Tag: Communal conflict

  • ನಾವು ಕೈಕಟ್ಟಿ ಕೂರಲ್ಲ, ದಕ್ಷಿಣ ಕನ್ನಡ ಜಿಲ್ಲೆ ಶಾಂತಿಯಿಂದಿರಬೇಕು ಅಷ್ಟೇ: ಪರಮೇಶ್ವರ್

    ನಾವು ಕೈಕಟ್ಟಿ ಕೂರಲ್ಲ, ದಕ್ಷಿಣ ಕನ್ನಡ ಜಿಲ್ಲೆ ಶಾಂತಿಯಿಂದಿರಬೇಕು ಅಷ್ಟೇ: ಪರಮೇಶ್ವರ್

    – ರಹಿಮಾನ್ ಹತ್ಯೆ ಕೇಸ್‌ಬಗ್ಗೆ ಗೃಹ ಸಚಿವರ ಪ್ರತಿಕ್ರಿಯೆ

    ಬೆಂಗಳೂರು: ನಾವು ಕೈಕಟ್ಟಿ ಕೂರಲ್ಲ. ಒಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಶಾಂತಿಯಿಂದಿರಬೇಕು ಎಂದು ಗೃಹಸಚಿವ ಜಿ ಪರಮೇಶ್ವರ್ (G Parameshwar) ಹೇಳಿದರು.

    ಬೆಂಗಳೂರಿನಲ್ಲಿ (Bengalueu) ಮಾಧ್ಯಮದವರೊಂದಿಗೆ ಮಾತನಾಡಿದ ಅವರು ರಹಿಮಾನ್ ಹತ್ಯೆ ಪ್ರಕರಣ ಹಾಗೂ ಪೊಲೀಸ್ ಆಯುಕ್ತರ ವರ್ಗಾವಣೆ ಬಗ್ಗೆ ಪ್ರತಿಕ್ರಿಯೆ ನೀಡಿದರು. ಕರಾವಳಿ ಘಟನೆಯನ್ನ ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಇದನ್ನು ಸರ್ಕಾರ ಸಹಿಸುವುದಿಲ್ಲ. ಆರ್ಥಿಕ, ಶೈಕ್ಷಣಕವಾಗಿ ದಕ್ಷಿಣ ಕನ್ನಡ (Dakshina Kannada) ಜಿಲ್ಲೆ ಮಾದರಿಯಾಗಿದೆ. ಜಿಲ್ಲೆಯ ಜನರು ಶಾಂತಿಯಿಂದ ಇರಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ಹೃತಿಕ್ ರೋಷನ್‌ಗೆ ಪೃಥ್ವಿರಾಜ್ ಸುಕುಮಾರನ್ ಆ್ಯಕ್ಷನ್ ಕಟ್?

    ನಾವು ಯಾರನ್ನೂ ಸುಮ್ಮನೆ ಬಿಡುವುದಿಲ್ಲ. ಪ್ರಜ್ಞಾವಂತ ಸಮುದಾಯ ಎಂದು ಅಲ್ಲಿನ ಸಮುದಾಯದವರ ಜೊತೆ ಮಾತನಾಡಿ ಬಂದಿದ್ದೇನೆ. ಮತ್ತೆ ಅದೇ ರೀತಿ ಆದರೆ ಹೇಗೆ? ನಾವು ಯಾವುದೇ ಕಾರಣಕ್ಕೂ ಕೈಕಟ್ಟಿ ಕೂರುವುದಿಲ್ಲ. ಜನರು ನಮಗೆ ಸಹಕಾರ ಕೊಡಬೇಕು. ಹಿಂದೆಯೇ ಅವರನ್ನ ಬದಲಿಸಿ ಇವರನ್ನ ಬದಲಿಸಿ ಎಂಬ ಒತ್ತಾಯ ಮಾಡಿದ್ದರು. ಅವರು ಹೇಳಿದ ಕೂಡಲೇ ಮಾಡಬಾರದು ಅಂತ ಸುಮ್ಮನಿದ್ದೆವು. ಈಗ ಅಧಿಕಾರಿಗಳನ್ನು ಬದಲಿಸಿದ್ದೇವೆ ಎಂದರು. ಇದನ್ನೂ ಓದಿ: ದ.ಕನ್ನಡ | ಭಾರೀ ಮಳೆಗೆ ಗುಡ್ಡ, ಮನೆ ಕುಸಿತ – ಬಾಲಕಿ ಸೇರಿ ಇಬ್ಬರು ಸಾವು

    ಕರಾವಳಿಯಲ್ಲಿ ನಡೆಯುತ್ತಿರುವ ಘಟನೆಗಳನ್ನು ಸರ್ಕಾರ ಬಹಳ ಗಂಭೀರವಾಗಿ ತೆಗೆದುಕೊಂಡಿದೆ. ಯಾರು ಏನೇ ಹೇಳಿದರು ನಾವು ಸಹಿಸುವುದಿಲ್ಲ. ಯಾವ ಕಾರಣಕ್ಕೂ ಜಿಲ್ಲೆಯಲ್ಲಿ ಶಾಂತಿಯನ್ನು ಕದಡಲು ಬಿಡುವುದಿಲ್ಲ. ಈ ರೀತಿ ಹತ್ಯೆಗಳು ನಡೆಯುತ್ತಲೇ ಇದ್ದರೆ ಸರ್ಕಾರ ಸಹಿಸೋಕೆ ಆಗುತ್ತಾ? ಇಲ್ಲ ನಾವು ಸಹಿಸುವುದಿಲ್ಲ. ಅನಿವಾರ್ಯವಾಗಿ ಕೆಲವು ಅಧಿಕಾರಿಗಳನ್ನ ಬದಲಿಸಿದ್ದೇವೆ. ಈಗ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇವೆ. ನಾವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಅಬ್ದುಲ್‌ ರಹಿಮಾನ್‌ ಹತ್ಯೆ ಕೇಸ್‌ | ಮತ್ತಿಬ್ಬರು ಆರೋಪಿಗಳು ಅರೆಸ್ಟ್‌ – ಹತ್ಯೆಗೆ ಕಾರಣವೇ ಇನ್ನೂ ಸಸ್ಪೆನ್ಸ್!‌

    ಗುರುವಾರ ಒಂದು ಸಮುದಾಯದವರು ಬಹಳ ಉದ್ವೇಗದಿಂದ ಮಾತನಾಡಿದ್ದಾರೆ. ಮಾತಾಡಿದರೆ ತೊಂದರೆ ಇಲ್ಲ ಇಂತಹ ಸಂದರ್ಭಗಳಲ್ಲಿ ಮಾತನಾಡುತ್ತಾರೆ. ಪ್ರಚೋದನಕಾರಿ ಹೇಳಿಕೆಗಳಿಗೆ ಖಂಡಿತ ಕಡಿವಾಣ ಹಾಕುತ್ತೇವೆ. ಇಂತಹ ಘಟನೆಗಳ ಮೂಲ ಹುಡುಕುತ್ತಿದ್ದೇವೆ ಎಂದರು. ಇದನ್ನೂ ಓದಿ: RCB ಟ್ರೋಫಿ ಗೆದ್ದರೆ ಆ ದಿನವನ್ನ ʻಆರ್‌ಸಿಬಿ ಫ್ಯಾನ್ಸ್‌ ಹಬ್ಬʼದ ದಿನವನ್ನಾಗಿ ಘೋಷಿಸಿ – ಸಿಎಂಗೆ ವಿಶೇಷ ಪತ್ರ!

    ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ (Dinesh Gundu Rao) ಮೊದಲಿನಿಂದಲೂ ಉಸ್ತುವಾರಿಯ ಬದಲಾವಣೆ ಕೇಳುತ್ತಿದ್ದಾರೆ. ದಕ್ಷಿಣ ಕನ್ನಡ ದೂರವಾಗುತ್ತದೆ. ಅಲ್ಲಿ ಸಮೀಪ ಇರಿವವರಿಗೆ, ಸ್ಥಳೀಯರಿಗೆ ಯಾರಿಗಾದರು ಜವಾಬ್ದಾರಿ ಕೊಡಿ ಎನ್ನುತ್ತಿದ್ದಾರೆ. ಈ ವಿಚಾರವೆಲ್ಲ ಸಿಎಂ ವಿವೇಚನೆಗೆ ಬಿಟ್ಟಿದ್ದು ಎಂದು ಹೇಳಿದರು. ಇದನ್ನೂ ಓದಿ: ಸಲೂನ್‌ಗೆ ನುಗ್ಗಿ ಲೇಡಿ ರೌಡಿ ಗ್ಯಾಂಗ್‌ನಿಂದ ದಾಂಧಲೆ – ಮೂವರು ಅರೆಸ್ಟ್‌

    ಆ್ಯಂಟಿ ಕಮ್ಯುನಲ್ ಫೋರ್ಸ್ ವಿಚಾರವಾಗಿ ಪ್ರತಿಕ್ರಿಯಿಸಿ, ಇದರ ರಚನೆಗೆ ಸ್ವಲ್ಪ ಸಮಯ ಬೇಕಿದೆ. ಡಿಸಿ ಅವರ ಜೊತೆ ಚರ್ಚೆ ಮಾಡಿದ್ದೇವೆ. ಎಲ್ಲಿ ಯಾರಿಗೆ, ಯಾವ ಅಧಿಕಾರ ಕೊಡಬೇಕು ಎಂದು ತೀರ್ಮಾನ ಮಾಡುತ್ತೇವೆ. ಕೆಲವೊಂದು ವಿಚಾರದಲ್ಲಿ ಕಠಿಣವಾದ ಸೂಚನೆ ಕೊಡಲಾಗಿದೆ ಎಂದರು.

  • ಹಾಲು ಮಾರಾಟಗಾರನ ಹತ್ಯೆ – ಮೋದಿ ಭೇಟಿ ಸಮಯದಲ್ಲೇ ಗುಜರಾತ್‍ನಲ್ಲಿ ಗುಂಪು ಘರ್ಷಣೆ

    ಹಾಲು ಮಾರಾಟಗಾರನ ಹತ್ಯೆ – ಮೋದಿ ಭೇಟಿ ಸಮಯದಲ್ಲೇ ಗುಜರಾತ್‍ನಲ್ಲಿ ಗುಂಪು ಘರ್ಷಣೆ

    ಗಾಂಧೀನಗರ: ಗುಜರಾತ್‍ನ ಭುಜ್‍ನಲ್ಲಿ ಸ್ಥಳೀಯ ವ್ಯಕ್ತಿಯೊಬ್ಬನ ಹತ್ಯೆಗೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಇಂದು ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದು, ಇದಕ್ಕೂ ಮುನ್ನವೇ ಈ ಹಿಂಸಾಚಾರ ಕೃತ್ಯ ನಡೆದಿದೆ.

    ಭುಜ್‍ನ ಮಾದಾಪುರ ಪ್ರದೇಶದಲ್ಲಿ ಹಾಲು ಮಾರಾಟ ಮಾಡುತ್ತಿದ್ದ ಯುವಕನನ್ನು ಚಾಕುವಿನಿಂದ ಇರಿದು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಈ ಸುದ್ದಿ ಎಲ್ಲೆಡೆ ಹಬ್ಬುತ್ತಿದ್ದಂತೆಯೇ, ರೊಚ್ಚಿಗೆದ್ದ ಗುಂಪುಗಳು ಬೀದಿಗಿಳಿದು ಮಸೀದಿ ಮತ್ತು ಅಂಗಡಿಗಳನ್ನು ಧ್ವಂಸಗೊಳಿಸಿದೆ. ಇದೀಗ ಪರಿಸ್ಥಿತಿ ಹತೋಟಿಗೆ ತಂದು ಶಾಂತಿ ಸುವ್ಯವಸ್ಥೆ ಕಾಪಾಡಲು ಹಿರಿಯ ಅಧಿಕಾರಿಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಇದನ್ನೂ ಓದಿ: ವಿಶ್ವದ ಜನಪ್ರಿಯ ನಾಯಕರ ನಾಯಕರಲ್ಲಿ ಮೋದಿ ನಂಬರ್ 1

    ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಸುಳ್ಳು ಸುದ್ದಿ ಮತ್ತು ತಪ್ಪು ಮಾಹಿತಿ ಹಬ್ಬಿಸುವವರಿಗೆ ಕಿವಿ ಕೊಡದೆ ಜನರು ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಕೋಮು ಗಲಭೆಯ ಹಿನ್ನೆಲೆ ಇದೀಗ ಪೊಲೀಸರು ಎರಡೂ ಗುಂಪುಗಳ ಮೇಲೆ ದೂರು ದಾಖಲಿಸಿಕೊಂಡಿದ್ದು, ಸದ್ಯ ಈ ಸಂಬಂಧ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಭಾರತದಲ್ಲೇ ಮೊದಲ ಬಾರಿಗೆ ತಯಾರಾಯ್ತು ಎಕೆ-630ನ ಮದ್ದುಗುಂಡು

    Live Tv
    [brid partner=56869869 player=32851 video=960834 autoplay=true]