Tag: congress activist

  • ಕೋಲಾರದಿಂದ ಸ್ಪರ್ಧಿಸುವಂತೆ ಸಿದ್ದರಾಮಯ್ಯಗೆ ಕಾರ್ಯಕರ್ತರು ಒತ್ತಾಯ

    ಕೋಲಾರದಿಂದ ಸ್ಪರ್ಧಿಸುವಂತೆ ಸಿದ್ದರಾಮಯ್ಯಗೆ ಕಾರ್ಯಕರ್ತರು ಒತ್ತಾಯ

    ಮೈಸೂರು/ ಕೋಲಾರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರನ್ನು ಮೈಸೂರಿನಲ್ಲಿ ಭೇಟಿಯಾದ ಕಾಂಗ್ರೆಸ್ ಕಾರ್ಯಕರ್ತರು ಚುನಾವಣೆಗೆ ಕೋಲಾರದಿಂದ ಸ್ಪರ್ಧೆ ಮಾಡುವಂತೆ ಒತ್ತಾಯಿಸಿದ್ದಾರೆ.

    ಎಂದಿನಂತೆ ಇಂದು ಬೆಳಗ್ಗೆ ಸಿದ್ದರಾಮಯ್ಯ ಅವರು ಮೈಸೂರಿನ (Mysuru) ಆಂದೋಲನ ವೃತ್ತದ ಬಳಿ ಪಾರ್ಕ್‍ನಲ್ಲಿ ವಾಕ್ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಅಲ್ಲಿಗೆ ಕೋಲಾರ (Kolar) ದಿಂದ ಬಂದ ಕಾರ್ಯಕರ್ತರು ಸಿದ್ದರಾಮಯ್ಯ ಜೊತೆ ಮಾತನಾಡಿದ್ದಾರೆ. ಅಲ್ಲದೆ ಮುಂದಿನ ಚುನಾವಣೆ (Election) ಗೆ ನೀವು ಕೋಲಾರದಿಂದಲೇ ಸ್ಪರ್ಧೆ ಮಾಡಬೇಕು ಎಂದು ಒತ್ತಡ ಹಾಕಿದ್ದಾರೆ. ಇದನ್ನೂ ಓದಿ: ಖರ್ಗೆ ಎಐಸಿಸಿ ಅಧ್ಯಕ್ಷರಾಗಿರುವುದು ಬಿಜೆಪಿ ಮೇಲೆ ಪರಿಣಾಮ ಬೀರಲ್ಲ: ನಿರಾಣಿ

    30ಕ್ಕೂ ಹೆಚ್ಚು ಕೈ ಕಾರ್ಯಕರ್ತರು ಕೋಲಾರದಿಂದ ಆಗಮಿಸಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ. ಕಾರ್ಯಕರ್ತರು ಒತ್ತಾಯ ಮಾಡಿದಾಗ ಸಿದ್ದರಾಮಯ್ಯ ಅವರು, ಸರಿ ಒಂದು ದಿನ ಅಲ್ಲಿಗೆ ಬರುತ್ತೇನೆ ಮಾತನಾಡುತ್ತೇನೆ ಎಂದು ಭರವಸೆ ನೀಡಿದರು. ಬಳಿಕ ಮಾಜಿ ಸಿಎಂಗೆ ಹಾರ ಹಾಕಿ ಗೌರವಿಸಿ ಕಾರ್ಯಕರ್ತರು ವಾಪಸ್ಸಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಆತ್ಮಹತ್ಯೆ ಮಾಡ್ಕೊಂಡ ರೈತನ ಬಗ್ಗೆ ಹಗುರ, ಅವಾಚ್ಯ ಪದ ಬಳಸಿದ ಕೆ.ಬಿ ಕೋಳಿವಾಡ

    ಆತ್ಮಹತ್ಯೆ ಮಾಡ್ಕೊಂಡ ರೈತನ ಬಗ್ಗೆ ಹಗುರ, ಅವಾಚ್ಯ ಪದ ಬಳಸಿದ ಕೆ.ಬಿ ಕೋಳಿವಾಡ

    ಹಾವೇರಿ: ವಿಧಾನಸಭೆ ಮಾಜಿ ಅಧ್ಯಕ್ಷ, ಹಾವೇರಿ ಜಿಲ್ಲೆ ರಾಣೆಬೆನ್ನೂರು ವಿಧಾನಸಭೆ ಕ್ಷೇತ್ರದ ಮಾಜಿ ಶಾಸಕ ಕೆ.ಬಿ.ಕೋಳಿವಾಡ (K. B. Koliwad) ಅವರು ಆತ್ಮಹತ್ಯೆ ಮಾಡಿಕೊಂಡ ರೈತನ ಬಗ್ಗೆ ಹಗುರವಾಗಿ ಮಾತನಾಡಿದ ಪ್ರಸಂಗ ನಡೆದಿದೆ.

    ಕಾಂಗ್ರೆಸ್ (Congress) ಕಾರ್ಯಕರ್ತರೊಬ್ಬರು ಕೋಳಿವಾಡ ಅವರಿಗೆ ಕರೆ ಮಾಡಿ, ರೈತ (Farmer)ಆತ್ಮಹತ್ಯೆ ಮಾಡಿಕೊಂಡಿದ್ದು, ಮಾಲೆ ಹಾಕಲು ಬರುವಂತೆ ತಿಳಿಸಿದ್ದಾರೆ. ಈ ವೇಳೆ ಕೋಳಿವಾಡ ಅವರು ಆ ರೈತನ ಬಗ್ಗೆ ಹಗುರವಾಗಿ ಮಾತನಾಡಿದ್ದಲ್ಲದೇ ಅವಾಚ್ಯ ಶಬ್ಧಗಳನ್ನು ಕೂಡ ಬಳಸಿದ್ದಾರೆ. ಸದ್ಯ ಈ ಆಡಿಯೋ ಸಾಮಾಜಿಕ ಜಾಲತಾಣ (Social Media) ಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

    ಪಕ್ಷದ ಕಾರ್ಯಕ್ರಮ ಸಂಘಟನೆ ಮಾಡಲು ಮುಖಂಡರೊಬ್ಬರ ಮನೆಯಲ್ಲಿ ಕಾರ್ಯಕರ್ತರ ಜೊತೆ ಮಾತನಾಡುತ್ತಿದ್ದಾಗ ಕೋಳಿವಾಡಗೆ ಕಾರ್ಯಕರ್ತನ ಕರೆ ಬಂದಿದೆ. ಫೋನ್ (Phone Call) ನಲ್ಲಿ ಮಾತನಾಡಿದ ಮೇಲೆ ಕಾರ್ಯಕರ್ತರ ಮುಂದೆ ರೈತನ ಬಗ್ಗೆ ಅವಾಚ್ಯ ಶಬ್ಧ ಬಳಸಿ ಮಾತನಾಡಿದ್ದಾರೆ. ಇದನ್ನೂ ಓದಿ: ಮರ್ಮಾಂಗಕ್ಕೆ ಚಾಕುವಿನಿಂದ ಚುಚ್ಚಿ ಯುವಕನ ಬರ್ಬರ ಹತ್ಯೆ

    ಐದು ಬಾರಿ ಶಾಸಕರಾಗಿರೋ ಕೋಳಿವಾಡ ಅವರು ಒಮ್ಮೆ ಸಚಿವರಾಗಿ, ವಿಧಾನಸಭೆ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಇದೀಗ ಹಿರಿಯ ರಾಜಕಾರಣಿಯ ಬಾಯಲ್ಲಿ ಬಂದ ಹಗುರ ಮಾತುಗಳಿಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಬೆಳ್ಳಂಬೆಳಗ್ಗೆ ಲಾಂಗ್ ಮಚ್ಚುಗಳಿಂದ ಕಾಂಗ್ರೆಸ್ ಕಾರ್ಯಕರ್ತನ ಬರ್ಬರ ಹತ್ಯೆ!

    ಬೆಳ್ಳಂಬೆಳಗ್ಗೆ ಲಾಂಗ್ ಮಚ್ಚುಗಳಿಂದ ಕಾಂಗ್ರೆಸ್ ಕಾರ್ಯಕರ್ತನ ಬರ್ಬರ ಹತ್ಯೆ!

    ಬೆಂಗಳೂರು: ಕರ್ನಾಟಕದಲ್ಲಿ ರಾಜಕೀಯ ಪಕ್ಷಗಳ ಯುವ ಮುಖಂಡರುಗಳ ಹತ್ಯೆಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇಂದು ಬೆಳ್ಳಂಬೆಳಗ್ಗೆ ಕಾಂಗ್ರೆಸ್ ಯುವ ಕಾರ್ಯಕರ್ತನನ್ನು ಲಾಂಗು ಮಚ್ಚುಗಳಿಂದ ಬರ್ಬರವಾಗಿ ಕೊಲೆ ಮಾಡಲಾಗಿದೆ.

    ಸತೀಶ್ ರೆಡ್ಡಿ(28) ಕೊಲೆಯಾದ ವ್ಯಕ್ತಿ. ಸತೀಶ್ ರೆಡ್ಡಿ ಬನ್ನೇರುಘಟ್ಟ ಸಮೀಪದ ಕಲ್ಕೆರೆ ನಿವಾಸಿಗಾಗಿದ್ದು, ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದರು.

    ಎಲೆಕ್ಟ್ರಾನಿಕ್ ಸಿಟಿಯ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿರುವ ತನ್ನ ಪತ್ನಿಯನ್ನು ಇಂದು ಬೆಳಗ್ಗೆ ಬಿಟ್ಟು ಸತೀಶ್ ಅವರು ವಾಪಾಸ್ಸಾಗುತ್ತಿದ್ದರು. ಈ ಸಂದರ್ಭದಲ್ಲಿ ಎರಡು ಬೈಕ್ ಗಳಲ್ಲಿ ಹಿಂಬಾಲಿಸಿಕೊಂಡು ಬಂದ ನಾಲ್ವರು ದುಷ್ಕರ್ಮಿಗಳು ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಹುಲುವಳ್ಳಿಯ ಬಳಿಯ ರಸ್ತೆಯಲ್ಲಿ ಸತೀಶ್ ಅವರನ್ನು ಅಡ್ಡಗಟ್ಟಿ ಲಾಂಗು ಮಚ್ಚುಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.

    ದುಷ್ಕರ್ಮಿಗಳಿಂದ ತಪ್ಪಿಸಿಕೊಂಡ ಹಲ್ಲೆಗೊಳಗಾದ ಸತೀಶ್ ಅವರು ಕೆಲ ದೂರ ಓಡಿ ಖಾಲಿ ಜಾಗದಲ್ಲಿ ಬಿದ್ದಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಸತೀಶ್ ಅವರನ್ನು ರಕ್ಷಣೆ ಮಾಡಲು ಮುಂದಾಗಿದ್ದಾರೆ. ಆದ್ರೆ ಸತೀಶ್ ಗಂಭೀರ ಗಾಯಗೊಂಡಿದ್ದರಿಂದ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ತಕ್ಷಣವೇ ಸ್ಥಳೀಯರು ಬನ್ನೇರುಘಟ್ಟ ಪೊಲೀಸರಿಗೆ ಮಾಹಿತಿ ರವಾನಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಬಲೆ ಬೀಸಿದ್ದಾರೆ.

    ಇನ್ನು ಕೊಲೆಯಾದ ಸತೀಶ್ ರೆಡ್ಡಿ ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿ ವಾಪಸ್ಸಾಗಿದ್ದು, ಈತನನ್ನು ಬನ್ನೇರುಘಟ್ಟ ಪೊಲೀಸ್ ಠಾಣೆಯ ರೌಡಿ ಶೀಟರ್ ಪಟ್ಟಿಗೆ ಸೇರಿಸುವ ತಯಾರಿ ನಡೆಯುತ್ತಿತ್ತು ಎನ್ನಲಾಗಿದೆ. ಅಷ್ಟರಲ್ಲಿ ಸತೀಶ್ ರೆಡ್ಡಿ ಕೊಲೆಯಾಗಿ ಹೋಗಿದ್ದು, ಹಳೇ ದ್ವೇಷದ ಹಿನ್ನೆಲೆಯಲ್ಲಿ ಪರಿಚಯಸ್ಥರೇ ಈ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

  • ಜಿಲ್ಲಾಧ್ಯಕ್ಷರ ಎದುರೇ ಕೈ-ಕೈ ಮಿಲಾಯಿಸಿದ `ಕೈ’ ಕಾರ್ಯಕರ್ತರು!

    ಜಿಲ್ಲಾಧ್ಯಕ್ಷರ ಎದುರೇ ಕೈ-ಕೈ ಮಿಲಾಯಿಸಿದ `ಕೈ’ ಕಾರ್ಯಕರ್ತರು!

    ಚಿಕ್ಕಮಗಳೂರು: ಬ್ಲಾಕ್ ಕಾಂಗ್ರೆಸ್ ಸಭೆಯಲ್ಲಿ ಜಿಲ್ಲಾಧ್ಯಕ್ಷರೆದುರೇ ಕಾಂಗ್ರೆಸ್ ಕಾರ್ಯಕರ್ತರು ಕೈ-ಕೈ ಮಿಲಾಯಿಸಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರಿನಲ್ಲಿ ಇಂದು ನಡೆದಿದೆ.

    ಕಡೂರಿನ ಬ್ಲಾಕ್ ಕಾಂಗ್ರೆಸ್ ಕಚೇರಿ ಉದ್ಘಾಟನೆಗೆ ಆಗಮಿಸಿದ್ದ ಜಿಲ್ಲಾಧ್ಯಕ್ಷ ಡಾ. ವಿಜಯ್ ಕುಮಾರ್ ಎದುರೇ ಕಾರ್ಯಕರ್ತರು ಹೊಡೆದಾಡಿದ್ದಾರೆ. ಸಭೆಗೆ ಕೆಪಿಸಿಸಿ ಲೀಗಲ್ ಘಟಕದ ಅಧ್ಯಕ್ಷ ಸಿ.ಎಂ. ಧನಂಜಯ್ ಆಗಮಿಸಿದ್ರು. ಧನಂಜಯ್ ಮುಂಬರೋ ಚುನಾವಣೆಗೆ ಕಡೂರು ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯೂ ಕೂಡ. ಅವರಿಗೆ ಸ್ವಾಗತ ನೀಡದ್ದಕ್ಕೆ ತೆಂಗುನಾರು ಮಂಡಳಿ ಮಾಜಿ ಅಧ್ಯಕ್ಷ ಸಿ.ನಂಜಪ್ಪ ಆಕ್ಷೇಪ ವ್ಯಕ್ತಪಡಿಸದರು

    ಕೂಡಲೇ ಆಕ್ರೋಶಕ್ಕೊಳಗಾದ ಸ್ಥಳಿಯ ಕಾಂಗ್ರೆಸ್ ಕಾರ್ಯಕರ್ತರು ಅವರು ಕಡೂರಿಗೆ ಏನೂ ಅಲ್ಲ. ಅವರಿಗ್ಯಾಕೆ ಸ್ವಾಗತ. ಚುನಾವಣೆ ಸಂದರ್ಭದಲ್ಲಿ ನಾನು ಆಕಾಂಕ್ಷಿ ಎಂದು ಹತ್ತಾರು ಜನ ಬರ್ತಾರೆ. ಪಕ್ಷಕ್ಕಾಗಿ ದುಡಿದ ಸ್ಥಳೀಯ ಕಾರ್ಯಕರ್ತರ ಏನ್ ಮಾಡಬೇಕು. ಚುನಾವಣೆ ಸಂದರ್ಭದಲ್ಲಿ ಹೊರಗಿನವರಿಗೇನು ಕೆಲಸ ಎಂದೆಲ್ಲ ಪ್ರಶ್ನಿಸಿ ಎಂದು ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಇಷ್ಟೆಲ್ಲಾ ತನ್ನ ಕಣ್ಮುಂದೆಯೇ ನಡೆಯುತ್ತಿದ್ರು ಮೂಕಪ್ರೇಕ್ಷಕರಾದ ಅಧ್ಯಕ್ಷ ವಿಜಯ್ ಕುಮಾರ್ ಅರ್ಧಕ್ಕೆ ಸಭೆಯಿಂದ ಎದ್ದು ಹೊರನಡೆದಿದರು.

    https://www.youtube.com/watch?v=evI_Gu1Md7A&feature=youtu.be

    ಇದನ್ನೂ ಓದಿ: ಗಾಂಧಿ ಜಯಂತಿ ವೇಳೆ ಸಚಿವ, ಶಾಸಕರ ಎದುರೇ ಕಾಂಗ್ರೆಸ್ ಕಾರ್ಯಕರ್ತರ ಗಲಾಟೆ

    https://www.youtube.com/watch?v=iyOiyLIam98