Tag: Complimentary Health Center

  • ಮೂರು ಕಾಲು-ನಾಲ್ಕು ಪಾದಗಳುಳ್ಳ ಮಗುವಿಗೆ ಜನ್ಮ ನೀಡಿದ ತಾಯಿ!

    ಮೂರು ಕಾಲು-ನಾಲ್ಕು ಪಾದಗಳುಳ್ಳ ಮಗುವಿಗೆ ಜನ್ಮ ನೀಡಿದ ತಾಯಿ!

    ಬಳ್ಳಾರಿ: ಜಿಲ್ಲೆಯ ಕಂಪ್ಲಿಯಲ್ಲಿ ತಾಯಿಯೊಬ್ಬರು ನಾಲ್ಕು ಪಾದಗಳುಳ್ಳ ಮಗುವಿಗೆ ಜನ್ಮ ನೀಡಿದ್ದಾರೆ.

    ಜಿಲ್ಲೆಯ ಸುಷ್ಮಾ ಹಾಗೂ ಯಂಕನಗೌಡ ದಂಪತಿಗೆ ಜನಿಸಿದ ಈ ಗಂಡು ಮಗುವಿಗೆ ಮೂರು ಕಾಲು ಹಾಗೂ ನಾಲ್ಕು ಪಾದಗಳಿದ್ದವು. ಕಂಪ್ಲಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಾಯಿ ಸುಷ್ಮಾ ಮಗುವಿಗೆ ಜನ್ಮ ನೀಡಿದ್ದಾರೆ.

    ಮಗು ಹುಟ್ಟಿದ ತಕ್ಷಣ ಅದಕ್ಕೆ ಮೂರು ಕಾಲು ಹಾಗೂ ನಾಲ್ಕು ಪಾಗಳನ್ನು ಹೊಂದಿತ್ತು. ಈಗ ತಾಯಿ ಹಾಗೂ ಮಗು ಸುರಕ್ಷಿತವಾಗಿದ್ದಾರೆ. ಮಗುವನ್ನು ತೀವ್ರ ಕಾಳಜಿಯಿಂದ ನೋಡಿಕೊಳ್ಳಲಾಗುತ್ತಿದೆ. ಒಂದೆರೆಡು ವರ್ಷ ಕಳೆದ ನಂತರ ಮಗುವಿನ ಚೆನ್ನಾಗಿ ಬೆಳವಣಿಗೆ ಆದ ಮೇಲೆ ಅದನ್ನು ಶಸ್ತ್ರಚಿಕಿತ್ಸೆ ಮೂಲಕ ಸರಿಪಡಿಸಬಹುದು ಎಂದು ಆಸ್ಪತ್ರೆಯ ವೈದ್ಯಾಧಿಕಾರಿ ಚಂದ್ರಮೋಹನ್ ತಿಳಿಸಿದ್ದಾರೆ.