Tag: commissioner

  • ನಟ ಹರ್ಷಿಕಾ-ಭುವನ್ ಮೇಲೆ ಹಲ್ಲೆ: ದೂರು ದಾಖಲಿಸಿದ ಸ್ಟಾರ್ ದಂಪತಿ

    ನಟ ಹರ್ಷಿಕಾ-ಭುವನ್ ಮೇಲೆ ಹಲ್ಲೆ: ದೂರು ದಾಖಲಿಸಿದ ಸ್ಟಾರ್ ದಂಪತಿ

    ಟಿ ಹರ್ಷಿಕಾ ಪೂಣಚ್ಚ (Harshika Poonacha) ದಂಪತಿಗೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಭುವನ್ (Bhuvan) ಜೊತೆ  ನಗರ ಪೊಲೀಸ್ ಆಯುಕ್ತರ ಕಚೇರಿಗೆ ಬಂದ ಹರ್ಷಿಕಾ ದಂಪತಿ ಅಂದು ನಡೆದು ಘಟನೆಯ ಕುರಿತಂತೆ ದೂರು ದಾಖಲಿಸಿದ್ದಾರೆ. ಪೊಲೀಸರು ಕರೆ ಮಾಡಿದ ಬೆನ್ನಲ್ಲೇ ನಡೆದ ಘಟನೆಯ ಬಗ್ಗೆ ವಿವರಣೆಯನ್ನೂ ಅವರು ಕೊಟ್ಟಿದ್ದಾರೆ.

    ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಹರ್ಷಿಕಾ, ನಿನ್ನೆ ಸಂಬಂಧಿಕರೆಲ್ಲ ಇದ್ರು ಆಗ ಪೊಲೀಸರು ಕರೆ ಮಾಡಿದ್ರು. ನಿನ್ನೆಯಿಂದ ಎಸಿಪಿ ಟಚ್ ಲ್ಲಿ ಇದ್ರು. ಆ ಟ್ವೀಟನ್ನ ನಾನೆ ಬರೆದಿದ್ದು. ದೂರು ಕೊಟ್ಟಿದ್ದೆ ತಪ್ಪಾ ಹಾಗಾದ್ರೆ. ನಾವು ಯಾವುದೇ ಪಕ್ಷದಲ್ಲಿ ಗುರುತಿಸಿಕೊಂಡಿಲ್ಲ. ನಮ್ಮ ಹಿತೈಷಿಗಳು ಕರೆ ಮಾಡಿ ದೂರು ಕೊಡುವಂತೆ ಹೇಳಿದ್ರು. ಎಸಿಪಿ ಗೀತಾ ಅವರನ್ನು ಇಂದು ಭೇಟಿಯಾಗಬೇಕಿತ್ತು. ಆದ್ರೆ ಅಲ್ಲಿ ಯಾವುದೋ ಪ್ರೊಟೆಸ್ಟ್ ಇದೆ ಅಂತ ಹೇಳಿದ್ರು. ಹೀಗಾಗಿ ಕಮಿಷನರ್ ಕಚೇರಿಗೆ ದೂರು ಕೊಡಲು ಬಂದ್ವಿ. ಈ ತರಹದ ಘಟನೆಗಳು ಬೆಂಗಳೂರಿನಲ್ಲಿ ಹಲವಾರು ನಡೆದಿದೆ. ಕರ್ನಾಟಕದಲ್ಲಿ ನಾವೆಲ್ಲ ಒಂದೆ. ಯಾವುದೇ ಏರಿಯಾಗೆ ಹೋದ್ರು ಭಯವಿಲ್ಲದೇ ಹೋಗಬೇಕು. ಅಂದು ಕರಾಮ ಹೋಟೆಲ್ ಹೋಗಿದ್ವಿ. ಊಟ ಮುಗಿಸಿ ಹೊರಬಂದಿದ್ವಿ. ಕಾರಿನಲ್ಲಿ ಕುಳಿತ 2 ಸೆಕೆಂಡಲ್ಲಿ ಇಬ್ಬರು ಬಂದ್ರು. ಇಬ್ಬರು ದೊಡ್ಡ ಗಾಡಿ ನೋಡ್ಕಂಡು ತೆಗೀರಿ ಅಂದ್ರು. ನಾನು ಪ್ಯೂಚರ್ ಮಾತನಾಡಬೇಡ ತೆಗೀತಿನಿ ಬಿಡಿ ಅಂತ ಹೇಳ್ದೆ. ಕನ್ನಡದವರಿಗೆ ಬುದ್ದಿ ಕಲಿಸಬೇಕು ಅಂತ ಅವರ ಭಾಷೆಯಲ್ಲಿ ಮಾತನಾಡಿದ್ರು. ಏಕಾಏಕಿ  20 ಜನ ಅಟ್ಯಾಕ್ ಮಾಡಿದ್ರು. ಈ ವೇಳೆ ಆರ್ ಆರ್ ನಗರ ಇನ್ಸ್ ಪೆಕ್ಟರ್ ಗೆ ಕರೆಮಾಡಿದ್ವಿ. ಅವರು ಏರು ದನಿಯಲ್ಲಿ ಮಾತನಾಡಿದ್ದಕ್ಕೆ ಅಲ್ಲಿಂದ ಪರಾರಿಯಾದ್ರು ಅಂದಿದ್ದಾರೆ.

    ಕಮಿಷನರ್ (Commissioner) ಕಚೇರಿಗೆ ದೂರು ಕೊಟ್ಟ ಬಳಿಕ ಮಾತನಾಡಿದ ನಟ ಭುವನ್, ನಾವು ಕಮಿಷನರ್ ಭೇಟಿಗೆ ಬಂದಿದ್ದೆವು. ಅವರ ಇಲ್ಲದ ಕಾರಣ ಪೂರ್ವ ವಿಭಾಗದ ಹೆಚ್ಚುವರಿ ಆಯುಕ್ತರನ್ನ ಭೇಟಿಯಾದ್ವಿ. ಎಫ್ ಐ ಆರ್ ಮಾಡಿ ಕ್ರಮ ತೆಗೆದುಕೊಳ್ತಿವಿ ಅಂತ ಹೇಳಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಬೇರೆ ರೂಪ ತೆಗೆದುಕೊಳ್ಳುತ್ತದೆ ಅಂತ ದೂರು ಕೊಟ್ಟಿಲ್ಲ. ಅಂದು ಆ ಸಂದರ್ಭದಲ್ಲಿ ಹೊಯ್ಸಳ ಇತ್ತು. ಅಲ್ಲಿ ಹೋಗಿ ಅವರ ಬಳಿ ಮಾತನಾಡಿದ್ವಿ. ಆವತ್ತಿನ ಪರಿಸ್ಥಿತಿಯಲ್ಲಿ ಕಂಪ್ಲೆಂಟ್ ಕೊಡುವ ಪರಿಸ್ಥಿತಿಯಲ್ಲಿರಲಿಲ್ಲ. ತುಂಬಾ ಜನ ಪೋನ್ ಮಾಡಿ ದೂರು ಕೊಡದಿದ್ರೆ ತಪ್ಪಾಗುತ್ತೆ ಅಂತ ಹೇಳ್ತಿದ್ದಾರೆ. ಹಾಗಾಗಿ ಕಾನೂನು ಕ್ರಮ ತಗೆದುಕೊಳ್ಳಿ ಎಂದು ಕೇಳುತ್ತಿದ್ದೆವೆ ಎಂದರು.

  • RCB ಸೋಲಿಗೆ ದೊಡ್ಮನೆ ಸೊಸೆ ಟಾರ್ಗೆಟ್: ಪೊಲೀಸ್ ಆಯುಕ್ತರಿಗೆ ದೂರು

    RCB ಸೋಲಿಗೆ ದೊಡ್ಮನೆ ಸೊಸೆ ಟಾರ್ಗೆಟ್: ಪೊಲೀಸ್ ಆಯುಕ್ತರಿಗೆ ದೂರು

    ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಫ್ಯಾನ್ಸ್ ವಾರ್ ಶುರುವಾಗಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ಅತ್ಯಂತ ಕೀಳುಮಟ್ಟಕ್ಕೆ ಹೋಗಿ ಅಭಿಮಾನದ ಪರಕಾಷ್ಟೇ ಮೆರೆಯುವಂತೆ ಕೆಲಸ ಆಗಿದೆ. ಆರ್.ಸಿ.ಬಿ ಸೋಲಿಗೆ ದೊಡ್ಮನೆ ಸೊಸೆಯನ್ನು ಟಾರ್ಗೆಟ್ ಮಾಡಿರುವ ಕೆಲವರು, ಪುನೀತ್ ಪತ್ನಿ, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್ (Ashwini Puneet Rajkumar) ಅವರನ್ನ ನಿಂದಿಸಿದ್ದಾರೆ ಕೆಲ ಕಿಡಿಗೇಡಿಗಳು.

    ಗಜಪಡೆ (Gajapade) ಹೆಸರಿನ ಪೇಜ್ ನಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಗೆ ಕೆಟ್ಟದಾಗಿ ನಿಂದನೆ ಮಾಡಲಾಗಿದ್ದು, ನಟ ದರ್ಶನ್ ಅಭಿಮಾನಿ ಎಂದು ಹೇಳಿಕೊಂಡಿದೆ ಈ ‘ಗಜಪಡೆ’ ಖಾತೆ. ಅಭಿಮಾನದ ನೆಪದಲ್ಲಿ ಹೆಣ್ಣಿನ ಬಗ್ಗೆ ಕೀಳಾಗಿ ಕಾಮೆಂಟ್ ಮಾಡಿದ್ದರಂತೆ ಅನೇಕರು ಈ ಗಜಪಡೆ ಖಾತೆಯನ್ನು ನಿರ್ವಹಿಸುತ್ತಿರುವವರ ಬಗ್ಗೆ ಗರಂ ಆಗಿದ್ದಾರೆ.

    ಅಶ್ವಿನಿ ಪುನೀತ್ ರಾಜ್ ಕುಮಾರ್ ಬಗ್ಗೆ ಬರೆದ ಕೀಳು ಮಟ್ಟದ ಪೋಸ್ಟ್ ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಅದರಲ್ಲೂ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಆಕ್ರೋಶ ವ್ಯಕ್ತ ಪಡಿಸಿದ್ದು, ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಪೊಲೀಸ್ ಕಮಿಷ್ನರ್ (Commissioner) ಭೇಟಿ ಮಾಡಿ ಈಗಾಗಲೇ ದೂರು (Complaints) ಕೂಡ ನೀಡಲಾಗಿದೆ.

    ಸಾಕಷ್ಟು ಬಾರಿ ಈ ಫ್ಯಾನ್ಸ್ ವಾರ್ ಕನ್ನಡದಲ್ಲಿ ನಡೆದಿದೆ. ಅದಕ್ಕೆ ಫುಲ್ ಸ್ಟಾಪ್ ಹಾಕುವಂತೆ ಸ್ವತಃ ದರ್ಶನ್ ಅವರೇ ಈ ಹಿಂದೆ ವಿಡಿಯೋ ಮೂಲಕ ಮನವಿ ಮಾಡಿದ್ದರು. ತಮ್ಮ ಅಭಿಮಾನಿಗಳು ಯಾವುದೇ ಕಾರಣಕ್ಕೂ ಬೇರೆಯ ನಟರ ಅಥವಾ ಅಭಿಮಾನಿಗಳನ್ನು ನಿಂದಿಸಬಾರದು ಎಂದು ಮನವಿ ಮಾಡಿದ್ದರು. ಆದರೂ, ಪದೇ ಪದೇ ಇಂತಹ ಘಟನೆಗಳು ನಡೆಯುತ್ತಲೇ ಇವೆ.

  • ಮಲಯಾಳಂ ಚಿತ್ರೋದ್ಯಮದಲ್ಲಿ ಡ್ರಗ್ಸ್: ಸಿಡಿದೆದ್ದ ಪೊಲೀಸ್ ಕಮಿಷನರ್

    ಮಲಯಾಳಂ ಚಿತ್ರೋದ್ಯಮದಲ್ಲಿ ಡ್ರಗ್ಸ್: ಸಿಡಿದೆದ್ದ ಪೊಲೀಸ್ ಕಮಿಷನರ್

    ಲಯಾಳಂ ಚಿತ್ರೋದ್ಯಮದಲ್ಲಿ (Film Industry) ಡ್ರಗ್ಸ್ ಹಾವಳಿ ಹೆಚ್ಚಾಗಿದೆ ಎನ್ನುವ ಮಾತು ಕೇಳಿ ಬಂದ ಹಿನ್ನೆಲೆಯಲ್ಲಿ ಸ್ವತಃ ಕೇರಳ (Kerala) ಪೊಲೀಸ್ ಕಮಿಷನರ್ ಅಖಾಡಕ್ಕೆ ಇಳಿದಿದ್ದಾರೆ. ಚಿತ್ರೋದ್ಯಮದ ಹಲವು ಗಣ್ಯರು ಡ್ರಗ್ಸ್ ಹಾವಳಿ ಕುರಿತಾಗಿ ಬಹಿರಂಗವಾಗಿಯೇ ಮಾತನಾಡಿದ್ದರು. ಅಲ್ಲದೇ, ಕೆಲ ಚಿತ್ರನಟರು ಡ್ರಗ್ಸ್ ಸೇವಿಸಿ ಸಿನಿಮಾಗಳಿಗೆ ತೊಂದರೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಹಾಗಾಗಿ ಪೊಲೀಸ್ ಕಮಿಷನರ್ (Commissioner) ಕಾರ್ಯಾಚರಣೆಗೆ ಸಜ್ಜಾಗಿದ್ದಾರೆ.

    ಈ ಕುರಿತು ಮಾತನಾಡಿರುವ ಪೊಲೀಸ್ (Police) ಕಮಿಷನರ್ ಕೆ.ಸೇತುರಾಮನ್, ‘ಡ್ರಗ್ಸ್ (Drugs) ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಯಾವುದೇ ಮುಲಾಜಿಗೆ ಒಳಗಾಗುವುದಿಲ್ಲ. ಈಗಾಗಲೇ ಪೊಲೀಸರು ತಮ್ಮ ಕೆಲಸವನ್ನು ಶುರು ಮಾಡಿದ್ದಾರೆ. ಸಣ್ಣದೊಂದು ಸುಳಿವು ಸಿಕ್ಕರೆ, ಅವರ ಮೇಲೆ ಅಗತ್ಯ ಕ್ರಮ ತಗೆದುಕೊಳ್ಳುತ್ತೇವೆ’ ಎಂದಿದ್ದಾರೆ. ಇದನ್ನೂ ಓದಿ:ತಾಯ್ತನದ ಫೋಟೋಶೂಟ್ ಹಂಚಿಕೊಂಡ ‘ರಾಧಾ ಕಲ್ಯಾಣ’ ನಟಿ ರಾಧಿಕಾ ರಾವ್

    ಡ್ರಗ್ಸ್ ಹಾವಳಿ ಕುರಿತು ಚಿತ್ರೋದ್ಯಮದ ಮಲಯಾಳಂ ಚಿತ್ರರಂಗ ಒಕ್ಕೂಟ ( ಅಮ್ಮಾ-Amma) ಸರಕಾರಕ್ಕೆ ಪತ್ರ ಬರೆದಿತ್ತು. ಅಲ್ಲದೇ, ಅನೇಕ ನಿರ್ಮಾಪಕರು ಒಕ್ಕೂಟಕ್ಕೆ ದೂರು ಕೂಡ ನೀಡಿದ್ದರು. ಹೀಗಾಗಿ ಪೊಲೀಸ್ ಇಲಾಖೆಗೆ ಒಕ್ಕೂಟ ಕದತಟ್ಟಿತ್ತು. ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದರು. ಶೂಟಿಂಗ್ ನಡೆಯುವ ಸ್ಥಳಕ್ಕೆ ಮಫ್ತಿಯಲ್ಲಿ ಪೊಲೀಸರು ಬಂದು ಪತ್ತೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

  • ಬೆಳಗಾವಿ ಮಹಾನಗರಪಾಲಿಕೆ ಸುತ್ತಮುತ್ತ 200 ಮೀ. 144 ಸೆಕ್ಷನ್ ಜಾರಿ- ಕಮಿಷನರ್ ಆದೇಶ

    ಬೆಳಗಾವಿ ಮಹಾನಗರಪಾಲಿಕೆ ಸುತ್ತಮುತ್ತ 200 ಮೀ. 144 ಸೆಕ್ಷನ್ ಜಾರಿ- ಕಮಿಷನರ್ ಆದೇಶ

    ಬೆಳಗಾವಿ: ಮಹಾನಗರ ಪಾಲಿಕೆ ಮೇಯರ್ (Mayor), ಉಪಮೇಯರ್ (Deputy Mayor) ಸ್ಥಾನಕ್ಕೆ ಸೋಮವಾರ (ಇಂದು) ಚುನಾವಣೆ ಹಿನ್ನೆಲೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಪಾಲಿಕೆ ಕಚೇರಿ ಮುಂಭಾಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ.

    ಬೆಳಗಾವಿ ಮಹಾನಗರ ಪಾಲಿಕೆ (Belagavi City Corporation) ಚುನಾವಣೆ (Election) ನಡೆದು 16ತಿಂಗಳ ಬಳಿಕ ಇಂದು ಮೇಯರ್ ಮತ್ತು ಉಪಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ.ಅದರಲ್ಲಿ ಪ್ರಮುಖವಾಗಿ ಮಹಿಳಾ ಸದಸ್ಯರ ಮಧ್ಯ ಮೇಯರ್ ಉಪಮೇಯರ್ ಸ್ಥಾನಕ್ಕೆ ಫೈಟ್ ನಡೆದಿದೆ. ಮಧ್ಯಾಹ್ನ 1ರವರಗೆ ನಾಮಪತ್ರಗಳ ಸ್ವೀಕಾರ ನಡೆಯಲಿದ್ದು, ಮಧ್ಯಾಹ್ನ 3 ಗಂಟೆಗೆ ಸಭೆ ನಂತರ ನಾಮಪತ್ರಗಳ ಪರಿಶೀಲನೆ ಆಗುತ್ತದೆ. ಬಳಿಕ ಕ್ರಮಬದ್ಧ ನಾಮನಿರ್ದೇಶನ, ಘೋಷಣೆ ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಅವಕಾಶವಿದೆ. ಇನ್ನೂ ಮತದಾನದ ಎಣಿಕೆ ನಂತರ ಮೇಯರ್ ಆಯ್ಕೆಯನ್ನ ಅಗತ್ಯವಿದ್ದಲ್ಲಿ ಕೈ ಎತ್ತುವ ಮೂಲಕ ಫಲಿತಾಂಶ ಘೋಷಣೆ ಮಾಡುವ ಸಾಧ್ಯತೆಯೂ ಇದೆ. ಇದನ್ನೂ ಓದಿ: ಭವಾನಿ ರೇವಣ್ಣ ಸ್ಪರ್ಧೆ ಮಾಡೋದನ್ನು ಪಕ್ಷದ ವರಿಷ್ಠರು ತೀರ್ಮಾನ ಮಾಡ್ತಾರೆ: ನಿಖಿಲ್

    ಬೆಳಗಾವಿ ಮಹಾನಗರ ಪಾಲಿಕೆ ಸುತ್ತ 144 ಸೆಕ್ಷನ್ ಜಾರಿ: ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮಹಾನಗರ ಪೊಲೀಸ್ ಇಲಾಖೆ ಮಹಾನಗರ ಪಾಲಿಕೆ ಮುಂದೆ ಬಿಗಿ ಪೊಲೀಸ್ ಭದ್ರತೆ ನಿಯೋಜನೆ ಮಾಡಿದೆ. ಇದಲ್ಲದೇ ನಗರಪಾಲಿಕೆ 200 ಮೀಟರ್ ಅಂತರದಲ್ಲಿ 144 ಸೆಕ್ಷನ್ ಜಾರಿ ಮಾಡಿದ್ದು, ನಾಲ್ಕು ಜನಕ್ಕಿಂತ ಹೆಚ್ಚು ಜನ ಸೇರದಂತೆ ಪೊಲೀಸ್ ವಾಹನದಲ್ಲಿ ದ್ವನಿವರ್ಧಕ ಮೂಲಕ ಸಾರ್ವಜನಿಕರಿಗೆ ಸೂಚನೆ ನೀಡಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಟಿ ಉರ್ಫಿ ಜಾವೇದ್ ಪರವಾಗಿ ಮುಂಬೈ ಕಮಿಷನರ್ ಗೆ ಪತ್ರ ಬರೆದ ಮಹಿಳಾ ಆಯೋಗ

    ನಟಿ ಉರ್ಫಿ ಜಾವೇದ್ ಪರವಾಗಿ ಮುಂಬೈ ಕಮಿಷನರ್ ಗೆ ಪತ್ರ ಬರೆದ ಮಹಿಳಾ ಆಯೋಗ

    ವಿಚಿತ್ರ ಫ್ಯಾಷನ್ ಐಕಾನ್ ಅಂತಲೇ ಫೇಮಸ್ ಆಗಿರುವ ಮಾಜಿ ಬಿಗ್ ಬಾಸ್ ಸ್ಪರ್ಧಿ ಉರ್ಫಿ ಜಾವೇದ್ ಗೆ (Urfi Javed) ಭದ್ರತೆ ಮತ್ತು ಅವರ ಬೇಡಿಕೆಯನ್ನು ಪರಿಶೀಲಿಸುವಂತೆ ಮುಂಬೈ (Mumbai)ಪೊಲೀಸ್ ಕಮಿಷನರ್ ಗೆ (Commissioner) ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗ ಪತ್ರ ಬರೆದಿದೆ. ನಿನ್ನೆ ಮುಂಬೈ ಪೊಲೀಸ್ ಕಮಿಷ್ನರ್ ಗೆ ಬರೆದ ಪತ್ರದಲ್ಲಿ ಉರ್ಫಿ ಜಾವೇದ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮಹಿಳಾ ಆಯೋಗ ಅಧ್ಯಕ್ಷೆ ರೂಪಾಲಿ ಚಂಕಕರ್ (Rupali Chankakar) ತಿಳಿಸಿದ್ದಾರೆ.

    ಮೊನ್ನೆಯಷ್ಟೇ ನಟಿ ಉರ್ಫಿ ಜಾವೇದ್ ಚಿತ್ರಾ ಕಿಶೋರ್ ವಾಘ್ ಮೇಲೆ ಆರೋಪ ಮಾಡಿದ್ದರು. ಇವರು ತಮಗೆ ಜೀವ ಬೆದರಿಕೆ ಹಾಕಿದ್ದಾರೆ ಹಾಗೂ ಮಾನಹಾನಿ ಮಾಡುವಂತಹ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿ ತಮ್ಮ ವಕೀಲರ ಮೂಲಕ ಮಹಾರಾಷ್ಟ್ರ ಮಹಿಳಾ ಆಯೋಗಕ್ಕೆ ಉರ್ಫಿ ದೂರು ನೀಡಿದ್ದರು. ಅಲ್ಲದೇ, ತಮಗೆ ಜೀವ ಬೆದರಿಕೆ ಇರುವ ಕಾರಣದಿಂದಾಗಿ ರಕ್ಷಣೆ ನೀಡುವಂತೆ ಉರ್ಫಿ ಮನವಿ ಮಾಡಿದ್ದರು. ಅದಕ್ಕೂ ಮುನ್ನ ತಮ್ಮಿಂದ ಯಾವುದೇ ತಪ್ಪು ಆಗಿಲ್ಲ ಎಂದು ಮನದಟ್ಟು ಮಾಡಲು ವಿಚಾರಣೆಗೂ ಖುದ್ದಾಗಿ ಹೋಗಿದ್ದರು. ಇದನ್ನೂ ಓದಿ:ದಕ್ಷಿಣದ ಸಿನಿಮಾಗಳತ್ತ ಬಾಲಿವುಡ್ ನಟಿ ಐಶ್ವರ್ಯ ರೈ ಚಿತ್ತ

    ನಟಿ ಉರ್ಫಿ ಜಾವೇದ್ ಮಹಿಳೆಯರ ಮಾನ ಹರಾಜು ಹಾಕುವಂತಹ ಬಟ್ಟೆಗಳನ್ನು ಹಾಕುತ್ತಾರೆ. ಅಶ್ಲೀಲ ಹಾಗೂ ಅಸಭ್ಯವಾಗಿ ನಡೆದುಕೊಡುತ್ತಾರೆ. ಇಂತಹ ನಟಿಯ ಮೇಲೆ ಕ್ರಮ ತಗೆದುಕೊಳ್ಳಬೇಕು ಎಂದು ಚಿತ್ರಾ ಅವರು ಕೆಲ ದಿನಗಳ ಹಿಂದೆಯಷ್ಟೇ ದೂರು ದಾಖಲಿಸಿದ್ದರು. ಅಲ್ಲದೇ, ಅಸಹ್ಯ ಎನ್ನುವಂತಹ ಬಟ್ಟೆಗಳನ್ನು ಹಾಕಿಕೊಂಡು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದಕ್ಕೆ ಚಿತ್ರ ಆಕ್ಷೇಪ ವ್ಯಕ್ತ ಪಡಿಸಿದ್ದರು. ಈ ಹಿನ್ನೆಲೆಯಲ್ಲಿ ರಕ್ಷಣೆ ಕೋರಿ ಉರ್ಫಿ ಮಹಿಳಾ ಆಯೋಗಕ್ಕೆ ಮೊರೆ ಹೋಗಿದ್ದರು.

    ತನ್ನ ವಿಚಿತ್ರ ಕಾಸ್ಟ್ಯೂಮ್ ಮೂಲಕ ಬಾಲಿವುಡ್ ಸಿನಿ ರಂಗದಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಉರ್ಫಿ ಜಾವೇದ್ ಮೇಲೆ ಉರಿದುಕೊಂಡವರೇ ಹೆಚ್ಚು. ಅವಳು ಧರಿಸುವ ಅರೆಬರೆ ಬಟ್ಟೆಯ ಬಗ್ಗೆ ಸಾಕಷ್ಟು ದೂರುಗಳು ಇವೆ. ಈ ವಿಚಾರವಾಗಿ ಅವಳು ಪೊಲೀಸ್ ಸ್ಟೇಶನ್ ಮೆಟ್ಟಿಲೂ ಹತ್ತಿದ್ದಾರೆ. ದುಬೈನಲ್ಲಿ ಪೊಲೀಸ್ ವಿಚಾರಣೆಗೂ ಒಳಗಾಗಿದ್ದಾರೆ. ಸದಾ ವಿವಾದವನ್ನೇ ಬೆನ್ನತ್ತಿ ಹೋಗುವ ಉರ್ಫಿ ಬಗ್ಗೆ ಮೊದಲ ಬಾರಿಗೆ ವ್ಯಕ್ತಿಯೊಬ್ಬರು ಹೆಮ್ಮೆಯಿಂದ ಮಾತನಾಡಿದ್ದಾರೆ. ಅವರನ್ನು ಮಾದರಿಯಾಗಿ ತಗೆದುಕೊಳ್ಳುವಂತೆ ಕರೆಕೊಟ್ಟಿದ್ದಾರೆ.

    ಬಾಲಿವುಡ್ ಸಿಂಗರ್ ಯೋ ಯೋ ಹನಿ ಸಿಂಗ್, ಸದ್ಯ ತಮ್ಮ ಆಲ್ಬಂವೊಂದರ ಪ್ರಚಾರದಲ್ಲಿ ತೊಡಗಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ‘ಉರ್ಫಿ ಜಾವೇದ್ ಬಗ್ಗೆ ಹಾಡಿಹೊಗಳಿದ್ದಾರೆ. ಉರ್ಫಿ ತನ್ನಿಷ್ಟದಂತೆ ಬದುಕುತ್ತಿರುವ ನಟಿ. ತುಂಬಾ ಧೈರ್ಯವಂತೆ. ಯಾರಿಗೂ ಹೆದರದೇ ತನ್ನ ಬದುಕನ್ನು ಕಟ್ಟಿಕೊಂಡಿದ್ದಾಳೆ. ಹಾಗಾಗಿ ದೇಶದ ಹುಡುಗಿಯರು ಅವಳನ್ನು ನೋಡಿ ಕಲಿತುಕೊಳ್ಳಬೇಕು’ ಎಂದು ಅಚ್ಚರಿಯ ಹೇಳಿಕೆಯನ್ನು ಕೊಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬೆಂಗಳೂರಿನಲ್ಲಿ ಹೆಚ್ಚಾಯ್ತು ಬೆಕ್ಕುಗಳ ಕಾಟ- ಬೆಕ್ಕಿಗೂ ಸಂತಾನಹರಣ ಚಿಕಿತ್ಸೆ ಮಾಡಲು ಮನವಿ

    ಬೆಂಗಳೂರಿನಲ್ಲಿ ಹೆಚ್ಚಾಯ್ತು ಬೆಕ್ಕುಗಳ ಕಾಟ- ಬೆಕ್ಕಿಗೂ ಸಂತಾನಹರಣ ಚಿಕಿತ್ಸೆ ಮಾಡಲು ಮನವಿ

    ಬೆಂಗಳೂರು: ಇಷ್ಟು ದಿನ ಬೆಂಗಳೂರಿನ ಏರಿಯಾಗಳಲ್ಲಿ ಬೀದಿ ನಾಯಿ (Street Dog) ಕಾಟದ ಬಗ್ಗೆ ಬಿಬಿಎಂಪಿಗೆ ದೂರು ದಾಖಲಾಗುತ್ತಿತ್ತು. ಆದರೆ ಈ ಬಾರಿ ಬೆಕ್ಕುಗಳ ವಿರುದ್ಧ ಸ್ಥಳೀಯ ನಿವಾಸಿಗಳು ದೂರು ನೀಡಿದ್ದು, ಬೆಕ್ಕಿನ ಕಾಟಕ್ಕೆ ಬೇಸತ್ತಿರೋ ಸ್ಥಳೀಯರು ದಯಾಮಾಡಿ ಬೆಕ್ಕುಗಳಿಗೂ ನಾಯಿಗಳಂತೆ ಸಂತನಾಹರಣ ಚಿಕಿತ್ಸೆ ಮಾಡುವಂತೆ ಮನವಿ ಮಾಡಿದ್ದಾರೆ.

    ಹೌದು. ಬೆಂಗಳೂರಿನ ವಾರ್ಡ್ ನಂಬರ್ 5 ನ್ಯಾಯಾಂಗ ಬಡಾವಣೆಯಲ್ಲಿ ಇತ್ತೀಚಿನ ಕೆಲ ದಿನಗಳಿಂದ ಬೆಕ್ಕು (Cat) ಗಳ ಹಾವಳಿ ಜಾಸ್ತಿಯಾಗಿದಯಂತೆ. ಬೆಕ್ಕುಗಳು ಪ್ರತಿ ಆರು ತಿಂಗಳಿಗೊಮ್ಮೆ ಮರಿಗಳನ್ನು ಹಾಕಲಿದ್ದು, ಚಿಕ್ಕ ಮರಿಗಳಿಂದ ದೊಡ್ಡ ದೊಡ್ಡ ಬೆಕ್ಕುಗಳವರೆಗೂ ಪ್ರತಿನಿತ್ಯ ಇಲ್ಲಿನ ಜನರಿಗೆ ಕಿರಿಕಿರಿ ಉಂಟುಮಾಡುತ್ತಿವೆ ಅಂತಾ ಪಾಲಿಕೆಗೆ ದೂರು ನೀಡಿದ್ದಾರೆ. ಇಲ್ಲಿನ ಮನೆಗಳಲ್ಲಿ ಯಾರೋ ಸಾಕಿ ಬಿಟ್ಟ ಬೆಕ್ಕುಗಳು ಬಂದು ಸೇರಿಕೊಳ್ಳುತ್ತಿದ್ದು, ಎಲ್ಲೆಂದರಲ್ಲಿ 6 ತಿಂಗಳಿಗೊಮ್ಮೆ ಮರಿಗಳನ್ನ ಹಾಕುತ್ತೀವೆ ಅನ್ನೋದೆ ಈ ಭಾಗದ ಜನರಿಗೆ ದೊಡ್ಡ ತಲೆನೋವಾಗಿದೆ.

    ಕೆಲವೊಮ್ಮೆ ಕಿಟಕಿ ಒಳಗಡೆಯಿಂದ ನುಗ್ಗುವ ಬೆಕ್ಕುಗಳು ಮಂಚದ ಕೆಳಗೆ ಮರಿ ಹಾಕಿವೆ. ಕೆಲವು ಬೆಕ್ಕುಗಳಂತೂ ರೌಡಿಸಂ ಕೂಡ ತೋರಿಸುತ್ತ ಅಂತೆ. ಈಗೆಲ್ಲ ಸಾಲು ಸಾಲು ದೂರಗಳನ್ನ ಪಾಲಿಕೆಗೆ ಈ ಭಾಗದ ಜನ ಸಲ್ಲಿಸಿದ್ದು, ದಯಾಮಾಡಿ ಈ ಭಾಗದಲ್ಲಿರುವ ಬೆಕ್ಕುಗಳಿಗೆ ವಯಸ್ಸಿನ ಆಧಾರದ ಮೇಲೆ ಸಂತಾನಹರಣ ಚಿಕಿತ್ಸೆ ಮಾಡಿ ಅಂತಾ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಮದುವೆ ಆಗಿಲ್ಲ ಎಂದು ಕಿಚಾಯಿಸಿದ ಸ್ನೇಹಿತನ ಕೊಲೆ

    ಈ ನಿವಾಸಿಗಳು ಪಾಲಿಕೆಗೆ ಪತ್ರ ಬರೆದ ಬೆನ್ನಲ್ಲೆ ಪ್ರತಿಕ್ರಿಯೆ ನೀಡಿರುವ ಬಿಬಿಎಂಪಿ, ಈ ವಿಚಾರ ಸಂಬಂಧ ಆದಷ್ಟು ಬೇಗ ನಿಮ್ಮ ಈ ಸಮಸ್ಯೆಯನ್ನ ಬಗೆಹರಿಸುವುದಾಗಿ ಪ್ರತಿಕ್ರಿಯೆ ಕೂಡ ನೀಡಿದೆ. ಒಟ್ಟಾರೆ ಇಷ್ಟು ದಿನ ಬೀದಿ ನಾಯಿಗಳಿಗಿದ್ದ ಕೆಲ ಟಮ್ರ್ಸ್ ಅಂಡ್ ಕಂಡೀಷನ್ ಬೀದಿ ಬೆಕ್ಕುಗಳ ವಿಚಾರದಲ್ಲೂ ಬಂದರ ಬರಬಹುದು. ಅದೇನೆ ಆಗಲಿ ಸಮಸ್ಯೆ ಬಗ್ಗೆ ಪಾಲಿಕೆ ಯಾವ ನಿರ್ಧಾರ ಕೈಗೊಳ್ಳುತ್ತೆ ಅನ್ನೋದೆ ಸದ್ಯದ ಕುತೂಹಲ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಆರಗ, VVIP ವ್ಯಕ್ತಿಗಳಿಗೆ ನಿವೇಶನ – ಬಿಡಿಎ ಆಯುಕ್ತರ ವರ್ಗಾವಣೆಗೆ ಸುಪ್ರೀಂ ಸೂಚನೆ

    ಆರಗ, VVIP ವ್ಯಕ್ತಿಗಳಿಗೆ ನಿವೇಶನ – ಬಿಡಿಎ ಆಯುಕ್ತರ ವರ್ಗಾವಣೆಗೆ ಸುಪ್ರೀಂ ಸೂಚನೆ

    ನವದೆಹಲಿ: ಆರಗ ಜ್ಞಾನೇಂದ್ರ ಸೇರಿ ಇತರೆ ವಿವಿಐಪಿಗಳಿಗೆ ನಿವೇಶನ ಹಂಚಿಕೆ ಮಾಡಿದ ಹಿನ್ನೆಲೆಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ(ಬಿಡಿಎ) ಆಯುಕ್ತ ಎಂ.ಬಿ ರಾಜೇಶ್ ಗೌಡ ಅವರನ್ನು ವರ್ಗಾವಣೆ ಮಾಡುವಂತೆ ಸುಪ್ರೀಂ ಕೋರ್ಟ್‌ ಸೂಚನೆ ನೀಡಿದೆ.

    ಬೆಂಗಳೂರಿನಲ್ಲಿ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದಿದ ಬಡಾವಣೆಯಲ್ಲಿ ಬಹು ಜನರಿಗೆ ಪರ್ಯಾಯ ನಿವೇಶನಗಳನ್ನು ಹಂಚಿಕೆ ಮಾಡಿದಕ್ಕೆ ಕೋರ್ಟ್‌ ರಾಜೇಶ ಗೌಡ ಅವರನ್ನು ತರಾಟೆಗೆ ತೆಗೆದುಕೊಂಡಿದೆ.

    ಡಾ.ಶಿವರಾಮ ಕಾರಂತ ಬಡಾವಣೆಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ ಎಸ್‌.ಅಬ್ದುಲ್‌ ನಜೀರ್ ಹಾಗೂ ಸಂಜೀವ್‌ ಖನ್ನಾ ಅವರನ್ನು ಒಳಗೊಂಡ ದ್ವಿಸದಸ್ಯ ಪೀಠ ಅಧಿಕಾರಿಗಳಿಗೆ ಚಾಟಿ ಬೀಸಿತು. 2021ರ ಅಕ್ಟೋಬರ್‌ 29ರಂದು ಸುಪ್ರೀಂ ಕೋರ್ಟ್‌ ಹೊರಡಿಸಿದ ಆದೇಶಕ್ಕೆ ವ್ಯತಿರಿಕ್ತವಾಗಿ ತೀರ್ಮಾನ ತೆಗೆದುಕೊಂಡಿದ್ದಕ್ಕೆ ಬಿಡಿಎ ವಿರುದ್ಧ ಕೆಂಡಾಮಂಡಲವಾಗಿದೆ.

    ಅಭಿವೃದ್ಧಿ ಹೊಂದಿದ ಬಡಾವಣೆಗಳಲ್ಲಿ ಪರ್ಯಾಯ ನಿವೇಶನಗಳ ಹಂಚಿಕೆಯನ್ನು ಮಾಡುವಂತಿಲ್ಲ. ನಾವು ನಿರ್ಬಂಧಿಸಿದ್ದರೂ ಹಂಚಿಕೆ ಮಾಡಿ ಆದೇಶವನ್ನು ಉಲ್ಲಂಘಿಸಿ ಪ್ರಾಧಿಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿದೆ ಎಂದು ಹೇಳಿ ಚಾಟಿ ಬೀಸಿದೆ.

    ಏನಿದು ಪ್ರಕರಣ?
    2021ರ ಅಕ್ಟೋಬರ್‌ 29ರಂದು ಮರು ಸ್ವಾಧೀನ ಪಡೆದಿರುವ ಅಥವಾ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದಿದ ಬಡಾವಣೆಗಳ ನಿವೇಶನಗಳನ್ನು ಸಾರ್ವಜನಿಕ ಹರಾಜಿನ ಮೂಲಕ ಮಾತ್ರ ಹಂಚಿಕೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್‌ ಆದೇಶಿಸಿತ್ತು. ಆದರೆ ಬಿಡಿಎ ಸುಪ್ರೀಂ ಕೋರ್ಟ್‌ ಆದೇಶವನ್ನು ಉಲ್ಲಂಘಿಸಿ ಅಭಿವೃದ್ಧಿ ಹೊಂದಿದ ಬಡಾವಣೆಯಲ್ಲಿ ಆರಗ ಜ್ಞಾನೇಂದ್ರ ಸೇರಿದಂತೆ ನಾಲ್ವರಿಗೆ ಪರ್ಯಾಯ ನಿವೇಶನ ಹಂಚಿಕೆ ಮಾಡಿತ್ತು. ಬಳಿಕ ಮಧ್ಯಂತರ ಅರ್ಜಿ ಸಲ್ಲಿಸಿ ತನ್ನ ಆದೇಶವನ್ನು ಮಾರ್ಪಾಡು ಮಾಡುವಂತೆ ಮನವಿ ಮಾಡಿತ್ತು. ಇದನ್ನೂ ಓದಿ: ಕಾಂಗ್ರೆಸ್‌ಗೆ ಗುಲಾಂ ನಬಿ ಆಜಾದ್‌ ಗುಡ್‌ಬೈ

    ಬಿಡಿಎ ವಾದ ಏನು?
    ಆಯುಕ್ತರು ಕೋವಿಡ್‌ ಪೀಡಿತರಾಗಿದ್ದಾರೆ. ಹಾಗಾಗಿ ಅವರು ಇಂದಿನ ವಿಚಾರಣೆಗೆ ಹಾಜರಾಗಿಲ್ಲ. ನಿವೇಶನಗಳನ್ನು ಹಂಚಿಕೆ ಮಾಡುವ ಮೊದಲು ಆದೇಶ ಮಾರ್ಪಾಡು ಮಾಡುವಂತೆ ಅರ್ಜಿ ಸಲ್ಲಿಸಬೇಕಿತ್ತು. ಕೋರ್ಟ್‌ ಆದೇಶ ಉಲ್ಲಂಘನೆಯಾಗಿದ್ದಕ್ಕೆ ಕ್ಷಮೆ ಕೋರುತ್ತೇವೆ ಎಂದು ವಕೀಲರು ಹೇಳಿದರು.

    ಪೀಠ ಹೇಳಿದ್ದೇನು?
    ಕೋರ್ಟ್‌ ಆದೇಶ ಉಲ್ಲಂಘಿಸಿದ ಬಳಿಕ ಆಯುಕ್ತರು ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ ಎಂದರೆ ಅರ್ಥವೇನು? ಜಿ ಕೆಟಗರಿ ನಿವೇಶನವನ್ನು ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ. ಆಯುಕ್ತರಿಗೆ ಕೋರ್ಟ್‌ ಆದೇಶಗಳ ಬಗ್ಗೆ ಗೌರವವೇ ಇಲ್ಲ. ಆದೇಶಕ್ಕೆ ಅವಿಧೇಯತೆ ತೋರಿದ ರಾಜೇಶ ಗೌಡ ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕು. ಇಂದಿನಿಂದ ಅವರು ಯಾವುದೇ ಪ್ರಮುಖ ಆದೇಶಗಳಿಗೆ ಸಹಿ ಹಾಕುವಂತಿಲ್ಲ. ಇದು ಕೋರ್ಟ್‌ ಆದೇಶ. ಬಿಡಿಎ ಕಾರ್ಯದರ್ಶಿ ಹಾಗೂ ಉಪ ಕಾರ್ಯದರ್ಶಿಯವರು ಅಕ್ರಮ ಹಂಚಿಕೆಯಲ್ಲಿ ಭಾಗಿಯಾಗಿದ್ದು ಅವರನ್ನು ವರ್ಗಾವಣೆ ಮಾಡುವ ಬಗ್ಗೆ ಪರಿಶೀಲನೆ ನಡೆಸುತ್ತೇವೆ.

    Live Tv
    [brid partner=56869869 player=32851 video=960834 autoplay=true]

  • ಜೀವ ಬೆದರಿಕೆ ಹಿನ್ನೆಲೆ ಮುಂಬೈ ಪೊಲೀಸ್ ಕಮಿಷ್ನರ್ ಭೇಟಿ ಮಾಡಿದ ಸಲ್ಮಾನ್ ಖಾನ್

    ಜೀವ ಬೆದರಿಕೆ ಹಿನ್ನೆಲೆ ಮುಂಬೈ ಪೊಲೀಸ್ ಕಮಿಷ್ನರ್ ಭೇಟಿ ಮಾಡಿದ ಸಲ್ಮಾನ್ ಖಾನ್

    ಮುಂಬೈನ ಪೊಲೀಸ್ ಕಮಿಷ್ನರ್ ಭೇಟಿ ಮಾಡಿದ್ದಾರೆ ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್. ಅವರಿಗೆ ಜೀವ ಬೆದರಿಕೆ ಇರುವ ಕಾರಣಕ್ಕಾಗಿ ಈ ಭೇಟಿ ನಡೆದಿದೆ ಎಂದು ಹೇಳಲಾಗಿತ್ತು. ತಮಗೆ ಮತ್ತು ತಮ್ಮ ತಂದೆಗೆ ಜೀವ ಬೆದರಿಕೆ ಇರುವ ಕಾರಣಕ್ಕಾಗಿ ಗನ್ ಇಟ್ಟುಕೊಳ್ಳಲು ಪರವಾನಿಗೆ ನೀಡುವಂತೆ ಅವರು ಮನವಿ ಸಲ್ಲಿಸಿದ್ದಾರಂತೆ. ನಿನ್ನೆ ಸಂಜೆ ಈ ಭೇಟಿ ನಡೆದಿದ್ದು, ಸಲ್ಮಾನ್ ಬೇಡಿಕೆಯನ್ನು ಪರಿಶೀಲಿಸುವುದಾಗಿ ಕಮಿಷ್ನರ್ ಹೇಳಿದ್ದಾರೆ ಎನ್ನಲಾಗುತ್ತಿದೆ.

    ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಮಾಡಿದ ಹಂತಕರೇ ಸಲ್ಮಾನ್ ಖಾನ್ ಮತ್ತು ಅವರ ತಂದೆಗೆ ಜೀವ ಬೆದರಿಕೆಯ ಪತ್ರವನ್ನು ಬರೆದಿದ್ದರು. ಈ ಬೆದರಿಕೆ ಪತ್ರವನ್ನು ಬರೆದವರು ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರ ಕಡೆಯವರು ಎಂದು ಹೇಳಲಾಗಿತ್ತು. ಅಲ್ಲದೇ, ಮೊನ್ನೆಯಷ್ಟೇ ಈ ಗ್ಯಾಂಗ್ ನ ಕೆಲವು ಸದಸ್ಯರನ್ನು ಎನ್ ಕೌಂಟರ್ ಮಾಡಿ ಕೊಲ್ಲಲಾಗಿದೆ. ಹಾಗಾಗಿ ಮತ್ತಷ್ಟು ದ್ವೇಷ ಹೆಚ್ಚಾಗಬಹುದು ಎನ್ನುವ ಆತಂಕ ಸಲ್ಮಾನ್ ಖಾನ್ ಅವರದ್ದು. ಇದನ್ನೂ ಓದಿ:ಚಿಕ್ಕಣ್ಣನ ಮದುವೆ ಮುಂದಿನ ವರ್ಷ ಫಿಕ್ಸ್: ಕುಟುಂಬದ ಒತ್ತಡಕ್ಕೆ ಕೊನೆಗೂ ಮಣಿದ ನಟ

    ಲಾರೆನ್ಸ್ ಬಿಷ್ಣೋಯ್ ಟೀಮ್ ತುಂಬಾ ಸ್ಟ್ರಾಂಗ್ ಆಗಿದ್ದು, ಈಗಾಗಲೇ ಸಲ್ಮಾನ್ ಕೊಲ್ಲಲು ಹಲವು ರೀತಿಯ ಸಂಚುಗಳನ್ನು ರೂಪಿಸಿದ್ದರು ಎಂದು ಹೇಳಲಾಗಿತ್ತು. ಈಗಾಗಲೇ ಅರೆಸ್ಟ್ ಆದ ಕೆಲವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದು ಅವರು ಆತಂಕದ ಹೇಳಿಕೆಗಳನ್ನು ನೀಡಿದ್ದಾರಂತೆ. ಈ ಹಿನ್ನೆಲೆಯಾಗಿಟ್ಟುಕೊಂಡು ಸಲ್ಮಾನ್, ಕಮಿಷ್ನರ್ ಜೊತೆ ಮಾತುಕತೆ ಆಡಿದ್ದಾರೆ ಎಂದು ಹೇಳಲಾಗುತ್ತಿದೆ. ಬೆದರಿಕೆ ನೆಪವಿಟ್ಟುಕೊಂಡು ಗನ್ ಲೈಸನ್ಸ್ ಕೊಡ್ತಾರಾ ಅಥವಾ ಇಲ್ಲವಾ ಎನ್ನುವುದನ್ನು ಕಾದು ನೋಡಬೇಕು.

    Live Tv
    [brid partner=56869869 player=32851 video=960834 autoplay=true]

  • ಕಾಫಿನಾಡ ನಗರಸಭೆ ಅಧ್ಯಕ್ಷ, ಆಯುಕ್ತರ ಮೇಲೆ ಕೇಸ್ ದಾಖಲು

    ಕಾಫಿನಾಡ ನಗರಸಭೆ ಅಧ್ಯಕ್ಷ, ಆಯುಕ್ತರ ಮೇಲೆ ಕೇಸ್ ದಾಖಲು

    ಚಿಕ್ಕಮಗಳೂರು: ನಗರಸಭೆ ಸದಸ್ಯರೊಬ್ಬರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಹಿನ್ನೆಲೆ ನಗರಸಭೆ ಅಧ್ಯಕ್ಷರು ಹಾಗೂ ಆಯುಕ್ತರ ಮೇಲೆ ಪ್ರಕರಣ ದಾಖಲಾಗಿದೆ.

    ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಹಾಗೂ ಆಯುಕ್ತ ಬಸವರಾಜ್ ಮೇಲೆ ದೂರು ದಾಖಲಿಸಲಾಗಿದೆ. ನಗರಸಭೆ ಸದಸ್ಯ ಗೋಪಿ ಅವರನ್ನು ಜಿಲ್ಲೆಯ ನಗರಸಭೆಯ ಅಧಿಕೃತ ವಾಟ್ಸಾಪ್ ಗ್ರೂಪಿನಿಂದ ತೆಗೆದು ಹಾಕಲಾಗಿತ್ತು. ಆ ವಿಚಾರದ ಬಗ್ಗೆ ಹಾಗೂ ತಮ್ಮ ವಾರ್ಡಿನ ಕೆಲಸದ ನಿಮಿತ್ತ ಅಧ್ಯಕ್ಷರ ಬಳಿ ಚರ್ಚಿಸಲು ಹೋಗಿದ್ದರು. ಈ ವೇಳೆ ನಗರಸಭೆ ಆಯುಕ್ತ ಬಸವರಾಜ್ ಕೂಡ ಅಲ್ಲೇ ಇದ್ದರು. ಇದನ್ನೂ ಓದಿ: ಗೋಮಾಂಸವನ್ನು ಹಿಂದೂಗಳು, ಕ್ರಿಶ್ಚಿಯನ್ ಕೂಡ ತಿನ್ನುತ್ತಾರೆ: ಸಿದ್ದರಾಮಯ್ಯ

    ಈ ವೇಳೆ ಅಧ್ಯಕ್ಷರು ಗೋಪಿ ಅವರಿಗೆ ಏನು ಮಾಡಿಕೊಳ್ಳುತ್ತೀಯಾ ಮಾಡಿಕೋ ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಆಗ ಅಲ್ಲೇ ಇದ್ದ ಆಯುಕ್ತ ಬಸವರಾಜ್ ಕೂಡಾ ನೀನು ಸಿಎಂಸಿ ಗ್ರೂಪಿನಲ್ಲಿ ಇರಲು ಲಾಯಕ್ಕಿಲ್ಲ. ಅದಕ್ಕೆ ತೆಗೆದು ಹಾಕಿದ್ದೇನೆ. ನಿನ್ನ ಕೈಯಲ್ಲಿ ಏನು ಮಾಡಲು ಸಾಧ್ಯ. ಏನು ಬೇಕಾದರು ಮಾಡಿಕೋ ಎಂದು ಅವರೂ ಕೂಡ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ. ಇದನ್ನೂ ಓದಿ: ಮದುವೆ ದಿಬ್ಬಣದಲ್ಲಿ ಟ್ರ್ಯಾಕ್ಟರ್ ಚಾಲಕನಾದ ಶಾಸಕ ರೇಣುಕಾಚಾರ್ಯ

    POLICE JEEP

    ನಗರಸಭೆ ಸದಸ್ಯರ ದೂರಿನ ಅನ್ವಯ ಚಿಕ್ಕಮಗಳೂರು ನಗರ ಠಾಣೆಯಲ್ಲಿ ಅಧ್ಯಕ್ಷ ವೇಣು ಹಾಗೂ ಆಯುಕ್ತ ಬಸವರಾಜ್ ವಿರುದ್ಧ ಕಲಂ 504, (ಉದ್ದೇಶಪೂರ್ವಕ ಅವಮಾನ) 506 (ವಂಚನೆ)ರ ಅಡಿ ಪ್ರಕರಣ ದಾಖಲಾಗಿದೆ.

  • ಅಲ್ಲಾಹು ಅಕ್ಬರ್ ಘೋಷಣೆ ಬಗ್ಗೆ ಪರಿಶೀಲನೆ ನಡೆಸಲಾಗುವುದು: ಡಾ.ಬೋರಲಿಂಗಯ್ಯ

    ಅಲ್ಲಾಹು ಅಕ್ಬರ್ ಘೋಷಣೆ ಬಗ್ಗೆ ಪರಿಶೀಲನೆ ನಡೆಸಲಾಗುವುದು: ಡಾ.ಬೋರಲಿಂಗಯ್ಯ

    ಬೆಳಗಾವಿ: ವಿಜಯ ಇನ್ಸ್ ಸ್ಟಿಟ್ಯೂಟ್ ಆಫ್ ಪ್ಯಾರಾ ಮೆಡಿಕಲ್ ಕಾಲೇಜು ಬಳಿ ಉದ್ವಿಗ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಲೇಜಿಗೆ ಸಂಬಂಧವಿಲ್ಲದ ಯುವಕರು ಬಂದಿದ್ದರು. ಪರಿಸ್ಥಿತಿ ತಿಳಿಗೊಳಿಸಲು ಕೆಲವರನ್ನು ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎಂ.ಬಿ ಬೋರಲಿಂಗಯ್ಯ ಹೇಳಿದರು.

    ನಗರದ ವಿಜಯ ಇನ್ಸ್ ಸ್ಟಿಟ್ಯೂಟ್ ಆಫ್ ಪ್ಯಾರಾ ಮೆಡಿಕಲ್ ಸೈನ್ಸ್ ಕಾಲೇಜ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಲೇಜಿನಲ್ಲಿ ವಿದ್ಯಾರ್ಥಿಗಳು ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಪಟ್ಟುಹಿಡಿದ್ದರು. ಆದರೆ ಕಾಲೇಜಿಗೆ ಸಂಬಂಧ ಇಲ್ಲದವರು ಬಂದು ತಗಾದೆ ತೆಗೆದಿದ್ದಾರೆ. ಈ ವೇಳೆ ಮುಂಜಾಗ್ರತಾ ಕ್ರಮವಾಗಿ ಕೆಲವರನ್ನು ವಶಕ್ಕೆ ಪಡೆಯಲಾಗಿದೆ ಎಂದರು. ಇದನ್ನೂ ಓದಿ: ಸ್ಥಳೀಯರಿಗೆ ಖಾಸಗಿ ವಲಯದಲ್ಲಿ ಶೇ.75ರಷ್ಟು ಉದ್ಯೋಗವಕಾಶ – ಸುಪ್ರೀಂನಲ್ಲಿ ಹರ್ಯಾಣಕ್ಕೆ ಜಯ

    ಅಲ್ಲಾಹು ಅಕ್ಬರ್ ಘೋಷಣೆ ಬಗ್ಗೆ ಪರಿಶೀಲನೆ ನಡೆಸಲಾಗುವುದು. ನಗರದ ಎಲ್ಲಾ ಸೂಕ್ಷ್ಮ ಪ್ರದೇಶದಲ್ಲಿ ಪೊಲೀಸ್ ಬಿಗಿ ಭದ್ರತೆ ಮಾಡಲಾಗಿದೆ. ಕಾಲೇಜು ಗೇಟ್ ಬಳಿ ಯಾರೂ ಬರದಂತೆ ಕ್ರಮ ವಹಿಸಲಾಗಿದೆ ಎಂದರು. ಇದನ್ನೂ ಓದಿ: ಎಲ್ಲ ಓಕೆಯಾದ್ರೆ ಗುಡ್‍ನ್ಯೂಸ್ ಕೊಡ್ತೀನಿ ಎಂದ ರಮ್ಯಾ