ರಾಯಚೂರು: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ (Congress Guarantee) ಯೋಜನೆಗಳಿಗೆ ಆಧಾರ್ (Aadhar) ಕಾರ್ಡ್ ಕಡ್ಡಾಯ ಹಿನ್ನಲೆ ರಾಯಚೂರಿನ (Raichuru) ಆಧಾರ್ ಕೇಂದ್ರದಲ್ಲಿ ಹೆಚ್ಚಿದ ತೀವ್ರ ಒತ್ತಡದಿಂದಾಗಿ ಮಹಿಳಾ ಸಿಬ್ಬಂದಿ ಸಾರ್ವಜನಿಕರ ಎದುರೇ ಕಣ್ಣೀರಿಟ್ಟ ಘಟನೆ ನಡೆದಿದೆ.
ರಾಯಚೂರು ನಗರದ ಅಂಚೆ ಕಚೇರಿಯಲ್ಲಿ ತೆರೆಯಲಾಗಿದ್ದ ಆಧಾರ್ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಹೆಚ್ಚಿದ ವರ್ಕ್‌ಲೋಡ್‌ನಿಂದಾಗಿ ಮಹಿಳಾ ಸಿಬ್ಬಂದಿ ಕಣ್ಣೀರಿಟ್ಟ ವೀಡಿಯೋ ವೈರಲ್ ಆಗಿದೆ. ಇದನ್ನೂ ಓದಿ: ತಡೆ ಹಿಡಿದ ಬಿಲ್‍ಗಳ ಬಿಡುಗಡೆ ಮಾಡಿ – ಸಿಎಂಗೆ ಕೆಂಪಣ್ಣ ಮನವಿ
ಆಧಾರ್ ಕೇಂದ್ರದಲ್ಲಿ ಆಧಾರ್ ಲಿಂಕ್ ಸೇರಿದಂತೆ ತಿದ್ದುಪಡಿಗೆ ನಿತ್ಯ ಜನಸಂದಣಿ ಹೆಚ್ಚಾಗಿದೆ. ಆದರೆ ಕೇಂದ್ರದಲ್ಲಿ ಓರ್ವ ಮಹಿಳಾ ಸಿಬ್ಬಂದಿಯನ್ನ ಮಾತ್ರ ಕರ್ತವ್ಯಕ್ಕೆ ನಿಯೋಜಿಸಿದ್ದು ಒತ್ತಡ ಹೆಚ್ಚಾಗಿದೆ. ಸಾರ್ವಜನಿಕರು ಸೇರಿದಂತೆ ಮೇಲಧಿಕಾರಿಯಿಂದಲೂ ಒತ್ತಡ ಹೆಚ್ಚಾಗಿರುವ ಹಿನ್ನಲೆ ಕಣ್ಣೀರು ಹಾಕುತ್ತಲೇ ಮಹಿಳಾ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.
ನನಗೆ ಆಗಲ್ಲ ಇದು. ಕೆಲಸ ಮಾಡಿ ಯಾರು ಬೈಗುಳ ತಿಂತಾರೆ. ನಾನು ಒಬ್ಬಾಕೆ ಎಷ್ಟು ಅಂತಾ ಕೆಲಸ ಮಾಡಲಿ. ನಾನು ಒಳಗೆ ಹೋಗಿ ಆಗಲ್ಲ ಅಂತ ಸರ್‌ಗೆ ಹೇಳ್ತೀನಿ ಎಂದು ಕಣ್ಣೀರು ಹಾಕಿದ್ದಾರೆ. ಸಾರ್ವಜನಿಕರ ಮುಂದೆಯೇ ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಗೃಹಲಕ್ಷ್ಮಿಯನ್ನ ನಾನೇ ಹೋಲ್ಡ್ ಮಾಡಿಸಿದ್ದೇನೆ – ಡಿಸಿಎಂ ಡಿಕೆಶಿ
ಬೆಂಗಳೂರು: ವಿದ್ಯುತ್ ಮೇಲೆ ವಿಧಿಸಿರುವ 9% ರಷ್ಟು ತೆರಿಗೆಯಲ್ಲಿ 3% ರಿಂದ 4% ರಷ್ಟು ಕಡಿತ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ದುಬಾರಿ ವಿದ್ಯುತ್ ದರದಿಂದ ಸಾರ್ವಜನಿಕರ ಜತೆಗೆ ಕೈಗಾರಿಕಾ ವಲಯವೂ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಗ್ಯಾರಂಟಿಗಳ ಹೆಸರಿನಲ್ಲಿ ಜನರ ತುಟಿಗೆ ತುಪ್ಪ ಸವರುತ್ತಿರುವ ರಾಜ್ಯ ಸರ್ಕಾರ ವಿದ್ಯುತ್ ಮೇಲಿನ ತೆರಿಗೆಯಲ್ಲಿ ಕೊಂಚ ಕಡಿತ ಮಾಡಲಿ ಎಂದರು.
ಗೃಹಜ್ಯೋತಿ ಎಂದು ಹೇಳುತ್ತಾ ಎಲ್ಲರ ಮನೆಗಳಲ್ಲಿ ಜ್ಯೋತಿ ಬೆಳಗಿಸುವ ನಾಟಕ ಆಡುತ್ತಿರುವ ಕಾಂಗ್ರೆಸ್ ಸರ್ಕಾರ, ಜನರ ಮೇಲೆ ಬೆಲೆ ಏರಿಕೆ ಬರೆ ಎಳೆಯುತ್ತಿದೆ. ಎರಡು ಪಟ್ಟು, ಮೂರು ಪಟ್ಟು ಹೆಚ್ಚು ದರ ವಿಧಿಸಿರುವ ವಿದ್ಯುತ್ ಬಿಲ್ಲುಗಳನ್ನು ನೀಡುತ್ತಿರುವುದು ಗೃಹಜ್ಯೋತಿಯೇ? ಅದು ಗೃಹಜ್ಯೋತಿಯಲ್ಲ, ಸುಡುಜ್ಯೋತಿ ಎಂದು ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದರು. ಇದನ್ನೂ ಓದಿ: ನಾವು ಯಾರನ್ನೂ ಪುಕ್ಸಟ್ಟೆ ಅಕ್ಕಿ ಕೇಳ್ತಿಲ್ಲ; ಬೇರೆ ಆಪ್ಷನ್ ನೋಡ್ತಿದ್ದೇವೆ: ಡಿಕೆಶಿ
ವಿದ್ಯುತ್ ದರ ವಿಚಾರದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ಆಟ ಆಡುತ್ತಿವೆ. ಕಾಂಗ್ರೆಸ್ ಸರ್ಕಾರ ನೋಡಿದರೆ, ನಾವು ದರ ಜಾಸ್ತಿ ಮಾಡಿಲ್ಲ. ಹಿಂದೆ ಇದ್ದ ಬಿಜೆಪಿ ಹೆಚ್ಚಳ ಮಾಡಿದ್ದು ಎಂದು ನೆಪ ಹೇಳಿ ಜವಾಬ್ದಾರಿಯಿಂದ ಜಾಣತನದಿಂದ ಪಲಾಯನ ಮಾಡುತ್ತಿದೆ. ಇವರ ನಾಟಕ ಜನರಿಗೆ ಅರ್ಥ ಆಗುತ್ತಿದೆ ಎಂದು ಸಿಡಿಮಿಡಿಯಾದರು.
ಸಿಎಂ ಮುಂದೆ ಕಷ್ಟ ಹೇಳೋಕೆ ಹೋಗಿದ್ದಾರೆ. ಇವರಿಗೆ ಸಮಯ ಕೊಡಲು ಮುಖ್ಯಮಂತ್ರಿಗಳಿಗೆ ವ್ಯವಧಾನ ಇಲ್ಲ. ಇವರು ರಾಜ್ಯದಲ್ಲಿ ನೂರಾರು ಕೋಟಿ ಹೂಡಿಕೆ ಮಾಡಿದ್ದಾರೆ. ಸಾಕಷ್ಟು ಜನರಿಗೆ ಕೆಲಸ ಕೊಟ್ಟಿದ್ದಾರೆ. ಇಂಥವರು ಹೋದಾಗ ದೊಡ್ಡ ಸ್ಥಾನದಲ್ಲಿ ಕೂತವರು ಸಜ್ಜನಿಕೆಯಿಂದ ವರ್ತಿಸಬೇಕು ಎಂದ ಅವರು, ನಾವು ಅಧಿಕಾರದಲ್ಲಿ ಇದ್ದಾಗ ಕೆಇಆರ್‌ಸಿ ಬೆಲೆ ಏರಿಕೆ ಬಗ್ಗೆ ಪ್ರಸ್ತಾವನೆ ಬಂದಿತ್ತು. ಆದರೆ ದರ ಏರಿಕೆ ಮಾಡಿರಲಿಲ್ಲ ಅಂತಾರೆ ಬಿಜೆಪಿ ನಾಯಕರು. ಆದರೆ ದರ ಏರಿಕೆ ಬಗ್ಗೆ ಕೆಇಆರ್‌ಸಿ ನಿರ್ಧಾರ ಮಾಡಲು ಸಾಧ್ಯವಿಲ್ಲ. ಬೆಲೆ ಏರಿಕೆ ಬಗ್ಗೆ ಅರ್ಜಿ ಕೊಟ್ಟಾಗ ಕೆಇಆರ್‌ಸಿ ತೀರ್ಮಾನ ತೆಗೆದುಕೊಳ್ಳುತ್ತದೆ. ಈಗ ನೋಡಿದರೆ ಇವರು ನೆಪ ಹೇಳಿಕೊಂಡು ಕಾಲಹರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಕೇವಲ 2 ಬಲ್ಬ್ ಇದ್ದ ತಗಡಿನ ಮನೆಗೆ 1 ಲಕ್ಷ ರೂ. ಬಿಲ್ – ಶಾಕ್ ಆಗಿ ವೃದ್ಧೆ ಮನೆಗೆ ಅಧಿಕಾರಿ ದೌಡು!
ರಾಜ್ಯದ ಆರ್ಥಿಕತೆಗೆ ಸಣ್ಣ ಪ್ರಮಾಣದ ಕೈಗಾರಿಕೆಗಳು ದೊಡ್ಡ ಕೊಡುಗೆ ನೀಡುತ್ತಿವೆ. ಸ್ವಯಂ ಆರ್ಥಿಕ ತಜ್ಞರು ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿಗಳಿಗೆ ಇದು ಅರ್ಥ ಆಗುವುದಿಲ್ಲವೇ? ಆರಂಭದಲ್ಲಿಯೇ ಜನ ವಿರೋಧಿ, ಕೈಗಾರಿಕಾ ವಿರೋಧಿ ಕ್ರಮಗಳನ್ನು ಸರ್ಕಾರ ಕೈಗೊಂಡರೆ ಉದ್ಯೋಗ ಸೃಷ್ಟಿ, ಹೂಡಿಕೆ ಕಥೆ ಏನು? ಇವರ ಕಷ್ಟಗಳನ್ನ ಸರ್ಕಾರ ಕೇಳಿಸಿಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕಾಂಗ್ರೆಸ್‌ನವರು ನಿನಗೂ ಫ್ರೀ ನನಗೂ ಫ್ರೀ ಅಂತ ಹೇಳಿದಾಗ ಮುಂದಿನ ಪರಿಣಾಮಗಳ ಬಗ್ಗೆ ಯೋಚನೆ ಮಾಡಬೇಕಿತ್ತು. ಜನರು ನಂಬಿ ಮತ ಹಾಕಿದರು. ಈಗ ಕಾಂಗ್ರೆಸ್ ಸರ್ಕಾರ ವಿಶ್ವಾಸ ದ್ರೋಹ ಎಸಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳು (Congress Guarantee) ಸರ್ಕಾರದ ಮೇಲೆ ಸಾಕಷ್ಟು ಹೊರೆ ಆಗುತ್ತಿದ್ದರೂ, ರಾಜ್ಯದ ಜನಸಾಮಾನ್ಯರ ಹೊರೆ ಇಳಿಸಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಬಿಜೆಪಿಗೆ (BJP) ತಿರುಗೇಟು ನೀಡಿರುವ ಗುಂಡೂರಾವ್, ಕೇಂದ್ರ ಬಿಜೆಪಿ ಸರ್ಕಾರದ ತಪ್ಪು ಆರ್ಥಿಕ ನೀತಿಗಳಿಂದ ಬೆಲೆ ಏರಿಕೆ ಬಿಸಿ ಜನಸಾಮಾನ್ಯನಿಗೆ ತಟ್ಟಿದೆ. ಜನರ ಮೇಲಾಗಿರುವ ಬೆಲೆ ಏರಿಕೆಯ ಹೊರೆ ಕಡಿಮೆ ಮಾಡಲೆಂದೇ ಕಾಂಗ್ರೆಸ್ ಐದು ಗ್ಯಾರಂಟಿಗಳನ್ನ ತರಬೇಕಾಯ್ತು ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯರ ಅಧಿಕಾರವಧಿ ಅರ್ಧಕ್ಕೆ ಅಂತ ಯಾರೂ ಹೇಳಿಲ್ಲ: ಸಚಿವ ಸತೀಶ್ ಜಾರಕಿಹೊಳಿ
3
BJPಯವರೇ, ರಾಜ್ಯದ ಮಹಿಳೆಯರು ತಿರುಗಿಬಿದ್ದಿರುವುದು, ಸಿಟ್ಟಿಗೆದ್ದಿರುವುದು ನಮ್ಮ ಮೇಲಲ್ಲ.
ಅವರ ಸಿಟ್ಟು ಸೆಡವು, ಹತಾಶೆಗಳು ನಿಮ್ಮ ಮೋದಿ ಸರ್ಕಾರದ ಕುರುಡು ಆರ್ಥಿಕ ನೀತಿಗಳ ಬಗ್ಗೆ.
ಅದು ಈಗಾಗಲೇ ರಾಜ್ಯದ ಫಲಿತಾಂಶದಲ್ಲಿ ಸಾಬೀತಾಗಿದೆ.
ಹೀಗಿರುವಾಗ ಆಕಾಶಕ್ಕೆ ಉಗುಳುವ ಮೂರ್ಖತನವೇಕೆ BJPಯವರೆ?
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) June 18, 2023
ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮಹಿಳೊಯೊಬ್ಬರು ಅಕ್ಕಿ ಬೇಳೆ ಕಾಳುಗಳ ಬೆಲೆ ಏರಿಕೆ ಕಡಿಮೆ ಮಾಡಿ ಎಂದು ಮನವಿ ಮಾಡಿದ್ದರು. ಮಹಿಳೆಯ ವೀಡಿಯೋವನ್ನ ಟ್ವೀಟ್ ಮಾಡಿದ್ದ ಬಿಜೆಪಿ, ಸರ್ಕಾರದ ವಿರುದ್ಧ ಮಹಿಳೆಯರು ತಿರುಗಿ ಬಿದ್ದಿದ್ದಾರೆ ಎಂದು ಆರೋಪಿಸಿತ್ತು.
2
BJPಯವರೇ, ನಾವು ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ ಯೋಜನೆ ತಂದಿದ್ದೇ ನಿಮ್ಮ ಮೋದಿ ಸರ್ಕಾರದ ಬೆಲೆಯೇರಿಕೆಯಿಂದ ಸಾಮಾನ್ಯ ಜನರನ್ನು ಪಾರು ಮಾಡಲು.
ಇದು ನಿಮಗೆ ತಿಳಿದಿರಲಿ.
ಇಂದಿನ ಬೆಲೆಯೇರಿಕೆಗೆ ಮೋದಿಯವರಲ್ಲದೇ ಬೇರ್ಯಾರು ಕಾರಣ?
ಬಿಜೆಪಿಯವರಿಗೆ ಆತ್ಮಸಾಕ್ಷಿಯಿದ್ದರೆ ಬೆಲೆಯೇರಿಕೆಗೆ ಯಾರು ಕಾರಣ ಎಂದು ಪ್ರಶ್ನಿಸಿಕೊಳ್ಳಲಿ?
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) June 18, 2023
ಬಿಜೆಪಿ ಟ್ವೀಟ್‍ಗೆ ತಿರುಗೇಟು ನೀಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಬೆಲೆ ಏರಿಕೆ ಕೇಂದ್ರ ಬಿಜೆಪಿ ಸರ್ಕಾರದ ಕುರುಡು ಆರ್ಥಿಕ ನೀತಿಗಳಿಂದ ಆಗಿರುವುದು. ಬೆಲೆ ಏರಿಕೆಗೆ ಮೋದಿಯವರಲ್ಲದೇ ಬೇರೆ ಯಾರು ಕಾರಣ ಎಂದು ಪ್ರಶ್ನಿಸಿದ್ದಾರೆ. ಬಿಜೆಪಿಗೆ ಆತ್ಮಸಾಕ್ಷಿ ಇದ್ದರೆ ಬೆಲೆ ಏರಿಕೆಗೆ ಯಾರು ಕಾರಣ ಎಂದು ತಮ್ಮನ್ನ ತಾವು ಪ್ರಶ್ನಿಸಿಕೊಳ್ಳಲಿ ಎಂದಿದ್ದಾರೆ.
2
BJPಯವರೇ, ನಾವು ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ ಯೋಜನೆ ತಂದಿದ್ದೇ ನಿಮ್ಮ ಮೋದಿ ಸರ್ಕಾರದ ಬೆಲೆಯೇರಿಕೆಯಿಂದ ಸಾಮಾನ್ಯ ಜನರನ್ನು ಪಾರು ಮಾಡಲು.
ಇದು ನಿಮಗೆ ತಿಳಿದಿರಲಿ.
ಇಂದಿನ ಬೆಲೆಯೇರಿಕೆಗೆ ಮೋದಿಯವರಲ್ಲದೇ ಬೇರ್ಯಾರು ಕಾರಣ?
ಬಿಜೆಪಿಯವರಿಗೆ ಆತ್ಮಸಾಕ್ಷಿಯಿದ್ದರೆ ಬೆಲೆಯೇರಿಕೆಗೆ ಯಾರು ಕಾರಣ ಎಂದು ಪ್ರಶ್ನಿಸಿಕೊಳ್ಳಲಿ?
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) June 18, 2023
ಜನಸಾಮಾನ್ಯರಿಗೆ ನೇರವಾಗಿ ಬಿಸಿ ತಟ್ಟುವಂತಹ ನಾಲ್ಕು ಉತ್ಪನ್ನಗಳ ಬೆಲೆ ಏರಿಕೆಯ ಪಟ್ಟಿಯನ್ನು ಟ್ವೀಟ್ ಮಾಡಿರುವ ಅವರು, ಇದಕ್ಕೆ ಯಾರು ಕಾರಣ ಎಂದು ಪ್ರಶ್ನಿಸಿದ್ದಾರೆ. 65 ರೂ. ಇದ್ದ ಪೆಟ್ರೋಲ್ 103 ಆಯ್ತು, 50 ರೂ. ಇದ್ದ ಡೀಸೆಲ್ 90 ರೂ. ಏರಿಸಿದ್ರು. 80 ರೂ. ಇದ್ದ ಅಡುಗೆ ಎಣ್ಣೆ 170 ರೂ. ಗೆ, 400 ರೂ. ಇದ್ದ ಸಿಲಿಂಡರ್ ಗ್ಯಾಸ್ 1,150 ರೂ.ಗೆ ಏರಿಸಿದ್ದು ನಾವಾ ಮೋದಿಯವರಾ (Narendra Modi) ಎಂದು ಬಿಜೆಪಿಯನ್ನ ಪ್ರಶ್ನಿಸಿದ್ದಾರೆ.
ಇಷ್ಟೊಂದು ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯನ ಹೊರೆ ಇಳಿಸಲೆಂದೇ ಕಾಂಗ್ರೆಸ್ ಸರ್ಕಾರ ಗೃಹಲಕ್ಷ್ಮೀ, ಅನ್ನಭಾಗ್ಯ, ಗೃಹಜ್ಯೋತಿಯಂತಹ ಕಾರ್ಯಕ್ರಮಗಳನ್ನ ತರಬೇಕಾಯ್ತು ಎಂದು ಗುಂಡೂರಾವ್ ಮಾಹಿತಿ ಹಂಚಿಕೊಂಡಿದ್ದಾರೆ. ಐದು ಗ್ಯಾರಂಟಿಗಳಿಂದ ಸರ್ಕಾರಕ್ಕೆ ಹೊರೆಯಾಗಬಹುದು. ಆದರೆ ಜನರನ್ನ ಬೆಲೆ ಏರಿಕೆಯಿಂದ ರಕ್ಷಿಸುವುದು ಮುಖ್ಯವಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಮಹಿಳೆಯರು ಬಿಜೆಪಿ ವಿರುದ್ಧ ತಿರುಗಿಬಿದ್ದು ಚುನಾವಣೆಯಲ್ಲಿ ಫಲಿತಾಂಶವನ್ನು ಕೊಟ್ಟಿದ್ದಾರೆ. ಕರ್ನಾಟಕ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ಬೆಲೆ ಏರಿಕೆ ವಿರುದ್ಧ ಮಹಿಳೆಯರ ಸಿಟ್ಟು ಸೆಡವು ಸ್ಪಷ್ಟವಾಗಿ ಕಾಣಿಸುತ್ತದೆ. ಹೀಗಿರುವಾಗ ಬಿಜೆಪಿ ಆಕಾಶಕ್ಕೆ ಉಗುಳುವ ಮೂರ್ಖತನ ಏಕೆ ಮಾಡುತ್ತಿದೆ ಎಂದು ಗುಂಡೂರಾವ್ ಬಿಜೆಪಿಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ನನ್ನ ಲಿವರ್ ಏನು ಕಬ್ಬಿಣದ್ದಾ? ಹಗಲು ರಾತ್ರಿ ಮದ್ಯಪಾನ ಆರೋಪಕ್ಕೆ ಭಗವಂತ್ ಮಾನ್ ತಿರುಗೇಟು
ಬೆಂಗಳೂರು: ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಗ್ಯಾರಂಟಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡುವ ಮುನ್ನಾ ಫಲಾನುಭವಿಗಳು ಎಚ್ಚರಿಕೆ ವಹಿಸಬೇಕು. ಯಾಕೆಂದ್ರೆ ಅರ್ಜಿ ಸಲ್ಲಿಕೆ ಮಾಡುವವರ ಮಾಹಿತಿಗೆ ಕನ್ನ ಹಾಕಲು ಸೈಬರು ಕಳ್ಳರು ಕಾಯುತ್ತಿದ್ದಾರೆ ಎನ್ನುವ ಶಾಕಿಂಗ್ ಸುದ್ದಿ ನೀಡುವ ಮೂಲಕ ಸೈಬರ್ ತಜ್ಞರು ಎಚ್ಚರಿಕೆ ರವಾನಿಸಿದ್ದಾರೆ.
ಗ್ಯಾರಂಟಿಗೆ ಅರ್ಜಿ ಸಲ್ಲಿಕೆ ಮಾಡುವ ಮುನ್ನಾ ಎಚ್ಚರವಾಗಿರಿ. ಅರ್ಜಿ ಸಲ್ಲಿಕೆಗೆ ಸೇವಾಸಿಂಧು ಪೋರ್ಟಲ್ ಇದೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್ ಕಳ್ಳರು, ಈಗ ಫೇಕ್ ಲಿಂಕ್‌ಗಳನ್ನು ಹರಿಯಬಿಡುತ್ತಿದ್ದಾರೆ. ಅಪ್ಪಿ ತಪ್ಪಿ ಈ ಲಿಂಕ್ ಕ್ಲಿಕ್ ಮಾಡಿ, ಬ್ಯಾಂಕ್ ಖಾತೆ ವಿವರಗಳನ್ನು ನೀಡಿದರೆ, ಬ್ಯಾಂಕ್‌ನಲ್ಲಿರುವ ದುಡ್ಡು ಸೈಬರ್ ಚೋರರ ಪಾಲಾಗೋದು ಖಚಿತ. ಹೀಗಾಗಿ ಜನ ತುಂಬಾ ಎಚ್ಚರಿಕೆಯಿಂದ ಅರ್ಜಿ ಸಲ್ಲಿಕೆ ಮಾಡಬೇಕು. ಸಿಕ್ಕ ಸಿಕ್ಕ ಲಿಂಕ್‌ಗಳಲ್ಲಿ ಸಲ್ಲಿಕೆ ಮಾಡಬಾರದು ಎನ್ನುವ ಎಚ್ಚರಿಕೆಯನ್ನು ರವಾನೆ ಮಾಡಿದ್ದಾರೆ. ಇದನ್ನೂ ಓದಿ: ಇಂದಿನಿಂದ ಬೆಂಗಳೂರಲ್ಲಿ ಮತ್ತೆ ಜೆಸಿಬಿಗಳ ಘರ್ಜನೆ – ಬಿಬಿಎಂಪಿಯಿಂದ ಆಪರೇಷನ್ ರಾಜಕಾಲುವೆ
ಸರ್ಕಾರ ಕೂಡ ಈ ವಿಚಾರದಲ್ಲಿ ವ್ಯಾಪಕ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬೇಕು. ಇಲ್ಲದೇ ಇದ್ರೆ ಜನರಿಗೆ ತೊಂದರೆಯಾಗಲಿದೆ. ಈಗಾಗಲೇ ಸಾಕಷ್ಟು ಫೇಕ್ ಲಿಂಕ್‌ಗಳ ಜಾಲ ಕೂಡ ಹರಿದಾಡುತ್ತಿದೆ ಎಂದು ಸೈಬರ್ ತಜ್ಞರಾದ ಶುಭಾ ಮಂಗಳಾ ಎಚ್ಚರಿಸಿದ್ದಾರೆ.
ನವದೆಹಲಿ: ಕರ್ನಾಟಕ ಸರ್ಕಾರದಿಂದ ಬಡ ಜನರಿಗೆ ಅಕ್ಕಿ ನೀಡಲು ಕೇಂದ್ರ ಸರ್ಕಾರ ಸಹಕಾರ ನೀಡುತ್ತಿಲ್ಲ. ಇದನ್ನೆಲ್ಲ ನೋಡಿಕೊಂಡು ರಾಜ್ಯದ ಪರ ಧ್ವನಿ ಎತ್ತದೆ ಸುಮ್ಮನೆ ಕುಳಿತಿರುವ ಬಿಜೆಪಿಯ (BJP) 25 ಸಂಸದರು ದಂಡಪಿಂಡಗಳು ಎಂದು ರಾಷ್ಟ್ರೀಯ ಯೂತ್ ಕಾಂಗ್ರೆಸ್ (Congress) ಅಧ್ಯಕ್ಷ ಬಿ.ವಿ ಶ್ರೀನಿವಾಸ್ (B.V Srinivas) ವಾಗ್ದಾಳಿ ನಡೆಸಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಅವರು, ಚುನಾವಣೆ ಪ್ರಚಾರದ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಆಡಿದ್ದ ಮಾತನ್ನು ಸಾಬೀತು ಮಾಡಿದ್ದಾರೆ. ಬಿಜೆಪಿಗೆ ಮತ ಹಾಕದಿದ್ದರೇ ಪರೋಕ್ಷವಾಗಿ ಕೇಂದ್ರದ ಯೋಜನೆಗಳನ್ನು ನಿಲ್ಲಿಸುವ ಬೆದರಿಕೆ ಹಾಕಿದ್ದರು. ಅದನ್ನು ಈಗ ಮಾಡುತ್ತಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಹಜ್ ಯಾತ್ರಿಕರ ಆರೈಕೆ ಮಾಡಿದ ಸ್ವಯಂ ಸೇವಕರಿಗೆ ಉಮ್ರಾ ಪ್ರವಾಸ: ಜಮೀರ್ ಅಹ್ಮದ್
ಆದರೆ ಕರ್ನಾಟಕದ (Karnataka) 25 ಸಂಸದರು ಏನು ಮಾಡುತ್ತಿದ್ದಾರೆ ಎನ್ನುವುದು ನನ್ನ ಪ್ರಶ್ನೆ. ಕರ್ನಾಟಕಕ್ಕೆ ಕೇಂದ್ರ ಸರ್ಕಾರದಿಂದ ಪ್ರತಿ ಬಾರಿ ಅನ್ಯಾಯವಾದಾಗಲೂ ಮೌನವಾಗಿದ್ದಾರೆ. ರಾಜ್ಯದ ಪರ ಧ್ವನಿ ಎತ್ತದ ಬಿಜೆಪಿಯ 25 ಸಂಸದರಿಂದ ಯಾವುದೇ ಪ್ರಯೋಜನ ಇಲ್ಲ ಎಂದು ಕುಟುಕಿದ್ದಾರೆ.
ಕಾಂಗ್ರೆಸ್ ಗ್ಯಾರಂಟಿಗಳ (Congress Guarantee) ಬಗ್ಗೆ ಬಿಜೆಪಿ ನಾಯಕರಿಗೆ ಭಯವಿದೆ. ಕಾಂಗ್ರೆಸ್ ಯೋಜನೆಗಳು ಯಶಸ್ವಿಯಾದರೆ ಲೋಕಸಭೆಯಲ್ಲಿ ಅವರಿಗೆ ಸೋಲುವ ಭೀತಿ ಇದೆ. ಈ ಹಿನ್ನೆಲೆ ಕಾಂಗ್ರೆಸ್ ಗ್ಯಾರಂಟಿಗಳಿಗೆ ಕೊಕ್ಕೆ ಹಾಕುವ ಕೆಲಸ ಮಾಡುತ್ತಿದ್ದಾರೆ. ತಿನ್ನುವ ಅಕ್ಕಿಯಲ್ಲಿ ರಾಜಕೀಯ ಮಾಡುವುದು ಬಿಡಬೇಕು. ಇಲ್ಲದಿದ್ದರೆ ವಿಧಾನಸಭೆ ಚುನಾವಣೆಯಂತೆ ಲೋಕಸಭಾ ಚುನಾವಣೆಯಲ್ಲೂ ಕರ್ನಾಟಕದ ಜನರು ತಕ್ಕ ಶಿಕ್ಷೆ ನೀಡಲಿದ್ದಾರೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನ ಮಿನಿ ಪಾಕಿಸ್ತಾನ ಮಾಡಲು ಹೊರಟಿದೆ: ಆರ್.ಅಶೋಕ್ ವಾಗ್ದಾಳಿ
ಬೆಂಗಳೂರು: ಕಾಂಗ್ರೆಸ್ ಸರ್ಕಾರ (Congress Government) ಛತ್ತಿಸ್‌ಗಢ, ಹರಿಯಾಣ, ತೆಲಂಗಾಣ ರಾಜ್ಯಗಳಲ್ಲಿ ಅಕ್ಕಿ ಖರೀದಿಗೆ ಮುಂದಾಗಿದೆ. ಈ ಮೂಲಕ ಅಕ್ಕಿ ಖರೀದಿಯಲ್ಲೂ ಕಮಿಷನ್ ಹೊಡೆಯುವ ಹುನ್ನಾರ ನಡೆಸಿದೆ ಎಂದು ಶಾಸಕ ಬಿ.ವೈ ವಿಜಯೇಂದ್ರ ಗಂಭೀರ ಆರೋಪ ಮಾಡಿದ್ದಾರೆ.
ಈ ವೇಳೆ ಶಾಸಕ ವಿಜಯೇಂದ್ರ ಮಾತನಾಡಿ, ರಾಜ್ಯದ ಮುಖ್ಯಮಂತ್ರಿಗಳು ಅಕ್ಕಿ ವಿಚಾರದಲ್ಲಿ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಕೇಂದ್ರ ಸರ್ಕಾರ (Union Government) 5 ಕೆಜಿ ಕೊಡ್ತಿದೆ. ಉಳಿದ 5 ಕೆಜಿ ಅಕ್ಕಿಯನ್ನ ಬೇರೆ ಕಡೆ ಖರೀದಿ ಮಾಡಬಹುದು. ಛತ್ತೀಸ್‌ಗಢ, ಹರಿಯಾಣ, ತೆಲಂಗಾಣದಲ್ಲಿ ಅಕ್ಕಿ ಖರೀದಿಗೆ ಮುಂದಾಗಿದ್ದಾರೆ. ಇದರಲ್ಲಿ ಕಮೀಷನ್ ಹೊಡೆಯುವ ಹುನ್ನಾರ ಇದೆ. ನಮ್ಮ ರಾಜ್ಯದ ರೈತರಿಂದ ಅಕ್ಕಿ ಖರೀದಿ ಮಾಡಿದ್ರೆ ರೈತರಿಗೂ ಅನುಕೂಲವಾಗುವುದಿಲ್ಲವೇ? ಕಮಿಷನ್ ಹೊಡೆಯೋ ಉದ್ದೇಶವಿರೋಧಕ್ಕೆ ಬೇರೆ ರಾಜ್ಯದಿಂದ ಖರೀದಿ ಮಾಡೋಕೆ ಮುಂದಾಗಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಕಾಂಗ್ರೆಸ್ ಧೋರಣೆ ನೋಡಿದ್ರೆ ನಮಗೆ ಬಹುಮತ ಬಂದಿದೆ, ನಾವು ಖುಷಿ ಬಂದ ಹಾಗೆ ಆಡಳಿತ ಮಾಡ್ತೀವಿ. ಆನೆ ನಡೆದಿದ್ದೇ ದಾರಿ ಅಂತಾ ನಡೆಯುತ್ತಿದ್ದಾರೆ. ಚುನಾವಣಾ ಸಮಯದಲ್ಲಿ ಗ್ಯಾರಂಟಿ ಕಾರ್ಡ್ ಕೊಟ್ಟಿದ್ರು. ವಾಸ್ತವಿಕತೆ ಈಗ ಅವರಿಗೆ ಅರ್ಥ ಆಗ್ತಿದೆ. ಬಹುಶಃ ಗ್ಯಾರಂಟಿ ಕಾರ್ಡ್ ಕೊಡುವಾಗ ಕಾಂಗ್ರೆಸ್ ಬಹುಮತ ಪಡೆಯುತ್ತೇ ಅಂದುಕೊಂಡಿರಲಿಲ್ಲ. ಅದಕ್ಕಾಗಿ ಮನಸೋ ಇಚ್ಚೆ ಗ್ಯಾರಂಟಿ ಘೋಷಣೆ ಮಾಡಿದ್ರು. ಈಗ ಪೀಕಲಾಟ ಶುರುವಾಗಿದ್ದು, ಗ್ಯಾರಂಟಿ ಜಾರಿ ಮಾಡೋದು ಅಸಾಧ್ಯ ಅನ್ನೋದು ಸಿಎಂಗೆ ಮನವರಿಕೆಯಾಗಿದೆ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಎಳಸು ಅಂದ್ರೆ ಬೇಸರವಿಲ್ಲ, ಚೈಲ್ಡ್ ಆಗಿಯೇ ಪ್ರಶ್ನೆ ಕೇಳ್ತೀನಿ – ಪ್ರತಾಪ್ ಸಿಂಹ
ಕಾಂಗ್ರೆಸ್ ಸರ್ಕಾರ ಗ್ಯಾರಂಟಿ (Congress Guarantee) ಜಾರಿ ಮಾಡೋದಕ್ಕೆ ಆಗ್ತಿಲ್ಲ. ಅದಕ್ಕಾಗಿ ಮತಾಂತರ ನಿಷೇಧ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆಗಳನ್ನ ರದ್ದು ಮಾಡಿ, ಜನರ ಗಮನ ಬೇರೆಡೆಗೆ ಸೆಳೆಯಲು ಮುಂದಾಗಿದ್ದಾರೆ. ಕುಣಿಯೋದಕ್ಕೆ ಬಾರದವರು ನೆಲ ಡೊಂಕು ಅಂದ ಹಾಗೆ ಕಾಂಗ್ರೆಸ್ ವರ್ತನೆ ಇದೆ ಲೇವಡಿ ಮಾಡಿದ್ದಾರೆ.
ಬಿಎಸ್‌ವೈ ಗುಡುಗಿದ್ರೆ, ವಿಧಾನಸೌಧ ನಡುಗುತ್ತೆ:
ಕಾಂಗ್ರೆಸ್‌ನವರು ಬಹುಮತ ಇದೆ ಅಂತಾ ಏನು ಬೇಕಾದ್ರು ಮಾಡಬಹುದು ಅಂದುಕೊಳ್ಳಬೇಡಿ. ಯಡಿಯೂರಪ್ಪ ಹೋರಾಟ ಮಾಡಿದ ಪಕ್ಷ. ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು ಅಂತಾ ಹೋರಾಟ ಮಾಡಿದ್ರು. ನಿಮಗೆ ಗ್ಯಾರಂಟಿ ಕೊಡೋದಕ್ಕೆ ಆಗ್ಲಿಲ್ಲ ಅಂದ್ರೆ ಜನರ ಮುಂದೆ ಕ್ಷಮೆ ಕೇಳಿ, ಅದು ಬಿಟ್ಟು ಬಿಜೆಪಿ, ಕೇಂದ್ರದ ಮೇಲೆ ಗೂಬೆ ಕೂರಿಸಬೇಡಿ.
ಮೊದಲು ಹೇಳಿದಂತೆ ಯಾವುದೇ ಷರತ್ತುಗಳಿಲ್ಲದೇ ಗ್ಯಾರಂಟಿಗಳನ್ನ ಕಾಂಗ್ರೆಸ್ ಜಾರಿಗೊಳಿಸಬೇಕು. ಇಲ್ಲದಿದ್ದರೆ, ನಮ್ಮ ಪಕ್ಷದಲ್ಲೂ ಹಾಲಿ 66 ಶಾಸಕರು ಇದ್ದೇವೆ, ದೊಡ್ಡ ಹೋರಾಟ ಮಾಡ್ತೀವಿ. ಜೂನ್ 19ರಂದೇ ಸಭೆ ಮಾಡಿ ಹೋರಾಟದ ಬಗ್ಗೆ ತೀರ್ಮಾನ ಮಾಡ್ತೀವಿ ಎಂದು ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಾಯಕರ ಆರೋಪ:
* ಟಿಪ್ಪು ಯುಗ ಸ್ಥಾಪನೆ ಮಾಡೋ ಕೆಲಸ ಕಾಂಗ್ರೆಸ್ ಮತ್ತೆ ಶುರು ಮಾಡಿದೆ.
* ಮತಾಂತರ ರಾಯಭಾರಿ ಆಗೋಕೆ ಕಾಂಗ್ರೆಸ್ ಹೊರಟಿದೆ
* ಮತಾಂತರ ಬ್ರ‍್ಯಾಂಡ್ ಅಂಬಾಸಿಡರ್ ಆಗೋಕೆ ಕಾಂಗ್ರೆಸ್ ಮುಂದಾಗಿದೆ.
* 35 ಲಕ್ಷಕ್ಕೂ ಹೆಚ್ಚು ಹಿಂದೂಗಳೂ ಆಮಿಷಕ್ಕೆ ಮತಾಂತರ ಆಗಿರೋ ಮಾಹಿತಿ ಇದೆ.
* ಯಾರಿಗಾಗಿ ಮತಾಂತರ ಕಾಯ್ದೆ ತರುತ್ತಿದ್ದಾರೆ? ಅಂಬೇಡ್ಕರ್, ಗಾಂಧಿಯವರು ಮತಾಂತರಕ್ಕೆ ವಿರೋಧ ಮಾಡಿದ್ರು
ಮೈಸೂರು: ಸಿದ್ದರಾಮಯ್ಯ (Siddaramaiah) ಅವರು ಎಳಸು ಎಂದಿದ್ದಕ್ಕೆ ಬೇಸರವಿಲ್ಲ. ನಾನು ಯಾವಾಗ ತೀಕ್ಷ್ಣವಾಗಿ ಪ್ರಶ್ನೆ ಕೇಳ್ತೀನೋ ಆಗ ನನ್ನನ್ನ ಚೈಲ್ಡ್, ಎಳಸು ಅಂತಾರೆ. ನಾನು ಎಳಸು ಇರಬಹುದು, ಚೈಲ್ಡ್ ಅಂತಾನೆ ಭಾವಿಸಿ, ಚೈಲ್ಡ್ ಆಗಿಯೆ ಪ್ರಶ್ನೆ ಕೇಳುತ್ತಿದ್ದೇನೆ. ಉಚಿತ ಗ್ಯಾರಂಟಿಗೆ (Congress Guarantee) 59 ಸಾವಿರ ಕೋಟಿ ರೂ. ಎಲ್ಲಿಂದ ತರುತ್ತೀರಿ? ಅದನ್ನು ಹೇಳಿ ಸಾಕು ಎಂದು ಸಂಸದ ಪ್ರತಾಪ್ ಸಿಂಹ (Pratap Simha) ತಿವಿದಿದ್ದಾರೆ.
ಮೈಸೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪ್ರತಾಪ್ ಸಿಂಹ ಎಳಸು ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯ ಅವರ ನಿಘಂಟಿನಲ್ಲಿ ಪ್ರಬುದ್ಧತೆ ವ್ಯಾಖ್ಯಾನದಂತೆ ನಾನು ಇಲ್ಲ. ನಾನು ಯಾವಾಗ ತೀಕ್ಷ್ಣವಾಗಿ ಪ್ರಶ್ನೆ ಕೇಳ್ತೀನೋ ಆಗ ಸಿದ್ದರಾಮಯ್ಯ ಅವರು ನನ್ನನ್ನ ಚೈಲ್ಡ್, ಎಳಸು ಅಂತಾರೆ. ಸಿದ್ದರಾಮಯ್ಯ ಅವರೇ ನೀವು ಮೇಧಾವಿಗಳು ವಿಶ್ವದ ಪ್ರಸಿದ್ಧ ಅರ್ಥಿಕ ತಜ್ಞರು. 59 ಸಾವಿರ ಕೋಟಿ ರೂ. ಎಲ್ಲಿಂದ ತರುತ್ತೀರಿ? ಅನ್ನೋದನ್ನ ಹೇಳಿ ನಮಗೆ ಜ್ಞಾನ ತುಂಬಿ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಜೊತೆ ಅಡ್ಜಸ್ಟ್‌ಮೆಂಟ್ ರಾಜಕಾರಣ: ಸ್ವಪಕ್ಷೀಯರ ವಿರುದ್ಧವೇ ಪ್ರತಾಪ್ ಸಿಂಹ ಅಸಮಾಧಾನ
ನಿಮ್ಮ ಪ್ರಕಾರ ಪ್ರಬುದ್ಧತೆ ಅಂದರೆ ಏನು?
ನಿಮ್ಮ ಪ್ರಕಾರ ಪ್ರಬುದ್ಧತೆ ಅಂದರೆ ಏನು? ತಮ್ಮ ರಾಜಕೀಯ ಲಾಭಕ್ಕಾಗಿ 2013 ರಲ್ಲಿ ಜಿ. ಪರಮೇಶ್ವರ್ ಸೋಲಿಸಿದ್ದೇ ಪ್ರಬುದ್ಧತೆ ಅನ್ನೋದಾದ್ರೆ ನನಗೆ ಅಂತಹ ಪ್ರಬುದ್ಧತೆ ಬೇಡ. ಮಗ, ಮೊಮ್ಮಗನ ರಾಜಕೀಯ ಗಟ್ಟಿಗೊಳ್ಳಿಸಬೇಕು ಅನ್ನೋದು ಪ್ರಬುದ್ಧತೆ ಅನ್ನೋದಾದರೆ ಆ ಪ್ರಬುದ್ಧತೆಯೂ ನನಗೆ ಬೇಡ. ರಾಜಕೀಯವಾಗಿ ಬೆಳೆಸಿದ ದೇವೇಗೌಡರನ್ನ ಏಕವಚನದಲ್ಲಿ ನಿಂದಿಸುವುದು, ಹಿರಿಯನ್ನು ತುಚ್ಛವಾಗಿ ಕಾಣುವುದು, ಗೆಲ್ಲಲ್ಲ ಹೊಂದಾಣಿಕೆ ಮಾಡಿಕೊಳ್ಳುತ್ತೀನಿ ಅನ್ನೋದು, ಗ್ಯಾರಂಟಿ ಮೂಲಕ ಜನರನ್ನು ದಾರಿ ತಪ್ಪಿಸಿ ನಂತರ ಜನರಿಗೆ ಬರೆ ಎಳೆಯವುದು, ಡಿಕೆ ಶಿವಕುಮಾರ್ ಅವರ ಮೇಲೆ ಎಂ.ಬಿ ಪಾಟೀಲ್ ರನ್ನ ಛೂ ಬಿಟ್ಟು, ಡಿಕೆಶಿಯವರನ್ನ ತುಳಿಯೋಕೆ ಯತ್ನಿಸೋದು ಇವೆಲ್ಲವೂ ಪ್ರಬುದ್ಧತೆ ಅನ್ನೋದಾದ್ರೆ ಅದು ಬೇಡ ನನಗೆ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಐಷಾರಾಮಿ ಕಾರು ಹೊಂದಿರುವವರು ಎಚ್ಚರ – ಮೈಸೂರಿನಲ್ಲಿ ಸಕ್ರಿಯವಾಗಿದೆ ಹೈಟೆಕ್ ಕಳ್ಳರ ಗ್ಯಾಂಗ್
ಇನ್ನಷ್ಟು ಆಕ್ರಮಣ ನೋಡುವುದಿದೆ:
ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದಿರೋ ಕಾರಣ ಕೆಲವರಿಗೆ ಧೈರ್ಯ ಬಂದಿದೆ. ಹೀಗಾಗಿ ಅಕ್ರಮಣ ಗಲಾಟೆ. ಮುಂದೆ ಬಹಳಷ್ಟು ನೋಡುವುದಿದೆ. ಹೆಚ್.ಡಿ ದೇವೇಗೌಡರು ಸಿದ್ದರಾಮಯ್ಯಗೆ ರಾಜಕೀಯ ಅಸ್ಥಿತ್ವ ಕೊಟ್ಟರು. ಆದ್ರೆ ಅವರಿಗೆ ಉಪಕಾರ ಸ್ಮರಣೆ ಇಲ್ಲ. ವರುಣಾದಲ್ಲಿ ನಿಮಗೆ ಯಾರು ಯಾರು ಸಹಾಯ ಮಾಡಿದರು. ಯಾರು ಯಾರಿಗೆ ಫೋನ್ ಮಾಡಿದ್ದಿರಾ? ನಟ ಸುದೀಪ್ ಪ್ರಚಾರಕ್ಕೆ ಬಾರದ ರೀತಿ ಹೇಗೆ ತಡೆದಿರಿ? ಶ್ರೀರಾಮುಲು ಕಾರ್ಯಕ್ರಮ ಆಗದಂತೆ ಹೇಗೆ ನೋಡಿಕೊಂಡ್ರಿ? ಯಾರು ತೀಕ್ಷ್ಣವಾಗಿ ಹೇಳಿಕೆ ಕೊಡದ ಹಾಗೇ ಹೇಗೆ ಮ್ಯಾನೇಜೆ ಮಾಡಿದ್ರಿ? ಎಲ್ಲವೂ ಗೊತ್ತಿದೆ. ಇದೆಲ್ಲವೂ ಮೊನ್ನೆ ಮೊನ್ನೆ ಆದ ಉಪಕಾರ. ಕನಿಷ್ಠ ಈ ಉಪಕಾರಗಳ ಸ್ಮರಣೆಯಾದರೂ ಮಾಡಿಕೊಳ್ಳಿ. ನಿಮಗೆ ರಾಜಕೀಯ ಅಸ್ತಿತ್ವ ಕೊಟ್ಟ ಹೆಚ್.ಡಿ ದೇವೇಗೌಡರನ್ನ ನೀವು ಸ್ಮರಣೆ ಮಾಡಲ್ಲ, ವರುಣಾದಲ್ಲಿ ಸಹಾಯ ಮಾಡಿದವರ ಉಪಕಾರವನ್ನಾದರೂ ಸ್ಮರಣೆ ಮಾಡಿ ಉಳಿದಿದ್ದು ಆಮೇಲೆ ಹೇಳ್ತೀನಿ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಅವರು ತಮ್ಮ ಜೀವನವಿಡೀ ಕಾಂಗ್ರೆಸ್ ಪಕ್ಷವನ್ನ ಬೈದುಕೊಂಡೇ ಬಂದಿದ್ದರು. ಸಾವರ್ಕರ್ ಪಾಠ ತೆಗೆದು ನೆಹರು ಪಠ್ಯ ಹಾಕಿದ್ದೀರಲ್ಲ. 1923 ರಲ್ಲಿ ನೆಹರು ಅವರು ಪಂಜಾಬ್ ಜೈಲಿನಲ್ಲಿದ್ದಾಗ ಕ್ಷಮಾಪಣೆ ಪತ್ರ ಬರೆದು ಜೈಲಿಂದ ಬಿಡುಗಡೆ ಆಗುತ್ತಾರೆ. ಕ್ಷಮಾಪಣೆ ಪತ್ರ ಬರೆದು ಹೊರಬಂದ ನೆಹರು ಪಠ್ಯವನ್ನೇಕೆ ಸೇರಿಸಿದ್ದೀರಿ? ಇತಿಹಾಸಕ್ಕೆ ದೋಖಾ ಬಗೆಯುತ್ತಿದ್ದೀರಾ? ಜನಕ್ಕೆ ನಿಮ್ಮ ನಿಜ ಬಣ್ಣ ಬಹಳ ಬೇಗ ಗೊತ್ತಾಗುತ್ತಿದೆ ಎಂದು ಕಿಡಿ ಕಾರಿದ್ದಾರೆ.
ಬೆಂಗಳೂರು: ಉಚಿತ ಯೋಜನೆಗಳನ್ನು (Government Free Scheme) ಜಾರಿಗೆ ತರುವ ಭರಾಟೆಯಲ್ಲಿ ಮುಳುಗಿರುವ ಸಿದ್ದರಾಮಯ್ಯ ಸರ್ಕಾರ ರಾಜ್ಯದ ಜನರಿಗೆ ಕತ್ತಲೆ ಭಾಗ್ಯ ನೀಡುವುದು ಗ್ಯಾರಂಟಿ ಎಂದು ಮಾಜಿ ಇಂಧನ ಸಚಿವ ಸುನೀಲ್ ಕುಮಾರ್ (Sunil Kumar) ಟೀಕಿಸಿದ್ದಾರೆ
ಉಚಿತ ಯೋಜನೆಗಳ ಜಾರಿಯ ಭರಾಟೆಯಲ್ಲಿ ಮುಳುಗಿರುವ @siddaramaiah ಸರ್ಕಾರ ರಾಜ್ಯದ ಜನರಿಗೆ ಕತ್ತಲೆ ಭಾಗ್ಯ ನೀಡುವುದು ಗ್ಯಾರಂಟಿ !
ಉಚಿತ ಉಚಿತ ಎಂಬ ನಿಮ್ಮ ಭಾಷಣದ ಭರಾಟೆಗೆ ಮರುಳಾದ ಜನರಿಗೆ ಈಗ ಕತ್ತಲೆ ಖಚಿತ, ಸಾಲ ನಿಶ್ಚಿತ, ಬೆಲೆ ಏರಿಕೆ ಖಂಡಿತ ಎಂಬುದು ತಿಂಗಳು ಕಳೆಯುವಷ್ಟರಲ್ಲೇ ಅರಿವಾಗಿದೆ. (1/3)
ಟ್ವೀಟ್‌ನಲ್ಲಿ ಏನಿದೆ..?
ಸಿದ್ದರಾಮಯ್ಯನವರೇ (Siddaramaiah) ವ್ಯವಸ್ಥೆಯನ್ನು ಎತ್ತ ಕೊಂಡೊಯ್ಯುತ್ತಿದ್ದೀರಿ? ನಿಮ್ಮ ತಪ್ಪುಗಳನ್ನು ಮುಚ್ಚಿಟ್ಟುಕೊಳ್ಳಲು ಜಾಹೀರಾತು ಕೊಟ್ಟ ಮಾತ್ರಕ್ಕೆ ಕತ್ತಲೆ ಕಳೆಯಲು ಸಾಧ್ಯವೇ? ನೀವು ಘೋಷಣೆ ಇಲ್ಲದೇ ಮಾಡುತ್ತಿರುವ ಲೋಡ್ ಶೆಡ್ಡಿಂಗ್ ನಿಂದ ಕೃಷಿ, ಕೈಗಾರಿಕೆ ಸೇರಿದಂತೆ ಎಲ್ಲ ಕ್ಷೇತ್ರಗಳ ಅಭಿವೃದ್ಧಿ ಕುಂಠಿತಗೊಳ್ಳುವುದರಲ್ಲಿ ಅನುಮಾನ ಇಲ್ಲ.
ರೈತರ ಐಪಿ ಸೆಟ್ ಗಳಿಗೆ ನಿರಂತರ ಏಳು ಗಂಟೆಗಳ ಕಾಲ ಪೂರೈಕೆ ಮಾಡುತ್ತಿದ್ದ ವಿದ್ಯುತ್ ಕಡಿತಗೊಳಿಸಲಾಗಿದೆ.ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಅನಿಯಮಿತ ಹಾಗೂ ಅಘೋಷಿತ ಲೋಡ್ ಶೆಡ್ಡಿಂಗ್ ಪ್ರಾರಂಭವಾಗಿದೆ. ನಿರ್ವಹಣೆ ಹೆಸರಿನಲ್ಲಿ ಪವರ್ ಕಟ್ ಕಣ್ಣಾಮುಚ್ಚಾಲೆ ನಡೆಸುತ್ತಿರುವುದು ಸುಳ್ಳೇ ? (2/3)
ರೈತರ ಐಪಿ ಸೆಟ್ ಗಳಿಗೆ ನಿರಂತರ ಏಳು ಗಂಟೆಗಳ ಕಾಲ ಪೂರೈಕೆ ಮಾಡುತ್ತಿದ್ದ ವಿದ್ಯುತ್ ಕಡಿತಗೊಳಿಸಲಾಗಿದೆ.ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಅನಿಯಮಿತ ಹಾಗೂ ಅಘೋಷಿತ ಲೋಡ್ ಶೆಡ್ಡಿಂಗ್ (Load Shedding) ಪ್ರಾರಂಭವಾಗಿದೆ. ನಿರ್ವಹಣೆ ಹೆಸರಿನಲ್ಲಿ ಪವರ್ ಕಟ್ ಕಣ್ಣಾಮುಚ್ಚಾಲೆ ನಡೆಸುತ್ತಿರುವುದು ಸುಳ್ಳೇ? ಇದನ್ನೂ ಓದಿ: ಜೂನ್ 18ರಿಂದ 22ರವರೆಗೂ ಬೆಂಗಳೂರು, ಹಳೆ ಮೈಸೂರು ಭಾಗದಲ್ಲಿ ಬಿರುಗಾಳಿ ಸಹಿತ ಮಳೆ ಸಾಧ್ಯತೆ
ಉಚಿತ ಯೋಜನೆಗಳ ಜಾರಿಯ ಭರಾಟೆಯಲ್ಲಿ ಮುಳುಗಿರುವ ಸಿದ್ದರಾಮಯ್ಯ ಸರ್ಕಾರ ರಾಜ್ಯದ ಜನರಿಗೆ ಕತ್ತಲೆ ಭಾಗ್ಯ ನೀಡುವುದು ಗ್ಯಾರಂಟಿ. ಉಚಿತ.. ಉಚಿತ.. ಎಂಬ ನಿಮ್ಮ ಭಾಷಣದ ಭರಾಟೆಗೆ ಮರುಳಾದ ಜನರಿಗೆ ಈಗ ಕತ್ತಲೆ ಖಚಿತ, ಸಾಲ ನಿಶ್ಚಿತ, ಬೆಲೆ ಏರಿಕೆ ಖಂಡಿತ ಎಂಬುದು ತಿಂಗಳು ಕಳೆಯುವಷ್ಟರಲ್ಲೇ ಅರಿವಾಗಿದೆ ಎಂದು ಕುಟುಕಿದ್ದಾರೆ.
– ಸಿಎಂ ಅವರಿಂದ ಶಕ್ತಿ ಭವನದಲ್ಲಿ ನಾಳೆ ಯೋಜನೆ ವೆಬ್‌ಸೈಟ್ ಲಾಂಚ್ – ಅರ್ಜಿ ಸಲ್ಲಿಕೆ ಎಲ್ಲಿ, ಹೇಗೆ, ಸಲ್ಲಿಸಬೇಕಾದ ದಾಖಲೆಗಳೇನು?
ಬೆಂಗಳೂರು: ಕಾಂಗ್ರೆಸ್ (Congress Guarantee) ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದ 5 ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ (Gruhalakshmi Scheme) ನಾಳೆ ಚಾಲನೆ ನೀಡಲಾಗುವುದು. ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ನಾಳೆಯಿಂದ ಆರಂಭಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ತಿಳಿಸಿದರು.
ಯೋಜನೆ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಳೆ 1:30 ಕ್ಕೆ ಶಕ್ತಿ ಭವನದಲ್ಲಿ ಈ ಯೋಜನೆಗೆ ಸಿಎಂ ಚಾಲನೆ ನೀಡಲಿದ್ದಾರೆ. ಯೋಜನೆಯ ವೆಬ್‌ಸೈಟ್ ಲಾಂಚ್ ಮಾಡಲಾಗುವುದು. ಸಾಂಕೇತಿಕವಾಗಿ ನಾಲ್ಕೈದು ಜನರಿಗೆ ನಾಳೆ ನೋಂದಣಿ ಮಾಡಲಿದ್ದೇವೆ. ಆಗಸ್ಟ್ 18 ಕ್ಕೆ ಬೆಳಗಾವಿಯಿಂದ ಚಾಲನೆ ನೀಡಲಾಗುವುದು ಎಂದು ಹೇಳಿದರು. ಇದನ್ನೂ ಓದಿ: ಗಂಡ ತೆರಿಗೆ ಪಾವತಿ ಮಾಡಿದ್ರೆ ಮಾತ್ರ ಗೃಹಲಕ್ಷ್ಮಿ ಭಾಗ್ಯ ಇಲ್ಲ – ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ
ಅರ್ಜಿ ಸಲ್ಲಿಸಲು ಮನೆ ಯಜಮಾನಿಯ ಪತಿಯ ಆಧಾರ್ ಕಾರ್ಡ್ ಸಂಖ್ಯೆ, ಮೊಬೈಲ್ ಸಂಖ್ಯೆ, ಅರ್ಜಿದಾರರ ಬ್ಯಾಂಕ್ ಖಾತೆ ವಿವರ ಸಲ್ಲಿಸೋದು ಕಡ್ಡಾಯವಾಗಿದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಇಲ್ಲ ಎಂದು ಸ್ಪಷ್ಟಪಡಿಸಿದರು.
ಅರ್ಜಿಗಳನ್ನು ಆನ್‌ಲೈನ್ ಮೂಲಕ ಅಥವಾ ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್ ಕೇಂದ್ರದಲ್ಲಿ ಸೇವಾಸಿಂಧು ಪೋರ್ಟಲ್‌ನ ಮೂಲಕ ಸಲ್ಲಿಸಬಹುದು. ಅರ್ಜಿ ಸಲ್ಲಿಸುವವರ ಆಧಾರ್ ಕಾರ್ಡ್ ಸಲ್ಲಿಸಬೇಕು. 2,000 ರೂ. ಗಳನ್ನು ಡಿಬಿಟಿ ಮೂಲಕ ನೀಡಲಾಗುತ್ತೆ. ಅರ್ಜಿಗಳ ಸಲ್ಲಿಕೆಯೂ ಉಚಿತವಾಗಿರುತ್ತದೆ. ಅದಕ್ಕೆ ಯಾವುದೇ ಹಣ ಪಾವತಿಸಬೇಕಾಗಿಲ್ಲ. ಗೃಹಲಕ್ಷ್ಮಿ ಸಹಾಯವಾಣಿ ಆರಂಭಿಸಲಾಗುವುದು. ಯೋಜನೆಗೆ ಸಂಬಂಧಿಸಿದ ಮಾಹಿತಿಗಾಗಿ 1902 ಗೆ ಕರೆ ಮಾಡಬಹುದು ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಟ್ಯಾಕ್ಸ್ ಕಟ್ಟೋರು ಯಾರೂ ಗೃಹಲಕ್ಷ್ಮಿ ಬೇಕು ಅಂತ ಕೇಳ್ತಿಲ್ಲ: ಡಿಕೆಶಿ
ನಾಡಕಚೇರಿಯಲ್ಲಿ ಸಲ್ಲಿಕೆಗೆ ಅವಕಾಶ ಇಲ್ಲ. ಮನೆ ಮನೆಗೂ ಕೆಲವರಿಗೆ ಅರ್ಜಿ ಸಲ್ಲಿಕೆಗೆ ತೆಗೆದುಕೊಳ್ಳುತ್ತೇವೆ. 1.28 ಕೋಟಿ ಕುಟುಂಬಕ್ಕೆ (78%) ಈ ಯೋಜನೆಯ ಲಾಭ ಸಿಗಲಿದೆ. ಬೆಳಗಾವಿಯಿಂದ ಯೋಜನೆಗೆ ಚಾಲನೆ ನೀಡಲಾಗುವುದು. ಪ್ರತಿ ತಿಂಗಳು ಯಾವ ದಿನಾಂಕದಲ್ಲಿ ಹಣ ಹಾಕೋದು ಅನ್ನೋದು ನಿರ್ಧಾರ ಮಾಡುತ್ತೇವೆ. ತೆರಿಗೆ ಕಟ್ಟೋರ ಬಗ್ಗೆ ನಾವು ಆಧಾರ್, ಬ್ಯಾಂಕ್ ಆಕೌಂಟ್ ಮೂಲಕ ಪರಿಶೀಲನೆ ಮಾಡ್ತೀವಿ. ಹೀಗಾಗಿ ಮನೆ ಯಜಮಾನಿಯ ಪತಿ ತೆರಿಗೆ ಪಾವತಿ ಮಾಡಿದರೆ ಗೊತ್ತಾಗುತ್ತೆ ಎಂದು ಹೇಳಿದರು.
ಹೊಸ ಎಪಿಎಲ್, ಬಿಪಿಎಲ್ ಕಾರ್ಡ್ ಸಲ್ಲಿಕೆಗೆ ಪೋರ್ಟಲ್ ಲಾಕ್ ವಿಚಾರವಾಗಿ ಮಾತನಾಡಿ, ಶೀಘ್ರದಲ್ಲಿಯೇ ಇದರ ಬಗ್ಗೆ ನಾನು ಕೂಡ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಚಿವರಿಗೆ ಮನವಿ ಮಾಡುತ್ತೇನೆ. ಒಂದು ವೇಳೆ ಪೋರ್ಟಲ್ ವಿಳಂಬವಾದರೂ ಮುಂದಿನ ದಿನದಲ್ಲಿ ಅನುವು ಮಾಡಿಕೊಡ್ತೀವಿ ಎಂದರು.
ಬೆಂಗಳೂರು: ಒಂದು ಕೈನಲ್ಲಿ ಕೊಟ್ಟು ಮತ್ತೊಂದು ಕೈನಲ್ಲಿ ಕಿತ್ತುಕೊಳ್ತಿದೆಯಾ ಸರ್ಕಾರ ಎಂದು ಜನಸಾಮಾನ್ಯರಲ್ಲಿ ಪ್ರಶ್ನೆ ಮೂಡುತ್ತಿದೆ. ಸರ್ಕಾರದ ಉಚಿತ ಭಾಗ್ಯಗಳ (Government Free Schemes) ನಡುವೆ ರಾಜ್ಯದ ಜನರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.
ಬೆಂಗಳೂರಿನ (Bengaluru) ಕೆಲವು ಮನೆಗಳಲ್ಲಿ ಏಕಾಏಕಿ ಮನೆಯ ನೀರಿನ ಬಳಕೆಯ ಬಿಲ್ ಡಬಲ್, ತ್ರಿಬಲ್ ಆಗಿದೆ. ಹೀಗೆ ಹಲವು ರೀತಿಯಲ್ಲಿ ಬೆಲೆ ಏರಿಕೆ ಬಾಣ ಜನರಿಗೆ ಚುಚ್ಚುತ್ತಿದೆ. ಸರ್ಕಾರ ಒಂದು ಕೈನಲ್ಲಿ ಕೊಟ್ಟು ಮತ್ತೊಂದು ಕೈನಲ್ಲಿ ಕಿತ್ತುಕೊಳ್ತಿದೆಯಾ ಅನ್ನೋ ಆರೋಪ ಕೂಡಾ ಸಾರ್ವಜನಿಕರಿಂದ ಕೇಳಿ ಬರ್ತಿದೆ. ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಸರಿಯಾಗಿ ವೇತನ ಸಿಗ್ತಿದೆ: ವದಂತಿಗೆ ಹಿಮಾಚಲಪ್ರದೇಶ ಸಿಎಂ ಸ್ಪಷ್ಟನೆ
ಏಕಾಏಕಿ ನೀರಿನ ಶುಲ್ಕ ಹೆಚ್ಚಳ ಆಗಿದೆ. ಇದರಿಂದಾಗಿ ಸಾರ್ವಜನಿಕರು ಕಂಗಾಲಾಗಿದ್ದಾರೆ. ಕಳೆದ ತಿಂಗಳು 930 ರೂ. ಬಂದಿತ್ತು, ಈ ತಿಂಗಳು ಏಕಾಏಕಿ 3,000 ದಾಟಿದೆ. ವಯಾಲಿಕಾವಲ್ ಬಳಿ ಒಂದೇ ರಸ್ತೆಯ ಹತ್ತಾರು ಮನೆಗಳಲ್ಲಿ ನೀರಿನ ಬಿಲ್ ಡಬಲ್ ಆಗಿರೋದು ನೋಡಿ ಜನ ಶಾಕ್ ಆಗಿದ್ದಾರೆ. ಉಚಿತ ಭಾಗ್ಯ ಅಂತ ಈ ರೀತಿ ಮಾಡಿದ್ದಾರೆ ಎಂದು ಜಲಮಂಡಳಿ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಲ್ಲಾ ಫ್ರೀ ಭಾಗ್ಯ ಒಕೆ ಅದ್ರೇ ಈ ರೀತಿ ಬೇರೆ ರೀತಿಯಲ್ಲಿ ಸರ್ಕಾರ ನಮಗೆ ಬರೆ ಹಾಕ್ತಿದೆ ಅಂತ ಜನ ಆಕ್ರೋಶಗೊಂಡಿದ್ದಾರೆ. ಇನ್ನೂ ಜಲಮಂಡಳಿ ಅಧಿಕಾರಿಗಳನ್ನ ಕೇಳಿದ್ರೇ ಹೀಗೆ ಆಗಲು ಸಾಧ್ಯವಿಲ್ಲ. ಹೆಚ್ಚಿಗೆ ಬಿಲ್‌ಗೆ ಲೀಕೇಜ್ ಕಾರಣ ಇರಬಹುದು. ಒಂದೇ ರಸ್ತೆಯಲ್ಲಿ ಹತ್ತಾರು ಮನೆಗಳಿಗೆ ಈ ರೀತಿ ಆಗಿದೆ ಅಂದ್ರೆ ಪರಿಶೀಲನೆ ಮಾಡ್ತೀವಿ ಅಂತಾ ಹೇಳಿದ್ದಾರೆ.