ಬೆಂಗಳೂರು: ಅಬಕಾರಿ ಆದಾಯ ಹೆಚ್ಚಿಸಲು ಅಡ್ಡದಾರಿ ಹಿಡಿದಿರುವ ಸರ್ಕಾರದ ಕ್ರಮವನ್ನು ಜೆಡಿಎಸ್ (JDS) ಟೀಕೆ ಮಾಡಿದೆ. ಎಕ್ಸ್‌ನಲ್ಲಿ ಈ ಸಂಬಂಧ ಟ್ವೀಟ್ ಮಾಡಿರುವ ಜೆಡಿಎಸ್ ಸ್ಕ್ಯಾಮ್ ಗ್ರೇಸ್ ಸರ್ಕಾರದ ಲೂಟಿ ಮಾರ್ಗಗಳು ನೂರಾರು ಎಂದು ಲೇವಡಿ ಮಾಡಿದೆ.
ಟ್ವೀಟ್‌ನಲ್ಲಿ ಏನಿದೆ?
ಸ್ಕ್ಯಾಮ್ ಗ್ರೇಸ್ ಸರ್ಕಾರದ ಲೂಟಿ ಮಾರ್ಗಗಳು ನೂರಾರು. ರಾಜ್ಯವನ್ನು ದಿವಾಳಿ ಎಬ್ಬಿಸಿರುವ ಬರಗೆಟ್ಟ ಕಾಂಗ್ರೆಸ್ ಸರ್ಕಾರ, ಆದಾಯ ಹೆಚ್ಚಿಸಿಕೊಳ್ಳಲು ಇನ್ನಿಲ್ಲದ ಕುತಂತ್ರ ನಡೆಸುತ್ತಿದೆ. ಅಸ್ತಿತ್ವದಲ್ಲೇ ಇಲ್ಲದ ಪರವಾನಿಗೆಗಳ ಮಾರಾಟಕ್ಕೆ ಅಬಕಾರಿ ಇಲಾಖೆ ಪ್ರಸ್ತಾವನೆ ಸಲ್ಲಿಸಿದ್ದು, ಕಾನೂನು ಬಾಹಿರವಾಗಿ ಲೈಸೆನ್ಸ್ ನೀಡಿ ಸಾವಿರಾರು ಕೋಟಿ ದುಡ್ಡು ಹೊಡೆಯಲು ಸಿದ್ದರಾಮಯ್ಯ ಸರ್ಕಾರ ಮುಂದಾಗಿದೆ.ಇದನ್ನೂ ಓದಿ: ಬ್ಯಾಂಕ್ ಲಾಕರ್‌ನಲ್ಲಿಟ್ಟ ದುಡ್ಡಿಗೆ ಗೆದ್ದಲು – 8 ಲಕ್ಷ ಡಮಾರ್!
ಅಬಕಾರಿ ಇಲಾಖೆಯಲ್ಲಿ ವರ್ಗಾವಣೆ ದಂಧೆ, ಲೈಸೆನ್ಸ್ ನವೀಕರಣ, ಮಂಥ್ಲಿ ಮನಿ ಹೆಸರಲ್ಲಿ ಕೋಟಿ ಕೋಟಿ ಹಣವನ್ನು ಅಧಿಕಾರಿಗಳಿಂದ ಸಚಿವರೇ ವಸೂಲಿ ಮಾಡುತ್ತಿದ್ದು, ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿ ಕಾಂಗ್ರೆಸ್ ಸರ್ಕಾರದ ಮಾನ ಹರಾಜಾಗಿದೆ.
ಸ್ಕ್ಯಾಮ್ ಗ್ರೇಸ್ ಸರ್ಕಾರದ ಲೂಟಿ ಮಾರ್ಗಗಳು ನೂರಾರು
ರಾಜ್ಯವನ್ನು ದಿವಾಳಿ ಎಬ್ಬಿಸಿರುವ ಬರಗೆಟ್ಟ @INCKarnataka ಸರ್ಕಾರ, ಆದಾಯ ಹೆಚ್ಚಿಸಿಕೊಳ್ಳಲು ಇನ್ನಿಲ್ಲದ ಕುತಂತ್ರ ನಡೆಸುತ್ತಿದೆ.
ಅಸ್ತಿತ್ವದಲ್ಲೇ ಇಲ್ಲದ ಪರವಾನಿಗೆಗಳ ಮಾರಾಟಕ್ಕೆ ಅಬಕಾರಿ ಇಲಾಖೆ ಪ್ರಸ್ತಾವನೆ ಸಲ್ಲಿಸಿದ್ದು, ಕಾನೂನು ಬಾಹಿರವಾಗಿ ಲೈಸೆನ್ಸ್ ನೀಡಿ ಸಾವಿರಾರು… pic.twitter.com/Zjpx47HCyE
ಸುಗ್ರೀವಾಜ್ಞೆಗೆ ರಾಜ್ಯಪಾಲರು ಸಹಿ ಹಾಕುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯಪಾಲರಿಗೆ ಈಗಾಗಲೇ ಕರಡು ಕಳಿಸಲಾಗಿದೆ. ಇವತ್ತು ಸಹಿ ಹಾಕಬಹುದು ಎಂಬ ನಿರೀಕ್ಷೆ ಇದೆ. ರಾಜ್ಯಪಾಲರು ಅವರ ಕಾನೂನು ತಜ್ಞರ ಜೊತೆ ಮಾತನಾಡಿ ಅಂತಿಮವಾಗಿ ಸಹಿ ಹಾಕಬಹುದು. ಅವರು ಸಹಿ ಹಾಕಿದರೆ ಇವತ್ತು ಸುಗ್ರೀವಾಜ್ಞೆ ಜಾರಿಯಾಗಬಹುದು ಎಂದರು.
ಬಿಲ್‌ನಲ್ಲಿ ಕೆಲ ಬದಲಾವಣೆಗೆ ರಾಜ್ಯಪಾಲರು ಸೂಚನೆ ನೀಡಿದ್ದಾರೆ ಎಂಬ ವಿಷಯಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬದಲಾವಣೆಗೆ ರಾಜ್ಯಪಾಲರು ಸೂಚನೆ ನೀಡಿರುವ ಬಗ್ಗೆ ಮಾಹಿತಿ ಇಲ್ಲ. ಸರ್ಕಾರಕ್ಕೆ ಅಧಿಕೃತವಾಗಿ ಮಾಹಿತಿ ಬಂದಿಲ್ಲ. ಒಂದು ವೇಳೆ ರಾಜ್ಯಪಾಲರು ಕೆಲ ಅಂಶಗಳ ಬದಲಾವಣೆಗೆ ಸೂಚನೆ ಕೊಟ್ಟರೆ ಅದನ್ನು ಬದಲಾವಣೆ ಮಾಡಿ ಕಳುಹಿಸುತ್ತೇವೆ ಎಂದು ತಿಳಿಸಿದರು.ಇದನ್ನೂ ಓದಿ: ವಿಜಯೇಂದ್ರ ಕರ್ಮಕಾಂಡ, ಹಲ್ಕಾ ಕೆಲಸ ಬಹಳ ಇದೆ – ಯತ್ನಾಳ್ ಕಿಡಿ
ಬೆಂಗಳೂರು: ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದ್ದು ಅರಾಜಕತೆ ಉಂಟಾಗಿರುವುದನ್ನು ಸಾಕ್ಷೀಕರಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಬೀದರ್ ಬಳಿಕ ದಕ್ಷಿಣ ಕನ್ನಡದ ಉಲ್ಲಾಳದಲ್ಲಿ ನಡೆದ ದರೋಡೆ ಪ್ರಕರಣ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ವಿಜಯೇಂದ್ರ ಎಕ್ಸ್‌ನಲ್ಲಿ ಏನಿದೆ?
ರಾಜ್ಯದ ಗಡಿ ಜಿಲ್ಲೆಗಳನ್ನೇ ಗುರಿಯಾಗಿಸಿಕೊಂಡು ಜಾಲವೊಂದು ವ್ಯವಸ್ಥಿತವಾಗಿ ಬೀದರ್ ಬಳಿಕ ದಕ್ಷಿಣ ಕನ್ನಡದ ಉಲ್ಲಾಳದಲ್ಲೂ ಹಾಡು ಹಗಲೇ ಬಂದೂಕು ತೋರಿಸಿ ಕೋಟ್ಯಂತರ ರೂಪಾಯಿ ಹಣ ಹಾಗೂ ಚಿನ್ನ ಲೂಟಿಮಾಡಿರುವ ಘಟನೆ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದ್ದು ಅರಾಜಕತೆ ಉಂಟಾಗಿರುವುದನ್ನು ಸಾಕ್ಷೀಕರಿಸುತ್ತಿದೆ.
ಕರ್ನಾಟಕವೆಂದರೆ ಮಾಫಿಯಾಗಳು, ಅತ್ಯಾಚಾರಿಗಳು, ಡಕಾಯಿತರು ಹಾಗೂ ಭಯೋತ್ಪಾದಕರಿಗೆ ಸುರಕ್ಷಿತ ತಾಣ ಎಂಬ ಸಂದೇಶ ರವಾನೆಯಾಗುತ್ತಿರುವುದು ಕಾಂಗ್ರೆಸ್ ಸರ್ಕಾರದ ಆಡಳಿತದ ಕೆಟ್ಟ ವೈಫಲ್ಯದ ಫಲವಾಗಿದೆ.
‘ಸಿರಿನಾಡು ಕರ್ನಾಟಕ ಇರಿಯುವ ರಕ್ಕಸರ ತವರೂರಾಗುತ್ತಿದೆ, ಕ್ರಿಮಿನಲ್ ಕರ್ನಾಟಕ ಎಂಬ ಅಪಕೀರ್ತಿ ಪಡೆದುಕೊಳ್ಳುತ್ತಿದೆ’ ಎಂಬ ಆತಂಕ ಜನರನ್ನು ಕಾಡುತ್ತಿದೆ. ಒಂದರಮೇಲೊಂದು ಕ್ರಿಮಿನಲ್ ಪ್ರಕರಣಗಳು ದಾಖಲಾಗುತ್ತಿವೆ. ಅತ್ಯಾಚಾರ, ಗುಂಡಾಗಿರಿ, ಕೊಲೆ, ದರೋಡೆ ಮೊದಲಾದ ಚಟುವಟಿಕೆಗಳು ನಿರಂತರ ನಡೆಯುತ್ತಿದ್ದರೂ ರಾಜ್ಯದ ಕಾಂಗ್ರೆಸ್ ಸರ್ಕಾರದ ನಿಷ್ಕ್ರಿಯ ಆಡಳಿತದಲ್ಲಿ ಜನತೆ ಆತಂಕದಿಂದ ಬದುಕುವಂತಾಗಿದೆ. ತಮ್ಮ ಹಣ ಚಿನ್ನ ಹಾಗೂ ಇತರ ಆಸ್ತಿಗಳಿಗೆ ಬ್ಯಾಂಕ್ ಸುರಕ್ಷಿತ ಎಂಬ ಭಾವನೆ ಕುಸಿಯುತ್ತಿದೆ.
ಬ್ಯಾಂಕುಗಳಿಗೇ ರಕ್ಷಣೆ ನೀಡಲಾಗದ ಸರ್ಕಾರ ಜನಸಾಮಾನ್ಯರ ಪ್ರಾಣ ಹಾಗೂ ಆಸ್ತಿಗೆ ರಕ್ಷಣೆ ನೀಡಲು ಸಾಧ್ಯವೇ ? ಎಂದು ನಾಗರೀಕರು ಪ್ರಶ್ನಿಸುತ್ತಿದ್ದಾರೆ. ಮುಖ್ಯಮಂತ್ರಿಗಳು ಈ ಕೂಡಲೇ ಗೃಹ ಇಲಾಖೆಯ ಮೇಲೆ ನಿಯಂತ್ರಣ ಸಾಧಿಸಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡು ಜನರಲ್ಲಿ ರಕ್ಷಣೆಯ ಅಭಯ ನೀಡುವ ಹೆಜ್ಜೆಗಳನ್ನಿಡಲೇಬೇಕಿದೆ. ಈ ನಿಟ್ಟಿನಲ್ಲಿ ತಮ್ಮ ನಿಷ್ಕ್ರಿಯತೆ ಹಾಗೂ ಉದಾಸೀನತೆಯನ್ನು ಮುಂದುವರೆಸಿದರೆ ಜನತೆ ತಮ್ಮನ್ನು ರಕ್ಷಿಸಿಕೊಳ್ಳಲು ಈ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲು ಹೋರಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಎಚ್ಚರಿಸಿದ್ದಾರೆ.
– ಕಾಂಗ್ರೆಸ್ ಸರ್ಕಾರ ಜಿಟಿಡಿ ಅರೆಸ್ಟ್ ಮಾಡಲು ಸಿದ್ಧತೆ ಮಾಡಿಕೊಂಡಿತ್ತು ಎಂದ ಮಾಜಿ ಸಚಿವ
ಬೆಂಗಳೂರು: ಕಾಂಗ್ರೆಸ್ ಸರ್ಕಾರ ಜಿ.ಟಿ ದೇವೇಗೌಡರನ್ನ ಅರೆಸ್ಟ್ ಮಾಡಲು ಸಿದ್ಧತೆ ಮಾಡಿಕೊಂಡಿತ್ತು. ಕುಮಾರಸ್ವಾಮಿ ಇಲ್ಲದೆ ಹೋಗಿದ್ರೆ ನನ್ನ ರೀತಿ ಜಿ.ಟಿ ದೇವೇಗೌಡ (GT Devegowda) ಮತ್ತು ಅವರ ಪುತ್ರ ಜೈಲಿನಲ್ಲಿ ಇರಬೇಕಾಗಿತ್ತು ಅಂತ ಮಾಜಿ ಸಚಿವ ಹೆಚ್.ಡಿ ರೇವಣ್ಣ (HD Revanna) ಬಾಂಬ್ ಸಿಡಿಸಿದ್ದಾರೆ.
ವಿಧಾನಸೌಧದಲ್ಲಿಂದು (Vidhanasoudha) ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, 2017 ರಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ ಜಿ.ಟಿ ದೇವೇಗೌಡರನ್ನ ಬಂಧನ ಮಾಡಲು ಸಿದ್ಧತೆ ಮಾಡಿಕೊಂಡಿತ್ತು. ಈ ವಿಷಯವನ್ನು ನನಗೆ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ರು. ಬಳಿಕ ಕುಮಾರಸ್ವಾಮಿ ಅವರು ಪೊಲೀಸರಿಗೆ ಫೋನ್ ಮೂಲಕ ಗುಟುರು ಹಾಕಿದ್ರು. ಕುಮಾರಸ್ವಾಮಿಯವರ (HD kumaraswamy) ಒಂದೇ ಒಂದು ಗುಟುರಿಗೆ ಪೊಲೀಸರು ಜಿ.ಟಿ ದೇವೇಗೌಡರನ್ನ ಅರೆಸ್ಟ್ ಮಾಡೋದು ಬಿಟ್ಟರು. ಇಲ್ಲದೇ ಹೋಗಿದ್ರೆ ನನ್ನ ರೀತಿ ಜಿ.ಟಿ ದೇವೇಗೌಡ ಮತ್ತು ಅವರ ಪುತ್ರ 20 ದಿನ ಜೈಲಲ್ಲಿ ಕಳೆಯಬೇಕಾಗಿತ್ತು ಹೇಳಿದರು.
ಕುಮಾರಸ್ವಾಮಿ ವಿರುದ್ಧ ಜಿಟಿ ದೇವೇಗೌಡ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಜಿಟಿ ದೇವೇಗೌಡರಿಗೆ ಅಸಮಾಧಾನ ಇರೋದು ನಿಜ. ಅವರಿಗೆ ಸ್ಥಾನಮಾನದ ಬಗ್ಗೆ ಅಸಮಾಧಾನ ಇದೆ. ಇವತ್ತು ನಾನು ಸುದ್ದಿಗೋಷ್ಠಿಗೆ ಬರೋಕೆ ಹೇಳಿದ್ದೆ ಅವರು ಬರಲಿಲ್ಲ. ಚನ್ನಪಟ್ಟಣ ಚುನಾವಣೆ ಸಮಯದಲ್ಲಿ ಪ್ರಚಾರಕ್ಕೆ ಬರುವಂತೆ ದೇವೇಗೌಡ ಕರೆ ಮಾಡಿದ್ದು ನಿಜ. ಆದರೆ ಅವರು ಬರಲಿಲ್ಲ, ಪಕ್ಷದ ಮೇಲೆ ಅವರಿಗೆ ಅಸಮಾಧಾನ ಇದೆ. ದೇವೇಗೌಡರು, ಕುಮಾರಸ್ವಾಮಿ ಜೊತೆ ಮಾತಾಡಿದ್ರೆ ಎಲ್ಲವೂ ಸರಿ ಆಗುತ್ತೆ. ಪಕ್ಷದಲ್ಲಿ ಎಲ್ಲವೂ ಸರಿ ಆಗಲಿದೆ ಅಂತ ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah) ಸುಳ್ಳುರಾಮಯ್ಯ ಎಂದು ಹೆಸರು ಬದಲಾಯಿಸಿಕೊಳ್ಳಲಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R Ashok) ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ 40% ಕಮೀಷನ್ ವಿಚಾರವಾಗಿ ಮಾತನಾಡಿದ ಅವರು, ಪ್ರಧಾನಿಯವರಿಂದ ಸಿದ್ದರಾಮಯ್ಯ ಸಾಕ್ಷಿ ಕೇಳ್ತಾರೆ, ಅವರಿಗೆ ನಾಚಿಕೆ ಆಗಬೇಕು. ಸಿದ್ದರಾಮಯ್ಯ, ಡಿಕೆಶಿ, ಅಂಬಿಕಾಪತಿ ಈ ಸುಳ್ಳಿನ ಮಹಲ್ ಕಟ್ಟಿದ್ದರು ಅದು ಈಗ ಕುಸಿದು ಬಿದ್ದಿದೆ. ರಾಜ್ಯದ ಜನತೆಗೆ ಸುಳ್ಳು ಹೇಳಿ, ತಾವು ಸುಳ್ಳುರಾಮಯ್ಯ ಎಂದು ಖುದ್ದು ಸಿಎಂ ಸಾಬೀತು ಪಡಿಸಿದ್ದಾರೆ. ತಪ್ಪು ಮಾಡಿಲ್ಲ ಎಂದು ಸೈಟು ವಾಪಸ್ ಕೊಟ್ಟರು. ಈಗ ಅವರು ಮಾಡಿದ 40% ಕಮೀಷನ್ ಆರೋಪವೂ ಸುಳ್ಳಾಗಿದೆ. ಇನ್ಮುಂದೆ ಸಿದ್ದರಾಮಯ್ಯ ತಮ್ಮ ಹೆಸರನ್ನು ಸುಳ್ಳು ರಾಮಯ್ಯ ಎಂದು ಬದಲಾಯಿಸಿಕೊಳ್ಳಲಿ ಎಂದರು.ಇದನ್ನೂ ಓದಿ: ಹೆಚ್‌ಡಿಕೆ ಬಣ್ಣದ ಬಗ್ಗೆ ಜಮೀರ್ ಮಾತಾಡಿದ್ದು ಸರಿಯಲ್ಲ- ಪ್ರಿಯಾಂಕ್ ಖರ್ಗೆ
ನಾನು ಇವತ್ತಿಗೆ ಪ್ರತಿಪಕ್ಷ ನಾಯಕನಾಗಿ ಒಂದು ವರ್ಷವಾಗಿದೆ. ಹಾಗೇ ಇದೇ ಹೊತ್ತಿನಲ್ಲಿ ನಮ್ಮ ಸರ್ಕಾರದ ಮೇಲಿನ 40% ಕಮೀಷನ್ ಆರೋಪ ಸುಳ್ಳು ಎನ್ನುವುದು ಸಾಬೀತಾಗಿದೆ. ಕಮೀಷನ್ ಆರೋಪ ಮಾಡಿರುವುದು ಕಾಂಗ್ರೆಸ್‌ನ ಟೂಲ್‌ಕಿಟ್‌ನ ಭಾಗವಾಗಿದೆ. ಇದುವರೆಗೆ 40% ಕಮೀಷನ್ ಆರೋಪಕ್ಕೆ ಕಾಂಗೆಸ್‌ನವರು ದಾಖಲೆ ಕೊಟ್ಟಿಲ್ಲ. ಆಧಾರರಹಿತ, ಸುಳ್ಳು ಆರೋಪ ಮಾಡಿದ್ದರು. ನಮ್ಮ ಮೇಲಿನ ಆರೋಪ ಸುಳ್ಳು ಎಂದು ಲೋಕಾಯುಕ್ತ ತನಿಖೆಯಿಂದಲೇ ಗೊತ್ತಾಗಿದೆ. ಈಗಿನ ಕಾಂಗ್ರೆಸ್ ಸರ್ಕಾರ 60% ಕಮೀಷನ್ ಸರ್ಕಾರ ಆಗಿದೆ ಎಂದು ಕಿಡಿಕಾರಿದ್ದಾರೆ.
ವಾಲ್ಮೀಕಿ ಹಗರಣ ವಿಚಾರ:
ವಾಲ್ಮೀಕಿ ಹಗರಣದಲ್ಲಿ ಸಾಕ್ಷಿ ಸಿಕ್ಕಿದೆ. ಇಡಿ ಇದನ್ನು ಅನುಮೋದನೆ ಮಾಡಿದೆ. ಬಳ್ಳಾರಿಯಲ್ಲಿ ಯಾರ್ಯಾರಿಗೆ ಹಣ ಹೋಗಿದೆ ಎಂದು ರಿಪೋರ್ಟ್ ಬಂದಿದೆ. ಸಿದ್ದರಾಮಯ್ಯ ತಮ್ಮ ಜೀವನ ತೆರೆದ ಪುಸ್ತಕ ಎಂದಿದ್ದಾರೆ. ತೆರೆದ ಪುಸ್ತಕ ನಾವು ನೋಡಿದರೆ ಕಪ್ಪು ಚುಕ್ಕೆ ಇಡುವುದಕ್ಕೆ ಜಾಗನೇ ಇಲ್ಲ. ಸಿದ್ದರಾಮಯ್ಯ ಅವರ ಕುಟುಂಬ ಲೂಟಿ ಮಾಡುತ್ತಿದೆ. ದಿನ ಒಬ್ಬೊಬ್ಬ ಮಂತ್ರಿ ದರೋಡೆಯ ಪುಸ್ತಕ ತೆರೆಯುತ್ತಿದ್ದಾರೆ. ರಾಜ್ಯದಲ್ಲಿ ಕನ್ನ ಹಾಕುವ ಮಂತ್ರಿಗಳು ಇದ್ದಾರೆ. ನನ್ನ ಮುಟ್ಟಿ ನೋಡಿ, ಕೇಸ್ ಹಾಕಿ ನೋಡಿ, ಸಿಎಂ ಪದವಿಯಿಂದ ಇಳಿಯುವುದಿಲ್ಲ ಎಂದು ಅವರ ಹೈಕಮಾಂಡ್‌ಗೆ ಹೇಳುತ್ತಿದ್ದಾರೆ. ತಪ್ಪು ಮಾಡಿಲ್ಲ ಅಂದ ಮೇಲೆ ಯಾಕೆ ಹೀಗೆ ಹೇಳುತ್ತೀರಾ? 14 ಸೈಟ್‌ಗಳನ್ನು ಯಾಕೆ ವಾಪಸ್ಸು ಕೊಟ್ಟಿದೀರಿ? ಏಕವಚನದಲ್ಲಿ ಮಾತನಾಡುತ್ತಾರೆ, ಕೇಳಿದರೆ ಹಳ್ಳಿಯಿಂದ ಬಂದವನು ಎನ್ನುತ್ತಾರೆ. ನಾನು ಸೈಟ್ ವಾಪಸ್ಸು ಮಾಡಿಲ್ಲ. ನನ್ನ ಹೆಂಡ್ತಿ ನನಗೆ ಗೊತ್ತಿಲ್ಲದೇ ಕೊಟ್ಟಿದ್ದಾರೆ ಎಂದರು. ಅವರು ಅಹಿಂದ ನಾಯಕರಾಗಿಲ್ಲ ಈಗ ಅವರು ಅಲ್ಪಸಂಖ್ಯಾತರ ಚಾಂಪಿಯನ್ ಆಗಿದ್ದಾರೆ. ಮುಸ್ಲಿಮರ ಹೀರೋ ಆಗಲು ಹೊರಟಿದ್ದಾರೆ ಎಂದು ಹೇಳಿದರು.
ಬೆಳಗಾವಿ ಅಧಿವೇಶನ ಕರೆಯಲು ಸರ್ಕಾರ ಹೆದರುತ್ತಿದ್ದಾರೆ. ಸಾಕಷ್ಟು ಭ್ರಷ್ಟಾಚಾರ ಮಾಡಿ ಈಗ ಅಧಿವೇಶನ ಕರೆಯಲೂ ಹೆದರುತ್ತಿದ್ದಾರೆ. ಅದಕ್ಕೆ ಅಧಿವೇಶನದ ದಿನಾಂಕ ಸಹ ಪ್ರಕಟ ಮಾಡಲು ಹಿಂಜರಿಯುತ್ತಿದ್ದಾರೆ. ಅಧಿವೇಶನದಲ್ಲಿ ಸರ್ಕಾರದ ಎಲ್ಲ ಲೋಪಗಳ ಬಗ್ಗೆ ಚರ್ಚೆ, ಹೋರಾಟ ಮಾಡುತ್ತೇವೆ. ಈ ಸರ್ಕಾರ ಕಾಣೆಯಾಗಿದೆ, ಕೇವಲ ಗುರುವಾರ ಸಂಪುಟ ಸಭೆಯಲ್ಲಿ ಎಲ್ಲರೂ ಕಾಣಿಸಿಕೊಳುತ್ತಾರೆ. ಇದೊಂದು ಗುರುವಾರ ವೀರರ ಸರ್ಕಾರ. ಗುರುವಾರ ಬಳಿಕ ಎಲ್ಲರೂ ನಾಪತ್ತೆಯಾಗಿ ಹೋಗುತ್ತಾರೆ. ಇದು ಗುರುವಾರದ ಸರ್ಕಾರ. ಕ್ಯಾಬಿನೆಟ್ ದಿನ ಮಾತ್ರ ಈ ಸರ್ಕಾರ ಎದ್ದಿರುತ್ತದೆ. ಬಾಕಿ ದಿನ ಮಲಗಿರುತ್ತದೆ. ಅಬಕಾರಿ ಸಚಿವ ಒಂದೇ ದಿನ 18 ಕೋಟಿ ರೂ. ಲೂಟಿ ಹೊಡೆದು ಮಹಾರಾಷ್ಟ್ರಕ್ಕೆ ಕಳಿಸಿದ್ದಾರೆ. ಕಾಂಗ್ರೆಸ್ ಸಚಿವರು ಸಂಪುಟ ಸಭೆ ಮಾಡುವುದು ಸರ್ಕಾರದ ಬೊಕ್ಕಸಕ್ಕೆ ಹಣ ತರುವುದು ಹೇಗೆ ಎಂಬ ಕಾರಣಕ್ಕಲ್ಲ. ಹೇಗೆ ಲೂಟಿ ಮಾಡಬೇಕು? ಎಷ್ಟು ಕಮಿಷನ್ ತರಬಹುದು? ಎಂದು ಸಭೆ ಮಾಡುತ್ತಾರೆ ಎಂದು ಆರೋಪಿಸಿದರು.
ಬಿಪಿಎಲ್ ಕಾರ್ಡ್ ಎಪಿಎಲ್ ಆಗಿ ಬದಲಾವಣೆ ವಿಚಾರ:
ಬಿಪಿಎಲ್ ಕಾರ್ಡುಗಳನ್ನು (BPL Card) ಸರ್ಕಾರ ರದ್ದು ಮಾಡುತ್ತಿದೆ. ಎಪಿಎಲ್‌ಗೆ ಈಗಾಗಲೇ ಒಂದು ಲಕ್ಷ ಕಾರ್ಡ್‌ಗಳನ್ನು ಪರಿವರ್ತನೆ ಮಾಡಿದ್ದಾರೆ. ಇದು ಸರ್ಕಾರದ ಆರನೇ ಗ್ಯಾರಂಟಿಯಾಗಿದೆ. ಗ್ಯಾರಂಟಿಗಳಿಗೆ ಹಣ ಹೊಂದಿಸಲಾಗದೇ ಈ ಕೆಲಸ ಮಾಡುತ್ತಿದ್ದಾರೆ. ಉಚಿತ ಗ್ಯಾರಂಟಿಗಳಲ್ಲಿ ಪ್ರತೀ ವರ್ಷ 10% ಕಡಿತ ಮಾಡಲು ಅಧಿಕಾರಿಗಳಿಗೆ ಸರ್ಕಾರ ಟಾರ್ಗೆಟ್ ಕೊಟ್ಟಿದೆ. ಉಚಿತ ಗ್ಯಾರಂಟಿ ಕೊಡಲಾಗದೇ ಸರ್ಕಾರ ಆರ್ಥಿಕ ಹೊರೆಯಲ್ಲಿದೆ. ಹಣ ಹೊಂದಿಸಲು ಸರ್ಕಾರಕ್ಕೆ ಆಗುತ್ತಿಲ್ಲ. ಅದಕ್ಕಾಗಿ ಬಿಪಿಎಲ್ ಕಾರ್ಡ್‌ಗೆ ಕತ್ತರಿ ಹಾಕುವ ಮೂಲಕ ಕಾರ್ಡ್ಗಳನ್ನು ರದ್ದು ಮಾಡಿ, ಎಪಿಎಲ್‌ಗೆ (APL Card) ಪರಿವರ್ತನೆ ಮಾಡುತ್ತಿದ್ದಾರೆ ಎಂದರು.ಇದನ್ನೂ ಓದಿ: ವಕ್ಫ್ ಪ್ರಕರಣದಲ್ಲಿ ಶಾಂತಿ ಕದಡಲು ಬಿಡಲ್ಲ: ಪರಮೇಶ್ವರ್ ಎಚ್ಚರಿಕೆ
– ನನ್ನನ್ನ ಮುಟ್ಟಿದ್ರೆ ಕರ್ನಾಟಕದ ಜನ ಸುಮ್ಮನೆ ಬಿಡಲ್ಲ: ವಿಪಕ್ಷಗಳಿಗೆ ಎಚ್ಚರಿಕೆ
ಮೈಸೂರು: ನಮ್ಮ ಸರ್ಕಾರ ಬೀಳಿಸಲು ಬಿಜೆಪಿ (BJP) ನಮ್ಮ 50 ಶಾಸಕರಿಗೆ ಒಬ್ಬೊಬ್ಬರಿಗೆ 50 ಕೋಟಿ ರೂ. ಅನ್ನು ಆಫರ್ ಮಾಡಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಬಾಂಬ್ ಸಿಡಿಸಿದ್ದಾರೆ.
ಎಲ್ಲಾ ವಿರೋಧ ಪಕ್ಷಗಳ ನಾಯಕರ ಸಿಎಂಗಳನ್ನ ಹೆದರಿಸುವ ಕೆಲಸವನ್ನು ಕೇಂದ್ರ ಸರಕಾರ ಮಾಡ್ತಿದೆ. ಇಡಿ, ಐಡಿ, ಸಿಬಿಐ (ED, IT, SBI) ಎಲ್ಲಾ ಅವರ ಕೈಯಲ್ಲಿದೆ. ಅವುಗಳನ್ನು ನಮ್ಮ ಮೇಲೆ ಛೂ ಬಿಡುವ ಕೆಲಸ ಮಾಡ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ನನ್ನ ಮೇಲೆ ಇರುವ ಕೇಸ್‌ಗಳು ಸುಳ್ಳು. ನಾನು 40 ವರ್ಷದಿಂದ ರಾಜಕಾರಣ ಮಾಡಿದ್ದೇನೆ. ಮಂತ್ರಿ, ಉಪ ಮುಖ್ಯಮಂತ್ರಿ, ವಿರೋಧ ಪಕ್ಷ ನಾಯಕ, ಸಿಎಂ ಎಲ್ಲವೂ ಆಗಿದ್ದೇನೆ. ಸಿದ್ದರಾಮಯ್ಯ 14 ಸೈಟ್‌ಗೆ ರಾಜಕಾರಣ ಮಾಡಬೇಕಿತ್ತಾ? ಜನರು ಮೂರ್ಖರು ಅಂತ ಬಿಜೆಪಿ ತಿಳಿದುಕೊಂಡಿದೆ. ಜನರ ಬೆಂಬಲ ಇರುವವರೆಗೆ ನಾನು ಯಾವ ಕೇಸ್‌ಗೂ ಜಗ್ಗಲ್ಲ ಬಗ್ಗಲ್ಲ ಎಂದು ಗುಡುಕಿದ್ದಾರೆ. ಇದನ್ನೂ ಓದಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಡಿಡಿ ಮನೆ ಮೇಲೆ ಲೋಕಾ ದಾಳಿ; 14.80 ಲಕ್ಷ ಹಣ ಜಪ್ತಿ!
ಜಾರ್ಖಂಡ್‌ಬಲ್ಲಿ ಹೇಮಂತ್ ಸೊರೇನ್, ದೆಹಲಿಯಲ್ಲಿ ಕೇಜ್ರಿವಾಲ್ ಆಯ್ತು ಈಗ ನನ್ನ ಮೇಲೆ ಕೇಸ್ ಹಾಕಿಸುವುದು ಶುರುವಾಗಿದೆ. ನಮ್ಮ ಸರ್ಕಾರ ಬೀಳಿಸಲು ಬಿಜೆಪಿ ನಮ್ಮ 50 ಶಾಸಕರಿಗೆ ಒಬ್ಬೊಬ್ಬರಿಗೆ 50 ಕೋಟಿ ರೂ. ಅನ್ನು ಆಫರ್ ಮಾಡಿದ್ದರು. ಇದು ಯಶಸ್ವಿ ಆಗಲಿಲ್ಲ. ಇಷ್ಟು ಹಣ ಬಿಜೆಪಿಗೆ ಎಲ್ಲಿಂದ ಬಂತು? ಯಡಿಯೂರಪ್ಪ, ಬೊಮ್ಮಾಯಿ, ಅಶೋಕ್, ವಿಜಯೇಂದ್ರ ಹಣ ಪ್ರಿಂಟ್ ಮಾಡುತ್ತಾರಾ? ಇದು ಭ್ರಷ್ಟಾಚಾರದ ಹಣ ಅಲ್ವಾ? ಹೀಗಾಗಿ ನನ್ನ ಮೇಲೆ ಕೇಸ್ ಹಾಕಿಸಿ ಸರ್ಕಾರ ಬೀಳಿಸುವ ಯತ್ನ ಮಾಡ್ತಿದ್ದಾರೆ ಎಂದು ಬಾಂಬ್ ಸಿಡಿಸಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿಗಳ ಪೋಷಕರೊಂದಿಗೆ ಅನುಚಿತ ವರ್ತನೆ, ಹಣ ದುರುಪಯೋಗ – ಇಬ್ಬರು ಶಿಕ್ಷಕರು ಅಮಾನತು
ನನ್ನ ಕಂಡರೆ ಬಿಜೆಪಿಗೆ ಹೊಟ್ಟೆ ಉರಿ. ಬಡವರ ಪರ ಕೆಲಸ ಮಾಡ್ತಿನಿ ಎಂಬ ಕಾರಣಕ್ಕೆ ನನ್ನ ಇಳಿಸುವ ಪ್ರಯತ್ನ ಮಾಡ್ತಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಉಳಿಯಬೇಕು. ಸಿದ್ದರಾಮಯ್ಯ ಸರ್ಕಾರ ಮುಂದುವರಿಯ ಬೇಕು ಎಂದು ಜನರೇ ಬಿಜೆಪಿಗೆ ಹೇಳಬೇಕು. ಲೂಟಿ ಹೊಡೆಯುವುದು, ಜಾತಿ ಮಾಡುವುದೇ ರಾಜಕಾರಣ ಎಂದು ಬಿಜೆಪಿ ತಿಳಿದಿದೆ. ಬಿಜೆಪಿ ಅವರು ಏನೂ ಅಭಿವೃದ್ಧಿ ಮಾಡಿದ್ದಾರೆ ಹೇಳಲಿ ನೋಡೋಣ ಎಂದು ಸವಾಲ್ ಹಾಕಿದ್ದಾರೆ.
ಬೆಂಗಳೂರು: ಕಳೆದ ಒಂದು ದಿನದ ಹಿಂದೆಯಷ್ಟೇ ಶಕ್ತಿ ಯೋಜನೆ (Shakti Scheme) ಪರಿಷ್ಕರಣೆ ಮಾಡುವ ಸುಳಿವು ಕೊಟ್ಟಿದ್ದ ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಮರುದಿನವೇ ಯುಟರ್ನ್ ಹೊಡೆದಿದ್ದಾರೆ.
ಬೆಂಗಳೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳನ್ನು (Guarantee Scheme) ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಪಂಚ ಗ್ಯಾರಂಟಿ ಯೋಜನೆಗಳು ಮುಂದುವರಿಯುತ್ತವೆ. ಶಕ್ತಿ ಯೋಜನೆಯಲ್ಲೂ ಯಾವುದೇ ಪರಿಷ್ಕರಣೆ ಇಲ್ಲ. ನನ್ನ ಹೇಳಿಕೆ ತಿರುಚಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದೀಪಾವಳಿಯಂದು ‘ಪುಷ್ಪ 2’ ಅಪ್‌ಡೇಟ್- ಪುಷ್ಪರಾಜ್, ಶ್ರೀವಲ್ಲಿ ರೊಮ್ಯಾಂಟಿಕ್ ಪೋಸ್ಟರ್ ಔಟ್
ಮುಂದುವರಿದು, ನಮ್ಮ ಸರ್ಕಾರವನ್ನ ಷಡ್ಯಂತ್ರದಿಂದ ಕೆಡವಲು ಯಾರ ಹಣೆಯಲ್ಲೂ ಬರೆದಿಲ್ಲ. ಇನ್ನೂ ಎಂಟೂವರೆ ವರ್ಷ ನಮ್ಮದೇ ಸರ್ಕಾರ ಎಂದು ಕೇಂದ್ರ ಸಚಿವ ಹೆಚ್‌ಡಿಕೆ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ನಾವು ಟಿಕೆಟ್‌ಗೆ ದುಡ್ಡು ಕೊಡೋಕೆ ರೆಡಿ ಇದ್ದೇವೆ. ಆದರೆ ಬಸ್ ನಲ್ಲಿ ಹಣ ತೆಗೆದುಕೊಳ್ಳುತ್ತಿಲ್ಲ ಅಂತ ನನಗೆ ಹೇಳ್ತಿದ್ದಾರೆ. ಈ ಬಗ್ಗೆ ನಾವು ಕೂತು ಚರ್ಚೆ ಮಾಡ್ತೀವಿ. ಅನೇಕರು ನಾವು ಟಿಕೆಟ್ ಹಣ ಕೊಡೋಕೆ ಸಿದ್ಧ ಅಂತ ಪ್ರಾಮಾಣಿಕವಾಗಿ ಅಭಿಪ್ರಾಯ ಹೇಳ್ತಿದ್ದಾರೆ. ಹೀಗಾಗಿ ನಾವು, ರಾಮಲಿಂಗಾರೆಡ್ಡಿ ಎಲ್ಲಾ ಕೂತು ಈ ಬಗ್ಗೆ ತೀರ್ಮಾನ ಮಾಡ್ತೀವಿ ಅಂತ ತಿಳಿಸಿದ್ದರು.
ಮಂಡ್ಯ: 2028ರ ವರೆಗೆ ಈ ಸರ್ಕಾರ (Congress Government) ನಡೆಯಲ್ಲ, ಮತ್ತೆ ನಾನೇ ಸಿಎಂ ಆಗ್ತೀನಿ. ಜನರು ಒಂದು ಅವಕಾಶ ಕೊಡ್ತಾರೆ ಅನ್ನೋ ವಿಶ್ವಾಸ ಇದೆ ಎಂದು ಮಾಜಿ ಸಿಎಂ ಆಗಿರುವ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಭವಿಷ್ಯ ನುಡಿದರು.
ನಾನು ಜ್ಯೋತಿಷಿ ಅಲ್ಲ ಆದ್ರೂ ಹೇಳ್ತಿದ್ದಿನಿ. ಮತ್ತೆ ಸಿಎಂ ಆಗುವ ವಿಚಾರ ಜನ ತೀರ್ಮಾನ ಮಾಡ್ತಾರೆ ಅನ್ನೋ ವಿಶ್ವಾಸದಲ್ಲಿದ್ದೇನೆ. ಜನ ಬಯಸಿದರೆ ಯಾಕೆ ಆಗಬಾರದು? 5 ವರ್ಷ ಸರ್ಕಾರ ನಡೆಸಲು ನನಗೆ ಅವಕಾಶ ಮಾಡಿಕೊಡಿ ಅಂತ ಜನರಿಗೆ ಈಗಲೂ ಮನವಿ ಮಾಡ್ತೀನಿ. ಹಿಂದಿನ ಅವಧಿಯಲ್ಲಿ ನನ್ನ 14 ತಿಂಗಳ ಆಡಳಿತ, ಬೇರೆಯವರ ಹಂಗಿನಲ್ಲಿ ಮಾಡಿದ್ದು. ಈಗಿನ ಸಂಪೂರ್ಣ ಬಹುಮತದ ಸರ್ಕಾರ ಯಾವ ರೀತಿ ಆಡಳಿತ ನಡೆಸುತ್ತಿದ್ದಾರೆ. ಇನ್ನೊಬ್ಬರ ಹಂಗಿನಲ್ಲಿ ಸರ್ಕಾರ ಮಾಡಿದಾಗಲೂ ನಾಡಿಗೆ ಕೊಟ್ಟ ಕಾರ್ಯಕ್ರಮ ಜನರ ಮನಸ್ಸಿನಲ್ಲಿ ಉಳಿದಿದೆ. 5 ವರ್ಷಗಳ ಸರ್ಕಾರ ನನಗೆ ಒಂದು ಬಾರಿ ಸಿಕ್ಕಿದ್ರೆ, ನನಗೆ ಆಗಿರುವ ಅನುಭವದಲ್ಲಿ ಉತ್ತಮ ಕೆಲಸ ಮಾಡ್ತೇನೆ ಎಂದು ಭರವಸೆ ನೀಡಿದರು.
ರಾಜ್ಯದಲ್ಲಿ ಹಣದ ಕೊರತೆ ಇಲ್ಲ. ಕರ್ನಾಟಕ ಸಮೃದ್ಧಿಯ ನಾಡು, ಇನ್ನೊಬ್ಬರಿಗೆ ಕೈ ಎತ್ತಿ ಕೊಡುವ ಆರ್ಥಿಕ ಶಕ್ತಿ ಕೊಡುವ ರಾಜ್ಯ ಇದು. ಆದ್ರೆ ಇವತ್ತು ಹಣ ಲೂಟಿಯಾಗುತ್ತಿದೆ. ಸರ್ಕಾರದ ಆಸ್ತಿ ಕಬಳಿಕೆ ಆಗ್ತಿದೆ. ಇದಕ್ಕೆ ಕಡಿವಾಣ ಹಾಕಿದ್ರೆ. ಇವರು ಕೊಡುವ 2,000 ರೂ. ಅಲ್ಲ ಕನಿಷ್ಠ 10 ಸಾವಿರ ರೂ. ಸಂಪಾದನೆ ಮಾಡುವ ಕಾರ್ಯಕ್ರಮಗಳು ಇವೆ. ಜನರು ಒಂದು ಅವಕಾಶ ನೀಡ್ತಾರೆ ಅನ್ನೋ ವಿಶ್ವಾಸ ಇದೆ. 2028ರ ಒಳಗೆ ಆ ಅವಕಾಶ ನನಗೆ ಬರುತ್ತೆ ಎಂದು ತಿಳಿಸಿದರು.
ಇಂದಿನ ಸರ್ಕಾರದ ನಡವಳಿಕೆಗಳಿಂದ ಜನರು ಬೇಸತ್ತಿದ್ದಾರೆ. ಜನರಲ್ಲಿ ಸರ್ಕಾರದ ಬಗ್ಗೆ ಕಿಂಚಿತ್ತೂ ಗೌರವ ಇಲ್ಲ. ಜನರೇ ಈ ಸರ್ಕಾರವನ್ನು ತೆಗೆಯುತ್ತಾರೆ. ನಾವು ತೆಗೆಯಲು ಸಾಧ್ಯವಿಲ್ಲ ಜನರೇ ತೀರ್ಮಾನ ಮಾಡಬೇಕು. ಈ ಪರಿಸ್ಥಿತಿಯಲ್ಲಿ ಜನರೇ ತೀರ್ಮಾನ ಮಾಡ್ತಾರೆ ಎಂದು ಎಚ್ಚರಿಸಿದರು. ಇದನ್ನೂ ಓದಿ: ಇಸ್ರೇಲ್ ಅಧ್ಯಕ್ಷ ನೆತನ್ಯಾಹು ನಿವಾಸದ ಮೇಲೆ ಹಿಜ್ಬುಲ್ಲಾ ಡ್ರೋನ್ ದಾಳಿ
ಕಾಂಗ್ರೆಸ್ ಶಾಸಕರಲ್ಲೇ ಅಸಮಾಧಾನದ ಸ್ಫೋಟ ಆಗಿದೆ. ಅವಗ ಸ್ಪೋಟ ಆಗುತ್ತೆ ಕಾದು ನೋಡೋಣಾ? ನಾವು ಅವರ ಸರ್ಕಾರ ಅಲ್ಲಾಡಿಸುತ್ತಿವಿ ಅಂತ ಹೇಳಿಲ್ಲ. ಸರ್ಕಾರದ ನಿಷ್ಕ್ರಿಯತೆ ಶಾಸಕರು ಹಳ್ಳಿಗೆ ಹೋಗಿ ಜನರನ್ನ ಭೇಟಿ ಮಾಡದ ವಾತಾವರಣ ಸೃಷ್ಟಿಯಾಗಿದೆ. ಸರ್ಕಾರದ ನಡವಳಿಕೆ ಬಗ್ಗೆ ಅವರಲ್ಲೇ ಅಸಮಾಧಾನ ಇದೆ ಸ್ಫೋಟವಾಗುತ್ತೆ ಎಂದು ನುಡಿದರು.
ಶಿರೂರು ಗುಡ್ಡಕುಸಿತ ಸಂತ್ರಸ್ತ ಕುಟುಂಬಕ್ಕೆ ಉದ್ಯೋಗ:
ಇದೇ ವೇಳೆ ನಿರುದ್ಯೋಗ ಸಮಸ್ಯೆ ಕುರಿತು ಮಾತನಾಡಿದ ಅವರು, ಇಂದು 800ಕ್ಕೂ ಹೆಚ್ಚು ಯುವಜನರು ಉದ್ಯೋಗಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ. ಅಂಧ ಯುವಕರಿಗೆ ಒಂದು ಕಂಪನಿ ಕೆಲಸ ಕೊಟ್ಟಿದೆ. ಅದೇ ಕಂಪನಿಯವರು ಸುಮಾರು 700 ಜನಕ್ಕೆ ಆಫರ್ ಕೊಟ್ಟಿದ್ದಾರೆ. ಉದ್ಯೋಗದ ಸಮಸ್ಯೆಯನ್ನು ಸರಿಪಡಿಸುವ ಕೆಲಸ ಖಂಡಿತಾ ಆಗುತ್ತದೆ. ನಾನು ಪ್ರಾಮಾಣಿಕವಾಗಿ ಉದ್ಯೋಗ ಕೊಡಿಸುತ್ತೇನೆ. ಶಿರೂರು ಗುಡ್ಡ ಕುಸಿತದಿಂದ ಅವರ ತಂದೆ ಸಾವನ್ನಪ್ಪಿದರು. ಅವರ ಕುಟುಂಬಕ್ಕೆ ಕೆಲಸ ಕೊಡಿಸುವ ಭರವಸೆ ಕೊಟ್ಟಿದ್ದೆ, ಅದರಂತೆ ಕೆಲಸ ಕೊಡಿಸಿದ್ದೇನೆ. ಇನ್ನೊಬ್ಬರ ಮೆಚ್ಚಿಸಲು ನಾನು ಮಾಡಲ್ಲ, ಜನ ನಂಬಿ ಮತ ಕೊಟ್ಟಿದ್ದಾರೆ. ಅವರ ಋಣ ತೀರಿಸುವ ಕೆಲಸ ಮಾಡ್ತಿದ್ದೇನೆ ಎಂದು ಭಾವುಕರಾದರು.
– ಗುಜುರಿ ಸೇರಿದ ಲಕ್ಷಾಂತರ ಮೌಲ್ಯದ ಮೊಬೈಲ್ ಕ್ಯಾಂಟೀನ್ ವಾಹನ
ಬೆಂಗಳೂರು: ಬಡವರಿಗೆ ಕಡಿಮೆ ದರದಲ್ಲಿ ಊಟ ಸಿಗಬೇಕೆಂಬ ಉದ್ದೇಶದಿಂದ ಇಂದಿರಾ ಕ್ಯಾಂಟೀನ್ ಶುರು ಮಾಡಿದ್ದರು ಸಿಎಂ ಸಿದ್ದರಾಮಯ್ಯ. ಬಳಿಕ ಬಿಜೆಪಿ ಸರ್ಕಾರದ ಅವಧಿಯಲ್ಲಿ ಇಂದಿರಾ ಕ್ಯಾಂಟೀನ್ ನಿರ್ವಹಣೆ ಅಷ್ಟಕ್ಕೆ ಅಷ್ಟೇ ಆಗಿತ್ತು. ಈಗ ಮತ್ತೆ ಅಧಿಕಾರಕ್ಕೆ ಬಂದಿರೋ ಕಾಂಗ್ರೆಸ್ ಸರ್ಕಾರ ಇಂದಿರಾ ಕ್ಯಾಂಟೀನ್‌ಗೆ ಹೊಸ ರೂಪ ನೀಡೋದಾಗಿ ಹೇಳಿದೆ. ಆದ್ರೇ ಇರೋ ಕ್ಯಾಂಟೀನ್ ಒಂದಕ್ಕೆ ಬೀಗ ಬಿದ್ದಿದ್ದು, ಆ ಕ್ಯಾಂಟೀನ್ ಅಕ್ರಮ ಚಟುವಟಿಕೆಯ ತಾಣವಾಗಿದೆ.
ಹೊಸ ರೂಪದಲ್ಲಿ ಇಂದಿರಾ ಕ್ಯಾಂಟೀನ್ ಇರುತ್ತೆ.. ಬಡವರ ಹಸಿವು ನೀಗಿಸುತ್ತೆ, ಹೊಸ ಮೆನು ಇರುತ್ತೆ ಅಂತಾ ಕಾಂಗ್ರೆಸ್ ಸರ್ಕಾರ ಹೇಳಿತ್ತು. ಆದ್ರೆ ಅಧಿಕಾರಕ್ಕೆ ಬಂದು ಒಂದೂವರೆ ವರ್ಷಗಳೇ ಕಳದ್ರೂ ಇನ್ನೂ ಹೊಸ ಮೆನು ಬಂದೇ ಇಲ್ಲ. ಅದ್ರಲ್ಲಿ ಕಳೆದ ಅವಧಿಯಲ್ಲಿ ನಿರ್ಮಾಣವಾಗಿದ್ದ ವಾರ್ಡ್ ನಂಬರ್ 155ರ ಹನುಮಂತನಗರದ ಇಂದಿರಾ ಕ್ಯಾಂಟೀನ್ ಅಕ್ಷರಶಃ ಪಾಳು ಬಿದ್ದ ಜಾಗದಂತೆ ಆಗಿದ್ದು, ಕ್ಯಾಂಟೀನ್ ಆವರಣದಲ್ಲಿ ಗಿಡಗಂಟೆಗಳು ಬೆಳೆದುಕೊಂಡಿದೆ. ಇದನ್ನೂ ಓದಿ: ಹೆಚ್‌ಡಿಕೆ, ಬಿಎಸ್‌ವೈಯಿಂದ ಜಂಟಿ ಡಿನೋಟಿಫೈ – ಕಾಂಗ್ರೆಸ್ ಸಚಿವರಿಂದ ಗಂಭೀರ ಆರೋಪ
– 2 ಸೀಟು ಗೆದ್ದು ಬಿಜೆಪಿ ಬ್ಲ್ಯಾಕ್ ಮೇಲ್ ಮಾಡ್ತಿದ್ದೀಯಾ ಎಂದು ಡಿಸಿಎಂ ಪ್ರಶ್ನೆ
ಮಂಡ್ಯ: ಮುಸ್ಲಿಮರು (Muslims) ಇಲ್ಲ ಅಂದಿದ್ರೆ ನೀವು ಎಂಎಲ್‌ಎ ಆಗ್ತಿರಲಿಲ್ಲ, ನಿಮ್ಮ ತಂದೆ ಸಿಎಂ ಆಗ್ತಿರಲಿಲ್ಲ. ಈಗ ಮುಸ್ಲಿಮರಿಗೆ ವೋಟ್ ಹಾಕಿಲ್ಲ ಅಂತ ಧಮ್ಕಿ ಹಾಕ್ತಾರೆ. ನೀನು ಬಿಜೆಪಿಗೆ ಹೋಗಿ ಮಂತ್ರಿಯಾದ ತಕ್ಷಣ ಯಾರನ್ನೂ ಸಂವಿಧಾನದಿಂದ ಓಡಿಸಲು ಆಗಲ್ಲ. ನಿನ್ನ ಧಮ್ಕಿಗೆ ಮುಸಲ್ಮಾನರು ಹೆದರಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಅಬ್ಬರಿಸಿದರು.
10 ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ (Congress Government) ತೆಗೆಯುವುದಾಗಿ ಹೆಚ್‌ಡಿಕೆ ಹೇಳುತ್ತಾರೆ. ಬ್ರಿಟಿಷರ ಕೈಯಲ್ಲೇ ಕಾಂಗ್ರೆಸ್ ಮುಗಿಸಲು ಆಗಲಿಲ್ಲ. ಕುಮಾರಸ್ವಾಮಿ ಕೈಯಲ್ಲಿ ಆಗುತ್ತಾ? ನಮ್ಮದು 10 ತಿಂಗಳ ಸರ್ಕಾರ ಅಲ್ಲ ಕುಮಾರಣ್ಣ, 10 ವರ್ಷದ ಸರ್ಕಾರ. ನಿಮ್ಮ ಹಣೆಬರಹದಲ್ಲಿ ಕಾಂಗ್ರೆಸ್ ಸರ್ಕಾರದ ಒಂದೇ ಒಂದು ಕಾರ್ಯಕ್ರಮ ನಿಲ್ಲಿಸಲು ಆಗಲ್ಲ. ಮುಸ್ಲಿಮರು ಇಲ್ಲ ಅಂದಿದ್ರೆ ನೀವು ಎಂಎಲ್‌ಎ ಆಗ್ತಿರಲಿಲ್ಲ, ನಿಮ್ಮ ತಂದೆ ಸಿಎಂ ಆಗ್ತಿರಲಿಲ್ಲ. ಈಗ ಮುಸ್ಲಿಮರಿಗೆ ವೋಟ್ ಹಾಕಿಲ್ಲ ಅಂತ ಧಮ್ಕಿ ಹಾಕ್ತಾರೆ. ನಿಮ್ಮ ತಂದೆ ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುತ್ತೀನಿ ಎಂದಿದ್ದು ನೆನೆಸಿಕೊಳ್ಳಿ ಎಂದು ತೀವ್ರ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸಿ, ಕಾಂಗ್ರೆಸ್ಸಿಗನಾಗಿ ನಾನೇ ಕೈಮುಗಿದು ಧನ್ಯವಾದ ಹೇಳ್ತೀನಿ: ಕೃಷ್ಣಬೈರೇಗೌಡ
ನೀನು ಬಿಜೆಪಿಗೆ ಹೋಗಿ ಮಂತ್ರಿಯಾದ ತಕ್ಷಣ ಯಾರನ್ನು ಸಂವಿಧಾನದಿಂದ ಓಡಿಸಲು ಆಗಲ್ಲ. ನಿನ್ನ ಧಮ್ಕಿಗೆ ಮುಸಲ್ಮಾನರು ಹೆದರಲ್ಲ. ಪೆನ್‌ಡ್ರೈವ್ ವಿಚಾರದಲ್ಲಿ ನಾವ್ಯಾರು ಬಂದಿರಲಿಲ್ಲ. ಮಹಾನಾಯಕ ಪೆನ್ ಡ್ರೈವ್ ಹಂಚಿದ್ದು ಎಂದಿದ್ದೆ. ಅದಕ್ಕೆ ಸ್ಟಿಕಾನ್ ಆಗಬೇಕಿತ್ತು. ನೀನು ಸಿಎಂ ಆಗಿದ್ದಾಗ ಡಿಕೆಶಿ ಅಪ್ಪ ಅಮ್ಮನಿಗೆ ಹುಟ್ಟಿಲ್ಲ ಎಂದಾಗಲೇ ಹೆದರಿಲ್ಲ. ಸಾತನೂರಿಗೆ ಬಂದು ಕ್ಷಮೆ ಕೇಳಿದ್ದೆ. ದೊಡ್ಡ ಆಲದಹಳ್ಳಿ ಕೆಂಪೇಗೌಡನ ಮಗ ಯಾರಿಗೂ ಹೆದರುವ ಮಗ ಅಲ್ಲ. ನನ್ನ ಅಜ್ಜಯ್ಯನ ಸುದ್ದಿ ನಿಮಗೆ ಬೇಡ. ಯಡಿಯೂರಪ್ಪ ಜೈಲಿಗೆ ಹಾಕಿಸಿದ್ದು ಯಾರು? ಧರ್ಮಸ್ಥಳ ಶ್ರೀ ಮಂಜುನಾಥ ಸನ್ನಿಧಿಯಲ್ಲಿ ಯಾಕೆ ಆಣೆ ಪ್ರಮಾಣ ಮಾಡಲು ಹೋಗಿದ್ರಿ? ಎಲ್ಲವೂ ರಾಜ್ಯದ ಜನರಿಗೆ ಗೊತ್ತಿದೆ. ತಿಮ್ಮಪ್ಪ ಕಾಸು ಬಿಡಲ್ಲ, ಮಂಜುನಾಥ ಮಾತು ಬಿಡಲ್ಲ. ಮಂಜುನಾಥ ಸ್ವಾಮಿ ಸಹವಾಸಕ್ಕೆ ಹೋಗ ಬೇಡ ಅಂತ ಏಕವಚನದಲ್ಲೇ ಕಿಡಿ ಕಾರಿದ್ರು. ಇದನ್ನೂ ಓದಿ: ಶೇಖ್ ಹಸೀನಾ ಭಾರತದ ಮೂಲಕ ಲಂಡನ್‌ಗೆ ಪಲಾಯನ; ಭಾರತ-ಬಾಂಗ್ಲಾ ಗಡಿಯಲ್ಲಿ ಹೈಅಲರ್ಟ್
ನನ್ನ ಅಧ್ಯಕ್ಷತೆಯಲ್ಲಿ 136 ಸೀಟು ಬಂತು. ನಿನ್ನ ಅಧ್ಯಕ್ಷತೆಯಲ್ಲಿ ಬರೀ 19 ಸೀಟು ಬಂದಿದೆ. ಈಗ 2 ಸೀಟು ಗೆದ್ದು ಬಿಜೆಪಿ ಬ್ಲ್ಯಾಕ್ ಮೇಲ್ ಮಾಡ್ತಿದ್ದೀಯಾ? ಆವತ್ತು ರೇವಣ್ಣಂದು ಬೇರೆ ಕುಟುಂಬ ಅಂದು ಈಗ ನನ್ನ ಕುಟುಂಬದ ಮರ್ಯಾದೆ ತೆಗೆದ ಅಂತ ಪ್ರೀತಂಗೆ ಹೇಳ್ತೀಯಾ? ಪ್ರಜ್ವಲ್‌ಗೆ ಟಿಕೆಟ್ ಕೊಡಬೇಡಿ ಎಂದು ದೇವರಾಜೇಗೌಡ ಕೈಲಿ ಪತ್ರ ಬರೆಸಿದ್ದು ಯಾರು? ಸ್ವಂತ ಅಣ್ಣ, ಅಣ್ಣನ ಮಗನನ್ನೇ ಅವನು ಸಹಿಸಲ್ಲ. ಇನ್ನು ನನ್ನ ಏಳಿಗೆ ಸಹಿಸುತ್ತಾನಾ? ನೀನು 10,000 ಜನರಿಗೆ ಕೆಲಸ ಕೊಡುವ ಕಾರ್ಖಾನೆ ತಂದರೆ ನನ್ನ ಬೆಂಬಲ ಇರುತ್ತದೆ. ಬಿಜೆಪಿ, ಜೆಡಿಎಸ್ ಸಮಾಜ ಒಡೆಯುವ ಕೆಲಸ ಮಾಡುತ್ತದೆ. ಕಾಂಗ್ರೆಸ್ ಸಮಾಜ ಜೋಡಿಸುವ ಕೆಲಸ ಮಾಡುತ್ತದೆ. ಪಾದಯಾತ್ರೆ ಬೇಡ ಎಂದು ಮತ್ತೆ ಯಾಕೆ ಒಪ್ಪಿಕೊಂಡೆ ಹೇಳು? ಹೆಚ್‌ಡಿಕೆ ವಿರುದ್ಧ ಹರಿಹಾಯ್ದಿದ್ದಾರೆ.