Tag: Compounder

  • ಮತ್ತು ಬರೋ ಜ್ಯೂಸ್ ಕೊಟ್ಟು ಕಾಂಪೌಂಡರ್ ರೇಪ್ – ವಿಡಿಯೋ ನೋಡಿದ್ದೇವೆಂದು ಮತ್ತಿಬ್ಬರು ಗ್ಯಾಂಗ್‍ರೇಪ್

    ಮತ್ತು ಬರೋ ಜ್ಯೂಸ್ ಕೊಟ್ಟು ಕಾಂಪೌಂಡರ್ ರೇಪ್ – ವಿಡಿಯೋ ನೋಡಿದ್ದೇವೆಂದು ಮತ್ತಿಬ್ಬರು ಗ್ಯಾಂಗ್‍ರೇಪ್

    ಜೈಪುರ್: ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ನರ್ಸ್ ಮೇಲೆ ಆಸ್ಪತ್ರೆಯ ಮೂವರು ಸಿಬ್ಬಂದಿ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆದಿದೆ.

    ಆಸ್ಪತ್ರೆಯ ಕಾಂಪೌಂಡರ್ ಅಶೋಕ್, ವೈದ್ಯ ಡಾ.ಸುರೇಂದ್ರ ಮಹರ್ಷಿ ಮತ್ತು ಆತನ ಸಹೋದರ ಮೂವರೂ ಅತ್ಯಾಚಾರ ಎಸಗಿದ್ದಾರೆ. ಅಷ್ಟೇ ಅಲ್ಲದೆ ಅತ್ಯಾಚಾರವನ್ನು ವಿಡಿಯೋ ಮಾಡಿಕೊಂಡು ಬ್ಲ್ಯಾಕ್‍ಮೇಲ್ ಮಾಡುತ್ತಿದ್ದರು. ಸಂತ್ರಸ್ತೆಯ ದೂರಿನ ಆಧಾರದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

    ಏನಿದು ಪ್ರಕರಣ?
    ಸಂತ್ರಸ್ತೆಗೆ ಮದುವೆಯಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದರು. ಒಂದು ದಿನ ರಾತ್ರಿ ಸಹೋದ್ಯೋಗಿ ಅಶೋಕ್ ಆಕೆಯ ರೂಮಿಗೆ ಬಂದು ಒಂದು ಗ್ಲಾಸ್ ಜ್ಯೂಸ್ ಕೊಟ್ಟಿದ್ದಾನೆ. ಅದನ್ನು ಕುಡಿದು ಸಂತ್ರಸ್ತೆ ಪ್ರಜ್ಞೆ ಕಳೆದುಕೊಂಡಿದ್ದರು. ನಂತರ ಆರೋಪಿ ಕಾಂಪೌಂಡರ್ ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅದನ್ನು ತನ್ನ ಮೊಬೈಲ್‍ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದನು. ಆ ವಿಡಿಯೋ ಮೂಲಕ ಸಂತ್ರಸ್ತೆಗೆ ಬ್ಲ್ಯಾಕ್‍ಮೇಲ್ ಮಾಡಿ ನಿರಂತರವಾಗಿ ರೇಪ್ ಮಾಡುತ್ತಿದ್ದನು.

    ಕೆಲವು ತಿಂಗಳುಗಳ ನಂತರ, ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಇನ್ನೊಬ್ಬ ವ್ಯಕ್ತಿ ಡಾ.ಸುರೇಂದ್ರ ಮಹರ್ಷಿ, ಕಾಂಪೌಂಡರ್ ಜೊತೆಯಲ್ಲಿ ನೀನು ಸೆಕ್ಸ್ ಮಾಡಿರುವ ವಿಡಿಯೋ ಬಗ್ಗೆ ನನಗೆ ತಿಳಿದಿದೆ ಎಂದು ಸಂತ್ರಸ್ತೆಯನ್ನು ಬ್ಲ್ಯಾಕ್‍ಮೇಲ್ ಮಾಡಿದ್ದಾನೆ. ಅಷ್ಟೇ ಅಲ್ಲದೆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆಯೊಡ್ಡಿ ವೈದ್ಯನೂ ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಕೆಲವು ದಿನಗಳ ನಂತರ ವೈದ್ಯನ ಸಹೋದರ ನಡೆದಿರುವ ಘಟನೆಯ ಬಗ್ಗೆ ತಿಳಿದುಕೊಂಡು ಆತನೂ ನರ್ಸ್ ಮೇಲೆ ಅತ್ಯಾಚಾರ ಎಸಗಿದ್ದಾನೆ.

    ಮೂವರೂ ಆರೋಪಿಗಳು ವಿಡಿಯೋ ಮೂಲಕ ಬ್ಲ್ಯಾಕ್‍ಮೇಲ್ ಮಾಡುತ್ತಾ ನರ್ಸ್ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ್ದಾರೆ. ಅತ್ಯಾಚಾರದ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರೆ ಕೆಲಸದಿಂದ ತೆಗೆಯುವುದಾಗಿ ಬೆದರಿಕೆ ಹಾಕಿದ್ದರು. ಕೊನೆಗೆ ಸಂತ್ರಸ್ತೆ ನಡೆದ ಘಟನೆಯನ್ನು ಕುಟುಂಬದವರಿಗೆ ತಿಳಿಸಿದ್ದಾರೆ. ನಂತರ ಸಂತ್ರಸ್ತೆ  ಪೊಲೀಸ್ ಠಾಣೆಗೆ ತೆರಳಿ ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

  • ಬೀದರ್ ಶಾಕಿಂಗ್: 10ನೇ ಕ್ಲಾಸ್ ಓದಿರೋ ವೈದ್ಯರ ಸಹಾಯಕನಿಂದ ರೋಗಿಗಳಿಗೆ ಇಂಜೆಕ್ಷನ್!

    ಬೀದರ್ ಶಾಕಿಂಗ್: 10ನೇ ಕ್ಲಾಸ್ ಓದಿರೋ ವೈದ್ಯರ ಸಹಾಯಕನಿಂದ ರೋಗಿಗಳಿಗೆ ಇಂಜೆಕ್ಷನ್!

    ಬೀದರ್: 10ನೇ ಕ್ಲಾಸ್ ಪಾಸಾಗಿರೋ ವೈದ್ಯರ ಸಹಾಯಕ ರೋಗಿಗಳಿಗೆ ಇಂಜೆಕ್ಷನ್ ಹಾಗೂ ಔಷಧಿ ನೀಡಿ ಆಸ್ಪತ್ರೆಗೆ ಬರುವ ರೋಗಿಗಳನ್ನು ಸಾವಿನ ಮನೆಗೆ ಕಳಿಸುತ್ತಿರುವ ಭಯಾನಕ ಪ್ರಕರಣವೊಂದು ಬೀದರ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

    ಔರಾದ್ ತಾಲೂಕಿನ ತೋರಣ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ 10 ಹಾಸಿಗೆಗಳ ಹೆರಿಗೆ ಆಸ್ಪತ್ರೆಯಲ್ಲಿರುವ ವೈದ್ಯರ ಸಹಾಯಕ ಶ್ರೀಕಾಂತ್ ಕೆಲಸ ಈಗ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಈ ಆಸ್ಪತ್ರೆಗೆ ವೈದ್ಯರು ವಾರಕ್ಕೆ ಒಂದು ಅಥವಾ ಎರಡು ದಿನ ಬಂದು ಇನ್ನುಳಿದ ದಿನ ಗೈರಾಗುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಶ್ರೀಕಾಂತ್ ವೈದ್ಯರ ಕೆಲಸವನ್ನು ಕ್ಷಣದಲ್ಲೇ ಮಾಡಿ ಮುಗಿಸುತ್ತಾನೆ.

    10ನೇ ಕ್ಲಾಸ್ ಓದಿರುವ ಶ್ರೀಕಾಂತ್‍ಗೆ ಎಂಬಿಬಿಎಸ್ ನೀರು ಕುಡಿದಷ್ಟೆ ಸಲಿಸಾಗಿದೆ ಎಂದರೆ ನೀವು ನಂಬಲೇಬೇಕು. ಎರಡು ವರ್ಷಗಳಿಂದ ಈ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯಕ ಶ್ರೀಕಾಂತ್ ವೈದ್ಯರ ಸಹಾಯವಿಲ್ಲದೆ ರೋಗಿಗಳಿಗೆ ಇಂಜೆಕ್ಷನ್ ನೀಡುತ್ತಾನೆ.

    ವೈದ್ಯರ ಸಹಾಯಕ ಇಂಜೆಕ್ಷನ್ ಹಾಗೂ ಔಷಧಿ ಕೊಡುತ್ತಿರುವುದರಿಂದ ಭಯಭೀತರಾಗಿರುವ ರೋಗಿಗಳು, ಗರ್ಭಿಣಿಯರು ಆಸ್ಪತ್ರೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಈ ಬಗ್ಗೆ ಒಂದು ತಿಂಗಳಿನಿಂದ ಫಾಲೋಅಪ್ ಮಾಡಿ ಆಸ್ಪತ್ರೆಗೆ ಭೇಟಿ ನೀಡಿದ ಟಿವಿ ಕ್ಯಾಮೆರಾಗೆ ರೆಡ್ ಹ್ಯಾಂಡಾಗಿ ಈ ಸಹಾಯಕನ ಬಣ್ಣ ಬಯಲು ಮಾಡಿದೆ.

    ಕ್ಯಾಮೆರಾ ನೋಡುತ್ತಿದಂತೆ ಕಕ್ಕಾಬಿಕ್ಕಿಯಾದ ಸಹಾಯಕರು ಹೌದು ಸಾರ್ ನಾನು ವೈದ್ಯರು ಹೇಳಿದರೆ ಮಾತ್ರ ರೋಗಿಗಳಿಗೆ ಚಿಕಿತ್ಸೆ ನೀಡತ್ತೇವೆ ಎಂದು ಒಪ್ಪಿಕೊಂಡಿದ್ದಾನೆ.