Tag: Congress Government

  • ವಿಧಾನಸೌಧದಲ್ಲಿ ನಮಾಜ್‌ ಮಾಡೋಕೆ ಅನುಮತಿ ಕೊಟ್ರೆ ಕರ್ನಾಟಕವೇ ಹೊತ್ತಿ ಉರಿಯುತ್ತೆ – ಮುತಾಲಿಕ್‌ ಎಚ್ಚರಿಕೆ

    ವಿಧಾನಸೌಧದಲ್ಲಿ ನಮಾಜ್‌ ಮಾಡೋಕೆ ಅನುಮತಿ ಕೊಟ್ರೆ ಕರ್ನಾಟಕವೇ ಹೊತ್ತಿ ಉರಿಯುತ್ತೆ – ಮುತಾಲಿಕ್‌ ಎಚ್ಚರಿಕೆ

    – ಹಿಂದೂ ವಿರೋಧಿ ಅನ್ನೋದು ಕಾಂಗ್ರೆಸ್‌ ರಕ್ತದ ಕಣಕಣದಲ್ಲೂ ಇದೆ
    – ನಮಾಜ್‌ಗೆ ಅನುಮತಿ ಕೊಟ್ರೆ, ವಿಧಾನಸೌಧದಲ್ಲಿ ದಿನಾ ಹನುಮಾನ್‌ ಚಾಲಿಸಾ ಪಠಿಸ್ತೇವೆ
    – ಶ್ರೀರಾಮಸೇನೆ ಮುಖ್ತಸ್ಥ ಪ್ರಮೋದ್‌ ಮುತಾಲಿಕ್‌ ಟೀಕೆ

    ಧಾರವಾಡ: ಕಾಂಗ್ರೆಸ್‌ ಸರ್ಕಾರ ವಿಧಾನಸೌಧದಲ್ಲಿ (Vidhana Soudha) ನಮಾಜ್‌ ಮಾಡಲು ಅನುಮತಿ ಕೊಟ್ರೆ, ದೊಡ್ಡ ಮಟ್ಟದಲ್ಲಿ ಹೋರಾಟ ಮಾಡ್ತೀವಿ, ಕರ್ನಾಟಕವೇ ಹೊತ್ತಿ ಉರಿಯುತ್ತೆ. ನಾವೂ ವಿಧಾನಸೌಧದಲ್ಲಿ ಪ್ರತಿದಿನ ಹನುಮಾನ್‌ ಚಾಲಿಸಾ ಪಠಣ ಮಾಡ್ತೇವೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಎಚ್ಚರಿಕೆ ನೀಡಿದ್ದಾರೆ.

    ಧಾರವಾಡದಲ್ಲಿ (Dharwad) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ (Congress) ಅನ್ನೋದು ಸಂಪೂರ್ಣ ಹಿಂದೂ ವಿರೋಧಿ ಸರ್ಕಾರ. ಕುರುಬರಹಳ್ಳಿಯ ಗೋ ಶಾಲೆ ಮಾಡಲು ಜಾಗ ನೀಡಲಾಗಿತ್ತು, ಕಾಂಗ್ರೆಸ್‌ ಸರ್ಕಾರ ಅದನ್ನೂ ತಡೆ ಹಿಡಿದಿದೆ ಎಂದು ಆಕ್ರೋಶ ವ್ಯಕ್ಯಪಡಿಸಿದ್ದಾರೆ. ಇದನ್ನೂ ಓದಿ: ಮಿಡ್‌ನೈಟ್ ಆಸೆ – ಪಾರ್ಲರ್ ಬೀಗ ಮುರಿದು ನಾಲ್ಕೇ ಐಸ್‌ಕ್ರೀಮ್ ಕದ್ದು ಪರಾರಿಯಾದ ಕಳ್ರು

    ಗೋ ರಕ್ಷಣೆಗಾಗಿ ಬಿಜೆಪಿ (BJP) ಸರ್ಕಾರದಿಂದ ಜಮೀನು ಪಡೆದಿದ್ದು, ಯಾವುದೇ ಲಾಭಕ್ಕಾಗಿ ಅಲ್ಲ. ಬ್ಯಾಂಕಿಂಗ್ ವ್ಯವಹಾರಕ್ಕಾಗಿ ಅದನ್ನ ಪಡೆದಿಲ್ಲ. ಈಗಿನ ಸರ್ಕಾರದಲ್ಲಿ ಪೂಜೆ ಮಾಡಲು ಸಹ ಅನುಮತಿ ಕೇಳುವಂತಹ ಪರಿಸ್ಥಿತಿ ಎದುರಾಗಿದೆ. ಟಿ. ನರಸೀಪುರದಲ್ಲಿ ದಲಿತ ಹಿಂದೂ ಯುವಕ ಬೆಳೆಯುತ್ತಾನೆ ಎಂಬ ಕಾರಣಕ್ಕೆ ಅವನನ್ನ ಹತ್ಯೆ ಮಾಡಲಾಗಿದೆ. ಹಿಂದೂ ವಿರೋಧಿ ಅನ್ನೂದು ಕಾಂಗ್ರೆಸ್‌ನ ರಕ್ತದ ಕಣಕಣದಲ್ಲೂ ಇದೆ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ದಶಪಥ ಹೆದ್ದಾರಿಯಲ್ಲಿ ಸರಣಿ ಅಪಘಾತ- ನಾಲ್ಕು ವಾಹನಗಳು ಜಖಂ

    ವಿಧಾನಸೌಧದಲ್ಲಿ ನಮಾಜ್‌ಗೆ ಅವಕಾಶ ನೀಡುವಂತೆ ಕೋರಿಕ್ಕೆ ಪ್ರತಿಕ್ರಿಯಿಸಿ, ಇಲ್ಲಿಯವರೆಗೂ ಹೇಗೆಲ್ಲಾ ದೇಶವನ್ನ ನುಂಗಿ ಹಾಕಿದ್ದಾರೆ ಅನ್ನೋದು ಗೊತ್ತಿದೆ. ವಿಧಾನಸೌಧ ಮಕ್ಕಾ ಮದೀನಾದಲ್ಲಿರುವ ಮಸೀದಿ ಅಲ್ಲ. ಅಲ್ಲಿ ಒಬ್ಬೊಬ್ಬರೋ ಒಂದೊಂದು ಕೇಳ್ತಾರೆ. ಸರ್ಕಾರ ಏನಾದರೂ ವಿಧಾನಸೌಧದಲ್ಲಿ ನಮಾಜ್‌ ಮಾಡೋಕೆ ಅವಕಾಶ ಕಲ್ಪಿಸಿಕೊಟ್ಟರೆ, ಪ್ರತಿದಿನ ನಾ ವು ಹನುಮಾನ್‌ ಚಾಲಿಸಾ ಪಠಣ ಮಾಡ್ತೇವೆ. ಜೊತೆಗೆ ದೊಡ್ಡ ಪ್ರಮಾಣದ ಹೋರಾಟ ಮಾಡ್ತೀವಿ, ಇಡೀ ಕರ್ನಾಟವೇ ಹೊತ್ತಿ ಉರಿಯುತ್ತೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜನವರಿಯವರೆಗೆ ಬಿಜೆಪಿಯವರು ಗ್ಯಾರಂಟಿ ಬಗ್ಗೆ ಮಾತನಾಡಬಾರದು: ಕಿಮ್ಮನೆ ರತ್ನಾಕರ್

    ಜನವರಿಯವರೆಗೆ ಬಿಜೆಪಿಯವರು ಗ್ಯಾರಂಟಿ ಬಗ್ಗೆ ಮಾತನಾಡಬಾರದು: ಕಿಮ್ಮನೆ ರತ್ನಾಕರ್

    ಶಿವಮೊಗ್ಗ: ಜನವರಿಯವರೆಗೆ ಬಿಜೆಪಿಯವರು ಗ್ಯಾರಂಟಿ ಬಗ್ಗೆ ಮಾತನಾಡಬಾರದು ಎಂದು ಮಾಜಿ ಸಚಿವ ಹಾಗೂ ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ (Kimmane Ratnkar) ಹೇಳಿದ್ದಾರೆ.

    ಶಿವಮೊಗ್ಗ (Shivamogga) ದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ 5 ಗ್ಯಾರಂಟಿ ಭರವಸೆ ಕೊಟ್ಟಿತ್ತು. ಗ್ಯಾರಂಟಿಗಳನ್ನು ಸರ್ಕಾರ ಹಂತ ಹಂತವಾಗಿ ಅನುಷ್ಠಾನ ಮಾಡುತ್ತಿದೆ. ಗ್ಯಾರಂಟಿಗಳ ಬಗ್ಗೆ ಬಿಜೆಪಿ (BJP) ಯವರು ಸಾಕಷ್ಟು ಟೀಕೆ ಮಾಡುತ್ತಿದ್ದಾರೆ. ಇವರ ತಲೆಯೊಳಗೆ ಏನು ಸಗಣಿ ಇದೆಯಾ..? ನನಗೆ ಅರ್ಥ ಅಗುತ್ತಿಲ್ಲ. ಸಾಮಾನ್ಯ ಕಾರ್ಯಕರ್ತ ಹೇಳಿದರೆ ತಲೆ ಕೆಡಿಸಿಕೊಳ್ಳಲ್ಲ. ಸಂಸತ್ ಸದಸ್ಯರು, ಸಚಿವರು, ರಾಜ್ಯವನ್ನು ಆಳಿದವರು ಜವಾಬ್ದಾರಿಯಿಂದ ಮಾತನಾಡಬೇಕು. ಗಾಂಧಿ ಪ್ರತಿಮೆ ಎದುರು ಜುಲೈ 3 ರಂದು ಪ್ರತಿಭಟನೆ ಮಾಡ್ತೇವೆ ಅಂದಿದ್ದಾರೆ ಎಂದರು.

    ಯಡಿಯೂರಪ್ಪ (BS Yediyurappa) ಬಗ್ಗೆ ಗೌರವ ಇದೆ. ಅವರಿಗೆ ಪ್ರಶ್ನೆ ಮಾಡುತ್ತೆನೆ. ನೀವು ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಸಾಲ ಮನ್ನಾ ಮಾಡ್ತೇವೆ ಎಂದಿದ್ರು, ಮಾಡಿದ್ರಾ..?. 605 ಅಂಶಗಳ ಪ್ರಣಾಳಿಕೆ ನೀಡಿದ್ರು, ಅದರಲ್ಲಿ 50 ಅಂಶನಾದ್ರೂ ಅನುಷ್ಟಾನ ಮಾಡಿದ್ರಾ? 2 ಕೋಟಿ ಉದ್ಯೋಗ ಕೋಡ್ತೇವೆ ಎಂದು ಹೇಳಿದ್ರು. 9 ವರ್ಷಕ್ಕೆ 18 ಕೋಟಿ ಉದ್ಯೋಗವನ್ನು ಕೊಡ್ತೇವೆ ಎಂದವರು ಕೊಟ್ರಾ?. ಇದಕ್ಕೆಲ್ಲಾ ಯಡಿಯೂರಪ್ಪ, ಈಶ್ವರಪ್ಪ, ಪ್ರತಾಪ್ ಸಿಂಹ ಉತ್ತರ ಕೋಡ್ತಾರಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಕೊಪ್ಪಳದ ವಿದ್ಯಾರ್ಥಿನಿ ಪತ್ರಕ್ಕೆ ಸಿದ್ದರಾಮಯ್ಯ ಸಂತಸ – ಮರಳಿ ಪತ್ರ ಬರೆದ ಸಿಎಂ

    ಬಿಜೆಪಿಯವರಿಗೆ ಕಾಂಗ್ರೆಸ್ ಗ್ಯಾರಂಟಿ (Congress Guarantee) ಬಗ್ಗೆ ಮಾತನಾಡುವ ನೈತಿಕತೆ, ಅರ್ಹತೆ ಇಲ್ಲ. ಇವೆಲ್ಲವನ್ನೂ ಒಂದೇ ಸರಿ ಮಾಡುವುದು ಅಷ್ಟು ಸುಲಭ ಅಲ್ಲ. ಬಸ್ ವ್ಯವಸ್ಥೆ ಕೊಟ್ಟಷ್ಟು ಉಳಿದ ಗ್ಯಾರಂಟಿ ಇಲ್ಲ. ಕೆಲವೊಂದು ವ್ಯವಸ್ಥೆ ಅಗಬೇಕು. ಒಂದೆರಡು ದಿನದಲ್ಲಿ ಮನೆಯ ಸಮಸ್ಯೆಯೇ ಬಗೆಹರಿಯಲ್ಲ. ಜನವರಿಯವರೆಗೆ ಬಿಜೆಪಿಯವರು ಗ್ಯಾರಂಟಿ ಬಗ್ಗೆ ಮಾತನಾಡಬಾರದು. ಜುಲೈ 3 ರಂದು ನಾನು ಕೂಡ ಉಪವಾಸ ಹೋರಾಟ ಮಾಡುತ್ತೇನೆ. ಶಿವಮೊಗ್ಗದ ಗಾಂಧಿ ಪಾರ್ಕ್‍ನ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ಮಾಡ್ತೇನೆ. ಕೇಂದ್ರ ಸರ್ಕಾರ ಕೊಟ್ಟ ಭರವಸೆಗಳನ್ನು ಈಡೇರಿಸಿಲ್ಲ. ಅವರು 15 ಲಕ್ಷ ಕೊಟ್ರೆ ನಾವೆಲ್ಲರೂ ರಾಜ್ಯ ಸರ್ಕಾರಕ್ಕೆ ಜಮಾ ಮಾಡ್ತೇವೆ ಎಂದು ಹೇಳಿದರು.

    ಇದೇ ವೇಳೆ ಕಾಂಗ್ರೆಸ್ ಸರ್ಕಾರ ಹಗರಣ ತನಿಖೆ ಮಾಡಲಿ ಎಂಬ ಆರಗ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ಕೂಡ ಹಗರಣಗಳ ತನಿಖೆಗೆ ಒತ್ತಾಯ ಮಾಡಿದ್ದೇನೆ. ಪಿಎ ಹಗರಣವನ್ನು ತನಿಖೆ ಮಾಡಲು ಒತ್ತಾಯಿಸುತ್ತೇನೆ. ಆ ಹಗರಣದ ದುಡ್ಡಲ್ಲೇ ನಾನು ತೀರ್ಥಹಳ್ಳಿಯಲ್ಲಿ ಸೋತಿದ್ದೇನೆ. ಆರತಿ ಮಾಡಿದ್ರಲ್ಲಾ ಆ ದಿವ್ಯಾ ಹಾಗರಗಿ, ಸ್ಯಾಂಟ್ರೋ ರವಿ, ಆರ್ ಜೆ.ಪಾಟೀಲ್ ಹಣದಿಂದಲೇ ಸೋತಿದ್ದೇನೆ ಎಂದು ಹೇಳಿದರು.

    ತೀರ್ಥಹಳ್ಳಿಯಲ್ಲಿ 70 ಕೋಟಿ ಖರ್ಚು ಮಾಡಿದ್ದಾರೆ. ಈ ಹಿಂದೆ ನಂದಿತಾ ಪ್ರಕರಣ ಹೇಳಿದ್ರಲ್ಲಾ ಇವರದ್ದೇ ಸರ್ಕಾರ ಇತ್ತಲ್ಲ ಏನು ಮಾಡಿದ್ರು. ಸಿಬಿಐ ತನಿಖೆ ಮಾಡಿದ್ರೇ ಇವರೇ ಒಳಗೆ ಹೋಗ್ತಾರೆ. ಅಕ್ಕಿ ಕೊಡಲ್ಲ ಎಂದು ಹೇಳ್ತಾ ಇದ್ದಾರೆ. ಒಕ್ಕೂಟ ವ್ಯವಸ್ಥೆಯಲ್ಲಿ ಇವೆಲ್ಲಾ ದೇಶದ ಏಕತೆಗೆ ಧಕ್ಕೆ ಉಂಟು ಮಾಡುತ್ತವೆ. ಪ್ರತ್ಯೇಕ ಕೇಳಿದ್ರೇ ದೇಶದ ಏಕತೆ ಸ್ಥಿತಿ ಏನಾಗುತ್ತದೆ ಎಂದು ಯೋಚನೆ ಮಾಡಲಿ ಎಂದು ತಿಳಿಸಿದರು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ಗೃಹಜ್ಯೋತಿಗೆ ಭರ್ಜರಿ ನೋಂದಣಿ- 8 ದಿನದಲ್ಲಿ 51 ಲಕ್ಷ ಮಂದಿ ಅರ್ಜಿ ಸಲ್ಲಿಕೆ

    ಗೃಹಜ್ಯೋತಿಗೆ ಭರ್ಜರಿ ನೋಂದಣಿ- 8 ದಿನದಲ್ಲಿ 51 ಲಕ್ಷ ಮಂದಿ ಅರ್ಜಿ ಸಲ್ಲಿಕೆ

    ಬೆಂಗಳೂರು: ಕಾಂಗ್ರೆಸ್ ಸರ್ಕಾರ (Congress Government) ದ ಮಹತ್ವಾಕಾಂಕ್ಷೆ ಯೋಜನೆ ಗೃಹಜ್ಯೋತಿ (Gruha Jyothi) ಗೆ ಭರ್ಜರಿ ನೋಂದಣಿ ಮಾಡಲಾಗಿದೆ.

    ಅರ್ಜಿ ಸಲ್ಲಿಕೆ ಶುರುವಾಗಿ ಕೇವಲ 8 ದಿನದಲ್ಲಿ 51 ಲಕ್ಷ ಜನ ಅರ್ಜಿ ಸಲ್ಲಿಸಿದ್ದಾರೆ. ಮೊದಲ ದಿನದಿಂದ ಇಲ್ಲಿಯವರೆಗೆ ಒಟ್ಟು 51 ಲಕ್ಷದ 17 ಸಾವಿರದ 693 ಮಂದಿ ಅರ್ಜಿ ನೀಡಿದ್ದಾರೆ.

    ಈ ಯೋಜನೆಯ ಫಲಾನುಭವಿಯಾಗಲು ಆನ್‍ಲೈನ್ ಮೂಲಕ ಸೇವಾ ಸಿಂಧು (Seva Sindhu) ಪೋರ್ಟಲ್‍ಗೆ ಭೇಟಿ ನೀಡಿ (https://sevasindhugs.karnataka.gov.in/) ಲಿಂಕ್ ಕ್ಲಿಕ್ ಮಾಡಿದರೆ ಕಾಂಗ್ರೆಸ್ ನೀಡಿದ್ದ 5 ಗ್ಯಾರಂಟಿಗಳ ವಿವರವಿದೆ. ಅದರಲ್ಲಿ ಗೃಹಜ್ಯೋತಿ ಮೇಲೆ ಕ್ಲಿಕ್ ಮಾಡಿದರೆ ಮುಂದಿನ ಪುಟ ತೆರೆದುಕೊಳ್ಳಲಿದೆ. ಕನ್ನಡ ಮತ್ತು ಇಂಗ್ಲಿಷ್‌ ನಲ್ಲಿ ಅರ್ಜಿ ಸಲ್ಲಿಕೆ ಮಾಡಲು ಅವಕಾಶ ನೀಡಲಾಗಿದೆ. ಈ ವೆಬ್‍ಸೈಟ್ ಮೊಬೈಲ್, ಡೆಸ್ಕ್ ಟಾಪ್, ಲ್ಯಾಪ್ ಟಾಪ್‍ಗಳಲ್ಲಿಯೂ ಕಾರ್ಯ ನಿರ್ವಹಣೆ ಮಾಡಲಿದೆ.

    ಬೆಂಗಳೂರು ಒನ್, ಗ್ರಾಮ ಒನ್, ಮೊಬೈಲ್ ಹಾಗೂ ಲ್ಯಾಪ್ ಟಾಪ್ ಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಸರ್ಕಾರ ಗೃಹಜ್ಯೋತಿ ನೋಂದಣಿಗೆ ಯಾವುದೇ ಗಡುವು ನೀಡಿಲ್ಲ. ಹೀಗಾಗಿ ಸಾರ್ವಜನಿಕರು ಆತಂಕ ಪಡದೆ ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಇದನ್ನೂ ಓದಿ: 2ನೇ ವೀಕೆಂಡ್‌ನಲ್ಲೂ ಮಹಿಳೆಯರ ‘ಶಕ್ತಿ’ ಪ್ರದರ್ಶನ – ಯಾವ ಬಸ್‌ನಲ್ಲಿ ಎಷ್ಟು ಮಂದಿ ಪ್ರಯಾಣ?

    ಅರ್ಜಿ ಸಲ್ಲಿಸುವುದು ಹೇಗೆ..?: ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡುವಾಗ ಫಲಾನುಭವಿಗಳು ಆಧಾರ್ ಕಾರ್ಡ್, ವಿದ್ಯುಚ್ಛಕ್ತಿ ಬಿಲ್‍ನಲ್ಲಿ ಇರುವಂತೆ ಗ್ರಾಹಕರ ಐಡಿಗಳ ಮಾಹಿತಿಗಳನ್ನು ನೀಡಬೇಕಾಗುತ್ತದೆ. ಒಂದು ವೇಳೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರೆ ಕರಾರು ಪತ್ರವನ್ನು ಸಹ ನೀಡಬೇಕು.

    ನೋಂದಣಿ ಸಮಯದಲ್ಲಿ ಎಸ್ಕಾಂ ಹೆಸರು, ಖಾತೆ ಸಂಖ್ಯೆ, ಎಸ್ಕಾಂ ನಲ್ಲಿರುವಂತೆ ಖಾತೆದಾರರ ಹೆಸರು, ಖಾತೆದಾರರ ವಿಳಾಸ, ಎಸ್ಕಾಂ ಹೆಸರು, ಬಳಕೆದಾರರ ವಿಧ (ಬಾಡಿಗೆದಾರರು/ ಮಾಲೀಕರು), ಆಧಾರ್ ಸಂಖ್ಯೆ, ಅರ್ಜಿದಾರರ ಹೆಸರು, ಸಂವಹನಕ್ಕಾಗಿ ದೂರವಾಣಿ ಸಂಖ್ಯೆ ಈ ವಿವರಗಳನ್ನು ಭರ್ತಿ ಮಾಡಬೇಕಿದೆ.

  • ಅಧಿಕಾರಿಗಳ ವರ್ಗಾವಣೆ ವಿಚಾರ: ಸಿಎಂ-ಸಚಿವರ ನಡುವೆ ಮೌನ ಸಂಘರ್ಷ

    ಅಧಿಕಾರಿಗಳ ವರ್ಗಾವಣೆ ವಿಚಾರ: ಸಿಎಂ-ಸಚಿವರ ನಡುವೆ ಮೌನ ಸಂಘರ್ಷ

    ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ತಿಂಗಳಾಗುವ ಹೊತ್ತಿಗೆ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಭಿನ್ನಾಭಿಪ್ರಾಯ ತಾರಕಕ್ಕೇರಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಕೆಲವು ಹಿರಿಯ ಸಚಿವರುಗಳ ನಡುವೆ ಅಧಿಕಾರಿಗಳ ಪೋಸ್ಟಿಂಗ್ ವಿಷಯದಲ್ಲಿ ಮುಸುಕಿನ ಗುದ್ದಾಟ ಆರಂಭವಾಗಿದೆ. ತಮ್ಮನ್ನು ವಿಶ್ವಾಸಕ್ಕೆ ಪಡೆಯದೇ ನಮ್ಮ ಇಲಾಖೆಯ ಆಯಕಟ್ಚಿನ ಸ್ಥಳಗಳಿಗೆ ಕೆಲವು ಅಧಿಕಾರಿಗಳನ್ನು ಸಿಎಂ ನಿಯೋಜಿಸಿರುವುದು ಮುನಿಸಿಗೆ ಕಾರಣವಾಗಿದೆ.

     

    ಬೃಹತ್ ಕೈಗಾರಿಕಾ ಸಚಿವ ಎಂಬಿ ಪಾಟೀಲ್ (MB Patil) ವಿದೇಶ ಪ್ರವಾಸದಲ್ಲಿದ್ದಾಗ, ಕೆಐಡಿಬಿ ಸಿಇಒ ಹುದ್ದೆಗೆ ಮೈಸೂರು ಮೂಲದ ಸ್ವಜಾತಿಯ ಐಎಎಸ್ ಅಧಿಕಾರಿಯನ್ನು ಸಿಎಂ ವರ್ಗಾಯಿಸಿದ್ದರು. ಆ ಹುದ್ದೆಗೆ ತಮ್ಮ ಬಳಗ ಮತ್ತೊಬ್ಬರನ್ನು ಸಚಿವರು ನಿಯೋಜಿಸಲು ಬಯಸಿದ್ದರು. ತಕ್ಷಣ ಆ ಅಧಿಕಾರಿ ಅಧಿಕಾರ ವಹಿಸಿಕೊಳ್ಳದಂತೆ ಸಚಿವರು ಸೂಚಿಸುವ ಮೂಲಕ ತಕರಾರು ಎತ್ತಿದ್ದಾರೆ. ಸಿಎಂ ಆಪ್ತ ಬಳಗದ ಕೈಚಳಕದಿಂದ ಈ ವಿದ್ಯಮಾನ ನಡೆದಿದೆ ಎಂದು ಸಚಿವ ಪಾಟೀಲ್ ಅಸಮಾಧಾನ ತೋಡಿಕೊಂಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಸೋಮವಾರ 41.34 ಲಕ್ಷ ಮಹಿಳೆಯರಿಂದ ಪ್ರಯಾಣ – ಸರ್ಕಾರ ಪಾವತಿಸಬೇಕು 8.83 ಕೋಟಿ ರೂ.

    ಅದೇ ರೀತಿ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ವ್ಯಾಪ್ತಿಯ ಬಿಡಿಎ ಯ ಹುದ್ದೆಯೊಂದಕ್ಕೆ ಸಚಿವ ಜಮೀರ್ (Zameer Ahmed Khan)  ಶಿಫಾರಸ್ಸಿನಿಂದ ಸಿಎಂ ಅಧಿಕಾರಿಯೊಬ್ಬರನ್ನು ವರ್ಗಾಯಿಸಿದ್ದರು. ತಮ್ಮ ಗಮನಕ್ಕೆ ಬಾರದೇ ಈ ನಿಯೋಜನೆ ನಡೆದಿರುವುದಕ್ಕೆ ಡಿಕೆಶಿ ವಿರೊಧ ವ್ಯಕ್ತಪಡಿಸಿದ್ದು, ಅವರು ವರ್ಗಾವಣೆಯನ್ನು ತಡೆ ಹಿಡಿದಿದ್ದಾರೆ ಎನ್ನಲಾಗಿದೆ. ಅದೇ ರೀತಿ ನೂತನ ಬೆಂಗಳೂರು ಪೋಲೀಸ್ ಆಯುಕ್ತ ಹುದ್ದೆ ಸೇರಿದಂತೆ ಹಿರಿಯ ಪೋಲೀಸ್ ಅಧಿಕಾರಿಗಳ ವರ್ಗಾವಣೆ, ನಿಯೋಜನೆಯ ವೇಳೆ ಸಿಎಂ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಗೃಹ ಸಚಿವ ಡಾ. ಪರಮೇಶ್ವರ್ ಮುನಿಸಿಕೊಂಡಿದ್ದಾರೆ.

    ಐಪಿಎಸ್ ಅಧಿಕಾರಿಗಳ ವರ್ಗಾವಣೆ ಸಿಎಂ ವಿವೇಚಾನಾಧಿಕಾರ ಆದರೂ, ಇಲಾಖೆಯಲ್ಲಿ ಕೆಲಸ ಮಾಡುವಾಗ ಸಮನ್ವಯತೆ ಕಾರಣಕ್ಕೆ ತಮ್ಮ ಆಪ್ತ ಅಧಿಕಾರಿಗಳನ್ನು ನಿಯೋಜಿಸಲು ಅವಕಾಶ ಇರಬೇಕು ಎಂದು ಪರಮೇಶ್ವರ್ ಬಯಸಿದ್ದಾರೆ ಎನ್ನಲಾಗಿದೆ. ಹೀಗೇ ಹಲವು ವರ್ಗಾವಣೆ ವಿಚಾರದಲ್ಲಿ ಸಿಎಂ ಆಪ್ತ ಬಳಗದ ಕೈಚಳಕದಿಂದ ಸಿಎಂ ಹಾಗೂ ಕೆಲವು ಸಚಿವರಗಳ ನಡುವೆ ಸಮನ್ವಯತೆ ಇಲ್ಲದಂತಾಗಿದ್ದು, ಭಿನ್ನಾಭಿಪ್ರಾಯಕ್ಕೆ ಎಡೆಮಾಡಿದೆ. ಆರಂಭದಲ್ಲಿಯೇ ಈ ರೀತಿಯ ಗೊಂದಲಕ್ಕೆ ತೆರೆ ಎಳೆಯದಿದ್ದರೆ, ಇದು ತಾರಕ್ಕೇರುವ ಸಾಧ್ಯತೆ ಇದೆ ಎಂದು ಕೆಲವು ಸಚಿವರುಗಳು ಗೊಣಗತೊಡಗಿದ್ದಾರೆ. ಈ ವಿದ್ಯಮಾನಗಳ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯ ಉಸ್ತುವಾರಿ ಬೆಂಗಳೂರಿಗೆ ಆಗಮಿಸಿದ್ದು, ಬಿಕ್ಕಟ್ಟಿಗೆ ತೇಪೆ ಹಚ್ಚುವ ಕಾರ್ಯಕ್ಕೆ ಕೈ ಹಾಕಿದ್ದಾರೆ ಎನ್ನಲಾಗಿದೆ.

  • ಗ್ಯಾರಂಟಿಗಳ ಜಾರಿಯಲ್ಲ, ಕಾಂಗ್ರೆಸ್ ಸರ್ಕಾರದ್ದು ಆರಂಭ ಶೂರತ್ವ ಮಾತ್ರ: ಬೊಮ್ಮಾಯಿ ಟೀಕೆ

    ಗ್ಯಾರಂಟಿಗಳ ಜಾರಿಯಲ್ಲ, ಕಾಂಗ್ರೆಸ್ ಸರ್ಕಾರದ್ದು ಆರಂಭ ಶೂರತ್ವ ಮಾತ್ರ: ಬೊಮ್ಮಾಯಿ ಟೀಕೆ

    ಹುಬ್ಬಳ್ಳಿ: ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರ ಜವಬ್ದಾರಿ ಇಲ್ಲದ ಸರ್ಕಾರ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅಸಮಾಧಾನ ವ್ಯಕ್ತಪಡಿಸಿದರು.

    ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ (Congress) ಅಧಿಕಾರಕ್ಕೆ ಬಂದು ಒಂದು ತಿಂಗಳು ಹತ್ತಿರ ಬಂದಿದೆ. ರಾಜ್ಯಕ್ಕೆ ನೈಸರ್ಗಿಕ ಆಪತ್ತು ಬರುತ್ತಿವೆ. ಮಾನ್ಸೂನ್ ಮಳೆ ತಡವಾಗಿದ್ದರಿಂದ ಬಿತ್ತನೆ ಕೂಡ ತಡವಾಗಿ ಆಗುತ್ತಿದೆ. ಮಾನ್ಸೂನ್ ಮಳೆ (Mansoon Rain) ಸಕಾಲಕ್ಕೆ ಬಾರದಿದ್ದರೆ ರೈತರಿಗೆ ಬಹಳಷ್ಟು ಕಷ್ಟವಾಗುತ್ತದೆ. ಮತ್ತೊಂದು ಕಡೆ ಭೀಕರ ಚಂಡಮಾರುತದ ಸೂಚನೆ ಸಹ ಬರುತ್ತಿವೆ. ಹೀಗಿದ್ದರೂ ಸಿಎಂ ಇವುಗಳನ್ನು ನಿಭಾಯಿಸಲು ಯಾವುದೇ ರೀತಿ ಸನ್ನದ್ಧವಾಗಿಲ್ಲ ಎಂದರು.

    ರಾಜ್ಯದಲ್ಲಿ ಕುಡಿಯುವ ನೀರಿನ (Drinking Water) ಸಮಸ್ಯೆ ಎದುರಾಗಿದೆ. ರಾಜ್ಯದಲ್ಲಿರುವ ಡ್ಯಾಂ ಗಳ ನೀರು ಅತ್ಯಂತ ಕೆಳಮಟ್ಟದಲ್ಲಿದೆ. ಆದರೆ ನಾನು ಇಷ್ಟು ಬೇಗ ರಾಜ್ಯದಲ್ಲಿ ಬರಗಾಲ ಬರಲಿದೆ ಎಂದು ಹೇಳುವುದಿಲ್ಲ. ಆದರೆ ರಾಜ್ಯ ಸರ್ಕಾರ ಸಮರ್ಪಕವಾಗಿ ಯೋಜನೆಗಳನ್ನು ಮಾಡಿಕೊಳ್ಳಬೇಕು. ತಾಲೂಕು ಮಟ್ಟದಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಿ ಅದರಲ್ಲಿ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳನ್ನು ಸೇರಿಸಿ, ಅವರಿಂದ ಸಹಕಾರ ಪಡೆಯಬೇಕು. ಈ ಕೂಡಲೇ 100 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಬೇಕು. ಎನ್‍ಡಿಆರ್‍ಎಫ್ ತಂಡಗಳನ್ನು ಚುರುಕುಗೊಳಿಸಬೇಕು. ನಗರ ಪ್ರದೇಶಗಳಲ್ಲಿಯೂ ಸಹ ಕುಡಿಯುವ ನೀರಿನ ಸಮಸ್ಯೆಯಿದೆ. ಈ ಸರ್ಕಾರ ಜನರಿಗೆ ಸಹಾಯಕವಲ್ಲದ ಸರ್ಕಾರ ಎಂದರು.

    ಗ್ಯಾರಂಟಿ ಬಗ್ಗೆ ಕಾದುನೋಡುವ ತಂತ್ರ ನಮ್ಮದಾಗಿದೆ. ಉಚಿತ ಬಸ್ ಪಾಸ್ (Free Bus Pass) ಆರಂಭದ ಶೂರತ್ವವನ್ನು ಸರ್ಕಾರ ತೋರಿಸುತ್ತಿದೆ. ಗ್ಯಾರಂಟಿ ರೂಪದಲ್ಲಿ ತಾಯಿಯಂದ್ರಿಗೆ ಉಚಿತ ನೀಡುವ ಸಲುವಾಗಿ ಅವರಿಗೆ ಸಮರ್ಪಕ ಪ್ರಯಾಣ ಇಲ್ಲದಂತೆ ಆಗುತ್ತಿದೆ. ರಾಜ್ಯದಲ್ಲಿ ಬಸ್‍ಗಳ ಸಮಸ್ಯೆ ಆಗುತ್ತಿದೆ. ಈಗಾಗಲೇ ನಾವು ಡೀಸೆಲ್ ಅನುದಾನ ಬಿಡುಗಡೆ ಮಾಡಿದ್ದೇವೆ. ಅದನ್ನು ಮುಂದುವರಿಕೆ ಮಾಡಬೇಕು. ಗ್ಯಾರಂಟಿಗಳಿಗೆ ಹಣಕಾಸಿನ ಹೊಂದಾಣಿಕೆ ಬಗ್ಗೆ ಸರ್ಕಾರ ಸ್ಪಷ್ಟವಾಗಿ ಹೇಳುತ್ತಿಲ್ಲ. ಹಣಕಾಸಿನ ವಿಚಾರದಲ್ಲಿ ಜನರನ್ನು ಕತ್ತಲಲ್ಲಿ ಇಡಲು ಸರ್ಕಾರ ಮುಂದಾಗಿದೆ. ಗ್ಯಾರಂಟಿ ವಿಚಾರದಲ್ಲಿ ಹಣಕಾಸಿನ ಬಗ್ಗೆ ಮಾಹಿತಿ ಪಡೆಯುವುದು ಪ್ರತಿಯೊಂದು ಕನ್ನಡಿಗನ ಹಕ್ಕು. ಇದು ಒಂದು ಕೈಯಲ್ಲಿ ತೆಗೆದುಕೊಂಡು ಮತ್ತೊಂದು ಕೈಯಲ್ಲಿ ಕೊಡುವಂತಾಗಿದೆ ಎಂದರು.

    ವಿದ್ಯುತ್ ದರ (Electricity Bill) ಏರಿಕೆ ನಾವು ಮಾಡಿಲ್ಲ: ರಾಜ್ಯದಲ್ಲಿ ಏಕಾಏಕಿ ವಿದ್ಯುತ್ ದರ ಏರಿಕೆ ಬಗ್ಗೆ ಸ್ಪಷ್ಟನೆ ನೀಡಿದ ಮಾಜಿ ಸಿಎಂ ಬೊಮ್ಮಾಯಿ, ನಾವು ವಿದ್ಯುತ್ ದರ ಏರಿಕೆ ಅನುಷ್ಠಾನ ತಂದಿಲ್ಲ. ವಿದ್ಯುತ್ ದರ ಏರಿಕೆ ನಮ್ಮ ಸರ್ಕಾರ ಮಾಡಿಲ್ಲ. ದರ ಏರಿಕೆ ವರದಿಯನ್ನು ನಾವು ಒಪ್ಪಿರಲಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ವಿದ್ಯುತ್ ದರ ಏರಿಕೆಯ ಪ್ರಸ್ತಾವನೆಗೆ ಒಪ್ಪಿಗೆ ನೀಡಿದೆ. ಇದರಿಂದಾಗಿ ದರ ಜಾಸ್ತಿ ಆಗಿದೆ ಎಂದು ರಾಜ್ಯ ಸರ್ಕಾರದ ನಡೆಯ ವಿರುದ್ಧ ಅಸಮಾಧಾನ ಹೊರಹಾಕಿದರು.

    ಅಧಿವೇಶನದ ವೇಳೆ ವಿಪಕ್ಷ ನಾಯಕನ ಆಯ್ಕೆ: ನಾನು ವಿಪಕ್ಷ ಸ್ಥಾನದ ಆಕಾಂಕ್ಷಿಯ ಪ್ರಶ್ನೆಯೇ ಇಲ್ಲ. ಈ ಸ್ಥಿತಿಯಲ್ಲಿ ವಿಳಂಬವಾಗ್ತಿಲ್ಲ. ಅಧಿವೇಷನ ಕರೆದ ಕೂಡಲೇ ವಿರೋಧ ಪಕ್ಷದ ನಾಯಕರ ಆಯ್ಕೆ ನಡೆಯುತ್ತೆ. ಪ್ರತಿ ಬಾರಿ ನಡೆಯುವ ಸಂಪ್ರದಾಯ ಇದಾಗಿದೆ ಎಂದರು. ಇದನ್ನೂ ಓದಿ: ಟ್ವಿಟ್ಟರ್‌ ಕಾನೂನು ಪಾಲನೆ ಮಾಡದೇ ನಿರಂತರ ಉಲ್ಲಂಘನೆ ಮಾಡುತ್ತಿತ್ತು: ರಾಜೀವ್‌ ಚಂದ್ರಶೇಖರ್‌

    ಜನರು ಕೊಟ್ಟ ತೀರ್ಪು ಒಪ್ಪಿಕೊಂಡಿದ್ದೇವೆ: ಸೋಲಿನ ಬಗ್ಗೆ ರಾಷ್ಟ್ರೀಯ ನಾಯಕರು ಬೇಸರ ಮಾಡಿಕೊಳ್ಳುವ ಪ್ರಶ್ನೆಯಿಲ್ಲ. ಜನ ಕೊಟ್ಟ ತೀರ್ಪು ನಾವು ಒಪ್ಪಿಕೊಂಡಿದ್ದೇವೆ. ನಾನೇ ಸೋಲಿನ ನೈತಿಕ ಹೊಣೆ ಹೊತ್ತಿದ್ದೇನೆ. ಲೋಕಸಭೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಕುರಿತು ಚರ್ಚೆಗಳು ನಡೆದಿಲ್ಲ. ಎಲ್ಲರ ಸೋಲಿಗೆ ನಾನೇ ಹೊಣೆ ಅಂದ ಮೇಲೆ ಶಾಸಕರ ಸೋಲಿನ ಆರೋಪದ ಬಗ್ಗೆ ಉತ್ತರಿಸುವ ಪ್ರಶ್ನೆಯಿಲ್ಲ. ಇನ್ನು ಇದೇ ವೇಳೆ ಶೆಟ್ಟರ್ ಮರಳಿ ಬಿಜೆಪಿ ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿದಂತೆ, ಅವರೇ ಕಾಂಗ್ರೆಸ್ ಗೆ ಹೋಗಿದ್ದರಿಂದ ಸಂತೃಪ್ತಿ ಇದೆ ಅಂದಿದ್ದಾರೆ. ಹಾಗಿದ್ದಾಗ ಮತ್ತೆ ಬಿಜೆಪಿಗೆ ಬರೋ ಪ್ರಶ್ನೆ ಬರಲ್ಲ. ಪ್ರಹ್ಲಾದ್ ಜೋಶಿಗೆ ಟಿಕೇಟ್ ಕೊಡಬಾರದೆಂಬ ಅಭಿಯಾನದ ಬಗ್ಗೆ, ಪ್ರತಿ ಬಾರಿ ಚುನಾವಣಾ ಪೂರ್ವದಲ್ಲಿ ಇಂತಹದ್ದು ನಡೆಯುತ್ತದೆ ಎಂದರು.

    ವಿಧಾನ ಪರಿಷತ್ (Vidhana Parishad) ನ ಮೂರು ಸ್ಥಾನಗಳಿಗೂ ಸ್ಪರ್ಧೆ: ವಿಧಾನ ಪರಿಷತ್ ಚುನಾವಣೆಯ ಮೂರೂ ಸ್ಥಾನಕ್ಕೆ ನಾವು ಸ್ಪರ್ಧಿಸುತ್ತೇವೆ. ಮೂರು ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲ್ಲೋದು ಖಚಿತ. ಆದರೂ ಪ್ರತಿಪಕ್ಷವಾಗಿ ಸ್ಪರ್ಧಿಸುತ್ತೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

     

  • ನಮಗೆ ಎಷ್ಟೇ ಕಷ್ಟ ಬರಲಿ 5 ಗ್ಯಾರಂಟಿ ಈಡೇರಿಸುತ್ತೇವೆ: ಸಿದ್ದರಾಮಯ್ಯ ಶಪಥ

    ನಮಗೆ ಎಷ್ಟೇ ಕಷ್ಟ ಬರಲಿ 5 ಗ್ಯಾರಂಟಿ ಈಡೇರಿಸುತ್ತೇವೆ: ಸಿದ್ದರಾಮಯ್ಯ ಶಪಥ

    ಬೆಂಗಳೂರು: ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಚಾಲನೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮಗೆ ಎಷ್ಟೇ ಕಷ್ಟ ಬರಲಿ ನಾವು ಪ್ರಣಾಳಿಕೆಯಲ್ಲಿ ಘೋಷಿಸಿರುವ 5 ಗ್ಯಾರಂಟಿಗಳನ್ನು ಈಡೇರಿಸಿಯೇ ಈಡೇರಿಸುತ್ತೇವೆ ಎಂದು ಶಪಥ ಮಾಡಿದರು.

    ಉಚಿತ ಬಸ್ ಪ್ರಯಾಣಕ್ಕೆ ಚಾಲನೆ ನೀಡಿದ ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ 600 ಭರವಸೆ ಕೊಟ್ಟಿತ್ತು. 60 ಭರವಸೆ ಕೂಡ ಕೊಟ್ಟಿಲ್ಲ. ಅದರ ಬಗ್ಗೆ ಚರ್ಚೆ ಮಾಡಿಲ್ಲ. ನಮ್ಮ ಗ್ಯಾರಂಟಿ ಬಗ್ಗೆ ಚರ್ಚೆ ಮಾಡುತ್ತಾರೆ. ಅದಕ್ಕೆ ಕೆಲವು ಮಾಧ್ಯಮಗಳು ಕೈ ಜೋಡಿಸಿವೆ. ನಮಗೆ ಯಾವುದೇ ಜಾತಿ, ಧರ್ಮದ ಎಲ್ಲೆ ಇಲ್ಲ. ಎಲ್ಲಾ ಜಾತಿ-ಧರ್ಮದ ಬಡವರಿಗೆ ಆರ್ಥಿಕವಾಗಿ, ಸಾಮಾಜಿಕ ಶಕ್ತಿ ತುಂಬೋ ಕೆಲಸ ಮಾಡುತ್ತೆ. ಗೇಲಿ ಮಾತುಗಳಿಂದ ವಿಚಲಿತರಾಗಿಲ್ಲ. ಹಿಂದೆ ನುಡಿದಂತೆ ನಡೆದಿದೆ ಎಂದರು.

    2013-2018 ರಲ್ಲಿ 168 ಭರವಸೆಯಲ್ಲಿ 158 ಭರವಸೆ ಈಡೇರಿಸಿ ಕೊಟ್ಟ ಮಾತು ಈಡೇರಿಸಿದ್ದೇವೆ. ಕೊಟ್ಟ ಮಾತಂತೆ ನಡೆದುಕೊಳಲ್ಲ ಅಂದ್ರು. ಕೆಲವರು ದಿವಾಳಿ ಆಗುತ್ತೆ ಅಂದರು. ಆದರೆ ನಮಗೆ ಎಷ್ಟೇ ಕಷ್ಟ ಬರಲಿ 5 ಗ್ಯಾರಂಟಿ ಈಡೇರಿಸುತ್ತೇವೆ. ನಾನು ಸಿಎಂ ಆಗಿ ಹೇಳ್ತಿದ್ದೇನೆ. ಕೊಟ್ಟ ಮಾತು ಈಡೇರಿಸುತ್ತೇವೆ. 59 ಸಾವಿರ ಕೋಟಿ 5 ಯೋಜನೆ ಜಾರಿಗೆ ಬೇಕು. ಈಗಾಗಲೇ ಬಜೆಟ್ ಮಂಡನೆ ಆಗಿದೆ. ಹಣಕಾಸು ಹೊಂದಿಸುವ ಕೆಲಸ ಮಾಡ್ತೀವಿ ಎಂದು ಸಿಎಂ ಭರವಸೆ ನೀಡಿದರು. ಇದನ್ನೂ ಓದಿ: ‘ಶಕ್ತಿ’ ಯೋಜನೆ ಹೆಸರಿನ ಹಿಂದಿನ ಸೀಕ್ರೆಟ್ ರಿವೀಲ್ ಮಾಡಿದ ಸಿಎಂ!

    ಗೃಹಜ್ಯೋತಿ ಜುಲೈ 1 ರಿಂದ ಜಾರಿ ಆಗುತ್ತದೆ. ಗೃಹಲಕ್ಷ್ಮಿ ಯೋಜನೆ ಆಗಸ್ಟ್ 16 ಕ್ಕೆ ಜಾರಿ ಆಗುತ್ತೆ. ಸದ್ಯ 40 ಸಾವಿರ ಕೋಟಿ ಹಣ ಬೇಕು. ಎಷ್ಟು ಹಣ ಖರ್ಚು ಮಾಡ್ತೀವಿ ಅನ್ನೋದು ಮುಖ್ಯ ಅಲ್ಲ. ಯಾರಿಗೆ ಯೋಜನೆ ಕೊಡ್ತೀವಿ ಅನ್ನೋದು ಮುಖ್ಯ. 7 ಕೆ.ಜಿ ಅಕ್ಕಿ ಕೊಡ್ತಿದ್ದೆವು, 5 ಕೆಜಿಗೆ ಇಳಿಸಿದ್ರು. ಯಾಕೆ ಅಂದ್ರೆ ಹಣ ಇಲ್ಲ ಅಂದ್ರು. ಅದಕ್ಕೆ ಅಧಿಕಾರ ಬಿಟ್ಟು ಹೋಗಿ ಅಂದ್ವಿ. ನಾವು 10 ಕೆ.ಜಿ ಆಹಾರ ಧಾನ್ಯ ಕೊಡ್ತೀವಿ. ಇದಕ್ಕೆ 10 ಸಾವಿರ ಕೋಟಿ ಬೇಕು. ಬಡವರು ಎರಡು ಹೊತ್ತು ಊಟ ಮಾಡಬೇಕು. ಯಾರೂ ಹಸಿವಿನಿಂದ ಬಳಲಬಾರದು. ಹಸಿವಿನ ನೋವು ಗೊತ್ತಿರೋರಿಗೆ ಅದರ ಕಷ್ಟ ಗೊತ್ತು. ಹೊಟ್ಟೆ ತುಂಬಿಸಿಕೊಂಡು ಅಜೀರ್ಣ ಮಾಡಿಕೊಳ್ಳೋರಿಗೆ ಅ ಬೆಲೆ ಗೊತ್ತಾಗಲ್ಲ ಎಂದು ಟೀಕಾಕಾರರಿಗೆ ಟಾಂಗ್ ನೀಡಿದರು. ಇದನ್ನೂ ಓದಿ: ಕಪ್ಪು ಹಣ ತಂದು ನಮ್ಮ ಅಕೌಂಟ್‌ಗೆ ಹಾಕ್ಲಿಲ್ಲ; ಬಿಜೆಪಿ ವಿರುದ್ಧ ನಾವು ಅಭಿಯಾನ ಮಾಡ್ಬೇಕಾಗುತ್ತೆ – ಡಿಕೆಶಿ

    ಇವತ್ತಿಂದ ಉಚಿತವಾಗಿ ಬಸ್ ನಲ್ಲಿ ಓಡಾಡಬಹುದು. ಸ್ಮಾರ್ಟ್ ಕಾರ್ಡ್ ಕೂಡಾ ಫ್ರೀಯಾಗಿ ಕೊಡ್ತೀವಿ. ವಿದ್ಯಾರ್ಥಿನಿಯರಿಗೂ ಫ್ರೀ ಕೊಡ್ತೀವಿ. ಅದಕ್ಕೆ ಕೊಂಕು ಮಾತಾಡ್ತಾರೆ. ಈ ಯೋಜನೆಗಳಿಗೆ ಮಧ್ಯವರ್ತಿಗಳಿಲ್ಲ. ನೇರವಾಗಿ ಫಲಾನುಭವಿಗಳಿಗೆ ಹೋಗುತ್ತದೆ. ರೈತರ ಸಾಲಮನ್ನಾ ಮಾಡದೇ ಬಂಡವಾಳ ಶಾಹಿಗಳ ಸಾಲ ಮನ್ನಾ ಮಾಡಿದವರು ನಮ್ಮ ವಿರುದ್ಧ ಮಾತಾಡ್ತಾರೆ ಎಂದರು.

    ಶ್ರೀಮಂತರ ಜೇಬಿನಲ್ಲಿ ಹಣ ಇದ್ದರೆ ಉಪಯೋಗ ಆಗಲ್ಲ. ಬಡವರ ಜೇಬಿನಲ್ಲಿ ಹಣ ಇದ್ದರೆ ಉಪಯೋಗ ಆಗುತ್ತೆ. ಬಡವರ ಜೇಬಿಗೆ ದುಡ್ಡು ಇಡೋದು ಕಾಂಗ್ರೆಸ್ ಕೆಲಸ. ಶ್ರೀಮಂತರ ಜೇಬಿಗೆ ಇಡೋದು ನಮ್ಮ ಕೆಲಸ ಅಲ್ಲ. 5 ಗ್ಯಾರಂಟಿ ಜಾರಿಗೆ ಕೊಡೋದು ನೂರಕ್ಕೆ ನೂರು ಗ್ಯಾರಂಟಿ ಎಂದರು.

  • ‘ಶಕ್ತಿ’ ಯೋಜನೆ ಹೆಸರಿನ ಹಿಂದಿನ ಸೀಕ್ರೆಟ್ ರಿವೀಲ್ ಮಾಡಿದ ಸಿಎಂ!

    ‘ಶಕ್ತಿ’ ಯೋಜನೆ ಹೆಸರಿನ ಹಿಂದಿನ ಸೀಕ್ರೆಟ್ ರಿವೀಲ್ ಮಾಡಿದ ಸಿಎಂ!

    ಬೆಂಗಳೂರು: ಕಾಂಗ್ರೆಸ್ ಸರ್ಕಾರ (Congress Government) ದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಶಕ್ತಿ’ ಯೋಜನೆ (Shakti Scheme) ಗೆ ಈಗಾಗಲೇ ಚಾಲನೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಇದೀಗ ಈ ಹೆಸರಿನ ಹಿಂದಿನ ಸೀಕ್ರೆಟ್ ರಿವೀಲ್ ಮಾಡಿದ್ದಾರೆ.

    ಉದ್ಘಾಟನೆ ಮಾಡಿದ ಬಳಿಕ ತಮ್ಮ ಭಾಷಣದ ವೇಳೆ ‘ಶಕ್ತಿ’ ಎಂದು ಹೆಸರು ಇಟ್ಟಿದ್ದು ಯಾಕೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಹೆಣ್ಣುಮಕ್ಕಳಿಗೆ ಶಕ್ತಿ ತುಂಬೋಕೆ ಅಂತ ಈ ಹೆಸರು ಇಟ್ಟೆವು. ಸಮಾಜದಲ್ಲಿ ಆರ್ಥಿಕ, ಸಾಮಾಜಿಕ ಅಸಮತೋಲನ ಕಡಿಮೆ ಮಾಡಬಹುದು. 5 ಗ್ಯಾರಂಟಿ ಪೈಕಿ 4 ಗ್ಯಾರಂಟಿ ಮಹಿಳೆಯರಿಗೆ ಸೀಮಿತ, ಅವರಿಗೆ ಸಂಬಂಧಿಸಿದೆ. ಕೆಲವರು ಇದಕ್ಕೆ ಗೇಲಿ ಮಾಡಿ, ಕುಹಕ ಮಾತು ಆಡ್ತಾರೆ. ಇದಕ್ಕೆ ನಾವು ತಲೆ ಕೆಡಿಸಿಕೊಳ್ಳಲ್ಲ. ಗೇಲಿ ಮಾಡೋರಿಗೆ, ಕುಹಕ ಮಾಡೋರಿಗೆ ಸೊಪ್ಪು ಹಾಕಲ್ಲ ಎಂದು ಹೇಳಿದರು.

    ಸಮಾಜ ಅಭಿವೃದ್ಧಿ ಪಥದಲ್ಲಿ ಸಾಗಬೇಕಾದ್ರೆ ಪುರುಷರಷ್ಟೆ ಮಹಿಳೆಯರಿಗೆ ಅವಕಾಶ ಸಿಗಬೇಕು. ಆಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ. ಇಲ್ಲದೆ ಹೋದ್ರೆ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಯಾವುದೇ ಅಭಿವೃದ್ಧಿ ಹೊಂದಿದ ದೇಶದಲ್ಲಿ ಮಹಿಳೆಯರೇ ಹೆಚ್ಚು ಅವಕಾಶ ಪಡೆಯುತ್ತಿದ್ದಾರೆ. ಅಮೆರಿಕಾ, ಚೀನ, ಆಸ್ಟ್ರೇಲಿಯ, ಇಂಡೋನೇಷ್ಯಾ, ಬಾಂಗ್ಲಾದೇಶದಲ್ಲಿ ಹೆಚ್ಚು ಮಹಿಳೆಯರು ಪಾಲ್ಗೊಳ್ಳುತ್ತಿದ್ದಾರೆ ಎಂದರು. ಇದನ್ನೂ ಓದಿ: ಕಪ್ಪು ಹಣ ತಂದು ನಮ್ಮ ಅಕೌಂಟ್‌ಗೆ ಹಾಕ್ಲಿಲ್ಲ; ಬಿಜೆಪಿ ವಿರುದ್ಧ ನಾವು ಅಭಿಯಾನ ಮಾಡ್ಬೇಕಾಗುತ್ತೆ – ಡಿಕೆಶಿ

    ಭಾರತದಲ್ಲಿ 24% ಮಾತ್ರ ಸಾರ್ವಜನಿಕ ಕ್ಷೇತ್ರದಲ್ಲಿ ಇದ್ದಾರೆ. 2014 ರಲ್ಲಿ 30% ರಿಂದ 24% ಗೆ ಇಳಿದಿದೆ. ಇದನ್ನ ಮಹಿಳೆಯರು ಅರ್ಥ ಮಾಡಿಕೊಳ್ಳಬೇಕು. ಮಹಿಳೆಯ ಬಗ್ಗೆ ಮೊಸಳೆ ಕಣ್ಣೀರು ಹಾಕೋರ ಕಾಲದಲ್ಲಿ 30% ನಿಂದ 24% ಮಹಿಳೆ ಪಾಲ್ಗೊಳ್ಳುವಿಕೆ ಆಗಿದೆ. ಮನುವಾದಿಗಳು ಬಯಸೋದೆ ಅದು. ಹೆಣ್ಣು ಮಕ್ಕಳು ಹೊರಗೆ ಬರಬಾರದು ಅನ್ನೋದು ಮನುವಾದಿಗಳ ಆಸೆ. ಯಾವ ದೇಶದಲ್ಲಿ ಹೆಚ್ಚು ಮಹಿಳೆಯರು ಸಾರ್ವಜನಿಕ ಕ್ಷೇತ್ರದಲ್ಲಿ ಇದ್ದರೆ ದೇಶ ಅಭಿವೃದ್ಧಿ ಆಗುತ್ತೆ ಎಂದರು.

  • ಗೃಹಜ್ಯೋತಿ ಗೊಂದಲ ಬಗೆಹರಿದ್ರೂ ಶಾಕ್- 200 ಯುನಿಟ್ ಫ್ರೀ ನಿರೀಕ್ಷೆಯಲ್ಲಿದ್ದವರಿಗೆ ಡಬಲ್ ಬಿಲ್

    ಗೃಹಜ್ಯೋತಿ ಗೊಂದಲ ಬಗೆಹರಿದ್ರೂ ಶಾಕ್- 200 ಯುನಿಟ್ ಫ್ರೀ ನಿರೀಕ್ಷೆಯಲ್ಲಿದ್ದವರಿಗೆ ಡಬಲ್ ಬಿಲ್

    ಬೀದರ್: ಗೃಹ ಜ್ಯೋತಿ (Gruhajyothi) ಯೋಜನೆಯಲ್ಲಿ ನಮ್ಮಗೆ 200 ಯೂನಿಟ್ (200 Unit) ಫ್ರೀ ಕರೆಂಟ್ ಸಿಕ್ತು ಎಂದು ಖುಷಿಯಲ್ಲಿದ್ದ ಗಡಿ ಜಿಲ್ಲೆ ಜನರಿಗೆ ಸರ್ಕಾರ ತ್ರೀಬಲ್ ಬಿಲ್ ಶಾಕ್ ನೀಡಿದೆ.

    ಏಕಾಏಕಿ ಯಾರಿಗೂ ಮಾಹಿತಿ ನೀಡಿದೆ ದುಪ್ಪಟ್ಟು ಕರೆಂಟ್ ಬಿಲ್ ನೀಡಿ ಸಾರ್ವಜನಿಕರಿಗೆ ಶಾಕ್ ಮೇಲೆ ಶಾಕ್ ನೀಡಿದೆ. ಕರೆಂಟ್ ಫ್ರೀ ಕನಸಿನಲ್ಲಿದ್ದ ಗಡಿ ಜಿಲ್ಲೆ ಬೀದರ್ (Bidar) ಜನರಿಗೆ ಈಗ ತ್ರಿಬಲ್ ಬಿಲ್ ಶಾಕ್ ನ್ನು ಸರ್ಕಾರ ನೀಡಿದೆ. ಕಳೆದ ತಿಂಗಳು 1 ಸಾವಿರ ಬಂದಿದ್ದ ಕರೆಂಟ್ ಬಿಲ್ ಈ ತಿಂಗಳು 2500 ರಿಂದ 3000 ಸಾವಿರ ಬಿಲ್ ಬಂದಿದೆ.

    ಬೀದರ್ ಜಿಲ್ಲೆಯ ಬಹುತೇಕ ಜನರ ಕರೆಂಟ್ ಬಿಲ್ ದುಪ್ಪಟ್ಟು ಆಗಿದ್ದು ಜೆಎಸ್ಕಾಂ ಇಲಾಖೆ  (JESCOM Department)) ಹಾಗೂ ಸರ್ಕಾರ ಬಿಲ್ ಶಾಕ್ ಮೇಲೆ ಶಾಕ್ ನೀಡುತ್ತಿದೆ. ಬೀದರ್ ನ ಗುರುನಗರ ಕಾಲೋನಿಯ ಶಿವರಾಜ್ ಬಿರಾದರ್ ಎಂಬವರಿಗೆ ಕಳೆದ ತಿಂಗಳು 950 ಬಿಲ್ ಬಂದಿತ್ತು. ಆದರೆ ಈ ಬಾರಿ 2007 ಕರೆಂಟ್ ಬಿಲ್ ಬಂದಿದೆ. ಇದನ್ನೂ ಓದಿ: ಆರ್‌ಎಸ್‌ಎಸ್‌ ಸಂಸ್ಥೆಗಳಿಗೆ ಸರ್ಕಾರ ಮಂಜೂರು ಮಾಡಿದ್ದ ಭೂಮಿ ವಾಪಸ್‌ ಪಡೆಯುತ್ತೇವೆ: ದಿನೇಶ್‌ ಗುಂಡೂರಾವ್‌

    ನಗರದ ವೈಷ್ಣವಿ ನಗರದ ಪ್ರಕಾಶ್ ಪಾಟೀಲ್ ಎಂಬವರಿಗೆ ಕಳೆದ ತಿಂಗಳು 1500 ಬಂದ್ರೆ ಈ ಬಾರಿ 3800 ಕರೆಂಟ್ ಬಿಲ್ ಬಂದಿದೆ. ಗುರುನಗರದ ನಿರಂಜನಾ ಬಿರಾದರ್ ಎಂಬವರಿಗೆ ಕಳೆದ ಬಾರಿ 2 ಸಾವಿರ ಬಂದ್ರೆ, ಈ ಬಾರಿ 5 ಸಾವಿರ ಬಿಲ್ ಬಂದಿದೆ. ಇದೇ ರೀತಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಕಳೆದ ಬಾರಿಗೆ ಹೊಲಿಸಿದ್ರೆ ಈ ಬಾರಿ ಮೂರು ಪಟ್ಟು ಕರೆಂಟ್ ಬಿಲ್ ಜಾಸ್ತಿ ಬಂದಿದೆ.

    ಈ ರೀತಿ ಮೋಸ ಮಾಡೋದಾದ್ರೆ ನಿಮ್ಮ ಗೃಹ ಜ್ಯೋತಿಯ 200 ಯೂನಿಟ್ ಕರೆಂಟ್ ಬೇಡ. ನಮ್ಮಗೆ ಮೊದಲಿನ ರೀತಿ ಕರೆಂಟ್ ಬಿಲ್ ಮಾಡಿ ಸಾಕು. ಇಲ್ಲವಾದ್ರೆ ನಾವು ಯಾರು ಕರೆಂಟ್ ಬಿಲ್ ಕಟ್ಟೋದಿಲ್ಲ ಎಂದು ಸರ್ಕಾರಕ್ಕೆ ಚೀಮಾರಿ ಹಾಕಿದ್ದಾರೆ.

  • ಹೆಣ್ಮಕ್ಕಳಿಗಾಗಿ ತಾಯಿ-ಮಗು ಆಸ್ಪತ್ರೆ ನಿರ್ಮಾಣ ಮಾಡ್ತೀವಿ – ಪ್ರಚಾರದ ಕೊನೇ ದಿನ ಡಿಕೆಶಿ ಗ್ಯಾರಂಟಿ

    ಹೆಣ್ಮಕ್ಕಳಿಗಾಗಿ ತಾಯಿ-ಮಗು ಆಸ್ಪತ್ರೆ ನಿರ್ಮಾಣ ಮಾಡ್ತೀವಿ – ಪ್ರಚಾರದ ಕೊನೇ ದಿನ ಡಿಕೆಶಿ ಗ್ಯಾರಂಟಿ

    ಬೆಂಗಳೂರು: ಈಗಾಗಲೇ ಮನೆಯೊಡತಿಗೆ 2 ಸಾವಿರ, 200 ಯೂನಿಟ್ ವಿದ್ಯುತ್ ಉಚಿತ, 10 ಕೆಜಿ ಅಕ್ಕಿ ಉಚಿತ, ಅಂಗನವಾಡಿ ಕಾರ್ಯಕರ್ತರಿಗೆ 15 ಸಾವಿರ ವೇತನ ಗ್ಯಾರಂಟಿಗಳನ್ನು ಘೋಷಿಸಿರುವ ಕಾಂಗ್ರೆಸ್ (Congress) ಪಕ್ಷದ ಪರವಾಗಿ ಕೊನೆಯ ದಿನದ ಚುನಾವಣಾ ಪ್ರಚಾರದ ವೇಳೆ ಡಿಕೆ ಶಿವಕುಮಾರ್ ಮತ್ತೊಂದು ಗ್ಯಾರಂಟಿಯನ್ನ ಘೋಷಿಸಿದೆ.

    ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ (DK Shivakumar) ಅವರು, ಈ ರಾಜ್ಯಕ್ಕೆ ಒಳ್ಳೆಯ ಸರ್ಕಾರ ಕೊಡ್ತೀವಿ. ರೈತರಿಗಾಗಿ ಎಷ್ಟು ಸಾಧ್ಯವೋ ಅಷ್ಟೂ ಕೆರೆಗಳನ್ನ ತುಂಬಿಸುತ್ತೇವೆ. ಹೆಣ್ಣುಮಕ್ಕಳಿಗಾಗಿ ಪ್ರತಿ ತಾಲೂಕಿನಲ್ಲೂ ತಾಯಿ-ಮಗು ಆಸ್ಪತ್ರೆಯನ್ನ ಹೊಸದಾಗಿ ನಿರ್ಮಿಸಿ, ಉಚಿತವಾಗಿ ಹೆರಿಗೆ ಸೌಲಭ್ಯ ಸಿಗುವಂತೆ ಮಾಡುತ್ತೇವೆ. ಎಲ್ಲರನ್ನೂ ಸಮಾನತೆಯಿಂದ ನೋಡುತ್ತೇವೆ. ಮಕ್ಕಳಿಗೆ ಗ್ರಾಮೀಣ ಭಾಗದಲ್ಲೇ ಉತ್ತಮ ಶಿಕ್ಷಣ ವ್ಯವಸ್ಥೆ ಕಲ್ಪಿಸಿ, ಬೆಂಗಳೂರಿನಂತಹ ನಗರಗಳಿಗೆ ಬರೋದು ತಪ್ಪಿಸುತ್ತೇವೆ ಎಂದು ಹೇಳಿದ್ದಾರೆ.

    ಬ್ಲ್ಯಾಕ್‌ಮೇಲ್‌ ಗೆ ಹೆದರಲ್ಲ: `ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ್ರೆ ಕೇಂದ್ರದ ಯೋಜನೆಗಳಿಗೆ ಬ್ರೇಕ್’ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಕೆಶಿ, ಮಿಸ್ಟರ್ ನಡ್ಡಾಜಿ, ಡೋಂಟ್ ತ್ರೆಟನ್ ಅಸ್, ಏನ್ ಹೆದರಿಸ್ತೀರಾ? ಕೇಂದ್ರದ ಯೋಜನೆಗಳನ್ನು ನಿಲ್ಲಿಸ್ತೇವೆ ಅಂತ ಹೆದರಿಸ್ತೀರಾ? ಇಂತಹ ಬ್ಲ್ಯಾಕ್‌ಮೇಲ್‌ಗೆ ಹೆದರಲ್ಲ. ನಿಮ್ಮ ಶಾಸಕರು ಸಂಸದರು ಮಕ್ಕಳ ತರಹ ಸುಮ್ಮನಿರಬಹುದು. ಕಾಂಗ್ರೆಸ್ ನಾಯಕರು ನಿಮ್ಮ ಬೆದರಿಕೆಗೆ ಹೆದರೋದಿಲ್ಲ. ನಿಮ್ಮ ಪ್ರಧಾನಿಯನ್ನ ಬೀದಿ ಬೀದಿ ಅಲೆಯೋ ತರಹ ಮಾಡಿರೋದು ನೀವು ಎಂದು ತಿರುಗೇಟು ನೀಡಿದ್ದಾರೆ.

    ನಾವು 141 ಸೀಟ್ ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ. 15ನೇ ತಾರೀಕು ಕಾಂಗ್ರೆಸ್ ಸರ್ಕಾರ ತಂದು ನಾವು ಘೋಷಣೆ ಮಾಡಿರುವ ಗ್ಯಾರಂಟಿಯನ್ನು ಜಾರಿ ಮಾಡುತ್ತೇವೆ ಎಂದು ಹೇಳಿದ್ದಾರೆ.

  • ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬಿ-ಖರಾಬು ಜಮೀನು ಪರಭಾರೆ – ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಎಸಿಬಿಗೆ ದೂರು

    ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬಿ-ಖರಾಬು ಜಮೀನು ಪರಭಾರೆ – ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಎಸಿಬಿಗೆ ದೂರು

    ರಾಮನಗರ: ಸರ್ಕಾರಿ ನಿಯಮಗಳ ಪ್ರಕಾರ ಬಿ-ಖರಾಬು ಜಮೀನು ಯಾವುದೇ ಖಾಸಗಿ ಸಂಘ, ಸಂಘಟನೆ, ಸಂಸ್ಥೆಗಳಿಗೆ ನೀಡುವಂತಿಲ್ಲ ಎಂಬುದನ್ನ ಸುಪ್ರೀಂ ಕೋರ್ಟ್ ಹೇಳಿದೆ. ಆದರೆ ಕಾನೂನಿನ ನಿಯಮಗಳನ್ನ ಮೀರಿ ಬೆಂಗಳೂರಿನ ಮಹಾತ್ಮ ಗಾಂಧಿ ವಿದ್ಯಾಪೀಠ ಟ್ರಸ್ಟ್ ಗೆ 5 ಎಕ್ರೆ 7 ಗುಂಟೆ ಜಮೀನನ್ನ 2016ರಲ್ಲಿ ಪರಭಾರೆ ಮಾಡಿರುವುದು ಕನಕಪುರ ತಾಲೂಕಿನ ದೇವರ ಕಗ್ಗಲಹಳ್ಳಿ ಬೆಳಕಿಗೆ ಬಂದಿದೆ.

    ಕಾಂಗ್ರೆಸ್ ಸರ್ಕಾರವಿದ್ದಾಗ ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಬಿ-ಖರಾಬು ಜಮೀನನ್ನು ನಿಯಮ ಕಾನೂನು ಉಲ್ಲಂಘನೆ ಮಾಡಿ ಪ್ರಭಾವಿಗಳ ಟ್ರಸ್ಟ್ ಗೆ ಮಂಜೂರು ಮಾಡಲಾಗಿದೆ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿನ ಬಿ-ಖರಾಬು ಜಮೀನನ್ನ ಸರ್ಕಾರವು ಕಾನೂನುಗಳನ್ನು ಮೀರಿ ಟ್ರಸ್ಟ್ ಗೆ ಪರಭಾರೆ ಮಾಡಿದೆ. ಪ್ರಭಾವಿ ಉದ್ಯಮಿ ಹಾಗೂ ಶಿಕ್ಷಣ ತಜ್ಞರ ಒಡೆತನದ ಬೆಂಗಳೂರಿನ ಮಹಾತ್ಮ ಗಾಂಧಿ ವಿದ್ಯಾಪೀಠ ಟ್ರಸ್ಟ್ ಗೆ ಕೋಟ್ಯಾಂತರ ರೂಪಾಯಿ ಮೌಲ್ಯದ 5 ಎಕ್ರೆ 7 ಗುಂಟೆ ಜಮೀನನ್ನ ಕೇವಲ 5 ಕೋಟಿ ರೂಪಾಯಿಗೆ ಪರಭಾರೆ ಮಾಡಲಾಗಿದೆ.

    ಈ ಬಗ್ಗೆ ಈ ಹಿಂದೆಯೇ ರಾಜ್ಯಪಾಲರಿಗೆ ದೂರು ನೀಡಿದ್ದು, ಅಂದಿನ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರ ಅವಧಿಯಲ್ಲಿ ರಾಜ್ಯಪಾಲರು ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಕಳೆದ ಜನವರಿಯಲ್ಲಿ ಭ್ರಷ್ಟಚಾರ ನಿಗ್ರಹ ದಳಕ್ಕೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ದೂರು ನೀಡಿದ್ದು, ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದರು.

    ಸಿದ್ದರಾಮಯ್ಯ ಸರ್ಕಾರದಲ್ಲಿ 2015ರಲ್ಲಿ ಹೇಮಚಂದ್ರ ಸಾಗರ್ ಎಂಬವರ ನೇತೃತ್ವದ ಮಹಾತ್ಮ ಗಾಂಧಿ ವಿದ್ಯಾಪೀಠ ಟ್ರಸ್ಟ್ ಗೆ 5 ಎಕ್ರೆ 7 ಗುಂಟೆ ಬಿ-ಖರಾಬು ಜಮೀನನ್ನ ಪರಭಾರೆ ಮಾಡಲಾಗಿದೆ. ಬಿ-ಖರಾಬು ಜಮೀನನ್ನ ಯಾವುದೇ ಸಂಘ, ಸಂಸ್ಥೆ, ಸಂಘಟನೆಗಳಿಗೆ ನೀಡಬಾರದು ಎಂಬ ಕಾನೂನಿದೆ. ಆದ್ರೆ ಈ ಕಾನೂನನ್ನ ಗಾಳಿಗೆ ತೂರಿ ಸಿದ್ದರಾಮಯ್ಯ ಸರ್ಕಾರ ಕೋಟ್ಯಾಂತರ ರೂಪಾಯಿ ಬೆಲೆಯ ಜಮೀನನ್ನ ಶೇ 25% ರಂತೆ ಕೇವಲ 5 ಕೋಟಿ ರೂಪಾಯಿಗೆ ಪರಭಾರೆ ಮಾಡಲಾಗಿದೆ.

    ಹೆದ್ದಾರಿ ಪಕ್ಕದಲ್ಲಿನ ಈ ಜಮೀನು ಸುಮಾರು 50 ಕೋಟಿ ರೂಪಾಯಿ ಮೌಲ್ಯವನ್ನ ಹೊಂದಿದ್ದು ಹರಾಜು ಪ್ರಕ್ರಿಯೆಯಾಗಲಿ, ಸರ್ಕಾರದಿಂದ ಹೆಚ್ಚಿನ ಹಣವನ್ನ ವಸೂಲಿ ಮಾಡಿ ಮಾರಾಟ ಮಾಡುವಂತಹ ಪ್ರಕ್ರಿಯೆ ನಡೆದಿಲ್ಲ. ಈ ಭಾಗದ ಜನರು ನಿವೇಶನಗಳಿಗಾಗಿ ಸಾಕಷ್ಟು ಮನವಿ ಸಲ್ಲಿಸಿದರೂ ಕ್ರಮ ಕೈಗೊಳ್ಳದೇ ನೇರವಾಗಿ ಭೂಮಿಯನ್ನ ಪರಭಾರೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳೇ ಶಾಮೀಲಾಗಿ ಭೂಮಿ ಪರಭಾರೆ ಮಾಡಿದ್ದಾರೆಂಬ ಆರೋಪ ಕೇಳಿಬರುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ದೂರು ನೀಡಲಾಗಿದೆ.