Tag: compaign

  • ಬಾಡಿಗೆ ಕೊಡದೇ ಇದ್ದವರು ನನ್ನ ಯೋಗ್ಯತೆ ಬಗ್ಗೆ ಮಾತನಾಡ್ತಾರೆ: ಯಶ್‍ಗೆ ನಿಖಿಲ್ ಟಾಂಗ್

    ಬಾಡಿಗೆ ಕೊಡದೇ ಇದ್ದವರು ನನ್ನ ಯೋಗ್ಯತೆ ಬಗ್ಗೆ ಮಾತನಾಡ್ತಾರೆ: ಯಶ್‍ಗೆ ನಿಖಿಲ್ ಟಾಂಗ್

    ಮಂಡ್ಯ: ಬಾಡಿಗೆ ಮನೆಯಲ್ಲಿದ್ದಾಗ ಬಾಡಿಗೆ ಕೊಡದೆ ಇದ್ದವರು ಇವತ್ತು ಇಷ್ಟೆಲ್ಲಾ ಮಾತನಾಡ್ತಾರೆ. ನನ್ನ ಯೋಗ್ಯತೆ ಬಗ್ಗೆ ಮಾತನಾಡ್ತಾರೆ ಎಂದು ರಾಕಿಂಗ್ ಸ್ಟಾರ್ ಯಶ್‍ಗೆ ನಿಖಿಲ್ ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ.

    ನಾಗಮಂಗಲದ ಬೈರಸಂದ್ರದಲ್ಲಿ ಪ್ರಚಾರ ನಡೆಸುತ್ತಿದ್ದ ವೇಳೆ ಯಶ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ಬಿಜೆಪಿ ಬೆಂಬಲಿತ ಅಭ್ಯರ್ಥಿಯ ಹಿರಿಮಗನೋ ಕಿರಿ ಮಗನೋ ಗೊತ್ತಿಲ್ಲ. ಬಾಡಿಗೆ ಮನೆಯವರಿಗೆ ಬಾಡಿಗೆ ಕೊಡದೇ ಇದ್ದವರು ಇವತ್ತು ನನ್ನ ಯೋಗ್ಯತೆ ಬಗ್ಗೆ ಮಾತನಾಡ್ತಾರೆ ಎಂದು ಬಹಿರಂಗವಾಗಿ ಯಶ್‍ಗೆ ಟಾಂಗ್ ಕೊಟ್ಟರು.

    ಪಾಪ ಎಸಿಯಲ್ಲಿ ಕುಳಿತುಕೊಂಡು ಛತ್ರಿ ಹಿಡ್ಕೊಂಡು ಓಡಾಡುವವರಿಗೆ ಬಿಸಿಲಿನಲ್ಲಿ ಓಡಾಡೋದು ಕಷ್ಟ ಆಗ್ತಿರಬಹುದೆಂದು ಕುಮಾರಣ್ಣ ಹೇಳಿದ್ದರು. ಅದಕ್ಕೆ ಯಶ್, ದರ್ಶನ್ ಹಾಗೂ ಸುಮಲತಾ ಅವರು ಪ್ರತಿಕ್ರಿಯೆ ನೀಡಿದ್ದರು. ಈ ಬಗ್ಗೆ ಒಂದು ಮಾತು ಹೇಳೋಕೆ ಇಷ್ಟಪಡುತ್ತೀನಿ, ದೊಡ್ಡ ಮನುಷ್ಯ ಮಹಾನುಭಾವ ನಮ್ಮ ತಾತ ದೇವೇಗೌಡರು ಪ್ರಧಾನಿಯಾದಾಗ ನಾವು ಕತ್ರಿಗುಪ್ಪೆಯಲ್ಲಿ ಬಾಡಿಗೆ ಮನೆಯಲ್ಲಿದ್ದವರು. ಆಗ ನಮ್ಮ ತಾಯಿ 5 ಸಾವಿರ ರೂಪಾಯಿನಲ್ಲಿ ಮನೆ ನಿಭಾಯಿಸುತ್ತಿದ್ದರು. ಆದರೆ ಇವತ್ತು ಬಾಡಿಗೆ ಕೊಡದೇ ಇದ್ದವರು ಇಷ್ಟೆಲ್ಲಾ ಮಾತನಾಡುತ್ತಾರೆ. ನೀವು ನಮ್ಮ ತಂದೆ ತಾಯಾಂದಿರು. ನನ್ನ ತಂದೆ ಹಾಗೂ ತಾತನಿಗೆ ಹೃದಯದಲ್ಲಿ ಸ್ಥಾನ ಕೊಟ್ಟಿದ್ದೀರ. ಹಾಗೆಯೇ ನನಗೂ ಕೊಡುತ್ತೀರ ಅಂತ ಬಂದಿದ್ದೀನಿ ಎಂದು ಪ್ರಚಾರ ಮುಂದುವರಿಸಿದರು.

  • ರೈತರಿಗೆ ಭಿಕ್ಷೆಯ ರೀತಿ 2 ಸಾವಿರ ನೀಡಿ ಮೋದಿಯಿಂದ ಅವಮಾನ : ಪ್ರಜ್ವಲ್ ರೇವಣ್ಣ

    ರೈತರಿಗೆ ಭಿಕ್ಷೆಯ ರೀತಿ 2 ಸಾವಿರ ನೀಡಿ ಮೋದಿಯಿಂದ ಅವಮಾನ : ಪ್ರಜ್ವಲ್ ರೇವಣ್ಣ

    ಹಾಸನ: ಲೋಕಸಮರಕ್ಕೆ ಹಾಸನದಿಂದ ಕಣಕ್ಕಿಳಿದಿರುವ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಅಲಗೌಡನಹಳ್ಳಿ ಗ್ರಾಮದಲ್ಲಿ ಬಿರುಸಿನ ಪ್ರಚಾರ ಮಾಡುತ್ತಿದ್ದು, ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಮತದಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಮೋದಿಗೆ ವೋಟು ಯಾಕೆ ಹಾಕಬೇಕು? ಅವರು ಸುಳ್ಳು ಭರವಸೆಯನ್ನು ಕೊಟ್ಟು ಅಧಿಕಾರಕ್ಕೆ ಬಂದಿದ್ದಾರೆ. ಮೋದಿ ಅವರು ರೈತರಿಗೆ ಅನ್ಯಾಯ ಮಾಡಿದ್ದಾರೆ. ಕಳೆದ ಲೋಕಸಭಾ ಚುನಾವಣೆ ವೇಳೆ ಜನಧನ್ ಖಾತೆಗೆ 15 ಲಕ್ಷ ಹಾಕುವುದಾಗಿ ಸುಳ್ಳು ಭಾಷಣ ಮಾಡಿದ್ದರು. ಅವರನ್ನು ನಂಬಿ ರೈತರು, ಬಡವರು ಬ್ಯಾಂಕ್ ಖಾತೆ ತೆರೆದರು. ಆದ್ರೆ ಮೋದಿ ಅವರು ತಮ್ಮ ಮಾತನ್ನು ಉಳಿಸಿಕೊಂಡಿಲ್ಲ. ಅಲ್ಲದೆ ರೈತರಿಗೆ ಭಿಕ್ಷೆಯ ರೀತಿ 2 ಸಾವಿರ ಹಾಕಿ ಅವಮಾನ ಮಾಡಿದ್ದಾರೆ ಎಂದು ಕಿಡಿಕಾರಿದರು.

    ಮೋದಿಗೆ ಯಾವ ಕಾರಣಕ್ಕೆ ಮತ ನೀಡಬೇಕು ಎಂದು ಯುವಕರು ಯೋಚಿಸಬೇಕು. ಅಧಿಕಾರಕ್ಕೆ ಬರುವ ಮುನ್ನ ಮೋದಿ ಅವರು ಯುವಕರಿಗೆ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸಿ ಕೊಡುವ ಭರವಸೆ ನೀಡಿದ್ದರು. ಆದ್ರೆ ಈಗ ಎಷ್ಟು ಮಂದಿ ಯುವಕರು ಮೋದಿ ಹೆಸರು ಹೇಳಿಕೊಂಡು ಕೆಲಸಕ್ಕೆ ಹೋಗುತ್ತಿದ್ದಿರಾ ಹೇಳಿ? ಮೋದಿ ಸುಳ್ಳು ಹೇಳಿ ಅಧಿಕಾರಕ್ಕೆ ಬಂದು ಯುವಕರಿಗೆ ಮೋಸ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಯಾವುದೇ ಕಾರಣಕ್ಕೂ ಬಿಜೆಪಿ, ಮೋದಿ, ಎ. ಮಂಜು ಅಲ್ಲ ನಾವು ಜೆಡಿಎಸ್‍ನ ಹಾಗೂ ಜಾತ್ಯಾತೀತ ನಿಲುವನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕು. ಮೈತ್ರಿ ಪಕ್ಷದ ಅಭ್ಯರ್ಥಿಯಾದ ನಾನು ಟೀಕೆಯ ಸಂಸೃತಿ ಬೆಳೆಸಿಕೊಂಡಿಲ್ಲ, ನಮ್ಮದು ಅಭಿವೃದ್ಧಿ ಸಂಸ್ಕೃತಿ ಎಂದು ಹೇಳಿದರು.

  • ಯುಗಾದಿ ಹಬ್ಬದ ನಿಮಿತ್ತ ಜೊಲ್ಲೆ ದಂಪತಿ ಭರ್ಜರಿ ಪ್ರಚಾರ!

    ಯುಗಾದಿ ಹಬ್ಬದ ನಿಮಿತ್ತ ಜೊಲ್ಲೆ ದಂಪತಿ ಭರ್ಜರಿ ಪ್ರಚಾರ!

    ಬೆಳಗಾವಿ(ಚಿಕ್ಕೋಡಿ): ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಇಂದು ಭರ್ಜರಿ ಪ್ರಚಾರ ಆರಂಭಿಸಿದ್ದು, ಅವರಿಗೆ ಪತ್ನಿ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಕೂಡ ಯುಗಾದಿ ಹಬ್ಬದ ದಿನಂದಂದು ಸಾಥ್ ನೀಡಿದ್ದಾರೆ.

    ಭರ್ಜರಿ ಪ್ರಚಾರದ ನಡುವೆಯೇ ಯುಗಾದಿ ಹಬ್ಬದ ನಿಮಿತ್ತ ಇಂದು ಜೊಲ್ಲೆ ದಂಪತಿ ಟೆಂಪಲ್ ರನ್ ನಡೆಸಿದ್ದಾರೆ. ರಾಯಬಾಗ ತಾಲೂಕಿನ ಸುಪ್ರಸಿದ್ದ ಚಿಂಚಲಿ ಮಾಯಕ್ಕ ದೇವಿ ದೇವಾಲಯ, ಮುಗಳಖೋಡ ಮಠ, ನಿಡಸೋಷಿ ದುರದುಂಡೇಶ್ವರ ಮಠ ಹಾಗೂ ಅಲಕನೂರು ಅರಣ್ಯಸಿದ್ದೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಜೊಲ್ಲೆ ದಂಪತಿ ದರ್ಶನ ಪಡೆದರು.

    ಶಾಸಕ ಪಿ. ರಾಜೀವ್ ಹಾಗೂ ಕುಡಚಿ ಕ್ಷೇತ್ರದ ಮುಖಂಡರ ಮನೆಗಳಿಗೆ ಭೇಟಿ ನೀಡಿ, ಜೋಡಿಯಾಗಿ ಮತಯಾಚನೆ ನಡೆಸಿದರು. ಅಲ್ಲದೆ ಈ ಬಾರಿ ಚುನಾವಣೆಯಲ್ಲಿ ತಮಗೆ ಬೆಂಬಲ ನೀಡುವಂತೆ ಕ್ಷೇತ್ರದ ಮತದಾರರ ಬಳಿ ಮನವಿ ಮಾಡಿಕೊಂಡರು.

  • ಅತ್ಯಾಚಾರ ಅಪರಾಧಿಗೆ ಶಿಕ್ಷೆ ನೀಡಿದ್ದು ತಪ್ಪು: ಬಿಹಾರ ಮಾಜಿ ಸಿಎಂ

    ಅತ್ಯಾಚಾರ ಅಪರಾಧಿಗೆ ಶಿಕ್ಷೆ ನೀಡಿದ್ದು ತಪ್ಪು: ಬಿಹಾರ ಮಾಜಿ ಸಿಎಂ

    ಪಟ್ನಾ: ನವಾಡದಲ್ಲಿ ಅತ್ಯಾಚಾರ ಅಪರಾಧಿಯೊಬ್ಬನ ಪತ್ನಿ ಲೋಕಸಮರಕ್ಕೆ ಕಣಕ್ಕಿಳಿದಿದ್ದು, ಅವರ ಪರ ಪ್ರಚಾರಕ್ಕೆ ನಿಂತಿರುವ ಬಿಹಾರದ ಮಾಜಿ ಸಿಎಂ ಹಾಗೂ ಲಾಲೂ ಪ್ರಸಾದ್ ಯಾದವ್ ಅವರ ಪತ್ನಿ ರಾಬ್ಡಿ ದೇವಿ, ಅತ್ಯಾಚಾರಿಗೆ ಶಿಕ್ಷೆ ನೀಡಿದ್ದು ತಪ್ಪು ಎಂದು ತಮ್ಮ ಜಾತಿಯ ಅಪರಾಧಿಯನ್ನು ಸಮರ್ಥಿಸಿಕೊಂಡಿದ್ದಾರೆ.

    ರಾಷ್ಟ್ರೀಯ ಜನತಾ ದಳದ(ಆರ್ ಜೆಡಿ) ಅಭ್ಯರ್ಥಿಯಾಗಿ ವಿಭಾ ದೇವಿ ಬಿಹಾರದ ನವಾಡ ಲೋಕಸಭೆ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಇವರು ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಯಾದ ರಾಬಬಲ್ಲಭ್ ಯಾದವ್ ಪತ್ನಿಯಾಗಿದ್ದು, ವಿಭಾ ಯಾಧವ್‍ನನ್ನು ಜನರು ಗೆಲ್ಲಿಸಬೇಕೆಂದು ರಾಬ್ಡಿ ದೇವಿ ಪ್ರಚಾರ ನಡೆಸಿದ್ದಾರೆ. ಅವರ ಜಾತಿಯನ್ನು ಮುಂದಿಟ್ಟುಕೊಂಡು ಮತ ಕೇಳಿ ನಿತೀಶ್ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದಾರೆ.

    ಇದೇ ಸಂದರ್ಭದಲ್ಲಿ ರಾಜಬಲ್ಲಭ್ ಯಾದವ್ ಮೇಲೆ ಸುಳ್ಳು ಅತ್ಯಾಚಾರದ ಆರೋಪ ಹೊರಿಸಿ ನಿತಿಶ್ ಕುಮಾರ್ ನೇತೃತ್ವದ ಸರ್ಕಾರ ಜೈಲಿಗೆ ಹಾಕಿದೆ. ಈ ರೀತಿ ಮಾಡಿ ಯಾಧವ ಸಮುದಾಯದ ಮಾನವನ್ನು ಹರಾಜು ಹಾಕುತ್ತಿದೆ ಎಂದು ಆರೋಪಿಸಿದರು.

    ರಾಬಬಲ್ಲಭ್ ಯಾದವ್ ಓರ್ವ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಮಾಡಿದಕ್ಕೆ ಆತನಿಗೆ 2016ರಲ್ಲಿಯೇ ಪಟ್ನಾದ ಕೋರ್ಟ್ ಶಿಕ್ಷೆ ವಿಧಿಸಿದೆ. ಆಗ ನಿತಿಶ್ ಕುಮಾರ್ ಸರ್ಕಾರ ಮಾಡಿದ ಷಡ್ಯಂತ್ರದಿಂದ ಅವರು ಸುಳ್ಳು ಆರೋಪ ಹೊತ್ತು ಅಪರಾಧಿ ಸ್ಥಾನದಲ್ಲಿ ನಿಂತು ಜೈಲು ಸೇರಿದರು. ಚುನಾವಣೆಯಿಂದ ದೂರ ಉಳಿದರು ಎಂದರು. ಬಳಿಕ ಲಾಲೂ ಪ್ರಸಾದ್ ಯಾಧವ್ ಸಿಲುಕಿಕೊಂಡಿರುವ ಮೇವು ಹಗರಣದ ಬಗ್ಗೆ ಪ್ರತಿಕ್ರಿಯಿಸಿ, ಐಆರ್‍ಸಿಟಿಸಿ ಹಗರಣ ಇಟ್ಟುಕೊಂಡು ತಮ್ಮ ಕುಟುಂಬದ ಮೇಲೆ ಮೋದಿ ಸರ್ಕಾರ ಸುಳ್ಳು ಆರೋಪ ಹೊರಿಸಿ ಸಿಲುಕಿಸಿದೆ ಎಂದು ಕಿಡಿಕಾರಿದರು.

    “ಜನರಿಗೆ ಸತ್ಯ ಏನೆಂಬುದು ಗೊತ್ತು. ಲಾಲೂಜಿ ಮತ್ತು ಅವರ ಕುಟುಂಬ ಎಷ್ಟು ಮುಗ್ಧ ಎಂದು ಎಲ್ಲರಿಗೂ ಗೊತ್ತು. ಲಾಲೂಜಿ ಅವರು ಕೇಂದ್ರ ರೈಲ್ವೆ ಸಚಿವರಾಗಿದ್ದಾಗ ಯಾವುದೇ ಭ್ರಷ್ಟಾಚಾರ ಎಸಗಿಲ್ಲ ಎಂದು ಭಾರತೀಯ ರೈಲ್ವೆಯ ಅಧಿಕಾರಿಗಳೇ ಹೇಳಿದ್ದಾರೆ” ಎಂದು ಪತಿ ಪರ ರಾಬ್ಡಿ ದೇವಿ ಬ್ಯಾಟಿಂಗ್ ಮಾಡಿದರು.

    ಸದ್ಯ ಲೋಕಸಭಾ ಚುನಾವಣೆಗೆ ಬಿಹಾರದಲ್ಲಿ ಭರ್ಜರಿ ಮತ ಭೇಟೆ ನಡೆಯುತ್ತಿದ್ದು, ಇಲ್ಲಿ ಏಪ್ರಿಲ್ 11ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಮೇ 23ರಂದು ಮತ ಎಣಿಕೆ ನಡೆಯಲಿದೆ.

  • ಪ್ರಚಾರದ ಖರ್ಚಿಗೆ ಸುಮಲತಾರಿಗೆ ಹಣ ನೀಡಿ ಹಾರೈಸಿದ ಮಹಿಳಾ ವ್ಯಾಪಾರಸ್ಥರು!

    ಪ್ರಚಾರದ ಖರ್ಚಿಗೆ ಸುಮಲತಾರಿಗೆ ಹಣ ನೀಡಿ ಹಾರೈಸಿದ ಮಹಿಳಾ ವ್ಯಾಪಾರಸ್ಥರು!

    -ಅಂಬಿ ಇಷ್ಟದ ಮಿಠಾಯಿ ಸವಿದ ಪಕ್ಷೇತರ ಅಭ್ಯರ್ಥಿ

    ಮಂಡ್ಯ: ಇಂದು ಬೆಳ್ಳಂಬೆಳಗ್ಗೆ ಮಂಡ್ಯದ ಮಾರುಕಟ್ಟೆಯಲ್ಲಿ ಸುಮಲತಾ ಅಂಬರೀಶ್ ಪ್ರಚಾರ ಆರಂಭ ಮಾಡಿದ್ದು, ಅಲ್ಲಿ ಕೆಲ ಮಹಿಳಾ ವ್ಯಾಪಾರಸ್ಥರು ಹಾಗೂ ಅಂಬಿ ಅಭಿಮಾನಿಗಳು ಪ್ರೀತಿಯಿಂದ ಪ್ರಚಾರದ ಖರ್ಚಿಗೆ ಹಣ ನೀಡಿದಷ್ಟೇ ಅಲ್ಲದೆ ಸೌತೆಕಾಯಿ, ಕಿತ್ತಳೆ ಹಣ್ಣು, ಮಿಠಾಯಿ ನೀಡಿ ಅಭಿಮಾನ ವ್ಯಕ್ತಪಡಿಸಿದ್ದಾರೆ.

    ಲೋಕಸಮರಕ್ಕೆ ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ಅವರು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಮಂಡ್ಯ ಮಾರುಕಟ್ಟೆಯಲ್ಲಿ ಪ್ರಚಾರಕ್ಕೆ ತೆರೆಳಿದ್ದ ವೇಳೆ ಅಂಬರೀಶ್ ಅಭಿಮಾನಿಗಳು, ಸುಮಲತಾರನ್ನು ಪ್ರೀತಿಯಿಂದ ಸ್ವಾಗತಿಸಿದರು. ಅಲ್ಲದೆ ಕೆಲ ಮಹಿಳಾ ವ್ಯಾಪಾರಿಗಳು ಸುಮಲತಾರಿಗೆ ಪ್ರಚಾರದ ಖರ್ಚಿಗೆ ಕೊಂಚ ಹಣವನ್ನು ಕೂಡ ನೀಡಿದ್ದಾರೆ. ಹಾಗೆಯೇ ವ್ಯಾಪಾರ ಮಾಡುತ್ತಿದ್ದ ನಾವು ಸಂತೋಷದಿಂದ ಹಣ ಕೊಟ್ಟಿದ್ದೇವೆ. ಅವರು ಗೆಲ್ಲಲಿ ಎಂದು ಹಣ ಕೊಟ್ಟಿದ್ದೇವೆ. ನಮಗೆ ಏನು ಮಾಡಬೇಕೋ ಅದನ್ನು ಅವರು ಗೆದ್ದ ನಂತರ ಮಾಡಲಿ. ನಮ್ಮಂಥ ಬಡವರನ್ನು ಕಾಪಾಡಲಿ ಎಂದು ಕಿರುಕಾಣಿಕೆ ನೀಡಿದ ವೃದ್ಧೆಯೊಬ್ಬರು ಹೇಳಿದರು.

    ಅಂಬರೀಶ್ ಅವರು ಮಾರುಕಟ್ಟೆಗೆ ಬಂದಾಗ ಚಿಕ್ಕ ಮಂಡ್ಯ ರಸ್ತೆಯಲ್ಲಿ ಇರುವ ಮಿಠಾಯಿ ಅಂಗಡಿ ಹೋಗಿ ಮಿಠಾಯಿಯನ್ನು ಇಷ್ಟಪಟ್ಟು ತಿನ್ನುತ್ತಿದ್ದರು. ಆದ್ದರಿಂದ ಪ್ರಚಾರದ ವೇಳೆ ಮಿಠಾಯಿ ಅಂಗಡಿ ಮಾಲೀಕ ಚಂದ್ರು, ಅಂಬಿ ಅವರ ಇಷ್ಟದ ಮಿಠಾಯಿಯನ್ನು ಸುಮಲತಾರಿಗೆ ನೀಡಿ ಖುಷಿಪಟ್ಟಿದ್ದಾರೆ.

    ಅಂಬರೀಶ್ ಅವರು ಮಾರುಕಟ್ಟೆಗೆ ಬಂದಾಗ ತಾವೇ ಖುದ್ದಾಗಿ ಚಂದ್ರು ಅವರ ಮಿಠಾಯಿ ಅಂಗಡಿಗೆ ಹೋಗಿ ಬೆಲ್ಲದ ಮಿಠಾಯಿ ಖರೀದಿಸಿ ತಿನ್ನುತ್ತಿದ್ದರು. ಅಲ್ಲದೆ ಅಂಬರೀಶ್‍ರನ್ನು ಭೇಟಿ ಮಾಡಲು ಬೆಂಗಳೂರಿಗೆ ಹೋಗುವವರು ಕೂಡ ಚಂದ್ರು ಅಂಗಡಿಯಿಂದ ಬೆಲ್ಲದ ಮಿಠಾಯಿ ತೆಗೆದುಕೊಂಡು ಹೋಗಿ ಕೊಡುತ್ತಿದ್ದರು. ಹೀಗಾಗಿ ಸುಮಲತಾ ಅವರು ಮಾರ್ಕೆಟ್‍ಗೆ ಬಂದ ವಿಷಯ ತಿಳಿದ ಚಂದ್ರು, ಅಭಿಮಾನದಿಂದ ಅವರಿಗೆ ಮಿಠಾಯಿ ತಂದುಕೊಟ್ಟರು. ಬಳಿಕ ಅಭಿಮಾನಿ ಪ್ರೀತಿಗೆ ಸೋತ ಸುಮಲತಾ, ಅಂಬರೀಶ್ ನೆನಪಿಗಾಗಿ ಮಾರುಕಟ್ಟೆಗೆ ಬಂದಾಗ ನಿಮ್ಮ ಅಂಗಡಿಗೆ ನಾನೇ ಬಂದು ಮಿಠಾಯಿ ತಿನ್ನುತ್ತೇನೆ ಎಂದು ಸಂತೋಷದಿಂದ ಹೇಳಿಕೊಂಡರು.

  • ಸಿದ್ದರಾಮಯ್ಯ ಪರವಾಗಿ ಪ್ರಚಾರ ಮಾಡಿದ್ರೂ ವೋಟ್ ಬಿದ್ದಿಲ್ಲ- ದರ್ಶನ್ ಪ್ರಚಾರಕ್ಕೆ ಜಿಟಿಡಿ ಟಾಂಗ್

    ಸಿದ್ದರಾಮಯ್ಯ ಪರವಾಗಿ ಪ್ರಚಾರ ಮಾಡಿದ್ರೂ ವೋಟ್ ಬಿದ್ದಿಲ್ಲ- ದರ್ಶನ್ ಪ್ರಚಾರಕ್ಕೆ ಜಿಟಿಡಿ ಟಾಂಗ್

    ಮಂಡ್ಯ: ಜನರು ಅಭಿವೃದ್ಧಿ ನೋಡಿ ಮತ ಹಾಕುತ್ತಾರೆ. ಸಿನಿಮಾ ನೋಡಿ ಅಲ್ಲ. ದರ್ಶನ್ ಪ್ರಚಾರಕ್ಕೆ ಬಂದರೂ ವೋಟ್ ಬರಲ್ಲ ಎಂದು ಸಚಿವ ಜಿಟಿ ದೇವೇಗೌಡ ಟಾಂಗ್ ಕೊಟ್ಟಿದ್ದಾರೆ.

    ಜಿಲ್ಲೆಯ ಮಳವಳ್ಳಿಯ ಹೆಬ್ಬಕವಾಡಿ ಗ್ರಾಮದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಂಡ್ಯದಲ್ಲಿ ಸ್ಟಾರ್ ನಟರಾದ ಯಶ್ ಹಾಗೂ ದರ್ಶನ್ ಸುಮಲತಾ ಪರ ಪ್ರಚಾರ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

    ದರ್ಶನ್ ಅವರು ಸುಮ್ಮನೆ ಒಂದು ಕಾರ್ಯಕ್ರಮಕ್ಕೆ ಬಂದರೂ ಜನರು ಅವರನ್ನು ನೋಡಲು ಬರುತ್ತಾರೆ. ಯಶ್ ಬಂದರೂ ಜನ ಬರುತ್ತಾರೆ. ಜನರು ಅವರ ಪ್ರಚಾರದ ವೇಳೆ ಬಂದ ಮಾತ್ರಕ್ಕೆ ವೋಟ್ ಬರಲ್ಲ. ಈ ಹಿಂದೆ ದರ್ಶನ್ ಚಾಮುಂಡೇಶ್ವರಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪರವಾಗಿ ಪ್ರಚಾರ ಮಾಡಿದ್ದರು. ಆಗ ಒಂದು ವೋಟ್ ಕೂಡ ಬಿದ್ದಿರಲಿಲ್ಲ. ಜನ ಸಿನಿಮಾ ನೋಡಿ ವೋಟ್ ಹಾಕಲ್ಲ, ಅಭಿವೃದ್ಧಿ ನೋಡಿ ಹಾಕ್ತಾರೆ ಎಂದು ವ್ಯಂಗ್ಯವಾಡಿದರು.

    ರಾಜ್ಯದಲ್ಲಿ ಕುಮಾರಸ್ವಾಮಿ ಅವರು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಹೆದರಬೇಡಿ ಈ ಬಾರಿ ಮಂಡ್ಯದಲ್ಲಿ ಜೆಡಿಎಸ್ ಗೆಲ್ಲುತ್ತೆ. ಜನರು ಕರ್ನಾಟಕ ರಾಜಕೀಯದಲ್ಲಿ ಸಿನಿಮಾ ನಟರನ್ನ ಗೆಲ್ಲಿಸುವ ಕೆಲಸ ಮಾಡಿಲ್ಲ. ವರ್ಷದಲ್ಲಿ ಮಂಡ್ಯ ಇಂಡಿಯಾದಲ್ಲೇ ನಂಬರ್ 1 ಆಗುತ್ತೆ. ಜೆಡಿಎಸ್ ಗೆಲ್ಲುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ದರ್ಶನ್, ಯಶ್ ಮಂಡ್ಯ ಜಿಲ್ಲೆಗೆ ಏನು ಕೊಟ್ಟಿದ್ದಾರೆ? ನಮಗೆ ಯಾರ ಭಯವಿಲ್ಲ: ನಾರಾಯಣ ಗೌಡ

    ದರ್ಶನ್, ಯಶ್ ಮಂಡ್ಯ ಜಿಲ್ಲೆಗೆ ಏನು ಕೊಟ್ಟಿದ್ದಾರೆ? ನಮಗೆ ಯಾರ ಭಯವಿಲ್ಲ: ನಾರಾಯಣ ಗೌಡ

    ಮಂಡ್ಯ: ದರ್ಶನ್, ಯಶ್ ಪ್ರಚಾರದ ಭಯ ನಮಗಿಲ್ಲ. ಇಲ್ಲಿಯವರೆಗೆ ಜಿಲ್ಲೆಗೆ ಅವರು ಏನು ಕೊಟ್ಟಿದ್ದಾರೆ? ಈಗ ಏನು ಕೊಡ್ತಾರೆ ಹೇಳಿಕೊಂಡು ಬರಲಿ. ಜೆಡಿಎಸ್ ಮತ್ತು ಕಾಂಗ್ರೆಸ್ ಈ ಜಿಲ್ಲೆಗೆ ಬೇಕಾದಷ್ಟು ಕೊಡುಗೆ ನೀಡಿದೆ ಎಂದು ಜೆಡಿಎಸ್ ಶಾಸಕ ನಾರಾಯಣಗೌಡ ಟಾಂಗ್ ಕೊಟ್ಟಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಪರ ನಟ ದರ್ಶನ್ ಪ್ರಚಾರ ಮಾಡುತ್ತಿರುವುದರ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

    ದರ್ಶನ್ ಪ್ರಚಾರದ ಭಯ ನಮಗಿಲ್ಲ. ಇದುವರೆಗೆ ಸುಮಲತಾ, ದರ್ಶನ್ ಹಾಗೂ ಯಶ್ ಜಿಲ್ಲೆಗೆ ಏನು ಕೊಟ್ಟಿದ್ದಾರೆ? ಈಗ ಏನು ಕೊಡ್ತಾರೆ ಹೇಳಿಕೊಂಡು ಬರಲಿ. ಜೆಡಿಎಸ್ ಮತ್ತು ಕಾಂಗ್ರೆಸ್ ಈ ಜಿಲ್ಲೆಗೆ ಬೇಕಾದಷ್ಟು ಕೊಡುಗೆ ನೀಡಿದೆ. ಅವರು ಅವರ ಕೆಲಸ ಮಾಡೋದು ಬಿಟ್ಟು ಬೇರೆ ಕೆಲಸಕ್ಕೆ ಬಂದಿದ್ದಾರೆ. ಜನ ಸಿನಿಮಾರಂಗದವರನ್ನ ಪರದೆ ಮೇಲೆ ನೋಡುತ್ತಿದ್ದರು. ಈಗ ನ್ಯಾಚುರಲ್ ಆಗಿ ನೋಡ್ತಿದ್ದಾರೆ. ಹೀಗಾಗಿ ಅವರನ್ನ ನೋಡಲು ಜನ ಹೋಗ್ತಿದ್ದಾರೆ. ನಾವೂ ಕೂಡ ಕೆಲವು ಸಂದರ್ಭದಲ್ಲಿ ನಟರನ್ನು ನೋಡಲು ಹೋಗಿದ್ದೇವೆ. ಸಿನಿಮಾ ನೋಡೋಕೆ ಜನ ಹಣ ಕೊಟ್ಟು ಹೋಗ್ತಾರೆ. ಈಗಲಾದರೂ ಜನರ ಕಷ್ಟ ಅವರಿಗೆ ಅರ್ಥವಾಗಲಿ ಎಂದು ಟಾಂಗ್ ಕೊಟ್ಟರು.

    ಮಂಡ್ಯ ಜೆಡಿಎಸ್ ಭದ್ರಕೋಟೆ. ಜನ ಅಭಿವೃದ್ಧಿ ಬಿಟ್ಟು ಬೇರೆ ಕಡೆ ಗಮನ ಕೊಡ್ತಾರಾ? ಸುಮಲತಾ, ದರ್ಶನ್ ಹಾಗೂ ಯಶ್ ಏನಾದರೂ ನಮ್ಮ ಕೈಗೆ ಸಿಗ್ತಾರಾ ಎಂದು ಪ್ರಶ್ನಿಸಿದರು. ಅಲ್ಲದೇ ದೇವೇಗೌಡರ ಕುಟುಂಬ ಯಾವಾಗ ಹೋದರೂ ನಮಗೆ ಸಿಗ್ತಾರೆ. ನಾವು ಅವರ ಪರ ಇರಬೇಕೇ ಅಥವಾ ಯಾವಾಗಲೋ ಒಮ್ಮೆ ಸಿಗುವ ನಟರ ಪರ ಇರಬೇಕೇ ಎಂದು ಪ್ರಶ್ನಿಸಿದರು.

    ನಂತರ ಐಟಿ ದಾಳಿ ವಿಚಾರ ಪ್ರತಿಕ್ರಿಯಿಸಿ, ನಮಗೆ ಭಯ ಹುಟ್ಟಿಸಲು ಐಟಿ ರೇಡ್ ಮಾಡಿಸುತ್ತಿದ್ದಾರೆ. ಬಿಜೆಪಿಯವರೇ ಈ ಐಟಿ ದಾಳಿಗೆ ಕಾರಣ. ಮಂಡ್ಯ ಸೀಟಿನ ಬಗ್ಗೆ ಬಿಜೆಪಿ ಅವರಿಗೆ ಕಣ್ಣಿದೆ. ಯಾವುದೇ ಕಾರಣಕ್ಕೂ ಅವರು ಗೆಲ್ಲುವುದಕ್ಕೆ ಆಗಲ್ಲ ಎಂದು ಸ್ವತಂತ್ರ ಅಭ್ಯರ್ಥಿ ಸುಮಲತಾ ಅವರಿಗೆ ಸಪೋರ್ಟ್ ಮಾಡ್ತಿದ್ದಾರೆ. ಸ್ವತಂತ್ರ ಅಭ್ಯರ್ಥಿ ಗೆದ್ದರೆ ಬಿಜೆಪಿಗೆ ಹೋಗುವ ಸಾಧ್ಯತೆ ಜಾಸ್ತಿಇದೆ. ಮೋದಿ ಅವರು ಕೂಡ ಸುಮಲತಾರಿಗೆ ಆಶೀರ್ವಾದ ಮಾಡಿದ್ದಾರೆ ಅಂತ ಮಾಹಿತಿ ಇದೆ. ಐಟಿ ದಾಳಿ ಬಗ್ಗೆ ನಮಗೆ ಭಯವಿಲ್ಲ. ಐಟಿ ದಾಳಿಯಲ್ಲಿ ಬರಿ ಪೇಪರ್ ಸಿಕ್ಕಿರಬಹುದು ಎಂದು ವ್ಯಂಗ್ಯವಾಡಿದರು.

  • ರಾಜ್ಯದಲ್ಲಿ ಡಾ.ರಾಜ್ ಹೆಸರು ಹೇಗೆ ಶಕ್ತಿಯೋ ಹಾಗೆ ದೇಶಕ್ಕೆ ಮೋದಿ ಶಕ್ತಿ: ತಾರಾ

    ರಾಜ್ಯದಲ್ಲಿ ಡಾ.ರಾಜ್ ಹೆಸರು ಹೇಗೆ ಶಕ್ತಿಯೋ ಹಾಗೆ ದೇಶಕ್ಕೆ ಮೋದಿ ಶಕ್ತಿ: ತಾರಾ

    ಹಾಸನ: ಕರ್ನಾಟಕದಲ್ಲಿ ಕನ್ನಡ ಭಾಷೆಗಾಗಿ ನಟ ಡಾ.ರಾಜ್‍ಕುಮಾರ್ ಹೇಗೆ ಜನರನ್ನು ಒಗ್ಗೂಡಿಸಿ ಶಕ್ತಿಯಾಗಿ ನಿಂತಿದ್ದರೋ, ಹಾಗೇ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಮುನ್ನಡೆಸುವ ಶಕ್ತಿಯಾಗಿ ನಿಂತಿದ್ದಾರೆ ಎಂದು ನಟಿ ಹಾಗೂ ಬಿಜೆಪಿ ನಾಯಕಿ ತಾರಾ ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇದು ದೇಶದ ಚುನಾವಣೆ, ಮೋದಿ ಅವರ ಮರು ಆಯ್ಕೆಯನ್ನು ಅನೇಕರು ಬಯಸಿದ್ದಾರೆ. ಮೋದಿ ಅಲೆ ಕಡಿಮೆಯಾಗಿದೆ ಎನ್ನುವುದು ಸುಳ್ಳು. 2014ರಲ್ಲಿದ್ದ ಅಲೆಗಿಂತ ಈ ಬಾರಿ ದೇಶದಲ್ಲಿ ಮೋದಿ ಪರ ಹೆಚ್ಚು ಬೆಂಬಲ ವ್ಯಕ್ತವಾಗುತ್ತಿದೆ. ಕರ್ನಾಟಕದಲ್ಲಿ ಡಾ.ರಾಜ್ ಹೆಸರು ಹೇಗೆ ಶಕ್ತಿಯೋ, ಹಾಗೆ ದೇಶದಲ್ಲಿ ಮೋದಿ ಅವರು ಒಂದು ಶಕ್ತಿ. ಮೋದಿ ಹೆಸರಲ್ಲೇ ಮೋಡಿ ಇದೆ. ಹೀಗಾಗಿ ನಾವು ಮೋದಿ ಹೆಸರನ್ನು ಎಲ್ಲೆಡೆ ಚಲಾವಣೆ ಮಾಡುತ್ತಿದ್ದೇವೆ. ಮೋದಿ ಅವರು ಪ್ರಧಾನಿಯಾದ ಮೇಲೆ ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶ ಬಹಳಷ್ಟು ಮುಂದೆ ಬಂದಿದೆ. ಜಗತ್ತಿನಲ್ಲಿರುವ ಪ್ರಭಾವಿ ಪ್ರಧಾನಿಗಳ ಪಟ್ಟಿಯಲ್ಲಿ ಮೋದಿ ಅವರೇ ಮೊದಲ ಸ್ಥಾನ ಪಡೆದಿದ್ದಾರೆ ಎಂದು ಪ್ರಧಾನಿಯ ನಾಮ ಬಲ ಗುಣಗಾನ ಮಾಡಿದರು.

    ದೇಶದ ಸರ್ವಾಂಗೀಣ ಅಭಿವೃದ್ಧಿಗೆ 5 ವರ್ಷ ಸಾಲದು, ಮತ್ತೈದು ವರ್ಷ ಬೇಕು. ಮೋದಿ ಅವರು ಮತ್ತೆ ಪ್ರಧಾನಿಯಾಗಬೇಕು ಎಂದರು. ಬಳಿಕ ಅನಂತ್‍ಕುಮಾರ್ ಪತ್ನಿ ತೇಜಸ್ವಿನಿ ಅವರಿಗೆ ಬೆಂಗಳೂರು ದಕ್ಷಿಣದಿಂದ ಟಿಕೆಟ್ ಕೈ ತಪ್ಪಿರುವುದಕ್ಕೆ ನಾನು ಪ್ರತಿಕ್ರಿಯಿಸಲ್ಲ ಅಂತ ಹೇಳಿದರು. ಹಾಗೆಯೇ ರಾಜ್ಯದಲ್ಲಿ ಯಡಿಯೂರಪ್ಪ ಅವರು ಮತ್ತೆ ಸಿಎಂ ಆಗುವುದು ನನಗೂ ಖುಷಿ ವಿಷಯ ಎಂದು ಅಭಿಪ್ರಾಯ ತಿಳಿಸಿದರು.

    ಸದ್ಯ ನಾನು ಅರಕಲಗೂಡು, ಹಳೇ ಮೈಸೂರಲ್ಲಿ ಬಿಜೆಪಿ ಅಭ್ಯರ್ಥಿ ಎ.ಮಂಜು ಪರ ಪ್ರಚಾರ ಮಾಡಲಿದ್ದೇನೆ. ಹಾಸನದಲ್ಲಿ ಈ ಬಾರಿ ಬದಲಾವಣೆಯ ಗಾಳಿ ಬೀಸಲಿದೆ. ನಮ್ಮ ವರಿಷ್ಠರು ಸೂಚನೆ ಕೊಟ್ಟರೆ ಮಂಡ್ಯದಲ್ಲಿ ಸುಮಲತಾ ಪರ ಪ್ರಚಾರ ಮಾಡುವೆ. ಸುಮಲತಾ, ನಿಖಿಲ್ ಇಬ್ಬರೂ ಸಿನಿಮಾ ಕ್ಷೇತ್ರದವರೇ ಆಗಿದ್ದಾರೆ. ಆದರೆ ನನ್ನ ಪಕ್ಷ ಯಾರ ಪರ ಪ್ರಚಾರ ಮಾಡಿ ಎಂದು ಸೂಚನೆ ನೀಡುತ್ತದೋ ಹಾಗೆ ಮಾಡುತ್ತೇನೆ ಎಂದು ಹೇಳಿದರು.

  • ಮೈಸೂರಲ್ಲಿ ದೋಸ್ತಿಗಳ ಕುಸ್ತಿ ಮುಂದುವರಿಕೆ – ಪ್ರಚಾರದಲ್ಲಿ ಜೆಡಿಎಸ್ ನಾಯಕರ ಕಡೆಗಣನೆ

    ಮೈಸೂರಲ್ಲಿ ದೋಸ್ತಿಗಳ ಕುಸ್ತಿ ಮುಂದುವರಿಕೆ – ಪ್ರಚಾರದಲ್ಲಿ ಜೆಡಿಎಸ್ ನಾಯಕರ ಕಡೆಗಣನೆ

    ಮೈಸೂರು: ಇಂದಿನಿಂದ ಮೈತ್ರಿ ಅಭ್ಯರ್ಥಿ ವಿಜಯಶಂಕರ್ ಪರ ಕಾಂಗ್ರೆಸ್ ನಾಯಕರು ಪ್ರಚಾರ ಆರಂಭಿಸಿದ್ದಾರೆ. ಪ್ರಚಾರದ ವೇಳೆ ಸ್ಥಳಿಯ ಜೆಡಿಎಸ್ ನಾಯಕರನ್ನು ಕಡೆಗಣಿಸಿದ್ದು, ದೋಸ್ತಿಗಳ ಕುಸ್ತಿ ಮುಂದುವರಿದಿರುವಂತೆ ಕಾಣುತ್ತಿದೆ.

    ನಗರ ಮತ್ತು ಜಿಲ್ಲಾ ಕಾಂಗ್ರೆಸ್‍ನ ಅಧಿಕೃತ ಪ್ರವಾಸದ ಭಿತ್ತಿ ಪತ್ರದಲ್ಲಿ ಜೆಡಿಎಸ್ ಸ್ಥಳಿಯ ನಾಯಕರ ಫೋಟೋಗಳನ್ನು ಕಡೆಗಣಿಸಲಾಗಿದೆ. ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಸಿಎಂ ಕುಮಾರಸ್ವಾಮಿ ಫೋಟೋ ಬಿಟ್ಟರೆ ಕರಪತ್ರದಲ್ಲಿ ಸ್ಥಳೀಯ ಜೆಡಿಎಸ್ ನಾಯಕರ ಫೋಟೋ ಹಾಕಿಲ್ಲ. ಮೈಸೂರು ಉಸ್ತುವಾರಿ ಸಚಿವರ ಜಿ.ಟಿ ದೇವೇಗೌಡ ಹಾಗೂ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಫೋಟೋಗೆ ಕೊಕ್ ನೀಡಲಾಗಿದೆ.

    ಪ್ರಚಾರದ ಕರಪತ್ರದಲ್ಲಿ ಕೈ ತೆನೆ ಚಿಹ್ನೆಗಳು ಮಾತ್ರ ಪ್ರಚಾರಕ್ಕೆ ಬಳಕೆ ಮಾಡಿಕೊಂಡು, ಪ್ರಕಟಣೆಯಲ್ಲಿ ಕಾಂಗ್ರೆಸ್ ನಗರ ಹಾಗೂ ಗ್ರಾಮಾಂತರ ಸಮಿತಿ ಎಂದು ಉಲ್ಲೇಖಿಸಲಾಗಿದೆ. ಜೆಡಿಎಸ್ ನಾಯಕರು ನೀಡುತ್ತಿರುವ ಅಸಹಕಾರಕ್ಕೆ ಬೇಸತ್ತು ಮೈತ್ರಿ ನಾಯಕರನ್ನೇ ಕಾಂಗ್ರೆಸ್ ಕೈ ಬಿಟ್ಟಿದಿಯಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

    ಇಂದು ಬೆಂಗಳೂರು ಹೊರವಲಯ ನೆಲಮಂಗಲ ಸಮೀಪ ಇರುವ ಮಾದಾವರದ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಮೈದಾನದಲ್ಲಿ ದೋಸ್ತಿಗಳು ಜಂಟಿಯಾಗಿ ಬೃಹತ್ ಸಮಾವೇಶವನ್ನು ಆಯೋಜಿಸಿವೆ. ಈ ಕುರಿತು ಹಾಕಲಾದ ಬ್ಯಾನರ್, ಫ್ಲೆಕ್ಸ್ ನಲ್ಲಿ ಸಿದ್ದರಾಮಯ್ಯ ಅವರ ಫೋಟೋ ಇಲ್ಲ. ಹೀಗಾಗಿ ಅವರನ್ನು ಕಡೆಗಣಿಸಿದ್ದಾರಾ ಅಥವಾ ಬೇಕಂತಲೇ ಅವರ ಫೋಟೋ ಹಾಕಿಲ್ವಾ ಅನ್ನೋ ಅನುಮಾನ ಮೂಡಿದೆ. ಸದ್ಯ ಈ ಎರಡು ವಿಚಾರ ಮೈತ್ರಿ ಪಕ್ಷದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

  • ನಿಖಿಲ್‍ಗೆ ಮುತ್ತು ನೀಡಿ ಶುಭ ಹಾರೈಸಿದ ವೃದ್ಧೆ

    ನಿಖಿಲ್‍ಗೆ ಮುತ್ತು ನೀಡಿ ಶುಭ ಹಾರೈಸಿದ ವೃದ್ಧೆ

    ಮಂಡ್ಯ: ಮಂಡ್ಯ ಕ್ಷೇತ್ರದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿರುವ ನಿಖಿಲ್ ಕುಮಾರಸ್ವಾಮಿ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಮದ್ದೂರಿನ ಕೆಸ್ತೂರು ಗ್ರಾಮದಲ್ಲಿ ಪ್ರಚಾರ ನಡೆಸುತ್ತಿದ್ದ ವೇಳೆ ನಿಖಿಲ್ ಅವರಿಗೆ ವೃದ್ಧೆಯೊಬ್ಬರು ಮುತ್ತು ನೀಡಿ ಶುಭ ಹಾರೈಸಿದ್ದಾರೆ.

    ಮದ್ದೂರಿನ ಹೆಮ್ಮನಹಳ್ಳಿ, ಕದಲೂರು, ಆತಗೂರು ಸೇರಿದಂತೆ ಹಲವು ಗ್ರಾಮದಲ್ಲಿ ಇಂದು ನಿಖಿಲ್ ಹಾಗೂ ಅವರ ಬೆಂಬಲಿಗರು ಜೊತೆಗೂಡಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಹೀಗೆ ಕೆಸ್ತೂರು ಗ್ರಾಮದಲ್ಲಿ ಜನರೊಂದಿಗೆ ನಿಖಿಲ್ ಅವರು ಮಾತನಾಡುತ್ತಿದ್ದ ವೇಳೆ ಅವರ ಬಳಿ ಬಂದ ವೃದ್ಧೆಯೊಬ್ಬರು ಅವರ ಕಿವಿಯಲ್ಲಿ ಶುಭ ಹಾರೈಸಿ ಮುತ್ತು ಕೊಟ್ಟಿದ್ದಾರೆ.

    ಇದಕ್ಕೂ ಮೊದಲು ಹೆಮ್ಮನಹಳ್ಳಿ ಗ್ರಾಮದಿಂದ ನಿಖಿಲ್ ಪ್ರಚಾರ ಆರಂಭಿಸಿದಾಗ ಆತಗೂರು ಗ್ರಾಮದಲ್ಲಿ ಪದ್ಮಮ್ಮ, ತಮ್ಮ ಮಕ್ಕಳಿಗೆ ಕೆಲಸವಿಲ್ಲ ಎಂದು ಕಣ್ಣೀರು ಹಾಕಿದ್ದರು. ಆಗ ನಿಖಿಲ್, ಪದ್ಮಮ್ಮ ಅವರ ಕಣ್ಣೀರು ಒರೆಸಿ ಕೆಲಸ ಕೊಡಿಸುವ ಭರವಸೆ ನೀಡಿದ್ದಾರೆ. ಅಲ್ಲದೆ ನಾನು ನಿಮ್ಮ ಮಗನಿದ್ದಂತೆ, ನಿಮ್ಮ ಮಕ್ಕಳಿಗೂ ಅಣ್ಣ-ತಮ್ಮನಂತೆ ನಾನಿದ್ದೇನೆ. ಉದ್ಯೋಗ ಸೃಷ್ಟಿ ಮಾಡುವ ವಿಷಯದ ಬಗ್ಗೆ ಬಹಳ ಸೂಕ್ಷ್ಮವಾಗಿ ಗಮನಿಸಿ ಮಾಡುತ್ತೇನೆ ಎಂದು ಮಹಿಳೆಯನ್ನು ಸಮಾಧಾನಪಡಿಸಿದ್ದರು. ಅಲ್ಲದೆ ಕೆಸ್ತೂರು ಗ್ರಾಮದಲ್ಲಿ ಪ್ರಚಾರ ಮಾಡುತ್ತಿದ್ದ ವೇಳೆ ನಾನೇನಾದರೂ ಕೆಲಸ ಮಾಡಲಿಲ್ಲ ಅಂದರೆ ಕುತ್ತಿಗೆ ಪಟ್ಟಿ ಹಿಡಿದು ಕೇಳಿ ಎಂದು ಮಹಿಳೆಯೊಬ್ಬರು ತಮ್ಮ ಅಳಲು ತೋಡಿಕೊಂಡ ಸಂದರ್ಭದಲ್ಲಿ ಹೇಳಿದ್ದಾರೆ.