Tag: Confession

  • ತುಮಕೂರಿನಿಂದ ಬೆಂಗ್ಳೂರಿಗೆ ತಂದು ಬಾಂಬ್ ಸ್ಫೋಟಿಸಿದ್ವಿ – ತಪ್ಪೊಪಿಕೊಂಡ ಆರೋಪಿಗಳು

    ತುಮಕೂರಿನಿಂದ ಬೆಂಗ್ಳೂರಿಗೆ ತಂದು ಬಾಂಬ್ ಸ್ಫೋಟಿಸಿದ್ವಿ – ತಪ್ಪೊಪಿಕೊಂಡ ಆರೋಪಿಗಳು

    – ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಬಾಂಬ್ ಸ್ಫೋಟ ಪ್ರಕರಣ
    – ಎನ್‍ಐಎ ಕೋರ್ಟ್‍ನಲ್ಲಿ ಆರೋಪಿಗಳಿಂದ ತಪ್ಪೊಪ್ಪಿಗೆ

    ಬೆಂಗಳೂರು: 2010ರಲ್ಲಿ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಬಾಂಬ್ ಸ್ಫೋಟ ಪ್ರಕರಣದ ಇಬ್ಬರು ಆರೋಪಿಗಳು ನ್ಯಾಯಾಲಯದ ಮುಂದೆ ತಪ್ಪೊಪಿಕೊಂಡಿದ್ದಾರೆ.

    ಆರೋಪಿಗಳಾದ ಅಹಮ್ಮದ್ ಜಮಾಲ್, ಹಾಗು ಆಫ್ತಾಬ್ ಆಲಮ್ ಅಲಿಯಾಸ್ ಫಾರೂಕ್ ತಪ್ಪೊಪ್ಪಿಕೊಂಡಿದ್ದಾರೆ. ಈ ಇಬ್ಬರು ಎನ್‍ಐಎ ನ್ಯಾಯಾಲಯದ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ. ಜೊತೆಗೆ ನಾವು ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯವರು ಎಂದು ಹೇಳಿದ್ದಾರೆ.

    ನಾವು ದೆಹಲಿಯ ಜಾಮೀಯಾ ನಗರದ ಮನೆಯೊಂದರಲ್ಲಿ ಬಾಂಬ್ ಸ್ಫೋಟದ ಒಳ ಸಂಚು ರೂಪಿಸಿದ್ದೆವು. ಈ ಮನೆಯಲ್ಲಿರುವಾಗಲೇ ನಮಗೆ ಲಷ್ಕರ್ ಇ-ತೋಯ್ಬಾ ಸಂಘಟನೆಯಿಂದ ಆರ್ಥಿಕ ಸಹಾಯ ದೊರಕಿತ್ತು. ಬೆಂಗಳೂರಿನಲ್ಲಿ ಬಾಂಬ್ ಸ್ಫೋಟಿಸುವ ಸ್ಥಳವನ್ನು ಪ್ರಕರಣದ ಪ್ರಮುಖ ಆರೋಪಿಯಾದ ಮಹಮದ್ ಯಾಸಿನ್ ನಿರ್ದೇಶನದಂತೆ ಗುರುತಿಸಲಾಗಿತ್ತು ಎಂದು ತಿಳಿಸಿದ್ದಾರೆ.

    ಬೆಂಗಳೂರಿನ ಸದಾಶಿವನಗರ ಹಾಗೂ ತುಮಕೂರಿನಲ್ಲಿ ಸ್ಫೋಟದ ಸಂಚು ರೂಪಿಸಲಾಗಿತ್ತು. ಹೀಗಾಗಿ ಬಾಂಬ್ ಸ್ಫೋಟಕವನ್ನು ತುಮಕೂರಿನಿಂದ ಬೆಂಗಳೂರಿಗೆ ತಂದಿದ್ದೇವು. ಯಾಸಿನ್ ಮತ್ತು ಇತರ ನಾಲ್ವರು ಸೇರಿಕೊಂಡು ಸ್ಟೇಡಿಯಂ ಬಳಿ 5 ಸ್ಫೋಟಕಗಳನ್ನು ಅಳವಡಿಸಿದ್ದೇವು ಎಂದು ಆರೋಪಿಗಳು ನ್ಯಾಯಾಲಯದ ಮುಂದೆ ಹೇಳಿದ್ದಾರೆ. ಚಿನ್ನಸ್ವಾಮಿ ಸ್ಟೇಡಿಯಂ ಗೇಟ್ ನಂಬರ್ 12ರಲ್ಲಿದ್ದ ಬಾಂಬ್ ಸ್ಫೋಟಗೊಂಡು 15 ಮಂದಿ ಗಾಯಗೊಂಡಿದ್ದರು. ಉಳಿದ ನಾಲ್ಕು ಬಾಂಬ್‍ಗಳನ್ನು ಪೊಲೀಸರು ಪತ್ತೆ ಮಾಡಿ ನಿಷ್ಕ್ರಿಯಗೊಳಿಸಿದ್ದರು.

    ಈ ಮಧ್ಯೆ ಆರೋಪಿಗಳ ತಪ್ಪೊಪ್ಪಿಗೆಯನ್ನು ತಿರಸ್ಕರಿಸುವಂತೆ ಸರ್ಕಾರಿ ಪರ ವಕೀಲರಿಂದ ನ್ಯಾಯಲಯಕ್ಕೆ ಮನವಿ ಮಾಡಿದ್ದಾರೆ. ಆರೋಪಿಗಳು ದೇಶದ ವಿರುದ್ಧ ಯುದ್ಧ ಸಾರಿದವರು, ಹೀಗಾಗಿ ಇವರಿಗೆ ಶಿಕ್ಷೆ ಆಗಬೇಕು. ಈ ಹಿನ್ನಲೆ ನ್ಯಾಯಾಲಯ ಆರೋಪಿಗಳ ತಪ್ಪೊಪ್ಪಿಗೆ ಅರ್ಜಿ ವಜಾ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಸದ್ಯ ಇಬ್ಬರು ಆರೋಪಿಗಳ ಹೇಳಿಕೆಯ ಆಧಾರದಲ್ಲಿ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿದೆ.

  • ಒಂದೇ ಕಲ್ಲಿನಿಂದ ಎರಡು ಹಕ್ಕಿ ಹೊಡೆದ್ರಾ ಸಿಎಂ?

    ಒಂದೇ ಕಲ್ಲಿನಿಂದ ಎರಡು ಹಕ್ಕಿ ಹೊಡೆದ್ರಾ ಸಿಎಂ?

    ಬೆಂಗಳೂರು: ವಿಶ್ವಾಸಮತಯಾಚನೆಗೆ ಸಮಯ ನಿಗದಿ ಮಾಡಲು ಸ್ಪೀಕರ್ ಅವರಿಗೆ ಮನವಿ ಮಾಡುವ ಮೂಲಕ ಮುಖ್ಯಮಂತ್ರಿಗಳು ಒಂದೇ ಕಲ್ಲಿನಿಂದ ಎರಡು ಹಕ್ಕಿ ಹೊಡೆದ್ರಾ ಎಂಬ ಚರ್ಚೆ ರಾಜಕೀಯ ಪಡಸಾಲೆಯಲ್ಲಿ ಕೇಳಿ ಬಂದಿದೆ.

    ಸದ್ಯ ಸಿಎಂ ಅವರು ವಿಶ್ವಾಸ ಮತಯಾಚನೆ ಸಮಯ ನಿಗದಿ ಮಾಡಲು ಕೇಳಿರುವುದರಿಂದ ಎಲ್ಲಾ ಶಾಸಕರಿಗೂ ಆಯಾ ಪಕ್ಷಗಳು ವಿಪ್ ಜಾರಿ ಮಾಡಿವೆ. ಸದ್ಯ ವಿಶ್ವಾಸ ಮತಯಾಚನೆಗೆ ಸಿಎಂ ಅವರಿಗೆ 14 ದಿನಗಳ ಕಾಲವಕಾಶ ಲಭಿಸಲಿದೆ. ಈ ಸಂದರ್ಭದಲ್ಲಿ ಇತರೇ ಅತೃಪ್ತ ಶಾಸಕರು ರಾಜೀನಾಮೆಗೆ ಮುಂದಾಗುವುದಿಲ್ಲ. ಪರಿಣಾಮ ಮೈತ್ರಿ ಸರ್ಕಾರದಲ್ಲಿ ಅತೃಪ್ತರ ಶಾಸಕರ ಸಂಖ್ಯೆ ಹೆಚ್ಚಲು ಬ್ರೇಕ್ ಬೀಳಲಿದೆ.

    ಮತ್ತೊಂದೆಡೆ ಈಗಾಗಲೇ ಕಾಂಗ್ರೆಸ್ ಹಿರಿಯ ನಾಯಕರಾದ ರೋಷನ್ ಬೇಗ್ ಮತ್ತು ರಾಮಲಿಂಗಾರೆಡ್ಡಿ ಅವರ ವಿಶ್ವಾಸವನ್ನು ಸಿಎಂ ಗಳಿಸಿದ್ದಾರೆ ಎನ್ನಲಾಗಿದ್ದು, ಇದು ಸಿಎಂ ಅವರ ವಿಶ್ವಾಸಕ್ಕೆ ಕಾರಣ ಎನ್ನಲಾಗಿದೆ. ಹಿರಿಯ ಶಾಸಕರೊಂದಿಗೆ ರಾಜೀನಾಮೆ ನೀಡಿರುವ ನಾಲ್ಕು ಶಾಸಕರ ಮನವೊಲಿಸುವ ಸಾಧ್ಯತೆಯೂ ಇದೆ. ಸಿಎಂ ಅವರೇ ವಿಶ್ವಾಸಮತ ಯಾಚಿಸಲು ಕೇಳಿರುವ ಕಾರಣ ರಾಜೀನಾಮೆ ಕೊಡಲು ಮುಂದಾಗಿದ್ದಾರೆ ಎನ್ನಲಾಗಿದ್ದ ಕೆಲ ಶಾಸಕರು ಸೈಲೆಂಟ್ ಆಗುವ ಸಾಧ್ಯತೆಯಿದೆ.

    ಅಲ್ಪಮತಕ್ಕೆ ಕುಸಿದಿರುವ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಕೈಗೊಳ್ಳಲು ಬಿಜೆಪಿ ಮುಂದಾಗಿತ್ತು. ಆದರೆ ಈಗ ಸಿಎಂ ವಿಶ್ವಾಸಮತ ಯಾಚನೆ ಕೇಳಿರುವ ಕಾರಣ ಬಿಜೆಪಿಯ ಈ ಅವಕಾಶವೂ ಕೈತಪ್ಪಿ ಹೋಗಿದೆ.

    ಇದರ ಜೊತೆಯಲ್ಲಿ ಸುಪ್ರೀಂ ಕೋರ್ಟ್ ಮಂಗಳವಾರದವರೆಗೆ ಯಥಾಸ್ಥಿತಿಯಲ್ಲಿರುವಂತೆ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಆದೇಶ ನೀಡಿದ ಕಾರಣ ಅತೃಪ್ತರ ಮನ ಒಲಿಕೆಗ ಸಮಯ ಸಿಕ್ಕಿದೆ. ಇಂದು ಸಿಎಂ ವಿಶ್ವಾಸ ಮತಯಾಚನೆಗೆ ಕೋರುತ್ತಾರೆ ಎನ್ನುವ ವಿಚಾರ ಕಾಂಗ್ರೆಸ್ ನಾಯಕರಿಗೆ ಸಹ ತಿಳಿದಿರಲಿಲ್ಲ. ಎಚ್‍ಡಿಡಿ ಸಲಹೆಯ ಹಿನ್ನೆಲೆಯಲ್ಲಿ ಸಿಎಂ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.