Tag: Condom

  • ಈ ದೇಶದಲ್ಲಿ ಸ್ಮಾರ್ಟ್‌ ಟಿವಿಗಿಂತ ಕಾಂಡೋಮ್ ಬೆಲೆ ದುಬಾರಿ – ಎಷ್ಟು ಅಂದ್ರೆ ನೀವು ಬೆಚ್ಚಿಬೀಳ್ತೀರಾ!

    ಈ ದೇಶದಲ್ಲಿ ಸ್ಮಾರ್ಟ್‌ ಟಿವಿಗಿಂತ ಕಾಂಡೋಮ್ ಬೆಲೆ ದುಬಾರಿ – ಎಷ್ಟು ಅಂದ್ರೆ ನೀವು ಬೆಚ್ಚಿಬೀಳ್ತೀರಾ!

    ವಾಷಿಂಗ್ಟನ್: ಅನೇಕ ದೇಶಗಳಲ್ಲಿ ಸರ್ಕಾರ ಕಾಂಡೋಮ್‍ಗಳನ್ನು ಉಚಿತವಾಗಿ ಪೂರೈಸುತ್ತದೆ. ಇನ್ನೂ ಅನೇಕ ದೇಶಗಳಲ್ಲಿ ಗರ್ಭಪಾತವನ್ನು ನಿಷೇಧಿಸಲಾಗಿದೆ. ಈ ವಿಚಾರವಾಗಿ ವಿವಿಧ ರೀತಿಯ ಕಾನೂನುಗಳಿವೆ. ಆದರೆ ಇತ್ತೀಚೆಗೆ ವೆನೆಜುವೆಲಾದಲ್ಲಿ ಕಾಂಡೋಮ್ ಬೆಲೆ ವಿಶ್ವಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಈ ದೇಶದಲ್ಲಿ ಒಂದು ಪ್ಯಾಕ್‌ ಕಾಂಡೋಮ್ ಬೆಲೆ ಸುಮಾರು 60,000 ರೂಪಾಯಿ ಎಂದು ತಿಳಿದು ಬಂದಿದೆ.

    ಕಾಂಡೋಮ್‍ಗಳಲ್ಲಿ ವಿವಿಧ ರೀತಿಯ ಹೆಸರಾಂತ ದುಬಾರಿ ಬ್ರ್ಯಾಂಡ್‍ಗಳಿದೆ. ಎಂದಾದರೂ ಕಾಂಡೋಮ್ ಬೆಲೆ 60,000 ರೂಪಾಯಿ ಎಂದು ನೀವು ಕೇಳಿದ್ದೀರಾ? ಆದರೆ ವೆನೆಜುವೆಲಾದ ಸಾಮಾನ್ಯ ಕಾಂಡೋಮ್‍ಗಳ ಬೆಲೆಯು ಪ್ರತಿಷ್ಠಿತ ಬ್ರ್ಯಾಂಡ್‍ನ ಟಿವಿ ಬೆಲೆಗಿಂತಲೂ ಹೆಚ್ಚಾಗಿದೆ. ಕಾಂಡೋಮ್‍ಗೆ ನೀಡುವ ಬೆಲೆಗೆ ಟಿವಿಯನ್ನೇ ಖರೀದಿಸಬಹುದು.

    ವೆನೆಜುವೆಲಾದ ಅಂಗಡಿಯೊಂದರಲ್ಲಿ ಒಂದು ಪ್ಯಾಕ್‌ ಕಾಂಡೋಮ್ 60,000 ರೂ.ಗೆ ಮಾರಾಟವಾಗುತ್ತಿದೆ. ಪ್ರಪಂಚಾದ್ಯಂತ ಈ ಸುದ್ದಿ ಜನರನ್ನು ದಿಗ್ಭ್ರಮೆಗೊಳಿಸಿದೆ. ಇದೀಗ ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿದೆ. ಇದನ್ನೂ ಓದಿ: ಮನೆಗೆ ಕರೆಸಿ ನವಜೋಡಿಯನ್ನು ಹತ್ಯೆ ಮಾಡಿದ ನವವಧು ಪೋಷಕರು

    ವೆನೆಜುವೆಲಾ ಲ್ಯಾಟಿನ್ ಅಮೆರಿಕದ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿದ್ದು, ಈ ದೇಶದಲ್ಲಿ ಗರ್ಭಪಾತವನ್ನು ನಿಷೇಧಿಸಲಾಗಿದೆ. ಯುಎನ್‍ನ ಸ್ಟೇಟ್ ಆಫ್ ವರ್ಲ್ಡ್ ಪಾಪ್ಯುಲೇಶನ್ ರಿಪೋರ್ಟ್ 2015ರ ಪ್ರಕಾರ, ವೆನೆಜುವೆಲಾ ಅತಿ ಹೆಚ್ಚು ಅಪ್ರಾಪ್ತರು ಗರ್ಭಧಾರಣೆ ಮಾಡಿರುವ ಪ್ರಕರಣಗಳು ವರದಿಯಾಗಿದೆ.

    ವೆನೆಜುವೆಲಾದಂತಹ ಇತರೆ ದೇಶಗಳಲ್ಲಿ ಅಪ್ರಾಪ್ತರು ಹೆಚ್ಚಾಗಿ ಗರ್ಭಧಾರಣೆ ಮಾಡುತ್ತಿದ್ದಾರೆ. ಇದೇ ವೇಳೆ ಗರ್ಭಪಾತ ಮಾಡಿಸುವುದರ ಮೇಲೆ ನಿಷೇಧ ಹೇರಲಾಗಿದ್ದು, ಕಾಂಡೋಮ್‍ಗಳ ಬೆಲೆಯನ್ನು ಗಗನಕ್ಕೇರಿಸಲಾಗಿದೆ. ಇದರಿಂದ ಆ ದೇಶದ ಜನ ಸಾಮಾನ್ಯರು ತಲೆ ಮೇಲೆ ಕೈ ಹೊತ್ತುಕೊಂಡಿದ್ದಾರೆ. ಆದರೆ ಈ ಬಗ್ಗೆ ಇನ್ನೂ ಸರ್ಕಾರ ಸರಿಯಾದ ಕ್ರಮ ಕೈಗೊಂಡಿಲ್ಲ. ಇದನ್ನೂ ಓದಿ: ಮೊದಲಬಾರಿಗೆ ಟ್ವಿಟ್ಟರ್ ಉದ್ಯೋಗಿಗಳ ಜೊತೆ ಮಾತನಾಡಲಿದ್ದಾರೆ ಮಸ್ಕ್

  • ಮದ್ಯಕೊಳ್ಳಲು ಸಾಲಲ್ಲಿ ನಿಲ್ತಾರೆ, ಕಾಂಡೋಮ್ ಕೇಳೋಕೆ ನಾಚಿಕೆ ಪಡ್ತಾರೆ :  ಬಾಯ್ ಫ್ರೆಂಡ್ ಮುಂದೆ ಬಾಯ್ತೆರದ ರಾಕಿ ಸಾವಂತ್

    ಮದ್ಯಕೊಳ್ಳಲು ಸಾಲಲ್ಲಿ ನಿಲ್ತಾರೆ, ಕಾಂಡೋಮ್ ಕೇಳೋಕೆ ನಾಚಿಕೆ ಪಡ್ತಾರೆ : ಬಾಯ್ ಫ್ರೆಂಡ್ ಮುಂದೆ ಬಾಯ್ತೆರದ ರಾಕಿ ಸಾವಂತ್

    ಬಾಲಿವುಡ್ ವಿವಾದಿತ ತಾರೆ ರಾಕಿ ಸಾವಂತ್ ಇದೀಗ ಒಂದಿಲ್ಲೊಂದು ಕಾರಣದಿಂದಾಗಿ ಸುದ್ದಿ ಆಗುತ್ತಲೇ ಇದ್ದಾರೆ. ಕರ್ನಾಟಕದ ಸೊಸೆಯಾಗಲು ಸಿದ್ಧತೆ ನಡೆಸಿರುವ ರಾಕಿ, ಸದ್ಯ ಬಾಯ್ ಫ್ರೆಂಡ್ ಮೈಸೂರಿನ ಹುಡುಗ ಆದಿಲ್ ಜೊತೆ ಟ್ರಾವೆಲಿಂಗ್, ಶಾಪಿಂಗ್ ಸಿನಿಮಾ ನೋಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಮೊನ್ನೆಯಷ್ಟೇ ಆದಿಲ್ ಜೊತೆ ಅವರು ‘ಜನಹಿತ್ ಮೇನ್ ಜಾರಿ’ ಸಿನಿಮಾವನ್ನು ವೀಕ್ಷಿಸಿದ್ದು, ಅದರ ಬಗ್ಗೆ ಮಾಧ್ಯಮಗಳ ಮುಂದೆ ಮಾತನಾಡುವಾಗ ಕಾಂಡೋಮ್ ಅರಿವಿನ ಬಗ್ಗೆ ಹೇಳಿದ್ದಾರೆ. ಓದಿ : ಧನಂಜಯ್ ನಟನೆಯ ಮತ್ತೊಂದು ಸಿನಿಮಾ ರಿಲೀಸ್ ಘೋಷಣೆ : ವರ್ಷದ ಅತೀ ಹೆಚ್ಚು ಸಿನಿಮಾ ರಿಲೀಸ್ ಆದ ನಟ ಡಾಲಿ

    ಆದಿಲ್ ದುರ್ನಾನಿ ಅಭಿನಯದ ‘ಜನಹಿತ್ ಮೇನ್ ಜಾರಿ’ ಸಿನಿಮಾದಲ್ಲಿ ಸುರಕ್ಷಿತ್ ಲೈಂಗಿಕತೆಯ ಕುರಿತು ಕಥೆಯನ್ನು ಹೇಳಲಾಗಿದೆಯಂತೆ. ಅಲ್ಲದೇ, ಕಾಂಡೋಮ್ ಬಳಸುವ ಕುರಿತಾಗಿಯೂ ಜಾಗೃತೆ ಮೂಡಿಸಲಾಗಿದೆಯಂತೆ. ಈ ಸಿನಿಮಾವನ್ನು ಬಾಯ್ ಫ್ರೆಂಡ್ ಆದಿಲ್ ಜೊತೆ ನೋಡಿಕೊಂಡು  ಬಂದ ರಾಕಿ, ಮಾಧ್ಯಮಗಳ ಜೊತೆ ಮಾತನಾಡುತ್ತಾ ‘ಜನರ ಮನಸ್ಸು ವಿಚಿತ್ರವಾಗಿದೆ. ಮದ್ಯವನ್ನು ಕೊಳ್ಳಲು ಅವರು ತಾಸುಗಟ್ಟಲೇ ರಸ್ತೆಯಲ್ಲಿ ಕ್ಯೂ ನಿಲ್ಲುತ್ತಾರೆ. ಆದರೆ, ಸುರಕ್ಷತೆಯ ದೃಷ್ಟಿಯಿಂದ ಕಾಂಡೋಮ್ ಕೊಳ್ಳಲು ಮುಜುಗರ ಪಡುತ್ತಾರೆ’ ಎಂದು ಆದಿಲ್ ನೋಡಿಕೊಂಡು ಹೇಳಿದ್ದಾರೆ.

    ರಾಕಿ ಈ ಮಾತುಗಳನ್ನು ಆಡುತ್ತಿದ್ದಂತೆಯೇ ಆದಿಲ್ ಕಣ್ಣು ಮಿಟುಗಿಸದೇ ರಾಕಿಯನ್ನೇ ನೋಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ರಾಕಿ ಯಾರಿಗೆ ಹೇಳುತ್ತಿದ್ದಾಳೆ ಎಂದು ತಿಳಿಯದೇ ಆದಿಲ್ ಕಕ್ಕಾಬಿಕ್ಕಿಯಾಗಿ ನಿಂತಿದ್ದಾರೆ. ನನಗೆ ರಾಕಿ ಹೇಳಿದಾಳಾ ಎನ್ನುವಂತೆ ತಮಗೆ ತಾವೇ ಪ್ರಶ್ನೆಯನ್ನು ಹಾಕಿಕೊಂಡವರಂತೆ ಮುಖ ಮಾಡಿದ್ದಾರೆ. ಈ ವಿಡಿಯೋ ನೋಡಿದ ರಾಕಿ ಅಭಿಮಾನಿಗಳು ‘ಪಾಪ ಆದಿಲ್’ ಎಂದು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಹಿಂದಿ ವೆಬ್ ಸಿರೀಸ್‌ನಲ್ಲಿ `ರಂಗಿತರಂಗ’ ನಟಿ ರಾಧಿಕಾ ನಾರಾಯಣ್

    ಇಷ್ಟೇ ಅಲ್ಲದೇ, ತಾವು ಎಚ್.ಐ.ವಿ ಸೋಂಕಿತನನ್ನು ಭೇಟಿ ಮಾಡಿದ ಮತ್ತು ತಾವೇಕೆ ಕಾಂಡೋಮ್ ಬಳಸಲಿಲ್ಲ ಎಂದು ಪ್ರಶ್ನೆ ಮಾಡಿದ ವಿಚಾರವನ್ನೂ ಕ್ಯಾಮೆರಾ ಮುಂದೆ ರಾಕಿ ಸಾವಂತ್ ಹಂಚಿಕೊಂಡಿದ್ದಾರೆ. ಆ ವ್ಯಕ್ತಿ ಕೂಡ ಮುಜುಗರದಿಂದಾಗಿ ಏನೂ ಹೇಳಲಿಲ್ಲ ಎಂದಿದ್ದಾರೆ. ದಯವಿಟ್ಟು ಕಾಂಡೋಮ್ ಬಳಸಿ ಎಂದು ಹೇಳುವ ಮೂಲಕ ತಮ್ಮ ಮಾತನ್ನು ಮುಗಿಸಿದ್ದಾರೆ ರಾಕಿ.

  • ಮೋಸ್ಟ್ ಬ್ಯಾಚುಲರ್ ಹುಡುಗಿ ನಿಧಿ ಅಗರ್ವಾಲ್ ಕಾಂಡೋಮ್ ಕಂಟಕ

    ಮೋಸ್ಟ್ ಬ್ಯಾಚುಲರ್ ಹುಡುಗಿ ನಿಧಿ ಅಗರ್ವಾಲ್ ಕಾಂಡೋಮ್ ಕಂಟಕ

    ಕ್ಷಿಣ ಭಾರತದ ಹೆಸರಾಂತ ನಟಿ ನಿಧಿ ಅಗರ್ವಾಲ್ ಒಂದಿಲ್ಲೊಂದು ಕಾರಣಕ್ಕಾಗಿ ಸುದ್ದಿ ಆಗುತ್ತಲೇ ಇರುತ್ತಾರೆ. ಈ ಹಿಂದೆ ಕ್ರಿಕೆಟಿಗ ರಾಹುಲ್ ಜತೆ ಸುತ್ತಾಡುತ್ತಿದ್ದಾರೆ ಎನ್ನುವ ಕಾರಣಕ್ಕೆ ಹೆಚ್ಚು ಸದ್ದು ಮಾಡಿದ್ದರು. ಇದೀಗ ಕಾಂಡೋಮ್ ವಿಷಯವಾಗಿ ನೆಟ್ಟಿಗರಿಗೆ ಆಹಾರವಾಗಿದ್ದಾರೆ. ಇದನ್ನೂ ಓದಿ : ಗ್ರೌಂಡ್ ರಿಪೋರ್ಟ್ : ರಿಲೀಸ್ ಹಿಂದಿನ ಪಕ್ಕಾ ಲೆಕ್ಕಾಚಾರ, ಆರ್.ಆರ್.ಆರ್ ದಾಖಲೆ ಮುರಿದ ಕೆಜಿಎಫ್ 2

    ಸದಾ ಹಾಟ್ ಹಾಟ್ ಆಗಿ ಕಾಣಿಸಿಕೊಳ್ಳುತ್ತಾ, ಬೋಲ್ಡ್ ಮಾತುಗಳಿಂದಲೇ ಅಭಿಮಾನಿಗಳನ್ನು ಸೆಳೆದಿರುವ ನಿಧಿ ಅಗರ್ವಾಲ್, ಇದೀಗ ಕಾಂಡೋಮ್ ಒಂದರ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಅದರ ವಿಡಿಯೋವನ್ನು ಅವರು ಇನ್ಸ್ಟಾ ಪೇಜ್ ನಲ್ಲಿ ಹಾಕಿದ್ದಾರೆ. ಆ ಜಾಹೀರಾತಿನಲ್ಲಿ ಅವರು ಕಾಂಡೋಮ್ ಮತ್ತು ಸೆಕ್ಸನಾ ಪರಾಕಾಷ್ಠೆಯ ಬಗ್ಗೆ ಕಲರ್ ಕಲರ್ ಆಗಿ ಮಾತನಾಡಿದ್ದಾರೆ. ಈ ಮಾತುಗಳೇ ಟ್ರೋಲ್ ಪೇಜ್ ಗಳಿಗೆ ಆಹಾರವಾಗಿದೆ. ಮತ್ತು ಅಭಿಮಾನಿಗಳು ಕೂಡ ಮಾತಿನ ಗೆರೆ ದಾಟಿಕೊಂಡು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.

     

    View this post on Instagram

     

    A post shared by Nidhhi Agerwal ???? (@nidhhiagerwal)

    ಕಾಂಡೋಮ್ ಬಳಸಿದರೆ ಲೈಂಗಿಕ ಪರಾಕಾಷ್ಠೆಅನುಮಾನವಿಲ್ಲದೇ ಉತ್ತುಂಗಕ್ಕಿರುತ್ತದೆ ಎನ್ನುವುದು ಜಾಹೀರಾತಿನ ಒಟ್ಟಾರೆ ಸಾರಾಂಶ. ಅದನ್ನೇ ನಿಧಿ ಅಗರ್ವಾಲ್ ಹೇಳಿದ್ದಾರೆ. ಹಾಗಾಗಿ ಅವರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಈ ಜಾಹೀರಾತಿನ ವಿಡಿಯೋವನ್ನು ಅವರು ಪೋಸ್ಟ್ ಮಾಡುತ್ತಿದ್ದಂತೆಯೇ, ‘ಇದು ನಿಮ್ಮ ಸ್ವಂತ ಅನುಭವವೇ?’ ಎಂದು ಕೆಲವರು ಕೇಳಿದ್ದರೆ, ‘ನಿಮಗೆ ಇನ್ನೂ ಮದುವೆಯೇ ಆಗಿಲ್ಲ. ಅದು ಹೇಗೆ ಇಂತಹ ವಿಷಯ ತಿಳಿಯುವುದಕ್ಕೆ ಸಾಧ್ಯ’ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು ‘ನೀವು ಯಾವಾಗ ಕಾಂಡೋಮ್ ಬಳಸಿದ್ದೀರಿ. ನಿಮ್ಮ ಅನುಭವದ ವಿಡಿಯೋ ಮಾಡಿ’ ಎಂದು ಕಾಲೆಳೆದಿದ್ದಾರೆ. ಇದನ್ನೂ ಓದಿ:  ಕೊನೆಗೂ ಮದುವೆಯ ವಿಚಾರ ಖಚಿತಪಡಿಸಿದ ಆಲಿಯಾ!

    ಇಂತಹ ಅನೇಕ ಪ್ರಶ್ನೆಗಳನ್ನು ಕೇಳಿರುವ ನೆಟ್ಟಿಗರ ಮಾತು ಕೇಳಿ ಸ್ವತಃ ನಿಧಿ ಬೆಚ್ಚಿಬಿದ್ದಿದ್ದಾರೆ. ಒಂದು ರೀತಿಯಲ್ಲಿ ಅವರಿಗೆ ಮುಜಗರ ತರುವಂತಹ ಪ್ರಶ್ನೆಗಳನ್ನು ಹಾಕಿದ್ದರಿಂದ ನಿಧಿ ಅವುಗಳಿಗೆ ಉತ್ತರಿಸಿದೇ ಚಡಪಡಿಸುತ್ತಿದ್ದಾರೆ. ಮತ್ತೇ ಇಂತಹ ಜಾಹೀರಾತುಗಳಲ್ಲಿ ನಟಿಸದಂತೆ ಕೆಲ ಅಭಿಮಾನಿಗಳು ಸಲಹೆ ನೀಡಿದ್ದರೆ, ಓಪನ್ ಆಗಿ ಮಾತನಾಡಿದ್ದಕ್ಕೆ ಕೆಲವರು ಬೆನ್ನೂ ತಟ್ಟಿದ್ದಾರೆ.

  • ಉಕ್ರೇನ್ ಯುದ್ಧದ ನಡುವೆ ಕಾಂಡೋಮ್‍ಗೆ ಬೇಡಿಕೆ – ರಷ್ಯಾದಲ್ಲಿ ಗಗನಕ್ಕೇರಿದ ಬೆಲೆ

    ಉಕ್ರೇನ್ ಯುದ್ಧದ ನಡುವೆ ಕಾಂಡೋಮ್‍ಗೆ ಬೇಡಿಕೆ – ರಷ್ಯಾದಲ್ಲಿ ಗಗನಕ್ಕೇರಿದ ಬೆಲೆ

    ಮಾಸ್ಕೋ: ರಷ್ಯಾ-ಉಕ್ರೇನ್ ಯುದ್ಧದ ನಡುವೆ ರಷ್ಯಾದಲ್ಲಿ ಕಾಂಡೋಮ್‍ಗೆ ಬೇಡಿಕೆ ಹೆಚ್ಚಳಗೊಂಡಿದ್ದು, ಬೆಲೆ ಗಗನಕ್ಕೇರಿದೆ.

    ಉಕ್ರೇನ್ ವಿರುದ್ಧ ಯುದ್ಧ ಸಾರಿರುವ ರಷ್ಯಾದ ನಡೆಗೆ ಈಗಾಗಲೇ ವಿಶ್ವದ ಇತರ ಕೆಲ ದೇಶಗಳು ನಿರ್ಬಂಧ ವಿಧಿಸಿದ ಪರಿಣಾಮ ರಷ್ಯಾದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಕಂಡಿದೆ. ಇದೀಗ ಇತರ ದೇಶಗಳು ನಿಷೇಧಾಜ್ಲೆ ಹೊರಡಿಸಿರುವುದರಿಂದ ರಷ್ಯಾದಲ್ಲಿ ಕಾಂಡೋಮ್‍ಗೆ ಕೊರತೆ ಉಂಟಾಗಬಹುದು ಎಂಬ ಭಯದಿಂದ ಜನ ಕಾಂಡೋಮ್ ಖರೀದಿಗೆ ಮುಗಿಬಿದ್ದಿದ್ದಾರೆ. ಇದರಿಂದ ಕಾಂಡೋಮ್‍ಗೆ ಬೇಡಿಕೆ ಹೆಚ್ಚಾಗಿದೆ. ಇದನ್ನೂ ಓದಿ: 133 ಪ್ರಯಾಣಿಕರಿದ್ದ ಚೀನಾ ವಿಮಾನ ಪತನ

    ಈ ಬಗ್ಗೆ ಸ್ಥಳೀಯ ಮಧ್ಯಮವೊಂದಕ್ಕೆ ಮಾಹಿತಿ ಹಂಚಿಕೊಂಡಿರುವ ರಷ್ಯಾದ ಅತಿದೊಡ್ಡ ರಿಟೇಲರ್ ವೈಲ್ಡ್‌ಬೆರ್ರಿ ಕಳೆದ ವರ್ಷಕ್ಕೆ ಹೋಲಿಸಿದರೆ ಮಾರ್ಚ್‍ನ ಮೊದಲ ಎರಡು ವಾರಗಳಲ್ಲಿ ಕಾಂಡೋಮ್ ಮಾರಾಟದಲ್ಲಿ ಶೇ.170 ರಷ್ಟು ಏರಿಕೆ ಆಗಿದೆ. ಇತರ ಕೆಲ ದೇಶಗಳು ನಿರ್ಬಂಧ ಹೇರಿರುವ ಪರಿಣಾಮ ಈ ಪರಿಸ್ಥಿತಿ ಕಂಡುಬಂದಿದೆ. ಜನಸಾಮಾನ್ಯರು ಮುಂದೆ ಕಾಂಡೋಮ್ ಸಿಗುವುದು ಕಷ್ಟ ಎಂದು ಭಾವಿಸಿಕೊಂಡು ಕಾಂಡೋಮ್‍ಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸುತ್ತಿದ್ದಾರೆ ಎಂದು ತಿಳಿಸಿದೆ.

    ಇತ್ತ ಡ್ಯುರೆಕ್ಸ್ ಮತ್ತು ಇತರ ಬ್ರಾಂಡ್‍ಗಳ ತಯಾರಕ ಬ್ರಿಟಿಷ್ ಕಂಪನಿ ರೆಕಿಟ್, ರಷ್ಯಾದಲ್ಲಿ ವ್ಯವಹಾರವನ್ನು ಮುಂದುವರೆಸಿದೆ. ಪ್ರಮುಖ ಫಾರ್ಮಸಿ ಚೈನ್ 36.6 ಇಲ್ಲಿ ತನ್ನ ಮಾರಾಟದಲ್ಲಿ ಶೇ. 26 ಹೆಚ್ಚಳವಾಗಿದೆ ಎಂದು ಸ್ಪಷ್ಟಪಡಿಸಿದ್ದು, ಕೆಮಿಸ್ಟ್ ಕಾಂಡೋಮ್‍ಗಳ ಖರೀದಿ ಬೆಲೆ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 32 ರಷ್ಟು ಏರಿಕೆ ಕಂಡಿದೆ. ಅಲ್ಲದೆ ರಷ್ಯಾದ ಸೂಪರ್ ಮಾರ್ಕೆಟ್‍ಗಳಲ್ಲೂ ಕೂಡ ಶೇ. 30 ರಷ್ಟು ಜನ ಕಾಂಡೋಮ್ ಖರೀದಿಗೆ ಮುಂದಾಗಿದ್ದಾರೆ. ಹೀಗಾಗಿ ಬೇಡಿಕೆಗೆ ಅನುಗುಣವಾಗಿ ಬೆಲೆ ಏರಿಕೆ ಮಾಡಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಬ್ರಾಂಡ್‍ಗೆ ಅನುಗುಣವಾಗಿ ಕೆಲ ಕಾಂಡೋಮ್‍ಗಳ ಬೆಲೆ ಶೇ. 50 ರಷ್ಟು ಹೆಚ್ಚಾಗಿದೆ. ಇದನ್ನೂ ಓದಿ: ಭಾರತದ ವಿದೇಶಾಂಗ ನೀತಿಯನ್ನು ಹೊಗಳಿದ ಪಾಕ್ ಪ್ರಧಾನಿ

    ಮೂಲಗಳ ಪ್ರಕಾರ ರಷ್ಯಾ ವರ್ಷಕ್ಕೆ 600 ಮಿಲಿಯನ್ (60 ಕೋಟಿ) ಕಾಂಡೋಮ್‍ಗಳನ್ನು ಆಮದು ಮಾಡಿಕೊಳ್ಳುತ್ತದೆ. ಕೇವಲ 100 ಮಿಲಿಯನ್ (10 ಕೋಟಿ) ಮಾತ್ರ ತಮ್ಮ ದೇಶದಲ್ಲಿ ಉತ್ಪಾದಿಸುತ್ತಿರುವುದಾಗಿ ವರದಿಯಾಗಿದೆ. ಅಲ್ಲದೆ ರಷ್ಯಾದಲ್ಲಿ ಬ್ರಿಟಿಷ್ ಮೂಲದ ಕಂಪನಿಗಳು ಹೆಚ್ಚಾಗಿ ಕಾಂಡೋಮ್ ವ್ಯವಹಾರವನ್ನು ನಡೆಸುತ್ತಿವೆ.

  • ‘ಯಾವುದನ್ನು’ ರಾಖಿ ಸಾವಂತ್ ವಾಟರ್ ಬಲೂನ್ ಅಂದ್ಕೊಂಡಿದ್ದು?

    ‘ಯಾವುದನ್ನು’ ರಾಖಿ ಸಾವಂತ್ ವಾಟರ್ ಬಲೂನ್ ಅಂದ್ಕೊಂಡಿದ್ದು?

    ದಾ ಒಂದಲ್ಲಾ ಒಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುವ ಬಾಲಿವುಡ್ ನಟಿ ರಾಖಿ ಸಾವಂತ್, ಇದೀಗ ಮತ್ತೊಂದು ಕಥೆ ಬಿಚ್ಚಿಟ್ಟಿದ್ದಾರೆ. ಅದು ನಿಜವೋ, ಸುಳ್ಳೋ ಗೊತ್ತಿಲ್ಲ. ಆದರೆ, ಪ್ರತಿಷ್ಠಿತ ವೇದಿಕೆಯ ಮೇಲೆ ಅಂಥದ್ದೊಂದು ಘಟನೆಯನ್ನು ನೆನಪಿಸಿಕೊಂಡಿದ್ದರಿಂದ ಅದೀಗ ಭಾರೀ ಸದ್ದು ಮಾಡುತ್ತಿದೆ. ಬೋಲ್ಡ್ ರಾಕಿ ಬೋಲ್ಡ್ ಎಂಬ ಟ್ಯಾಗ್ ಲೈನ್‍ನಲ್ಲಿ ಸುದ್ದಿ ಹರಿದಾಡುತ್ತಿದೆ.

    ಇತ್ತೀಚೆಗಷ್ಟೇ ನಡೆದ ಇಂಡಿಯನ್ ಟೆಲಿವಿಷನ್ ಅಕಾಡೆಮಿ ಪ್ರಶಸ್ತಿ ಸಮಾರಂಭದ ಸಂದರ್ಶನ ವೇಳೆ ಮಾತನಾಡಿದ ಅವರು, ತಮ್ಮ ಬಾಲ್ಯದಲ್ಲಿ ಮಾಡಿದ್ದ ಕೆಲವು ಚೇಷ್ಟೆಗಳನ್ನು ನೆನಪಿಸಿಕೊಂಡಿದ್ದಾರೆ. ನಾನು ಚಿಕ್ಕವಳಾಗಿದ್ದಾಗ ನನ್ನ ಮನೆಯಲ್ಲಿರುವುದನ್ನು ವಾಟರ್ ಬಲೂನ್ ಎಂದು ತಿಳಿದು ಕಾಂಡೋಮ್ ಒಳಗೆ ಬಣ್ಣದ ನೀರನ್ನು ತುಂಬಿ ಜನರ ಮುಖದ ಮೇಲೆ ಎಸೆಯುತ್ತಿದ್ದೆ. ಆದರೆ ನನಗೆ ಅದು ಕಾಂಡೋಮ್ ಎಂದು ತಿಳಿದಿರಲಿಲ್ಲ. ಎಲ್ಲರೂ ನನ್ನನ್ನು ನಿಂದಿಸುತ್ತಿದ್ದರು. ಆಗ ನಾನು ಕೋಪ ಮಾಡಿಕೊಳ್ಳಬೇಡಿ ಕೇವಲ ಹೋಳಿಯಷ್ಟೇ ಎಂದು ಹೇಳುತ್ತಿದ್ದೆ. ಹೀಗಿದ್ದರೂ ಜನ ಈಡಿಯಟ್, ನಿನ್ನನ್ನು ಕೊಂದು ಬಿಡುತ್ತೇನೆ ಎಂದು ಬೈಯ್ಯುತ್ತಿದ್ದರು. ನಾನು ಯಾಕೆ ನನ್ನನ್ನು ನಿಂದಿಸುತ್ತಿದ್ದಾರೆ, ಅದು ಕೇವಲ ಹೋಳಿ ಅಂದುಕೊಳ್ಳುತ್ತಿದ್ದೆ. ಆದರೆ ನಂತರ ಅದು ವಾಟರ್ ಬಲೂನ್ ಅಲ್ಲ, ಕಾಂಡೋಮ್ ಅಂತ ತಿಳಿದುಬಂದಿತು ಎಂದಿದ್ದಾರೆ. ಇದನ್ನೂ ಓದಿ : ಇನ್ಮುಂದೆ ಬಾಲಿವುಡ್ ನಿರ್ದೇಶಕರಿಗೆ ಸಿಗಲ್ಲ ಆಲಿಯಾ ಭಟ್

     

    View this post on Instagram

     

    A post shared by Rajeev Khinchi (@the_rajeevkhinchi)

    ಭಾನುವಾರ ಐಟಿಎ 2022 ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಮುಂಬೈನಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಅನೇಕ ಬಾಲಿವುಡ್ ತಾರೆಯರು ಪಾಲ್ಗೊಂಡಿದ್ದರು. ಇದೇ ವೇಳೆ ರೆಡ್ ಕಾರ್ಪೆಟ್ ಮೇಲೆ ಭೇಟಿಯಾದ ನಟ ರಣ್‍ವೀರ್ ಸಿಂಗ್ ಅವರನ್ನು ರಾಖಿ ಸಾವಂತ್ ಕ್ಯಾಮೆರಾ ಮುಂದೆ ಎತ್ತಿಕೊಂಡು ಸಾಹಸ ಪ್ರದರ್ಶಿಸಿದರು. ಇನ್ನೂ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದನ್ನೂ ಓದಿ : ರಾಧಿಕಾ ಪಂಡಿತ್ ಬರ್ತಡೇ ಸೆಲೆಬ್ರೆಷನ್: ಫೋಟೋ ಗ್ಯಾಲರಿ

  • ಭಾರೀ ಕುಸಿತ ಕಂಡ ಕಾಂಡೋಮ್ ಉದ್ಯಮ!

    ಭಾರೀ ಕುಸಿತ ಕಂಡ ಕಾಂಡೋಮ್ ಉದ್ಯಮ!

    ನವದೆಹಲಿ: ಕಾಂಡೋಮ್ ಉದ್ಯಮ ಲಾಕ್‍ಡೌನ್ ನಡುವೆ ಭಾರೀ ಕುಸಿತ ಕಂಡಿದೆ. ಕಂಪನಿ ಕಾಂಡೋಮ್ ತಯಾರಿಕೆಯನ್ನು ಬಿಟ್ಟು ಹ್ಯಾಂಡ್ ಗ್ಲೌಸ್ ತಯಾರಿಕೆ ಯಲ್ಲಿ ತೊಡಗಿಸಿಕೊಳ್ಳುವವ ಮಟ್ಟಿಗೆ ಕಂಪನಿಗೆ ನಷ್ಟ ಉಂಟಾಗಿದೆ.

    ಕಾಂಡೋಮ್‍ಗಳಲ್ಲಿ ತಯಾರಿಸುವ ಮಲೇಷ್ಯಾ ಮೂಲದ ಕಂಪನಿಯು ಈಗ ಕಾಂಡೋಮ್ ಮಾರಾಟದಲ್ಲಿ ನಷ್ಟ ಉಂಟಾಗಿರುವುದರಿಂದ ವೈದ್ಯಕೀಯ ಹ್ಯಾಂಡ್ ಗ್ಲೌಸ್ ತಯಾರಿಕೆ ವ್ಯಾಪಾರದಲ್ಲಿ ತೊಡಗಿಸಿಕೊಂಡಿದೆ. ಕೊರೊನಾ ಸೋಂಕು ಹರಡುವುದನ್ನು ತಡೆಯಲು ಜನರು ಮನೆಯಿಂದ ಆಚೆ ಬರದಂತೆ ವಿಶ್ವದಾದ್ಯಂತ ಲಾಕ್‍ಡೌನ್ ವಿಧಿಸಲಾಗಿತ್ತು.  ಲೈಂಗಿಕ ಕ್ರಿಯೆಯ ವೇಳೆ ಗರ್ಭ ನಿರೋಧಕ ಅಥವಾ ಕಾಂಡೋಮ್ ಬಳಸುವ ಪ್ರಮಾಣದಲ್ಲಿ ಏರಿಕೆಯಾಗಿಲ್ಲ ಎಂದು ನಿಕ್ಕಿ ಏಷ್ಯಾ ವರದಿ ಮಾಡಿದೆ. ಇದನ್ನೂ ಓದಿ: ಉತ್ತರಾಖಂಡದಲ್ಲಿ ಡಿಜಿಟಲ್ ರ‍್ಯಾಲಿಗಳಿಗೆ ಬಿಜೆಪಿ ಸಂಪೂರ್ಣ ತಯಾರಿ ನಡೆಸಿದೆ: ಅಜಯ್ ಭಟ್

    ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಹೋಟೆಲ್‌ಗಳು ಮತ್ತು ಲೈಂಗಿಕ ಸ್ವಾಸ್ಥ್ಯ ಕೇಂದ್ರಗಳನ್ನು ಮುಚ್ಚುವುದು, ವಿವಿಧ ಸರ್ಕಾರಗಳು ಕಾಂಡೋಮ್ ಹ್ಯಾಂಡ್‌ಔಟ್ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಿರುವುದು ಕರೇಕ್ಸ್‌ನ ಕಾಂಡೋಮ್‌ಗಳ ಮಾರಾಟದ ಕುಸಿತಕ್ಕೆ ಕಾರಣವಾಯಿತು ಎಂದು ಕರೇಕ್ಸ್​ ಬಿಎಚ್​ಡಿಯ ಮುಖ್ಯಸ್ಥ ಗೋಹ್ ಮಿಯಾಹ್ ಕಿಯಾಟ್ ಹೇಳಿದ್ದಾರೆ.. ಇದನ್ನೂ ಓದಿ: ಬಿಹಾರ ಸಿಎಂ ನಿತೀಶ್ ಕುಮಾರ್‌ಗೆ ಕೊರೊನಾ ಪಾಸಿಟಿವ್

  • ಒಂದೂವರೆ ವರ್ಷ ಮುಚ್ಚಿದ್ದ ಶಾಲಾ ಕೊಠಡಿಯಲ್ಲಿ ಕಾಂಡೋಮ್‌ ಪತ್ತೆ

    ಒಂದೂವರೆ ವರ್ಷ ಮುಚ್ಚಿದ್ದ ಶಾಲಾ ಕೊಠಡಿಯಲ್ಲಿ ಕಾಂಡೋಮ್‌ ಪತ್ತೆ

    -ಶಾಲೆಯ ಪರಿಸ್ಥಿತಿ ಕಂಡು ವಿದ್ಯಾರ್ಥಿಗಳು ಹಾಗೂ ಅಧಿಕಾರಿಗಳಲ್ಲಿ ಬೇಸರ

    ರಾಯಚೂರು: ಒಂದೂವರೆ ವರ್ಷದ ಬಳಿಕ ಇಂದು ರಾಜ್ಯದಲ್ಲಿ ಪ್ರಾಥಮಿಕ ಶಾಲೆಗಳು ಆರಂಭವಾಗುತ್ತಿವೆ. ರಾಯಚೂರಿನಲ್ಲಿ ಸೋಮವಾರ ಶಾಲೆಗೆ ಬಂದ ವಿದ್ಯಾರ್ಥಿಗಳು ಹಾಗೂ ಅಧಿಕಾರಿಗಳು ಶಾಲೆಯಲ್ಲಿ ಕಾಂಡೋಮ್‌ ಕಂಡು ಬೇಸರಗೊಂಡಿದ್ದಾರೆ.

    ರಾಯಚೂರು ನಗರದ ಆಸ್ಮಿಯಾ ಹಾಗೂ ಮೌಲಾನಾ ಆಜಾದ್ ಮಾದರಿ ಶಾಲೆಯ ಕೆಲ ಕೊಠಡಿಗಳನ್ನು ಕಿಡಿಗೇಡಿಗಳು ದುರ್ಬಳಕೆ ಮಾಡಿಕೊಂಡು ಅನೈತಿಕ ಚಟುವಟಿಕೆಗಳಿಗೆ ಬಳಸಿಕೊಂಡಿದ್ದಾರೆ. ಶಿಕ್ಷಕರಿಂದಲೂ ಪುಂಡರ ಹಾವಳಿ ತಡೆಯಲು ಸಾಧ್ಯವಾಗಿಲ್ಲ. ಅಲ್ಲದೇ ಸೋಲಾರ್ ವ್ಯವಸ್ಥೆ ಹಾಗೂ ಕಿಟಕಿಗಳನ್ನು ಹಾಳು ಮಾಡಿದ್ದಾರೆ. ಕೊಠಡಿಗಳು ಹಾಗೂ ಶಾಲಾ ಆವರಣದಲ್ಲಿ ಎಲ್ಲಿ ನೋಡಿದರೂ ಕಾಂಡೋಮ್‌ಗಳು ಬಿದ್ದಿರುವುದು ಕಂಡುಬಂದಿದೆ. ಇದನ್ನೂ ಓದಿ: ಸಲ್ಲು ತುಟಿಗೆ ಮುತ್ತಿಡಲು ಗಳಗಳನೇ ಕಣ್ಣೀರಿಟ್ಟಿದ್ದ ನಟಿ ಭಾಗ್ಯ ಶ್ರೀ

    raichur school

    ಈ ಕುರಿತಂತೆ ಪೊಲೀಸ್ ಠಾಣೆಗೆ ದೂರು ನೀಡಿ ಶಾಲೆಗೆ ರಕ್ಷಣೆ ನೀಡುವಂತೆ ಹಾಗೂ ಶಾಲಾ ಕಾಂಪೌಂಡ್ ಗೋಡೆ ಎತ್ತರಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ್ ದೊಡ್ಡಮನಿ ತಿಳಿಸಿದ್ದಾರೆ. ಇದನ್ನೂ ಓದಿ: ಟಾಟಾ ಉತ್ಪನ್ನದ ಗೋದಾಮಿಗೆ ಆಕಸ್ಮಿಕ ಬೆಂಕಿ – ದಿನ ಬಳಕೆಯ ವಸ್ತುಗಳು ಬೆಂಕಿಗಾಹುತಿ

  • ಜೇಬಿನಲ್ಲೇ ಸದಾ ಕಾಂಡೋಮ್ ಇಟ್ಕೊಂಡು ತಿರುಗಾಡುತ್ತಿದ್ದ ಕಾಮುಕ

    ಜೇಬಿನಲ್ಲೇ ಸದಾ ಕಾಂಡೋಮ್ ಇಟ್ಕೊಂಡು ತಿರುಗಾಡುತ್ತಿದ್ದ ಕಾಮುಕ

    ಮೈಸೂರು: ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಪ್ರಕರಣದ ತನಿಖೆ ಚುರುಕುಗೊಂಡಿದ್ದು ಓರ್ವ ಆರೋಪಿ ಜೇಬಿನಲ್ಲೇ ಕಾಂಡೋಮ್ ಇಟ್ಟುಕೊಂಡು ತಿರುಗಾಡುತ್ತಿದ್ದ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ.

    ಹೌದು. ಬಂಧನಕ್ಕೆ ಒಳಗಾದ ಕಾಮುಕರ ಓರ್ವ ನಟೋರಿಯಸ್ ಕಾಮುಕನಿದ್ದಾನೆ. ಈತ ಯಾವಾಗಲೂ ಜೇಬಿನಲ್ಲಿ ಕಾಂಡೊಂಮ್ ಇಟ್ಟುಕೊಂಡೆ ತಿರುಗಾಡುತ್ತಿದ್ದ. ಇದನ್ನೂ ಓದಿ:ಮೈಸೂರು ಕೇಸ್‍ಲ್ಲಿ ಪೊಲೀಸರ ಪಾಲಿಗೆ ಬೆಳಕಾಗಿದ್ದೇ ಬಸ್ ಟಿಕೆಟ್ ಕೊಟ್ಟ ಸುಳಿವು, ಆ ಮೊಬೈಲ್ ನಂಬರ್!

     
    ಗ್ಯಾಂಗ್‍ನ ಉಳಿದ ಸದಸ್ಯರು ಹಣಕ್ಕೆ ಬೇಡಿಕೆ ಇಟ್ಟರೆ ಈ ಕಾಮುಕನಿಗೆ ಸೆಕ್ಸ್ ಮುಖ್ಯವಾಗಿತ್ತು. ತಿಂಗಳಿಗೊಮ್ಮೆ ಮೈಸೂರಿಗೆ ಟ್ರಿಪ್ ರೀತಿ ಈ ಕಾಮುಕ ಬರುತ್ತಿದ್ದ. ಗ್ಯಾಂಗ್ ರೇಪ್ ಸ್ಥಳದಲ್ಲಿ ಸಿಕ್ಕಿದ್ದು ಈತನೇ ಬಳಸಿದ ಕಾಂಡೋಮ್ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಆರೋಪಿಗಳು ನಿರ್ಜನ ಪ್ರದೇಶವನ್ನೇ ಇವರು ಅಪರಾಧ ಕೇಂದ್ರವನ್ನಾಗಿ ಮಾಡುತ್ತಿದ್ದರು. ಈ ಹಿಂದೆಯೂ ಈ ಗ್ಯಾಂಗ್ ಹಲವು ಮಂದಿಗೆ ಬೆದರಿಸಿ ಹಣವನ್ನು ದೋಚಿದ್ದರು. ಆದರೆ ಅವರು ಯಾರೂ ಪೊಲೀಸರಿಗೆ ದೂರು ನೀಡಿರಲಿಲ್ಲ. ಹೀಗಾಗಿ ಮತ್ತಷ್ಟು ಧೈರ್ಯಗೊಂಡು ನೀಚ ಕೃತ್ಯಕ್ಕೆ ಇಳಿದಿದ್ದರು. ಇದನ್ನೂ ಓದಿ : ಜನರ ಮರ್ಯಾದೆಯನ್ನೆ ಬಂಡವಾಳ ಮಾಡಿಕೊಂಡಿದ್ದ ಗ್ಯಾಂಗ್ ರೇಪ್ ಕಿರಾತಕರು

  • ಸೆಕ್ಸ್ ವೇಳೆ ಕಾಂಡೋಮ್ ಬದಲು ಗಮ್ ಹಚ್ಚಿ ಪ್ರಾಣವೇ ಕಳ್ಕೊಂಡ!

    ಸೆಕ್ಸ್ ವೇಳೆ ಕಾಂಡೋಮ್ ಬದಲು ಗಮ್ ಹಚ್ಚಿ ಪ್ರಾಣವೇ ಕಳ್ಕೊಂಡ!

    ಗಾಂಧಿನಗರ: ಯುವಕನೊಬ್ಬ ಸೆಕ್ಸ್ ವೇಳೆ ಕಾಂಡೋಮ್ ಧರಿಸುವ ಬದಲು ಗಮ್ ಹಚ್ಚಿ ಕೊನೆಗೆ ಪ್ರಾಣಬಿಟ್ಟ ಅಚ್ಚರಿಯ ಘಟನೆಯೊಂದು ಗುಜರಾತ್ ನಲ್ಲಿ ನಡೆದಿದೆ.

    ಮೃತನನ್ನು ಸಲ್ಮಾನ್ ಮಿರ್ಜಾ(25) ಎಂದು ಗುರುತಿಸಲಾಗಿದೆ. ಈತ ಮೂಲತಃ ಅಹಮದಾಬಾದ್‍ನ ಫತೇವಾದಿ ಪ್ರದೇಶದವನೆಂದು ತಿಳಿದು ಬಂದಿದೆ. ಸಲ್ಮಾನ್ ಲೈಂಗಿಕ ಕ್ರಿಯೆ ನಡೆಸಲು ಕಾಂಡೋಮ್ ಬದಲು ಎಪೋಕ್ಸಿ ಅಡೆಸಿವ್ ಎಂಬ ಗಮ್ ಬಳಸಿ ಸಾವನ್ನಪ್ಪಿದ್ದಾನೆ.

    ತನ್ನ ಮಾಜಿ ಪ್ರಿಯತಮೆಯೊಂದಿಗೆ ಸಲ್ಮಾನ್ ಹೋಟೆಲ್‍ಗೆ ಹೋಗಿದ್ದನು. ಹೀಗೆ ಹೋದ ಇಬ್ಬರೂ ಸೆಕ್ಸ್ ನಡೆಸಲು ಇಚ್ಛಿಸಿದ್ದಾರೆ. ಆದರೆ ಮಾಜಿ ಪ್ರೇಯಸಿ ಗರ್ಭಾವತಿಯಾಗಬಾರದೆಂದು ಎಚ್ಚರವಹಿಸಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾನೆ. ಕಾಂಡೋಮ್ ಇಲ್ಲದ ಕಾರಣ ಸಲ್ಮಾನ್, ತನ್ನ ಮರ್ಮಾಂಗಕ್ಕೆ ಗಮ್ ರೂಪದ ವಸ್ತು ಹಚ್ಚಿದ್ದಾನೆ. ಪರಿಣಾಮ ಸಲ್ಮಾನ್ ಮೃತಪಟ್ಟಿದ್ದಾನೆ. ಇದನ್ನೂ ಓದಿ: ಅನೈತಿಕ ಸಂಬಂಧದ ಶಂಕೆ-ಪತ್ನಿಯ ಗುಪ್ತಾಂಗಕ್ಕೆ ಗಮ್ ಹಾಕಿದ ಪತಿ

    ಇತ್ತ ಜುಹಾಪುರದ ಹೋಟೆಲ್ ಬಳಿ ಪೊದೆಗಳಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಸಲ್ಮಾನ್ ಪತ್ತೆಯಾಗಿದ್ದಾನೆ. ಸ್ನೇಹಿತ ಫಿರೋಜ್ ಶೇಖ್ ಪೊದೆಯಲ್ಲಿ ಬಿದ್ದಿದ್ದ ಸ್ನೇಹಿತನನ್ನು ಕಂಡು ಮನೆಗೆ ಕರೆದುಕೊಂಡು ಹೋಗಿದ್ದಾನೆ. ನಂತರ ಕೂಡಲೇ ಸಲ್ಮಾನ್ ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಅದಾಗಲೇ ಸಲ್ಮಾನ್ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಗಲಾಟೆ ಮಾಡಿ ತಲೆಗೆ ಕಲ್ಲಲ್ಲಿ ಹೊಡೆದು ಹುಡುಗಿಯನ್ನು ದೂರ ಕರೆದೊಯ್ದು ರೇಪ್ ಮಾಡಿದ್ರು: ಯುವಕ

    ಘಟನೆ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿ ಪ್ರತಿಕ್ರಿಯಿಸಿ, ಅಂಟನ್ನು ಒಳಗೊಂಡಿರುವ ಮಾದಕದ್ರವ್ಯವನ್ನು ಕಿಕ್ ಪಡೆಯಲು ಬಳಸುತ್ತಿದ್ದನು. ಅಲ್ಲದೇ ಗರ್ಭಧಾರಣೆ ತಪ್ಪಿಸಲು ಅವರು ಖಾಸಗಿ ಅಂಗಕ್ಕೆ ಅಂಟನ್ನು ಬಳಸಿದ್ದಾನೆ. ದುರದೃಷ್ಟವಶಾತ್ ಸಲ್ಮಾನ್ ಅಂಗಗಳು ಹಾನಿಗೊಳಗಾಯಿತು. ಪರಿಣಾಮ ಸಲ್ಮಾನ್ ಬಹು ಅಂಗಾಂಗ ವೈಫಲ್ಯದಿಂದ ಮೃತಪಟ್ಟಿದ್ದಾನೆ.

    ನಾವು ಹೋಟೆಲ್‍ನ ಸಿಸಿಟಿವಿ ದೃಶ್ಯಾವಳಿಗಳನ್ನು ತನಿಖೆ ಮಾಡಿದ್ದೇವೆ ಮತ್ತು ಸಲ್ಮಾನ್ ತನ್ನ ಮಾಜಿ ಭಾವಿಪತ್ನಿಯೊಂದಿಗೆ ಹೋಟೆಲ್ ಒಳಗೆ ಪ್ರವೇಶಿಸುವುದನ್ನು ನೋಡಿದ್ದೇವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

  • 5ನೇ ತರಗತಿ ಮಕ್ಕಳಿಗೆ ಶಾಲೆಯಿಂದಲೇ ಉಚಿತ ಕಾಂಡೋಮ್- ಪೋಷಕರು ಆಕ್ರೋಶ

    5ನೇ ತರಗತಿ ಮಕ್ಕಳಿಗೆ ಶಾಲೆಯಿಂದಲೇ ಉಚಿತ ಕಾಂಡೋಮ್- ಪೋಷಕರು ಆಕ್ರೋಶ

    ವಾಷಿಂಗ್ಟನ್: ಚಿಕಾಗೊ ಪಬ್ಲಿಕ್ ಸ್ಕೂಲ್ಸ್ ಬೋರ್ಡ್(ಸಿಪಿಎಸ್) ತನ್ನ ಅಧೀನದ ಪ್ರೌಢ ಶಾಲೆಗಳಲ್ಲಿ ಕಾಂಡೋಮ್ ಯೋಜನೆ ಜಾರಿಗೊಳಿಸಿ ಅಚ್ಚರಿ ಮೂಡಿಸಿದೆ. ಐದನೇ ತರಗತಿ ವಿದ್ಯಾರ್ಥಿಗಳಿಗೆ ಶಾಲಾ ಆವರಣದಲ್ಲಿಯೇ ಕಾಂಡೋಮ್ ನೀಡಿ ಪ್ರೋ ತ್ಸಾಹಿಸಲಾಗುತ್ತಿದೆ. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಪತ್ನಿಯ ಮೂಗು ಕತ್ತರಿಸಿದ ಪತಿ

    ನರ್ಸರಿಯಿಂದ ನಾಲ್ಕನೇ ತರಗತಿ ವಿದ್ಯಾರ್ಥಿಗಳು ಮಾತ್ರ ಈ ಯೋಜನೆಯಿಂದ ಹೊರ ಉಳಿದಿದ್ದು, ಐದನೇ ತರಗತಿ ಮೇಲ್ಪಟ್ಟ ಎಲ್ಲಾ ವಿದ್ಯಾರ್ಥಿಗಳಿಗೆ ಕಾಂಡೋಮ್ ಒದಗಿಸಲಾಗುತ್ತಿದೆ. ಇದಕ್ಕೆ ಸಮಜಾಯಿಸಿ ನೀಡಿರುವ ಸಿಪಿಎಸ್, ಉತ್ತಮ ಲೈಂಗಿಕ ಶಿಕ್ಷಣವು ಆರಂಭದಲ್ಲಿಯೇ ದೊರೆಯಬೇಕು. ಅದರಿಂದ ಅಕಾಲಿಕ ಸಂತಾನ ಮತ್ತು ಲೈಂಗಿಕ ರೋಗ ಹರಡುವುದನ್ನು ತಡೆಗಟ್ಟಬಹುದು ಎಂದು ಹೇಳಿದೆ.

    ಕಳೆದ ಡಿಸೆಂಬರ್‍ನಲ್ಲಿಯೇ ಚಿಕಾಗೊ ಪಬ್ಲಿಕ್ ಸ್ಕೂಲ್ ಬೋರ್ಡ್ ಈ ವಿಚಿತ್ರ ಯೋಜನೆ ಸಿದ್ಧಪಡಿಸಿ ಕೆಲವು ಶಾಲೆಗಳಲ್ಲಿ ಜಾರಿಗೆ ಕೂಡ ತಂದಿದೆ. ನಗರದ 600ಕ್ಕಿಂತ ಹೆಚ್ಚಿನ ಶಾಲೆಗಳಲ್ಲಿ ಕಾಂಡೋಮ್ ಭಾಗ್ಯ ಜಾರಿಗೊಳಿಸಲಾಗುತ್ತಿದೆ. ಸಾರ್ವಜನಿಕ ಆರೋಗ್ಯ ಇಲಾಖೆಯೇ ಕಾಂಡೋಮ್ ವೆಚ್ಚ ಭರಿಸುತ್ತಿದ್ದು, ಮಂಡಳಿಗೆ ಯಾವುದೇ ನಷ್ಟವಿಲ್ಲ. ಮಕ್ಕಳಿಗೆ ಸರಿಯಾದ ಲೈಂಗಿಕ ಶಿಕ್ಷಣ ನೀಡುವುದಷ್ಟೆ ನಮ್ಮ ಕೆಲಸ. ಇದು ತಪ್ಪು ಎಂದು ಕೆಲವರು ಟೀಕಿಸುತ್ತಿದ್ದಾರೆ.

    ಈ ಬಗ್ಗೆ ಸಿಪಿಎಸ್ ವೈದ್ಯ ಕೆನೆತ್ ಫಾಕ್ಸ್ ಪ್ರತಿಕ್ರಿಯಿಸಿ, ಮಕ್ಕಳು ಏನೂ ತಿಳಿಯದೇ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದರಿಂದ ದೊಡ್ಡ ಅನಾಹುತ ಆಗುತ್ತದೆ. ಹದಿಹರೆಯದಲ್ಲೆ ಗರ್ಭ ಧರಿಸುವ ಅಪಾಯ ಹೆಚ್ಚಿದೆ. ಇದರಿಂದ ಸಮಾಜದಲ್ಲಿ ಅಕ್ರಮ ಸಂತಾನ ಹೆಚ್ಚಿ ಅನಾಥ ಮಕ್ಕಳು ಹೆಚ್ಚಾಗುತ್ತಿದ್ದಾರೆ. ವಿದ್ಯಾರ್ಥಿಗಳಲ್ಲಿ ಎಚ್‍ಐವಿಯಂತಹ ಅಪಾಯಕಾರಿ ಲೈಂಗಿಕ ರೋಗಗಳೂ ಕಾಣಿಸಿ ಸಮಸ್ಯೆ ಸೃಷ್ಟಿಯಾಗುತ್ತದೆ. ಇದಕ್ಕೆಲ್ಲ ಕಾಂಡೋಮ್ ಉತ್ತಮ ಪರಿಹಾರ ಎಂದು ಹೇಳಿದ್ದಾರೆ. ಇತ್ತ ಪ್ರೌಢ ಶಾಲೆಯೊಂದಕ್ಕೆ ತಿಂಗಳಿಗೆ 250, ಹೈಸ್ಕೂಲ್‍ಗೆ 1,000 ಕಾಂಡೋಮ್‍ಗಳನ್ನು ನೇರ ಒದಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಒಟ್ಟಿನಲ್ಲಿ ಸಿಪಿಎಸ್ ಈ ಯೋಜನೆಗೆ ಮಕ್ಕಳ ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಮಕ್ಕಳನ್ನು ದಾರಿ ತಪ್ಪಿಸುವ ಕ್ರಮ ಇದಾಗಿದ್ದು, ಅವರ ಕೈಗೆ ಕಾಂಡೋಮ್ ನೀಡಿದರೆ ಆಟ ಆಡಲು ಬಳಸುತ್ತವೆ. ಕೆಲವು ಮಕ್ಕಳು ಕಾಂಡೋಮ್ ಇವೆ ಎನ್ನುವ ಕಾರಣಕ್ಕೆ ಅಕ್ರಮ ಲೈಂಗಿಕ ಕ್ರಿಯೆಗೆ ಯತ್ನಿಸಬಹುದು ಎಂದು ಆಕ್ರೋಶ ಹೊರಹಾಕಿದ್ದಾರೆ.