದು. ಉಳಿದಂತೆ ಎಲ್ಲ ಉಚಿತ ಕರೆಂಟ್ ಮಾರ್ಗಸೂಚಿಗಳು ಹೊಸ ಮನೆ ಸಂಪರ್ಕ, ಹೊಸ ಮನೆ ಬಾಡಿಗೆದಾರರಿಗೆ ಅನ್ವಯವಾಗಲಿದೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ವಿದೇಶಿ ಪ್ರಜೆ ಮೇಲೆ ಬೆಂಗಳೂರಿನಲ್ಲಿ ಹಲ್ಲೆ ನಡೆಸಿದ್ದ ಪುಂಡ ಅರೆಸ್ಟ್‌

    ಹೊಸ ಮನೆಗೆ ಬರುವವರಿಗೆ ದಾಖಲೆ ಇರಲ್ಲ. ಅವರಿಗೆ 12 ತಿಂಗಳ ಸರಾಸರಿಯಂತೆ 53 ಯುನಿಟ್ ಮತ್ತು 10% ಹೆಚ್ಚುವರಿ ಸೇರಿಸಿ ಒಟ್ಟು 58 ಅಥವಾ 59 ಯೂನಿಟ್ ನೀಡಲಾಗುವುದು. ಹೊಸ ಮನೆಯ ಬಾಡಿಗೆದಾರರಿಗೂ ಇದು ಅನ್ವಯ. ಜೊತೆಗೆ ಆ ಆರ್‌ಆರ್ ನಂಬರ್‌ನಲ್ಲಿ ಇರುವ ಹಳೆಯ ಬಾಡಿಗೆದಾರರಿಗೂ ಅನ್ವಯವಾಗಲಿದೆ. ಅಂದಾಜು ಸಿಗದಿರುವ, ಹೊಸದಾಗಿ ಬಾಡಿಗೆಗೆ ಬರುವ ಮನೆಯವರಿಗೆ ಇದು ಅನ್ವಯಿಸುತ್ತದೆ. ಹೊಸ ಮನೆಯವರಿಗೆ, ಹೊಸ ಬಾಡಿಗೆಯವರಿಗೆ ಏನ್ ಮಾಡ್ತೀರಾ ಅನ್ನೋ ಪ್ರಶ್ನೆ ಬಂತು. ಅದಕ್ಕೆ ಈ ಹೊಸ ಸೂತ್ರ ಜಾರಿಗೆ ಬರಲಿದೆ. ಈ ಸರಾಸರಿ ಯುನಿಟ್ ಏಪ್ರಿಲ್ 1 ರಿಂದ ಮಾರ್ಚ್ 31 ರವರೆಗೆ ಅನ್ವಯಿಸಿ ಸರಾಸರಿ ಮಾಡಲಾಗ್ತಿದೆ ಎಂದು ಹೇಳಿದರು.

    ವಿದ್ಯುತ್ ದರ ಹೆಚ್ಚಳ ಕುರಿತು ಮಾತನಾಡಿ, ಅದು ಕೆಇಆರ್‌ಸಿ ತೀರ್ಮಾನ. ಅದನ್ನ ಸರ್ಕಾರ ಮಾಡಿಲ್ಲ. ಮೊದಲು ಮೂರು ಹಂತದಲ್ಲಿ ಸ್ಲಾಬ್ ಇತ್ತು. ಈಗ ಎರಡು ಹಂತದಲ್ಲಿ ಸ್ಲಾಬ್ ಮಾಡಲಾಗಿದೆ. ಈಗ 0-100 ಯೂನಿಟ್‌ಗೆ 4.75 ಪೈಸೆ ದರ ಹೆಚ್ಚಳ ಆಗಿದೆ. 101- ಎಲ್ಲಾ ಯೂನಿಟ್‌ಗೆ 7 ರೂ. ಹೆಚ್ಚಳವಾಗಿದೆ. ಈ ಹೊರೆ ಯಾವ ಗ್ರಾಹಕರಿಗೂ ಹೋಗ್ತಿಲ್ಲ. ರಾಜ್ಯ ಸರ್ಕಾರವೇ ಭರಿಸಿಕೊಳ್ತಿದೆ. ಯಾರ ಮೇಲೂ ಹೊರೆ ಮಾಡುವುದಿಲ್ಲ. ಹಿಂದೆ ಇದ್ದ ನಾಲ್ಕು ಸ್ಲಾಬ್‌ಗೆ ಹೋಗಬಹುದಾ ಅಂತ ಚರ್ಚೆ ಮಾಡುತ್ತೇವೆ. ಸಾಧ್ಯವಾದರೆ ಹಿಂದಿನ ರೀತಿ ಮಾಪನಕ್ಕೆ ಹೋಗಲು ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಉಚಿತ ವಿದ್ಯುತ್ ಘೋಷಣೆ ಬೆನ್ನಲ್ಲೇ ವ್ಯಾಪಾರಸ್ಥರಿಗೆ ಶಾಕ್ – ದರ ಏರಿಕೆ ಖಂಡಿಸಿ ಅಘೋಷಿತ ಬಂದ್

    ಮುಂಗಾರು ಕುರಿತು ಮಾತನಾಡಿ, ಸದ್ಯ ಮಳೆ ಕೊರತೆ ಅಂತ ಈಗಲೇ ಹೇಳಲು ಸಾಧ್ಯವಿಲ್ಲ. ಮಳೆ ಬರಲು ಇನ್ನೂ ಸಮಯ ಇದೆ. ಸೋಲಾರ್ ಮತ್ತು ವಿಂಡ್ ಎನರ್ಜಿ ಬಳಕೆ ಆಗ್ತಿದೆ. ಸದ್ಯಕ್ಕೆ ವಿದ್ಯುತ್ ಕೊರತೆ ಇಲ್ಲ. ಆಗಸ್ಟ್ ವರೆಗೂ ಮಳೆ ಬರುವ ನಿರೀಕ್ಷೆ ಇದೆ. ದೇವರ ಮೇಲೆ ಭಾರ ಹಾಕಿದ್ದೇವೆ ಎಂದರು.

  • ʼಶಕ್ತಿʼ ಯೋಜನೆ ಘೋಷಣೆಯಾದ 2ನೇ ದಿನವೇ ಮಹಿಳೆಯರ ಪರದಾಟ – ಬಸ್ ಫುಲ್ ರಶ್

    ʼಶಕ್ತಿʼ ಯೋಜನೆ ಘೋಷಣೆಯಾದ 2ನೇ ದಿನವೇ ಮಹಿಳೆಯರ ಪರದಾಟ – ಬಸ್ ಫುಲ್ ರಶ್

    ರಾಮನಗರ: ಶಕ್ತಿ ಯೋಜನೆ (Shakti Scheme) ಘೋಷಣೆಯಾದ ಎರಡನೇ ದಿನವೇ ಪ್ರಯಾಣಿಕರ ಪರದಾಟ ನಡೆಸಿದ ಘಟನೆ ರಾಮನಗರದಲ್ಲಿ (Ramanagara) ಬಸ್ ನಿಲ್ದಾಣದಲ್ಲಿ ನಡೆದಿದೆ.

    ಬಸ್ ಹತ್ತಲಾಗದೇ ಪ್ರಯಾಣಿಕರು ಪರದಾಡಿದ್ದಾರೆ. ಬೆಂಗಳೂರು ಕಡೆಗೆ ಹೋಗುವ ಬಸ್‌ಗಳು ಫುಲ್ ರಶ್ ಆಗಿದ್ದು, ನಿತ್ಯ ಕೆಲಸಕ್ಕೆ ಹೋಗುವವರು, ಕಾಲೇಜು ವಿದ್ಯಾರ್ಥಿಗಳು ಬಸ್ ಹತ್ತಲಾಗದೇ ಪರದಾಡಿದ್ದಾರೆ. ಇದನ್ನೂ ಓದಿ: ʼಶಕ್ತಿʼ ಯೋಜನೆ ಉದ್ಘಾಟನೆ ಜೋಶ್‌ನಲ್ಲಿ ಸರ್ಕಾರಿ ಬಸ್ ಚಲಾಯಿಸಿ ಸ್ವಾಮೀಜಿ ಅಚಾತುರ್ಯ

    ಬಸ್ ರಶ್ ಆಗಿದ್ರೂ ಕೆಲವರು ಡೋರ್‌ನಲ್ಲೇ ನಿಂತು ಪ್ರಯಾಣ ಮಾಡಿದ್ದಾರೆ. ಸರಿಯಾದ ಪ್ರಮಾಣದಲ್ಲಿ ಬಸ್ ವ್ಯವಸ್ಥೆ ಮಾಡದ ಕೆಎಸ್‌ಆರ್‌ಟಿಸಿ ಅಧಿಕಾರಿಗಳ ವಿರುದ್ಧ ಕಿಡಿಕಾರಿದ ಮಹಿಳೆಯರು, ಉಚಿತ ಪ್ರಯಾಣಕ್ಕೆ ಅವಕಾಶ ಕೊಟ್ರೆ ಸಾಲದು. ಸಮರ್ಪಕ ಬಸ್ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿದ್ದಾರೆ.

    ರೈಲಿನಲ್ಲಿ ಸಂಚರಿಸುತ್ತಿದ್ದ ಮಹಿಳಾ ಪ್ರಯಾಣಿಕರು ಶಕ್ತಿ ಯೋಜನೆ ಅನುಕೂಲ ಪಡದುಕೊಳ್ಳಲು ಕೆಎಸ್‌ಆರ್‌ಟಿಸಿ ಬಸ್ ಕಡೆ ಮುಖ ಮಾಡಿರೋದು ಬಸ್ ರಶ್ ಆಗಿರೋದಕ್ಕೆ ಕಾರಣ ಎನ್ನಲಾಗುತ್ತಿದೆ. ಇದರಿಂದಾಗಿ ಪುರುಷ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಅಲ್ಲದೇ ಪ್ರಯಾಣಿಕರ ಸಂಖ್ಯೆ ಇನ್ನೂ ಹೆಚ್ಚಳವಾಗುವ ಸಾಧ್ಯತೆ ಇದ್ದು, ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಸ್ ನಿಯೋಜಿಸುಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಮೈಸೂರಿನಲ್ಲಿ ಭೀಕರ ರಸ್ತೆ ಅಪಘಾತ – ಗ್ರಾಪಂ ಸದಸ್ಯ ಸ್ಥಳದಲ್ಲೇ ಸಾವು

  • ʼಶಕ್ತಿʼ ಯೋಜನೆಯನ್ನ 10 ವರ್ಷವೂ ಉಚಿತ ಕೊಡ್ತೀವಿ: ರಾಮಲಿಂಗಾ ರೆಡ್ಡಿ

    ʼಶಕ್ತಿʼ ಯೋಜನೆಯನ್ನ 10 ವರ್ಷವೂ ಉಚಿತ ಕೊಡ್ತೀವಿ: ರಾಮಲಿಂಗಾ ರೆಡ್ಡಿ

    ಬೆಂಗಳೂರು: ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಯೋಜನೆ (Free Bus Travel) ಒಂದೇ ವರ್ಷ ಇರೋದು ಅಂತ ಬಿಜೆಪಿಯವರು ಹೇಳ್ತಾರೆ. ಆದರೆ ಈ ಯೋಜನೆ 5 ವರ್ಷ ಪೂರ್ತಿ ಇರುತ್ತೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಹೇಳಿದರು.

    ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆ ‘ಶಕ್ತಿ’ಗೆ ವಿಧಾನಸೌಧದಲ್ಲಿ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮತ್ತೆ ಚುನಾವಣೆ ಆಗಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ. ಆಮೇಲೂ ಉಚಿತ ಕೊಡ್ತೀವಿ. 10 ವರ್ಷವೂ ಉಚಿತ ಕೊಡ್ತೀವಿ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಕಪ್ಪು ಹಣ ತಂದು ನಮ್ಮ ಅಕೌಂಟ್‌ಗೆ ಹಾಕ್ಲಿಲ್ಲ; ಬಿಜೆಪಿ ವಿರುದ್ಧ ನಾವು ಅಭಿಯಾನ ಮಾಡ್ಬೇಕಾಗುತ್ತೆ – ಡಿಕೆಶಿ

    ಬಸ್ ಸ್ಟಾಪ್ ಇರೋ ಕಡೆ ಬಸ್ ಕಡ್ಡಾಯವಾಗಿ ನಿಲ್ಲಿಸಬೇಕು. ನಮ್ಮ ಇಲಾಖೆಗೆ ಒಳ್ಳೆ ಹೆಸರು ತರಬೇಕು. ನನ್ನ ಅವಧಿಯಲ್ಲಿ 203 ಪ್ರಶಸ್ತಿ ಇಲಾಖೆಗೆ ಬಂದಿತ್ತು. ಬಿಜೆಪಿ ಅವಧಿಯಲ್ಲಿ 50 ಪ್ರಶಸ್ತಿ ಮಾತ್ರ ಬಂದಿದೆ. ಕಾರ್ಪೋರೇಷನ್ ನಷ್ಟದಲ್ಲಿ ಇದೆ, ಹೇಗೆ ನಡೆಸುತ್ತಾರೆ ಅಂತ ಹೇಳ್ತಾರೆ. ಪ್ರತಿ ತಿಂಗಳು ಲೆಕ್ಕ ಕೊಡ್ತೀವಿ. ಎಷ್ಟು ಜನ ಓಡಾಡುತ್ತಾರೆ ಅಂತ ಲೆಕ್ಕ ಕೊಡ್ತೀವಿ. ಮಹಿಳೆಯರ ಸಬಲೀಕರಣಕ್ಕೆ ಈ ಯೋಜನೆ ಜಾರಿ ಮಾಡಿದ್ದೇವೆ ಎಂದು ಬಿಜೆಪಿಗೆ ತಿರುಗೇಟು ನೀಡಿದರು.

    ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು 20 ದಿನ ಆಗಿದೆ‌. ನುಡಿದಂತೆ ನಡೆಯುವ ಸರ್ಕಾರ ಇದ್ದರೆ ದೇಶದಲ್ಲಿ ಅದು ಕಾಂಗ್ರೆಸ್ ಸರ್ಕಾರ. ನುಡಿದಂತೆ ನಡೆಯೋದು ನಮಗೆ ಹೊಸದಲ್ಲ. 2013 ರಲ್ಲಿ 165 ಭರವಸೆಗಳಲ್ಲಿ ಪೈಕಿ 158 ಭರವಸೆ ಈಡೇರಿಸಿದ್ದೇವೆ. 2018 ರಲ್ಲಿ ಸೋತೆವು. ಬಿಜೆಪಿ 600 ಆಶ್ವಾಸನೆ ಕೊಟ್ಟಿದ್ರು. ಆದರೆ 60 ಮಾತ್ರ ಈಡೇರಿಕೆ ಮಾಡಿದ್ರು. ಬಿಜೆಪಿಗೂ ನಮಗೂ ಅಜಗಜಾಂತರ ವ್ಯತ್ಯಾಸ ಇದೆ. ನಾವು ನುಡಿದಂತೆ ನಡೆಯುತ್ತೇವೆ‌ ಎಂದು ಬಿಜೆಪಿ ವಿರುದ್ಧ ಗುಡುಗಿದರು. ಇದನ್ನೂ ಓದಿ: ‘ಶಕ್ತಿ’ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ

    ಇಂದಿನಿಂದ ಶಕ್ತಿ ಯೋಜನೆ ಪ್ರಾರಂಭ ಆಗುತ್ತೆ‌. ಎಲ್ಲಾ ಮಹಿಳೆಯರಿಗೆ ಉಚಿತ ಪ್ರಯಾಣ ಇರುತ್ತದೆ. ರಾಹುಲ್ ಗಾಂಧಿ ಘೋಷಣೆ ಮಾಡಿದ್ರು. ಇಂದು ಜಾರಿ ಮಾಡ್ತಿದ್ದೇವೆ. ಎಲ್ಲಾ ಹೆಣ್ಣುಮಕ್ಕಳು ಉಪಯೋಗ ಮಾಡಿಕೊಳ್ಳಬಹುದು. ರಾಜ್ಯದ ಯಾವುದೇ ಮೂಲೆಗೆ ಹೋಗಬಹುದು. 3 ತಿಂಗಳಲ್ಲಿ ಸ್ಮಾರ್ಟ್ ಕಾರ್ಡ್ ಕೊಡ್ತೀವಿ. ಅಲ್ಲಿವರೆಗೂ ಒಂದು ಗುರುತಿನ ಚೀಟಿ ಇಟ್ಟುಕೊಂಡು ಓಡಾಡಿ. ಸ್ಮಾರ್ಟ್ ಕಾರ್ಡ್ ಕೂಡಾ ನಾವೇ ಉಚಿತವಾಗಿ ಕೊಡ್ತೀವಿ. ಅದಕ್ಕೂ ನಾವೇ ಹಣ ಭರಿಸುತ್ತೇವೆ ಎಂದು ತಿಳಿಸಿದರು.

  • ಕಪ್ಪು ಹಣ ತಂದು ನಮ್ಮ ಅಕೌಂಟ್‌ಗೆ ಹಾಕ್ಲಿಲ್ಲ; ಬಿಜೆಪಿ ವಿರುದ್ಧ ನಾವು ಅಭಿಯಾನ ಮಾಡ್ಬೇಕಾಗುತ್ತೆ – ಡಿಕೆಶಿ

    ಕಪ್ಪು ಹಣ ತಂದು ನಮ್ಮ ಅಕೌಂಟ್‌ಗೆ ಹಾಕ್ಲಿಲ್ಲ; ಬಿಜೆಪಿ ವಿರುದ್ಧ ನಾವು ಅಭಿಯಾನ ಮಾಡ್ಬೇಕಾಗುತ್ತೆ – ಡಿಕೆಶಿ

    ಬೆಂಗಳೂರು: ಕಪ್ಪು ಹಣ ತಂದು ನಮ್ಮ ಅಕೌಂಟ್‌ಗೆ ಹಾಕಲೇ ಇಲ್ಲ. ಈಗ ನಾವು ಅವರ ಮೇಲೆ ಅಭಿಯಾನ ಶುರು ಮಾಡಬೇಕಾಗುತ್ತದೆ ಎಂದು ಬಿಜೆಪಿ ವಿರುದ್ಧ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ (DK Shivakumar) ಕಿಡಿಕಾರಿದರು.

    ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆ ‘ಶಕ್ತಿ’ಗೆ ವಿಧಾನಸೌಧದಲ್ಲಿ ಇಂದು ಚಾಲನೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಬಸವಣ್ಣನ ನಾಡಿನಲ್ಲಿದ್ದೇವೆ. ನುಡಿದಂತೆ ನಡೆಯೋದು ಕಾಂಗ್ರೆಸ್ ಶಕ್ತಿ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ. ಟೀಕೆ ಮಾಡೋದ್ರಿಂದ ವಿರೋಧ ಪಕ್ಷಗಳನ್ನು ತಿದ್ದೋ ಕೆಲಸ ಮಾಡ್ತೀವಿ ಎಂದು ತಿಳಿಸಿದರು. ಇದನ್ನೂ ಓದಿ: ನಮ್ಗೆ ಫ್ರೀ ಟಿಕೆಟ್ ಬೇಡ್ವೇಬೇಡ, ದಯವಿಟ್ಟು ಎಣ್ಣೆ ರೇಟು ಇಳಿಸಿ: ಯುವಕ ಮನವಿ

    ಬಿಜೆಪಿಯವರು ಕಪ್ಪು ಹಣ ತಂದು ಅಕೌಂಟ್‌ಗೆ ಹಾಕಲಿಲ್ಲ. ಆದಾಯ ಡಬಲ್‌ ಮಾಡಲಿಲ್ಲ. ಯುವಕರಿಗೆ ಉದ್ಯೋಗಗಳನ್ನು ಕೊಡಲಿಲ್ಲ. ನಾವು ಬಿಜೆಪಿ ವಿರುದ್ದ ಅಭಿಯಾನ ಆರಂಭಿಸಬೇಕಾಗುತ್ತದೆ ಎಂದು ಲೇವಡಿ ಮಾಡಿದರು.

    ಇವತ್ತು ಪವಿತ್ರವಾದ ದಿನ. ಜನರನ್ನು ಸಂತೋಷ ಪಡಿಸುವುದೇ ನಿಜವಾದ ಈಶ್ವರನ ಪೂಜೆ. ನಾನು ಈಗ ಈಶ್ವರನ ಪೂಜೆ ಮಾಡಿ ಬಂದಿದ್ದೇನೆ. ಜನರಲ್ಲಿ ಈಶ್ವರನನ್ನ ನೋಡುತ್ತಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ‘ಶಕ್ತಿ’ ಯೋಜನೆಯ ಮಹಿಳೆಯರ ಉಚಿತ ಟಿಕೆಟ್‌ ಹೇಗಿರುತ್ತೆ ಗೊತ್ತಾ?

    ವಿಧಾನಸೌಧದ ಮುಂಭಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಕ್ತಿ ಯೋಜನೆಯನ್ನು ಉದ್ಘಾಟಿಸಿದರು. ಮಧ್ಯಾಹ್ನ 1 ಗಂಟೆಯ ನಂತರ ಎಲ್ಲ ಮಹಿಳೆಯರು, ವಿದ್ಯಾರ್ಥಿನಿಯರಿಗೆ ಈ ಸೌಲಭ್ಯ ಸಿಗಲಿದೆ. 18,609 ಬಸ್‌ಗಳು ಉಚಿತ ಪ್ರಯಾಣಕ್ಕೆ ಲಭ್ಯ ಇವೆ. 41.80 ಲಕ್ಷ ಮಹಿಳೆಯರು ಈ ಸೌಲಭ್ಯದ ಫಲಾನುಭವಿಗಳು ಎಂದು ಅಂದಾಜಿಸಲಾಗಿದೆ.

  • ನಾವು ನುಡಿದಂತೆ ನಡೆಯುವವರು ಎಂಬುದಕ್ಕೆ ಶಕ್ತಿ ಯೋಜನೆಯೇ ಸಾಕ್ಷಿ: ದಿನೇಶ್ ಗುಂಡೂರಾವ್

    ನಾವು ನುಡಿದಂತೆ ನಡೆಯುವವರು ಎಂಬುದಕ್ಕೆ ಶಕ್ತಿ ಯೋಜನೆಯೇ ಸಾಕ್ಷಿ: ದಿನೇಶ್ ಗುಂಡೂರಾವ್

    ಬೆಂಗಳೂರು: ಮಹಿಳೆಯರ ಉಚಿತ ಬಸ್ (Free Bus Ticket For Women) ಪ್ರಯಾಣಕ್ಕೆ ಇಂದು ಚಾಲನೆ ಸಿಗಲಿದ್ದು, ನಾವು ನುಡಿದಂತೆ ನಡೆಯುವವರು ಎಂಬುದಕ್ಕೆ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಶಕ್ತಿ ಯೋಜನೆ’ಯೇ ಸಾಕ್ಷಿ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ (Dinesh Gundurao) ಹೇಳಿದ್ದಾರೆ.

    ಈ ಸಂಬಂಧ ಸರಣಿ ಟ್ವೀಟ್ (Tweet) ಮಾಡಿರುವ ಅವರು ತಮ್ಮ ವಿರೋಧಿಗಳಿಗೆ ಹಾಗೂ ಬಿಜೆಪಿ ನಾಯಕರ ಹೇಳಿಕೆಗಳಿಗೆ ಟಾಂಗ್ ನೀಡಿದರು. ಇದನ್ನೂ ಓದಿ: ಇಂದು ಐತಿಹಾಸಿಕ ಕ್ಷಣಕ್ಕೆ ಕರ್ನಾಟಕ ಸಾಕ್ಷಿ- 4 ಕಿ.ಮೀ ಬಸ್‍ನಲ್ಲಿ ಸಿಎಂ ಸಂಚಾರ

    ಟ್ವೀಟ್‍ನಲ್ಲೇನಿದೆ..?: ನಮ್ಮ ಸರ್ಕಾರದ 5 ಗ್ಯಾರಂಟಿಗಳ (Congress 5 Guarantee) ಪೈಕಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ‘ಶಕ್ತಿ’ ಯೋಜನೆ ಇಂದಿನಿಂದ ಅನುಷ್ಠಾನವಾಗಲಿದೆ. ನಾವು ಅಧಿಕಾರಕ್ಕೆ ಬಂದ 1 ತಿಂಗಳ ಒಳಗೇ ಈ ಯೋಜನೆ ಅನುಷ್ಠಾನವಾಗುತ್ತಿರುವುದು ಸಾರ್ಥಕತೆ ಮೂಡಿಸಿದೆ. ನಾನು ಉಸ್ತುವಾರಿಯಾಗಿರುವ ದಕ್ಷಿಣ ಕನ್ನಡದ ಬಿಜೈನ KSRTC ನಿಗಮದಲ್ಲಿ ನಾನು ಈ ಯೋಜನೆಗೆ ಇಂದು ಚಾಲನೆ ನೀಡಲಿದ್ದೇನೆ.

    ಚುನಾವಣಾ ಪೂರ್ವದಲ್ಲಿ ನಾವು ಕೊಟ್ಟ 5 ಗ್ಯಾರಂಟಿಗಳ ಬಗ್ಗೆ ಬಿಜೆಪಿಯವರು ಹಾಗೂ ಕೆಲ ಪಟ್ಟಭಧ್ರ ಹಿತಾಸಕ್ತಿಗಳು ಅಪಪ್ರಚಾರ ನಡೆಸಿದ್ದರು. ಈ ಯೋಜನೆಗಳು ಅನುಷ್ಟಾನವಾಗುವುದೇ ಇಲ್ಲ ಎಂದು ಜನರಲ್ಲಿ ಗೊಂದಲ ಮೂಡಿಸಿದ್ದರು. ಆದರೆ ನಾವು ನುಡಿದಂತೆ ನಡೆಯುವವರು ಎಂಬುದಕ್ಕೆ ಇಂದಿನಿಂದ ಅನುಷ್ಠಾನವಾಗುತ್ತಿರುವ ‘ಶಕ್ತಿ’ ಯೋಜನೆಯೇ ಸಾಕ್ಷಿ.

    ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ‘ಶಕ್ತಿ’ ಯೋಜನೆ ಅನುಷ್ಠಾನವಾಗುತ್ತಿರುವುದು ನಾವು ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಪ್ರತೀಕ. ಇದೇ ರೀತಿ ‘ಅನ್ನಭಾಗ್ಯ’,’ಗೃಹಲಕ್ಷ್ಮಿ’, ‘ಗೃಹಜ್ಯೋತಿ’ ಮತ್ತು ‘ಯುವನಿಧಿ’ ಯೋಜನೆಗಳು ಕೂಡ ಜಾರಿಯಾಗಲಿವೆ. ಈ ಬಗ್ಗೆ ರಾಜಕೀಯ ವಿರೋಧಿಗಳು ಎಷ್ಟೇ ಅಪಪ್ರಚಾರ ಮಾಡಲಿ, ಈ ಯೋಜನೆಗಳು ಜನರಿಗೆ ತಲುಪುವುದು ಖಚಿತ ಎಂದು ಬರೆದುಕೊಂಡಿದ್ದಾರೆ.

    ಒಟ್ಟಿನಲ್ಲಿ ಇಂದಿನಿಂದ ಮಹಿಳೆಯರು ರಾಜ್ಯಾದ್ಯಂತ ಉಚಿತವಾಗಿ ಪ್ರಯಾಣಿಸಬಹುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫ್ರೀ ಬಸ್‍ಗೆ ಚಾಲನೆ ನೀಡಲಿದ್ದಾರೆ.

     

  • 100 ಯೂನಿಟ್ ಬಳಸುವವರಿಗೆ 200 ಯೂನಿಟ್ ಯಾಕೆ ಕೊಡ್ಬೇಕು – ಸಿಎಂ ಪ್ರಶ್ನೆ

    100 ಯೂನಿಟ್ ಬಳಸುವವರಿಗೆ 200 ಯೂನಿಟ್ ಯಾಕೆ ಕೊಡ್ಬೇಕು – ಸಿಎಂ ಪ್ರಶ್ನೆ

    ಮೈಸೂರು: ಒಂದು ವರ್ಷದಲ್ಲಿ 100 ಯೂನಿಟ್ ವಿದ್ಯುತ್ (200 Unit Electricity) ಬಳಸುವವರಿಗೆ 200 ಯೂನಿಟ್ ಯಾಕೆ ಕೊಡಬೇಕು. ಇದು ದುರುಪಯೋಗ ಅಲ್ವಾ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಪ್ರಶ್ನಿಸಿದರು.

    ಮೈಸೂರಿನ ವರುಣಾ ಕ್ಷೇತ್ರದಲ್ಲಿ (Varuna Constituency) ನಡೆದ ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿದ ಅವರು, ಗ್ಯಾರಂಟಿ (Congress Guarantee) ಯೋಜನೆಗಳಿಗೆ ಖರ್ಚಾಗುವ ಹಣ 59 ಸಾವಿರ ಕೋಟಿ ರೂ., ಉಳಿದ ಅವಧಿಗೆ ಬೇಕಾಗಿರುವ ಹಣ 41 ಸಾವಿರ ಕೋಟಿ ರೂ. ಪ್ರಧಾನಿ ಮೋದಿ (Narendra Modi) ಅವರು ಗ್ಯಾರಂಟಿ ಯೋಜನೆ ಜಾರಿಗೆ ತರಲು ಸಾಧ್ಯವಿಲ್ಲ, ರಾಜ್ಯ ದಿವಾಳಿಯಾಗುತ್ತೆ ಅಂತಾ ಹೇಳಿದ್ರು. ಬದಲಾಗಿ ಕೈ ಜೋಡಿಸುವ ಮಾತನ್ನಾಡಬೇಕಿತ್ತು ಎಂದು ಹೇಳಿದರು. ಇದನ್ನೂ ಓದಿ: ನನಗೆ ಜೀರೊ ಟ್ರಾಫಿಕ್‌ ಯಾಕೆ ಕೊಟ್ರಿ – ಪೊಲೀಸ್‌ ಆಯುಕ್ತರ ಮೇಲೆ ಸಿಎಂ ಗರಂ

    ಎಲ್ಲರೂ 200 ಯೂನಿಟ್ ಫ್ರೀ ಕೊಡಿ ಅಂತಿದ್ದಾರೆ. ಯಾರು 190, 180, 70 ಯೂನಿಟ್ ಬಳಸುತ್ತಾರೋ ಅವೆಲ್ಲರಿಗೂ ಉಚಿತ ಇದೆ. ಅದಕ್ಕೆ ಒಂದು ವರ್ಷದ ಆವೇರೆಜ್ ತೆಗೆದುಕೊಳ್ಳಲು ಹೇಳಿದ್ದೇನೆ. ಅದರ ಜೊತೆಗೆ ಶೇ.10 ಹೆಚ್ಚುವರಿ ಫ್ರೀ ಇರುತ್ತೆ. ಒಂದು ವರ್ಷದಲ್ಲಿ 100 ಯೂನಿಟ್ ಬಳಸುವವರಿಗೆ 200 ಯೂನಿಟ್ ಯಾಕೆ ಕೊಡಬೇಕು? ಇದು ದುರುಪಯೋಗ ಅಲ್ವಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಟೈಗರ್‌ ವಿನೋದ್‌ ಪ್ರಭಾಕರ್‌, ಸೌಂದರ್ಯ ಜಯಮಾಲಾ ಭೇಟಿ; ಬಾಲ್ಯದ ದಿನಗಳಿಗೆ ಜಾರಿದ ಅಣ್ಣ-ತಂಗಿ

    ಗೃಹಲಕ್ಷ್ಮಿ ಯೋಜನೆ ಕುರಿತು ಮಾತನಾಡಿ, ಕರ್ನಾಟಕದಲ್ಲಿ ಸುಮಾರು 1 ಕೋಟಿ 28 ಲಕ್ಷ ಕುಟುಂಬಗಳಿದ್ದು, ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂ. ಕೊಡುತ್ತೇವೆ. ಅತ್ತೆ ಯಜಮಾನಿಯಾದ್ರೆ ಅತ್ತೆಗೆ, ಸೊಸೆ ಯಜಮಾನಿಯಾದ್ರೆ ಸೊಸೆಗೆ ಕೊಡುತ್ತೇವೆ. ಅದರಲ್ಲಿ IT, GST ಟ್ಯಾಕ್ಸ್ ನೋಂದಣಿ ಮಾಡಿಸಿರುವವರಿಗೆ ಇಲ್ಲ ಎಂದು ಹೇಳಿದರು.

    ಜುಲೈ 1 ರಿಂದ ಅನ್ನಭಾಗ್ಯ ಜಾರಿ: ಜುಲೈ 1 ರಿಂದಲೇ ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆ ಜಾರಿಗೆ ಬರಲಿದೆ ಎಂದ ಸಿಎಂ ರಸಗೊಬ್ಬರದ ದರ ನಾವು ನಿಗದಿ ಮಾಡಲ್ಲ, ಮೋದಿ ಸರ್ಕಾರ ಮಾಡೋದು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿಯೂ ನಾವು ಅಧಿಕಾರಕ್ಕೆ ಬಂದೇ ಬರುತ್ತೇವೆ. ಆಗ ಎಲ್ಲಾ ಬೆಲೆಗಳನ್ನ ಕಡಿಮೆ ಮಾಡುತ್ತೇವೆ ಎಂದು ಭರವಸೆ ನೀಡಿದರು.

  • ಗಂಡ ತೆರಿಗೆ ಪಾವತಿ ಮಾಡಿದ್ರೆ ಮಾತ್ರ ಗೃಹಲಕ್ಷ್ಮಿ ಭಾಗ್ಯ ಇಲ್ಲ – ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ

    ಗಂಡ ತೆರಿಗೆ ಪಾವತಿ ಮಾಡಿದ್ರೆ ಮಾತ್ರ ಗೃಹಲಕ್ಷ್ಮಿ ಭಾಗ್ಯ ಇಲ್ಲ – ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ

    ಬೆಂಗಳೂರು: ಗಂಡ ಆದಾಯ ತೆರಿಗೆ ಪಾವತಿಸುತ್ತಿದ್ದರೆ ಮಾತ್ರ ಗೃಹಲಕ್ಷ್ಮಿ (Gruha lakshmi) ಯೋಜನೆಯ ಹಣ ಸಿಗುವುದಿಲ್ಲ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಶುಕ್ರವಾರ ಸ್ಪಷ್ಟನೆ ನೀಡಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಗೃಹಲಕ್ಷ್ಮಿ ಯೋಜನೆಯ ಅರ್ಜಿಯ ಚಿತ್ರ ವೈರಲ್ ಆಗುತ್ತಿರುವುದು, ಡ್ರಾಫ್ಟ್ ಮಾತ್ರ. ಆದರೆ ಅದರಲ್ಲಿ ಕೆಲವು ಬದಲಾವಣೆ ಮಾಡಲಿದ್ದೇವೆ. ಅದರಲ್ಲಿ ಬ್ಯಾಂಕ್ ಪಾಸ್‍ಬುಕ್ ಸೇರಿಸಲಾಗುವುದು. ಜಾತಿ ಬದಲಿಗೆ ವರ್ಗ ಎಂದು ಬದಲಾಯಿಸಲಾಗುವುದು. 90% ಬಿಪಿಎಲ್ ಕಾರ್ಡ್ ಮಹಿಳೆಯರೇ ಯೋಜನೆಯ ಪ್ರಮುಖ ಫಲಾನುಭವಿಗಳಾಗಲಿದ್ದಾರೆ. ಈ ಬಗ್ಗೆ ಆ. 17 ಅಥವಾ 18ರಂದು ಬೆಳಗಾವಿಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಧಾರ್ಮಿಕ ಮತಾಂತರಕ್ಕೆ ಬಾಲಿವುಡ್ ಕಾರಣ: ಐಎಎಸ್ ಅಧಿಕಾರಿ ನಿಯಾಜ್ ಖಾನ್

    ಗುರುವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ, ಮಗ ಆದಾಯ ತೆರಿಗೆ ಪಾವತಿಸುತ್ತಿದ್ದರೆ, ತಾಯಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಸಿಗುವುದಿಲ್ಲ ಎಂದು ಹೇಳಿದ್ದರು. ಇದು ರಾಜ್ಯದ ಜನರಲ್ಲಿ ಗೊಂದಲ ಮೂಡಿಸಿತ್ತು. ಈಗ ಸಚಿವೆ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ. ಆ ಮೂಲಕ ಗೊಂದಲಕ್ಕೆ ತೆರೆ ಎಳೆದಿದ್ದಾರೆ. ಇದನ್ನೂ ಓದಿ: ಅಸ್ಸಾಂ, ಲಡಾಖ್‍ನಲ್ಲಿ ಕಂಪಿಸಿದ ಭೂಮಿ – ರಿಕ್ಟರ್ ಮಾಪಕದಲ್ಲಿ 3.7 ತೀವ್ರತೆ ದಾಖಲು

  • ಕಾಂಗ್ರೆಸ್ ಗ್ಯಾರಂಟಿಗಳಿಂದಲೇ ನಮಗೆ ಸೋಲು – ಬಿಜೆಪಿ ಆತ್ಮಾವಲೋಕನ ಸಭೆಯಲ್ಲಿ ಏನಾಯ್ತು?

    ಕಾಂಗ್ರೆಸ್ ಗ್ಯಾರಂಟಿಗಳಿಂದಲೇ ನಮಗೆ ಸೋಲು – ಬಿಜೆಪಿ ಆತ್ಮಾವಲೋಕನ ಸಭೆಯಲ್ಲಿ ಏನಾಯ್ತು?

    ಬೆಂಗಳೂರು: ಕರ್ನಾಟಕದ ಚುನಾವಣೆಯಲ್ಲಿ ಸೋತ ಬಿಜೆಪಿ (BJP) ಆತ್ಮಾವಲೋಕನ ಸಭೆ ನಡೆಸಿ ಸೋಲಿಗೆ ಕಾರಣ ಹುಡುಕುವ ಪ್ರಯತ್ನ ನಡೆಸಿದೆ. ಸಭೆಯಲ್ಲಿ ಕಾಂಗ್ರೆಸ್‍ನ ಗ್ಯಾರಂಟಿಗಳಿಂದಲೇ ಸೋಲಾದ ಬಗ್ಗೆ ಹೆಚ್ಚಿನವರು ಅಭಿಪ್ರಾಯಪಟ್ಟಿದ್ದಾರೆ.

    ಬಿಜೆಪಿಯ ಪ್ರಣಾಳಿಕೆ ಕಾಂಗ್ರೆಸ್‍ನ ಪ್ರಣಾಳಿಕೆಯಷ್ಟು ಚೆನ್ನಾಗಿರಲಿಲ್ಲ. ಕಾಂಗ್ರೆಸ್ ನಾಯಕರು ಪ್ರಚಾರದ ಕಡೆ 5 ಗ್ಯಾರಂಟಿಗಳ ಬಗ್ಗೆಯೇ ಮಾತನಾಡುತ್ತಿದ್ದರು. ನಮ್ಮ ಭರವಸೆಗಳು ಜನರನ್ನು ತಲುಪುವಲ್ಲಿ ವಿಫಲವಾಗಿದ್ದೆ ಸೋಲಿಗೆ ಪ್ರಮುಖ ಕಾರಣ ಎಂದು ನಾಯಕರು ತಿಳಿಸಿದ್ದಾರೆ. ಇದನ್ನೂ ಓದಿ: ಸಿದ್ರಾಮಯ್ಯ ಸಾಲ ಮನ್ನಾ ಅಂದಿದ್ರು, ನಾವ್ ದುಡ್ಡು ಕಟ್ಟಲ್ಲ – ಬ್ಯಾಂಕ್ ಸಿಬ್ಬಂದಿಗೆ ಸ್ತ್ರಿಶಕ್ತಿ ಸಂಘದ ಮಹಿಳೆಯರಿಂದ ಕ್ಲಾಸ್

    ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿದ ಮಾಹಿತಿ ಪ್ರಕಾರ, ಮೂಲ ಪಕ್ಷದವರಿಗೆ ಪ್ರಣಾಳಿಕೆ ರಚನೆ ಹೊಣೆ ಕೊಡ ಬೇಕಿತ್ತು ಎಂದು ಕೆಲವರು ಆಕ್ರೋಶ ಹೊರ ಹಾಕಿದ್ದಾರೆ. ಈ ಮೂಲಕ ಡಾ.ಕೆ.ಸುಧಾಕರ್ ಅವರಿಗೆ ಪ್ರಣಾಳಿಕೆ ಹೊಣೆ ನೀಡಿದ್ದಕ್ಕೆ ಕೆಲವರ ಅಸಮಧಾನ ಹೊರಹಾಕಿದ್ದಾರೆ.

    ಸ್ಥಳೀಯ ಸಚಿವರನ್ನು ಬಿಟ್ಟು ಬೇರೆ ಜಿಲ್ಲೆಗಳಿಗೆ ಉಸ್ತುವಾರಿ ನೀಡಿದ್ದು ಸಹ ಚುನಾವಣೆ ಸೋಲಿಗೆ ಪ್ರಮುಖ ಕಾರಣವಾಗಿದೆ. ಸ್ಥಳೀಯ ಕ್ಷೇತ್ರಗಳಲ್ಲಿ ಸಚಿವರಾಗಿದ್ದಂತವರಿಗೆ ಮೂಲ ಜಿಲ್ಲೆಗಳ ಉಸ್ತುವಾರಿ ಕೊಡಬೇಕಿತ್ತು. ಅದು ಬಿಟ್ಟು ಬೇರೆ ಯಾವುದೋ ಜಿಲ್ಲೆಗೆ ಉಸ್ತುವಾರಿ ನೀಡಲಾಗಿತ್ತು ಎಂದು ಕೆಲವರು ಬೇಸರ ಹೊರಕಾಕಿದ್ದಾರೆ.

    ಬೇರೆ ಜಿಲ್ಲೆಗಳಿಗೆ ತೆರಳಿ ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯ ದಿನಾಚರಣೆಗೆ ಧ್ವಜಾರೋಹಣ ಮಾಡಿ ಹೋದರೆ ಸಾಕಾಗುತ್ತದೆಯೇ? ಸ್ಥಳೀಯ ಜಿಲ್ಲೆ ಬಿಟ್ಟು ಬೇರೆ ಜಿಲ್ಲೆಗಳಲ್ಲಿ ಬೇರೆಡೆಯ ಸಚಿವರ ಹಿಡಿತ ಹೇಗೆ ಸಾಧ್ಯ ಆಗುತ್ತದೆ ಎಂದು ಹೈಕಮಾಂಡ್ ನಿರ್ಧಾರಕ್ಕೆ ಕೆಲವರು ಪರೋಕ್ಷ ಬೇಸರ ಹೊರಹಾಕಿದ್ದಾರೆ. ಇದನ್ನೂ ಓದಿ: ಬ್ರಿಜ್ ಭೂಷಣ್ ಕೇಸ್‍ಗೆ ಟ್ವಿಸ್ಟ್ – ಪೋಕ್ಸೋ ಕೇಸ್ ದಾಖಲಿಸಿದ್ದ ಸಂತ್ರಸ್ತೆ ಅಪ್ರಾಪ್ತೆಯಲ್ಲ