Tag: Competitors

  • ವೈಷ್ಣವಿ ಉಪ್ಪಿಟ್ಟು, ಶಮಂತ್ ಹಪ್ಪಳ, ಶುಭಾ ತಂಬಿಟ್ಟು: ಮಂಜು

    ವೈಷ್ಣವಿ ಉಪ್ಪಿಟ್ಟು, ಶಮಂತ್ ಹಪ್ಪಳ, ಶುಭಾ ತಂಬಿಟ್ಟು: ಮಂಜು

    ಬಿಗ್‍ಬಾಸ್‍ನ ವಾರದ ಕಥೆ ಕಿಚ್ಚ ಸುದೀಪ್ ಜೊತೆಗೆ ಸಂಚಿಕೆಯಲ್ಲಿ ಮಂಜುರವರಿಗೆ ಮನೆಯಲ್ಲಿರುವ 12 ಸ್ಪರ್ಧಿಗಳನ್ನು 12 ತಿಂಡಿಗಳ ಹೆಸರಿಗೆ ಸೂಚಿಸುವಂತೆ ಸುದೀಪ್ ಸೂಚಿಸಿದ್ದರು. ಅದರಂತೆ ಮಂಜು ಮೊದಲಿಗೆ ವೈಷ್ಣವಿಯವರ ಹೆಸರನ್ನು ಉಪ್ಪಿಟ್ಟಿಗೆ ಸೂಚಿಸಿ, ಕಾರಣ ಬೋರಿಂಗ್, ಅರ್ಜೆಂಟ್‍ಗೆ ಉಪ್ಪಿಟು ಬೇಕಾಗಬಹುದು, ಇಲ್ಲವಾದಲ್ಲಿ ಅದರ ಅವಶ್ಯಕತೆ ಇಲ್ಲ ಎನ್ನುತ್ತಾರೆ. ಪ್ರಶಾಂತ್ ಸಂಬರಗಿ ಚಪಾತಿ, ಯಾವಾಗಲೂ ತಿನ್ನಬೇಕು ಅನಿಸುವುದಿಲ್ಲ. ಆದರೆ ಯಾವಾಗಲಾದರೂ ತಿನ್ನಬೇಕಾಗುತ್ತದೆ ಎಂದು ಹೇಳುತ್ತಾರೆ. ಈ ವೇಳೆ ಸುದೀಪ್ ಚಪಾತಿಗೆ ಅಂತಾನೇ ಯಾವುದು ಇಲ್ಲ. ಆದರೆ ಅದರೊಂದಿಗೆ ಏನು ಸರ್ವ್ ಮಾಡುತ್ತೇವೆ ಅದರ ಮೇಲೆ ಡಿಪೆಂಡ್ ಆಗಿರುತ್ತದೆ. ಅಲ್ಲದೇ ಚಪಾತಿಗೆ ತಟ್ಟಿ, ತಟ್ಟಿ ರುಬ್ಬಿಸಿಕೊಂಡು ಅಭ್ಯಾಸ ಇದೆ ಎಂದು ಹಾಸ್ಯಮಾಡುತ್ತಾರೆ.

    ನಂತರ ಕೇಸರಿ ಬಾತ್ ಪ್ರಿಯಾಂಕ, ನೋಡಲು ಲಕ್ಷಣವಾಗಿದ್ದು ಸುಂದರವಾಗಿದ್ದಾರೆ. ಚೆನ್ನಾಗಿ ಮಾತನಾಡುತ್ತಾರೆ ಎಂದಿದ್ದಾರೆ. ಬಳಿಕ ದಿವ್ಯಾ ಸುರೇಶ್ ಬಿಸಿಬೇಳೆ ಬಾತ್‍ಗೆ ಕಾರಣ ಮೇಲೆ ಬೂಂದಿ ಹಾಕಿಕೊಂಡು ತಿನ್ನಬೇಕು. ಒಂದು ರೀತಿ ತಿನ್ನಲು ಬಿಸಿಬಿಸಿಯಾಗಿ ಚೆನ್ನಾಗಿರುತ್ತದೆ. ಚಕ್ರವರ್ತಿ ಕೇರಳ ಪರೋಟ ಅದು ಒಂದು ರೀತಿ ಲೇಯರ್ ಪರೋಟ ಮೇಲಕ್ಕೆ ಎತ್ತಿದರೆ ಬರುತ್ತಲೇ ಇರುತ್ತದೆ ಎನ್ನುತ್ತಾರೆ. ಆಗ ಸುದೀಪ್ ಲೇಯರ್ ಪರೋಟ ಮುಗಿಯಿತು ಎಂದರೆ ಮೇಲಕ್ಕೆ ಬರುತ್ತಾನೆ ಇರುತ್ತದೆ. ಉದಾಹರಣೆ ವಾದ ಮುಗಿಯಿತು ಎಂದರೆ ಇನ್ನೊಂದು ಬರುತ್ತಲೇ ಇರುತ್ತದೆ ಎಂದು ನಗುತ್ತಾರೆ.

    ರಘು ಒಂದು ರೀತಿ ಡ್ರೈ ಜಾಮೂನ್ ಇದ್ದಂತೆ. ನೋಡಲು ಒರಟಾಗಿ ಚೆನ್ನಾಗಿ ಕಾಣಿಸುವುದಿಲ್ಲ ತಿನ್ನಬೇಕು ಎಂದು ಕೂಡ ಅನಿಸುವುದಿಲ್ಲ. ಆದ್ರೆ ತಿಂದ ನಂತರ ಚೆನ್ನಾಗಿರುತ್ತದೆ. ಇನ್ನೂ ನಿಧಿ ಮೆಣಸಿನ ಕಾಯಿ ಬಜ್ಜಿ ನೋಡಲು ಮೇಲೆ ಕಡಲೆ ಹಿಟ್ಟಿನ ರೀತಿ ಇರುತ್ತದೆ. ಯಾಮಾರಿದರೆ ಒಳಗಡೆ ಮೆಣಸಿನಕಾಯಿ ಭಾರೀ ಘಾಟು. ಅವರ ಪಕ್ಕ ಕೂರುವುದಿರಲಿ ಅಕ್ಕ-ಪಕ್ಕದಲ್ಲಿರುವವರು ಮನೆಯನ್ನೇ ಖಾಲಿ ಮಾಡಿಕೊಂಡು ಹೋಗಿಬಿಡುತ್ತಾರೆ ಎನ್ನುತ್ತಾರೆ.

    ಶುಭ ತಂಬಿಟ್ಟು, ಎಷ್ಟು ಸಲ ಬೆಕಾದರೂ ತಿನ್ನಬಹುದು ಬೇಜಾರಾದಾಗ ಉಗಿಯಬಹುದು. ಅಂದರೆ ಬರೀ ಹಿಟ್ಟು-ಹಿಟ್ಟೆ ಸಿಗುತ್ತದೆ. ತಂಬಿಟ್ಟು ತಿನ್ನಲು ಚೆಂದ, ಉಗಿಯಲು ಕೂಡ ಚೆಂದ ಅಂದಾಗ, ಸುದೀಪ್ ಒಳ್ಳೆ ಟೈಂ ಪಾಸ್ ಸಿರಿಯಸ್ ಊಟ ಕೂಡ ಅಲ್ಲ ಅಂತ ಕೇಳುತ್ತಾರೆ. ಆಗ ಮಂಜು ಊಟನೂ ಅಲ್ಲ. ಸ್ನಾಕ್ಸ್ ಕೂಡ ಅಲ್ಲ ಎಂದು ಹೇಳುತ್ತಾರೆ.

    ಇಡ್ಲಿ ದಿವ್ಯಾ ಉರುಡುಗ ಕಾರಣ ಅದನ್ನು ಬೇಗ ತಿಂದು ಹೋಗಿಬಿಡಬಹುದು. ಇಡ್ಲಿಗೆ ಚಟ್ನಿ ಅಥವಾ ಸಂಬಾರ್ ಇರಬೇಕು ಆಗಲೆ ಅದಕ್ಕೆ ಬೆಲೆ. ಅರವಿಂದ್ ಪೂರಿ, ಕಾರಣ ಅದು ಸಿಂಗಲ್ ಅದಕ್ಕೂ ಏನಾದರೂ ಬೇಕು ಎನ್ನುತ್ತಾರೆ. ಈ ವೇಳೆ ಇಡ್ಲಿ ಹಾಗೂ ಪೂರಿ ಒಳ್ಳೆ ಕಾಂಬಿನೇಷನ್ ಅಲ್ವಾಲ್ಲ ಎಂದು ಸುದೀಪ್ ಪ್ರಶ್ನಿಸಿದಾಗ, ಇಡ್ಲಿಗೂ ಸಾಗು, ಚಟ್ನಿ ಹಾಕಬಹುದು, ಪೂರಿಗೂ ಸಾಗು ಚಟ್ನಿ ಹಾಕಬಹುದು. ಒಂದರಲ್ಲೇ ಎರಡು ನಡೆಯುತ್ತದೆ.

    ಹಪ್ಪಳ ಬಂದು ಶಮಂತ್ ಎಂದಾಗ ಸುದೀಪ್ ಎರಡು ಐಟಂ ಮಧ್ಯೆ ಅದನ್ನು ಎಷ್ಟು ಬಾರಿ ಕೇಳಿದರು ಹಾಕುತ್ತಾರೆ ಎಂದು ಹೇಳುತ್ತಾರೆ. ಈ ವೇಳೆ ಸ್ಪರ್ಧಿಗಳೆಲ್ಲಾ ಹೊಟ್ಟೆ ಬಿರಿಯುವಂತೆ ನಕ್ಕಿದ್ದಾರೆ. ನಂತರ ದಿವ್ಯಾ ಸುರೇಶ್ ಚಕ್ರವರ್ತಿ ಹಾಗೂ ಶಮಂತ್ ಮನೆಮಂದಿ ಎಲ್ಲ ರಾಗಿ ಮುದ್ದೆ, ರಾಗಿ ರೊಟ್ಟಿಗೆ ಮಂಜುರನ್ನು ಹೋಲಿಸಿದ್ದಾರೆ.

  • ದೊಡ್ಮನೆ ಮಂದಿಗೆ ‘ಕಾಲ ಕ್ಷಣಿಕ ಕಣೋ’ ಅಂದ ಬಿಗ್‍ಬಾಸ್

    ದೊಡ್ಮನೆ ಮಂದಿಗೆ ‘ಕಾಲ ಕ್ಷಣಿಕ ಕಣೋ’ ಅಂದ ಬಿಗ್‍ಬಾಸ್

    ಪ್ರತಿದಿನ ಮನೆಯ ಸ್ಪರ್ಧಿಗಳಿಗೆ ಹುರಿದುಂಬಿಸಲು ಬಿಗ್‍ಬಾಸ್ ಒಂದೊಂದು ಹಾಡುಗಳನ್ನು ಹಾಕುತ್ತಿದ್ದರು. ಸದ್ಯ ಬಿಗ್‍ಬಾಸ್ ಮನೆಯ ಕೊನೆಯ ದಿನದಂದು ಮನೆಮಂದಿಗೆ ಅರ್ಥಪೂರ್ಣವಾದ ಹಾಡನ್ನು ಹಾಕಿದ್ದಾರೆ.

    ಕೊರೊನಾದಿಂದ ರಾಜ್ಯಾದ್ಯಂತ ಸರ್ಕಾರ ಲಾಕ್‍ಡೌನ್ ಘೋಷಿಸಿದ್ದು, ಇದೀಗ ಕಿರುತೆರೆಯ ಎಲ್ಲ ರಿಯಾಲಿಟಿ ಶೋ, ಧಾರಾವಾಹಿಗಳ ಚಿತ್ರೀಕರಣಕ್ಕೂ ಬ್ರೇಕ್ ಬಿದ್ದಿದೆ. ಕನ್ನಡಿಗರ ಅಚ್ಚುಮೆಚ್ಚಿನ ಕಾರ್ಯಕ್ರಮ ಬಿಗ್‍ಬಾಸ್ ಕೂಡ ಇದೀಗ ಅಂತಿಮ ಹಂತಕ್ಕೆ ತಲುಪಿದ್ದು, 71ನೇ ದಿನ ಬಿಗ್‍ಬಾಸ್ ಮನೆ ಮಂದಿಗೆ ಈ ಭೂಮಿ ಬಣ್ಣದ ಬುಗುರಿ ಆ ಶಿವನೇ ಚಾಟಿ ಕಣೋ ಹಾಡನ್ನು ಹಾಕಿದ್ದಾರೆ. ಅಲ್ಲದೆ ಕೊನೆಯಲ್ಲು ನಿಂತಾಗ ಬುಗುರಿಯ ಆಟ ಎಲ್ಲರೂ ಒಂದೇ ಓಟ ಕಾಲ ಕ್ಷಣಿಕ ಕಣೋ ಎಂದು ಹೇಳಿದ್ದಾರೆ.

    ಪ್ರತಿದಿನ ಬೆಳಗ್ಗೆ ಸಾಂಗ್ ಪ್ಲೇ ಮಾಡಿದ ನಂತರ ಎಂದು ಕೂಡ ಮಾತನಾಡದ ಬಿಗ್‍ಬಾಸ್, ಕೊನೆಯ ದಿನ ಈ ಸಾಲುಗಳನ್ನು ಹೇಳಿದ್ದು, ಮನೆಮಂದಿಗೆ ಬಹಳ ಕೂತುಹಲ ಮೂಡಿಸಿತ್ತು. ಮಂಜು ಈ ಸಾಂಗ್‍ನನ್ನು ಮತ್ತೆ ಹಾಕುವಂತೆ ಕೇಳಿದರೆ, ಕೊನೆಯಲ್ಲಿ ಬಿಗ್‍ಬಾಸ್ ಮಾತನಾಡಿದ್ದಾರೆ ಎಂದು ಶಮಂತ್ ಚಕ್ರವರ್ತಿಗೆ ಹೇಳುತ್ತಾರೆ.

    ಸಾಂಗ್ ಓಕೆ ಆದರೆ ಬಿಗ್‍ಬಾಸ್ ಏನಕ್ಕೆ ಹೇಳಿರಬಹುದು ಎಂದು ರಘು ತಲೆಕೆಡಿಸಿಕೊಳ್ಳುತ್ತಾರೆ. ಆಗ ಮನೆಯಿಂದ ಈ ಕಡೆಗೆ ಬಂದ ಶುಭಾ ಈ ಬಾರಿ ಟಿಟಿ ಫಿಕ್ಸ್ ಆಗಿದೆ ಎಂದರೆ, ಈ ವೇಳೆ ಮಂಜು ಶೇರ್ ಆಟೋ ಫಿಕ್ಸ್ ಆಗಿದೆ. ಕಾಲ ಕ್ಷಣಿಕ ಕಾನೋ ಅಂದು ಬಿಟ್ಟರಲ್ಲ. ಏನಪ್ಪಾ ಇದು ಎಂದು ಶುಭಾಗೆ ಕೇಳುತ್ತಾರೆ.

    ಬಿಗ್‍ಬಾಸ್ ಮಾತನ್ನು ಕೇಳಿ ರಘು ತಮಗೆ ಗೊತ್ತಿಲ್ಲದೆಯೇ ಎಲ್ಲರನ್ನು ಒಟ್ಟಿಗೆ ಮನೆಯಿಂದ ಹೋಗಿ ಎಂದು ಹೇಳಿ ಬಿಡುತ್ತಾರಾ ಎನ್ನುತ್ತಾರೆ. ಒಟ್ಟಾರೆ ಕೊರೊನಾ ಮಾನವರಿಗೆ ಒಂದು ರೀತಿ ಜೀವನ ಪಾಠ ಕಲಿಸುತ್ತಿದ್ದು, ಬಿಗ್‍ಬಾಸ್ ಕೂಡ ಮನೆ ಮಂದಿಗೆ ಇಂದು ನಿಮ್ಮೆಲ್ಲರ ಪಯಣ ಬಿಗ್‍ಬಾಸ್ ಮನೆಯಲ್ಲಿ ಕೊನೆಯ ದಿನ ಎಂದು ಪರೋಕ್ಷವಾಗಿ ತಿಳಿಸಿದ್ದಾರೆ.

  • ನೀರು, ಊಟ, ನಿದ್ದೆ ಇಲ್ಲದೆ ಪರದಾಡಿದ ಸ್ಪರ್ಧಿಗಳು!

    ನೀರು, ಊಟ, ನಿದ್ದೆ ಇಲ್ಲದೆ ಪರದಾಡಿದ ಸ್ಪರ್ಧಿಗಳು!

    ಪ್ರತಿನಿತ್ಯದಂತೆ ನಿನ್ನೆ ಕೂಡ ಬೆಳಗ್ಗೆ ಬಿಗ್‍ಬಾಸ್ ಮನೆಯಲ್ಲಿ ಸಾಂಗ್ ಪ್ಲೇ ಆಗುತ್ತಿದ್ದಂತೆ ಮನೆಮಂದಿ ಏಳುತ್ತಾರೆ, ಎದ್ದ ಕೂಡಲೇ ರೂಮಿನಿಂದ ಹೊರಬಂದ ಮನೆ ಮನೆಮಂದಿಗೆ ಬಿಗ್‍ಬಾಸ್ ದೊಡ್ಡ ಶಾಕ್ ಅನ್ನೇ ನೀಡಿದ್ದಾರೆ.

    ಹೌದು, ನಿನ್ನೆ ಬಿಗ್‍ಬಾಸ್ ಕಾಣದಂತೆ ಮಾಯಾವಾದನೂ ಸಾಂಗ್ ಹಾಕಿ ಮನೆಮಂದಿಯನ್ನು ಎಚ್ಚರಗೊಳಿಸಿದರು. ಎದ್ದ ಕೂಡಲೇ ಲಿವಿಂಗ್ ಏರಿಯಾಗೆ ಬಂದ ಎಲ್ಲಾ ಸ್ಫರ್ದಿಗಳಿಗೆ ಮನೆಯಲ್ಲಿದ್ದ ವಸ್ತುಗಳೆಲ್ಲಾ ನಾಪತ್ತೆಯಾಗಿರುವುದನ್ನು ಕಂಡು ಅಚ್ಚರಿಗೊಳ್ಳುತ್ತಾರೆ.

    ನಂತರ ಕಿಚನ್ ರೂಮ್‍ಗೆ ಹೋಗಿ ನೋಡಿದಾಗ ಅಲ್ಲಿದ್ದ ಅಡುಗೆ ಸಾಮಗ್ರಿಗಳು, ಅಡುಗೆ ಪದಾರ್ಥಗಳು ಎಲ್ಲವೂ ಮಾಯವಾಗಿತ್ತು. ಬಳಿಕ ಅಲ್ಲಿಂದ ಗಾರ್ಡನ್ ಏರಿಯಾಗೆ ಹೋಗಿ ನೋಡಿದಾಗ ಜಿಮ್ ಐಟಮ್ಸ್ ಕೂಡ ಇರಲಿಲ್ಲ. ಇದಾದ ನಂತರ ಬಾತ್‍ರೂಮ್ ಏರಿಯಾಗೆ ಹೋಗಿ ನೋಡಿದಾಗ ಬ್ರಶ್ ಸೋಪ್ ಎಲ್ಲವು ನಾಪತ್ತೆಯಾಗಿತ್ತು. ಅಷ್ಟೇ ಅಲ್ಲದೇ ಮನೆಯಲ್ಲಿ ನೀರು ಕೂಡ ನಿಲ್ಲಿಸಿದರು.

    ಈ ವೇಳೆ ಶುಭಾ ಪೂಂಜಾ ಬಿಗ್‍ಬಾಸ್ ಬ್ರಶ್ ಆದರೂ ಕೊಡಿ ಬಿಗ್‍ಬಾಸ್ ಎಂದು ಕೇಳಿಕೊಳ್ಳುತ್ತಾರೆ. ಈ ವೇಳೆ ದಿವ್ಯಾ ಉರುಡುಗ, ಮಂಜು ಸ್ಟಾರ್ಟ್ ಆಯ್ತು ಇವಳದ್ದು ಅಂತಾರೆ. ಇದಕ್ಕೆ ಶುಭಾ ನಾನು ನನ್ನ ಪಾಡಿಗೆ ನಾನು ಕೇಳುತ್ತಿದ್ದೇನೆ. ನಿಮಗೆಲ್ಲಾ ಬೇಕಾದರೆ ಶುಭಾ ಕೇಳು ಎಂದು ಹೇಳುತ್ತೀರಾ, ಆಗ ಮಾತ್ರ ನಾನು ನಿಮಗೆ ಬೇಕು ಎನ್ನುತ್ತಾರೆ. ಆಗ ದಿವ್ಯಾ ಉರುಡುಗ ಸರಿ ಈಗ ಎಲ್ಲರಿಗೂ ಕೇಳು ಎಂದಾಗ, ಶುಭಾ, ಬಿಗ್‍ಬಾಸ್ ಎಲ್ಲಾರಿಗೂ ಬೇಡ, ನನ್ನ ಬ್ರಶ್ ಮಾತ್ರ ಕಳುಹಿಸಿಕೊಡಿ ಎಂದು ಹೇಳುತ್ತಾರೆ.

    ಒಟ್ಟಾರೆ ಮನೆಯೆಲ್ಲಾ ಖಾಲಿ ಖಾಲಿಯಾಗಿರುವುದನ್ನು ನೋಡಿ ಮನೆ ಮಂದಿ ಸದ್ಯ ನೀರು, ಊಟ, ನಿದ್ದೆ ಇಲ್ಲದೆ  ಆತಂಕ್ಕೊಳಗಾಗಿದ್ದಾರೆ.

  • ಬಿಗ್‍ಬಾಸ್ ಮನೆಯಲ್ಲಿ ರಂಗೇರ್ತು ರಂಗು ರಂಗಿನ ಹೋಳಿ ಹಬ್ಬ!

    ಬಿಗ್‍ಬಾಸ್ ಮನೆಯಲ್ಲಿ ರಂಗೇರ್ತು ರಂಗು ರಂಗಿನ ಹೋಳಿ ಹಬ್ಬ!

    ಬಿಗ್‍ಬಾಸ್ ಕಾರ್ಯಕ್ರಮ ಆರಂಭವಾದಗನಿಂದಲೂ ಮನೆಕೆಲಸ, ಟಾಸ್ಕ್ ಗಳಲ್ಲಿ ಬ್ಯುಸಿಯಾಗಿದ್ದ ಮಂದಿ ನಿನ್ನೆ ಬಣ್ಣದೋಕುಳಿಯಲ್ಲಿ ಮಿಂದಿದ್ದಾರೆ.

    ಬೆಳಗ್ಗೆ ಎದ್ದೆ ಎಳುತ್ತಿದ್ದಂತೆಯೇ ನಟ ಶಿವರಾಜ್‍ಕುಮಾರ್ ಅಭಿನಯದ ಪ್ರೀತ್ಸೆ ಸಿನಿಮಾದ ‘ಹೋಳಿ’ ಸಾಂಗ್ ಪ್ಲೇ ಮಾಡುವುದರ ಮೂಲಕ ಮನೆಮಂದಿಗೆ ಬಿಗ್‍ಬಾಸ್ ವಿಶ್ ಮಾಡಿದ್ದಾರೆ. ಹಾಡು ಪ್ರಾರಂಭವಾಗುತ್ತಿದ್ದಂತೆಯೇ ಮೈ ಮುರಿದುಕೊಂಡು ಎಂದ ಮನೆಯ ಮಂದಿ ಗಾರ್ಡನ್ ಏರಿಯಾಗೆ ಬಂದಾಗ ಅಲ್ಲಿದ್ದ ಹೋಳಿಯನ್ನು ನೋಡಿ ಫುಲ್ ಖುಷ್ ಆಗುತ್ತಾರೆ.

    ಬಳಿಕ ಫ್ರೆಶ್ ಆಪ್ ಆಗಿ ಬಟ್ಟೆ ಬದಲಾಯಿಸಿಕೊಂಡು ಬಂದ ಮನೆಮಂದಿ ಗಾರ್ಡನ್ ಏರಿಯಾದ ಮೇಜಿನ ಮೇಲೆ ಇರಿಸಿದ್ದ ಬಣ್ಣಗಳನ್ನು ಎತ್ತಿಕೊಂಡು ಒಬ್ಬರಿಗೊಬ್ಬರು ಹಚ್ಚಿಕೊಳ್ಳುವ ಮೂಲಕ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ. ಈ ವೇಳೆ ಬಿಗ್‍ಬಾಸ್ ಮನೆ ಮಂದಿಗಾಗಿ  ಪ್ರೇಮ್ ಅಭಿನಯದ ಡಿಕೆ ಸಿನಿಮಾದ ‘ಸೆಸಮ್ಮ’ ಸಾಂಗ್‍ನನ್ನು ಪ್ಲೇ ಮಾಡುತ್ತಾರೆ. ಹಾಡಿಗೆ ಶುಭ ಹಾಗೂ ಮಂಜು ಮಸ್ತ್ ಮಸ್ತ್ ಸ್ಟೆಪ್ ಹಾಕಿದರೆ, ರಾಜೀವ್, ವಿಶ್ವನಾಥ್, ರಘು ಸೇರಿದಂತೆ ಮತ್ತೆ ಕೆಲವರು ನೆಲದ ಮೇಲೆ ಉರುಳಾಡಿ ಸಖತ್ ಡ್ಯಾನ್ಸ್ ಮಾಡಿದ್ದಾರೆ.

    ಕೊನೆಗೆ ಹಾಡು ಮುಕ್ತಾಯವಾಗುತ್ತಿದ್ದಂತೆಯೇ ಮನೆಯ ಮಂದಿ ಕ್ಯಾಮೆರಾ ಮುಂದೆ ನಿಂತು ಸಮಸ್ತ ನಾಡಿನ ಜನತೆಗೆ ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು ಎಂದು ಶುಭಾಶಯ ತಿಳಿಸಿದ್ದಾರೆ.

    ಒಟ್ಟಾರೆ ಇಷ್ಟು ದಿನ ಹೊರಗಡೆ ಹೋಳಿ ಹಬ್ಬ ಆಚರಿಸುತ್ತಿದ್ದ ಮಂದಿ, ಇದೀಗ ಬಿಗ್‍ಬಾಸ್ ಮನೆಯಲ್ಲಿ ಬಣ್ಣದ ಆಟ ಆಡುವ ಮೂಲಕ ಸಖತ್ ಎಂಜಾಯ್ ಮಾಡಿದ್ದಾರೆ.

  • ಬಿಗ್‍ಬಾಸ್ ಮನೆಯಲ್ಲಿ ನಡಿತು ಮಂಜು ತುಲಾಭಾರ!

    ಬಿಗ್‍ಬಾಸ್ ಮನೆಯಲ್ಲಿ ನಡಿತು ಮಂಜು ತುಲಾಭಾರ!

    ಬಿಗ್‍ಬಾಸ್ ಕಾರ್ಯಕ್ರಮ ಆರಂಭವಾದಾಗಿನಿಂದಲೂ ದೊಡ್ಮನೆಯಲ್ಲಿ ಹಳ್ಳಿಹೈದ ಮಂಜುದೇ ಹವಾ. ದೊಡ್ಮನೆಗೆ ಬಂದ ಕೆಲವೇ ದಿನಗಳಲ್ಲಿ ದಿವ್ಯಾ ಸುರೇಶ್‍ರನ್ನು ಪಟಾಯಿಸಿದ್ದ ಮಂಜು, ಮನೆಮಂದಿ ಮನಸ್ಸನ್ನು ಗೆದ್ದಿದ್ದಾರೆ. ಎಲ್ಲೆ ಹೋದರೂ, ಬಂದರೂ ಮಂಜು ಜಪ ಮಾಡುವ ದೊಡ್ಮನೆ ಸದಸ್ಯರು, ನಿಜಕ್ಕೂ ಮಂಜುರನ್ನು ಎಷ್ಟು ಇಷ್ಟಪಡುತ್ತಾರೆ ಎಂದು ಕಿಚ್ಚ ತುಲಾಭಾರ ಕಾರ್ಯಕ್ರಮ ನಡೆಸಿದ್ದಾರೆ.

    ಅದರ ಅನುಸಾರ ತಕ್ಕಡಿಯ ಒಂದು ಭಾಗದಲ್ಲಿ ಮಂಜು ಕುಳಿತುಕೊಳ್ಳುತ್ತಾರೆ. ಇನ್ನೊಂದು ಭಾಗದಲ್ಲಿ ಮನೆಯ ಸದಸ್ಯರು ಬಹಳ ಇಷ್ಟಪಡುವಂತಹ ವಸ್ತುಗಳನ್ನು ತಂದು ಅದರೊಳಗೆ ಇಡಬೇಕು. ಅದು ವಸ್ತುವಾದರೂ ಸರಿ, ವ್ಯಕ್ತಿಯಾದರೂ ಸರಿ ಮತ್ತೆ ನಿಮಗೆ ವಾಪಸ್ ಸಿಗಲ್ಲ ಅಂತ ಸುದೀಪ್ ಸೂಚಿಸುತ್ತಾರೆ.

    ಅದರಂತೆ ರಾಜೀವ್, ಅರವಿಂದ್ ತಾವು ಇಷ್ಟಪಡುವಂತಹ ಡಂಬಲ್ಸ್ ಹಾಕುತ್ತಾರೆ. ನಿಧಿ ಬೆಲ್ಟ್, ವೈಷ್ಣವಿ ಯೋಗ ಮ್ಯಾಟ್, ವಿಶ್ವನಾಥ್ ಶೂ, ರಘು ಪಫ್ಯೂಮ್, ಶುಭ ಪೂಂಜಾ ಬಾಯಿಲ್ಡ್ ರೈಸ್, ಪ್ರಶಾಂತ್ ಸಂಬರ್ಗಿ ಕಾಫಿ ಕಪ್, ದಿವ್ಯಾ ಉರುಡುಗ ಜಾಕೆಟ್ ಹಾಗೂ ಶೂ, ಗೀತಾ ಡ್ರಸ್, ಶಂಕರ್ ಅಶ್ವತ್ ಕರ್ಪೂರ, ಶಮಂತ್ ಭೀಮ್ ಬ್ಯಾಗ್, ಚಂದ್ರಕಲಾ ಟೀ ಕಪ್ ಇಡುತ್ತಾರೆ. ಆದರೆ ಎಲ್ಲರ ಮಧ್ಯೆ ದಿವ್ಯಾ ಸುರೇಶ್ ಮಾತ್ರ ನಾನು ಶಮಂತ್‍ನನ್ನು ಆ ಸ್ಥಳದಲ್ಲಿ ಕೂರಿಸಲು ಇಷ್ಟಪಡುತ್ತೇನೆ. ನನಗೆ ಅವರೆಂದರೆ ಇಷ್ಟವಿಲ್ಲ ಎಂದು ನೇರವಾಗಿ ನುಡಿಯುತ್ತಾರೆ.

    ಬಳಿಕ ನೀವು ಹಾಕಿರುವ ವಸ್ತುಗಳನ್ನು ಮತ್ತೆ ಉಪಯೋಗಿಸುವಂತಿಲ್ಲ ಎಂದು ಕಿಚ್ಚ ಸೂಚಿಸಿದಾಗ, ಅರವಿಂದ್ ನನಗೆ ಡಂಬಲ್ಸ್ ಎಂದರೆ ಬಹಳ ಇಷ್ಟ. ಒಂದು ದಿನ ಡಂಬಲ್ಸ್ ಇಲ್ಲದೇ ವರ್ಕ್ ಔಟ್ ಮಾಡದಿರಲು ಸಾಧ್ಯವಿಲ್ಲ. ಹಾಗಾಗಿ ಅದನ್ನು ಹಿಂಪಡೆಯುತ್ತೇನೆ ಎಂದು ಹೇಳುತ್ತಾರೆ. ಶುಭ ಪೂಂಜಾ ಕೂಡ ನನಗೆ ಬಾಯಿಲ್ಡ್ ರೈಸ್ ಅಂದರೆ ಇಷ್ಟ ಹಾಗಾಗಿ ಅದನ್ನು ಹಿಂಪಡೆದು ಅದರ ಬದಲಿಗೆ ಶೂ ಇಡುತ್ತೇನೆ ಎಂದು ಹೇಳುತ್ತಾರೆ.

    ಹೀಗೆ ಮನೆಯ ಸದಸ್ಯರು ಮಂಜುರನ್ನು ಎಷ್ಟು ಪ್ರೀತಿಸುತ್ತಾರೆ ಎಂಬುವುದಕ್ಕೆ ತಾವು ಇಷ್ಟಪಡುವಂತಹ ವಸ್ತುಗಳನ್ನು ತಕ್ಕಡಿಯಲ್ಲಿ ಇಡುವ ಮೂಲಕ ತೋರಿಸುತ್ತಾರೆ. ಕೊನೆಗೆ ಸುದೀಪ್ ಅವರು ಮಂಜು ಅವರನ್ನು ತಕ್ಕಡಿಯಿಂದ ನಿದಾನವಾಗಿ ಇಳಿಯುವಂತೆ ಹೇಳಿದ್ದು, ಎಲ್ಲರೂ ಒಟ್ಟಾಗಿ ಕುಳಿತುಕೊಳ್ಳುತ್ತಾರೆ.

  • ಬಿಗ್ ಬಾಸ್ ಸೀಸನ್ 6ರ ಸಂಭಾವ್ಯ ಪಟ್ಟಿ ಇಲ್ಲಿದೆ

    ಬಿಗ್ ಬಾಸ್ ಸೀಸನ್ 6ರ ಸಂಭಾವ್ಯ ಪಟ್ಟಿ ಇಲ್ಲಿದೆ

    ಬೆಂಗಳೂರು: ಕನ್ನಡದ ಹೆಸರಾಂತ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 6ರ ಸ್ಪರ್ಧಾಳುಗಳ ಸಂಭಾವ್ಯ ಪಟ್ಟಿ ಲಭ್ಯವಾಗಿದೆ. ಇದೇ ಭಾನುವಾರ ಬಿಗ್ ಬಾಸ್ ಕಾರ್ಯಕ್ರಮ ಶುಭ ಆರಂಭಗೊಳ್ಳಲಿದೆ.

    ಈ ಬಾರಿ 18 ಸ್ಪರ್ಧಿಗಳು ಬಿಗ್ ಬಾಸ್ ಮನೆಯೊಳಗೆ ಕಾಲಿಡಲಿದ್ದಾರೆ. ಕಳೆದ ಸೀಸನ್ ರೀತಿಯಲ್ಲಿಯೇ ಈ ಬಾರಿಯೂ ಗಣ್ಯರು ಮತ್ತು ಶ್ರೀಸಾಮನ್ಯರ ಕೊಲಾಬರೇಷನ್ ಇರಲಿದೆ. ಸಿನಿಮಾ ಕ್ಷೇತ್ರದಿಂದ ಇಬ್ಬರು ಗ್ಲ್ಯಾಮರಸ್ ನಟಿಯರ ಹೆಸರು ಕೇಳಿಬರುತ್ತಿದ್ದು, ನಟಿ ಸುಮನ್ ರಂಗನಾಥನ್, ಶುಭಾ ಪುಂಜಾ, ನಟ ಅನಿರುದ್ಧ್ ಮತ್ತು ಕಿರಿಕ್ ಪಾರ್ಟಿಯ ಚಂದನ್ ಬಿಗ್ ಬಾಸ್ ಮನೆಗೆ ಹೋಗಲಿದ್ದಾರೆ.

    ಮನರಂಜನೆ ಆಧಾರದ ಮೇಲೆ ಬೇರೆ ಬೇರೆ ವಲಯಗಳಿಂದ ಸ್ಪರ್ಧಿಗಳನ್ನ ಆಯ್ಕೆ ಮಾಡಲಾಗಿದೆ. ಸಿನಿಮಾ, ಕಿರುತೆರೆ, ಸಂಗೀತ, ಮಾಧ್ಯಮ, ಶ್ರೀಸಾಮಾನ್ಯ ಮತ್ತು ವಿವಾದದಿಂದ ಹೆಸರು ಮಾಡಿದ್ದ ಸ್ಪರ್ಧಿಗಳನ್ನ ಆಯ್ಕೆ ಮಾಡಲಾಗಿದೆ. ಸಂಗೀತಗಾರ ನವೀನ್ ಸಜ್ಜು, ಚನ್ನಪ್ಪ ಮತ್ತು ತುಳಿಸಿ ಪ್ರಸಾದ್ ಹೋಗುವ ಸಾಧ್ಯತೆ ಇದೆ.

    ಈ ಬಾರಿ ಸಂಭಾವ್ಯ ಪಟ್ಟಿಯಲ್ಲಿ ಹೆಚ್ಚಾಗಿ ಕಿರುತೆರೆ ಕಲಾವಿದರೇ ಕಾಣಿಸಿಕೊಳ್ಳುತ್ತಿದ್ದಾರೆ. ಕುರಿ ಪ್ರತಾಪ್ , ಶಿವರಾಜ್ ಕೆ.ಆರ್ ಪೇಟೆ, ಒಗ್ಗರಣೆ ಡಬ್ಬಿ ಖ್ಯಾತಿಯ ಮುರಳಿ, ಲಕ್ಷ್ಮೀ ಬಾರಮ್ಮ ಧಾರಾವಾಹಿ ಖ್ಯಾತಿಯ ಕವಿತಾ, ಪುಟ್ಟಗೌರಿ ಸೀರಿಯಲ್ ಖ್ಯಾತಿಯ ರಂಜನಿ ಜೊತೆಗೆ ರಂಗಭೂಮಿ ನಟಿ ಅಕ್ಷತಾ ಪಾಂಡವಪುರ ಹೆಸರು ಕೇಳಿಬರುತ್ತಿದೆ.

    ಎಂದಿನಂತೆ ಕಿಚ್ಚ ಸುದೀಪ್ ನಿರುಪಣೆಯಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಮೂಡಿ ಬರಲಿದೆ. ಹೊಸದಾಗಿ ನಿರ್ಮಾಣವಾದ ಬಿಗ್ ಬಾಸ್ ಮನೆಯೊಳಗೆ ಹೋಗುವುದಕ್ಕೆ ಒಟ್ಟು 18 ಸ್ಪರ್ಧಿಗಳು ತುದಿಕಾಲಲ್ಲಿ ಕುಳಿತಿದ್ದಾರೆ. ಗೆದ್ದ ಸ್ಪರ್ಧಿಗೆ 50 ಲಕ್ಷ ಬಹುಮಾನ ಸಿಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಿಗ್‍ಬಾಸ್ 6ನೇ ಸೀಸನ್ ಸ್ಪರ್ಧಿಗಳ ಪಟ್ಟಿ ವೈರಲ್

    ಬಿಗ್‍ಬಾಸ್ 6ನೇ ಸೀಸನ್ ಸ್ಪರ್ಧಿಗಳ ಪಟ್ಟಿ ವೈರಲ್

    ಬೆಂಗಳೂರು: `ಬಿಗ್‍ಬಾಸ್’ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಆಗಿದ್ದು, ಈಗಾಗಲೇ 5 ಆವೃತ್ತಿಯನ್ನು ಮುಗಿಸಿ ಈಗ 6ನೇ ಆವೃತ್ತಿಗೆ ಸಜ್ಜಾಗುತ್ತಿದೆ.

    ಕಿಚ್ಚ ಸುದೀಪ್ ಅವರ ಬಿಗ್‍ಬಾಸ್ ಕಾರ್ಯಕ್ರಮಕ್ಕಾಗಿ ಈಗಾಗಲೇ ಮೊದಲ ಪ್ರೋಮೋ ಶೂಟ್ ಕೂಡ ಮುಗಿಸಿದ್ದಾರೆ. ಇತ್ತ ಬಿಗ್‍ಬಾಸ್ ಮನೆಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದರಿಂದ ಇನ್ನೋವೇಟಿವ್ ಫಿಲ್ಮ್ ಸಿಟಿನಲ್ಲಿ ಬಿಗ್‍ಬಾಸ್ ಮನೆ ನಿರ್ಮಾಣವಾಗಿದೆ. ಬಿಗ್‍ಬಾಸ್ ಸೀಸನ್ 6ಗೆ ಕ್ಷಣಗಣನೆ ಶುರುವಾಗಿದೆ.

    ಈ ಬಾರಿ ಬಿಗ್‍ಬಾಸ್ ಶೋನಲ್ಲಿ ಭಾಗವಹಿಸುವ 6 ಸ್ಪರ್ಧಿಗಳ ಪಟ್ಟಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮೊದಲನೆಯದಾಗಿ ಆರ್.ಜೆ ರ್‍ಯಾಪಿಡ್ ರಶ್ಮಿ, ಇವರಿಗೆ ಬಿಗ್‍ಬಾಸ್ ಮನೆಯಿಂದ ಆಫರ್ ಹೋಗಿದೆ ಅನ್ನೋ ಮಾಹಿತಿ ಹರಿದಾಡುತ್ತಿದೆ. ರ್‍ಯಾಪರ್ ಚಂದನ್ ಶೆಟ್ಟಿಯ `ಟಕೀಲಾ’ ಹಾಡಿನಲ್ಲಿ ಸೊಂಟ ಬಳುಕಿಸಿರುವ ಶಾಲಿನಿ, ಸ್ಯಾಂಡಲ್‍ವುಡ್ ನಟಿ ಭಾವನ ಮತ್ತು ಸುಮನ್ ರಂಗನಾಥ್ ಕೂಡ ಈ ಬಾರಿ ಬಿಗ್‍ಬಾಸ್ ಮನೆಗೆ ಕಾಲಿಡಲಿದ್ದಾರೆ ಎಂದು ತಿಳಿದು ಬಂದಿದೆ.

    ಬಿಗ್‍ಬಾಸ್ ಮನೆ ಅಂದಮೇಲೆ ಅಲ್ಲಿ ಮನರಂಜನೆ, ಆಟ, ಹರಟೆ ಎಲ್ಲವೂ ಇರಲೆಬೇಕು. ಹೀಗಾಗಿ ಈ ಬಾರಿ ಕುರಿ ಪ್ರತಾಪ್‍ರನ್ನ ಬಿಗ್‍ಬಾಸ್ ಮನೆಗೆ ಕಳುಹಿಸುವ ಯೋಚನೆಯನ್ನು ಬಿಗ್‍ಬಾಸ್ ಮಾಡಿದ್ದಾರಂತೆ. ಇತ್ತ ಬಿಗ್‍ಬಾಸ್ ಶೋನಲ್ಲಿ ಪ್ರೇಮ್ ಕುಮಾರಿ ಕೂಡ ಇರುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ.

    ಶುಭಪುಂಜಾ, ನಟ ಟೆನ್ನಿಸ್ ಕೃಷ್ಣ, ಪುಟ್ಟಗೌರಿ ಖ್ಯಾತಿಯ ಶಿವರಂಜಿನಿ, ನಟ ಅನಿರುದ್ದ್, ಮುಂಗಾರು ಮಳೆ ನೇಹಾಶೆಟ್ಟಿ, ಸಿಲಿಲಲ್ಲಿ ರವಿಶಂಕರ್, ಸರಿಗಮಪ ಚೆನ್ನಪ್ಪ, ನಟ ಅಚ್ಯುತ್ ಕುಮಾರ್, ಕಿರಿಕ್ ಪಾರ್ಟಿ ಚಂದನ್ ಆಚಾರ್, ನಟಿ ಮಯೂರಿ, ತಿಥಿ ಸಿನಿಮಾ ಖ್ಯಾತಿಯ ಅಭಿ, ಡಾ. ಶಂಕರೇಗೌಡ ಇವರೆಲ್ಲರ ಹೆಸರು ಸಾಮಾಜಿಕ ಜಾಲತಾಣಗಲ್ಲಿ ಹರಿದಾಡುತ್ತಿವೆ. ಆದರೆ 6ನೇ ಆವೃತ್ತಿಯಲ್ಲಿ ಭಾಗವಹಿಸುವ ಸ್ಪರ್ಧಿಗಳ ಹೆಸರು ಅಧಿಕೃತವಾಗಿ ಲಭ್ಯವಾಗಿಲ್ಲ.

    ಪ್ರತಿವರ್ಷ ಅಕ್ಟೋಬರ್ ತಿಂಗಳಿನಲ್ಲಿ ಬಿಗ್‍ಬಾಸ್ ಸೀಸನ್‍ಗೆ ಚಾಲನೆ ಕೊಡಲಾಗುತ್ತದೆ. ಅದರಂತೇ ಈ ಬಾರಿಯೂ ಕೂಡ ಅಕ್ಟೋಬರ್ 15ರಂದು ಬಿಗ್‍ಬಾಸ್ 6ನೇ ಸೀಸನ್ ಗೆ ಚಾಲನೆ ಕೊಡಲಾಗುತ್ತದೆ ಅನ್ನೋ ಸುದ್ದಿಯಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv