ಚೆನ್ನೈ: ಖಾಸಗಿ ಶಾಲೆಯೊಂದರಲ್ಲಿ ಶೌಚಾಲಯದ ಗೋಡೆ ಕುಸಿದು ಬಿದ್ದ ಪರಿಣಾಮ ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ಶಾಫ್ಟರ್ ಹೈಯರ್ ಸೆಕೆಂಡರಿ ಶಾಲೆಯ ಮಕ್ಕಳಾಗಿದ್ದು, 8ನೇ ತರಗತಿಯಲ್ಲಿ ಓದುತ್ತಿದ್ದರು. ಇಂದು ಬೆಳಗ್ಗೆ ಈ ಘಟನೆ ನಡೆದಿದ್ದು, ಇನ್ನುಳಿದ ಮೂವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಇದನ್ನೂ ಓದಿ: ರಾತ್ರೋರಾತ್ರಿ ಲಕ್ಷಾಂತರ ರೂ. ಮೌಲ್ಯದ ಶ್ರೀಗಂಧ ಮರ ಕಳ್ಳತನ
ಬೆಂಗಳೂರು: ನಗರದಲ್ಲಿ ಡೆಲ್ಟಾ ಪ್ರಕರಣಗಳು ಮಹಾ ಸ್ಫೋಟ ಆಗುತ್ತಿರುವ ಹೊತ್ತಲ್ಲೇ ಬಿಬಿಎಂ ಕಮಿಷನರ್ ಗೌರವ್ ಗುಪ್ತಾ ಆತಂಕಕಾರಿ ಹೇಳಿಕೆಯನ್ನು ನೀಡಿದ್ದಾರೆ. ಡೆಲ್ಟಾ ವೇರಿಯಂಟ್ ವೈರಾಣು ತಳಿ, 10 ಕೇಸ್ ಗಳು ದೃಢವಾದ್ರೆ, ಅದ್ರಲ್ಲಿ 6-7 ಕೇಸ್ ಗಳು ಡೆಲ್ಟಾ ಕೇಸ್ ಗಳು ಪತ್ತೆಯಾಗುತ್ತಿವೆ. ಎರಡನೇ ಅಲೆಯಲ್ಲಾದ ಸಾವು ನೋವುಗಳಿಗೆ ಇದರ ಹಬ್ಬುವಿಕೆಯೇ ಕಾರಣ ಎಂದು ಆತಂಕವನ್ನು ವ್ಯಕ್ತಪಡಿಸಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಬಿಬಿಎಂಪಿ ಕಮಿಷನರ್ ಗೌರವ್ ಗುಪ್ತಾ, ಡೆಲ್ಟಾ ವೆರಿಯಂಟ್ ಕೇಸ್ ಗಳ ಬಗ್ಗೆ ಮಾಹಿತಿಯನ್ನು ನೀಡಿದ್ದು, ಪ್ರತಿನಿತ್ಯದ ಕೊರೊನಾ ಸೋಂಕಿನ ಪ್ರಕರಣಗಳಲ್ಲಿ ಡೆಲ್ಟಾ ರೂಪಾಂತರ ವೈರಸ್‍ನ ಪ್ರಕರಣಗಳು ಪತ್ತೆಯಾಗುತ್ತಿವೆ. ಡೆಲ್ಟಾ ವೇರಿಯಂಟ್‍ನ ಮತ್ತೊಂದು ರೂಪವೇ ಡೆಲ್ಟಾ ಪ್ಲಸ್. ಜನರ ಕೈಯಲ್ಲಿಯೇ ಎಲ್ಲವೂ. ಜನರ ಸುರಕ್ಷತೆ ಮುಖ್ಯ. ಜನ ಗಾಬರಿ ಪಡುವಂತಹ ಅವಶ್ಯಕತೆಯಿಲ್ಲ ಎಂದರು. ಇದನ್ನೂ ಓದಿ: ಮೈಸೂರಲ್ಲಿ ಶೀಘ್ರವೇ ಡೆಲ್ಟಾ ಪ್ಲಸ್ ಪರೀಕ್ಷಾ ಲ್ಯಾಬ್ ಆರಂಭ
ಬೆಂಗಳೂರಿನಲ್ಲಿ ಒಟ್ಟು 525 ಡೆಲ್ಟಾ ವೆರಿಯಂಟ್ ಪ್ರಕರಣಗಳು ಪತ್ತೆಯಾಗಿದ್ದು, ಸ್ಯಾಂಪಲ್ಸ್ ನ್ನು ನಿಮಾನ್ಸ್ ಹಾಗೂ ಎನ್‍ಸಿಬಿಎಸ್‍ಗೆ ಕಳುಹಿಸಲಾಗಿದೆ. ಮುಂದಿನ ದಿನಗಳಲ್ಲಿ ಜನರು ಆದಷ್ಟು ಸುರಕ್ಷತೆಯಿಂದ ಇರಬೇಕೆಂದು ಸಲಹೆ ನೀಡಿದರು.
– ಪೊಲೀಸರ ಮೂಲಕ ಹಲ್ಲೆ ಮಾಡಿಸಿದ ಪೌರಾಯುಕ್ತ
– ಲಂಚ ನೀಡಿದವರಿಗೆ ಒಂದು ನ್ಯಾಯ, ನೀಡದಿರುವವರಿಗೆ ಒಂದು ನ್ಯಾಯ
ಯಾದಗಿರಿ: ಅಂಗಡಿ ತೆರೆಯುವುದಕ್ಕೆ ಲಂಚ ನೀಡದ ವ್ಯಾಪಾರಿಯ ಮೇಲೆ ಪೊಲೀಸರ ಮೂಲಕ ಪೌರಾಯುಕ್ತ ಹಲ್ಲೆ ಮಾಡಿಸಿದ ಘಟನೆ ಜಿಲ್ಲೆಯ ಶಹಪುರದಲ್ಲಿ ನಡೆದಿದೆ. ಲಾಕ್‍ಡೌನ ಸಡಿಲಿಕೆ ಹಿನ್ನೆಲೆ ಶಹಪುರದ ಕಿರಾಣಿ ಅಂಗಡಿಗಳಿಗೆ ಪೌರಾಯುಕ್ತ ರಮೇಶ್ ಸಾವಿರಾರು ರೂಪಾಯಿ ಲಂಚದ ಬೇಡಿಕೆ ಇಡುತ್ತಿದ್ದಾರೆ.
ಲಂಚ ನೀಡಿದವರಿಗೆ ವ್ಯಾಪಾರಕ್ಕೆ ಸಮಯ ಹೆಚ್ಚು ನೀಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದೆ. ರಮೇಶ್ ಓರ್ವ ಕಿರಾಣಿ ವ್ಯಾಪಾರಿಗೆ ಲಂಚದ ಬೇಡಿಕೆ ಇಟ್ಟಿದ್ದಾರೆ. ಅಧಿಕಾರಿಯ ಮಾತಿಗೆ ವ್ಯಾಪಾರಿ ಆಗುವುದಿಲ್ಲ ಎಂದು ಉತ್ತರಿಸಿದ್ದಾರೆ. ಇದರಿಂದಾಗಿ ಪೌರಾಯುಕ್ತ ರಮೇಶ್ ಪೊಲೀಸರಿಗೆ ಕುಮ್ಮಕ್ಕು ನೀಡಿ ನಡು ರಸ್ತೆಯಲ್ಲಿ ಮನ ಬಂದಂತೆ ವ್ಯಾಪಾರಿಗೆ ಥಳಿಸಿದ್ದಾರೆ. ಆಕ್ರೋಶಗೊಂಡ ವ್ಯಾಪಾರಿಗಳು ಶಹಪುರ ನಗರಸಭೆಗೆ ಮುತ್ತಿಗೆ ಹಾಕಿ, ಪೊಲೀಸರ ಮತ್ತು ನಗರಸಭೆ ಸಿಬ್ಬಂದಿ ದೌರ್ಜನ್ಯ ಖಂಡಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ.
ನಾಳೆಯಿಂದ ಎಲ್ಲ ರೀತಿಯ ವ್ಯಾಪಾರ ವಹಿವಾಟು ನಿಲ್ಲಿಸಲು ನಿರ್ಧಾರ ಮಾಡಿದ್ದಾರೆ. ಸುದ್ದಿ ತಿಳಿದ ಸಹಾಯಕ ಆಯುಕ್ತ ಪ್ರಶಾಂತ್, ವ್ಯಾಪಾರಿಗಳ ಸಂಧಾನಕ್ಕೆ ಪ್ರಯತ್ನ ಪಟ್ಟರು. ಆದರೆ ಎಸಿ ಮಾತಿಗೆ ಬಗ್ಗದ ವ್ಯಾಪಾರಸ್ಥರು, ರಮೇಶ್ ಮತ್ತು ಪೊಲೀಸರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಬೆಂಗಳೂರು: ಬಿಡಿಎ ನೂತನ ಆಯುಕ್ತರಾಗಿ ಹಿರಿಯ ಐಎಎಸ್ ಅಧಿಕಾರಿ ಎಂ.ಬಿ.ರಾಜೇಶ್ ಗೌಡ ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ನೂತನ ಆಯುಕ್ತರಿಗೆ ಶುಭ ಕೋರಿ ಮಾತನಾಡಿದ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ವಿಶ್ವನಾಥ್, ಪ್ರಾಧಿಕಾರ ಸಾರ್ವಜನಿಕರ ಸೇವೆಯ ಸಂಸ್ಥೆಯಾಗಿದ್ದು, ಸಾರ್ವಜನಿಕ ಸ್ನೇಹಿ ಸಂಸ್ಥೆಯನ್ನಾಗಿ ಮಾಡುವ ಹೊಣೆ ಎಲ್ಲರದ್ದಾಗಿದೆ. ಸಣ್ಣಪುಟ್ಟ ಕೆಲಸಗಳಿಗಾಗಿ ಸಾರ್ವಜನಿಕರು ಬಿಡಿಎಗೆ ಅಲೆಯದಂತೆ ನೋಡಿಕೊಳ್ಳಬೇಕು. ಬಿಡಿಎ ಒಂದು ಕುಟುಂಬ ಇದ್ದಂತೆ. ಎಲ್ಲರೂ ಒಗ್ಗಟ್ಟಾಗಿ ಸಂಸ್ಥೆ ಮತ್ತು ಸಾರ್ವಜನಿಕರ ಏಳ್ಗೆಗಾಗಿ ಶ್ರಮಿಸಿ, ಸಂಸ್ಥೆಗೆ ಹೆಸರು ತರೋಣ ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ನೂತನ ಆಯುಕ್ತ ರಾಜೇಶ್ ಗೌಡ ಮಾತನಾಡಿ, ಸಾರ್ವಜನಿಕರಿಗಾಗಿ ಇರುವ ಸಂಸ್ಥೆಯ ಉನ್ನತಿಗೆ ಕೆಲಸ ಮಾಡಲಾಗುವುದು ಎಂದರು. ಈ ಸಂದರ್ಭದಲ್ಲಿ ಬಿಡಿಎನ ಹಲವಾರು ಅಧಿಕಾರಿಗಳು ಇದ್ದರು.
ಬೆಂಗಳೂರು: ಕೊರೊನಾ ವಿಚಾರದಲ್ಲಿ ಸಾರ್ವಜನಿಕರಲ್ಲಿ ಅನಗತ್ಯ ಆತಂಕ ಹುಟ್ಟಿಸಬೇಡಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಕೊರೊನಾ ಬಿಗಿ ನಿಯಮಗಳ ಜಾರಿಗೆ ಬಿಬಿಎಂಪಿಯಿಂದ ಪ್ರಸ್ತಾವನೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪಾರ್ಕ್, ಸ್ವಿಮ್ಮಿಂಗ್ ಪೂಲ್ ಬಂದ್ ಮಾಡುವುದು, ಥೀಯೇಟರ್ ಗಳಲ್ಲಿ ಶೇ.50ರಷ್ಟು ಭರ್ತಿಗೆ ಮಾತ್ರ ಅವಕಾಶ ನೀಡುವುದು. ವಿವಾಹ ಸಮಾರಂಭಗಳಲ್ಲಿ ಹೆಚ್ಚು ಜನ ಸೇರದಂತೆ ಕ್ರಮ ವಹಿಸುವ ಅಗತ್ಯವಿದೆ ಎಂದು ಮಂಜುನಾಥ್ ಪ್ರಸಾದ್ ಸರ್ಕಾರಕ್ಕೆ ಸಲ್ಲಿಸಿದ ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ ಎಂದು ಮಾಹಿತಿ ನೀಡಿದ್ದರು. ಇದನ್ನೂ ಓದಿ: ಥೀಯೇಟರ್‌ಗಳ ಸಾಮರ್ಥ್ಯ ಶೇ.50ಕ್ಕೆ ಇಳಿಸಿ- ಬಿಬಿಎಂಪಿಯಿಂದ ಸರ್ಕಾರಕ್ಕೆ ಪ್ರಸ್ತಾವನೆ
ಇದಕ್ಕೆ ಸಿಎಂ ಕೆಂಡಾಮಂಡಲವಾಗಿದ್ದು, ಅನಗತ್ಯ ಆತಂಕ ಹುಟ್ಟಿಸೋದು ಯಾಕೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಕೊರೊನಾ ನಿಯಮಗಳ ಜಾರಿ ಬಗ್ಗೆ ಈಗಾಗಲೇ ತಾಂತ್ರಿಕ ಸಲಹಾ ಸಮಿತಿ ಸಭೆ ಆಗಿದೆ. ಪ್ರಧಾನಿ ನರೇಂದ್ರ ಮೋದಿಯವರಿಗೂ ಕೊರೊನಾ ವಸ್ತುಸ್ಥಿತಿಯ ಬಗ್ಗೆ ಮಾಹಿತಿ ನೀಡಲಾಗಿದೆ. ಖುದ್ದು ಪ್ರಧಾನಿಯವರೇ ಜನರಲ್ಲಿ ಆತಂಕ ಹುಟ್ಟಿಸೋದು ಬೇಡ ಎಂದಿದ್ದಾರೆ. ಈ ಮಧ್ಯೆ ಅನಗತ್ಯ ಹೇಳಿಕೆ ಯಾಕೆ ಕೊಡಬೇಕಿತ್ತು ಎಂದು ಆಯುಕ್ತರಿಗೆ ಸಿಎಂ ಕ್ಲಾಸ್ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಇನ್ನೊಂದು ವಾರ ಪರಿಸ್ಥಿತಿ ಅವಲೋಕನ ಮಾಡುವುದಾಗಿ ನಿರ್ಧರಿಸಲಾಗಿದೆ. ಪ್ರಸ್ತಾವನೆ ಕೊಟ್ಟ ಮೇಲೆ ತಜ್ಞರು ಪರಿಸ್ಥಿತಿ ಅವಲೋಕಿಸಿ ವರದಿ ನೀಡುತ್ತಾರೆ. ಅದಕ್ಕೂ ಮುನ್ನ ಮಾಧ್ಯಮಗಳಿಗೆ ಹೇಳಿಕೆ ಕೊಟ್ಟು ಜನರಲ್ಲಿ ಆತಂಕ ಹುಟ್ಟಿಸುವ ಪ್ರಯತ್ನ ಬೇಡ. ಏನೇ ಇದ್ದರೂ ತಜ್ಞರ ಜೊತೆ ಚರ್ಚಿಸಿ, ತೀರ್ಮಾನಿಸಲಾಗುತ್ತದೆ. ಅನಗತ್ಯ ಆತಂಕ ಹುಟ್ಟಿಸಿ ಜನರನ್ನು ಭೀತಿಗೆ ತಳ್ಳುವುದು ಬೇಡ ಎಂದು ಸಿಎಂ ತಾಕೀತು ಮಾಡಿದ್ದಾರೆ.
ಮಂಗಳೂರು: ಬೈಕ್‍ನಲ್ಲಿ ಆಗಮಿಸಿದ ಕಮಿಷನರ್ ಮತ್ತು ಡಿಸಿಪಿ ಅಕ್ರಮವಾಗಿ ಸಾಗಿಸುತ್ತಿದ್ದ ಮರಳು ಲಾರಿಯನ್ನು ತಡೆದಿರುವ ಘಟನೆ ನಿನ್ನೆ ಮಧ್ಯರಾತ್ರಿ ಮಂಗಳೂರಿನಲ್ಲಿ ನಡೆದಿದೆ.
ಕೇರಳಕ್ಕೆ ಲಾರಿ ಮೂಲಕ ಅಕ್ರಮವಾಗಿ ಮರಳನ್ನು ಸಾಗಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್, ಡಿಸಿಪಿ ಹರಿರಾಂ ಶಂಕರ್ ಲಾರಿಯನ್ನು ಬೈಕ್ ಮೂಲಕ ಹಿಂಬಾಲಿಸಿ ಮಂಗಳೂರಿನ ಕೇರಳ ಕರ್ನಾಟಕ ಗಡಿ ಭಾಗದ ತಲಪಾಡಿ ಟೋಲ್ ಗೇಟ್ ಬಳಿ ತಡೆದಿದ್ದಾರೆ.
ಸದ್ಯ ಮರಳು ಲಾರಿಗೆ ಎಸ್ಕಾರ್ಟ್ ನೀಡುತ್ತಿದ್ದ ಚಂದ್ರ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮರಳು ಲಾರಿಯನ್ನು ಸೀಝ್ ಮಾಡಿದ್ದಾರೆ. ಘಟನೆ ಸಂಬಂಧಿಸಿದಂತೆ ಅಕ್ರಮ ಮರಳು ಸಾಗಾಟ, ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಸೇರಿದಂತೆ ಎರಡು ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ ತಲಪಾಡಿ ಟೋಲ್ ಗೇಟ್‍ನ ಸಿಸಿಟಿವಿ ಕ್ಯಾಮೆರಾದಲ್ಲಿ ಪೊಲೀಸರು ನಡೆಸಿಸದ ಮಿಡ್ ನೈಟ್ ಅಪರೇಷನ್ ದೃಶ್ಯ ಸೆರೆಯಾಗಿದೆ.
ಬೆಂಗಳೂರು: ಟ್ರಾಫಿಕ್ ಸಿಗ್ನಲ್‍ಗಳಲ್ಲಿ ಭಿಕ್ಷಾಟನೆಗೆ ಬ್ರೇಕ್ ಬಿದ್ದಿದೆ. ಸಿಗ್ನಲ್‍ಗಳಲ್ಲಿ ಭಿಕ್ಷೆ ಬೇಡುವುದು ಹಾಗೂ ಹಣ ವಸೂಲಿ ಮಾಡುವುದು ತಡೆಯುವಂತೆ ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಆದೇಶ ಪ್ರಕಟಿಸಿದ್ದಾರೆ.
ಭಿಕ್ಷಾಟನೆಯಿಂದ ಟ್ರಾಫಿಕ್ ಸಮಸ್ಯೆ ಹಾಗೂ ಸಾರ್ವಜನಿಕರ ಜೊತೆ ಅನುಚಿತ ವರ್ತನೆ ನಡೆಯುತ್ತಿದೆ. ಹಣ ನೀಡಲು ನಿರಾಕರಿಸುವ ವೇಳೆ ವಾಹನ ಸವಾರರ ಜೊತೆ ಅನುಚಿತ ವರ್ತನೆ ತೋರಿ ತೊಂದರೆಯಾಗುತ್ತದೆ. ಈ ಕಾರಣದಿಂದಾಗಿ ಸಿಗ್ನಲ್‍ಗಳಲ್ಲಿ ಭಿಕ್ಷಾಟನೆ ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು ಕಮಿಷನರ್ ಸೂಚನೆ ನೀಡಿದ್ದಾರೆ.
ಭಿಕ್ಷಾಟನೆ ತಡೆಯಲು ಕಮಿಷನರ್ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ. ಲಾ ಆಂಡ್ ಆರ್ಡರ್ ಹಾಗೂ ಟ್ರಾಫಿಕ್ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನೆಡಸಿ ಕ್ರಮ ಕೈಗೊಳ್ಳುಬೇಕು. ಎಲ್ಲಾ ಡಿಸಿಪಿಗಳು ತಮ್ಮ ವಿಭಾಗಗಳಲ್ಲಿ ಭಿಕ್ಷೆ ಬೇಡುವುದನ್ನು ತಪ್ಪಿಸ ಬೇಕು. ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕ್ರಮಕ್ಕೆ ಸೂಚನೆ ನೀಡಲಾಗಿದೆ.
ಬೆಂಗಳೂರು: ಲಂಡನ್‍ನಲ್ಲಿ ರೂಪಾಂತರ ಕೊರೊನಾ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ರಾತ್ರಿ 11 ರಿಂದ 5 ರ ತನಕ ನೈಟ್ ಕರ್ಫ್ಯೂ ಜಾರಿಯಲ್ಲಿರುತ್ತದೆ. ಸಾರ್ವಜನಿಕರು ಯಾವೆಲ್ಲ ರೂಲ್ಸ್ ಪಾಲಿಸಬೇಕು ಎಂದು ಕಮಿಷನರ್ ಕಮಲ್ ಪಂಥ್ ಹೇಳಿದ್ದಾರೆ.
ನೈಟ್ ಕರ್ಫ್ಯೂ ಕುರಿತಾಗಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೆಲವು ಚಟುವಟಿಕೆಗಳನ್ನು ಬಿಟ್ಟು ಬೇರೆಯದಕ್ಕೆ ಅವಕಾಶ ಇರುವುದಿಲ್ಲ. ರಾತ್ರಿ ವೇಳೆ ಇಂಡಸ್ಟ್ರೀಸ್ ಕೆಲಸ ಮಾಡಲು ಅವಕಾಶ ಇರುತ್ತದೆ. ಕಂಪನಿಯ ಐಡಿ ಇದ್ದರೆ ಓಡಾಡಲು ಅವಕಾಶ ನೀಡುತ್ತೇವೆ ಎಂದು ಹೇಳಿದ್ದಾರೆ.
ದೂರದ ಪ್ರಯಾಣಕ್ಕೆ ಯಾವುದೇ ತೊಂದರೆ ಇರೋದಿಲ್ಲ. ದೂರದ ಊರಿಗೆ ಹೋಗುವವರು ಟಿಕೆಟ್ ತೋರಿಸಬೇಕು. ನಾಕಾಬಂದಿಯಲ್ಲಿ ಟಿಕೆಟ್ ಬುಕ್ಕಿಂಗ್ ಚೆಕ್ ಮಾಡಲಾಗುತ್ತದೆ. ಇಂದು ಕ್ರಿಸ್ಮಸ್ ಆಚರಣೆಗೆ ಯಾವುದೇ ಅಡ್ಡಿಯೂ ಇಲ್ಲ ಎಂದು ತಿಳಿಸಿದ್ದಾರೆ.
ಅನಾವಶ್ಯಕವಾಗಿ ಹೊರಗೆ ಬಂದರೆ ಕಾನೂನು ಕ್ರಮವನ್ನು ಕೈಗೊಳ್ಳುತ್ತೇವೆ. ಈ ವೇಳೆ ಕೇಸನ್ನು ಕೂಡ ಬುಕ್ ಮಾಡಲಾಗುತ್ತೆದೆ. ರಾತ್ರಿಯಿಂದ ಬೆಳಗ್ಗೆಯವರೆಗೂ ಚೆಕ್ಕಿಂಗ್ ಇರುತ್ತದೆ. ಎಲ್ಲಾ ಪ್ಲೈ ಓವರ್ ಬಂದ್ ಮಾಡುತ್ತೇವೆ. ಎಲ್ಲಾ ಕಡೆ ನಾಕಾಬಂದಿ ಹಾಕಲಾಗುತ್ತದೆ. ಕೆಎಸ್ ಆರ್ ಪಿ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುತ್ತೆ ಎಂದರು.
ಹೊಸ ವರ್ಷದ ಆಚರಣೆಗೆ ಯಾವುದೇ ಅವಕಾಶ ಇರೋದಿಲ್ಲ. ಬ್ಯಾರಿಕೇಡ್‍ಗಳನ್ನು ಹಾಕಿ ಚೆಕ್ಕಿಂಗ್ ಮಾಡಲಾಗುತ್ತದೆ. ಬಾರ್ ಅಲ್ಲಿ ಕೆಲಸ ಮಾಡುವವರು ಕೂಡ 11 ಗಂಟೆ ಒಳಗೆ ಕೆಲಸ ಮುಗಿಸಿ ಮನೆಗೆ ಸೇರಬೇಕು. ಕೊರೊನಾ ನೈಟ್ ಕರ್ಫ್ಯೂ ರೂಲ್ಸ್ ಬ್ರೇಕ್ ಮಾಡಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
– ಸರಗಳ್ಳತನ ಪ್ರಕರಣದ ಕಾರ್ಯಾಚರಣೆ
– ಒಂದು ಮುಕ್ಕಾಲು ಕೆಜಿ ಚಿನ್ನ ವಶ
ಬೆಂಗಳೂರು: ಸಿಸಿಬಿ ಪೊಲೀಸರು ಎರಡು ಕಾರ್ಯಾಚರಣೆ ನಡೆಸಿದ್ದು, ಮೊತ್ತೊಂದು ಡ್ರಗ್ಸ್ ದಂಧೆ ಜಾಲವನ್ನು ಪತ್ತೆ ಮಾಡಿದ್ದಾರೆ ಎಂದು ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಮಿಷನರ್ ಕಮಲ್ ಪಂತ್, ಸಿಸಿಬಿ ಪೊಲೀಸರು ಕೆ.ಆರ್.ಪುರಂ ವ್ಯಾಪ್ತಿಯಲ್ಲಿ ಮತ್ತೊಂದು ಡ್ರಗ್ಸ್ ಜಾಲದ ಮೇಲೆ ದಾಳಿ ಮಾಡಿದ್ದಾರೆ. ಕಾರ್ಯಾಚರಣೆ ವೇಳೆ 2 ಕೆಜಿ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಇದರ ಬೆಲೆ 20 ಲಕ್ಷಕ್ಕೂ ಅಧಿಕ ಬೆಲೆ ಇರಬಹುದು ಎಂದರು.
ನಮಗೆ ಇರುವ ಮಾಹಿತಿಯ ಪ್ರಕಾರ ಡ್ರಗ್ಸ್ ಕಾಲೇಜುಗಳಲ್ಲೂ ಕಂಡು ಬರುತ್ತಿದೆ. ಇದರಲ್ಲಿ ಭಾಗಿಯಾಗಿದ್ದ ಮೂವರನ್ನು ಬಂಧಿಸಲಾಗಿದೆ. ಮೂವರನ್ನು ಕೇಳರ ಮೂಲದವರು ಎಂದು ಗುರುತಿಸಲಾಗಿದೆ. ಲಂಡನ್‍ನಲ್ಲಿ ಓದಿ ಬಂದಿದ್ದ ಯುವಕ ಡ್ರಗ್ಸ್ ದಂಧೆ ಮಾಡುತ್ತಿದ್ದನು. ಮನೆಯೊಂದರ ಮೇಲೆ ದಾಳಿ ನಡೆಸಿ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ ಎಂದು ಕಮಿಷನರ್ ಹೇಳಿದರು.
ಕಾಲೇಜು, ಶಾಲೆಗಳಲ್ಲಿ ಡ್ರಗ್ಸ್ ಸೇವನೆ ಮಾಡುತ್ತಿರುವ ಬಗ್ಗೆ ದೂರು ಕೇಳಿ ಬರುತ್ತಿವೆ. ಹೀಗಾಗಿ ಕಾಲೇಜು, ಶಾಲಾ ಆಡಳಿತ ಮಂಡಳಿ ನಮಗೆ ಸಹಕರಿಸಬೇಕು. ಡ್ರಗ್ಸ್ ದಂಧೆಯನ್ನು ಕಡಿವಾಣ ಹಾಕಲು ಪ್ರಯತ್ನ ಮಾಡುತ್ತಿದ್ದೇವೆ. ಆಡಳಿತ ಮಂಡಳಿ ನಮ್ಮ ಜೊತೆ ಕೈ ಜೋಡಿಸಬೇಕು. ಯುವಕರು ಬೇರೆ ದೇಶದಿಂದ ಬಂದು ಡ್ರಗ್ಸ್ ಕೊಡುತ್ತಾರ ಅಥವಾ ಒಳಗಿನವರೇ ಕೊಡುತ್ತಾರ ಎಂಬ ಮಾಹಿತಿ ಗೊತ್ತಾದರೆ ಕೂಡಲೇ ನಮ್ಮ ಬಳಿ ಮಾಹಿತಿಯನ್ನು ಶೇರ್ ಮಾಡಿಕೊಳ್ಳಬೇಕು ಎಂದು ಕಮಲ್ ಪಂತ್ ಮನವಿ ಮಾಡಿಕೊಂಡರು.
ಸಿಸಿಬಿ ಪೊಲೀಸರು ಮತ್ತೊಂದು ಕಾರ್ಯಾಚರಣೆ ಮಾಡಿದ್ದು, 1 ಕೆಜಿ 700 ಗ್ರಾಂ ಬಂಗಾರವನ್ನು ವಶಪಡಿಸಿಕೊಂಡಿದ್ದಾರೆ. 2017-2018ರಲ್ಲಿ ನಡೆದಿದ್ದ 37 ಸರಗಳ್ಳತನ ಕೇಸನ್ನು ಸಿಸಿಬಿ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಒಂದು ವಾರದೊಳಗೆ ಚಿನ್ನ ಕಳೆದುಕೊಂಡಿದವರಿಗೆ ಅವರ ಬಂಗಾರವನ್ನು ವಾಪಸ್ ಕೊಡಲಾಗುತ್ತದೆ. ಸಿಸಿಬಿ ಪೊಲೀಸರು ಒಳ್ಳೆಯ ಕಾರ್ಯಾಚರಣೆ ಮಾಡಿದ್ದಾರೆ ಎಂದು ಅವರನ್ನು ಕಮಿಷನರ್ ಕಮಲ್ ಪಂತ್ ಅಭಿನಂದಿಸಿದರು.
ಬೆಂಗಳೂರು: ಅಮಾಯಕರು ಅರೆಸ್ಟ್ ಆಗಿದ್ದರೆ ಪೊಲೀಸರು ಬಿಟ್ಟು ಕಳಿಸಲ್ವೇ ನೀವ್ಯಾಕೆ ಒತ್ತಡ ಹಾಕುತ್ತೀರಾ ಅಂದಿದ್ದಕ್ಕೆ ಶಾಂತಿನಗರದ ಶಾಸಕ ಹ್ಯಾರಿಸ್ ಪಬ್ಲಿಕ್ ಟಿವಿ ಮೇಲೆ ಸಿಟ್ಟಾಗಿದ್ದಾರೆ.
ಪೊಲೀಸರು ಬಂಧಿಸಿದವರಲ್ಲಿ ಕೆಲವರು ಅಮಾಯಕರು ಇರಬಹುದು. ಅಂತವರನ್ನ ಬಿಡಿ ಎಂದು ಮಾಜಿ ಸಚಿವ ರೋಷನ್ ಬೇಗ್ ಪೊಲೀಸ್ ಕಮೀಷನರ್ ಬಳಿ ಕೇಳಿಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಹ್ಯಾರಿಸ್, ಗೋರಿಪಾಳ್ಯ, ಟಿಪ್ಪು ನಗರದಿಂದ ಬಂದಿರೋದನ್ನು ರೋಷನ್ ಬೇಗ್ ನೋಡಿದ್ದರೆ ಅವರು ಮೊನ್ನೆಯೇ ಹೇಳಬಹುದಿತ್ತು. ಇದರಿಂದ ತನಿಖೆ ನಡೆಸೋದಕ್ಕೆ ಸುಲಭವಾಗಿರೋದು ಎಂದು ವ್ಯಂಗ್ಯವಾಡಿದರು.
ನಡೆದಿರುವುದನ್ನು ನಾವು ಯಾರು ಒಪ್ಪಿಕೊಳ್ಳುತ್ತಿಲ್ಲ. ಯಾರೇ ತಪ್ಪು ಮಾಡಿದರೂ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಿ. ಮಾನವೀಯತೆ ದೃಷ್ಟಿಯಿಂದ ಕಮಿಷನರ್ ಜೊತೆ ಮಾತನಾಡಲು ಬಂದಿದ್ದೇನೆ. ಇದರಲ್ಲಿ ರಾಜಕಾರಣ ಮಾಡಲು ಬಂದಿಲ್ಲ ಎಂದರು.
ಈ ವೇಳೆ ಅಮಾಯಕರು ಅರೆಸ್ಟ್ ಆಗಿದ್ದರೆ ಪೊಲೀಸರು ಬಿಟ್ಟು ಕಳಿಸುತ್ತಾರೆ. ನೀವ್ಯಾಕೆ ಒತ್ತಡ ಹಾಕುತ್ತೀರಿ ಎಂದು ಕೇಳಿದ್ದಕ್ಕೆ ಅಮಾಯಕರನ್ನು ಬಿಟ್ಟು ಕಳಿಸಿ ಅನ್ನೋದು ಒತ್ತಡ ಹೇಗೆ ಆಗುತ್ತೆ ಎಂದು ಮರು ಪ್ರಶ್ನಿಸಿ ಪಬ್ಲಿಕ್ ಟಿವಿ ಮೇಲೆ ಹ್ಯಾರಿಸ್ ಸಿಟ್ಟಾದರು.
ಕಾಂಗ್ರೆಸ್ ನಾಯಕರು ಗಲಭೆಕೋರರ ಪರವಾಗಿ ನಿಂತಿದ್ದಾರಾ ಎಂಬ ಆರೋಪ ಕೇಳಿ ಬರುತ್ತಿದೆ. ಈ ಬಗ್ಗೆ ಕೇಳಲಾದ ಪ್ರಶ್ನೆಗೆ ಹ್ಯಾರಿಸ್, ನಾವು ಯಾವುದೇ ರೀತಿ ಒತ್ತಡವನ್ನು ಸರ್ಕಾರ ಮತ್ತು ಪೊಲೀಸರ ಮೇಲೆ ಹಾಕುವುದಿಲ್ಲ. ನಾವು ಮಾನವೀಯತೆ ದೃಷ್ಟಿಯಿಂದ ಏನು ಮಾಡಬೇಕೋ ಮಾಡಿ ಎಂದು ಹೇಳುತ್ತಿದ್ದೇವೆ. ಗಲಭೆ ನಡೆದ ಪ್ರದೇಶದಲ್ಲಿ ಕರ್ಫ್ಯೂ ಪರಿಸ್ಥಿತಿ ಎದುರಾಗಿದೆ. ಇದರಿಂದ ಪಾಪ ಅಮಾಯಕರಿಗೆ ಸಮಸ್ಯೆಯಾಗುತ್ತಿದೆ. ಅಲ್ಲಿ ಜನರು ಕುಟುಂಬದವರೊಂದಿಗೆ ವಾಸಿಸುತ್ತಿದ್ದಾರೆ. ಆದರೆ ಯಾರೂ
ಹೊರಗೆ ಬಂದು ಓಡಾಡುವುದಕ್ಕೆ ಆಗುತ್ತಿಲ್ಲ. ಅವರಿಗೆ ಹಾಲು, ನೀರು ಸಿಗದೆ ತೊಂದರೆ ಅನುಭವಿಸುತ್ತಿದ್ದಾರೆ ಎಂದರು.
ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅನೇಕರನ್ನು ಬಂಧಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಮಾಜಿ ಸಚಿವ ರೋಷನ್ ಬೇಗ್ ಕೆ.ಜೆ.ಹಳ್ಳಿ ಗಲಾಟೆಯಲ್ಲಿ ಕೆಲವು ಕಾಂಗ್ರೆಸ್ ನಾಯಕರ ಕೈವಾಡವು ಇದೆ. ಗೋರಿ ಪಾಳ್ಯದ ಮೌಲಾನ ಇಲ್ಲಿಗೆ ಯಾಕೆ ಬರಬೇಕಿತ್ತು. ಕಲಾಸಿ ಪಾಳ್ಯದಿಂದ, ಟಿಪ್ಪು ನಗರದಿಂದ ಇಲ್ಲಿಗೆ ಯಾಕೆ ಬರಬೇಕಿತ್ತು. ಹೊರಗಿನವರು ಯಾರ್ಯಾರೋ ಬಂದಿದ್ದರು ಅಂತ ಸ್ಥಳೀಯರೇ ಹೇಳುತ್ತಾರೆ. ಪೊಲೀಸರು ಬಂಧಿಸಿದವರಲ್ಲಿ ಕೆಲವರು ಅಮಾಯಕರು ಇರಬಹುದು. ಅಂತವರನ್ನ ಬಿಡಿ, ಆದರೆ ತಪ್ಪು ಮಾಡಿದವರಿಗೆ ಮಾತ್ರ ಶಿಕ್ಷೆ ಆಗಲೇಬೇಕು ಎಂದು ಹೇಳಿದ್ದರು.