Tag: Congress founding day

  • ಕಾಂಗ್ರೆಸ್‍ನದ್ದು ದೇಶದಲ್ಲಿ ಹಾರದ ಬಾವುಟ: ಆರ್. ಅಶೋಕ್  ವ್ಯಂಗ್ಯ

    ಕಾಂಗ್ರೆಸ್‍ನದ್ದು ದೇಶದಲ್ಲಿ ಹಾರದ ಬಾವುಟ: ಆರ್. ಅಶೋಕ್ ವ್ಯಂಗ್ಯ

    ಧಾರವಾಡ (ಹುಬ್ಬಳ್ಳಿ): ಕಾಂಗ್ರೆಸ್ ಪಕ್ಷದ 137ನೇ ಸಂಸ್ಥಾಪನಾ ದಿನವೇ ಅವರ ಬಾವುಟ ಹಾರಲಿಲ್ಲ, ಬಿದ್ದು ಹೋಗಿದೆ. ಇನ್ನೂ ಅವರದ್ದು ಎಂದಿಗೂ ದೇಶದಲ್ಲಿ ಹಾರದ ಬಾವುಟ ಎಂದು ಕಂದಾಯ ಸಚಿವ ಆರ್.  ಅಶೋಕ್ ವ್ಯಂಗ್ಯವಾಡಿದರು.

    ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕಾರಿಣಿಯಲ್ಲಿ ಫಾಲ್ಗೊಳ್ಳುವ ಮೊದಲು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೀಳುವ ಬಾವುಟದ ಅಡಿ ಕೆಲಸ ಮಾಡುತ್ತಿರುವ ಡಿ.ಕೆ. ಶಿವಕುಮಾರ್ ಅಧಿಕಾರಕ್ಕಾಗಿ ಹಗಲುಗನಸು ಕಾಣುತ್ತಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ತಿರುಕನ ಕನಸು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಧೂಳೀಪಟ ಆಗಿದೆ ಎಂದರು. ಇದನ್ನೂ ಓದಿ: ಕರ್ನಾಟಕ ಬಂದ್‍ಗೆ ಎರಡೇ ದಿನ ಬಾಕಿ – ಹಲವು ವಲಯಗಳಿಂದ ಇನ್ನು ಸಿಕ್ಕಿಲ್ಲ ಪರಿಪೂರ್ಣ ಬೆಂಬಲ

    ನಿನ್ನೆ ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಸಂಸ್ಥಾಪನಾ ಕಾರ್ಯಕ್ರಮದಲ್ಲಿ ಸೋನಿಯಾ ಗಾಂಧಿ ಧ್ವಜಾರೋಹಣ ಮಾಡುವ ವೇಳೆ ಕಾಂಗ್ರೆಸ್ ಧ್ವಜ ಕೆಳಗೆ ಬಿದ್ದಿತ್ತು. ಇದನ್ನೂ ಓದಿ: ಭಾರತದ ಮಹಿಳಾ ಯುವ ಉದ್ಯಮಿ ಪಂಖೂರಿ ಶ್ರೀವಾಸ್ತವ ಹೃದಯ ಸ್ತಂಭನದಿಂದ ನಿಧನ

    ಕಾಂಗ್ರೆಸ್ ಪ್ರಕಾರ ಮತಾಂತರ ಒಳ್ಳೆಯದು. ಹಿಂದೂಗಳ ದಲಿತರು ಮತಾಂತರ ಆಗಬೇಕು ಎಂಬುದು ಅವರ ಭಾವನೆಯಾಗಿದೆ. ಮುಂದಿನ ದಿನಗಳಲ್ಲಿ ಬಹುಸಂಖ್ಯಾತರು ಕಾಂಗ್ರೆಸ್ಸ್ ದೂರ ಇಡಲಿದ್ದಾರೆ. ಹಿಂದೆ ಸಿದ್ದರಾಮಯ್ಯ ಅವರು ವೀರಶೈವ, ಲಿಂಗಾಯತ ಎಂದು ಒಡೆಯಲು ಮುಂದಾಗಿ ಕಾಂಗ್ರೆಸ್ ನುಚ್ಚು ನೂರಾಗಿತ್ತು. ವಿರೋಧ ಪಕ್ಷವು ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದೆ. ಹಿಂದೂ ವಿರೋಧಿ ಕಾಂಗ್ರೆಸ್ ಆಸೆ ಈಡೇರುವುದಿಲ್ಲ ಎಂದರು.