Tag: commissioner

  • ಆಯ್ದ ವಿಡಿಯೋಗಳನ್ನು ಮಾತ್ರ ಬಿಡುಗಡೆ ಮಾಡೋದನ್ನು ನಿಲ್ಲಿಸಿ: ಮಂಗಳೂರು ಕಮಿಷನರ್

    ಆಯ್ದ ವಿಡಿಯೋಗಳನ್ನು ಮಾತ್ರ ಬಿಡುಗಡೆ ಮಾಡೋದನ್ನು ನಿಲ್ಲಿಸಿ: ಮಂಗಳೂರು ಕಮಿಷನರ್

    ಮಂಗಳೂರು: ಸಿಐಡಿ ಮತ್ತು ಮ್ಯಾಜಿಸ್ಟ್ರೀಯಲ್ ತನಿಖೆ ಬಳಿಕ ಮಂಗಳೂರು ಗಲಭೆಯ ಮೂಲ ಸತ್ಯ ಬಯಲಾಗಲಿದೆ. ಅಲ್ಲಿಯವರೆಗೆ ಎಡಿಟ್ ಮಾಡಿದ ವಿಡಿಯೋಗಳನ್ನು ಬಿಡುಗಡೆ ಮಾಡುವುದನ್ನು ನಿಲ್ಲಿಸಿ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಡಾ.ಪಿ.ಎಸ್ ಹರ್ಷ ಹೇಳಿದ್ದಾರೆ.

    ಮಂಗಳೂರು ಗಲಭೆ ಸಂಬಂಧ ನಿನ್ನೆ ಮಾಜಿ ಸಿ.ಎಂ ಕುಮಾರಸ್ವಾಮಿ ರಿಲೀಸ್ ಮಾಡಿರುವ ವಿಡಿಯೋ ಬಗ್ಗೆ ಸ್ಪಷ್ಟನೆ ನೀಡಿರುವ ಅವರು ಇತ್ತೀಚೆಗೆ ಕೆಲವರು ಆಯ್ದ ವಿಡಿಯೋವನ್ನು ತಮಗೆ ಬೇಕಾದ ರೀತಿ ಎಡಿಟ್ ಮಾಡಿ ಬಿಡುಗಡೆ ಮಾಡಿದ್ದಾರೆ. ಆದ್ರೆ ಗಲಭೆಯ ಸತ್ಯಾಂಶ ಮುಂದೆ ತನಿಖೆಯಲ್ಲಿ ತಿಳಿದು ಬರಲಿದೆ ಎಂದರು.

    ಈಗಾಗಲೇ ಪೊಲೀಸರು ಗಲಭೆಯ ಎಲ್ಲಾ ವಿಡಿಯೋಗಳನ್ನು ತನಿಖಾ ಸಂಸ್ಥೆಗಳಿಗೆ ನೀಡಿದ್ದಾರೆ, ಡಿ.19 ರಂದು ಮಂಗಳೂರು ಪೊಲೀಸರು ಗಲಭೆ ನಿಯಂತ್ರಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು. ಶುಕ್ರವಾರ ಮಾಜಿ ಸಿಎಂ ಕುಮಾರಸ್ವಾಮಿ ಅವರು, ಮಂಗಳೂರು ಗಲಭೆಗೆ ಸಂಬಂಧಿಸಿದ ಕೆಲ ವಿಡಿಯೋ ಮತ್ತು ಫೋಟೋಗಳನ್ನು ಬಿಡುಗಡೆ ಮಾಡಿ ಮಂಗಳೂರು ಗಲಭೆ ಪೊಲೀಸರ ಪೂರ್ವ ನಿಯೋಜಿತ ಕೃತ್ಯ ಎಂದು ಆರೋಪ ಮಾಡಿದ್ದರು.

  • ಭಾರತ್ ಬಂದ್: ಸಂಘಟನೆಗಳಿಗೆ ಷರತ್ತು ಬದ್ಧ ಅನುಮತಿಕೊಟ್ಟ ಪೊಲೀಸರು

    ಭಾರತ್ ಬಂದ್: ಸಂಘಟನೆಗಳಿಗೆ ಷರತ್ತು ಬದ್ಧ ಅನುಮತಿಕೊಟ್ಟ ಪೊಲೀಸರು

    ಬೆಂಗಳೂರು: ಜ.8 ರಂದು ನಡೆಯಲಿರುವ ಭಾರತ್ ಬಂದ್‍ಗೆ ಬರೋಬ್ಬರಿ 46 ಸಂಘಟನೆಗಳು ಅನುಮತಿ ಕೇಳಿದ್ದು, ಅಷ್ಟು ಸಂಘಟನೆಗಳಿಗೆ ಷರತ್ತು ಬದ್ಧ ಅನುಮತಿಯನ್ನ ಬೆಂಗಳೂರು ಪೊಲೀಸರು ಪೊಲೀಸರು ನೀಡಿದ್ದಾರೆ.

    ಭಾರತ್ ಬಂದ್ ವೇಳೆ ಮುಷ್ಕರವಷ್ಟೇ ಮಾಡಬೇಕು. ಯಾವುದೇ ಕಾರಣಕ್ಕೂ ಪ್ರತಿಭಟನಾ ಮೆರವಣಿಗೆಗೆ ಅವಕಾಶ ನೀಡಲ್ಲ. ಪ್ರತಿಭಟನೆಯ ವೇಳೆ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿ ಕಾನೂನು ಸುವ್ಯವಸ್ಥೆ ಉಂಟು ಮಾಡಿದರೆ ಆಯೋಜಕರೆ ನೇರ ಹೊಣೆ. ಪ್ರತಿಭಟನೆಯ ವೇಳೆ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಉಂಟು ಮಾಡಿದರೆ ಅದರ ವೆಚ್ಚ ಬಂದ್ ಆಯೋಜಕರೆ ಭರಿಸಿಕೊಡ ಬೇಕೆಂಬ ಷರತ್ತುಗಳನು ಪೊಲೀಸರು ವಿಧಿಸಿದ್ದಾರೆ.

    ಸಂಘಟನೆಗಳಿಂದ 15 ಲಕ್ಷ ರೂ. ಬೆಲೆ ಬಾಳು ಮುಚ್ಚಳಿಕೆಯ ಪತ್ರವನ್ನು ಪಡೆದಿರುವ ಪೊಲೀಸರು ಸಂಘಟನೆಗಳಿಗೆ ಅನುಮತಿಯನ್ನ ಕೊಟ್ಟಿದ್ದಾರೆ. ಪ್ರತಿಭಟನೆ ವೇಳೆ ಯಾವುದೇ ಅಂಗಡಿ ಮುಂಗಟ್ಟುಗಳನ್ನು ಒತ್ತಾಯ ಪೂರ್ವಕವಾಗಿ ಅಥವಾ ಮನವಿ ಮಾಡಿಕೊಂಡು ಮುಚ್ಚಿಸುವಂತ ಕೆಲಸ ಮಾಡಬಾರದು. ಮಾಡಿದರೆ ಅಂತವರ ವಿರುದ್ಧ ಕಠಿಣ ಕ್ರಮ ಜರಗಿಸುವುದಾಗಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಖಡಕ್ ಎಚ್ಚರಿಕೆಯನ್ನ ನೀಡಿದ್ದಾರೆ.

    ನಾವು ಸಾರ್ವಜನಿಕರ ಅನುಕೂಲಕ್ಕಾಗಿ ಈ ಒಂದು ವ್ಯವಸ್ಥೆಯನ್ನು ಮಾಡಿಕೊಳ್ಳಲಾಗುತ್ತಿದೆ. ಮೆರವಣಿಗೆ ಮಾಡಿದರೆ ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ಟ್ರಾಫಿಕ್ ಕಿರಿಕಿರಿ ಉಂಟುಟಾಗುತ್ತದೆ. ಪರಿಣಾಂ ಪ್ರತಿಭಟನಾ ಮೆರವಣಿಗೆಗೆ ಅನುಮತಿ ನಿರಾಕರಿಸಲಾಗಿದೆ. ಅನುಮತಿಯನ್ನು ಉಲ್ಲಂಘಿಸಿ ಮೆರವಣಿಗೆಗೆ ಮುಂದಾದರೆ ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್ 107 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

  • ಒಂದು ವರ್ಷದಿಂದ ಯುವತಿ ಮೇಲೆ ರೇಪ್ – ಕ್ರಮಕ್ಕೆ ಆಗ್ರಹಿಸಿ ಕಮೀಷನರ್‌ಗೆ  ಶೋಭಾ ದೂರು

    ಒಂದು ವರ್ಷದಿಂದ ಯುವತಿ ಮೇಲೆ ರೇಪ್ – ಕ್ರಮಕ್ಕೆ ಆಗ್ರಹಿಸಿ ಕಮೀಷನರ್‌ಗೆ ಶೋಭಾ ದೂರು

    ಬೆಂಗಳೂರು: ಕಾಸರಗೂಡಿನಲ್ಲಿ ಯುವತಿಯ ಮೇಲೆ ಅತ್ಯಾಚಾರ ಮಾಡಿರುವ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರಿಗೆ ಸಂಸದೆ ಶೋಭಾ ಕರಂದ್ಲಾಜೆ ದೂರು ನೀಡಿದ್ದಾರೆ.

    ಸಂತ್ರಸ್ತೆ ಮೇಲೆ ಕಳೆದ ಒಂದು ವರ್ಷದಿಂದ ಕಾಸರಗೋಡು ಮೂಲದ ಇಬ್ಬರು ಯುವಕರು ಅತ್ಯಾಚಾರ ಎಸಗಿದ್ದಾರೆ. ಅವರ ವಿರುದ್ಧ ಬೆಂಗಳೂರಿನಲ್ಲಿ ದೂರು ದಾಖಲಿಸಿಕೊಂಡು ಕ್ರಮ ಜರುಗಿಸುವಂತೆ ಆಗ್ರಹಿಸಿ ಶೋಭಾ ಅವರು ನೊಂದ ಸಂತ್ರಸ್ತೆಯೊಂದಿಗೆ ಬಂದು ಕಮೀಷನರ್‌ಗೆ ದೂರು ನೀಡಿದರು.

    ಸಂತ್ರಸ್ತೆ ನನಗೆ ಶನಿವಾರ ಫೋನ್ ಮಾಡಿ ಆಗಿರುವ ಅನ್ಯಾಯದ ಬಗ್ಗೆ ವಿವರಿಸಿದರು. ಸಂತ್ರಸ್ತೆಯನ್ನು ಕಾಸರಗೋಡಿನಿಂದ ಕಾರಿನಲ್ಲಿ ಕರೆದುಕೊಂಡು ಬಂದು ಎಲೆಕ್ಟ್ರಾನಿಕ್ ಸಿಟಿಯಲ್ಲೂ ಅತ್ಯಾಚಾರ ಎಸಗಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಈ ಬಗ್ಗೆ ಈಗಾಗಲೇ ಕಮೀಷನರ್‌ಗೆ ದೂರು ಕೊಡಲಾಗಿದೆ. ಕಮೀಷನರ್ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಅದರಂತೆ ಬೆಂಗಳೂರಿನಲ್ಲಿ ನಡೆದ ಘಟನೆಯ ಬಗ್ಗೆ ಸಂತ್ರಸ್ತೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಿದ್ದಾರೆ ಎಂದರು.

    ದೂರು ಕೊಟ್ಟ ಬಳಿಕ ಪೊಲೀಸರು ಕಾಸರಗೋಡು ಡಿಜಿಗೆ ಕರೆ ಮಾಡಿ ವಿಚಾರಿಸಿದಾಗ ಈ ಘಟನೆ ಸಂಬಂಧ ಒಬ್ಬನನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಸೂಕ್ ಮತ್ತು ರಿಷಬ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಲ್ಲದೇ ಆರೋಪಿಗಳು ಬೇರೆ ಬೇರೆ ಕಡೆ ಏನಾದರೂ ಬೇರೆ ಹುಡುಗಿಯರನ್ನ ಅತ್ಯಾಚಾರ ಮಾಡಿದ್ದಾರೆಂಬುವುದರ ಬಗ್ಗೆ ಕ್ರಮಕೈಗೊಳ್ಳುವಂತೆ ಒತ್ತಾಯಿಸಲಾಗಿದೆ ಎಂದು ಮಾಧ್ಯಮ ಬಳಿ ಶೋಭಾ ವಿವರಿಸಿದರು.

    ಅಲ್ಲದೇ ಸಂತ್ರಸ್ತೆಗೆ ತಂದೆಯನ್ನ ಬಿಟ್ಟು ನೀವೆಲ್ಲರೂ ಕೂಡ ಮುಸ್ಲಿಂ ಸುಮುದಾಯಕ್ಕೆ ಮತಾಂತರವಾಗುವಂತೆ ಒತ್ತಾಯಿಸಿ ಆರೋಪಿಗಳಿಬ್ಬರು ಬೆದರಿಸಿದ್ದಾರೆಂದು ಶೋಭಾ ಕರಂದ್ಲಾಜೆ ಆರೋಪಿಸಿದರು.

  • 28 ಪ್ರದೇಶಗಳು ಅತೀ ಸೂಕ್ಷ್ಮ – ಮಳೆ ಎದುರಿಸಲು ಬಿಬಿಎಂಪಿಯಿಂದ ಸಕಲ ಸಿದ್ಧತೆ

    28 ಪ್ರದೇಶಗಳು ಅತೀ ಸೂಕ್ಷ್ಮ – ಮಳೆ ಎದುರಿಸಲು ಬಿಬಿಎಂಪಿಯಿಂದ ಸಕಲ ಸಿದ್ಧತೆ

    ಬೆಂಗಳೂರು: ಮಲೆನಾಡು ಹಾಗೂ ಕರಾವಳಿ ಭಾಗದ ಮಳೆ ಕೇರಳಕ್ಕೆ ತಿರುಗಿದ್ದು, ಇದರಿಂದ ಸಿಲಿಕಾನ್ ಸಿಟಿಯಲ್ಲೂ ಮಳೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಳೆಯಿಂದಾಗುವ ಹಾನಿಯನ್ನು ತಪ್ಪಿಸಲು ಬಿಬಿಎಂಪಿ ಸಕಲ ಸಿದ್ಧತೆ ನಡೆಸಿದ್ದು, 28 ಪ್ರದೇಶಗಳನ್ನು ಅತೀ ಸೂಕ್ಷ್ಮ ಎಂದು ಗುರುತಿಸಲಾಗಿದೆ.

    ಮಲ್ಲೇಶ್ವರಂ ಐಪಿಪಿ ಸೆಂಟರ್ ನಲ್ಲಿ ಅಧಿಕಾರಿಗಳ ಸಭೆ ನಂತರ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಬೆಂಗಳೂರಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು 28 ಅತೀ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಲಾಗಿದೆ. ಅಲ್ಲದೆ ಈಗಾಗಲೇ 848 ಕಿ.ಮೀ. ರಾಜಕಾಲುವೆ ಸ್ವಚ್ಛಗೊಳಿಸುವ ಕೆಲಸ ಮುಗಿದಿದೆ. 440 ಕಿ.ಮೀ. ಕಾಂಕ್ರಿಟ್ ಡ್ರೈನ್ ಮಾಡಲಾಗಿದೆ. ಇವುಗಳನ್ನು ವಾರ್ಷಿಕವಾಗಿ ನಿರ್ವಹಿಸುವಂತೆ ಸೂಚನೆ ನೀಡಲಾಗಿದೆ. ರಾಜಕಾಲುವೆಗಳಲ್ಲಿ ಸೋಲಾರ್ ಸೆನ್ಸರ್ ಅಳವಡಿಸಲಾಗಿದೆ ಎಂದು ತಿಳಿಸಿದರು.

    ಮುಖ್ಯ ರಸ್ತೆಗಳ ಮೇಲ್ವಿಚಾರಣೆಗಾಗಿ 24 ತಂಡ ರಚಿಸಲಾಗಿದ್ದು, ಮುಖ್ಯ ರಸ್ತೆಗಳಲ್ಲಿ ಶೀಲ್ಟ್, ಶೋಲ್ಡರ್ ಡ್ರೈನ್ ಸಮಸ್ಯೆ ಆಗದಂತೆ ಕ್ರಮ ವಹಿಸಲಾಗಿದೆ. 12 ಸಾವಿರ ಕಿ.ಮೀ. ವಾರ್ಡ್ ರಸ್ತೆಗಳ ನಿರ್ವಹಣೆಗೆ 12 ತಂಡ ರಚನೆ ಮಾಡಲಾಗಿದೆ. ರಸ್ತೆ ಗುಂಡಿ ಮುಚ್ಚುವಂತೆ ಗುತ್ತಿಗೆದಾರರಿಗೂ ಸಹ ಸೂಚಿಸಲಾಗಿದೆ. ವಾರ್ಡ್ ರಸ್ತೆಗಳ ಗುಂಡಿ ಮುಚ್ಚಲು 48 ಕೋಟಿ ರೂ. ನೀಡಲಾಗಿದೆ. ಮರಗಳು ಬಿದ್ದಲ್ಲಿ ತೆರವು ಕಾರ್ಯಚರಣೆ ನಡೆಸಲು 21 ತಂಡ ರಚಿಸಲಾಗಿದೆ ಎಂದು ತಿಳಿಸಿದರು.

    ನಗರದಲ್ಲಿ 4,430 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ 61 ವಾರ್ಡ್‍ಗಳನ್ನು ಹೈರಿಸ್ಕ್ ಡೆಂಗ್ಯೂ ವಾರ್ಡ್‍ಗಳೆಂದು ಗುರುತಿಸಲಾಗಿದೆ. ಕಸದ ನಿರ್ವಹಣೆ ವಿಚಾರವಾಗಿ ಕ್ವಾರಿಗಳಲ್ಲಿ ಯಾವುದೇ ಸಮಸ್ಯೆಯ ಇಲ್ಲ. ಬೆಳ್ಳಳ್ಳಿ ಕ್ವಾರಿಯಲ್ಲಿ ಒಂದು ತಿಂಗಳು ಕಸ ಹಾಕಬಹುದು. ಸದ್ಯ ಪಕ್ಕದಲ್ಲೇ ಮತ್ತೊಂದು ಸ್ಥಳ ನೋಡಲಾಗಿದೆ. ಆಗಸ್ಟ್ 18ಕ್ಕೆ ಹೊಸ ಟೆಂಡರ್ ಆಗಲಿದೆ. ಮುಂದಿನ 3 ತಿಂಗಳು ಕಸ ಹಾಕಲು ಪಾಲಿಕೆಗೆ ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿಸಿದರು.

    ಬಕ್ರೀದ್ ಹಿನ್ನೆಲೆಯಲ್ಲಿ ಪ್ರತಿ ವಾರ್ಡ್‍ನಲ್ಲೂ ಪ್ರಾಣಿಗಳ ತ್ಯಾಜ್ಯ ವಿಲೇವಾರಿಗೆ ಅವಕಾಶ ನೀಡಲಾಗಿದೆ. ನಿಗದಿತ ಸ್ಥಳಕ್ಕೆ ಪ್ರಾಣಿ ತ್ಯಾಜ್ಯ ನೀಡಬೇಕಾಗುತ್ತದೆ. ರಸ್ತೆ, ಮನೆ ಹತ್ತಿರ ಪ್ರಾಣಿ ತ್ಯಾಜ್ಯ ಹಾಕುವಂತಿಲ್ಲ ಎಂದು ಆಯುಕ್ತರು ಸೂಚಿಸಿದ್ದಾರೆ.

    ಅಧಿಕಾರಿಗಳಿಗೆ ರಜೆ ಇಲ್ಲ
    ಮಳೆ ಸಮಸ್ಯೆ ಮುಗಿಯೊವರೆಗೆ ಯಾರಿಗೂ ರಜೆ ಇಲ್ಲ. ತುರ್ತು ಅಗತ್ಯವಿದ್ದರೆ ಮಾತ್ರ ಮಾತ್ರ ರಜೆ ನೀಡಲಾಗುವುದು. ಅದಕ್ಕೂ ಸಹ ಆಯುಕ್ತರ ಅನುಮತಿ ಪಡೆಯಬೇಕಿದೆ. ಬಿಬಿಎಂಪಿ ಜೊತೆ ಸಿವಿಲ್ ಡಿಫೆನ್ಸ್ 63 ವಿಭಾಗವಿದ್ದು, ಒಂದು ತಂಡದಲ್ಲಿ 40 ರಿಂದ 50 ಜನರಿದ್ದಾರೆ. ಎನ್‍ಡಿಆರ್‍ಎಫ್, ಎಸ್‍ಡಿಆರ್‍ಎಫ್ ತಂಡಗಳು ಹಾಗೂ 28 ಅಗ್ನಿ ಶಾಮಕ ಸ್ಟೇಷನ್ ಗಳು ಕಾರ್ಯನಿರ್ವಹಿಸಲಿವೆ ಎಂದು ಮಾಹಿತಿ ನೀಡಿದರು.

  • ಸರಗಳ್ಳತನ, ಪುಡಿ ರೌಡಿಗಳ ಹೆಡೆಮುರಿ ಕಟ್ಟಲು ಸಜ್ಜಾದ ಪೊಲೀಸ್ ಪಡೆ

    ಸರಗಳ್ಳತನ, ಪುಡಿ ರೌಡಿಗಳ ಹೆಡೆಮುರಿ ಕಟ್ಟಲು ಸಜ್ಜಾದ ಪೊಲೀಸ್ ಪಡೆ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸರಣಿ ಸರಗಳ್ಳತನ ಹಾಗೂ ಪುಡಿ ರೌಡಿಗಳ ಹಾವಳಿಯಿಂದ ರಾಜಧಾನಿ ಪೊಲೀಸರು ಎಚ್ಚೆತ್ತುಕೊಂಡಿದ್ದು, ಎಂಟು ವಿಭಾಗೀಯ ಡಿಸಿಪಿಗಳಿಗೆ ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಖಡಕ್ ಸೂಚನೆ ನೀಡಿದ್ದಾರೆ.

    ಆಕ್ಟಿವ್ ಆಗಿರುವ ಅಪರಾಧ ಹಿನ್ನೆಲೆ ಹೊಂದಿರುವವರ ಪಟ್ಟಿ(ಎಂಒಬಿ)ಯಲ್ಲಿರುವರ ಮೇಲೆ ಹದ್ದಿನ ಕಣ್ಣಿಡುವಂತೆ ಅಲೋಕ್ ಕುಮಾರ್ ಸೂಚಿಸಿದ್ದಾರೆ. ಆಯುಕ್ತರ ಆದೇಶ ಮೇರೆಗೆ ಬೆಂಗಳೂರು ಸೂಪರ್ ಕಾಪ್ ಮೈಗೊಡವಿ ನಿಂತಿದ್ದು, ಬೆಳ್ಳಂಬೆಳಗ್ಗೆ ಎಂಒಬಿಗಳ ಮನೆ ಮೇಲೆ ಡಿಸಿಪಿಗಳು ದಾಳಿ ಮಾಡಿದ್ದಾರೆ. ಪೊಲೀಸರು ನಗರದ ಎಂಟು ವಿಭಾಗಗಳಲ್ಲಿರುವ ಎಂಒಬಿಗಳ ಚಳಿ ಬಿಡಿಸಿದ್ದಾರೆ. ಇದೇ ವೇಳೆ ಆಕ್ಟಿವ್ ಆಗಿರುವ ಎಂಒಬಿಗಳಿಗೆ ಎಚ್ಚರಿಕೆ ನೀಡಿದ್ದು, ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಖಡಕ್ಕಾಗಿ ಸೂಚಿಸಿದ್ದಾರೆ.

    ತಮ್ಮ ಠಾಣೆ ವ್ಯಾಪ್ತಿಯಲ್ಲಿರುವ ಎಂಒಬಿಗಳನ್ನು ಪಟ್ಟಿ ಮಾಡಿ ಎಲ್ಲರ ಮನೆ ಮೆಲೂ ದಾಳಿ ನಡೆಸಿದ್ದು, ಆಕ್ಟಿವ್ ಇರುವ ಎಂಒಬಿಗಳ ಪ್ರತ್ಯೇಕ ಪಟ್ಟಿ ತಯಾರಿಸಿದ್ದಾರೆ. ಆಕ್ಟಿವ್ ಆಗಿರುವ ಎಂಒಬಿಗಳ ಪಟ್ಟಿಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಇವರ ಚಲನವಲನದ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಅಲ್ಲದೆ, ನಗರದಲ್ಲಿ ಎಲ್ಲೇ ಸರಗಳ್ಳತನದಂತಹ ಪ್ರಕರಣಗಳೂ ನಡೆದರೂ ಬೇಗನೆ ಪತ್ತೆಹಚ್ಚು ರೀತಿಯಲ್ಲಿ ವ್ಯವಸ್ಥಿತವಾಗಿ ತಮ್ಮ ಠಾಣೆ ವ್ಯಾಪ್ತಿಯ ಎಂಒಬಿಗಳ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ.

  • ನಾನು ಮಾಜಿ ಕಾರ್ಪೋರೇಟರ್ ಮಗ ಎಂದು ಅವಾಜ್ – 2 ಕೊಂಬಿದ್ಯಾ ಅಂತ ಚಳಿ ಬಿಡಿಸಿದ ಆಯುಕ್ತ

    ನಾನು ಮಾಜಿ ಕಾರ್ಪೋರೇಟರ್ ಮಗ ಎಂದು ಅವಾಜ್ – 2 ಕೊಂಬಿದ್ಯಾ ಅಂತ ಚಳಿ ಬಿಡಿಸಿದ ಆಯುಕ್ತ

    ತುಮಕೂರು: ಸರಿಯಾಗಿ ನಿರ್ವಹಣೆ ಮಾಡದ ಶುದ್ಧ ನೀರಿನ ಘಟಕವನ್ನು ವಶಪಡಿಸಿಕೊಳ್ಳಲು ಮುಂದಾದಾಗ ಅಡ್ಡಿಪಡಿಸಿದ ಮಾಜಿ ಉಪಮೇಯರ್ ಮಗನಿಗೆ ತುಮಕೂರು ಪಾಲಿಕೆ ಆಯುಕ್ತರು ಸರಿಯಾಗಿಯೇ ಚಳಿ ಬಿಡಿಸಿದ್ದಾರೆ.

    ಮಾಜಿ ಮೇಯರ್ ಫರ್ಜಾನ್ ಖಾನ್ ಪುತ್ರ ವಸೀಂ ಖಾನ್ ಶೇರಾನಿಗೆ ಆಯುಕ್ತ ಭೂಬಾಲನ್ ಸಖತಾಗಿ ಬಿಸಿ ಮುಟ್ಟಿಸಿದ್ದಾರೆ. ಶುದ್ಧ ನೀರಿನ ಘಟಕಗಳು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ದೂರು ಬಂದಿತ್ತು. ಹೀಗಾಗಿ ವಿದ್ಯುತ್ ಬಿಲ್ ಸರಿಯಾಗಿ ಪಾವತಿಸದ ಜೊತೆಗೆ ನೀರಿನ ಘಟಕಗಳನ್ನ ಸರಿಯಾಗಿ ನಿರ್ವಹಿಸದ ಹಿನ್ನೆಲೆಯಲ್ಲಿ ಹಲವು ನೀರಿನ ಘಟಕಗಳನ್ನ ವಶಕ್ಕೆ ಪಡೆದು ಪಾಲಿಕೆ ಮೀಟರ್ ಅಳವಡಿಸಲು ಮುಂದಾಗಿತ್ತು.

    24ನೇ ವಾರ್ಡ್ ನ ಶುದ್ಧ ನೀರಿನ ಘಟಕ ಉಸ್ತುವಾರಿಯನ್ನು ವಸೀಂ ಖಾನ್ ಶೇರಾನಿ ವಹಿಸಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿ ಮಾಜಿ ಉಪಮೇಯರ್ ಪುತ್ರ ಎಂಬ ಪ್ರಭಾವ ಬಳಸಲು ಮುಂದಾಗಿದ್ದಾರೆ. ಆಗ ಸಿಡಿಮಿಡಿಗೊಂಡ ಆಯುಕ್ತ ಭೂಬಾಲನ್ ವಸೀಂ ಖಾನ್‍ನಿಗೆ ನೀನು ಮಾಜಿ ಉಪಮೇಯರ್ ಮಗನಾದರೆ ನಿನಗೆ ಎರಡು ಕೊಂಬು ಇದೆಯಾ ಎಂದು ಪ್ರಶ್ನಿಸಿ ಅವರ ಚಳಿ ಬಿಡಿಸಿದ್ದಾರೆ.

    ಪೊಲೀಸರ ಭದ್ರತೆ ಪಡೆದು ಒಟ್ಟು 21 ಶುದ್ಧ ನೀರಿನ ಘಟಕಗಳನ್ನು ಆಯುಕ್ತರು ವಶಪಡಿಸಿಕೊಂಡಿದ್ದು, ಬಳಿಕ ಮೀಟರ್ ಅಳವಡಿಸಲಾಗಿದೆ.

  • ಪ್ರಾಥಮಿಕ ಶಿಕ್ಷಣ ಸಚಿವರ ಸಮ್ಮುಖದಲ್ಲೇ ಐಎಎಸ್ ಅಧಿಕಾರಿಗಳ ಕಿತ್ತಾಟ!- ವಿಡಿಯೋ ನೋಡಿ

    ಪ್ರಾಥಮಿಕ ಶಿಕ್ಷಣ ಸಚಿವರ ಸಮ್ಮುಖದಲ್ಲೇ ಐಎಎಸ್ ಅಧಿಕಾರಿಗಳ ಕಿತ್ತಾಟ!- ವಿಡಿಯೋ ನೋಡಿ

    ಬೆಂಗಳೂರು: ಪ್ರಾಥಮಿಕ ಶಿಕ್ಷಣ ಸಚಿವ ಮಹೇಶ್ ಮಧ್ಯಸ್ಥಿಕೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳಿಬ್ಬರ ನಡುವಿನ ಅಸಮಾಧಾನ ಬಹಿರಂಗವಾಗಿದೆ.

    ಮೂಲ ಸೌಕರ್ಯಗಳಿಲ್ಲ ಅಂತಾ 200 ಕಾಲೇಜು ಆರಂಭಕ್ಕೆ ಪಿಯು ಶಿಕ್ಷಣ ಕೇಂದ್ರದ ನಿರ್ದೇಶಕಿ ಸಿ.ಶಿಖಾ ಅವರು ಒಪ್ಪಿಗೆ ನೀಡಲಿಲ್ಲ. ಇದಿಂದಾಗಿ ಕೋಪಗೊಂಡ ಆಯುಕ್ತೆ ಶಾಲಿನಿ ರಜನೀಶ್ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಇಬ್ಬರೂ ಅಧಿಕಾರಿಗಳ ನಡುವೆ ಕೆಲಹೊತ್ತು ವಾಗ್ದಾಳಿ ನಡೆಯಿತು.

    ಶೈಕ್ಷಣಿಕ ವರ್ಷ ಪ್ರಾರಂಭದಲ್ಲಿಯೇ ಮೂಲ ಸೌಕರ್ಯ ಪೂರೈಸಲಾಗುತ್ತದೆ. ಹೀಗಾಗಿ ಕಾಲೇಜು ಪ್ರಾರಂಭಿಸಲು ಆಯುಕ್ತೆ ಶಾಲಿನಿ ರಜನೀಶ್ ಪಟ್ಟು ಹಿಡಿದರು. ಆದರೆ ಇದಕ್ಕೆ ಜಗ್ಗದ ನಿರ್ದೇಶಕಿ ಶಿಖಾ ಅವರು ಮೂಲ ಸೌಕರ್ಯವಿರದೇ ಕಾಲೇಜು ಪ್ರಾರಂಭಿಸುವುದು ಸೂಕ್ತವಲ್ಲ ಎಂದು ಸಚಿವರ ಮಧ್ಯದಲ್ಲಿಯೇ ಆಕ್ಷೇಪ ವ್ಯಕ್ತಪಡಿಸಿದರು.

    https://youtu.be/Dpil431aWvM

    84 ಸಂಸ್ಥೆಗಳು ಪಿಯು ಕಾಲೇಜು ಪ್ರಾರಂಭಿಸಲು ಮನವಿ ಸಲ್ಲಿಸಿದರು. ನಿರ್ದೇಶಕರ ಒಪ್ಪಿಗೆ ಇಲ್ಲದೇ ಕಾಲೇಜು ಪ್ರಾರಂಭಿಸಲು ಆಗುವುದಿಲ್ಲ. ಇದರಲ್ಲಿ ಸರ್ಕಾರ ಮಧ್ಯಸ್ಥಿಕೆ ವಹಿಸಲು ಬರುವುದಿಲ್ಲ. ಆದರೆ ಮುಂದಿನ ದಿನಗಳಲ್ಲಿಯೇ ಸರ್ಕಾರವೇ ಇಂತಹ ನಿರ್ಧಾರ ಕೈಗೊಳ್ಳುವಂತೆ ಕಾಯ್ದೆಗೆ ತಿದ್ದುಪಡಿ ತರಲಾಗುತ್ತದೆ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಮಹೇಶ್ ಹೇಳಿದರು.

  • ಬಿಡಿಎ ಸೈಟ್‍ಗಾಗಿ ಹಿರಿಯ ನಟ ಸತ್ಯಜಿತ್ ಅಲೆದಾಟ – ಗಂಟೆಗಟ್ಟಲೆ ಕಾದ್ರೂ ಸ್ಥಳಕ್ಕೆ ಬರಲಿಲ್ಲ ಆಯುಕ್ತರು

    ಬಿಡಿಎ ಸೈಟ್‍ಗಾಗಿ ಹಿರಿಯ ನಟ ಸತ್ಯಜಿತ್ ಅಲೆದಾಟ – ಗಂಟೆಗಟ್ಟಲೆ ಕಾದ್ರೂ ಸ್ಥಳಕ್ಕೆ ಬರಲಿಲ್ಲ ಆಯುಕ್ತರು

    ಬೆಂಗಳೂರು: ಅವರು ಕನ್ನಡ ನಾಡು ಕಂಡ ಅದ್ಭುತ ಕಲಾವಿದರು. ಕನ್ನಡ ಚಿತ್ರರಂಗ ಸೇರಿದಂತೆ ಇತರೆ ಭಾಷೆಗಳಲ್ಲಿ ಸರಿ ಸುಮಾರು 600 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಿಯಿಸದ ಹಿರಿಯ ಕಲಾವಿದ. ಇತ್ತೀಚೆಗಷ್ಟೇ ಗ್ಯಾಂಗ್ರೀನ್‍ಗೆ ತುತ್ತಾಗಿ ತನ್ನ ಎರಡು ಕಾಲುಗಳನ್ನು ಕಳೆದುಕೊಂಡ ನಟ ಇದೀಗ ನಿವೇಶನಕ್ಕಾಗಿ ಪ್ರತಿನಿತ್ಯ ಬಿಡಿಎ ಕದ ತಟ್ಟುತ್ತಿದ್ದಾರೆ.

    ಹಿರಿಯ ನಟ ಸತ್ಯಜಿತ್ ಬಿಡಿಎ ಸೈಟ್‍ಗಾಗಿ ಪ್ರತಿನಿತ್ಯ ಬಿಡಿಎ ಮುಂದೆ ಅಲೆದಾಡೋ ಪರಿಸ್ಥಿತಿ ಬಂದಿದೆ. ಗ್ಯಾಂಗ್ರೀನ್‍ಗೆ ತುತ್ತಾಗಿ ತನ್ನ ಎರಡು ಕಾಲುಗಳನ್ನು ಕಳೆದುಕೊಂಡಿರೋ ಸತ್ಯಜಿತ್ ವ್ಹೀಲ್ ಚೇರ್‍ನಲ್ಲಿ ಬಿಡಿಎ ಆಯುಕ್ತರ ಭೇಟಿಗೆ ಬಂದಿದ್ರು. ಆದ್ರೆ 3-4 ಇಲಾಖೆಗಳನ್ನು ನೋಡಿಕೋಳ್ತಿರೋ ಬಿಡಿಎ ಆಯುಕ್ತ ರಾಕೇಶ್ ಸಿಂಗ್ ಬಿಡಿಎಗೆ ಅಪರೂಪಕ್ಕೊಮ್ಮೆ ಬರುತ್ತಾರೆ. ಈ ಬಗ್ಗೆ ಗೊತ್ತಿರದ ಸತ್ಯಜಿತ್ ಪ್ರತಿನಿತ್ಯ ಬಿಡಿಎಗೆ ಬಂದು ಆಯುಕ್ತರ ಭೇಟಿಗಾಗಿ ಗಂಟೆಗಟ್ಟಲೆ ಕಾದು ಕಾದು ವಾಪಸ್ ಹೋಗುವುದು ಸಾಮಾನ್ಯವಾಗಿಬಿಟ್ಟಿದೆ.

    ಮುಖ್ಯಮಂತ್ರಿಗಳ ಕಾರ್ಯದರ್ಶಿಗಳು ಕೊಟ್ಟ ಪತ್ರವನ್ನು ಪ್ರತಿನಿತ್ಯ ಹಿಡಿದುಕೊಂಡು ನನಗೋಂದು ಸೈಟ್ ಸಿಗುತ್ತೆ ಅನ್ನೋ ಆಸೆಯಿಂದ ಬರೋ ಸತ್ಯಜಿತ್‍ಗೆ ಇದುವರೆಗು ಬಿಡಿಎ ಆಯುಕ್ತ ರಾಕೇಶ್ ಸಿಂಗ್‍ರ ಮುಖ ದರ್ಶನವಾಗಿಲ್ಲ.

    ಇನ್ನಾದ್ರು ಆಯುಕ್ತರು ಕಚೇರಿಗೆ ಬಂದು ಇವರ ನೋವನ್ನು ಆಲಿಸಲಿ ಅನ್ನೋದು ನಮ್ಮ ಆಶಯ

  • ಕೋಳಿ ಕಳ್ಳತನವಾಗಿದೆ ಹುಡುಕಿಕೊಡಿ- ಕಮೀಷನರ್ ಕಚೇರಿಗೆ ಬಂದು ಅಜ್ಜಿಯಿಂದ ಕಂಪ್ಲೆಂಟ್

    ಕೋಳಿ ಕಳ್ಳತನವಾಗಿದೆ ಹುಡುಕಿಕೊಡಿ- ಕಮೀಷನರ್ ಕಚೇರಿಗೆ ಬಂದು ಅಜ್ಜಿಯಿಂದ ಕಂಪ್ಲೆಂಟ್

    ಬೆಂಗಳೂರು: ಈ ಸುದ್ದಿ ಕೇಳಿದ್ಮೇಲೆ ನೀವು ಶಾಕ್ ಆಗ್ತಿರೋ ಅಥವಾ ನಗ್ತಿರೋ ನಿಮಗೆ ಬಿಟ್ಟದ್ದು. ಸಿನಿಮಾದಲ್ಲಿ ನೋಡ್ತಿದ್ದ ಸೀನ್‍ಗಳು ಈಗ ರಿಯಲ್ಲಾಗಿ ನಡೀತಿದೆ. ಕೋಳಿ ಕಳೆದು ಹೋಗಿದೆ, ಹುಡುಕಿಕೊಡಿ ಅಂತ ದೂರು ಕೊಟ್ಟ ಸ್ಟೋರಿಯಿದು.

    ಹೌದು. ಕೋಳಿ ಹುಡುಕಿಕೊಡಿ ಅಂತಾ ಕಮೀಷನರ್ ಕಚೇರಿಗೆ ಬಂದು ಅಜ್ಜಿಯೊಬ್ಬರು ದೂರು ನೀಡಿದ್ದಾರೆ. ಇತ್ತೀಚೆಗೆ ಅಜ್ಜಿಯ ಮನೆಯಲ್ಲಿದ್ದ 35 ಕೋಳಿಗಳ ಕಳ್ಳತನವಾಗಿತ್ತು. ಈ ಬಗ್ಗೆ ಬೈಯಪ್ಪನಹಳ್ಳಿ ಪೊಲೀಸರು ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದು. ಹೀಗಾಗಿ ವೃದ್ದೆ ಗಿರಿಜಮ್ಮ ಪೆÇಲೀಸ್ ಕಮಿಷನರ್ ಕಚೇರಿಗೆ ಆಗಮಿಸಿ ದೂರು ಕೊಟ್ಟಿದ್ದಾರೆ.

    ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರ ಕಚೇರಿಗೆ ಬಂದು ವೃದ್ಧೆ ದೂರು ನೀಡಿರೋ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ದೂರು ದಾಖಲಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.