Tag: communal violence

  • ದೇಶದಲ್ಲೇ ಅತ್ಯುತ್ತಮವಾದ ಕಾನೂನು ಸುವ್ಯವಸ್ಥೆ ಕೇರಳದಲ್ಲಿದೆ – ಪಿಣರಾಯಿ ವಿಜಯನ್‌

    ದೇಶದಲ್ಲೇ ಅತ್ಯುತ್ತಮವಾದ ಕಾನೂನು ಸುವ್ಯವಸ್ಥೆ ಕೇರಳದಲ್ಲಿದೆ – ಪಿಣರಾಯಿ ವಿಜಯನ್‌

    ತಿರುವನಂತಪುರಂ: ದೇಶದಲ್ಲೇ ಅತ್ಯುತ್ತಮವಾದ ಕಾನೂನು ಸುವ್ಯವಸ್ಥೆ (Kerala Law And Order) ಕೇರಳದಲ್ಲಿದೆ. ಕಳೆದ ಕೆಲ ವರ್ಷಗಳಿಂದ ಯಾವುದೇ ಕೋಮುಗಲಭೆಗಳು ಕೇರಳದಲ್ಲಿ ನಡೆದಿಲ್ಲ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್‌ (Pinarayi Vijayan) ಹೇಳಿದ್ದಾರೆ.

    ಖಾಸಗಿ ವಾಹಿನಿಯೊಂದರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದಲ್ಲೇ ಅತ್ಯುತ್ತಮವಾದ ಕಾನೂನು ವ್ಯವಸ್ಥೆಯನ್ನು ನಾವು ಹೊಂದಿದ್ದೇವೆ. ಕಳೆದ ಕೆಲ ವರ್ಷಗಳಿಂದ ಒಂದೇ ಒಂದು ಕೋಮುಗಲಭೆ (Communal Violence), ಹಿಂಸಾಚಾರವೂ ಅಲ್ಲಿ ನಡೆದಿಲ್ಲ ಎಂದು ಒತ್ತಿ ಹೇಳಿದ್ದಾರೆ. ಇದನ್ನೂ ಓದಿ: ಗುರುತಿನ ಪುರಾವೆಗಳಿಲ್ಲದೇ 2,000 ರೂ. ನೋಟುಗಳ ವಿನಿಮಯ – ತುರ್ತು ವಿಚಾರಣೆಗೆ ನಿರಾಕರಿಸಿದ ಸುಪ್ರೀಂ

    ಇತ್ತೀಚೆಗಷ್ಟೇ ಕೇರಳ ದೇಶದ ಮೊದಲ ಇ-ಆಡಳಿತ (E Governance) ರಾಜ್ಯ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದು, ಮೈಲಿಗಲ್ಲು ಸಾಧಿಸಿದೆ. ಇ-ಆಡಳಿತದ ಮೂಲಕ ನಾವು ಪಾರದರ್ಶಕತೆ, ದಕ್ಷತೆ ಮತ್ತು ಸಾರ್ವಜನಿಕ ಒಳಗೊಳ್ಳುವಿಕೆಯನ್ನು ಸಾಧಿಸುತ್ತಿದ್ದೇವೆ. ತಡೆರಹಿತ ಸಾರ್ವಜನಿಕ ಸೇವೆಗಳನ್ನು ಕಲ್ಪಿಸಲು ತಂತ್ರಜ್ಞಾನವನ್ನ ಸಮರ್ಪಕವಾಗಿ ಬಳಸಿಕೊಳ್ಳುತ್ತಿದ್ದೇವೆ. 900ಕ್ಕೂ ಹೆಚ್ಚು ಸೇವೆಗಳು ಆನ್‌ಲೈನ್‌ನಲ್ಲೇ ಲಭ್ಯವಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮಣಿಪುರದಲ್ಲಿ ಕೋಮು ಸಂಘರ್ಷ: ಅನಧಿಕೃತ ಶಸ್ತ್ರಾಸ್ತ್ರಗಳನ್ನು ಕೂಡಲೇ ಒಪ್ಪಿಸಿ – ದಂಗೆಕೋರರಿಗೆ ಅಮಿತ್‌ ಶಾ ವಾರ್ನಿಂಗ್‌

    ಅಲ್ಲದೇ ಈಗಾಗಲೇ ಸರ್ಕಾರಿ ಕಚೇರಿಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ 2 ಸಾವಿರ ವೈಫೈ ಹಾಟ್‌ಸ್ಪಾಟ್‌ (WiFi Hotspots) ಸ್ಥಾಪಿಸಲಾಗಿದೆ. ಇದರೊಂದಿಗೆ ಇನ್ನೂ 2,000 ಹಾಟ್‌ಸ್ಪಾಟ್‌ಗಳನ್ನ ಸ್ಥಾಪಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

  • ಭಾರತವು ಶ್ರೀಲಂಕಾದಂತೆ ಕಾಣುತ್ತಿದೆ: ರಾಹುಲ್ ಗಾಂಧಿ

    ಭಾರತವು ಶ್ರೀಲಂಕಾದಂತೆ ಕಾಣುತ್ತಿದೆ: ರಾಹುಲ್ ಗಾಂಧಿ

    ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಪೆಟ್ರೋಲ್ ಬೆಲೆ, ನಿರುದ್ಯೋಗ ಮತ್ತು ಕೋಮು ಹಿಂಸಾಚಾರದ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಭಾರತವು ಶ್ರೀಲಂಕಾದಂತೆ ಭಾಸವಾಗುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    BRIBE

    ಈ ಕುರಿತು ಭಾರತ ಮತ್ತು ಶ್ರೀಲಂಕಾದ ಪರಿಸ್ಥಿತಿಯನ್ನು ತುಲನೆ ಮಾಡುವ ಗ್ರಾಫ್‌ವೊಂದನ್ನು ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ದೇಶದಲ್ಲಿ ಹೆಚ್ಚುತ್ತಿರುವ ಪೆಟ್ರೋಲ್ ಬೆಲೆ, ನಿರುದ್ಯೋಗ ಮತ್ತು ಕೋಮು ಹಿಂಸಾಚಾರದ ಬಗ್ಗೆ ತುಲನಾತ್ಮಕವಾಗಿ ಮಾಹಿತಿ ನೀಡಿದ್ದಾರೆ. ಜನರನ್ನು ತಬ್ಬಿಬ್ಬುಗೊಳಿಸುವುದರಿಂದ ಸತ್ಯಗಳು ಬದಲಾಗುವುದಿಲ್ಲ. ಭಾರತವು ಶ್ರೀಲಂಕಾದಂತೆ ಕಾಣುತ್ತದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಮೋದಿ ಎಂದಿಗೂ ನಾನೇ ನೀಡಿದ್ದು ಎಂದು ಹೇಳಿರಲಿಲ್ಲ: ಸಿದ್ದುಗೆ ಟಾಂಗ್ ನೀಡಿದ ಸಿಟಿ ರವಿ

    ಸಶಸ್ತ್ರ ಸಂಘರ್ಷದ ಸ್ಥಳ, ಈವೆಂಟ್ ಡೇಟಾ ಯೋಜನೆ, ಲೋಕಸಭೆಯ ನಕ್ಷತ್ರರಹಿತ ಪ್ರಶ್ನೆ, ಸಿಎಮ್‍ಐಇ, ಪೆಟ್ರೋಲಿಯಂ ಯೋಜನೆ, ವಿಶ್ಲೇಷಣೆ ಕೋಶ ಮತ್ತು ಶ್ರೀಲಂಕಾದ ಸೆಂಟ್ರಲ್ ಬ್ಯಾಂಕ್ ಸೇರಿದಂತೆ ವಿವಿಧ ಮೂಲಗಳನ್ನು ಉಲ್ಲೇಖಿಸಿ ಭಾರತ ಮತ್ತು ಶ್ರೀಲಂಕಾದ ಒಂದೇ ರೀತಿಯ ಚಿತ್ರಗಳನ್ನು ಗ್ರಾಫ್ ಹೊಂದಿದೆ. ಇದನ್ನೂ ಓದಿ: ಅಪ್ಪು ಹುಟ್ಟುಹಬ್ಬಕ್ಕೆ ಕನಸಿನ ‘ಗಂಧದಗುಡಿ’ ಫಸ್ಟ್ ಲುಕ್ ರಿಲೀಸ್

    ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾದಲ್ಲಿ ಕಳೆದ ಕೆಲ ದಿನಗಳಿಂದ ಸರ್ಕಾರದ ವಿರುದ್ಧ ಭಾರೀ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಇತ್ತೀಚಿನ ಹಿಂಸಾಚಾರದಲ್ಲಿ 8 ಮಂದಿ ಮೃತಪಟ್ಟಿದ್ದರು. ಇದರ ಬೆನ್ನಲ್ಲೇ, ಮಹಿಂದಾ ರಾಜಪಕ್ಸ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

  • ಮುಸ್ಲಿಂ- ಬೌದ್ಧರ ನಡುವೆ ಹಿಂಸಾಚಾರ – ಶ್ರೀಲಂಕಾದಲ್ಲಿ 10 ದಿನ ತುರ್ತು ಪರಿಸ್ಥಿತಿ ಘೋಷಣೆ

    ಮುಸ್ಲಿಂ- ಬೌದ್ಧರ ನಡುವೆ ಹಿಂಸಾಚಾರ – ಶ್ರೀಲಂಕಾದಲ್ಲಿ 10 ದಿನ ತುರ್ತು ಪರಿಸ್ಥಿತಿ ಘೋಷಣೆ

    ಕೊಲೊಂಬೊ: ಕ್ಯಾಂಡಿ ಜಿಲ್ಲೆಯಲ್ಲಿ ಬೌದ್ಧರು ಮತ್ತು ಮುಸ್ಲಿಂ ಸಮುದಾಯದ ನಡುವೆ ಭಾರೀ ಪ್ರಮಾಣ ಹಿಂಸಾಚಾರ ನಡೆದ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ 10 ದಿನಗಳ ಕಾಲ ತುರ್ತು ಪರಿಸ್ಥಿತಿಯನ್ನು ಶ್ರೀಲಂಕಾ ಸರ್ಕಾರ ಘೋಷಿಸಿದೆ.

    ಮುಸ್ಲಿಮರು ಬಲವಂತವಾಗಿ ಮತಾಂತರ ಮಾಡುತ್ತಿದ್ದಾರೆ ಹಾಗೂ ಬೌದ್ಧರ ಪವಿತ್ರ ಸ್ಥಳಗಳನ್ನು ಧ್ವಂಸ ಮಾಡುತ್ತಿದ್ದಾರೆ ಎಂದು ಕೆಲ ಬೌದ್ಧ ಸಂಘಟನೆಗಳು ಈ ಹಿಂದೆ ಆರೋಪಿಸಿತ್ತು. ಈ ವಿಚಾರದ ಬಗ್ಗೆ ಒಂದು ಕಳೆದ ಒಂದು ವರ್ಷದಿಂದ ಎರಡು ಸಮುದಾಯಗಳ ನಡುವೆ ಘರ್ಷಣೆಗಳು ನಡೆಯುತಿತ್ತು.

    ಈ ನಡುವೆ ಮ್ಯಾನ್ಮಾರ್ ನ ರೋಹಿಂಗ್ಯಾ ಮುಸ್ಲಿಮರಿಗೆ ಶ್ರೀಲಂಕಾದಲ್ಲಿ ಆಶ್ರಯ ನೀಡಬಾರದು ಎಂದು ಬೌದ್ಧ ಧರ್ಮದವರು ಪ್ರತಿಭಟಿಸುತ್ತಿದ್ದರು. ಈ ವಿಚಾರದ ಬಗ್ಗೆ ನಡೆಯುತ್ತಿದ್ದ ಜಗಳ ಈಗ ತೀವ್ರ ಸ್ವರೂಪ ಪಡೆದು ಹಿಂಸಾಚಾರಕ್ಕೆ ತಿರುಗಿದೆ.

    ಹಿಸಾಂಚಾರದ ಹಿನ್ನೆಲೆಯಲ್ಲಿ ಶ್ರೀಲಂಕಾ ಸರ್ಕಾರ ಇಂದು ವಿಶೇಷ ಸಂಪುಟ ಸಭೆ ನಡೆಸಿ, ಕೋಮುಗಲಭೆ ತಡೆಯುವ ನಿಟ್ಟಿನಲ್ಲಿ 10 ದಿನಗಳ ಕಾಲ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ಅಷ್ಟೇ ಅಲ್ಲದೇ ಫೇಸ್‍ಬುಕ್ ಮೂಲಕ ಹಿಂಸೆಗೆ ಪ್ರಚೋದನೆ ನೀಡಿದವರ ವಿರುದ್ಧವೂ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಸಂಪುಟ ಸಭೆ ನಿರ್ಧರಿಸಿದೆ.

    ಭಾರತ ಮತ್ತು ಶ್ರೀಲಂಕಾ ನಡುವೆ ಇಂದು ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ಮೊದಲ ಟಿ20 ಪಂದ್ಯ ನಡೆಯುತ್ತಿದ್ದು, ಭಾರೀ ಪ್ರಮಾಣದಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.

     

  • ಡಿವಿಎಸ್, ಕರಂದ್ಲಾಜೆಯಿಂದ ಕೋಮು ಗಲಭೆ: ರಮಾನಾಥ ರೈ

    ಡಿವಿಎಸ್, ಕರಂದ್ಲಾಜೆಯಿಂದ ಕೋಮು ಗಲಭೆ: ರಮಾನಾಥ ರೈ

    ಮಂಗಳೂರು: ಕರಾವಳಿ ಭಾಗದಲ್ಲಿ ಕೋಮುಗಲಭೆ ಸೃಷ್ಟಿಯಾಗುವುದಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಕೇಂದ್ರ ಸಚಿವ ಸದಾನಂದಗೌಡ ಕಾರಣ ಅಂತ ಅರಣ್ಯ ಸಚಿವ ರಮಾನಾಥ ರೈ ಆರೋಪಿಸಿದ್ದಾರೆ.

    ಕರಾವಳಿಯಲ್ಲಿ ಕೋಮು ಗಲಭೆ ವಿಚಾರವಾಗಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕರಾವಳಿ ಭಾಗದಲ್ಲಿ ಕೋಮುಗಲಭೆ ಸೃಷ್ಟಿಯಾಗೋದಕ್ಕೆ ಶೋಭಾ ಕರಂದ್ಲಾಜೆ, ಸದಾನಂದಗೌಡ ಕಾರಣ. ಶೋಭಾ ಕರಂದ್ಲಾಜೆ ಚಿಕ್ಕಮಗಳೂರು ಹಾಗೂ ಉಡುಪಿ ಸಂಸದರು. ಸದಾನಂದಗೌಡರು ಬೆಂಗಳೂರು ಸಂಸದರು. ಅವರು ಅಲ್ಲಿಗೆ ಯಾಕೆ ಹೋಗಬೇಕು ಎಂದು ಪ್ರಶ್ನಿಸಿದರು.

    ಸೂತಕದ ಮನೆಯಲ್ಲಿ ವಿಜಯೋತ್ಸವ ಮಾಡೋದು ಎಷ್ಟು ಸರಿ? ಕರಾವಳಿ ಭಾಗದಲ್ಲಿ ಕೋಮುಗಲಭೆ ನಿವಾರಣೆಗೆ ಶಾಂತಿ ಸಭೆ ಕರೆದಿದ್ದೇವೆ. ಇನ್ನೊಂದು ವಾರದಲ್ಲಿ ಶಾಂತಿ ಸಭೆ ನಡೆಸಲಾಗುವುದು. ಶಾಂತಿ ಸಭೆಗೆ ಬಿಜೆಪಿ, ಆರ್‍ಎಸ್‍ಎಸ್ ಮುಖಂಡರನ್ನೂ ಆಹ್ವಾನಿಸಿದ್ದೇವೆ. ಮಂಗಳೂರಿನಲ್ಲಿ ಶಾಂತಿ ಸಭೆ ಕರೆದಿದ್ದೇವೆ. ಎಲ್ಲರ ಜೊತೆಗೂ ಚರ್ಚೆ ನಡೆಸಿ ಸೌಹಾರ್ದ ವಾತಾವರಣ ರೂಪಿಸಲು ಮನವಿ ಮಾಡಿಕೊಳ್ತೇವೆ ಅಂದರು.

    ಇದನ್ನೂ ಓದಿ: ಕೇಂದ್ರಕ್ಕೆ ಅವಕಾಶ ಕೊಟ್ರೇ ಬರೀ 24 ಗಂಟೆಯಲ್ಲಿ ಕರಾವಳಿ ಶಾಂತವಾಗಿರಿಸ್ತೀವಿ- ಸಿಎಂಗೆ ಡಿವಿಎಸ್ ಬಹಿರಂಗ ಸವಾಲು

  • ಫೇಸ್‍ಬುಕ್ ಪೋಸ್ಟ್ ನಿಂದ ಪಶ್ಚಿಮ ಬಂಗಾಳದಲ್ಲಿ ಕೋಮು ಗಲಭೆ, ಪರಿಸ್ಥಿತಿ ಉದ್ವಿಗ್ನ

    ಫೇಸ್‍ಬುಕ್ ಪೋಸ್ಟ್ ನಿಂದ ಪಶ್ಚಿಮ ಬಂಗಾಳದಲ್ಲಿ ಕೋಮು ಗಲಭೆ, ಪರಿಸ್ಥಿತಿ ಉದ್ವಿಗ್ನ

    ಕೋಲ್ಕತ್ತಾ: ಫೇಸ್‍ಬುಕ್‍ ನಲ್ಲಿ 17 ವರ್ಷದ ವಿದ್ಯಾರ್ಥಿಯೊಬ್ಬ ಧರ್ಮನಿಂದನೆ ಮಾಡಿದ ಆರೋಪದ ಮೇಲೆ ಪಶ್ಚಿಮ ಬಂಗಾಳದ ನಾರ್ತ್ 24 ಪರಗಣಾಸ್ ಜಿಲ್ಲೆಯ ಹಲವು ಭಾಗಗಳಲ್ಲಿ ಕೋಮು ಗಲಭೆ ನಡೆದಿದ್ದು, ಇಂದು ಕೂಡ ಪರಿಸ್ಥಿತಿ ಉದ್ವಿಗ್ನವಾಗಿದೆ ಎಂದು ವರದಿಯಾಗಿದೆ.

    ಗಲಭೆ ಹಿನ್ನೆಲೆಯಲ್ಲಿ ರಾಜ್ಯದ ಮನವಿ ಮೇರೆಗೆ ಮಂಗಳವಾರದಂದು ಕೇಂದ್ರದಿಂದ 400 ಪ್ಯಾರಾಮಿಲಿಟರಿ ಬಿಎಸ್‍ಎಫ್ ಟ್ರೂಪ್‍ಗಳನ್ನು ಕಳಿಸಲಾಗಿದೆ.
    ಕೆಲವು ಪ್ರದೇಶಗಳಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದ್ದು, ಸೆಕ್ಷನ್ 144 ಜಾರಿ ಮಾಡಲಾಗಿದೆ.

    ಶುಕ್ರವಾರದಂದು 17 ವರ್ಷದ ವಿದ್ಯಾರ್ಥಿ ಪ್ರಾಫೆಟ್ ಮೊಹಮ್ಮದ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ ಹಿನ್ನೆಲೆಯಲ್ಲಿ ಈ ಗಲಭೆ ನಡೆದಿದೆ. ವಿದ್ಯಾರ್ಥಿಯ ಪೋಸ್ಟ್ ವೈರಲ್ ಆದ ಬಳಿಕ ಸೋಮವಾರದಂದು ಜನರ ಗುಂಪು ಆತನ ಮನಗೆ ನುಗ್ಗಿ ಗಲಾಟೆ ಮಾಡಿದ್ದಾರೆ. ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ. ಆದ್ರೆ ಕೋಲ್ಕತ್ತಾದಿಂದ 70 ಕಿ.ಮೀ ದೂರದಲ್ಲಿರುವ ಬದುರಿಯಾ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಗಲಾಟೆ ಹಿಂಸಾತ್ಮಕ ರೂಪ ಪಡೆದಿದೆ. ಬಷೀರ್‍ಹತ್ ಹಾಗೂ ಬರಾಸತ್ ನಲ್ಲಿ ಜನರು ಪ್ರತಿಭಟನೆ ಮಾಡಿದ್ದು ವಿದ್ಯಾರ್ಥಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದ್ದಾರೆ.