Tag: complaint

  • ಆಂಟಿ ಅಂದ್ರೆ ಕೇಸ್ ಬೀಳತ್ತೆ: ಗರಂ ಆದ ನಟಿ ಅನಸೂಯ

    ಆಂಟಿ ಅಂದ್ರೆ ಕೇಸ್ ಬೀಳತ್ತೆ: ಗರಂ ಆದ ನಟಿ ಅನಸೂಯ

    ತೆಲುಗು ಚಿತ್ರೋದ್ಯಮದ ನಟಿ, ನಿರೂಪಕಿ ಅನಸೂಯ ಭಾರದ್ವಾಜ್ (Anasuya Bhardwaj) ಅತೀ ಹೆಚ್ಚು ಟ್ರೋಲ್ ಆಗುವ ವ್ಯಕ್ತಿಗಳ ಸಾಲಿನಲ್ಲಿ ಸದಾ ಕಾಣಿಸಿಕೊಳ್ಳುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಒಂದಿಲ್ಲೊಂದು ಪೋಸ್ಟ್ ಹಾಕುತ್ತಾ, ತಮ್ಮ ಹಿಂಬಾಲಕರಿಗೆ ಮನರಂಜನೆ ನೀಡುವ ಅನಸೂಯ, ಕೆಲವು ವಿಷಯಗಳಿಗೆ ತುಂಬಾ ಕಟ್ಟುನಿಟ್ಟು. ಅದರಲ್ಲೂ ಅಪಮಾನ ಮಾಡುವಂತಹ ಪದ ಬಳಕೆ ಮಾಡಿದರೆ, ಅವರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಈ ನಟಿ.

    ಸೋಷಿಯಲ್ ಮೀಡಿಯಾದಲ್ಲಿ ಅವರು ಪೋಸ್ಟ್ ಮಾಡುವ ಫೋಟೋಗಳಿಗೆ ಕೆಲ ದಿನಗಳಿಂದ ನೆಗೆಟಿವ್ ಕಾಮೆಂಟ್ ಬರುತ್ತಿವೆ. ಅದರಲ್ಲೂ ಕೆಲವರು ‘ಆಂಟಿ’ (Aunty) ಎಂದು ಕರೆಯುತ್ತಿದ್ದಾರೆ. ಈ ಆಂಟಿ ಪದಕ್ಕೆ ಅವರು ಗರಂ ಆಗಿದ್ದಾರೆ. ಈ ಪದವನ್ನು ಹೇಳುವುದರ ಹಿಂದಿನ ಉದ್ದೇಶದ ಬಗ್ಗೆ ಅವರು ಮಾತನಾಡಿದ್ದಾರೆ. ಈ ರೀತಿಯಲ್ಲಿ ಕರೆದರೆ ಕೇಸ್ ದಾಖಲಿಸುವುದಾಗಿಯೂ ತಿಳಿಸಿದ್ದಾರೆ. ಇದನ್ನೂ ಓದಿ: ನಟಿ ನಗ್ಮಾ ಜೊತೆಗೆ ಯಾವುದೇ ಸಂಬಂಧ ಹೊಂದಿಲ್ಲ : ನಟ ರವಿಕಿಶನ್

    ಆಂಟಿ ಎಂಬ ಪದವು ಕಿರುಕುಳದ ವ್ಯಾಪ್ತಿಗೆ ಬರುತ್ತದೆ. ಆ ರೀತಿಯಲ್ಲಿ ಕಾಮೆಂಟ್ ಮಾಡುವವರಿಗೆ ಕಾನೂನು (Complaint) ರೀತಿಯ ಕ್ರಮಕ್ಕೆ ಮುಂದಾಗುತ್ತೇನೆ. ನೀವು ಹಾಗೆ ಕರೆಯುವುದರ ಹಿಂದಿನ ಉದ್ದೇಶವನ್ನು ನಾನು ಬಲ್ಲೆ. ಹಾಗಾಗಿ ಎಚ್ಚರಿಕೆಯಿಂದ ಕಾಮೆಂಟ್ ಮಾಡಿ ಎಂದು ಹೇಳಿದ್ದಾರೆ. ಯಾರಿಗೂ ಆಂಟಿ ಅಂತ ಕರೆಯಬೇಡಿ ಎಂದು ಅವರು ಮನವಿ ಮಾಡಿದ್ದಾರೆ. ಆದರೂ, ಈ ಕಿರುಕುಳ ನಿಂತಿಲ್ಲ.

    ಕೆಲವರಂತೂ ಈ ರೀತಿ ಹೇಳಿದ ಮೇಲೆ ಇನ್ನೂ ಜಾಸ್ತಿ ಕೀಟಲೆ ಮಾಡುತ್ತಿದ್ದಾರೆ. ಬೇಕು ಅಂತಾನೇ ಅನಸೂಯ ಅವರ ಫೋಟೋಗಳನ್ನು ಹುಡುಕಿ, ಹುಡುಕಿ ಫೋಟೋಗಳು ಆಂಟಿ ಎಂದು ಬರೆದು ಪೋಸ್ಟ್ ಮಾಡುತ್ತಿದ್ದಾರೆ. ಈ ಎಲ್ಲ ನಡೆಯನ್ನೂ ತಾವು ಗಂಭೀರವಾಗಿ ತಗೆದುಕೊಳ್ಳುವುದಾಗಿ ಅನಸೂಯ ಬರೆದುಕೊಂಡಿದ್ದಾರೆ.

  • ಅಶ್ಲೀಲ ಬಟ್ಟೆ ಜೊತೆ ದೇವಿ ನಕ್ಲೇಸ್ ಧರಿಸಿದ ನಟಿ ತಾಪ್ಸಿ ಪನ್ನು : ದೂರು ದಾಖಲು

    ಅಶ್ಲೀಲ ಬಟ್ಟೆ ಜೊತೆ ದೇವಿ ನಕ್ಲೇಸ್ ಧರಿಸಿದ ನಟಿ ತಾಪ್ಸಿ ಪನ್ನು : ದೂರು ದಾಖಲು

    ಬಿಟೌನ್ ಖ್ಯಾತನಟಿ ತಾಪ್ಸಿ ಪನ್ನು (Taapsee Pannu) ವಿರುದ್ಧ ಮಧ್ಯ ಪ್ರದೇಶದ ಇಂದೋರ್ ನಲ್ಲಿ ದೂರು ದಾಖಲಾಗಿದೆ. ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಬಿ.ಜೆಪಿ ಶಾಸಕಿ ಮಾಲಿನಿ ಗೌರ್ ಪುತ್ರ ಏಕಲವ್ಯ ಸಿಂಗ್ ಗೌರ್  (Eklavya Singh Gaur) ಅವರು ನಿನ್ನೆ ಇಂದೋರ್ ನಲ್ಲಿ ದೂರು (Complaint) ದಾಖಲಿಸಿದ್ದಾರೆ.

    ನೇರ ನುಡಿ ಕಾರಣದಿಂದಾಗಿ ಆಗಾಗ್ಗೆ ವಿವಾದಕ್ಕೆ ಸಿಲುಕಿಕೊಳ್ಳುವ ತಾಪ್ಸಿ ಪನ್ನು ಈ ಬಾರಿ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎನ್ನುವ ಆರೋಪಕ್ಕೆ ತುತ್ತಾಗಿದ್ದಾರೆ. ಎದೆ ಸೀಳು ಕಾಣಿಸುವ ರೀತಿಯಲ್ಲಿ ಬಟ್ಟೆ ಧರಿಸಿರುವ ಅವರು ಆ ಬಟ್ಟೆಯ ಮೇಲೆ ಲಕ್ಷ್ಮೀ ಚಿತ್ರ ಇರುವ ನಕ್ಲೇಸ್ (Devi Necklace) ಧರಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಇದನ್ನೂ ಓದಿ:ಅಂಬಿ ಸ್ಮಾರಕ ಲೋಕಾರ್ಪಣೆ, ಸುಮಲತಾ ಅಂಬರೀಶ್ ಕಣ್ಣೀರು

    ಮುಂಬೈನಲ್ಲಿ ನಡೆದ ಫ್ಯಾಷನ್ ವೀಕ್ ನಲ್ಲಿ ಭಾಗಿಯಾಗಿದ್ದ ತಾಪ್ಸಿ, ರಾಂಪ್ ವಾಕ್ ಮಾಡಿದ್ದರು. ಕೆಂಪು ಬಣ್ಣದ ಗೌನ್ ಧರಿಸಿದ್ದ ಅವರು ಆ ಕಾಸ್ಟ್ಯೂಮ್ ನೊಂದಿಗೆ ಲಕ್ಷ್ಮಿ ಚಿತ್ರ ಇರುವ ನಕ್ಲೇಸ್ ಹಾಕಿಕೊಂಡಿದ್ದರು. ಈ ಫೋಟೋ ಸಾಕಷ್ಟು ಟ್ರೋಲ್ ಕೂಡ ಆಗಿತ್ತು. ನೆಟ್ಟಿಗರು ಕೂಡ ತರಾಟೆಗೆ ತಗೆದುಕೊಂಡಿದ್ದರು. ಅಶ್ಲೀಲ ಬಟ್ಟೆ ಜೊತೆ ಲಕ್ಷ್ಮೀ ಧರಿಸುವುದು ಶೋಭೆ ಅಲ್ಲಅಂತ ಕಾಮೆಂಟ್ ಕೂಡ ಮಾಡಿದ್ದರು.

    ತಾಪ್ಸಿ ಪನ್ನು ಹಾಕಿದ್ದ ಬಟ್ಟೆಯನ್ನು ಕಂಡು ಹಲವರು ಗರಂ ಕೂಡ ಆಗಿದ್ದರು. ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ  ಹಿಂದ್ ರಕ್ಷಕ್ ಸಂಘಟನೆಯ ಏಕಲವ್ಯ ಸಿಂಗ್ ಗೌರ ಮಾರ್ಚ್ 27ರಂದು ಇಂದೋರ್ ನಲ್ಲಿ ದೂರು ದಾಖಲಿಸುವ ಮೂಲಕ ಕಾನೂನು ಕ್ರಮಕ್ಕಾಗಿ ಆಗ್ರಹಿಸಿದ್ದಾರೆ.

  • ಪತ್ನಿ ತಡವಾಗಿ ಏಳುತ್ತಾಳೆ – ಪತಿಯಿಂದ ಪೊಲೀಸರಿಗೆ ದೂರು

    ಪತ್ನಿ ತಡವಾಗಿ ಏಳುತ್ತಾಳೆ – ಪತಿಯಿಂದ ಪೊಲೀಸರಿಗೆ ದೂರು

    ಬೆಂಗಳೂರು: ಪತ್ನಿ ಬೆಳಗ್ಗೆ ತಡವಾಗಿ ಏಳುತ್ತಾಳೆ ಎಂದು ಪತಿಯೊಬ್ಬ (Husband) ತನ್ನ ಪತ್ನಿ (Wife) ವಿರುದ್ಧ ವಿಚಿತ್ರ ದೂರನ್ನು (Complaint) ನಿಡಿದ ಪ್ರಕರಣ ಬಸವನಗುಡಿ (Basavanagudi) ಪೊಲೀಸ್ ಠಾಣೆಯಲ್ಲಿ ನಡೆದಿದೆ. ಕಮ್ರಾನ್ ಖಾನ್ ಎಂಬಾತ ತನ್ನ ಪತ್ನಿ ಆಯೇಷಾ ಕಳೆದ ಐದು ವರ್ಷಗಳಿಂದಲೂ ನನಗೆ ಹಿಂಸೆ ನೀಡುತಿದ್ದಾಳೆ ಎಂದು ಪೊಲೀಸರ ಮುಂದೆ ಅಳಲು ತೋಡಿಕೊಂಡಿದ್ದಾನೆ.

    ರಾತ್ರಿ ಮಲಗಿದರೆ ಮಧ್ಯಾಹ್ನ 12:30ಕ್ಕೆ ಏಳುತ್ತಾಳೆ. ಮತ್ತೆ ಸಂಜೆ 5:30ಕ್ಕೆ ಮಲಗಿ ರಾತ್ರಿ 9:30ರ ತನಕ ನಿದ್ರೆ ಮಾಡುತ್ತಾಳೆ. ಅಡುಗೆ ಕೂಡ ಮಾಡುವುದಿಲ್ಲ. ನನ್ನ ತಾಯಿಗೆ ಅನಾರೋಗ್ಯವಿದೆ, ಆದರೂ ತಾಯಿಯೇ ಮನೆಯಲ್ಲಿ ಅಡುಗೆ ಮಾಡಬೇಕು. ಪ್ರಶ್ನೆ ಮಾಡಿದರೆ ಬೆದರಿಕೆ ಹಾಕುತ್ತಾಳೆ. ತವರು ಮನೆಯವರನ್ನು ಕರೆಸಿ ಗಲಾಟೆ ಮಾಡುತ್ತಾಳೆ ಎಂದು ಎಂದು ಪತಿ ಆರೋಪಿಸಿದ್ದಾನೆ. ಇದನ್ನೂ ಓದಿ: ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನ- ಗ್ಯಾಂಗ್ ಲೀಡರ್ ಮೇಲೆ ಫೈರಿಂಗ್

    ಹುಟ್ಟು ಹಬ್ಬಕ್ಕೆ 25 ಜನರನ್ನ ಮನೆಗೆ ಆಹ್ವಾನಿಸಿ ನನ್ನ ಮೇಲೆ ಹಲ್ಲೆ ನಡೆಸಿದ್ದಾಳೆ. ಅವಳಿಗೆ ನನ್ನ ಮೇಲೆ ಪ್ರೀತಿ ಇಲ್ಲ. ತನ್ನ ಆಸ್ತಿ ಲಪಟಾಯಿಸಲು ಹಾಗೂ ರಾಯಲ್ ಲೈಫ್ ಅನುಭವಿಸಲು ನನ್ನನ್ನು ಮದುವೆಯಾಗಿ ಚಿತ್ರಹಿಂಸೆ ನೀಡುತ್ತಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದಾನೆ.

    ಪತ್ನಿಗೆ ಮದುವೆ (Marriage) ಮುಂಚೆಯೇ ಖಾಯಿಲೆಗಳಿದ್ದವು. ಅದನ್ನು ಮರೆಮಾಚಿ ಮದುವೆ ಮಾಡಿಸಿದ್ದಾರೆ. ಪತ್ನಿಯಿಂದ ಹಾಗೂ ಆಕೆಯ ಕುಟುಂಬದಿಂದ ನರಕಯಾತನೆಯಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿದ್ದಾನೆ. ಇದನ್ನೂ ಓದಿ: ನನ್ನ ಪತ್ನಿಯನ್ನು ಹುಡುಕಿಕೊಡಿ- ಬೆಂಗಳೂರು ಪೊಲೀಸರಿಗೆ ಛತ್ತಿಸ್‌ಗಢ ವ್ಯಕ್ತಿ ದೂರು 

  • ಮಾಜಿ ಪ್ರಿಯಕರನಿಂದ ನಟಿ ಮೇಲೆ ಮಾರಣಾಂತಿಕ ಹಲ್ಲೆ: ಫೋಟೋ ಶೇರ್ ಮಾಡಿದ ಅನಿಕಾ

    ಮಾಜಿ ಪ್ರಿಯಕರನಿಂದ ನಟಿ ಮೇಲೆ ಮಾರಣಾಂತಿಕ ಹಲ್ಲೆ: ಫೋಟೋ ಶೇರ್ ಮಾಡಿದ ಅನಿಕಾ

    ಟಿ ಅನಿಕಾ ವಿಜಯ್ ವಿಕ್ರಮನ್ (Anika Vijay Vikraman) ಮೇಲೆ ಮಾಜಿ ಪ್ರಿಯಕರ ಅನೂಪ್ ಪಿಳ್ಳೈ (Anoop Pillai) ಮಾರಣಾಂತಿಕ ಹಲ್ಲೆ (Assault) ಮಾಡಿದ್ದಾರೆ. ಮುಖ, ಕಣ್ಣುಗಳಿಗೆ ಗುದ್ದಿ ಗಾಯಗೊಳಿಸಿದ್ದಾನೆ. ರಕ್ತಸಿಕ್ತ ಮುಖದ ಫೋಟೋವನ್ನು ನಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಕ್ರೂರ ಪ್ರಿಯಕರನ ಬಗ್ಗೆ ಬರೆದುಕೊಂಡಿದ್ದಾರೆ. ಅನುಭವಿಸಿದ ಯಾತನೆಯನ್ನು ಇಂಚಿಂಚಾಗಿ ಹೇಳಿಕೊಂಡಿದ್ದಾರೆ.

    ಸೋಷಿಯಲ್ ಮೀಡಿಯಾದಲ್ಲಿ ಕ್ರೂರವಾಗಿ ಥಳಿಸಿರುವ ಮಾಜಿ ಪ್ರಿಯಕರನ ಬಗ್ಗೆ ಬರೆದುಕೊಂಡಿದ್ದು, ‘ನಾನು ಅವನು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದೆವು. ಅವನು ಹಲವು ತಿಂಗಳಿಂದ ದೈಹಿಕ ಮತ್ತು ಮಾನಸಿಕವಾಗಿ ಸಾಕಷ್ಟು ತೊಂದರೆ ಕೊಡುತ್ತಲೇ ಬಂದ. ಈಗಾಗಲೇ ಎರಡು ಬಾರಿ ಥಳಿಸಿದ್ದಾನೆ. ಜೀವ ಬೆದರಿಕೆ ಹಾಕಿದ್ದಾನೆ. ನನ್ನ ಜೀವನದಲ್ಲಿ ಇಂಥದ್ದೊಂದು ಘಟನೆ ನಡೆಯುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ. ಪೊಲೀಸರು ಕೂಡ ಅವನಿಗೆ ಸಹಕರಿಸುತ್ತಿದ್ದಾರೆ’ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಹುಟ್ಟುಹಬ್ಬದ ದಿನವೇ ಸಿಹಿಸುದ್ದಿ ಹಂಚಿಕೊಂಡ ಜಾನ್ವಿ ಕಪೂರ್

    ಈ ಕುರಿತು ಬೆಂಗಳೂರು (Bangalore) ಪೊಲೀಸರಿಗೆ ದೂರು (Complaint)  ನೀಡಿರುವ ಅವರು, ‘ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ, ಅವನಿಂದ ದೂರ ಇರು ಎಂದು ನನಗೆ ಸಲಹೆ ನೀಡಿದರು. ಅವನು ಪೊಲೀಸರಿಗೂ ಹಣ ಕೊಟ್ಟಿದ್ದಾನೆ. ಹಾಗಾಗಿ ಮತ್ತೆ ಮತ್ತೆ ಅವನು ನನ್ನ ಮೇಲೆ ಹಲ್ಲೆ ಮಾಡುತ್ತಿದ್ದಾನೆ’ ಎಂದು ಬೆಂಗಳೂರು ಪೊಲೀಸರ ಮೇಲೂ ಅನಿಕಾ ದೂರಿದ್ದಾರೆ. ಈ ಅನಿಕಾ ಒಂದಷ್ಟು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಪ್ರಿಯಕರನ ವಿರುದ್ಧದ ಕ್ರಮಕ್ಕೆ ಅನೇಕರು ಆಗ್ರಹಿಸಿದ್ದಾರೆ.

    ಅವನಿಂದ ಮೋಸವಾಗುತ್ತಿದೆ ಎಂದು ಗೊತ್ತಾದಾಗ ಪ್ರಿಯಕರನಿಂದ ದೂರವಾದರಂತೆ ಅನಿಕಾ. ಆದರೂ, ಅವನು ಮಾತ್ರ ದೂರವಾಗಲಿಲ್ಲವಂತೆ. ಅನುಮಾನ ಪಡುವುದು, ವಾಟ್ಸಪ್ ಪರಿಶೀಲಿಸುವುದು, ಅನುಮಾನ ಪಡುವ ರೀತಿಯಲ್ಲಿ ಪ್ರಶ್ನೆ ಮಾಡುವುದು ಹೀಗೆ ನಿರಂತರವಾಗಿ ಕಿರುಕುಳ ಕೊಡುತ್ತಾ ಬಂದಿದ್ದಾನೆ ಎಂದು ಅವರು ಹೇಳಿಕೊಂಡಿದ್ದಾರೆ.

  • ನಟ ನವಾಜುದ್ದೀನ್ ಸಿದ್ದಿಕಿ ವಿರುದ್ಧ ರೇಪ್ ಕೇಸ್ ದಾಖಲಿಸಿದ ಪತ್ನಿ

    ನಟ ನವಾಜುದ್ದೀನ್ ಸಿದ್ದಿಕಿ ವಿರುದ್ಧ ರೇಪ್ ಕೇಸ್ ದಾಖಲಿಸಿದ ಪತ್ನಿ

    ಬಾಲಿವುಡ್ ಖ್ಯಾತ ನಟ ನವಾಜುದ್ದೀನ್ ಸಿದ್ದಿಕಿ (Nawazuddin Siddiqui) ಮತ್ತು ಪತ್ನಿ ಆಲಿಯಾ (Alia) ನಡುವಿನ ಗಲಾಟೆ ಹೊಸದೇನೂ ಅಲ್ಲ. ಆ ಜಗಳಕ್ಕೆ ಇದೀಗ ಹೊಸ ತಿರುವು ಸಿಕ್ಕಿದ್ದು, ಸ್ವತಃ ಗಂಡನ ವಿರುದ್ಧವೇ ನಟನ ಪತ್ನಿ ಆಲಿಯಾ ರೇಪ್ (Rape) ಕೇಸ್ ದಾಖಲಿಸಿದ್ದಾರೆ. ಈ ಕುರಿತು ಅವರು ಸಾಮಾಜಿಕ ಜಾಲತಾಣದಲ್ಲಿ ಹಲವು ವಿಚಾರಗಳನ್ನೂ ಹಂಚಿಕೊಂಡಿದ್ದಾರೆ. ತಮ್ಮ ಹಿಂದಿನ ದಿನಗಳನ್ನು ನೆನಪಿಸಿಕೊಂಡು ಕಣ್ಣೀರು ಹಾಕಿದ್ದಾರೆ.

    ನವಾಜುದ್ದೀನ್ ಸಿದ್ದಿಕಿ ಕುಟುಂಬ ತಮ್ಮ ಮೇಲೆ ಸತತವಾಗಿ ಹಲ್ಲೆ ಮಾಡಿದೆ. ಊಟ, ನೀರು ಕೊಡದೇ ಹಿಂಸಿಸಿದೆ ಎಂದು ಈ ಹಿಂದೆ ಮಾಧ್ಯಮಗಳ ಜೊತೆ ತಮ್ಮ ನೋವುಗಳನ್ನು ಹೇಳಿಕೊಂಡಿದ್ದರು ಆಲಿಯಾ. ಇದೀಗ ತಮ್ಮ ಮೇಲೆ ನವಾಜ್ ಅತ್ಯಾಚಾರ ಮಾಡಿದ್ದಾರೆ ಎಂದು ಅವರು ಪೊಲೀಸ್ ದೂರು ದಾಖಲಿಸಿದ್ದಾರೆ. ತಮ್ಮನ್ನು ಮನೆಯಿಂದ ಆಚೆ ಹಾಕಲು ಏನೆಲ್ಲ ತಂತ್ರಗಳನ್ನು ಅವರು ಹೂಡಿದ್ದರು ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ನಾನೇನು ಖಾಸಗಿ ಭಾಗಗಳನ್ನ ತೋರಿಸುತ್ತಿಲ್ಲ; ನೀವೇಕೆ ವರಿ ಮಾಡ್ತೀರಿ – ನೆಟ್ಟಿಗರ ವಿರುದ್ಧ ಸಿಡಿದ ಉರ್ಫಿ

    ತಮ್ಮ ಮಕ್ಕಳನ್ನು ನವಾಜುದ್ದೀನ್ ಕರೆದುಕೊಂಡು ಹೋಗಲು ಪ್ರಯತ್ನಿಸುತ್ತಿದ್ದಾರೆ. ಸಮಾಜದ ಮುಂದೆ ತಾವು ಮಹಾನ್ ವ್ಯಕ್ತಿ ಎಂದು ತೋರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅತಿ ಹಿಂಸೆಯನ್ನೂ ನನಗೆ ನೀಡಿದ್ದಾರೆ. ಹಾಗಾಗಿ ನಾನು ವರ್ಸೋವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ಯಾವುದೇ ಕಾರಣಕ್ಕೂ ನನ್ನ ಮಕ್ಕಳನ್ನು ಅವನಿಗೆ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ ಎಂದು ಅವರು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

    ಈಗಾಗಲೇ ತಮ್ಮ ಮಕ್ಕಳನ್ನು ತಮಗೆ ಕೊಡಬೇಕು ಎಂದು ನವಾಜುದ್ದೀನ್ ಕೋರ್ಟ್ ಮೊರೆ ಹೋಗಿದ್ದಾರೆ. ಈ ಕುರಿತು ಆಲಿಯಾ ಮಾತನಾಡಿದ್ದು, ಹುಟ್ಟಿದಾಗಿಂದ ಈವರೆಗೂ ಮಕ್ಕಳ ಬಗ್ಗೆ ಕಾಳಜಿ ತೋರಿಸದೇ ಇರುವವನು, ಈಗೇಕೆ ಇಷ್ಟೊಂದು ಪ್ರೀತಿ ಬಂದಿದೆ ಎಂದು ಅರ್ಥವಾಗುತ್ತಿಲ್ಲ. ನನ್ನಿಂದ ಯಾವುದೇ ಕಾರಣಕ್ಕೂ ಮಕ್ಕಳನ್ನು ದೂರ ಮಾಡುವುದಕ್ಕೆ ಆಗುವುದಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

  • ಗಾಯಕ ಸೋನು ನಿಗಮ್ ಹಲ್ಲೆ ಘಟನೆ : ಕ್ಷಮೆ ಕೇಳಿದ ಸುಪ್ರದಾ ಫತೇರ್ ಪೇಕರ್

    ಗಾಯಕ ಸೋನು ನಿಗಮ್ ಹಲ್ಲೆ ಘಟನೆ : ಕ್ಷಮೆ ಕೇಳಿದ ಸುಪ್ರದಾ ಫತೇರ್ ಪೇಕರ್

    ಗಾಯಕ ಸೋನು ನಿಗಮ್ (Sonu Nigam) ಮೇಲಿನ ಹಲ್ಲೆಯನ್ನು ನಾನೂ ಒಪ್ಪಲಾರೆ. ಯಾರ ಮೇಲೂ ಯಾರೂ  ಕೈ ಮಾಡಬಾರದು. ಇಂಥದ್ದೊಂದು ಘಟನೆ ನಡೆಯಬಾರದಿತ್ತು. ನಡೆದಿರುವುದಕ್ಕೆ ವಿಷಾದವಿದೆ. ನನ್ನ ಕುಟುಂಬದ ಸದಸ್ಯನಿಂದ ಆದ ಹಲ್ಲೆಗೆ ಕ್ಷಮೆ ಕೇಳುವುದಾಗಿ ಶಾಸಕ ಪ್ರಕಾಶ್ ಫತೇರ್ ಪೇಕರ್ ಸಹೋದರಿ ಸುಪ್ರದಾ ತಿಳಿಸಿದ್ದಾರೆ.

    ಬಾಲಿವುಡ್ ಖ್ಯಾತ ಗಾಯಕ ಸೋನು ನಿಗಮ್ ಮೇಲೆ ಹಲ್ಲೆಯಾದ ‍ಘಟನೆ ನಿನ್ನೆ ನಡೆದಿತ್ತು. ಮಹಾರಾಷ್ಟ್ರದ (Maharashtra) ರಾಜಧಾನಿ ಮುಂಬೈನ ಚೆಂಬೂರಿನಲ್ಲಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮದಲ್ಲಿ ಸೋನು ನಿಗಮ್ ಭಾಗಿಯಾಗಿದ್ದರು. ಇದೇ ಕಾರ್ಯಕ್ರಮದಲ್ಲೇ ಉದ್ದವ್ ಠಾಕ್ರೆ ಬಣದ ಶಾಸಕ ಪ್ರಕಾಶ್ ಫತೇರ್ ಪೇಕರ್ (,  Prakash Fateh Pekar) ಅವರ ಪುತ್ರ ಕೂಡ ಪಾಲ್ಗೊಂಡಿದ್ದರು. ಸೆಲ್ಫಿ ತಗೆಯುವ ವಿಚಾರವಾಗಿ ಗಲಾಟೆ ನಡೆದಿದೆ. ಇದನ್ನೂ ಓದಿ: 150 ಕೋಟಿ ಮೌಲ್ಯದ ಹೊಸ ಮನೆಯನ್ನು ಪೋಷಕರಿಗೆ ಗಿಫ್ಟ್ ನೀಡಿದ ಧನುಷ್

    ಸೋನು ನಿಗಮ್ ಜೊತೆ ಸೆಲ್ಫಿಗಾಗಿ ಬಂದ ಶಾಸಕನ ಮಗನನ್ನು ಸೋನು ಅಂಗರಕ್ಷಕರು ತಳ್ಳಿದ್ದಾರೆ. ಈ ತಳ್ಳಾಟದಲ್ಲಿ ಶಾಸಕನ ಮಗನು ವೇದಿಕೆಯಿಂದ ಕೆಳಗೆ ಬಿದ್ದ ಎಂದು ಹೇಳಲಾಗುತ್ತಿದೆ. ರೊಚ್ಚಿಗೆದ್ದ ಹುಡುಗನು ವೇದಿಕೆಯಿಂದ ಕೆಳಗೆ ಇಳಿಯುತ್ತಿದ್ದ ಸೋನು ನಿಗಮ್ ಅವರನ್ನು ಹಿಡಿದೆಳೆದಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಕುರಿತು ಸೋನು ನಿಗಮ್ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ.

     

    ಸೋನು ಬರೆದ ದೂರಿನಲ್ಲಿ (Complaint) ‘ನಾವು ಕಾರ್ಯಕ್ರಮ ಮುಗಿಸಿಕೊಂಡು ವೇದಿಕೆಯಿಂದ ಕೆಳಗೆ ಇಳಿಯುತ್ತಿದ್ದೆವು. ಮೊದಲು ಆ ಹುಡುಗ ನನ್ನ ತಂಡದೊಂದಿಗೆ ಗಲಾಟೆಗೆ ಇಳಿದ. ತಳ್ಳಾಟ ಶುರುವಾಯಿತು. ನನ್ನನ್ನು ಆ ಹುಡುಗ ಕೋಪದಿಂದ ತಳ್ಳಿದ. ನಾನು ವೇದಿಕೆಯ ಮೆಟ್ಟಿಲುಗಳಿಂದ ಜಾರಿದೆ’ ಎಂದು ಬರೆದಿದ್ದಾರೆ.  ಸದ್ಯ ದೂರು ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಟ ಪ್ರವೀಣ್ ತೇಜ ಕಾರಿನ ಗಾಜು ಪುಡಿಪುಡಿ : ಹಲ್ಲೆ ಮಾಡಿದವನ ವಿರುದ್ಧ ದೂರು

    ನಟ ಪ್ರವೀಣ್ ತೇಜ ಕಾರಿನ ಗಾಜು ಪುಡಿಪುಡಿ : ಹಲ್ಲೆ ಮಾಡಿದವನ ವಿರುದ್ಧ ದೂರು

    ಚೂರಿಕಟ್ಟೆ ಸೇರಿದಂತೆ ಕನ್ನಡದ ಅನೇಕ ಚಿತ್ರಗಳಲ್ಲಿ ನಾಯಕನಾಗಿ ನಟಿಸಿರುವ ಪ್ರವೀಣ್ ತೇಜ (Praveen Tej) ಮೇಲೆ ಹಲ್ಲೆಯಾದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ತಮ್ಮ ಮೇಲೆ ದಿಲೀಪ್ (Dileep) ಎನ್ನುವವ ಹಲ್ಲೆ ಮಾಡಿ, ದುಬಾರಿ ಕಾರಿನ ಗಾಜನ್ನು ಪುಡಿ ಪುಡಿ ಮಾಡಿದ್ದಾನೆ. ಜೊತೆಗೆ ತಮ್ಮ ಕುಟುಂಬಕ್ಕೆ ಪ್ರಾಣ ಬೆದರಿಕೆ ಹಾಕಿದ್ದಾನೆ ಎಂದು ಪ್ರವೀಣ್ ಕೋಣನಕುಂಟೆ  (Konanakunte) ಠಾಣೆಗೆ (Police) ದೂರು (Complaint) ನೀಡಿದ್ದಾರೆ. ದಿಲೀಪ್ ವಿರುದ್ಧ ಕ್ರಮ ತಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.

    ಫೆಬ್ರವರಿ 12 ರಂದು ಬನ್ನೇರುಘಟ್ಟ ರಸ್ತೆಯಲ್ಲಿರುವ ಗೆಳೆಯನ ಅಪಾರ್ಟ್ ಮೆಂಟ್ ನಲ್ಲಿ ನಡೆಯುತ್ತಿದ್ದ ಹುಟ್ಟು ಹಬ್ಬದಲ್ಲಿ ಪ್ರವೀಣ್ ಪಾಲ್ಗೊಂಡಿದ್ದಾರೆ. ಈ ಸಮಯದಲ್ಲಿ ದಿಲೀಪ್ ಎಂಬ ಪರಿಚಿತನೊಬ್ಬನಿಂದ ಗಲಾಟೆ ಶುರುವಾಗಿದೆ. ಪ್ರವೀಣ್ ಅವರ ವೃತ್ತಿಯ ಬಗ್ಗೆ ದಿಲೀಪ್ ಕೆಟ್ಟದ್ದಾಗಿ ಮಾತನಾಡಿದ್ದಾನಂತೆ. ಮಾತಿಗೆ ಮಾತು ಬೆಳೆದು ಅದು ಹೊಡೆದಾಟದ ಹಂತಕ್ಕೆ ತಲುಪಿದೆ. ಪ್ರವೀಣ್ ಮೇಲೆ ದೈಹಿಕ ಹಲ್ಲೆಯಾಗಿದ್ದು, ಕುತ್ತಿಗೆ ಭಾಗದಲ್ಲಿ ಗಾಯಗಳಾಗಿವೆ ಎಂದು ದೂರಿನಲ್ಲಿ ಬರೆಯಲಾಗಿದೆ. ಇದನ್ನೂ ಓದಿ: 150 ಕೋಟಿ ಮೌಲ್ಯದ ಹೊಸ ಮನೆಯನ್ನು ಪೋಷಕರಿಗೆ ಗಿಫ್ಟ್ ನೀಡಿದ ಧನುಷ್

    ಘಟನೆಯಿಂದ ನೊಂದಿದ್ದ ಪ್ರವೀಣ್ ಆ ರಾತ್ರಿ ಅದೇ ಅಪಾರ್ಟ್ ಮೆಂಟ್ ನಲ್ಲಿ ಉಳಿದುಕೊಂಡಿದ್ದಾರೆ. ಬೆಳಗ್ಗೆ ಮನೆಗೆ ಹೊರಡಲು ಕಾರು ಬಳಿ ಬಂದರೆ ಕಾರಿನ ಗ್ಲಾಸ್ ಗಳನ್ನು ಹೊಡೆದು ಹಾಕಲಾಗಿತ್ತು. ಸಿಸಿ ಟಿವಿ ಪರಿಶೀಲನೆ ಮಾಡಿದಾಗ ದಿಲೀಪ್ ಅವರೇ ಕಾರಿನ ಗಾಜು ಒಡೆದಿದ್ದಾರೆ ಎನ್ನುವುದು ಗೊತ್ತಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

    ‘ಹೊಂದಿಸಿ ಬರೆಯಿರಿ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಪ್ರವೀಣ್ ತೇಜ್, ಈವರೆಗೂ ಯಾವುದೇ ಗಲಾಟೆ ಅಥವಾ ಗಾಸಿಪ್ ಗಳಲ್ಲಿ ಕಾಣಿಸಿಕೊಂಡಿಲ್ಲ. ಇದೇ ಮೊದಲ ಬಾರಿಗೆ ಅವರು ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸ್, ಸೂಕ್ತ ಕ್ರಮದ ಭರವಸೆ ನೀಡಿದ್ದಾರಂತೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಶಾಸಕನ ಪುತ್ರನಿಂದ ಗಾಯಕ ಸೋನು ನಿಗಮ್ ಮೇಲೆ ಹಲ್ಲೆ : ದೂರು ದಾಖಲು

    ಶಾಸಕನ ಪುತ್ರನಿಂದ ಗಾಯಕ ಸೋನು ನಿಗಮ್ ಮೇಲೆ ಹಲ್ಲೆ : ದೂರು ದಾಖಲು

    ಬಾಲಿವುಡ್ ಖ್ಯಾತ ಗಾಯಕ ಸೋನು ನಿಗಮ್ ಮೇಲೆ ಹಲ್ಲೆಯಾದ ‍ಘಟನೆ ನಿನ್ನೆ ನಡೆದಿದೆ. ಮಹಾರಾಷ್ಟ್ರದ ರಾಜಧಾನಿ ಮುಂಬೈನ ಚೆಂಬೂರಿನಲ್ಲಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮದಲ್ಲಿ ಸೋನು ನಿಗಮ್ ಭಾಗಿಯಾಗಿದ್ದರು. ಇದೇ ಕಾರ್ಯಕ್ರಮದಲ್ಲೇ ಉದ್ದವ್ ಠಾಕ್ರೆ ಬಣದ ಶಾಸಕ ಪ್ರಕಾಶ್ ಫತೇರ್ ಪೇಕರ್ ಅವರ ಪುತ್ರ ಕೂಡ ಪಾಲ್ಗೊಂಡಿದ್ದರು. ಸೆಲ್ಫಿ ತಗೆಯುವ ವಿಚಾರವಾಗಿ ಗಲಾಟೆ ನಡೆದಿದೆ.

    ಸೋನು ನಿಗಮ್ ಜೊತೆ ಸೆಲ್ಫಿಗಾಗಿ ಬಂದ ಶಾಸಕನ ಮಗನನ್ನು ಸೋನು ಅಂಗರಕ್ಷಕರು ತಳ್ಳಿದ್ದಾರೆ. ಈ ತಳ್ಳಾಟದಲ್ಲಿ ಶಾಸಕನ ಮಗನು ವೇದಿಕೆಯಿಂದ ಕೆಳಗೆ ಬಿದ್ದ ಎಂದು ಹೇಳಲಾಗುತ್ತಿದೆ. ರೊಚ್ಚಿಗೆದ್ದ ಹುಡುಗನು ವೇದಿಕೆಯಿಂದ ಕೆಳಗೆ ಇಳಿಯುತ್ತಿದ್ದ ಸೋನು ನಿಗಮ್ ಅವರನ್ನು ಹಿಡಿದೆಳೆದಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಕುರಿತು ಸೋನು ನಿಗಮ್ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ. ಇದನ್ನೂ ಓದಿ: ಅಯ್ಯಂಗಾರ್‌ ಸಂಪ್ರದಾಯದಂತೆ ನಿರ್ದೇಶಕ ಎಸ್.ಕೆ ಭಗವಾನ್ ಅಂತ್ಯಕ್ರಿಯೆ

    ಸೋನು ಬರೆದ ದೂರಿನಲ್ಲಿ ‘ನಾವು ಕಾರ್ಯಕ್ರಮ ಮುಗಿಸಿಕೊಂಡು ವೇದಿಕೆಯಿಂದ ಕೆಳಗೆ ಇಳಿಯುತ್ತಿದ್ದೆವು. ಮೊದಲು ಆ ಹುಡುಗ ನನ್ನ ತಂಡದೊಂದಿಗೆ ಗಲಾಟೆಗೆ ಇಳಿದ. ತಳ್ಳಾಟ ಶುರುವಾಯಿತು. ನನ್ನನ್ನು ಆ ಹುಡುಗ ಕೋಪದಿಂದ ತಳ್ಳಿದ. ನಾನು ವೇದಿಕೆಯ ಮೆಟ್ಟಿಲುಗಳಿಂದ ಜಾರಿದೆ’ ಎಂದು ಬರೆದಿದ್ದಾರೆ.  ಸದ್ಯ ದೂರು ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪವಿತ್ರಾ ಲೋಕೇಶ್ ಗೆಳೆತನ : ಮತ್ತೆ ಪೊಲೀಸ್ ಠಾಣೆ ಮೆಟ್ಟಿಲು ಏರಿದ ನರೇಶ್

    ಪವಿತ್ರಾ ಲೋಕೇಶ್ ಗೆಳೆತನ : ಮತ್ತೆ ಪೊಲೀಸ್ ಠಾಣೆ ಮೆಟ್ಟಿಲು ಏರಿದ ನರೇಶ್

    ನ್ನಡದ ನಟಿ ಪವಿತ್ರಾ ಲೋಕೇಶ್ (Pavithra Lokesh) ವಿಷಯದಲ್ಲಿ ಮತ್ತೆ ಗರಂ ಆಗಿದ್ದಾರೆ ತೆಲುಗು ನಟ ನರೇಶ್ (Naresh). ‘ನಾವಿಬ್ಬರೂ ಏನಾದರೂ ಮಾಡ್ಕೊಳ್ತಿವಿ. ಅದನ್ನು ಕೇಳೋಕೆ ನೀವ್ಯಾರು?’ ಎಂದು ಸಾರ್ವಜನಿಕವಾಗಿಯೇ ಪ್ರಶ್ನೆ ಮಾಡಿದ್ದು, ತಮ್ಮ ಮತ್ತು ಪವಿತ್ರಾ ಲೋಕೇಶ್ ಸಂಬಂಧಕ್ಕೆ ಚ್ಯುತಿ ತರುತ್ತಿರುವವರ ಬಗ್ಗೆ ಪೊಲೀಸ್ (police) ಠಾಣೆ ಮೆಟ್ಟಿಲು ಏರಿದ್ದಾರೆ. ಕಾನೂನು ಮೂಲಕವೇ ಅವರಿಗೆಲ್ಲ ಉತ್ತರ ಕೊಡುವುದಾಗಿ ಅಬ್ಬರಿಸಿದ್ದಾರೆ.

    ಪವಿತ್ರಾ ಲೋಕೇಶ್ ಮತ್ತು ನರೇಶ್ ಬಗ್ಗೆ ಕೆಲವರು ರಸವತ್ತಾಗಿ ಕಥೆಗಳನ್ನು ಕಟ್ಟಿ ಹೇಳುತ್ತಿದ್ದಾರಂತೆ. ಕೆಟ್ಟದ್ದಾಗಿ ಟ್ರೋಲ್ ಮಾಡುತ್ತಿದ್ದಾರಂತೆ. ಅಲ್ಲದೇ, ಕೆಲವರು ಸುಳ್ಳು ಸುದ್ದಿಗಳನ್ನೂ ಪ್ರಕಟಿಸುತ್ತಿದ್ದಾರೆ. ಇದರಿಂದ ಬೇಸತ್ತು ಹೋಗಿರುವ ನರೇಶ್, ತಮ್ಮ ಮಾನಹಾನಿ ಮಾಡುವವರ ವಿರುದ್ಧ ಕ್ರಮ ತಗೆದುಕೊಳ್ಳುವಂತೆ ಪೊಲೀಸರಿಗೆ ಮೊರೆ ಹೋಗಿದ್ದಾರೆ. ಅವರ ವಿರುದ್ಧ ದೂರು (complaint) ಕೂಡ ನೀಡಿದ್ದಾರೆ.

    ನರೇಶ್ ಅವರ ಮಲ ತಂದೆ ಕೃಷ್ಣ ನಿಧನರಾದಾಗ ಪವಿತ್ರಾ ಮತ್ತು ನರೇಶ್ ದೂರದಿಂದ ಮಾಡಿದ ಕಣ್ ಸನ್ನೆಗಳು ಸಖತ್ ಟ್ರೋಲ್ ಆಗಿದ್ದವು. ತಂದೆಯ ಶವದ ಮುಂದೆ ಆ ರೀತಿಯಲ್ಲಿ ನಡೆದುಕೊಂಡಿದ್ದಕ್ಕಾಗಿ ಪವಿತ್ರಾ ಲೋಕೇಶ್ ಮೇಲೆ ಕೃಷ್ಣ ಕುಟುಂಬ ಅಸಮಾಧಾನ ವ್ಯಕ್ತ ಪಡಿಸಿತ್ತು. ಇದು ನರೇಶ್ ಕೋಪಕ್ಕೂ ಕಾರಣವಾಗಿತ್ತು. ಪವಿತ್ರಾ ಮೇಲೆ ಅವರ ಕುಟುಂಬ ಅಸಮಾಧಾನ ವ್ಯಕ್ತ ಪಡಿಸಲು ಕಾರಣ ಟ್ರೋಲ್ ಪೇಜ್ ಗಳು ಎನ್ನುವುದೇ ಈಗಿನ ದೂರಿಗೆ ಕಾರಣ ಎಂದು ಹೇಳಲಾಗುತ್ತಿದೆ.

    ನರೇಶ್ ಅವರ ಮಾನಹಾನಿ ಮಾಡುವುದಕ್ಕಾಗಿಯೇ ಕೆಲವರು ನೇಮಕವಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಅವರಿಗೆ ಯಾರು ಕುಮ್ಮಕ್ಕು ಕೊಡುತ್ತಿದ್ದಾರೆ ಎನ್ನುವುದು ನರೇಶ್ ಅವರಿಗೆ ಗೊತ್ತಿದೆಯಂತೆ. ಹಾಗಾಗಿ ಸಾಕ್ಷಿ ಸಮೇತವಾಗಿ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ ನರೇಶ್.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅಶ್ವಥ್ ನಾರಾಯಣ್ ವಿರುದ್ಧ ಬೆಂಗಳೂರು, ಹುಬ್ಬಳ್ಳಿಯಲ್ಲಿ ದೂರು ದಾಖಲು

    ಅಶ್ವಥ್ ನಾರಾಯಣ್ ವಿರುದ್ಧ ಬೆಂಗಳೂರು, ಹುಬ್ಬಳ್ಳಿಯಲ್ಲಿ ದೂರು ದಾಖಲು

    ಬೆಂಗಳೂರು: ಟಿಪ್ಪು ರೀತಿ ಸಿದ್ದರಾಮಯ್ಯ (Siddaramaiah) ರನ್ನು ಹೊಡೆದು ಹಾಕಬೇಕು ಹೇಳಿಕೆ ನೀಡಿ ವಿವಾದಕ್ಕೀಡಾದ ಬೆನ್ನಲ್ಲೇ ಸಚಿವ ಅಶ್ವಥ್ ನಾರಾಯಣ್ ವಿರುದ್ಧ ಬೆಂಗಳೂರು, ಹುಬ್ಬಳ್ಳಿಯಲ್ಲಿ ದೂರು ದಾಖಲು ಮಾಡಲಾಗಿದೆ.

    ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಅಶ್ವಥ್ ನಾರಾಯಣ್ (Ashwath Narayan) ಹಾಗೂ ನಳಿನ್ ಕುಮಾರ್ ಕಟೀಲ್ (Nalin Kumar Kateel) ವಿರುದ್ಧ ಕಾಂಗ್ರೆಸ್ ನಿಯೋಗ ದೂರು ನೀಡಿದೆ. ಟಿಪ್ಪು ವಂಶಸ್ಥರನ್ನ ಕೊಲೆ ಮಾಡಬೇಕು ಅಂತ ಕಟೀಲ್ ಹೇಳಿಕೆ ನೀಡಿದರೆ, ಸಿದ್ದರಾಮಯ್ಯರನ್ನ ಟಿಪ್ಪು ಹೊಡೆದು ಹಾಕಿದ ಹಾಗೆ ಹೊಡೀಬೇಕು ಎಂದು ಅಶ್ವಥ್ ನಾರಾಯಣ್ ಹೇಳಿದ್ದಾರೆ. ಈ ಸಂಬಂಧ ಸಿದ್ದರಾಮಯ್ಯ ಅಭಿಮಾನಿಗಳ ಬಳಗ ಹುಬ್ಬಳ್ಳಿಯ ಗೋಕುಲ್ ಠಾಣೆಯಲ್ಲಿ ದೂರು ದಾಖಲಿಸಿದೆ. ದೂರಿನಲ್ಲಿ ಸಚಿವರ ವಿರುದ್ಧ ಕ್ರಮಕ್ಕೆ ಬಳಗ ಒತ್ತಾಯಿಸಿದೆ.

    ಅಶ್ವಥ್ ನಾರಾಯಣ್ ಹೇಳಿಕೆ: ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜ್ಯರಾಜಕೀಯದಲ್ಲಿ ನಾಯಕರ ವಾಗ್ದಾಳಿಗಳು ನಡೆಯುತ್ತವೆ. ಅಂತೆಯೇ ಮಂಡ್ಯದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದ್ದ ಸಚಿವ ಅಶ್ವಥ್ ನಾರಾಯಣ್, ಮಂಡ್ಯ ಜನರಿಗೆ ರಾಜಕೀಯ ಬದಲಾವಣೆ ಮಾಡುವ ಶಕ್ತಿ ಇದೆ. ಮಂಡ್ಯದವರು ಮನಸ್ಸು ಮಾಡಿದ್ರೆ ಏನು ಬೇಕಾದರೂ ಸಾಧಿಸುತ್ತಾರೆ. ಇದನ್ನೂ ಓದಿ: ಅತ್ಯಂತ ಕೆಳಮಟ್ಟದ ಕೆಲಸ ಮಾಡಿ ಕ್ಷಮೆ ಕೇಳೋದರಲ್ಲಿ ಅರ್ಥವಿಲ್ಲ- ಅಶ್ವಥ್ ವಿರುದ್ಧ ಸಿದ್ದರಾಮಯ್ಯ ಕಿಡಿ

    ರಾಜಕೀಯ ದಿಕ್ಸೂಚಿ ಮಂಡ್ಯದಿಂದ ಕಾಣಬೇಕು. ಹೀಗೆ ಮಾಡಲಿಲ್ಲ ಅಂದ್ರೆ ಟಿಪ್ಪು ಸುಲ್ತಾನ್ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬರುತ್ತಾರೆ. ನಿಮಗೆ ಟಿಪ್ಪು ಬೇಕಾ ಸಾವರ್ಕರ್ ಬೇಕಾ, ಟಿಪ್ಪು ಬೇಡಾ ಅಂದ್ರೆ ಸಿದ್ದರಾಮಯ್ಯ ಅವರನ್ನು ಟಿಪ್ಪು ಕಳುಹಿಸಿದ ಹಾಗೆ ಕಳಿಸಬೇಕು. ಹುರಿಗೌಡ, ನಂಜೇಗೌಡ ಟಿಪ್ಪುವನ್ನು ಹೊಡೆದು ಹಾಕಿದರು. ಅದೇ ರೀತಿ ಸಿದ್ದರಾಮಯ್ಯರನ್ನು ಹೊಡೆದು ಹಾಕಬೇಕು ಎಂದಿದ್ದರು. ಇದನ್ನೂ ಓದಿ: ಸಿದ್ದರಾಮಯ್ಯ ಕುರಿತ ಹೇಳಿಕೆಗೆ ಅಶ್ವಥ್ ನಾರಾಯಣ್ ವಿಷಾದ

    ಸಚಿವರು ವಿಷಾದ: ಸಚಿವರ ಹೇಳಿಕೆ ಭಾರೀ ವಿವಾದ ಹುಟ್ಟಿಸಿತ್ತು. ಈ ಬೆನ್ನಲ್ಲೇ ಅಶ್ವಥ್ ನಾರಾಯಣ್ ಅವರು ವಿಷಾದ ವ್ಯಕ್ತಪಡಿಸಿದರು. ಮಂಡ್ಯದಲ್ಲಿ ಟಿಪ್ಪು-ಸಿದ್ದರಾಮಯ್ಯ ಹೋಲಿಸಿ ತಾನು ಮಾತಾಡಿದ್ದು, ಸಾಂದರ್ಭಿಕ ಪ್ರಸ್ತಾಪವೇ ವಿನಃ ಯಾವುದೇ ದುರುದ್ದೇಶದ ಮಾತುಗಳಲ್ಲ ಎಂದು ತಿಳಿಸಿದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k