Tag: Commission for Women

  • ನೂರಾರು ಮಹಿಳೆಯರನ್ನು ಪ್ರಜ್ವಲ್ ಜೀವಂತ ಕೊಲೆ ಮಾಡಿದ್ದಾರೆ: ಲಕ್ಷ್ಮಿ ಹೆಬ್ಬಾಳ್ಕರ್

    ನೂರಾರು ಮಹಿಳೆಯರನ್ನು ಪ್ರಜ್ವಲ್ ಜೀವಂತ ಕೊಲೆ ಮಾಡಿದ್ದಾರೆ: ಲಕ್ಷ್ಮಿ ಹೆಬ್ಬಾಳ್ಕರ್

    – ಉಡುಪಿ ಪ್ರಕರಣದಲ್ಲಿ ಬಂದಿದ್ದ ರಾಷ್ಟ್ರೀಯ ಮಹಿಳಾ ಆಯೋಗ ಈಗೆಲ್ಲಿ?

    ಬೆಳಗಾವಿ: ಪ್ರಜ್ವಲ್ ರೇವಣ್ಣ ನೂರಾರು ಮಹಿಳೆಯರ ವೀಡಿಯೋ ಮಾಡಿ ಮಹಿಳೆಯರನ್ನು ಜೀವಂತವಾಗಿ ಕೊಲೆ ಮಾಡಿದ್ದಾರೆ. ಇಷ್ಟೆಲ್ಲಾ ನಡೆದ್ರೂ ಬಿಜೆಪಿಯವರು ಬಾಯಿಮುಚ್ಚಿಕೊಂಡು ಕುಳಿತುಕೊಂಡಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಕಿಡಿಕಾರಿದ್ದಾರೆ.

    ಬೆಳಗಾವಿಯ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ, ಪ್ರಜ್ವಲ್ ರೇವಣ್ಣ ವಿಕೃತ ಕಾಮಿ ಎಂದು ಗೊತ್ತಿದ್ದರೂ ಸಹ ಬಿಜೆಪಿಯವರು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಇಡೀ ರಾಜ್ಯ, ದೇಶ, ವಿಶ್ವವೇ ತಲೆತಗ್ಗಿಸುವ ಈ ಘಟನೆಯ ಬಗ್ಗೆ ಬಿಜೆಪಿಯವರ ನಿಲುವು ಸ್ಪಷ್ಟಪಡಿಸಬೇಕು. ಹುಬ್ಬಳ್ಳಿಯಲ್ಲಿ ಹೋರಾಟ ಮಾಡಿದವರಿಗೆ ಈ ನೂರಾರು ಮಹಿಳೆಯರ ನೋವಿನ ಕೂಗು ಏಕೆ ಕೇಳುತ್ತಿಲ್ಲ? ಏಕೆ ಮೌನ ವಹಿಸಿದ್ದಾರೆ ಎಂದು ಅವರು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಗೌಡರ ಮನೆಗೆ ಕಪ್ಪು ಚುಕ್ಕಿ ತರಲು ದೂರು: ಸಂತ್ರಸ್ತೆಯ ವಿರುದ್ಧವೇ ಕುಟುಂಬಸ್ಥರಿಂದ ಆರೋಪ

    ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಪ್ರಜ್ವಲ್ ರೇವಣ್ಣ (Prajwal Revanna) ಅವರ ವೀಡಿಯೋ ತುಣುಕುಗಳು ಹರಿದಾಡುತ್ತಿವೆ. ಇಡೀ ರಾಜ್ಯ ತಲೆ ತಗ್ಗಿಸುವ ಕೆಲಸವನ್ನು ಅವರು ಮಾಡಿದ್ದಾರೆ. ಈ ಎಲ್ಲಾ ವಿಚಾರಗಳನ್ನು ಮುಂಚೆಯೇ ಹಾಸನದ ಬಿಜೆಪಿ ನಾಯಕ ದೇವರಾಜ ಗೌಡ ಅವರು ತಿಳಿಸಿದ್ದರು. ಅವರು ಈ ರೀತಿ ಇದ್ದಾರೆ. ಮೈತ್ರಿ ಮಾಡಿಕೊಳ್ಳುವುದು ಬೇಡ, ಅವರಿಂದ ಪಕ್ಷಕ್ಕೆ ಹಾನಿಯಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೂ ತಿಳಿಸಿದ್ದರು. ಇದೆಲ್ಲಾ ಬಿಜೆಪಿಯವರಿಗೆ ಮುಂಚೆಯೇ ಗೊತ್ತಿದ್ದರೂ ಕೂಡ ತಮ್ಮ ರಾಜಕೀಯ ಲಾಭಕ್ಕಾಗಿ, ಬೇಟಿ ಬಚಾವ್-ಬೇಟಿ ಪಡಾವ್, ನಾರಿ ಶಕ್ತಿ ಎನ್ನುವ ಬಿಜೆಪಿ ನಾಯಕರು ಮೈತ್ರಿ ಮಾಡಿಕೊಂಡರು ಎಂದು ಅವರು ಕಿಡಿಕಾರಿದ್ದಾರೆ.

    ಮೈಸೂರಿಗೆ ಅಮಿತ್ ಷಾ ಬಂದ ವೇಳೆ ಹಾಸನದ ಮಾಜಿ ಶಾಸಕ ಪ್ರೀತಂಗೌಡ, ಎ.ಟಿ ರಾಮಸ್ವಾಮಿಯವರು ಖುದ್ದಾಗಿ ಅವರನ್ನು ಭೇಟಿಯಾಗಿ, ಈ ಎಲ್ಲಾ ವಿಚಾರಗಳನ್ನು ತಿಳಿಸಿದ್ದಾರೆ. ಅಮಿತ್ ಷಾ ಅವರಿಗೂ ಪ್ರಜ್ವಲ್ ರೇವಣ್ಣ ಅವರ ಕರ್ಮಕಾಂಡ ಮುಂಚೆಯೇ ಗೊತ್ತಿತ್ತು. ಇಷ್ಟೆಲ್ಲಾ ಆದರೂ ಬಿಜೆಪಿ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

    ಈ ವಿಚಾರದಲ್ಲಿ, ವಿಪಕ್ಷ ನಾಯಕ ಆರ್.ಅಶೋಕ್ ಅವರನ್ನು ಮಾಧ್ಯಮಗಳು ಪ್ರಶ್ನಿಸಿದರೆ, ಅದನ್ನು ಅವರ ಪಕ್ಷ ನೋಡಿಕೊಳ್ಳುತ್ತದೆ ಎಂದು ಹಾರಿಕೆ ಉತ್ತರ ನೀಡಿದ್ದಾರೆ. ಹುಬ್ಬಳ್ಳಿ ಘಟನೆಗೆ ತೋರಿಸಿದಷ್ಟು ಆಸಕ್ತಿಯನ್ನು ಜಗದೀಶ್ ಶೆಟ್ಟರ್ ಏಕೆ ತೋರುತ್ತಿಲ್ಲ? ನನ್ನ ಬಗ್ಗೆ ಮಾತನಾಡಿದ ಸಂಜಯ್ ಪಾಟೀಲ್ ಈ ಘಟನೆ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.

    ಉಡುಪಿಯಯಲ್ಲಿ ನಡೆದ ಪ್ರಕರಣದಲ್ಲಿ ರಾಷ್ಟ್ರೀಯ ಮಹಿಳಾ ಆಯೋಗ  (Commission for Women) ಬಂದಿತ್ತು. ಈಗ 2000 ವೀಡಿಯೋಗಳು ಹರದಾಡುತ್ತಿದ್ದರೂ ಅವರೆಲ್ಲಾ ಎಲ್ಲಿದ್ದಾರೆ? ನೀವು, ಪ್ರಜ್ವಲ್ ರೇವಣ್ಣ ಅವರನ್ನು ರಕ್ಷಣೆ ಮಾಡುತ್ತಿಲ್ಲ ಎಂದಾದರೆ ಇಂಟರ್ ಪೋಲ್ ಸಹಾಯ ಪಡೆದು ಹೊರಗಿನಿಂದ ಕರೆಸಲಿ. ನಮಗೆ ವಿಷಯ ಗೊತ್ತಾದ ತಕ್ಷಣ ಎಸ್‍ಐಟಿ ರಚನೆ ಮಾಡಿದ್ದೇವೆ. ವಿಶೇಷ ನ್ಯಾಯಾಲಯ ಸ್ಥಾಪಿಸಿದ್ದೇವೆ. ನ್ಯಾಯ ಕೊಡಿಸುವ ಜವಾಬ್ದಾರಿಯನ್ನು ನಾವು ಹೊತ್ತುಕೊಂಡಿದ್ದೇವೆ ಎಂದು ಅವರು ಹೇಳಿದ್ದಾರೆ.

    ಶೋಭಾ ಕರಂದ್ಲಾಜೆ, ಸ್ಮೃತಿ ಇರಾನಿ ಎಲ್ಲಿದ್ದೀರಾ?
    ಪ್ರಧಾನಿಗಳು (Narendra Modi) ಕೆಲವು ಅಮಾನವೀಯ ಘಟನೆ ಖಂಡಿಸಿದ್ದಾರೆ. ನಿಮ್ಮ ಪಕ್ಕದಲ್ಲಿ ಕುಳಿತುಕೊಳ್ಳಲು ಅವಕಾಶ ಮಾಡಿಕೊಟ್ಟ ಸಂಸದರ ಬಗ್ಗೆ ನಿಮ್ಮ ನಿಲುವು ಏನು? ನಿಮ್ಮ ನಾರಿ ಸಮ್ಮಾನ್ ಇದೇನಾ? ಮಂಡ್ಯದ ಮಗಳು ಎಂದು ಹೇಳುವ ಸುಮಲತಾ ಈಗ ಎಲ್ಲಿದ್ದಾರೆ? ಏಕೆ ಇದರ ಬಗ್ಗೆ ಮಾತನಾಡುತ್ತಿಲ್ಲ? ನನಗೆ ವಿದೇಶದಿಂದ ಪೆÇೀನ್‍ಗಳು ಬರುತ್ತಿವೆ. ಬೇರೆ ಬೇರೆ ರಾಜ್ಯಗಳ ಮಹಿಳಾ ಮಕ್ಕಳ ಅಭಿವೃದ್ಧಿ ಸಚಿವರು ಕರೆ ಮಾಡಿ ಇದರ ಬಗ್ಗೆ ವಿಚಾರಿಸುತ್ತಿದ್ದಾರೆ ಎಂದರು.

    ಮೋದಿ ಅವರು ಮಾಂಗಲ್ಯದ ಬಗ್ಗೆ ಮಾತನಾಡಿದ್ದಾರೆ. ಸದ್ಯ ಈ ಮಹಿಳೆಯರ ಮಾಂಗಲ್ಯ ಕಸಿದುಕೊಂಡಿರುವ ಬಗ್ಗೆ ಮಾತನಾಡಿ. ಕುಮಾರಸ್ವಾಮಿ ನಿಮ್ಮ ಬದ್ಧತೆಯನ್ನು ನಾವು ಪ್ರಶ್ನೆ ಮಾಡಲೇಬೇಕಾಗಿದೆ. ನಮ್ಮ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸುತ್ತದೆ. ಮುಖ್ಯಮಂತ್ರಿ ಹಾಗೂ ಗೃಹ ಸಚಿವರ ಜೊತೆಗೂ ಮಾತನಾಡಿದ್ದೇವೆ. ಮಹಿಳೆಯರಿಗೆ ನ್ಯಾಯ ಒದಗಿಸಿಕೊಡುತ್ತೇವೆ. ನೋಂದವರ ಪರ ಸರ್ಕಾರ ನಿಲ್ಲುತ್ತದೆ. ಅವರಿಗೆ ಸರ್ಕಾರ ರಕ್ಷಣೆ ನೀಡುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಜೆಡಿಎಸ್‍ನಿಂದ ಪ್ರಜ್ವಲ್ ರೇವಣ್ಣ ಅಮಾನತು

  • ನಟಿ ಶ್ರುತಿಗೆ ಮಹಿಳಾ ಆಯೋಗದಿಂದ ನೋಟಿಸ್

    ನಟಿ ಶ್ರುತಿಗೆ ಮಹಿಳಾ ಆಯೋಗದಿಂದ ನೋಟಿಸ್

    ಕಾಂಗ್ರೆಸ್ ಸರ್ಕಾರ ಕೊಟ್ಟಿರುವ ಗ್ಯಾರಂಟಿ ಯೋಜನೆಯಿಂದ ಹಾಗೂ ಫ್ರೀ ಬಸ್ ಯೋಜನೆಯಿಂದ ತೀರ್ಥಯಾತ್ರೆಗೆಂದು ಹೋಗುತ್ತೇವೆ ಎಂದು ಹೇಳಿ ಹೆಣ್ಣು ಮಕ್ಕಳು ಎಲ್ಲೆಲ್ಲೂ ಹೋಗುತ್ತಿರುತ್ತಾರೆ ಅಂತಾ ನಟಿ ಶ್ರುತಿ (Shruti)  ಮಾತನಾಡಿರೋದು ಮಾಧ್ಯಮದಲ್ಲಿ ವರದಿಯಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಕಾರಣ ಕೇಳಿ ರಾಜ್ಯ ಮಹಿಳಾ ಆಯೋಗ ಅವರಿಗೆ ನೋಟಿಸ್ ಜಾರಿ ಮಾಡಿದೆ.

    ಶ್ರುತಿಗೆ ಕೊಟ್ಟಿ ನೋಟಿಸ್ (Notice) ನಲ್ಲಿ ಈ ರೀತಿ ಬಹಿರಂಗವಾಗಿ ಹೆಣ್ಣು ಮಕ್ಕಳನ್ನು ಅವಮಾನಿಸಿರೋದು ಖಂಡನೀಯ. ರಾಜ್ಯ ಮಹಿಳಾ ಆಯೋಗದ (Commission for Women) ಅಧಿನಿಯಮ 1995 ಪರಿಚಯ 10(ಎ)ಮೇರೆಗೆ ನೋಟಿಸ್ ಜಾರಿ ಮಾಡಿದೆ. ಏಳು‌ ದಿನದಲ್ಲಿ ಸ್ಪಷ್ಟೀಕರಣ ನೀಡುವಂತೆ ಸೂಚನೆ ನೀಡಲಾಗಿದೆ.

    ಉಡುಪಿ ಜಿಲ್ಲೆಯ ಬಂದೂರಿನಲ್ಲಿ ನಡೆದ ಚುನಾವಣಾ ಭಾಷಣದ ಅಬ್ಬರದಲ್ಲಿ ಮಹಿಳೆಯರನ್ನು ಶ್ರುತಿ ಟೀಕಿಸಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಪರ ವಿರೋಧ ಚರ್ಚೆ ನಡೆದಿತ್ತು. ಅವರು ಮಾಡಿದ ಭಾಷಣದ ತುಣುಕು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಕೂಡ ಆಗಿತ್ತು. ನಂತರ ಮಹಿಳಾ ಆಯೋಗ ನೋಟಿಸ್ ನೀಡಿ, ಸ್ಪಷ್ಟೀಕರಣ ಕೇಳಿದೆ.

  • ನಟ ದರ್ಶನ್ ವಿರುದ್ಧ ಮಹಿಳಾ ಆಯೋಗಕ್ಕೆ ದೂರು

    ನಟ ದರ್ಶನ್ ವಿರುದ್ಧ ಮಹಿಳಾ ಆಯೋಗಕ್ಕೆ ದೂರು

    ಹೆಣ್ಣುಮಕ್ಕಳ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಆಡಿದ್ದಾರೆ ಎಂದು ಮಹಿಳಾ ಆಯೋಗಕ್ಕೆ ದರ್ಶನ್ ವಿರುದ್ಧ ದೂರು ಸಲ್ಲಿಸಲಾಗಿದೆ. ಜಯಶ್ರೀ (Jayashree) ಎನ್ನುವವರು ದರ್ಶನ್ ವಿರುದ್ಧ ಲಿಖಿತ ರೂಪದಲ್ಲಿ ದೂರು ನೀಡಿದ್ದು, ಇವತ್ತು ಇವಳು ಇರುತ್ತಾಳೆ, ನಾಳೆ ಅವಳು ಬರ್ತಾಳೆ ಎನ್ನುವ ಮಾತುಗಳನ್ನು ಮೊನ್ನೆ ಶ್ರೀರಂಗಪಟ್ಟಣದಲ್ಲಿ ನಡೆದ ಬೆಳ್ಳಿಪರ್ವದಲ್ಲಿ ದರ್ಶನ್ ಹೇಳಿದ್ದರು.

    ಹೆಣ್ಣಿನ ಬಗ್ಗೆ ಅವಹೇಳನಕಾರಿಯಾಗಿ ದರ್ಶನ್ ಮಾತನಾಡಿದ್ದಾರೆ. ಇವತ್ತು ಇವಳು ಇರುತ್ತಾಳೆ, ನಾಳೆ ಅವಳು ಬರ್ತಾಳೆ ಎಂದು ದರ್ಶನ್ ಮಾತನಾಡಿದ್ದಾರೆ. ದರ್ಶನ್ ಹೇಳಿಕೆಗೆ ಒಕ್ಕಲಿಗ ಗೌಡತಿಯರು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಹೆಣ್ಣು ಮಕ್ಕಳಿಗೆ ಇದು ಅವಮಾನ ಮಾಡುವಂಥದ್ದು ಎಂದು ದೂರಿ (Complaint)ನಲ್ಲಿ ಉಲ್ಲೇಖ ಮಾಡಿದ್ದಾರೆ.

    ಫಿಲ್ಮ್ ಚೇಂಬರ್ ನಲ್ಲೂ ದೂರು

    ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡರಿಗೆ ಕಟು ನುಡಿಗಳಲ್ಲಿ ಟೀಕಿಸಿರುವ ನಟ ದರ್ಶನ್ (Darshan) ವಿರುದ್ಧ ಕರ್ನಾಟಕ ಪ್ರಜಾಪರ ವೇದಿಕೆಯು ಫಿಲ್ಮ್ ಛೇಂಬರ್ ಗೆ ದೂರು ನೀಡಿದೆ. ಸಾರ್ವಜನಿಕ ವೇದಿಕೆಯ ಮೇಲೆ ಉಮಾಪತಿಗೆ ತಗಡು, ಗುಮ್ಮಿಸ್ಕೋತೀಯಾ ರೀತಿಯ ಪದಗಳನ್ನು ಆಡಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

    ಕಾಟೇರ ಸಿನಿಮಾದ ಕಥೆ ಬರೆಯಿಸಿದ್ದು ನಾನು, ಅದು ನನ್ನದೇ ಟೈಟಲ್ ಎಂದು ಉಮಾಪತಿ ಗೌಡ ಸಂದರ್ಶನವೊಂದರಲ್ಲಿ ಹೇಳಿದ್ದರು. ಇದಕ್ಕೆ ಉತ್ತರ ಎನ್ನುವಂತೆ ಕಾಟೇರ ಸಿನಿಮಾದ ಐವತ್ತನೇ ದಿನದ ಸಂಭ್ರಮದಲ್ಲಿ ದರ್ಶನ್ ತಿರುಗೇಟು ನೀಡಿದ್ದರು. ಅಲ್ಲದೇ, ತಗಡು ಮತ್ತು ‘ಪ್ರತಿ ಬಾರಿ ಯಾಕೆ ನಮ್ಮಿಂದ ಗುಮ್ಮಿಸ್ಕೋಳ್ತಿಯಾ’ ಎನ್ನುವ ಮಾತುಗಳನ್ನು ಆಡಿದ್ದರು.

    ಈ ಕುರಿತಂತೆ ಸಂಘಟನೆಯು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದು, ಈ ವಿಷಯದಲ್ಲಿ ದರ್ಶನ್ ಅವರು ಕ್ಷಮೆ ಕೇಳಬೇಕು. ಕ್ಷಮೆ ಕೇಳದೇ ಇದ್ದರೆ, ದರ್ಶನ್ ಮನೆಯ ಮುಂದೆ ನೂರಾರು ಕನ್ನಡ ಕಾರ್ಯಕರ್ತರು ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.

     

    ಉಮಾಪತಿ ಮತ್ತು ದರ್ಶನ್ ವಿಚಾರ ದಿನದಿಂದ ದಿನಕ್ಕೆ ನಾನಾ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ನಿರ್ದೇಶಕರಾದ ತರುಣ್ ಸುಧೀರ್ ಮತ್ತು ಮಹೇಶ್ ಕುಮಾರ್ ಇಬ್ಬರೂ ದರ್ಶನ್ ಪರ ಬ್ಯಾಟ್ ಮಾಡುತ್ತಿದ್ದಾರೆ. ಇದಕ್ಕೆ ಕೌಂಟರ್ ಎನ್ನುವಂತೆ ಉಮಾಪತಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.

  • ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ವಿರುದ್ಧ ದೂರು ನೀಡಿದ ನಟಿ ಉರ್ಫಿ ಜಾವೇದ್

    ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ವಿರುದ್ಧ ದೂರು ನೀಡಿದ ನಟಿ ಉರ್ಫಿ ಜಾವೇದ್

    ಹಾರಾಷ್ಟ್ರದ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಚಿತ್ರಾ ಕಿಶೋರ್ ವಾಘ್ ಅವರು ತಮಗೆ ಜೀವ ಬೆದರಿಕೆ ಹಾಕಿದ್ದಾರೆ ಹಾಗೂ ಮಾನಹಾನಿ ಮಾಡುವಂತಹ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿ ನಟಿ ಉರ್ಫಿ ಜಾವೇದ್ ತಮ್ಮ ವಕೀಲರ ಮೂಲಕ ಮಹಾರಾಷ್ಟ್ರ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಅಲ್ಲದೇ, ತಮಗೆ ಜೀವ ಬೆದರಿಕೆ ಇರುವ ಕಾರಣದಿಂದಾಗಿ ರಕ್ಷಣೆ ನೀಡುವಂತೆ ಉರ್ಫಿ ಮನವಿ ಮಾಡಿದ್ದಾರೆ.

    ನಟಿ ಉರ್ಫಿ ಜಾವೇದ್ ಮಹಿಳೆಯರ ಮಾನ ಹರಾಜು ಹಾಕುವಂತಹ ಬಟ್ಟೆಗಳನ್ನು ಹಾಕುತ್ತಾರೆ. ಅಶ್ಲೀಲ ಹಾಗೂ ಅಸಭ್ಯವಾಗಿ ನಡೆದುಕೊಡುತ್ತಾರೆ. ಇಂತಹ ನಟಿಯ ಮೇಲೆ ಕ್ರಮ ತಗೆದುಕೊಳ್ಳಬೇಕು ಎಂದು ಚಿತ್ರಾ ಅವರು ಕೆಲ ದಿನಗಳ ಹಿಂದೆಯಷ್ಟೇ ದೂರು ದಾಖಲಿಸಿದ್ದರು. ಅಲ್ಲದೇ, ಅಸಹ್ಯ ಎನ್ನುವಂತಹ ಬಟ್ಟೆಗಳನ್ನು ಹಾಕಿಕೊಂಡು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದಕ್ಕೆ ಚಿತ್ರ ಆಕ್ಷೇಪ ವ್ಯಕ್ತ ಪಡಿಸಿದ್ದರು. ಈ ಹಿನ್ನೆಲೆಯಲ್ಲಿ ರಕ್ಷಣೆ ಕೋರಿ ಉರ್ಫಿ ಮಹಿಳಾ ಆಯೋಗಕ್ಕೆ ಮೊರೆ ಹೋಗಿದ್ದಾರೆ. ಇದನ್ನೂ ಓದಿ: ಹಿಂದಿ ಸೇರಿ ಏಳು ಸಿನಿಮಾಗಳಲ್ಲಿ ರಾಗಿಣಿ ದ್ವಿವೇದಿ ಬ್ಯುಸಿ

    ತನ್ನ ವಿಚಿತ್ರ ಕಾಸ್ಟ್ಯೂಮ್ ಮೂಲಕ ಬಾಲಿವುಡ್ ಸಿನಿ ರಂಗದಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಉರ್ಫಿ ಜಾವೇದ್ ಮೇಲೆ ಉರಿದುಕೊಂಡವರೇ ಹೆಚ್ಚು. ಅವಳು ಧರಿಸುವ ಅರೆಬರೆ ಬಟ್ಟೆಯ ಬಗ್ಗೆ ಸಾಕಷ್ಟು ದೂರುಗಳು ಇವೆ. ಈ ವಿಚಾರವಾಗಿ ಅವಳು ಪೊಲೀಸ್ ಸ್ಟೇಶನ್ ಮೆಟ್ಟಿಲೂ ಹತ್ತಿದ್ದಾರೆ. ದುಬೈನಲ್ಲಿ ಪೊಲೀಸ್ ವಿಚಾರಣೆಗೂ ಒಳಗಾಗಿದ್ದಾರೆ. ಸದಾ ವಿವಾದವನ್ನೇ ಬೆನ್ನತ್ತಿ ಹೋಗುವ ಉರ್ಫಿ ಬಗ್ಗೆ ಮೊದಲ ಬಾರಿಗೆ ವ್ಯಕ್ತಿಯೊಬ್ಬರು ಹೆಮ್ಮೆಯಿಂದ ಮಾತನಾಡಿದ್ದಾರೆ. ಅವರನ್ನು ಮಾದರಿಯಾಗಿ ತಗೆದುಕೊಳ್ಳುವಂತೆ ಕರೆಕೊಟ್ಟಿದ್ದಾರೆ.

    ಬಾಲಿವುಡ್ ಸಿಂಗರ್ ಯೋ ಯೋ ಹನಿ ಸಿಂಗ್, ಸದ್ಯ ತಮ್ಮ ಆಲ್ಬಂವೊಂದರ ಪ್ರಚಾರದಲ್ಲಿ ತೊಡಗಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ‘ಉರ್ಫಿ ಜಾವೇದ್ ಬಗ್ಗೆ ಹಾಡಿಹೊಗಳಿದ್ದಾರೆ. ಉರ್ಫಿ ತನ್ನಿಷ್ಟದಂತೆ ಬದುಕುತ್ತಿರುವ ನಟಿ. ತುಂಬಾ ಧೈರ್ಯವಂತೆ. ಯಾರಿಗೂ ಹೆದರದೇ ತನ್ನ ಬದುಕನ್ನು ಕಟ್ಟಿಕೊಂಡಿದ್ದಾಳೆ. ಹಾಗಾಗಿ ದೇಶದ ಹುಡುಗಿಯರು ಅವಳನ್ನು ನೋಡಿ ಕಲಿತುಕೊಳ್ಳಬೇಕು’ ಎಂದು ಅಚ್ಚರಿಯ ಹೇಳಿಕೆಯನ್ನು ಕೊಟ್ಟಿದ್ದಾರೆ.

    ಹನಿ ಸಿಂಗ್ ಇಂಥದ್ದೊಂದು ಮಾತು ಹೇಳುತ್ತಿದ್ದಂತೆಯೇ ಬಾಲಿವುಡ್ ನ ಅನೇಕರು ಗರಂ ಆಗಿದ್ದಾರೆ. ದೇಶದ ಹೆಣ್ಣು ಮಕ್ಕಳು ಯಾರನ್ನು ಮಾದರಿಯಾಗಿ ತಗೆದುಕೊಳ್ಳಬೇಕು ಎಂದು ಗೊತ್ತಿದೆ. ಹನಿ ಸಿಂಗ್ ಬೇಕಾದರೆ ಉರ್ಫಿಯನ್ನು ಮಾದರಿಯಾಗಿ ತಗೆದುಕೊಳ್ಳಲಿ ಎನ್ನುವ ಮಾತುಗಳನ್ನು ಆಡಿದ್ದಾರೆ. ಉರ್ಫಿ ಒಬ್ಬ ಮಾನಸಿಕ ಖಾಯಿಲೆ ಇರುವ ಹುಡುಗಿ. ಆಕೆ ಬದುಕು ಯಾವತ್ತಿಗೂ ಮಾದರಿ ಆಗುವಂಥದ್ದು ಅಲ್ಲ ಎಂದಿದ್ದಾರೆ.

    ಅಶ್ಲೀಲ ರೀತಿಯ ಬಟ್ಟೆಗಳನ್ನು ಉರ್ಫಿ ಹಾಕುತ್ತಾರೆ ಎನ್ನುವ ಕಾರಣಕ್ಕಾಗಿ ಮುಂಬೈ ಸೇರಿದಂತೆ ಹಲವು ಕಡೆ ದೂರುಗಳು ದಾಖಲಾಗಿವೆ. ಈ ಕುರಿತು ಉರ್ಫಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಮೇಲೆ ಎಷ್ಟೇ ದೂರುಗಳು ಬಂದರೂ, ನನ್ನನ್ನು ಬದಲಿಸಲು ಆಗುವುದಿಲ್ಲ. ನಾನು ಹೇಗಿರಬೇಕೋ ಹಾಗೆಯೇ ಇರುವೆ. ಅದು ನನ್ನ ಸ್ವಾತಂತ್ರ್ಯ. ಯಾವ ದೂರಿಗೂ ನಾನು ಹೆದರುವುದಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಟಿ ದಿವ್ಯಾ ಶ್ರೀಧರ್ ಪ್ರಕರಣಕ್ಕೆ ಮಹಿಳಾ ಆಯೋಗ ಪ್ರವೇಶ

    ನಟಿ ದಿವ್ಯಾ ಶ್ರೀಧರ್ ಪ್ರಕರಣಕ್ಕೆ ಮಹಿಳಾ ಆಯೋಗ ಪ್ರವೇಶ

    ನ್ನಡದ ಕಿರುತೆರೆ ನಟಿ ದಿವ್ಯಾ ಶ್ರೀಧರ್ (Divya Sridhar) ಪ್ರಕರಣಕ್ಕೆ ಕರ್ನಾಟಕ ಮಹಿಳಾ ಆಯೋಗ ಪ್ರವೇಶ ಮಾಡಿದೆ. ಕರ್ನಾಟಕದ ನಟಿ ದಿವ್ಯಾ ಶ್ರೀಧರ್ ಗೆ ಸೂಕ್ತ ನ್ಯಾಯ ಒದಗಿಸುವಂತೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು (Pramila Naidu) ಆಗ್ರಹಿಸಿದ್ದು, ಈ ಕುರಿತಂತೆ ತಮಿಳು ನಾಡು ಮಹಿಳಾ ಆಯೋಗದ ಜೊತೆ ದೂರವಾಣಿ ಮೂಲಕವೂ ಮಾತನಾಡಿದ್ದಾರೆ.

    ತಮಿಳು ನಾಡು ಮಹಿಳಾ ಆಯೋಗದ ಜೊತೆ ದೂರವಾಣಿಯಲ್ಲಿ ಮಾತನಾಡುವುದರ ಜೊತೆಗೆ ಲಿಖಿತ ರೂಪದಲ್ಲೂ ಆಯೋಗಕ್ಕೆ ಪತ್ರ ಬರೆದು, ದಿವ್ಯಾಗೆ ಸೂಕ್ತ ರಕ್ಷಣೆ ಮತ್ತು ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾರಂತೆ. ದಿವ್ಯಾ ಶ್ರೀಧರ್ ತನ್ನ ಗಂಡನಿಂದ ದೈಹಿಕ ಹಲ್ಲೆ ಮತ್ತು ಮಾನಸಿಕ ಕಿರುಕುಳಕ್ಕೆ ಒಳಗಾಗಿದ್ದರಿಂದ ಅವರಿಗೆ ರಕ್ಷಣೆ ನೀಡಬೇಕು. ಗರ್ಭಿಣಿ ಅನ್ನುವುದನ್ನೂ ನೋಡದೇ ಆಕೆಯ ಪತಿಯು ಹೊಟ್ಟೆಗೆ ಒದ್ದಿರುವ ಕುರಿತು ಗಂಭೀರ ಪ್ರಕರಣ ಎಂದು ಪರಿಗಣಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ ಅನ್ನಲಾಗುತ್ತಿದೆ. ಇದನ್ನೂ ಓದಿ:ಪವನ್ ಒಡೆಯರ್ ಬಾಲಿವುಡ್ ಚಿತ್ರಕ್ಕೆ ಕ್ರಿಕೆಟಿಗ ಹರ್ಭಜನ್ ಸಿಂಗ್ ಪತ್ನಿ ನಾಯಕಿ

    ಸ್ಯಾಂಡಲ್ ವುಡ್ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ದಿವ್ಯಾ ಶ್ರೀಧರ್, ಆನಂತರ ಕಿರುತೆರೆ ಜಗತ್ತಿಗೆ ಕಾಲಿಟ್ಟರು. ಸಿನಿಮಾ ರಂಗದಲ್ಲಿ ಅಷ್ಟೇನೂ ಮಿಂಚದೇ ಇದ್ದರೂ, ಆಕಾಶ ದೀಪ ಧಾರಾವಾಹಿ ಮೂಲಕ ಸಖತ್ ಫೇಮಸ್ ಆದರು. ಈ ಧಾರಾವಾಹಿಯ ಯಶಸ್ಸು ಅವರನ್ನು ತಮಿಳು ಕಿರುತೆರೆ ಜಗತ್ತಿಗೂ ಕಾಲಿಡುವಂತೆ ಮಾಡಿತು. ತಮಿಳು ಧಾರಾವಾಹಿಯಲ್ಲೂ ದಿವ್ಯಾ ಸಾಕಷ್ಟು ಹೆಸರು ಮಾಡಿದರು.

    ತಮಿಳು ಧಾರಾವಾಹಿಯ ಸಂದರ್ಭದಲ್ಲೇ ನಟ ಅನರ್ವ್ (Anurv) ಅಲಿಯಾಸ್ ಅಮ್ಜದ್ ಖಾನ್ (Amjad Khan) ಜೊತೆ ಸ್ನೇಹ ಬೆಳೆದು, ಅದು ಪ್ರೀತಿಗೂ ತಿರುಗಿ ನಂತರ ಮದುವೆಯಾಗಿದ್ದಾರೆ. ದಿವ್ಯಾ ಗರ್ಭಿಣಿ ಎಂದು ತಿಳಿಯುತ್ತಿದ್ದಂತೆಯೇ ಪತಿ ಅವರಿಂದ ದೂರವಾಗುವುದಕ್ಕೆ ಶುರು ಮಾಡಿದರು ಎಂದು ಆರೋಪಿಸಿದ್ದಾರೆ ದಿವ್ಯಾ. ಅಲ್ಲದೇ, ತಮಗೆ ಪತಿಯಿಂದ ದೈಹಿಕ ಹಿಂಸೆ ಸೇರಿದಂತೆ ಹಲವು ಆರೋಪಗಳನ್ನು ದಿವ್ಯಾ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪತ್ನಿಗೆ ಕಿರುಕುಳ ನೀಡಿ, ಹೊಡೆದು ಚೈನ್‍ನಲ್ಲಿ ಕಟ್ಟಿ ಹಾಕಿದ ಪತಿ

    ಪತ್ನಿಗೆ ಕಿರುಕುಳ ನೀಡಿ, ಹೊಡೆದು ಚೈನ್‍ನಲ್ಲಿ ಕಟ್ಟಿ ಹಾಕಿದ ಪತಿ

    – ಶೌಚಾಲಯ ಬಳಕೆಗೂ ಬಿಡದ ಗಂಡ
    – ಕೆಲ ತಿಂಗಳಿನಿಂದ ನರಕ ಅನುಭವಿಸಿದ್ದ ಮಹಿಳೆಯ ರಕ್ಷಣೆ

    ನವದೆಹಲಿ: ಕಳೆದ ಕೆಲವು ತಿಂಗಳಿನಿಂದ ನರಕದ ಜೀವನ ನಡೆಸುತ್ತಿದ್ದ 32 ವರ್ಷದ ಮಹಿಳೆಯನ್ನು ದೆಹಲಿಯ ಮಹಿಳಾ ಆಯೋಗದ ಸದಸ್ಯರು ರಕ್ಷಣೆ ಮಾಡಿದ್ದಾರೆ.

    ದೆಹಲಿಯ ತ್ರಿಲೋಕಪುರಿ ಪ್ರದೇಶದ ಮಹಿಳೆಯನ್ನು ಆಕೆಯ ಪತಿಯೇ ಕಾಲಿಗೆ ಚೈನ್ ಹಾಕುವ ಮೂಲಕ ಕೆಲ ತಿಂಗಳಿನಿಂದ ಕಟ್ಟಿಹಾಕಿ ಬಂಧಿಸಿದ್ದಾನೆ. ಅಲ್ಲದೆ ಆತ ಪ್ರತಿದಿನ ಆಕೆಗೆ ಹಿಂಸೆ ನೀಡುತ್ತಿದ್ದನು. ಆದರೆ ಪತಿ ಯಾಕೆ ಈ ರೀತಿ ಪತ್ನಿಗೆ ಕಿರುಕುಳ ನೀಡಿದ್ದಾನೆ ಎಂಬುದು ತಿಳಿದುಬಂದಿಲ್ಲ.

    ಮಹಿಳೆಗೆ ಆಕೆಯ ಪತಿ ಪ್ರತಿನಿತ್ಯ ಹೊಡೆಯುತ್ತಿರುವುದರಿಂದ ಆಕೆಯ ಆರೋಗ್ಯ ತೀರಾ ಹದಗೆಟ್ಟಿತ್ತು. ಅಲ್ಲದೆ ಮೈಮೇಲಿದ್ದ ಬಟ್ಟೆ ಕೂಡ ಹರಿದು ಹೋಗಿತ್ತು. ಈ ವಿಚಾರ ಮಹಿಳಾ ಆಯೋಗದ ಸದಸ್ಯರ ಗಮನಕ್ಕೆ ಬಂದಿದೆ. ಕೂಡಲೇ ಆಯೋಗದ ಮುಖ್ಯಸ್ಥೆ ಸ್ವಾತಿ ಮೀವಾಲಿ ತನ್ನ ಸದಸ್ಯರೊಂದಿಗೆ ಮಹಿಳೆಯ ಮನೆಗೆ ದೌಡಾಯಿಸಿ ರಕ್ಷಣೆ ಮಾಡಿದ್ದಾರೆ.

    ಮನೆ ಗಬ್ಬು ವಾಸನೆ ಬರುತ್ತಿತ್ತು. ಮಹಿಳೆಯನ್ನು ಆಕೆಯ ಪತಿ ಶೌಚಾಲಯ ಬಳಕೆ ಮಾಡಲೂ ಬಿಡುತ್ತಿರಲಿಲ್ಲ ಎಂದು ಸ್ವಾತಿ ತಿಳಿಸಿದ್ದಾರೆ. ಈ ಸಂಬಂಧ ಮಕ್ಕಳ ಜೊತೆ ಮಾತನಾಡಿದಾಗ, ಅಮ್ಮ ನಮ್ಮ ಅಪ್ಪನಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದರು. ಆದರೆ ಅಪ್ಪನೇ ಅವರನ್ನು ವಾಪಸ್ ಮನೆಗೆ ಎಳೆದುಕೊಂಡು ಬಂದು ಹೊಡೆದು- ಬಡಿದು, ಸಾಕಷ್ಟು ಹಿಂಸೆ ಕೊಟ್ಟು ಎಲ್ಲೂ ಹೋಗದಂತೆ ಚೈನ್ ನಲ್ಲಿ ಕಟ್ಟಿ ಹಾಕಿದ್ದಾರೆ ಎಂದು ತಿಳಿಸಿದ್ದಾರೆ.

    ಸದ್ಯ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೆ ಮಹಿಳೆಯ ಪತಿ ಹಾಗೂ ಆತನ ಕುಟುಂಬದ ವಿರುದ್ಧ ಎಫ್‍ಐಆರ್ ದಾಖಲಿಸಿರುವುದಾಗಿ ಸ್ವಾತಿ ಹೇಳಿದ್ದಾರೆ.

    ಈ ಘಟನೆ ನಾಗರಿಕ ಸಮಾಜವನ್ನು ತಲೆ ತಗ್ಗಿಸುವಂತಿದೆ. ಇಂತಹ ದೌರ್ಜನ್ಯಗಳಿಂದ ಮಹಿಳೆ ಹಾಗೂ ಹೆಣ್ಣು ಮಕ್ಕಳನ್ನು ರಕ್ಷಿಸಲು ಸಮಾಜದ ಜನರು ಮುಂದೆ ಬರುವ ಅವಶ್ಯಕತೆ ಇದೆ ಎಂದು ಸ್ವಾತಿ ವಿಡಿಯೋ ಮಾಡಿ ಮನವಿ ಮಾಡಿಕೊಂಡಿದ್ದಾರೆ.