ನಿರ್ಮಾಪಕ ಉಮಾಪತಿ ಅವರಿಗೆ ನಟ ದರ್ಶನ್ (Darshan) ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಕನ್ನಡ ಪರ ಸಂಘಟನೆಯ ಕನ್ನಡ ಶಫಿ ಎನ್ನುವವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ (Film Chambe) ದೂರು ನೀಡಿದ್ದರು. ದರ್ಶನ್ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಇದೀಗ ಶಫಿ ಉಲ್ಟಾ ಹೊಡೆದಿದ್ದಾರೆ.
ಮೊನ್ನೆಯಷ್ಟೇ ದೂರು (Complaint) ನೀಡಿದ್ದ ಕನ್ನಡ ಶಫಿ (Kannada Shafi), ಇದೀಗ ದರ್ಶನ್ ಮತ್ತು ಅವರ ಅಭಿಮಾನಿಗಳಿಗೆ ಕ್ಷಮೆ ಕೇಳಿ ದೂರು ವಾಪಸ್ಸು ಪಡೆದುಕೊಳ್ಳುವುದಾಗಿ ತಿಳಿಸಿದ್ದಾರೆ. ದರ್ಶನ್ ಅವರನ್ನು ಶಫಿ ಬಾಯಿಗೆ ಬಂದಂತೆ ಬೈದಿದ್ದರು. ಆ ವಿಡಿಯೋ ವೈರಲ್ ಕೂಡ ಆಗಿತ್ತು. ಇದೀಗ ಆ ಕುರಿತಂತೆಯೂ ಶಫಿ ಕ್ಷಮೆ ಕೇಳಿದ್ದಾರೆ.
ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಕ್ಕಾಗಿ ನಾನು ಕ್ಷಮೆ ಕೇಳುತ್ತೇನೆ. ದೂರು ನೀಡಿದ ಬಗ್ಗೆ ಕ್ಷಮೆ ಕೇಳುವುದಷ್ಟೇ ಅಲ್ಲ, ದೂರು ಹಿಂಪಡೆಯುವುದಾಗಿಯೂ ಕನ್ನಡ ಪ್ರಜಾಪರ ವೇದಿಕೆ ಕನ್ನಡ ಶಫಿ ವಿಡಿಯೋ ಮೂಲಕ ಹೇಳಿದ್ದಾರೆ. ಬೇರೆ ಸಂಘಟನೆಯವರು ಹಾಗೂ ನಾವು ಸೇರಿ ಆತುರದಿಂದ ನಿರ್ಧಾರ ಕೈಗೊಂಡೆವು. ಇದರಿಂದ ಹಿರಿಯ ನಟರ ಮನಸ್ಸಿಗೆ ನೋವಾಗಿದೆ. ಎಲ್ಲಾ ಕನ್ನಡ ಮನಸ್ಸುಗಳಿಗೂ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ ಶಫಿ.
ಹೆಣ್ಣುಮಕ್ಕಳ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಆಡಿದ್ದಾರೆ ಎಂದು ಮಹಿಳಾ ಆಯೋಗಕ್ಕೆ ದರ್ಶನ್ ವಿರುದ್ಧ ದೂರು ಸಲ್ಲಿಸಲಾಗಿದೆ. ಜಯಶ್ರೀ (Jayashree) ಎನ್ನುವವರು ದರ್ಶನ್ ವಿರುದ್ಧ ಲಿಖಿತ ರೂಪದಲ್ಲಿ ದೂರು ನೀಡಿದ್ದು, ಇವತ್ತು ಇವಳು ಇರುತ್ತಾಳೆ, ನಾಳೆ ಅವಳು ಬರ್ತಾಳೆ ಎನ್ನುವ ಮಾತುಗಳನ್ನು ಮೊನ್ನೆ ಶ್ರೀರಂಗಪಟ್ಟಣದಲ್ಲಿ ನಡೆದ ಬೆಳ್ಳಿಪರ್ವದಲ್ಲಿ ದರ್ಶನ್ ಹೇಳಿದ್ದರು.
ಹೆಣ್ಣಿನ ಬಗ್ಗೆ ಅವಹೇಳನಕಾರಿಯಾಗಿ ದರ್ಶನ್ ಮಾತನಾಡಿದ್ದಾರೆ. ಇವತ್ತು ಇವಳು ಇರುತ್ತಾಳೆ, ನಾಳೆ ಅವಳು ಬರ್ತಾಳೆ ಎಂದು ದರ್ಶನ್ ಮಾತನಾಡಿದ್ದಾರೆ. ದರ್ಶನ್ ಹೇಳಿಕೆಗೆ ಒಕ್ಕಲಿಗ ಗೌಡತಿಯರು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಹೆಣ್ಣು ಮಕ್ಕಳಿಗೆ ಇದು ಅವಮಾನ ಮಾಡುವಂಥದ್ದು ಎಂದು ದೂರಿ (Complaint)ನಲ್ಲಿ ಉಲ್ಲೇಖ ಮಾಡಿದ್ದಾರೆ.
ಫಿಲ್ಮ್ ಚೇಂಬರ್ ನಲ್ಲೂ ದೂರು
ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡರಿಗೆ ಕಟು ನುಡಿಗಳಲ್ಲಿ ಟೀಕಿಸಿರುವ ನಟ ದರ್ಶನ್ (Darshan) ವಿರುದ್ಧ ಕರ್ನಾಟಕ ಪ್ರಜಾಪರ ವೇದಿಕೆಯು ಫಿಲ್ಮ್ ಛೇಂಬರ್ ಗೆ ದೂರು ನೀಡಿದೆ. ಸಾರ್ವಜನಿಕ ವೇದಿಕೆಯ ಮೇಲೆ ಉಮಾಪತಿಗೆ ತಗಡು, ಗುಮ್ಮಿಸ್ಕೋತೀಯಾ ರೀತಿಯ ಪದಗಳನ್ನು ಆಡಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕಾಟೇರ ಸಿನಿಮಾದ ಕಥೆ ಬರೆಯಿಸಿದ್ದು ನಾನು, ಅದು ನನ್ನದೇ ಟೈಟಲ್ ಎಂದು ಉಮಾಪತಿ ಗೌಡ ಸಂದರ್ಶನವೊಂದರಲ್ಲಿ ಹೇಳಿದ್ದರು. ಇದಕ್ಕೆ ಉತ್ತರ ಎನ್ನುವಂತೆ ಕಾಟೇರ ಸಿನಿಮಾದ ಐವತ್ತನೇ ದಿನದ ಸಂಭ್ರಮದಲ್ಲಿ ದರ್ಶನ್ ತಿರುಗೇಟು ನೀಡಿದ್ದರು. ಅಲ್ಲದೇ, ತಗಡು ಮತ್ತು ‘ಪ್ರತಿ ಬಾರಿ ಯಾಕೆ ನಮ್ಮಿಂದ ಗುಮ್ಮಿಸ್ಕೋಳ್ತಿಯಾ’ ಎನ್ನುವ ಮಾತುಗಳನ್ನು ಆಡಿದ್ದರು.
ಈ ಕುರಿತಂತೆ ಸಂಘಟನೆಯು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದು, ಈ ವಿಷಯದಲ್ಲಿ ದರ್ಶನ್ ಅವರು ಕ್ಷಮೆ ಕೇಳಬೇಕು. ಕ್ಷಮೆ ಕೇಳದೇ ಇದ್ದರೆ, ದರ್ಶನ್ ಮನೆಯ ಮುಂದೆ ನೂರಾರು ಕನ್ನಡ ಕಾರ್ಯಕರ್ತರು ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಉಮಾಪತಿ ಮತ್ತು ದರ್ಶನ್ ವಿಚಾರ ದಿನದಿಂದ ದಿನಕ್ಕೆ ನಾನಾ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ನಿರ್ದೇಶಕರಾದ ತರುಣ್ ಸುಧೀರ್ ಮತ್ತು ಮಹೇಶ್ ಕುಮಾರ್ ಇಬ್ಬರೂ ದರ್ಶನ್ ಪರ ಬ್ಯಾಟ್ ಮಾಡುತ್ತಿದ್ದಾರೆ. ಇದಕ್ಕೆ ಕೌಂಟರ್ ಎನ್ನುವಂತೆ ಉಮಾಪತಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡರಿಗೆ ಕಟು ನುಡಿಗಳಲ್ಲಿ ಟೀಕಿಸಿರುವ ನಟ ದರ್ಶನ್ (Darshan) ವಿರುದ್ಧ ಕರ್ನಾಟಕ ಪ್ರಜಾಪರ ವೇದಿಕೆಯು ಫಿಲ್ಮ್ ಛೇಂಬರ್ ಗೆ ದೂರು ನೀಡಿದೆ. ಸಾರ್ವಜನಿಕ ವೇದಿಕೆಯ ಮೇಲೆ ಉಮಾಪತಿಗೆ ತಗಡು, ಗುಮ್ಮಿಸ್ಕೋತೀಯಾ ರೀತಿಯ ಪದಗಳನ್ನು ಆಡಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕಾಟೇರ ಸಿನಿಮಾದ ಕಥೆ ಬರೆಯಿಸಿದ್ದು ನಾನು, ಅದು ನನ್ನದೇ ಟೈಟಲ್ ಎಂದು ಉಮಾಪತಿ ಗೌಡ ಸಂದರ್ಶನವೊಂದರಲ್ಲಿ ಹೇಳಿದ್ದರು. ಇದಕ್ಕೆ ಉತ್ತರ ಎನ್ನುವಂತೆ ಕಾಟೇರ ಸಿನಿಮಾದ ಐವತ್ತನೇ ದಿನದ ಸಂಭ್ರಮದಲ್ಲಿ ದರ್ಶನ್ ತಿರುಗೇಟು ನೀಡಿದ್ದರು. ಅಲ್ಲದೇ, ತಗಡು ಮತ್ತು ‘ಪ್ರತಿ ಬಾರಿ ಯಾಕೆ ನಮ್ಮಿಂದ ಗುಮ್ಮಿಸ್ಕೋಳ್ತಿಯಾ’ ಎನ್ನುವ ಮಾತುಗಳನ್ನು ಆಡಿದ್ದರು.
ಈ ಕುರಿತಂತೆ ಸಂಘಟನೆಯು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದು, ಈ ವಿಷಯದಲ್ಲಿ ದರ್ಶನ್ ಅವರು ಕ್ಷಮೆ ಕೇಳಬೇಕು. ಕ್ಷಮೆ ಕೇಳದೇ ಇದ್ದರೆ, ದರ್ಶನ್ ಮನೆಯ ಮುಂದೆ ನೂರಾರು ಕನ್ನಡ ಕಾರ್ಯಕರ್ತರು ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಉಮಾಪತಿ ಮತ್ತು ದರ್ಶನ್ ವಿಚಾರ ದಿನದಿಂದ ದಿನಕ್ಕೆ ನಾನಾ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ನಿರ್ದೇಶಕರಾದ ತರುಣ್ ಸುಧೀರ್ ಮತ್ತು ಮಹೇಶ್ ಕುಮಾರ್ ಇಬ್ಬರೂ ದರ್ಶನ್ ಪರ ಬ್ಯಾಟ್ ಮಾಡುತ್ತಿದ್ದಾರೆ. ಇದಕ್ಕೆ ಕೌಂಟರ್ ಎನ್ನುವಂತೆ ಉಮಾಪತಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ (Rajya Sabha Election) ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿಯವರಿಗೆ (Kupendra Reddy) ಅಡ್ಡಮತ ಚಲಾಯಿಸಲು ಕಾಂಗ್ರೆಸ್ (Congress) ಬೆಂಬಲಿತ ಸದಸ್ಯರಿಗೆ ಹಣದ ಆಮಿಷ ಒಡ್ಡಿ ಬೆದರಿಕೆ ಹಾಕಲಾಗಿದೆ ಎಂದು ಪೊಲೀಸ್ ಆಯುಕ್ತರಿಗೆ ಕಾಂಗ್ರೆಸ್ ನಿಯೋಗ ದೂರು ನೀಡಿದೆ.
ಕಾಂಗ್ರೆಸ್ ಬೆಂಬಲಿತ ಶಾಸಕರಾಗಿರುವ ಲತಾ ಮಲ್ಲಿಕಾರ್ಜುನ್, ಗೌರಿಬಿದನೂರು ಪುಟ್ಟಸ್ವಾಮಿ ಗೌಡ ಹಾಗು ದರ್ಶನ್ ಪುಟ್ಟಣ್ಣಯ್ಯಗೆ ಮತ ಹಾಕುವಂತೆ ಆಮಿಷವೊಡ್ಡಿ ಬೆದರಿಕೆ ಹಾಕಲಾಗಿದೆ. ಹೋಟೆಲ್ ಮಾಲೀಕರೊಬ್ಬರು ಲತಾರವರನ್ನು ಸಂಪರ್ಕಿಸಿ ಕುಪೇಂದ್ರ ರೆಡ್ಡಿಯವರ ಪುತ್ರ ಭೇಟಿ ಮಾಡಿ ನಿಮಗೆ ಹಣವನ್ನು ಕೊಡುತ್ತಾರೆ. ಕುಪೇಂದ್ರ ರೆಡ್ಡಿಯವರಿಗೆ ಮತ ಚಲಾಯಿಸದಿದ್ದರೆ ನಿಮಗೆ ತೊಂದರೆಯಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರಂತೆ. ಇದನ್ನೂ ಓದಿ: ವಕೀಲರು Vs ಪೊಲೀಸರು – ಫೇಸ್‌ಬುಕ್ ಪೋಸ್ಟ್‌ನಿಂದ ಅಹೋರಾತ್ರಿ ಧರಣಿಯವರೆಗೆ: ರಾಮನಗರದಲ್ಲಿ ಪ್ರತಿಭಟನೆ ಯಾಕೆ?
ಮಾಜಿ ಸಚಿವರೊಬ್ಬರು ಲತಾ ಅವರ ಪತಿ ಮಲ್ಲಿಕಾರ್ಜುನ್ ಅವರನ್ನು ಭೇಟಿ ಮಾಡಿ ಹಣದ ಆಮಿಷವೊಡ್ಡಿ ಕುಪೇಂದ್ರ ರೆಡ್ಡಿ ಅವರಿಗೆ ಮತ ಚಲಾಯಿಸುವಂತೆ ಒತ್ತಡ ಹಾಕಿರುತ್ತಾರೆ. ಇನ್ನೋರ್ವ ಸದಸ್ಯರಾದಂತಹ ಪುಟ್ಟಸ್ವಾಮಿ ಗೌಡರವರಿಗೂ ಕೂಡ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಅವರ ಹಿಂಬಾಲಕರ ಮೂಲಕ ಹಣದ ಆಮಿಷ ಹಾಗೂ ಬೆದರಿಕೆಯನ್ನು ಹಾಕಿರುತ್ತಾರೆ. ಹಾಗೆಯೇ ಮತ್ತೋರ್ವ ಸದಸ್ಯರಾದಂತಹ ದರ್ಶನ್ ಪುಟ್ಟಣ್ಣಯ್ಯರಿಗೆ ಕೂಡ ಬೆದರಿಕೆ ಹಾಕಿರುತ್ತಾರೆ. ಬೆದರಿಕೆ ಹಾಕಿರುವ ಸಂಪೂರ್ಣ ಮಾಹಿತಿ, ಸಾಕ್ಷಿ ಇದ್ದು, ಎಫ್‌ಐಆರ್ ದಾಖಲಿಸಿ ಭಾಗಿಯಾಗಿರುವ ಆರೋಪಿಗಳ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಹಾಗೂ ತಮ್ಮ ಪಕ್ಷದ ಸಹ ಸದಸ್ಯ, ಶಾಸಕರಿಗೆ ಸ್ವತಂತ್ರ ಅಭ್ಯರ್ಥಿಗಳಿಗೆ ರಕ್ಷಣೆ ನೀಡುವಂತೆ ದೂರು ಸಲ್ಲಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕ, ಜಮ್ಮು- ಕಾಶ್ಮೀರ ಸೇರಿ ದೇಶದ ವಿವಿಗಳ ಅಭಿವೃದ್ಧಿಗೆ 3600 ಕೋಟಿ ರೂ. ಬಿಡುಗಡೆ
ಮಹಾಭಾರತ (Mahabharata) ಧಾರಾವಾಹಿಯಲ್ಲಿ ಕೃಷ್ಣನ (Krishna) ಪಾತ್ರ ಮಾಡುವ ಮೂಲಕ ಜನಪ್ರಿಯರಾಗಿರುವ ನಿತೀಶ್ ಭಾರದ್ವಾಜ್ (Nitish Bhardwaj) ತಮ್ಮ ಮಾಜಿ ಪತ್ನಿ, ಐಎಎಸ್ ಅಧಿಕಾರಿ ಸ್ಮಿತಾ (Smita) ವಿರುದ್ಧ ದೂರು (Complaint) ನೀಡಿದ್ದಾರೆ. ಮಾಜಿ ಪತ್ನಿಯಿಂದ ತಮಗೆ ಮಾನಸಿಕ ಕಿರುಕುಳ ಆಗುತ್ತಿದೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಐಎಎಸ್ ಅಧಿಕಾರಿಯಾಗಿರುವ ಸ್ಮಿತಾ ಮತ್ತು ನಿತೇಶ್ 2019ರಲ್ಲಿ ಮದುವೆಯಾಗಿದ್ದರು. ಇವರಿಗೆ ಅವಳಿ ಜವಳಿ ಮಕ್ಕಳಿದ್ದಾರೆ. ಮದುವೆಯಾದ 12 ವರ್ಷಗಳ ನಂತರ ಈ ದಂಪತಿ ವಿಚ್ಚೇದನ ಪಡೆದಿದ್ದರು. ಇದೀಗ ತಮ್ಮ ಮಕ್ಕಳನ್ನು ತಮಗೆ ಭೇಟಿ ಆಗಲು ಆಗುತ್ತಿಲ್ಲ. ಮಾಜಿ ಪತ್ನಿ ಅದಕ್ಕೆ ಅವಕಾಶ ಕೊಡದೇ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಅವರು ದೂರು ನೀಡಿದ್ದಾರೆ.
ಭೋಪಾಲ್ ಪೊಲೀಸ್ ಆಯುಕ್ತ ಹರಿನಾರಾಯಣಾಚಾರಿ ಅವರಿಗೆ ದೂರು ನೀಡಿದ್ದು, ಈ ಕುರಿತಂತೆ ಪೊಲೀಸ್ ಆಯುಕ್ತರು ಪ್ರತಿಕ್ರಿಯೆ ನೀಡಿದ್ದಾರೆ. ನಿತೀಶ್ ನೀಡಿರುವ ದೂರನ್ನು ಸ್ವೀಕರಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ. ತನಿಖೆಯ ನಂತರ ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದಿದ್ದಾರೆ.
ಬಿಗ್ ಬಾಸ್ ಸ್ಪರ್ಧಿ ಡ್ರೋಣ್ ಪ್ರತಾಪ್ (Drone Pratap)ಗೆ ಈಗ ಅಸಲಿ ಸಂಕಷ್ಟ ಎದುರಾಗಿದೆ. ದಿನವೊಂದಕ್ಕೆ ಹೊಸ ಹೊಸ ಪ್ರಕರಣಗಳು ಪ್ರತಾಪ್ ಮೇಲೆ ದಾಖಲಾಗ್ತಾ ಇತ್ತು. ಆದ್ರೆ, ಈಗ ಪ್ರಕರಣ ಮತ್ತೊಂದು ಹೆಜ್ಜೆ ಮುಂದಕ್ಕೆ ಹೋಗಿದೆ. ಡಿಜಿಸಿಎ (DGCA) ಹೆಸರಲ್ಲಿ ಮೋಸ ಮಾಡಿ ಡ್ರೋಣ್ ಮಾರಾಟ ಮಾಡ್ತಾ ಇದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಡ್ರೋಣ್ ತಯಾರಿ ಮಾಡಲಿಕ್ಕೆ ಆಗಲಿ ಡ್ರೋಣ್ ಮಾರಾಟ ಮಾಡೋದಕ್ಕೆ ಆಗಲಿ ಡಿಜಿಸಿಎ ಅನುಮತಿ ಪರವಾನಿಗೆ ಪಡೆಯಬೇಕು. ಆದರೆ, ಪ್ರತಾಪ್ ಆ ಪರವಾಣಿಗೆ ಪಡೆದಿಲ್ಲ ಅಂತ ಪರಮೇಶ್ ಎಂಬುವವರು ದೂರು ನೀಡಿದ್ದರು. ಈಗ ದೂರಿನ ಅಂಶವಾಗಿ ರಾಜರಾಜೇಶ್ವರಿ ನಗರ ಪೊಲೀಸರು ದೂರಿನ (Complaint) ಮಾಹಿತಿಯನ್ನು ಡಿಜಿಸಿಎ ಗೆ ಕಳುಹಿಸಿಕೊಟ್ಟಿದ್ದಾರೆ.
ಈ ಮಾಹಿತಿ ಮೇರೆಗೆ ಡಿಜಿಸಿಎ ಯಾವ ಕ್ರಮಕೈಗೊಳ್ಳುತ್ತೆ, ನೋಟೀಸ್ ನೀಡಿ ವಿಚಾರಣೆಗೆ ಕರೆಯುತ್ತಾ ಕಾದುನೋಡ್ಬೇಕಿದೆ. ಜೊತೆಗೆ ಡ್ರೋನ್ ಪ್ರತಾಪ್ ಮೇಲೆ ಈಗಾಗಲೇ ಮೂರು ದೂರುಗಳು ದಾಖಲಾಗಿದೆ. ಆದರೆ, ಒಂದಕ್ಕೂ ಎಫ್.ಐ.ಆರ್ ಆಗಿಲ್ಲ ಎನ್ನುವ ಮಾತು ಕೂಡ ಕೇಳಿ ಬಂದಿದೆ.
ಏನೇ ದೂರುಗಳು ದಾಖಲಾದರು ಪ್ರತಾಪ್ ಮಾತ್ರ ಯಾವುದಕ್ಕೂ ತಲೆ ಕಡೆಸಿಕೊಳ್ಳದೇ ತನ್ನ ಪಾಡಿಗೆ ತಾನು ಹೊಸ ಶೋನಲ್ಲಿ ಪಾಲ್ಗೊಂಡಿದ್ದಾರೆ. ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮದಲ್ಲಿ ಕಾಮಿಡಿ ಪಾತ್ರ ಮಾಡುತ್ತಾ ಹಾಯಾಗಿದ್ದಾರೆ.
ದೀಪಿಕಾ ಪಡುಕೋಣೆ (Deepika Paduk) ಮತ್ತು ಹೃತಿಕ್ ರೋಷನ್ ಕಾಂಬಿನೇಷನ್ ನ ಫೈಟರ್ (Fighter) ಸಿನಿಮಾದ ಚುಂಬನ ದೃಶ್ಯ ಕುರಿತಂತೆ ವಾಯುಸೇನಾ ಅಧಿಕಾರಿಯೊಬ್ಬರು ಗರಂ ಆಗಿದ್ದಾರೆ. ವಾಯುಸೇನೆ ಸಮವಸ್ತ್ರ ಧರಿಸಿಕೊಂಡು ಹೃತಿಕ್ ಮತ್ತು ದೀಪಿಕಾ ಚುಂಬಿಸುವ ದೃಶ್ಯವು ವಸ್ತ್ರ ಸಂಹಿತೆ ನೀತಿಯನ್ನು ಉಲ್ಲಂಘಿಸಿದೆ. ಇದರಿಂದಾಗಿ ವಾಯುಸೇನೆಗೆ ಮುಜುಗರ ತರಿಸಿದೆ ಎಂದು ಅಧಿಕಾರಿ ಅಸ್ಸಾಮಿನ ಸೌಮ್ಯ ದೀಪ್ ದಾಸ್ (Soumya Deep Das) ಎನ್ನುವವರು ದೂರು (Complain) ದಾಖಲಿಸಿದ್ದಾರೆ.
ಫೈಟರ್ ಸಿನಿಮಾ ಕುರಿತಂತೆ ಬಿಡುಗಡೆ ದಿನದಿಂದ ಈವರೆಗೂ ಒಂದಿಲ್ಲೊಂದು ಸಂಕಷ್ಟವನ್ನು ಎದುರಿಸುತ್ತಲೇ ಬಂದಿದೆ. ಈ ಹಿಂದೆ ಸೆನ್ಸಾರ್ ಮಂಡಳಿಯು ಚಿತ್ರದ ಎರಡು ದೃಶ್ಯಗಳನ್ನು ಕತ್ತರಿಸುವಂತೆ ಸೂಚಿಸಲಾಗಿತ್ತು. ಅದರಲ್ಲೂ ದೀಪಿಕಾ ಪಡುಕೋಣೆ ಬಿಕಿನಿ (Bikini) ಹಾಕಿದ ದೃಶ್ಯಕ್ಕೆ ಕತ್ತರಿ ಹಾಕಲಾಗಿತ್ತು.
ಈ ಹಿಂದೆ ಪಠಾಣ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಧರಿಸಿದ್ದರು. ಅದು ವಿವಾದಕ್ಕೆ ಕಾರಣವಾಗಿತ್ತು. ನಂತರ ಸಿನಿಮಾದಿಂದಲೇ ಆ ದೃಶ್ಯವನ್ನು ಕೈ ಬಿಡಲಾಗಿತ್ತು. ಫೈಟರ್ ಸಿನಿಮಾದಲ್ಲೂ ಬಿಕಿನಿಯಲ್ಲಿ ದೀಪಿಕಾ ಕಾಣಿಸಿಕೊಳ್ಳಲಿಲ್ಲ. ಇದು ಅಭಿಮಾನಿಗಳ ನಿರಾಸೆ ಕಾರಣವಾಗಿತ್ತು.
ಒಂದು ಕಡೆ ಬಿಕಿನಿ ವಿಚಾರ ಸಾಕಷ್ಟು ಸದ್ದು ಮಾಡುತ್ತಿದ್ದರೆ ಮತ್ತೊಂದು ಕಡೆ ಚಿತ್ರತಂಡ ಬಗ್ಗೆ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ಕಲಾವಿದರ ಸಂಭಾವನೆಯಿಂದ ಚಿತ್ರದ ಬಜೆಟ್ ಮಿತಿ ಮೀರಿದೆ ಎಂದು ಈ ಹಿಂದೆ ಸಿನಿಮಾ ವಿಶ್ಲೇಷಕ ಕಮಾಲ್ ಆರ್. ಖಾನ್ ಟ್ವೀಟ್ ಮಾಡಿದ್ದರು.
ಹೃತಿಕ್ ರೋಷನ್ (Hrithik Roshan) ನಟನೆಯ ‘ಫೈಟರ್’ ಸಿನಿಮಾದ ಬಜೆಟ್ 350 ಕೋಟಿ ರೂಪಾಯಿ.. ನಿರ್ದೇಶಕ ಸಿದ್ದಾರ್ಥ್ ಆನಂದ್ ಅವರು 40 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಹೃತಿಕ್ ರೋಷನ್ ಸಂಭಾವನೆ 85 ಕೋಟಿ ರೂಪಾಯಿ, ದೀಪಿಕಾ ಪಡುಕೋಣೆ ಸಂಭಾವನೆ 20 ಕೋಟಿ ರೂಪಾಯಿ. ಇನ್ನುಳಿದ ಕಲಾವಿದರಿಗೆ 15 ಕೋಟಿ ರೂಪಾಯಿ ನೀಡಲಾಗುತ್ತಿದೆ. ಅಂದರೆ, ಸಂಭಾವನೆ ಮೊತ್ತವೇ 160 ಕೋಟಿ ರೂಪಾಯಿ ತಲುಪಲಿದೆ’ ಎಂದು ಕಮಾಲ್ ಆರ್.ಖಾನ್ ಟ್ವೀಟ್ ಮಾಡಿದ್ದರು.
ಬೆಂಗಳೂರು: ಬಿಜೆಪಿ (BJP) ನಿಯೋಗವು ಇಂದು (ಫೆ.06) ರಾಜಭವನಕ್ಕೆ (Raj Bhavan) ಭೇಟಿ ನೀಡಿ ರಾಜ್ಯ ಸರ್ಕಾರದ ವಿರುದ್ಧ ದೂರು (Complaint) ಸಲ್ಲಿಸಿತು. ದಿನಪತ್ರಿಕೆಗಳಲ್ಲಿ ಜಾಹೀರಾತು (Advertisement) ನೀಡಲು ರಾಜ್ಯದ ಜನರ ತೆರಿಗೆ ಹಣವನ್ನು ಬಳಸಿದ ಕುರಿತು ಆಕ್ಷೇಪಿಸುವ ಮನವಿಯನ್ನು ಅಧಿಕಾರಿಗಳ ಮೂಲಕ ರಾಜ್ಯಪಾಲರಿಗೆ (Governer) ಸಲ್ಲಿಸಲಾಯಿತು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವ ಹರತಾಳು ಹಾಲಪ್ಪ, ಮುಖಂಡ ಭಾಸ್ಕರ ರಾವ್, ವಕೀಲರ ಸಂಘದ ಅಧ್ಯಕ್ಷ ವಿವೇಕ ರೆಡ್ಡಿ ಅವರ ನಿಯೋಗವು ಈ ಮನವಿ ಸಲ್ಲಿಸಿತು. ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ರೀತಿಯ ಮತ್ತು ಈ ಮೂಲಕ ಸಂವಿಧಾನಕ್ಕೆ ಅಗೌರವ ತರುವ ಕೆಲಸವನ್ನು ಈ ಜಾಹೀರಾತಿನ ಮೂಲಕ ರಾಜ್ಯದ ಕಾಂಗ್ರೆಸ್ ಸರ್ಕಾರ ಮಾಡಿದೆ ಎಂದು ಮನವಿ ಗಮನ ಸೆಳೆದಿದೆ. ‘ನನ್ನ ತೆರಿಗೆ ನನ್ನ ಹಕ್ಕು’ ಎಂಬ ಶೀರ್ಷಿಕೆಯ ಈ ಜಾಹೀರಾತಿನ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ದೆಹಲಿ ಚಲೋ ನಡೆಸಲು ಕರೆ ನೀಡಿದ್ದು ಆಘಾತಕರ ಎಂದು ತಿಳಿಸಲಾಗಿದೆ. ಇದನ್ನೂ ಓದಿ: ಕೇಂದ್ರವನ್ನು ರಾಜ್ಯ ಸರ್ಕಾರದವರು ದೂರುವುದು ಸರಿಯಲ್ಲ, ಅಗತ್ಯವಿದ್ದಾಗಲೆಲ್ಲ ನೆರವು ನೀಡಿದೆ: ಪ್ರಜ್ವಲ್ ರೇವಣ್ಣ
ರಾಜ್ಯದ ಜನರನ್ನು ತಪ್ಪು ದಾರಿಗೆಳೆಯುವ ಅಂಕಿ ಅಂಶಗಳನ್ನು ಈ ಜಾಹೀರಾತು ಒಳಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರಾಜಕಾರಣ ಮಾಡಲು ಈ ಜಾಹೀರಾತು ಕೊಟ್ಟಿದ್ದಾರೆ. ಇದರ ವಿರುದ್ಧ ಬಿಜೆಪಿ ಆಕ್ಷೇಪ ವ್ಯಕ್ತಪಡಿಸುವುದಾಗಿ ಮನವಿಯಲ್ಲಿ ಹೇಳಿದೆ. ಇದನ್ನೂ ಓದಿ: ನಮ್ಮ ಹಕ್ಕು ಕೇಳಲು ದೆಹಲಿಯಲ್ಲಿ ಪ್ರತಿಭಟನೆ: ಸತೀಶ್ ಜಾರಕಿಹೊಳಿ
ಕೇಂದ್ರ ಸರ್ಕಾರದ ವಿರುದ್ಧ ರ‍್ಯಾಲಿ ಅಥವಾ ಪ್ರತಿಭಟನೆ ನಡೆಸುವ ಕುರಿತು ತಿಳಿಸಲು ಈ ಜಾಹೀರಾತು ನೀಡಿದ್ದು, ಇದು ಖಜಾನೆಯ ಹಣದ ದುರ್ಬಳಕೆ ಮತ್ತು ಮೋಸಗಾರಿಕೆ ಎಂದು ಆಕ್ಷೇಪ ವ್ಯಕ್ತಪಡಿಸಲಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಈ ಜಾಹೀರಾತಿನ ಮೂಲಕ ಸಾಂವಿಧಾನಿಕ ಬಿಕ್ಕಟ್ಟು ಉದ್ಭವಿಸಿದ್ದು, ರಾಜ್ಯಪಾಲರು ಸೂಕ್ತ ಕ್ರಮ ಕೈಗೊಳ್ಳಲು ಮನವಿ ಮಾಡಲಾಗಿದೆ. ರಾಜ್ಯದ ವಾರ್ತಾ ಮತ್ತು ಪ್ರಚಾರ ಇಲಾಖೆ ಕಮಿಷನರ್ ಅವರಿಗೆ ಇಂಥ ಜಾಹೀರಾತು ನೀಡುವುದನ್ನು ನಿಲ್ಲಿಸುವಂತೆ ನಿರ್ದೇಶನ ನೀಡಬೇಕೆಂದು ಕೂಡ ಮನವಿ ಕೋರಿದೆ. ಇದನ್ನೂ ಓದಿ: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಆಭ್ಯರ್ಥಿಯಾಗಿ ಸ್ಪರ್ಧಿಸಲು ವಿಶ್ವನಾಥ್ ಸಿದ್ಧತೆ
ಬೆಂಗಳೂರು: ಮಂಡ್ಯದಲ್ಲಿ (Mandya) ಮುಸ್ಲಿಂ ಮಹಿಳೆಯರ (Muslim Women) ವಿರುದ್ಧ ಆರ್‌ಎಸ್‌ಎಸ್ (RSS) ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ (Kalladka Prbhakar Bhat) ಅವರ ವಿವಾದಾತ್ಮಕ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಅವರ ವಿರುದ್ಧ ಮತ್ತೆರಡು ದೂರು ದಾಖಲಾಗಿದೆ.
ರಹೀಬ್ ವುಲ್ಲಾ ಹಾಗೂ ಉಸ್ಮಾನ್ ಎಂಬವರು ದೂರು ನೀಡಿದ್ದು, ಬೆಂಗಳೂರಿನ (Bengaluru) ಡಿಜೆ ಹಳ್ಳಿ (DJ Halli) ಮತ್ತು ಶೇಷಾದ್ರಿಪುರಂ (Sheshadripuram) ಠಾಣೆಯಲ್ಲಿ ದೂರು ದಾಖಲಾಗಿದೆ. ಎರಡು ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಿಸಲಾಗಿದ್ದು, ಎರಡೂ ಠಾಣೆ ಪೊಲೀಸರು ಎನ್‌ಸಿಆರ್ ದಾಖಲಿಸಿದ್ದಾರೆ. ಹನುಮ ಜಯಂತಿ ವೇಳೆ ಪ್ರಭಾಕರ್ ಭಟ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಮುಸ್ಲಿಂ ಮಹಿಳೆಯರಿಗೆ ಪರ್ಮನೆಂಟ್ ಗಂಡ ಕೊಟ್ಟಿದ್ದು ಮೋದಿ ಎಂಬ ವಿವಾದಾತ್ಮಕ ಹೇಳಿಕೆಯನ್ನು ಪ್ರಭಾಕರ್ ಭಟ್ ನೀಡಿದ್ದರು. ಈ ಹಿನ್ನೆಲೆ ಶ್ರೀರಂಗಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕಲ್ಲಡ್ಕ ಪ್ರಭಾಕರ್ ಭಟ್ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ. ಇದನ್ನೂ ಓದಿ: ಮುಸ್ಲಿಂ, ಕ್ರೈಸ್ತ ಸಮುದಾಯಗಳಿಂದ ಕೇರಳದ ಅಯ್ಯಪ್ಪಸ್ವಾಮಿ ಮಾಲಾಧಾರಿಗಳ ಮೇಲೆ ಶೋಷಣೆ: ಪ್ರಮೋದ್ ಮುತಾಲಿಕ್
ಪ್ರಕರಣ ಏನು?
ಡಿಸೆಂಬರ್ 24 ರಂದು ಶ್ರೀರಂಗಪಟ್ಟಣ ಸಂಕೀರ್ತನಾ ಯಾತ್ರೆಯಲ್ಲಿ ಮುಸ್ಲಿಮರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಮಹಿಳೆಯರನ್ನು ಚುಡಾಯಿಸಿ, ಲೈಂಗಿಕವಾಗಿ ಅವಮಾನಿಸಿ, ಲೈಂಗಿಕ ದೌರ್ಜನ್ಯಕ್ಕೆ ಪ್ರಚೋದಿಸಿ, ಸಾರ್ವಜನಿಕವಾಗಿ ಬೆದರಿಕೆಯೊಡ್ಡಿ, ಧರ್ಮವನ್ನ ಅವಮಾನಿಸಿ, ಧರ್ಮಗಳ ಮಧ್ಯೆ ಎತ್ತಿಕಟ್ಟಿ ಗಲಭೆ ನಡೆಸಿರುವ ಕಲ್ಲಡ್ಕ ಪ್ರಭಾಕರ ಭಟ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿ ರೌಡಿಶೀಟರ್ ತೆರೆದು ಕಾನೂನು ಕ್ರಮ ತೆಗೆದುಕೊಳ್ಳುವಂತೆ ನಜ್ಮಾ ನಝೀರ್ ದೂರು ನೀಡಿದ್ದರು. ಇದನ್ನೂ ಓದಿ: ಹಿಂದಿನ ಚುನಾವಣೆಯಲ್ಲಿ ಪುಲ್ವಾಮಾ, ಈಗ ರಾಮನ ಫೋಟೋ ಹಿಡಿದಿದ್ದಾರೆ- ಕೇಂದ್ರದ ವಿರುದ್ಧ ಸುಧಾಕರ್ ಕಿಡಿ
ಪ್ರಭಾಕರ ಭಟ್ ಹೇಳಿದ್ದೇನು?
ಹಿಂದೆ ತಲಾಕ್ ತಲಾಕ್ ಎಂದು ಹೇಳಿ ಮುಸ್ಲಿಂ ಗಂಡಂದಿರು ಕೈತೊಳೆದುಕೊಳ್ಳುತ್ತಿದ್ದರು. ದಿನಕ್ಕೊಬ್ಬ ಗಂಡ ಬದಲಾಗುತ್ತಿದ್ದ. ಮುಸ್ಲಿಂ ಹೆಣ್ಣುಮಕ್ಕಳಿಗೆ ಪರ್ಮನೆಂಟ್ ಗಂಡನನ್ನ ಕೊಟ್ಟಿದ್ದು ಮೋದಿ ಸರ್ಕಾರ. ತಲಾಕ್ ರದ್ದು ಮಾಡಿ ನಿಮಗೆ ಗೌರವ ಕೊಟ್ಟಿದ್ದು ಇದೇ ಹಿಂದೂ ಧರ್ಮ. ಇದನ್ನೂ ಓದಿ: ಅನ್ಯಭಾಷೆ ಸಿನಿಮಾ ಪ್ರದರ್ಶನ ಬಂದ್ ಮಾಡ್ತೀವಿ : ವಾಟಾಳ್ ನಾಗರಾಜ್
ಹಿಜಬ್ ಧರಿಸಲು ಅನುಮತಿ ಕೊಟ್ಟರೆ ನಾವು ಕೇಸರಿ ಶಾಲು, ಟೋಪಿ ಧರಿಸುತ್ತೇವೆ. ನಾವು ಶಾಲೆಯಲ್ಲಿ ಜೈ ಶ್ರೀರಾಮ್ ಘೋಷಣೆ ಕೂಗ್ತೀವಿ. ನೀವು ತಾಕತ್ತಿದ್ದರೆ ಅಲ್ಲಾ ಹು ಅಕ್ಬರ್ ಘೋಷಣೆ ಕೂಗಿ ಎಂದು ಸವಾಲು ಹಾಕಿದ್ದರು. ಇದನ್ನೂ ಓದಿ: ಪಾಂಡವಪುರ ಪುರಸಭೆ ಉಪಚುನಾವಣೆಯಲ್ಲಿ ಜೆಡಿಎಸ್‍ಗೆ ಜಯ
ವ್ಯೂಹಂ ಸಿನಿಮಾ ನಿರ್ದೇಶನ ಮಾಡಿದ್ದಕ್ಕೆ ತಮಗೆ ಕೊಲೆ ಬೆದರಿಕೆ ಹಾಕಲಾಗುತ್ತಿದೆ. ಟಿಡಿಪಿ ಮುಖಂಡ ಕೋಲಿಕಪುಡಿ ಶ್ರೀನಿವಾಸ್ ನಾಯ್ಡು ಎನ್ನುವವರು ಮಾಧ್ಯಮದಲ್ಲಿ ಕೂತು ಬಹಿರಂಗವಾಗಿ ತಮ್ಮನ್ನು ಕೊಲ್ಲಲು ಪ್ರಚೋದನೆ ನೀಡಿದ್ದಾರೆ. ನನ್ನ ತಲೆ ಕತ್ತರಿಸಿದವರಿಗೆ ಒಂದು ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಅವರ ವಿರುದ್ಧ ಕ್ರಮ ತಗೆದುಕೊಳ್ಳಬೇಕು ಎಂದು ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಆಂಧ್ರ ಪೊಲೀಸ್ ರಿಗೆ ಮೊರೆ ಹೋಗಿದ್ದಾರೆ. ಅಧಿಕಾರಿಗಳನ್ನು ಭೇಟಿ ಮಾಡಿ ದೂರಿನ ಪತ್ರವನ್ನು ಸಲ್ಲಿಸಿದ್ದಾರೆ.
ರಾಮ್ ಗೋಪಾಲ್ ವರ್ಮಾ ವಿರುದ್ಧ ಟಿಡಿಪಿ ಕಾರ್ಯಕರ್ತರಿಂದ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ವರ್ಮಾ ನಿರ್ದೇಶನ ಮಾಡಿರುವ ವ್ಯೂಹಂ ಸಿನಿಮಾ ರಿಲೀಸ್ ಮಾಡದಂತೆ ಪ್ರತಿಭಟಿಸಲಾಗುತ್ತಿದೆ. ಈ ಕುರಿತಂತೆ ಮಾಧ್ಯಮದೊಂದಿಗಿನ ಚರ್ಚೆಯಲ್ಲಿ ಭಾಗಿಯಾಗಿ ಮಾತನಾಡಿರುವ ಟಿಡಿಪಿ ಮುಖಂಡ ಕೋಲಿಕಪುಡಿ ಶ್ರೀನಿವಾಸ್ ನಾಯ್ಡು (Kolikapudi Srinivas Naidu), ಎಡವಟ್ಟಿನ ಹೇಳಿಕೆಯನ್ನು ನೀಡಿದ್ದರು. ವರ್ಮಾ ತಲೆ ಕಡಿದು ತಂದಿವರಿಗೆ ಒಂದು ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದರು. ಇದರ ವಿರುದ್ಧ ವರ್ಮಾ ದೂರು ನೀಡಿದ್ದಾರೆ.
ನಿನ್ನೆಯಷ್ಟೇ ರಾಮ್ ಗೋಪಾಲ್ ವರ್ಮಾ ಕಚೇರಿಗೆ ಟಿಡಿಪಿ ಕಾರ್ಯಕರ್ತರು ಮತ್ತು ಎನ್.ಟಿ.ಆರ್ ಅಭಿಮಾನಿಗಳು ಮುತ್ತಿಗೆ ಹಾಕಿದ್ದರು. ಹೈದರಾಬಾದ್ ನಲ್ಲಿರುವ ವರ್ಮಾ ಅವರ ಡೆನ್ ಕಚೇರಿಗೆ ಮುತ್ತಿಗೆ ಹಾಕಿರುವ ಕಾರ್ಯಕರ್ತರು ವ್ಯೂಹಂ ಸಿನಿಮಾದ ಪೋಸ್ಟರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತ ಪಡಿಸಿದ್ದರು.
ಆಗ ಸಿನಿಮಾಗಳ ಮೂಲಕ ಸಖತ್ ಸುದ್ದಿ ಆಗುತ್ತಿದ್ದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (Ram Gopal Verma) , ಇದೀಗ ವಿವಾದಗಳಿಂದಾಗಿ ಹೆಚ್ಚು ಪ್ರಚಾರ ಪಡೆಯುತ್ತಿದ್ದಾರೆ. ಸದ್ಯ ವರ್ಮಾ ‘ವ್ಯೂಹಂ’ (Vyuham) ಹೆಸರಿನಲ್ಲಿ ಸಿನಿಮಾ ಮಾಡಿದ್ದು, ಈ ಸಿನಿಮಾಗೆ ಆಂಧ್ರದ ಟಿಡಿಪಿ ನಾಯಕರು ವಿರೋಧ ವ್ಯಕ್ತ ಪಡಿಸಿದ್ದಾರೆ. ಯಾವುದೇ ಕಾರಣಕ್ಕೂ ಈ ಸಿನಿಮಾ ಬಿಡುಗಡೆಗೆ ಅನುಮತಿ ನೀಡಬಾರದು ಎಂದು ಒತ್ತಡ ಹಾಕಿದ್ದಾರೆ.
ಆಂಧ್ರ ಪ್ರದೇಶ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಹೊತ್ತಿನಲ್ಲಿ ವ್ಯೂಹಂ ಸಿನಿಮಾ ರಿಲೀಸ್ ಆಗುತ್ತಿದೆ. ಇದು ಆಂಧ್ರದ ಸಿಎಂ ಜಗನ್ ಮೋಹನ್ ರೆಡ್ಡಿ (Jagan Mohan Reddy) ಜೀವನವನ್ನು ಆಧರಿಸಿದ ಸಿನಿಮಾವಾಗಿದ್ದು, ಚಂದ್ರಬಾಬು ನಾಯ್ಡು ಅವರನ್ನು ವಿಲನ್ ರೀತಿಯಲ್ಲಿ ಬಿಂಬಿಸಲಾಗಿದೆ ಎನ್ನುವುದು ಟಿಡಿಪಿ ಸದಸ್ಯರ ಆರೋಪ. ಈ ಕಾರಣದಿಂದಾಗಿ ಚಿತ್ರಕ್ಕೆ ವಿರೋಧವನ್ನು ವ್ಯಕ್ತ ಪಡಿಸುತ್ತಿದ್ದಾರೆ.
ಈ ಸಿನಿಮಾದಲ್ಲಿ ಇತ್ತೀಚೆಗಷ್ಟೇ ಚಂದ್ರಬಾಬು ನಾಯ್ಡು (Chandra Babu Naidu) ಜೈಲಿಗೆ ಹೋಗಿ ಬಂದಿದ್ದಾರಲ್ಲ, ಆ ದೃಶ್ಯವನ್ನೂ ಸೇರಿಸಲಾಗಿದೆಯಂತೆ. ಇವೆಲ್ಲವೂ ಚುನಾವಣೆ ಮೇಲೆ ಪರಿಣಾಮ ಬೀರಲಿವೆ ಎನ್ನುವ ಕಾರಣದಿಂದಾಗಿ ಚಂದ್ರಬಾಬು ನಾಯ್ಡು ಪುತ್ರ ಲೋಕೇಶ್, ಕೇಂದ್ರ ಸೆನ್ಸಾರ್ ಮಂಡಳಿಗೆ ಪತ್ರ ಬರೆದು, ಈ ಚಿತ್ರವನ್ನು ಸೆನ್ಸಾರ್ ಮಾಡಬಾರದು ಎಂದು ಮನವಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ರಾಜಕೀಯ ಕಿತ್ತಾಟಗಳು ಏನೇ ಇದ್ದರೂ, ಈ ಸಿನಿಮಾವನ್ನು ತಾವು ಬಿಡುಗಡೆ ಮಾಡುವುದಾಗಿ ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ. ಒಬ್ಬ ಸಿನಿಮಾ ಮೇಕರ್ ಆಗಿ ನನ್ನ ಕೆಲಸ ಮಾಡಿದ್ದೇನೆ. ಜನರು ಎಲ್ಲವನ್ನೂ ತೀರ್ಮಾನ ಮಾಡಲಿ ಎಂದಿದ್ದಾರೆ.