Tag: Congo

  • ಕಾಂಗೋದಲ್ಲಿ M23 ಬಂಡುಕೋರರ ಲೂಟಿ – 100ಕ್ಕೂ ಹೆಚ್ಚು ಬಲಿ, ಸಾವಿರಾರು ಜನರಿಗೆ ಗಾಯ

    ಕಾಂಗೋದಲ್ಲಿ M23 ಬಂಡುಕೋರರ ಲೂಟಿ – 100ಕ್ಕೂ ಹೆಚ್ಚು ಬಲಿ, ಸಾವಿರಾರು ಜನರಿಗೆ ಗಾಯ

    ಬ್ರೆಜ್‌ವಿಲ್ಲೆ: ಡೆಮೊಕ್ರೆಟಿಕ್ ರಿಪಬ್ಲಿಕ್ ಕಾಂಗೋ (Democratic Republic of Congo) ದೇಶದಲ್ಲಿ ಆಂತರಿಕ ಸಂಘರ್ಷ ಮುಗಿಲುಮುಟ್ಟಿದ್ದು, M23 ಬಂಡುಕೋರರ ಲೂಟಿಯಿಂದ 100ಕ್ಕೂ ಹೆಚ್ಚು ಜನರು ಬಲಿಯಾಗಿದ್ದು, 1,000 ಜನರು ಗಾಯಗೊಂಡಿದ್ದಾರೆ.ಇದನ್ನೂ ಓದಿ: 23 ಜಿಲ್ಲೆಗಳಿಗೆ ಜಿಲ್ಲಾಧ್ಯಕ್ಷರ ಆಯ್ಕೆ ಮಾಡಿದ ಬಿಜೆಪಿ – ಯಾವ ಜಿಲ್ಲೆಗೆ ಯಾರು ಅಧ್ಯಕ್ಷರು?

    ರುವಾಂಡಾ ಬೆಂಬಲಿತ ಎಂ-23 ಬಂಡುಕೋರರ ಲೂಟಿಗೆ ಇಳಿದಿದ್ದು, ರುವಾಂಡಾ, ಫ್ರಾನ್ಸ್, ಬೆಲ್ಜಿಯಂ, ಕೀನ್ಯಾ, ಉಗಾಂಡಾ ಸೇರಿ ಹಲವು ದೇಶಗಳ ರಾಯಭಾರಿ ಕಚೇರಿಗಳನ್ನು ದೋಚಿ, ಬೆಂಕಿ ಹಚ್ಚಿದ್ದಾರೆ. ಇದರಿಂದ ಬಂಡೆಕೋರರನ್ನು ಚೆದುರಿಸಲು ಪೊಲೀಸರು ಗುಂಡು ಹಾರಿಸಿ, ಆಶ್ರುವಾಯು ಪ್ರಯೋಗಿಸಿದ್ದಾರೆ.

    ಜೊತೆಗೆ 20 ಲಕ್ಷ ಜನಸಂಖ್ಯೆಯುಳ್ಳ ಗೋಮಾ ನಗರವನ್ನು ಬಂಡುಕೋರರು ವಶಕ್ಕೆ ಪಡೆದಿದ್ದು, 1,200ಕ್ಕೂ ಹೆಚ್ಚು ಕಾಂಗೋಲೀಸ್ ಸೈನಿಕರು ಶರಣಾಗಿದ್ದಾರೆ. ಈ ಹಿಂಸಾಚಾರವನ್ನು ತಡೆಗಟ್ಟಲು ಕಾಂಗೋಲೀಸ್ ಭದ್ರತಾ ಪಡೆಗಳು ಕಾರ್ಯನಿರತರಾಗಿವೆ. ಇನ್ನೂ ಈ ಸಂಘರ್ಷದಿಂದಾಗಿ ಗೋಮಾ ನಗರದ ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ. ಘರ್ಷಣೆಯ ತೀವ್ರತೆಯಿಂದಾಗಿ 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಸುಮಾರು 1,000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.ಇದನ್ನೂ ಓದಿ: ಅಂಜನಾದ್ರಿ ಬೆಟ್ಟ ಹತ್ತುವಾಗ ಹೃದಯಾಘಾತದಿಂದ ಯುವಕ ಸಾವು

     

  • ಕಾಂಗೋದಲ್ಲಿ ಧಾರಾಕಾರ ಮಳೆ; 22 ಮಂದಿ ಸಾವು

    ಕಾಂಗೋದಲ್ಲಿ ಧಾರಾಕಾರ ಮಳೆ; 22 ಮಂದಿ ಸಾವು

    ಬೆನಿ (ರಿಪಬ್ಲಿಕ್‌ ಆಫ್‌ ಕಾಂಗೊ): ಕಾಂಗೋದ (Congo Rains) ಕಸಾಯಿ ಪ್ರದೇಶದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಕನಿಷ್ಠ 22 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.

    ಕಾಂಗೋದ ಕಸಾಯಿ-ಮಧ್ಯ ಪ್ರಾಂತ್ಯದಲ್ಲಿ ಮಂಗಳವಾರ ಭಾರೀ ಪ್ರಮಾಣದಲ್ಲಿ ಮಳೆ ಸುರಿಯಿತು. ಪ್ರದೇಶದಲ್ಲಿ ಪ್ರವಾಹ ಉಂಟಾಗಿ ಜನಜೀವನ ಅಸ್ತವ್ಯಸ್ತವಾಯಿತು. ಮೂಲಸೌಕರ್ಯವಿಲ್ಲದೇ ಸ್ಥಳೀಯ ಜನ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಕನಂಗಾ ಪಟ್ಟಣದ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ನಂದಿಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್- ಜಿಲ್ಲಾಡಳಿತದ ಆದೇಶವೇನು?

    ಧಾರಾಕಾರ ಮಳೆಯಿಂದಾಗಿ ಅಲ್ಲಲ್ಲಿ ಭೂಕುಸಿತ ಉಂಟಾಗಿದೆ. ಹಲವೆಡೆ ಮನೆಗಳು, ಚರ್ಚ್‌ಗಳು ಮತ್ತು ರಸ್ತೆಗಳು ಸಹ ಕುಸಿತ ಕಂಡಿವೆ. ಪರಿಣಾಮವಾಗಿ ಅನೇಕರು ಸಾವಿಗೀಡಾಗಿದ್ದು, ಅವರು ಕುಟುಂಬಸ್ಥರು ನಿರಾಶ್ರಿತರಾಗಿದ್ದಾರೆ.

    ಕನಂಗಾದ ಕಮ್ಯೂನ್‌ಗೆ ಹೆಚ್ಚಿನ ಪ್ರಮಾಣದ ಹಾನಿಯಾಗಿದೆ ಎಂದು ಗವರ್ನರ್ ಜಾನ್ ಕಬೆಯಾ ತಿಳಿಸಿದ್ದಾರೆ. ಹಾನಿಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಲಾಗುವುದು ಎಂದು ಪ್ರಾಂತೀಯ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿಯಲ್ಲಿ 5 ಖಾಸಗಿ ಬಸ್‌ಗಳ ನಡುವೆ ಸರಣಿ ಅಪಘಾತ

    ಸೂಕ್ತವಲ್ಲದ ಜಾಗದಲ್ಲಿ ಮನೆಗಳನ್ನು ನಿರ್ಮಿಸಿದ್ದೇ ಈ ಸಾವುಗಳಿಗೆ ಕಾರಣವಾಗಿದೆ. ಮನೆಗಳ ಗೋಡೆಗಳು ಕುಸಿದು ಹೆಚ್ಚಿನ ಜೀವಹಾನಿಯಾಗಿದೆ ಎಂದು ಕನಂಗಾ ಮೇಯರ್ ರೋಸ್ ಮುವಾಡಿ ಮುಸುಬೆ ತಿಳಿಸಿದ್ದಾರೆ.

    ಮೃತರ ಅಂತ್ಯಸಂಸ್ಕಾರಕ್ಕೆ ಸರ್ಕಾರದಿಂದ ಸೂಕ್ತ ವ್ಯವಸ್ಥೆ ಮಾಡಲಾಗುವುದು. ಸಂತ್ರಸ್ತರಿಗೆ ಅಗತ್ಯ ನೆರವು ನೀಡಲಾಗುವುದು ಎಂದು ಹೇಳಿದ್ದಾರೆ. ಪೂರ್ವ ಕಾಂಗೋದಲ್ಲಿ ಡಿಸೆಂಬರ್ ಆರಂಭದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ 14 ಜನರು ಸಾವನ್ನಪ್ಪಿದ್ದರು. ಇದನ್ನೂ ಓದಿ: ಪಿಜಿ ಅಸೋಸಿಯೇಷನ್‍ಗಳಿಂದ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ

  • ಉದ್ಘಾಟನೆ ಮಾಡುತ್ತಿದ್ದಂತೆಯೇ ಕುಸಿದುಬಿಡ್ತು ಸೇತುವೆ

    ಉದ್ಘಾಟನೆ ಮಾಡುತ್ತಿದ್ದಂತೆಯೇ ಕುಸಿದುಬಿಡ್ತು ಸೇತುವೆ

    ಕಿನ್ಶಾಸಾ: ಸಾರ್ವಜನಿಕರ ಅನುಕೂಲಕ್ಕಾಗಿ ಮಾಡಲಾಗುವ ಕಾಮಗಾರಿಗಳು ಕೆಲವೊಮ್ಮೆ ಕೆಲವೇ ದಿನಗಳಲ್ಲಿ ಕಳಪೆಯೆಂದು ಗೊತ್ತಾಗುತ್ತದೆ. ಆಗಾಗ ಜನರು ಅದರ ಸಿಟ್ಟನ್ನು ಸರ್ಕಾರದ ಮೇಲೆ ತೆಗೆಯುವುದುಂಟು. ಇಲ್ಲೊಂದು ಸೇತುವೆ ಉದ್ಘಾಟನೆಯ ಸಮಯವೇ ಕುಸಿದು ಬಿದ್ದಿರುವ ಘಟನೆ ನಡೆದಿದೆ. ಇದರ ವೀಡಿಯೋಗಳು ವೈರಲ್ ಆಗಿರುವುದು ಮಾತ್ರವಲ್ಲದೇ ಸೇತುವೆ ನಿರ್ಮಾಣದ ಗುಣಮಟ್ಟದ ಬಗ್ಗೆ ಜನರು ಅಪಹಾಸ್ಯ ಮಾಡುತ್ತಿದ್ದಾರೆ.

    ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ(ಡಿಆರ್‌ಸಿ) ಸೇತುವೆಯೊಂದನ್ನು ಉದ್ಘಾಟಿಸಲು ಅಧಿಕಾರಿಗಳು ತಯಾರಾಗಿದ್ದು, ಉದ್ಘಾಟನೆಗೆ ರಿಬ್ಬನ್ ಕತ್ತರಿಸುವ ವೇಳೆಗೆ ಸರಿಯಾಗಿ ಸೇತುವೆ ಕುಸಿದಿದೆ. ಈ ಕಿರು ಸೇತುವೆಯನ್ನು ಮಳೆಗಾಲದಲ್ಲಿ ಸ್ಥಳೀಯರಿಗೆ ನದಿ ದಾಟಲು ನಿರ್ಮಿಸಲಾಗಿತ್ತು ಎಂದು ವರದಿಗಳು ತಿಳಿಸಿವೆ.

    ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವೀಡಿಯೋದಲ್ಲಿ ಸೇತುವೆಯನ್ನು ಉದ್ಘಾಟಿಸಲು ಅಧಿಕಾರಿಗಳು ಸೇತುವೆ ಮೇಲೆ ನಿಂತಿರುವುದು ಕಾಣಿಸುತ್ತದೆ. ಸೇತುವೆಯ ಒಂದು ಬದಿಯಲ್ಲಿ ಕೆಂಪು ರಿಬ್ಬನ್ ಅನ್ನು ಕಟ್ಟಲಾಗಿದ್ದು, ಅದನ್ನು ಮಹಿಳಾ ಅಧಿಕಾರಿಯೊಬ್ಬರು ಕತ್ತರಿಸಿದ್ದಾರೆ. ಆದರೆ ರಿಬ್ಬನ್‌ಗೆ ಕತ್ತರಿ ತಾಗುತ್ತಲೇ ಸೇತುವೆ ಕುಸಿಯಲಾರಂಭಿಸಿದೆ. ಇದನ್ನೂ ಓದಿ: ಮಂಗೋಲಿಯಾ ಅಧ್ಯಕ್ಷನಿಂದ ರಾಜನಾಥ್ ಸಿಂಗ್‍ಗೆ ವಿಭಿನ್ನ ಉಡುಗೊರೆ

    ಸೇತುವೆ ಕುಸಿಯುತ್ತಿದ್ದಂತೆ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಅಧಿಕಾರಿಗಳನ್ನು ಸೇತುವೆಯಿಂದ ಎಳೆದು ರಕ್ಷಿಸಿದ್ದಾರೆ. ಸದ್ಯ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎನ್ನಲಾಗಿದೆ. ಆದರೆ ಉದ್ಘಾಟನೆಯಾಗಿ ಒಂದು ಕ್ಷಣವೂ ನಿಲ್ಲದ ಸೇತುವೆ ಕುಸಿದು 2 ಭಾಗವಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಚೀನಾ ಭೂಕಂಪ – ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ ವೀಡಿಯೋಗಳು

    Live Tv
    [brid partner=56869869 player=32851 video=960834 autoplay=true]

  • ಕಾಂಗೋದಲ್ಲಿ ಯುಎನ್ ವಿರೋಧಿ ಪ್ರತಿಭಟನೆ: ಇಬ್ಬರು ಭಾರತೀಯ ಶಾಂತಿಪಾಲನ ಸೈನಿಕರು ಹುತಾತ್ಮ

    ಕಾಂಗೋದಲ್ಲಿ ಯುಎನ್ ವಿರೋಧಿ ಪ್ರತಿಭಟನೆ: ಇಬ್ಬರು ಭಾರತೀಯ ಶಾಂತಿಪಾಲನ ಸೈನಿಕರು ಹುತಾತ್ಮ

    ಕಿನ್ಶಾಸ: ಪೂರ್ವ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ನಡೆಯುತ್ತಿರುವ ಯುಎನ್ ವಿರೋಧಿ ಪ್ರತಿಭಟನೆಯಲ್ಲಿ ಇಬ್ಬರು ಭಾರತೀಯ ಶಾಂತಿಪಾಲನ ಸೈನಿಕರು ಹುತಾತ್ಮರಾಗಿದ್ದಾರೆ.

    ಈ ಕುರಿತು ಬಾರ್ಡರ್ ಸೆಕ್ಯುರಿಟಿ ಫೋರ್ಸ್(ಬಿಎಸ್‍ಎಫ್) ಟ್ವೀಟ್ ಮಾಡಿದ್ದು, 26 ಜುಲೈ ರಂದು ಎಚ್‍ಸಿ ಶಿಶುಪಾಲ್ ಸಿಂಗ್ ಮತ್ತು ಎಚ್‍ಸಿ ಸನ್ವಾಲಾ ರಾಮ್ ವಿಷ್ಣೋಯ್ ಅವರು ನಿಧನರಾಗಿದ್ದಾರೆ. ಅವರಿಗೆ ಸಂತಾಪ ವ್ಯಕ್ತಪಡಿಸುತ್ತೇವೆ. ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ನಡೆಯುತ್ತಿರುವ ಪ್ರತಿಭಟನೆ ತಡೆಯಲು ಯುಎನ್ ಶಾಂತಿಪಾಲನಾ ತಂಡದೊಂದಿಗೆ ಇವರನ್ನು ನಿಯೋಜಿಸಲಾಗಿತ್ತು. ಈ ಸಂಕಷ್ಟದ ಸಮಯದಲ್ಲಿ ನಾವು ಮೃತರ ಕುಟುಂಬದೊಂದಿಗೆ ಇದ್ದೇವೆ. ಜೈಹಿಂದ್ ಎಂದು ಬರೆದು ಮಾಹಿತಿ ತಿಳಿಸಿದೆ.  ಇದನ್ನೂ ಓದಿ: ಕಾಂಗೋದಲ್ಲಿ ಯುಎನ್ ವಿರೋಧಿ ಪ್ರತಿಭಟನೆ: 3 ಶಾಂತಿಪಾಲಕರು, 12 ನಾಗರಿಕರು ಮೃತ 

    ಏನಿದು ಘಟನೆ?
    MONUSCO ಎಂದು ಕರೆಯಲ್ಪಡುವ ಯುಎನ್ ಮಿಷನ್, ಮಿಲಿಟರಿಯ ಹಿಂಸಾಚಾರದ ವಿರುದ್ಧ ನಾಗರಿಕರನ್ನು ರಕ್ಷಿಸಲು ವಿಫಲವಾಗಿದೆ ಎಂದು ಪ್ರತಿಭಟನೆಗಳು ನಡೆಯುತ್ತಿದೆ. ಯುಎನ್ ಉಪ ವಕ್ತಾರ ಫರ್ಹಾನ್ ಹಕ್ ಈ ಕುರಿತು ಮಾತನಾಡಿದ್ದು, ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಅವರು ಹಿಂಸಾಚಾರವನ್ನು ಖಂಡಿಸಿದ್ದಾರೆ ಎಂದು ತಿಳಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಕಾಂಗೋದಲ್ಲಿ ಯುಎನ್ ವಿರೋಧಿ ಪ್ರತಿಭಟನೆ: 3 ಶಾಂತಿಪಾಲನ ಸೈನಿಕರು, 12 ನಾಗರಿಕರು ಮೃತ

    ಕಾಂಗೋದಲ್ಲಿ ಯುಎನ್ ವಿರೋಧಿ ಪ್ರತಿಭಟನೆ: 3 ಶಾಂತಿಪಾಲನ ಸೈನಿಕರು, 12 ನಾಗರಿಕರು ಮೃತ

    ಕಿನ್ಶಾಸ: ಪೂರ್ವ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಮಂಗಳವಾರ ನಡೆದ ಯುಎನ್ ವಿರೋಧಿ ಪ್ರತಿಭಟನೆಯ ಎರಡನೇ ದಿನ ಯುಎನ್‌ ಮೂವರು ಶಾಂತಿಪಾಲಕರು ಮತ್ತು 12 ನಾಗರಿಕರು ಸಾವನ್ನಪ್ಪಿದ್ದಾರೆ.

    MONUSCO ಎಂದು ಕರೆಯಲ್ಪಡುವ ಯುಎನ್ ಮಿಷನ್, ಮಿಲಿಟರಿಯ ಹಿಂಸಾಚಾರದ ವಿರುದ್ಧ ನಾಗರಿಕರನ್ನು ರಕ್ಷಿಸಲು ವಿಫಲವಾಗಿದೆ ಎಂದು ಪ್ರತಿಭಟನೆಗಳು ನಡೆಯುತ್ತಿದೆ. ಯುಎನ್ ಉಪ ವಕ್ತಾರ ಫರ್ಹಾನ್ ಹಕ್ ಈ ಕುರಿತು ಮಾತನಾಡಿದ್ದು, ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಅವರು ಹಿಂಸಾಚಾರವನ್ನು ಖಂಡಿಸಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಭಾರೀ ಮಳೆ ತಾತ್ಕಾಲಿಕ ಸ್ಥಗಿತಗೊಂಡ ಅಮರನಾಥ ಯಾತ್ರೆ – ಪ್ರವಾಹದ ಭೀತಿ

    ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗಳ ವಿರುದ್ಧ ನಿರ್ದೇಶಿಸಿದ ಯಾವುದೇ ದಾಳಿಯು ಯುದ್ಧ ಅಪರಾಧವಾಗಬಹುದು. ಈ ಘಟನೆಗಳ ಬಗ್ಗೆ ತ್ವರಿತವಾಗಿ ತನಿಖೆ ನಡೆಸುವಂತೆ ಕಾಂಗೋ ಅಧಿಕಾರಿಗಳಿಗೆ ಕರೆ ನೀಡಿದ್ದಾರೆ. ಇದಕ್ಕೆ ಕಾರಣರಾದವರನ್ನು ನ್ಯಾಯಾಂಗಕ್ಕೆ ತನ್ನಿ ಎಂದು ಮನವಿ ಮಾಡಿಕೊಂಡರು.

    ಏನಿದು?
    ಸೋಮವಾರದಂದು ಗೋಮಾ ನಗರದಲ್ಲಿ ಪ್ರತಿಭಟನೆಗಳು ಪ್ರಾರಂಭವಾದವು. ಮಂಗಳವಾರ ಬುಟೆಂಬೊಗೆ ಹರಡಿತು. ಪ್ರತಿಭಟನೆ ವೇಳೆ ಯುಎನ್ ಸೈನಿಕ ಮತ್ತು ಇಬ್ಬರು ಯುಎನ್ ಪೊಲೀಸರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಇದನ್ನೂ ಓದಿ: ‘ಎಗ್ ಬೋಂಡಾ’ ಮಾಡುವ ಸರಳವಾದ ವಿಧಾನ – ಟ್ರೈ ಮಾಡಿ

    ಎರಡೂ ನಗರಗಳಲ್ಲಿ ನೂರಾರು ಪ್ರತಿಭಟನಾಕಾರರು ಕಲ್ಲುಗಳು ಮತ್ತು ಪೆಟ್ರೋಲ್ ಬಾಂಬ್‍ಗಳನ್ನು ಎಸೆದು ಯುಎನ್ ಕಟ್ಟಡಗಳನ್ನು ಧ್ವಂಸಗೊಳಿಸಿದರು. ಪ್ರತಿಭಟನಾಕಾರರು U.N ಶಾಂತಿಪಾಲನಾ ಪಡೆಗಳ ಪ್ರತಿದಾಳಿಯಿಂದ ಆಕ್ರೋಶಗೊಳುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

    ಗೋಮಾದಲ್ಲಿ ಯುಎನ್ ಶಾಂತಿಪಾಲನ ಸೈನಿಕರು ಇಬ್ಬರು ಪ್ರತಿಭಟನಾಕಾರರನ್ನು ಗುಂಡಿಕ್ಕಿ ಕೊಂದಿದ್ದಾರೆ. ಸರ್ಕಾರದ ವಕ್ತಾರ ಪ್ಯಾಟ್ರಿಕ್ ಮುಯಾಯಾ ಅವರು ಈ ಕುರಿತು ಮಾಹಿತಿ ಕೊಟ್ಟಿದ್ದು, ಈ ಪ್ರತಿಭಟನೆಯಲ್ಲಿ ಐದು ಜನರು ಸಾವನ್ನಪ್ಪಿದ್ದು, 50 ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಿದರು.

    Live Tv
    [brid partner=56869869 player=32851 video=960834 autoplay=true]

  • ವಿದ್ಯುತ್ ತಂತಿ ಬಿದ್ದು ತರಕಾರಿ ಖರೀದಿಗೆ ಬಂದ 30 ಮಂದಿ ಸಾವು

    ವಿದ್ಯುತ್ ತಂತಿ ಬಿದ್ದು ತರಕಾರಿ ಖರೀದಿಗೆ ಬಂದ 30 ಮಂದಿ ಸಾವು

    ಕಿನ್ಶಾಸ: ತರಕಾರಿ ಖರೀದಿಗೆ ಬಂದವರ ಮೇಲೆ ವಿದ್ಯುತ್ ತಂತಿ ಹರಿದು ಬಿದ್ದು, 30 ಮಂದಿ ಸುಟ್ಟು ಕರಕಲಾದ ಘಟನೆ ಕಾಂಗೋದ ಕಿಬ್ಲಾ ಪ್ರದೇಶದ ಮಾರುಕಟ್ಟೆಯಲ್ಲಿ ನಡೆದಿದೆ.

    ಮಾರುಕಟ್ಟೆ ಗಲೀಜಿನಿಂದ ಕೂಡಿದ್ದು, ರಸ್ತೆ ತುಂಬೆಲ್ಲ ಕೆಸರು ತುಂಬಿತ್ತು. ಇದರ ಪರಿಣಾಮವಾಗಿ ವಿದ್ಯುತ್ ಕಂಬಗಳು ಕೂಡಾ ಸಡಿಲಗೊಂಡಿದ್ದವು. ಹೀಗಾಗಿ ವಿದ್ಯುತ್ ಕಂಬ ಮಾರುಕಟ್ಟೆಯ ಮಧ್ಯ ಭಾಗದಲ್ಲಿ ಬಿದ್ದಿದೆ. ಈ ಪರಿಣಾಮ ತರಕಾರಿ ಖರೀದಿಗೆ ಬಂದವರು ದಾರುಣವಾಗಿ ಸಾವನ್ನಪ್ಪಿದ್ದಾರೆ.

    ವಿದ್ಯತ್ ಕಂಬ ಕೆಸರಿನಿಂದ ಕೂಡಿದ ನೀರಿಗೆ ಬಿದ್ದಿದೆ. ತಕ್ಷಣವೇ ಅಲ್ಲಿದ್ದವರಿಗೆ ಶಾಕ್ ತಗುಲಿದೆ. ಸರಿಸುಮಾರಾಗಿ 30 ಮಂದಿ ಸಾವನ್ನಪಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ಹಿಜಬ್ ನೆಪವೊಡ್ಡಿ ಮುಸ್ಲಿಂ ಹೆಣ್ಮಕ್ಕಳ ಶಿಕ್ಷಣಕ್ಕೆ ತಡೆ ಒಡ್ಡಲಾಗ್ತಿದೆ: ಮುಫ್ತಿ

    ಈ ಘಟನೆಯ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಮೃತದೇಹಗಳು ಒಂದಕ್ಕೊಂದು ಅಂಟಿಕೊಂಡಿರುವುದನ್ನು ಕಾಣಬಹುದಾಗಿದೆ. ಕೆಲವು ಮೃತದೇಹಗಳು ಸಂಪೂರ್ಣವಾಗಿ ಕೆಸರಿನಲ್ಲಿ ಮುಳುಗಿವೆ.