Tag: Condolence

  • ಎಸ್‌ಎಂಕೆ ಅಗಲಿಕೆಯಿಂದ ಮಾರ್ಗದರ್ಶಕರನ್ನು ಕಳೆದುಕೊಂಡಂತಾಗಿದೆ: ಬಸವರಾಜ ಬೊಮ್ಮಾಯಿ

    ಎಸ್‌ಎಂಕೆ ಅಗಲಿಕೆಯಿಂದ ಮಾರ್ಗದರ್ಶಕರನ್ನು ಕಳೆದುಕೊಂಡಂತಾಗಿದೆ: ಬಸವರಾಜ ಬೊಮ್ಮಾಯಿ

    ನವದೆಹಲಿ: ಕರ್ನಾಟಕ (Karnataka) ಕಂಡಂತಹ ಅತ್ಯಂತ ಧೀಮಂತ, ಹಿರಿಯ ರಾಜಕಾರಣಿ, ಸ್ವಾತಂತ್ರ‍್ಯ ಪೂರ್ವದ ತಲೆಮಾರು. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಆಡಳಿತಾತ್ಮಕ ಅನೇಕ ಹುದ್ದೆ ಅಲಂಕರಿಸಿದ್ದ ನಮ್ಮ ಕನ್ನಡದ ಹೆಮ್ಮೆಯ ಎಸ್.ಎಂ.ಕೃಷ್ಣ ಅವರ ನಿಧನದ ಸುದ್ದಿ ಕೇಳಿ ಅತ್ಯಂತ ದುಖ ಹಾಗೂ ದಿಗ್ಭ್ರಮೆ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

    ಎಸ್.ಎಂ.ಕೃಷ್ಣ (SM Krishna) ಅವರ ಅಗಲಿಕೆಯಿಂದ ದೇಶ ಒಬ್ಬ ಹಿರಿಯರು, ಮಾರ್ಗದರ್ಶಕರನ್ನು ಕಳೆದುಕೊಂಡು ಬಡವಾಗಿದೆ. ಸಾರ್ವಜನಿಕ ಜೀವನದಲ್ಲಿ ಅತ್ಯಂತ ಪರಿಶುದ್ಧವಾದ ಬದುಕು ನಡೆಸಿ, ಆದರ್ಶಮಯ ಜೀವನ ನಡೆಸಿ, ಇಡೀ ಭಾರತಕ್ಕೆ ಪ್ರಿಯರಾಗಿರುವಂತಹವರು. ಕೃಷ್ಣ ಅವರು ವಿದೇಶದಲ್ಲಿ ವಿದ್ಯಾಭ್ಯಾಸ ಮುಗಿಸಿ ಬಂದ ನಂತರ ತಮ್ಮ ಸಮಾಜವಾದಿ ಮನೋಭಾವನೆ ಬಿಟ್ಟುಕೊಡದೇ ಪಥಮ ಬಾರಿಗೆ ಸ್ವತಂತವಾಗಿ ಸ್ಪರ್ಧೆ ಮಾಡಿ ಗೆದ್ದು ಬಂದಿದ್ದರು. ವಿಧಾನಸಭೆ, ವಿಧಾನ ಪರಿಷತ್, ಲೋಕಸಭೆ, ರಾಜ್ಯಸಭೆ ನಾಲ್ಕೂ ಸದನಗಳಲ್ಲಿ ಸೇವೆ ಮಾಡಿದ್ದಾರೆ. ರಾಜ್ಯದ ಮಂತ್ರಿಗಳಾಗಿ, ಮುಖ್ಯಮಂತ್ರಿಗಳಾಗಿ, ಮಹಾರಾಷ್ಟ್ರದ ರಾಜ್ಯಪಾಲರಾಗಿ, ಕೇಂದ್ರದ ಸಚಿವರಾಗಿ ದೇಶದ ಸೇವೆ ಹಾಗೂ ರಾಜ್ಯದ ಸೇವೆ ಮಾಡಿದ್ದಾರೆ.ಇದನ್ನೂ ಓದಿ: ರಾಜಕಾರಣದ ಮೊದಲು ಗುರು, ಮಗನ ರೀತಿ ನೋಡುತ್ತಿದ್ದರು : ಎಸ್‌ಎಂಕೆ ನೆನೆದು ಡಿಕೆಶಿ ಕಣ್ಣೀರು

    ರಾಜಕಾರಣಿಗಳಿಗೆ ಆದರ್ಶವಾಗಿರುವ, ಆಡಳಿತಗಾರರಿಗೆ ಮಾರ್ಗದರ್ಶನವಾಗಿರುವ ಅವರ ಭಾಷೆ, ಮಿತವ್ಯಯದ ಮಾತು, ಅವರ ನಡವಳಿಗೆ ನಮ್ಮ ಯುವ ರಾಜಕಾರಣಿಗಳಿಗೆ ಅತ್ಯಂತ ಅವಶ್ಯವಿದೆ. ಅವರು ಕರ್ನಾಟಕದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಬೆಂಗಳೂರಿನ ಬೆಳವಣಿಗೆ, ಐಟಿ-ಬಿಟಿ ವಿಚಾರದಲ್ಲಿ ಅವರು ನೀಡಿದ ಕೊಡುಗೆ ಅಪಾರ, ಅವರು ಜಾರಿಗೆ ತಂದಿರುವ ಮಿಡ್ ಡೆ ಮೀಲ್ ಯೋಜನೆ ಯಶಸ್ವಿಯಾಗಿದೆ. ಅವರು ರಾಜಕಾರಣದಲ್ಲಿ ಯಾವುದೇ ಹುದ್ದೆಯಲ್ಲಿದ್ದರೂ ಕೂಡ ತಮ್ಮ ವ್ಯಕ್ತಿತ್ವವನ್ನು ಬಿಟ್ಟುಕೊಡದೇ ಅತ್ಯಂತ ಸ್ವಾಭಿಮಾನದ ಬದುಕು ನಡೆಸಿದರು.

    ಅವರು ಬಿಜೆಪಿ ಸೇರಿ ನಮ್ಮ ಪಧಾನ ಮಂತ್ರಿಗಳಿಗೆ ಅತ್ಯಂತ ಹತ್ತಿರದ ನಾಯಕರಾಗಿದ್ದರು. ಹಿಂದಿನ ಪೀಳಿಗೆಯ ಮಹತ್ವದ ಘಟ್ಟ ಕಳೆದುಕೊಂಡಂತಾಗಿದೆ. ಬರುವಂತಹ ದಿನಗಳಲ್ಲಿ ಅವರ ಬದುಕು ನಮಗೆ ಆದರ್ಶವಾಗಲಿ, ಎಸ್.ಎಂ. ಕೃಷ್ಣ ಅವರು ನನಗೆ ವಯಕ್ತಿಕವಾಗಿ ಅತ್ಯಂತ ಹತ್ತಿರವಾಗಿದ್ದ ನಾಯಕರು, ನಮ್ಮ ತಂದೆಯ ಜೊತೆ ಒಳ್ಳೆಯ ಒಡನಾಟ ಇಟ್ಟುಕೊಂಡಿದ್ದ ನಾಯಕರಾಗಿದ್ದರು. ಅವರ ಅಗಲಿಗೆ ನನಗೆ ಬಹಳ ನೋವು ತಂದಿದೆ. ಅವರ ಕುಟುಂಬಕ್ಕೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ಭಗವಂತ ನೀಡಲಿ, ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ:ಪ್ರತಿ ವರ್ಷ ಸಂಗಿತೋತ್ಸವಕ್ಕೆ ದಂಪತಿ ಸಮೇತ ಬರುತ್ತಿದ್ದರು: ಶರಣ ಪ್ರಕಾಶ್ ಪಾಟೀಲ್ ಸಂತಾಪ

  • ಬಹುಕಾಲದ ಗೆಳೆಯ ದ್ವಾರಕೀಶ್ ನೆನೆದ ರಜನಿಕಾಂತ್

    ಬಹುಕಾಲದ ಗೆಳೆಯ ದ್ವಾರಕೀಶ್ ನೆನೆದ ರಜನಿಕಾಂತ್

    ದ್ವಾರಕೀಶ್ (Dwarakish) ಮತ್ತು ರಜನಿಕಾಂತ್ (Rajinikanth) ಬಹುಕಾಲದ ಗೆಳೆಯರು. ದ್ವಾರಕೀಶ್ ಹೇಳಿದವರಿಗೆ ರಜನಿಕಾಂತ್ ಕಾಲ್ ಶೀಟ್ ಕೊಡುತ್ತಿದ್ದರು ಎಂದು ಸ್ವತಃ ದ್ವಾರಕೀಶ್ ಅವರೇ ಹೇಳಿದ್ದಾರೆ. ಅಡ್ಡ ವಾರಿಸು ಸಿನಿಮಾದಲ್ಲಿ ರಜನಿಕಾಂತ್ ನಟಿಸಿದ್ದರೆ, ಈ ಸಿನಿಮಾವನ್ನು ದ್ವಾರಕೀಶ್ ನಿರ್ಮಾಣ ಮಾಡಿದ್ದರು. 1983ರಲ್ಲಿ ಈ ಚಿತ್ರ ಬಿಡುಗಡೆ ಆಗಿತ್ತು. ಆನಂತರ ನೀ ಬರೆದ ಕಾದಂಬರಿ, ಗುಂಗುವಾ ಸೇರಿದಂತೆ ಹಲವು ಚಿತ್ರಗಳಲ್ಲಿಇಬ್ಬರೂ ಕೆಲಸ ಮಾಡಿದ್ದಾರೆ. ಹಾಗೆ ಇವರ ಸ್ನೇಹವಿತ್ತು.

    ಈ ಸ್ನೇಹಕ್ಕೆ ಕುರುಹು ಎನ್ನುವಂತೆ ತಮ್ಮಿಬ್ಬರ ಸ್ನೇಹವನ್ನು ರಜನಿಕಾಂತ್ ನೆನಪಿಸಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ರಜನಿ, ನನ್ನ ಬಹುಕಾಲದ ಆತ್ಮೀಯ ಗೆಳೆಯ ದ್ವಾರಕೀಶ್ ಅವರ ನಿಧನ ನನಗೆ ಅತೀ ನೋವನ್ನು ತಂದಿದೆ. ಹಾಸ್ಯ ನಟನಾಗಿ ವೃತ್ತಿ ಜೀವನ ಆರಂಭಿಸಿ, ಆನಂತರ ದೊಡ್ಡ ನಿರ್ಮಾಪಕರು ಹಾಗೂ ನಿರ್ದೇಶಕರಾಗಿ ಬೆಳೆದರು ಹಾಗೂ ಬೆಳೆಸಿದರು. ಅವರ ಅಗಲಿಕೆ ನೋವು ತಂದಿದೆ. ಅವರಿಗೆ ಭಾವ ಪೂರ್ಣ ಸಂತಾಪ ಎಂದು ಬರೆದುಕೊಂಡಿದ್ದಾರೆ.

     

    ಹಿರಿಯ ನಟ ದ್ವಾರಕೀಶ್ ಅವರ ನಿಧನಕ್ಕೆ ಹಿರಿಯ ನಿರ್ದೇಶಕ ಭಾರ್ಗವ್ ಕೂಡ ಸಂತಾಪ ಸೂಚಿಸಿದ್ದಾರೆ. ದ್ವಾರಕೀಶ್ ಅವರ ಸಂಬಂಧಿಯೂ ಆಗಿರುವ ಭಾರ್ಗವ್, ಅಗಲಿದ ದ್ವಾರಕೀಶ್ ಅವರನ್ನು ನೆನಪಿಸಿಕೊಂಡಿದ್ದು ಹೀಗೆ, ನಾನು ಮತ್ತು ದ್ವಾರಕೀಶ್ ಬಾಲ್ಯದ ಸ್ನೇಹಿತರು. ಸ್ಕೂಲ್ ಕಾಲೇಜು ಶಿಕ್ಷಣ ಒಟ್ಟಿಗೆ ಕಲಿತಿದ್ದೇವೆ. ಕಾಲೇಜು ದಿನಗಳಿಂದಾನೇ ದ್ವಾರಕೀಶ್ ಗೆ ನಟನಾ ಆಸಕ್ತಿ. ಅವ್ರ ಅಣ್ಣ ಮೈಸೂರಲ್ಲಿ ಅಂಗಡಿ ಹಾಕಿ ಕೊಟ್ಟಿದ್ರು. ಅಂಗಡಿ ಬಿಟ್ಟು ಬೆಂಗಳೂರಿಗೆ ನಟ ಆಗೋಕೆ ಬಂದ್ರು. ಚಿತ್ರರಂಗದಲ್ಲಿ 50ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ನನ್ಗೆ ಅವ್ನು ಅನ್ನದಾತ ಅವ್ನಿಂದ್ಲೇ ನಾನು ಚಿತ್ರರಂಗಕ್ಕೆ ಬಂದೆ . ದ್ವಾರಕೀಶ್ ನನ್ ಗುರು ಅನ್ನದಾತ ಎಂದು ಭಾರ್ಗವ್ ಭಾವುಕ ಮಾತುಗಳನ್ನು ಆಡಿದ್ದಾರೆ.

  • ಹಿರಿಯ ನಟ ದ್ವಾರಕೀಶ್ ನಿಧನಕ್ಕೆ ದರ್ಶನ್ ಸೇರಿದಂತೆ ಸ್ಯಾಂಡಲ್ ವುಡ್ ಗಣ್ಯರ ಕಂಬನಿ

    ಹಿರಿಯ ನಟ ದ್ವಾರಕೀಶ್ ನಿಧನಕ್ಕೆ ದರ್ಶನ್ ಸೇರಿದಂತೆ ಸ್ಯಾಂಡಲ್ ವುಡ್ ಗಣ್ಯರ ಕಂಬನಿ

    ನ್ನಡದ ಪ್ರಪಂಚ ಕುಳ್ಳ, ನಟ ದ್ವಾರಕೀಶ್ (Dwarakish) ನಿಧನಕ್ಕೆ (death) ಸ್ಯಾಂಡಲ್ ವುಡ್ ನ ಅನೇಕ ಗಣ್ಯರು ಕಂಬನಿ ಮಿಡಿದ್ದಾರೆ. ಹಿರಿಯ ನಟಿ ಬಿ.ಸರೋಜಾದೇವಿ, ಭವ್ಯ, ಜಯಮಾಲಾ, ನಿರ್ದೇಶಕ ಭಾರ್ಗವ, ನಟ ದೊಡ್ಡಣ್ಣ, ರಮೇಶ್ ಅರವಿಂದ್, ಶಿವರಾಜ್ ಕುಮಾರ್ ಸೇರಿದಂತೆ ಹಲವರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಅಗಲಿದ ಹಿರಿಯ ನಟನಿಗೆ ಸಂತಾಪ (Condolence) ವ್ಯಕ್ತ ಪಡಿಸಿದ್ದಾರೆ.

    ಅಲ್ಲದೇ ದರ್ಶನ್ (Darshan), ಶರಣ್, ನೀನಾಸಂ ಸತೀಶ್, ನಿರ್ದೇಶಕ ಆರ್. ಚಂದ್ರು ಸೇರಿದಂತೆ ಹಲವು ಗಣ್ಯರು ಸೋಷಿಯಲ್ ಮೀಡಿಯಾದ ಮೂಲಕ ತಮ್ಮ ಸಂತಾಪವನ್ನೂ ಸೂಚಿಸಿದ್ದಾರೆ. ಹಿರಿಯ ನಟ ಸಾಧನೆಯನ್ನು ಗುಣಗಾನ ಮಾಡಿದ್ದಾರೆ.

    ಕನ್ನಡ ಚಿತ್ರರಂಗದ ಧೀಮಂತ ನಿರ್ಮಾಪಕರಾಗಿ, ನಿರ್ದೇಶಕರಾಗಿ, ಜನಮೆಚ್ಚಿದ ಹಾಸ್ಯನಟ ‘ಪ್ರಚಂಡ ಕುಳ್ಳ’ನಾಗಿ 5 ದಶಕಗಳು ಸೇವೆಸಲ್ಲಿಸಿದ ನಮ್ಮೆಲ್ಲರ ಪ್ರೀತಿಯ ದ್ವಾರಕೀಶ್ ಸರ್ ರವರು ಇಂದು ಇಹಲೋಕ ತ್ಯಜಿಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈ ನೋವನ್ನು ಭರಿಸುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ  ಎಂದು ನಟ ದರ್ಶನ್ ಬರೆದುಕೊಂಡಿದ್ದಾರೆ.

    ನಮ್ಮ ಕನ್ನಡ ಚಿತ್ರರಂಗದ ಹಿರಿಯರನ್ನು ಕಳೆದುಕೊಂಡ ಅನಾಥ ಭಾವನೆ ಕಾಡುತ್ತಿದೆ. ದ್ವಾರಕೀಶ್ ರವರ ಸಾಧನೆಗಳ ಬಗ್ಗೆ ಮಾತಾಡುವಷ್ಟು ನಾನು ದೊಡ್ಡವನಲ್ಲ. ನೀವು ನಮಗೆ ಇಟ್ಟ ಭದ್ರವಾದ ಅಡಿಪಾಯ ನಮ್ಮನೆಲ್ಲ ಇಂದಿಗೂ ಕಾಯುತ್ತಿದೆ. ಹೋಗಿ ಬನ್ನಿ ಕರ್ನಾಟಕದ ಪ್ರೀತಿಯ ಕುಳ್ಳ. ನಿಮ್ಮ ಕಥೆಗಳ ಭಕ್ತನಾಗಿ ಉಳಿಯುವವ ಎಂದು ನಟ ಶರಣ್ ಕಂಬನಿ ಮಿಡಿದಿದ್ದಾರೆ.

     

    ನಿರ್ದೇಶಕ ಆರ್. ಚಂದ್ರು, ಕನ್ನಡ ನಾಡು ಕಂಡ ಅಪ್ರತಿಮ ದಿಗ್ಗಜ ನಟ, ನಿರ್ಮಾಪಕ ಮತ್ತು ನಿರ್ದೇಶಕ ದ್ವಾರಕೀಶ್ ಸರ್. ನೀವು ಹಾಕಿ ಕೊಟ್ಟ ಹಾದಿಯಲ್ಲಿ ಕನ್ನಡ ಚಲನಚಿತ್ರ ರಂಗ ನಡೆಯುತ್ತಿದೆ ಅಂದ್ರೆ ಅತಿಶಯೋಕ್ತಿ ಅಲ್ಲ. ನಿಮ್ಮ ಅಗಲಿಕೆ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಮತ್ತೆ ಹುಟ್ಟಿ ಬನ್ನಿ ಸರ್ ಎಂದು ಹೇಳಿದ್ದರೆ, ನಟ ನೀನಾಸಂ ಸತೀಶ್, ಕನ್ನಡಕ್ಕೆ,ಕನ್ನಡ ಚಿತ್ರರಂಗಕ್ಕೆ ನಿಮ್ಮ ಸೇವೆ ಅಪಾರ,ನಮ್ಮ ಬಾಲ್ಯ ಸಿನಿಬದುಕು ಚೆಂದವಾಗಿರಲು ನಿಮ್ಮ ಸಿನಿಮಾಗಳು ಕಾರಣ.ಕನ್ನಡ ಚಿತ್ರರಂಗದ ಶ್ರೀಮಂತಿಕೆಗೆ ನೀವು ಬಹು ಕಾರಣ ಅಂತಿಮ ನಮನಗಳು ಸರ್ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

  • ದ್ವಾರಕೀಶ್ ನಿಧನಕ್ಕೆ ಸಿಎಂ, ಡಿಸಿಎಂ ಸಂತಾಪ

    ದ್ವಾರಕೀಶ್ ನಿಧನಕ್ಕೆ ಸಿಎಂ, ಡಿಸಿಎಂ ಸಂತಾಪ

    ನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ, ಹಿರಿಯ ನಟ ದ್ವಾರಕೀಶ್ (Dwarakish) ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್  (DK Shivakumar) ಸಂತಾಪ ವ್ಯಕ್ತ (Condolence) ಪಡಿಸಿದ್ದಾರೆ.  ನಟ, ನಿರ್ದೇಶಕ, ನಿರ್ಮಾಪಕರಾಗಿ ಬಹುಕಾಲ ಕನ್ನಡ ಚಿತ್ರರಂಗದ ಸೇವೆಗೈದ ಕನ್ನಡಿಗರ ಪ್ರೀತಿಯ ‘ಪ್ರಚಂಡ ಕುಳ್ಳ’ ದ್ವಾರಕೀಶ್ ಅವರ ನಿಧನದ ಸುದ್ದಿ ತಿಳಿದು ದುಃಖವಾಯಿತು. ಡಾ. ರಾಜ್‌ಕುಮಾರ್ ಮತ್ತು ಡಾ. ವಿಷ್ಣುವರ್ಧನ್ ಅವರಂತಹ ಮೇರು ನಟರೊಂದಿಗೆ ಪರದೆ ಹಂಚಿಕೊಳ್ಳುತ್ತಿದ್ದರೂ ಹಾಸ್ಯಭರಿತ ನಟನೆಯ ಮೂಲಕ ನೋಡುಗರ ಮನದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು ದ್ವಾರಕೀಶ್ ಅವರ ನಿಧನದಿಂದ ಕನ್ನಡ ಚಿತ್ರರಂಗ ಬಡವಾಗಿದೆ. ಅವರ ಆತ್ಮಕ್ಕೆ ಶಾಂತಿ ದೊರಕಲಿ, ಕುಟುಂಬವರ್ಗ ಮತ್ತು ಅಭಿಮಾನಿಗಳಿಗೆ ನೋವು ಭರಿಸುವ ಶಕ್ತಿ ಸಿಗಲೆಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ ಸಿದ್ದರಾಮಯ್ಯ.

    ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ಹಾಗೂ ಹಿರಿಯ ಕಲಾವಿದ ದ್ವಾರಕೀಶ್ ಅವರ ನಿಧನಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರಾಗಿ, ನಿರ್ದೇಶಕರಾಗಿ, ಕಲಾವಿದನಾಗಿ ಅಗಾಧವಾದ ಸೇವೆ ಸಲ್ಲಿಸಿರುವ ದ್ವಾರಕೀಶ್ ಅವರ ನಿಧನದ ಸುದ್ದಿ ಕೇಳಿ ಬೇಸರವಾಗಿದೆ. ಕನ್ನಡ ಚಿತ್ರರಂಗದಲ್ಲಿ ಅನೇಕ ಹೊಸ ಮೈಲುಗಲ್ಲುಗಳನ್ನು ಸಾಧಿಸಿ, ಚಿತ್ರರಂಗಕ್ಕೆ ದೊಡ್ಡ ಅಡಿಪಾಯ ಹಾಕಿಕೊಟ್ಟವರಲ್ಲಿ ದ್ವಾರಕೀಶ್ ಕೂಡ ಒಬ್ಬರು. ಡಾ. ರಾಜಕುಮಾರ್, ಡಾ. ವಿಷ್ಣುವರ್ಧನ್, ಡಾ.ಅಂಬರೀಶ್, ಶಂಕರ್ ನಾಗ್ ಸೇರಿದಂತೆ ಕನ್ನಡ ಚಿತ್ರರಂಗದ ಘಟಾನುಘಟಿ ನಟರ ಜೊತೆ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಅನೇಕ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿ ಬೆಳೆಸಿದ್ದಾರೆ.

     

    ದ್ವಾರಕೀಶ್ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬ ಸದಸ್ಯರು ಹಾಗೂ ಅಭಿಮಾನಿಗಳಿಗೆ ಈ ಅಗಲಿಕೆಯ ನೋವು ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ” ಎಂದು ಶಿವಕುಮಾರ್ ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

  • ಸ್ಪಂದನಾ ವಿಜಯ ರಾಘವೇಂದ್ರ ನಿಧನಕ್ಕೆ ಗಣ್ಯರು ಸಂತಾಪ

    ಸ್ಪಂದನಾ ವಿಜಯ ರಾಘವೇಂದ್ರ ನಿಧನಕ್ಕೆ ಗಣ್ಯರು ಸಂತಾಪ

    ಟ ವಿಜಯ ರಾಘವೇಂದ್ರ (Vijaya Raghavendra) ಪತ್ನಿ ಸ್ಪಂದನಾ (Spandana) ನಿಧನಕ್ಕೆ ಅನೇಕ ಗಣ್ಯರು ಸಂತಾಪ (Condolence) ವ್ಯಕ್ತ ಪಡಿಸಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡ್ಯೂರಪ್ಪ, ಬಸವರಾಜ ಬೊಮ್ಮಾಯಿ, ನಟಿ-ಸಂಸದೆ ಸುಮಲತಾ ಅಂಬರೀಶ್, ನಟಿ ರಾಗಿಣಿ, ನಿರ್ದೇಶಕ ನಾಗಭರಣ್, ಸಚಿವ ದಿನೇಶ್ ಗುಂಡೂರಾವ್ ಸೇರಿದಂತೆ ಹಲವಾರು ಗಣ್ಯರು ಕಂಬನಿ ಮಿಡಿದಿದ್ದಾರೆ.

    ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿ, ‘ಕನ್ನಡದ ಖ್ಯಾತ ಚಲನಚಿತ್ರ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ನಿಧನದ ಸುದ್ದಿ ಕೇಳಿ ಆಘಾತವಾಯಿತು. ಮೃತರ ಆತ್ಮಕ್ಕೆ ಆ ದೇವರು ಚಿರಶಾಂತಿ ನೀಡಲೆಂದು ಪ್ರಾರ್ಥಿಸುತ್ತೇನೆ. ವಿಜಯ ರಾಘವೇಂದ್ರ ಮತ್ತು ಬಿ.ಕೆ. ಶಿವರಾಮ್ ಕುಟುಂಬಕ್ಕೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ಭಗವಂತ ನೀಡಲಿ’ ಎಂದಿದ್ದಾರೆ. ಇದನ್ನೂ ಓದಿ:ಬಿಪಾಶಾ ಬಸು ಮಗಳ ಹಾರ್ಟ್‌ನಲ್ಲಿ ಹೋಲ್- ಕಣ್ಣೀರಿಟ್ಟ ನಟಿ

    ವಿಜಯ ರಾಘವೇಂದ್ರ ಚಿತ್ರಗಳ ನಿರ್ದೇಶಕ ಹಾಗೂ ಅವರ ಪುತ್ರನಿಗೆ ನೃತ್ಯ ಹೇಳಿಕೊಡುತ್ತಿರುವ ಹಿರಿಯ ನಿರ್ದೇಶಕ ನಾಗಭರಣ ಮಾಧ್ಯಮಗಳ ಜೊತೆ ಮಾತನಾಡಿ, ‘ನೀವು ಆ ಸುದ್ದಿ ಹೇಳಿದ ತಕ್ಷಣ ನಾನು ಗೌರವ ಡಾಕ್ಟರೇಟ್ ಪಡೆದ ಸಂತೋಷ 100 ಪಟ್ಟು ಕುಸಿಯಿತು. ವಿಜಯರಾಘವೇಂದ್ರ ಕುಟುಂಬದ ಜೊತೆ ಬಹಳ ದೊಡ್ಡ ಒಡನಾಟ ಇತ್ತು. ಚಿನ್ನಾರಿ ಮುತ್ತ ಸಿನೆಮಾದಿಂದ ವಿಜಯ ರಾಘವೇಂದ್ರ ಬೆಳವಣಿಗೆ ಕಂಡವನು. ನನ್ನ ಚಿನ್ನಾರಿಮುತ್ತವನ್ನು ಅವನಲ್ಲಿ ಕಂಡಿದ್ದೆ. ಆ ಸುದ್ದಿ ಕೇಳಿ ನನಗೆ ನಿಜವಾಗಿಯೂ ಶಾಕ್ ಆಗಿದೆ’ ಎಂದು ತಮಕೂರಿನಿಂದ ಮಾತನಾಡಿದ್ದಾರೆ.

    ಮುಂದುವರೆದು ಮಾತನಾಡಿದ ನಾಗಭರಣ, ‘ನಿನ್ನೆ ಅವರ ಮಗು ಶೌರ್ಯನಿಗೆ ನಾನು ಪಾಠ ಹೇಳುತ್ತಿದ್ದೆ. ಅದನ್ನು ಮುಗಿಸಿಕೊಂಡು ಸಂಜೆ 5.30ಕ್ಕೆ ವಿಜಯರಾಘವೇಂದ್ರ ಮಗುವನ್ನು ಪಿಕ್ ಮಾಡಿದ್ದ. ನಿಜವಾಗಿಯೂ ಪರಿತಾಪ ಪಡುವ ವಿಚಾರ ಇದು. ನನಗೆ ರಿಯಾಕ್ಟ್ ಮಾಡೋಕೆ ಆಗ್ತಿಲ್ಲ. ಬಹಳ ಬಹಳ‌ ದುಃಖದ ಸಂಗತಿ. ಯಾಕೋ ಆ ಕುಟುಂಬದ ಸುತ್ತ ಛಾಯೆಗಳು ನಿರಂತರವಾಗಿ ಎರಗ್ತಿದಿಯಲ್ಲ ಅನ್ನೋದೆ ಬಹಳ ದುಃಖದ ವಿಷಯ. ಯಾರನ್ನು ಕಳೆದುಕೊಳ್ಳಬಾರದು ಅಂತ ಇಷ್ಟಪಡ್ತಿವೋ ಅವರನ್ನ ಕಳೆದುಕೊಳ್ತಿದ್ದೇವೆ. ಒಂದೇ ಕುಟುಂಬದಲ್ಲಿ ಈ ರೀತಿಯಾಗಿ ಆಗ್ತಿದಿಯಲ್ಲಾ ಅನ್ನೋದೆ ದುಃಖದ ಸಂಗತಿ ಎಂದಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಒಡಿಶಾದಲ್ಲಿ ಭೀಕರ ರೈಲು ದುರಂತ: ಯಶ್, ಸುಮಲತಾ ಸೇರಿದಂತೆ ಹಲವರ ಸಂತಾಪ

    ಒಡಿಶಾದಲ್ಲಿ ಭೀಕರ ರೈಲು ದುರಂತ: ಯಶ್, ಸುಮಲತಾ ಸೇರಿದಂತೆ ಹಲವರ ಸಂತಾಪ

    ಡಿಶಾದಲ್ಲಿ (Odisha Train Tragedy) ಶುಕ್ರವಾರ ಸಂಜೆ ಸಂಭವಿಸಿದ ರೈಲು ದುರಂತದ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಸ್ಯಾಂಡಲ್ ವುಡ್, ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಗಳಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ನಟ ಯಶ್ (Yash) , ನಟಿ ಹಾಗೂ ಸಂಸದೆ ಸುಮಲತಾ ಅಂಬರೀಶ್ (Sumalata Ambarish) ಸೇರಿದಂತೆ ಹಲವು ಸೋಷಿಯಲ್ ಮೀಡಿಯಾಗಳ ಮೂಲಕ ಸಂತಾಪ (condolence) ವ್ಯಕ್ತ ಪಡಿಸಿದ್ದಾರೆ. ಅಗಲಿದ ಕುಟುಂಬಕ್ಕೆ ನೋವು ಭರಿಸುವಂತಹ ಶಕ್ತಿ ನೀಡಲಿ ಎಂದು ಅವರು ಪ್ರಾರ್ಥನೆ ಮಾಡಿದ್ದಾರೆ.

    ಚೆನ್ನೈ-ಕೊರೊಮಂಡೆಲ್ ಎಕ್ಸ್‌ಪ್ರೆಸ್ ರೈಲು, ಯಶವಂತಪುರ-ಹೌರ ರೈಲು ಹಾಗೂ ಗೂಡ್ಸ್ ರೈಲು ಮುಖಾಮುಖಿ ಡಿಕ್ಕಿಯಾಗಿದ್ದವು. ಒಡಿಶಾದ ಬಾಲಾಸೋರ್ ಜಿಲ್ಲೆಯ ಬಹನಗ ರೈಲು ನಿಲ್ದಾಣದ ಬಳಿ ಈ ಅಪಘಾತ ಸಂಭವಿಸಿತು. 12841 ಎಕ್ಸ್‌ಪ್ರೆಸ್ ರೈಲು ಡಿಕ್ಕಿಯಾದ ರಭಸಕ್ಕೆ ಪ್ರಯಾಣಿಕರಿದ್ದ ರೈಲಿನ ಹಲವು ಬೋಗಿಗಳು ಹಳಿ ತಪ್ಪಿ, ಭೀಕರ ಅಪಘಾತದಲ್ಲಿ ಹಲವರು ಮೃತಪಟ್ಟಿದ್ದಾರೆ. ಇದನ್ನೂ ಓದಿ:ಶಕುನಿ ಪಾತ್ರಧಾರಿ ಗೂಫಿ ಆರೋಗ್ಯ ಸ್ಥಿತಿ ಗಂಭೀರ

    ಪಶ್ಚಿಮ ಬಂಗಾಳದ ಶಾಲಿಮಾರ್ ರೈಲು ನಿಲ್ದಾಣದಿಂದ ಚೆನ್ನೈಗೆ ಆಗಮಿಸುತ್ತಿದ್ದ ಈ ರೈಲು ಒಡಿಶಾದಲ್ಲಿ ಯಶವಂತಪುರ ಪ್ಯಾಸೆಂಜರ್ ರೈಲು ಹಾಗೂ ಸರಕು ಸಾಗಾಣೆ ರೈಲಿಗೆ ಡಿಕ್ಕಿ ಹೊಡೆದಿತ್ತು. ಕ್ಷಣ ಕ್ಷಣಕ್ಕೂ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ 10 ಲಕ್ಷ ರೂ, ಗಂಭೀರ ಗಾಯಗೊಂಡವರಿಗೆ 2 ಲಕ್ಷ ರೂ. ಹಾಗೂ ಸಣ್ಣ ಗಾಯಗಳಾದ ಪ್ರಯಾಣಿಕರಿಗೆ 50,000 ರೂ. ಪರಿಹಾರವನ್ನು ರೈಲ್ವೇ ಇಲಾಖೆ ಘೋಷಿಸಿದೆ.

     

    ಅಪಘಾತದ ಸ್ಥಳದಲ್ಲಿ ರಕ್ಷಣಾ ತಂಡಗಳು ಬೀಡುಬಿಟ್ಟಿದ್ದು, ರಕ್ಷಣಾ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ. 3 ಎನ್‌ಡಿಆರ್‌ಎಫ್‌, 4 ಎಸ್‌ಡಿಆರ್‌ಎಫ್‌, ಅಗ್ನಿಶಾಮಕ ದಳದ ಸಿಬ್ಬಂದಿಗಳಿಂದ ರಕ್ಷಣಾ ಕಾರ್ಯ ನಡೆಯುತ್ತಿದೆ. ಘಟನಾ ಸ್ಥಳದಲ್ಲಿ 50 ಅಂಬುಲೆನ್ಸ್‌ಗಳು ನಿರಂತರ ಓಡಾಟ ಮಾಡುತ್ತಿವೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಸ್ಥಳೀಯ ಜನ ಕೂಡ ರಕ್ಷಣಾ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ಒಡಿಶಾ ರೈಲು ಅಪಘಾತ ಸಹಾಯವಾಣಿ ಆರಂಭಿಸಲಾಗಿದೆ. ಗಾಯಾಳುಗಳು, ಮೃತಪಟ್ಟವರ ಮಾಹಿತಿ ಪಡೆಯಲು ಸಹಾಯವಾಣಿ ಸ್ಥಾಪನೆ ಮಾಡಲಾಗಿದೆ.

  • ನಿರ್ದೇಶಕ ಭಗವಾನ್ ನಿಧನಕ್ಕೆ ಸಿಎಂ, ಮಾಜಿ ಸಿಎಂ ಸಂತಾಪ

    ನಿರ್ದೇಶಕ ಭಗವಾನ್ ನಿಧನಕ್ಕೆ ಸಿಎಂ, ಮಾಜಿ ಸಿಎಂ ಸಂತಾಪ

    ನ್ನಡದ ಮೇರುಪ್ರತಿಭೆ ಎಸ್.ಕೆ.ಭಗವಾನ್ (Bhagwan) ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai), ಮಾಜಿ ಸಿಎಂ ಸಿದ್ಧರಾಮಯ್ಯ (Siddaramaiah), ನಟಿ, ಸಂಸದೆ ಸುಮಲತಾ ಅಂಬರೀಶ್ (Sumalatha Ambarish)  ಸೇರಿದಂತೆ ರಾಜಕೀಯ ಕ್ಷೇತ್ರದ ಅನೇಕ ಗಣ್ಯರು ಸಂತಾಪ (condolence) ವ್ಯಕ್ತ ಪಡಿಸಿದ್ದಾರೆ. ಸಂತಾಪ ಸಂದೇಶಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

    ಮಾಜಿ ಸಿಎಂ ಸಿದ್ಧರಾಮಯ್ಯ ಸಂತಾಪ ಸಂದೇಶವನ್ನು ಕಳುಹಿಸಿದ್ದು, ಭಗವಾನ್ ಜೀವನ ಸಾಧನೆಯನ್ನು ಕೊಂಡಾಡಿದ್ದಾರೆ.  ಕನ್ನಡ ಕಲಾ ಜಗತ್ತು ಮತ್ತು ಸಿನಿಮಾ ಪ್ರಪಂಚವನ್ನು ಬೆಳಗಿ ಬೆಳ್ಳೆತೆರೆಯನ್ನು ಶ್ರೀಮಂತಗೊಳಿಸಿದ್ದ ಕನ್ನಡದ ಹಿರಿಮೆಯೂ ಆಗಿದ್ದ ಶ್ರೀನಿವಾಸ ಕೃಷ್ಣ ಅಯ್ಯಂಗಾರ್ (ಎಸ್.ಕೆ.ಭಗವಾನ್) ಅವರ ನಿಧನ ಅತ್ಯಂತ ಬೇಸರ ತರಿಸಿದೆ. ದೊರೈ ಭಗವಾನ್ ಎಂದೇ ಖ್ಯಾತರಾಗಿದ್ದ ಇವರು ಕನ್ನಡ ಸಿನಿಮಾವನ್ನು ಸಾಂಪ್ರದಾಯಿಕ ಶೈಲಿಯಿಂದ ಅಂತಾರಾಷ್ಟ್ರೀಯ ಮಟ್ಟದ ಶೈಲಿ ಮತ್ತು ತಂತ್ರಜ್ಞಾನಕ್ಕೆ ಅಳವಡಿಸಿದ ಮೊದಲಿಗರಲ್ಲಿ ಒಬ್ಬರು.

    “ಜೇಡರ ಬಲೆ”, “ಗೋವಾದಲ್ಲಿ ಸಿಐಡಿ 999”, “ಆಪರೇಷನ್ ಜಾಕ್‌ಪಾಟ್” ರೀತಿಯ ಸಿನಿಮಾಗಳ ಮೂಲಕ ಜೇಮ್ಸ್ ಬಾಂಡ್ ಮಾದರಿಯ ಕನ್ನಡ ಸಿನಿಮಾವನ್ನು ಅರ್ಧ ಶತಮಾನದ ಹಿಂದೆಯೇ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಸಿದ್ದವರು. ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯೂ ಸೇರಿ ನೂರಾರು ಕಲಾ ಪ್ರಶಸ್ತಿಗಳ ಪುರಸ್ಕೃತರಾಗಿದ್ದ  ಇವರು ಇನ್ನಷ್ಟು ಕಾಲ ನಮ್ಮ ನಡುವೆ ಇರಬೇಕಿತ್ತು. ಇದನ್ನೂ ಓದಿ:ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್‌ನಲ್ಲಿ ರಜನಿಕಾಂತ್ ದಂಪತಿ

    ನನ್ನ ಆತ್ಮೀಯರೂ ಆಗಿದ್ದ ಇವರನ್ನು ನಾನಾ ಸಂದರ್ಭಗಳಲ್ಲಿ ಭೇಟಿಯಾಗುವ ಅವಕಾಶ ಹತ್ತಾರು ಬಾರಿ ಒದಗಿ ಬಂದಿತ್ತು. 90 ವರ್ಷ ವಯಸ್ಸಿನ ಇವರು ವಯೋಸಹಜ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದರು. ಕನ್ನಡ ರಂಗಭೂಮಿ ಮೂಲಕ ಸಿನಿಮಾ ರಂಗ ಪ್ರವೇಶಿಸಿ ಬೆಳ್ಳಿ ಪರದೆಯನ್ನು ಶ್ರೀಮಂತಗೊಳಿಸಿದ ಭಗವಾನ್ ಅವರು ತಮ್ಮ 65 ವರ್ಷಗಳ ಸುದೀರ್ಘ ಸಿನಿಮಾ ಸಾಹಸಗಳಲ್ಲಿ 28ಕ್ಕೂ ಹೆಚ್ಚು ಕನ್ನಡ ಕಾದಂಬರಿಗಳನ್ನು ಬೆಳ್ಳಿ ಪರದೆಗೆ ತಂದ ಕೀರ್ತಿ ಹೊಂದಿದ್ದಾರೆ.

    ಭಗವಾನ್ ನಿರ್ದೇಶನದಲ್ಲಿ ಅರಳಿದ “ಕಸ್ತೂರಿ ನಿವಾಸ, ಸಂಧ್ಯಾರಾಗ, ಬಯಲುದಾರಿ, ಹೊಸ ಬೆಳಕು, ಬೆಂಕಿಯ ಬಲೆ…” ಮುಂತಾದ ಹಲವು ಸಿನಿಮಾಗಳು ಈಗಲೂ ನನ್ನ ನೆನಪಿನಲ್ಲಿ ಉಳಿದಿವೆ. ಸಿನಿಮಾ ನಿರ್ದೇಶನಕ್ಕೆ ಪೂರ್ಣವಿರಾಮ ಹಾಕಿದ ಬಳಿಕ “ಆದರ್ಶ ಸಿನಿಮಾ ಇನ್ಸ್ಟಿಟ್ಯೂಟ್”ನ ಪ್ರಾಂಶುಪಾಲರಾಗಿ ಇವರು ತಮ್ಮ ತಿಳಿವಳಿಕೆ, ಜ್ಞಾನ ಮತ್ತು ಅನುಭವವನ್ನು ಹೊಸ ತಲೆಮಾರಿನ ಕಲಾಸಕ್ತರಿಗೂ ವರ್ಗಾಯಿಸುವ ಮೂಲಕ ಕನ್ನಡದ ಜ್ಞಾನವನ್ನು ಹೆಚ್ಚಿಸಿದ್ದಾರೆ.

    ಇವರ ಅಗಲಿಕೆ ಭಾರತೀಯ ಸಿನಿಮಾ ಜಗತ್ತಿಗೆ ತುಂಬಲಾರದ ನಷ್ಟ. ಇವರ ಅಗಲಿಕೆಯನ್ನು ಸಹಿಸುವ ಶಕ್ತಿಯನ್ನು ಕುಟುಂಬ ವರ್ಗದವರಿಗೆ, ಬಂಧು ಮಿತ್ರರಿಗೆ, ಅಭಿಮಾನಿಗಳಿಗೆ ಹಾಗೂ ಸಿನಿಮಾ ಜಗತ್ತಿಗೆ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ತಮ್ಮ ಕಲಾ ಶ್ರೀಮಂತಿಕೆಯ ಕಾರಣಕ್ಕೆ ಭಗವಾನ್ ಅವರು ಕನ್ನಡ ಭಾಷೆ ಇರುವವರೆಗೂ ಕನ್ನಡ ಮಣ್ಣಿನಲ್ಲಿ ಅಜರಾಮರವಾಗಿ ಉಳಿಯುತ್ತಾರೆ ಎಂದು ಹೇಳುತ್ತಾ ಹಿರಿಯ ಪ್ರತಿಭೆಗೆ ಶ್ರದ್ಧಾಂಜಲಿಯನ್ನು ಅರ್ಪಿಸುತ್ತೇನೆ ಎಂದಿದ್ದಾರೆ ಸಿದ್ಧರಾಮಯ್ಯ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸೂಪರ್ ಸ್ಟಾರ್ ಕೃಷ್ಣ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ

    ಸೂಪರ್ ಸ್ಟಾರ್ ಕೃಷ್ಣ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ

    ತೆಲುಗು ಸಿನಿಮಾ ರಂಗದ ಸೂಪರ್ ಸ್ಟಾರ್ ಕೃಷ್ಣ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಕಂಬನಿ ಮಿಡಿದಿದ್ದು, ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ಕೃಷ್ಣ ಅವರ ವೃತ್ತಿ ಜೀವನದ ಸಾಧನೆಯನ್ನು ಕೊಂಡಾಡುತ್ತಲೇ, ಈ ಸಂದರ್ಭದಲ್ಲಿ ದುಃಖದಲ್ಲಿರುವ ಕೃಷ್ಣ (Krishna) ಅವರ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ. ‘ಕೃಷ್ಣ ಲೆಜೆಂಡರಿ ನಟರಾಗಿದ್ದು, ತಮ್ಮ ನಟನೆ ಮೂಲಕ ಅಸಂಖ್ಯಾತ ಅಭಿಮಾನಿಗಳ ಹೃದಯದಲ್ಲಿ ಇದ್ದರು’ ಎಂದು ಟ್ವಿಟ್ ಮೂಲಕ ಸಂತಾಪ ಸೂಚಿಸಿದ್ದಾರೆ.

    ಸಿನಿಮಾ, ನಾಟಕಗಳಲ್ಲಿ ಮಾತ್ರವಲ್ಲ, ರಾಜಕಾರಣದಲ್ಲೂ ತಮ್ಮದೇ ಆದ ಛಾಪು ಮೂಡಿಸಿದವರು ಕೃಷ್ಣ. ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡು ಲೋಕಸಭಾ ಸದಸ್ಯರಾಗಿಯೂ ಜನಪರ ಕೆಲಸಗಳನ್ನೂ ಮಾಡಿದ್ದಾರೆ. ಇವರ ಸೇವೆಗೆ ಪದ್ಮಭೂಷಣ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಸಂದಿವೆ. ಇತ್ತೀಚಿನ ದಿನಗಳಲ್ಲಿ ಸಿನಿಮಾ ರಂಗದಿಂದ ದೂರವಿದ್ದರೂ, ಇವರ ಪುತ್ರ ಮಹೇಶ್ ಬಾಬು ತೆಲುಗು ಸಿನಿಮಾ ರಂಗದ ಸೂಪರ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಇದನ್ನೂ ಓದಿ:ಡಿವೋರ್ಸ್ ವದಂತಿಯ ನಡುವೆ ಸಾನಿಯಾ ಮಿರ್ಜಾ ಬರ್ತ್‌ಡೇಗೆ ಶೋಯೆಬ್ ಮಲಿಕ್ ವಿಶ್

    ಮಹೇಶ್ ಬಾಬು ಕುಟುಂಬದಲ್ಲಿ ಈ ವರ್ಷ ಸೂತಕದ ವರ್ಷವೆಂದೇ ಹೇಳಬಹುದು. ಜನವರಿಯಲ್ಲಿ ಕೃಷ್ಣ ಅವರ ಹಿರಿಯ ಮಗ ರಮೇಶ್ ಬಾಬು ನಿಧನಹೊಂದಿದ್ದರೆ, ಎರಡು ತಿಂಗಳ ಹಿಂದೆಯಷ್ಟೇ ಕೃಷ್ಣ ಅವರ ಎರಡನೇ ಪತ್ನಿ ಇಂದಿರಾ ದೇವಿ ಇಹಲೋಕ ತ್ಯಜಿಸಿದ್ದಾರೆ. ಮೊದಲನೇ ಹೆಂಡತಿ  ವಿಜಯ ನಿರ್ಮಲಾ ನಾಲ್ಕು ವರ್ಷಗಳ ಹಿಂದೆ ಬಾರದ ಲೋಕಕ್ಕೆ ಹೋಗಿದ್ದಾರೆ. ಇದೀಗ ಕೃಷ್ಣ ಕೂಡ ಕಣ್ಮರೆಯಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮತ್ತೊಮ್ಮೆ ಹುಟ್ಟಿ ಬಾ ತಾಯಿ.. ಕನ್ನಡ ನೆಲದಲ್ಲಿ: ಉಮಾಶ್ರೀ ಕಂಬನಿ

    ಮತ್ತೊಮ್ಮೆ ಹುಟ್ಟಿ ಬಾ ತಾಯಿ.. ಕನ್ನಡ ನೆಲದಲ್ಲಿ: ಉಮಾಶ್ರೀ ಕಂಬನಿ

    ಬೆಂಗಳೂರು: ಪ್ರಖ್ಯಾತ ಹಿರಿಯ ಕಲಾವಿದೆ, ಅಭಿನಯ ಶಾರದೆ ಜಯಂತಿ ಅವರ ನಿಧನಕ್ಕೆ ಸ್ಯಾಂಡಲ್‍ವುಡ್‍ನ ಅನೇಕ ಕಲಾವಿದರು, ಗಣ್ಯರು ಕಂಬನಿ ಮೀಡಿದಿದ್ದಾರೆ. ಹಿರಿಯ ಕಲಾವಿದೆ ಉಮಾಶ್ರೀ ಅವರು ಜಯಂತಿ ಅವರನ್ನು ನೆನೆದು ಕಣ್ಣೀರು ಹಾಕಿದ್ದಾರೆ.

    ಹಿರಿಯ ನಟಿ ಉಮಾಶ್ರೀ ಅವರು ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿ ಜಯಂತಿಯವರನ್ನು ನೆನೆದು ದುಃಖ ತೃಪ್ತರಾಗಿದ್ದಾರೆ. ಸಹೃದಯಿ, ಮಮತಾಮಯಿ ನಮ್ಮನ್ನು ಅಗಲಿದ್ದಾರೆ. ನನಗೆ ತುಂಬಾ ದುಃಖವಾಗುತ್ತಿದೆ. ಸಣ್ಣವರಿಂದ, ದೊಡ್ಡವರವರೆಗೂ ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದ ಕಲಾವಿದೆ. ಅವರ ಅಭಿನಯಕ್ಕೆ ಅವರೆ ಸಾಟಿಯಾಗಿದ್ದಾರೆ. ಕಮಲ ಕುಮಾರಿ ಎನ್ನವ ಹೆಸರು ಎಷ್ಟೊಂದು ಚಂದ ಇದೆ. ಅವರು ಕಷ್ಟಕಗಳು ಕಮಲದ ಹೂವು ಹೇಗೆ ಕೆಸರಿನಲ್ಲಿ ಅರಳುತ್ತದೆಯೋ ಹಾಗೇ ಇವರು ಕಷ್ಟಗಳ ಮಧ್ಯೆಗೆ ಬಂದವರಾಗಿದ್ದಾರೆ. ವಯಸ್ಸು ಆಗಿದ್ದರು ಅವರ ವರ್ಚಸ್ಸು ಕಡಿಮೆಯಾಗಿರಲಿಲ್ಲ. ಮತ್ತೊಮ್ಮೆ ಹುಟ್ಟಿ ಬಾ ತಾಯಿ… ಕನ್ನಡ ನೆಲದಲ್ಲಿ. ಕನ್ನಡದ ಆಸ್ತಿ ಅವರು ಹೀಗಾಗಿ ಅವರು ಮತ್ತೆ ಕಲಾವಿದೆಯಾಗಿ ಹುಟ್ಟಿಬರಬೇಕು ಎಂದು ಭಗವಂತನಲ್ಲಿ ಬೇಡಿಕೊಳ್ಳುತ್ತೇನೆ ಎಂದು ಹೇಳುತ್ತಾ ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: ಅಭಿನಯ ಶಾರದೆ, ಹಿರಿಯ ನಟಿ ಜಯಂತಿ ವಿಧಿವಶ

    ಸಿನಿಮಾಕ್ಕೆ ಬರಬೇಕು ಎಂದರೆ ತುಂಬಾ ಕಷ್ಟ ಇತ್ತು. ಡಾನ್ಸ್, ನಟನೆ, ಹಾವಭಾವ, ಧ್ವನಿಯಲ್ಲಿ ಏರಿಳಿತ ಇರಬೇಕಿತ್ತು. ಅವರು ಎಷ್ಟೊಂದು ಬೋಲ್ಡ್ ಮತ್ತು ಬ್ಯೂಟಿಫುಲ್ ಆಗಿದ್ದರು. ಅವರು ಎಷ್ಟೊಂದು ಧೈರ್ಯ ಇತ್ತು ಎಂದರೆ ಈಗ ಕಾಮನ್ ಆಗಿರುವ ಸ್ವಿಮ್ಮಿಂಗ್‍ಸೂಟ್‍ನ್ನು ಅವರು ಆಗಲೇ ಹಾಕಿದ್ದರು. ಅವರಿಂದ ಕಲಿಯಬೇಕಿದ್ದು ತುಂಬಾ ಇತ್ತು. ಗ್ರಂಥಾಲಯದಲ್ಲಿರುವ ದೊಡ್ಡ ಗ್ರಂಥವಾಗಿದ್ದಾರೆ. ಜಯಂತಿ ಅವರ ಅವರ ಮಗ ತಾಯಿಗೋಸ್ಕರನೆ ಬದುಕಿದ್ದರು. ಮಗನಿಗೆ ದೇವರು ಒಳ್ಳೆಯದು ಮಾಡಲಿ ಎಂದು ಹೇಳುತ್ತಾ ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: ಈಗ ನಾನು ಟ್ರೋಲ್ ಆಗುತ್ತಿರಬಹುದು – ಅರವಿಂದ್, ಚಕ್ರವರ್ತಿ ಚರ್ಚೆ

    ಬನಶಂಕರಿಯ ಸ್ವಗ್ರಹದಲ್ಲಿ ಜಯಂತಿ ಅವರು ನಿನ್ನೆ ರಾತ್ರಿ ಎಂದಿನಂತೆ ಊಟ ಮಾಡಿ ಮಲಗಿದ್ದ ಜಯಂತಿ ಅವರು ಬೆಳಗ್ಗೆ ಎದ್ದೇಳಲೇ ಇಲ್ಲ, ರಾತ್ರಿ ಹೇಗೆ ಈ ಘಟನೆ ಸಂಭವಿಸಿತು ಗೊತ್ತಿಲ್ಲ. ಬೆಳಗ್ಗೆ ಎದ್ದೇಳಿಸೋಕೆ ನೋಡಿದೆವು ನಮಗೆ ಆಗಲೇ ತಿಳಿದಿದ್ದು, ಹೃದಯಾಘಾತವಾಗಿರಬಹುದೇನೋ ಗೊತ್ತಿಲ್ಲ. ಮುಂದಿನ ಕಾರ್ಯಗಳ ಬಗ್ಗೆ ಈಗೇನೂ ಗೊತ್ತಾಗುತ್ತಿಲ್ಲ ಎಂದು ಜಯಂತಿ ಜಯಂತಿ ಪುತ್ರ ಕೃಷ್ಣ ಕುಮಾರ್ ಪಬ್ಲಿಕ್ ಟಿವಿಗೆ ಹೇಳಿದ್ದಾರೆ.

  • ಸಂಚಾರದ ಹಾದಿಯಲ್ಲಿ ಹೆಜ್ಜೆಗುರುತು ಮೂಡಿಸಿ ಹೋದ ವಿಜಯ್: ಅರವಿಂದ ಲಿಂಬಾವಳಿ ಶೋಕ

    ಸಂಚಾರದ ಹಾದಿಯಲ್ಲಿ ಹೆಜ್ಜೆಗುರುತು ಮೂಡಿಸಿ ಹೋದ ವಿಜಯ್: ಅರವಿಂದ ಲಿಂಬಾವಳಿ ಶೋಕ

    ಬೆಂಗಳೂರು: ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ಸಂಚಾರಿ ವಿಜಯ್ ಅವರ ನಿಧನಕ್ಕೆ ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ, ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

    ವಿಜಯ್ ತಮ್ಮ ಜೀವನ ಯಾನದ ಸಂಚಾರವನ್ನು ಅಪೂರ್ಣವಾಗಿಸಿ ಬದುಕು ತೊರೆದು ಹೋಗಿದ್ದಾರೆ. ಆದರೆ ಬದುಕಿನ ಸಂಚಾರದ ಹಾದಿಯಲ್ಲಿ ಅವರು ಅಂಗಾಂಗ ದಾನ ಮಾಡುವ ಮೂಲಕ ಹೆಜ್ಜೆ ಗುರುತುಗಳನ್ನು ಉಳಿಸಿ ಹೋಗಿದ್ದಾರೆ. ಇದು ಅತ್ಯಂತ ಭಾವನಾತ್ಮಕ, ಮನಮಿಡಿಯುವ ಸಂದರ್ಭ ಎಂದು ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.

    ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಜೀವನದ ಪಯಣ ಮುಗಿಸಿದ ವಿಜಯ್ ಹಲವೇ ಚಿತ್ರಗಳಲ್ಲಿ ಅಭಿನಯಿಸಿದ್ದರೂ, ಅವೆಲ್ಲವೂ ಚಲನಚಿತ್ರ ಪ್ರೇಮಿಗಳ ಮನದಲ್ಲಿ ಅಚ್ಚಳಿಯದೆ ಉಳಿದಿದೆ ‘ನಾನು ಅವನಲ್ಲ ಅವಳು’ ಚಿತ್ರದ ಅವರ ಮನೋಜ್ಞ ಅಭಿನಯ ಅವರಿಗೆ ರಾಷ್ಟ್ರಪ್ರಶಸ್ತಿ ತಂದುಕೊಟ್ಟಿತ್ತು.ಸಂಚಾರಿ ಥಿಯೇಟರ್ಸ್ ಮೂಲಕ ರಂಗಭೂಮಿಯ ಬದುಕಿಗೆ ಕಾಲಿಟ್ಟ ವಿಜಯ್ ಅನೇಕ ಮಹತ್ವದ ನಾಟಕಗಳಲ್ಲಿ ಪಾತ್ರ ವಹಿಸಿದ್ದರು. ಆನಂತರ ಕಿರುತೆರೆ ಮತ್ತು ಹಿರಿತೆರೆಗಳಿಗೂ ಪ್ರವೇಶಿಸಿ ತಮ್ಮ ಅಭಿನಯದ ಮೂಲಕ ಎಲ್ಲರ ಗಮನಸೆಳೆದರು.ಕೃಷ್ಣ ತುಳಸಿ ಚಿತ್ರದ ಅಂಧ ಯುವಕನ ಪಾತ್ರ ಸದಾ ಮನದಲ್ಲಿ ಉಳಿಯುವಂಥದ್ದು, ರಂಗಪ್ಪ ಹೋಗ್ಬಿಟ್ಟ, ಒಗ್ಗರಣೆ, ನಾತಿಚರಾಮಿ, ಪಿರಂಗಿಪುರ ಮತ್ತು ಹರಿವು ಮುಂತಾದ ಚಿತ್ರಗಳು ಅವರಿಗೆ ಅಪಾರ ಹೆಸರು ತಂದುಕೊಟ್ಟಿದೆ.

    ಭವಿಷ್ಯದಲ್ಲಿ ಇನ್ನೂ ದೊಡ್ಡ ಹೆಸರು ಮಾಡುವ ಎಲ್ಲಾ ಅವಕಾಶಗಳು ಇದ್ದ ವಿಜಯ್ ಅವರ ನಿಧನ ದುಃಖದಾಯಕ. ಪ್ರಗತಿಪರ ಚಿಂತನೆಯುಳ್ಳ, ಸಂವೇದನಾಶೀಲ ನಟ ಎನಿಸಿಕೊಂಡಿದ್ದ ವಿಜಯ್ ಸಾವಿನಲ್ಲೂ ತಮ್ಮ ಆದರ್ಶ ಮೆರೆದಿದ್ದಾರೆ. ಅಂಗಾಂಗ ದಾನ ಮಾಡಿದ ಅವರ ಕುಟುಂಬದ ನಿರ್ಣಯಕ್ಕೆ ನನ್ನ ಅನಂತ ವಂದನೆಗಳು. ಇಂತಹ ನಿರ್ಧಾರ ಕೈಗೊಳ್ಳುವುದು ಸಾಮಾನ್ಯ ಸಂಗತಿಯಲ್ಲ ,ಇತರರಿಗೆ ಮಾದರಿಯಾದ ಅವರ ಕುಟುಂಬಕ್ಕೆ ನನ್ನ ಕೃತಜ್ಞತೆಗಳು ಮತ್ತು ಸಂತಾಪಗಳನ್ನು ಸಲ್ಲಿಸುತ್ತೇನೆ. ಅವರ ದುಃಖ ದಲ್ಲಿನಾನೂ ಭಾಗಿ, ಭಗವಂತ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಸಚಿವ ಅರವಿಂದ ಲಿಂಬಾವಳಿ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

    ಚಿಕಿತ್ಸೆ ಪಡೆಯುತ್ತಿದ್ದ ವಿಜಯ್ ಬದುಕಿ ಬರುತ್ತಾರೆ ಎಂಬ ವಿಶ್ವಾಸ ನಂಬಿಕೆ ನನಗಿತ್ತು. ಅವರ ಕುಟುಂಬ ಸದಸ್ಯರು, ಅಭಿಮಾನಿಗಳಂತೆ ನಾನು ಕೂಡ ಪ್ರಾರ್ಥನೆ ಮಾಡಿದ್ದೆ. ಸೋಮವಾರ ಆಸ್ಪತ್ರೆಗೂ ಭೇಟಿ ನೀಡಿ ವೆಂಟಿಲೇಟರ್ ಮೇಲೆ ಚಿಕಿತ್ಸೆ ಪಡೆಯುತ್ತಿದ್ದ ಅವರು ಉಸಿರಾಡುತ್ತಿದ್ದರು. ಹೀಗಾಗಿ ಅವರು ಬದುಕುಳಿಯುತ್ತಾರೆಂಬ ನಿರೀಕ್ಷೆ ಇತ್ತು. ಕೆಲ ದಿನಗಳ ಚಿಕಿತ್ಸೆ ನಂತರ ಅವರು ಮನೆ ಮರಳಲಿದ್ದಾರೆಂಬ ವಿಶ್ವಾಸ ಬಂದಿತ್ತು. ಆದರೆ, ಎಲ್ಲರ ನಿರೀಕ್ಷೆ ಹುಸಿ ಮಾಡಿ ಅವರು ಅಗಲಿದ್ದಾರೆ. ಇದು ನನಗೆ ವೈಯಕ್ತಿಕವಾಗಿ ಬಹಳಷ್ಟು ದುಃಖ ಉಂಟು ಮಾಡಿದೆ ಎಂದು ಡಾ.ಸಿ.ಎನ್.ಅಶ್ವತ್ಥನಾರಾಯಣ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

    ಕನ್ನಡಕ್ಕೆ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ ಹಿರಿಮೆ ಅವರದ್ದು. ‘ನಾನು ಅವನಲ್ಲ…ಅವಳು’ ಚಿತ್ರದಲ್ಲಿ ಅವರದ್ದು ಅಮೋಘ ನಟನೆ. ಅಷ್ಟೇ ಅಲ್ಲ ಅವರು ನಟಿಸಿದ ಎಲ್ಲ ಪಾತ್ರಗಳಲ್ಲೂ ಜೀವಿಸುತ್ತಿದ್ದರು. ಅವರ ನಿಧನ ಕನ್ನಡ ಚಿತ್ರರಂಗಕ್ಕೆ ಭರಿಸಲಾಗದ ನಷ್ಟ. ಈ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬದ ಸದಸ್ಯರಿಗೆ, ಅಭಿಮಾನಿಗಳಿ ಹಾಗೂ ಚಿತ್ರರಂಗಕ್ಕೆ ದಯಪಾಲಿಸಲಿ ಎಂದು ಡಿಸಿಎಂ ಪ್ರಾರ್ಥನೆ ಮಾಡಿದ್ದಾರೆ.