Tag: Condom

  • ಒಪ್ಪಂದ ಕೊನೆಗೊಳಿಸಲು ಮುಂದಾದ ಸಿಟ್ಟಲ್ಲಿ ಕಂಪನಿಗೆ ಬ್ಯಾಂಡೇಜ್‌, ಕಾಂಡೋಮ್‌ ತುಂಬಿ ಸಮೋಸಾ ಪೂರೈಕೆ!

    ಒಪ್ಪಂದ ಕೊನೆಗೊಳಿಸಲು ಮುಂದಾದ ಸಿಟ್ಟಲ್ಲಿ ಕಂಪನಿಗೆ ಬ್ಯಾಂಡೇಜ್‌, ಕಾಂಡೋಮ್‌ ತುಂಬಿ ಸಮೋಸಾ ಪೂರೈಕೆ!

    – ಓರ್ವನ ಬಂಧನ, ಐವರ ವಿರುದ್ಧ ಎಫ್‌ಐಆರ್‌

    ಮುಂಬೈ: ಮಹಾರಾಷ್ಟ್ರದ ಪುಣೆಯಲ್ಲಿರುವ ಕಂಪನಿಯ (Pune Company) ಕ್ಯಾಂಟೀನ್‌ನಲ್ಲಿ ಸಮೋಸಾದೊಳಗೆ (Samosa) ಬ್ಯಾಂಡೇಜ್‌, ಕಾಂಡೋಮ್, ಕಲ್ಲುಗಳು ಮತ್ತು ತಂಬಾಕು ಮುಂತಾದ ವಸ್ತುಗಳು ಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದು, ಐವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

    ಆರೋಪಿಗಳನ್ನು ರಹೀಮ್ ಶೇಖ್, ಅಜರ್ ಶೇಖ್, ಮಜರ್ ಶೇಖ್, ಅಜರ್ ಶೇಖ್ ಮತ್ತು ವಿಕ್ಕಿ ಶೇಖ್ ಎಂದು ಗುರುತಿಸಲಾಗಿದೆ. ಕಂಪನಿಯು ತಮ್ಮ ಒಪ್ಪಂದವನ್ನು ರದ್ದುಪಡಿಸಿದ ಕೋಪದಿಂದ ಆರೋಪಿಗಳೆಲ್ಲರೂ ಈ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: 3 ದಿನದಲ್ಲಿ ಸತತ 36 ಗಂಟೆ ವೀಡಿಯೋ ಕಾಲ್‌ – ಸೈಬರ್‌ ವಂಚನೆಗೆ ಸಿಕ್ಕಿ 15 ಲಕ್ಷ ರೂ. ಕಳೆದುಕೊಂಡ ಮಹಿಳೆ

    ಮಾಧ್ಯಮ ವರದಿಗಳ ಪ್ರಕಾರ, ಪುಣೆಯ ಪಿಂಪ್ರಿ ಚಿಂಚ್ವಾಡ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಚಿಖಾಲಿ ಮೂಲದ ಕಂಪನಿಯೊಂದರ ಅಧಿಕಾರಿ ಕೀರ್ತಿಕುಮಾರ್ ಶಂಕರರಾವ್ ದೇಸಾಯಿ ಅವರು ಏ.7 ರಂದು ಪೊಲೀಸರಿಗೆ ದೂರು ನೀಡಿದ್ದಾರೆ. ಚಿಖಾಲಿ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ, ತಮ್ಮ ಕಂಪನಿಯು ಚಿಖಾಲಿಯ ಮತ್ತೊಂದು ದೊಡ್ಡ ಕಂಪನಿಯಿಂದ ಆಹಾರ ಪೂರೈಕೆಗಾಗಿ ಆದೇಶವನ್ನು ಪಡೆದಿದೆ. ಅದರಂತೆ ಕೀರ್ತಿಕುಮಾರ್ ಅವರು ರಹೀಮ್ ಖಾನ್ ಮಾಲೀಕತ್ವದ SRS ಎಂಟರ್ ಪ್ರೈಸಸ್ ಹೆಸರಿನ ಕಂಪನಿಯೊಂದಿಗೆ ಸಮೋಸಾ ಪೂರೈಕೆಗೆ ಒಪ್ಪಂದ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ.

    ಆಗಿದ್ದೇನು..?: ಕೀರ್ತಿಕುಮಾರ್ ಪ್ರಕಾರ , ಒಂದು ದಿನ SRS ಕಂಪನಿಯಿಂದ ಸರಬರಾಜಾಗುತ್ತಿದ್ದ ಸಮೋಸದಲ್ಲಿ ಗಾಯಗಳಿಗೆ ಹಾಕುವ ಬ್ಯಾಂಡೇಜ್ (Bandage) ಪತ್ತೆಯಾಗಿದೆ. ಸಿಬ್ಬಂದಿಯಿಂದ ಈ ಕುರಿತು ದೂರು ಸ್ವೀಕರಿಸಿದ ಕೀರ್ತಿಕುಮಾರ್ ಅವರ ಕಂಪನಿಯು ಎಸ್‌ಆರ್‌ಎಸ್‌ನೊಂದಿಗಿನ ಒಪ್ಪಂದವನ್ನು ಮುರಿದುಕೊಳ್ಳಲಾಯಿತು. ಬಳಿಕ ಪುಣೆ ಮೂಲದ ಮತ್ತೊಂದು ಕಂಪನಿಯಾದ ಮನೋಹರ್ ಎಂಟರ್‌ಪ್ರೈಸಸ್‌ಗೆ ಸಮೋಸಾಗಳನ್ನು ಪೂರೈಸಲು ಸೂಚನೆ ನೀಡಿತು. ಇದರಿಂದ ಸಿಟ್ಟಿಗೆದ್ದ SRS ಮಾಲೀಕ ರಹೀಮ್ ಖಾನ್ ತನ್ನ ಸಹಚರರಾದ ಅಜರ್ ಶೇಖ್ ಮತ್ತು ಮಜರ್ ಶೇಖ್ ಜೊತೆ ಸೇರಿ ದೊಡ್ಡ ಸಂಚು ರೂಪಿಸಿದ್ದ.

    ಅದರಂತೆ ಮಾರ್ಚ್ 27 ರಂದು ರಹೀಮ್ ಖಾನ್, ತನ್ನ ಕೆಲಸಗಾರರಿಗೆ ಕಾಂಡೋಮ್‌ಗಳು (Condoms), ಗುಟ್ಕಾ (Gutkha) ಮತ್ತು ಕಲ್ಲುಗಳನ್ನು ಸಮೋಸಾಳ ಒಳಗೆ ತುಂಬಲು ಸೂಚಿಸಿದ್ದಾನೆ. ಬಳಿಕ ಒಪ್ಪದ ಕೊನೆಗೊಳಿಸಲು ಮುಂದಾದ ಕಂಪನಿಗೆ ಬೆಳಗ್ಗೆ 7:30 ರಿಂದ 9 ರ ನಡುವೆ ಈ ಸಮೋಸಗಳನ್ನು ವಿತರಿಸಿದರು. ಈ ವೇಳೆ ಕಾಂಡೋಮ್‌, ಗುಟ್ಕಾ ಮೊದಲಾದ ವಸ್ತುಗಳು ಸಿಕ್ಕಿವೆ. ಈ ಕುರಿತು ಸಿಬ್ಬಂದಿಯು ಕೀರ್ತಿಕುಮಾರ್ ಅವರಿಗೆ ದೂರು ನೀಡಿದ್ದಾರೆ. ಕೂಡಲೇ ಕೀರ್ತಿ ಕುಮಾರ್‌ ಅವರು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ದೂರು ಸ್ವೀಕರಿಸಿದ ಪೊಲೀಸರು ರಹೀಮ್ ಶೇಖ್, ಫಿರೋಜ್ ಶೇಖ್, ವಿಕ್ಕಿ ಶೇಖ್, ಅಜರ್ ಶೇಖ್ ಮತ್ತು ಮಜರ್ ಶೇಖ್ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಅಲ್ಲದೇ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 328 (ವಿಷದ ಮೂಲಕ ನೋವುಂಟುಮಾಡುವುದು), 120-ಬಿ (ಕ್ರಿಮಿನಲ್‌ ಪಿತೂರಿ) ಮತ್ತು 34 (ಸಾಮಾನ್ಯ ಉದ್ದೇಶದ ಮುಂದುವರಿಕೆಗಾಗಿ ಹಲವಾರು ವ್ಯಕ್ತಿಗಳು ಮಾಡಿದ ಕೃತ್ಯಗಳು) ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಪ್ರಕರಣ ಸಂಬಂಧ ಈಗಾಗಲೇ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಈ ಕುರಿತು ತನಿಖೆ ಮುಂದುವರಿದಿದೆ.

  • ಝಿಕಾ ಆತಂಕ – ಕಾಂಡೋಮ್ ಜಾಗೃತಿ ಬಳಿಕ ಗರ್ಭಿಣಿಯರ ಮೇಲೆ ತೀವ್ರ ನಿಗಾ

    ಝಿಕಾ ಆತಂಕ – ಕಾಂಡೋಮ್ ಜಾಗೃತಿ ಬಳಿಕ ಗರ್ಭಿಣಿಯರ ಮೇಲೆ ತೀವ್ರ ನಿಗಾ

    ರಾಯಚೂರು: ಜಿಲ್ಲೆಯಲ್ಲಿ ಝಿಕಾ ವೈರಸ್ (Zika Virus) ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸಚಿವ ಶಂಕರ್ ಪಾಟೀಲ್ ಬಿ.ಮುನೇನಕೊಪ್ಪ (Shankar Patil Munenakoppa) ರಾಯಚೂರಿನಲ್ಲಿಂದು (Raichur) ಕೇಂದ್ರ, ರಾಜ್ಯ ತಜ್ಞರ ತಂಡ ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಚರ್ಚಿಸಿದರು.

    ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯ ಬಳಿಕ ಮಾತನಾಡಿದ ಸಚಿವ ಶಂಕರ್ ಪಾಟೀಲ್ ಬಿ.ಮುನೇನಕೊಪ್ಪ, ಪ್ರಕರಣ ಪತ್ತೆಯಾದ ಕೂಡಲೇ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ 151 ಗರ್ಭಿಣಿಯರ (Pregnant Women) ಮೇಲೆ ನಿಗಾ ಇಡಲಾಗಿದೆ. 21 ಗರ್ಭಿಣಿಯರ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವೈರಸ್ ಪತ್ತೆಯಾದ ತಾಲೂಕಿನ 57 ಗರ್ಭಿಣಿಯರ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಸಂಗ್ರಹಿಸಿದ ನೀರನ್ನು ಹೆಚ್ಚುದಿನ ಇಡದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಶಕ್ತಿಧಾಮದ ಮಕ್ಕಳಿಗೆ ಸಹಾಯ ಮಾಡಲು ಸಿದ್ಧ, ಸದ್ಯಕ್ಕೆ ಅಲ್ಲಿ ಅವಶ್ಯಕತೆ ಇಲ್ಲ: ನಟ ವಿಶಾಲ್

    ಜಿಲ್ಲಾಡಳಿತ, ಆರೋಗ್ಯ ಇಲಾಖೆ ಅಧಿಕಾರಿಗಳು ಅಲರ್ಟ್ ಆಗಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. ನಿರ್ಲಕ್ಷ್ಯ ವಹಿಸಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಈ ಹಿಂದೆ ಜಿಲ್ಲೆಯಲ್ಲಿ ನಿರ್ಲಕ್ಷ್ಯವಹಿಸಿದ ಅಧಿಕಾರಿಗಳನ್ನ ವಜಾ ಮಾಡಲಾಗಿತ್ತು. ಈಗಲೂ ಅಮಾನತು ಬದಲು ವಜಾ ಮಾಡುವ ಎಚ್ಚರಿಕೆ ನೀಡಲಾಗಿದೆ. ಎಲ್ಲಾ ರೀತಿಯ ಅಧಿಕಾರವನ್ನ ಜಿಲ್ಲಾಧಿಕಾರಿಗೆ ನೀಡಿದ್ದೇವೆ. ಅಧಿಕಾರಿಗಳನ್ನ ಬಳಸಿಕೊಂಡು ಅವರು ಉತ್ತಮವಾಗಿ ಕಾರ್ಯ ನಿರ್ವಹಿಸಲಿ. ನಾವೂ ನಿರಂತರವಾಗಿ ಸಭೆ ಮಾಡಿ, ಸೂಚನೆ ನೀಡುತ್ತಿದ್ದೇವೆ. ರೋಗ, ಸೊಳ್ಳೆಗಳು ಉಲ್ಬಣಗೊಳ್ಳದಂತೆ ಕ್ರಮ ಕೈಗೊಳ್ಳಲಾಗಿದೆ ಅಂತ ಸಚಿವ ಶಂಕರ್ ಪಾಟೀಲ್ ಬಿ. ಮುನೇನಕೊಪ್ಪ ಹೇಳಿದ್ದಾರೆ. ಇದನ್ನೂ ಓದಿ: ರಾಯಚೂರಿನಲ್ಲಿ ಝಿಕಾ ವೈರಸ್ ಪತ್ತೆ – ದಂಪತಿಗೆ ಕಾಂಡೋಮ್ ನೀಡಿ ಜಾಗೃತಿ

    ರಾಯಚೂರಿನ ಮಾನ್ವಿಯ ಕೋಳಿ ಕ್ಯಾಂಪ್‌ನ ಬಾಲಕಿಯಲ್ಲಿ ಝಿಕಾ ವೈರಸ್ ಪತ್ತೆಯಾಗಿರುವುದು ರಾಜ್ಯದ ಮೊದಲ ಪ್ರಕರಣವಾಗಿರುವುದರಿಂದ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇದು ಗರ್ಭಿಣಿಯರ ಮೇಲೆ ಹೆಚ್ಚು ಪರಿಣಾಮ ಬೀರುವುದರಿಂದ ದಂಪತಿಗಳಿಗೆ ಕಾಂಡೋಮ್ (Condom) ನೀಡಿ ಜಾಗೃತಿ ಮೂಡಿಸಲಾಗಿತ್ತು. ಇದೀಗ ತೀವ್ರ ನಿಗಾವಹಿಸಿದ್ದು, ಮಾದರಿ ಸಂಗ್ರಹಗಳನ್ನು ಪ್ರಯೋಗಾಲಕ್ಕೆ ಪರೀಕ್ಷೆಗೆ ಕಳುಹಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಕಾಂಡೋಮ್‍ಗಳನ್ನು ಹೆಚ್ಚಾಗಿ ಬಳಸ್ತಿರೋದು ನಾವು – ಭಾಗವತ್‍ಗೆ ಓವೈಸಿ ತಿರುಗೇಟು

    ಕಾಂಡೋಮ್‍ಗಳನ್ನು ಹೆಚ್ಚಾಗಿ ಬಳಸ್ತಿರೋದು ನಾವು – ಭಾಗವತ್‍ಗೆ ಓವೈಸಿ ತಿರುಗೇಟು

    ನವದೆಹಲಿ: ದೇಶದಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚಾಗುತ್ತಿಲ್ಲ. ಕಾಂಡೋಮ್‍ಗಳನ್ನು ಹೆಚ್ಚಾಗಿ ಬಳಸುತ್ತಿರುವವರೇ ಮುಸ್ಲಿಮರು ಎಂದು ಜನಸಂಖ್ಯೆ ನಿಯಂತ್ರಣ ಕುರಿತಂತೆ ಇತ್ತೀಚೆಗಷ್ಟೇ ಆರ್‌ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಅವರು ನೀಡಿದ್ದ ಹೇಳಿಕೆಗೆ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ (Asaduddin Owaisi) ತಿರುಗೇಟು ನೀಡಿದ್ದಾರೆ.

    ಹೈದರಾಬಾದ್‍ನಲ್ಲಿ (Hydrabad) ನಡೆದ ಸಭೆಯೊಂದರ ವೀಡಿಯೋವನ್ನು ಓವೈಸಿ ಅವರು ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ವೀಡಿಯೋದಲ್ಲಿ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೇಹಾದುಲ್ ಮುಸ್ಲಿಮೀನ್ (All India Majlis-e-Ittehadul Muslimeen) (ಎಐಎಂಐಎಂ) ಮುಖ್ಯಸ್ಥರು “ಮುಸ್ಲಿಮರ ಜನಸಂಖ್ಯೆಯು ಹೆಚ್ಚಾಗುತ್ತಿಲ್ಲ, ಬದಲಾಗಿ ಕಡಿಮೆಯಾಗುತ್ತಿದೆ. ಮುಸ್ಲಿಮರಲ್ಲಿ ಮಕ್ಕಳ ನಡುವಿನ ಅಂತರವೂ ಹೆಚ್ಚುತ್ತಿದೆ. ಕಾಂಡೋಮ್ (Condom) ಅನ್ನು ಹೆಚ್ಚಾಗಿ ಯಾರು ಹೆಚ್ಚಾಗಿ ಬಳಸುತ್ತಿರುವವರು ಯಾರು? ನಾವು, ಮೋಹನ್ ಭಾಗವತ್ ಈ ಬಗ್ಗೆ ಮಾತನಾಡುವುದು ಬೇಕಾಗಿಲ್ಲ ಎಂದು ಹೇಳಿರುವುದನ್ನು ಕೇಳಿಸಿಕೊಳ್ಳಬಹುದಾಗಿದೆ.

    ನಾಗಪುರದಲ್ಲಿರುವ (Nagapura) ಆರ್‌ಎಸ್‍ಎಸ್ (RSS) ಕೇಂದ್ರ ಕಚೇರಿಯಲ್ಲಿ ನಡೆದ ವಿಜಯದಶಮಿ (Viajayadashami) ಕಾರ್ಯಕ್ರಮದಲ್ಲಿ ಮಾತನಾಡಿದ ಮೋಹನ್ ಭಾಗವತ್ ಅವರು, ದೇಶದಲ್ಲಿರುವ ಎಲ್ಲಾ ಧಾರ್ಮಿಕ ಸಮುದಾಯಗಳಿಗೆ ಅನ್ವಯವಾಗುವಂತೆ ಜನಸಂಖ್ಯಾ ನೀತಿಯನ್ನು ಜಾರಿಗೆ ತರಬೇಕು ಎಂದು ಹೇಳಿದ್ದರು. ಜನಸಂಖ್ಯೆಯಿಂದ ಧರ್ಮ ಆಧಾರಿತ ಅಸಮತೋಲನ ಮತ್ತು ಬಲವಂತವಾಗಿ ಮತಾಂತರ ಮಾಡಲಾಗುತ್ತಿದೆ ಎಂದಿದ್ದರು. ಇದನ್ನೂ ಓದಿ: ಹಿಂದೂಗಳಿಂದ ಅಲ್ಪಸಂಖ್ಯಾತರಿಗೆ ಅಪಾಯವಿಲ್ಲ; ನೀವು ಭಯಪಡಬೇಕಾಗಿಲ್ಲ – ಮೋಹನ್‌ ಭಾಗವತ್‌

    ವಿಶ್ವದಲ್ಲಿ ಎರಡು ರೀತಿಯಲ್ಲಿ ಜನಸಂಖ್ಯೆ ಏರಿಕೆಯಾಗುತ್ತಿದೆ. ಒಂದು ದೇಶದ ಸಂಪನ್ಮೂಲವಾಗಿ ಬಳಕೆಯಾಗುವ ಜನಸಂಖ್ಯೆಯ ಏರಿಕೆ. ಮತ್ತೊಂದು ದೇಶಕ್ಕೆ ಹೊರೆಯಾಗುವ ಜನಸಂಖ್ಯೆ. ಎರಡನೇ ಸ್ವರೂಪದ ಜನಸಂಖ್ಯೆ ಏರಿಕೆಯಾಗುತ್ತಲೇ ಇದ್ದರೆ ಅದು ಹೊರಲಾಗದ ಹೊರೆಯಾಗುತ್ತದೆ. ಒಬ್ಬ ಮಹಿಳೆ ಎಷ್ಟು ಮಕ್ಕಳನ್ನು ಹೆತ್ತಿದ್ದಾಳೆ ಎಂಬುದು ಆಕೆಯ ಮಾನಸಿಕ ಆರೋಗ್ಯ, ಜತೆಗೆ ಆರ್ಥಿಕ ಸ್ಥಿತಿಯನ್ನೂ ಬಾಧಿಸುತ್ತದೆ. ದೇಶದ ಪರಿಸರವನ್ನೂ ಬಾಧಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಎಲ್ಲರೂ ಉದ್ಯೋಗದ ಹಿಂದೆ ಓಡುತ್ತಿದ್ದಾರೆ, ಎಷ್ಟು ಜನರಿಗೆ ಉದ್ಯೋಗ ನೀಡಲು ಸಾಧ್ಯ: ಮೋಹನ್ ಭಾಗವತ್ ಪ್ರಶ್ನೆ

    ಯಾವುದೇ ಕುಟುಂಬ ಏನು ಬಯಸುತ್ತದೆ ಎಂಬುದೂ ಜನಸಂಖ್ಯೆಯ ಏರಿಕೆಯ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ರಾಷ್ಟ್ರೀಯ ಅಸ್ಮಿತೆ ಮತ್ತು ರಾಷ್ಟ್ರೀಯ ಭದ್ರತೆಗೆ ಪ್ರಸ್ತುತವಾಗುವಂತೆ ಜನಸಂಖ್ಯೆಯನ್ನು ರೂಪಿಸಿ, ರಕ್ಷಿಸಬೇಕಾಗುತ್ತದೆ. ಹೀಗಾಗಿ ಜನಸಂಖ್ಯೆಯ ನಿಯಂತ್ರಣ ನೀತಿ ಅತ್ಯಗತ್ಯ. ಆದರೆ ಜನಸಂಖ್ಯಾ ನಿಯಂತ್ರಣ ನೀತಿಯು ಎಲ್ಲಾ ಧಾರ್ಮಿಕ ಸಮುದಾಯಗಳಿಗೆ ಸಮಾನವಾಗಿ ಅನ್ವಯವಾಗಬೇಕು ಎಂದು ಆಗ್ರಹಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಇಂದು ಸ್ಯಾನಿಟರಿ ಪ್ಯಾಡ್, ನಾಳೆ ಕಾಂಡೋಮ್ ಕೇಳ್ತೀರಿ – ವಿವಾದಿತ ಹೇಳಿಕೆಗೆ ಕ್ಷಮೆಯಾಚಿಸಿದ ಐಎಎಸ್ ಅಧಿಕಾರಿ

    ಇಂದು ಸ್ಯಾನಿಟರಿ ಪ್ಯಾಡ್, ನಾಳೆ ಕಾಂಡೋಮ್ ಕೇಳ್ತೀರಿ – ವಿವಾದಿತ ಹೇಳಿಕೆಗೆ ಕ್ಷಮೆಯಾಚಿಸಿದ ಐಎಎಸ್ ಅಧಿಕಾರಿ

    ಪಾಟ್ನಾ: ಸ್ಯಾನಿಟರಿ ನ್ಯಾಪ್‍ಕಿನ್‍ಗಳನ್ನು (Sanitary Napkins) ಉಚಿತವಾಗಿ ನೀಡಬೇಕೆಂಬ ಯುವತಿಯರ ಮನವಿಗೆ ಬಿಹಾರದ ಮಹಿಳಾ ಸಮಿತಿಯ ಮುಖ್ಯಸ್ಥೆ (Bihar women’s panel chief ) ಹರ್ಜೋತ್ ಕೌರ್ (Harjot Kaur) ಅವರು ನೀಡಿದ್ದ ವಿವಾದಾತ್ಮಕ ಹೇಳಿಕೆ ಕುರಿತಂತೆ ಕ್ಷಮೆಯಾಚಿಸಿದ್ದಾರೆ.

    ಬುಧವಾರ ಬಿಹಾರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವಿದ್ಯಾರ್ಥಿನಿಯೊಬ್ಬಳು, ಸರ್ಕಾರ 20-30 ರೂಪಾಯಿಯ ಸ್ಯಾನಿಟರಿ ಪ್ಯಾಡ್‍ಗಳನ್ನು ಉಚಿತವಾಗಿ ನೀಡಬಹುದಾ ಎಂದು ಬಿಹಾರ ಮಹಿಳಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಹರ್ಜೋತ್ ಕೌರ್ ಅವರನ್ನು ಕೇಳಿದ್ದರು. ಇದಕ್ಕೆ ಇಂದು, ನೀವು ಸ್ಯಾನಿಟರಿ ಪ್ಯಾಡ್‍ಗಳನ್ನು ಕೇಳುತ್ತಿದ್ದೀರಿ, ನಾಳೆ ನೀವು ಕಾಂಡೋಮ್ (Condom) ಕೂಡ ಕೇಳುತ್ತೀರಾ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದರು.

    ಈ ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಅಲ್ಲದೇ ಈ ಸಂಬಂಧ ಹರ್ಜೋತ್ ಕೌರ್ ಅವರಿಗೆ ರಾಷ್ಟ್ರೀಯ ಮಹಿಳಾ ಆಯೋಗ (ಎನ್‍ಸಿಡಬ್ಲ್ಯು) ಗುರುವಾರ ನೋಟಿಸ್ ಕಳುಹಿಸಿದೆ. ಈ ಬಗ್ಗೆ ತನಿಖೆ ನಡೆಸಲು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Bihar Chief Minister Nitish Kumar) ಕೂಡ ಆದೇಶಿಸಿದ್ದರು. ಇದನ್ನೂ ಓದಿ: ಇಂದು ಸ್ಯಾನಿಟರಿ ಪ್ಯಾಡ್, ನಾಳೆ ಕಾಂಡೋಮ್ ಕೇಳ್ತೀರಿ- ಮಹಿಳಾ IAS ಅಧಿಕಾರಿ ವೀಡಿಯೋ ವೈರಲ್

    ಆದರಿಂದು ಐಎಎಸ್ ಅಧಿಕಾರಿ ಹರ್ಜೋತ್ ಕೌರ್ ಕ್ಷಮೆಯಾಚಿಸಿದ್ದಾರೆ. ಕಾರ್ಯಕ್ರಮದಲ್ಲಿ ಬಳಸಿದ ಪದ ಯಾವುದಾದರೂ ಹುಡುಗಿಯರಿಗೆ ನೋವಾಗಿದ್ದಾರೆ, ನಾನು ವಿಷಾದ ವ್ಯಕ್ತಪಡಿಸುತ್ತೇನೆ. ಅವರ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡುವುದು ನನ್ನ ಉದ್ದೇಶವಾಗಿರಲಿಲ್ಲ. ಯುವತಿಯರನ್ನು ಮುಂದೆ ಸಾಗಲು ಪ್ರೇರೇಪಿಸುವುದು ನನ್ನ ಉದ್ದೇಶವಾಗಿತ್ತು ಎಂದು ಸ್ಪಷ್ಟನೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಇಂದು ಸ್ಯಾನಿಟರಿ ಪ್ಯಾಡ್, ನಾಳೆ ಕಾಂಡೋಮ್ ಕೇಳ್ತೀರಿ- ಮಹಿಳಾ IAS ಅಧಿಕಾರಿ ವೀಡಿಯೋ ವೈರಲ್

    ಇಂದು ಸ್ಯಾನಿಟರಿ ಪ್ಯಾಡ್, ನಾಳೆ ಕಾಂಡೋಮ್ ಕೇಳ್ತೀರಿ- ಮಹಿಳಾ IAS ಅಧಿಕಾರಿ ವೀಡಿಯೋ ವೈರಲ್

    ಪಾಟ್ನಾ: ಮಹಿಳಾ ಐಎಎಸ್ ಅಧಿಕಾರಿಯೊಬ್ಬರು (IAS Officer) ಶಾಲಾ ವಿದ್ಯಾರ್ಥಿನಿ (Student) ಕಾಂಡೋಮ್ (Condom) ಬೇಕೇ? ಎಂದು ಖಾರವಾಗಿ ಪ್ರಶ್ನಿಸಿರುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

    ಬಿಹಾರದ (Bihar) ಪಾಟ್ನಾದಲ್ಲಿ (Patna) ಮಹಿಳಾ ಅಭಿವೃದ್ಧಿ ನಿಗಮ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ವಿದ್ಯಾರ್ಥಿನಿಯೊಬ್ಬಳು ಸರ್ಕಾರ ಸ್ಯಾನಿಟರಿ ಪ್ಯಾಡ್ (Sanitary Pad) ನೀಡಬಹುದಾ ಎಂದು ಕೇಳಿದ ಪ್ರಶ್ನೆಗೆ ಅಧಿಕಾರಿ ಖಾರವಾಗಿ ಉತ್ತರಿಸಿದ್ದಾರೆ.

    ಬಿಹಾರದ ವಿದ್ಯಾರ್ಥಿನಿಯೊಬ್ಬಳು, ಸರ್ಕಾರ 20-30 ರೂ.ಗೆ ಸ್ಯಾನಿಟರಿ ಪ್ಯಾಡ್‌ಗಳನ್ನು ನೀಡಬಹುದಾ ಎಂದು ಸರಳವಾಗಿ ಪ್ರಶ್ನಿಸಿದ್ದಾಳೆ. ಈ ವೇಳೆ ಉತ್ತರಿಸಿದ ಐಎಎಸ್ ಅಧಿಕಾರಿ ಹರ್ಜೋತ್ ಕೌರ್ ಭಮ್ರಾ, ಇಂದು ನೀವು ಸ್ಯಾನಿಟರಿ ಪ್ಯಾಡ್ ಕೇಳುತ್ತಿದ್ದೀರಿ, ನಾಳೆ ಜೀನ್ಸ್ ಕೂಡಾ ಕೇಳುತ್ತೀರಿ. ಬಳಿಕ ಕೆಲವು ಸುಂದರವಾದ ಪಾದುಕೆಗಳನ್ನೂ ಏಕೆ ಕೇಳಬಾರದು? ಕೊನೆಗೆ ಸರ್ಕಾರ ನಿಮಗೆ ಕುಟುಂಬ ಯೋಜನೆ ವಿಧಾನ, ಕಾಂಡೋಮ್‌ಗಳನ್ನೂ ಕೂಡಾ ನೀಡುತ್ತದೆ ಎಂಬುದನ್ನು ನೀವು ನಿರೀಕ್ಷಿಸುತ್ತೀರಿ ಅಲ್ವಾ? ಎಂದು ಕೇಳಿದ್ದಾರೆ. ಇದನ್ನೂ ಓದಿ: ಹೆಸರು ಬದಲಾವಣೆಗೆ ಮುಂದಾದ ಶೋಭಾ ಕರಂದ್ಲಾಜೆ – ಏನಿದು ಹೊಸ ವರಸೆ?

    ಈ ವೇಳೆ ವಿದ್ಯಾರ್ಥಿನಿ, ಜನರ ಮತಗಳಿಂದ ತಾನೇ ಸರ್ಕಾರ ರಚನೆಯಾಗುತ್ತದೆ? ಸರ್ಕಾರ ಜನರ ಸೇವೆ ಮಾಡುವುದರಲ್ಲಿ ತಪ್ಪೇನಿದೆ? ಎಂದು ಕೇಳಿದ್ದಾಳೆ. ಇದಕ್ಕೆ ಸಿಡಿಮಿಡಿಗೊಂಡ ಅಧಿಕಾರಿ, ಇದು ಮೂರ್ಖನದ ಪರಮಾವಧಿ. ನಿಮಗೆ ಮತ ಹಾಕಲು ಆಗಲ್ಲ ಅಂದ್ರೆ ಹಾಕಬೇಡಿ. ಬೇಕೆಂದರೆ ಪಾಕಿಸ್ತಾನಿಗಳಾಗಿ. ಹಣ ಹಾಗೂ ಸೇವೆಗೋಸ್ಕರ ನೀವು ಮತ ಹಾಕುತ್ತೀರಾ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ರಾಟ್‌ವೀಲರ್, ಪಿಟ್‌ಬುಲ್ ತಳಿಯ ನಾಯಿಗೆ ಈ ನಗರದಲ್ಲಿ ನಿಷೇಧ – ಉಲ್ಲಂಘಿಸಿದ್ರೆ ದಂಡ

    ಇದಕ್ಕೆ ಉತ್ತರಿಸಿದ ವಿದ್ಯಾರ್ಥಿನಿ, ನಾನು ಭಾರತೀಯಳು. ನಾನೇಕೆ ಪಾಕಿಸ್ತಾನಿಯಾಗಬೇಕು? ಎಂದು ಪ್ರಶ್ನಿಸಿದ್ದಾಳೆ. ಈ ವೀಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಅಧಿಕಾರಿಯನ್ನು ಜನರು ವ್ಯಾಪಕವಾಗಿ ಟೀಕಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಿಸೆಯಲ್ಲಿ ಸಿಕ್ತು ಕಾಂಡೋಮ್‌ನ ರಶೀದಿ- ಮಹಿಳಾ ಪೇದೆಯಿಂದ ಗೆಳೆಯನಿಗೇ ಶೂಟೌಟ್

    ಕಿಸೆಯಲ್ಲಿ ಸಿಕ್ತು ಕಾಂಡೋಮ್‌ನ ರಶೀದಿ- ಮಹಿಳಾ ಪೇದೆಯಿಂದ ಗೆಳೆಯನಿಗೇ ಶೂಟೌಟ್

    ಕೇಪ್‌ಟೌನ್: ಮಹಿಳಾ ಪೊಲೀಸ್ ಅಧಿಕಾರಿಯೊಬ್ಬಳು (Police Officer) ತನ್ನ ಗೆಳೆಯನ (Boyfriend) ಕಿಸೆಯಲ್ಲಿ ಕಾಂಡೋಮ್‌ನ (Condom) ರಶೀದಿ ಸಿಕ್ಕಿದ ಕಾರಣ ಆತನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ದಕ್ಷಿಣ ಆಫ್ರಿಕಾದ (South Africa) ಡರ್ಬನ್‌ನಲ್ಲಿ ನಡೆದಿದೆ.

    ವರದಿಗಳ ಪ್ರಕಾರ, ಮಹಿಳಾ ಪೊಲೀಸ್ ಮೊದಲು ತನ್ನ ಗೆಳೆಯನ ಪ್ಯಾಂಟ್ ಕಿಸೆಯಲ್ಲಿ ಕಾಂಡೋಮ್‌ನ ರಶೀದಿಯನ್ನು ಪತ್ತೆ ಹಚ್ಚಿದ್ದಾಳೆ. ಬಳಿಕ ಈ ವಿಚಾರಕ್ಕೆ ಆಕೆ ಗೆಳೆಯನೊಂದಿಗೆ ಜಗಳವಾಡಿದ್ದಾಳೆ. ಜಗಳ ಅತಿರೇಕಕ್ಕೆ ತಿರುಗಿ, ಆಕೆ ತನ್ನ ಪೊಲೀಸ್ ಇಲಾಖೆಯ ಗನ್ ಅನ್ನೇ ಬಳಸಿ ಗುಂಡಿಕ್ಕಿದ್ದಾಳೆ. ಇದನ್ನೂ ಓದಿ: 5 ದಿನ ನಾಪತ್ತೆಯಾಗಿದ್ದ ಯುವತಿ ರೆಸಾರ್ಟ್‌ನಲ್ಲಿ ಶವವಾಗಿ ಪತ್ತೆ- ಕಾಂಗ್ರೆಸ್ ಆರೋಪವೇನು?

    CRIME

    ಘಟನೆಯ ಬಳಿಕ ಆಕೆ ತಾನಾಗಿಯೇ ಪೊಲೀಸರ ಮುಂದೆ ಶರಣಾಗಿದ್ದಾಳೆ. ಆಕೆಯನ್ನು ಬಳಿಕ ಪೊಲೀಸರು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ತನ್ನ ಗೆಳೆಯನ ಬಳಿ ಕಾಂಡೋಮ್‌ನ ರಶೀದಿ ನೋಡಿ ಆಕೆ ಗುಂಡಿಕ್ಕಿ ಕೊಂದಿರುವುದರಿಂದ ನ್ಯಾಯಾಲಯ ಆಕೆಗೆ ಜಾಮೀನು ನೀಡಿದೆ.

    crime

    ಇದೀಗ ಡರ್ಬನ್ ಪೊಲೀಸರು ಪ್ರಕರಣದ ಬೆನ್ನು ಬಿದ್ದಿದ್ದು, ಗೆಳೆಯನನ್ನೇ ಕೊಂದ ಮಹಿಳಾ ಪೊಲೀಸ್ ಅಧಿಕಾರಿಯ ಮಾನಸಿಕ ಸ್ಥಿತಿಯ ಬಗ್ಗೆ ಪರಿಶೀಲನೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಗಾಂಜಾ ಮಿಶ್ರಿತ ಚಾಕ್ಲೇಟ್ ಮಾರಾಟ- ರಾಯಚೂರಿನಲ್ಲಿ ಅಬಕಾರಿ ಪೊಲೀಸರ ದಾಳಿ

    Live Tv
    [brid partner=56869869 player=32851 video=960834 autoplay=true]

  • ಬ್ಯಾಂಡೇಜ್ ಬದಲಿಗೆ ಕಾಂಡೋಮ್ ಪ್ಯಾಕೆಟ್ ಬಳಸಿ ಮಹಿಳೆ ತಲೆಗೆ ಡ್ರೆಸ್ಸಿಂಗ್ – ಬೆಚ್ಚಿಬಿದ್ದ ವೈದ್ಯರು

    ಬ್ಯಾಂಡೇಜ್ ಬದಲಿಗೆ ಕಾಂಡೋಮ್ ಪ್ಯಾಕೆಟ್ ಬಳಸಿ ಮಹಿಳೆ ತಲೆಗೆ ಡ್ರೆಸ್ಸಿಂಗ್ – ಬೆಚ್ಚಿಬಿದ್ದ ವೈದ್ಯರು

    ಭೋಪಾಲ್: ಮಧ್ಯಪ್ರದೇಶದ ಪೋರ್ಸಾ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಬಳಿಕ ಕಾಂಡೋಮ್ ಪ್ಯಾಕೆಟ್ ಬಳಸಿ ಮಹಿಳೆಯ ತಲೆ ಗಾಯಕ್ಕೆ ಡ್ರೆಸ್ಸಿಂಗ್ ಮಾಡಲಾಗಿದೆ. ಗಾಯದ ತೀವ್ರತೆಯಿಂದ ಆಕೆಯನ್ನು ಮೊರೆನಾದ ಜಿಲ್ಲಾಸ್ಪತ್ರೆಗೆ ದಾಖಲಿಸಿದಾಗ ಈ ಅಚ್ಚರಿ ಘಟನೆ ಬೆಳಕಿಗೆ ಬಂದಿದೆ.

    ಮೊರೆನಾ ಜಿಲ್ಲಾಸ್ಪತ್ರೆ ವೈದ್ಯರು ಮಹಿಳೆಯ ತಲೆಯ ಭಾಗದ ಗಾಯಕ್ಕೆ ಡ್ರೆಸ್ಸಿಂಗ್ ಬದಲಾಯಿಸಲು ಮುಂದಾದಾಗ ಮಹಿಳೆಯ ತಲೆಯಲ್ಲಿ ಬ್ಯಾಂಡೇಜ್‌ಗೆ ಬದಲಾಗಿ ಕಾಂಡೋಮ್ ಪ್ಯಾಕೆಟ್ ಬಳಸಿರುವುದನ್ನು ಕಂಡು ಶಾಕ್ ಆಗಿದ್ದಾರೆ.

    ಚಿಕಿತ್ಸೆ ಪಡೆದ ಮಹಿಳೆಯನ್ನು ಧರ್ಮಗಢ ಮೂಲದ ರೇಷ್ಮಾ ಬಾಯಿ ಎಂದು ಗುರುತಿಸಲಾಗಿದೆ. ಈಕೆ ಇತ್ತೀಚೆಗೆ ತಲೆಯ ಗಾಯದ ಚಿಕಿತ್ಸೆಗಾಗಿ ಪೋರ್ಸಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೋದಾಗ ರಕ್ತಸ್ರಾವ ನಿಲ್ಲಿಸಲು ಕಾಂಡೋಮ್ ಬಳಸಲಾಗಿದೆ. ಇದಾದ ಕೆಲ ದಿನಗಳಲ್ಲೇ ಮಹಿಳೆಗೆ ಗಾಯದ ತೀವ್ರತೆ ಹೆಚ್ಚಾಗಿದೆ. ಆಕೆಯನ್ನು ಮೊರೆನಾದಲ್ಲಿನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದಾಗ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

    ಅಂದು ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಡಾ.ಧರ್ಮೇಂದ್ರ ರಜಪೂತ್ ತುರ್ತು ಕರ್ತವ್ಯದಲ್ಲಿದ್ದರು. ವಾರ್ಡ್ ಬಾಯ್ ಆಗಿ ಅನಂತರಾಮ್ ಇದ್ದರು. ಈ ವೇಳೆ ವೈದ್ಯರು ವಾರ್ಡ್ ಬಾಯ್‌ಗೆ ಹತ್ತಿ ಪ್ಯಾಡ್‌ನ ಮೇಲೆ ಕೆಲವು ಕಾರ್ಡ್ ಬೋರ್ಡ್‌ಗಳನ್ನು ಇರಿಸುವಂತೆ ಸೂಚಿಸಿದರು. ಆದರೆ ವಾರ್ಡ್ಬಾಯ್ ಕಾಂಡೋಮ್ ಪ್ಯಾಕೆಟ್ ಅನ್ನು ಬಳಸಿದ್ದಾನೆ ಎಂದು ವರದಿಯಾಗಿದೆ.

    ಸದ್ಯ ಪೋರ್ಸಾ ಸಮುದಾಯ ಆರೋಗ್ಯ ಕೇಂದ್ರದ ಡ್ರೆಸ್ಸರ್‌ನನ್ನು ರಾಜ್ಯ ಆರೋಗ್ಯ ಇಲಾಖೆ ಅಮಾನತುಗೊಳಿಸಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೋಲ್ಕತ್ತಾದಲ್ಲಿ ಹೆಚ್ಚಾಗ್ತಿದೆ ಕಾಂಡೋಮ್ ಮಾರಾಟ – ಕಾರಣವೇನು ಗೊತ್ತಾ?

    ಕೋಲ್ಕತ್ತಾದಲ್ಲಿ ಹೆಚ್ಚಾಗ್ತಿದೆ ಕಾಂಡೋಮ್ ಮಾರಾಟ – ಕಾರಣವೇನು ಗೊತ್ತಾ?

    ಕೋಲ್ಕತ್ತಾ: ಕಾಂಡೋಮ್‍ಗಳ ಮಾರಾಟ ಹೆಚ್ಚಾಗುತ್ತಿರುವ ಬಗ್ಗೆ ಆಗಾಗಾ ಸುದ್ದಿಯಾಗುತ್ತಲೇ ಇರುತ್ತದೆ. ಆದರೆ ಪಶ್ಚಿಮ ಬಂಗಾಳದಲ್ಲಿ ದಿಢೀರನೇ ಕಾಂಡೋಮ್ ಮಾರಾಟ ಹೆಚ್ಚಳವಾಗಿರುವ ವಿಚಾರ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.

    ಹೌದು, ಪಶ್ಚಿಮ ಬಂಗಾಳದ ದುರ್ಗಾಪುರದ ವಿದ್ಯಾರ್ಥಿಗಳು ಹೆಚ್ಚಾಗಿ ಕಾಂಡೋಮ್‍ಗಳನ್ನು ಖರೀದಿಸುತ್ತಿದ್ದಾರೆ. ಆದರೆ ಗರ್ಭನಿರೋಧಕವಾಗಿ ಬಳಸಲು ಅಲ್ಲ. ಬದಲಿಗೆ ಅದನ್ನು ಮಾದಕತೆಯಾಗಿ ಬಳಸುತ್ತಿದ್ದಾರೆ. ಈ ವಿಲಕ್ಷಣ ಪ್ರವೃತ್ತಿಯು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅವುಗಳಲ್ಲಿ ಹಲವಾರು ವಿದ್ಯಾರ್ಥಿಗಳ ಆರೋಗ್ಯದ ಮೇಲಿನ ಪರಿಣಾಮದ ಬಗ್ಗೆ ಆಂತಕ ಮೂಡಿಸುತ್ತಿದೆ.

    ಈ ಕುರಿತಂತೆ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಮೆಡಿಕಲ್ ಶಾಪ್ ವ್ಯಾಪಾರಿ, ಪ್ರತಿನಿತ್ಯ ಮಾರಾಟವಾಗುವ ಕಾಂಡೋಮ್ ಪ್ಯಾಕೆಟ್‍ಗಳ ಸಂಖ್ಯೆ ಇದೀಗ ಹಲವು ಪಟ್ಟು ಹೆಚ್ಚಾಗಿದೆ. ದುರ್ಗಾಪುರದ ಹಲವಾರು ಭಾಗಗಳಾದ ದುರ್ಗಾಪುರ ಸಿಟಿ ಸೆಂಟರ್, ಬಿಧಾನನಗರ, ಬೆನಚಿಟಿ ಮತ್ತು ಮುಚಿಪಾರದಲ್ಲಿ ಸುವಾಸನೆಯ ಕಾಂಡೋಮ್‍ಗಳ ಮಾರಾಟವು ಬಹಳ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.

    ಕಾಂಡೋಮ್ ಮಾರಾಟ ಮತ್ತು ಖರೀದಿ ಹೆಚ್ಚಾಗಿರುವುದರ ಹಿಂದಿನ ಕಾರಣವೇನು ಎಂದು ಪ್ರಶ್ನಿಸಿದಾಗ, ಅಂಗಡಿಯವರು ಕಾಂಡೋಮ್ ಅನ್ನು ಹೆಚ್ಚಾಗಿ ಖರೀದಿಸುತ್ತಿರುವವರು ಯುವಕರು ಎಂದು ಪ್ರತಿಕ್ರಿಸಿದ್ದಾರೆ. ಇದನ್ನೂ ಓದಿ: ರಾಖಿ ಕಟ್ಟಿದ ಸಹೋದರಿಗೆ ಎಲೆಕ್ಟ್ರಿಕ್‌ ಸ್ಕೂಟರ್‌ ಗಿಫ್ಟ್‌ ಕೊಡಲು ಕಳ್ಳತನ ಮಾಡುತ್ತಿದ್ದ ಯುವಕನ ಬಂಧನ

    ಕಾಂಡೋಮ್‍ಗಳನ್ನು ಬಿಸಿ ನೀರಿನಲ್ಲಿ ದೀರ್ಘಕಾಲ ನೆನೆಸುವುದರಿಂದ ಆಲ್ಕೋಹಾಲ್ ಸಂಯುಕ್ತಗಳನ್ನು ರಚಿಸುತ್ತದೆ. ಇದು ಯುವಕರನ್ನು ನಶೆಯಲ್ಲಿಡುತ್ತಿದೆ  ಎಂದು ರಸಾಯನಶಾಸ್ತ್ರದ ಶಿಕ್ಷಕರು ಪ್ರತಿಕ್ರಿಯಿಸಿದ್ದಾರೆ.

    ಇದನ್ನೂ ಓದಿ: ಈತನ ಹೊಟ್ಟೆಯಲ್ಲಿತ್ತು 1 ರೂಪಾಯಿಯ 63 ನಾಣ್ಯಗಳು – ಎಕ್ಸ್‌ರೇ ನೋಡಿ ವೈದ್ಯರೂ ಶಾಕ್

    ಕಾಂಡೋಮ್‍ನಲ್ಲಿರುವ ಆರೊಮ್ಯಾಟಿಕ್ ಸಂಯುಕ್ತವು ಅಮಲೇರಿಸುವ ಅಂಶವಿದ್ದು, ಈ ಸಂಯುಕ್ತವು ಡೆಂಡ್ರೈಟ್‍ಗಳಲ್ಲಿಯೂ ಸಹ ಇರುತ್ತದೆ. ಇದು ಮಾದಕತೆಗಾಗಿ ಸಾಮಾನ್ಯವಾಗಿ ಬಳಸುವ ಉತ್ಪನ್ನವಾಗಿದೆ.

    ಅಮಲು ಬಂದಾಗ ಜನರು ವಿಚಿತ್ರವಾದ ಆಯ್ಕೆಗಳನ್ನು ಹೊಂದಿರುತ್ತಾರೆ. ಕೆಲವು ವಿಲಕ್ಷಣವಾದವುಗಳಲ್ಲಿ ಕೆಮ್ಮು ಸಿರಪ್ ಕುಡಿಯುವುದು, ಅಂಟು ಉತ್ಪನ್ನಗಳನ್ನು ಸ್ನಿಫಿಂಗ್ ಮಾಡುವುದು, ಬಣ್ಣ, ನೇಲ್ ಪಾಲಿಷ್ ಮತ್ತು ವೈಟ್‌ನರ್‌ಗಳ ವಾಸನೆಯ ಉಸಿರು ತೆಗೆದುಕೊಳ್ಳುವುದನ್ನು ಕಾಣಬಹುದಾಗಿದೆ.

    ಈ ಸಂಯುಕ್ತಗಳೊಂದಿಗೆ ನಿಯಮಿತವಾಗಿ ಅಮಲೇರಿದ ಯುವಕರು ಎದೆ ನೋವು ಹಾಗೂ ದೀರ್ಘಕಾಲದ ತಲೆನೋವಿನಂತಹ ಗಂಭೀರವಾದ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಇದು ವ್ಯಸನಗಳ ಮೇಲೆ ಅವರ ಅವಲಂಬನೆಯನ್ನು ಹೆಚ್ಚಿಸುತ್ತದೆ.

    Live Tv
    [brid partner=56869869 player=32851 video=960834 autoplay=true]

  • 2025ರ ವೇಳೆಗೆ ಕಾಂಡೋಮ್ ಮಾರುಕಟ್ಟೆ ಶತಕೋಟಿ ಡಾಲರ್‌ಗಳಷ್ಟು ವಿಸ್ತಾರ

    2025ರ ವೇಳೆಗೆ ಕಾಂಡೋಮ್ ಮಾರುಕಟ್ಟೆ ಶತಕೋಟಿ ಡಾಲರ್‌ಗಳಷ್ಟು ವಿಸ್ತಾರ

    ನವದೆಹಲಿ: ಲೈಂಗಿಕವಾಗಿ ಹರಡುವ ರೋಗಗಳ ಬಗ್ಗೆ ಜನರಲ್ಲಿ ಬಲವಾದ ಜಾಗೃತಿ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ 2025ರ ವೇಳೆಗೆ ಕಾಂಡೋಮ್ ಮಾರುಕಟ್ಟೆ ಗಾತ್ರ ಭಾರೀ ಪ್ರಮಾಣದಲ್ಲಿ ಹೆಚ್ಚಲಿದೆ ಎಂದು ಜಾಗತಿಕ ತಂತ್ರಜ್ಞಾನ ಸಂಸ್ಥೆಯೊಂದು ತಿಳಿಸಿದೆ.

    ಮಾಹಿತಿಗಳ ಪ್ರಕಾರ 2025ರ ವೇಳೆಗೆ ಕಾಂಡೋಮ್ ಮಾರುಕಟ್ಟೆ $3.70 ಶತಕೋಟಿಗಳಷ್ಟು ವಿಸ್ತಾರಗೊಳ್ಳಲಿದೆ. ಸುಮಾರು ಶೇ.44 ರಷ್ಟು ಬೆಳವಣಿಗೆ ಏಷ್ಯಾ ಫೆಸಿಫಿಕ್‍ನಿಂದ ಹುಟ್ಟಿಕೊಂಡಿದ್ದು, ಚೀನಾ, ಭಾರತ, ಜಪಾನ್ ಪ್ರಮುಖ ಮಾರುಕಟ್ಟೆಗಳಾಗಿದೆ. ಇದನ್ನೂ ಓದಿ: ಬಿಸಾಡಿದ ಮಚ್ಚು ತೋರಿಸುತ್ತೇನೆಂದು ಪೊಲೀಸರ ಮೇಲೆಯೇ ಹಲ್ಲೆ – ಆರೋಪಿಗೆ ಗುಂಡೇಟು

     

    ಲೈಂಗಿಕ ರೋಗಗಳ ಬಗ್ಗೆ ಜಾಗೃತಿ ಮೂಡುತ್ತಿರುವುದು, ಹತ್ತಾರು ಕಂಪನಿಗಳ ಮಾರಾಟ, ಆಕಾರ, ಗಾತ್ರ, ಬಣ್ಣ ಮತ್ತು ಫ್ಲೇವರ್‌ಗಳ ವೈಶಿಷ್ಟ್ಯಗಳು ಹಾಗೂ ಜನರಿಗೆ ವೈಯಕ್ತಿಕವಾಗಿ ಗೌಪ್ಯವಾಗಿ ಲಭ್ಯವಾಗುತ್ತಿರುವ ಹಿನ್ನೆಲೆ ಕಾಂಡೋಮ್ ಮಾರುಕಟ್ಟೆ ವಿಸ್ತರಣೆಯಾಗಲು ಪ್ರಮುಖ ಕಾರಣಗಳಾಗಿದೆ.

    ಕಾಂಡೋಮ್ ಕಂಪನಿಗಳ ಬ್ರ್ಯಾಂಡಿಂಗ್, ಪ್ರಚಾರ, ಗಮನ ಸೆಳೆಯುವ ಪ್ಯಾಕೇಜಿಂಗ್ ಮತ್ತು ಇ-ಕಾರ್ಮಸ್ ಮೂಲಕ ಗೌಪ್ಯವಾಗಿ ಖರೀದಿಸಲು ಹೆಚ್ಚು ಅವಕಾಶಗಳು ಸೃಷ್ಟಿಯಾಗುತ್ತಿರುವ ಹಿನ್ನೆಲೆ ಕಾಂಡೋಮ್ ಮಾರಾಟ ಮತ್ತಷ್ಟು ಹೆಚ್ಚಾಗಲು ಕಾರಣಗಳಾಗಿವೆ. ಇದನ್ನೂ ಓದಿ: 13 ವರ್ಷಗಳ ನಂತರ ದೆಹಲಿಯಲ್ಲಿ ಸುದೀಪ್ : ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಭೇಟಿ ಮಾಡಿದ ಕಿಚ್ಚ

    Live Tv
    [brid partner=56869869 player=32851 video=960834 autoplay=true]

  • ಆಲಿಯಾ ಭಟ್, ರಣ್‌ಬೀರ್‌ಗೆ ವಿಭಿನ್ನ ರೀತಿಯಲ್ಲಿ ಶುಭಕೋರಿದ ಕಾಂಡೋಮ್ ಕಂಪನಿ

    ಆಲಿಯಾ ಭಟ್, ರಣ್‌ಬೀರ್‌ಗೆ ವಿಭಿನ್ನ ರೀತಿಯಲ್ಲಿ ಶುಭಕೋರಿದ ಕಾಂಡೋಮ್ ಕಂಪನಿ

    ನಿನ್ನೆಯಷ್ಟೇ ತಾನು ಪ್ರೆಗ್ನೆಂಟ್ ಆಗಿರುವ ವಿಚಾರವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದ ಆಲಿಯಾ ಭಟ್ ಗೆ ಡುರೆಕ್ಸ್ ಕಾಂಡೋಮ್ ಕಂಪನಿ ವಿಚಿತ್ರ ರೀತಿಯಲ್ಲಿ ಹಾರೈಸಿದೆ. ಆಲಿಯಾ ಭಟ್ ಮತ್ತು ರಣ್‌ಬೀರ್‌ ಕಪೂರ್ ದಂಪತಿಗೆ ಫನ್ನಿಯಾಗಿಯೇ ಶುಭಾಶಯ ಕೋರಿದೆ. ಕೋಟ್ಯಂತರ ಜನರು ಇವರಿಗೆ ವಿಶ್ ಮಾಡಿದ್ದರೂ, ಕಾಂಡೋಮ್ ಕಂಪನಿಯ ಶುಭಾಶಯ ಮಾತ್ರ ಸಖತ್ ವೈರಲ್ ಆಗಿದೆ. ಅಲ್ಲದೇ ಕಂಪೆನಿಗೂ ಕೂಡ ಒಳ್ಳೆದಾಗಲಿ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

     ರಣ್‌ಬೀರ್‌ ನಟನೆಯ ‘ಏ ದಿಲ್ ಹೇ ಮುಷ್ಕಿಲ್’ ಚಿತ್ರದ ಪಾಪ್ಯುಲರ್ ಹಾಡಿನ ಸಾಲಾದ ಚನ್ನ ಮರೆಯಾ ಹಾಡಿನ ಸಾಲನ್ನೇ ಬಳಸಿಕೊಂಡು ಕಾಂಡೋಮ್ ಕಂಪನಿ ‘ಮೆಹಫಿಲ್ ಮೇ ತೇರಿ, ಹಮ್ ತೋ ಕ್ಲೀಯರ್ಲಿ ನಹಿ ಥೆ’ ಎಂದಿದೆ. ಅಂದರೆ, ನಿಮ್ಮ ಖುಷಿಯ ಕ್ಷಣದಲ್ಲಿ ನಾವಂತೂ ಖಂಡಿತ ಇರಲಿಲ್ಲ’ ಎಂದು ಕಾಲೆಳೆದಿದೆ. ಅಲ್ಲದೇ, ಮನೆಗೆ ಬರುತ್ತಿರುವ ಹೊಸ ಅತಿಥಿಗೂ ಅದು ಶುಭಾಶಯ ತಿಳಿಸಿದೆ. ಇದನ್ನೂ ಓದಿ:ಆ್ಯಸಿಡ್ ಸಂತ್ರಸ್ತೆಗೆ ನಟ ಕಿಚ್ಚ ಸುದೀಪ್ ನೋಡುವಾಸೆ : ನೋವಿನ ನಡುವೆಯೂ ನಾಲ್ಕು ಬಾರಿ ಸುದೀಪ್ ಹೆಸರು ಹೇಳಿದ ಯುವತಿ

    ಕಾಂಡೋಮ್ ಕಂಪೆನಿ ಶುಭಾಶಯ ಮಾತ್ರವಲ್ಲ, ಹೆಚ್ಚಿನ ಸಂಖ್ಯೆಯಲ್ಲಿ ಮೀಮ್ಸ್ ಗಳು ಕೂಡ ಹರಿದಾಡಿದವು. ಬಾಲಿವುಡ್ ನ ಬಹುತೇಕ ನಟ ನಟಿಯರು ಮತ್ತು ನಿರ್ದೇಶಕರು ಈ ಜೋಡಿಗೆ ಶುಭಾಶಯ ಕೋರಿದ್ದಾರೆ. ಅದರಲ್ಲೂ ಕರಣ್ ಜೋಹಾರ್, ಬೇಬಿಗೊಂದು ಬೇಬಿ ಎಂದು ಪಂಚ್ ಲೈನ್ ಮೂಲಕ ಹಾರೈಸಿದ್ದಾರೆ.

    Live Tv