ವಿವಾದಾತ್ಮಕ ಹೇಳಿಕೆಯ ಮೂಲಕವೇ ಸಾಕಷ್ಟು ಸದ್ದು ಮಾಡುತ್ತಿರುವ ನಟ ಚೇತನ್ (Chetan) ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. ನಟ ಚೇತನ್ ಅವರು ತಮ್ಮ ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ನಾಡಪ್ರಭು ಕೆಂಪೇಗೌಡರ (Kempegowda) ವಿರುದ್ಧ ಅವಮಾನ ಮಾಡುವಂತಹ ಪೋಸ್ಟ್ ಹಾಕಿದ್ದಾರೆ ಎನ್ನುವ ಕಾರಣಕ್ಕಾಗಿ ವಕೀಲ ಆರ್.ಎಲ್.ಎನ್ ಮೂರ್ತಿ ಎನ್ನುವವರು ಶೇಷಾದ್ರಿ ಪುರಂ (Seshadripuram) ಪೊಲೀಸ್ ಠಾಣೆಯಲ್ಲಿ ಚೇತನ್ ವಿರುದ್ಧ ದೂರು (complaint) ನೀಡಿದ್ದಾರೆ.
ಕೆಂಪೇಗೌಡ ಉಳಿಗಮಾನ್ಯ ಜಾತಿ ಲಾಬಿಗಳ ಪ್ರಭಾವದಿಂದ ಈಗ ಪ್ರಮುಖ ಕರ್ನಾಟಕದ ಐಕಾನ್ ಆಗಿರುವ ಅತ್ಯಲ್ಪ ಐತಿಹಾಸಿಕ ವ್ಯಕ್ತಿ. ಟಿಪ್ಪು ಸುಲ್ತಾನ್ ಒಬ್ಬ ಐತಿಹಾಸಿಕವಾಗಿ ಬಹಳ ಮಹತ್ವದ ವ್ಯಕ್ತಿ. ಅವರ ಜನ್ಮವು ಮುಸ್ಲಿಮರಾಗಿ ಅವರ ಇಂದಿನ ಮಾನ್ಯತೆಗೆ ಅಡ್ಡಿಯಾಗಿದೆ. ದುರಾದೃಷ್ಟವಶಾತ್ ಒಬ್ಬ ವ್ಯಕ್ತಿಯು ಹುಟ್ಟಿದ ಸಮುದಾಯಕ್ಕೆ ಅವನ/ಅವಳ ಸಾಮಾಜಿಕ ಕೊಡುಗೆಗಳಿಗಿಂತ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದು ಚೇತನ್ ಬರೆದಿದ್ದರು.
ಈ ಟ್ವೀಟ್ ಅನ್ನು ಆಧರಿಸಿ ಮೂರ್ತಿ ಎನ್ನುವವರು ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಚೇತನ್ ವಿರುದ್ಧ ದೂರು ದಾಖಲಿಸಿದ್ದಾರೆ. ಚೇತನ್ ನೇರ ನಿಷ್ಠುರದ ಕಾರಣದಿಂದಾಗಿ ಆಗಾಗ್ಗೆ ಸುದ್ದಿ ಆಗುತ್ತಲೇ ಇರುತ್ತಾರೆ. ಇಂತಹ ವಿಚಾರಗಳಿಗಾಗಿ ಹಲವಾರು ಬಾರಿ ಇವರ ಮೇಲೆ ದೂರುಗಳು ದಾಖಲಾಗಿವೆ.
ತಮಿಳು (Tamil) ಚಿತ್ರೋದ್ಯಮ ಖ್ಯಾತ ವಿಲನ್ ಮನ್ಸೂರ್ ಅಲಿ ಖಾನ್ (Mansoor Ali Khan), ನಿಜ ಜೀವನದಲ್ಲೂ ವಿಲನ್ ಆಗಿದ್ದಾರೆ. ಲಿಯೋ ಸಿನಿಮಾದಲ್ಲಿ ನಾಯಕಿ ತ್ರಿಷಾ ಅವರನ್ನು ರೇಪ್ ಮಾಡುವಂತಹ ಸನ್ನಿವೇಶ ಇದೆ ಅಂದುಕೊಂಡಿದೆ. ಆದರೆ, ಇರಲಿಲ್ಲ. ಇದ್ದರೆ ಅನಾಮತ್ತಾಗಿ ಎತ್ತಿಕೊಂಡು ಹೋಗಿ ಬೆಡ್ ಮೇಲೆ ಬೀಸಾಕುತ್ತಿದ್ದೆ. ಈ ಹಿಂದೆ ಖುಷ್ಬೂ ಸೇರಿದಂತೆ ಹಲವರನ್ನು ಹಾಗೆಯೇ ಮಾಡಿದ್ದೆ ಎಂದು ಹೇಳಿಕೆ ನೀಡಿದ್ದರು.
ತ್ರಿಷಾ (Trisha) ಬಗೆಗಿನ ಮತ್ತು ಒಟ್ಟಾರೆ ನಟಿಯರ ಬಗ್ಗೆ ಆಡಿದ್ದ ಈ ಮಾತು ಭಾರೀ ವಿವಾದಕ್ಕೆ ಕಾರಣವಾಗಿತ್ತು. ತ್ರಿಷಾ ಸೇರಿದಂತೆ ಹಲವರು ನಟನೆ ನಡೆಯನ್ನು ಖಂಡಿಸಿದ್ದರು. ನಟನ ವ್ಯಕ್ತಿತ್ವವನ್ನು ಅವನ ಮಾತು ತೋರಿಸುತ್ತಿದೆ ಎಂದು ರಿಯ್ಯಾಕ್ಟ್ ಮಾಡಿದ್ದರು. ಜೊತೆಗೆ ಲಿಯೋ ಸಿನಿಮಾದ ನಿರ್ದೇಶಕರು ಕೂಡ ಅಸಮಾಧಾನ ವ್ಯಕ್ತ ಪಡಿಸಿದ್ದರು. ಮತ್ತೆ ಆತನೊಂದಿಗೆ ನಾನು ನಟಿಸುವುದಿಲ್ಲ ಎಂದು ತ್ರಿಷಾ ಹೇಳಿಕೊಂಡಿದ್ದರು.
ಆಕ್ರೋಶ ಭುಗಿಲುಗೊಂಡ ಬೆನ್ನಲ್ಲೇ ಖುಷ್ಬೂ (Khushboo) ಕೂಡ ಘಟನೆಯ ಬಗ್ಗೆ ಮಾತನಾಡಿದ್ದರು. ಮನ್ಸೂರ್ ಅಲಿ ಖಾನ್ ನಂತಹ ಕೊಳಕು ಮನಸ್ಥಿತಿಯವರಿಗೆ ಕಾನೂನು ಮೂಲಕ ಪಾಠ ಕಲಿಸಬೇಕು. ಇಲ್ಲದಿದ್ದರೆ ಇಂತಹ ಗಂಡಸರ ಸಂಖ್ಯೆ ಹೆಚ್ಚಾಗುತ್ತದೆ ಎಂದು ಮಾತನಾಡಿದ್ದರು. ಮತ್ತು ತಾವು ಕಾನೂನು ಮೂಲಕವೇ ಉತ್ತರಿಸುವುದಾಗಿ ತಿಳಿಸಿದ್ದರು.
ಇಷ್ಟೆಲ್ಲ ನಡೆದರೂ ಮನ್ಸೂರ್ ಅಲಿ ಖಾನ್ ಮಾತ್ರ ಕ್ಷಮೆ ಕೇಳುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ನನ್ನ ಮಾತು ತಿರುಚಲಾಗಿದೆ ಎಂದು ಮಾತನಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಆಯೋಗ ಮಧ್ಯ ಪ್ರವೇಶಿಸಿತ್ತು. ದೂರು ದಾಖಲಿಸುವಂತೆ ಪೊಲೀಸ್ ಇಲಾಖೆಗೆ ತಿಳಿಸಿತ್ತು. ಅದರಂತೆ ತಮಿಳು ನಾಡು ಪೊಲೀಸರು ನಟನ ವಿರುದ್ಧ ದೂರು ((Complaint) ದಾಖಲಿಸಿಕೊಂಡಿದ್ದಾರೆ.
ಹೊಸಬರ ಸಿನಿಮಾ ‘ರಿಚ್ಚಿ’ (Ritchie) ಮೊನ್ನೆ ಮೊನ್ನೆಯಷ್ಟೇ ತನ್ನ ಹಾಡುಗಳನ್ನು ಬಿಡುಗಡೆ ಮಾಡಿತ್ತು. ಕುನಾಲ್ ಗಾಂಜಾವಾಲ್ ಈ ಸಿನಿಮಾಗಾಗಿ ಮತ್ತೆ ಕನ್ನಡಕ್ಕೆ ಬಂದಿದ್ದರು. ಒಂದೊಳ್ಳೆ ಹಾಡು ಹೇಳಿದ್ದರು. ನಗನಗ್ತಾ ಶೂಟಿಂಗ್ ಮುಗಿಸಿ, ಸಿನಿಮಾ ರಿಲೀಸ್ ಗೆ ರೆಡಿ ಮಾಡಿಕೊಳ್ಳುತ್ತಿದ್ದ ತಂಡಕ್ಕೆ ಈಗೊಂದು ಶಾಕಿಂಗ್ ನ್ಯೂಸ್ ಬಂದಿದೆ.
ರಿಚ್ಚಿ ಸಿನಿಮಾದ ನಾಯಕ, ನಿರ್ಮಾಪಕ, ನಿರ್ದೇಶಕ ರಿಚ್ಚಿ ವಿರುದ್ಧ ಸಿನಿಮಾದ ನಾಯಕಿ ಪೊಲೀಸ್ (police) ಠಾಣೆ ಮೆಟ್ಟಿಲು ಏರಿದ್ದಾರೆ. ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಈ ಇಬ್ಬರ ನಡುವೆ ಜಗಳ ನಡೆದಿದ್ದು, ನಟಿ ರೆಮೋಲಾ (Remola) ಹಾಗೂ ನಟಿಯ ತಾಯಿ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ರಿಚ್ಚಿ ವಿರುದ್ಧ ದೂರು (complaint) ದಾಖಲಿಸಿದ್ದಾರೆ.
ತನ್ನದೇ ಹೆಸರನ್ನು ಸಿನಿಮಾದ ಟೈಟಲ್ ಆಗಿಸಿ, ಹಲವು ಜವಾಬ್ದಾರಿಗಳನ್ನು ಹೊತ್ತಿದ್ದಾರೆ ರಿಚ್ಚಿ. ಈ ಸಿನಿಮಾಗೆ ಕಿರುತೆರೆ ನಟಿ ರೆಮೋಲಾ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಸಂಭಾವನೆಯಾಗಿ ಎರಡು ಲಕ್ಷ ರೂಪಾಯಿಯ ಚೆಕ್ ಅನ್ನೂ ನೀಡಿದ್ದಾರೆ. ಆದರೆ, ಕಾಲ್ ಶೀಟ್ ವಿಚಾರವಾಗಿ ಇಬ್ಬರ ಮಧ್ಯ ಗಲಾಟೆಯಾಗಿದೆ. ಅಲ್ಲದೇ, ರೆಮೋಲಾಗೆ ಕೊಟ್ಟಿರುವ ಚೆಕ್ ಬೌನ್ಸ್ ಕೂಡ ಆಗಿದೆ. ಈ ವಿಚಾರವಾಗಿ ನಟಿ ಮತ್ತು ರಿಚ್ಚಿ ನಡುವೆ ಮಾತಿನ ಚಕಮಕಿ ನಡೆದಿದೆ. ಆಗ ರಮೋಲಾ ಚಲನಚಿತ್ರ ವಾಣಿಜ್ಯ ಮಂಡಳಿಗೆ ಈ ವಿಷಯವನ್ನು ಗಮನಕ್ಕೆ ತಂದಿದ್ದಾರೆ. ಅಲ್ಲಿ ಇತ್ಯರ್ಥವಾಗದೇ ಇದೀಗ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ.
ನಟಿಯ ತಾಯಿ ತಮಗೆ ಅವಾಚ್ಯ ಪದಗಳಿಂದ ಬೈದಿದ್ದಾರೆ ಎಂದು ರಿಚ್ಚಿ ಆರೋಪ ಮಾಡಿದ್ದಾರೆ. ಅದಕ್ಕೆ ಆಡಿಯೋ ಕ್ಲಿಪ್ ವೊಂದನ್ನು ನೀಡಿದ್ದಾರೆ. ಇಂದು ಪೊಲೀಸ್ ಠಾಣೆಗೆ ಹಾಜರಾಗಿ ತಮ್ಮ ಮಾತುಗಳನ್ನು ದಾಖಲಿಸಲಿದ್ದಾರಂತೆ ರಿಚ್ಚಿ.
ಬಿಗ್ ಬಾಸ್ (Bigg Boss Kannada) ಸ್ಪರ್ಧಿ, ನಟಿ ತನಿಷಾ ಕುಪ್ಪಂಡ (Tanisha Kuppanda) ವಿರುದ್ಧ ಮತ್ತೊಂದು ದೂರು (Complaint) ದಾಖಲಾಗಿದೆ. ಸದ್ಯ ಬಿಗ್ ಬಾಸ್ ಮನೆಯಲ್ಲಿರುವ ನಟಿ ಮೇಲೆ ಜಾತಿ ನಿಂದನೆ ವಿಚಾರವಾಗಿ ಎಸ್‌ಸಿಎಸ್ಟಿ ಕಾಯ್ದೆಯಡಿ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಮತ್ತೊಂದು ದೂರು ದಾಖಲಿಸಿದ್ದಾರೆ. ಈ ಹಿಂದೆ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ನಟಿ ತನಿಷಾ ಕುಪ್ಪಂಡ ವಿರುದ್ಧ ಅಖಿಲ ಕರ್ನಾಟಕ ಬೋವಿ ಸಮಾಜದ ರಾಜ್ಯಾಧ್ಯಕ್ಷೆ ಪಿ ಪದ್ಮಾ ಎಂಬುವರಿಂದ ನವೆಂಬರ್ 11ರಂದು ದೂರು ದಾಖಲಾಗಿದ್ದು, ನವೆಂಬರ್ 12 ದೂರಿನ ಆಧಾರದ ಮೇಲೆ ಕುಂಬಳಗೋಡು ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಖಾಸಗಿ ವಾಹಿನಿಯ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಅವಹೇಳನಕಾರಿ ಪದ ಬಳಕೆ ಬಗ್ಗೆ ತನಿಷಾ ವಿರುದ್ಧ ಆರೋಪ ಎದುರಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಕುಂಬಳಗೋಡು ಪೊಲೀಸರು (Police) ಬಿಗ್ ಬಾಸ್ ಮನೆಗೆ ತೆರಳಿ, ನಟಿಯ ವಿಚಾರಣೆ ನಡೆಸಿದ್ದಾರೆ. ಜೊತೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಪೊಲೀಸರು ಮುಂದುವರೆಸಿದ್ದಾರೆ.
ಬಿಗ್ ಬಾಸ್ ಆಡಳಿತ ಮಂಡಳಿಗೂ ಪೊಲೀಸರು ನೋಟಿಸ್ ನೀಡಿದ್ದು, ಪ್ರೋಮೊದ ಓರಿಜನಲ್ ಫುಟೇಜ್ ಕೊಡಲು ಸೂಚಿಸಿದ್ದಾರೆ. ಪ್ರೋಮೋ ವಿಡಿಯೋ ಜೊತೆಗೆ ಒರಿಜಿನಲ್ ವೀಡಿಯೋವನ್ನು ಇಂದು ಪೊಲೀಸರು ಸಂಜೆ ಎಫ್.ಎಸ್.ಎಲ್ ಗೆ ಕಳುಹಿಸುವ ಸಾಧ್ಯತೆ ಇದ್ದು, ವರದಿ ಬಂದ ನಂತರ ತನಿಷಾ ಅವರ ವಿಚಾರಣೆಯನ್ನು ಪೊಲೀಸರು ಮುಂದುವರೆಸಲಿದ್ದಾರೆ.
ಚಂದ್ರಯಾನ 3 (Chandrayaan 3) ಯೋಜನೆ ಬಗ್ಗೆ ನಟ ಪ್ರಕಾಶ್ ರಾಜ್ (Prakash Raj) ವ್ಯಂಗ್ಯ ಮಾಡಿ ಟ್ವೀಟ್ ಮಾಡಿದ್ದರು. ಅವರ ಈ ಟ್ವೀಟ್ ಭಾರೀ ವೈರಲ್ ಆಗಿತ್ತು. ಜೊತೆಗೆ ಅನೇಕರು ಅದಕ್ಕೆ ಆಕ್ಷೇಪವನ್ನೂ ವ್ಯಕ್ತ ಪಡಿಸಿದ್ದರು. ಇಡೀ ಭಾರತವೇ ಹೆಮ್ಮೆ ಪಡುತ್ತಿರುವಾಗ ಪ್ರಕಾಶ್ ರಾಜ್ ಈ ರೀತಿ ವ್ಯಂಗ್ಯ ಮಾಡುವುದು ಸರಿಯಲ್ಲ ಎಂದು ಹಲವರು ಬುದ್ದಿವಾದ ಹೇಳಿದ್ದರು. ನೆಗೆಟಿವ್ ಕಾಮೆಂಟ್ ಹೆಚ್ಚಾದ ಬೆನ್ನಲ್ಲೇ ಮತ್ತೊಂದು ಟ್ವೀಟ್ ಮಾಡಿದ್ದರು ಪ್ರಕಾಶ್ ರಾಜ್. ಹಾಸ್ಯ ಪ್ರಜ್ಞೆ ಇಲ್ಲದವರು ಎಂದು ಟೀಕಿಸಿದ್ದರು.
ಈ ಬೆಳವಣಿಗೆಯ ನಡುವೆಯೇ ಚಂದ್ರಯಾನ ಮತ್ತು ಭಾರತೀಯ ವಿಜ್ಞಾನಿಗಳನ್ನು ಅವಮಾನಿಸಿದ್ದಾರೆ ಎನ್ನುವ ಕಾರಣಕ್ಕಾಗಿ ಬಾಗಲಕೋಟೆ ಜಿಲ್ಲೆ ಬನಹಟ್ಟಿ (Banahatti) ಪೊಲೀಸ್ ಠಾಣೆಯಲ್ಲಿ ಪ್ರಕಾಶ್ ರಾಜ್ ವಿರುದ್ದ ದೂರು (Complaint) ದಾಖಲಾಗಿದೆ. ಹಿಂದು ಸಂಘಟನೆ ಮುಖಂಡ ನಂದು ಗಾಯಕವಾಡ ಹಾಗೂ ಇತರರಿಂದ ದೂರು ಸಲ್ಲಿಸಿದ್ದಾರೆ. ನಮ್ಮ ಹೆಮ್ಮೆಯ ವಿಜ್ಞಾನಿಗಳ ಬಗ್ಗೆ ವ್ಯಂಗ್ಯವಾಗಿ ಫೋಸ್ಟ್ ಮಾಡಿ ಪ್ರಕಾಶ್ ರಾಜ್ ತಮ್ಮ ವಿಕೃತಿ ಮೆರೆದಿದ್ದಾರೆ. ಅವರು ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡಿದ್ದಾರೆ. ಕೂಡಲೇ ಅವರನ್ನ ಬಂಧಿಸುವಂತೆ ದೂರಿನಲ್ಲಿ ಆಗ್ರಹಿಸಿದ್ದಾರೆ. ಇಸ್ರೋ ಕಳುಹಿಸಿರುವ ಚಂದ್ರಯಾನ ನೌಕೆಯಿಂದ ಭಾರತದ ಶಕ್ತಿಯನ್ನು ಇಮ್ಮಡಿಗೊಳಿಸಿದ್ದಾರೆ. ಈ ಬಗ್ಗೆ ನಮ್ಮ ವಿಜ್ಞಾನಿಗಳನ್ನ ಎಲ್ಲರೂ ಹೊಗಳುತ್ತಿರುವಾಗ. ಪ್ರಕಾಶ್ ರಾಜ್ ವಿಜ್ಞಾನಿಗಳ ಬಗ್ಗೆ ವ್ಯಂಗ್ಯವಾಗಿ ಟ್ವೀಟ್ ಮಾಡುವ ಮೂಲಕ ವಿಕೃತಿ ಮೆರೆದಿದ್ದಾರೆ. ಅವರ ವಿರುದ್ದ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲು ಅರ್ಜಿಯಲ್ಲಿ ಒತ್ತಾಯಿಸಲಾಗಿದೆ.
ನಿನ್ನೆಯಷ್ಟೇ ಸ್ಪಷ್ಟನೆ ನೀಡಿದ್ದ ಪ್ರಕಾಶ್ ರಾಜ್
ಚಂದ್ರಯಾನ-3 (Chandrayaan-3) ಕುರಿತಂತೆ ಟ್ವೀಟ್ (Tweet) ಮಾಡಿ ವಿವಾದ (Controversy) ಮೈಮೇಲೆ ಎಳೆದುಕೊಂಡಿದ್ದ ದಕ್ಷಿಣ ಭಾರತದ ಹೆಸರಾಂತ ನಟ ಪ್ರಕಾಶ್ ರಾಜ್ ಮತ್ತೊಂದು ಟ್ವೀಟ್ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ. ದ್ವೇಷಕ್ಕೆ ದ್ವೇಷ ಮಾತ್ರ ಕಾಣಿಸುತ್ತದೆ, ನಿಮಗೆ ಜೋಕ್ ಅರ್ಥವಾಗದಿದ್ದರೆ, ಅದು ನಿಮ್ಮ ಮೇಲೆಯೇ ಮಾಡಿದ ಜೋಕ್ ಆಗುತ್ತದೆ, ಬಾಲಿಶವಾಗಿ ವರ್ತಿಸುವುದನ್ನ ನಿಲ್ಲಿಸಿ ಎಂದು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ. ಚಂದ್ರಯಾನ ಇದೀಗ ಕಳುಹಿಸಿರುವ ಫೋಟೋ ಎಂದು ಕ್ಯಾಪ್ಷನ್ ನೀಡಿ ‘ಚಾಯ್ ವಾಲಾ’ ಫೋಟೋ ಹಾಕಿದ್ದ ಅವರ ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು.
ಇಡೀ ದೇಶವೇ ಹೆಮ್ಮೆ ಪಡುವಂತೆ ನಿಮ್ಮ ವಿಜ್ಞಾನಿಗಳು ಕೆಲಸ ಮಾಡಿದ್ದಾರೆ. ಜಗತ್ತೇ ಈ ಕೆಲಸಕ್ಕಾಗಿ ಕೊಂಡಾಡುತ್ತಿದೆ. ಆದರೆ ಪ್ರಕಾಶ್ ರೈ ಈ ರೀತಿ ಗೇಲಿ ಮಾಡುವುದು ಸರಿಯಲ್ಲ. ಭಾರತದ ಅಸ್ಮಿತೆಯನ್ನೇ ಪ್ರಶ್ನೆ ಮಾಡುವ ನಟನಿಗೆ ಸರಿಯಾದ ಶಿಕ್ಷೆಯಾಗಬೇಕು ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ. ಪ್ರಕಾಶ್ ರೈ ಅವರ ಟ್ವೀಟ್ ಸೋಷಿಯಲ್ ಮೀಡಿಯಾದಲ್ಲಿ ಪರ ವಿರೋಧ ಚರ್ಚೆಗೆ ಕಾರಣವಾಗಿದೆ. ಹೆಸರಾಂತ ನಟನಾಗಿ ಯಾವ ರೀತಿಯಲ್ಲಿ ನಡೆದುಕೊಳ್ಳಬೇಕು ಎನ್ನುವುದನ್ನು ಕಲಿಸಬೇಕಿದೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಪ್ರಕಾಶ್ ರೈ ಪರವಾಗಿ ಕಾಮೆಂಟ್ ಮಾಡಿದ್ದಾರೆ.
ಈ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಪ್ರಕಾಶ್ ರಾಜ್, ʻದ್ವೇಷಕ್ಕೆ ದ್ವೇಷ ಮಾತ್ರ ಕಾಣಿಸುತ್ತದೆ. ನಾನು ಉಲ್ಲೇಖಿಸಿದ್ದು ನಮ್ಮ ಕೇರಳದ ಚಾಯ್‌ವಾಲಾರನ್ನ ವಿಜೃಂಭಿಸುವ ಆರ್ಮ್‌ಸ್ಟ್ರಾಂಗ್ ಕಾಲದ ಜೋಕ್. ಟ್ರೋಲಿಗರ ಕಣ್ಣಿಗೆ ಕಾಣಿಸಿದ ಚಾಯ್‌ವಾಲಾ ಯಾರು? ನಿಮಗೆ ಜೋಕ್ ಅರ್ಥವಾಗದಿದ್ದರೆ, ಅದು ನಿಮ್ಮ ಮೇಲೆಯೇ ಮಾಡಿದ ಜೋಕ್ ಆಗುತ್ತದೆ. ಬಾಲಿಶವಾಗಿ ವರ್ತಿಸುವುದನ್ನು ನಿಲ್ಲಿಸಿʼ ಎಂದು ಸ್ಪಷ್ಟನೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ನಟ ಉಪೇಂದ್ರ (Upendra) ಜಾತಿನಿಂದನೆಯ (Caste Abuse) ಅವಹೇಳನಕಾರಿ ಪದವನ್ನು ಬಳಸಿದ್ದಾರೆ ಎಂಬ ವಿಚಾರ ವಿಪರೀತ ಚರ್ಚೆಗೆ ಕಾರಣವಾಗಿದೆ. ಅವರು ಆಡಿದ ಮಾತುಗಳ ವಿಚಾರವಾಗಿ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ನಟ ಉಪೇಂದ್ರ ಮೇಲೆ ಅಟ್ರಾಸಿಟಿ ಕೇಸ್ ದಾಖಲಿಸಿ ಅವರನ್ನು ಗಡಿಪಾರು ಮಾಡುವಂತೆ ಕೋಲಾರದಲ್ಲಿ (Kolar) ಆಗ್ರಹಿಸಲಾಗಿದೆ. ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಉಪೇಂದ್ರ ವಿರುದ್ಧ ಮಾಲೂರು ಪೊಲೀಸ್ ಠಾಣೆಗೆ ದೂರು (Complaint) ನೀಡಿದೆ. ಕರ್ನಾಟಕ ದಲಿತ ಸಂಘರ್ಷ ಸಮಿತಿ ಸದಸ್ಯ ಎಸ್.ಎಂ.ವೆಂಕಟೇಶ್ ಹಾಗೂ ವಿಜಿ ನೇತೃತ್ವದಲ್ಲಿ ದೂರು ಸಲ್ಲಿಸಿದ್ದಾರೆ.
ಬೆಂಗಳೂರಿನಲ್ಲಿ ಮೂರು ದೂರು ಹಾಗೂ ಕೋಲಾರದಲ್ಲಿ ಒಂದು ದೂರ ದಾಖಲಾದ ಬೆನ್ನಲ್ಲೇ ಮಂಡ್ಯದಲ್ಲೂ (Mandya) ಉಪೇಂದ್ರ ವಿರುದ್ದ ದೂರು ಸಲ್ಲಿಕೆಯಾಗಿದೆ. ಪರಿಶಿಷ್ಟ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲೂ ದೂರು ದಾಖಲಿಸಿದ್ದಾರೆ. ಮದ್ದೂರು ತಾಲೂಕು ದಲಿತ ಸಂಘಟನೆಗಳ ಒಕ್ಕೂಟದಿಂದ ಈ ದೂರು ಸಲ್ಲಿಕೆಯಾಗಿದೆ.
ಒಂದು ಕಡೆ ತಮ್ಮ ವಿರುದ್ಧ ದೂರು ದಾಖಲಾಗುತ್ತಿದ್ದರೆ ಮತ್ತೊಂದು ಕಡೆ ತಮ್ಮ ಮೇಲೆ ದಾಖಲಾಗಿರುವ ಎಫ್.ಐ.ಆರ್ ಅನ್ನು ರದ್ದುಗೊಳಿಸುವಂತೆ ನಟ ಉಪೇಂದ್ರ ಹೈಕೋರ್ಟ್ (High Court) ಮೆಟ್ಟಿಲು ಏರಿದ್ದಾರೆ. ಈಗಾಗಲೇ ತಾವು ಆಡಿದ ಮಾತಿನ ಬಗ್ಗೆ ಕ್ಷಮೆ ಕೇಳಿದ್ದೇನೆ. ಜೊತೆಗೆ ಆ ವಿಡಿಯೋವನ್ನು ಸೋಷಿಯಲ್ ಮೀಡಿಯಾದಿಂದಲೇ ಡಿಲಿಟ್ ಮಾಡಿದ್ದೇನೆ. ಯಾರ ಮನಸ್ಸಿಗೂ ನೋವು ಮಾಡುವ ಉದ್ದೇಶದಿಂದ ಆಡಿದ ಮಾತು ಅದಾಗಿರಲಿಲ್ಲವೆಂದು ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಒಂದು ಕಡೆ ಎಫ್.ಐ.ಆರ್ ರದ್ದು ಕೋರಿ ಉಪೇಂದ್ರ ಅರ್ಜಿ ಸಲ್ಲಿಸಿದ್ದರೆ, ಮತ್ತೊಂದು ಕಡೆ ರಾಜ್ಯ ನಾನಾ ಕಡೆಗಳಲ್ಲೂ ಇವರ ವಿರುದ್ಧ ದೂರು ನೀಡಲಾಗುತ್ತಿದೆ. ಬೆಂಗಳೂರಿನಲ್ಲಿ ಎರಡು ಕಡೆ ಎಫ್.ಐ.ಆರ್ ದಾಖಲಾಗಿದ್ದರೆ ಮಂಡ್ಯ ಮತ್ತು ಕೋಲಾರದಲ್ಲೂ ಪೊಲೀಸ್ ಠಾಣೆಗೆ ಉಪೇಂದ್ರ ವಿರುದ್ಧ ದೂರು ದಾಖಲಾಗಿದೆ. ಅಲ್ಲಲ್ಲಿ ಪ್ರತಿಭಟನೆಗಳು ಕೂಡ ನಡೆಯುತ್ತಿವೆ. ಇದನ್ನೂ ಓದಿ:Kiccha 46: ಸುದೀಪ್ ಸಿನಿಮಾದಲ್ಲಿ ಸಂಯುಕ್ತಾ ಹೊರನಾಡ್
ಬೆಂಗಳೂರಿನ ಚೆನ್ನಮ್ಮನ ಅಚ್ಚುಕಟ್ಟು ಪ್ರದೇಶ ಪೊಲೀಸರು ನಟ ಉಪೇಂದ್ರ ಅವರಿಗೆ ನೋಟಿಸ್ ಕೊಡುತ್ತಿದ್ದಂತೆ ಫೋನ್ ಸ್ವಿಚ್ ಆಪ್ ಮಾಡಿಕೊಂಡು ಉಪೇಂದ್ರ ಎಸ್ಕೇಪ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಬೇರೆಯವರ ಕಡೆಯಿಂದ ಉಪೇಂದ್ರ ಅವರನ್ನು ಪೊಲೀಸರು ಸಂಪರ್ಕ ಮಾಡುತ್ತಿದ್ದಾರಂತೆ.
ಉಪೇಂದ್ರ ಅವರಿಗೆ ಸೇರಿದ ಎರಡು ಮನೆ ಹಾಗೂ ಅವರ ವಾಟ್ಸಪ್ ಗೆ ನೋಟಿಸ್ ಕಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಅಲ್ಲದೇ, ಹಲಸೂರು ಗೇಟ್ ಠಾಣೆಯಲ್ಲಿ ದಾಖಲಾಗಿರೋ ಎಫ್ ಐ ಆರ್ ಅನ್ನು ಕೂಡ ಎಸಿಪಿ ವಿವಿಪುರಂಗೆ ವರ್ಗಾವಣೆ ಮಾಡಲಿದ್ದಾರೆ ಅಂತ ಹಲಸೂರುಗೇಟ್ ಪೊಲೀಸರು.
ಬೆಂಗಳೂರು: ನಾನು ಯಾರಿಗೂ ಕ್ಷಮೆ ಕೇಳಿಲ್ಲ, ಕ್ಷಮೆ ಕೇಳುವ ಹೇಡಿತನ ನನ್ನದಲ್ಲ. ನಾನು ಕ್ಷಮೆ ಕೇಳುವ ಯಾವ ತಪ್ಪು ಮಾಡಿಲ್ಲ. ನನ್ನ ಆತ್ಮಗೌರಕ್ಕೆ ಧಕ್ಕೆ ಆದ್ರೆ ರಾಜೀನಾಮೆ ಕೊಡುತ್ತೇನೆ ಅಂತ ಹೇಳಿರುವುದು ನಿಜ ಎಂದು ಕಾಂಗ್ರೆಸ್ ಶಾಸಕ ಬಿ.ಆರ್ ಪಾಟೀಲ್ (BR Patil) ಗುಡುಗಿದ್ದಾರೆ.
ಶಾಸಕ ಬಿ.ಆರ್ ಪಾಟೀಲ್ ಲೆಟರ್ ಹೆಡ್‌ನಲ್ಲಿ ಸಿಎಂಗೆ (Chief Minister) ಪತ್ರ ಬರೆದಿದ್ದು ಇತ್ತೀಚೆಗೆ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚೆಯಾಗಿತ್ತು. ಈ ವೇಳೆ ಸಿಎಂ, ಸಚಿವರು ಸೇರಿದಂತೆ ಉಳಿದ ಶಾಸಕರು ಸಹ ʻʻಸಿಎಂಗೆ ಶಾಸಕರು ಪತ್ರ ಬರೆದಿದ್ದು ತಪ್ಪುʼʼ ಎಂದು ಹೇಳಿದ್ದರು. ಇದರಿಂದ ಸಭೆಯಲ್ಲಿ ತಮ್ಮ ವಿರುದ್ಧ ಮಾತನಾಡಿದ್ದನ್ನ ಕಂಡು ಕೆಂಡಾಮಂಡಲವಾಗಿದ್ದರು. ಎಲ್ಲರು ತಮ್ಮನ್ನ ತಪ್ಪಿತಸ್ಥರಂತೆ ನೋಡಿದ್ದಾರೆಂದು ಅಸಮಾಧಾನಗೊಂಡು ಸಭೆಯಿಂದ ಹೊರಬರಲು ಮುಂದಾಗಿದ್ದರು. ಇದನ್ನೂ ಓದಿ: ಸಚಿವರ ವಿರುದ್ಧ ಬೇಸರಗೊಂಡ್ರಾ ಶಾಸಕರು? – ಕಾಂಗ್ರೆಸ್ ಶಾಸಕರ ಆರೋಪ ಏನು?
ಈ ಬೆಳವಣಿಗೆಗೂ ಮುನ್ನ ತನ್ನ ಲೆಟರ್‌ಹೆಡ್ ಇರುವ ಪತ್ರ ವೈರಲ್ ಆದ ಕೂಡಲೇ ಬಿ.ಆರ್ ಪಾಟೀಲ್ ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದರು. ನನ್ನ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ನಡುವೆ ದ್ವೇಷ ಹುಟ್ಟಿಸಿ ಅದರ ರಾಜಕೀಯ ಲಾಭ ಪಡೆಯಲು ಕೆಲವರು ನಕಲಿ ಪತ್ರ ಸೃಷ್ಟಿ ಮಾಡಿದ್ದಾರೆ. ಸುಳ್ಳು ಸುದ್ದಿ ಸೃಷ್ಟಿಸಿದವರ ವಿರುದ್ಧ ತನಿಖೆ ನಡೆಸುವಂತೆ ದೂರಿನಲ್ಲಿ ಮನವಿ ಮಾಡಿದ್ದರು.
ದೂರಿನಲ್ಲಿ ಏನಿತ್ತು?
ನನ್ನ ಹೆಸರಿನ ಹಳೆ ಲೆಟರ್ ಹೆಡ್ ಅನ್ನು ಉಪಯೋಗಿಸಿ ಇಲ್ಲಸಲ್ಲದ ವಿಷಯವನ್ನು ಪ್ರಸ್ತಾಪ ಮಾಡಿ ನನ್ನ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ನಡುವೆ ದ್ವೇಷ ಹುಟ್ಟಿಸಿ ಅದರ ರಾಜಕೀಯ ಲಾಭ ಪಡೆಯಲು ಕೆಲವರು ಹುನ್ನಾರ ನಡೆಸಿದ್ದಾರೆ. ಆ ಪತ್ರದಲ್ಲಿ ಸಹಿ ಮಾಡಿದ್ದು ನನ್ನ ಹಸ್ತಾಕ್ಷರದ ಪ್ರತಿಯನ್ನು ಪೇಸ್ಟ್ ಮಾಡಿದ್ದಾರೆ. ನನ್ನ ಲೆಟರ್ ಹೆಡ್ ಕಳೆದ ಬಾರಿ ಶಾಸಕನಾಗಿದ್ದಾಗ ನಾನು ಕಲಬುರಗಿ ಶಾಂತಿ ನಗರದಲ್ಲಿರುವ ಹಳೆ ವಿಳಾಸ ಕಲರ್ ಜೆರಾಕ್ಸ್ ಆ ಪತ್ರದಲ್ಲಿ ಸಹಿ ತೆಗೆದು ಮಾಧ್ಯಮದಲ್ಲಿ ಹರಿಬಿಟ್ಟಿದ್ದಾರೆ. ಈಗ ಕಳೆದ 4 ವರ್ಷಗಳಿಂದ ನಾನು ಕಲಬುರಗಿ ನಗರದ ಅಕ್ಕಮಹಾದೇವಿ ಕಾಲೋನಿಯಲ್ಲಿ ವಾಸ ಮಾಡುತ್ತಿದ್ದು, ಈಗ ಬಳಸುವ ಲೇಟರ್ ಹೆಡ್‌ನಲ್ಲಿ ಹೊಸ ವಿಳಾಸವಿದೆ.
ಈ ಪತ್ರದಲ್ಲಿ ಅನುದಾನ ಬಿಡುಗಡೆ ಮಾಡುವುದಕ್ಕೂ ಸಚಿವರು 3ನೇ ವ್ಯಕ್ತಿ ಮೂಲಕ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ. ಸ್ಥಳೀಯ ಶಾಸಕರು ನಾವಾಗಿದ್ದರೂ ಅನುದಾನಕ್ಕಾಗಿ 3ನೇ ವ್ಯಕ್ತಿಯ ಮೊರೆ ಹೊಗಬೇಕಾಗಿದೆ ಎಂಬ ಆರೋಪ ಹೊರಿಸಿ ಈ ತರಹ ಸುಳ್ಳು ಸುದ್ದಿಯನ್ನು ಸೃಷ್ಟಿಸಿ ಮಾಧ್ಯಮಗಳಲ್ಲಿ ಹರಿಬಿಟ್ಟಿರುವುದು ತನಿಖೆಯಾಗಬೇಕು. ಇದರ ಹಿಂದೆ ಯಾರ ಕೈವಾಡವಿದೆ ಎಂಬುದು ಬಯಲಿಗೆ ತರಬೇಕು. ಅಂಥವರ ವಿರುದ್ಧ ಕಾನೂನಿನ ಪ್ರಕಾರ ಕ್ರಮ ಜರುಗಿಸಬೇಕೆಂದು ಒತ್ತಾಯಿಸುತ್ತೇನೆ ಅಂತಾ ದೂರಿನಲ್ಲಿ ಉಲ್ಲೇಖಿಸಿದ್ದರು.
ಕಲಬುರಗಿ: ತನ್ನ ಲೆಟರ್‌ಹೆಡ್ (Letter Head) ಇರುವ ಪತ್ರ ವೈರಲ್ ಆದ ಬೆನ್ನಲ್ಲೇ ಕಾಂಗ್ರೆಸ್ ಶಾಸಕ ಬಿ.ಆರ್ ಪಾಟೀಲ್ (B.R.Patil) ಕಲಬುರಗಿ (Kalaburagi) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು (Complaint) ನೀಡಿದ್ದಾರೆ.
ನನ್ನ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ನಡುವೆ ದ್ವೇಷ ಹುಟ್ಟಿಸಿ ಅದರ ರಾಜಕೀಯ ಲಾಭ ಪಡೆಯಲು ಕೆಲವರು ನಕಲಿ ಪತ್ರ ಸೃಷ್ಟಿ ಮಾಡಿದ್ದಾರೆ. ಸುಳ್ಳು ಸುದ್ದಿ ಸೃಷ್ಟಿಸಿದವರ ವಿರುದ್ಧ ತನಿಖೆ ನಡೆಸುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಸಚಿವರ ವಿರುದ್ಧ ಬೇಸರಗೊಂಡ್ರಾ ಶಾಸಕರು? – ಕಾಂಗ್ರೆಸ್ ಶಾಸಕರ ಆರೋಪ ಏನು?
ದೂರಿನಲ್ಲಿ ಏನಿದೆ?
ನನ್ನ ಹೆಸರಿನ ಹಳೆ ಲೆಟರ್ ಹೆಡ್ ಅನ್ನು ಉಪಯೋಗಿಸಿ ಇಲ್ಲಸಲ್ಲದ ವಿಷಯವನ್ನು ಪ್ರಸ್ತಾಪ ಮಾಡಿ ನನ್ನ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ನಡುವೆ ದ್ವೇಷ ಹುಟ್ಟಿಸಿ ಅದರ ರಾಜಕೀಯ ಲಾಭ ಪಡೆಯಲು ಕೆಲವರು ಹುನ್ನಾರ ನಡೆಸಿದ್ದಾರೆ. ಆ ಪತ್ರದಲ್ಲಿ ಸಹಿ ಮಾಡಿದ್ದು ನನ್ನ ಹಸ್ತಕ್ಷರದ ಪ್ರತಿಯನ್ನು ಪೇಸ್ಟ್ ಮಾಡಿದ್ದಾರೆ. ಮತ್ತು ನನ್ನ ಲೆಟರ್ ಹೆಡ್ ಕಳೆದ ಬಾರಿ ಶಾಸಕನಾಗಿದ್ದಾಗ ನಾನು ಕಲಬುರಗಿ ಶಾಂತಿ ನಗರದಲ್ಲಿರುವ ಹಳೆ ವಿಳಾಸ ಕಲರ್ ಜೆರಾಕ್ಸ್ ಆ ಪತ್ರದಲ್ಲಿ ಸಹಿ ತೆಗೆದು ಮಾಧ್ಯಮದಲ್ಲಿ ಹರಿಬಿಟ್ಟಿದ್ದಾರೆ. ಈಗ ಕಳೆದ 4 ವರ್ಷಗಳಿಂದ ನಾನು ಕಲಬುರಗಿ ನಗರದ ಅಕ್ಕಮಹಾದೇವಿ ಕಾಲೋನಿಯಲ್ಲಿ ವಾಸ ಮಾಡುತ್ತಿದ್ದು, ಈಗ ಬಳಸುವ ಲೇಟರ್ ಹೆಡ್‌ನಲ್ಲಿ ಹೊಸ ವಿಳಾಸವಿದೆ.
ಈ ಪತ್ರದಲ್ಲಿ ಅನುದಾನ ಬಿಡುಗಡೆ ಮಾಡುವುದಕ್ಕೂ ಸಚಿವರು 3ನೇ ವ್ಯಕ್ತಿ ಮೂಲಕ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ. ಸ್ಥಳಿಯ ಶಾಸಕರು ನಾವು ಆಗಿದ್ದರೂ ಅನುದಾನಕ್ಕಾಗಿ 3ನೇ ವ್ಯಕ್ತಿಯ ಮೊರೆ ಹೊಗಬೇಕಾಗಿದೆ ಎಂಬ ಆರೋಪ ಹೊರಿಸಿ ಈ ತರಹ ಸುಳ್ಳು ಸುದ್ಧಿಯನ್ನು ಸೃಷ್ಟಿಸಿ ಮಾಧ್ಯಮಗಳಲ್ಲಿ ಹರಿಬಿಟ್ಟಿರುವದು ತನಿಖೆಯಾಗಬೇಕು. ಇದರ ಹಿಂದೆ ಯಾರ ಕೈವಾಡವಿದೆ ಎಂಬುದು ಬಯಲಿಗೆ ತರಬೇಕು. ಅಂತವರ ವಿರುದ್ಧ ಕಾನೂನಿನ ಪ್ರಕಾರ ಕ್ರಮ ಜರುಗಿಸಬೇಕೆಂದು ಒತ್ತಾಯಿಸುತ್ತೇನೆ. ಇದನ್ನೂ ಓದಿ: ರಾಜ್ಯ ಸರ್ಕಾರದ ವಿರುದ್ದ ಬಿಜೆಪಿ, ಜೆಡಿಎಸ್ ಷಡ್ಯಂತ್ರ: ದಿನೇಶ್ ಗುಂಡೂರಾವ್
ಕಿಚ್ಚ ಸುದೀಪ್ (Sudeep) ಅಭಿಮಾನಿಗಳು ನಿರ್ಮಾಪಕ ಎನ್.ಕುಮಾರ್ (N. Kumar) ವಿರುದ್ಧ ಗರಂ ಆಗಿದ್ದಾರೆ. ಒಂದು ಕಡೆ ಸುದೀಪ್ ಈಗಾಗಲೇ ಕೋರ್ಟ್ ಮೆಟ್ಟಿಲು ಏರಿದ್ದರೆ ಮತ್ತೊಂದು ಕಡೆ ಕಿಚ್ಚನ ಅಭಿಮಾನಿಗಳು ರಾಜ್ಯದ ಹಲವು ಕಡೆ ಕುಮಾರ್ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಸಂಖ್ಯಾತ ಅಭಿಮಾನಿಗಳಿಗೆ ಕುಮಾರ್ ನೋವನ್ನುಂಟು ಮಾಡಿದ್ದಾರೆ ಎಂದು ದೂರಿನಲ್ಲಿ (Complaint) ಅಭಿಮಾನಿಗಳು ಬರೆದಿದ್ದಾರೆ.
ಚಾಮರಾಜನಗರದ ಕಿಚ್ಚ ಸುದೀಪ್ ಅಭಿಮಾನಿಗಳ (Fans) ಸಂಘದವರು ಪೊಲೀಸ್ ಠಾಣೆಗೆ ತೆರಳಿ, ಎನ್.ಕುಮಾರ್ ಮತ್ತು ಎಮ್.ಎನ್ ಸುರೇಶ್ ವಿರುದ್ಧ ದೂರು ದಾಖಲಿಸಿದ್ದಾರೆ. ತಮ್ಮ ಹಾಗೂ ನೆಚ್ಚಿನ ನಟನ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಅವರ ವಿರುದ್ಧ ಕ್ರಮ ತಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.
ತಿಪಟೂರಿನಲ್ಲೂ ಎನ್.ಕುಮಾರ್ ಮತ್ತು ಎಮ್.ಎನ್ ಸುರೇಶ ವಿರುದ್ಧ ದೂರು ದಾಖಲಿಸಿರುವ ಸುದೀಪ್ ಅಭಿಮಾನಿಗಳು, ನಮ್ಮೆಲ್ಲರ ನೆಚ್ಚಿನ ನಟ ಸುದೀಪ್ ಅವರು ಸಮಾಜಮುಖಿ ಕೆಲಸದಲ್ಲಿ ತೊಡಗಿದ್ದವರು. ಅಪಾರ ಸಂಖ್ಯೆಯಲ್ಲಿ ಬೆಂಬಲಿಗರನ್ನು ಹೊಂದಿದ್ದಾರೆ. ಅವರ ಮಾನಹಾನಿ ಮಾಡುವಂತಹ ವ್ಯಕ್ತಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ನಿರ್ಮಾಪಕ ಎನ್.ಕುಮಾರ್ ಮತ್ತು ಕಿಚ್ಚ ಸುದೀಪ್ ಆರೋಪಗಳ ವಿಚಾರದಲ್ಲಿ ಕೊನೆಗೂ ರವಿಚಂದ್ರನ್ (Ravichandran) ಎಂಟ್ರಿ ಪಡೆದಿದ್ದಾರೆ. ನಿನ್ನೆ ಮಧ್ಯಾಹ್ನ ಕೆಲ ನಿರ್ಮಾಪಕರು ರವಿಚಂದ್ರನ್ ಅವರನ್ನು ಭೇಟಿ ಮಾಡಿದ್ದಾರೆ. ನಿರ್ಮಾಪಕ ಎನ್.ಕುಮಾರ್ ಹಾಗೂ ಸುದೀಪ್ ನಡುವಿನ ಮನಸ್ತಾಪ ಕುರಿತು ಚರ್ಚಿಸಿದ್ದಾರೆ. ಇದನ್ನೂ ಓದಿ:2 ಸಾವಿರಕ್ಕೆ ʼಆಪನ್ ಹೈಮರ್’ ಚಿತ್ರದ ಟಿಕೆಟ್ ಸೇಲ್- ಬೆಂಗಳೂರಿನಲ್ಲಿ ಹೆಚ್ಚಿದ ಡಿಮ್ಯಾಂಡ್
ನಿರ್ಮಾಪಕರ ಜೊತೆ ಮಾತನಾಡಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ರವಿಚಂದ್ರನ್, ‘ಪರಿಸ್ಥಿತಿ ಸರಿಯಿಲ್ಲ ಅಂದ್ರೆ ಮನಸ್ಥಿತಿನೂ ಸರಿ ಇರಲ್ಲ. ನನಗೆ ಏನು ಸ್ಟೋರಿ ಅಂತ ಪೂರ್ತಿಯಾಗಿ ಗೊತ್ತಿಲ್ಲ. ಅವರು ಏನು ಹೇಳಿದ್ರು, ಇವರು ಏನ್ ಹೇಳಿದ್ರು ಕೇಳ್ಕೊಂಡು ತೀರ್ಮಾನ ತೆಗೆದುಕೊಳ್ಳಲ್ಲ ನಾನು. ಸುದೀಪ್ ಗೆ ನೋವಾಗಿರೋದು ನಿಜ. ಕುಮಾರ್ ಅವರು ನನಗೆ ಫೋನ್ ಮಾಡಿದ್ದರು. ಶೂಟಿಂಗ್ ನಲ್ಲಿದ್ದೆ ಹಾಗಾಗಿ ಪಿಕ್ ಮಾಡೋಕೆ ಆಗ್ಲಿಲ್ಲ. ಈ ವಿಷಯದ ಕುರಿತು ನಾನು ಯೋಚನೆ ಮಾಡಬೇಕು. ನಾನು ಕೇವಲ ಮಾತನ್ನು ನಂಬಲ್ಲ, ದಾಖಲೆ ಕೊಡಬೇಕು ಎಂದರು.
ಮುಂದುವರೆದು ಮಾತನಾಡಿದ ರವಿಚಂದ್ರನ್, ‘ಸುದೀಪ್ ಹತ್ತಿರ ಮಾತಾಡ್ಬೇಕಾ ಅನ್ನುವುದನ್ನು ಯೋಚನೆ ಮಾಡ್ತೀನಿ. ಗಂಡ ಹೆಂಡ್ತಿ ಜಗಳ ಇದ್ದಂಗೆ ಇದು. ಬೀದಿಗೆ ಬಂದಿದೆ ಏನು ಮಾಡೋಕೆ ಆಗಲ್ಲ. ನಾನು ಇಷ್ಟು ದಿನ ತಪ್ಪಿಸಿಕೊಂಡು ಓಡಾಡ್ತಿದ್ದೆ, ಈ ವಿಷಯ ಬಗ್ಗೆ ರಿಯ್ಯಾಕ್ಟ್ ಮಾಡೋದು ಬೇಡ ಅಂತ. ನನ್ನ ಮಗನ ಮೇಲೆ ಆರೋಪ ಬಂದಿದೆ. ಅಷ್ಟು ಸುಲಭವಾಗಿ ಬಿಟ್ಟುಕೊಡಲ್ಲ ನಾನು. ಕುಮಾರ್ ಬರಲಿ. ಕೇಳು ಮಾತುಗಳು ಹರ್ಟ್ ಆಗಿ ಸುದೀಪ್ ಕೋರ್ಟ್ ಮೆಟ್ಟಿಲೇರಿದ್ದಾರೆ. ದಿನ ಬೆಳಗ್ಗೆ ಎದ್ದರೆ ಇದೆ ಶುರುವಾಗಿದೆ’ ಎಂದು ಬೇಸರ ಪಟ್ಟುಕೊಂಡರು.
ದಾಖಲೆ ನಾಳೆ ಕೊಡ್ತೀನಿ ಅಂದ್ರೆ ಏನದು ಎಂದು ಕುಮಾರ್ ಗೆ ಪ್ರಶ್ನೆ ಮಾಡಿದ ರವಿಚಂದ್ರನ್, ದಾಖಲೆ ಮುಂದಿಟ್ಟು ಮಾತಾಡ್ಬೇಕು. ಮನಸ್ಥಿತಿ, ಪರಿಸ್ಥಿತಿ ಎರಡೂ ಬ್ಯಾಲೆನ್ಸ್ ಮಾಡಬೇಕು. ಫಸ್ಟ್ ಕೂಲ್ ಮಾಡೋಣ. ತೊಂದರೆ ಏನಂತ ಗೊತ್ತಿಲದೇ ಸಪೋರ್ಟ್ ಮಾಡೋಕೆ ಆಗಲ್ಲ. ನಾನು 30 ವರ್ಷಗಳ ಹಿಂದೆ ಒಂದು ಪುಸ್ತಕ ಮಾಡಿಕೊಟ್ಟಿದೆ, ಹೇಗೆ ಅಸೋಸಿಯೇಷನ್ ಮಾಡಬೇಕು ಅಂತ. ಯಾರು ಫಾಲೋ ಮಾಡಿಲ್ಲ ಈಗ ಅನುಭವಿಸುತ್ತಿದ್ದಾರೆ. ಕುಮಾರ್ ಹೇಳ್ತಾರೆ ನಾನು ಆರೋಪ ಮಾಡಿಲ್ಲ ಮನವಿ ಮಾಡ್ದೆ ಅಂತ. ಅದು ಸುದೀಪ್ ಗೆ ಬೇಜಾರ್ ಆಗಿದೆ. ಜೊತೆಗೆ ಕೂತು ಊಟ ಮಾಡಿದವರು ಈಗ ಬೆರಳು ತೋರಿಸಿ ಮಾತಾಡ್ತಿದ್ದಾರೆ ಅಂದರೆ ಹರ್ಟ್ ಆಗಲ್ವ..? ಎರಡು ಕಡೆ ಸಹನೆ ಮೀರಿದೆ. ಪ್ರತಿಭಟನೆ ಮಾಡ್ತಿರೋ ಕುಮಾರ್ ಗೆ ಬಿಡೋಕೆ ಹೇಳಿ. ಸುದೀಪ್ ನ ನಾನು ಕರಿಸೋದಿಲ್ಲ, ನಾನೇ ಹೋಗಿ ಮಾತಾಡ್ತೀನಿ. ಸುದೀಪ್ ಗೆ ಸರಿ ಅನ್ಸಿದ್ರೆ ಮಾತ್ರ ಹೋಗಿ ಮಾತಾಡ್ತೀನಿ. ಕುಮಾರ್ ದು ತಪ್ಪು ಅಂದ್ರೆ ಡೈರೆಕ್ಟ್ ಆಗಿ ಬೈತೀನಿ’ ಎನ್ನುವುದು ರವಿಚಂದ್ರನ್ ಮಾತು.
ಬಾಲಿವುಡ್ ನಟಿ ರಾಖಿ ಸಾವಂತ್ (Rakhi Sawant) ಬೀದಿಯಲ್ಲಿ ಮತ್ತೆ ಕಣ್ಣೀರಿಟ್ಟಿದ್ದಾರೆ. ನನಗೆ ಪತಿಯಿಂದ ಮಾತ್ರವಲ್ಲ, ನನ್ನ ಕಾರು ಡ್ರೈವರ್ ನಿಂದಲೂ ಮೋಸವಾಗಿದೆ (Cheating). ಅವನ ವಿರುದ್ಧ ದೂರು (Complaint)ನೀಡಲು ಆಟೋದಲ್ಲಿ ಹೊರಟಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ. ಬೆಲೆಬಾಳುವ ಬಟ್ಟೆಗಳನ್ನು ಹಾಕಿಕೊಂಡು ಆಟೋದಲ್ಲಿ ರಾಖಿ ಹೊರಟಿದ್ದ ವಿಡಿಯೋ ವೈರಲ್ ಆಗಿವೆ.
ಈಗಾಗಲೇ ಪತಿ ಆದಿಲ್ (Adil) ತಮಗೆ ಮೋಸ ಮಾಡಿದ್ದಾರೆ ಎಂದು ರಾಖಿ ಆತನನ್ನು ಜೈಲಿಗೆ ಕಳುಹಿಸಿದ್ದಾರೆ. ಹಲವು ತಿಂಗಳಿಂದ ಆದಿಲ್ ಮೈಸೂರು ಜೈಲಿನಲ್ಲಿ ಕಾಲ ಕಳೆಯುತ್ತಿದ್ದಾರೆ. ಆ ನೋವಿನಿಂದ ರಾಖಿ ಆಚೆ ಬರುವ ಮುನ್ನವೇ ತಮ್ಮ ಕಾರು ಡ್ರೈವರ್ ನಿಂದಲೂ ತಮಗೆ ಮೋಸವಾಗಿದೆ ಎಂದು ಕ್ಯಾಮೆರಾ ಎದುರು ಹೇಳಿಕೊಂಡಿದ್ದಾರೆ. ಅಲ್ಲದೇ, ಕಣ್ಣೀರು ಕೂಡ ಹಾಕಿದ್ದಾರೆ. ಇದನ್ನೂ ಓದಿ:ಅಜ್ಜಿಯನ್ನು ಕಳೆದುಕೊಂಡ ನೋವಿನಲ್ಲಿ ನಟಿ- ಕಣ್ಣೀರಿಟ್ಟ ನಿತ್ಯಾ ಮೆನನ್
‘ನನ್ನ ಕಾರು ಡ್ರೈವರ್ (Car Driver) ಬಡವ ಎಂದು ಅವನನ್ನು ನೇಮಿಸಿಕೊಂಡೆ. ಅವನು ಕೂಡ ನನಗೆ ಮೋಸ ಮಾಡಿದ್ದಾರೆ. ಕಾರು ಚಾಲಕ ಓಡಿ ಹೋಗಿದ್ದಾನೆ. ಹಣ, ಕಾರು ಕೀ ಜೊತೆ ಅವರು ಪರಾರಿಯಾಗಿದ್ದಾನೆ. ಕಾರು ಚಾಲಕ ಉತ್ತರ ಪ್ರದೇಶದ ಪಪ್ಪು ಯಾದವ್ ಆಗಿದ್ದು, ಅವನ ವಿರುದ್ಧ ದೂರು ನೀಡಲು ಓಶಿವಾರ ಪೊಲೀಸ್ ಠಾಣೆಗೆ ದೂರು ಕೊಡಲು ಆಟೋದಲ್ಲಿ ಹೋಗುತ್ತಿದ್ದೇನೆ’ ಎಂದಿದ್ದಾರೆ ರಾಖಿ.
ತಮಗೆ ಈ ಜಗತ್ತಿನಲ್ಲಿ ಬದುಕಬೇಕೋ ಅಥವಾ ಬೇರೆ ಗ್ರಹದಲ್ಲಿ ವಾಸವಾಗಬೇಕೊ ಗೊತ್ತಾಗುತ್ತಿಲ್ಲ. ನನ್ನ ಜೀವನದಲ್ಲಿ ಬಂದವರೆಲ್ಲ ನನಗೆ ಮೋಸ ಮಾಡುತ್ತಿದ್ದಾರೆ ಎಂದು ರಾಖಿ ದುಃಖಿಸಿದ್ದಾರೆ. ಈ ನಡೆಯಿಂದ ತಮಗೆ ಸಾಕಷ್ಟು ಬೇಸರವಾಗಿರುವುದಾಗಿ ಸೋಷಿಯಲ್ ಮೀಡಿಯಾದಲ್ಲೂ ಅವರು ಬರೆದುಕೊಂಡಿದ್ದಾರೆ.