Tag: communal clash

  • ಮಂಡ್ಯ | ಸಾಮೂಹಿಕ ಗಣೇಶ ವಿಸರ್ಜನೆ – ಇಂದು, ನಾಳೆ ನಾಗಮಂಗಲದಲ್ಲಿ ನಿಷೇಧಾಜ್ಞೆ

    ಮಂಡ್ಯ | ಸಾಮೂಹಿಕ ಗಣೇಶ ವಿಸರ್ಜನೆ – ಇಂದು, ನಾಳೆ ನಾಗಮಂಗಲದಲ್ಲಿ ನಿಷೇಧಾಜ್ಞೆ

    – ಪೊಲೀಸ್‌ ಸರ್ಪಗಾವಲಿನಲ್ಲಿ ಮೂರ್ತಿ ವಿಸರ್ಜನೆ ಕಾರ್ಯಕ್ರಮ
    – ಕಳೆದ ವರ್ಷದ ಕೋಮುಗಲಭೆಯಿಂದ ಎಚ್ಚೆತ್ತ ಪೊಲೀಸ್‌ ಇಲಾಖೆ

    ಮಂಡ್ಯ: ಇಂದು ರಾತ್ರಿ (ಸೆ.4) ಮಂಡ್ಯ‌ ಜಿಲ್ಲೆಯ ನಾಗಮಂಗಲ ಪಟ್ಟಣದಲ್ಲಿ ಸಮೂಹಿಕ ಗಣೇಶ ವಿಸರ್ಜನೆ (Ganesha Visarjan0 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಳೆದ ವರ್ಷ ಇಲ್ಲಿ ಕೋಮು ಗಲಭೆ ಆದ ಹಿನ್ನೆಲೆ ಎಚ್ಚೆತ್ತುಕೊಂಡಿರುವ ಪೊಲೀಸ್‌ ಇಲಾಖೆ ಇಂದು ಮತ್ತು ನಾಳೆ ನಾಗಮಂಗಲ (Nagamangala) ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿ ಮಾಡಿದೆ.

    ಕಳೆದ ವರ್ಷ ನಾಗಮಂಗಲ ಪಟ್ಟಣದ ಬದರಿಕೊಪ್ಪಲಿನಲ್ಲಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯ ವೇಳೆ ಕಲ್ಲು ಹಾಗೂ ಪೆಟ್ರೋಲ್ ಬಾಂಬ್‌ಗಳನ್ನ (Petrol Bomb) ಎಸೆಯಲಾಗಿತ್ತು. ಬಳಿಕ ಕೋಮುಗಲಭೆ ಸೃಷ್ಟಿಯಾಗಿ ಅಪಾರ ಪ್ರಮಾಣ ಆಸ್ತಿಪಾಸ್ತಿ ನಷ್ಟವಾಗಿತ್ತು. ಈ ಬಾರಿ ಆ ರೀತಿಯ ಘಟನೆ ಮರುಕಳಿಸಬಾರದು ಎಂದು ಮಂಡ್ಯ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ. ಇದನ್ನೂ ಓದಿ: ಮಂಡ್ಯ | ಆಸ್ತಿಗಾಗಿ ಅಪ್ಪನನ್ನೇ ಟ್ರ್ಯಾಪ್‌ ಮಾಡಲು ಹೋಗಿ ತಗ್ಲಾಕೊಂಡ ಮಗ

    ಇಂದು ನಾಗಮಂಗಲ ಪಟ್ಟಣದ ಹಲವೆಡೆ ಪ್ರತಿಷ್ಠಾಪನೆ ಮಾಡಿರುವ ಗಣೇಶ ಮೂರ್ತಿಗಳನ್ನು ಇಂದು ಸಾಮೂಹಿಕವಾಗಿ ವಿಸರ್ಜನೆ ಮಾಡಲಾಗುತ್ತಿದೆ. ಹೀಗಾಗಿ ಇಂದು ಮತ್ತು ನಾಳೆ ನಾಗಮಂಗಲ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಅಲ್ಲದೇ ನಾಗಮಂಗಲ ಪಟ್ಟಣ ಸೇರಿದಂತೆ ಸುತ್ತಮುತ್ತ ಎರಡು ದಿನಗಳ ಕಾಲ ಮದ್ಯ ಮಾರಟ ನಿಷೇಧ ಮಾಡಲಾಗಿದೆ. ಇದನ್ನೂ ಓದಿ: ಮೊದಲ ಬಾರಿಗೆ ಕೌನ್ಸಿಲಿಂಗ್‌ ಮೂಲಕ ಪಿಡಿಒ ವರ್ಗಾವಣೆ ಪ್ರಕ್ರಿಯೆ: ಪ್ರಿಯಾಂಕ್ ಖರ್ಗೆ

    ಇನ್ನೂ ಪೊಲೀಸ್ ಇಲಾಖೆಯಿಂದಲೂ ಸಹ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಲಾಗಿದೆ. ಈಗಾಗಲೇ ಗಣಪತಿ ಮೆರವಣಿಗೆ ಹೋಗುವ ದಾರಿ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಪೊಲೀಸರು ಪಥ ಸಂಚನ ನಡೆಸಿದ್ದಾರೆ. ಇನ್ನೂ‌ ಮೆರವಣಿಗೆಯಲ್ಲಿ ಬಿಗಿ ಭದ್ರತೆ ಇದ್ದು, ಇಡೀ ಮೆರವಣಿಗೆ ಡ್ರೋನ್‌ ಕ್ಯಾಮರಾದ ಕಣ್ಗಾವಲಿನಲ್ಲಿ ಇರುತ್ತದೆ. ಇದಲ್ಲದೇ ದಾರಿಯುದ್ಧಕ್ಕೂ ಸಿಸಿ ಕ್ಯಾಮೆರಾಗಳನ್ನ ಅಳವಡಿಸಲಾಗಿದೆ. ಇದನ್ನೂ ಓದಿ: ಮಂಡ್ಯ | ಗಣೇಶ ಮೆರವಣಿಗೆ ವೇಳೆ ಡಿಜೆ ಸೌಂಡ್‌ಗೆ ಕುಣಿಯುತ್ತಿದ್ದ ವ್ಯಕಿ ಹೃದಯಾಘಾತಕ್ಕೆ ಬಲಿ

  • ಗುಜರಾತ್‌ನಲ್ಲಿ ಕೋಮು ಘರ್ಷಣೆ, ಪೊಲೀಸರ ಮೇಲೂ ಪೆಟ್ರೋಲ್ ಬಾಂಬ್ ದಾಳಿ- 19 ಮಂದಿ ವಶ

    ಗುಜರಾತ್‌ನಲ್ಲಿ ಕೋಮು ಘರ್ಷಣೆ, ಪೊಲೀಸರ ಮೇಲೂ ಪೆಟ್ರೋಲ್ ಬಾಂಬ್ ದಾಳಿ- 19 ಮಂದಿ ವಶ

    ಗಾಂಧಿನಗರ: ದೀಪಾವಳಿ ಹಬ್ಬದಂದು ((Diwali Festival) ಪಟಾಕಿ ಸಿಡಿಸುವ ವಿಚಾರದಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ (Communal Clash) ಉಂಟಾಗಿದ್ದು, 19 ಮಂದಿಯನ್ನು ವಶಕ್ಕೆ ಪಡೆದಿರುವ ಘಟನೆ ಗುಜರಾತ್‌ನಲ್ಲಿಂದು (Gujarat) ನಡೆದಿದೆ.

    ಇಲ್ಲಿನ ವಡೋದರಾ ನಗರದ ಪಾಣಿಗೇಟ್ ಸೂಕ್ಷ್ಮ ಪ್ರದೇಶದಲ್ಲಿ ಪಟಾಕಿ ಸಿಡಿಸುವ ವಿಚಾರದಲ್ಲಿ ಎರಡು ಸಮುದಾಯಗಳ ಸದಸ್ಯರ ನಡುವೆ ಘರ್ಷಣೆ ನಡೆದಿದೆ. ಘಟನೆ ಸಂಭವಿಸಿದ ಸುಮಾರು ಒಂದು ಗಂಟೆಯ ನಂತರ ಪೊಲೀಸರು (Police) ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ. ಇದನ್ನೂ ಓದಿ: ಇಶಾ ಫೌಂಡೇಶನ್ ನಲ್ಲಿ ಪ್ರದರ್ಶನ ಕಂಡ ಕನ್ನಡದ ಮೊದಲ ಸಿನಿಮಾ ಕಾಂತಾರ

    ಈ ವೇಳೆ ಕಿಡಿಗೇಡಿಗಳೂ ಪೊಲೀಸರ ಮೇಲೂ ಪೆಟ್ರೋಲ್ ಬಾಂಬ್ (Petrol Bomb) ದಾಳಿ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ 19 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ವಡೋದರಾ ಉಪ ಪೊಲೀಸ್ ಆಯುಕ್ತ ಯಶಪಾಲ್ ಜಗನಿಯಾ ತಿಳಿಸಿದ್ದಾರೆ. ಇದನ್ನೂ ಓದಿ: ನಮಗೆ ಅಧಿಕಾರ ಬೇಕಿಲ್ಲ ಅಂದ್ರು ರಾಹುಲ್- ಶಾಕ್ ಕೊಟ್ಟ ಡಿಕೆಶಿ

    ಸಾಂದರ್ಭಿಕ ಚಿತ್ರ

    ಘರ್ಷಣೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಆದರೆ ರಾಕೆಟ್ ಪಟಾಕಿ ಸಿಡಿಸಿದ ಬಳಿಕ ಸ್ಥಳದಲ್ಲೇ ಇದ್ದ ಮೋಟಾರ್ ಸೈಕಲ್ ವೊಂದಕ್ಕೆ ಬೆಂಕಿ ಹೊತ್ತಿಕೊಂಡಿದೆ. ಬಳಿಕ ಪರಸ್ಪರ ಕಲ್ಲು ತೂರಾಟ ನಡೆದಿದೆ. ಕೆಲ ದಿನಗಳ ಹಿಂದೆ ರಾಮನವಮಿಯ ಸಂದರ್ಭದಲ್ಲೂ ಗುಜರಾತ್‌ನಲ್ಲಿ ದೊಡ್ಡ ಕೋಮು ಘರ್ಷಣೆ ನಡೆದಿತ್ತು.

    Live Tv
    [brid partner=56869869 player=32851 video=960834 autoplay=true]

  • ರಾಮನವಮಿ ರ‍್ಯಾಲಿ ವೇಳೆ ಕೋಮುಸಂಘರ್ಷ: 4 ರಾಜ್ಯಗಳಲ್ಲಿ ನಡೆದಿದ್ದೇನು?

    ರಾಮನವಮಿ ರ‍್ಯಾಲಿ ವೇಳೆ ಕೋಮುಸಂಘರ್ಷ: 4 ರಾಜ್ಯಗಳಲ್ಲಿ ನಡೆದಿದ್ದೇನು?

    ನವದೆಹಲಿ: ರಾಮನವಮಿ ಆಚರಣೆಯ ವೇಳೆ ಭಾನುವಾರ ಗುಜರಾತ್, ಮಧ್ಯಪ್ರದೇಶ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ನಡೆಯುತ್ತಿದ್ದ ಮೆರವಣಿಗೆಯು ಹಿಂಸಾಚಾರಕ್ಕೆ ತಿರುಗಿದ್ದು, ಕೋಮು ಸಂಘರ್ಷ ಏರ್ಪಟ್ಟಿದೆ. ಇದೇ ವೇಳೆ 10 ಮಂದಿ ಗಾಯಗೊಂಡಿದ್ದು, ಓರ್ವ ಮೃತಪಟ್ಟಿದ್ದಾನೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

    ಮಧ್ಯಪ್ರದೇಶದ ಖರ್ಗಾನ್‌ನ ಕೆಲವು ಪ್ರದೇಶಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ. ರಾಮ ನವಮಿ ಮೆರವಣಿಗೆ ಸಂದರ್ಭದಲ್ಲಿ ಹಿಂಸಾಚಾರ ಮತ್ತು ಗಲಭೆ ನಡೆದಿದೆ. ಅನೇಕ ಕಡೆ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಸಂಘರ್ಷ ಭುಗಿಲೇಳುವುದನ್ನು ತಡೆಯಲು ಪೊಲೀಸರು ಬಿಗಿ ಭದ್ರತೆ ನಿಯೋಜಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಕಲಬುರಗಿ ವಿವಿ ಆವರಣದಲ್ಲಿ ರಾಮನವಮಿ ಆಚರಿಸ್ತಿದ್ದ ಎಬಿವಿಪಿ ವಿದ್ಯಾರ್ಥಿಗಳ ಮೇಲೆ ಹಲ್ಲೆ

    FIRE

    ಧ್ವನಿವರ್ಧಕ ವಿಚಾರಕ್ಕೆ ಗಲಾಟೆ: ಧ್ವನಿವರ್ಧಕಗಳಿಂದ ಸಂಗೀತ ಪ್ರಸಾರ ಮಾಡುತ್ತಿದ್ದ ವಿಚಾರವಾಗಿ ನಡೆದ ಜಗಳದ ಬಳಿಕ ತಲಬ್ ಚೌಕ್‌ನಲ್ಲಿ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆದಿದೆ. ಈ ವೇಳೆ ಘರ್ಷಣೆ ಶುರುವಾಗಿದೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಅಶ್ರುವಾಯುಗಳನ್ನು ಸಿಡಿಸಬೇಕಾಯಿತು ಎಂದು ಹೆಚ್ಚುವರಿ ಕಲೆಕ್ಟರ್ ಎಸ್.ಎಸ್.ಮುಜಾಲ್ದೆ ತಿಳಿಸಿದ್ದಾರೆ. ಇದನ್ನೂ ಓದಿ: ಮುಸ್ಕಾನ್‍ರನ್ನು ತನಿಖೆ ನಡೆಸುವಂತೆ ಸಿಎಂಗೆ ಅನಂತ್‍ಕುಮಾರ್ ಹೆಗ್ಡೆ ಪತ್ರ

    ದೇವಸ್ಥಾನ ಧ್ವಂಸ, ಮನೆಗಳಿಗೆ ಬೆಂಕಿ: ಘಟನೆ ವೇಳೆ ಕೆಲವರು ಕಲ್ಲು ತೂರಾಟ ನಡೆಸಿದ್ದು, ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಅಲ್ಲದೆ, ಎಸ್‌ಪಿ ಸಿದ್ಧಾರ್ಥ್ ಚೌಧರಿ ಸೇರಿದಂತೆ ಅನೇಕ ಪೊಲೀಸರು ಕೂಡ ಘಟನೆಯಲ್ಲಿ ಗಾಯಗೊಂಡಿದ್ದಾರೆ. ಒಂದು ದೇವಸ್ಥಾನ ಧ್ವಂಸಗೊಳಿಸಿ, 4 ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ದೃಶ್ಯಗಳು ವೀಡಿಯೋಗಳಲ್ಲಿ ಸೆರೆಯಾಗಿವೆ.

    crime

    ಗುಜರಾತ್‌ನಲ್ಲಿ ಕಲ್ಲುತೂರಾಟ: ಗುಜರಾತ್‌ನ ಆನಂದ್ ಜಿಲ್ಲೆಯ ಕಂಭಾಟ್ ಮತ್ತು ಸಬರ್ಕಾಂತಾ ಜಿಲ್ಲೆಯ ಹಿಮ್ಮತ್ ನಗರದಲ್ಲಿ ಸಂಘರ್ಷದ ವೇಳೆ ಕಲ್ಲು ತೂರಾಟ ಹಾಗೂ ಬೆಂಕಿ ಹಚ್ಚಿರುವ ಘಟನೆಗಳು ನಡೆದಿವೆ. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪೊಲೀಸರು ಅಶ್ರುವಾಯು ಶೆಲ್ ಪ್ರಯೋಗ ಮಾಡಿದ್ದಾರೆ.

    ಗುಂಪು ಘರ್ಷಣೆ: ರಾಮನವಮಿ ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಈ ಜಾಗದಲ್ಲಿ ಸುಮಾರು 65 ವರ್ಷದ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ ಎಂದು ಕಂಭಾಟ್ ಪೊಲೀಸ್ ವರಿಷ್ಠಾಧಿಕಾರಿ ಅಜೀತ್ ರಜ್ಯಾನ್ ತಿಳಿಸಿದ್ದಾರೆ. ಇದನ್ನೂ ಓದಿ: ನನ್ನ ಮಗಳಿಗೆ ಬಂದ ಹಣವನ್ನು ಜನ ಸೇವೆಗೆ ಕೊಡ್ತೀನಿ: ಮುಸ್ಕಾನ್‌ ತಂದೆ

    ಹಿಮ್ಮತ್ ನಗರದಲ್ಲಿ ಗುಂಪೊಂದು ಕೆಲವು ವಾಹನಗಳು ಮತ್ತು ಅಂಗಡಿಗಳಿಗೆ ಹಾನಿ ಮಾಡಿದೆ. ರಾಮನವಮಿ ಆಚರಣೆ ವೇಳೆ ಕೆಲವರಿಗೆ ಕಲ್ಲೇಟು ಬಿದ್ದಿದೆ ಎಂದು ಸಬರ್ಕಾಂತಾ ಪೊಲೀಸ್ ಮುಖ್ಯಸ್ಥ ವಿಶಾಲ್ ವಾಘೇಲಾ ಹೇಳಿದ್ದಾರೆ.

    RAMANAVAMI
    ಸಾಂದರ್ಭಿಕ ಚಿತ್ರ

    ಪೊಲೀಸರ ಮೇಲೆ ದಾಳಿ ಆರೋಪ: ಪಶ್ಚಿಮ ಬಂಗಾಳದ ಹೌರಾದಲ್ಲಿ ಶಿಬ್‌ಪುರ್ ಪ್ರದೇಶದಲ್ಲಿ ರಾಮನವಮಿ ಮೆರವಣಿಗೆ ಸಂದರ್ಭದಲ್ಲಿ ಘರ್ಷಣೆಗಳು ವರದಿಯಾಗಿದ್ದು, ಭಾರೀ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ರಾಮನವಮಿ ಮೆರವಣಿಗೆ ಮೇಲೆ ಪೊಲೀಸರೇ ದಾಳಿ ನಡೆಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಮೆರವಣಿಗೆಯಲ್ಲಿ ತೆರಳುತ್ತಿದ್ದ ಜನರ ಮೇಲೆ ಪೊಲೀಸ್ ಸಿಬ್ಬಂದಿ ಮನಬಂದಂತೆ ಪ್ರಹಾರ ನಡೆಸಿದ್ದಾರೆ ಎಂದು ವಿಧಾನಸಭೆಯಲ್ಲಿನ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಆರೋಪಿಸಿದ್ದಾರೆ. ಇದನ್ನೂ ಓದಿ: ಮಂಡ್ಯ ವಿದ್ಯಾರ್ಥಿನಿಗೆ ಐಫೋನ್, ಸ್ಮಾರ್ಟ್‍ವಾಚ್ ಗಿಫ್ಟ್ ಕೊಟ್ಟ ಕಾಂಗ್ರೆಸ್ ಶಾಸಕ

    RAMANAVAMI

    ಹೌರಾದ ನಿವಾಸಿಗಳು ಸಾಮಾಜಿಕ ಮಾಧ್ಯಮದಲ್ಲಿ ಏನನ್ನಾದರೂ ಬಿತ್ತರಿಸುವಾಗ ಸಂಯಮ ಕಾಪಾಡಿಕೊಳ್ಳಿ ಹಾಗೂ ಯಾವುದೇ ನಕಲಿ ಸುದ್ದಿಗಳನ್ನು ಹರಡದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಜಾರ್ಖಂಡ್‌ನ ಲೊಹರ್ದಗಾದಲ್ಲಿ ಕೂಡ ರಾಮನವಮಿ ಮೆರವಣಿಗೆ ಮೇಲೆ ಕಲ್ಲು ತೂರಾಟ ಹಾಗೂ ಬೆಂಕಿ ಹಚ್ಚಿದ ಘಟನೆಗಳು ವರದಿಯಾಗಿವೆ. 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ಅವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ. ಶಾಂತಿ ಕಾಪಾಡಲು ಬೃಹತ್ ಸಂಖ್ಯೆಯಲ್ಲಿ ಪೊಲೀಸರನ್ನು ಜಮಾವಣೆ ಮಾಡಲಾಗಿದೆ.

  • ಕೋತಿ ಕೊಂದಿದ್ದಕ್ಕೆ ಸಿಡಿದೆದ್ದ ಭಜರಂಗದಳ- ಶುರುವಾಯ್ತು ಕೋಮು ಗಲಭೆ

    ಕೋತಿ ಕೊಂದಿದ್ದಕ್ಕೆ ಸಿಡಿದೆದ್ದ ಭಜರಂಗದಳ- ಶುರುವಾಯ್ತು ಕೋಮು ಗಲಭೆ

    ಲಕ್ನೋ: ಅನ್ಯ ಕೋಮಿನ ಯುವಕರು ಕೋತಿಯನ್ನು ಗುಂಡಿಕ್ಕಿ ಕೊಂದಿದ್ದಕ್ಕೆ ಉತ್ತರ ಪ್ರದೇಶದ ಶಾಮ್ಲಿ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ಎದುರಾಗಿದೆ. ಕೋತಿಯನ್ನ ಹತ್ಯೆಗೈದಿರುವುದೇ ಕೋಮು ಗಲಭೆಗೆ ಕಾರಣವಾಗಿದೆ.

    ಶಾಮ್ಲಿ ಗ್ರಾಮದ ನಿವಾಸಿಗಳಾದ ಆಸೀಫ್, ಹಫೀಜ್ ಮತ್ತು ಅನೀಸ್ ಮೂವರು ಸಹೋದರರು ಕೋತಿಯೊಂದನ್ನ ಗುಂಡಿಕ್ಕಿ ಕೊಂದಿದ್ದರು. ಯುವಕರ ಈ ಕೃತ್ಯ ಭಜರಂಗದಳ ಹಾಗೂ ಸ್ಥಳೀಯರ ಕೆಂಗಣ್ಣಿಗೆ ಕಾರಣವಾಗಿದೆ. ಹಿಂದೂ ಧರ್ಮದಲ್ಲಿ ಕೋತಿಯನ್ನು ಆಂಜನೇಯ ದೇವರೆಂದು ಪೂಜಿಸಲಾಗುತ್ತದೆ. ಹೀಗಾಗಿ ಕೋತಿಗಳನ್ನು ಹಿಂಸಿಸಲು ಹಾಗೂ ಕೊಲ್ಲಲು ನಮ್ಮ ಅವಕಾಶವಿಲ್ಲ. ಹೀಗಿರುವಾಗ ಈ ಮೂವರು ಅನ್ಯ ಕೋಮಿನ ಯುವಕರು ಬೇಕು ಬೇಕಂತಲೇ ಕೋತಿಯನ್ನು ಕೊಂದು ಕ್ರೌರ್ಯ ಮೆರೆದಿದ್ದಾರೆ ಎಂದು ಭಜರಂಗದಳ ಕಾರ್ಯಕರ್ತರು ಹಾಗೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಆಸೀಫ್, ಹಫೀಜ್ ಮತ್ತು ಅನೀಸ್ ಮೂವರು ಕೋತಿಯೊಂದನ್ನು ಸುತ್ತುವರಿದು ನಿಂತಿದ್ದರು. ಅವರಲ್ಲಿ ಓರ್ವ ಯುವಕ ಬಂದೂಕಿನಿಂದ ಕೋತಿಗೆ ಗುಂಡು ಹೊಡೆದಿದ್ದು, ಕೋತಿಯ ಸೊಂಟದ ಭಾಗದಲ್ಲಿ ಗುಂಡು ತಗುಲಿ ಗಾಯಗೊಂಡು ಮೂಕ ಪ್ರಾಣಿ ಪ್ರಾಣ ಬಿಟ್ಟಿತು ಎಂದು ಸ್ಥಳೀಯರು ಆರೋಪಿಸಿದ್ದಾರೆ.

    ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ತಿಳಿದ ಬಳಿಕ ಸ್ಥಳಕ್ಕೆ ಬಂದ ಸಿಬ್ಬಂದಿ ಕೋತಿಯ ಮರಣೋತ್ತರ ಪರೀಕ್ಷೆ ಮಾಡಿಸಿ, ಅದರ ಅಂತ್ಯಸಂಸ್ಕಾರ ಮಾಡಿದ್ದಾರೆ. ಅಲ್ಲದೆ ಮೂವರು ಆರೋಪಿಗಳ ವಿರುದ್ಧ ಪ್ರಕರಣವನ್ನೂ ದಾಖಲಿಸಲಾಗಿದೆ.

    ಇದರ ಜೊತೆಗೆ ಭಜರಂಗದಳದ ಕಾರ್ಯಕರ್ತರು ಸಹ ಯುವಕರ ಕೃತ್ಯವನ್ನು ತೀವ್ರವಾಗಿ ಖಂಡಿಸಿ, ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಿ ಶಿಕ್ಷೆ ನೀಡಿ. ಇಲ್ಲವಾದರೆ ಕೋತಿ ಸಾವಿಗೆ ನ್ಯಾಯ ಸಿಗುವವರೆಗೂ ಹೋರಾಡುತ್ತೇವೆ ಎಂದು ಹರಿಹಾಯ್ದಿದ್ದಾರೆ.

  • ಒಂದೇ ಕೋಮಿನ 2 ತಂಡಗಳ ಮಾರಾಮಾರಿ- ಕಬ್ಬಿಣ ರಾಡ್‍ನಿಂದ ಹೊಡೆದು ಯುವಕನ ಬರ್ಬರ ಹತ್ಯೆ!

    ಒಂದೇ ಕೋಮಿನ 2 ತಂಡಗಳ ಮಾರಾಮಾರಿ- ಕಬ್ಬಿಣ ರಾಡ್‍ನಿಂದ ಹೊಡೆದು ಯುವಕನ ಬರ್ಬರ ಹತ್ಯೆ!

    ಕಾರವಾರ: ಮಂಗಳವಾರ ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ನಡೆದಿತ್ತು. ಚುನಾವಣೆ ಹಿನ್ನೆಲೆಯಲ್ಲಿ ರಾತ್ರಿ ಒಂದೇ ಕೋಮಿನ ಎರಡು ತಂಡಗಳ ನಡುವೆ ಮಾರಾಮಾರಿ ನಡೆದಿದ್ದು, ಕಬ್ಬಿಣದ ರಾಡ್‍ನಿಂದ ಹೊಡೆದು ಯುವಕನೊಬ್ಬನನ್ನು ಬರ್ಬರವಾಗಿ ಕೊಲೆಗೈದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಕಸ್ತೂರಬಾ ನಗರದ ಬಯಲು ಪ್ರದೇಶದಲ್ಲಿ ನಡೆದಿದೆ.

    ಮಂಗಳವಾರ ರಾತ್ರಿ ವೇಳೆ ಒಂದೇ ಕೋಮಿನ ಎರಡು ಗುಂಪುಗಳ ನಡುವೆ ಕಸ್ತೂರಬಾ ನಗರದಲ್ಲಿ ಗಲಾಟೆ ನಡೆದಿದೆ. ಈ ವೇಳೆ ಭಾರತೀಯ ಜನತಾ ಪಾರ್ಟಿಯ ಅಲ್ಪಸಂಖ್ಯಾತ ಮೋರ್ಚಾ ಉಪಾಧ್ಯಕ್ಷ ಅನೀಪ್ ತಹಶೀಲ್ದಾರ್ ಗೆ ಚಾಕು ಇರಿಯಲಾಗಿದೆ. ಆದ್ರೆ ತಕ್ಷಣ ಸ್ಥಳಕ್ಕೆ ಪೊಲೀಸರು ಆಗಮಿಸಿ ಗಲಾಟೆಯನ್ನು ತಹಬದಿಗೆ ತಂದಿದ್ದು, ಚಾಕು ಇರಿತಗೊಂಡ ಅನೀಪ್ ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕೊಂಡೊಯ್ಯಲಾಗಿತ್ತು.

    ಘಟನೆ ನಡೆದ ಕೆಲವು ಗಂಟೆಯಲ್ಲಿ ಈ ಗಲಾಟೆಯಲ್ಲಿ ಭಾಗಿಯಾಗಿದ್ದ ಅಸ್ಲಂ ಬಾಬಾಜಾನ್(22) ಎಂಬಾತ ಕೊಲೆಯಾಗಿದ್ದಾನೆ. ಅಸ್ಲಂ ತಲೆಗೆ ಕಬ್ಬಿಣದ ರಾಡ್‍ನಿಂದ ಹೊಡೆದು, ಚಾಕು ಇರಿದು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಚುನಾವಣಾ ವಿಷಯವಾಗಿ ಕೊಲೆ ಆಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

    ಈ ಸಂಬಂಧ ಶಿರಸಿಯ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • 20 ವರ್ಷಗಳ ಹಿಂದೆ ಮೃತಪಟ್ಟ ಯುವಕನ ಮೇಲೆ ಚಾರ್ಜ್ ಶೀಟ್ ಸಲ್ಲಿಸಿದ ಪೊಲೀಸರು

    20 ವರ್ಷಗಳ ಹಿಂದೆ ಮೃತಪಟ್ಟ ಯುವಕನ ಮೇಲೆ ಚಾರ್ಜ್ ಶೀಟ್ ಸಲ್ಲಿಸಿದ ಪೊಲೀಸರು

    ಕೊಪ್ಪಳ: ಇಪ್ಪತ್ತು ವರ್ಷಗಳ ಹಿಂದೆ ಮೃತಪಟ್ಟ ಯುವಕನ ಮೇಲೆ ಗಂಗಾವತಿ ನಗರ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿ ಎಡವಟ್ಟು ಮಾಡಿಕೊಂಡಿದ್ದಾರೆ.

    ಗಂಗಾವತಿ ತಾಲೂಕಿನ ಹಿರೇಜಂತಕಲ್ ಗ್ರಾಮದ ನಿವಾಸಿ ಮಲ್ಲಿಕಾರ್ಜುನ್ 1998 ರಲ್ಲಿ ಮೃತಪಟ್ಟಿದ್ರು. ಆದರೆ ಈಗ ಅವರ ಮೇಲೆ ಗಂಗಾವತಿ ನಗರ ಠಾಣೆ ಪೊಲೀಸರು ಮೂರು ಪ್ರಕರಣಗಳಲ್ಲಿ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

    2016 ರಲ್ಲಿ ಗಂಗಾವತಿಯಲ್ಲಿ ಕೋಮು ಗಲಭೆಯಾದ ಸಂದರ್ಭ ಪೊಲೀಸರು 92 ಜನರ ವಿರುದ್ಧ ದೂರು ದಾಖಲಿಸಿದ್ರು. ದೂರು ದಾಖಲಿಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸೋ ವೇಳೆ ಮೃತನ ಹೆಸರನ್ನು ಪರಿಶೀಲಿಸದೇ ಎಡವಟ್ಟು ಮಾಡಿದ್ದಾರೆ.

    ಗಂಗಾವತಿ ನಗರ ಠಾಣೆಯ ಪಿ.ಐ ಆಗಿದ್ದ ಭೀಮನಗೌಡ ಬೀರಾದಾರ್ ಮೃತನ ಮೇಲೆ ಚಾರ್ಜ್ ಶೀಟ್ ಸಲ್ಲಿಸಿದ್ದು ಬೆಳಕಿಗೆ ಬಂದಿದೆ. ಕೋಮು ಗಲಭೆ ಸಮಯದಲ್ಲಿ ಪೊಲೀಸರು ಪ್ರಭಾವಿಗಳ ಒತ್ತಡಕ್ಕೆ ಮಣಿದು ಸಿಕ್ಕ ಸಿಕ್ಕವರ ಮೇಲೆ ಕೇಸ್ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿತ್ತು. ಇದೀಗ ಅದು ಸಾಬೀತಾಗಿದ್ದು ಮೃತನನ್ನು ಪೊಲೀಸರು ಆರೋಪಿಯಾಗಿ ಮಾಡಿದ್ದು ಇದೀಗ ಹಲವಾರು ಅನುಮಾನಗಳಿಗೆ ಕಾರಣವಾಗಿದೆ.

    ಮಲ್ಲಿಕಾರ್ಜುನ್ ಪರ ವಕೀಲರು ಮರಣ ಪತ್ರವನ್ನು ನ್ಯಾಯಲಯಕ್ಕೆ ನೀಡಿ ಕಾನೂನು ಹೋರಾಟ ಮಾಡುತ್ತಿದ್ದಾರೆ.

     

     

  • ರಾಜ್ಯದಲ್ಲಿ ಮತ್ತೋರ್ವ ಹಿಂದೂ ಕಾರ್ಯಕರ್ತನ ಕೊಲೆ

    ರಾಜ್ಯದಲ್ಲಿ ಮತ್ತೋರ್ವ ಹಿಂದೂ ಕಾರ್ಯಕರ್ತನ ಕೊಲೆ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಬುಧವಾರದಂದು ಕ್ಷುಲ್ಲಕ ಕಾರಣಕ್ಕೆ ಕೋಮ ಗಲಭೆ ನೆಡೆದಾಗ ಘಟನಾ ಸ್ಥಳದಿಂದ ಕಾಣೆಯಾಗಿದ್ದ ಯುವಕ ಇಂದು ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

    ಹೊನ್ನಾವರ ನಿವಾಸಿ 19 ವರ್ಷದ ಪರೇಶ್ ಮೇಸ್ತ ಸಾವನ್ನಪ್ಪಿದ ಯುವಕ. ಪಟ್ಟಣದಲ್ಲಿ ಬುಧವಾರ ಕೋಮುಗಲಭೆ ಉಂಟಾಗಿತ್ತು. ಈ ವೇಳೆ ಪರೇಶ್ ಘಟನಾ ಸ್ಥಳದಿಂದ ನಾಪತ್ತೆಯಾಗಿದ್ದರು. ಇಂದು ಗಲಭೆ ನಡೆದ ಶನಿ ದೇವಸ್ಥಾನದ ಬಳಿ ಇರುವ ಶಟ್ಟಿ ಕೆರೆಯಲ್ಲಿ ಪರೇಶ್ ಶವ ಪತ್ತೆಯಾಗಿದೆ.

    ದುಷ್ಕರ್ಮಿಗಳು ಕೈಕಟ್ಟಿ ಹಲ್ಲೆ ಮಾಡಿ ಕೊಲೆ ಮಾಡಿ ನಂತರ ಶವವನ್ನು ಕೆರೆಗೆ ಎಸೆದು ಹೋಗಿದ್ದಾರೆ ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಹೊನ್ನಾವರ ಪೊಲೀಸರು ಆಗಮಿಸಿ ಶವವನ್ನು ಮೇಲಕ್ಕೆತಿದ್ದು ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಈ ಸಂಬಂಧ ಸಂಬಂಧ ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    https://twitter.com/ShobhaBJP/status/938988228819877889

    https://twitter.com/ShobhaBJP/status/938984145786507264