Tag: complaint

  • 200 ಕೋಟಿ ರೂ. ಅಕ್ರಮ ಆಸ್ತಿ ಖರೀದಿ – ಶಾಸಕ ರಾಜೇಗೌಡ ವಿರುದ್ಧ ಲೋಕಾಯುಕ್ತಕ್ಕೆ ದೂರು

    200 ಕೋಟಿ ರೂ. ಅಕ್ರಮ ಆಸ್ತಿ ಖರೀದಿ – ಶಾಸಕ ರಾಜೇಗೌಡ ವಿರುದ್ಧ ಲೋಕಾಯುಕ್ತಕ್ಕೆ ದೂರು

    ಚಿಕ್ಕಮಗಳೂರು: ಶೃಂಗೇರಿಯ ಶಾಸಕ ರಾಜೇಗೌಡ (RajeGowda) ಆದಾಯಕ್ಕೂ ಮೀರಿ ಅಕ್ರಮವಾಗಿ 200 ಕೋಟಿ ರೂ.ಗೂ ಅಧಿಕ ಆಸ್ತಿ ಸಂಪಾದಿಸಿದ್ದಾರೆ, ಜೊತೆಗೆ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ಮೋಸ ಮಾಡಿದ್ದಾರೆ ಎಂದು ಇಂದು ಲೋಕಾಯುಕ್ತದಲ್ಲಿ (Lokayukta)  ದೂರು ದಾಖಲಾಗಿದೆ.

    ರಾಜೇಗೌಡ ಮತ್ತು ಕುಟುಂಬಸ್ಥರ ವಿರುದ್ಧ ವಿಜಯಾನಂದ ಸಿಪಿ ದೂರು ನೀಡಿದ್ದು ಶಬಾನ್ ರಂಜಾನ್ ಫಾರ್ಮ್‍ನ 266 ಎಕರೆಯಲ್ಲಿ ವಿವಿಧ ಪ್ಲಾಂಟ್‌ ಇರುವ ಭೂಮಿಯನ್ನು ರಾಜೇಗೌಡ ಕುಟುಂಬ ಅಕ್ರಮವಾಗಿ ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ. ಇದು ಈ ಮೊದಲ ಮೃತ ಸಿದ್ದಾರ್ಥ ಅವರ ಹೆಸರಿನಲ್ಲಿ ಇತ್ತು. ಅವರ ಮರಣದ ಬಳಿಕ ಅವರ ಪತ್ನಿ ಮತ್ತು ಮಗನ ಹೆಸರಿನಲ್ಲಿ ಇತ್ತು ಅದನ್ನ ರಾಜೇಗೌಡರು ತಮ್ಮ ಪ್ರಭಾವ ಬೀರಿ ಅವರ ಪತ್ನಿ ಹಾಗೂ ಮಗನ ಹೆಸರನ್ನು ಫಾರ್ಮ್‍ಗೆ ಸೇರಿಸಿದ್ದಾರೆ ಎಂದು ವಕೀಲ ದಿನೇಶ್ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಮತದಾರರ ಪಟ್ಟಿಯಲ್ಲಿ ಗೋಲ್ಮಾಲ್ – ಚಿಲುಮೆ ಸಂಸ್ಥೆಯ ನಾಲ್ವರು ಪೊಲೀಸರ ವಶಕ್ಕೆ

    ಸಿದ್ದಾರ್ಥ ಕುಟುಂಬ 1992ರಲ್ಲಿ ಶಾಬನ್ ರಂಜನ್ ಟ್ರಸ್ಟ್‌ನಿಂದ ಸುಮಾರು 266 ಎಕರೆ 38 ಗುಂಟೆ, ಬಂಗ್ಲೆ, ಸಿಬ್ಬಂದಿ ಕ್ವಾಟರ್ಸ್ ಸೇರಿದಂತೆ ಖರೀದಿ ಮಾಡಿದ್ರು, ಇದನ್ನು ಖರೀದಿ ಮಾಡಲು ಶಾಬನ್ ರಂಜನ್ ಪಾಲುದಾರಿಕೆಗೆ ಸೇರಿಕೊಂಡಿದ್ರು, ಆದ್ರೆ ಇದೀಗ ಸಿದ್ದಾರ್ಥ ಅವರ ಪತ್ನಿ ಮಗನ ಹೆಸರಿನಲ್ಲಿದ್ದ ಪ್ರಾಪರ್ಟಿ ರಾಜೇಗೌಡರ ಕುಟುಂಬಕ್ಕೆ ಹಸ್ತಾಂತರ ಅಗಿದೆ. ಹಸ್ತಾಂತರ ಮಾಡಿಕೊಂಡಿದ್ದಕ್ಕೆ ಯಾವುದೇ ಹಣಕಾಸು ವ್ಯವಹಾರದ ಲೆಕ್ಕಪತ್ರ ಇಲ್ಲ. ಜೊತೆಗೆ ಈ ಹಿಂದೆ 2018 ಚುನಾವಣೆಗೆ ಸ್ಪರ್ಧೆ ಮಾಡುವಾಗ ಒಟ್ಟು 30 ಕೋಟಿ ಪ್ರಾಪರ್ಟಿ ಕ್ಲೈಮ್ ಮಾಡಿದ್ರು, ಅದರಲ್ಲಿ 25 ಕೋಟಿ ಬೇರೆ ಬೇರೆ ಹೊಣೆಗಾರಿಕೆ ಇರುವುದಾಗಿ ದಾಖಲೆ ನೀಡಿದ್ರು, ಈ ಹಿನ್ನೆಲೆ ಸರ್ಕಾರದ ಬೊಕ್ಕಸಕ್ಕೆ ಮತ್ತು ಅಕ್ರಮ ಹಣ ಗಳಿಕೆ, ಅಧಿಕಾರ ದುರುಪಯೋಗ ಪಡಿಸಿಕೊಂಡು ಭ್ರಷ್ಟಾಚಾರ ಮಾಡಿ ಹಣ ಆಸ್ತಿ ಪಾಸ್ತಿ ಮಾಡುವ ಮೂಲಕ ನಷ್ಟ ಮಾಡಿರುವುದಾಗಿ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಆದಾಯ ತೆರಿಗೆ ಮತ್ತು ಇಡಿ ಕಚೇರಿಗೆ ದಾಖಲೆಗಳ ಸಮೇತ ದೂರು ನೀಡಲು ವಕೀಲರು ನಿರ್ಧಾರ ಮಾಡಿದ್ದಾರೆ. ಇದನ್ನೂ ಓದಿ: ರಾಮನಿಗಿಂತ ರಾವಣ ಜ್ಞಾನಿ – ವಿವೇಕ ಇರುವುದರಿಂದ ಜನ ರಾಮನನ್ನು ಪೂಜಿಸುತ್ತಾರೆ: ರಾಜನಾಥ್ ಸಿಂಗ್

    Live Tv
    [brid partner=56869869 player=32851 video=960834 autoplay=true]

  • ಉರ್ಫಿ ಜಾವೇದ್ ಮೇಲೆ ದೂರುಗಳ ಸುರಿಮಳೆ : ಗೌರಮ್ಮ ಆಗಿ ಬದಲಾದ ನಟಿ

    ಉರ್ಫಿ ಜಾವೇದ್ ಮೇಲೆ ದೂರುಗಳ ಸುರಿಮಳೆ : ಗೌರಮ್ಮ ಆಗಿ ಬದಲಾದ ನಟಿ

    ಬಿಗ್ ಬಾಸ್ (Bigg Boss) ಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ಉರ್ಫಿ ಜಾವೇದ್ (Urfi Javed), ಬಿಚ್ಚಮ್ಮಳಾದ ಕಾರಣಕ್ಕಾಗಿಯೇ ಸದಾ ಸುದ್ದಿಯಲ್ಲಿ ಇರುವ ನಟಿ. ನಟನೆಗಿಂತ ಈಕೆ ಹಾಕುವ ಕಾಸ್ಟ್ಯೂಮ್ ನಿಂದಾಗಿಯೇ ಪ್ರಸಿದ್ಧ. ಸೋಷಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಜನರು ಈಕೆಯನ್ನು ಫಾಲೋ ಮಾಡುತ್ತಾರೆ. ಉರ್ಫಿ ಬೀದಿಗೆ ಇಳಿದರೆ ಸಾಕು, ಕ್ಯಾಮೆರಾಗಳು ಇವರನ್ನು ಸುತ್ತುವರೆಯುತ್ತವೆ. ಇಂತಹ ಉರ್ಫಿಗೆ ಸಂಕಷ್ಟ ಎದುರಾಗಿದೆ.

    ಅರೆಬರೆ ಬಟ್ಟೆ ಧರಿಸುತ್ತಾಳೆ ಎನ್ನುವ ಕಾರಣಕ್ಕಾಗಿಯೇ ಮುಂಬೈನಲ್ಲಿ ಈಕೆಯ ವಿರುದ್ಧ ದೂರು (Complaint) ದಾಖಲಾಗಿತ್ತು. ಕಡಿಮೆ ಬಟ್ಟೆ ಧರಿಸಿ, ಬೀದಿಗೆ ಇಳಿಯುತ್ತಾಳೆ ಎಂದು ಹಲವರು ಆಕ್ಷೇಪ ಕೂಡ ವ್ಯಕ್ತ ಪಡಿಸಿದ್ದರು. ಪೊಲೀಸರು ಕೂಡ ವಿಚಾರಣೆ ಮಾಡಿದ್ದಾರೆ ಎನ್ನುವ ಮಾಹಿತಿ ಇದೆ. ಅಲ್ಲದೇ, ಟ್ರೋಲ್ ಪೇಜ್ ಗಳು ನಿತ್ಯ ಈಕೆಯ ಫೋಟೋ ಹಾಕಿಕೊಂಡು ಟ್ರೋಲ್ ಮಾಡುತ್ತವೆ. ಹಾಗಾಗಿ ದೂರುಗಳ ಸುರಿಮಳೆಯೇ ಈಕೆಯ ವಿರುದ್ಧ ಸುರಿದಿತ್ತು.

    ತನ್ನ ಮೇಲೆ ದೂರುಗಳ ಮೇಲೆ ದೂರುಗಳು ದಾಖಲಾಗುತ್ತಿದ್ದಂತೆಯೇ ಉರ್ಫಿ ಬದಲಾದಂತೆ ಕಾಣುತ್ತಿದೆ. ಎರಡ್ಮೂರು ದಿನಗಳಿಂದ ಸಭ್ಯ ಎನ್ನುವಂತಹ ಬಟ್ಟೆಗಳನ್ನು ಹಾಕಿಕೊಂಡು ಮನೆಯಿಂದ ಆಚೆ ಬರುತ್ತಿದ್ದಾರೆ. ಮೈತುಂಬಾ ಬಟ್ಟೆ ಹಾಕಿಕೊಂಡ ಉರ್ಫಿ ಕಂಡು ಕೆಲವರು ಅಚ್ಚರಿ ವ್ಯಕ್ತ ಪಡಿಸಿದ್ದರೆ, ಇನ್ನೂ ಕೆಲವರು ಇದನ್ನೇ ಮುಂದುವರೆಸು ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ:ಬಿಗ್‌ ಬಾಸ್‌ ಮನೆಯಲ್ಲಿ ಮತ್ತೆ ರೂಪೇಶ್ ರಾಜಣ್ಣ ಕಿರಿಕ್

    ಕಾಸ್ಟ್ಯೂಮ್ (Costume) ಕುರಿತಾಗಿ ಹಲವಾರು ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದ ಉರ್ಫಿ, ನನ್ನ ದೇಹ, ನನ್ನ ಬಟ್ಟೆ ಎಂದೆಲ್ಲ ಕೂಗಾಡಿದ್ದರು. ನಾನು ಬದುಕುತ್ತಿರುವುದು ಭಾರತದಲ್ಲ, ಅಪಘಾನಿಸ್ತಾನದಲ್ಲಿ ಅಲ್ಲ ಎಂದು ಗರಂ ಕೂಡ ಆಗಿದ್ದರು. ಅರೆಬರೆ ಬಟ್ಟೆಯಲ್ಲಿ ನನ್ನನ್ನು ನೋಡಲು ಇಷ್ಟ ಪಡುವವರು, ಸೋಷಿಯಲ್ ಮೀಡಿಯಾದಲ್ಲಿ ಟೀಕೆ ಮಾಡುತ್ತಾರೆ ಎಂದು ಆರೋಪಿಸಿದ್ದರು. ಈಗ ಆ ಮಾತುಗಳನ್ನು ಮರೆತು, ಮೈತುಂಬಾ ಬಟ್ಟೆ ಹಾಕಿಕೊಂಡು ಓಡಾಡುತ್ತಿದ್ದಾರೆ. ಈ ಬದಲಾವಣೆ ಇನ್ನೆಷ್ಟು ದಿನ ಅಂತ ಕಾದು ನೋಡಬೇಕು.

    Live Tv
    [brid partner=56869869 player=32851 video=960834 autoplay=true]

  • ‘ಸೂಪರ್ ಸ್ಟಾರ್’ ಚಿತ್ರದ ನಿರ್ದೇಶಕನ ಮೇಲೆ ಎಫ್ಐಆರ್ : ಉಪೇಂದ್ರ ಸಹೋದರ ಪುತ್ರನ ಚಿತ್ರ

    ‘ಸೂಪರ್ ಸ್ಟಾರ್’ ಚಿತ್ರದ ನಿರ್ದೇಶಕನ ಮೇಲೆ ಎಫ್ಐಆರ್ : ಉಪೇಂದ್ರ ಸಹೋದರ ಪುತ್ರನ ಚಿತ್ರ

    ಟ ಉಪೇಂದ್ರ ಅವರ ಸಹೋದರನ ಪುತ್ರ ನಿರಂಜನ್ ಸುಧೀಂದ್ರ ನಟನೆಯ ಸೂಪರ್ ಸ್ಟಾರ್ ಚಿತ್ರದ ನಿರ್ದೇಶಕನಿಗೆ ಕಾನೂನು ಸಂಕಷ್ಟ ಎದುರಾಗಿದೆ. ವಂಚನೆ, ಪ್ರಾಣ ಬೆದರಿಕೆಯಂತಹ ಗಂಭೀರ ಪ್ರಕರಣಗಳು ಅವರ ಮೇಲೆ ದಾಖಲಾಗಿದ್ದು, ಈ ಚಿತ್ರದ ನಿರ್ಮಾಪಕರು ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕೋಟ್ಯಾಂತರ ರೂಪಾಯಿ ವಂಚನೆ ಮತ್ತು ತಮಗೆ ನಿರ್ದೇಶಕರು ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ನಿರ್ಮಾಪಕರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಅಂದುಕೊಂಡಂತೆ ಆಗಿದ್ದರೆ ಸೂಪರ್ ಸ್ಟಾರ್ ಸಿನಿಮಾ ಶೂಟಿಂಗ್ ಮುಗಿಸಿ, ಇಷ್ಟೊತ್ತಿಗೆ ತೆರೆಗೆ ಬರಬೇಕಿತ್ತು. ಆದರೆ, ಚಿತ್ರತಂಡದಲ್ಲಿಯ ಬಿರುಕಿನಿಂದಾಗಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತುವಂತಾಗಿದೆ. ಈ ಸಿನಿಮಾದ ನಿರ್ದೇಶಕರು ತಮಗೆ 1 ಕೋಟಿ 10 ಲಕ್ಷ ವಂಚನೆ ಮಾಡಿದ್ದಾರೆ ಎಂದು  ನಿರ್ಮಾಪಕರು ಆರೋಪ ಮಾಡಿದ್ದು, ಸಿನಿಮಾ ಚೆನ್ನಾಗಿ ಓಡುತ್ತೆ ಎಂದು ನಿರ್ಮಾಪಕನಿಗೆ ನಿರ್ದೇಶಕರು ಪ್ರಚೋದನೆ ನೀಡಿದ್ದಾರಂತೆ. ಕಲಾವಿದರಿಗೂ ಹಣ ನೀಡದೆ ಸ್ವಂತಕ್ಕೆ ತಮ್ಮ ಹಣವನ್ನು ನಿರ್ದೇಶಕರು ಬಳಸಿಕೊಂಡಿದ್ದಾರಂತೆ. ನಿರ್ಮಾಪಕನ ಚಿತ್ರವನ್ನ ನಿರ್ಮಾಪಕನಿಗೆ ಗೊತ್ತಿಲ್ಲದೆ ಮಾರಾಟ ಮಾಡಿದ್ದಾರೆ ಎಂದು ನಿರ್ಮಾಪಕರು ಆರೋಪ ಮಾಡಿದ್ದಾರೆ.

    ಈ ಸಿನಿಮಾವನ್ನು ಆರ್.ವೆಂಕಟೇಶ್ ಬಾಬು ನಿರ್ದೇಶನ ಮಾಡಿದ್ದು, ಮೈಲಾರಿ ಎನ್ನುವವರು ನಿರ್ಮಾಣ ಮಾಡಿದ್ದರು. ನಂತರ ಚಿತ್ರತಂಡದಲ್ಲಿ ಹಲವಾರು ಬದಲಾವಣೆಗಳು ಆಗಿ ಸತ್ಯನಾರಾಯಣ ಮತ್ತು ರಮಾದೇವಿ ನಿರ್ಮಾಪಕರಾಗಿ ಬಂದಿದ್ದಾರೆ ಎನ್ನಲಾಗುತ್ತಿದೆ. ಇವರೆಲ್ಲರೂ ಸೇರಿ ತಮಗೆ ವಂಚನೆ ಮಾಡಿದ್ದಾರೆ ಎಂದು ನಿರ್ಮಾಪಕ ಮೈಲಾರಿ ಈ ಮೂವರ ಮೇಲೂ ದೂರು ನೀಡಿದ್ದಾರೆ. ಇದನ್ನೂ ಓದಿ:ಕಾಲಿವುಡ್‌ನತ್ತ ಕನ್ನಡದ ನಟ ಭರತ್ ಭೋಪಣ್ಣ

    ಈ ಸಿನಿಮಾ ಮಾತೃಶ್ರಿ ಎಂಟರ್ ಪ್ರೈಸಸ್ ಬ್ಯಾನರ್ ನಡಿ ಮೈಲಾರಿ ಸೂಪರ್ ಸ್ಟಾರ್ ಚಿತ್ರ ಮಾಡ್ತಿದ್ದರು. ಕೋವಿಡ್ ಹಿನ್ನಲೆ ಚಿತ್ರೀಕರಣ ಸ್ವಲ್ಪ ದಿನ ಸ್ಥಗಿತಗೊಂಡಿತ್ತು. ನಂತರ ಸತ್ಯನಾರಾಯಣ ಎಂಬುವವರ ಜೊತೆ ಸೇರಿ ಚಿತ್ರದ ಮಾಲೀಕತ್ವವನ್ನೇ ಬದಲಿಸಿದ ಆರೋಪ ನಿರ್ದೇಶಕರ ಮೇಲೆ ಕೇಳಿ ಬಂದಿದೆ. ಹೊಸ ನಿರ್ಮಾಪಕರಾಗಿ ರಮಾದೇವಿ ಹಾಗು ಸತ್ಯನಾರಾಯಣ ಅವರನ್ನ ಹಾಕಿಕೊಂಡ ನಿರ್ದೇಶಕ ವೆಂಕಟೇಶ್ ಬಾಬು ಈ ಚಿತ್ರ ಮಾಡಿದ್ದು, ಹಾಕಿದ ಬಂಡವಾಳ ವಾಪಾಸ್ ಕೇಳಲು ಹೋದಾಗ ಪ್ರಾಣಬೆದರಿಕೆ , ಧಮ್ಕಿ ಹಾಕಿದ್ದಾರೆ ಎಂದು ದೂರಿನಲ್ಲಿಉಲ್ಲೇಖವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಹಿಂದೂ ಭಾವನೆಗೆ ಧಕ್ಕೆ: ಮ್ಯೂಸಿಕ್ ಡೈರೆಕ್ಟರ್ ದೇವಿ ಶ್ರೀ ಪ್ರಸಾದ್ ವಿರುದ್ಧ ಪ್ರಕರಣ

    ಹಿಂದೂ ಭಾವನೆಗೆ ಧಕ್ಕೆ: ಮ್ಯೂಸಿಕ್ ಡೈರೆಕ್ಟರ್ ದೇವಿ ಶ್ರೀ ಪ್ರಸಾದ್ ವಿರುದ್ಧ ಪ್ರಕರಣ

    ಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಇತ್ತೀಚೆಗಷ್ಟೇ ಹಲವು ಭಾಷೆಗಳಲ್ಲಿ ‘ಓ ಪರಿ’ ಎನ್ನುವ ಹಾಡೊಂದನ್ನು ಹೊರ ತಂದಿದ್ದರು. ಈ ಹಾಡಿನ ಸಾಹಿತ್ಯದಲ್ಲಿ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗಿದೆ ಹಾಗೂ ಧಾರ್ಮಿಕ ಪಠಣಗಳಿರುವ ಹಾಡಿನಲ್ಲಿ ನೃತ್ಯ ಮಾಡುವವರು ಅರೆಬರೆ ಬಟ್ಟೆ ಧರಿಸಿದ್ದಾರೆ ಎನ್ನುವ ಕಾರಣಕ್ಕಾಗಿ ನಟಿ ಕರಾಟೆ ಕಲ್ಯಾಣಿ ಅನ್ನುವವರು ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.

    ಹಿಂದೂ ಭಾವನೆಗಳಿಗೆ ಧಕ್ಕೆ ವಿಚಾರವಾಗಿ ದೇವಿ ಶ್ರೀ ಪ್ರಸಾದ್ ಮೇಲೆ ದೂರು ಸಲ್ಲಿಕೆ ಆಗುತ್ತಿದ್ದಂತೆಯೇ ಹೈದರಾಬಾದ್ ನಗರ ಪೊಲೀಸರು ಅವರ ಮೇಲೆ ಪ್ರಕರಣವನ್ನು ದಾಖಲಿಸಿದ್ದಾರೆ. ತನಿಖೆಯನ್ನೂ ಶುರು ಮಾಡಿದ್ದಾರೆ. ತುಂಡುಡುಗೆ ತೊಟ್ಟು ಡಾನ್ಸ್ ಮಾಡಿದ ಹಾಡಿನಲ್ಲಿ ‘ಹರೇ ಕೃಷ್ಣ ಹರೇ ರಾಮ’  ಎಂದು ಜಪಿಸಲಾಗುತ್ತಿದೆ. ಪವಿತ್ರ ಶ್ಲೋಕಗಳನ್ನು ಹೇಳಲು ಸಾಧ್ಯವಾಗದೇ ಇದ್ದಾಗ ಈ ಪವಿತ್ರ ಸಾಲುಗಳನ್ನು ಹೇಳಲಾಗುತ್ತದೆ. ಇಂತಹ ಸಾಲುಗಳನ್ನು ಹೇಳುವಾಗ ನೃತ್ಯ ಮಾಡುವವರು ಅಶ್ಲೀಲವಾಗಿ ಕಂಡಿದ್ದಾರೆ ಎನ್ನುವುದು ದೂರು ನೀಡಿದವರ ಆರೋಪ. ಇದನ್ನೂ ಓದಿ:ತಾಯ್ನಾಡಿಗೆ ಪ್ರಿಯಾಂಕಾ ಚೋಪ್ರಾ ಕಾಲಿಟ್ಟ ಬೆನ್ನಲ್ಲೇ ನಟಿಯ ವಿರುದ್ಧ ಗಂಭೀರ ಆರೋಪ

    ಕರಾಟೆ ಕಲ್ಯಾಣಿ ಮತ್ತು ಲಲಿತ್ ಕುಮಾರ್ ಜಂಟಿಯಾಗಿ ಹೈದರಾಬಾದ್ ಸೈಬರ್ ಠಾಣೆಯಲ್ಲಿ ದೂರು ದಾಖಲಿಸುತ್ತಿದ್ದಂತೆಯೇ ಪೊಲೀಸರು ದೇವಿಶ್ರೀ ಪ್ರಸಾದ್ ಮೇಲೆ ಐಪಿಸಿ ಸೆಕ್ಷನ್ 153 (ಎ) ಮತ್ತು 295 (ಎ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಅಲ್ಲದೇ, ಆಂಧ್ರ ಪ್ರದೇಶದ ಬಿಜೆಪಿ ಕಾರ್ಯದರ್ಶಿ ಎಸ್. ವಿಷ್ಣುವರ್ಧನ್ ರೆಡ್ಡಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿ, ಸಂಗೀತ ನಿರ್ದೇಶಕರು ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಗೆ ಜೀವ ಬೆದರಿಕೆ: ದೂರು ದಾಖಲು

    ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಗೆ ಜೀವ ಬೆದರಿಕೆ: ದೂರು ದಾಖಲು

    ಲೈಗರ್ (Ligar) ಸಿನಿಮಾಗೆ ಸಂಬಂಧಿಸಿದ ವಿವಾದ ಇದೀಗ ಜೀವ ಬೆದರಿಕೆ ಹಂತಕ್ಕೂ ಹೋಗಿದ್ದು, ತಮಗೆ ಜೀವ ಬೆದರಿಕೆ ಇದೆ ಎಂದು ನಿರ್ದೇಶಕ ಪುರಿ ಜಗನ್ನಾಥ್ (Puri Jagannath) ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ. ಸಿನಿಮಾ ವಿತರಕರಿಂದ ತಮಗೆ ಜೀವ ಬೆದರಿಕೆ ಇದೆ ಎಂದು ಚೆನ್ನೈನ ಜೂಬ್ಲಿ ಹಿಲ್ಸ್ ಪೊಲೀಸ್ ಠಾಣೆಗೆ ದೂರು (Complaint) ಸಲ್ಲಿಸಿದ್ದಾರೆ. ಆಗಸ್ಟ್ 25ಕ್ಕೆ ಬಿಡುಗಡೆ ಆಗಿದ್ದ ಲೈಗರ್ ಸಿನಿಮಾ ಭಾರೀ ಸೋಲು ಕಂಡಿತ್ತು. ವಿತರಕರಿಗೆ ಭಾರೀ ನಷ್ಟವನ್ನುಂಟು ಮಾಡಿತ್ತು.

    ಪುರಿ ಜಗನ್ನಾಥ್ ಮತ್ತು ವಿಜಯ್ ದೇವರಕೊಂಡ (Vijay Devarakonda) ಕಾಂಬಿನೇಷನ್ ನ ಈ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆ ಕಾರಣದಿಂದಾಗಿಯೇ ಅದ್ಧೂರಿ ಪ್ರಚಾರ ಮತ್ತು ಭಾರೀ ಸಂಖ್ಯೆಯ ಥಿಯೇಟರ್ ನಲ್ಲಿ ಚಿತ್ರವನ್ನು ಬಿಡುಗಡೆ ಮಾಡಲಾಯಿತು. ತುಂಬಾ ನಿರೀಕ್ಷೆಯ ಸಿನಿಮಾ ಎನ್ನುವ ಕಾರಣಕ್ಕಾಗಿ ದೊಡ್ಡ ಮೊತ್ತದ ಹಣಕೊಟ್ಟು ವಿತರಕರು ಈ ಸಿನಿಮಾವನ್ನು ಖರೀದಿಸಿದ್ದರು. ಆದರೆ, ಸಿನಿಮಾ ಸೋಲು ಕಂಡಿತ್ತು. ಇದನ್ನೂ ಓದಿ:ದೇಶ-ವಿದೇಶದಲ್ಲಿ ಮಾರ್ದನಿಸ್ತಿರೋ ಗಗ್ಗರ ಶಬ್ಧ- ಅಮೆರಿಕಾದಲ್ಲಿ ಎಂಟೂವರೆ ಕೋಟಿ ಬಾಚಿದ ಕಾಂತಾರ

    ನಷ್ಟಕ್ಕೆ ಸಂಬಂಧಿಸಿದಂತೆ ಮೊನ್ನೆಯಷ್ಟೇ ವಿತರಕರು ಪುರಿ ಜಗನ್ನಾಥ್ ಮನೆಯ ಮುಂದೆ ಧರಣಿ ಕೂರುವುದಾಗಿ ಹೇಳಿದ್ದರು. ಅದಕ್ಕೂ ಪ್ರತಿಕ್ರಿಯೆ ನೀಡಿದ್ದ ಪುರಿ, ಇಂತಹ ಬೆದರಿಕೆಗೆ ನಾನು ಬಗ್ಗುವುದಿಲ್ಲ. ಹೆದರುವುದೂ ಇಲ್ಲ ಎಂದಿದ್ದರು. ಇದೀಗ ಜೂಬ್ಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ವಿತರಕರಾದ ವರಂಗಲ್ ಶ್ರೀನು ಹಾಗೂ ಫೈನಾನ್ಸಿಯರ್ ಶೋಭನ್ ವಿರುದ್ಧ ದೂರು ದಾಖಲಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅಶ್ಲೀಲತೆ ಕಾರಣಕೊಟ್ಟು ನಟಿ ಉರ್ಫಿ ಜಾವೇದ್ ವಿರುದ್ಧ ದೂರು ದಾಖಲು

    ಅಶ್ಲೀಲತೆ ಕಾರಣಕೊಟ್ಟು ನಟಿ ಉರ್ಫಿ ಜಾವೇದ್ ವಿರುದ್ಧ ದೂರು ದಾಖಲು

    ಮಾದಕ ಉಡುಗೆಯ ಮೂಲಕವೇ ಫೇಮಸ್ ಆಗಿರುವ ಬಾಲಿವುಡ್ ನಟಿ, ಬಿಗ್ ಬಾಸ್ ಸ್ಪರ್ಧಿ ಉರ್ಫಿ ಜಾವೇದ್ (Urfi Javed) ವಿರುದ್ಧ ಕೊನೆಗೂ ದೂರು ದಾಖಲಾಗಿದೆ. ಅಶ್ಲೀಲತೆಯನ್ನು ಉರ್ಫಿ ಹರಡುತ್ತಿದ್ದಾರೆ ಎಂದು ಕಾರಣ ಕೊಟ್ಟು ಅನಾಮಧೇಯ ವ್ಯಕ್ತಿಯೊಬ್ಬರು ದೆಹಲಿ ಪೊಲೀಸರಿಗೆ (ಪೊಲೀಸ್) ದೂರು ನೀಡಿದ್ದಾರೆ.

    ಉರ್ಫಿ ಡಾನ್ಸ್ ಮಾಡಿರುವ ‘ಹಿ ಹಿ ಯೇ ಮಜ್ಬೂರಿ’ ಹಾಡು ಬಿಡುಗಡೆ ಆಗಿದೆ. ಈ ಹಾಡಿನಲ್ಲಿ ನಟಿ ಸಖತ್ ಸೆಕ್ಸಿ ಹಾಗೂ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಇಂತಹ ಬಟ್ಟೆಗಳ ಮೂಲಕ ಉರ್ಫಿ ಅಶ್ಲೀಲವಾಗಿ ಕಾಣುತ್ತಿದ್ದಾರೆ. ಇದು ಅಶ್ಲೀಲತೆಯನ್ನು ಹರಡುವ ಕ್ರಮ. ಹಾಗಾಗಿ ಅವರ ವಿರುದ್ಧ ಕ್ರಮ ತಗೆದುಕೊಳ್ಳುವಂತೆ ದೂರಿನಲ್ಲಿ (complaint) ಬರೆಯಲಾಗಿದೆ. ಇದನ್ನೂ ಓದಿ:ದೇಶ-ವಿದೇಶದಲ್ಲಿ ಮಾರ್ದನಿಸ್ತಿರೋ ಗಗ್ಗರ ಶಬ್ಧ- ಅಮೆರಿಕಾದಲ್ಲಿ ಎಂಟೂವರೆ ಕೋಟಿ ಬಾಚಿದ ಕಾಂತಾರ

    ಈ ಹಾಡಿನಲ್ಲಿ ಉರ್ಫಿ ಕೆಂಪು ಬಣ್ಣದ ಸೀರೆಯಲ್ಲಿ ಮಾದಕವಾಗಿ ಕಾಣುತ್ತಿದ್ದಾರೆ. ಅಕ್ಟೋಬರ್ 11 ರಂದು ಯೂಟ್ಯೂಬ್ ನಲ್ಲಿ ಈ ಹಾಡು ಅಪ್ ಲೋಡ್ ಆಗಿದ್ದು, 8.6 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ಈ ಸೀರೆಯಲ್ಲಿ ಉರ್ಫಿ ಅಸಭ್ಯ ಬಟ್ಟೆಗಳನ್ನು ಧರಿಸಿದ್ದೇ ಅವರಿಗೆ ಮುಳುವಾಗಿದೆ. ಈ ಹಿಂದೆಯೂ ಇಂಥದ್ದೇ ಬಟ್ಟೆಗಳ ಕಾರಣದಿಂದಾಗಿ ಅವರು ಸಾಕಷ್ಟು ಬಾರಿ ಟ್ರೋಲ್ ಕೂಡ ಆಗಿದ್ದಾರೆ.

    ಉರ್ಫಿ ವಿಚಿತ್ರ ಬಟ್ಟೆಗಳನ್ನು ಹಾಕುವುದರಲ್ಲಿ ಮುಂದು. ಈವರೆಗೂ ಯಾರೂ ಡಿಸೈನ್ ಮಾಡದೇ ಇರುವಂತಹ ಕಾಸ್ಟ್ಯೂಮ್ ಹಾಕಿರುವ ಇವರು, ದಿನಕ್ಕೊಂದು ಫೋಟೋವನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಳ್ಳುತ್ತಲೇ ಇರುತ್ತಾರೆ. ಈ ಕಾರಣದಿಂದಾಗಿಯೇ ಅವರು ಸದಾ ಸುದ್ದಿಯಲ್ಲೂ ಇರುತ್ತಾರೆ.

    Live Tv
    [brid partner=56869869 player=32851 video=960834 autoplay=true]

  • ಕಾಂತಾರ ಕಾಂಟ್ರವರ್ಸಿ: ನಟ ಚೇತನ್ ವಿರುದ್ಧ ಬೆಂಗಳೂರಿನಲ್ಲಿ ದೂರು ದಾಖಲು

    ಕಾಂತಾರ ಕಾಂಟ್ರವರ್ಸಿ: ನಟ ಚೇತನ್ ವಿರುದ್ಧ ಬೆಂಗಳೂರಿನಲ್ಲಿ ದೂರು ದಾಖಲು

    ವಿವಾದಾತ್ಮಕ (Controversy) ಹೇಳಿಕೆಯ ವಿಚಾರವಾಗಿ ನಟ ಚೇತನ್ (Chetan) ಮೇಲೆ ಮತ್ತೊಂದು ದೂರು ದಾಖಲಾಗಿದೆ. ಭೂತಾರಾಧನೆಯ ಕುರಿತಾಗಿ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅಲ್ಲದೇ, ಅದು ಹಿಂದೂ ಸಂಸ್ಕೃತಿಯ ಭಾಗವಲ್ಲ ಎಂದು ಮಾತನಾಡಿದ್ದಾರೆ. ಈ ಕುರಿತಂತೆ ಭಜರಂಗದ ದಳದ ಕಾರ್ಯಕರ್ತ ಮಂಜುನಾಥ್ ಎನ್ನುವವರು ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸ್ (Police) ಠಾಣೆಯಲ್ಲಿ ದೂರು (Complaint) ದಾಖಲಿಸಿದ್ದಾರೆ.

    ನಟ ಚೇತನ್ ಹಿಂದೂ ದೇವರ ಹಾಗೂ ಸಂಸ್ಕೃತಿಯ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆಗಳನ್ನು ನೀಡಿದ್ದಾರೆ. ಅವರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ದಾಖಲಿಸಿದ್ದಾರೆ. ಈ ಹಿಂದೆಯೂ ಚೇತನ್ ವಿರುದ್ಧ ಪಂಜುರ್ಲಿ ದೈವಕ್ಕೆ ದೂರು ನೀಡಲು ನಿರ್ಧರಿಸಲಾಗಿತ್ತು. ಈ ಸಂಬಂಧವಾಗಿ ಉಡುಪಿಯಲ್ಲಿ ಹಿರಿಯ ದೈವರಾಧಕ ಕುಮಾರ ಪಂಪದ ಮೂಲ ಆರಾಧನೆಯ ಪಂಜುರ್ಲಿ ದೈವದ ಮುಂದೆ ಈ ಬಗ್ಗೆ ಪ್ರಾರ್ಥನೆ ಸಲ್ಲಿಸುತ್ತೇವೆ ಎಂದು ಹೇಳಿದ್ದರು. ಇದನ್ನೂ ಓದಿ:ಪುನೀತ ಪರ್ವ ಕಾರ್ಯಕ್ರಮಕ್ಕೆ ರಿಷಬ್ ಶೆಟ್ಟಿ ಗೈರು ಹಾಜರಿ : ಕ್ಷಮಿಸಿ ಅಪ್ಪು ಸರ್

    ಭೂತಕೋಲ, ದೈವಾರಾಧನೆ ಹಿಂದೂ ಸಂಸ್ಕೃತಿಯ ಭಾಗ ಎಂದು ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದ್ದರು. ಕಾಂತಾರ  (Kantara) ಸಿನಿಮಾ ರಿಲೀಸ್ ಆದ ಬೆನ್ನಲ್ಲೇ ಈ ಹೇಳಿಕೆ ಮಹತ್ವ ಪಡೆದುಕೊಂಡಿತ್ತು. ಈ ಮಾತಿಗೆ ವಿರೋಧ ಎನ್ನುವಂತೆ ನಟ ಚೇತನ್ ಸೋಷಿಯಲ್ ಮೀಡಿಯಾದಲ್ಲಿ ತಮ್ಮದೇ ಆದ ರೀತಿಯಲ್ಲಿ ಸಮರ್ಥನೆ ನೀಡಿದ್ದರು. ಭೂತಕೋಲವು ಹಿಂದೂ ಸಂಸ್ಕೃತಿಯೇ ಅಲ್ಲ ಎಂದು ವಿರೋಧಿಸಿದ್ದರು. ಈ ಕುರಿತು ಪರ ವಿರೋಧ ಚರ್ಚೆ ಕೂಡ ನಡೆದಿತ್ತು. ಇದಕ್ಕೆ ಚೇತನ್ ಮತ್ತೆ ಸ್ಪಷ್ಟನೆ ನೀಡಿದ್ದಾರೆ. ರಿಷಬ್ ಬಳಸಿದ ‘ಹಿಂದೂ ಸಂಸ್ಕೃತಿ’ ಪದಕ್ಕೆ ನನ್ನ ಆಕ್ಷೇಪಣೆ ಇದೆ ಎಂದಿದ್ದಾರೆ.

    Actor chetan (1)

    ಚೇತನ್ ಆಡಿದ ಮಾತುಗಳಿಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಶುರುವಾಗುತ್ತಿದ್ದಂತೆಯೇ ಅದಕ್ಕೆ ಸ್ಪಷ್ಟನೆ ಎನ್ನುವಂತೆ ಇಂದು ಮಾಧ್ಯಮ ಗೋಷ್ಠಿ ಕರೆದಿದ್ದರು ನಟ. ಅಲ್ಲಿಯೂ ತಾವಾಡಿದ ಮಾತಿಗೆ ಬದ್ಧರಾಗಿಯೇ ಮಾತನಾಡಿದರು. ಬುಡಕಟ್ಟು ನಮ್ಮ ಮೂಲ ಸಂಸ್ಕೃತಿ. ಇವರಿಗೆ 70 ಸಾವಿರ ವರ್ಷಕ್ಕೂ ಅಧಿಕ ಇತಿಹಾಸವಿದೆ. ಹಿಂದೂ ಧರ್ಮಕ್ಕೆ ಕೇವಲ ಮೂರುವರೆ ಸಾವಿರ ವರ್ಷ ಇತಿಹಾಸ. ದೈವಾರಾಧನೆ, ಭೂತಕೋಲ ಇವುಗಳು ಬುಡಕಟ್ಟು ಸಂಸ್ಕೃತಿಗಳು. ಅದು ಹೇಗೆ ಹಿಂದೂ ಸಂಸ್ಕೃತಿ ಆಗುತ್ತವೆ? ಎಂದು ನಿರೂಪಿಸಿದರು.

    Live Tv
    [brid partner=56869869 player=32851 video=960834 autoplay=true]

  • ದೂರು ನೀಡಲು ಹೋದವರ ಮೇಲೆಯೇ ಪೊಲೀಸರ ದೌರ್ಜನ್ಯ?

    ದೂರು ನೀಡಲು ಹೋದವರ ಮೇಲೆಯೇ ಪೊಲೀಸರ ದೌರ್ಜನ್ಯ?

    ಚಿಕ್ಕಬಳ್ಳಾಪುರ: ದೂರು ನೀಡಲು ಪೊಲೀಸ್ ಠಾಣೆಗೆ (Police Station) ಹೋದ ದೂರುದಾರನ (Complainant ) ಮೇಲೆಯೇ ಹಲ್ಲೆ ನಡೆಸಿ, ಪೊಲೀಸ್ ಅವಾಚ್ಯ ಶಬ್ದಗಳಿಂದ ನಿಂದಿಸಿ ದೌರ್ಜನ್ಯ ಎಸೆಗಿರುವ ಆರೋಪ ಕೇಳಿ ಬಂದಿದೆ.

    ಪೊಲೀಸ್ ಠಾಣೆಯಲ್ಲಿಯೇ ದೂರುದಾರ ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಠಾಣೆಯಲ್ಲಿ ನಡೆದಿದೆ. ಇದೀಗ ದೌರ್ಜನ್ಯ ಎಸಗಿದ ಪೊಲೀಸ್ ವಿರುದ್ಧವೇ ಅದೇ ಠಾಣೆಯಲ್ಲಿ ದೂರು ನೀಡಲಾಗಿದೆ. ಇದನ್ನೂ ಓದಿ: ಟೆಕ್‍ಆಫ್ ಆಗಿದ್ದ ವಿಮಾನದಲ್ಲಿ ಕಿಟಕಿ ಒದ್ದು ದಾಂಧಲೆ- ಪಾಕ್‌ ಪ್ರಯಾಣಿಕ ಅರೆಸ್ಟ್‌

    ಹೌದು, ಇದೇ ಪೊಲೀಸ್ ಠಾಣಾ ವ್ಯಾಪ್ತಿಯ ದುದ್ದನಹಳ್ಳಿ ಗ್ರಾಮದ ಯುವಕ ಹಾಗೂ ವಕೀಲ (Advocate) ನಿಖಿಲ್ ಎಂಬಾತನ ತೇಜೋವಧೆ, ಚಾರಿತ್ರ್ಯವಧೆ ಮಾಡುವ ಸಲುವಾಗಿ ಅನಾಮಿಕನೋರ್ವ ದುದ್ದನಹಳ್ಳಿ ಗ್ರಾಮದ ಸಮುದಾಯ ಭವನ, ವಾಟರ್ ಟ್ಯಾಂಕ್, ಸೇರಿದಂತೆ ಸಾರ್ವಜನಿಕರ ಸ್ಥಳಗಳಲ್ಲಿ ಗೋಡೆಗಳ ಮೇಲೆ ದೂರುದಾರ ನಿಖಿಲ್ ಹಾಗೂ ಅದೇ ಗ್ರಾಮದ ಮತ್ತೋರ್ವನ ಜೊತೆ ಮದುವೆಯಾಗಿ ಗಂಡನ ಮನೆ ಸೇರಿರುವ ಯುವತಿಗೂ ಅಕ್ರಮ ಸಂಬಂಧ ಇದೆ ಎಂಬುದಾಗಿ ಅಪಪ್ರಚಾರದ ಬರಹಗಳನ್ನು ಬರೆದಿದ್ದಾರೆ.

    ಈ ವಿಚಾರವಾಗಿ ನಿಖಿಲ್ ವಿಶ್ವನಾಥಪುರ ಪೊಲೀಸ್ ಠಾಣೆಗೆ (Viswanathpur Station) ತನ್ನ ಸಹೋದರರ ಜೊತೆ ದೂರು ನೀಡಲು ಹೋದಾಗ ದೂರು ಪಡೆಯಬೇಕಾದ ಪೊಲೀಸ್ ದೂರು ಪಡೆಯದೇ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ರಾಜ್ಯಪ್ರಶಸ್ತಿ ಪುರಸ್ಕೃತ, ಪರಿಸರ ಪ್ರೇಮಿ ಎಂದೇ ಫೇಮಸ್ ಆಗಿದ್ದ ಸಾಲುಮರದ ವೀರಾಚಾರಿ ಆತ್ಮಹತ್ಯೆಗೆ ಶರಣು

    ವಿಶ್ವನಾಥಪುರ ಪೊಲೀಸ್ ಠಾಣೆಯ (Viswanathpur Station) ಮುಖ್ಯಪೇದೆ ಪುಟ್ಟರಾಜು ವಿರುದ್ಧ ದೂರುದಾರ ನಿಖಿಲ್ ಹಾಗೂ ಸಹೋದರರು ಆರೋಪ ಮಾಡಿದ್ದಾರೆ. ಆರೋಪಕ್ಕೆ ಪುಷ್ಠಿ ನೀಡುವಂತೆ 1 ಆಡಿಯೋ ತುಣುಕು ಹಾಗೂ ವೀಡಿಯೋಗಳನ್ನ ನೀಡಿದ್ದಾರೆ. ಠಾಣೆಯಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಇಲ್ಲ. ನಾಳೆ ಬನ್ನಿ ಅಂದಾಗ, ನಾವು ಡಿಸಿ ಕಡೆಯಿಂದ ಫೋನ್ ಮಾಡಿಸೋಣ ಅಂದಿದ್ದಾರೆ. ಈ ವೇಳೆ ಪುಟ್ಟರಾಜು, ವಿಧಾನಸೌಧಕ್ಕೆ (Vidhan Soudha) ಹೋಗಿ ದೂರು ಕೊಡುವುದಾಗಿ ಹೇಳಿದ್ದಾರೆ. ಈ ವೇಳೆ ಪರಸ್ಪರರ ನಡುವೆ ಮಾತಿನ ಚಕಮಕಿ ವಾಗ್ವಾದ, ನಡೆದು ಮುಖ್ಯಪೇದೆ ಪುಟ್ಟರಾಜು ಅವಾಚ್ಯ ಪದ ಪ್ರಯೋಗ ಸಹ ಮಾಡಿದ್ದಾರೆ ಅಂತ ದೂರುದಾರರು ಆರೋಪಿಸಿದ್ದಾರೆ.

    ಇಷ್ಟೆಲ್ಲಾ ಘಟನೆ ನಂತರ ಮರುದಿನ ನಿಖಿಲ್ ನೀಡಿದ್ದ ವೈಯುಕ್ತಿಕ ಚಾರಿತ್ರ್ಯವಧೆ ಸಂಬಂಧ ದೂರನ್ನು ಪೊಲೀಸರು ದಾಖಲಿಸಿಕೊಂಡಿದ್ದು ತನಿಖೆ ಆರಂಭಿಸಿದ್ದಾರೆ. ಆದರೆ ದೂರುದಾರ ನಿಖಿಲ್ ಸದ್ಯ ಮುಖ್ಯಪೇದೆ ಪುಟ್ಟರಾಜು ವಿರುದ್ಧವೂ ದೌರ್ಜನ್ಯ ನಡೆಸಿದ ಆರೋಪದಡಿ ದೂರು ನೀಡಿದ್ದು, ಆ ದೂರು ದಾಖಲಿಸಿಕೊಂಡಿಲ್ಲ. ಹೀಗಾಗಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮುಖ್ಯಪೇದೆ (Head Constable) ಪುಟ್ಟರಾಜು ವಿರುದ್ಧ ದೂರು ನೀಡುವುದಕ್ಕೆ ದೂರುದಾರ ನಿಖಿಲ್ ಮುಂದಾಗಿದ್ದು, ಏನು ಕ್ರಮ ಕೈಗೊಳ್ಳಲಾಗುತ್ತದೆ ಎಂಬುವುದನ್ನು ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಹಿಂದೂ ದೇವರ ಅಪಹಾಸ್ಯ: ಅಜಯ್ ದೇವಗನ್ ನಟನೆಯ ‘ಥ್ಯಾಂಕ್ ಗಾಡ್’ ಸಿನಿಮಾ ನಿಷೇಧಕ್ಕೆ ಹಿಂದೂ ಜನಜಾಗೃತಿ ಸಮಿತಿ ಒತ್ತಾಯ

    ಹಿಂದೂ ದೇವರ ಅಪಹಾಸ್ಯ: ಅಜಯ್ ದೇವಗನ್ ನಟನೆಯ ‘ಥ್ಯಾಂಕ್ ಗಾಡ್’ ಸಿನಿಮಾ ನಿಷೇಧಕ್ಕೆ ಹಿಂದೂ ಜನಜಾಗೃತಿ ಸಮಿತಿ ಒತ್ತಾಯ

    ಬಾಲಿವುಡ್ ನಟ ಅಜಯ ದೇವಗನ್ (Ajay devgan)ನಟನೆಯ ‘ಥ್ಯಾಂಕ್ ಗಾಡ್’ ಸಿನಿಮಾವನ್ನು ನಿಷೇಧಿಸಬೇಕೆಂದು ಹಿಂದೂ ಜನಜಾಗೃತಿ ಸಮಿತಿ ಒತ್ತಾಯಿಸಿದೆ. ಈ ಸಿನಿಮಾದಲ್ಲಿ ಹಿಂದೂ ದೇವರನ್ನು ಅಪಹಾಸ್ಯ ಮಾಡಲಾಗಿದ್ದು, ಇಂತಹ ಚಿತ್ರಗಳನ್ನು ಸೆನ್ಸಾರ್ ಮಂಡಳಿಯವರು ಬಿಡುಗಡೆ ಮಾಡಲು ಹೇಗೆ ಅನುಮತಿ ನೀಡುತ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಟ್ರೈಲರ್ ಗೂ ಕೂಡ ಸರ್ಟಿಫಿಕೇಟ್ ನೀಡಲಾಗುತ್ತದೆ. ಈ ಸಿನಿಮಾದ ದೃಶ್ಯವನ್ನು ನೋಡುವಾಗ ಸೆನ್ಸಾರ್ ಮಂಡಳಿ ನಿದ್ದೆ ಮಾಡುತ್ತಿತ್ತೆ? ಎಂದಿದ್ದಾರೆ ಹಿಂದೂ ಜನ ಜಾಗತಿ ಸದಸ್ಯರು.

    ಬಿಡುಗಡೆಯಾದ ಟ್ರೇಲರ್ ನಲ್ಲಿ ಹಿಂದೂ ಧರ್ಮದಲ್ಲಿ ಮೃತ್ಯುವಿನ ನಂತರ ಪ್ರತಿಯೊಬ್ಬರ ಪಾಪ-ಪುಣ್ಯಗಳನ್ನು ಲೆಕ್ಕ ಹಾಕುವ ‘ಚಿತ್ರಗುಪ್ತ’ ದೇವರು ಮತ್ತು ಮೃತ್ಯುವಿನ ನಂತರ ಆತ್ಮವನ್ನು ತೆಗೆದುಕೊಂಡು ಹೋಗುವ ಯಮದೇವನನ್ನು ಆಧುನಿಕ ರೂಪದಲ್ಲಿ ತೋರಿಸಲಾಗಿದೆ. ಅವರನ್ನು ನಿಷ್ಪ್ರಯೋಜಕ ಹಾಸ್ಯದ ಮಾತುಗಳನ್ನಾಡುವಂತೆ ಚಿತ್ರಿಸಲಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಹಿಂದೂ ಧರ್ಮದ ಚಿತ್ರಗುಪ್ತ ಮತ್ತು ಯಮ ದೇವರ ಅಪಹಾಸ್ಯವನ್ನು ನಾವು ಎಂದಿಗೂ ಸಹಿಸುವುದಿಲ್ಲ ಎಂದಿದ್ದಾರೆ ಹಿಂದೂ ಜನ ಜಾಗೃತಿಯ ಸದಸ್ಯರು. ಇದನ್ನೂ ಓದಿ:ಬಂಧನದ ಭೀತಿಯಿಂದ ಕೇರಳಕ್ಕೆ ಎಸ್ಕೇಪ್ ಆದ್ರಾ ನಟಿ ಶ್ರೀಲೀಲಾ ತಾಯಿ?: ಮನೆಗೆ ಬೀಗ, ಮೊಬೈಲ್ ಆಫ್

    ನಿನ್ನೆಯಷ್ಟೇ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿ ಬಾಲಿವುಡ್ ನಟ ಅಜಯ್ ದೇವಗನ್ ಸೇರಿದಂತೆ ಮೂವರು ಮೇಲೆ ದೂರು (Complaint) ದಾಖಲಾಗಿದೆ. ಇನ್ನೆಷ್ಟೇ ರಿಲೀಸ್ ಆಗಬೇಕಿರುವ ಅಜಯ್ ದೇವಗನ್ ನಟನೆಯ ‘ಥ್ಯಾಂಕ್ ಗಾಡ್’ (Thank god) ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಅದರಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಸನ್ನಿವೇಶವಿದೆ ಎಂದು ಹಿಮಾಂಶು ಶ್ರೀವಾಸ್ತವ್ ಎನ್ನುವವರು ಹೆಚ್ಚುವರಿ ಮ್ಯಾಜಿಸ್ಟ್ರೇಟ್ ಮೋನಿಕಾ ಮಿಶ್ರಾ ಅವರ ನ್ಯಾಯಾಲದಲ್ಲಿ (Court) ಪ್ರಕರಣ ದಾಖಲಾಗಿದೆ.

    ಥ್ಯಾಂಕ್ ಗಾಡ್ ಸಿನಿಮಾದಲ್ಲಿ ಚಿತ್ರಗುಪ್ತ ದೇವರನ್ನು ಪೂಜಿಸುವ ಕಾಯಸ್ಥ ಸಮುದಾಯದ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಹಿಮಾಂಶು 9Himanshu Srivastav) ಆರೋಪ ಮಾಡಿದ್ದು, ಚಿತ್ರದ ನಟ ಅಜಯ್ ದೇವಗನ್, ಸಿದ್ಧಾರ್ಥ ಮಲ್ಹೋತ್ರಾ ಹಾಗೂ ಇಂದ್ರ ಕುಮಾರ್ ಮೇಲೆ ದೂರು ನೀಡಿದ್ದರು. ಹಿಮಾಂಶು ಅವರ ಹೇಳಿಕೆಯನ್ನು ದಾಖಲಿಸಲು ನ್ಯಾಯಾಧೀಶರು ನವೆಂಬರ್ 18 ದಿನಾಂಕ ನಿಗದಿ ಮಾಡಿದ್ದಾರೆ.

    ಅಜಯ್ ದೇವಗನ್ ಮುಖ್ಯ ಭೂಮಿಕೆಯ ಥ್ಯಾಂಕ್ ಗಾಡ್ ಸಿನಿಮಾ ತನ್ನದೇ ಆದ ಕಾರಣಗಳಿಂದಾಗಿ ಕುತೂಹಲ ಮೂಡಿಸಿದೆ. ಈಗಾಗಲೇ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಸಖತ್ ಮನರಂಜನೆ ಜೊತೆಗೆ ಒಂದೊಳ್ಳೆ ಸಂದೇಶವನ್ನು ನೀಡುವಂತಹ ಸಿನಿಮಾ ಇದಾಗಿದೆ. ಅಜಯ್ ದೇವಗನ್ ಕೂಡ ತುಂಬಾ ಚೆನ್ನಾಗಿ ನಟಿಸಿದ್ದಾರೆ. ಅಕ್ಟೋಬರ್ 25ಕ್ಕೆ ಈ ಸಿನಿಮಾ ರಿಲೀಸ್ ಆಗುತ್ತಿದ್ದು, ಅದಕ್ಕೂ ಮುನ್ನ ಟ್ರೈಲರ್ ಸದ್ದು ಮಾಡುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ‘ಥ್ಯಾಂಕ್ ಗಾಡ್’ ಚಿತ್ರದಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ: ನಟ ಅಜಯ್ ದೇವಗನ್ ವಿರುದ್ಧ ದೂರು ದಾಖಲು

    ‘ಥ್ಯಾಂಕ್ ಗಾಡ್’ ಚಿತ್ರದಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ: ನಟ ಅಜಯ್ ದೇವಗನ್ ವಿರುದ್ಧ ದೂರು ದಾಖಲು

    ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿ ಬಾಲಿವುಡ್ ನಟ ಅಜಯ್ ದೇವಗನ್ (Ajay Devgan) ಸೇರಿದಂತೆ ಮೂವರು ಮೇಲೆ ದೂರು ದಾಖಲಾಗಿದೆ. ಇನ್ನೆಷ್ಟೇ ರಿಲೀಸ್ ಆಗಬೇಕಿರುವ ಅಜಯ್ ದೇವಗನ್ ನಟನೆಯ ‘ಥ್ಯಾಂಕ್ ಗಾಡ್’ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಅದರಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಸನ್ನಿವೇಶವಿದೆ ಎಂದು ಹಿಮಾಂಶು ಶ್ರೀವಾಸ್ತವ್ ಎನ್ನುವವರು ಹೆಚ್ಚುವರಿ ಮ್ಯಾಜಿಸ್ಟ್ರೇಟ್ ಮೋನಿಕಾ ಮಿಶ್ರಾ ಅವರ ನ್ಯಾಯಾಲದಲ್ಲಿ ಪ್ರಕರಣ (Complaint)  ದಾಖಲಾಗಿದೆ.

    ಥ್ಯಾಂಕ್ ಗಾಡ್ (Thank God) ಸಿನಿಮಾದಲ್ಲಿ ಚಿತ್ರಗುಪ್ತ ದೇವರನ್ನು ಪೂಜಿಸುವ ಕಾಯಸ್ಥ ಸಮುದಾಯದ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಹಿಮಾಂಶು ಆರೋಪ ಮಾಡಿದ್ದು, ಚಿತ್ರದ ನಟ ಅಜಯ್ ದೇವಗನ್, ಸಿದ್ಧಾರ್ಥ ಮಲ್ಹೋತ್ರಾ ಹಾಗೂ ಇಂದ್ರ ಕುಮಾರ್ ಮೇಲೆ ದೂರು ನೀಡಿದ್ದರು. ಹಿಮಾಂಶು (Himanshu Srivastav) ಅವರ ಹೇಳಿಕೆಯನ್ನು ದಾಖಲಿಸಲು ನ್ಯಾಯಾಧೀಶರು ನವೆಂಬರ್ 18 ದಿನಾಂಕ ನಿಗದಿ ಮಾಡಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಟಿವಿ ಸೀಸನ್‌ನಲ್ಲಿ ಮತ್ತೆ ಪ್ರಶಾಂತ್‌ ಸಂಬರಗಿ, ಅನುಪಮಾ ಗೌಡ, ದೀಪಿಕಾ ದಾಸ್‌

    ಅಜಯ್ ದೇವಗನ್ ಮುಖ್ಯ ಭೂಮಿಕೆಯ ಥ್ಯಾಂಕ್ ಗಾಡ್ ಸಿನಿಮಾ ತನ್ನದೇ ಆದ ಕಾರಣಗಳಿಂದಾಗಿ ಕುತೂಹಲ ಮೂಡಿಸಿದೆ. ಈಗಾಗಲೇ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಸಖತ್ ಮನರಂಜನೆ ಜೊತೆಗೆ ಒಂದೊಳ್ಳೆ ಸಂದೇಶವನ್ನು ನೀಡುವಂತಹ ಸಿನಿಮಾ ಇದಾಗಿದೆ. ಅಜಯ್ ದೇವಗನ್ ಕೂಡ ತುಂಬಾ ಚೆನ್ನಾಗಿ ನಟಿಸಿದ್ದಾರೆ. ಅಕ್ಟೋಬರ್ 25ಕ್ಕೆ ಈ ಸಿನಿಮಾ ರಿಲೀಸ್ ಆಗುತ್ತಿದ್ದು, ಅದಕ್ಕೂ ಮುನ್ನ ಟ್ರೈಲರ್ ಸದ್ದು ಮಾಡುತ್ತಿದೆ.

    Live Tv
    [brid partner=56869869 player=32851 video=960834 autoplay=true]