Tag: complaint

  • ಒಬ್ಬರಿಗೆ ಗೊತ್ತಿಲ್ಲದೆ ಒಬ್ಬರು ಮಹಿಳೆಗೆ ದುಡ್ಡು ಕೊಟ್ರು- ಹಣ ಪಡೆದ ಮಹಿಳೆ ರಾತ್ರೋರಾತ್ರಿ ಎಸ್ಕೇಪ್

    ಒಬ್ಬರಿಗೆ ಗೊತ್ತಿಲ್ಲದೆ ಒಬ್ಬರು ಮಹಿಳೆಗೆ ದುಡ್ಡು ಕೊಟ್ರು- ಹಣ ಪಡೆದ ಮಹಿಳೆ ರಾತ್ರೋರಾತ್ರಿ ಎಸ್ಕೇಪ್

    ಚಿಕ್ಕಮಗಳೂರು: ಆಂಜನೇಯ ಬೀದಿಯ ಫಾತಿಮಾಗೆ 2 ಲಕ್ಷದ 55 ಸಾವಿರ, ಮೀನಾಕ್ಷಿಗೆ 75 ಸಾವಿರ ದುಡ್ಡು, 100 ಗ್ರಾಂ ಚಿನ್ನ, ಕಲಾಳಿಗೆ 50 ಸಾವಿರ, ಹೇಮಾಳಿಗೆ ಒಂದುವರೆ ಲಕ್ಷ ಧರ್ಮಸ್ಥಳದ ಮಂಜುನಾಥನಿಗೆ 60 ಸಾವಿರ.. ಇದೇನಿದು, ಇವರೆಲ್ಲಾ ಯಾರು ಅಂತ ಗಾಬರಿಯಾಗ್ಬೇಡಿ. ಇವರೆಲ್ಲಾ ಚಿಕ್ಕಮಗಳೂರಿನ ಆಂಜನೇಯ ಬೀದಿ ಹಾಗೂ ವಲ್ಲಭಾ ಗಣಪತಿ ರಸ್ತೆ ನಿವಾಸಿಗಳು.

    ತಮ್ಮ ಏರಿಯಾದಲ್ಲೇ ತಮ್ಮ ಮನೆ ಪಕ್ಕದಲ್ಲೇ ಹುಟ್ಟಿ ಬೆಳೆದವಳು ಎಂದು ರೇಣುಕಾ ಎಂಬಾಕೆಗೆ ಕೇಳಿದಂತೆಲ್ಲಾ ಒಬ್ಬರಿಗೆ ಗೊತ್ತಿಲ್ಲದೆ ಮತ್ತೊಬ್ಬರು ಎಂಬಂತೆ 20ಕ್ಕೂ ಹೆಚ್ಚು ಮಹಿಳೆಯರು 18 ಲಕ್ಷ ಹಣ ನೀಡಿದ್ದರು. ಹಣ ಕೊಟ್ಟವರಿಗೆಲ್ಲಾ ಚೆಕ್ ನೀಡಿದ್ದ ರೇಣುಕಾ ಇದೀಗ ರಾತ್ರೋರಾತ್ರಿ ಊರು ಬಿಟ್ಟಿದ್ದಾಳೆ. ಚೆಕ್ ಇಟ್ಕೊಂಡು ಮನೆ ಬಾಗಿಲಿಗೆ ಹೋದರೆ ಮನೆ ಬೀಗ ಹಾಕಿದೆ. ಅವರ ಅಪ್ಪ-ಅಮ್ಮನನ್ನ ಕೇಳಿದರೆ ನಮಗೆ ಗೊತ್ತಿಲ್ಲ ಎನ್ನುವ ಸಿದ್ಧ ಉತ್ತರ ನೀಡುತ್ತಿದ್ದಾರೆ. ಇದೀಗ ಮೋಸ ಹೋದವರು ಚೆಕ್, ದೂರು ಪ್ರತಿ ಇಟ್ಕೊಂಡು ಪೊಲೀಸ್ ಸ್ಟೇಷನ್, ಡಿಸಿ ಆಫೀಸ್, ಎಸ್ಪಿ ಆಫೀಸ್ ಗೆ ಅಲೆಯುತ್ತಿದ್ದಾರೆ.

    ಜನರಿಗಷ್ಟೇ ಅಲ್ಲ ರೇಣುಕಾ ಧರ್ಮಸ್ಥಳ ಸಂಘದಿಂದಲೂ 60 ಸಾವಿರ ರೂ. ಎತ್ಕೊಂಡು ಓಡಿಹೋಗಿದ್ದಾಳೆ. ಅಂಗವಿಕಲನಾದ ಮಗನಿಗೆ ಹುಷಾರಿಲ್ಲ ಎಂದು ನಂಬಿಸಿ ಮನೆ ಕಟ್ಟೋದಕ್ಕೆ ಇಟ್ಟುಕೊಂಡಿದ್ದ ಹಣದಲ್ಲಿ 1 ಲಕ್ಷದ 75 ಸಾವಿರ ಹಣ ನೀಡಿದ್ದು, ಈಗ ಅನ್ನಂಗಿಲ್ಲ-ಅನುಭವಿಸುವಂತಿಲ್ಲ ಎನ್ನುವ ಹಾಗಾಗಿದೆ. ಕೆಲವರು ಬಡ್ಡಿಗೆ ಹಣ ಕೊಡಿಸಿ ಕೈ ಸುಟ್ಟುಕೊಂಡಿದ್ದಾರೆ. ಪೊಲೀಸರಿಗೆ ದೂರು ನೀಡಿದರೆ ಕೇಸ್ ದಾಖಲಿಸಿಕೊಳ್ಳದೆ ದೂರು ಪಡೆದುಕೊಂಡು ಅವರನ್ನು ತೋರಿಸಿ, ಕರೆತರುತ್ತೀವಿ ಎಂದು ಹೇಳಿದ್ದಾರೆ.

  • ತಾ.ಪಂ ಅಧ್ಯಕ್ಷರ ಕಾರ್ ಜಖಂ ಪ್ರಕರಣ- ಮಾಜಿ ಶಾಸಕ ಸುರೇಶ್ ಗೌಡ ಪ್ರತಿಕ್ರಿಯೆ ನೀಡಿದ್ದು ಹೀಗೆ

    ತಾ.ಪಂ ಅಧ್ಯಕ್ಷರ ಕಾರ್ ಜಖಂ ಪ್ರಕರಣ- ಮಾಜಿ ಶಾಸಕ ಸುರೇಶ್ ಗೌಡ ಪ್ರತಿಕ್ರಿಯೆ ನೀಡಿದ್ದು ಹೀಗೆ

    ಮಂಡ್ಯ: ಜಿಲ್ಲೆಯ ನಾಗಮಂಗಲ ತಾಲೂಕು ಪಂಚಾಯ್ತಿ ಅಧ್ಯಕ್ಷ ನವೀನ್ ಕುಮಾರ್ ತಮ್ಮ ಕಾರಿನ ಮೇಲೆ ಕಲ್ಲು ಎತ್ತಿ ಹಾಕಿ ಜಖಂಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 25 ಜನರ ಮೇಲೆ ದೂರು ದಾಖಲಿಸಿದ್ದಾರೆ.

    ಆದರೆ ನವೀನ್ ಕುಮಾರ್ ಅವರ ಆರೋಪವನ್ನು ನಿರಾಕರಿಸಿರುವ ಮಾಜಿ ಶಾಸಕ ಸುರೇಶ್‍ಗೌಡ, ತಾಲೂಕು ಪಂಚಾಯ್ತಿ ಅಧ್ಯಕ್ಷರು ನನ್ನ ವಿರುದ್ಧ ಮಾತನಾಡಿ ಸಾಮಾಜಿಕ ಜಾಲತಾಣದಲ್ಲಿ ಅದನ್ನು ಹಾಕಿದ್ದಾರೆ. ಜೊತೆಗೆ ಚುನಾವಣೆ ಹತ್ತಿರ ಬರುತ್ತಿರುವುದರಿಂದ ತಮ್ಮ ಕಾರಿನ ಮೇಲೆ ತಾವೇ ಕಲ್ಲು ಎತ್ತಿಹಾಕಿ ಜಖಂಗೊಳಿಸಿಕೊಂಡು ನನ್ನ ಬೆಂಬಲಿಗರ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

    ಮಂಗಳವಾರ ರಾತ್ರಿ ನವೀನ್ ಅವರು ನಾಗಮಂಗಲದ ಬಿಜಿ ನಗರದಲ್ಲಿನ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಪತ್ನಿಯನ್ನು ಹೆರಿಗೆಗಾಗಿ ದಾಖಲಿಸಿದ್ದರು. ಆಸ್ಪತ್ರೆ ಬಳಿ ಕಾರು ನಿಲ್ಲಿಸಿ ಪತ್ನಿಗೆ ಊಟ ತರಲು ಹೊರಗೆ ತೆರಳಿದ್ದ ವೇಳೆ ಕಾರಿನ ಬಳಿ ಯಾರೂ ಇಲ್ಲದೇ ಇರುವುದನ್ನು ಗಮನಿಸಿದ ದುಷ್ಕರ್ಮಿಗಳು ನವೀನ್ ಅವರ ಕಾರಿನ ಮೇಲೆ ಕಲ್ಲು ಎತ್ತಾಕಿ ಕಾರನ್ನು ಜಖಂಗೊಳಿಸಿದ್ದರು.

    ನವೀನ್ ಜೆಡಿಎಸ್ ಬಂಡಾಯ ಶಾಸಕ ಚಲುವರಾಯಸ್ವಾಮಿ ಬೆಂಬಲಿಗರಾಗಿದ್ದು, ಸುರೇಶ್ ಗೌಡರ ವಿರುದ್ಧ ಸಭೆಯೊಂದರಲ್ಲಿ ಮಾತನಾಡಿದಕ್ಕೆ ಈ ರೀತಿ ಕೃತ್ಯವೆಸಗಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಅಲ್ಲದೆ ಸುರೇಶ್ ಗೌಡ ಬೆಂಬಲಿಗರಿಂದ ಪದೇ ಪದೇ ಕೊಲೆ ಬೆದರಿಕೆಗಳು ಬರುತ್ತಿವೆ ಎಂದು ಹೇಳಿದ್ದಾರೆ. ನಾನು ಚಲುವರಾಯಸ್ವಾಮಿ ಮೇಲಿನ ಅಭಿಮಾನದಿಂದ ನಮ್ಮ ನಾಯಕರನ್ನು ಬಹಿರಂಗಸಭೆಯಲ್ಲಿ ಅಸಭ್ಯವಾಗಿ ನಿಂದಿಸಿದ್ದ ಸುರೇಶ್‍ಗೌಡ ವಿರುದ್ಧ ಆಕ್ರೋಶ ಹೊರಹಾಕಿದ್ದೆ. ಇದನ್ನು ನನ್ನ ಗೆಳೆಯರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ರು. ಅದನ್ನು ನೋಡಿ ಸುರೇಶ್‍ಗೌಡ ಬೆಂಬಲಿಗರು ನನಗೆ ಪ್ರಾಣ ಬೆದರಿಕೆ ಹಾಕಿ ಕಾರು ಜಖಂಗೊಳಿಸಿದ್ದಾರೆ ಎಂದು ನವೀನ್‍ಕುಮಾರ್ ಆರೋಪ ಮಾಡುತ್ತಿದ್ದಾರೆ.

    ನನಗೆ ಮಾಜಿ ಶಾಸಕ ಸುರೇಶ್‍ಗೌಡ ಅವರ ಬಗ್ಗೆ ಗೌರವವಿದೆ. ಇನ್ನು ಮುಂದೆ ಯಾವುದೇ ಗಲಾಟೆ ಬೇಡ ಎಂದು ನವೀನ್ ಕುಮಾರ್ ಮನವಿ ಮಾಡುತ್ತಿದ್ದಾರೆ.


  • ಬೆಂಗ್ಳೂರಿನಲ್ಲಿ ಕನ್ನಡದ ಹೆಸರಲ್ಲಿ ಹೆಚ್ಚುತ್ತಿದೆ ದಾಂಧಲೆ!

    ಬೆಂಗ್ಳೂರಿನಲ್ಲಿ ಕನ್ನಡದ ಹೆಸರಲ್ಲಿ ಹೆಚ್ಚುತ್ತಿದೆ ದಾಂಧಲೆ!

    ಬೆಂಗಳೂರು: ನಗರದಲ್ಲಿ ಕನ್ನಡ ಪರ ಹೋರಾಟ ನಡೆಸುತ್ತಿದ್ದೇವೆ ಎಂದು ಹೇಳಿಕೊಂಡು ಜನ ಸಾಮಾನ್ಯರ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ತಾಜಾ ಉದಾಹರಣೆ ಎಂಬಂತೆ ನಗರದ ಹುಳಿಮಾವಿನ ಪ್ರದೇಶದಲ್ಲಿ ಇಂತಹದ್ದೇ ಘಟನೆ ನಡೆದಿದೆ.

    ಅಂಗಡಿಯ ಮುಂದೇ ಕನ್ನಡದಲ್ಲೇ ಬೋರ್ಡ್ ಹಾಕಬೇಕೆಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಸಂಘಟನೆಯ ಕಾರ್ಯಕರ್ತರು ದಾಂಧಲೆ ನಡೆಸಿದ್ದಾರೆ. ಹುಳಿಮಾವಿನ ಬಳಿ ಇರುವ ಜೆಸ್ ಎಂಬ ಬೇಕರಿಯಲ್ಲಿ ಕನ್ನಡ ಬೋರ್ಡ್ ಇರದ ಹಿನ್ನೆಲೆ ಕ್ಯಾತೆ ತೆಗೆದ ಕಾರ್ಯಕರ್ತರು ತಕ್ಷಣವೇ ಕನ್ನಡ ಬೋರ್ಡ್ ಹಾಕಬೇಕೆಂದು ಆಗ್ರಹಿಸಿದ್ದಾರೆ.

    ಅಲ್ಲದೇ ಸಂಘಟನೆಯ ಕಾರ್ಯಕರ್ತರು ನೇರವಾಗಿ ಬೇಕರಿಗೆ ನುಗ್ಗಿ ಅಂಗಡಿ ಮಾಲಕಿಯ ಜೊತೆ ಗಲಾಟೆ ಆರಂಭಿಸಿದ್ದಾರೆ. ಈ ವೇಳೆ ಕುಪಿತಗೊಂಡ ಮಾಲಕಿ  ಕಾರ್ಯಕರ್ತನ ಮೊಬೈಲ್ ಪುಡಿ ಪುಡಿ ಮಾಡಿದ್ದಾರೆ.

    ಘಟನೆಯ ನಂತರ ಪೊಲೀಸ್ ಠಾಣೆಗೆ ತೆರಳಿರುವ ಸಂಘಟನೆಯ ಕಾರ್ಯಕರ್ತರು ನಮ್ಮ ಮೇಲೆ ಹಲ್ಲೆಯಾಗಿದೆ ಎಂದು ದೂರು ನೀಡಿದ್ದಾರೆ. ಪ್ರಸ್ತುತ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಮಾಲೀಕರ ವಿರುದ್ಧ ದೂರು ದಾಖಲಾಗಿದೆ.

  • ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ದೂರು ನೀಡಿದ್ದಕ್ಕೆ ಕಾರ್ ಪುಡಿಗೈದ್ರು!

    ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ದೂರು ನೀಡಿದ್ದಕ್ಕೆ ಕಾರ್ ಪುಡಿಗೈದ್ರು!

    ಬೆಂಗಳೂರು: ಟಿಪ್ಪು ಜಯಂತಿ ಆಚರಣೆಯನ್ನು ವಿರೋಧಿಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಹಿನ್ನೆಲೆಯಲ್ಲಿ ತಡರಾತ್ರಿ ಮನೆಯ ಮುಂದೆ ನಿಲ್ಲಿಸಿದ್ದ ಕಾರಿನ ಗಾಜನ್ನು ದುಷ್ಕರ್ಮಿಗಳು ಕಲ್ಲಿನಿಂದ ಹೊಡೆದು ಪುಡಿ ಮಾಡಿರುವ ಘಟನೆ ನಡೆದಿದೆ.

    ಈ ಘಟನೆ ಬೆಂಗಳೂರು ಹೊರವಲಯ ನೆಲಮಂಗಲದ ಮಾರುತಿ ಬಡಾವಣೆಯಲ್ಲಿ ನಡೆದಿದೆ. ಇನ್ನೂ ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ರಾಮ್ ಎಂಬವರು ಕಳೆದ ಎರಡು ದಿನಗಳ ಹಿಂದೆ ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ಪಟ್ಟಣ ಠಾಣೆಗೆ ದೂರು ನೀಡಿದ್ದರು.

    ಈ ಹಿನ್ನೆಲೆಯಲ್ಲಿ ಕೆಲ ದುಷ್ಕರ್ಮಿಗಳು ತಡ ರಾತ್ರಿ ಮನೆಯ ಮುಂದೆ ನಿಲ್ಲಿಸಿದ್ದ ಸಫಾರಿ ಕಾರಿನ ಗಾಜು ಪುಡಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಎಂದಿನಂತೆ ಬೆಳಿಗ್ಗೆ ವಾಯುವಿಹಾರಕ್ಕೆ ತೆರಳಲು ಬಂದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಸದ್ಯ ಘಟನೆ ಕುರಿತು ನೆಲಮಂಗಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

  • ಮಹಿಳೆಯ ಸೊಂಟ ಚಿವುಟಿದ, ಯಾಕೆ ಎಂದು ಪ್ರಶ್ನಿಸಿದ್ದಕ್ಕೆ ಕೈ ಮುರಿದ

    ಮಹಿಳೆಯ ಸೊಂಟ ಚಿವುಟಿದ, ಯಾಕೆ ಎಂದು ಪ್ರಶ್ನಿಸಿದ್ದಕ್ಕೆ ಕೈ ಮುರಿದ

    ಬೆಂಗಳೂರು: ಕಾಮುಕನೊಬ್ಬ ಮಹಿಳೆಯ ಸೊಂಟ ಚಿವುಟಿದ್ದು, ಯಾಕೆ ಚಿವುಟಿದೆ ಎಂದು ಪ್ರಶ್ನೆ ಮಾಡಿದ್ದಕ್ಕೆ ಆಕೆಯ ಕೈಯನ್ನೇ ಮುರಿದಿರುವ ಘಟನೆ ಬೆಂಗಳೂರಿನ ಕೊಡಿಗೇಹಳ್ಳಿಯಲ್ಲಿ ನಡೆದಿದೆ.

    ಕಾಮುಕ ಸೊಂಟ ಚಿವುಟಿದಾಗ ಮಹಿಳೆ ಚೀರಿಕೊಂಡಿದ್ದು, ಅದನ್ನು ನೋಡಿದ ಸಾರ್ವಜನಿಕರು ಆತನನ್ನು ಪ್ರಶ್ನಿಸಿದ್ದಾರೆ. ಆದ್ರೆ ಆತ ಪ್ರಶ್ನೆ ಮಾಡಿದ ಸಾರ್ವಜನಿಕನಿಗೆ ಕಲ್ಲು ತೆಗೆದುಕೊಂಡು ತಲೆ ಮೇಲೆ ಹೊಡೆದಿದ್ದಾನೆ. ಸಿಕ್ಕ ಸಿಕ್ಕವರನ್ನೆಲ್ಲಾ ಹೊಡೆಯುತ್ತಿದ್ದ ಕಾಮುಕನಿಗೆ ಸಾರ್ವಜನಿಕರು ಸೇರಿ ಧರ್ಮದೇಟು ನೀಡಿದ್ದಾರೆ.

    ಕಾಮುಕ ಮಹಿಳೆಯ ಸೊಂಟವನ್ನು ಚಿವುಟಿ ಮತ್ತು ಅಸಭ್ಯವಾಗಿ ವರ್ತಿಸುತ್ತಿದ್ದ. ಅದನ್ನು ನೋಡಿ ಮಹಿಳೆಯ ಮಗ ಆತನನ್ನು ಪ್ರಶ್ನೆ ಮಾಡಲು ಬಂದಾಗ, ಆಕೆಯ ಮಗನ ತಲೆಗೆ ಹೊಡೆದ. ಆಗ ನಾನು ಹಾಗೂ ನನ್ನ ಜೊತೆ ಇದ್ದ 5-6 ಮಂದಿ ಆತನನ್ನು ಪ್ರಶ್ನಿಸಲು ಹೋದಾಗ ಕಲ್ಲು ಎತ್ತಿಕೊಂಡು ಬರುತ್ತಿದ್ದ. ಮಾತನಾಡಲು ನಾವು ಕರೆದರೆ ಹೊಡೆಯಲು ಬರುತ್ತಿದ್ದ ಎಂದು ಪೆಟ್ಟು ತಿಂದ ಸಾರ್ವಜನಿಕರೊಬ್ಬರು ತಿಳಿಸಿದ್ದಾರೆ.

    ಮಹಿಳೆಯ ಸೊಂಟ ಚಿವುಟಿ ಅಸಭ್ಯವಾಗಿ ವರ್ತನೆ ಮಾಡಿದವನ ವಿರುದ್ಧ ಸಾರ್ವಜನಿಕರು ಪೊಲೀಸರಿಗೆ ದೂರು ನೀಡಿದ್ದಾರೆ. ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

  • ಅಪ್ರಾಪ್ತ ಬಾಲಕಿಯ ಮೇಲೆ ರೇಪ್ ಮಾಡಿ ವಿಡಿಯೋ ಮಾಡ್ದ 65ರ ವೃದ್ಧ!

    ಅಪ್ರಾಪ್ತ ಬಾಲಕಿಯ ಮೇಲೆ ರೇಪ್ ಮಾಡಿ ವಿಡಿಯೋ ಮಾಡ್ದ 65ರ ವೃದ್ಧ!

    ತುಮಕೂರು: 65 ವರ್ಷದ ವೃದ್ಧನೊಬ್ಬ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ, ಅದರ ವೀಡಿಯೋ ಮಾಡಿ ವಿಕೃತಿ ಮೆರೆದಿರುವ ವಿಲಕ್ಷಣ ಘಟನೆಯೊಂದು ಬೆಳಕಿಗೆ ಬಂದಿದೆ.

    ತಿಪಟೂರು ನಗರದ ಕೊಬ್ಬರಿ ವ್ಯಾಪಾರಿ ಹರೀಶ್ (65) ಈ ಕೃತ್ಯವನ್ನು ಎಸಗಿದ ಆರೋಪಿ. ಹರೀಶ್ ಕ್ರೀಡಾ ತರಬೇತಿಯನ್ನು ನೀಡುವ ನೆಪದಲ್ಲಿ 15 ವರ್ಷದ ಬಾಲಕಿಯನ್ನು ಲೈಂಗಿಕವಾಗಿ ಬಳಸಿಕೊಂಡು, ಅತ್ಯಾಚಾರವನ್ನ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾನೆ.

    ತರಬೇತಿ ನೀಡುವ ನೆಪದಲ್ಲಿ ಹಲವಾರು ಬಾಲಕಿಯರನ್ನು ಲೈಂಗಿಕವಾಗಿ ಹರೀಶ್ ಬಳಸಿಕೊಂಡಿದ್ದಾನೆ ಎನ್ನುವ ಆರೋಪ ಈಗ ಕೇಳಿ ಬಂದಿದೆ.

    ನೊಂದ ಬಾಲಕಿಯ ಪೋಷಕರು ಆ ವೀಡಿಯೋ ಸಮೇತವಾಗಿ ತಿಪಟೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರನ್ನ ದಾಖಲಿಸಿಕೊಂಡ ಪೊಲೀಸರು ಈ ತನಿಖೆಯನ್ನು ನಡೆಸುತ್ತಿದ್ದಾರೆ.

  • ಮನೆಯಲ್ಲಿ ಶೌಚಾಲಯ ಇಲ್ಲದ್ದಕ್ಕೆ ಮಾವ, ಮೈದುನನ ವಿರುದ್ಧ ದೂರು ನೀಡಿದ ಸೊಸೆ

    ಮನೆಯಲ್ಲಿ ಶೌಚಾಲಯ ಇಲ್ಲದ್ದಕ್ಕೆ ಮಾವ, ಮೈದುನನ ವಿರುದ್ಧ ದೂರು ನೀಡಿದ ಸೊಸೆ

    ಪಾಟ್ನಾ: ಮನೆಯಲ್ಲಿ ಶೌಚಾಲಯ ಇಲ್ಲದ್ದಕ್ಕೆ ಮನೆಯ ಸೊಸೆ ತನ್ನ ಮಾವ ಮತ್ತು ಮೈದುನನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಘಟನೆ ಬಿಹಾರದ ಮುಜಾಫರ್‍ಪುರ ಜಿಲ್ಲೆಯ ಮಿಣಾಪುರ ಬ್ಲಾಕ್‍ನ ಚೆಗ್ಗಾನ್ ನ್ಯೂರಾ ಎಂಬ ಗ್ರಾಮದಲ್ಲಿ ನಡೆದಿದೆ.

    ಮನೆಯಲ್ಲಿ ಶೌಚಾಲಯ ನಿರ್ಮಿಸಲು ಮಹಿಳೆ ಕೇಳಿದ್ದಳು. ಆದ್ರೆ ಆಕೆಯ ಮಾವನ ಮನೆಯವರು ಇದಕ್ಕೆ ಕಿವಿಗೊಟ್ಟಿರಲಿಲ್ಲ. ತಮಿಳುನಾಡಿನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಪತಿ ಊರಿಗೆ ಬಂದಾಗ ಮಾತ್ರ ಆಕೆ ಮಾವನ ಮನೆಗೆ ಬರುತ್ತಿದ್ದರು. ಮತ್ತೆ ಪತಿ ತಮಿಳುನಾಡಿಗೆ ಹಿಂದಿರುಗಿ ಹೋದಾಗ ಮಹಿಳೆ ತವರು ಮನೆಗೆ ಹೋಗುತ್ತಿದ್ದರು.

    ಇದರಿಂದ ಬೇಸತ್ತು ಮಹಿಳೆ ಪೊಲೀಸ್ ಠಾಣೆಯಲ್ಲಿ ತನ್ನ ಮಾವ ಮತ್ತು ಮೈದುನನ ವಿರುದ್ಧ ಸೆಪ್ಟೆಂಬರ್ 25ರಂದು ಲಿಖಿತ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಮಾವ ಮತ್ತು ಮೈದುನನನ್ನು ಠಾಣೆಗೆ ಕರೆಸಿ ತಿಳಿ ಹೇಳಲಾಗಿದೆ ಎಂದು ಮುಜಾಫರ್‍ಪುರ ಮಹಿಳಾ ಪೊಲೀಸ್ ಠಾಣೆಯ ಅಧಿಕಾರಿ ಜ್ಯೋತಿ ತಿಳಿಸಿದ್ದಾರೆ.

    ಆದಷ್ಟು ಬೇಗ ಶೌಚಾಲಯ ನಿರ್ಮಿಸುವುದಾಗಿ ಮಾವ ಬಾಂಡ್ ಬರೆದುಕೊಟ್ಟಿದ್ದಾರೆ. ಒಂದು ವಾರದೊಳಗೆ ಶೌಚಾಲಯ ನಿರ್ಮಿಸಬೇಕೆಂದು ನಾವು ಹೇಳಿದೆವು. ಆದರೆ ಹಣ ಹೊಂದಿಸಲು ಸ್ವಲ್ಪ ಸಮಯ ಬೇಕು ಎಂದು ಕೋರಿದರು. ಸಂಧಾನ ಯಶಸ್ವಿಯಾಗಿದ್ದು, ಮಹಿಳೆ ತನ್ನ ದೂರನ್ನು ಹಿಂಪಡೆದಿದ್ದಾರೆ ಎಂದು ಜ್ಯೋತಿ ಹೇಳಿದ್ದಾರೆ.

  • ಅಪ್ರಾಪ್ತ ಹೆಣ್ಣುಮಕ್ಕಳ ಮೇಲೆ ತಂದೆಯಿಂದಲೇ ಅತ್ಯಾಚಾರ!

    ಅಪ್ರಾಪ್ತ ಹೆಣ್ಣುಮಕ್ಕಳ ಮೇಲೆ ತಂದೆಯಿಂದಲೇ ಅತ್ಯಾಚಾರ!

    ಮಥುರಾ: ಕಾಮುಕ ತಂದೆಯೋರ್ವ ತನ್ನಿಬ್ಬರ ಹೆಣ್ಣು ಮಕ್ಕಳ ಮೇಲೆಯೇ ಎರಡೂವರೆ ವರ್ಷದಿಂದ ಅತ್ಯಾಚಾರ ಮಾಡಿದ್ದಾನೆಂದು ಆರೋಪಿಸಿ ಸಂತ್ರಸ್ಥೆಯರ ಅಜ್ಜ ಶುಕ್ರವಾರ ಮಥುರಾ ಜಿಲ್ಲೆಯ ನೌಜೀಹಾಳ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

    ತಂದೆ ಅತ್ಯಾಚಾರ ಮಾಡುತ್ತಿರುವ ವಿಚಾರವನ್ನು ಬಾಲಕಿಯರು ಅಜ್ಜನಿಗೆ ತಿಳಿಸಿದ್ದಾರೆ. ವಿಷಯ ತಿಳಿದ ಅಜ್ಜ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಲಾಗಿದ್ದು, ಬಾಲಕಿಯರನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿಸಿದರು.

    ಕಳೆದ ಎರಡೂವರೆ ವರ್ಷದಿಂದ ಮೊದಲು ತನ್ನ 14 ವರ್ಷದ ಮಗಳ ಮೇಲೆ ಅತ್ಯಾಚಾರವೆಸಗಿ ನಂತರ 17 ವರ್ಷದ ಮಗಳ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಜೀವಬೆದರಿಕೆ ಆರೋಪ: ಮಾಜಿ ಸಚಿವ ಜನಾರ್ದನರೆಡ್ಡಿ ವಿರುದ್ಧ ದೂರು ದಾಖಲು

    ಜೀವಬೆದರಿಕೆ ಆರೋಪ: ಮಾಜಿ ಸಚಿವ ಜನಾರ್ದನರೆಡ್ಡಿ ವಿರುದ್ಧ ದೂರು ದಾಖಲು

    ಬಳ್ಳಾರಿ: ಮಾಜಿ ಸಚಿವ ಜನಾರ್ದನರೆಡ್ಡಿ ಅವರ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. ಬಳ್ಳಾರಿ ಮಹಾನಗರ ಪಾಲಿಕೆಯ ಸದಸ್ಯೆಯಾಗಿದ್ದ ಪದ್ಮಾವತಿ ಯಾದವ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ಸುಬ್ಬಾರಾಯಡುಗೆ ಮಾಜಿ ಸಚಿವ ಜನಾರ್ದನರೆಡ್ಡಿ ಜೀವ ಬೆದರಿಕೆ ಹಾಕಿದ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ದೂರು ದಾಖಲಾಗಿದೆ.

    ಏನಿದು ಪ್ರಕರಣ?: 2010 ರ ಫೆಬ್ರವರಿ 10ರಂದು ಪಾಲಿಕೆ ಸದಸ್ಯೆಯಾಗಿದ್ದ ಪದ್ಮಾವತಿ ಯಾದವ್‍ರನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣವನ್ನು ಅಂದು ಸಿಐಡಿ ವಹಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಸಿಐಡಿ ಸಾಕ್ಷಿಗಳ ಕೊರತೆಯಿಂದ ಪ್ರಕರಣವನ್ನು ಅಂತ್ಯಗೊಳಿಸಿತ್ತು.

    ಪದ್ಮಾವತಿ ಯಾದವ್‍

    ಪದ್ಮಾವತಿ ಯಾದವ್ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಪದ್ಮಾವತಿ ಸಹೋದರ ಸುಬ್ಬಾರಾಯಡು ಅವರು ಒತ್ತಾಯಿಸಿದ್ರು. ನಾನು ಸಿಬಿಐ ತನಿಖೆಗೆ ಒತ್ತಾಯಿಸಿದ್ದಕ್ಕೆ ಈಗ ಜನಾರ್ದನ ರಡ್ಡಿ ನನಗೆ ಜೀವಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಸುಬ್ಬಾರಾಯಡು ಬಳ್ಳಾರಿ ಎಸ್ಪಿ ಆರ್.ಚೇತನ್ ಹಾಗೂ ಐಜಿಪಿ ಮುರಗನ್ ರಿಗೆ ಪತ್ರ ಮುಖೇನ ದೂರು ಸಲ್ಲಿಸಿದ್ದಾರೆ.

     

    ಪದ್ಮಾವತಿ ಯಾದವ್‍
  • ಪೊಲೀಸ್ ಅಕ್ರಮ ವರ್ಗಾವಣೆ – ಸಿಎಂ ಸೇರಿದಂತೆ 27 ಸಚಿವರ ವಿರುದ್ಧ ಲೋಕಾಯುಕ್ತಗೆ ದೂರು

    ಪೊಲೀಸ್ ಅಕ್ರಮ ವರ್ಗಾವಣೆ – ಸಿಎಂ ಸೇರಿದಂತೆ 27 ಸಚಿವರ ವಿರುದ್ಧ ಲೋಕಾಯುಕ್ತಗೆ ದೂರು

    ಬೆಂಗಳೂರು: ಪೊಲೀಸ್ ಅಧಿಕಾರಿಗಳ ಅಕ್ರಮ ವರ್ಗಾವಣೆಯಲ್ಲಿ ಸಚಿವರ ಪಾತ್ರವಿರುವ ಬಗ್ಗೆ ಆರೋಪಿಸಿ ಲೋಕ್ತಾಯುಕ್ತಗೆ ದೂರು ಸಲ್ಲಿಸಲಾಗಿದೆ.

    ಸಿಎಂ ಸಿದ್ದರಾಮಯ್ಯ ಸೇರಿದಂತೆ ಒಟ್ಟು 27 ಸಚಿವರ ವಿರುದ್ಧ ಲೋಕಾಯುಕ್ತಗೆ ದೂರು ನೀಡಲಾಗಿದೆ. ಅಖಿಲ ಭಾರತ ಪೊಲೀಸ್ ಮಹಾಸಭಾ ಅಧ್ಯಕ್ಷರಾದ ಶಶಿಧರ್ ಲೋಕಾಯುಕ್ತಗೆ ದೂರು ನೀಡಿದ್ದು, ಪೊಲೀಸ್ ಅಧಿಕಾರಿಗಳ ವರ್ಗಾವಣೆಯಲ್ಲಿ ಅಕ್ರಮ ಎಸಗಿದ ಇವರ ವಿರುದ್ಧ ಕ್ರಮ ಕೈಗೊಳ್ಳುಬೇಕೆಂದು ಆಗ್ರಹಿಸಿದ್ದಾರೆ. ಹೈಕೋರ್ಟ್‍ನ ನಿರ್ದೇಶನದಂತೆ ದೂರು ನೀಡಿರುವುದಾಗಿ ಶಶಿಧರ್ ತಿಳಿಸಿದ್ದಾರೆ.

    ಪೊಲೀಸ್ ಅಧಿಕಾರಿಗಳ ವರ್ಗಾವಣೆಯಲ್ಲಿ ಅಕ್ರಮದ ಬಗ್ಗೆ ದೂರುದಾರರು ಈ ಹಿಂದೆ ಹೈಕೋರ್ಟ್‍ನಲ್ಲಿ ರಿಟ್ ಅರ್ಜಿ ಹಾಕಿದ್ದರು. ಲೋಕಾಯುಕ್ತಕ್ಕೆ ದೂರು ಸಲ್ಲಿಸುವಂತೆ ಹೈಕೋರ್ಟ್ ನಿರ್ದೇಶನ ನೀಡಿತ್ತು.