Tag: complain

  • ರಾಜ್ ಕುಮಾರ್, ಕಾವೇರಿ ನದಿ ಬಗ್ಗೆ ಮಾತಾನಾಡಿದ್ದಕ್ಕೆ ಗೇಟ್‍ಪಾಸ್- ತಮಿಳು ಚಿತ್ರಗಳನ್ನು ಬಹಿಷ್ಕಾರ ಮಾಡಬೇಕೆಂದು ಮನವಿ

    ರಾಜ್ ಕುಮಾರ್, ಕಾವೇರಿ ನದಿ ಬಗ್ಗೆ ಮಾತಾನಾಡಿದ್ದಕ್ಕೆ ಗೇಟ್‍ಪಾಸ್- ತಮಿಳು ಚಿತ್ರಗಳನ್ನು ಬಹಿಷ್ಕಾರ ಮಾಡಬೇಕೆಂದು ಮನವಿ

    ಬೆಂಗಳೂರು: ಡಾ. ರಾಜ್ ಕುಮಾರ್ ಬಗ್ಗೆ ಮಾತಾನಾಡಿದ್ದಕ್ಕೆ ತಮಿಳು ಚಿತ್ರರಂಗದಿಂದ ಕನ್ನಡ ನಟನನ್ನು ಬಹಿಷ್ಕಾರ ಮಾಡಿದನ್ನು ಖಂಡಿಸಿ ಕರ್ನಾಟಕ ಸಂಘಟನೆ ಒಕ್ಕೂಟಗಳು ವಾಣಿಜ್ಯ ಮಂಡಳಿಗೆ ದೂರು ನೀಡಿ ತಮಿಳು ಚಿತ್ರಗಳನ್ನು ಬಹಿಷ್ಕಾರ ಮಾಡಬೇಕು ಎಂದು ಮನವಿ ಮಾಡಿಕೊಂಡಿದೆ.

    ನಟ ಯೋಗೇಶ್ ತಮಿಳಿನ ‘ಪಾರ್ತಿಬನ್ ಕಾದಲ್’ ಚಿತ್ರಕ್ಕೆ ನಾಯಕನಾಗಿ ಆಯ್ಕೆಯಾಗಿದ್ದರು. ಯೋಗೇಶ್ ವರನಟ ಡಾ. ರಾಜ್ ಕುಮಾರ್ ಮತ್ತು ಕಾವೇರಿ ನದಿ ಬಗ್ಗೆ ಮಾತಾನಾಡಿದ ಹಿನ್ನೆಲೆಯಲ್ಲಿ ತಮಿಳು ಚಿತ್ರರಂಗ ಯೋಗೇಶ್‍ನನ್ನು ಹೊರದಬ್ಬಿದೆ.

    ಇದನ್ನು ಖಂಡಿಸಿ ಕರ್ನಾಟಕ ಸಂಘಟನೆಗಳ ಒಕ್ಕೂಟದಿಂದ ವಾಣಿಜ್ಯ ಮಂಡಳಿಗೆ ದೂರು ನೀಡಿದೆ. ಇದು ವರನಟ ರಾಜ್ ಕುಮಾರ್ ಅವರಿಗೆ ಆಗಿರುವ ಅವಮಾನ. ಇನ್ನೂ ಮುಂದೆ ರಾಜ್ಯದಲ್ಲಿ ತಮಿಳು ಚಿತ್ರಗಳನ್ನು ಬಹಿಷ್ಕಾರ ಮಾಡಬೇಕು ಎಂದು ಮನವಿ ಮಾಡಿಕೊಂಡಿದೆ.

    ಏನಿದು ವಿವಾದ?
    ಕನ್ನಡ ನಟ ಯೋಗಿ ತಮಿಳಿನ ಪಾರ್ತಿಬನ್ ಕಾದಲ್ ಚಿತ್ರಕ್ಕೆ ನಾಯಕನಾಗಿ ಆಯ್ಕೆಯಾಗಿದ್ದರು. ಈ ಚಿತ್ರದ ಮೋಷನ್ ಪೋಸ್ಟರ್ ಕೂಡ ಚೆನ್ನೈಯಲೇ ಬಿಡುಗಡೆಯಾಗಿತ್ತು. ಆದೆ ಕಾರ್ಯಕ್ರಮ ಮುಗಿದ ಮೇಲೆ ತಮಿಳು ಪತ್ರಕರ್ತರು ಸಿನಿಮಾ ತಂಡವನ್ನು ಪ್ರಶ್ನೆ ಮಾಡಲು ಶುರು ಮಾಡಿದ್ದರು. ಸಿನಿಮಾದ ಬಗ್ಗೆ ಪ್ರಶ್ನೆ ಮುಗಿದ ಬಳಿಕ ಕಾವೇರಿ ಬಗ್ಗೆ ಪತ್ರಕರ್ತರು ಪ್ರಶ್ನೆ ಕೇಳಿದ್ದರು. ಈ ಪ್ರಶ್ನೆಗೆ ಸಾರ್ ನಮ್ಗೆ ನೀರಿಲ್ಲ ನಿಮಗೆ ಬೇಕು ಅಂದ್ರೆ ಹೇಗೆ, ಮಂಡ್ಯ ಅಂತಾ ಊರಿದೆ ಅಲ್ಲಿ ಎಷ್ಟು ಕಷ್ಟಪಡ್ತಾರೆ ಜನ ಅಂತಾ ನೀವೇ ನೋಡಿ ಅಂತಾ ಯೋಗಿ ಉತ್ತರಿಸಿದ್ದರು. ಅಷ್ಟಕ್ಕೆ ಮುಗಿಸದೇ ಪ್ರರ್ತಕರ್ತರು ನಿಮಗೆ ರಾಜ್‍ಕುಮಾರ್ ಇಷ್ಟನೋ ಅಥವಾ ರಜನಿಕಾಂತ್ ಅನ್ನೋ ಪ್ರಶ್ನೆ ಕೇಳಿದ್ದರು. ಇದಕ್ಕೆ ಯೋಗಿ ನನಗೆ ಅಣ್ಣಾವ್ರೇ ಇಷ್ಟ ಎಂದು ಉತ್ತರಿಸಿದ್ದರು.

    ಯೋಗಿ ಅವರ ಈ ಮಾತುಗಳನ್ನು ಹಿಡಿದುಕೊಂಡು ಕನ್ನಡ ನಟನ ಅಭಿಪ್ರಾಯ ಬೇರೆ ಮಾಡಲು ಅಲ್ಲಿನ ಮಾಧ್ಯಮ ಪ್ರಯತ್ನಿಸಿತ್ತು. ಇದರ ಪರಿಣಾಮವಾಗಿ ಪಾರ್ತಿಬನ್ ಕಾದಲ್ ಸಿನಿಮಾದಿಂದ ಯೋಗಿ ಅವರನ್ನು ಗೇಟ್‍ಪಾಸ್ ನೀಡಿದ್ದರು. ಅಷ್ಟೇ ಅಲ್ಲದೇ ಈ ರೀತಿ ಮಾತಾನಾಡಬಾರದಿತ್ತು ಎಂದು ನಿರ್ಮಾಪಕರು ಬುದ್ಧಿ ಮಾತು ಹೇಳಿ ಯೋಗಿಯನ್ನು ಹೊರದಬ್ಬಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಊಟ ಚೆನ್ನಾಗಿಲ್ಲ ಎಂದಿದ್ದಕ್ಕೆ ಅಡುಗೆ ಪಾತ್ರೆಗಳಿಂದ ಹಲ್ಲೆ ಮಾಡಿ ಗ್ರಾಹಕನನ್ನ ಕೊಂದ ಢಾಬಾ ಸಿಬ್ಬಂದಿ

    ಊಟ ಚೆನ್ನಾಗಿಲ್ಲ ಎಂದಿದ್ದಕ್ಕೆ ಅಡುಗೆ ಪಾತ್ರೆಗಳಿಂದ ಹಲ್ಲೆ ಮಾಡಿ ಗ್ರಾಹಕನನ್ನ ಕೊಂದ ಢಾಬಾ ಸಿಬ್ಬಂದಿ

    ನವದೆಹಲಿ: 30 ವರ್ಷದ ವ್ಯಕ್ತಿಯನ್ನ ಢಾಬಾದ ಮೂವರು ಸಿಬ್ಬಂದಿ ಸೇರಿ ಕೊಲೆ ಮಾಡಿರೋ ಘಟನೆ ದೆಹಲಿಯ ಪ್ರೀತ್ ವಿಹಾರ್‍ನಲ್ಲಿ ನಡೆದಿದೆ.

    ಮೃತ ವ್ಯಕ್ತಿಯನ್ನ ಪವನ್ ಕುಮಾರ್ ಎಂದು ಗುರುತಿಸಲಾಗಿದೆ. ಪವನ್ ಅವರು ಮಂಡಾವ್ಲಿಯಲ್ಲಿ ತನ್ನದೇ ಸ್ವಂತ ಉಪಹಾರಗೃಹವನ್ನ ಹೊಂದಿದ್ದಾರೆ. ಅವರು ಭಾನುವಾರ ಸಂಜೆ ಕಮಲ್ ಢಾಬಾಗೆ ಊಟಕ್ಕೆಂದು ಹೋಗಿದ್ದು, ಅಲ್ಲಿ ನೀಡಲಾಗಿದ್ದ ಆಹಾರದ ಗುಣಮಟ್ಟದ ಬಗ್ಗೆ ಸಿಬ್ಬಂದಿಗೆ ದೂರಿದ್ದರು. ಇದರಿಂದ ಕೋಪಗೊಂಡ ಢಾಬಾ ಸಿಬ್ಬಂದಿ ಪವನ್ ಜೊತೆ ವಾಗ್ವಾದ ನಡೆಸಿದ್ದಾರೆ. ಬಳಿಕ ಢಾಬಾ ಮಾಲೀಕ ಹಾಗೂ ಮತ್ತೋರ್ವ ನೌಕರ ಸೇರಿ ಭಾರವಾದ ಪಾತ್ರೆಗಳಿಂದ ಪವನ್ ಮೇಲೆ ಹಲ್ಲೆ ಮಾಡಿದ್ದಾರೆ.

    ಪವನ್ ಅವರ ತಲೆ, ಎದೆ ಮತ್ತು ಹೊಟ್ಟೆಯ ಭಾಗಕ್ಕೆ ಹಲವು ಬಾರಿ ಹೊಡೆಯಲಾಗಿದ್ದು, ಅವರು ಸ್ಥಳದಲ್ಲೇ ಕುಸಿದು ಬಿದ್ದರು ಎಂದು ವರದಿಯಾಗಿದೆ.

    ಸ್ಥಳೀಯರೊಬ್ಬರು ಕರೆ ಮಾಡಿ ವಿಷಯ ತಿಳಿಸಿದ ಬಳಿಕ ನಾವು ಸ್ಥಳಕ್ಕೆ ಹೋದೆವು. ಬಳಿಕ ಪವನ್ ಅವರನ್ನ ಖಾಸಗಿ ಆಸ್ಪತ್ರೆಗೆ ರವಾನಿಸಲಾಯಿತು. ಆದ್ರೆ ಚಿಕಿತ್ಸೆ ಫಲಿಸದೇ ಭಾನುವಾರ ರಾತ್ರಿ ಪವನ್ ಸಾವನ್ನಪ್ಪಿದ್ರು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಢಾಬಾ ಸಿಬ್ಬಂದಿಯಾದ ಸಚಿನ್, ಗೋವಿಂದ್ ಹಾಗೂ ಕರಣ್ ಎಂಬ ಮೂವರನ್ನು ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 307(ಕೊಲೆ ಯತ್ನ) ಹಾಗೂ 302(ಕೊಲೆ) ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.