Tag: Condom

  • ಕೊರೊನಾ ಎಫೆಕ್ಟ್- ಸ್ಯಾನಿಟೈಜರ್‌ಗಿಂತಲೂ ಕಾಂಡೋಮ್‍ಗಳಿಗೆ ಭಾರೀ ಬೇಡಿಕೆ

    ಕೊರೊನಾ ಎಫೆಕ್ಟ್- ಸ್ಯಾನಿಟೈಜರ್‌ಗಿಂತಲೂ ಕಾಂಡೋಮ್‍ಗಳಿಗೆ ಭಾರೀ ಬೇಡಿಕೆ

    – ಮೂರು ತಿಂಗಳು ತಾಯ್ತನ ಮುಂದೂಡಲು ವೈದ್ಯರ ಸಲಹೆ
    – ಕಾಂಡೋಮ್ ಕಂಪನಿಗಳ ಷೇರು ಖರೀದಿಸುತ್ತಿದ್ದಾರೆ ಜನ

    ಲಂಡನ್: ಕೊರೊನಾ ವೈರಸ್ ಪೀಡಿತ ಪ್ರದೇಶಗಳ ಮಳಿಗೆಗಳಲ್ಲಿ ಟಾಯ್ಲೆಟ್ ಪೇಪರ್ ಹಾಗೂ ಹ್ಯಾಂಡ್ ಸ್ಯಾನಿಟೈಜರ್‌ಗಿಂತಲೂ ಕಾಂಡೋಮ್‍ಗಳೇ ಹೆಚ್ಚಾಗಿ ಮಾರಾಟವಾಗುತ್ತಿವೆ. ಚಿಲ್ಲರೆ ವ್ಯಾಪಾರಿಗಳು ಇದ್ದಕ್ಕಿದ್ದಂತೆ ಕಾಂಡೋಮ್ ಕೊರತೆಯನ್ನು ಅನುಭವಿಸುತ್ತಿದ್ದಾರೆ ಎಂದು ಇಂಗ್ಲೆಂಡ್‍ನ ಸ್ಥಳೀಯ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

    ಕೆಲವು ಜನರು ಆಹಾರ ಹಾಗೂ ಸ್ವಚ್ಛತೆಗೆ ಬಳಸುವ ಉತ್ಪನ್ನಗಳನ್ನು ಸಂಗ್ರಹಿಸಲು ಪ್ರಾರಂಭಿಸಿದ್ದಾರೆ. ಆದರೆ ಕೆಲವರು ಕಾಂಡೋಮ್‍ಗಳನ್ನು ಸಂಗ್ರಹಿಸುತ್ತಿದ್ದಾರೆ. ವಾಸ್ತವವಾಗಿ ಅಧ್ಯಯನಗಳ ಪ್ರಕಾರ, ಕೊರೊನಾ ಭೀತಿ ಹೀಗೆ ಮುಂದುವರಿದರೆ ಲೈಂಗಿಕ ಸಂಪರ್ಕ ಕಷ್ಟವಾಗುತ್ತದೆ. ಹೀಗಾಗಿ ಹೆಚ್ಚಿನ ದಂಪತಿ ಕಾಂಡೋಮ್‍ಗಳನ್ನು ಹೆಚ್ಚಾಗಿ ಖರೀದಿಸಿ ಸಂಗ್ರಹಿಸಿಕೊಟ್ಟುಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಮಾಸ್ಕ್ ಕೊರತೆ ನೀಗಿಸಲು ಮುಂದಾದ ಮಹಿಳಾ ಸ್ವಸಹಾಯ ಸಂಘ

    ಮಾಧ್ಯಮವೊಂದರ ಪ್ರಕಾರ, ಚೀನಾದಲ್ಲಿ ಮಾಸ್ಕ್, ವೈದ್ಯಕೀಯ ಸಾಮಗ್ರಿಗಳಂತೆ ಕಾಂಡೋಮ್‍ಗಳು ಕೂಡ ಭಾರೀ ಸಂಖ್ಯೆಯಲ್ಲಿ ಮಾರಟವಾಗುತ್ತಿವೆ. ಜಾಗತಿಗ ಮಾರುಕಟ್ಟೆ ಕುಸಿಯುತ್ತಿರುವ ಸಂದರ್ಭದಲ್ಲಿಯೂ ಕಾಂಡೋಮ್ ಕಂಪನಿಗಳು ಆರ್ಥಿಕವಾಗಿ ಭರ್ಜರಿ ಲಾಭ ಗಳಿಸುತ್ತಿವೆ. ಜನರು ಕಾಂಡೋಮ್ ಕಂಪನಿಗಳ ಷೇರನ್ನು ಹೆಚ್ಚು ಖರೀದಿಸುತ್ತಿದ್ದಾರೆ. ಇದನ್ನೂ ಓದಿ: ಕೊರೊನಾ ಎಫೆಕ್ಟ್ – ರಾಜಾಮೌಳಿ ಆರ್‌ಆರ್‌ಆರ್ ಸಿನಿಮಾದಿಂದ ಆಲಿಯಾ ಔಟ್

    ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಡೇಟಿಂಗ್ ವೇಳೆಯೂ ಪ್ರಮುಖ ಕಾಳಜಿವಹಿಸಬೇಕಾಗುತ್ತದೆ. ಡೇಟಿಂಗ್ ಅಪ್ಲಿಕೇಶನ್‍ಗಳು ಈಗ ಬಳಕೆದಾರರಿಗೆ ಜಾಗೃತಿಯ ಬಗ್ಗೆ ಗಮನಹರಿಸಬೇಕು ಎಂದು ತಿಳಿಸುತ್ತಿವೆ. ಜೊತೆಗೆ ಕೊರೊನಾ ಸೋಂಕು ಎಲ್ಲೆಡೆ ಹರಡುತ್ತಿರುವ ಹಿನ್ನೆಲೆ ಮೂರು ತಿಂಗಳುಗಳ ಕಾಲ ತಾಯ್ತನ ಮುಂದೂಡಿಕೆ ಮಾಡಿಕೊಂಡರೆ ಒಳ್ಳೆಯದು ಎಂದು ಅನೇಕ ವೈದ್ಯರು ಸಲಹೆ ನೀಡಿದ್ದಾರೆ.

    ಇಂಗ್ಲೆಂಡ್‍ನಲ್ಲಿ ಜನಿಸಿದ ನವಜಾತ ಶಿಶುವಿಗೆ ಕೊರೊನಾ ಸೋಂಕು ತಗುಲಿದ ಹಿನ್ನೆಲೆ ವೈದ್ಯರು ಮಹಿಳೆಯರಿಗೆ ತಮ್ಮ ತಾಯ್ತನವನ್ನು ಮುಂದೂಡಿಕೆ ಮಾಡಿಕೊಳ್ಳಲು ಸಲಹೆ ನೀಡುತ್ತಿದ್ದಾರೆ. ಇಂಗ್ಲೆಂಡ್‍ನಲ್ಲಿ ತಾಯಿಗೆ ಸೋಂಕು ಇದ್ದ ಕಾರಣ ಅದು ಮಗುವಿಗೂ ತಗುಲಿತ್ತು. ತಾಯಿಗೆ ಹೆರಿಗೆಯ ಮೊದಲು ಕೊರೊನಾ ಸೋಂಕು ತಟ್ಟಿರುವ ಶಂಕೆ ಹಿನ್ನೆಲೆ ವೈದ್ಯಕೀಯ ಪರೀಕ್ಷೆ ಮಾಡಿಸಲಾಗಿತ್ತು. ಆದರೆ ಅದರ ವರದಿ ತಾಯಿ ಮಗುವಿಗೆ ಜನ್ಮ ಕೊಟ್ಟ ನಂತರ ಬಂದಿತ್ತು. ಹೀಗಾಗಿ ಆಗ ತಾನೆ ಹುಟ್ಟಿದ ಶಿಶುವಿಗೂ ಸೋಂಕು ಹರಡಿತ್ತು. ವಿಶ್ವದಲ್ಲೇ ಅತೀ ಚಿಕ್ಕ ವಯಸ್ಸಿಗೆ ಕೊರೊನಾ ಸೋಂಕು ತಟ್ಟಿದ ಪ್ರಕರಣ ಇದಾಗಿದ್ದು, ಲಂಡನ್‍ನಲ್ಲಿರುವ ಆಸ್ಪತ್ರೆಯಲ್ಲಿ ತಾಯಿ, ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಕೊರೊನಾ ಜೊತೆ ಸೆಲ್ಫಿಗೆ ಮುಂದಾದ ಜನ

    ಈ ಕುರಿತು ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ್ದ ಸ್ತ್ರಿರೋಗ ತಜ್ಞೆ ಡಾ.ಪದ್ಮಿನಿ ಪ್ರಸಾದ್, ತಾಯ್ತನ ಮಹಿಳೆಯರ ಬಾಳಿನ ಪ್ರಮುಖ ಘಟ್ಟ. ಆದರೆ ಸದ್ಯ ಎಲ್ಲೆಡೆ ಕೊರೊನಾ ವೈರಸ್ ಭೀತಿ ಇರುವ ಕಾರಣಕ್ಕೆ ತಾಯ್ತನದ ಪ್ಲಾನ್ ಮಾಡಿದ ದಂಪತಿ ಇನ್ನು ಮೂರು ತಿಂಗಳ ಕಾಲ ಈ ಪ್ಲಾನ್ ಮುಂದೂಡಿಕೆ ಮಾಡಿದರೆ ಉತ್ತಮ ಅಂತ ಪದ್ಮಿನಿ ಅವರು ಸಲಹೆ ನೀಡಿದ್ದಾರೆ. ಗರ್ಭಧಾರಣೆಯಾದರೆ ಆಸ್ಪತ್ರೆಗೆ ಭೇಟಿ ಕೊಡಬೇಕಾಗುತ್ತೆ. ಈ ಸಮಯದಲ್ಲಿ ಸೋಂಕು ತಗುಲುವ ಭೀತಿ ಇರುತ್ತೆ. ಅಲ್ಲದೇ ಗರ್ಭಧಾರಣೆಯ ಸಮಯದಲ್ಲಿ ಮಹಿಳೆಯರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡರೆ ಒಳ್ಳೆಯದು ಎಂದು ಸಲಹೆ ನೀಡಿದ್ದರು.

    ಅಷ್ಟೇ ಅಲ್ಲದೇ ಕೊರೊನಾ ಭೀತಿಯಲ್ಲಿ ರೋಗಿಗಳಿಗೆ ಆಪರೇಷನ್ ಮುಂದೂಡಿಕೆ ಮಾಡಿಕೊಳ್ಳಲು ವೈದ್ಯರು ಸಲಹೆ ನೀಡುತ್ತಿದ್ದಾರೆ. ತೀರಾ ಎಮರ್ಜೆನ್ಸಿ ಅಲ್ಲದ ನಿಗದಿಯಾಗಿರುವ ಆಪರೇಷನ್ ಮುಂದೂಡಿಕೆ ಮಾಡಲು ವೈದ್ಯರು ರೋಗಿಗಳಿಗೆ ಸೂಚಿಸುತ್ತಿದ್ದಾರೆ. ಕೊರೊನಾ ಭೀತಿಯಿಂದ ತಾಯ್ತನದ ಪ್ಲಾನ್ ಮುಂದೂಡಿಕೆ ಮಾಡೋದೋ ಬೇಡ್ವೋ ಅಂತ ಕನ್‍ಫ್ಯೂಷನ್‍ನಲ್ಲಿ ದಂಪತಿಗಳು ವೈದ್ಯರ ಮೊರೆ ಹೋಗುತ್ತಿದ್ದಾರೆ.

  • 13 ಕಾಂಡೋಮ್ ಮೂಲಕ 1.55 ಕೋಟಿ ರೂ. ಡ್ರಗ್ಸ್ ಸಾಗಾಟ- ಮಹಿಳೆ ಅರೆಸ್ಟ್

    13 ಕಾಂಡೋಮ್ ಮೂಲಕ 1.55 ಕೋಟಿ ರೂ. ಡ್ರಗ್ಸ್ ಸಾಗಾಟ- ಮಹಿಳೆ ಅರೆಸ್ಟ್

    – 11 ಕಾಂಡೋಮ್‍ಗಳನ್ನು ನುಂಗಿದ್ದ ಚಾಲಾಕಿ
    – 2 ಕಾಂಡೋಮ್ ಗುಪ್ತಾಂಗದಲ್ಲಿ ಸಾಗಾಟ

    ಮುಂಬೈ: ಮಹಿಳೆ ಕಾಂಡೋಮ್ ಮೂಲಕ ಗುಪ್ತಾಂಗದಲ್ಲಿ ಸುಮಾರು 1.55 ಕೋಟಿ ರೂ. ಮೌಲ್ಯದ 312 ಗ್ರಾಂ. ಡ್ರಗ್ಸ್ ಸಾಗಿಸುತ್ತಿದ್ದ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ.

    ಮುಂಬೈ ವಿಮಾನ ನಿಲ್ದಾಣದಲ್ಲಿ ಮಹಿಳೆ ಡೈರೆಕ್ಟರೇಟ್ ಆಫ್ ರೆವಿನ್ಯೂ ಇಂಟಲಿಜೆನ್ಸ್(ಡಿಆರ್‍ಐ) ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದು, ಮಾಹಿಳೆಯನ್ನು ರಿಬೆರಾ ಅನೆಜ್ ಡೆಲಿಸಿಯಾ(55) ಎಂದು ಗುರುತಿಸಲಾಗಿದೆ. ಮಹಿಳೆ ಬೊಲಿವಿಯಾ ಮೂಲದವಳಾಗಿದ್ದಾಳೆ. ಈಕೆ ಬ್ರೆಜಿಲ್ ನ ಸಾವೊ ಪಾಲೊದಿಂದ ಇಥಿಯೋಪಿಯಾದ ಅಡಿಸ್ ಬಾಬಾಗೆ ತೆರಳುತ್ತಿದ್ದಳು.

    ವರದಿಯ ಪ್ರಕಾರ ಮಹಿಳೆ ತನ್ನ ಗುಪ್ತಾಂಗದಲ್ಲಿ 2 ಕಾಂಡೋಮ್‍ಗಳು ಹಾಗೂ ದೇಹದಲ್ಲಿ 11 ಕಾಂಡೋಮ್‍ಗಳ ಮೂಲಕ ಸುಮಾರು 312 ಗ್ರಾಂ. ಹೈ ಕ್ವಾಲಿಟಿಯ ಕೋಕೇನ್ ಸಾಗಿಸುತ್ತಿದ್ದಳು. ಸೆಮಿಲಿಕ್ವಿಡ್ ರೂಪದಲ್ಲಿ ಡ್ರಗ್ಸ್ ತುಂಬಿದ 11 ಕಾಂಡೋಮ್‍ಗಳನ್ನು ನುಂಗಿ, ಇನ್ನೂ ಎರಡನ್ನು ತನ್ನ ಗುಪ್ತಾಂಗದಲ್ಲಿ ಸಾಗಿಸುತ್ತಿದ್ದಳು. ಇದೀಗ ಮಹಿಳೆಯಿಂದ ಯಾರು ಡ್ರಗ್ಸ್ ಪಡೆಯುತ್ತಿದ್ದರು ಎಂಬ ಜಾಲವನ್ನು ಪತ್ತೆ ಹಚ್ಚಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ಮಹಿಳೆಯ ಗುಪ್ತಾಂಗದಲ್ಲಿ 8.31 ಕೋಟಿ ಮೌಲ್ಯದ ಕೊಕೇನ್ ಪತ್ತೆ

    ಮಹಿಳೆ ಡ್ರಗ್ಸ್ ಸಾಗಿಸುತ್ತಿರುವ ಕುರಿತು ಇಂಟಲಿಜೆನ್ಸ್ ಅಧಿಕಾರಿಗಳು ಮಾಹಿತಿ ನೀಡಿದ ನಂತರ ಆಕೆಯ ಪಾಸ್‍ಪೋರ್ಟ್ ನಂಬರ್ ಆಧರಿಸಿ ಪತ್ತೆ ಹಚ್ಚಲಾಗಿದೆ. ಸೋಮವಾರ ಬೆಳಗ್ಗೆ ಮಹಿಳೆಯನ್ನು ವಶಕ್ಕೆ ಪಡೆಯಲಾಗಿದೆ. ನಂತರ ವಿಚಾರಣೆ ನಡೆಸಲಾಗಿದ್ದು, ಮಹಿಳೆ ಬಾಯ್ಬಿಟ್ಟಿಲ್ಲ.

    ನಂತರ ತನಿಖಾಧಿಕಾರಿಗಳು ನ್ಯಾಯಾಲಯದಿಂದ ಅನುಮತಿ ಪಡೆದಿದ್ದು, ಗುಪ್ತಚರ ಅಧಿಕಾರಿಗಳು ಖಚಿತ ಮಾಹಿತಿ ನೀಡಿದ್ದರಿಂದ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಸರ್ ಜೆಜೆ ಆಸ್ಪತ್ರೆಗೆ ಮಹಿಳೆಯನ್ನು ಕರೆದೊಯ್ದಿದ್ದು, ಸ್ಕ್ಯಾನಿಂಗ್ ಸೇರಿದಂತೆ ಇತರೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಈ ವೇಳೆ ಮಹಿಳೆಯ ಹೊಟ್ಟೆಯೊಳಗೆ ವಸ್ತುಗಳು ಕಂಡಿರುವುದು ಪತ್ತೆಯಾಗಿದೆ. ನಂತರ ಮಹಿಳೆ ಕಾಂಡೋಮ್ ಮೂಲಕ ಕೋಕೇನ್ ಇಟ್ಟುಕೊಂಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಕೊಕೇನ್ ತುಂಬಿದ 13 ಕಾಂಡೋಮ್‍ಗಳನ್ನು ತನ್ನ ದೇಹದೊಳಗೆ ಇಟ್ಟುಕೊಂಡಿರುವುದಾಗಿ ತಿಳಿಸಿದ್ದಾಳೆ. ನಂತರ ಆಕೆಯ ದೇಹದಿಂದ ಕಾಂಡೋಮ್‍ಗಳನ್ನು ಹೊರಗೆ ತೆಗೆಯಲಾಗಿದೆ.

  • ಕಾಂಡೋಮ್ ಬಳಸದೇ ಸೆಕ್ಸ್- ರೇಪ್ ಕೇಸ್ ದಾಖಲಿಸಿದ ಯುವತಿ

    ಕಾಂಡೋಮ್ ಬಳಸದೇ ಸೆಕ್ಸ್- ರೇಪ್ ಕೇಸ್ ದಾಖಲಿಸಿದ ಯುವತಿ

    ಲಂಡನ್: ವೈದ್ಯನೊಬ್ಬ ಸೆಕ್ಸ್ ಮಾಡುವ ವೇಳೆ ಕಾಂಡೋಮ್ ಬಳಸದಿದ್ದಕ್ಕೆ ಯುವತಿ ತನ್ನ ಮೇಲೆ ಲೈಂಗಿಕವಾಗಿ ದೌರ್ಜನ್ಯ ಎಸಗಿದ್ದಾನೆ ಎಂದು ದೂರು ದಾಖಲಿಸಿದ್ದಾಳೆ.

    ಮ್ಯಾಥ್ಯೂ ಸೆವೆಲ್ ಸೆಕ್ಸ್ ಮಾಡುವಾಗ ಕಾಂಡೋಮ್ ಬಳಸದೆ ಈಗ ಪೊಲೀಸರ ಅಥಿತಿಯಾಗಿದ್ದಾನೆ. ಸೆವೆಲ್ ಕಾಂಡೋಮ್ ಬಳಸಲಿಲ್ಲ ಮತ್ತು ಅಸುರಕ್ಷಿತ ಲೈಂಗಿಕ ಕ್ರಿಯೆಗೆ ತಾನು ಎಂದಿಗೂ ಒಪ್ಪುವುದಿಲ್ಲ ಎಂದು ಯುವತಿ ಆರೋಪಿಸಿದ್ದಾಳೆ. ಹೀಗಾಗಿ ಅತ್ಯಾಚಾರದ ಆರೋಪದ ಮೇರೆಗೆ ಸೆವೆಲ್ ನನ್ನು ಪೊಲೀಸರು ಬಂಧಿಸಿದ್ದಾರೆ.

    23 ವರ್ಷ ಯುವತಿಯನ್ನು ಆರೋಪಿ ಸೆವೆಲ್ ಡೇಟಿಂಗ್ ಆ್ಯಪ್ ಟಿಂಡರ್ ಮೂಲಕ ಭೇಟಿಯಾಗಿದ್ದನು. ಅಲ್ಲಿ ಸೆವೆಲ್ ತನ್ನ ಪ್ರೊಫೈಲ್‍ನಲ್ಲಿ ತನಗೆ 27 ವರ್ಷ ಎಂದು ಹೇಳಿಕೊಂಡಿದ್ದನು. ಆದರೆ ವೈದ್ಯನಿಗೆ 36 ವರ್ಷ ವಯಸ್ಸಾಗಿತ್ತು.

    ಆರೋಪಿ ವೈದ್ಯ ಸುಳ್ಳು ಹೇಳಿ ಮಿಡಲ್ಸ್ ಬರೋದಲ್ಲಿನ ಬಾರಿನಲ್ಲಿ ಯುವತಿಯನ್ನು ಭೇಟಿಯಾಗಿದ್ದನು. ಅಲ್ಲಿ ತನ್ನ ವಯಸ್ಸಿನ ಬಗ್ಗೆ ಸುಳ್ಳು ಹೇಳಿದ್ದಾಗಿ ಒಪ್ಪಿಕೊಂಡಿದ್ದನು. ಈ ವೇಳೆ ಸೆವೆಲ್ ಯುವತಿಯನ್ನು ತನ್ನ ಮನೆಗೆ ಬರುವಂತೆ ಕರೆದಿದ್ದನು.

    ಮನೆಗೆ ಹೋದ ಬಳಿಕ ಯುವತಿ ಒಪ್ಪಿದ ಮೇಲೆ ಆರೋಪಿ ಸೆವೆಲ್ ಸೆಕ್ಸ್ ಮಾಡಲು ಮುಂದಾಗಿದ್ದಾನೆ. ಆದರೆ ಈ ವೇಳೆ ಸೆವೆಲ್ ಯುವತಿಗೆ ಗೊತ್ತಿಲ್ಲದಂತೆ ಕಾಂಡೋಮ್ ಅನ್ನು ತೆಗೆದು ಹಾಕಿದ್ದಾನೆ. ಆದರೆ ಯುವತಿ ಸೆವೆಲ್ ಕಾಂಡೋಮ್ ಬಳಸಿದ್ದಾನೆ ಎಂದುಕೊಂಡಿದ್ದಳು. ನಂತರ ಸೆವೆಲ್ ಕಾಂಡೋಮ್ ಬಳಸಿಲ್ಲೆಂದು ತಿಳಿಯುತ್ತಿದ್ದಂತೆ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ.

    ಯುವತಿಯ ದೂರಿನ ಆಧಾರದ ಮೇರೆಗೆ ಪೊಲೀಸರು ಆತನ ವಿರುದ್ಧ ಪ್ರರಕರಣ ದಾಖಲಿಸಿಕೊಂಡು ಬಂಧಿಸಿದ್ದರು. ಆರೋಪಿ ಸೆವೆಲ್ ಕೂಡ ತಾನು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಕಾಂಡೋಮ್ ಕಂಪನಿ ವಿರುದ್ಧ ಸಮರ ಆರಂಭಿಸಿದ ಗ್ರಾಹಕ

    ಕಾಂಡೋಮ್ ಕಂಪನಿ ವಿರುದ್ಧ ಸಮರ ಆರಂಭಿಸಿದ ಗ್ರಾಹಕ

    – ಗ್ರಾಹಕನ ಆರೋಪವನ್ನು ತಿರಸ್ಕರಿಸಿದ ಕಂಪನಿ
    – ಕಾಂಡೋಮ್ ಧರಿಸಿದ್ರು ಪತ್ನಿ ಗರ್ಭಿಣಿ

    ಬೀಜಿಂಗ್: ಚೀನಾದ ವ್ಯಕ್ತಿಯೊಬ್ಬ ಡುರೆಕ್ಷ್ ಕಾಂಡೋಮ್ ಕಂಪನಿ ವಿರುದ್ಧ ಗ್ರಾಹಕ ರಕ್ಷಣಾ ಪ್ರಾಧಿಕಾರದ ಮೊರೆ ಹೋಗಿದ್ದಾನೆ. ಡುರೆಕ್ಷ್ ಕಂಪನಿಯ ಕಾಂಡೋಮ್ ಧರಿಸಿ ಲೈಂಗಿಕ ಕ್ರಿಯೆ ನಡೆಸಿದ್ರೂ ನನ್ನ ಪತ್ನಿ ಗರ್ಭಿಣಿಯಾಗಿದ್ದಾಳೆಂದು ವ್ಯಕ್ತಿ ಆರೋಪಿಸಿದ್ದಾನೆ.

    ದೂರು ಸಲ್ಲಿಸಿದ ವ್ಯಕ್ತಿಯ ಹೆಸರು ವ್ಯಾಂಗ್ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಆದ್ರೆ ದೂರುದಾರನ ಮಾಹಿತಿಯನ್ನು ಅಧಿಕಾರಿಗಳು ಬಿಟ್ಟುಕೊಟ್ಟಿಲ್ಲ. ಗ್ರಾಹಕ ರಕ್ಷಣಾ ಪ್ರಾಧಿಕಾರದಲ್ಲಿ ಆರೋಪವನ್ನು ಸಾಬೀತು ಮಾಡುವಲ್ಲಿ ವ್ಯಾಂಗ್ ವಿಫಲನಾಗಿದ್ದು, ಕಾನೂನಿನ ಹೋರಾಟ ನಡೆಸಲು ಮುಂದಾಗಿದ್ದಾನೆ.

    ನನಗೆ ಈಗಾಗಲೇ ಎರಡು ಮಕ್ಕಳಿದ್ದು, ಮೂರನೇ ಮಗು ನಮಗೆ ಬೇಡವಾಗಿತ್ತು. ಕಾಂಡೋಮ್ ಮೇಲೆ ನಂಬಿಕೆಯಿಟ್ಟು ಅದನ್ನು ಧರಿಸಿಯೇ ಪತ್ನಿ ಜೊತೆ ಲೈಂಗಿಕ ಕ್ರಿಯೆ ನಡೆಸಿದ್ದೆ. ಸೆಕ್ಸ್ ಬಳಿಕ ಕಾಂಡೋಮ್ ನಲ್ಲಿ ರಂಧ್ರವಿರೋದು ನನ್ನ ಗಮನಕ್ಕೆ ಬಂದಾಗ ಶಾಕ್ ಆಗಿತ್ತು. ಕೊನೆಗೆ ಪತ್ನಿಗೆ ಗರ್ಭನಿರೋಧಕ ಮಾತ್ರೆಗಳನ್ನು ತಂದು ಕೊಡುವ ಅನಿವಾರ್ಯ ಎದುರಾಯ್ತು. ಮರುದಿನ ಮತ್ತೊಂದು ಕಾಂಡೋಮ್ ನಲ್ಲಿಯೂ ರಂಧ್ರವಿದ್ದರಿಂದ ಪತ್ನಿ ಗರ್ಭಿಣಿಯಾದಳು ಎಂದು ವ್ಯಾಂಗ್ ಹೇಳಿದ್ದಾನೆ.

    ಪತ್ನಿ ಮೂರನೇ ಮಗುವಿಗೆ ಜನ್ಮ ನೀಡುವ ಹಾಗಿರಲಿಲ್ಲ. ಅನಾರೋಗ್ಯದಿಂದಾಗಿ ಪತ್ನಿಗೆ ಗರ್ಭಪಾತ ಮಾಡಿಸಲಾಯ್ತು. ಇದರಿಂದಾಗಿ ಪತ್ನಿ ಮಾನಸಿಕ ಮತ್ತು ದೈಹಿಕವಾಗಿ ಕುಗ್ಗಿದ್ದಾಳೆ. ಕಳಪೆ ಕಾಂಡೋಮ್ ನಿಂದಾಗಿ ನನ್ನ ಪತ್ನಿ ಈ ತೊಂದರೆ ಅನುಭವಿಸುತ್ತಿದ್ದಾಳೆ ಎಂದು ವ್ಯಾಂಗ್ ಆರೋಪಿಸಿದ್ದಾನೆ.

    ಈ ಸಂಬಂಧ ವ್ಯಾಂಗ್ ತಾನು ಖರೀದಿಸಿದ ಕಾಂಡೋಮ್ ಅಂಗಡಿಗೆ ತೆರಳಿ ಅಲ್ಲಿಯ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾನೆ. ಆದ್ರೆ ಮಾರಾಟ ಮಾಡಿದ ವ್ಯಕ್ತಿ ಇದರಲ್ಲಿ ನಮ್ಮದು ಯಾವುದೇ ತಪ್ಪಿಲ್ಲ. ಬೇಕಾದ್ರೆ ನೀವು ಖರೀದಿಸಿದ ಕಾಂಡೋಮ್ ಬೆಲೆಯನ್ನು ಹಿಂದಿರುಗಿಸುತ್ತವೆ ಎಂದು ಹೇಳಿದ್ದಾರೆ.

    ಕೊನೆಗೆ ವ್ಯಾಂಗ್ ನ್ಯಾಯ ಕೋರಿ ಗ್ರಾಹಕ ರಕ್ಷಣಾ ಪ್ರಾಧಿಕಾರದ ಮೊರೆ ಹೋಗಿದ್ದಾನೆ. ಪ್ರಾಧಿಕಾರ ನೀವು ಕಾಂಡೋಮ್ ಹೇಗೆ ಬಳಸಿದ್ದೀರಿ ಎಂಬುದನ್ನ ವಿವರಿಸಬೇಕೆಂದಾಗ ವ್ಯಾಂಗ್ ಸಂಕಷ್ಟಕ್ಕೆ ಸಿಲುಕಿದ್ದಾನೆ. ಒಂದು ವೇಳೆ ನಿಮ್ಮಿಂದ ವಿವರಣೆ ನೀಡಲು ಸಾಧ್ಯವಾಗದಿದ್ದಾಗ ನೀವು ಬಳಸಿದ ಕಾಂಡೋಮ್ ಬ್ಯಾಚ್ ನ ಕೆಲವು ಸ್ಯಾಂಪಲ್ ಗಳನ್ನು ಪರೀಕ್ಷಿಸಿದ್ರೆ ಸತ್ಯ ತಿಳಿಯಲಿದೆ ಎಂದು ಪ್ರಾಧಿಕಾರ ಹೇಳಿದೆ.

    ವ್ಯಾಂಗ್ ನವೆಂಬರ್ 2018ರ ಬ್ಯಾಚ್ ನ ಕಾಂಡೋಮ್ ಖರೀದಿಸಿರೋದು ಪ್ಯಾಕೆಟ್ ಮೇಲಿದೆ. ಆದ್ರೆ ಕಾಂಡೋಮ್ ಕಂಪನಿ ನಾವು ಈಗಾಗಲೇ 2018 ನವೆಂಬರ್ ಬ್ಯಾಚಿನ ಉತ್ಪನ್ನಗಳನ್ನು ಮಾರಾಟ ಮಾಡಿದ್ದೇವೆ ಎಂದು ದಾಖಲಾತಿ ನೀಡಿದೆ. ಇದರಿಂದಾಗಿ ವ್ಯಾಂಗ್ ಆರೋಪ ಸಾಬೀತು ಮಾಡಲು ವಿಫಲವಾಗಿದ್ದಾನೆ. ಆದ್ರೆ ವ್ಯಾಂಗ್ ಪತ್ನಿ ಅನುಭವಿಸಿದ ಕಷ್ಟವನ್ನು ಭಾವನಾತ್ಮಕವಾಗಿ ವಿವರಿಸಿ ನ್ಯಾಯ ಕೇಳುತ್ತಿದ್ದಾರೆ. ಇದೀಗ ವ್ಯಾಂಗ್ ಕಂಪನಿ ವಿರುದ್ಧ ಕಾನೂನಿನ ಹೋರಾಟ ನಡೆಸಲು ಮುಂದಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳಲ್ಲಿ ಪ್ರಕಟವಾಗಿದೆ.

  • ಟ್ರಾಫಿಕ್ ದಂಡದಿಂದ ತಪ್ಪಿಸಿಕೊಳ್ಳಲು ಪ್ರಥಮ ಚಿಕೆತ್ಸೆ ಪೆಟ್ಟಿಗೆಯಲ್ಲಿ ಕಾಂಡೋಮ್ ಇಟ್ಟ ಕ್ಯಾಬ್ ಚಾಲಕರು!

    ಟ್ರಾಫಿಕ್ ದಂಡದಿಂದ ತಪ್ಪಿಸಿಕೊಳ್ಳಲು ಪ್ರಥಮ ಚಿಕೆತ್ಸೆ ಪೆಟ್ಟಿಗೆಯಲ್ಲಿ ಕಾಂಡೋಮ್ ಇಟ್ಟ ಕ್ಯಾಬ್ ಚಾಲಕರು!

    ನವದೆಹಲಿ: ಹೊಸ ಮೋಟಾರು ಕಾಯ್ದೆ ಬಂದ ನಂತರ ದಂಡದಿಂದ ತಪ್ಪಿಸಿಕೊಳ್ಳಲು ರಾಷ್ಟ್ರ ರಾಜಧಾನಿಯಲ್ಲಿ ಕ್ಯಾಬ್ ಚಾಲಕರು ಪ್ರಥಮ ಚಿಕೆತ್ಸೆ ಪೆಟ್ಟಿಗೆಯಲ್ಲಿ ಕಾಂಡೋಮ್ ಇಟ್ಟುಕೊಂಡು ಓಡಾಡುತ್ತಿದ್ದಾರೆ.

    ಹೌದು, ಕೇಂದ್ರ ಸರ್ಕಾರದ ಹೊಸ ಸಂಚಾರಿ ನಿಯಮದ ಬಗ್ಗೆ ವಿಧಿಸಲಾಗಿರುವ ಭಾರೀ ದಂಡವನ್ನು ತಿಳಿದುಕೊಂಡು ಎಲ್ಲ ದಾಖಲೆಗಳನ್ನು ಇಟ್ಟುಕೊಂಡು ಚಾಲಕರು ಕೆಲಸಕ್ಕೆ ಹಾಜರಾಗುತ್ತಿದ್ದಾರೆ. ದಂಡದ ನಿಯಮಗಳ ಬಗ್ಗೆ ಸಾಮಾಜಿಕ ಜಾಲತಾಣ ಮತ್ತು ವಾಟ್ಸಪ್ ನಲ್ಲಿ ನಾನಾ ಸಂದೇಶಗಳು ಹರಿದಾಡುತ್ತಿದ್ದು, ಸಂಚಾರಿ ನಿಯಮದ ಪ್ರಕಾರ ಕ್ಯಾಬ್ ಡ್ರೈವರ್‍ ಗಳು ಪ್ರಥಮ ಚಿಕೆತ್ಸೆ ಪೆಟ್ಟಿಗೆಯಲ್ಲಿ ಕಾಂಡೋಮ್ ಇಟ್ಟಿಕೊಳ್ಳಬೇಕು ಇಲ್ಲವಾದರೆ ಭಾರೀ ದಂಡ ಕಟ್ಟಬೇಕಾಗುತ್ತದೆ ಎಂಬ ಗಾಳಿ ಸುದ್ದಿ ಹಬ್ಬಿದೆ. ಇದನ್ನೇ ನಂಬಿದ ಕ್ಯಾಬ್ ಚಾಲಕರು ಕಾರಿನಲ್ಲಿ ಕಾಂಡೋಮ್ ಇಟ್ಟುಕೊಂಡು ಕಾರು ಚಾಲನೆ ಮಾಡುತ್ತಿದ್ದಾರೆ.

    ದೆಹಲಿ ಕಾರು ಚಾಲಕ ರಮೇಶ್ ಪಾಲ್ ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಈ ವಿಚಾರದ ಬಗ್ಗೆ ಬಹಳ ಗೊಂದಲವಿದೆ. ಕಾರಿನಲ್ಲಿ ಕಡ್ಡಾಯವಾಗಿ ಕಾಂಡೋಮ್ ಇಟ್ಟಿರಬೇಕು ಎಂಬ ನಿಯಮದ ಬಗ್ಗೆ ಯಾರಿಗೂ ಸರಿಯಾಗಿ ಗೊತ್ತಿಲ್ಲ. ಆದರೆ ಇತರ ಕ್ಯಾಬ್ ಚಾಲಕರು ಪ್ರಥಮ ಚಿಕೆತ್ಸೆ ಪೆಟ್ಟಿಗೆಯಲ್ಲಿ ಕಾಂಡೋಮ್ ಇಡಬೇಕು ಇಲ್ಲವಾದರೆ ದಂಡ ಹಾಕುತ್ತಾರೆ ಎಂದು ಹೇಳಿದರು. ಅದಕ್ಕಾಗಿಯೇ ನಾನು ಇಟ್ಟುಕೊಂಡಿದ್ದೇನೆ ಎಂದು ಹೇಳಿದ್ದಾರೆ.

    ಕಾಂಡೋಮ್ ಇಡುವ ವಿಚಾರದಲ್ಲಿ ಬೇರೆಯದೇ ಕಾರಣ ಹೇಳುವ ಕೆಲ ಕಾರು ಚಾಲಕರು, ನಾವು ಕಾಂಡೋಮ್ ಇಡುವುದು ಪೊಲೀಸರು ದಂಡ ವಿಧಿಸುತ್ತಾರೆ ಎಂದು ಅಲ್ಲ. ಕಾಂಡೋಮ್ ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಬಳಸಿಕೊಳ್ಳಲು ಇಟ್ಟಿಕೊಂಡಿರುತ್ತೇವೆ. ಏನಾದರೂ ಅಪಘಾತವಾದರೆ ಮೂಳೆ ಮುರಿದರೆ ಆ ಜಾಗಕ್ಕೆ ಕಾಂಡೋಮ್‍ನನ್ನು ಕಟ್ಟಿ ರಕ್ತಸ್ರಾವವನ್ನು ತಡೆಯಬಹುದು ಎಂದು ಹೇಳಿದ್ದಾರೆ.

    ಎಲ್ಲಾ ಸಾರ್ವಜನಿಕ ಸೇವಾ ವಾಹನಗಳಲ್ಲಿ ಎಲ್ಲಾ ಸಮಯದಲ್ಲೂ ಮೂರು ಕಾಂಡೋಮ್‍ಗಳನ್ನು ಪ್ರಥಮ ಚಿಕೆತ್ಸೆ ಪೆಟ್ಟಿಗೆಯಲ್ಲಿ ಇಟ್ಟುಕೊಳ್ಳುವುದು ಕಡ್ಡಾಯ. ಏಕೆಂದರೆ ಒಬ್ಬ ವ್ಯಕ್ತಿಗೆ ಗಾಯವಾಗಿ ರಕ್ತಸ್ರಾವವಾದರೆ ರಕ್ತ ಬಾರದಂತೆ ಕಟ್ಟಲು ಕಾಂಡೋಮ್ ಉಪಯೋಗಕ್ಕೆ ಬರುತ್ತದೆ. ಅದೇ ರೀತಿ ಮೂಳೆ ಮುರಿದು ಹೋದರೆ ಅವರು ಆಸ್ಪತ್ರೆ ತಲುಪುವವರೆಗೆ ಆ ಪ್ರದೇಶದ ಸುತ್ತಲೂ ಕಾಂಡೋಮ್ ಅನ್ನು ಕಟ್ಟಬಹುದು. ಈ ಎಲ್ಲಾ ಕಾರಣದಿಂದ ಕಾಂಡೋಮ್ ಇಟ್ಟುಕೊಳ್ಳುವುದು ಒಳ್ಳೆಯದು ಎಂದು ದೆಹಲಿಯ ಸರ್ವೋದಯ ಚಾಲಕ ಸಂಘದ ಅಧ್ಯಕ್ಷ ಕಮಲ್ಜೀತ್ ಗಿಲ್ ಹೇಳಿದ್ದಾರೆ.

    ಈ ವಿಚಾರದ ಬಗ್ಗೆ ದೆಹಲಿ ಪೊಲೀಸ್ ಅಧಿಕಾರಿಗಳನ್ನು ಕೇಳಿದರೆ, ಕಾರಿನಲ್ಲಿ ಕಾಂಡೋಮ್ ಇಟ್ಟುಕೊಳ್ಳಬೇಕು ಎಂಬ ಯಾವುದೇ ನಿಯಮವಿಲ್ಲ. ನಾವು ತಪಾಸಣಾ ಸಮಯದಲ್ಲಿ ಇದರ ಬಗ್ಗೆ ಕೇಳುವುದು ಇಲ್ಲ. ಆದರೆ ಕೆಲ ಎನ್‍ಜಿಒ ಸಂಸ್ಥೆಗಳು ಸುರಕ್ಷಿತ ಲೈಂಗಿಕತೆಯ ಬಗ್ಗೆ ಜಾಗೃತಿ ಮೂಡಿಸುವಾಗ ಚಾಲಕರು ಕಾರಿನಲ್ಲಿ ಕಾಂಡೋಮ್ ಇಟ್ಟುಕೊಂಡಿರಬೇಕು ಎಂದು ಹೇಳುತ್ತಾರೆ. ಈ ಸುದ್ದಿಯೇ ಗಾಳಿ ಸುದ್ದಿಯಾಗಿ ಹಬ್ಬಿರಬಹುದು ಎಂದು ಹೇಳಿದ್ದಾರೆ.

  • ಕ್ಯಾಲಿಫೋರ್ನಿಯಾದ ಶಾಲೆಗಳಲ್ಲಿ ಕಾಂಡೋಮ್ ರೇಸ್-ಬೀದಿಗಿಳಿದು ಪೋಷಕರ ಪ್ರತಿಭಟನೆ

    ಕ್ಯಾಲಿಫೋರ್ನಿಯಾದ ಶಾಲೆಗಳಲ್ಲಿ ಕಾಂಡೋಮ್ ರೇಸ್-ಬೀದಿಗಿಳಿದು ಪೋಷಕರ ಪ್ರತಿಭಟನೆ

    ಸ್ಯಾಕ್ರಮೆಂಟೋ : ಶಾಲೆಗಳಲ್ಲಿ ಮಕ್ಕಳಿಗೆ ಎಲ್ಲ ರೀತಿಯ ಶಿಕ್ಷಣ ನೀಡುತ್ತಾರೆ. ಪಠ್ಯದ ಜೊತೆಗೆ ಆಟಗಳನ್ನು ಶಾಲೆಗಳಲ್ಲಿ ಹಮ್ಮಿಕೊಳ್ಳಲಾಗುತ್ತದೆ. ಕ್ಯಾಲಿಫೋರ್ನಿಯಾದ ಶಾಲೆಗಳಲ್ಲಿ ಕಾಂಡೋಮ್ ರೇಸ್ ನಡೆಸಲು ಅಲ್ಲಿಯ ಶಿಕ್ಷಣ ಮಂಡಳಿ ಆದೇಶಿಸಿದೆ. ಶಿಕ್ಷಣ ಮಂಡಳಿ ತನ್ನ ಆದೇಶವನ್ನು ಹಿಂಪಡೆಯಬೇಕೆಂದು ಪೋಷಕರು ಪ್ರತಿಭಟನೆ ನಡೆಸಿದ್ದಾರೆ.

    ಏನಿದು ಕಾಂಡೋಮ್ ರೇಸ್?
    ಶಾಲೆಗಳಲ್ಲಿ ಸುಮಾರು 10 ರಿಂದ 12 ವಯಸ್ಸಿನ ವಿದ್ಯಾರ್ಥಿನಿಯರು ತನ್ನ ಎಲ್ಲ ಸಹಪಾಠಿಗಳ (ಹುಡುಗರು ಸೇರಿದಂತೆ) ಮುಂದೆ ಕಾಂಡೋಮ್ ಬಳಕೆಯನ್ನು ತೋರಿಸಬೇಕು. ಆಟಿಕೆಯ ವಸ್ತುವಿಗೆ ಕಾಂಡೋಮ್ ಹಾಕುವ ಮೂಲಕ ಎಲ್ಲರಿಗೆ ಬಳಕೆಯ ವಿಧಾನದ ಬಗ್ಗೆ ತಿಳಿಸುವುದು.

    ಈ ಕುರಿತು ಪ್ರತಿಕ್ರಿಯಿಸಿರುವ ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ರೆಬೆಚಾ ಫ್ರೀಡ್ರಿಚ್, ಇದೊಂದು ಶಾಕಿಂಗ್ ನಿರ್ಧಾರವಾಗಿದ್ದು, 10ರಿಂದ 12 ವರ್ಷದ ವಿದ್ಯಾರ್ಥಿನಿಯರು ಎಲ್ಲರ ಮುಂದೆ ಆಟಕೆಗೆ ಕಾಂಡೋಮ್ ತೊಡಿಸುವ ವಿಧಾನ ಶಾಲೆಗಳಲ್ಲಿ ಜಾರಿಗೆ ತಂದಿರೋದು ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

    ಸಾರ್ವಜನಿಕವಾಗಿ ಲೈಂಗಿಕ ಶಿಕ್ಷಣದ ಕುರಿತು ತುಂಬಾ ಎಚ್ಚರಿಕೆಯಿಂದ ಮಾತನಾಡುತ್ತೇನೆ. ನನ್ನ ಮಾತುಗಳಿಂದ ಯಾರು ಮುಜುಗರಕ್ಕೆ ಒಳಗಾಬಾರದೆಂಬವುದು ನನ್ನ ನಿಲುವು. ಶಾಲೆಯ ಕೊಠಡಿಯಲ್ಲಿ ಹುಡುಗರ ಮುಂದೆ ವಿದ್ಯಾರ್ಥಿನಿಯರು ಕಾಂಡೋಮ್ ಬಳಕೆಯ ಬಗ್ಗೆ ಮಾತನಾಡುವುದು ಅಪಾಯಕಾರಿ. ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕವಾಗಿ ಲೈಂಗಿಕ ಶಿಕ್ಷಣ ನೀಡಬೇಕೆಂದು ಪ್ರೀಡ್ರಿಚ್ ಸ್ಥಳೀಯ ಶಿಕ್ಷಣ ಮಂಡಳಿಗೆ ಸಲಹೆ ನೀಡಿದ್ದಾರೆ.

    ಶಿಕ್ಷಣ ಮಂಡಳಿ ಮೇ ನಲ್ಲಿ ಈ ಆದೇಶವನ್ನು ಹೊರಡಿಸಿದೆ. ಶಿಕ್ಷಣ ಮಂಡಳಿ ಕೂಡಲೇ ತನ್ನ ನಿರ್ಧಾರವನ್ನು ಹಿಂಪಡೆಯಬೇಕೆಂದು ಕ್ಯಾಲಿಫೋರ್ನಿಯಾದೆಲ್ಲಡೆ ಪೋಷಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಪೋಷಕರ ಪ್ರತಿಭಟನೆಗೆ ಹೋರಾಟಗಾರ್ತಿ ಪ್ರೀಡ್ರಿಚ್ ಬೆಂಬಲ ನೀಡಿದ್ದಾರೆ.

  • ಸೆಕ್ಸ್ ವೇಳೆ ಕಾಂಡೋಮ್ ತೆಗೆದಿದ್ದಕ್ಕೆ 12 ವರ್ಷ ಜೈಲು ಶಿಕ್ಷೆ!

    ಸೆಕ್ಸ್ ವೇಳೆ ಕಾಂಡೋಮ್ ತೆಗೆದಿದ್ದಕ್ಕೆ 12 ವರ್ಷ ಜೈಲು ಶಿಕ್ಷೆ!

    ಲಂಡನ್: ವೇಶ್ಯೆಯ ಜೊತೆ ಲೈಂಗಿಕ ಕ್ರಿಯೆ ನಡೆಸುವ ವೇಳೆ ಕಾಂಡೋಮ್ ತೆಗೆದು ಹಾಕಿದ್ದಕ್ಕೆ ಇಂಗ್ಲೆಂಡಿನ ಬೊನ್ರ್ಮೌತ್ ಕೋರ್ಟ್ ವ್ಯಕ್ತಿಯೊಬ್ಬನಿಗೆ 12 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ.

    ವ್ಯಕ್ತಿಯನ್ನು 35 ವರ್ಷದ ಲೀ ಹಾಗ್ಬೆನ್ ಎಂದು ಗುರುತಿಸಲಾಗಿದೆ. ಮಹಿಳೆ ಕಾಂಡೋಮ್ ಬಳಸುವಂತೆ ವ್ಯಕ್ತಿಗೆ ಸೂಚಿಸಿದ್ದರು. ಆಕೆಯ ಮಾತನ್ನು ನಿರ್ಲಕ್ಷಿಸಿ ಮಹಿಳೆಯ ಜೊತೆ ಆತ ಹೋಟೆಲ್ ರೂಮಿನಲ್ಲಿ ಸಂಬಂಧ ಹೊಂದಿದ್ದನು.

    ಏನಿದು ಪ್ರಕರಣ?
    ಹಾಗ್ಬೆನ್ ಪೋರ್ನ್ ಸೈಟ್‍ನ ಮೂಲಕ ಮಹಿಳೆಯನ್ನು ಪರಿಚಯಿಸಿಕೊಂಡಿದ್ದನು. ಬಳಿಕ ಜನವರಿ 19 ರಂದು ಬೊನ್ರ್ಮೌತ್‍ನಲ್ಲಿರುವ ಹೋಟೆನ್‍ನಲ್ಲಿ ಭೇಟಿಯಾಗಿದ್ದರು. ಮಹಿಳೆ ಮೊದಲೇ ಸುರಕ್ಷತೆ ಬಳಸುವಂತೆ ಸೂಚನೆ ನೀಡಿದ್ದಳು. ಆದರೂ ಹಾಗ್ಬೆನ್, ನಿಯಮ ಮೀರಿದ್ದಾನೆ. ಸೆಕ್ಸ್ ಮಾಡುವ ವೇಳೆ ಕಾಂಡೋಮ್ ತೆಗೆದು ಹಾಕಿದ್ದಾನೆ. ಇದನ್ನು ಗಮನಿಸಿದ ಮಹಿಳೆ ಕಾಂಡೋಮ್ ಬಳಸುವಂತೆ ಪದೇ ಪದೇ ಹೇಳಿದ್ದಾಳೆ. ಆದರೂ ಆತ ಮಹಿಳೆ ಮಾತನ್ನು ಕೇಳಿರಲಿಲ್ಲ. ಕೊನೆಗೆ ಮಹಿಳೆ ಸೆಕ್ಸ್ ಮಾಡಲು ನಿರಾಕರಿಸಿದ್ದಾಳೆ. ಆಗ ಹಾಗ್ಬೆನ್ ಮಹಿಳೆಗೆ ಹೊಡೆದು ದೈಹಿಕ ಸಂಬಂಧ ಬೆಳೆಸಿದ್ದಾನೆ.

    ಸುಮಾರು 2 ಗಂಟೆಯವರೆಗೂ ಮಹಿಳೆಯ ಜೊತೆ ಕಾಲ ಕಳೆದು ಹಣ ಕೊಡದೆ ಅಲ್ಲಿಂದ ಹೋಗಿದ್ದಾನೆ. ನಂತರ ಹಾಗ್ಬೆನ್ ನಿಯಮಗಳನ್ನು ಬ್ರೇಕ್ ಮಾಡಿದ್ದಾನೆ ಎಂದು ಮಹಿಳೆ ಪೊಲೀಸರಿಗೆ ಅತ್ಯಾಚಾರದ ದೂರು ನೀಡಿದ್ದಳು. ಮರುದಿನ ಆತನನ್ನು ಅತ್ಯಾಚಾರ ಮಾಡಿದ್ದಾನೆ ಎಂಬ ಅನುಮಾನದ ಮೇರೆಗೆ ಪೊಲೀಸರು ಅರೆಸ್ಟ್ ಮಾಡಿದ್ದರು. ಮೊದಲಿಗೆ ಹಾಗ್ಬೆನ್ ಅತ್ಯಾಚಾರದ ಆರೋಪವನ್ನು ತಳ್ಳಿ ಹಾಕಿದ್ದನು. ಆದರೆ ವೈದ್ಯಕೀಯ ಪರೀಕ್ಷೆಯ ವೇಳೆ ಆತನ ಮೇಲಿದ್ದ ಅರೋಪ ಸಾಬೀತಾಗಿತ್ತು.

    ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದರೆ ನಿನ್ನ ಅಜ್ಜ-ಅಜ್ಜಿಯನ್ನು ಕೊಲೆ ಮಾಡುವುದಾಗಿ ಮಹಿಳೆಗೆ ಆರೋಪಿ ಬೆದರಿಸಿದ್ದನು. ವಿಚಾರಣೆ ವೇಳೆಯೂ ಕೂಡ ಆತ ನ್ಯಾಯಾಧೀಶರಿಗೂ ಶೂಟ್ ಮಾಡುವುದಾಗಿ ಧಮ್ಕಿ ಹಾಕಿದ್ದನು ಎಂದು ವರದಿಯಾಗಿದೆ. ಕೊನೆಗೆ ಕೋರ್ಟ್ ಆತನಿಗೆ 12 ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ವಿಧಿಸಿದೆ.

  • ಇಬ್ಬರು ಸೇರಿ ಒತ್ತಿದ್ರೆ ಮಾತ್ರ ಓಪನ್ ಆಗುತ್ತೆ ಕಾಂಡೋಮ್ ಪ್ಯಾಕೆಟ್

    ಇಬ್ಬರು ಸೇರಿ ಒತ್ತಿದ್ರೆ ಮಾತ್ರ ಓಪನ್ ಆಗುತ್ತೆ ಕಾಂಡೋಮ್ ಪ್ಯಾಕೆಟ್

    ಬೆಂಗಳೂರು: ಚಿಕ್ಕ ಕಾಂಡೋಮ್ ಇರುವ ವಿಶೇಷ ಪ್ಯಾಕೆಟ್‍ವೊಂದು ಮಾರುಕಟ್ಟೆಗೆ ಬಂದಿದ್ದು, ಇದನ್ನು ತೆರೆಯಲು ಕೇವಲ ಒಬ್ಬರಿಂದ ಸಾಧ್ಯವಿಲ್ಲ. ಇಬ್ಬರು ಸೇರಿ ಒತ್ತಿದರೆ ಮಾತ್ರ ಈ ಕಾಂಡೋಮ್ ಪ್ಯಾಕೆಟ್ ತೆರೆದುಕೊಳ್ಳುತ್ತದೆ.

    ಅರ್ಜೆಂಟಿನಾದ ತುಲಿಪನ್ ಅರ್ಜೆಂಟಿನಾ ಎಂಬ ಕಂಪನಿ ಈ ಕಾಂಡೋಮ್ ಉತ್ಪಾದಿಸಿದೆ. ಪರಸ್ಪರ ಸಮ್ಮತಿ ಪೂರ್ವಕ ಸೆಕ್ಸ್ ಸಂಬಂಧವನ್ನು ಉತ್ತೇಜಿಸಲು ಈ ರೀತಿಯ ವಿಶೇಷ ಹಾಗೂ ಚಿಕ್ಕ ಕಾಂಡೋಮ್ ಪ್ಯಾಕೆಟ್ ಅನ್ನು ಉತ್ಪಾದಿಸುತ್ತಿಸಲಾಗುತ್ತದೆ ಎಂದು ತುಲಿಪನ್ ಅರ್ಜೆಂಟಿನಾ ಕಂಪನಿ ತಿಳಿಸಿದೆ.

    ಸೆಕ್ಸ್‍ಗೆ ಪುರುಷ ಮತ್ತು ಮಹಿಳೆಯ ಪರಸ್ಪರ ಸಮ್ಮತಿಯೇ ಪ್ರಮುಖವಾಗಿದೆ. ಸಮ್ಮತಿಯ ಮೇರೆಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ ಸೆಕ್ಸ್ ತೃಪ್ತಿ ಸಿಗುತ್ತದೆ. ಈ ಉದ್ದೇಶದಿಂದ ಪ್ಲೆಸರ್ ಕಾನ್ಸೆಂಟಿಡೊ ಕಾಂಡೋಮ್ ಪ್ಯಾಕೆಟ್ ತಯಾರಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

    ಪ್ಯಾಕೆಟ್ ಹೇಗೆ ತೆರೆಯಬೇಕು?:
    ಕೇವಲ ಒಬ್ಬ ವ್ಯಕ್ತಿ ಪ್ಯಾಕೆಟ್‍ನ ನಾಲ್ಕು ಕಡೆಗೆ ಒತ್ತಿದರೂ ತೆರೆಯುವುದಿಲ್ಲ. ಹೀಗಾಗಿ ಇಬ್ಬರು ಸೇರಿ ಒಂದೇ ಬಾರಿಗೆ ಪ್ಯಾಕೆಟ್‍ನ ಎರಡು ಬದಿಯನ್ನು ಒತ್ತಿದರೆ ಓಪನ್ ಆಗುತ್ತದೆ.

    ಈ ಕಾಂಡೋಮ್ ಪ್ಯಾಕೆಟ್‍ಗೆ ಪ್ಲೆಸರ್ ಕಾನ್ಸೆಂಟಿಡೊ ಎಂದು ಕರೆಯಲಾಗುತ್ತದೆ. ವಿಶ್ವದಲ್ಲಿ ಇದೇ ಮೊದಲ ಬಾರಿಗೆ ಈ ರೀತಿ ವಿಶೇಷ ಕಾಂಡೋಮ್‍ಅನ್ನು ತುಲಿಪನ್ ಅರ್ಜೆಂಟಿನಾ ಎಂಬ ಕಂಪನಿ ಉತ್ಪಾದಿಸಿದೆ.

  • RTI ಅಡಿ ಮಾಹಿತಿ ಕೇಳಿ ಅರ್ಜಿ ಸಲ್ಲಿಸಿದ್ರೆ ಬಂತು ಬಳಕೆಯಾದ ಕಾಂಡೋಮ್!

    RTI ಅಡಿ ಮಾಹಿತಿ ಕೇಳಿ ಅರ್ಜಿ ಸಲ್ಲಿಸಿದ್ರೆ ಬಂತು ಬಳಕೆಯಾದ ಕಾಂಡೋಮ್!

    ಜೈಪುರ್: ರಾಜಸ್ಥಾನದ ಇಬ್ಬರು ಆರ್‌ಟಿಐ ಕಚೇರಿಗೆ ಪ್ರಶ್ನೆಯೊಂದಕ್ಕೆ ಉತ್ತರಬೇಕೆಂದು ಆರ್‌ಟಿಐ ಅಡಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಅವರಿಗೆ ಪೋಸ್ಟ್ ಮೂಲಕ ಬಳಿಸಿದ್ದ ಕಾಂಡೋಮ್ ಗಳು ಬಂದಿದ್ದು, ಇದರಿಂದ ಇಬ್ಬರು ಶಾಕ್ ಆಗಿದ್ದಾರೆ.

    ವಿಕಾಸ್ ಚೌಧರಿ ಮತ್ತು ಮನೋಹರ್ ಲಾಲ್ ಎಂಬವರು ಆರ್‌ಟಿಐ ಅಡಿ ಮಾಹಿತಿ ಕೇಳಿದ್ದರು. ಇವರಿಬ್ಬರು ರಾಜಸ್ಥಾನದ ಹನುಮಾಂಗಢ್ ಜಿಲ್ಲೆಯ ಭದ್ರಾ ತೆಹ್ಸಿಲ್ ನಲ್ಲಿನ ಚನಿ ಬಡಿ ನಿವಾಸಿಗಳಾಗಿದ್ದು, ಏಪ್ರಿಲ್ 16 ರಂದು ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ಅಭಿವೃದ್ಧಿ ಕಾರ್ಯಗಳ ಕುರಿತಾಗಿ ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿಯಲ್ಲಿ ಎರಡು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು.

    ವಿಕಾಸ್ ಚೌಧರಿ ಮತ್ತು ಮನೋಹರ್ ಲಾಲ್ ಇಬ್ಬರು 2001 ರಿಂದ ಕೈಗೊಂಡ ಅಭಿವೃದ್ಧಿ ಯೋಜನೆಗಳ ವಿವರಗಳು ಬೇಕೆಂದು ಆರ್‌ಟಿಐಗೆ ಅರ್ಜಿ ಸಲ್ಲಿಸಿದ್ದರು. ಆದರೆ ಇಬ್ಬರಿಗೂ ಉತ್ತರವಾಗಿ ಬಳಸಿದ ಕಾಂಡೋಮ್‍ಗಳನ್ನು ರಾಜ್ಯ ಮಾಹಿತಿ ಆಯೋಗದ ನಿರ್ದೇಶನದಲ್ಲಿ ಗ್ರಾಮ ಪಂಚಾಯತ್ ಅವರು ಕಳುಹಿಸಿದ್ದಾರೆ.

    ನಾನು ಮೊದಲ ಎನ್ವಲಪ್ ತೆಗೆದು ನೋಡಿದಾಗ ಅದರಲ್ಲಿ ಹಳೆಯ ಪತ್ರಿಕೆಯಿಂದ ಸುತ್ತವರಿದಿದ್ದ ಕಾಂಡೋಮ್ ಗಳು ಪತ್ತೆಯಾದವು. ನಾನು ತುಂಬಾ ಆಶಯದಿಂದ ಕೇಳಿದ್ದ ಮಾಹಿತಿ ಬಂದಿರುತ್ತದೆ ಅಂದುಕೊಂಡಿದ್ದೆ. ಆದರೆ ಇದನ್ನು ನೋಡಿ ನನಗೆ ಶಾಕ್ ಆಗಿತ್ತು. ಬಳಿಕ ಕೆಲವು ಪ್ರಮುಖ ಗ್ರಾಮದ ಸದಸ್ಯರ ಉಪಸ್ಥಿತಿಯಲ್ಲಿ ಮತ್ತೊಬ್ಬರಿಗೆ ಬಂದಿದ್ದ ಎನ್ವಲಪ್ ತೆಗೆಯಲಾಗಿದೆ. ಅದರಲ್ಲೂ ಇದೇ ರೀತಿಯಾಗಿ ಹಳೆಯ ಪತ್ರಿಕೆಯಲ್ಲಿ ಮುಚ್ಚಿ ಬಳಸಿದ ಕಾಂಡೋಮ್ ಕಳುಹಿಸಿದ್ದಾರೆ. ಈ ಬಾರಿ ಪ್ಯಾಕ್ ತೆಗೆದು ನೋಡುವಾಗ ಅದನ್ನು ಮೊಬೈಲಿನಲ್ಲಿ ರೆಕಾರ್ಡ್ ಮಾಡಲಾಗಿದೆ ಎಂದು ವಿಕಾಸ್ ಚೌಧರಿ ತಿಳಿಸಿದ್ದಾರೆ.

    ಈ ಘಟನೆಯಿಂದ ವಿಕಾಸ್ ಚೌಧರಿ ಖಿನ್ನತೆಯಿಂದ ಮಾನಸಿಕವಾಗಿ ಬಳಲುತ್ತಿದ್ದಾರೆ. ಪಂಚಾಯತ್ ಹೇಗೆ ಕೆಲಸ ಮಾಡುತ್ತಿದೆ? ಒಂದು ನಾಗರಿಕ ಸಂಸ್ಥೆಯಾಗಿ ಈ ರೀತಿ ಉತ್ತರ ನೀಡಿದೆ ಎಂದರೆ ನನಗೆ ನಂಬಲು ಸಾಧ್ಯವಿಲ್ಲ. ಆರ್‌ಟಿಐ ಪ್ರತ್ಯುತ್ತರವನ್ನು ಸ್ವೀಕರಿಸಿದ ನಂತರ ನನಗೆ ನಿಜಕ್ಕೂ ಬೇಸರವಾಗಿದೆ ಎಂದು ಲಾಲ್ ತಿಳಿಸಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪರಿಷದ್‍ನ CEO ನವನೀತ್ ಕುಮಾರ್, ಅಪರಿಚಿತ ವ್ಯಕ್ತಿಗಳು ಈ ರೀತಿ ಆರ್‌ಟಿಐ ಅಡಿ ಉತ್ತರವಾಗಿ ಕಾಂಡೋಮ್ ಗಳನ್ನು ಪೋಸ್ಟ್ ಮಾಡಿದ್ದಾರೆ. ನಿಜಕ್ಕೂ ಇದು ವಿಷಾದನೀಯ ಮತ್ತು ಕಾನೂನುಬಾಹಿರವಾದ ಕಾರ್ಯವಾಗಿದ್ದು, ಶೀಘ್ರವೇ ಈ ಕುರಿತು ತನಿಖೆ ನಡೆಸಲಾಗುವುದು. ಇನ್ನು ಮುಂದೆ ಇಂತಹ ಘಟನೆಗಳನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸೆಕ್ಸ್ ವೇಳೆ ಗೆಳತಿಗೆ ತಿಳಿಯದೇ ಕಾಂಡೋಮ್ ಬಿಚ್ಚಿಟ್ಟು ಜೈಲು ಸೇರಿದ ಪೊಲೀಸ್!

    ಸೆಕ್ಸ್ ವೇಳೆ ಗೆಳತಿಗೆ ತಿಳಿಯದೇ ಕಾಂಡೋಮ್ ಬಿಚ್ಚಿಟ್ಟು ಜೈಲು ಸೇರಿದ ಪೊಲೀಸ್!

    ಬರ್ಲಿನ್: ಸೆಕ್ಸ್ ಮಾಡುವ ವೇಳೆ ಗೆಳತಿಗೆ ತಿಳಿಯದೇ ಕಾಂಡೋಮ್ ಬಿಚ್ಚಿಟ್ಟ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜರ್ಮನಿ ಪೊಲೀಸ್ ಅಧಿಕಾರಿಯೊರ್ವ ಜೈಲು ಶಿಕ್ಷೆಗೆ ಒಳಗಾಗಿದ್ದಾನೆ.

    ಈ ಕುರಿತು ಪೊಲೀಸ್ ಅಧಿಕಾರಿಯ ಗೆಳತಿ ದೂರು ನೀಡಿದ್ದು, ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯ 8 ತಿಂಗಳು ಜೈಲು ಶಿಕ್ಷೆ ಹಾಗೂ 3 ಸಾವಿರ ಯುರೋ(ಅಂದಾಜು 2.39 ಲಕ್ಷ ರೂ.) ದಂಡವನ್ನು ವಿಧಿಸಿದೆ. ಅಲ್ಲದೇ 96 ಯುರೋಗಳನ್ನು(ಅಂದಾಜು 7500 ರೂ.)ಮಹಿಳೆಯ ಆರೋಗ್ಯ ಪರೀಕ್ಷೆಗೆ ಪಾವತಿ ಮಾಡುವಂತೆ ಸೂಚನೆ ನೀಡಿದೆ.

    ಜರ್ಮನಿಯಲ್ಲಿ ಇಂತಹ ಪ್ರಕರಣ ಇದೇ ಮೊದಲ ಬಾರಿಗೆ ದಾಖಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದು, ಇಂತಹದ್ದೇ 2 ಪ್ರಕರಣಗಳು ಈ ಹಿಂದೆ ಸ್ವಿಜರ್ಲೆಂಡ್ ಹಾಗೂ ಕೆನಡಾದಲ್ಲಿ ವರದಿಯಾಗಿತ್ತು. ಇವುಗಳನ್ನು ರೇಪ್ ಹಾಗೂ ಲೈಂಗಿಕ ಕಿರುಕುಳ ಆರೋಪದ ಅಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿತ್ತು ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಯುವತಿ ಕಾಂಡೋಮ್ ಬಳಕೆ ಮಾಡಿ ಲೈಂಗಿಕ ಕ್ರಿಯೆ ನಡೆಸಲು ಅನುಮತಿ ನೀಡಿದ್ದಳು. ಈ ವೇಳೆ ಯುವತಿಗೆ ತಿಳಿಯದಂತೆ ಆತ ಕಾಂಡೋಮ್ ಬಿಚ್ಚಿಟ್ಟು ಲೈಂಗಿಕ ಕ್ರಿಯೆಗೆ ಮುಂದಾಗಿದ್ದ. ಇದನ್ನು ತಿಳಿದ ಯುವತಿ ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದಳು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv