ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Election 2023) ಕಾಂಗ್ರೆಸ್ 5ನೇ ಪಟ್ಟಿ (Congress Candidates List) ರಿಲೀಸ್ ಮಾಡಿದ್ದು, 4 ಕ್ಷೇತ್ರಗಳಿಗೆ (ಒಂದು ಕ್ಷೇತ್ರ ಬದಲಾವಣೆ ಸೇರಿ) ಅಭ್ಯರ್ಥಿಗಳನ್ನ ಘೋಷಣೆ ಮಾಡಿದೆ.
ಇದರೊಂದಿಗೆ ಪುಲಕೇಶಿನಗರಕ್ಕೆ ಎ.ಸಿ ಶ್ರೀನಿವಾಸ್, ಕೆ.ಆರ್ ಪುರಕ್ಕೆ ಡಿ.ಕೆ ಮೋಹನ್ ಹಾಗೂ ಮುಳಬಾಗಿಲು ಕ್ಷೇತ್ರಕ್ಕೆ ಮುದ್ದುಗಂಗಾಧರ್ ಅವರನ್ನ ಅಭ್ಯರ್ಥಿಗಳಾಗಿ ಘೋಷಿಸಿದೆ. ಶಿಡ್ಲಘಟ್ಟ, ಮಂಗಳೂರು ಉತ್ತರ, ರಾಯಚೂರು, ಅರಕಲಗೂಡು, ಸಿವಿ ರಾಮನ್ ನಗರ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ ಘೋಷಣೆ ಮಾಡದೇ ಬಾಕಿ ಉಳಿಸಿಕೊಂಡಿದೆ.
ಲಿಂಗಸೂಗುರು ಕ್ಷೇತ್ರದಿಂದ ಹಾಲಿ ಶಾಸಕ ದುರ್ಗಪ್ಪ ಎಸ್ ಹುಲಗೇರಿ, ಚಿಕ್ಕಮಗಳೂರು – ಹೆಚ್.ಡಿ ತಮ್ಮಯ್ಯ, ಶ್ರವಣಬೆಳಗೊಳ – ಎಂ.ಎ ಗೋಪಾಲಸ್ವಾಮಿ, ಹರಿಹರ – ನಂದಗವಿ ಶ್ರೀನಿವಾಸ್, ಶಿಗ್ಗಾಂವಿ – ಯೂಸುಫ್ ಸವಣೂರು, ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದಲ್ಲಿ ದೀಪಕ್ ಚಿಂಚೋರ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಅಲ್ಲದೇ ಇನ್ನೂ 8 ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆ ಬಾಕಿ ಉಳಿಸಿಕೊಂಡಿದೆ.
ಬಾಕಿ ಉಳಿದಿರುವ ಕ್ಷೇತ್ರಗಳು
ಶಿಡ್ಲಘಟ್ಟ, ಮುಳಬಾಗಿಲು, ಮಂಗಳೂರು ಉತ್ತರ, ಪುಲಕೇಶಿನಗರ, ರಾಯಚೂರು, ಅರಕಲಗೂಡು, ಸಿವಿ ರಾಮನ್ ನಗರ.
ಹರಿಹರದ ಹಾಲಿ ಶಾಸಕ ರಾಮಪ್ಪಗೆ ಟಿಕೆಟ್ ಮಿಸ್ ಆಗಿದೆ. ಬದಲಾಗಿ ನಂದಗವಿ ಶ್ರೀನಿವಾಸ್‌ಗೆ ಕಾಂಗ್ರೆಸ್ ಮಣೆ ಹಾಕಿದೆ. ಅಲ್ಲದೇ ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿ ವಿರುದ್ಧ ಮಾಜಿ ಆಪ್ತ ತಮ್ಮಯ್ಯಗೆ ಟಿಕೆಟ್ ನೀಡಿದೆ. ತಮ್ಮಯ್ಯ ಅವರು ಸಿ.ಟಿ.ರವಿ ಅವರಿಗೆ ಆಪ್ತರಾಗಿದ್ದರು. ಈಚೆಗಷ್ಟೇ ತಮ್ಮಯ್ಯ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರು. ಇದನ್ನೂ ಓದಿ: ಪ್ರಚಾರಕ್ಕೆ ತೆರಳಿದ್ದ ಸೋಮಣ್ಣ, ಪ್ರತಾಪ್ ಸಿಂಹಗೆ ಗ್ರಾಮಸ್ಥರಿಂದ ಫುಲ್ ಕ್ಲಾಸ್
ಇನ್ನೂ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಶಿಗ್ಗಾಂವಿಯಲ್ಲಿ ಕಾಂಗ್ರೆಸ್‌ನಿಂದ ಮಹಮ್ಮದ್ ಯೂಸುಫ್ ಕಣಕ್ಕಿಳಿಯಲಿದ್ದಾರೆ.
ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Assembly Election 2023) ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿರುವ ಕಾಂಗ್ರೆಸ್, 6 ಮಹಿಳಾ ಅಭ್ಯರ್ಥಿಗಳಿಗೆ (Congress Women Candidates) ಟಿಕೆಟ್ ನೀಡಿದೆ. 124 ಅಭ್ಯರ್ಥಿಗಳಲ್ಲಿ ಮಹಿಳೆಯರಿಗೆ ಸಿಕ್ಕಿದ್ದು ಮಾತ್ರ ಕೇವಲ 6 ಸ್ಥಾನ.
6 ಅಭ್ಯರ್ಥಿಗಳ ಪೈಕಿ 5 ಮಹಿಳಾ ಅಭ್ಯರ್ಥಿಗಳು ಹಾಲಿ ಶಾಸಕಿಯರಾಗಿದ್ದಾರೆ. ಉಳಿದ ಒಬ್ಬರು ಅಭ್ಯರ್ಥಿ ಕುಸುಮಾ ರಾಜರಾಜೇಶ್ವರಿನಗರದಲ್ಲಿ ಕಣಕ್ಕಿಳಿಯಲಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ಹೊಸ ಮುಖಗಳು
2020ರಲ್ಲಿ ನಡೆದ ಉಪಚುನಾವಣೆಯಲ್ಲಿ ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಬಿಜೆಪಿಯ ಮುನಿರತ್ನ ವಿರುದ್ಧ ಸ್ಪರ್ಧಿಸಿ ಕುಸುಮಾ ಅವರು ಸೋಲನುಭವಿಸಿದ್ದರು. ಈಗ ಮತ್ತೆ ಕುಸುಮಾ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಇದನ್ನೂ ಓದಿ: 90ರಿಂದ 95 ಪರ್ಸೆಂಟ್ ಟಿಕೆಟ್ ಹಾಲಿ ಶಾಸಕರಿಗೇ ಸಿಗುತ್ತದೆ- ಡಿಕೆಶಿ
ಯಾವ ಕ್ಷೇತ್ರದಿಂದ ಯಾರು ಕಣಕ್ಕೆ?
ಲಕ್ಷ್ಮಿ ಹೆಬ್ಬಾಳ್ಕರ್ – ಬೆಳಗಾವಿ ಗ್ರಾಮಿಣ
ಡಾ. ಅಂಜಲಿ ನಿಂಬಾಳ್ಕರ್ – ಖಾನಾಪುರ
ಕನೀಝ್ ಫಾತಿಮ – ಕಲಬುರಗಿ ಉತ್ತರ
ರೂಪಕಲಾ ಶಶಿಧರ್ – ಕೆಜಿಎಫ್
ಸೌಮ್ಯ ರೆಡ್ಡಿ – ಜಯನಗರ
ಕುಸುಮಾ – ರಾಜರಾಜೇಶ್ವರಿನಗರ
ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮೊದಲ ಅಭ್ಯರ್ಥಿಗಳ ಪಟ್ಟಿಯನ್ನು ಶನಿವಾರ ಪ್ರಕಟಿಸಿದೆ. ಮೊದಲ ಪಟ್ಟಿಯಲ್ಲೇ 12 ಹೊಸ ಅಭ್ಯರ್ಥಿಗಳಿಗೆ ಟಿಕೆಟ್ ಘೋಷಿಸಿದೆ.
ಈ ಬಾರಿ ಹೊಸ ಮುಖಗಳಿಗೆ ಪ್ರಾಮುಖ್ಯತೆಯನ್ನು ಕಾಂಗ್ರೆಸ್ ನೀಡಿದೆ. ಪಾವಗಡ ಕ್ಷೇತ್ರದಲ್ಲಿ ಹಾಲಿ ಶಾಸಕರಿಗೆ ಟಿಕೆಟ್ ನೀಡಿಲ್ಲ. ಬದಲಿಗೆ ಪಾವಗಡ ಶಾಸಕ ವೆಂಕಟರಮಣಪ್ಪ ಬದಲಾಗಿ ಅವರ ಪುತ್ರ ಹೆಚ್.ವಿ.ವೆಂಕಟೇಶ್‌ಗೆ ಟಿಕೆಟ್ ನೀಡಲಾಗಿದೆ. ಇದನ್ನೂ ಓದಿ: Congress Candidate List- ಯಾವ್ಯಾವ ಸಮುದಾಯಕ್ಕೆ ಎಷ್ಟು ಟಿಕೆಟ್?
ಮಂಡ್ಯ: ವಿಧಾನಸಭಾ ಚುನಾವಣೆಗೆ (Karnataka Assembly Election) ಬುಧವಾರ (ಮಾ.22) ಪಕ್ಷದ ನೂರಕ್ಕೂ ಹೆಚ್ಚು ಅಭ್ಯರ್ಥಿಗಳ (Congress Candidates List) ಮೊದಲ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K.Shivakumar) ತಿಳಿಸಿದರು.
ಟಿಕೆಟ್ ಘೋಷಣೆಗೂ ಮುನ್ನ ಮಂಡ್ಯದ (Mandya) ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಠಕ್ಕೆ ತೆರಳಿ ಮಂಗಳವಾರ ಕಾಲಭೈರವೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು. ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕರ್ನಾಟಕಕ್ಕೆ ಭೇಟಿ ನೀಡಿ ದೆಹಲಿಗೆ ವಾಪಸ್ ಆದ ಮೇಲೆ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಹೇಳಲಾಗಿತ್ತು. ಅದರಂತೆ ನಾಳೆ ಅಂದರೆ ಯುಗಾದಿ ದಿನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಡಿಕೆಶಿ ಹೇಳಿದರು. ಇದನ್ನೂ ಓದಿ: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಿಂದ ಸಿನಿಮಾ ನಾಯಕ ನಟ ಸ್ಪರ್ಧೆ
ಇದೇ ವೇಳೆ ಸಿದ್ದರಾಮಯ್ಯ (Siddaramaiah) ಸ್ಪರ್ಧೆ ಬಗ್ಗೆ ಮಾತನಾಡಿ, ಯಾರು ಕೂಡ ಹಿಂದೆ ಸರಿಯುತ್ತಿಲ್ಲ. ಸಿದ್ದರಾಮಯ್ಯ ಅವರು ಬಯಸಿದ ಕ್ಷೇತ್ರದಲ್ಲಿ ಸ್ಪರ್ಧೆಗೆ ಅವಕಾಶವಿದೆ. ಕೋಲಾರ, ವರುಣ, ಬಾದಾಮಿ, ಚಾಮುಂಡೇಶ್ವರಿ ಯಾವುದಾದರೂ ಕ್ಷೇತ್ರವನ್ನು ಆಯ್ಕೆ ಮಾಡಲಿ. ಅವರ ಅನುಕೂಲ ನೋಡಿಕೊಂಡು ತೀರ್ಮಾನ ಮಾಡಲಿ. ಎಲ್ಲಿ ತೀರ್ಮಾನ ಮಾಡ್ತಾರೋ ಅಲ್ಲೇ ಅವಕಾಶ ಕೊಡ್ತೀವಿ ಎಂದರು.
ಡಿ.ಕೆ.ಸುರೇಶ್ ಸ್ಪರ್ಧೆಗೆ ಹೈಕಮಾಂಡ್ ಒತ್ತಡ ಕುರಿತು ಮಾತನಾಡಿ, ಸಂಸದರಾಗಿ ಇರಬೇಕೆಂದು ಡಿ.ಕೆ.ಸುರೇಶ್ ಬಯಸಿದ್ದಾರೆ. ನಮ್ಮ ಅಭ್ಯರ್ಥಿಯನ್ನು ನಾವು ಗೆಲ್ಲಿಸಿಕೊಳ್ಳುತ್ತೇವೆ. ಯಾರೇ ಅಭ್ಯರ್ಥಿ ಆದರೂ ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಅಭ್ಯರ್ಥಿ ಎಂದು ಮತ ಕೇಳ್ತೇವೆ. ಜನರು ನಮ್ಮ ಅಭ್ಯರ್ಥಿ ಗೆಲ್ಲಿಸುತ್ತಾರೆ. ನಾರಾಯಣಗೌಡ ಕಾಂಗ್ರೆಸ್ ಸೇರ್ಪಡೆ ವಿಚಾರ ಗೊತ್ತಿಲ್ಲ. ನಾನು ಯಾರಿಗೂ ಪೊಲಿಟಿಕಲಿ ಡ್ಯಾಮೇಜ್ ಮಾಡಲ್ಲ. ಈ ಬಗ್ಗೆ ನಾರಾಯಣಗೌಡರನ್ನೇ ಕೇಳಬೇಕು ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಮಹೇಶ್ ಕುಮಠಳ್ಳಿಗೆ ಟಿಕೆಟ್ ನೀಡದಿದ್ದರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ: ರಮೇಶ್ ಜಾರಕಿಹೊಳಿ
ಉರಿಗೌಡ-ನಂಜೇಗೌಡ (Urigowda-Nanjegowda) ವಿವಾದ ಕುರಿತು ಪ್ರತಿಕ್ರಿಯಿಸಿ, ಶ್ರೀಗಳು ಬಿಜೆಪಿ ನಾಯಕರಿಗೆ ಬುದ್ದಿ ಹೇಳಿದ್ದೆ ತಪ್ಪು. ಸಿ.ಟಿ.ರವಿ, ಅಶ್ವಥ್ ನಾರಾಯಣನೇ ಉರಿಗೌಡ, ನಂಜೇಗೌಡ. ಬೇರೆ ಯಾರೂ ಅಲ್ಲ. ಪಠ್ಯಕ್ಕೆ ಉರಿಗೌಡ, ನಂಜೇಗೌಡ ವಿಷಯ ಸೇರಿಸುವ ಯಾವ ವಿಷಯವೂ ಇಲ್ಲ. ಯಾವ ಪಠ್ಯನೂ ಇಲ್ಲ. ಎಲ್ಲ ಮೇಷ್ಟ್ರುಗಳನ್ನ ಕೇಳೋಕೆ ಹೇಳಿ. ಅಶ್ವಥ್ ನಾರಾಯಣ್, ಸಿ.ಟಿ.ರವಿಗೆ ಅವರ ಮೇಷ್ಟ್ರು ಹೇಳ್ಕೊಟ್ಟಿದ್ರಾ ಎಂದು ತರಾಟೆಗೆ ತೆಗೆದುಕೊಂಡರು.
ಕಾಲಭೈರೇಶ್ವರನಿಗೆ ಪೂಜೆ ಸಲ್ಲಿಸಿದ ಬಳಿಕ ನಿರ್ಮಲಾನಂದನಾಥ ಶ್ರೀಗಳನ್ನು ಡಿಕೆಶಿ ಭೇಟಿಯಾಗಿ ಚರ್ಚೆ ನಡೆಸಿದರು. ನಿನ್ನೆಯಷ್ಟೇ ಉರಿಗೌಡ, ನಂಜೇಗೌಡ ಕುರಿತು ಸ್ವಾಮೀಜಿ ಮಾತನಾಡಿದ್ದರು. ಇದರ ಬೆನ್ನಲ್ಲೇ ಶ್ರೀಗಳನ್ನು ಡಿಕೆಶಿ ಭೇಟಿಯಾಗಿರುವುದು ಕುತೂಹಲ ಮೂಡಿಸಿದೆ.
– ಹಾಲಿ ಶಾಸಕರಿಗೆ ಬಹುತೇಕ ಟಿಕೆಟ್ – ಒಂದು ಕ್ಷೇತ್ರದಲ್ಲಿ ಮೈತ್ರಿ ಬಗ್ಗೆ ಪ್ರಪೋಸಲ್ ಬಂದಿದೆ – ಡಿ.ಕೆ.ಸುರೇಶ್ ಸಂಸತ್ತಿನಲ್ಲಿ ಇರೋಕೆ ಇಷ್ಟಪಟ್ಟಿದ್ದಾರೆ
ನವದೆಹಲಿ: ಬಿಜೆಪಿಗಿಂತ ಮೊದಲೇ ಕಾಂಗ್ರೆಸ್ (Congress) ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K.Shivakumar) ತಿಳಿಸಿದರು.
ನವದೆಹಲಿಯಲ್ಲಿ ಶುಕ್ರವಾರ ಮಲ್ಲಿಕಾರ್ಜುನ ಮನೆಯಲ್ಲಿ ನಡೆದ ಸಭೆ ಬಳಿಕ ಮಾತನಾಡಿದ ಅವರು, ರಾಹುಲ್ ಗಾಂಧಿ ಭಾರತ್ ಜೋಡೋ ಬಳಿಕ ಮೊದಲ ಬಾರಿಗೆ ಕರ್ನಾಟಕಕ್ಕೆ ಬರುತ್ತಿದ್ದಾರೆ. ಹಾಗಾಗಿ ರಾಹುಲ್ ಭೇಟಿ ವಿಚಾರದ ಬಗ್ಗೆ ಚರ್ಚೆ ಮಾಡಿದ್ದೇವೆ. ಮಹಾತ್ಮ ಗಾಂಧಿ ಭೇಟಿ ನೀಡಿದ್ದ ಜಾಗಕ್ಕೆ ರಾಹುಲ್ ಗಾಂಧಿ ಭೇಟಿ ನೀಡಲಿದ್ದಾರೆ. ಟಿಕೆಟ್ ವಿಚಾರ ಎಲ್ಲವೂ ಚರ್ಚೆ ಆಗಿದೆ. ಶೀಘ್ರದಲ್ಲೇ ಎಐಸಿಸಿ ಘೋಷಣೆ ಮಾಡಲಿದೆ ಎಂದು ಹೇಳಿದರು.
ರಾಹುಲ್ ಗಾಂಧಿ ಬಂದು ಹೋದ ಮೇಲೆ ಗೊತ್ತಾಗಲಿದೆ. ಆದಷ್ಟು ಬೇಗೆ ಪಟ್ಟಿ ಬಿಡುಗಡೆ ಆಗುತ್ತೆ. ಬಿಜೆಪಿಗಿಂತ ಮೊದಲೇ ಬಿಡುಗಡೆ ಆಗಲಿದೆ. ಏನೇನು, ಎಷ್ಟು ಒಮ್ಮತ ಇದೆ ಎಂಬುದೆಲ್ಲ ಕ್ಲಿಯರ್ ಆಗಿದೆ. ಹಾಲಿ ಶಾಸಕರಿಗೆ ಬಹುತೇಕ ಟಿಕೆಟ್ ನೀಡಲಾಗುತ್ತದೆ. ಯಾವುದೇ ಚುನಾವಣಾ ಪೂರ್ವ ಮೈತ್ರಿ ಇಲ್ಲ. ಒಂದು ಕ್ಷೇತ್ರದಲ್ಲಿ ಮೈತ್ರಿ ಬಗ್ಗೆ ಪ್ರಪೋಸಲ್ ಬಂದಿದೆ. ಅದರ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಮನಗರದಲ್ಲಿ ಡಿ.ಕೆ.ಸುರೇಶ್ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯಿಸಿ, ಸ್ಪರ್ಧೆ ಮಾಡಬೇಕೆಂದು ಪ್ರಪೋಸಲ್ ಇದೆ. ಡಿಕೆ.ಸುರೇಶ್ ಸಂಸತ್ತಿನಲ್ಲಿ ಇರಬೇಕು ಅಂತಾ ಇಚ್ಛೆ ಪಟ್ಟಿದ್ದಾರೆ. ಹೈಕಮಾಂಡ್ ಕೂಡ ಇಚ್ಛೆ ಪಟ್ಟಿದೆ. ರಾಜಕಾರಣದಲ್ಲಿ ಕೆಲವರು ಚೆಸ್ಕೆ ಮಾಡ್ತಾರೆ. ಆದರೆ ಇಂದಿನ ಸಭೆಯಲ್ಲಿ ಯಾವುದೇ ಚರ್ಚೆ ನಡೆದಿಲ್ಲ ಎಂದರು.
ನವದೆಹಲಿ: ಉತ್ತರ ಪ್ರದೇಶ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದೆ. 125 ಅಭ್ಯರ್ಥಿಗಳು ಪಟ್ಟಿಯಲ್ಲಿದ್ದು, ಅವರ ಪೈಕಿ 50 ಮಂದಿ ಮಹಿಳಾ ಅಭ್ಯರ್ಥಿಗಳಿದ್ದಾರೆ.
ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಗುರುವಾರ ಬಿಡುಗಡೆ ಮಾಡಿದರು. ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ತಾಯಿ ಆಶಾ ಸಿಂಗ್ ಅವರನ್ನು ಕಾಂಗ್ರೆಸ್ ಉನ್ನಾವ್ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸಿದೆ. ಇದನ್ನೂ ಓದಿ: ಪಂಜಾಬ್ ಸಿಎಂ ಅಭ್ಯರ್ಥಿಯನ್ನು ಜನರೇ ಆಯ್ಕೆ ಮಾಡಲಿ – ನಂಬರ್ ಕೊಟ್ಟ ಕೇಜ್ರಿವಾಲ್
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಿಯಾಂಕಾ ಗಾಂಧಿ, ಕಾಂಗ್ರೆಸ್ ಅಭ್ಯರ್ಥಿಗಳಲ್ಲಿ ಶೇ.40 ಮಹಿಳೆಯರು ಮತ್ತು ಶೇ.40 ಯುವಜನರಿದ್ದಾರೆ. ಈ ಮೂಲಕ ಪಕ್ಷವು ಹೊಸ ಮತ್ತು ಐತಿಹಾಸಿಕ ಆರಂಭಕ್ಕೆ ಸಾಕ್ಷಿಯಾಗಿದೆ ಎಂದು ತಿಳಿಸಿದ್ದಾರೆ.
ನಮ್ಮ ಪಟ್ಟಿಯು ಹೊಸ ಸಂದೇಶವನ್ನು ನೀಡಿದೆ. ಈ ಹಿಂದೆ ತಮ್ಮ ಹಕ್ಕುಗಳಿಗಾಗಿ ಮತ್ತು ನ್ಯಾಯಕ್ಕಾಗಿ ಹೋರಾಡಿದವರಿಗೆ ಈ ಮೂಲಕ ಸಂದೇಶ ನೀಡುತ್ತಿದ್ದೇವೆ. ತಮ್ಮ ಹಕ್ಕುಗಳಿಗಾಗಿ ಹೋರಾಡುವ ಶಕ್ತಿ ಅವರಲ್ಲಿದೆ. ಕಾಂಗ್ರೆಸ್ ಪಕ್ಷವು ಅದಕ್ಕಾಗಿ ಅವಕಾಶ ನೀಡುತ್ತಿದೆ ಎಂದು ಹೇಳಿದ್ದಾರೆ.
ಈ ಚುನಾವಣೆಯಲ್ಲಿ ಪಕ್ಷವು ನಕಾರಾತ್ಮಕ ಪ್ರಚಾರ ನಡೆಸುವುದಿಲ್ಲ. ಬದಲಿಗೆ ಉತ್ತರ ಪ್ರದೇಶದ ಉಜ್ವಲ ಭವಿಷ್ಯಕ್ಕಾಗಿ ಧನಾತ್ಮಕ ಪ್ರಚಾರವನ್ನು ನಡೆಸುತ್ತದೆ. ಜನರು, ಮಹಿಳೆಯರು ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎತ್ತಿ ತೋರಿಸುತ್ತೇವೆ. ಜನರ ಸಮಸ್ಯೆಗಳನ್ನು ಕೇಂದ್ರದವರೆಗೂ ತೆಗೆದುಕೊಂಡು ಹೋಗುವುದು ನಮ್ಮ ಉದ್ದೇಶವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಬ್ರೇಕಪ್ ವಿಚಾರವಾಗಿ ಕೊನೆಗೂ ಮೌನ ಮುರಿದ ಅರ್ಜುನ್ ಕಪೂರ್!
ಪಂಚ ರಾಜ್ಯಗಳ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ಫೆ.10ರಿಂದ ಏಳು ಹಂತದಲ್ಲಿ ಉತ್ತರ ಪ್ರದೇಶದಲ್ಲಿ ಮತದಾನ ನಡೆಯಲಿದೆ.