Tag: complaint

  • ‘ಕಾಳಿ’ಗೆ ಅವಮಾನ ಮಾಡಿದ್ದ ನಿರ್ದೇಶಕಿ ಲೀನಾ ಮಣಿಮೇಕಲೈಗೆ ದೆಹಲಿ ಕೋರ್ಟ್ ಸಮನ್ಸ್

    ‘ಕಾಳಿ’ಗೆ ಅವಮಾನ ಮಾಡಿದ್ದ ನಿರ್ದೇಶಕಿ ಲೀನಾ ಮಣಿಮೇಕಲೈಗೆ ದೆಹಲಿ ಕೋರ್ಟ್ ಸಮನ್ಸ್

    ಜುಲೈ 4 ರಂದು ತಮ್ಮ ಡಾಕ್ಯುಮೆಂಟರಿ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಿ ಭಾರೀ ವಿವಾದಕ್ಕೆ ಕಾರಣವಾಗಿದ್ದರು ತಮಿಳಿನ ನಿರ್ದೇಶಕಿ ಲೀನಾ ಮಣಿಮೇಕಲೈ. ತಮ್ಮ ನಿರ್ದೇಶನದಲ್ಲಿ ಮೂಡಿ ಬಂದ ಕಾಳಿ ಸಾಕ್ಷ್ಯಚಿತ್ರದ ಪೋಸ್ಟರ್ ನಲ್ಲಿ ಅವರು ಕಾಳಿಯ ಒಂದು ಕೈಲಿ ಸಿಗರೇಟು ಮತ್ತೊಂದು ಕೈಯಲ್ಲಿ ಲೈಂಗಿಕ ಅಲ್ಪ ಸಂಖ್ಯಾತರ ಧ್ವಜ ಹಿಡಿಸಿ ಹಿಂದೂ ಭಾವನೆಗಳಿಗೆ ಧಕ್ಕೆ ಮಾಡಿದ್ದರು. ಈ ಕಾರಣಕ್ಕಾ ಅವರ ಮೇಲೆ ಸಾಕಷ್ಟು ದೂರುಗಳನ್ನು ಸಲ್ಲಿಸಲಾಗಿತ್ತು.

    ತಮ್ಮ ಡಾಕ್ಯುಮೆಂಟರಿಯ ಪೋಸ್ಟರ್ ನಲ್ಲಿ ಲೀನಾ ಕಾಳಿಯನ್ನು ಅವಮಾನಿಸಲಾಗಿದೆ ಎನ್ನುವ ಕಾರಣಕ್ಕಾಗಿ ಸಾಕಷ್ಟು ದೂರುಗಳು ಸಲ್ಲಿಕೆಯಾಗಿದ್ದವು. ಈ ದೂರುಗಳನ್ನು ಆಧರಿಸಿ ದೆಹಲಿಯ ತೀಸ್ ಹಜಾರಿ ಕೋರ್ಟ್ ನಿಂದ ಸಮನ್ಸ್ ಜಾರಿ ಮಾಡಲಾಗಿದೆ. ನವೆಂಬರ್ 1 ರಂದು ಲೀನಾ ಮಣಿಮೇಕಲೈ  ವಿಚಾರಣೆ ಎದುರಿಸಬೇಕಿದೆ. ಇದನ್ನೂ ಓದಿ:ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ‘ಗಂಡುಮಗ’ ಎಂದು ಹಾಡಿ ಹೊಗಳಿದ ಜಗ್ಗೇಶ್

    ಸಾಕ್ಷ್ಯ ಚಿತ್ರದ ಪೋಸ್ಟರ್ ನಲ್ಲಿ ಕಾಳಿ ದೇವತೆಯನ್ನು ಆಕ್ಷೇಪಾರ್ಹ ರೀತಿಯಲ್ಲಿ ಚಿತ್ರಿಸಲಾಗಿತ್ತು. ಹಿಂದೂ ಭಾವನೆಗಳಿಗೆ ಧಕ್ಕೆ ಮಾಡಿದ್ದಾರೆ ಎನ್ನುವ ಕಾರಣಕ್ಕಾಗಿ ದೇಶಾದ್ಯಂತ ಹಲವು ಕಡೆ ಲೀನಾ ಮಣಿಮೇಕಲೈ ಅವರ ವಿರುದ್ಧ ದೂರುಗಳನ್ನು ಸಲ್ಲಿಸಲಾಗಿತ್ತು. ಪ್ರಕರಣ ಗಂಭೀರ ಸ್ವರೂಪವನ್ನೂ ಪಡೆದುಕೊಂಡಿತ್ತು. ಹೀಗಾಗಿ ಲೀನಾ ವಿರುದ್ಧ ಕ್ರಮಕ್ಕೆ ಸಾಕಷ್ಟು ಜನರು ಆಗ್ರಹ ಮಾಡಿದ್ದರು. ಅವರು ಈ ದೇಶದಲ್ಲಿ ಇರದೇ ಇರುವ ಕಾರಣಕ್ಕಾಗಿ ಕ್ರಮ ತಗೆದುಕೊಳ್ಳಲು ಪೊಲೀಸರಿಂದ ಸಾಧ್ಯವಾಗಿರಲಿಲ್ಲ. ಇದೀಗ ಕೋರ್ಟ್ ಸಮನ್ಸ್ ಜಾರಿ ಮಾಡಿ ಕೋರ್ಟಿಗೆ ಹಾಜರಾಗುವಂತೆ ಹೇಳಿದೆ.

    Live Tv
    [brid partner=56869869 player=32851 video=960834 autoplay=true]

  • ಕನ್ನಡದ ‘ಹೆಬ್ಬುಲಿ’ ಸಿನಿಮಾದ ನಟಿಯ ಖಾಸಗಿ ವಿಡಿಯೋ ಲೀಕ್ ಬೆದರಿಕೆ, ಬಾಯ್ ಫ್ರೆಂಡ್ ವಿರುದ್ಧವೇ ದೂರು

    ಕನ್ನಡದ ‘ಹೆಬ್ಬುಲಿ’ ಸಿನಿಮಾದ ನಟಿಯ ಖಾಸಗಿ ವಿಡಿಯೋ ಲೀಕ್ ಬೆದರಿಕೆ, ಬಾಯ್ ಫ್ರೆಂಡ್ ವಿರುದ್ಧವೇ ದೂರು

    ಸುದೀಪ್ ನಟನೆಯ ಹೆಬ್ಬುಲಿ ಸಿನಿಮಾದ ನಾಯಕಿ ಅಮಲಾ ಪೌಲ್ ಅವರ ಖಾಸಗಿ ವಿಡಿಯೋವನ್ನು ಲೀಕ್ ಮಾಡುವುದಾಗಿ ಆಕೆಯ ಮಾಜಿ ಬಾಯ್ ಫ್ರೆಂಡ್ ಭವಿಂದರ್ ಸಿಂಗ್ ಬೆದರಿಕೆ ಹಾಕಿದ್ದಾರೆ ಎನ್ನುವ ಕಾರಣಕ್ಕಾಗಿ ಅಮಲಾ ದೂರು ನೀಡಿದ್ದರು. ಅಲ್ಲದೇ, ತನ್ನ ಮಾಜಿ ಬಾಯ್ ಫ್ರೆಂಡ್ ನಿಂದ ತಮಗೆ ಲೈಂಗಿಕ ಕಿರುಕುಳ ಆಗುತ್ತಿದೆ ಎಂದು ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದರು. ಈ ದೂರನ್ನು ಆಧರಿಸಿದ ಮಾಜಿ ಬಾಯ್ ಫ್ರೆಂಡ್ ಭವಿಂದರ್ ಸಿಂಗ್ ನನ್ನು ಪೊಲೀಸರು ಬಂಧಿಸಿದ್ದಾರೆ.

    ಅಮಲಾ ಪೌಲ್ ತಮಿಳಿನ ಖ್ಯಾತ ನಿರ್ದೇಶಕ ಎ.ಎಲ್.ವಿಜಯ್ ಅವರನ್ನು ಮದುವೆಯಾಗಿದ್ದಾರು. ಹೊಂದಾಣಿಕೆ ಕಾರಣದಿಂದಾಗಿ ಅವರಿಂದ ಡಿವೋರ್ಸ್ ಪಡೆದಿದ್ದರು. ಆನಂತರ ಭವಿಂದರ್ ಸಿಂಗ್ ಸಾಂಗತ್ಯ ಬಯಸಿದ್ದರು. ಇಬ್ಬರೂ ಒಟ್ಟಿಗೆ ಸಿನಿಮಾದಲ್ಲಿ ಬಂಡವಾಳ ಕೂಡ ಹೂಡಿದ್ದರು. ಆನಂತರ ವ್ಯವಹಾರದಲ್ಲಿ ವೈಮನಸ್ಸು ಉಂಟಾಗಿ ಒಬ್ಬರಿಗೊಬ್ಬರು ದೂರವಾಗಿದ್ದರು. ಆ ವೇಳೆಯಲ್ಲಿಯ ವಿಡಿಯೋ ಅದು ಎನ್ನಲಾಗುತ್ತಿದ್ದು, ವಿಡಿಯೋಗಾಗಿ ಪೊಲೀಸರು ತಲಾಷೆ ನಡೆಸಿದ್ದಾರೆ. ಇದನ್ನೂ ಓದಿ:ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ‘ಗಂಡುಮಗ’ ಎಂದು ಹಾಡಿ ಹೊಗಳಿದ ಜಗ್ಗೇಶ್

    ವಿಡಿಯೋ ಇದೆ ಎಂದು ಹಣದ ಬೇಡಿಕೆ ಇಟ್ಟಿದ್ದಾನೆ ಎಂದು ಅಮಲಾ ದೂರಿನಲ್ಲಿ ಬರೆದಿದ್ದು, ತಾನು ಹೇಳಿದಂತೆ ಕೇಳಬೇಕು ಎಂದು ಹಿಂಸೆ ನೀಡುತ್ತಿರುವುದಾಗಿ ತಮಿಳುನಾಡಿನ ವಿಲ್ಲುಪುರಂ ಪೊಲೀಸರಿಗೆ ನೀಡಿದ ದೂರಿನಲ್ಲಿ ಅಮಲಾ ದಾಖಲಿಸಿದ್ದಾರೆ. ಅಲ್ಲದೇ, ಬಾಯ್ ಫ್ರೆಂಡ್ ನ ಹನ್ನೆರಡು ಜನ ಗೆಳೆಯರ ಮೇಲೂ ಅವರು ದೂರಿದ್ದಾರೆ. ಅವರಿಂದಲೂ ತಮಗೆ ಲೈಂಗಿಕ ಕಿರುಕುಳ ಆಗುತ್ತಿದೆ ಎಂದಿದ್ದಾರೆ.

    ಮತ್ತೊಂದು ಮೂಲಗಳ ಪ್ರಕಾರ ಅಮಲಾ ಪೌಲ್ ಮತ್ತು ಭವಿಂದರ್ ಸಿಂಗ್ ಕೇವಲ ಡೇಟಿಂಗ್ ಮಾಡುತ್ತಿರಲಿಲ್ಲ. ಎರಡು ವರ್ಷಗಳ ಹಿಂದೆಯೇ ಅವರು ಮದುವೆಯಾಗಿದ್ದಾರೆ ಎನ್ನುವ ಸುದ್ದಿಯೂ ಇತ್ತು. ಮದುವೆಯ ಫೋಟೋಗಳು ಕೂಡ ಲೀಕ್ ಆಗಿದ್ದವು. ತಾವು ಎರಡನೇ ಮದುವೆ ಆಗಿಲ್ಲ ಎಂದು ಅಮಲಾ ಹೇಳಿಕೊಂಡಿದ್ದರೂ, ಫೋಟೋಗಳು ಮಾತ್ರ ಅನುಮಾನ ಮೂಡಿಸಿದ್ದವು.

    Live Tv
    [brid partner=56869869 player=32851 video=960834 autoplay=true]

  • ಮಕ್ಕಳ ಬುದ್ಧಿ ಕೆಡಿಸಿ ದೂರು: ಮುರುಘಾ ಮಠದ ವಕೀಲ ವಿಶ್ವನಾಥಯ್ಯ

    ಮಕ್ಕಳ ಬುದ್ಧಿ ಕೆಡಿಸಿ ದೂರು: ಮುರುಘಾ ಮಠದ ವಕೀಲ ವಿಶ್ವನಾಥಯ್ಯ

    ಚಿತ್ರದುರ್ಗ: ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪದ ಬಗ್ಗೆ ಮುರುಘಾ ಶ್ರೀಗಳು ಪ್ರತಿಕ್ರಿಯಿಸುವ ಸ್ಥಿತಿಯಲ್ಲಿ ಇಲ್ಲ. ಮಠದ ವಿರೋಧಿಗಳು ಶ್ರೀಗಳ ವಿರುದ್ಧ ಮಕ್ಕಳ ಬುದ್ಧಿ ಕೆಡಿಸಿ ದೂರು ಕೊಡಿಸಿದ್ದಾರೆ ಎಂದು ಮಠದ ಪರ ವಕೀಲ ವಿಶ್ವನಾಥಯ್ಯ ತಿಳಿಸಿದರು.

    ಪಬ್ಲಿಕ್ ಟಿವಿಯ ಜೊತೆ ಮಾತನಾಡಿದ ಅವರು, ಮಧ್ಯ ಕರ್ನಾಟಕದ ಪ್ರತಿಷ್ಠಿತ ಮಠ ಎನಿಸಿರುವ ಚಿತ್ರದುರ್ಗದ ಮುರುಘಾ ಶರಣರಿಂದ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದೆ. ಈ ಬಗ್ಗೆ ಮಕ್ಕಳು ಮೈಸೂರಿನಲ್ಲಿ ದೂರು ನೀಡಿರುವುದು ಮಾಧ್ಯಮ ಮೂಲಕ ತಿಳಿದಿದೆ. ಈ ವಿಚಾರದಲ್ಲಿ ಶರಣರಿಗೆ ನೋವಾಗಿದೆ. ಆದ್ದರಿಂದ ಸದ್ಯದ ಪರಿಸ್ಥಿತಿಯಲ್ಲಿ ಈ ಕುರಿತು ಮಾತನಾಡುವ ಸ್ಥಿತಿಯಲ್ಲಿಲ್ಲ ಎಂದರು.

    ಮಠದ ವಿರೋಧಿ ಶಕ್ತಿಗಳು, ಅತಿಯಾದ ಆಸೆಯಿಂದ ಮಕ್ಕಳನ್ನು ಬಳಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಶ್ರೀಗಳ ವಿರುದ್ಧ ಮಕ್ಕಳ ಬುದ್ಧಿ ಕೆಡಿಸಿ ದೂರು ಕೊಡಿಸಿದ್ದಾರೆ. ಅವರು ಮಠದಿಂದ ಹೊರೆಗೆ ಹೋಗಿ, ದೂರು ಸಲ್ಲಿಸಿದ್ದಾರೆ. ಈ ದೂರಿನ ವಿಚಾರ ಪೂರ್ಣವಾಗಿ ಗೊತ್ತಿಲ್ಲ. ಆದರೆ ಅವರ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ – ಮುರುಘಾ ಶರಣರ ವಿರುದ್ಧ ಕೇಸ್‌

    ಏನಿದು ಪ್ರಕರಣ?:
    ಮಠದ ಅಧೀನದಲ್ಲಿರೋ ಶಾಲಾ ಮಕ್ಕಳ ದುರ್ಬಳಕೆ ಮಾಡಿ ಶ್ರೀಗಳು ಇಬ್ಬರು ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಜ.1, 2019ರಿಂದ ಜೂ.6, 2022ವರೆಗೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ. ಇಬ್ಬರು ವಿದ್ಯಾರ್ಥಿನಿಯರ ಪೈಕಿ ಒಬ್ಬರನ್ನು ಶರಣರು ಮೂರೂವರೆ ವರ್ಷಗಳಿಂದ, ಮತ್ತೊಬ್ಬರನ್ನು ಒಂದೂವರೆ ವರ್ಷದಿಂದ ಲೈಂಗಿಕವಾಗಿ ದೌರ್ಜನ್ಯ ನಡೆಸಿದ್ದಾರೆ. ಈ ಕೃತ್ಯ ಉಳಿದ ಆರೋಪಿಗಳು ಸಾಥ್ ನೀಡಿದ್ದಾರೆ ಎಂದು ವಿದ್ಯಾರ್ಥಿಗಳು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಆಪ್ತಸಮಾಲೋಚನೆ ಸಮಯದಲ್ಲಿ ಹೇಳಿಕೆ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

    ದೂರು ನೀಡಿದವರು ಯಾರು?:
    ಉಚಿತ ಹಾಸ್ಟೆಲ್‍ನಲ್ಲಿದ್ದ ಇಬ್ಬರು ಪ್ರೌಢಶಾಲೆ ವಿದ್ಯಾರ್ಥಿನಿಯರು ಮೈಸೂರು ನಗರದಲ್ಲಿರುವ ಮಹಿಳಾ ಸಾಂತ್ವನ ಮತ್ತು ಮಕ್ಕಳ ವಸತಿ ಕೇಂದ್ರವಾದ ಒಡನಾಡಿ ಸಂಸ್ಥೆಗೆ ದೂರು ನೀಡಿದ್ದಾರೆ. ಈ ಸಂಬಂಧ ಮೈಸೂರಿನ ನಜರಾಬಾದ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಇದನ್ನೂ ಓದಿ: ಜಿಲ್ಲಾಧಿಕಾರಿ ಜೊತೆ ವಿದ್ಯಾರ್ಥಿನಿ ರೌಂಡ್ಸ್- ಡಿಸಿ ಆಡಳಿತ ವೈಖರಿ ಪರಿವೀಕ್ಷಣೆ

    Live Tv
    [brid partner=56869869 player=32851 video=960834 autoplay=true]

  • ದೇವಾಲಯದಲ್ಲಿ ಪ್ರಸಾದ ನಿರಾಕರಿಸಿದ ಸಚಿವರ ವಿರುದ್ಧ ದೂರು ದಾಖಲು

    ದೇವಾಲಯದಲ್ಲಿ ಪ್ರಸಾದ ನಿರಾಕರಿಸಿದ ಸಚಿವರ ವಿರುದ್ಧ ದೂರು ದಾಖಲು

    ಪಾಟ್ನಾ: ಬಿಹಾರದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಮೊಹಮ್ಮದ್ ಇಸ್ರೈಲ್ ಮನ್ಸೂರಿ ಅವರು ಗಯಾದ ವಿಷ್ಣುಪಾದ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನಡೆದ ವಿವಾದಕ್ಕೆ ಸಂಬಂಧಿಸಿ ಅವರ ವಿರುದ್ಧ ದೂರು ದಾಖಲಾಗಿದೆ.

    ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಮುಜಾಫರ್‌ಪುರದ ನ್ಯಾಯಾಲಯದಲ್ಲಿ ಸಾಮಾಜಿಕ ಕಾರ್ಯಕರ್ತ ಚಂದ್ರ ಕಿಶೋರ್ ಪರಾಶರ ಅವರು ಮನ್ಸೂರಿ ವಿರುದ್ಧ ಎಫ್‍ಐಆರ್ ದಾಖಲಿಸಬೇಕೆಂದು ದೂರು ಸಲ್ಲಿಸಿದ್ದಾರೆ.

    ಸನಾತನ ಧರ್ಮವನ್ನು ಅನುಸರಿಸುವವರಿಗೆ ಮಾತ್ರ ದೇವಸ್ಥಾನಕ್ಕೆ ಭೇಟಿ ನೀಡಲು ಅವಕಾಶವಿರುವುದರಿಂದ ಸಚಿವರು ಮುಸ್ಲಿಂ ಆಗಿರುವುದರಿಂದ ವಿಷ್ಣುಪಾದ ದೇವಸ್ಥಾನಕ್ಕೆ ಭೇಟಿ ನೀಡಬಾರದು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ದೇಗುಲದಲ್ಲಿ ಪ್ರಸಾದ ನಿರಾಕರಿಸಿದ ಸಚಿವ – ಹಿಂದೂ ಭಾವನೆಗೆ ಧಕ್ಕೆ ಎಂದು ಅರ್ಚಕ ಅಸಮಾಧಾನ

    ಈ ಬಗ್ಗೆ ಪರಾಶರ ವಕೀಲ ರವೀಂದ್ರ ಕುಮಾರ್ ಸಿಂಗ್ ಮಾತನಾಡಿ, ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಸಚಿವರ ವಿರುದ್ಧ ಎಫ್‍ಐಆರ್ ದಾಖಲಿಸಬೇಕೆಂದು ನನ್ನ ಕಕ್ಷಿದಾರರು ಕೋರಿದ್ದಾರೆ. ನ್ಯಾಯಾಲಯವು ಸೆಪ್ಟೆಂಬರ್ 2 ರಂದು ವಿಚಾರಣೆ ನಡೆಸಲಿದೆ ಎಂದು ಹೇಳಿದರು. ಇದನ್ನೂ ಓದಿ: 5 ಫೋನ್‌ಗಳಲ್ಲಿ ಮಾಲ್‍ವೇರ್‌ಗಳು ಕಂಡು ಬಂದಿದೆ, ನಿರ್ದಿಷ್ಟವಾಗಿ ಪೆಗಾಸಸ್ ಎನ್ನಲು ಸಾಧ್ಯವಿಲ್ಲ – ಸುಪ್ರೀಂ ಕೋರ್ಟ್‍ಗೆ ತಜ್ಞರ ವರದಿ

    ಬಿಹಾರದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಇಸ್ರೇಲ್ ಮನ್ಸೂರ್ ಅವರು ಇಂದು ಗಯಾದ ವಿಷ್ಣುಪಾದ್ ದೇವಾಲಯಕ್ಕೆ ಭೇಟಿ ನೀಡಿದ್ದರು. ಆದರೆ ಈ ವೇಳೆ ಅವರು ಪ್ರಾರ್ಥನೆ ಸಲ್ಲಿಸಲಿಲ್ಲ ಹಾಗೂ ಪ್ರಸಾದವನ್ನು ಸ್ವೀಕರಿಸಲಿಲ್ಲ ಎಂದು ದೇವಾಲಯದ ಅರ್ಚಕ ತಿಳಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ನಟ ರೋಹಿತ್ ವಿರುದ್ಧ ಕೊಲೆ ಬೆದರಿಕೆ ಸೇರಿದಂತೆ ಹಲವು ಆರೋಪ

    ನಟ ರೋಹಿತ್ ವಿರುದ್ಧ ಕೊಲೆ ಬೆದರಿಕೆ ಸೇರಿದಂತೆ ಹಲವು ಆರೋಪ

    ಹಿಂದಿಯ ಯೇ ರಿಶ್ತಾ ಕ್ಯಾ ಕೆಹಲಾತಾ ಹೈ ಧಾರಾವಾಹಿಯ ಖ್ಯಾತ ನಟ ರೋಹಿತ್ ಸೇಠಿಯಾ ಮೇಲೆ ಕೊಲೆ ಬೆದರಿಕೆಗೆ ಸೇರಿದಂತೆ ಹಲವು ಆರೋಪಗಳು ಕೇಳಿ ಬಂದಿದೆ. ಹಿಂದಿ ಧಾರಾವಾಹಿ ಲೋಕದ ಜನಪ್ರಿಯ ನಟರಾಗಿರುವ ರೋಹಿತ್, ಅದೇ ಧಾರಾವಾಹಿಯಲ್ಲಿ ನಟಿಸುತ್ತಿರುವ ನಿಶಾ ರಾವಲ್ ಒಟ್ಟಿಗೆ ಅಕ್ರಮ ಸಂಬಂಧದಲ್ಲಿ ಇದ್ದಾರೆ ಎಂದು ಸ್ವತಃ ನಿಶಾ ಪತಿಯೇ ಆರೋಪ ಮಾಡಿದ್ದಾರೆ. ಅಲ್ಲದೇ ರೋಹಿತ್ ವಿರುದ್ಧ ದೂರು ದಾಖಲಿಸಿದ್ದಾರೆ.

    ತನ್ನ ಪತ್ನಿಯೊಂದಿಗೆ ರೋಹಿತ್ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾನೆ ಎಂದು ಸುದ್ದಿಗೋಷ್ಠಿ ನಡೆಸಿ, ಪತ್ನಿ ಮತ್ತು ರೋಹಿತ್ ವಿರುದ್ಧ ಆರೋಪಗಳ ಮಳೆಯನ್ನೇ ಸುರಿಸಿದ್ದಾರೆ. ಅಲ್ಲದೇ, ತನ್ನ ಸ್ವಂತ ಮನೆಯಲ್ಲೇ ತನ್ನೊಂದಿಗೆ ನಟಿಸುತ್ತಿರುವ ರೋಹಿತ್ ಜೊತೆ ಇರುತ್ತಾಳೆ. ನನ್ನನ್ನೇ ಮನೆ ಒಳಗೆ ಬಿಟ್ಟುಕೊಳ್ಳುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ:ಲಂಡನ್ ಸ್ಟುಡಿಯೋದಲ್ಲಿ ಕನ್ನಡ ಚಿತ್ರಕ್ಕೆ ಹಿನ್ನೆಲೆ ಸಂಗೀತ

    ನನ್ನನ್ನು ನಿಶಾ ಮದುವೆ ಆಗಿದ್ದರೂ, ತಾನು ಸಿಂಗಲ್ ಮದರ್ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ಕಳೆದ ಐದಾರು ತಿಂಗಳಿಂದ ನನ್ನನ್ನು ಮನೆಗೆ ಸೇರಿಸಿಕೊಳ್ಳುತ್ತಿಲ್ಲ. ನನ್ನ ಮೇಲೆ ಹಲ್ಲೆ ಕೂಡ ಮಾಡಿದ್ದಾರೆ. ನಿಶಾ ಮತ್ತು ರೋಹಿತ್ ನನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಗುಂಡಿಟ್ಟು ಕೊಲ್ಲುವುದಾಗಿ ಪದೇ ಪದೇ ಹೇಳುತ್ತಾರೆ. ಹಾಗಾಗಿ ಸಾಕ್ಷಿ ಸಮೇತ ನಾನು ನ್ಯಾಯಾಲಯಕ್ಕೆ ಹೋಗುವೆ ಎಂದಿದ್ದಾರೆ ನಿಶಾ ಪತಿ.

    Live Tv
    [brid partner=56869869 player=32851 video=960834 autoplay=true]

  • ಕರ್ನಾಟಕದ ಅಳಿಯ, ನಟ ರಣವೀರ್ ಸಿಂಗ್ ಬೆತ್ತಲೆ ಪ್ರಕರಣ : ಮುಂಬೈನಲ್ಲಿ ದೂರು ದಾಖಲು

    ಕರ್ನಾಟಕದ ಅಳಿಯ, ನಟ ರಣವೀರ್ ಸಿಂಗ್ ಬೆತ್ತಲೆ ಪ್ರಕರಣ : ಮುಂಬೈನಲ್ಲಿ ದೂರು ದಾಖಲು

    ಬಾಲಿವುಡ್ ಖ್ಯಾತ ನಟ, ಕರ್ನಾಟಕದ ಅಳಿಯ ರಣವೀರ್ ಸಿಂಗ್ ಬೆತ್ತಲೆಯಾಗಿ ಫೋಟೋ ಶೂಟ್ ಮಾಡಿಸಿಕೊಂಡು ಅಚ್ಚರಿಗೆ ಕಾರಣವಾಗಿದ್ದರು. ಸದಾ ಮೈ ತುಂಬಾ ಬಟ್ಟೆ ಹಾಕಿಕೊಂಡು ಓಡಾಡುತ್ತಿದ್ದ ರಣವೀರ್, ಇದ್ದಕ್ಕಿದ್ದಂತೆಯೇ ಪೂರ್ಣ ಬೆತ್ತಲೆಯಾಗಿ ಕಾಣಿಸಿಕೊಂಡು ಕುತೂಹಲಕ್ಕೂ ಕಾರಣವಾಗಿದ್ದರು. ಈ ಕಾರಣಕ್ಕಾಗಿ ಇದೀಗ ಅವರ ಮೇಲೆ ದೂರು ದಾಖಲಾಗಿದೆ. ಬೆತ್ತಲೆಯಾಗಿ ಫೋಟೋ ಶೂಟ್ ಮಾಡಿಸಿಕೊಂಡು, ಸಮಾಜ ಸ್ವಾಸ್ತ್ಯವನ್ನು ಹಾಳು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

    ಮುಂಬೈನ ಶ್ಯಾಮ್ ಮಂಗರಮ್ ಫೌಂಡೇಶನ್ ಮುಂಬೈನಲ್ಲಿ ದೂರು ದಾಖಲಿಸಲಾಗಿದ್ದು, ವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ನಟರು ಸಮಾಜದ ಸ್ವಾಸ್ತ್ಯವನ್ನು ಹಾಳು ಮಾಡುತ್ತಿದ್ದಾರೆ. ಹಾಗಾಗಿ ಅವರ ವಿರುದ್ಧ ಕ್ರಮ ತಗೆದುಕೊಳ್ಳುವಂತೆ ಫೌಂಡೇಶನ್ ಆಗ್ರಹಿಸಿದೆ. ಕ್ರಮ ತಗೆದುಕೊಳ್ಳುವ ಮೂಲಕ ನಟರಿಗೆ ಸ್ಪಷ್ಟ ಸಂದೇಶವನ್ನು ನೀಡಬೇಕು ಎಂದು ಪೊಲೀಸ್ ಇಲಾಖೆಗೆ ಅದು ಮನವಿ ಮಾಡಿದೆ. ಅಲ್ಲದೇ, ರಣವೀರ್ ಅಭಿಮಾನಿಗಳಿಗೆ ಕ್ಷಮೆ ಕೇಳಬೇಕೆಂದು ಹೇಳಿದೆ. ಇದನ್ನೂ ಓದಿ:ಬನ್ಸಾಲಿ ನಿರ್ದೇಶನದಲ್ಲಿ ಬಹುಭಾಷಾ ನಟಿ ಅದಿತಿ ರಾವ್

    ರಣವೀರ್ ಪೂರ್ಣ ಬೆತ್ತಲೆಯಾಗಿ ಕಾಣಿಸಿಕೊಂಡ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಅಭಿಮಾನಿಗಳು ಕೂಡ ರಣವೀರ್ ಸಿಂಗ್ ಈ ರೀತಿಯಲ್ಲಿ ಕಾಣಿಸಿಕೊಳ್ಳಬಾರದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಸ್ವತಃ ಪತ್ನಿ ದೀಪಿಕಾ ಪಡುಕೋಣೆ ಕೂಡ ಅಸಮಾಧಾನ ಹೊರಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ರಾಜಕುಮಾರ್ ಟಾಕಳೆ ವಿರುದ್ಧ 12 ಪುಟಗಳ ದೂರು ದಾಖಲಿಸಿದ ನವ್ಯಶ್ರೀ

    ರಾಜಕುಮಾರ್ ಟಾಕಳೆ ವಿರುದ್ಧ 12 ಪುಟಗಳ ದೂರು ದಾಖಲಿಸಿದ ನವ್ಯಶ್ರೀ

    ಬೆಳಗಾವಿ: ತೋಟಗಾರಿಕೆ ಇಲಾಖೆ ಅಧಿಕಾರಿ ರಾಜಕುಮಾರ್ ಟಾಕಳೆ ವಿರುದ್ಧ ಸಾಮಾಜಿಕ ಕಾರ್ಯಕರ್ತೆ ನವ್ಯಶ್ರೀ ಆರ್.ರಾವ್ ಅತ್ಯಾಚಾರ, ಕಿಡ್ನಾಪ್, ಗರ್ಭಪಾತ, ಮೋಸ ಸೇರಿದಂತೆ ಇತರ ಸೆಕ್ಷನ್ ಹಾಕಿ ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

    ರಾಮನಗರ ಜಿಲ್ಲೆಯ ಚನ್ನಪಟ್ಟಣ ಮೂಲದ ನವ್ಯಶ್ರೀ ಆರ್.ರಾವ್ ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಆಗಮಿಸಿ ಕೈಬರಹದಲ್ಲಿ ಹನ್ನೆರಡು ಪುಟಗಳ ದೂರು ನೀಡಿದ್ದಾರೆ. ಸದ್ಯ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಬೆಳಗಾವಿ ತೋಟಗಾರಿಕೆ ಇಲಾಖೆ ಸಹಾಯ ನಿರ್ದೇಶಕ ರಾಜಕುಮಾರ್ ಟಾಕಳೆ ವಿರುದ್ಧ (376) ಅತ್ಯಾಚಾರ, (366) ಕಿಡ್ನಾಪ್, (312) ಗರ್ಭಪಾತ ಮಾಡಿಸಿದ್ದು, (420) ಮೋಸ, (354) ಮಹಿಳೆ ಮೇಲೆ ಹಲ್ಲೆ, (504) ಅವಾಚ್ಯವಾಗಿ ನಿಂದಿಸುವುದು, (506) ಜೀವ ಬೆದರಿಕೆ, (509) ಗೌರವಕ್ಕೆ ಧಕೆ ತರುವುದು ಹಾಗೂ (IT act 66E) ಖಾಸಗಿತನಕ್ಕೆ ಧಕೆ ವಿಚಾರದಡಿಯಲ್ಲಿ, (67A) ಲೈಂಗಿಕ ಪ್ರಚೋದನಕಾರಿ ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿರುವ ಬಗ್ಗೆ ಸೆಕ್ಷನ್ ಹಾಗೂ ಆಕ್ಟ್‌ ಗಳನ್ನು ಹಾಕಿ ಎಫ್‍ಐಆರ್ ದಾಖಲಾಗಿದೆ. ಇದನ್ನೂ ಓದಿ: ಕಿಡ್ನಾಪ್ ಮಾಡಿ ಗಣೇಶಪುರದ ಮಾವಿನ ತೋಪಿನಲ್ಲಿ ಕೂಡಿಹಾಕಿದ್ದ: ನವ್ಯಶ್ರೀ

    ಸದ್ಯ ರಾಜಕುಮಾರ್ ಟಾಕಳೆ ನೀಡಿರುವ ದೂರಿನ ವಿಚಾರಣೆಗೆ ಬೆಳಗಾವಿ ಎಪಿಎಂಸಿ ಪೊಲೀಸರು ನೋಟಿಸ್ ನೀಡಿದ್ದು, ಬೆಳಗಾವಿಯಲ್ಲಿ ಇರಲು ವಸತಿ ಸಮಸ್ಯೆ ಕಾರಣ ನೀಡಿ ಮುಚ್ಚಳಿಕೆ ಪತ್ರವನ್ನು ನವ್ಯಶ್ರೀ ಬರೆದುಕೊಟ್ಟಿದ್ದಲ್ಲದೇ ತನಿಖೆಗೆ ಸಹಕಾರ ಕೊಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ನಾನು ಕಷ್ಟಕ್ಕೆ ಸ್ಪಂದಿಸಿ ಮನೆಯಲ್ಲಿ ಇಟ್ಕೋತೀನಿ ಅಂದಿದ್ದೆ – ಆದ್ರೆ ನವ್ಯಶ್ರೀ 50ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ರು: ಟಾಕಳೆ ಆರೋಪ

    Live Tv
    [brid partner=56869869 player=32851 video=960834 autoplay=true]

  • 5 ವರ್ಷದ ವಿದ್ಯಾರ್ಥಿನಿಯನ್ನು ಥಳಿಸಿದ ಶಿಕ್ಷಕಿ ವಿರುದ್ಧ ಪ್ರಕರಣ ದಾಖಲು

    5 ವರ್ಷದ ವಿದ್ಯಾರ್ಥಿನಿಯನ್ನು ಥಳಿಸಿದ ಶಿಕ್ಷಕಿ ವಿರುದ್ಧ ಪ್ರಕರಣ ದಾಖಲು

    ಲಕ್ನೋ: 5 ವರ್ಷದ ವಿದ್ಯಾರ್ಥಿನಿಯನ್ನು ಶಿಕ್ಷಕಿ ಶಾಲೆಯಲ್ಲಿ ಥಳಿಸಿದ ಹಿನ್ನೆಲೆ ಆಕೆ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

    ಉತ್ತರ ಪ್ರದೇಶದ ಉನ್ನಾವೊದಲ್ಲಿ ಶಿಕ್ಷಕಿಯೊಬ್ಬರು 5 ವರ್ಷದ ಬಾಲಕಿಗೆ ಥಳಿಸಿದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಪ್ರಸ್ತುತ ಶಿಕ್ಷಕಿ ವಿರುದ್ಧ ದೂರು ದಾಖಲಾಗಿದೆ.

    ವೀಡಿಯೋದಲ್ಲಿ ಏನಿದೆ?
    ಶಿಕ್ಷಕಿಯೂ ತರಗತಿಯಲ್ಲಿ ಪಾಠ ಮಾಡುತ್ತಿರುವ ವೇಳೆ ವಿದ್ಯಾರ್ಥಿನಿ ಗಲಾಟೆ ಮಾಡುತ್ತಿದ್ದಳು. ಇದರಿಂದ ಶಿಕ್ಷಕಿ ಕೋಪಗೊಂಡು ಬಾಲಕಿಯನ್ನು ಥಳಿಸಿದ್ದಾರೆ. ಈ ದೃಶ್ಯವನ್ನು ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದ್ದು, ಶಿಕ್ಷಣ ಇಲಾಖೆ ಕಣ್ಣಿಗೆ ಬಿದ್ದಿದೆ. ಇದನ್ನೂ ಓದಿ: ಒಂಟಿ ಮಹಿಳೆ ಅಂಗನವಾಡಿ ಕಾರ್ಯಕರ್ತೆ ಕತ್ತು ಕೊಯ್ದ ಕಿರಾತಕರು – ಕೊಲೆಯ ಹಿಂದೆ ಅನುಮಾನದ ಹುತ್ತ 

    ಉನ್ನಾವೋ ಮೂಲ ಶಿಕ್ಷಣ ಅಧಿಕಾರಿ ಸಂಜಯ್ ತಿವಾರಿ ಈ ಕುರಿತು ಟ್ವೀಟ್ ಮಾಡಿದ್ದು, ಶಿಕ್ಷಕಿಯೊಬ್ಬರು ವಿದ್ಯಾರ್ಥಿಗೆ ಥಳಿಸುವ ವೀಡಿಯೋ ವೈರಲ್ ಆಗಿದೆ. ನಂತರ ನಾವು ಈ ಕುರಿತು ತನಿಖೆ ಆರಂಭಿಸಿದ್ದೇವೆ. ಈ ಘಟನೆ ಶಾಲೆಯಲ್ಲಿ ನಡೆದಿದೆ ಎಂದು ನಾವು ಕಂಡುಕೊಂಡಿದ್ದೇವೆ. ಪ್ರಸ್ತುತ ನಾವು ಶಿಕ್ಷಕಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ತಿಳಿಸಿದರು.

    ಘಟನೆಯ ಬಗ್ಗೆ ಶಿಕ್ಷಣ ಇಲಾಖೆಗೆ ಮಾಹಿತಿ ನೀಡದ ಕಾರಣ ಶಾಲೆಯ ಮುಖ್ಯ ಶಿಕ್ಷಕರನ್ನೂ ಅಮಾನತುಗೊಳಿಸಲಾಗಿದೆ ಎಂದು ವಿವರಿಸಿದರು.

    Live Tv
    [brid partner=56869869 player=32851 video=960834 autoplay=true]

  • ದೂರು ನೀಡಿದರೂ ಕಿಚ್ಚ ಸುದೀಪ್ ಕುರಿತಾದ ಅವಹೇಳನ ನಿಲ್ಲಿಸಿಲ್ಲ ‘ಅಹೋರಾತ್ರ’  ಶಿಷ್ಯ ಚರಣ್

    ದೂರು ನೀಡಿದರೂ ಕಿಚ್ಚ ಸುದೀಪ್ ಕುರಿತಾದ ಅವಹೇಳನ ನಿಲ್ಲಿಸಿಲ್ಲ ‘ಅಹೋರಾತ್ರ’ ಶಿಷ್ಯ ಚರಣ್

    ಕಿಚ್ಚ ಸುದೀಪ್ ಅವರನ್ನು ಸಮಾಜಿಕ ಜಾಲತಾಣದಲ್ಲಿ ಸತತವಾಗಿ ನಿಂದಿಸುತ್ತಿರುವ ಲೇಖಕ, ಧಾರ್ಮಿಕ ಚಿಂತಕ ಅಹೋರಾತ್ರ ಮತ್ತು ಈತನ ಶಿಷ್ಯ ಚರಣ್ ಸೇವಕ ಎನ್ನುವವರ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಸುದೀಪ್ ಪರವಾಗಿ ಬೆಂಗಳೂರಿನ ಸಹಾಯಕ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದರು. ದೂರು ಸಲ್ಲಿಸಿದರೂ, ಸುದೀಪ್ ಅವರನ್ನು ನಿಂದಿಸುವುದನ್ನು ಮಾತ್ರ ಚರಣ್ ನಿಲ್ಲಿಸಿಲ್ಲ. ನಿನ್ನೆ ಮತ್ತೆ ಫೇಸ್ ಬುಕ್ ಲೈವ್ ಗೆ ಬಂದಿರುವ ಚರಣ್, ಮತ್ತೆ ಸುದೀಪ್ ಮತ್ತು ಅಭಿಮಾನಿಗಳನ್ನು ಬಾಯಿಗೆ ಬಂದಂತೆ ನಿಂದಿಸಿದ್ದಾರೆ. ಹೀಗಾಗಿ ಕಠಿಣ ಕ್ರಮಕ್ಕಾಗಿ ಅಭಿಮಾನಿಗಳು ಒತ್ತಾಯಿಸಿದ್ದಾರೆ.

    ಆನ್ ಲೈನ್ ಆಟಕ್ಕೆ ಸಂಬಂಧಿಸಿದಂತೆ ಕಳೆದೊಂದು ವರ್ಷದಿಂದ ನಟ ಕಿಚ್ಚ ಸುದೀಪ್ ಅವರನ್ನು ನಿಂದಿಸುತ್ತಾ ಬಂದಿದ್ದಾರೆ ಅಹೋರಾತ್ರ. ಇತ್ತೀಚೆಗಷ್ಟೇ ತಾವು ಅಹೋರಾತ್ರನ ಶಿಷ್ಯ ಎಂದು ಹೇಳಿಕೊಂಡಿರುವ ಚರಣ್ ಕೂಡ ಅದೇ ಹಾದಿಯನ್ನು ತುಳಿದಿದ್ದಾರೆ. ಹಾಗಾಗಿ ಇವರ  ಮೇಲೆ ಕಾನೂನು ಕ್ರಮ ತಗೆದುಕೊಳ್ಳಬೇಕು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಸಹಾಯಕ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು. ಇದನ್ನೂ ಓದಿ: ಸೋನಮ್ ಕಪೂರ್ ಗ್ರ್ಯಾಂಡ್ ಬೇಬಿ ಶವರ್‌ಗೆ ದಿನಗಣನೆ: ಗೆಸ್ಟ್ ಲಿಸ್ಟ್ ಔಟ್

    ಭಾರತೀಯ ಚಲನಚಿತ್ರ ರಂಗದಲ್ಲಿ ಹೆಸರಾಂತ ಕಲಾವಿದ ಕಿಚ್ಚ ಸುದೀಪ್ ಎಂದೇ ಪ್ರಖ್ಯಾತರಾಗಿರುವ ಶ್ರೀ ಸುದೀಪ್ ಅವರ ವಿರುದ್ಧ ಅಹೋರಾತ್ರ ಮತ್ತು ಚರಣ್ ಎಂಬುವವರು ಸಾಮಾಜಿಕ ಜಾಲತಾಣಗಳ್ಲಲಿ ಅವಾಚ್ಯ, ಅವಹೇಳನಕಾರಿಯಾಗಿ ಪದಬಳಕೆ ಮಾಡುವ ಮೂಲಕ ಕನ್ನಡ ಚಿತ್ರರಂಗ ಹಾಗೂ ಸುದೀಪ್ ಅವರ ಘನತೆ, ಗೌರವಕ್ಕೆ ಚ್ಯುತಿ ತರುವಂತಹ ಹೇಳಿಕೆ ನೀಡಿರುವುದು ಬೇಸರ ಸಂಗತಿ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೇ, ಅಹೋರಾತ್ರ ಮತ್ತು ಚರಣ್ ಇವರ ವಿರುದ್ಧ ಕಾನೂನು ಕ್ರಮ ಜರುಗಿಸಿ, ಚಿತ್ರರಂಗದ ಹಾಗೂ ಕಲಾವಿದರ ಬೆಳವಣಿಗೆಗೆ ಯಾವುದೇ ರೀತಿ ಚ್ಯುತಿ ಬರದಂತೆ ಸಹಕರಿಸಬೇಕೆಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಭಾ.ಮಾ ಹರೀಶ್ ಇಂದು ದೂರು ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]