Tag: compensation

  • ಮಳೆ ಹಾನಿ ಕುರಿತು ಸಿಎಂ‌ ಸಭೆ: ತಕ್ಷಣವೇ ಮನೆ, ಬೆಳೆ ಪರಿಹಾರ ವಿತರಿಸುವಂತೆ ಡಿಸಿಗಳಿಗೆ ಸೂಚನೆ

    ಮಳೆ ಹಾನಿ ಕುರಿತು ಸಿಎಂ‌ ಸಭೆ: ತಕ್ಷಣವೇ ಮನೆ, ಬೆಳೆ ಪರಿಹಾರ ವಿತರಿಸುವಂತೆ ಡಿಸಿಗಳಿಗೆ ಸೂಚನೆ

    ಬೆಂಗಳೂರು: ಸಂತ್ರಸ್ತರಿಗೆ ವಿಳಂಬ ಮಾಡದೆ ತಕ್ಷಣವೇ ಮನೆ ಮತ್ತು ಬೆಳೆ ಹಾನಿಗೆ ಪರಿಹಾರ ವಿತರಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

    ಇಂದು ಗೃಹ ಕಚೇರಿ ಕೃಷ್ಣಾದದಲ್ಲಿ ಕಳೆದ ಮೂರು ದಿನಗಳಲ್ಲಿ ರಾಜ್ಯದಲ್ಲಿ ಸುರಿದ ಭಾರಿ ಮಳೆಯಿಂದ ಹಾನಿಗೊಳಗಾದ ಜಿಲ್ಲೆಗಳ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ವೀಡಿಯೋ ಸಂವಾದ ನಡೆಸಿದರು. ಇದನ್ನೂ ಓದಿ: ಚಿರತೆ ಸೆರೆಗೆ ಕೈಯಲ್ಲಿ ಕೋಲು ಹಿಡಿದು ಬಂದ ಮಹಿಳಾಮಣಿಗಳು

    ಕೆರೆಗಳು ಒಡೆಯದಂತೆ ಹಾಗೂ ಬಿರುಕು ಬೀಳದಂತೆ ಎಚ್ಚರಿಕೆ ವಹಿಸಬೇಕು. ಸಮೀಕ್ಷೆ ನಡೆಸಿ ಅಗತ್ಯವಿದ್ದೆಡೆ ತಕ್ಷಣವೇ ದುರಸ್ತಿ ಕಾರ್ಯ ಕೈಗೊಳ್ಳಬೇಕೆಂದು ಮುಖ್ಯಮಂತ್ರಿಗಳು ಸೂಚಿಸಿದರು.

    ದೊಡ್ಡ ಕೆರೆಗಳಿರುವಲ್ಲಿ ಜಾಗೃತರಾಗಿದ್ದು, ಸಾವು-ನೋವು ಸಂಭವಿಸದಂತೆ ಎಚ್ಚರ ವಹಿಸಬೇಕು. ಮೈಸೂರು ಹೆದ್ದಾರಿಯಲ್ಲಿ ಮಳೆಯಿಂದಾಗಿ ನೀರು ನಿಂತಿರುವುದರಿಂದ ಪರ್ಯಾಯ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಇಂದಿನಿಂದಲೇ ಅನುವು ಮಾಡಿಕೊಡುವಂತೆ ಮೈಸೂರು, ರಾಮನಗರ ಹಾಗೂ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ನಡೆಯಿತು ‘ಅಸ್ಟೆಮಿದ ಐಸಿರಿ’ ಮೊಸರು ಕುಡಿಕೆ ಉತ್ಸವ

    ಮಳೆಯಿಂದ ಹಾನಿಗೊಳಗಾಗಿರುವ ರಸ್ತೆ ಮತ್ತು ಸೇತುವೆಗಳನ್ನು ತಕ್ಷಣವೇ ದುರಸ್ತಿ ಮಾಡಬೇಕು. ಅಧಿಕಾರಿಗಳು ಸಂವಹನದ ಮೂಲಕ ಕಾರ್ಯನಿರ್ವಹಿಸಬೇಕು. ಲೋಕೋಪಯೋಗಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ರಸ್ತೆ ದುರಸ್ತಿ ಕೈಗೊಳ್ಳಬೇಕು. ಸಕಾಲದಲ್ಲಿ ಕಡಿತಗೊಂಡಿರುವ ವಿದ್ಯುತ್ ಸಂಪರ್ಕ ಮರುಸ್ಥಾಪಿಸಬೇಕು ಎಂದು ತಿಳಿಸಿದರು.

    ಕಾಳಜಿ ಕೇಂದ್ರಗಳಲ್ಲಿರುವವರಿಗೆ ಗುಣಮಟ್ಟದ ಆಹಾರ ಹಾಗೂ ಬಂಧುಗಳ ಮನೆಗೆ ತೆರಳಿರುವವರಿಗೆ ಆಹಾರ ಕಿಟ್‌ಗಳನ್ನು ತಲುಪಿಸುವಂತೆ ಸೂಚನೆ ನೀಡಿದರು.

    ಸಚಿವರಾದ ಎಸ್.ಟಿ.ಸೋಮಶೇಖರ್, ಡಾ. ಸಿ.ಎನ್.ಅಶ್ವತ್ಥ್ ನಾರಾಯಣ್, ಉಮೇಶ್ ಕತ್ತಿ ಸಭೆಯಲ್ಲಿ ಪಾಲ್ಗೊಂಡು ತಮ್ಮ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಆಗಿರುವ ಹಾನಿಯ ಕುರಿತು ವಿವರಿಸಿದರು. ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ಮತ್ತಿತರರು ಪಾಲ್ಗೊಂಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಹತ್ಯೆಯಾದವರ ಕುಟುಂಬಗಳಿಗೆ ಪರಿಹಾರ ನೀಡುವಲ್ಲಿ ತಾರತಮ್ಯ ಮಾಡಬಾರದು: ಮಂತ್ರಾಲಯ ಶ್ರೀ

    ಹತ್ಯೆಯಾದವರ ಕುಟುಂಬಗಳಿಗೆ ಪರಿಹಾರ ನೀಡುವಲ್ಲಿ ತಾರತಮ್ಯ ಮಾಡಬಾರದು: ಮಂತ್ರಾಲಯ ಶ್ರೀ

    ರಾಯಚೂರು: ಹತ್ಯೆಯಾದವರ ಕುಟುಂಬಗಳಿಗೆ ಪರಿಹಾರ ನೀಡುವ ವಿಚಾರದಲ್ಲಿ ಸರ್ಕಾರ ಯಾವುದೇ ತಾರತಮ್ಯ ಮಾಡಬಾರದು. ಎಲ್ಲರೂ ಜೀವಿಗಳು, ಪ್ರಾಣ ಕಳೆದುಕೊಂಡವರೆಲ್ಲ ಸಮಾನರು. ಎಲ್ಲರಿಗೂ ಸೂಕ್ತ ರೀತಿಯ ಪರಿಹಾರ ನೀಡಬೇಕೆಂದು ಸರ್ಕಾರಕ್ಕೆ ಕೋರುತ್ತೇನೆ ಎಂದು ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ಹೇಳಿದ್ದಾರೆ.

    ಮಂತ್ರಾಲಯದಲ್ಲಿ ಮಾತನಾಡಿದ ಶ್ರೀಗಳು ಮಂಗಳೂರಿನಲ್ಲಿ ಹತ್ಯೆಯಾದ ಹಿಂದೂ, ಮುಸ್ಲಿಂ ಯುವಕರಿಬ್ಬರ ಕುಟುಂಬಕ್ಕೆ ಪರಿಹಾರ ನೀಡುವ ವಿಷಯದಲ್ಲಿ ಸರ್ಕಾರದಿಂದ ತಾರತಮ್ಯ ಆರೋಪದ ಬಗ್ಗೆ ಮಾತನಾಡಿ, ಹತ್ಯೆಯಾದ ಯಾವುದೇ ವ್ಯಕ್ತಿಗೆ ಹಣ ನೀಡುವುದು ಅಂತಿಮ ಪರ್ಯಾಯವಲ್ಲ. ಹಣಕ್ಕೆ ಮತ್ತು ಜೀವಕ್ಕೆ ತುಲನೆ ಮಾಡಲು ಬರುವುದಿಲ್ಲ. ಆದರೆ ಕುಟುಂಬದವರಿಗೆ ತೊಂದರೆಯಾಗಬಾರದು ಎಂದು ಪರಿಹಾರ ನೀಡುತ್ತಾರೆ. ಆಯಾ ರಾಜ್ಯ ಸರ್ಕಾರಗಳು ಪ್ರಾಣ ಕಳೆದುಕೊಂಡ ಎಲ್ಲರಿಗೂ ಪರಿಹಾರ ನೀಡಬೇಕು. ಪರಿಹಾರ ನೀಡುವಲ್ಲಿ ಸರ್ಕಾರ ತಾರತಮ್ಯ ಮಾಡಬಾರದು ಎಂದರು. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಪ್ರಕರಣ – ಡಿ.ಕೆ ಶಿವಕುಮಾರ್‌ಗೆ ಬಿಗ್ ರಿಲೀಫ್

    ದೇಶ ನೆಮ್ಮದಿ, ಪ್ರಗತಿ ಹೊಂದಬೇಕು ಎಂದರೆ ಶಾಂತಿ ಸೌಹಾರ್ದತೆಯಿರಬೇಕು. ಯಾವುದೇ ಸಮುದಾಯದವರು ಇತರ ಸಮುದಾಯದ ಮೇಲೆ ಆಕ್ರಮಣ, ಬೆದರಿಕೆ, ದಬ್ಬಾಳಿಕೆ ಮಾಡಬಾರದು. ಯಾವುದೇ ಸಮುದಾಯದವರು ಮಾಡಿದರೂ ಶಾಂತಿಯುತವಾಗಿ ತೀವ್ರವಾಗಿ ವಿರೋಧಿಸುತ್ತೇವೆ. ಭದ್ರತೆ, ಶಾಂತಿ, ನೆಮ್ಮದಿ ದೇಶದ ಉದ್ದೇಶ. ಯಾವುದೇ ಸಮುದಾಯದವರ ಮೇಲೂ ದಬ್ಬಾಳಿಕೆಯಾಗಬಾರದು. ಯಾರ ಮೇಲೂ ದಬ್ಬಾಳಿಕೆಯಾಗದಂತೆ ಸರ್ಕಾರ ಗಮನಿಸಬೇಕು ಎಂದು ಮಂತ್ರಾಲಯ ಶ್ರೀಗಳು ಹೇಳಿದರು. ಇದನ್ನೂ ಓದಿ: ಆ.10 ರಿಂದ ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಗಳ 351ನೇ ಆರಾಧನಾ ಮಹೋತ್ಸವ

    Live Tv
    [brid partner=56869869 player=32851 video=960834 autoplay=true]

  • ಪರಿಹಾರದ ಹಣ ಪಡೆಯಲು ಜನರು ಉದ್ದೇಶಪೂರ್ವಕವಾಗಿ ಮನೆ ಬೀಳಿಸುತ್ತಿದ್ದಾರೆ – ತಹಶೀಲ್ದಾರ್ ಪತ್ರ ತಂದ ಅನುಮಾನ

    ಪರಿಹಾರದ ಹಣ ಪಡೆಯಲು ಜನರು ಉದ್ದೇಶಪೂರ್ವಕವಾಗಿ ಮನೆ ಬೀಳಿಸುತ್ತಿದ್ದಾರೆ – ತಹಶೀಲ್ದಾರ್ ಪತ್ರ ತಂದ ಅನುಮಾನ

    ಶಿವಮೊಗ್ಗ: ಜಿಲ್ಲೆಯಲ್ಲಿ ಕಳೆದ 8-10 ದಿನಗಳಿಂದ ನಿರಂತರವಾಗಿ ಧಾರಾಕಾರ ಮಳೆ ಸುರಿಯುತ್ತಿದೆ. ಮಳೆಗೆ ಹಲವು ಮನೆಗಳು ಕುಸಿದು ಬಿದ್ದಿವೆ. ಕುಸಿದು ಬಿದ್ದ ಮನೆಗಳಿಗೆ ಸರ್ಕಾರದಿಂದ ಪರಿಹಾರದ ಮೊತ್ತ ಪಡೆಯಲು ಜನರು ಅಡ್ಡ ದಾರಿ ಹಿಡಿದಿದ್ದಾರಾ? ಹೀಗೊಂದು ಅನುಮಾನ ಕಾಡಲು ತಹಶೀಲ್ದಾರ್ ಅವರು ಬರೆದಿರುವ ಪತ್ರವೇ ಸಾಕ್ಷಿಯಾಗಿದೆ.

    ಹೌದು, ಪರಿಹಾರದ ಹಣ ಪಡೆಯುವ ಸಲುವಾಗಿ ಸಾರ್ವಜನಿಕರು ಉದ್ದೇಶಪೂರ್ವಕವಾಗಿ ಮನೆ ಬೀಳಿಸುತ್ತಿದ್ದಾರೆ. ಅಧಿಕಾರಿಗಳು ಎಚ್ಚರಿಕೆ ವಹಿಸುವಂತೆ ಸೊರಬ ತಹಶೀಲ್ದಾರ್ ಶೋಭಲಕ್ಷ್ಮಿ ಅವರು ಕೆಳ ಹಂತದ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

     

    ಮನೆ ಬೀಳದಿದ್ದರೂ ಪರಿಹಾರದ ಹಣ ಪಡೆಯುವ ಸಲುವಾಗಿ ಜನರೇ ಮನೆಯನ್ನು ಕೆಡವಲು ಮುಂದಾಗಿದ್ದಾರಾ? ಪರಿಹಾರದ ಹಣ ಪಡೆಯುವ ಸಲುವಾಗಿ ಸಾರ್ವಜನಿಕರು ಉದ್ದೇಶ ಪೂರ್ವಕವಾಗಿ ಮನೆ ಬೀಳಿಸುತ್ತಿದ್ದಾರೆ ಎಂದು ತಹಶೀಲ್ದಾರ್ ಅವರು ಪತ್ರದ ಮೂಲಕ ಮೇಲಾಧಿಕಾರಿಗಳ ಗಮನಕ್ಕೂ ತಂದಿದ್ದಾರೆ. ಇದನ್ನೂ ಓದಿ: ಸರ್ಕಾರಿ ಇಲಾಖೆಯ ಪತ್ರ ವ್ಯವಹಾರಗಳು ಕನ್ನಡದಲ್ಲೇ ಆಗಬೇಕು: ಟಿ.ಎಸ್.ನಾಗಾಭರಣ

    ಈ ಹಿಂದೆ ಮಳೆಗೆ ಸಂಪೂರ್ಣ ಮನೆ ಹಾನಿಯಾಗಿದ್ದರೆ 95 ಸಾವಿರ ರೂ. ಪರಿಹಾರ ಇತ್ತು. ಇದೀಗ ಸರ್ಕಾರ ಪರಿಹಾರದ ಮೊತ್ತವನ್ನು 95 ಸಾವಿರ ರೂ.ನಿಂದ 5 ಲಕ್ಷ ರೂ.ಗೆ ಏರಿಕೆ ಮಾಡಿದೆ. ಭಾಗಶಃ ಮನೆ ಹಾನಿಯಾಗಿದ್ದರೆ 5,200 ರೂ. ಪರಿಹಾರ ಇತ್ತು. ಅದನ್ನು ಇದೀಗ 50 ಸಾವಿರ ರೂ.ಗೆ ಏರಿಕೆ ಮಾಡಿದೆ.

    ಪರಿಹಾರದ ಮೊತ್ತ ಏರಿಕೆ ಆಗಿದ್ದೆ ಅಡ್ಡ ದಾರಿಗೆ ಕಾರಣವಾಯ್ತಾ? ಅಥವಾ ಸಾರ್ವಜನಿಕರ ಅಡ್ಡ ದಾರಿ ಹಿಂದೆ ಅಧಿಕಾರಿಗಳ ಕೈವಾಡ ಏನಾದ್ರೂ ಇದೆಯಾ? ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಇದನ್ನೂ ಓದಿ: ಶಿರಾಡಿ ಘಾಟ್‍ನಲ್ಲಿ ಲಘು ವಾಹನಗಳ ಸಂಚಾರಕ್ಕೆ ಅವಕಾಶ – ಘನ ವಾಹನಗಳಿಗೆ ನಿರ್ಬಂಧ ಮುಂದುವರಿಕೆ

    Live Tv
    [brid partner=56869869 player=32851 video=960834 autoplay=true]

  • ಹಾನಿಯಾದ ಸರ್ಕಾರಿ ಆಸ್ತಿಗೆ ಅಗ್ನಿಪಥ್ ಪ್ರತಿಭಟನಾಕಾರರಿಂದಲೇ ವಸೂಲಿ: ವಾರಣಾಸಿ ಆಡಳಿತ

    ಹಾನಿಯಾದ ಸರ್ಕಾರಿ ಆಸ್ತಿಗೆ ಅಗ್ನಿಪಥ್ ಪ್ರತಿಭಟನಾಕಾರರಿಂದಲೇ ವಸೂಲಿ: ವಾರಣಾಸಿ ಆಡಳಿತ

    ಲಕ್ನೋ: ಅಗ್ನಿಪಥ್ ಯೋಜನೆಯ ವಿರುದ್ಧ ಉತ್ತರ ಪ್ರದೇಶದಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಹಲವಾರು ಸ್ಥಳಗಳಲ್ಲಿ ರೈಲುಗಳಿಗೆ ಬೆಂಕಿ ಹಚ್ಚಲಾಗಿದೆ. ಸಾರ್ವಜನಿಕ ಆಸ್ತಿಯನ್ನು ಧ್ವಂಸಗೊಳಿಸಲಾಗಿದೆ.

    ಉತ್ತರ ಪ್ರದೇಶದಲ್ಲಿ ಇಂತಹ ಹಿಂಸಾತ್ಮಕ ಕೃತ್ಯಗಳಲ್ಲಿ ತೊಡಗಿದ್ದವರ ಮನೆಗಳನ್ನು ಬುಲ್ಡೋಜರ್‌ಗಳಿಂದ ಧ್ವಂಸಗೊಳಿಸಿ ಯೋಗಿ ಸರ್ಕಾರ ಈಗಾಗಲೇ ಬಿಸಿ ಮುಟ್ಟಿಸಿತ್ತು. ಈ ಬಾರಿ ವಾರಣಾಸಿ ಆಡಳಿತ ಒಂದು ಹೆಜ್ಜೆ ಮುಂದೆ ಹೋಗಿ, ಪ್ರತಿಭಟನೆಯ ಹೆಸರಿನಲ್ಲಿ ಸರ್ಕಾರಿ ಆಸ್ತಿಯನ್ನು ನಾಶಪಡಿಸಿದವರಿಂದ ಪರಿಹಾರವನ್ನು ವಸೂಲಿ ಮಾಡುವುದಾಗಿ ಹೇಳಿದೆ. ಇದನ್ನೂ ಓದಿ: ಇಡಿಯಿಂದ ಮುಂದುವರಿದ ವಿಚಾರಣೆ- ಅರೆಸ್ಟ್ ಆಗ್ತಾರಾ ರಾಹುಲ್ ಗಾಂಧಿ..?

    ವಾರಣಾಸಿ ಆಡಳಿತ ಅಗ್ನಿಪಥ್ ವಿರೋಧಿ ಪ್ರತಿಭಟನೆಯಲ್ಲಿ ಭಾಗಿಯಾಗಿರುವವರನ್ನು ಗುರುತಿಸುವ ಕೆಲಸವನ್ನು ಈಗಾಗಲೇ ಪ್ರಾರಂಭಿಸಿದೆ. ಈ ಕೆಲಸ ಮುಗಿದ ಬಳಿಕ ಹಾನಿಯಾದ ಸಾರ್ವಜನಿಕ ಆಸ್ತಿಯನ್ನು ಸರಿಪಡಿಸಲು ಪ್ರತಿಭಟನಾಕಾರರಿಂದಲೇ ವಸೂಲಿ ಮಾಡಲಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಶಿಂಧೆ ವಾಪಸಾಗ್ತಾರೆ: ತುರ್ತು ಸಭೆಯಲ್ಲಿ ಶಾಸಕರಿಗೆ ಉದ್ಧವ್‌ ಠಾಕ್ರೆ ಮಾಹಿತಿ

    ಪ್ರತಿಭಟನೆ ಸಮಯದಲ್ಲಿ ನಾಶವಾಗಿರುವ ಸರ್ಕಾರಿ ಆಸ್ತಿಗಳ ಪಟ್ಟಿಯನ್ನು ಹಾಗೂ ಕೃತ್ಯದಲ್ಲಿ ತೊಡಗಿದವರಿಂದ ಪರಿಹಾರ ಸಂಗ್ರಹಿಸಲು ಸಿದ್ಧತೆ ನಡೆಯುತ್ತಿದೆ. ಕೃತ್ಯದಲ್ಲಿ ಭಾಗಿಯಾಗಿರುವವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸರ್ಕಾರಿ ಅಧಿಕಾರಿಗಳಿಂದ ಸಂಗ್ರಹಿಸಲಾಗುತ್ತದೆ ಎಂದು ವಾರಣಾಸಿ ಪುರಸಭೆ ಅಧಿಕಾರಿಗಳು ತಿಳಿಸಿದ್ದಾರೆ.

    Live Tv

  • ಕಲುಷಿತ ನೀರು ಕುಡಿದು ಸಾವು ಪ್ರಕರಣ – ಮೃತರ ಕುಟುಂಬಕ್ಕೆ ನಗರಸಭೆಯಿಂದ ತಲಾ 10 ಲಕ್ಷ ರೂ. ಪರಿಹಾರ

    ಕಲುಷಿತ ನೀರು ಕುಡಿದು ಸಾವು ಪ್ರಕರಣ – ಮೃತರ ಕುಟುಂಬಕ್ಕೆ ನಗರಸಭೆಯಿಂದ ತಲಾ 10 ಲಕ್ಷ ರೂ. ಪರಿಹಾರ

    ರಾಯಚೂರು: ಎಲ್ಲಾ ಲೂಟಿಯಾದ ಮೇಲೆ ಕೋಟೆ ಬಾಗಿಲು ಹಾಕಿದ ಹಾಗೆ ರಾಯಚೂರು ನಗರಸಭೆ ಈಗ ಎಚ್ಚೆತ್ತಿದೆ. ನಗರದ ಟ್ಯಾಂಕ್‍ಗಳ ಶುದ್ಧೀಕರಣದ ಬಗ್ಗೆ ಈಗ ಅರಿವಿಗೆ ಬಂದಿದೆ. ಕಲುಷಿತ ನೀರು ಕುಡಿದು ಮೂವರು ಸಾವನ್ನಪ್ಪಿದ ಬಳಿಕ ತುರ್ತು ಸಭೆ ಕರೆದು ಪರಿಹಾರ ಘೋಷಣೆ ಮಾಡಿದ್ದಾರೆ.

    ರಾಯಚೂರು ನಗರಸಭೆಯ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನಕ್ಕೆ ಕೊನೆಯೇ ಇಲ್ಲ ಎನ್ನುವುದಕ್ಕೆ ಇಂದು ನಡೆದ ನಗರಸಭೆ ಸದಸ್ಯರ ತುರ್ತು ಸಭೆ ಸಾಕ್ಷಿಯಾಗಿತ್ತು. ನಗರಸಭೆಯಿಂದ ಸರಬರಾಜಾದ ಕಲುಷಿತ ನೀರನ್ನು ಕುಡಿದು ಮೂರು ಜನ ಪ್ರಾಣ ಬಿಟ್ಟಿದ್ದರ ಹಿಂದೆ 25 ವರ್ಷಗಳ ನಿರ್ಲಕ್ಷ್ಯವಿದೆ. ನೀರು ಕುಡಿದ ನೂರಾರು ಜನ ವಾಂತಿ-ಭೇದಿಯಿಂದ ಆಸ್ಪತ್ರೆಗೆ ದಾಖಲಾಗಿರುವುದರ ಹಿಂದೆ ಭ್ರಷ್ಟಾಚಾರ, ಬೇಜವಾಬ್ದಾರಿ ಎದ್ದು ಕಾಣುತ್ತಿದೆ. ಕೊನೆಗೂ ಎಚ್ಚೆತ್ತಂತೆ ತುರ್ತು ಸಭೆ ಕರೆದ ಆಡಳಿತ ಮಂಡಳಿ ನಗರಸಭೆ ನೀರು ಕುಡಿದು ಸಾವನ್ನಪ್ಪಿದ ಮೂವರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ ಹಾಗೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ 20 ಸಾವಿರ ರೂಪಾಯಿ ಚಿಕಿತ್ಸಾ ವೆಚ್ಚ ಭರಿಸುವ ಬಗ್ಗೆ ಸಭೆಯಲ್ಲಿ ತೀರ್ಮಾನ ಕೈಗೊಂಡಿದೆ. ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರದಿಂದ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಇದನ್ನೂ ಓದಿ: ಡೊಳ್ಳು ಚಿತ್ರಕ್ಕೆ ಪ್ರಶಸ್ತಿಗಳ ಸುರಿಮಳೆ : ದಾಖಲೆಯ ರೀತಿಯಲ್ಲಿ ಪ್ರಶಸ್ತಿ ಪಡೆದ ಪವನ್ ಒಡೆಯರ್

    ಸಭೆಯಲ್ಲಿ ವಿರೋಧ ಪಕ್ಷದ ಸದಸ್ಯರು ಆಡಳಿತ ಮಂಡಳಿ ವೈಫಲ್ಯದ ಬಗ್ಗೆ ಕಿಡಿಕಾರಿದರು. ಶುದ್ಧೀಕರಣ ಘಟಕ ನಿರ್ವಹಣೆಯಲ್ಲಿನ ಲೋಪವನ್ನು ಇನ್ನು ಮುಂದಾದರೂ ಸರಿಪಡಿಸುವಂತೆ ಒತ್ತಾಯಿಸಿದರು. ನಗರದಲ್ಲಿನ 35 ಕ್ಕೂ ಹೆಚ್ಚು ನೀರಿನ ಟ್ಯಾಂಕ್‍ಗಳನ್ನು 25 ವರ್ಷಗಳಿಂದ ಸ್ವಚ್ಛಗೊಳಿಸಿಲ್ಲ. ಕೂಡಲೇ ಈ ಬಗ್ಗೆ ಕ್ರಮ ತೆಗೆದುಕೊಳ್ಳಲು ಸದಸ್ಯರು ಒತ್ತಾಯಿಸಿದರು.  ಇದನ್ನೂ ಓದಿ : Exclusive – ವಾಣಿಜ್ಯ ಮಂಡಳಿಯಲ್ಲಿ ಕೋಟ್ಯಂತರ ದುರುಪಯೋಗ? : ರಾಜೇಂದ್ರ ಸಿಂಗ್ ಬಾಬು ಹೇಳಿದ್ದೇನು?

    4.75 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸದಾಗಿ ನೀರು ಶುದ್ಧೀಕರಣ ಘಟಕ ಆರಂಭಿಸಲಾಗಿದೆ. ನೀರು ಸರಬರಾಜು ಮಂಡಳಿ ಮೂರು ತಿಂಗಳು ನೀರು ಪೂರೈಕೆ ಕೂಡ ಮಾಡಿತ್ತು. ನಂತರ ಹಸ್ತಾಂತರಕ್ಕೆ ಮುಂದಾದರೆ ನಗರಸಭೆ ನಿರ್ಲಕ್ಷ್ಯ ಮಾಡಲಾಗಿತ್ತು. ಈಗ ಘಟಕ ಉಪಯೋಗವಿಲ್ಲದಂತಾಗಿ 58 ಲಕ್ಷ ರೂಪಾಯಿ ವೆಚ್ಚದಲ್ಲಿ ದುರಸ್ತಿ ಮಾಡಬೇಕಾಗಿದೆ ಅಂತ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕಲುಷಿತ ನೀರಿನಿಂದ ಮೂವರು ಸಾವನ್ನಪ್ಪಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು ತನಿಖಾ ಸಮಿತಿಯನ್ನ ರಚಿಸಿದೆ. ಮೂರು ದಿನಗಳಲ್ಲಿ ವರದಿ ನೀಡುವಂತೆ ಸಮಿತಿಗೆ ನಗರಾಭಿವೃದ್ಧಿ ಇಲಾಖೆ ಸೂಚಿಸಿದೆ. ಅದೇನೇ ಇದ್ದರೂ ಒಟ್ಟಿನಲ್ಲಿ ನಗರಸಭೆಯ ದೀರ್ಘಕಾಲದ ನಿರ್ಲಕ್ಷ್ಯಕ್ಕೆ ಸಾಮಾನ್ಯ ಜನ ಬಲಿಯಾಗುತ್ತಿದ್ದಾರೆ.

  • ಆ್ಯಸಿಡ್ ದಾಳಿಗೆ ತುತ್ತಾದ ಯುವತಿಯ ಚಿಕಿತ್ಸೆಗೆ 1 ಲಕ್ಷ ರೂ. ಪರಿಹಾರ ಘೋಷಿಸಿದ ಮುರುಗೇಶ್ ನಿರಾಣಿ

    ಆ್ಯಸಿಡ್ ದಾಳಿಗೆ ತುತ್ತಾದ ಯುವತಿಯ ಚಿಕಿತ್ಸೆಗೆ 1 ಲಕ್ಷ ರೂ. ಪರಿಹಾರ ಘೋಷಿಸಿದ ಮುರುಗೇಶ್ ನಿರಾಣಿ

    ಬೆಂಗಳೂರು: ದುಷ್ಟರ್ಮಿಯೊಬ್ಬನಿಂದ ಆ್ಯಸಿಡ್ ದಾಳಿಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ಥೆ ಯುವತಿಯ ವೈದ್ಯಕೀಯ ವೆಚ್ಚಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ವೈಯಕ್ತಿಕವಾಗಿ 1 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.

    ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮೊದಲ ಹಂತದಲ್ಲಿ ಯುವತಿಯ ವೈದ್ಯಕೀಯ ವೆಚ್ಚಕ್ಕೆ 1 ಲಕ್ಷ ರೂ. ಪರಿಹಾರವನ್ನು ವೈಯಕ್ತಿಕವಾಗಿ ನೀಡಲಾಗುವುದು. ಅಗತ್ಯವಿದ್ದರೆ ಮುಂದಿನ ದಿನಗಳಲ್ಲಿ ಅವರ ಕುಟುಂಬ ವರ್ಗದವರಿಗೆ ಆರ್ಥಿಕ ನೆರವು ನೀಡುವ ಆಶ್ವಾಸನೆಯನ್ನು ನಿರಾಣಿ ನೀಡಿದ್ದಾರೆ. ಇದನ್ನೂ ಓದಿ: ಆ್ಯಸಿಡ್ ದಾಳಿ ಮಾಡಿದವರಿಗೆ ಮರಣ ದಂಡನೆ ನೀಡಿ: ಬಾಲಕಿ ಆಕ್ರೋಶ

    ಆ್ಯಸಿಡ್ ದಾಳಿಗೆ ಒಳಗಾದ ಯುವತಿಯ ಕುಟುಂಬದವರು ಆರ್ಥಿಕವಾಗಿ ತುಂಬಾ ಸಂಕಷ್ಟದಲ್ಲಿದ್ದಾರೆ ಎಂಬುದನ್ನು ತಿಳಿದು ತುಂಬಾ ಬೇಸರವಾಯಿತು. ಹೀಗಾಗಿ ವೈದ್ಯಕೀಯ ನೆರವಿಗೆ ವೈಯುಕ್ತಿಕವಾಗಿ ನೆರವು ನೀಡುತ್ತಿದ್ದೇನೆ. ಅತಿ ಶೀಘ್ರದಲ್ಲೇ ಕುಟುಂಬದವರಿಗೆ ಚೆಕ್ ನೀಡಲಾಗುವುದು. ಸರ್ಕಾರದಿಂದಲೂ ನೆರವು ಕೊಡಿಸಲು ಎಲ್ಲಾ ರೀತಿಯಲ್ಲೂ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಆಶ್ವಾಸನೆ ನೀಡಿದ್ದಾರೆ. ಇದನ್ನೂ ಓದಿ: ಆ್ಯಸಿಡ್ ದಾಳಿಗೆ ಒಳಗಾದ ಯುವತಿಗೆ ಸಹಾಯಹಸ್ತ

    ಯಾವುದೇ ನಾಗರಿಕ ಸಮಾಜದಲ್ಲಿ ಇಂತಹ ಅಮಾನವೀಯ ಘಟನೆಯನ್ನು ಸಹಿಸಲು ಸಾಧ್ಯವೇ ಇಲ್ಲ. ಇದೊಂದು ಅತ್ಯಂತ ಹೇಯ ಕೃತ್ಯ. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸಬಾರದು ಎಂದರೆ ಈ ದುಷ್ಕತ್ಯ ಎಸಗುವವರಿಗೆ ಕಠಿಣವಾದ ಕಾನೂನು ಕ್ರಮ ಜರುಗಿಸಬೇಕು. ಇದರಿಂದ ಮುಂದಿನವರಿಗೂ ಎಚ್ಚರಿಕೆಯ ಪಾಠವಾಗಲಿದೆ. ರಾಜ್ಯ ಸರ್ಕಾರ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು ಎಷ್ಟು ಸಾಧ್ಯವೋ ಅದಷ್ಟು ಬೇಗ ಆರೋಪಿಯನ್ನು ಬಂಧಿಸಲಾಗುವುದು. ತಪ್ಪಿತಸ್ಥರು ಯಾರೇ ಇದ್ದರೂ ಸರ್ಕಾರ ಖಂಡಿತವಾಗಿಯೂ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಿದೆ ಎಂದು ಎಚ್ಚರಿಸಿದ್ದಾರೆ.

  • ಹೆಬ್ಬಾಳ ದುರ್ಘಟನೆ – ಮೃತ ಅಕ್ಷಯ ಕುಟುಂಬಕ್ಕೆ ವೈಯಕ್ತಿಕವಾಗಿ 2 ಲಕ್ಷ ಪರಿಹಾರ ಘೋಷಿಸಿದ ಭೈರತಿ ಸುರೇಶ್

    ಹೆಬ್ಬಾಳ ದುರ್ಘಟನೆ – ಮೃತ ಅಕ್ಷಯ ಕುಟುಂಬಕ್ಕೆ ವೈಯಕ್ತಿಕವಾಗಿ 2 ಲಕ್ಷ ಪರಿಹಾರ ಘೋಷಿಸಿದ ಭೈರತಿ ಸುರೇಶ್

    ಬೆಂಗಳೂರು: ಹೆಬ್ಬಾಳದ ಫ್ಲೈ ಓವರ್ ಬಳಿ ಡಿವೈಡರ್ ದಾಟುತ್ತಿದ್ದ ವೇಳೆ ಬಿಬಿಎಂಪಿ ಕಸದ ಲಾರಿ ಡಿಕ್ಕಿ ಹೊಡೆದು ಸಾವನ್ನಪ್ಪಿದ ಅಕ್ಷಯ ಕುಟುಂಬಕ್ಕೆ ಶಾಸಕ ಭೈರತಿ ಸುರೇಶ್ ವೈಯಕ್ತಿಕವಾಗಿ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

    ಆಗಿದ್ದು ಏನು?:
    ಹೆಬ್ಬಾಳದ ಫ್ಲೈಓವರ್ ಬಳಿ ಅಂಡರ್ ಪಾಸ್‍ನಲ್ಲಿ ನೀರು ತುಂಬಿದ್ದ ಪರಿಣಾಮ ಪಾದಚಾರಿಗಳು ರಸ್ತೆ ಮೇಲೆ ಓಡಾಡುತ್ತಾ ರಸ್ತೆ ದಾಟುತ್ತಿದ್ದರು. ಮಧ್ಯಾಹ್ನ 12:30ರ ವೇಳೆಗೆ ಬಸ್ ಇಳಿದ ಬಾಲಕಿ ಅಂಡರ್ ಪಾಸ್‍ನಲ್ಲಿ ನೀರು ತುಂಬಿರುವುದನ್ನು ನೋಡಿ, ಡಿವೈಡರ್ ದಾಟಿ ರಸ್ತೆ ಕ್ರಾಸ್ ಮಾಡುತ್ತಿದ್ದಳು. ಐದು ಜನ ವಿದ್ಯಾರ್ಥಿಗಳು ಒಟ್ಟಿಗೆ ಡಿವೈಡರ್ ಜಂಪ್ ಮಾಡಿ ರಸ್ತೆ ದಾಟುತ್ತಿದ್ದರು. ಈ ವೇಳೆ ಕಾರು ಮತ್ತು ಬೈಕ್ ಸಡನ್ ಆಗಿ ಬ್ರೇಕ್ ಹಾಕಿದ ಪರಿಣಾಮ ಹಿಂದಿನಿಂದ ವೇಗವಾಗಿ ಬರುತ್ತಿದ್ದ ಬಿಬಿಎಂಪಿ ಕಸದ ಲಾರಿ, ಕಾರು, ಬೈಕ್‍ಗೆ ಡಿಕ್ಕಿಯಾಗಿ ಬಾಲಕಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬಾಲಕಿ ಸಾವನ್ನಪ್ಪಿದ್ದು, ಇತರೇ ಎಂಟು ಜನರಿಗೆ ಗಂಭೀರ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದನ್ನೂ ಓದಿ: ಹೆಬ್ಬಾಳದಲ್ಲಿ ಸರಣಿ ಅಪಘಾತ – ಬಿಬಿಎಂಪಿ ಕಸದ ಲಾರಿಗೆ ಬಾಲಕಿ ಬಲಿ

    ಘಟನೆ ನಡೆದ ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಭೈರತಿ ಸುರೇಶ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಜೀವ ಅಮೂಲ್ಯವಾದದ್ದು, ಬೆಲೆ ಕಟ್ಟಲಾಗುವುದಿಲ್ಲ. ಈ ದುರ್ಘಟನೆಗೆ ಕಾರಣರಾದವರ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು. ಈಗಾಗಲೇ ಕಮೀಷನರ್‍ಗೆ ಸೂಚನೆ ನೀಡಿದ್ದೇನೆ. ಅಂಡರ್ ಪಾಸ್ ನೀರು ತುಂಬಿಕೊಂಡಿದ್ದರಿಂದಾಗಿ ಬಾಲಕಿ ರಸ್ತೆ ದಾಟೋಕೆ ಹೋಗಿದ್ದಾಳೆ. ದುರಂತ ಘಟನೆ ನಡೆದು ಹೋಗಿದೆ. ಈ ಪ್ರದೇಶದಲ್ಲಿ ಯಾರು ಕೂಡ ವಾಹನಗಳ ಹೆಚ್ಚಿನ ಓಡಾಟದ ವೇಳೆ ರಸ್ತೆ ದಾಟುವ ಸಾಹಸ ಮಾಡಬಾರದು. ಮೃತ ಅಕ್ಷಯ ಕುಟುಂಬಕ್ಕೆ ವೈಯಕ್ತಿಕವಾಗಿ 2 ಲಕ್ಷ ರೂ. ಪರಿಹಾರವಾಗಿ ಕೊಡುತ್ತೇನೆ ಎಂದರು.

  • ಸಂರಕ್ಷಿತ ಸಮುದ್ರ ಜೀವಿಗಳು ಮರಳಿ ಕಡಲಿಗೆ – ಮೀನುಗಾರರಿಗೆ 40 ಲಕ್ಷ ರೂ. ಪರಿಹಾರ

    ಸಂರಕ್ಷಿತ ಸಮುದ್ರ ಜೀವಿಗಳು ಮರಳಿ ಕಡಲಿಗೆ – ಮೀನುಗಾರರಿಗೆ 40 ಲಕ್ಷ ರೂ. ಪರಿಹಾರ

    ಮುಂಬೈ: ಮಹಾರಾಷ್ಟ್ರದ ಕರಾವಳಿ ಜಿಲ್ಲೆಗಳ ಮೀನುಗಾರರು ಸುಮಾರು 260 ಸಂರಕ್ಷಿತ ಮೀನುಗಳನ್ನು ಸುರಕ್ಷಿತವಾಗಿ ಸಮುದ್ರಕ್ಕೆ ಬಿಟ್ಟಿದ್ದಕ್ಕಾಗಿ ಸರ್ಕಾರ ಪರಿಹಾರವಾಗಿ 40.78 ಲಕ್ಷವನ್ನು ನೀಡಿದೆ.

    ಆಲಿವ್ ರಿಡ್ಲಿ ಮತ್ತು ಹಸಿರು ಸಮುದ್ರ ಆಮೆಗಳು ಸೇರಿದಂತೆ 260 ಸಂರಕ್ಷಿತ ಸಮುದ್ರ ಜೀವಿಗಳನ್ನು ಬಿಡುಗಡೆ ಮಾಡಿದ್ದಕ್ಕಾಗಿ ಮಹಾರಾಷ್ಟ್ರ ಸರ್ಕಾರ ಕಳೆದ 3 ವರ್ಷಗಳಿಂದ ಮೀನುಗಾರರಿಗೆ 40.78 ಲಕ್ಷ ರೂ. ಹಣವನ್ನು ಪರಿಹಾರವಾಗಿ ನೀಡುತ್ತಿದೆ. ಇದನ್ನೂ ಓದಿ: ರಾಷ್ಟ್ರಪಿತನ ಬಗ್ಗೆ ಅವಹೇಳನಕಾರಿ ಹೇಳಿಕೆ – ಕಾಳಿಚರಣ್ ಮಹಾರಾಜ್ ಬಂಧನ

    ಅಪರೂಪದ ಹಾಗೂ ಸಂರಕ್ಷಿತ ಸಮುದ್ರ ಜೀವಿಗಳನ್ನು ಉಳಿಸುವ ಉದ್ದೇಶದಿಂದ ರಾಜ್ಯ ಅರಣ್ಯ ಹಾಗೂ ಮೀನುಗಾರಿಕೆ ಇಲಾಖೆ ಜಂಟಿಯಾಗಿ 2018ರಲ್ಲಿ ಯೋಜನೆಯನ್ನು ಪ್ರಾರಂಭಿಸಿತ್ತು. ಇದರ ಭಾಗವಾಗಿ ಅಪರೂಪದ ಹಾಗೂ ಸಂರಕ್ಷಿತ ಸಮುದ್ರ ಜೀವಿಗಳನ್ನು ಮೀನುಗಾರರು ಮರಳಿ ಸಮುದ್ರಕ್ಕೆ ಬಿಟ್ಟರೆ ಅವರಿಗೆ ಪರಿಹಾರ ಧನ ನೀಡುವುದಾಗಿ ಘೋಷಿಸಿತ್ತು. ಇದನ್ನೂ ಓದಿ: ಲತಾ ಮಂಗೇಶ್ಕರ್‌ಗೆ ಐಸಿಯುನಲ್ಲೇ ಚಿಕಿತ್ಸೆ ಮುಂದುವರಿಕೆ

    ಇಲ್ಲಿಯವರೆಗೆ 138 ಆಲಿವ್ ರಿಡ್ಲಿ ಆಮೆಗಳು, 67 ಹಸಿರು ಸಮುದ್ರ ಆಮೆಗಳು, 5 ಹಾಕ್ಸ್ ಬಿಲ್, 2 ಚರ್ಮದ ಬೆನ್ನು ಹೊಂದಿರುವ ಸಮುದ್ರ ಆಮೆಗಳು, 37 ಜಿಂಕೆ ಶಾರ್ಕ್, 6 ಗಿಟಾರ್ ಮೀನುಗಳು, 4 ಫಿನ್‌ಲೆಸ್ ಪೋರ್ಪೋಯಿಸ್‌ಗಳನ್ನು ಸಮುದ್ರಕ್ಕೆ ಬಿಡಲಾಗಿದೆ.

  • ಕೊರೊನಾಗೆ ಮೃತಪಟ್ಟ BPL ಕುಟುಂಬಕ್ಕೆ 1 ಲಕ್ಷ ಪರಿಹಾರ – ಸರ್ಕಾರದಿಂದ ಆದೇಶ ಪರಿಷ್ಕರಣೆ

    ಕೊರೊನಾಗೆ ಮೃತಪಟ್ಟ BPL ಕುಟುಂಬಕ್ಕೆ 1 ಲಕ್ಷ ಪರಿಹಾರ – ಸರ್ಕಾರದಿಂದ ಆದೇಶ ಪರಿಷ್ಕರಣೆ

    ಬೆಂಗಳೂರು: ಕೊರೊನಾದಿಂದ ಬಿಪಿಎಲ್ ಕುಟುಂಬದ ದುಡಿಯುವ ಸದಸ್ಯ ಮೃತಪಟ್ಟರೆ 1 ಲಕ್ಷ ಪರಿಹಾರ ಎಂಬ ಸರ್ಕಾರದ ಆದೇಶದಲ್ಲಿ ಇದೀಗ ಪರಿಷ್ಕರಣೆ ಮಾಡಲಾಗಿದೆ.

    ಈ ಹಿಂದೆ ಕುಟುಂಬದ ದುಡಿಯುವ ಸದಸ್ಯರಾಗಿದ್ದರೇ ಮಾತ್ರ ಪರಿಹಾರ ನೀಡುವುದಾಗಿ ಸರ್ಕಾರ ಹೇಳಿತ್ತು. ಇದೀಗ ಹಿಂದಿನ ಆದೇಶ ಬದಲಾಯಿಸಿ ಹೊಸ ಆದೇಶ ಹೊರಡಿಸಿದೆ. ಬಿಪಿಎಲ್ ಕುಟುಂಬದ ಯಾವುದೇ ಸದಸ್ಯ ಕೊರೊನಾದಿಂದ ಮೃತರಾಗಿದ್ದರೆ ಅವರ ಕುಟುಂಬಕ್ಕೆ 1 ಲಕ್ಷ ಪರಿಹಾರ ಕೊಡುವುದಾಗಿ ಹೊಸ ಆದೇಶ ಪ್ರಕಟ ಮಾಡಿದೆ.

    ಕೋವಿಡ್‍ನಿಂದ ಮೃತಪಟ್ಟ ವ್ಯಕ್ತಿಗೆ ಯಾವುದೇ ವಯಸ್ಸಿನ ನಿಬಂಧನೆಯೂ ಇಲ್ಲ. ಮೃತರು ಬಿಪಿಎಲ್ ಕುಟುಂಬದ ಸದಸ್ಯರಾಗಿದ್ದರೆ, ಅವರ ಅರ್ಹ ಕಾನೂನು ಬದ್ಧ ವಾರಸುದಾರರಿಗೆ ಪರಿಹಾರ ನೀಡಲಾಗುವುದು ಎಂದು ತಿದ್ದುಪಡಿ ಆದೇಶದಲ್ಲಿ ರಾಜ್ಯ ಸರ್ಕಾರ ಉಲ್ಲೇಖ ಮಾಡಿದೆ. ಇದನ್ನೂ ಓದಿ: ಪ್ರಧಾನಿಯನ್ನು ಭೇಟಿ ಮಾಡಿದ ತಕ್ಷಣ ಬಿಜೆಪಿಗೆ ಹೋಗುತ್ತೇವೆ ಎಂದಲ್ಲ: ಎಚ್‌.ಡಿ.ದೇವೇಗೌಡ

  • ಮನೆ ಹಾನಿ ಪರಿಹಾರ – ಧಾರವಾಡ ಜಿಲ್ಲೆಗೆ 14 ಕೋಟಿ 74 ಲಕ್ಷ ರೂ. ಬಿಡುಗಡೆ

    ಮನೆ ಹಾನಿ ಪರಿಹಾರ – ಧಾರವಾಡ ಜಿಲ್ಲೆಗೆ 14 ಕೋಟಿ 74 ಲಕ್ಷ ರೂ. ಬಿಡುಗಡೆ

    ಧಾರವಾಡ: ಕಳೆದ ಜುಲೈ, ಆಗಸ್ಟ್, ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳುಗಳಲ್ಲಿ ಮಳೆಯಿಂದಾಗಿ ಹಾನಿಗೊಳಗಾದ ಮನೆಗಳಿಗೆ ಹಾಗೂ ನವೆಂಬರ್ ತಿಂಗಳಲ್ಲಿ ಅಕಾಲಿಕ ಮಳೆಯಿಂದ ಮನೆ ಹಾನಿಯಾಗಿರುವ ಫಲಾನುಭವಿಗಳಿಗೆ ತಕ್ಷಣಕ್ಕೆ ಪರಿಹಾರ ವಿತರಿಸಲು ಧಾರವಾಡ ಜಿಲ್ಲಾಡಳಿತಕ್ಕೆ ಮುಖ್ಯಮಂತ್ರಿಗಳು 14 ಕೋಟಿ, 74 ಲಕ್ಷ ರೂ.ಗಳನ್ನು ಮಂಜೂರು ಮಾಡಿದ್ದಾರೆ.

    ಫಲಾನುಭವಿಗಳ ಬ್ಯಾಂಕ್ ಖಾತೆಗೆ ಪರಿಹಾರ ಮೊತ್ತ ಜಮೆ ಮಾಡಲು ಕ್ರಮವಹಿಸಬೇಕೆಂದು ಎಲ್ಲ ತಹಶೀಲ್ದಾರರಿಗೆ ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಆದೇಶಿಸಿದ್ದಾರೆ. ಜಿಲ್ಲಾ ಪಂಚಾಯತ್, ಕಂದಾಯ ಇಲಾಖೆ, ಲೋಕೋಪಯೋಗಿ ಇಲಾಖೆ, ಪಂಚಾಯತ್ ರಾಜ್ ಎಂಜಿನೀಯರಿಂಗ್ ವಿಭಾಗದ ಅಧಿಕಾರಿಗಳು, ತಹಶೀಲ್ದಾರರು, ತಾಲೂಕು ಪಂಚಾಯತ್ ಇಓಗಳು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ವರ್ಚುವಲ್ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ, ಮುಖ್ಯಮಂತ್ರಿಗಳು ವಿಶೇಷ ಆಸಕ್ತಿ ವಹಿಸಿ ಜಿಲ್ಲೆಗೆ 14 ಕೋಟಿ 74 ಲಕ್ಷ ರೂ.ಗಳನ್ನು ಮನೆ ಹಾನಿ ಪರಿಹಾರ ವಿತರಣೆಗಾಗಿ ಮಂಜೂರು ಮಾಡಿದ್ದಾರೆ ಎಂದರು.

    ಈ ಪರಿಹಾರವನ್ನು ವಿತರಿಸಲು ಜಿಲ್ಲಾಡಳಿತಕ್ಕೆ ಸೂಚಿಸಿದ್ದು, ಜುಲೈ, ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ತಿಂಗಳುಗಳಲ್ಲಿ ಮನೆ ಹಾನಿಯಾಗಿರುವ ಮತ್ತು ನವೆಂಬರ್ ತಿಂಗಳಲ್ಲಿ ಅಕಾಲಿಕ ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ಸಂಬಂಧಿಸಿದಂತೆ ಎ ಮತ್ತು ಬಿ ಕೆಟಗೆರಿಯ ಮನೆ ಹಾನಿ ಪ್ರಕರಣಗಳಿಗೆ 95,100 ರೂ.ಗಳನ್ನು ಮತ್ತು ಸಿ ಕೆಟಗೆರಿಯ ಮನೆ ಹಾನಿ ಪ್ರಕರಣಗಳಿಗೆ 50 ಸಾವಿರ ರೂ.ಗಳನ್ನು ಫಲಾನುಭವಿಗಳ ಖಾತೆಗೆ ತಕ್ಷಣಕ್ಕೆ ನೇರ ಜಮೆ ಮಾಡಲು ಸರ್ಕಾರ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದೆ ಎಂದು ಹೇಳಿದರು. ಇದನ್ನೂ ಓದಿ: ಪೈಪ್, ಬಕೆಟ್‍ನಲ್ಲಿ ಫುಲ್ ಹಣ – ಕಲಬುರಗಿ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ

    MONEY

    ಸರ್ಕಾರದ ಸುತ್ತೋಲೆಯಂತೆ ಎ ಮತ್ತು ಬಿ ಕೆಟಗೆರಿಯ ಮನೆ ಹಾನಿ ಪ್ರಕರಣಗಳಿಗೆ ಉಳಿದ ಪರಿಹಾರದ ಮೊತ್ತವನ್ನು ಆರ್ಜಿಎಚ್‍ಸಿಎಲ್‍ನಿಂದ ನೇರವಾಗಿ ಜಮೆ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದರು.