Tag: Condom

  • ಭಾರತದಲ್ಲಿ ಅವಿವಾಹಿತ ಮಹಿಳೆಯರಲ್ಲಿ ಕಾಂಡೋಮ್ ಬಳಕೆ ಹೆಚ್ಚಳ!

    ಭಾರತದಲ್ಲಿ ಅವಿವಾಹಿತ ಮಹಿಳೆಯರಲ್ಲಿ ಕಾಂಡೋಮ್ ಬಳಕೆ ಹೆಚ್ಚಳ!

    ನವದೆಹಲಿ: ದೇಶದಲ್ಲಿ ಹೆಚ್ಚಿನ ಸಂಖ್ಯೆಯ ಅವಿವಾಹಿತ ಮಹಿಳೆಯರು ಮತ್ತು ಸೆಕ್ಸ್ ವರ್ಕರ್ ಗಳಲ್ಲಿ ಕಾಂಡೋಮ್ ಬಳಕೆ ಹೆಚ್ಚಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಕೈಗೊಂಡ ಅಧ್ಯಯನ ಸಮೀಕ್ಷೆ ತಿಳಿಸಿದೆ.

    2015-16ರಲ್ಲಿ ಆರೋಗ್ಯ ಸಚಿವಾಲಯ ಅಧ್ಯಯನ ನಡೆಸಿದ್ದು, 10 ವರ್ಷಗಳಲ್ಲಿ ಅವಿವಾಹಿತ ಮಹಿಳೆ ಮತ್ತು ಸೆಕ್ಸ್ ವರ್ಕರ್ ಗಳಲ್ಲಿ ಶೇ.2 ರಿಂದ ಶೇ.12 ರಷ್ಟು ಕಾಂಡೋಮ್ ಬಳಕೆ ಹೆಚ್ಚಾಗಿದೆ. ಒಟ್ಟಾರೆಯಾಗಿ ಕಾಂಡೋಮ್ ಬಳಕೆಯ ಜಾಗೃತಿಯಿಂದಾಗಿ ಒಂದು ದಶಕದಲ್ಲಿ ಆರು ಪಟ್ಟರಷ್ಟು ಹೆಚ್ಚಾಗಿದ್ದು, 15 ರಿಂದ 49 ವಯಸ್ಸಿನ ಅವಿವಾಹಿತ ಮಹಿಳೆಯರು ಕಾಂಡೋಮ್ ಬಳಸುತ್ತಾರೆ. ಇದರಲ್ಲಿಯೂ 20 ರಿಂದ 24 ವಯಸ್ಸಿನ ಯುವತಿಯರಲ್ಲಿ ಕಾಂಡೋಮ್ ಬಳಕೆಯ ಪ್ರಮಾಣ ಹೆಚ್ಚಾಗಿದೆ ಎನ್ನುವ ಅಂಶ ಪ್ರಕಟವಾಗಿದೆ.

    ಸಮೀಕ್ಷೆಯಲ್ಲಿ 8 ಪುರುಷರಲ್ಲಿ ಮೂವರು ಸುರಕ್ಷಿತ ಲೈಂಗಿಕತೆ ಗೆ ಆಸಕ್ತಿ ತೋರಿಸುತ್ತಾರೆ. ಇನ್ನು ಮಹಿಳೆಯರು ತಮ್ಮ ಪ್ರೊಫೆಶನಲ್ ಲೈಫ್ ಗಾಗಿ ಗರ್ಭ ನಿರೋಧಕ ಸಾಧನಗಳನ್ನು ಬಳಸಿಕೊಳ್ಳಲು ಮುಂದಾಗುತ್ತಿದ್ದಾರೆ. ಗರ್ಭ ನಿರೋಧಕ ಸಾಧನಗಳ ಬಳಕೆ ಹೆಚ್ಚಾಗುತ್ತಿರುವುದರಿಂದ ದೇಶದ ಅಭಿವೃದ್ಧಿ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಎಂದು ತಿಳಿಸಿದೆ.

     

    ದೇಶದ ಶೇ.99ರಷ್ಟು ಮಹಿಳೆಯರು ಮತ್ತು 15 ರಿಂದ 49 ವಯಸ್ಸಿನ ಪುರುಷರು ಯಾವುದೋ ಒಂದು ಮಾದರಿಯ ಗರ್ಭ ನಿರೋಧಕ ಸಾಧನಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಅವಿವಾಹಿತ ಮಹಿಳೆ ಹಾಗು 15ರಿಂದ 49 ವಯಸ್ಸಿನ ಮಹಿಳೆಯರ ಗರ್ಭನಿರೋಧಕ ಪ್ರಮಾಣ ಶೇ.54 ಹೊಂದಿದೆ. ಆದ್ರೆ ಶೇ.10 ರಷ್ಟು ಮಹಿಳೆಯರು ಮಾತ್ರ ಆಧುನಿಕ ಲೈಂಗಿಕ ಸುರಕ್ಷಾ ವಿಧಾನ (ಕಾಂಡೋಮ್, ಮಾತ್ರೆ, ಡಯಾಫ್ರಾಗಮ್, ಐಯುಡಿ) ಗಳನ್ನು ಬಳಸುತ್ತಿದ್ದು ಹೆಚ್ಚಿನ ಸಂಖ್ಯೆಯ ಮಹಿಳೆಯರು ಹಳೆಯ ಅಥವಾ ಸಾಂಪ್ರದಾಯಿಕ ವಿಧಾನಗಳನ್ನು ಬಳಸಿಕೊಳ್ಳುತ್ತಿದ್ದಾರೆ.

    ಕಾಂಡೋಮ್ ಪರಿಣಾಮ: ಶೇ.61ರಷ್ಟು ಪುರಷರು ಸರಿಯಾದ ರೀತಿಯಲ್ಲಿ ಕಾಂಡೋಮ್ ಬಳಕೆ ಮಾಡುತ್ತಿರುವುದಾಗಿ ಎಂದು ಸಮೀಕ್ಷೆಯಲ್ಲಿ ಹೇಳಿಕೊಂಡಿದ್ದಾರೆ. ಕಾಂಡೋಮ್ ಬಳಕೆ ಜನನ ಪ್ರಮಾಣ ತಗ್ಗಿಸಲು ಅತ್ಯಂತ ಸಹಕಾರಿಯಾಗಿದೆ. ಶೇ.25 ರಷ್ಟು ಪುರುಷರು ಕೆಲವೊಂದು ಸಮಯದಲ್ಲಿ ಸರಿ ವಿಧಾನದಲ್ಲಿ ಕಾಂಡೋಮ್ ಬಳಸುವುದರಿಂದ ಜನನ ಪ್ರಮಾಣ ನಿಯಂತ್ರಿಸಲು ಸಾಧ್ಯವಾಗುತ್ತದೆ ಅಂತಾ ಒಪ್ಪಿಕೊಂಡಿದ್ದಾರೆ.

    ಅತಿಹೆಚ್ಚು, ಕಡಿಮೆ ಎಲ್ಲಿ?
    ಮಣಿಪುರ, ಬಿಹಾರ ಮತ್ತು ಮೇಘಾಲಯ ರಾಜ್ಯಗಳಲ್ಲಿ ಶೇ.24 ರಷ್ಟು ಜನರು ಮಾತ್ರ ಗರ್ಭ ನಿರೋಧಕ ವಿಧಾನಗಳನ್ನು ಅಳವಡಿಸಿಕೊಂಡಿದ್ದಾರೆ. ಶೇ.76 ರಷ್ಟು ಜನ ಗರ್ಭ ನಿರೋಧಕ ವಿಧಾನಗಳನ್ನು ಬಳಸಿಕೊಳ್ಳುವ ಮೂಲಕ ದೇಶದಲ್ಲಿಯೇ ಪಂಜಾಬ್ ಮೊದಲ ಸ್ಥಾನದಲ್ಲಿದೆ. ಇನ್ನೂ ಕೇಂದ್ರಾಡಳಿತ ಪ್ರದೇಶಗಳ ಪೈಕಿ ಲಕ್ಷದ್ವೀಪ (ಶೇ.30) ಕಡಿಮೆ ಜನ ಕಾಂಡೋಮ್ ಬಳಸಿದರೆ, ಚಂಡೀಗಢದಲ್ಲಿ ಶೇ.74ರಷ್ಟು ಜನ ಬಳಸುತ್ತಿದ್ದಾರೆ.

    ಮದುವೆಯಾದ ಮೂರರಲ್ಲಿ ಇಬ್ಬರು ಮಹಿಳೆಯರು ಫ್ಯಾಮಿಲಿ ಪ್ಲ್ಯಾನಿಂಗ್ ಅಳವಡಿಸಿಕೊಳ್ಳಲು ಇಚ್ಚಿಸುತ್ತಾರೆ. ಶೇ.11 ರಷ್ಟು ಮಹಿಳೆಯರು ಜನನ ಪ್ರಮಾಣದಲ್ಲಿ ಅಂತರವನ್ನು ಕಾಯ್ದುಕೊಳ್ಳುತ್ತಿದ್ದರೆ, ಶೇ.55 ರಷ್ಟು ಮಹಿಳೆಯರು ಜನನ ಮಿತಿಯನ್ನು ನಿಯಂತ್ರಿಸಬೇಕೆಂದು ಇಷ್ಟಪಡುತ್ತಿದ್ದಾರೆ. ನವ ವಿವಾಹಿತ ಮಹಿಳೆಯರಲ್ಲಿ ಗರ್ಭ ನಿರೋಧಕ ವಿಧಾನಗಳ ಬಳಕೆ ಜಾಗೃತಿ ಹೆಚ್ಚಾಗುತ್ತಿದ್ದು, ಬಳಕೆಯ ಪ್ರಮಾಣವು ಶೇ.54 ರಿಂದ ಶೇ.66 ರಷ್ಟು ಏರಿಕೆಯಾಗಿದೆ ಎಂದು ಅಧ್ಯಯನ ತಿಳಿಸಿದೆ.

    ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS-4) ಈ ಬಾರಿ ಜನಸಂಖ್ಯಾ ವಿಜ್ಞಾನದ ಅಂತರರಾಷ್ಟ್ರೀಯ ಸಂಸ್ಥೆ ಜಂಟಿಯಾಗಿ ಈ ಸರ್ವೆಯನ್ನು ನಡೆಸಿದೆ. ಈ ಸಮೀಕ್ಷೆಯಲ್ಲಿ 6,01,509 ಮನೆಗಳನ್ನು ಸಂದರ್ಶಿಸಿ ಅಂಕಿ ಅಂಶಗಳನ್ನು ಸಿದ್ಧಪಡಿಸಿದ್ದು, ಶೇ.98 ರಷ್ಟು ಜನರು ಪೂರಕವಾದ ಉತ್ತರಗಳನ್ನು ನೀಡಿದ್ದಾರೆ.

    https://www.youtube.com/watch?v=xZ8FspbauWY

     

  • ಸೆಕ್ಸ್ ರ‍್ಯಾಕೆಟ್: ಇಬ್ಬರು ನಟಿಯರು ಸೇರಿ ಐವರ ಬಂಧನ-ಕಾಂಡೋಮ್, ಹಣ ಪತ್ತೆ

    ಸೆಕ್ಸ್ ರ‍್ಯಾಕೆಟ್: ಇಬ್ಬರು ನಟಿಯರು ಸೇರಿ ಐವರ ಬಂಧನ-ಕಾಂಡೋಮ್, ಹಣ ಪತ್ತೆ

    ಹೈದರಾಬಾದ್: ಎರಡು ದಿನಗಳ ಹಿಂದೆ ನಗರದಲ್ಲಿ ಪೊಲೀಸರು ಹೈ ಟೆಕ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿದ್ದು, ಇಬ್ಬರೂ ನಟಿಯರು ಸೇರಿದಂತೆ ಐವರನ್ನು ಬಂಧಿಸಿದ್ದಾರೆ.

    ರಿಚಾ ಸೆಕ್ಸೆನಾ ಮತ್ತು ಶುಭ್ರಾ ಚಟರ್ಜಿ ಸೆಕ್ಸ್ ದಂಧೆಯಲ್ಲಿಯಲ್ಲಿ ಬಂಧಿತರಾದ ನಟಿಯರು. ಇಬ್ಬರೂ ತೆಲಗು ಮತ್ತು ಬಂಗಾಳಿ ಸಿನಿಮಾಗಳ ನಟಿಯರಾಗಿದ್ದು, ಹೈದರಾಬಾದ್ ನ ತಾಜ್ ಡೆಕ್ಕನ್ ಹೋಟೆಲ್ ನಲ್ಲಿ ರೂಮ್ ಬಾಡಿಗೆಗೆ ಪಡೆದುಕೊಂಡು ವೇಶ್ಯಾವಾಟಿಕೆಯಲ್ಲಿ ತೊಡಗಿಕೊಂಡಿದ್ದರು. ಪಿಂಪ್ (ದಲ್ಲಾಳಿ) ಒಬ್ಬ ಆನ್‍ಲೈನ್ ಮೂಲಕ ಗಿರಾಕಿಗಳನ್ನು ಬುಕ್ ಮಾಡಿ ಇವರತ್ತ ಕಳುಹಿಸುತ್ತಿದ್ದನು. ಪೊಲೀಸರು ಐಪಿ ಅಡ್ರೆಸ್ ಮೂಲಕ ಪಿಂಪ್ ವಿಳಾಸವನ್ನು ಪತ್ತೆ ಹಚ್ಚಿ, ಸಿವಿಲ್ ಡ್ರೆಸ್ ನಲ್ಲಿ ಬಂದು ನಟಿಯರನ್ನು ಬಂಧಿಸಿದ್ದಾರೆ.

    ದಾಳಿ ವೇಳೆ ಪೊಲೀಸರಿಗೆ ಹೋಟೆಲ್ ನಲ್ಲಿ 50 ಸಾವಿರ ನಗದು, ಮೊಬೈಲ್ ಫೋನ್ ಮತ್ತು ಕೆಲವು ಕಾಂಡೋಮ್ ಗಳು ಸಿಕ್ಕಿವೆ. ಬಂಧಿತರಲ್ಲಿ ಇಬ್ಬರು ನಟಿಯರಾದ್ರೆ, ದಂಧೆಯ ಸಂಘಟಕ, ಮತ್ತೊಬ್ಬ ಬಾಲಿವುಡ್ ಸಿನಿಮಾ ನಿರ್ದೇಶಕ ಮೊನಿಶಾ ಕಾಡಕೈ, ಇನ್ನೊಬ್ಬ ಆಂಧ್ರ ಪ್ರದೇಶದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ವೆಂಕಟ್ ರಾವ್ ಎಂದು ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೋಟೆಲ್ ನ ಇಬ್ಬರೂ ಮ್ಯಾನೇಜರ್ ಗಳನ್ನು ಸಹ ಬಂಧಿಸಿದ್ದಾರೆ. ನಟಿಯರ ರೂಮಿಗೆ ಪುರುಷರನ್ನು ಕಳುಹಿಸುತ್ತಿದ್ದ ಪಿಂಪ್ ನಾಪತ್ತೆಯಾಗಿದ್ದಾನೆ.

    ಇಬ್ಬರೂ ನಟಿಯರು ಹೋಟೆಲ್ ನ ಎರಡು ಬೇರೆ ರೂಮಿನಲ್ಲಿದ್ದಾಗ ಪೊಲೀಸರು ಬಂಧಿಸಿದ್ದಾರೆ. ಮುಂಬೈ ಮೂಲದ ಇಬ್ಬರೂ ನಟಿಯರನ್ನು ಪೊಲೀಸರು ಬಂಧಿಸಿದ್ದು, ಮೊಬೈಲ್ ಫೋನ್, ಹಣ, ಅಶ್ಲೀಲ ಫೋಟೋಗಳು, ನಟಿಯರ ಫೋನ್ ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ಈ ಸೆಕ್ಸ್ ರ‍್ಯಾಕೆಟ್ ಪಿಂಪ್ ಗಳು ನಗರದ ಶ್ರೀಮಂತ ವ್ಯಕ್ತಿಗಳಿಗೆ ಬಲೆಯನ್ನು ಬೀಸುತ್ತಿದ್ದರು. ಒಂದು ರಾತ್ರಿಗೆ ಒಂದು ಲಕ್ಷ ರೂ. ರೇಟ್ ಫಿಕ್ಸ್ ಮಾಡಿದ್ದರು. ಆದರೆ ವೇಶ್ಯಾವಾಟಿಕೆಯ ಮುಖ್ಯಸ್ಥ ಮಾತ್ರ ಗಿರಾಕಿಗಳಿಂದ ಭಾರೀ ಮೊತ್ತದ ಹಣವನ್ನು ಪಡೆದುಕೊಂಡು, ನಟಿಯರಿಗೆ ಕಡಿಮೆ ಹಣವನ್ನು ನೀಡುತ್ತಿದ್ದ ಎಂದು ತಿಳಿದು ಬಂದಿದೆ. ಪಿಂಪ್ ಗಳು ನಟಿಯರಿಗೆ ಸಿನಿಮಾದಲ್ಲಿ ಇದಕ್ಕೂ ಹೆಚ್ಚಿನ ಹಣವನ್ನು ಗಳಿಸಬಹುದು ಎಂದು ನಂಬಿಸಿದ್ದರು.

  • ಟಿವಿಯಲ್ಲಿ ಈ ಸಮಯದಲ್ಲಿ ಮಾತ್ರ ಕಾಂಡೋಮ್ ಜಾಹೀರಾತು ಪ್ರಸಾರಕ್ಕೆ ಅವಕಾಶ- ಕೇಂದ್ರ ಸರ್ಕಾರ

    ಟಿವಿಯಲ್ಲಿ ಈ ಸಮಯದಲ್ಲಿ ಮಾತ್ರ ಕಾಂಡೋಮ್ ಜಾಹೀರಾತು ಪ್ರಸಾರಕ್ಕೆ ಅವಕಾಶ- ಕೇಂದ್ರ ಸರ್ಕಾರ

    ನವದೆಹಲಿ: ಟಿವಿಯಲ್ಲಿ ಕಾಂಡೋಮ್ ಜಾಹೀರಾತುಗಳ ಪ್ರಸಾರಕ್ಕೆ ಕೇಂದ್ರ ಸರ್ಕಾರ ಹೊಸ ನಿಯಮವನ್ನ ರೂಪಿಸಿದೆ.

    ಅಸಭ್ಯ ಕಾಂಡೋಮ್ ಜಾಹೀರಾತುಗಳು ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದು ಅನಾರೋಗ್ಯಕರ ಅಭ್ಯಾಸಗಳಿಗೆ ಕಾರಣವಾಗುತ್ತದೆ. ಹೀಗಾಗಿ ಇಂತಹ ಜಾಹೀರಾತುಗಳನ್ನು ಕೇವಲ ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆವರೆಗೆ ಮಾತ್ರವೇ ಪ್ರಸಾರ ಮಾಡಬೇಕು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಆದೇಶಿಸಿದೆ.

    ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆಯ ಅವಧಿಯಲ್ಲಿ ಕಾಂಡೋಮ್ ಜಾಹೀರಾತುಗಳನ್ನು ಪ್ರಸಾರ ಮಾಡುವಂತಿಲ್ಲ. ಇದು ನಿರ್ದಿಷ್ಟ ವಯೋಮಿತಿಯವರಿಗೆ ಸೀಮಿತವಾದ್ದರಿಂದ ಮಕ್ಕಳು ಇದನ್ನು ವೀಕ್ಷಿಸುವುದರಿಂದ ಅವರ ಮೇಲೆ ಪರಿಣಾಮ ಬೀರುತ್ತದೆ ಎಂದು ತನ್ನ ಆದೇಶದಲ್ಲಿ ತಿಳಿಸಿದೆ. 1994ರ ಕೋಡ್ ಆಫ್ ದಿ ಕೇಬಲ್ ಟೆಲಿವಿಷನ್ ನೆಟ್‍ವರ್ಕ್ ರೂಲ್ಸ್ ಅನ್ವಯ ಮಕ್ಕಳ ಸುರಕ್ಷತೆಗೆ ಅಪಾಯವನ್ನು ಉಂಟು ಮಾಡುವುದು ಅಥವಾ ಅನಾರೋಗ್ಯಕರವಾದ ಅಭ್ಯಾಸಗಳಲ್ಲಿ ಆಸಕ್ತಿಯನ್ನು ಸೃಷ್ಟಿಸುವಂತಹ ಯಾವುದೇ ಜಾಹೀರಾತಿಗೆ ಅವಕಾಶವಿಲ್ಲ ಎಂಬುದನ್ನ ಸರ್ಕಾರ ಉಲ್ಲೇಖಿಸಿದೆ.

    ಕೆಲವು ವಾಹಿನಿಗಳು ಪದೇ ಪದೇ ಕಾಂಡೋಮ್ ಜಾಹೀರಾತುಗಳನ್ನ ಪ್ರಸಾರ ಮಾಡುತ್ತಿದ್ದು, ಇವು ಅಸಭ್ಯವಾಗಿವೆ. ಅದರಲ್ಲೂ ಮಕ್ಕಳ ದೃಷ್ಟಿಯಿಂದ ಇದು ಅಸಭ್ಯ ಎಂದು ಅನೇಕ ದೂರುಗಳು ಬಂದಿರುವುದಾಗಿ ಸಚಿವಾಲಯ ತಿಳಿಸಿದೆ. ದೂರುಗಳ ಆಧಾರದ ಮೇಲೆ ಇಂತಹ ಜಾಹೀರಾತುಗಳ ಸಮಯವನ್ನು ನಿಯಂತ್ರಿಸಲು ಆಗುವುದಿಲ್ಲ. ಸಚಿವಾಲಯವೇ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಅಡ್ವರ್ಟೈಸಿಂಗ್ ಸ್ಟಾಂಡರ್ಡ್ಸ್  ಕೌನ್ಸಿಲ್ ಆಫ್ ಇಂಡಿಯಾ ಕೆಲವು ತಿಂಗಳ ಹಿಂದಷ್ಟೇ ಸಚಿವಾಲಕ್ಕೆ ಪತ್ರ ಬರೆದಿತ್ತು. ಈ ಹಿನ್ನೆಲೆಯಲ್ಲಿ ಸಚಿವಾಲಯ ಈ ಹೊಸ ಆದೇಶವನ್ನ ನೀಡಿದೆ.

    ಇಂದಿನಿಂದಲೇ ಹೊಸ ಆದೇಶ ಜಾರಿಯಾಗಲಿದ್ದು, ಕಾಂಡೋಮ್ ಜಾಹೀರಾತುಗಳು ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆಯ ನಡುವೆ ಮಾತ್ರ ಪ್ರಸಾರಗೊಳ್ಳುವಂತೆ ಸೂಚನೆ ನೀಡಿದೆ. ಜೊತೆಗೆ ಪ್ರೈಮ್ ಟೈಮ್‍ನಲ್ಲಿ ಯಾವುದೇ ಕಾಂಡೋಮ್ ಜಾಹೀರಾತು ಪ್ರಸಾರ ಮಾಡದಂತೆ ಸೂಚನೆ ನೀಡಿದೆ.

    Condoms

  • 69 ದಿನಗಳಲ್ಲಿ ಬರೋಬ್ಬರಿ 10 ಲಕ್ಷ ಕಾಂಡೋಮ್ ಮಾರಾಟ-ಕರ್ನಾಟಕ ರಾಜ್ಯದ್ದು ಸಿಂಹಪಾಲು

    69 ದಿನಗಳಲ್ಲಿ ಬರೋಬ್ಬರಿ 10 ಲಕ್ಷ ಕಾಂಡೋಮ್ ಮಾರಾಟ-ಕರ್ನಾಟಕ ರಾಜ್ಯದ್ದು ಸಿಂಹಪಾಲು

    ಬೆಂಗಳೂರು: ಭಾರತದಲ್ಲಿ ಕಾಂಡೋಮ್ ಬಳಕೆಯ ಮೇಲಿನ ವೆಚ್ಚ ಕಡಿಮೆ ಇದ್ದರೂ, ಆದರೆ ಕೇವಲ ಶೇಕಡಾ 5ರಷ್ಟು ಜನರು ಮಾತ್ರ ಜನನ ಪ್ರಮಾಣ ತಗ್ಗಿಸಲು ನಿರೋಧ ಬಳಕೆ ಮಾಡುತ್ತಾರೆ. ಹೀಗಾಗಿ ಆನ್‍ಲೈನ್ ನಲ್ಲಿ ಕಾಂಡೋಮ್ ಉಚಿತ ಮಾರಾಟ ಮಳಿಗೆಯನ್ನು ಆರಂಭಿಸಲಾಗಿತ್ತು.

    ಏಪ್ರಿಲ್ 28ರಂದು ಆರಂಭವಾದ ಆನ್‍ಲೈನ್ ಮಳಿಗೆಗೆ ಏಡ್ಸ್ ಹೆಲ್ತ್ ಕೇರ್ ಫೌಂಡೇಶನ್ 9.56 ಲಕ್ಷ ಕಾಂಡೋಮ್ ಗಳ ಪೂರೈಕೆಯನ್ನು ಮಾಡಿತ್ತು ಎಂದು ಮಾಧ್ಯಮಗಳು ವರದಿ ಮಾಡಿವೆ. ಅಂಕಿ ಅಂಶಗಳ ಪ್ರಕಾರ ಒಟ್ಟಾರೆ 10 ಲಕ್ಷ ಕಾಂಡೋಮ್ ಗಳಲ್ಲಿ ಕೆಲವೊಂದು ಸಮುದಾಯ ಮತ್ತು ಎನ್‍ಜಿಓ ಗಳು 5.14 ಲಕ್ಷ ನಿರೋಧನ್ನು ಖರೀದಿ ಮಾಡಿವೆ. ಇನ್ನುಳಿದ 4.41 ಲಕ್ಷ ಕಾಂಡೋಮ್ ಗಳನ್ನು ವೈಯಕ್ತಿಕವಾಗಿ ಸಾಮಾನ್ಯ ಜನರು ಬುಕ್ ಮಾಡಿದ್ದು, ಇದರಲ್ಲಿ ಕರ್ನಾಟಕ ಮತ್ತು ದೆಹಲಿ ರಾಜ್ಯಗಳದ್ದು ಸಿಂಹಪಾಲು ಇದೆ ಎಂದು ವರದಿಯಾಗಿದೆ.

    ಈ ಉಚಿತ ಕಾಂಡೋಮ್ ಫೌಂಡೇಶನ್ ಮಾರಾಟ ಮಳಿಗೆ ಹಿಂದೂಸ್ತಾನ್ ಲೇಟೆಕ್ಸ್ ಲಿಮಿಟೆಡ್ (ಹೆಚ್‍ಎಲ್‍ಎಲ್) ಸಹಭಾಗಿತ್ವದಲ್ಲಿ ನಡೆಯುತ್ತಿದೆ. 10 ಲಕ್ಷ ಕಾಂಡೋಮ್ ಗಳನ್ನು ಡಿಸೆಂಬರ್ ವರಗೆ ಮಾರಟ ಮಾಡಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಜುಲೈ ಮೊದಲ ವಾರದಲ್ಲೇ ಎಲ್ಲ ಕಾಂಡೋಮ್ ಗಳ ಮಾರಾಟವಾಯಿತು. ಹಾಗಾಗಿ ಮತ್ತೆ 20 ಲಕ್ಷ ಕಾಂಡೋಮ್ ಗಳನ್ನು ಆರ್ಡರ್ ಮಾಡಲಾಗಿದ್ದು, ನವೆಂಬರ್ ಮೊದಲ ವಾರದಲ್ಲಿ ನಮಗೆ ತಲುಪಿವೆ. ಜನವರಿ ತಿಂಗಳಿಗಾಗಿ 50 ಲಕ್ಷ ಕಾಂಡೋಮ್ ಗಳ ಆರ್ಡರ್ ಮಾಡಲಾಗುವುದು ಎಂದು ಫೌಂಡೇಶನ್ ಕಾರ್ಯಕ್ರಮದ ನಿರ್ದೇಶಕ ಡಾ.ವಿ.ಶ್ಯಾಮ್ ಪ್ರಸಾದ್ ತಿಳಿಸಿದ್ದಾರೆ.

    ಯಾಕಿಷ್ಟು ಬೇಡಿಕೆ?: ಹೆಚ್ಚಿನ ಭಾರತೀಯರು ಅಂಗಡಿಗಳಿಗೆ ಹೋಗಿ ಕಾಂಡೋಮ್ ಖರೀದಿ ಮಾಡಲು ಹಿಂದೇಟು ಹಾಕುತ್ತಾರೆ. ಹೀಗಾಗಿ ಆನ್‍ಲೈನ್ ಮಾರಾಟಕ್ಕೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ಗ್ರಾಹಕರು ಆರ್ಡರ್ ಮಾಡಿರುವ ಕಾಂಡೋಮ್ ಸಂಪೂರ್ಣವಾಗಿ ಪ್ಯಾಕ್ ಆಗಿ ಬರುತ್ತದೆ. ಇದರಿಂದ ಡೆಲಿವಿರಿ ಬಾಯ್ ಗೆ ತಾವು ಗ್ರಾಹಕರಿಗೆ ನೀಡುತ್ತಿರುವ ವಸ್ತು ಯಾವುದು ಎಂದು ಗೊತ್ತಿರುವುದಿಲ್ಲ. ಹೀಗಾಗಿ ಗ್ರಾಹಕರು ಕಾಂಡೋಮ್ ಖರೀದಿಸುವಾಗ ಮುಜುಗುರ ಪಡುವುದು ತಪ್ಪುತ್ತದೆ ಎಂದು ಮಾರುಕಟ್ಟೆ ತಜ್ಞರು ಹೇಳುತ್ತಾರೆ.

    ಇತ್ತೀಚಿನ ನ್ಯಾಷನಲ್ ಫ್ಯಾಮಿಲಿ ಹೆಲ್ತ್ ಸರ್ವೇ ಪ್ರಕಾರ, ಕೇವಲ ಶೇಕಡಾ 5.6ರಷ್ಟು ಜನರು ಮಾತ್ರ ಜನನ ನಿಯಂತ್ರಣಕ್ಕಾಗಿ ಕಾಂಡೋಮ್ ಬಳಕೆ ಮಾಡುತ್ತಾರೆ. ಕರ್ನಾಟಕದಲ್ಲಿ ಕೇವಲ ಶೇಕಡಾ 1.7 ರಷ್ಟು ಜನರು ನಿರೋಧ ಬಳಸಿದರೆ, ಬೆಂಗಳೂರಿನಲ್ಲಿ ಶೇ.3.6ರಷ್ಟು ಬಳಕೆ ಮಾಡುತ್ತಾರೆ. ಕೋಲ್ಕತ್ತಾ ಮತ್ತು ದೆಹಲಿಯಲ್ಲಿ ಕ್ರಮವಾಗಿ ಶೇ.19 ಹಾಗು ಶೇ.10 ರಷ್ಟು ನಿರೋಧ ಬಳಕೆಯಾಗುತ್ತದೆ.

    ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾಂಡೋಮ್ ಬಳಕೆಯ ಬಗ್ಗೆ ವಿವಿಧ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿವೆ. ಸೆಕ್ಸ್ ವರ್ಕರ್ ಹಾಗು ಅಸುರಕ್ಷಿತ ಲೈಂಗಿಕ ಕ್ರಿಯೆಯಲ್ಲಿ ತೊಡುಗುವವರಲ್ಲಿ ಕಾಂಡೋಮ್ ಬಳಕೆಯನ್ನು ಹೆಚ್ಚಿಸುವಲ್ಲಿ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ (ನ್ಯಾಕೋ) ಪ್ರಯತ್ನಿಸುತ್ತಿದೆ.

     

  • ಕಾಂಡೋಮ್ ನಂತ್ರ ಈ ಜಾಹೀರಾತಿನಲ್ಲಿ ಕಾಣಿಸಲಿದ್ದಾರೆ ಸನ್ನಿ ಲಿಯೋನ್!

    ಕಾಂಡೋಮ್ ನಂತ್ರ ಈ ಜಾಹೀರಾತಿನಲ್ಲಿ ಕಾಣಿಸಲಿದ್ದಾರೆ ಸನ್ನಿ ಲಿಯೋನ್!

    ಮುಂಬೈ: ನವರಾತ್ರಿ ಕಾಂಡೋಮ್ ಜಾಹೀರಾತು ಬಳಿಕ ಬಾಲಿವುಡ್ ಮಾದಕ ತಾರೆ ಸನ್ನಿ ಲಿಯೋನ್ ತುಪ್ಪದ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವದಕ್ಕಾಗಿ ಸಾಕಷ್ಟು ಕಂಪನಿಗಳು ಸನ್ನಿ ಲಿಯೋನ್ ಗೆ ಆಫರ್‍ಗಳು ನೀಡುತ್ತವೆ. ಆದರೆ ಸನ್ನಿ ಮಾತ್ರ ಜಾಹೀರಾತುಗಳ ಆಯ್ಕೆ ವಿಷಯದಲ್ಲಿ ತುಂಬಾ ಎಚ್ಚರಿಕೆಯಿಂದ ಇರುತ್ತಾರೆ. ತಮಗೆ ಸೂಕ್ತ ಮತ್ತು ಸರಿ ಅನ್ನಿಸುವಂತಹ ಜಾಹೀರಾತುಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಾರೆ.

    ಇತ್ತೀಚಿಗೆ ಸನ್ನಿ ರಾಯಭಾರಿಯಾಗಿದ್ದ ಕಾಂಡೋಮ್ ಜಾಹೀರಾತು ಸಾಕಷ್ಟು ವಿವಾದವನ್ನು ಸೃಷ್ಟಿ ಮಾಡಿತ್ತು. ಕಾಂಡೋಮ್ ಜಾಹೀರಾತಿಗೂ ಮೊದಲು ಸನ್ನಿ ಲಿಯೋನ್ ಕಾರ್, ಕೆಲ ಬಟ್ಟೆ ಉತ್ಪನ್ನಗಳ ರಾಯಭಾರಿಯಾಗಿದ್ದರು.

    2016ರಲ್ಲಿ ದೆಹಲಿ ಸರ್ಕಾರ ಸನ್ನಿ ಅವರಿಗೆ ಪಾನ್ ಮಸಾಲ ಮತ್ತು ಗುಟ್ಕಾ ಸೇರಿದಂತಹ ಉತ್ಪನ್ನಗಳಿಗೆ ರಾಯಭಾರಿ ಆಗಬೇಡಿ ಎಂದು ಕೇಳಿಕೊಂಡಿತ್ತು. ದೆಹಲಿ ಸರ್ಕಾರದ ಕೋರಿಕೆಯಂತೆ ಸನ್ನಿ ಇನ್ನು ಮುಂದೆ ಆ ತರಹದ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ತಿಳಿಸಿದ್ದರು.

    ಸದ್ಯ ಕೇರಳ, ಪ್ರೀಮಿಯರ್ ಫುಸ್ಟಲ್ ಫ್ರಾಂಚಿಸಿ ಕೋಬ್ರಾ ತಂಡದ ರಾಯಭಾರಿಯಾಗಿಯೂ ಮತ್ತು ಸಹ ಮಾಲೀಕತ್ವವನ್ನು ಸನ್ನಿ ಲಿಯೋನ್ ಹೊಂದಿದ್ದಾರೆ.